Total Pageviews

Friday, 21 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 286

ಜೈಸಲ್ಮೇರ್ ಅರಮನೆ.......

ಇಲ್ಲಿಗೆ ತಲುಪುವ ತನಕವೂ ಶಾಂತಳಾಗಿ ಅಪ್ಪನ ಭುಜವನ್ನು ಹಿಡಿದು ಹೆಲಿಕಾಪ್ಟರಿನಲ್ಲಿ ಕುಳಿತಿದ್ದ ನಿಧಿಯ ಮುಖದಲ್ಲೀಗ ಕ್ರೋದಾಗ್ನಿಯು ಪ್ರಜ್ವಲಿಸುತ್ತಿದ್ದು ಎಲ್ಲರಿಗಿಂತ ಮುಂದೆ ತಾನೇ ಕಾರಾಗೃಹದೊಳಗೆ ಪ್ರವೇಶಿಸಿದಳು. ಅಲ್ಲಾಗಲೇ ದಿಲೇರ್ ಸಿಂಗ್...ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಉಪಸ್ಥಿತರಿದ್ದು ರಾಜಕುಮಾರಿಗೆ ಗೌರವ ಸಲ್ಲಿಸಿದರು. ನಿಧಿ ಎಲ್ಲಾ ಖೈದಿಗಳನ್ನೂ ಒಟ್ಟಿಗೇ ಕಾರಾಗೃಹದಲ್ಲಿನ ವಿಶಾಲವಾದ ಸಭಾಂಗಣಕ್ಕೆ ಎಳೆದು ತರಲು ಆದೇಶ ನೀಡಿದಳು. 

ಸಿಎಂ...ಸಚಿವರು...ಶಾಸಕರು...ಬಿಝಿನೆಸ್ ಮ್ಯಾನ್ಸ್...ಹಲವಾರು ಅಧಿಕಾರಿಗಳನ್ನು ಬಷೀರ್ ಖಾನ್ ಎಳೆದು ತಂದನು. ಚಂಚಲಾದೇವಿ ಮತ್ತವಳ ಕುಟುಂಬದ ಜೊತೆ ಭಾನುಪ್ರತಾಪನನ್ನು ದಿಲೇರ್ ಸಿಂಗ್ ತಂದು ಕೆಡವಿದನು. ಕೊನೆಯದಾಗಿ ಕಾಮಾಕ್ಷಿಪುರದಲ್ಲಿ ನಿಶಾಳನ್ನು ಅಪಹರಿಸಲು ಸಂಚು ರೂಪಿಸಿದ್ದ ನಾಲ್ಪರು ಪಾರ್ಟ್ನರುಗಳು ಮತ್ತು ಅವರ ಕುಟುಂಬದವರನ್ನು ಅಜಯ್ ಸಿಂಗ್ ಹಿಡಿದು ತಂದಿದ್ದನು. ಇವರೆಲ್ಲರಿಗಿಂತ ಪ್ರಮುಖ ಅಪರಾಧಿಯಾಗಿರುವ ಯಶೋಮತಿ ಮತ್ತವಳ ಗಂಡ ಹಾಗು ಇಬ್ಬರು ಗಂಡು ಮಕ್ಕಳನ್ನು ವೀರ್ ಸಿಂಗ್ ಕರೆತಂದರೂ ಎಲ್ಲರಿಂದ ದೂರ ನಿಲ್ಲಿಸಿದ್ದನು.

ನಿಧಿ.......ನೋಡಿ ಚಿಕ್ಕಪ್ಪ ನಿಮ್ಮದೇ ಪಕ್ಷದ ನಾಯಕರು ನಮ್ಮ ಆಸ್ತಿ ಹೊಡೆಯುವುದಕ್ಕೆ ಸಂಚು ರೂಪಿಸಿದ್ದರು ಕಂತ್ರಿ ನಾಯಿಗಳು ದಿಲೇರ್ ಸಿಂಗ್ ಭಟ್ಟಿ ರೆಡಿಯಾಗಿದೆಯಾ ?

ದಿಲೇರ್ ಸಿಂಗ್ ಹೌದೆಂದು ಒಂದು ಲಿವರ್ ಕೆಳೆಗೆಳೆದಾಗ ಏದುರಿನ ಕಬ್ಬಿಣದ ಬಾಗಿಲು ಪಕ್ಕಕ್ಕೆ ಸರಿದುಕೊಳ್ಳುತ್ತ ಅಲ್ಲಿನ ದೃಶ್ಯ ನೋಡಿ ಮನೆಯವರು ದಂಗಾದರು. 20x20 ಅಳತೆಯ ಜಾಗದಲ್ಲಿ ಸುತ್ತಲೂ ಮತ್ತು ನೆಲದ ಕಡೆಯಿಂದಲೂ ಬೆಂಕಿಯ ಜ್ವಾಲೆ ಪ್ರಜ್ವಲಿಸುತ್ತಿತ್ತು.

ನಿಧಿ......ರಾಣಾ ನನ್ನ ತಂಗಿಯನ್ನು ಅಪಹರಿಸಲು ಉದ್ದೇಶಿಸಿದ್ದ ಈ ನಾಲ್ವರ ಕುಟುಂಬದವರನ್ನು ಭಟ್ಟಿಗೆ ಹಾಕಿಬಿಡಿ.

ಸೇಠ್ ಧನಿಕ್ಲಾಲ್...ಬ್ರಿಜೇಶ್ ಮಿಶ್ರಾ..ವಿನೋದ್ ಪಾಠಕ್ ಮತ್ತು ಕಿಶೋರಿ ಸಿಂಗ್ ಜಗಮಲ್ ತಮ್ಮ ಕಣ್ಣೆದುರಿಗೇ ಕುಟುಂಬದವರು ಜೀವಂತವಾಗಿ ಅಗ್ನಿಗೆ ಆಹುತಿಯಾಗಲಿದ್ದಾರೆಂದು ತಿಳಿದು ನಿಧಿಯ ಮುಂದೆ ಗೋಳಾಡುತ್ತ ಕ್ಷಮೆಯಾಚಿಸಿದರು. ನಿಧಿ ಮಾತ್ರ ಧೃಡವಾಗಿ ನಿಶ್ಚಯಿಸಿದ್ದು ರಕ್ಷಕರಿಗೆ ಸನ್ನೆ ಮಾಡಿದ ಮರುಕ್ಷಣವೇ ಆ ನಾಲ್ವರ ಕುಟುಂಬದವರನ್ನು ಒಬ್ಬೊಬ್ಬರಾಗಿ ಉರಿಯುತ್ತಿರುವ ಭಟ್ಟಿಯೊಳಗೆ ಏಸೆಯತೊಡಗಿದರು. 

ಬೆಂಕಿಯ ಸ್ಪರ್ಶ ದೇಹಕ್ಕೆ ಆಗುತ್ತಿದ್ದಂತೆಯೇ ಅವರುಗಳ ಚೀರಾಟ ಇಡೀ ಕಾರಾಗೃಹದಲ್ಲಿ ಪ್ರತಿಧ್ವನಿಸುತ್ತಿದ್ದವು. ಹರೀಶ..ವರ್ಧನ್ ಮತ್ತು ಗಿರೀಶ ಇವರನ್ನು ಬಿಟ್ಟರೆ ಮನೆಯವರೆಲ್ಲ ನಿಧಿಯ ಕ್ರೌರ್ಯಕ್ಕೆ ನಡುಗಿ ಹೋದರು. ನಿಧಿ ಏನಾದರೂ ಆದೇಶ ನೀಡುವುದಕ್ಕೂ ಮುಂಚೆ ಸೌಮ್ಯ ಸ್ವಭಾವದ ಗಿರೀಶ ಅಕ್ಕ ಅಪ್ಪನ ಕಾಲಿಗೆ ನಮಸ್ಕರಿಸಿ ರಕ್ಷಕನೊಬ್ಬನಿಂದ ಖಡ್ಗವನ್ನು ಪಡೆದು ಧನಿಕ ಲಾಲ್ ಮತ್ತು ಬ್ರಿಜೇಶ್ ಮಿಶ್ರಾ ಇಬ್ಬರ ತಲೆಗಳನ್ನು ಕಡಿದು ಬಿಟ್ಟನು.

ನಿಧಿ ತಮ್ಮನನ್ನು ತಬ್ಬಿಕೊಂಡು.....ಗಿರೀಶ ಇದಕ್ಕೆ ನಾನಿದ್ದೀನಲ್ಲೋ ನನ್ನ ತಮ್ಮನ ಕೈಗೆ ರಕ್ತ ಅಂಟಿಕೊಳ್ಳುವುದನ್ನು ನಾನೇಗೆ ಸಹಿಸಲಿ.

ಹರೀಶ........ಇದು ಆವೇಶವಲ್ಲ ನಿಧಿ ತಂಗಿ ಮೇಲಿನ ಪ್ರೀತಿ ಕಣಮ್ಮ ಚಿನ್ನಿಯನ್ನು ಕಿಡ್ನಾಪ್ ಮಾಡಲು ಯೋಜನೆ ರೂಪಿಸಿದ್ದ ದಿನದಿಂದ ಈ ನಿನ್ನ ಶಾಂತಮೂರ್ತಿ ತಮ್ಮ ಒಳಗೊಳಗೇ ಕುದಿಯುತ್ತಿದ್ದ ಅವನ ರೋಷಾವೇಶವೂ ತಣ್ಣಗಾಗಲಿ ಬಿಡಮ್ಮ.

ಗಿರೀಶ ಕ್ಷಣಕಾಲವೂ ತಡಮಾಡದೆ ಉಳಿದವರಿಬ್ಬರ ತಲೆ ಕಡಿದಾಕಿ ರಕ್ಷಕನಿಗೆ ಖಡ್ಗ ಹಿಂದಿರುಗಿಸಿ ಅಪ್ಪನ ಹಿಂದೆ ಶಾಂತನಾಗಿ ಕೈಕಟ್ಟಿ ನಿಂತನು.

ವರ್ಧನ್......ನಿಧಿ ಈ ರಾಜಕೀಯದ ಕಜ್ಜಿ ನಾಯಿಗಳನ್ನು ಸಾಕುತ್ತ ಬೆಳೆಸಿದವನು ನಾನೇ ಅದು ಅಣ್ಣ ಇವರ ಹೆಸರನ್ನು ಶಿಫಾರಸ್ಸು ಮಾಡಿದನೆಂಬ ಕಾರಣಕ್ಕಾಗಿ. ಈಗ ಈ ನಾಯಿಗಳಿಗೆಲ್ಲಾ ರೇಬೀಸ್ ಬಂದಿದೆ ಇವುಗಳನ್ನು ನಾನೇ ಮುಗಿಸ್ತೀನಿ.

ಅಣ್ಣ ರಾಣಾಪ್ರತಾಪನ ಖಡ್ಗ ಪಡೆದುಕೊಂಡ ವರ್ಧನ್ ಸಿಎಂನನ್ನು ಬಿಟ್ಟು ಉಳಿದವರೆಲ್ಲರನ್ನು ತುಂಡುಗಳಾಗಿ ಕತ್ತರಿಸಿ ಹಾಕಿಬಿಟ್ಟನು. 40ಕ್ಕೂ ಹೆಚ್ಚು ಜನರ ರಕ್ತ ಚಿಮ್ಮಿದ್ದರಿಂದ ವರ್ಧನ್ ತಲೆಯಿಂದ ಕಾಲಿನವರೆಗೂ ರಕ್ತದ ಕಲೆಗಳು ತುಂಬಿ ಹೋಗಿತ್ತು. ಸಿಎಂ ತನ್ನನ್ನು ಉಳಿಸುವಂತೆ ಪ್ರಾಣ ಬಿಕ್ಷೆ ಬೇಡುತ್ತಿದ್ದು.......

ವರ್ಧನ್.....ನನಗೆ ಹಣದ ವ್ಯಾಮೋಹವಿಲ್ಲ ನಾನು ಹುಟ್ಟಿನಿಂದಲೇ ರಾಜವಂಶಸ್ಥ ನನ್ನ ತಂದೆ ಮತ್ತು ರಾಮನಂತ ಅಣ್ಣನಿಂದ ನನಗೆ ಬೇಕಾದಷ್ಟು ಐಶ್ವರ್ಯವಿದೆ. ಅದನ್ನು ಅನುಭವಿಸುವವರು ಯಾರು ಸಹ ಇಲ್ಲವಲ್ಲ ಎಂಬ ಕೊರಗಿತ್ತು ಆದರೀಗ ನನ್ನ ಅಣ್ಣನ ಮಕ್ಕಳಿಬ್ಬರ ಜೊತೆ ನನ್ನ ಅಕ್ಕನ ಮಕ್ಕಳೂ ನನಗೆ ವಾರಸುದಾರರಾಗಿದ್ದಾರೆ. ಆದರೆ ನೀನು ಮತ್ತೀ ನಿನ್ನ ನಾಯಿಗಳೆಲ್ಲರೂ ಸೇರಿ ಲೂಟಿ ಮಾಡಿದ್ದ ಹಣ ನಮ್ಮ ದೇಶದ ಅಭಿವೃದ್ದಿಗೆ ಅವಶ್ಯಕ ಅದನ್ನೆಲ್ಲಿ ಬಚ್ಚಿಟ್ಟಿರುವೆ ಅಂತ ಹೇಳ್ಬಿಡು ಬಿಟ್ಟು ಬಿಡ್ತೀನಿ.

ಸಿಎಂ......ನಿಜವಾಗಿಯೂ ಬಿಟ್ಟು ಬಿಡ್ತೀರಾ ತಾನೇ ?

ವರ್ಧನ್......ನಾವು ರಜಪೂತರು ಒಮ್ಮೆ ಮಾತು ನೀಡಿದರಾಯಿತು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ನಿನ್ನನ್ನೇನೂ ಮಾಡಲ್ಲ ಅಂತ ಮಾತು ಕೊಡ್ತಿದ್ದೀನಿ.

ಸಿಎಂ ತಕ್ಷಣವೇ ವಿದೇಶಿ ಬ್ಯಾಂಕಿನ ಎಲ್ಲಾ ವಿವರಗಳನ್ನು ಹೇಳುತ್ತ ಇತರೆ ಮಂತ್ರಿಗಳ ವಿವರಗಳು ತನ್ನ ಫೋನಿನಲ್ಲಿರುವುದಾಗಿ ಹೇಳಿದ.

ಹರೀಶ......ಇವರ ಫೋನುಗಳನ್ನೆಲ್ಲಾ ನಾಶ ಮಾಡಿರಬೇಕಲ್ಲವಾ ?

ರಾಣಾ ಹತ್ತಿರ ಬಂದು ಮೆಲ್ಲಗೆ......ಇಲ್ಲ ಸರ್ ಮಾತೆ ನಾವು ಫೋನ್ ನಾಶ ಮಾಡುವುದಕ್ಕೂ ಮುನ್ನ ಹಾಗೆ ಮಾಡದಂತೆ ಹೇಳಿದ್ದರು ಏಕೆ ಅಂತ ಗೊತ್ತಿಲ್ಲ ಎಲ್ಲವನ್ನೂ ಆಫ್ ಮಾಡಿ ಇಟ್ಟಿದ್ದೀವಿ.

ಸಿಎಂ......ಫೋನ್ ಇಲ್ಲದಿದ್ದರೆ ಒಂದು ಲ್ಯಾಪ್ಟಾಪ್ ಕೊಡಿ ನಾನು ನನ್ನ ಪರ್ಸನಲ್ ಡೇಟಾದಿಂದ ಎಲ್ಲರ ಅಕೌಂಟ್ ವಿವರ ತೆಗೆದು ನಿಮಗೆ ನೀಡುವೆ.

ವರ್ಧನ್......ನೀನು ಅಕೌಂಟಿನ ವಿವರ ಹೇಳು ನಾವೇ ತೆಗೀತೀವಿ.

ಸಿಎಂ ಹೇಳುತ್ತಿದ್ದ ವಿವರಗಳನ್ನು ಲ್ಯಾಪ್ಟಾಪಿನಲ್ಲಿ ಗಿರೀಶ ಫೀಡ್ ಮಾಡಿದಾಗ ಅದರಲ್ಲಿ ಸಿಎಂ ಸೇರಿ ಆತನ ಜೊತೆಗಾರರೆಲ್ಲರ ವಿದೇಶಿ ಅಕೌಂಟಿನ ವಿವರಗಳೂ ಪಾಸ್ವರ್ಡಿನ ಸಮೇತ ತೆರೆದುಕೊಂಡಿತು. ಒಟ್ಟು 29000 ಸಾವಿರ ಕೋಟಿಗಳಷ್ಟು ಹಣವಿದ್ದು ಎಲ್ಲರ ವಿದೇಶಿ ಅಕೌಂಟುಗಳನ್ನು ಖಾಲಿ ಮಾಡಿ ಭಾರತ ಸರ್ಕಾರದ ಟ್ರೆಷರಿಗೆ ಹಣ ವರ್ಗಾವಣೆ ಮಾಡಲಾಯಿತು.

ವರ್ಧನ್.......ನೋಡು ಕೊಟ್ಟ ಮಾತಿನಂತೆ ನಾನು ನಿನಗೇನನ್ನೂ ಮಾಡ್ತಿಲ್ಲ ಆದರೆ ತಂದೆಯ ಸಾವಿನಲ್ಲಿ ನಿನ್ನ ಕೈವಾಡ ಇರುವುದಕ್ಕೆ ಅಣ್ಣನ ಮಗಳು ನಿನ್ನನ್ನು ಉಳಿಸುತ್ತಿಲ್ಲ ನಿಧಿ.

ನಿಧಿ ಮುಂದೆ ಬಂದು ಸಿಎಂ ಹೊಟ್ಟೆಯನ್ನು ಎಂಟಿಂಚಿನಷ್ಟುದ್ದಕ್ಕೂ ಸೀಳಿ ಹಾಕಿ ಆತ ಬಿದ್ದು ನರಳಾಡುವಂತೆ ಮಾಡಿ ಚಂಚಲಾದೇವಿಯ ಕಡೆ ಮುನ್ನಡೆದಳು.

ಪ್ರೀತಿ........ಹರೀಶ್ ನೀವೇ ಹೋಗಿ ನಿಧಿಯನ್ನು ತಡೆಯಿರಿ ಅವಳು ಅಪ್ಪನ ಮಾತನ್ನು ಮೀರುವುದಿಲ್ಲ ಅವಳ ಕ್ರೋದಾಗ್ನಿ ನೋಡಲಿಕ್ಕೂ ಆಗದಷ್ಟು ಭಯಾನಕವಾಗಿದೆ.

ಹರೀಶ........ಪ್ರೀತಿ ಜೀವನವನ್ನೇ ನೀಡಿದ ತಂದೆ ತಾಯಿ ಇಬ್ಬರನ್ನು ನಿರ್ಧಾಕ್ಷಿಣ್ಯವಾಗಿ ಕೇವಲ ಹಣಕ್ಕೋಸ್ಕರ ಸಾಯಿಸಿರುವಾಗ ನಿಧಿ ಹೃದಯದಲ್ಲಿನೆಂತಾ ಕೋಪ ಇರಬೇಕೆಂದು ಊಹೆ ಮಾಡಿ ನೋಡು. ನೀತು ಬರುವಾಗಲೇ ಹೇಳಿದ್ದಾಳೆ ನಿಧಿ ಏನೇ ಮಾಡಲಿ ಅವಳನ್ನು ಯಾರೂ ತಡೆಯಬೇಡಿ ಅಂತ ಇವತ್ತೇ ಅವಳೊಳಗೆ ಕುದಿಯುತ್ತಾ ಇರುವಂತ ಕೋಪಾವೇಶ ತಣ್ಣಗಾಗಿ ನಮ್ಮ ಮನೆಯ ಹಿರಿಮಗಳಾಗಿ ಹಿಂದಿರುಗಲಿ ಪ್ರೀತಿ ನೀನು ಸುಮ್ಮನಿದ್ದು ಬಿಡು.

ನಿಧಿಯನ್ನು ತನ್ನೆದುರು ನೋಡಿ ಚಂಚಲಾದೇವಿ........ನಿಧಿ ನಾನು ನಿನಗೆ ಅಜ್ಜಿಯಾಗಬೇಕು ಕಣಮ್ಮ ಇಷ್ಟು ವಯಸ್ಸಾಗಿರುವ ಅಜ್ಜಿಯ ಮೇಲೆ ನಿನಗೇಕೆ ಕೋಪ ಮಗಳೇ.

ನಿಧಿ ಕೋಪದಿಂದ......ಮಗಳೇ ಅಂತ ಕರೀಬೇಡ ನನ್ನ ಮುದುಕಿ. ನಿನಗಿಷ್ಟು ವಯಸ್ಸಾಗಿದ್ದರೂ ನಿನ್ನಂತ ಪಾಪಿ ಇನ್ನೂ ಈ ಭೂಮಿಯ ಮೇಲೆ ಬದುಕಿದ್ದೀಯಲ್ಲ ಅದಕ್ಕೆ ಕೋಪ ಬರ್ತಿದೆ. ನೀನು ಸ್ವಲ್ಪವೂ ಚಿಂತಿಸಬೇಡ ನಿನಗೆ ದುಃಖ...ನನ್ಮೇಲೆ ಕೋಪ....ನೀನು ಮಾಡಿದ ಅಧರ್ಮ ಅನೀತಿಯ ಕಾರ್ಯಗಳಿಗೆ ಪ್ರಾಯಶ್ಚಿತ್ತದ ಜೊತೆಗೆ ನೀನು ಇದನ್ನೆಲ್ಲಾ ಯಾಕಾದರೂ ಮಾಡಿದೆನೋ ಎನ್ನುವುದಕ್ಕೆ ಪಶ್ಚಾತ್ತಾಪ ಎಲ್ಲವೂ ಆಗುವಂತೆ ನೋಡಿಕೊಳ್ತೀನಿ.

ನಿಧಿ ಮುಂದೊಂದೂ ಮಾತನ್ನಾಡದೆ ಮೊದಲಿಗೆ ಚಂಚಲಾದೇವಿಯ ನಾಲ್ವರು ಮೊಮ್ಮಕ್ಕಳನ್ನು ಯಮಪುರಿಗೆ ಕಳುಹಿಸಿದಳು. ನಾಲ್ವರು ಮೊಮ್ಮಕ್ಕಳ ಸಾವನ್ನು ಕಣ್ಣೆದುರಿಗೇ ನೋಡಿ ಚಂಚಲಾದೇವಿ ಮತ್ತು ಆಕೆಯ ಗಂಡ ದುಃಖಿಸುತ್ತಿದ್ದರೆ ಅಳಿದುಳಿದಿದ್ದ ಇನ್ನಿಬ್ಬರು ಮಕ್ಕಳು ಮತ್ತವರ ಹೆಂಡತಿಯರು ನಿಧಿ ಹಿಡಿದಿದ್ದ ಖಡ್ಗಕ್ಕೆ ಬಲಿಯಾದರು. ಚಂಚಲಾದೇವಿಯ ಗಂಡನ ತಲೆ ಕಡಿದ ನಿಧಿ ಹಣೆ ಚಚ್ಚಿಕೊಳ್ಳುತ್ತ ತನ್ನ ವಂಶದ ಸರ್ವನಾಶಕ್ಕೆ ರೋಧಿಸುತ್ತಿದ್ದವಳ ಮಡಿಲಿನಲ್ಲಿಟ್ಟು ಯಶೋಮತಿಯ ಕಡೆ ದೃಷ್ಟಿ ಹಾಯಿಸಿದಳು

ನಿಧಿ......ಹುಟ್ಟಿದಾಕ್ಷಣವೇ ಅನಾಥೆಯಾಗಿದ್ದ ನನ್ನನ್ನು ಮಡಿಲಿನಲ್ಲಿ ಮಲಗಿಸಿಕೊಂಡು ತಾಯಿಯ ಮಮತೆ ಪ್ರೀತಿಯನ್ನು ಧಾರೆಯೆರೆದ ನನ್ನ ತಾಯಿಗೆ ನೀನು ವಿಷಪ್ರಾಶಾಣ ಮಾಡಿಸುತ್ತ ನನ್ನ ತಂಗಿಯನ್ನು ಜನಿಸುವುದಕ್ಕೂ ಮುನ್ನವೇ ಕೊಲ್ಲಿಸಲು ಪ್ರಯತ್ನಿಸಿದ್ದೆ. ಈಗ ನಿನ್ನೀ ಮಕ್ಕಳಿಬ್ಬರ ತಲೆ ತೆಗೆದರೆ ನಿನಗೆ ಹೇಗನ್ನಿಸಬಹುದು.

ಯಶೋಮತಿ.......ಯುದ್ದಕ್ಕೆ ಸಿದ್ದರಾದಾಗ ಯಾರು ಸಾಯುತ್ತಾರೆ ಯಾರು ಬದುಕಿರುತ್ತಾರೆಂದು ಯೋಚಿಸುತ್ತ ಕೂರಲಾಗುವುದಿಲ್ಲ ಆಗ ಒಂದೇ ಒಂದು ಧ್ಯೇಯವನ್ನಿಟ್ಟುಕೊಂಡಿರಬೇಕು ಅದೇ ಜಯವನ್ನು ಸಾಧಿಸುವುದು. ಮೋಸ...ವಂಚನೆ....ಕಪಟ ಹೇಗಾದರೂ ಸರಿಯೇ ಗೆಲ್ಲಲೇಬೇಕು ಇದೊಂದೇ ನನಗೆ ಗೊತ್ತಿರುವುದು. ನೀನು ನಮ್ಮನ್ನು ಕೊಲ್ಲಬಹುದು ಏಕೆಂದರೆ ಈ ಯುದ್ದದಲ್ಲಿ ಇಂದಿನವರೆಗೂ ನಾನು ಯೋಜನೆ ರೂಪಿಸಿದ್ದಂತೆಯೇ ಎಲ್ಲವೂ ನಡೆಯಿತು ಆದರೆ ಕೊನೇ ಕ್ಷಣದಲ್ಲಿ ನಾನೇ ದುಡುಕಿನ ದುಡುಕಿನ ನಿರ್ಧಾರ ಮಾಡಿ ಎಲ್ಲರ ಮುಂದೆಯೇ ನಿನ್ನಾ ಆ ನಿನ್ನ ತಂಗಿಯನ್ನು ಸಾಯಿಸಲು ತೀರ್ಮಾನ ಮಾಡಿ ಸಿಕ್ಕಿಬಿದ್ದೆ. 

ನನ್ನ ಕೈಯಿಂದಲೇ ನಿಮ್ಮಿಬ್ಬರ ಅಂತ್ಯವಾಗುತ್ತಿತ್ತು ಆದರೆ ಕೊನೇ ಕ್ಷಣದಲ್ಲಿ ಆ ಹೆಂಗಸು ನಿಮ್ಮಿಬ್ಬರಿಗೂ ಕವಚವಾಗಿ ಅಡ್ಡಿ ಬಂದಳು ಇಲ್ಲದಿದ್ದರೆ ಇಂದು ನಾನು ಜಯಿಸಿರುತ್ತಿದ್ದೆ. ನಾನು ಮಾಡಿರುವುದು ಕೇವಲ ಯುದ್ದ ಗೆಲ್ಲುವುದಕ್ಕಾಗಿ ಮಾಡುವಂತಹ ರಣನೀತಿಗಳೇ ಅದಕ್ಕಾಗಿ ನನಗೆ ಕಿಂಚಿತ್ತೂ ಪ್ರಾಯಶ್ಚಿತ್ತವಿಲ್ಲ.

ನಿಧಿ.......ಪಾಪಿ ನಮ್ಮನ್ನುಳಿಸಲು ಬಂದಿದ್ದವರನ್ನು ಆ ಹೆಂಗಸೆಂದು ಕರಿಬೇಡ ಅವರು ನನ್ನ ತಾಯಿ.

ಹರೀಶ ಮಗಳನ್ನು ತಬ್ಬಿಕೊಂಡು.....ನಿಧಿ ಈ ಹೆಂಗಸಿನ ಜೊತೆಯಲ್ಲಿ ವಾಧಿಸುತ್ತ ಸಮಯ ವ್ಯರ್ಥ ಮಾಡಬೇಡಮ್ಮ ಇವಳು ಮಾಡಿರುವ ಪಾಪಗಳಿಗೆ ಶಿಕ್ಷೆ ನೀಡಿ ಇಲ್ಲಿಂದ ಹೊರಡೋಣ ಅಲ್ಲಿ ನಿಮ್ಮಮ್ಮ ನಿನ್ನ ದಾರಿ ಕಾಯುತ್ತಿರುತ್ತಾಳೆ.

ಮುಂದಿನ ಐದೇ ನಿಮಿಷದಲ್ಲಿ ಸೂರ್ಯವಂಶಿ ಸಂಸ್ಥಾನವನ್ನು ಸರ್ವ ನಾಶವಾಗಿಸಲು ಷಡ್ಯಂತ್ರ ರೂಪಿಸಿದ್ದ ಎಲ್ಲಾ ವಿರೋಧಿಗಳನ್ನೂ ನಿರ್ನಾಮ ಮಾಡಲಾಯಿತು. ನಿಧಿ....ವರ್ಧನ್ ಮತ್ತು ಗಿರೀಶ ಅಲ್ಲೇ ಫ್ರೆಶಾಗಿ ಉದಯಪುರಕ್ಕೆ ಹಿಂದಿರುಗಿ ಬಂದರು. ಅಂದು ರಾತ್ರಿ ಅಪ್ಪ.. ಅಮ್ಮ...ಅಕ್ಕ ಮತ್ತು ಅಣ್ಣಂದಿರ ಜೊತೆ ತನ್ನನ್ನು ಹೆತ್ತ ತಂದೆ ತಾಯಿ ರೂಮಿನಲ್ಲಿ ಮಲಗಿದ್ದ ನಿಶಾ ಯಾರೊಬ್ಬರನ್ನೂ ಅಮ್ಮನ ಹತ್ತಿರವೂ ಸುಳಿಯಲು ಬಿಡದೆ ತಾನೇ ಅಮ್ಮನನ್ನು ಸೇರಿಕೊಂಡಿದ್ದಳು.

**
ಶುಕ್ರವಾರದ ಮುಂಜಾನೆ ಆಚಾರ್ಯರು ಮತ್ತವರ ಶಿಷ್ಯರು ಸಕಲ ಸಿದ್ದತೆಗಳನ್ನು ರಾಣಾ ಮತ್ತಿತರರಿಂದ ಮಾಡಿಸಿದ್ದು ಶುಭವಾಗಿರುವ ಮುಹೂರ್ತದಲ್ಲಿ ಸೂರ್ಯವಂಶಿ ಸಂಸ್ಥಾನದ ಯುವರಾಣಿಯರಾಗಿ ನಿಧಿ ಮತ್ತು ನಿಶಾ ಇಬ್ಬರಿಗೂ ಪಟ್ಟ ಕಟ್ಟಿದರೆ ಮನೆಯ ಹೆಂಗಸರು ಇಬ್ಬರಿಗೂ ಆರತಿ ಬೆಳಗಿದರು. ಅಮ್ಮನ ಪ್ರೀತಿಯ ಅಪ್ಪುಗೆ ಮರಳಿ ದೊರೆತಿರುವ ಖುಷಿಯಲ್ಲಿ ನಿಶಾ ಪುನಃ ಮೊದಲಿನಂತೆ ಲವಲವಿಕೆ ಮತ್ತು ತುಂಟಾಟದ ಕಿಲಕಾರಿಗಳನ್ನು ಹಾಕುತ್ತ ಎಲ್ಲರ ಜೊತೆಯಲ್ಲೂ ಕೀಟಲೆ ಮಾಡುತ್ತ ಖುಷಿಯಾಗಿದ್ದಳು. 

ನೀತು..ಹರೀಶ ತಮ್ಮ ಮಕ್ಕಳ ಹಾಗು ಮನೆಯವರೆಲ್ಲರ ಸಂತೋಷವನ್ನು ನೋಡಿ ಆನಂದಬಾಷ್ಪ ಸುರಿಸುತ್ತ ತಾವೂ ಖುಷಿಯಾಗಿದ್ದರು. ನಿಧಿ—ನಿಶಾ ಇಬ್ಬರಿಂದಲೂ ಸೂರ್ಯವಂಶಿ ರಾಜಮನೆತನದ ಸಾಂಕೇತಿಕ ವಸ್ತುಗಳಿಗೆ ಪೂಜೆ ಮಾಡಿಸಿ ಹಿರಿಯ ತಲೆಮಾರುಗಳ ಚಿತ್ರಪಟಗಳನ್ನು ಹಾಕಲಾಗಿದ್ದ ಕೊಠಡಿಗೆ ಕರೆತಂದು ಹಿರಿಯರಿಂದ ಇಬ್ಬರು ರಾಜಕುಮಾರಿಯರಿಗೆ ಆಶೀರ್ವಾದ ಕೊಡಿಸಲಾಯಿತು. ನಿಶಾ ತನ್ನ ತಲೆ ಮೇಲಿಟ್ಟುರುವ ಪುಟ್ಟ ಕಿರೀಟವನ್ನು ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ ಎಲ್ಲರಿಗೂ ಅದನ್ನು ತೋರಿಸುತ್ತ ಅವರಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದಳು. 

ಮಧ್ಯಾಹ್ನದವರೆಗೂ ಸೂರ್ಯವಂಶಿ ಪರಂಪರೆ ನಿಯಮಾವಳಿಗಳ ಅನುಸಾರ ರಾಜಕುಮಾರಿಯರಿಗೆ ವಿಧಿ ಭೋಧಿಸುತ್ತಿದ್ದ ಗುರುಗಳು ಅವರಿಬ್ಬರಿಂದ ಸೂರ್ಯವಂಶಿ ಕುಲದೇವರ ಪೂಜೆ ಮಾಡಿಸಿದರು. ನಿಶಾಳಿಂಗತೂ ಬೆಳಿಗ್ಗೆಯಿಂದಲೂ ಅದು ಮಾಡು ಇದು ಮಾಡೆಂದು ಹೇಳಿಸಿಕೊಂಡು ಚಿಟ್ಟಾಗಿ ಹೋಗಿದ್ದು ಕೊನೆಗೆ ಆಚಾರ್ಯರು ಏನು ಬೇಕಾದರೂ ಹೇಳಿಕೊಳ್ಳಲೆಂದು ತಲೆಯೇ ಕೆಡಿಸಿಕೊಳ್ಳದೆ ಅಲ್ಲಿಂದ ಏದ್ದು ಬಂದು ಅಮ್ಮನನ್ನು ಸೇರಿಕೊಂಡಳು.

ನೀತು.....ಯಾಕಮ್ಮ ಬಂದೆ ಚಿನ್ನಿ ಹೋಗಮ್ಮ ಇನ್ನು ಸ್ವಲ್ಪ ಹೊತ್ತು ಅಕ್ಕನ ಪಕ್ಕ ಕೂತಿರು ಆಮೇಲೆ ಊಟ ಮಾಡಿ ತಾಚಿ ಮಾಡುವಂತೆ.

ನಿಶಾ.....ನಾನಿ ಹೋಲಲ್ಲ ಮಮ್ಮ ನನ್ನಿ ಸುಸಿ ಆತು.

ನೀತು......ನೀನು ಜಾಣೆ ಅಲ್ವಾ ಕಂದ ಅಮ್ಮ ಹೇಳಿದಂತೆ ಕೇಳ್ತಿಯಾ ಅಲ್ವಾ ನೀನು ಗುಡ್ ಗರ್ಲ್ ತಾನೇ ಹೋಗಮ್ಮ ಕಂದ.

ನಿಶಾ.....ಮಮ್ಮ ನೀನಿ ಬಾ.

ಹರೀಶ........ಅಮ್ಮನ ಕೈ ನೋಡು ಡಾಕ್ಟರ್ ಆಂಟಿ ಬ್ಯಾಂಡೇಜ್ ಹಾಕಿದ್ದಾರಲ್ಲಮ್ಮ ಇನು ಸ್ವಲ್ಪ ಹೊತ್ತು ಅಕ್ಕನ ಜೊತೆ ಪೂಜೆ ಮಾಡು ಆಮೇಲೆ ಕುದುರೆ ರೌಂಡ್ ಹೋಗುವಂತೆ.

ಕುದುರೆಯ ಸವಾರಿ ಎನ್ನುತ್ತಿದ್ದಂತೆ ಖುಷಿಯಾದ ನಿಶಾ ಅಕ್ಕನ ಪಕ್ಕ ಕುಳಿತು ಪೂಜೆಯಲ್ಲಿ ಪಾಲ್ಗೊಂಡು ಆಚಾರ್ಯರು...ಅಪ್ಪ...ಅಮ್ಮ ಚಿಕ್ಕಪ್ಪ ಮತ್ತು ಮನೆಯವರೆಲ್ಲರ ಆಶೀರ್ವಾದ ಪಡೆದುಕೊಂಡರು. ನಿಶಾ ಅಕ್ಕನ ಕೈ ಹಿಡಿದೆಳೆಯುತ್ತ ಅವಳನ್ನು ಕುದುರೆ ಸವಾರಿಯನ್ನು ಮಾಡಿಸೆಂದು ಎಳೆದೊಯ್ಯುತ್ತ......

ನಿಶಾ.......ಅಜ್ಜಿ ತಾತ ಬಾ ನಾನಿ ಕುದ್ದಿ ಮೇಲೆ ಕೂಚಿ ಮಾತೀನಿ ನೋಲು ಬಾ ಅಣ್ಣ ಅಕ್ಕ ಬಾ...ಎಂದೆಲ್ಲರನ್ನೂ ಕರೆಯುತ್ತಿದ್ದಳು.

ನಿಧಿಯ ಮುಂದೆ ಕುದುರೆಯ ಮೇಲೇರಿ ಕುಳಿತಾಗ ನಿಧಿ ಇಂದಿನ ಪೂಜಾ ವಿಧಿಗಳಿಗಾಗಿ ರಾಜಪರಂಪರೆಯ ವೇಶ ಭೂಷದಲ್ಲಿದ್ದು ನಿಕಿತಾಳಿಂದ ಒಂದು ದುಪ್ಪಟ್ಟ ತರಿಸಿ ತಂಗಿಯನ್ನು ಬೀಳದಿರುವಂತೆ ತನ್ನೊಂದಿಗೆ ಕಟ್ಟಿಕೊಂಡಳು. ಕುದುರೆ ನಿಧಾನವಾಗಿ ಚಲಿಸುವುದಕ್ಕೆ ಪ್ರಾರಂಭಿಸಿ ಶರವೇಗದಲ್ಲಿ ದೌಡಾಯಿಸಲು ಶುರುವಾದಾಗ ನಿಶಾ ಫುಲ್ ಖುಷಿಯಿಂದ ಕಿರುಚಾಡತೊಡಗಿದಳು.

ಸವಿತಾ......ನಿಧಿಗೆ ಸ್ವಲ್ಪ ನಿಧಾನವಾಗಿ ಹೋಗುವುದಕ್ಕೆ ಹೇಳೆ ನೀತು ಇಷ್ಟು ಸ್ಪೀಡಾಗಿ ಹೋಗುವುದು ಬೇಡ ಕಣೆ.

ರೇವತಿ.....ಹೌದು ಕಣಮ್ಮ ನಿಧಿಗೆ ನಿಧಾನವಾಗಿ ಹೋಗುವುದಕ್ಕೆ ಹೇಳ್ಬೇಕು ಆದರೆ ಹೇಳುವುದೇಗೆ ?

ನೀತು.......ಅಮ್ಮ ಹೆದರುವ ಅಗತ್ಯವಿಲ್ಲ ನಿಧಿಗೆ ಅಭ್ಯಾಸವಾಗಿದೆ ಜೊತೆಗೆ ಇಲ್ಲಿಗೆ ಬಂದಾಗಿನಿಂದ ನಿಶಾ ಲೆಕ್ಕವಿಲ್ಲದಷ್ಟು ಕುದುರೆಯ ಸವಾರಿಯಲ್ಲಿ ಜೊತೆಗಿದ್ದಳು ಅವಳಿಗೂ ಆಭ್ಯಾಸವಾಗಿ ಹೋಗಿದೆ.

ಅರಮನೆಯನ್ನು ಮೂರು ರೌಂಡ್ ಸುತ್ತಿಕೊಂಡು ಬಂದ ನಂತರ ನಿಶಾ ಫುಲ್ ಖುಷಿಯಾಗಿ ಕುಣಿದಾಡುತ್ತ ಸೀಮ ಅತ್ತೆಯಿಂದಲೇ ಊಟ ಮಾಡಿಸಿಕೊಂಡು ಶೀಲಾ ಉಳಿದಿರುವ ರೂಮನ್ನು ಸೇರಿ ತಮ್ಮನನ್ನು ನೋಡುತ್ತ ನಿದ್ರೆಗೆ ಜಾರಿಕೊಂಡಳು. ಇತ್ತ ಹೊರಗೆ.....

ವರ್ಧನ್.......ಅಕ್ಕ ನಾನಿನ್ನು ಹೊರಡ್ತೀನಿ ಇಲ್ಲಿನ ಕೆಲಸಗಳೆಲ್ಲವೂ ಸಧ್ಯಕ್ಕೆ ಮುಗಿದಿದೆ ಮುಂದಿನ ಬಾರಿ ಕಾಮಾಕ್ಷಿಪುರಕ್ಕೆ ಬರ್ತೀನಿ.

ನೀತು.......ವರ್ಧನ್ ಅಣ್ಣ ಬರೆದಿದ್ದ ವಿದೇಶಗಳಲ್ಲಿನ ಹೋಟೆಲ್ ಮತ್ತು ರೆಸಾರ್ಟಿನ ವಿವರಗಳು ನನಗೆ ನಾಳೆ ಕೈ ಸೇರಲಿದೆ. ಅದನ್ನು ಪೂರ್ತಿ ಸ್ಟಡಿ ಮಾಡಿ ಯಾವ್ಯಾವುದನ್ನು ಮಾರಾಟ ಮಾಡಬೇಕಿದೆ ಅಥವ ಇಂತಿಷ್ಟು ವರ್ಷಗಳಿಗೆ ಪರಭಾರೆ ನೀಡುವುದೆಂಬುದರ ಬಗ್ಗೆ ನಿನಗೆ ವಿವರವಾಗಿ ಮೇಲ್ ಮಾಡ್ತೀನಿ.

ವರ್ಧನ್.......ಆಯ್ತಕ್ಕ ನೀವು ವಿವರಗಳನ್ನು ನನಗೆ ಕಳಿಸಿ ಕೊಡಿ ಮಿಕ್ಕಿದ್ದೆಲ್ಲವನ್ನು ನಾನು ನೋಡಿಕೊಳ್ತೀನಿ ಆದರೆ ಸೈನ್ ಮಾಡಲು ನೀವೇ ಅಲ್ಲಿಗೆ ಹೋಗಬೇಕು.

ರಜನಿ......ಈ ಕೆಲಸದಿಂದಾದರೂ ಸರಿ ನಾನು ನೀತು ವಿದೇಶವನ್ನು ಸುತ್ತಾಡಿಕೊಂಡು ಬರ್ತೀವಿ.

ರಶ್ಮಿ......ಅಮ್ಮ ನಮ್ಮೆಲ್ಲರ ಕಥೆಯೇನು ?

ನಯನ.......ಹೂಂ ಆಂಟಿ ನಾವೇನು ಪಾಪ ಮಾಡಿದ್ವಿ ನೀವಿಬ್ಬರೂ ನಮ್ಮನ್ನು ಕರೆದುಕೊಂಡು ಹೋಗುವುದಿಲ್ಲವಾ ?

ಪ್ರೀತಿ.....ಸಧ್ಯಕ್ಕೆ ನಿಮ್ಮ ಕೆಲಸವೇನಿದ್ದರೂ ಓದುವುದು ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ನಂಬರ್ ತೆಗೆದುಕೊಂಡು ಬನ್ನಿರಿ ನಿಮ್ಮೆಲ್ಲರಿಗೂ ಫಾರಿನ್ ಟೂರ್ ಗ್ಯಾರೆಂಟಿ.

ವರ್ಧನ್ ಪ್ರತಿಯೊಬ್ಬರನ್ನೂ ವಯಕ್ತಿಕವಾಗಿ ಬೇಟಿಯಾಗಿ ಅಕ್ಕ ಮತ್ತು ನಿಧಿಯನ್ನು ತಬ್ಬಿಕೊಂಡು ನಿಶಾ ಮಲಗಿದ್ದ ರೂಮಿಗೋದನು. ಅಲ್ಲಿ ಶೀಲಾಳ ಮಗುವನ್ನೆತ್ತಾಡಿಸಿದ ಬಳಿಕ ನಿಶಾಳನ್ನು ಮುದ್ದಾಡಿ ಗುರುಗಳ ಆಶೀರ್ವಾದ ಪಡೆದು ಎಲ್ಲರಿಂದ ಬೀಳ್ಗೊಂಡು ಕರ್ತವ್ಯದ ಪಥದತ್ತ ಮರಳಿದನು.
* *
* *

Wednesday, 19 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 285

ಇವರು ಒಳಗೆ ಹೋಗುವುದಕ್ಕೂ ನಿಮಿಷದ ಮುಂಚೆ ಒಳಗಿರುವ ಡಾಕ್ಟರ್ಸ್ ಮತ್ತು ನರ್ಸುಗಳು ಯುವರಾಣಿ ನಿಧಿಯ ಆದೇಶದನ್ವಯ ಹೊರಗೆ ಬಂದಿದ್ದರು. ಮುನಿಗಳು ಮತ್ತವರ 25 ವರ್ಷ ವಯಸ್ಸಿನ ಸ್ಪುರದ್ರೂಪಿ ಶಿಷ್ಯನಾದ ಭಾಸ್ಕರ್ ಜೊತೆಯಲ್ಲಿ ಅಮ್ಮನ ಬಳಿ ಬಂದಿದ್ದ ನಿಶಾ ಅಮ್ಮನನ್ನು ನೋಡುತ್ತಿದ್ದಂತೆಯೇ ಕಣ್ಣೀರು ಸುರಿಸತೊಡಗಿದಳು.

ಮುನಿವರ್ಯ......ಅಳಬೇಡ ಮಗು ನೀನು ಸಾಕ್ಷಾತ್ ಆಧಿಶಕ್ತಿಯ ಆಶೀರ್ವಾದದಿಂದ ಜನಿಸಿದವಳು ಆ ತಾಯಿ ನಿನ್ನನ್ನು ಮತ್ತೊಮ್ಮೆ ತಾಯಿಯ ಪ್ರೀತಿ ಮತ್ತು ಶ್ರೀರಕ್ಷೆ ಇಲ್ಲದಂತೆ ಮಾಡಲಾರಳು....... ಎಂದು ತಮ್ಮ ಶಿಷ್ಯನಿಂದ ಒಂದು ಕಮಂಡಲ ಪಡೆದುಕೊಂಡರು.

ನಿಶಾಳಿಗೆ ಆಕೆ ಕತ್ತಿನಲ್ಲಿ ರಾರಾಜಿಸುತ್ತಿರುವ ಅಪರೂಪದ ರುದ್ರಾಕ್ಷಿ ಮತ್ತು ದೈವತಾ ಲಿಂಗ ಐಕ್ಯವಾಗಿರುವ ॐ ಕಾರದ ಡಾಲರನ್ನು ಆ ಕಮಂಡಲದೊಳಗೆ ಅದ್ದುವಂತೇಳಿದರು. ನಿಶಾ ಅವರು ಹೇಳಿದಂತೆ ಮಾಡಿದಾಗ ಮುನಿವರ್ಯ ಮತ್ತವರ ಶಿಷ್ಯ ಕೆಲವು ಮಂತ್ರಗಳನ್ನು ಪಠಣ ಮಾಡಿದರು. ಮುನಿಗಳ ಶಿಷ್ಯ ನಿಶಾಳನ್ನೆತ್ತಿ ನೀತು ಪಕ್ಕದಲ್ಲಿ ಕೂರಿಸಿದರೆ ಮುನಿಗಳು ಅವಳ ಕೈಯಿಂದಲೇ ನೀತು ಬಾಯೊಳಗೆ ಕಮಂಡಲದಲ್ಲಿರುವ ಔಷಧಿಯನ್ನು ಹಾಕಿಸಿದರು. ಇನ್ನೂ ಕೆಲವು ಮಂತ್ರಗಳ ಪಠಣೆ ಮಾಡಿದ ನಂತರ ನಿಶಾಳಿಂದ ಒಂದು ಚಿಟಿಕೆ ಮಂತ್ರಿಸಿರುವ ಕುಂಕುಮವನ್ನು ನೀತುವಿನ ಹಣೆಗೆ ಹಚ್ಚಿಸಿ ಅಲ್ಲಿಂದ ಮೂವರೂ ಹೊರಗೆ ಬಂದಾಗ ನಿಶಾ ಪುನಃ ಅಪ್ಪನ ಹೆಗಲೇರಿದಳು.

ಮುನಿವರ್ಯ.........ಈ ಮಗು ನೀನು ನಿನ್ನ ಮಡದಿ ಮಾಡಿರುವ ಸತ್ಕಾರ್ಯಗಳ ಫಲಸ್ವರೂಪವಾಗಿ ನಿಮ್ಮ ಮಗಳಾಗಿ ಬಂದಿದ್ದಾಳೆ. ಇಂದು ನಾವು ನಿನ್ನ ಮಡದಿಯ ಪ್ರಾಣವನ್ನು ರಕ್ಷಿಸುವುದಕ್ಕೆ ಸಾಧ್ಯ ಆಗಿದೆಯೆಂದರೆ ಇದಕ್ಕೆ ಪ್ರಮುಖವಾದ ಕಾರಣವೇ ನಿನ್ನೀ ಮಗಳು. ನಿಮ್ಮೆಲ್ಲರಿಗಿಂತಲೂ ಜಾಸ್ತಿ ತನಗೋಸ್ಕರವಾದರೂ ಈ ಮಗು ತನ್ನ ತಾಯಿಯ ಪ್ರಾಣ ರಕ್ಷಿಸಿಕೊಳ್ಳಲು ನಮಗೆ ಸಂದೇಶ ಕಳುಹಿಸಿದಳು. ಆಗ ನಮ್ಮೀ ಶಿಷ್ಯ ದುರ್ಗಮವಾದ ಕಾಡಿನಲ್ಲಿ ತುಂಬ ವಿರಳವಾಗಿ ಸಿಗುವಂತಹ ಗಿಡಮೂಲಿಕೆ ಮತ್ತು ಗೆಡ್ಡೆಗಳನ್ನು ಹುಡುಕಿಕೊಂಡು ಸರಿಯಾದ ಸಮಯಕ್ಕೆ ತಂದಿರುವುದರಿಂದ ಔಷಧಿ ತಯಾರಿಸಲು ನಮಗೆ ಸಾಧ್ಯವಾಯಿತು. 

ನಾಳೆ ಮುಂಜಾನೆ ಹೊತ್ತಿಗೆ ನಿನ್ನ ಮಡದಿ ಮೇಲಿರುವ ಮೃತ್ಯುವಿನ ಛಾಯೆ ಸಂಪೂರ್ಣವಾಗಿ ಸರಿದಿರುತ್ತದೆ. ನೀನು ನಿನ್ನ ಮಡದಿ ಮತ್ತು ನಿನ್ನ ನಾಲ್ವರು ಮಕ್ಕಳು ಮಾತ್ರ ನಮ್ಮ ಕುಟೀರಕ್ಕೆ ಬರಬೇಕು. ಯಾವಾಗ ? ಎಲ್ಲಿಗೆ ? ಬರಬೇಕೆಂಬುದರ ಬಗ್ಗೆ ನಾನು ನಿಮಗೆ ಸಂದೇಶವನ್ನು ಕಳುಹಿಸಿಕೊಡ್ತೀನಿ. ಇನ್ಯಾವ ಭಯವೂ ಇಲ್ಲ ತಾಯಿ ಜಗನ್ಮಾತೆ ಆಧಿಶಕ್ತಿಯ ಆಶೀರ್ವಾದದಿಂದ ಜನಿಸಿರುವ ಈ ಮಗುವನ್ನು ಪ್ರೀತಿಯಿಂದ ಬೆಳೆಸಿರಿ ನಿಮಗೆಲ್ಲವೂ ಒಳ್ಳೆಯದಾಗಲಿ. ಗೋವಿಂದಾಚಾರ್ಯ ನಾವಿಲ್ಲಿಗೆ ಬಂದ ಕಾರ್ಯ ಸಂಪನ್ನವಾಯಿತು ನಾವಿನ್ನು ಹೊರಡುತ್ತೇವೆ ಜೈ ಮಾತಾ.

ಎಲ್ಲರೂ ಮುನಿವರ್ಯರಿಗೆ ನಮಸ್ಕರಿಸಿದರೆ ಅವರು ಬೇರೆ ಯಾರ ಕಡೆಗೂ ನೋಡದೆ ಶಿಷ್ಯನೊಡನೆ ಅಲ್ಲಿಂದ ತೆರಳಿದರು.

**

ಅದೇ ದಿನ ರಾತ್ರಿ ಒಂದು ಹೊತ್ತಿನಲ್ಲಿ ನೀತು ತನ್ನ ಸ್ತುಪ್ತ ಮನಸ್ಸಿನಲ್ಲಿ ಅಲ್ಲಿಂದಿಲ್ಲಿಗೆ ದಿಕ್ಕು ತೋಚದಂತೆ ಅಲೆದಾಡುತ್ತಿದ್ದಾಗ ಅವಳೆದುರಿಗೆ ಎರಡು ಆತ್ಮಗಳು ಪ್ರಕಟಗೊಂಡು ಒಂದು ಆಕಾರ ಪಡೆದುಕೊಳ್ಳಲು ಪ್ರಾರಂಭಿಸಿದವು. ನೀತು ಅವುಗಳತ್ತಲೇ ನೋಡುತ್ತಿದ್ದಾಗ ಒಂದು ಆತ್ಮ ಮಹಾರಾಜ ರಾಣಾಪ್ರತಾಪ್ ಮತ್ತೊಂದು ಮಹಾರಾಣಿಯಾದ ಸುಧಾಮಣಿಯ ರೂಪ ತಾಳಿದವು. ಇಬ್ಬರೂ ನೀತುವಿಗೆ ತಮ್ಮ ಕೈ ಮುಗಿದು ವಂಧಿಸಿದರೆ.......

ನೀತು.......ಏನಿದು ನೀವು ನನ್ನ ಅಣ್ಣ ಅತ್ತಿಗೆಯರು ನೀವು ನನಗೆ ಕೈ ಮುಗಿಯುವುದು ಶ್ರೇಯಸ್ಸಲ್ಲ ನನಗೆಆಶೀರ್ವಧಿಸಬೇಕು.

ಸುಧಾಮಣಿ......ಇದು ನಾವು ನಿನಗೆ ಕೈ ಮುಗಿದಿದ್ದಲ್ಲ ನೀತು ನಿನ್ನಲ್ಲಿ ಇರುವಂತ ತಾಯ್ತತದಿಂದಲೇ ತುಂಬಿರುವ ಪವಿತ್ರವಾದ ಹೃದಯಕ್ಕೆ ನಮಿಸುತ್ತಿದ್ದೀವಿ. ಇಷ್ಟು ದಿನ ಪತ್ರಗಳ ಮೂಲಕವಾದರೂ ನಿನ್ನೀ ಅಣ್ಣ ನಿನ್ನೊಡನೆ ಮಾತನಾಡುತ್ತಿದ್ದರು ಆದರಿಂದು ನಾನು ಮಾತ್ರ ಮಾತನಾಡುವೆ. ನಿಧಿ ನನ್ನ ಹಿರಿಮಗಳು ಅವಳನ್ನು ನಾನು ಹೆರಲಿಲ್ಲ ಆದರವಳು ನನ್ನ ಹೃದಯದ ಒಂದು ಭಾಗವಾಗಿದ್ದಳು ಆದರೆ ನೀನು ನಿಶಾಳನ್ನು ಹೆರದಿದ್ದರೂ ಅವಳು ನಿನ್ನ ಹೃದಯದೊಂದು ಭಾಗವಾಗಿ ಉಳಿಯಲಿಲ್ಲ ನಿನ್ನಿಡೀ ಹೃದಯವೇ ನಿಶಾ ಆಗಿ ಹೋಗಿದ್ದಾಳೆ ಇದೇ ತಾಯ್ತನದಲ್ಲಿ ನನಗೂ ನಿನಗೂ ಇರುವ ವೆತ್ಯಾಸ. 

ನೀತು ಇಷ್ಟು ದಿನ ನಾನು ನಿಶಾಳ ಸ್ತುಪ್ತ ಮನಸ್ಸಿನಲ್ಲಿ ಅವಳ ಜೊತೆಗಿದ್ದು ಅವಳಿಂದ ಕೆಲವು ಕಾರ್ಯಗಳನ್ನು ಮಾಡಿಸುತ್ತಿದ್ದೆ. ನಿನಗೆ ಸಾವಿನ ಗಂಡಾಂತರ ಇರುವುದರ ಬಗ್ಗೆ ನಮಗೆ ತಿಳಿಯಿತು ಅದಕ್ಕಾಗಿ ಮಗಳ ಮನಸ್ಸಿನ ಮೂಲಕ ಋಷಿವರ್ಯರನ್ನು ಸಂಪರ್ಕಿಸಿ ನಿನ್ನನ್ನು ಉಳಿಸುವಂತೆ ಅವರಲ್ಲಿ ನಾನೇ ಬೇಡಿಕೊಂಡಿದ್ದು. .

ಹುಟ್ಟಿದ ದಿನವೇ ತಾಯಿಯ ಮಡಿಲನ್ನು ಕಳೆದುಕೊಂಡ ನನ್ನ ಹಿರಿಯ ಮಗಳಿಗೆ ನಾನು ತಾಯಿ ಸ್ಥಾನದಲ್ಲಿ ಆ ಪ್ರೀತಿಯನ್ನು ನೀಡಿದೆ ಆದರೆ ಅದೇ ನಾನು ಹೆತ್ತಿರುವ ಮಗಳ ವಿಷಯದಲ್ಲೂ ಮರುಕಳಿಸಿತು. ಸ್ವಲ್ಪ ತಡವಾಗಿಯಾದರೂ ಸರಿ ಅವಳು ಸೇರಬೇಕಾದ ತಾಯಿಯ ಮಡಿಲನ್ನೇ ಸೇರಿರುವಳು. 

ಈಗ ನಾನು ನನ್ನ ಪುಟ್ಟ ಕಂದಮ್ಮನ ಮನಸ್ಸಿನಲ್ಲಿದ್ದು ಮಾಡಬೇಕಿದ್ದ ಕಾರ್ಯಗಳೆಲ್ಲವೂ ಸಂಪ್ಪನ್ನಗೊಂಡಿದೆ ಈಗ ನಮ್ಮಿಬ್ಬರಿಗೂ ಮುಕ್ತಿ ದೊರೆಯಿತು. ಇನ್ಮುಂದೆ ನನ್ನಿಬ್ಬರೂ ಮಕ್ಕಳ ಸಂಪೂರ್ಣವಾದ ಜವಾಬ್ದಾರಿಯೂ ನಿನ್ನದೇ ಕಣಮ್ಮ ನೀತು. ಅವರಿಬ್ಬರ ಪ್ರಾಣವನ್ನು ಕಾಪಾಡಲು ಒಂದು ಕ್ಷಣವೂ ಯೋಚಿಸದೆ ಮಕ್ಕಳಿಬ್ಬರ ಮತ್ತವರ ಸಾವಿನ ನಡುವೆ ಮಾತೃತ್ವದ ಮಹಾನ್ ತಡೆಗೋಡೆಯ ರೂಪದಲ್ಲಿ ನೀನು ನಿಂತಿದ್ದೆ. ಈಗ ನಿನ್ನ ಕಂದಮ್ಮ ಆರು ದಿನಗಳಿಂದಲೂ ಈ ತಾಯಿ ಮರಳಿ ತನ್ನನ್ನೆತ್ತಿ ಮುದ್ದಾಡುವುದನ್ನೇ ಕಾಯುತ್ತಿದ್ದು ತಾನು ನಗುವುದನ್ನೇ ಮರೆತು ಹೋಗಿ ಪ್ರತೀಕ್ಷಣವೂ ದುಃಖಿಸುತ್ತಿದ್ದಾಳೆ. 

ಅವಳನ್ನು ಪುನಃ ಮೊದಲಿನ ತುಂಟತನಕ್ಕೆ ಮರಳುವಂತೆ ಮಾಡುವ ಶಕ್ತಿಯಿರುವುದು ನಿನ್ನೊಬ್ಬಳಿಂದ ಮಾತ್ರ ದಯವಿಟ್ಟು ನೀನಿಲ್ಲಿಂದ ಮರಳಿ ಹೋಗಮ್ಮ ನಿನ್ನ ಮಕ್ಕಳು ಅವರ ತಾಯಿಗೋಸ್ಕರವಾಗಿ ಕಾಯುತ್ತಿದ್ದಾರೆ. ಸೂರ್ಯವಂಶಿ ಸಂಸ್ಥಾನ ಮತ್ತು ಮಕ್ಕಳಿಬ್ಬರ ಸಂಪೂರ್ಣ ಜವಾಬ್ದಾರಿಯೂ ನಿನ್ನ ಮೇಲಿದೆ ಅದನ್ನು ನಿನ್ನಿಂದ ಮಾತ್ರ ನಿಭಾಯಿಸಲು ಸಾಧ್ಯವೆಂಬುದೂ ಗೊತ್ತಿದೆ ಹೋಗಮ್ಮ ನೀತು ನಿನ್ನ ಕಿರಿಯ ಮಗ ಮತ್ತು ಪುಟ್ಟ ಕಂದಮ್ಮ ನೀನಿಲ್ಲದಿದ್ದರೆ ಬೇರಾರ ಜೊತೆಗೂ ನಗುನಗುತ್ತ ಬಾಳಲು ಸಾಧ್ಯವಿಲ್ಲ ಕಣಮ್ಮ.

ಮಹಾರಾಜ....ಮಹಾರಾಣಿಯರ ಆತ್ಮಗಳು ಅಂತರ್ಧ್ಯಾನವಾದಾಗ ನೀತುವಿನ ಸ್ತುಪ್ತ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡಗಳೆಲ್ಲವೂ ಸಹ ಚದುರಿದವು. ಸ್ಪೆಷಲಿಸ್ಟ್ ಡಾಕ್ಟರುಗಳು ನೀತುಳನ್ನು ಪರೀಕ್ಷಿಸಿದಾಗ ಗುಂಡಿನ ಕಾರಣದಿಂದ ಅವಳ ಹೃದಯದಲ್ಲಾಗಿದ್ದ ರಂಧ್ರ ಸ್ವಲ್ಪವೂ ನಾಮಾವಶೇಷವಿಲ್ಲದಂತೆ ಕಾಣೆಯಾಗಿದ್ದು ಬ್ಲೀಡಿಂಗ್ ಸಂಪೂರ್ಣ ನಿಲುಗಡೆಯಾಗುವ ಜೊತೆಗೆ ಹೃದಯವೂ ಸಹ ಸಾಮಾನ್ಯವಾಗೇ ಕಾರ್ಯ ನಿರ್ವಹಿಸುತ್ತಿತ್ತು.

ಸೀನಿಯರ್ ಸ್ಪೆಷಲಿಸ್ಟ್........ಇದೊಂದು ಪವಾಡವೇ ಆರ್ಯುವೇದ ಚಿಕಿತ್ಸೆಯಿಂದ ಇಂತಹ ಚಮತ್ಕಾರಗಳು ನಡೆದಿರುವ ಬಗ್ಗೆ ಪುರಾತನ ಗ್ರಂಥಗಳಲ್ಲಿ ಮಾತ್ರ ಉಲ್ಲೇಖವಿತ್ತು ಆದರಿಂದು ಅದನ್ನು ನಾವೆಲ್ಲ ಸಾಕ್ಷಾತ್ಕಾರವಾಗಿ ನೋಡುವಂತಾಯಿತು. She is perfectly fine now but keep her under observation for next 24 hrs.

ರಾತ್ರಿ ಹತ್ತು ಘಂಟೆ ಹೊತ್ತಿಗೆ ನೀತುಳನ್ನು ಪರೀಕ್ಷಿಸಿ ಸ್ಪೆಷಲಿಸ್ಟುಗಳು ಹೊರಬಂದಾಗ......

ಅಶೋಕ.......ಈಗ ಹೇಗಿದ್ದಾಳೆ ಡಾಕ್ಟರ್ ?

ವರ್ಧನ್.......ಅಕ್ಕನ ಆರೋಗ್ಯದಲ್ಲಿ ಸುಧಾರಣೆ ಆಗಿದೆಯಾ ?

ಸ್ಪೆಷಲಿಸ್ಟ್.........ಸುಧಾರಣೆಯಲ್ಲ ಪವಾಡವೇ ನಡೆದಿದೆ ಮೇಡಂ ಈಗ ಪೂರ್ಣ ಗುಣಮುಖರಾಗಿದ್ದಾರೆ. ಅವರ ಹೃದಯದಲ್ಲಿ ಆಗ್ತಿದ್ದ ಬ್ಲೀಡಿಂಗ್ ನಿಂತಿರುವ ಜೊತೆಗೆ ಬುಲೆಟ್ಟಿನಿಂದಾಗಿದ್ದ ರಂದ್ರವೂ ಸಹ ಕೂಡಿಕೊಂಡಿದ್ದು ಹೃದಯ ಸಾಮಾನ್ಯವಾಗಿಯೆ ಕೆಲಸ ಮಾಡುತ್ತಿದೆ. ಇನ್ಯಾವುದೇ ಅಪಾಯವಿಲ್ಲ ಆದರಿನ್ನೂ ಅವರಿಗೆ ಪ್ರಜ್ಞೆ ಬಂದಿಲ್ಲ ಮಧ್ಯರಾತ್ರಿ ಅಥವ ಬೆಳಿಗ್ಗೆ ಎಷ್ಟೊತ್ತಿಗಾದರೂ ಪ್ರಜ್ಞೆ ಮರುಕಳಿಸುತ್ತೆ. ಆಗ ನಾವೊಮ್ಮೆ ಚೆಕಪ್ ಮಾಡಿ ನಿಮಗೆ ಬೇಟಿಯಾಗಲು ಅವಕಾಶ ನೀಡ್ತೀವಿ.

ನೀತು ಸಾವಿನ ದವಡೆಯಿಂದ ಹಿಂದಿರುಗಿ ಬಂದಳೆಂಬ ಸಿಹಿಸುದ್ದಿ ಕೇಳಿ ಮನೆಯವರ ಮುಖದಲ್ಲಿ ಸಂತೋಷದ ನಗು ಮೂಡಿತು. ಆಸ್ಪತ್ರೆಯಲ್ಲಿ ಕೇವಲ ಗಂಡಸರು ನಿಧಿ...ನಿಕಿತಾ ಮತ್ತು ಗಿರೀಶರಷ್ಟೇ ಉಳಿದುಕೊಂಡಿದ್ರು. ರಾಣಾ ಮತ್ತು ರಕ್ಷಕರು ವೈದ್ಯರಿಗೆ ಕೈ ಮುಗಿದು ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಅರಮನೆಯಲ್ಲಿದ್ದ ಹೆಂಗಸರಿಗೆ ವಿಕ್ರಂ ಫೋನ್ ಮಾಡಿ ವಿಷಯ ತಿಳಿಸಿದಾಗ ಇಷ್ಟು ದಿನಗಳಿಂದಲೂ ಭಯ ಮತ್ತು ಆತಂಕದಲ್ಲಿಯೇ ದಿನ ದೂಡುತ್ತಿದ್ದವರು ನೆಮ್ಮದಿಯ ನಿಟ್ಟುಸಿರು ಬಿಡುತ್ತ ನೀತುವಿನ ಪ್ರಾಣ ರಕ್ಷಿಸಿದ ಮುನಿವರ್ಯರು ಮತ್ತು ದೇವರಿಗೂ ಕೈ ಮುಗಿದರು.
* *
* *
ಮುಂಜಾನೆ ಐದು ಘಂಟೆಗೆಲ್ಲಾ ಅರಮನೆಯಿಂದ ಹೆಂಗಸರು ಮತ್ತು ಮಕ್ಕಳೆಲ್ಲರೂ ಆಸ್ಪತ್ರೆಗೆ ಆಗಮಿಸಿದ್ದು ಎಲ್ಲರ ಮುಖದಲ್ಲೂ ಸಂತಸ ಮನೆಮಾಡಿತ್ತು. ಸ್ಪೆಷಲಿಸ್ಟ್ ನೀತುಳನ್ನು ಪರೀಕ್ಷಿಸಿ ಹೊರಬಂದಾಗ ಅವರಲ್ಲೊಬ್ಬಳು ಮಹಿಳಾ ವೈದ್ಯೆ....ನಿಮ್ಮಲ್ಲಿ ಚಿನ್ನಿ ಯಾರು ?

ಅಪ್ಪನ ತೋಳಿನಲ್ಲಿದ್ದ ನಿಶಾ........ನಾನಿ ಚಿನ್ನಿ..ನಾನಿ ಚಿನ್ನಿ ನಾನಿ ಮಮ್ಮ ಹತ್ತ ಹೋತೀನಿ ನನ್ನಿ ಮಮ್ಮ ಬೇಕು.

ಸ್ಪೆಷಲಿಸ್ಟ್.....ಮೇಡಂ ಸಂಪೂರ್ಣ ಗುಣಮುಖರಾಗಿದ್ದಾರೆ ಅವರಿಗೆ ಪೂರ್ತಿ ಪ್ರಜ್ಞೆಯೂ ಮರುಕಳಿಸಿದೆ. ಮೊದಲಿಗೆ ಅವರು ಚಿನ್ನಿಯನ್ನು ನೋಡಬೇಕೆಂದು ಬಯಸಿದ್ದಾರೆ.

ಅಪ್ಪನ ತೋಳಿನಿಂದ ಕೆಳೆಗಿಳಿದು ಮಹಿಳಾ ವೈದ್ಯೆಯ ಜೊತೆಯಲ್ಲಿ ಐಸಿಯು ಒಳಗೆ ಬಂದಾಗ ಮಂಚದ ಹಿಂಭಾಗವನ್ನು ಮೇಲಕ್ಕೆತ್ತರಿಸಿ ಅದನ್ನೊಗರಗಿ ಕುಳಿತಿದ್ದ ನೀತು ಮಗಳನ್ನು ನೋಡುತ್ತಲೇ ಅವಳ ಕಣ್ಣಿನಿಂದ ಕಣ್ಣೀರು ಸುರಿಯತೊಡಗಿತು. ಅಮ್ಮ ಎದ್ದು ಕುಳಿತು ತನ್ನ ಕಡೆಗೇ ನೋಡುತ್ತಿರುವುದನ್ನು ಕಂಡ ನಿಶಾ ಖುಷಿಯಿಂದ ಮಂಚದ ಬಳಿಗೋಡಿ ಅದನ್ನೇರಲು ಪ್ರಯತ್ನಿಸಿದಾಗ ನರ್ಸ್ ಅವಳನ್ನೆತ್ತಿ ಮೇಲೆ ಕೂರಿಸಿದಳು. ಮಗಳ ಸೊರಗಿ ಬಾಡಿಹೋಗಿದ್ದ ಮುಖವನ್ನು ನೋಡಿ ನೀತುಳಿಗೆ ಹೃದಯ ಹಿಂಡಿದಂತಾಗಿ ಮಗಳನ್ನು ತನ್ನ ಎದೆಗೆ ಅಪ್ಪಿಕೊಂಡಾಗ ನಿಶಾ ಜೋರಾಗಿ ಅಳುವುದಕ್ಕೆ ಶುರುವಾದಳು.

ನೀತು......ಅಳಬೇಡ ಕಂದ ನೋಡು ಅಮ್ಮ ನಿನ್ನ ಜೊತೆಯಲ್ಲೇ ಇದೆ ಅಲ್ವಾ ಅಳಬೇಡ ನನ್ನ ಬಂಗಾರಿ.

ನಿಶಾ.....ಮಮ್ಮ ಎಲ್ಲಿ ಹೊಬೇಲ ಮಮ್ಮ...ಎಲ್ಲಿ ಹೊಬೇಲ ಮಮ್ಮ ಲವ್ ಯು ಮಮ್ಮ....ನಂಗಿ ಭಯ ಆತು ಮಮ್ಮ.

ನೀತು ಮಗಳನ್ನು ತಬ್ಬಿಕೊಂಡು ಅವಳನ್ನು ಸಮಾಧಾನಿಸಿ.....ನಿನ್ನ ಸುರೇಶಣ್ಣ ಎಲ್ಲಿ ಕಂದ ?

ನಿಶಾ......ಅಣ್ಣ ಆಚಿ ಇದಿ ಮಮ್ಮ....ಎಂದು ನರ್ಸ್ ಸಹಾಯದಿಂದ ಕೆಳಗಿಳಿದು ಹೊರಗೋಡಿದಳು.

ಸುರೇಶಣ್ಣನ ಕೈ ಹಿಡಿದ ನಿಶಾ.......ಅಣ್ಣ ಬಾ ಮಮ್ಮ ಕಲೀತು ಬಾ ಎಂದವನನ್ನು ಎಳೆದುಕೊಂಡು ಬಂದು ತಾನು ಮೊದಲು ಮಂಚದ ಮೇಲೇರಿ ಅಮ್ಮನನ್ನು ಸೇರಿಕೊಂಡಳು.

ನೀತು ಮಗನ ಕೆನ್ನೆ ತಡವಿ ತಲೆ ಸವರುತ್ತ.......ನನಗೇನೂ ಆಗಿಲ್ಲ ಕಣಪ್ಪ ನೋಡು ನೀನೆಷ್ಟು ಸೊರಗಿ ಹೋಗಿದ್ದೀಯ ನಿಮ್ಮೆಲ್ಲರನ್ನೂ ಬಿಟ್ಟು ನಾನಿಷ್ಟು ಬೇಗ ಎಲ್ಲಿಗೂ ಹೋಗಲ್ಲ ಕಣಪ್ಪ ಅಳ್ಬೇಡ.

ಸುರೇಶ ಕಣ್ಣೀರು ಒರೆಸಿಕೊಳ್ಳುತ್ತ......ಅಮ್ಮ ನಿನಗೆ ಗುಂಡು ಬಿದ್ದಿದೆ ಅಂತ ತಿಳಿದಾಗ ನನಗೇಗಾಗಿತ್ತು ಅಂತ ಹೇಳಲಾರೆ. ನನ್ನ ವಿಷಯ ಬಿಡು ಚಿನ್ನಿ ಆರು ದಿನದಿಂದ ಸರಿಯಾಗಿ ಊಟ ಮಾಡ್ತಿಲ್ಲ ಬಲವಂತ ಮಾಡಿದರೆ ಸ್ವಲ್ಪವೇ ತಿಂತಾಳೆ. ಬೆಳಿಗ್ಗೆ ಹತ್ತರವರೆಗೂ ಆರಾಮವಾಗಿ ಮಲಗಿರ್ತಿದ್ಳು ಆದರೀಗ ನಾಲ್ಕು ಘಂಟೆಗೇ ಎಚ್ಚರವಾಗಿ ನಿನ್ನನ್ನು ನೆನೆಯುತ್ತ ಮೌನವಾಗಿ ಕಣ್ಣೀರು ಸುರಿಸುತ್ತ ಕೂತಿರುತ್ತಿದ್ದಳು. ಇನ್ನು ಅಕ್ಕ ನಿನಗೆ ಗುಂಡು ಬಿದ್ದಿದ್ದನ್ನು ನೋಡಿ ಪ್ರಜ್ಞೆಯೇ ಕಳೆದುಕೊಂಡು ಮಲಗಿದ್ರಮ್ಮ ಅಣ್ಣನಂತೂ ಯಾರ ಜೊತೆಗೂ ಸರಿಯಾಗಿ ಮಾತೇ ಆಡ್ತಿಲ್ಲ ಮೌನವಾಗಿ ಐಸಿಯು ಬಾಗಿಲನ್ನೇ ನೋಡ್ತಾ ಕೂತಿರ್ತಿದ್ದ. ಅಜ್ಜಿ...ತಾತ...ಅಂಕಲ್...ಆಂಟಿ...ಅತ್ತೆ....ಮಾವ ಎಲ್ಲರದ್ದೂ ಇದೇ ಪರಿಸ್ಥಿತಿ ಕಣಮ್ಮ. ಅಪ್ಪನ ಬಗ್ಗೆ ಹೇಳೋದೇ ಬೇಡ ನಿಶಾಳಂತೂ ಅಪ್ಪನ ತೋಳಿನಿಂದ ಇಳಿಯುತ್ತಿರಲಿಲ್ಲ ಇವಳನ್ನು ಸಮಾಧಾನ ಮಾಡುತ್ತ ಅಪ್ಪ ಒಳಗೊಳಗೇ ನೋವನುಭವಿಸುತ್ತಿದ್ದರು.

ನೀತು ಕಂಬನಿ ಮಿಡಿಯುತ್ತ......ಸುರೇಶ ಹೋಗಿ ಅಕ್ಕ ಅಣ್ಣನನ್ನು ಕಳಿಸಪ್ಪ.

ಸುರೇಶ ಹೊರಡುವ ಮುನ್ನ ಅಮ್ಮನನ್ನು ತಬ್ಬಿಕೊಂಡವಳ ಕೆನ್ನೆಗೆ ಮುತ್ತಿಟ್ಟರೆ ನಿಶಾ ಅಣ್ಣನನ್ನು ತಳ್ಳುತ್ತ........ಮಮ್ಮ ನಂದು ನೀನಿ ಹೋಲು ಅಣ್ಣ.

ಸುರೇಶ ಮುಗುಳ್ನಕ್ಕು....ಆಯ್ತು ಚಿನ್ನಿ ಮರಿ ಮಮ್ಮ ನಿಂದೇ ಆದರೆ ನೀನು ಮಾತ್ರ ಅಳಬಾರದು ಕಂದ.

ನಿಶಾ ತಲೆ ಅಳ್ಳಾಡಿಸಿ.....ನಾನಿ ಅಲಲ್ಲ ಅಣ್ಣ ನನ್ನಿ ಮಮ್ಮ ಬಂತು.

ಸುರೇಶ ಹೊರಗೋದ ಹಿಂದೆಯೇ ನಿಧಿ—ಗಿರೀಶ ಒಳಗೆ ಬಂದಿದ್ದು ಇಬ್ಬರೂ ಅಮ್ಮನ ಕಾಲಿನ ಹತ್ತಿರ ಕುಳಿತು ಅಳತೊಡಗಿದರು. ನೀತು ಇಬ್ಬರನ್ನೂ ಸಮಾಧಾನ ಮಾಡುತ್ತಿದ್ದರೆ ಅಕ್ಕ ಅಣ್ಣ ಅಳುತ್ತಿದ್ದುದನ್ನು ನೋಡಿ ನಿಶಾ ಕೂಡ ಅಮ್ಮನನ್ನಪ್ಪಿ ಅಳಲಾರಂಭಿಸಿದಳು.

ನಿಧಿ.......ಅಮ್ಮ ಅವತ್ತು ನೀವ್ಯಾಕೆ ಅಡ್ಡಕ್ಕೆ ಬಂದ್ರಿ ನಿಮಗೇನಾದ್ರೂ ಆಗಿ ಹೋಗಿದ್ರೆ.........

ನೀತು ಮಗಳನ್ನು ಅರ್ಧಕ್ಕೇ ತಡೆಯುತ್ತ.......ಮಕ್ಕಳ ಮೇಲೆ ದಾಳಿ ಆಗುತ್ತಿದ್ದರೂ ತಾಯಿ ನೋಡಿಕೊಂಡು ಸುಮ್ಮನಿರಬೇಕಿತ್ತಾ ಕಂದ. ಆಗಿದ್ದಾಯಿತು ನಾನೀಗ ಆರೋಗ್ಯವಾಗಿದ್ದೀನಲ್ಲ ಇನ್ಯಾಕಮ್ಮ ನೀನು ಅಳ್ತೀಯ. ಗಿರೀಶ ಅಳಬೇಡ ಕಣಪ್ಪ ನನ್ನ ಮಕ್ಕಳ ಕಣ್ಣಲ್ಲಿ ಕಣ್ಣೀರು ನೋಡ್ತಿದ್ರೆ ಅಮ್ಮನಾದ ನನಗೆ ಸಂಟಕವಾಗುತ್ತೆ. ಇಲ್ನೋಡಿ ನೀವು ಅಳುವುದನ್ನು ನೋಡಿ ನನ್ನ ಕಂದನೂ ಅಳು ಶುರು ಮಾಡಿಬಿಟ್ಟಳು.

ಗಿರೀಶ......ಅಮ್ಮ ಚಿನ್ನಿ ಈಗಲ್ಲ ನೀವಿಲ್ಲಿಗೆ ಸೇರಿದಾಗಿನಿಂದ ಅಳ್ತಾನೆ ಇದ್ದಾಳೆ ನೀನು ಬೇಗ ಹುಷಾರಾಗಿ ಬಿಡಮ್ಮ ನೀನು ಜೊತೆಗಿದ್ದರಷ್ಟೇ ಸಾಕು ಬೇರೇನೂ ಬೇಕಾಗಿಲ್ಲ.

ಕೆಲ ಹೊತ್ತಿನಲ್ಲೇ ನೀತುಳನ್ನುಸೂಪರ್ ಸ್ಪೆಷಲ್ ವಾರ್ಡಿನಲ್ಲಿ ಶಿಷ್ಟ್ ಮಾಡಲಾಗಿ ಎಲ್ಲರೂ ಒಬ್ಬೊಬ್ಬರಾಗಿ ಬರತೊಡಗಿದರು. ರಶ್ಮಿ..ದೃಷ್ಟಿ ನಯನ...ನಿಕಿತಾ...ನಮಿತಾ ಮೊದಲಿಗೆ ಬಂದು ನೀತುಳನ್ನು ತಬ್ಬಿ ಅವಳು ಹುಷಾರಾಗಿರುವುದನ್ನು ನೋಡಿ ಸಂತಸಪಟ್ಟರೂ ಅವರ ಕಣ್ಣುಗಳಿಂದ ಕಂಬನಿ ಹರಿಯುತ್ತಲೇ ಇತ್ತು. ಸುಮ...ಪ್ರೀತಿ...ಸವಿತಾ ಸುಕನ್ಯಾ....ಅನುಷ...ರಜನಿ...ಶೀಲಾ...ಪಾವನಾ ಒಟ್ಟಿಗೇ ಬಂದು ಅವಳ ಜೊತೆ ಕೆಲಕಾಲ ಮಾತನಾಡಿ ತೆರಳಿದ ಬಳಿಕ ಗಂಡಸರೆಲ್ಲರೂ ಒಟ್ಟಿಗೆ ಬಂದು ಮಾತನಾಡಿಸಿದರು.

ವರ್ಧನ್ ಅಕ್ಕನ ಕಾಲ್ಮುಟ್ಟಿ ನಮಸ್ಕರಿಸಿ......ನಿಜಕ್ಕೂ ನೀವು ತುಂಬ ಮಹಾನ್ ವ್ಯಕ್ತಿ ಅಕ್ಕ.

ನೀತು......ಅಂತದ್ದೇನೂ ಇಲ್ಲ ವರ್ಧನ್ ಮಕ್ಕಳ ಪ್ರಾಣ ತಾಯಿಯ ಮುಂದೆ ಸಂಕಟದಲ್ಲಿರುವಾಗ ಪ್ರತಿಯೊಬ್ಬ ತಾಯಿಯೂ ನಾನೇನು ಮಾಡಿದೆನೋ ಅದನ್ನೇ ಮಾಡೋದು ಇದರಲ್ಲಿ ಮಹಾನ್ ಆಗುವ ವಿಷಯವೇನೂ ಇಲ್ಲ.
**

ಕೊನೆಯವನಾಗಿ ಹರೀಶ ಒಳಗೆ ಬಂದಾಗ ಅಮ್ಮನ ಪಕ್ಕದಲ್ಲಿಯೇ ಸೇರಿಕೊಂಡಿದ್ದ ನಿಶಾ ಅಪ್ಪನ ಹೆಗಲಿಗೇರಿ ಅಮ್ಮನತ್ತ ಕೈ ತೋರಿಸಿ ತನಗಾಗುತ್ತಿರುವ ಸಂತೋಷವನ್ನು ಹೇಳುತ್ತಿದ್ದಳು.

ಹರೀಶ.....ಈ ಆರು ದಿನ ನಮ್ಮೆಲ್ಲರ ಜೀವ ಹೋದಂತಾಗಿತ್ತು ನೀತು ಈಗ ಮರಳಿ ಬಂದಂತಾಗಿದೆ.

ನೀತು......ರೀ ಎಲ್ಲವೂ ವಿಧಿ ಲಿಖಿತ ಯಾರೇನೂ ಮಾಡಕ್ಕಾಗಲ್ಲ.

ಹರೀಶ......ಆದರೂ ವಿಧಿಯ ನಿಯಮದ ವಿರುದ್ದ ನನ್ನೀ ಪುಟಾಣಿ ಹೋರಾಡಿ ಅವಳಮ್ಮನನ್ನು ಬದುಕಿಸಿಕೊಂಡು ಕರೆತಂದಿದ್ದಾಳೆ. ಆ ಮುನಿವರ್ಯರು ಇಲ್ಲಿಗೆ ಬಂದು ನಿನ್ನ ಪ್ರಾಣ ಉಳಿಸುವುದಕ್ಕೆ ನನ್ನೀ ಕಂದನೇ ಕಾರಣ......ಎಂದು ಎಲ್ಲಾ ವಿಷಯವನ್ನೂ ಹೇಳಿದನು.

ನೀತು......ನೋಡಿದ್ರಾ ನಾನೀ ಕಂದನನ್ನು ಹೆರದಿದ್ದರೂ ನಮ್ಮಿಬ್ಬರ ಹೃದಯ ಒಂದಕ್ಕೊಂದು ಸೇರಿಕೊಂಡಿದೆ.

ಹರೀಶ.....ನೀನೀಗ ಸಂಪೂರ್ಣ ಆರೋಗ್ಯವಾಗಿದ್ದೀಯ ಸಂಜೆಯ ಹೊತ್ತಿಗೆ ಡಿಸ್ಚಾರ್ಜ್ ಮಾಡ್ತಾರಂತೆ.

ಅಷ್ಟರಲ್ಲಿ ರಾಣಾ...ವಿಕ್ರಂ ಸಿಂಗ್ ಎಲ್ಲರೂ ಒಳಗೆ ಬಂದು ನೀತುವಿನ ಮುಂದೆ ತಲೆತಗ್ಗಿಸಿ ನಿಂತರು.

ನೀತು......ರಾಣಾ ನೀವೆಲ್ಲರೂ ಯಾಕೀಗೆ ತಲೆ ತಗ್ಗಿಸ್ತೀರಾ ನೀವು ಹೀಗೆಲ್ಲ ಮಾಡುವುದು ನಿಮಗೆ ಶೋಭೆ ತರುವುದಿಲ್ಲ.

ವಿಕ್ರಂ ಸಿಂಗ್.....ಮಾತೆ ನಾವೆಲ್ಲರೂ ಅಲ್ಲಿಯೇ ಇದ್ದೂ ಸಹ ನಿಮ್ಮ ಮೇಲಾದ ದಾಳಿಯನ್ನು ತಡೆಯುವಲ್ಲಿ ವಿಫಲರಾಗಿದ್ದಕ್ಕೆ ನಮಗೆ ನಮ್ಮ ಮೇಲೇ ಕೋಪ ಬರುತ್ತಿದೆ.

ಹರೀಶ.......ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ ವಿಕ್ರಂ ನೀವೆಲ್ಲರೂ ಸಂಸ್ಥಾನದ ಅತ್ಯಂತ ನಿಷ್ಟಾವಂತರು ಈ ರೀತಿ ಅಧೀರರಾಗಬಾರದು. ನಿಮ್ಮೆಲ್ಲರ ಧೈರ್ಯ ಸಾಹಸದಿಂದಲೇ ತಾನೇ ನಮ್ಮ ಮಕ್ಕಳಿಬ್ಬರನ್ನು ಬಲಿ ಪಡೆಯಲು ಹೊಂಚು ಹಾಕುತ್ತಿದ್ದರೆಲ್ಲ ಈಗ ಸೆರೆಯಲ್ಲಿರುವುದು

ನೀತು.......ವೀರ್ ಸಿಂಗ್ ಹೇಗಿದ್ದಾನೆ ? ಮೂರನೇ ಗುಂಡು ನನಗೆ ತಾಗುವ ಮುಂಚೆ ಅವನೇ ಅಡ್ಡಲಾಗಿ ಬಂದಿದ್ದು.

ಸುಮೇರ್ ಹಿಂದೆ ನಿಂತಿದ್ದ ವೀರ್ ಸಿಂಗ್ ಮುಂದೆ ಬಂದು......ಮಾತೆ ಈ ರೀತಿಯ ಸಣ್ಣ ಪುಟ್ಟ ಗುಂಡುಗಳಿಂದ ನನಗೇನೂ ಆಗುವುದಿಲ್ಲ. ನೀವು ಪುನಃ ಮೊದಲಿನಂತೆ ಆರೋಗ್ಯವಂತರಾಗಿದ್ದನ್ನು ನೋಡಿಯೆ ನನ್ನ ನೋವೆಲ್ಲವೂ ಮಾಯವಾಯಿತು.

ನೀತು....ಆ ಹೆಂಗಸು ಯಾರು ?

ರಾಣಾ...ಮಾತೆ ಅವಳೇ ಯಶೋಮತಿ ಈಗವಳನ್ನು ರಾಜಕುಮಾರಿ ಆದೇಶದ ಮೇರೆಗೆ ಜೈಸಲ್ಮೇರಿಗೆ ಕಳುಹಿಸಿದ್ದೀವಿ.

ನೀತು.......ರೀ ನಿಧಿ ಏನು ಮಾಡುವುದಕ್ಕೆ.......

ನಿಧಿ ಒಳಬಂದು.......ಅಮ್ಮ ನೀವೀಗ ನನ್ನನ್ನು ತಡೆಯದಿರಿ ಆಗಲೇ ಅಪ್ಪ ಅಮ್ಮನ ಸಾವನ್ನು ನಾನು ಕಷ್ಟಪಟ್ಟು ಜೀರ್ಣಿಸಿಕೊಂಡಿರುವೆ ಅದೂ ಕೇವಲ ನಿಮ್ಮ ಅಪ್ಪನ ಮತ್ತೆಲ್ಲರ ಪ್ರೀತಿಯ ಫಲದಿಂದಾಗಿ. ಈಗ ನಿಮ್ಮ ರಕ್ತ ಹರಿದಿದ್ದನ್ನು ನೋಡಿಯೂ ನಾನು ಸುಮ್ಮನಿರಲಾರೆ ನಮ್ಮ ಬಂಧನದಲ್ಲಿರುವ ಯಾರೊಬ್ಬರೂ ನಾಳಿನ ಸೂರ್ಯನನ್ನು ನೋಡುವುದಿಲ್ಲ.

ನೀತು.......ನಿನ್ನ ಮನಸ್ಸಿನಲ್ಲೆಷ್ಟು ನೋವಿದೆ ಅಂತ ಮೊದಲ ದಿನವೇ ನನಗೆ ಅರ್ಥವಾಗಿತ್ತು ಕಂದ. ನಾನು ನಿನ್ನ ತಡೆಯುವುದಿಲ್ಲ ಆದರೆ ನೀನೊಬ್ಬಳೇ ಅಲ್ಲಿಗೆ ಹೋಗ್ಬೇಡ ಅಷ್ಟೆ.

ಹರೀಶ......ನಾವೆಲ್ಲರೂ ಇವಳ ಜೊತೆ ಹೋಗ್ತಿದ್ದೀವಿ ಕಣೆ ನೀನು ಯಾವುದಕ್ಕೂ ಚಿಂತೆ ಮಾಡ್ಬೇಡ. ವಿಕ್ರಂ ಸಿಂಗ್ ನೀವು ಅರಮನೆಯ ರಕ್ಷಣೆಯಲ್ಲಿರಿ ಮಿಕ್ಕವರು ನಮ್ಮೊಡನೆ ಬರ್ತಾರೆ ರಾಣಾ ನಾವೆಲ್ಲರು ಹೊರಡಲು ವ್ಯವಸ್ಥೆ ಮಾಡ್ಬಿಡು. ನೀನು ನೀನು ನನ್ನೀ ಬಂಗಾರೀನ ವಿಚಾರಿಸಿಕೋ ನೀನಿಲ್ಲಿಗೆ ಸೇರಿದಾಗಿನಿಂದಲೂ ಸರಿಯಾಗಿ ಊಟ ನಿದ್ರೆ ಏನೂ ಮಾಡ್ತಿಲ್ಲ ನನ್ನ ಬಂಗಾರಿ.

ನಿಶಾ.......ಪಪ್ಪ ನಾನಿ ಬೆಡ್ ತಿಂದಿ ಕಾಂಪೇನ್ ಕುದ್ದೆ ಪಪ್ಪ.

ಸಂಜೆಯ ಹೊತ್ತಿಗೆ ನೀತುಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಎಲ್ಲರೊಟ್ಟಿಗೆ ಅರಮನೆಗೆ ಹಿಂದಿರುಗಿ ಬಂದಳು. ನಿಧಿ ನೆಲಮಾಳಿಗೆಗೆ ತೆರಳಿ ಅಲ್ಲಿದ್ದ ಅಪ್ಪನ ಖಡ್ಗವನ್ನೆತ್ತಿಕೊಂಡು ಹೊರಬಂದರೆ ಅವಳ ಜೊತೆ ವರ್ಧನ್ ಮತ್ತು ಪ್ರೀತಿ ಕೂಡ ಹೊರಟು ನಿಂತರು.

ರಾಣಾ...ಸುಮೇರ್...ವೀರ್ ಸಿಂಗ್ ತಮ್ಮ ಯುವರಾಣಿಯ ಜೊತೆ ರೆಡಿಯಾಗಿದ್ದರೆ ನಿಧಿಯ ಜೊತೆಗೆ ಹರೀಶ...ಗಿರೀಶ...ವರ್ಧನ್... ಅಶೋಕ...ರೇವಂತ್....ಸುಭಾಷ್... ಪ್ರತಾಪ್....ನಿಕಿತಾ ಮತ್ತು ಪ್ರೀತಿ ಹೊರಟಿದ್ದರು.

ರಜನಿ.....ನೀನೇನೇ ಇಲ್ಲಿಗೆ ಬರುವಾಗ ಹೇಳಿದ ಮಾತನ್ನು ಸತ್ಯವೇ ಮಾಡುವುದಕ್ಕೆ ತಯಾರಾಗಿ ಹೋಗಿದ್ದೆ ?

ಸುಮ......ನೀನಿಲ್ಲದಿದ್ದರೆ ಚಿನ್ನಿಯನ್ನು ನಮ್ಮಲ್ಯಾರಿಂದಲೂ ಕೂಡ ನೋಡಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ಗೊತ್ತಿಲ್ವಾ.

ಶೀಲಾ....ನಿನಗೇನಾದ್ರೂ ಆಗಿದ್ರೆ ನಾನೂ ನಿನ್ನ ಹಿಂದೆಯೇ ಬರ್ತಿದ್ದೆ.

ನೀತು......ಏನೂ ಆಗಿಲ್ವಲ್ಲ ಈಗ ಸುಮ್ನಿರು.

ಸವಿತಾ......ನಮ್ಮೆಲ್ಲರ ಜೀವನದಲ್ಲೂ ಸುಖ ಸಂತೋಷಗಳನ್ನು ತಂದವಳೂ ನೀನೇ ಈಗ ನಮ್ಮೆಲ್ಲರನ್ನು ಬಿಟ್ಟು ಹೋಗುವುದಕ್ಕೆ ನಿನ್ನ ಮನಸ್ಸೇಗೆ ಬಂದಿತ್ತು.

ಸುಕನ್ಯಾ.......ನನ್ನ ಮಗಳು ಹುಟ್ಟುವುದಕ್ಕೂ ಮುಂಚೆಯೇ ಇವಳಿಗೆ ಅಮ್ಮನ ಮಡಿಲು ಇಲ್ಲದಂತೆ ಮಾಡಲು ತಯಾರಾಗಿದ್ಯಲ್ಲ.

ನೀತು.......ನಾನೆಲ್ಲೂ ಹೋಗಲ್ಲ ನನ್ನೀ ಕಂದ ನನ್ನನ್ನೆಲ್ಲಿಗೂ ಹೀಗೆ ಹೋಗಲು ಬಿಡುವುದಿಲ್ಲ ನಿಮಗೆ ಎಲ್ಲವೂ ಗೊತ್ತಿದೆಯಲ್ಲ ಅಮ್ಮನ ಪ್ರಾಣ ಕಾಪಾಡಲು ನನ್ನೀ ಕಂದ ಏನೆಲ್ಲಾ ಮಾಡಿದ್ದಾಳೆ ಅಂತ.

ರೇವತಿ......ಇವತ್ತು ಮನಸ್ಸಿಗೆ ನೆಮ್ಮದಿಯಾಯ್ತು ಕಣೆ ಊಟ ನಿದ್ದೆ ಸರಿಯಾಗಿ ಮಾಡದೆ ನನ್ನ ಕಂದ ನೋಡು ಎಷ್ಟು ಸೊರಗಿದ್ದಾಳೆ ಅಂತ ಈಗಲೂ ಇವಳ ಮುಖದಲ್ಲಿ ಮೊದಲಿನ ಲವಲವಿಕೆ ಇಲ್ಲ.

ರಾಜೀವ್.....ಹೌದು ಕಣಮ್ಮ ನನ್ನ ಕಂದ ಅನುಭವಿಸಿರುವಷ್ಟು ನೋವನ್ನು ನಾವ್ಯಾರೂ ಅನುಭವಿಸಿಲ್ಲವೆಂದರೂ ತಪ್ಪಿಲ್ಲ.

ರವಿ.....ವಿಕ್ರಂ ಕೂಡ ಪ್ರೀತಿಯ ತಂಗಿಯನ್ನು ಮಾತನಾಡಿಸಿ ಅವಳು ಸಕುಶಲವಾಗಿ ಮರಳಿದ್ದಕ್ಕೆ ಖುಷಿಯಾಗಿದ್ದರು. ನಯನ....ನಮಿತಾ ರಶ್ಮಿ....ದೃಷ್ಟಿ ನಾಲ್ವರನ್ನೂ ತಬ್ಬಿಕೊಂಡು ಸಂತೈಸಿದ ನೀತು ಅವರಿಗೆ ತನ್ನ ಪ್ರೀತಿ ವ್ಯಕ್ತಪಡಿಸುತ್ತಿದ್ದರೆ ನಿಶಾ ಅವರೆಲ್ಲರನ್ನೂ ದೂರ ತಳ್ಳುತ್ತ ತಾನು ಅಮ್ಮನನ್ನು ಸೇರಿಕೊಂಡನು.

ನಯನ.....ಅತ್ತೆ ಚಿನ್ನಿ ಮುಖ ನೋಡಲಾಗ್ತಿರಲಿಲ್ಲ ಸುರೇಶನಂತೂ ಪುಟ್ಟ ಮಗುವಿನಂತೆ ಅಳ್ತಿದ್ದ.

ನೀತು......ನಿನ್ನ ಕಣ್ಣನ್ನು ನೋಡಿದ್ರೇ ಗೊತ್ತಾಗ್ತಿದೆ ನೀವೆಲ್ಲರೂ ಎಷ್ಟು ಅತ್ತಿದ್ದೀರ ಅಂತ ನಾನೀಗ ಆರೋಗ್ಯವಾಗಿದ್ದೀನಿ ಕಣ್ರಮ್ಮ ಈಗಲೂ ಯಾಕೆ ಕಣ್ಣಲ್ಲಿ ನೀರು ಅಳಬಾರದು ನೀವೆಲ್ಲರೂ ನಮ್ಮ ಮನೆಯ ದೇವತೆಗಳು ಸದಾ ನಗುತ್ತಿರಬೇಕು.

ಸವಿತಾ.......ಸುರೇಶನ ಜೊತೆ ನೀನೇನು ಕಡಿಮೆ ಅಳ್ತಿದ್ಯಾ ನಯನ ಯಾವಾಗಲೂ ಇಬ್ಬರೂ ಕಿತ್ತಾಡ್ತಾ ಇರ್ತಿದ್ರಿ ಆದರೆ ನೆನ್ನೆಯವರೆಗೂ ಇಬ್ಬರೂ ಒಬ್ಬರೊಬ್ಬರಿಗೆ ಸಮಾಧಾನ ಮಾಡುತ್ತ ಅಳುತ್ತಲೇ ಇದ್ರಲ್ಲ

ನಯನ.....ಆಂಟಿ ನಾವು ಮಾತ್ರಾನಾ ನೀವುಗಳೇನು ಕಡಿಮೆ ಅಳ್ತಾ ಇದ್ರಾ ಪ್ರತೀಕ್ಷಣವೂ ದೇವರಲ್ಲಿ ಅತ್ತೆಯ ಆರೋಗ್ಯಕ್ಕೆ ಕೈ ಮುಗಿದು ಬೇಡಿಕೊಳ್ತಾನೆ ಇದ್ರಲ್ಲ.

ನೀತು ತನ್ನ ಒಟ್ಟು ಕುಟುಂಬದ ಒಗ್ಗಟ್ಟಿನ ಪ್ರೀತಿಯನ್ನು ನೋಡುತ್ತ ಕಣ್ಣಿಂದ ಕಂಬನಿ ಮಿಡಿಯುತ್ತ........ಇದೆಲ್ಲ ಇರಲಿ ನನ್ನ ಚಿನ್ನಿ ಮರಿ ಅವಳ ತಮ್ಮ ತಂಗಿಗೆಂದು ಎರಡು ಸುಂದರ ಉಯ್ಯಾಲೆಗಳನ್ನು ತೆಗೆದಿಟ್ಟಿದ್ದಾಳೆ ಗೊತ್ತ. ಚಿನ್ನಿ ಹೋಗಿ ಎಲ್ಲರಿಗೂ ತಮ್ಮ ತಾಚಿ ಮಾಡ್ಲಿ ಅಂತ ತೆಗೆದಿಟ್ಯಲ್ಲ ಉಯ್ಯಾಲೆ ತೋರಿಸಮ್ಮ.

ನಿಶಾ ಅಮ್ಮನನ್ನು ಇನ್ನೂ ಬಿಗಿಯಾಗಿ ತಬ್ಬಿಕೊಂಢು.....ನಾನಿ ಎಲ್ಲೂ ಹೋಲಲ್ಲ ಮಮ್ಮ ನಿನ್ನಿ ತೊತೆ ತಾಚಿ ಮಾತೀನಿ

ಆರು ದಿನಗಳ ನಂತರ ಎಲ್ಲರ ಮುಖದಲ್ಲಿಯೂ ನಗೆ ಮೂಡಿತ್ತು.

Tuesday, 18 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 284

ನಿಶಾ ಅಳುತ್ತಲೇ ಅಪ್ಪ ಬೆನ್ನು ತಟ್ಟುತ್ತಿದ್ದರಿಂದ ಮತ್ತವಳಿನ್ನೂ ತುಂಬ ಪುಟ್ಟವಳಾಗಿರುವ ಕಾರಣ ಅಪ್ಪನ ಹೆಗಲಿನ ಮೇಲೆಯೇ ನಿದ್ರೆಗೆ ಜಾರಿಕೊಂಡಿದ್ದರೂ ಅಪ್ಪನ ಶರ್ಟನ್ನು ಬಿಗಿಯಾಗಿ ಹಿಡಿದಿದ್ದಳು. ಸುಭಾಷ್ ಮೇಲೆ ಬಂದಾಗ ಹರೀಶ ಸೈಲೆಂಟಾಗಿರಲು ತಿಳಿಸಿ ನಿಧಿ ಮಲಗಿರುವ ರೂಮಿಗೆ ಹೋಗುವಂತೇಳಿ ಕಳುಹಿಸಿದನು. 

ಒಂದು ಕಡೆ ಜೀವನವನ್ನೇ ಬಂಗಾರವಾಗಿದ್ದ ಮಡದಿ ಜೀವನ ಮರಣದ ಹೋರಾಟದಲ್ಲಿ ಜೂಜಾಡುತ್ತಿದ್ದರೆ ಹಿರಿಯ ಮಗಳು ಅಮ್ಮನಿಗೆ ಒದಗಿ ಬಂದಿರುವ ಸ್ಥಿತಿಯನ್ನು ಕಂಡು ಪ್ರಜ್ಞೆ ಕಳೆದುಕೊಂಡಿದ್ದಳು. ಇಲ್ಲಿಯವರೆಗೂ ಸದಾ ನಗುನಗುತ್ತ ಕೀಟಲೆ ಮಾಡಿಕೊಂಡು ಫುಲ್ ಜಾಲಿಯಾಗಿರುತ್ತಿದ್ದ ನಿಶಾ ಅಮ್ಮನಿಗಾಗಿ ಒಂದೇ ಸಮ ಅಳುತ್ತಲೇ ಮಲಗಿ ಬಿಟ್ಟಿದ್ದಳು. ಹರೀಶನ ಹೃದಯ— ಮನಸ್ಸಿನೊಳಗೆ ಏದ್ದಿದ್ದ ಅಸಹನೀಯ ವೇದನೆಯನ್ನು ಯಾರೂ ಕೂಡ ಊಹಿಸಲಿಕ್ಕೂ ಸಹ ಸಾಧ್ಯವಿರಲಿಲ್ಲ.

ರಾತ್ರಿ ಹತ್ತು ಘಂಟೆ ಹೊತ್ತಿಗೆ ನಿಧಿ ಎಚ್ಚರಗೊಂಡು ನಾನೀಗಲೇ ಅಮ್ಮನನ್ನು ನೋಡಬೇಕೆಂದು ಹಠ ಹಿಡಿದಿದ್ದು ಯಾರೇ ಸಮಾಧಾನ ಮಾಡಿದರೂ ಸುಮ್ಮನಾಗುತ್ತಿರಲಿಲ್ಲ. ರಜನಿ...ಅನುಷ....ವರ್ಧನ್ ಅವಳಿಗೆ ತಿಳಿ ಹೇಳುತ್ತಿದ್ದರೂ ಕೇಳದೆ ಅಮ್ಮನನ್ನು ನೋಡಲೇಬೇಕು ಎನ್ನುತ್ತಿದ್ದಾಗ ರೂಮಿನೊಳಗೆ ಬಂದ ಸುಭಾಷ್ ತಂಗಿಯನ್ನು ಬಿಗಿಯಾಗಿ ತಬ್ಬಿಕೊಂಡಾಗ ನಿಧಿ ಧುಕ್ಕುಡಿಸಿಕೊಂಡು ಜೋರಾಗಿ ಅಳಲಾರಂಭಿಸಿದಳು. ಕೊನೆಗೆಲ್ಲರೂ ಸೇರಿ ಅವಳಿಗೆ ಸಮಾಧಾನ ಮಾಡಿದಾಗ.........

ನಿಧಿ......ಅಮ್ಮ ಎಲ್ಲಿದ್ದಾರೆ ಆಂಟಿ ? ಅವರಿಗೇನೂ ಆಗಿಲ್ಲ ತಾನೇ ?

ರಜನಿ.......ಎರಡು ಗುಂಡು ಬಿದ್ದಿದೆ ಕಣಮ್ಮ ಡಾಕ್ಟರ್ ಗುಂಡನ್ನಂತು ತೆಗೆದಿದ್ದಾಗಿದೆ ಆದರಿನ್ನೂ ಅವಳು ಆಪರೇಷನ್ ಥಿಯೇಟರಿನಲ್ಲೇ ಇದ್ದಾಳೆ. ನೀನು ಅಳಬೇಡ ಕಣಮ್ಮ ನಿಮ್ಮಮ್ಮನಿಗೇನೂ ಆಗಲ್ಲ.

ನಿಧಿ.......ಅಪ್ಪ ಚಿನ್ನಿ ಎಲ್ಲಿ ?

ಅನುಷ.......ಇಬ್ಬರೂ ಹೊರಗಿದ್ದಾರೆ ಕಣಮ್ಮ ಚಿನ್ನಿಯೂ ತುಂಬಾ ಅಳುತ್ತಿದ್ದು ಈಗ ಮಲಗಿಕೊಂಡಿದ್ದಾಳೆ.

ವರ್ಧನ್......ನಿಧಿ ನೀನಿಲ್ಲೇ ಮಲಗಿರಮ್ಮ ಅನು ಹೋಗಿ ಚಿನ್ನಿನೂ ಕರೆದುಕೊಂಡು ಬಾರಮ್ಮ ಅವಳೂ ಪಕ್ಕದ ಬೆಡ್ಡಲ್ಲಿ ಮಲಗಲಿ.

ರಜನಿ.......ಮನೆಯವರಿಗೆ ಈ ವಿಷಯ ಹೇಗೆ ಹೇಳುವುದೆಂಬುದೇ ತಿಳಿಯುತ್ತಿಲ್ಲ ಎಲ್ಲರೂ ಫೋನ್ ಮಾಡ್ತಿದ್ರು ಈಗಷ್ಟೆ ನಿಂತಿದೆ.

ಸುಭಾಷ್........ಅವರಿಗೂ ವಿಷಯ ಗೊತ್ತಾಗಿದೆ ಆಂಟಿ ಇನ್ನೇನು ಅವರೆಲ್ಲರೂ ತಲುಪಲಿದ್ದಾರೆ.

ನಿಧಿ.......ಆಂಟಿ ಪ್ಲೀಸ್ ಅಮ್ಮನ ಹತ್ತಿರ ಕರೆದುಕೊಂಡೋಗಿ.

ರಜನಿ......ಅಲ್ಲಿಗ್ಯಾರನ್ನೂ ಬಿಡ್ತಿಲ್ಲ ಕಣಮ್ಮ ಬೆಳಗ್ಗಿನವರೆಗೂ ಸ್ವಲ್ಪ ತಾಳ್ಮೆಯಿಂದಿರು ಡಾಕ್ಟರ್ ಅವರ ಕೆಲಸ ಮಾಡ್ತಿದ್ದಾರೆ.

ನಿಶಾಳನ್ನೆತ್ತಿಕೊಂಡು ಬಂದ ಅನುಷ ಪಕ್ಕದ ಬೆಡ್ಡಿನಲ್ಲಿ ಮಲಗಿಸುತ್ತ ತಾನೂ ಅವಳ ಪಕ್ಕ ಕುಳಿತಳು. ನಿಶಾ ಕಣ್ಣಿನಿಂದ ಹರಿದಿದ್ದ ಕಣ್ಣೀರು ಅವಳ ಕೆನ್ನೆಗಳ ಮೇಲೆಲ್ಲಾ ಗುರುತು ಮೂಡಿಸಿದ್ದು ಅವಳ ಮುಖ ಬಾಡಿ ಹೋಗಿರುವುದನ್ನು ಕಂಡು ಎಲ್ಲರಿಗೂ ದುಃಖವಾಗುತ್ತಿತ್ತು.
* *
* *
ರಾತ್ರಿ 11:30......

ಕಾಮಾಕ್ಷಿಪುರದಿಂದ ಮನೆಯವರೆಲ್ಲರೂ ಆಸ್ಪತ್ರೆಗೆ ತಲುಪಿದ್ದು ಹರೀಶನ ಬಳಿ ಬಂದು ನೀತುಳ ಆರೋಗ್ಯ ವಿಚಾರಿಸಿದರು. ಸುರೇಶ ಅಪ್ಪನನ್ನು ಬಿಗಿಯಾಗಿ ತಬ್ಬಿಕೊಂಡು ಅಳಲಾರಂಭಿಸಿದರೆ ನಯನ ಅವನಿಗೆ ಸಮಾಧಾನ ಮಾಡುತ್ತ ತಾನೂ ಅಳುತ್ತಿದ್ದಳು. ರಶ್ಮಿ...ದೃಷ್ಟಿ ನಮಿತಾ...ನಿಕಿತಾ ಮತ್ತು ಹೆಂಗಸರನ್ನು ನಿಧಿಯಿರುವ ರೂಮಿಗೆ ಕಳುಹಿಸಿದ್ದು ವರ್ಧನ್ ಎಲ್ಲರಿಗೂ ಕೈಮುಗಿದು.....

ವರ್ಧನ್.......ದೆಹಲಿ...ಬಾಂಬೆಯಿಂದ ಸ್ಪೆಷಲಿಸ್ಟುಗಳು ಬಂದಿದ್ದಾರೆ ಏನೂ ಭಯಪಡಬೇಡಿ ದೇವರಿದ್ದಾನೆ ಅಕ್ಕನಿಗೇನೂ ಆಗೋಲ್ಲ.

ಗಿರೀಶ ಅಕ್ಕನ ರೂಮಿಗೆ ಬಂದಾಗ ಪುಟ್ಟ ತಂಗಿಯ ಮುಖವನ್ನೊಡಿ ಆತನ ದುಃಖ ಉಮ್ಮಡಿಸಿ ಅಕ್ಕನನ್ನು ತಬ್ಬಿಕೊಂಡರೆ ನಿಧಿ ಕೂಡ ತಮ್ಮನನ್ನು ಬಿಗಿಯಾಗಿ ಅಪ್ಪಿಕೊಂಡು ಅಳತೊಡಗಿದಳು. ಅವರ ಕಣ್ಣೀರು ನೋಡಿ ಉಳಿದವರೂ ಅಳುತ್ತ ದೇವರಲ್ಲಿ ನೀತುವಿನ ಆರೋಗ್ಯದ ಬಗ್ಗೆ ಪ್ರಾರ್ಥನೆ ಮಾಡುತ್ತ ಇಡೀ ರಾತ್ರಿ ಎಚ್ಚರವಾಗೇ ಕಳೆದರು.
* *
* *
ಶನಿವಾರ ಮುಂಜಾನೆ......

ಸುಭಾಷ್ ಬಲವಂತ ಮಾಡಿ ಎಲ್ಲರಿಗೂ ಕಾಫಿ ತರಿಸಿ ಕುಡಿಸುತ್ತಿದ್ದರೆ ಪಾವನ ಆತನಿಗೆ ಜೊತೆ ನೀಡುತ್ತಿದ್ದಳು. ಇಬ್ಬರಿಗೂ ಒಬ್ಬರೊಬ್ಬರು ಯಾರೆಂಬುದು ಗೊತ್ತಿಲ್ಲದಿದ್ದರೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಇತರರ ದುಃಖವನ್ನು ಕಡಿಮೆ ಮಾಡುವುದಕ್ಕೆ ಒಟ್ಟಿಗೆ ಪ್ರಯತ್ನವನ್ನು ಮಾಡುತ್ತಿದ್ದರು. ವರ್ಧನ್ ಕೂಡ ತನ್ನ ಅಫಿಷಿಯಲ್ ಕೆಲಸಗಳನ್ನು ಮುಂದೂಡಿ ನೀತು ಎಚ್ಚರಗೊಳ್ಳುವ ತನಕ ಇಲ್ಲೇ ಉಳಿಯುವುದಕ್ಕೆ ನಿರ್ಧಾರ ಮಾಡಿದ್ದನು.

ಹರೀಶ.......ವರ್ಧನ್ ಇಲ್ಲಿ ನಾವೆಲ್ಲರೂ ಇದ್ದೀವಿ ಯಾರಿಂದಲೇನೂ ಮಾಡಲಿಕ್ಕಾಗಲ್ಲ ಆದರೆ ದೇಶದ ಹಿತರಕ್ಷಣೆ ಮತ್ತು ಕೋಟ್ಯಾಂತರ ಜನರ ಯೋಗಕ್ಷೇಮ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಈಗ ನೀನಿಲ್ಲಿಯೇ ದುಃಖಿಸುತ್ತ ಕುಳಿತರೆ ದೇಶದ ಜನತೆಗಳ ಕಷ್ಟಸುಖ ಯಾರು ನೋಡ್ತಾರೆ ನೀನೋಗಿ ನಿನ್ನ ಕರ್ತವ್ಯ ನಿಭಾಯಿಸು.

ವರ್ಧನ್........ಆದರೆ ಭಾವ ಇಲ್ಲಿ ಅಕ್ಕ......

ನಿಧಿ ಅಪ್ಪನನ್ನು ತಬ್ಬಿಕೊಂಡು ನಿಲ್ಲುತ್ತ........ಚಿಕ್ಕಪ್ಪ ಅಪ್ಪ ಹೇಳಿದ್ದು.. ಸರಿಯಾಗಿದೆ ಇಲ್ಲಿನ ವಿಷಯಗಳನ್ನು ನಾವು ಆಗಾಗ ತಿಳಿಸುತ್ತಲೇ ಇರ್ತೀವಿ ನೀವೂ ಫೋನ್ ಮಾಡ್ತಿರಿ. ನಮ್ಮ ಕಣ್ಣೀರನ್ನೊರೆಸುತ್ತ ನೀವು ದೇಶದ ಜನರನ್ನು ಕಡೆಗಣಿಸಿ ಕೂರುವುದು ಸರಿಯಲ್ಲ.

ಇಬ್ಬರೂ ಹೇಗೋ ಒಪ್ಪಿಸಿದ ನಂತರ ಅವರಿಬ್ಬರ ಮಾತಿಗೆ ವರ್ಧನ್ ದೆಹಲಿಯತ್ತ ಪ್ರಯಾಣ ಬೆಳೆಸಿದನು. ರಾಣಾನನ್ನು ಹತ್ತಿರ ಕರೆದು.....

ನಿಧಿ......ರಾಣಾ ಆ ಹೆಂಗಸು ಯಾರು ?

ರಾಣಾ.......ಅವಳೇ ಯಶೋಮತಿ. ಮಹಾರಾಜರು ಮರಣಿಸಿದ ಬಳಿಕ ಅರಮನೆಯಲ್ಲಿ ಸಹಾಯಕಿಯಾಗಿ ಸೇರಿಕೊಂಡಿದ್ದಾಳೆ. ಯಶೋಮತಿ ಹೇಗಿದ್ದಾಳೆಂಬುದು ಇಲ್ಲಿವರೆಗೆ ನಮ್ಮಲ್ಲಿ ಯಾರಿಗೂ ತಿಳಿದಿರಲಿಲ್ಲ ಜೊತೆಗೆ ಚಂಚಲಾದೇವಿಗೆ ಮಗಳಿದ್ದಾಳೆಂಬ ವಿಷಯ ಕೂಡ ಆರಾಧನ ಬಾಯ್ತೆರೆಯುವ ತನಕ ಗೊತ್ತಿರಲಿಲ್ಲ.

ಹರೀಶ.......ಅವಳ ಕೈಗೆ ಗನ್ ಹೇಗೆ ಬಂತು ?

ವಿಕ್ರಂ ಸಿಂಗ್......ಕೆಲಸಗಾರರ ಬಳಿ ಗನ್ ಇರುವುದಿಲ್ಲ ಅರಮನೆ ಆವರಣದಿಂದ ಅವರಿಗೆ ಹೊರಗೆ ಹೋಗುವುದಕ್ಕೂ ಅವಕಾಶವೇ ಇರಲ್ಲ. ಯಶೋಮತಿಯ ಬಳಿ ಗನ್ ಬರುವುದಕ್ಕೆ ನಮ್ಮ ಅನಿಸಿಕೆ ಪ್ರಕಾರ ಭಾನುಪ್ರತಾಪ್ ಅವರೇ ಸಹಾಯ ಮಾಡಿರಬಹುದು. ಈಕೆ ಮತ್ತು ಭಾನುಪ್ರತಾಪ್ ಮಾತನಾಡುತ್ತಿದ್ದುದನ್ನು ನೋಡಿದವರೂ ಇದ್ದಾರೆ. ಆದರೆ ಅವರಿಬ್ಬರ ಬೇಟಿ ಅನುಮಾನಾಸ್ಪದವಾಗಿ ಎಲ್ಲೂ ನಡೆದಿಲ್ಲ ಅಂತ ರಕ್ಷಕರೂ ಹೇಳಿದ್ದಾರೆ. ಅವರಿಬ್ಬರೂ ಬೇಟಿಯೂ ಸಹ ಅರಮನೆಯಲ್ಲಿ ಅಥವ ಹೊರಗಿನ ಆವರಣದಲ್ಲಿ ಆಗುತ್ತಿತು.

ಹರೀಶ......ವೀರ್ ಸಿಂಗ್ ಹೇಗಿದ್ದಾನೆ ? ಅವನಿಗೂ ಸಹ ಗುಂಡು ಬಿದ್ದಿತ್ತಲ್ಲವಾ ?

ರಾಣಾ....ಬುಲೆಟ್ ಹೊಟ್ಟೆಯ ತುದಿಗೆ ಬಿದ್ದಿತ್ತು ತೆಗೆದು ಬ್ಯಾಂಡೇಜ್ ಮಾಡಿದ್ದಾರೆ ಈಗೇನೂ ಭಯವಿಲ್ಲ. ಮಾತೆಯ ಬದಲು ನಮ್ಮಲ್ಲಿ ಯಾರಿಗೇ ಗುಂಡು ಬಿದ್ದಿದ್ದರೂ ನಮಗೆ ಹೆಮ್ಮೆಯಾಗುತ್ತಿತ್ತು ಆದರೆ ಮಾತೆಗೇ ಬಿದ್ದಿದೆ. ಅವರು ಆರೋಗ್ಯವಂತರಾದರೆ ಅಷ್ಟೇ ಸಾಕು.

ರಾತ್ರಿ ಸ್ವಲ್ಪ ಕಸಿವಿಸಿಗೊಂಡು ಎಚ್ಚರಗೊಳ್ಳುತ್ತಿದ್ದ ನಿಶಾಳನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡ ಸುಮ ತಟ್ಟುತ್ತ ನಿದ್ರೆಗೆ ಜಾರಿಸಿದಳು. ಬೆಳಿಗ್ಗೆ ಎಚ್ಚರಗೊಂಡು ತಾನು ಅತ್ತೆಯ ಮಡಿಲಿನಲ್ಲಿ ಮಲಗಿದ್ದನ್ನು ಕಂಡ ನಿಶಾ ಕಿರುಬೆರಳು ತೋರಿಸಿದಳು. ಸವಿತ ಅವಳನ್ನೆತ್ತಿಕೊಂಡು ಫ್ರೆಶ್ ಮಾಡಿಸಿ ಕರೆತರುವಷ್ಟರಲ್ಲಿ ಸುಭಾಷ್ ತಂಗಿಗಾಗಿ ಕಾಂಪ್ಲಾನ್ ತಂದಿದ್ದನು. ನಿಶಾ ಕುಡಿಯಲ್ಲ ಎಂದು ಹಠ ಮಾಡಿ ರೂಮಿನಿಂದ ಹೊರಗೋಡಿ ಬಂದು ಆಪರೇಷನ್ ಥಿಯೇಟರಿನ ಬಾಗಿಲ ಮುಂದೆ ನಿಂತಳು. ಗಿರೀಶ ತಂಗಿಯನ್ನೆತ್ತಿಕೊಂಡಾಗ ಅಣ್ಣನನ್ನು ನೋಡಿ ಬಾಗಿಯಾಗಿ ತಬ್ಬಿಕೊಂಡು ಅಳುತ್ತ........

ನಿಶಾ......ಅಣ್ಣ ನನ್ನಿ ಮಮ್ಮ ಬೇಕು ನಾನಿ ಮಮ್ಮ ಹತ್ತ ಹೋತೀನಿ.

ಗಿರೀಶ ತಾನು ಅಳುತ್ತಿದ್ದರೂ ತಂಗಿಯನ್ನು ಸಮಾಧಾನಿಸುತ್ತ....... ಅಮ್ಮಂಗೆ ಹುಷಾರಿಲ್ಲ ಚಿನ್ನಿ ಡಾಕ್ಟರ್ ಆಂಟಿ ನೋಡ್ಕೊತಿದ್ದಾರೆ ನೀನು ಅಳ್ಬೇಡ ಕಣಮ್ಮ ಈಗ ಲಾಲ ಕುಡಿ ಆಮೇಲೆ ನಿನ್ನ ಅಮ್ಮನ ಹತ್ತಿರ ಕರ್ಕೊಂಡ್ ಹೋಗ್ತೀನಿ.

ನಿಶಾ ತಲೆ ಅಳ್ಳಾಡಿಸುತ್ತ.......ನನ್ನಿ ಲಾಲ ಬೇಲ ಮಮ್ಮ ಬೇಕು.

ಅಪ್ಪ...ಅಕ್ಕಂದಿರು...ಅತ್ತೆ ಆಂಟಿಯರು ಯಾರೇ ಬಂದು ನಿಶಾಳಿಗೆ ಸಮಾಧಾನ ಮಾಡಿದರೂ ಅವಳು ಸುತಾರಾಂ ಒಪ್ಪದೆ ಅಮ್ಮನನ್ನು ನೋಡಲೇಬೇಕೆಂದು ಹಠ ಹಿಡಿದುಬಿಟ್ಟಳು. ರೂಮಿನೊಳಗಡೆಯೇ ದುಃಖಿಸುತ್ತ ಕುಳಿತಿದ್ದ ಸುರೇಶ ತಂಗಿಯ ಕಿರುಚಾಟ ಕೇಳಿ ಹೊರಗೆ ಬಂದು ಅವಳನ್ನೆತ್ತಿ ತಬ್ಬಿಕೊಂಡನು.

ಸುರೇಶ.......ಚಿನ್ನಿ ಹೀಗೆಲ್ಲ ಹಠ ಮಾಡಬಾರದು ಕಂದ ಅಮ್ಮನಿಗೆ ಜ್ವರ ಬಂದು ತಾಚಿ ಮಾಡ್ತಿದೆ ನೀನು ಗಲಾಟೆ ಮಾಡಿದ್ರೆ ಅಮ್ಮ....

ನಿಶಾ......ಅಣ್ಣ ನನ್ನಿ ಮಮ್ಮ ಬೇಕು.

ಸುರೇಶ......ನೀನು ಲಾಲ ಕುಡಿಯದೆ ತಿಂಡಿ ತಿನ್ನಲಿಲ್ಲ ಅಂದ್ರೆ ಅಮ್ಮ ತುಂಬ ಬೇಜಾರು ಮಾಡ್ಕೊಂಡು ಅಳುತ್ತ ಅಮ್ಮ ಅಳಬೇಕಾ ಚಿನ್ನಿ.

ನಿಶಾ.......ಬೇಲ ಮಮ್ಮ ಅಬೇಲ...ಮಮ್ಮ ಅಬೇಲ.

ಸುರೇಶ.....ಮತ್ತೆ ನೀನು ಲಾಲ ಕುಡಿತೀಯ ತಾನೇ.

ನಿಶಾ......ನಾನಿ ಕುಲಿತೀನಿ ನನ್ನ ಮಮ್ಮ ಬೇಕು.

ಸುರೇಶ....ಮಮ್ಮ ಬರುತ್ತೆ ಚಿನ್ನಿ ಈಗ ನೀನು ಲಾಲ ಕುಡಿ.

ನೀತುವಿನ ಗುಣ ಸುರೇಶನಲ್ಲಿ ನೋಡುತ್ತಿದ್ದು ಎಲ್ಲರೂ ಅಣ್ಣ ತಂಗಿ ಭಾಂಧವ್ಯವನ್ನು ಕಣ್ತುಂಬಿಕೊಂಡರು.

10 ಘಂಟೆ.......

ಸ್ಪೆಷಲಿಸ್ಟ್ ಪ್ರತೀ ಅರ್ಧ ಘಂಟೆಗೂ ನೀತುಳನ್ನು ಮಾನಿಟರಿಂಗ್ ಮಾಡುತ್ತಿದ್ದು ಅವಳ ಹೃದಯಕ್ಕೆ ನಾಟಿದ್ದ ಬುಲೆಟ್ ಪರಿಣಾಮದಿ ಆಗಿರುವ ರಂಧ್ರದಿಂದ ನಿರಂತರ ಸೋರಿಕೆ ಆಗುತ್ತಿರುವ ರಕ್ತವನ್ನು ತಡೆಯಲು ಹರಸಾಹಸ ಮಾಡುತ್ತಿದ್ದರು. ಸರ್ಜನ್ ಹೊರಬಂದು....

ಹಿರಿಯ ಸ್ಪೆಷಲಿಸ್ಟ್ ಸರ್ಜನ್......ನಾವು ನಮ್ಮ ಪ್ರಯತ್ನಗಳನ್ನೆಲ್ಲಾ ಮಾಡ್ತಿದ್ದೀವಿ ಆದರೆ ಹೃದಯದಲ್ಲಿ ಆಗುತ್ತಿರುವ ಬ್ಲೀಡಿಂಗ್ ಸ್ವಲ್ಪ ಹೊತ್ತು ನಿಂತರೂ ಮತ್ತೆ ಪುನಃ ಬ್ಲೀಂಡಿಂಗ್ ಆಗುತ್ತಿದೆ. ನಾವೆಲ್ಲರೂ ರಕ್ತ ನಿಲ್ಲಿಸುವುದಕ್ಕೆ ಕಾರ್ಯತತ್ಪರರಾಗಿದ್ದೀವಿ. ಒಮ್ಮೆ ಹೃದಯದ ಬ್ಲೀಂಡಿಂಗ್ ನಿಂತ ಬಳಿಕವಷ್ಟೇ ನಾವೇನನ್ನಾದರೂ ಹೇಳಬಹುದು.

ನಿಧಿ.....ಬ್ಲೀಡಿಂಗ್ ನಿಂತರೆ ಅಮ್ಮನಿಗ್ಯಾವ ತೊಂದರೆಯಿಲ್ಲ ತಾನೇ.

ಸ್ಪೆಷಲಿಸ್ಟ್.......ಅವರಿಗೆ ಪ್ರಜ್ಞೆತಪ್ಪಿಲ್ಲ ಅಥವ ಅವರೇನೂ ಕೋಮಾ ಸ್ಥಿತಿಗೆ ಹೋಗಿಲ್ಲ ನಾವೇ ಅವರು ಎಚ್ಚರವಾಗಿದ್ದರೆ ಹಾರ್ಟ್ ಮೇಲೆ ಒತ್ತಡ ಜಾಸ್ತಿಯಾಗುತ್ತದೆಂದು ನಿದ್ದೆಗೆ ಇಂಜಕ್ಷನ್ ಕೊಟ್ಟಿದ್ದೀವಿ. ಅವರು ಎಚ್ಚರವಾಗಿದ್ದರೆ ಹೃದಯದಲ್ಲಿ ಆಗುತ್ತಿರುವ ಬ್ಲೀಡಿಂಗ್ ಪ್ರಮಾಣ ಜಾಸ್ತಿಯಾಗಬಹುದು ಹಾಗೇನಾದರೂ ಆದ ಪಕ್ಷದಲ್ಲಿ ಪರಿಸ್ಥಿತಿ ನಮ್ಮ ಕೈ ಮೀರಿ ಹೋಗುತ್ತೆ.

ರೇವಂತ್ ಕೈ ಮುಗಿದು......ಹೇಗಾದರೂ ನನ್ನ ತಂಗಿಯನ್ನು ಕಾಪಾಡಿ ನಮಗಿನ್ನೇನೂ ಬೇಡ.

ವೈದ್ಯರ ಬಳಿ ಮನೆಯವರೆಲ್ಲರೂ ಬೇಡಿಕೊಳ್ಳುತ್ತಿದ್ದು ಅವರಿಗೆಲ್ಲ ಸಮಾಧಾನ ಮಾಡಿ ಮುಂದೆ ಹೊರಟಿದ್ದ ಸರ್ಜನ್ ಕಾಲಿಗೆ ನಿಶಾ ಜೋತುಬಿದ್ದಳು. ಸರ್ಜನ್ ಅವಳ ತಲೆ ಸವರಿದಾಗ ನಿಶಾ ಅವರ ಮುಂದೆ ನಿಂತು ಕೈ ಮುಗಿದು......ನಾನಿ ಮಮ್ಮ ಹತ್ತ ಹೋತೀನಿ ಪೀಚ್...ನನ್ನಿ ಮಮ್ಮ ಬೇಕು....ಎಂದು ಕೇಳಿಕೊಳ್ಳುತ್ತಿರುವುದನ್ನು ನೋಡಿ ಅಲ್ಲಿದ್ದವರೆಲ್ಲರ ಹೃದಯ ಹಿಂಡಿದಂತಾಯಿತು. 

ನಿಶಾಳ ತಲೆ ನೇವರಿಸಿದ ಸರ್ಜನ್ ದೂರಿದಿಂದ ನಿಶಾಳಿಗೆ ಅಮ್ಮನನ್ನು ನೋಡಲು ಅವಕಾಶ ನೀಡಿ ಅಲ್ಲಿಂದ ತೆರಳಿದರು. ನಿಶಾ ತಕ್ಷಣ ಸುರೇಶಣ್ಣನ ಕೈ ಹಿಡಿದು ಆಪರೇಷನ್ ಥಿಯೇಟರಿನ ಬಾಗಿಲ ಮುಂದೆ ನಿಂತಳು. ಒಳಗಿದ್ದ ವೈದ್ಯರಲ್ಲೊಬ್ಬರು ಬಂದು ಇಬ್ಬರನ್ನೂ ಒಳಗೆ ಕರೆದೊಯ್ದರೆ ಸುರೇಶ ತಂಗಿಯನ್ನೆತ್ತಿಕೊಂಡು ಒಳಗೆ ಕಾಲಿಟ್ಟನು. ಆಪರೇಷನ್ ಥಿಯೇಟರಿನ ಒಳಗೆ ಖಾಯಂ ಆಗಿ ನಾಲ್ವರು ವೈದ್ಯರು ಮತ್ತಾರು ಜನ ನರ್ಸ್ ಇದ್ದರು. ಸುವ್ಯವಸ್ಥಿತವಾದ ರೂಮಿನ ಮಂಚದ ಮೇಲೆ ನೀತು ಶಾಂತಳಾಗಿ ಮಲಗಿದ್ದು ಅವಳೊಂದು ಕೈಗೆ ಡ್ರಿಪ್ಸ್ ಹಾಕಿದ್ದರೆ ಮತ್ತೊಂದರಿಂದ ರಕ್ತವನ್ನು ಅವಳಿಗೆ ನೀಡಲಾಗುತ್ತಿತ್ತು. 

ಮುಖದ ಮೇಲೆ ಆಕ್ಸಿಜನ್ ಮಾಸ್ಕಿದ್ದರೆ ಸುತ್ತಲೂ ಹಲವಾರು ಮಿಷಿನರಿಗಳು ಅವಳನ್ನು ಮಾನಿಟರಿಂಗ್ ಮಾಡುತ್ತಿದ್ದವು. ಸುರೇಶ ಅಮ್ಮನ ಸ್ಥಿತಿ ನೋಡಿ ಕಣ್ಣೀರಿಡುತ್ತಿದ್ದರೆ ನಿಶಾ ಅಮ್ಮ ತನ್ನೊಂದಿಗೆ ಮಾತಾನಾಡ್ತಿಲ್ಲ ತನ್ನನ್ನೆತ್ತಿ ಮುದ್ದಾಡದೆ ಹೀಗೆ ಮಲಗಿರುವುದನ್ನು ಕಂಡು ಅಣ್ಣನನ್ನು ಬಿಗಿಯಾಗಿ ತಬ್ಬಿಕೊಂಡು ಕಣ್ಣೀರು ಸುರಿಸತೊಡಗಿದಳು.

ಆ ದಿನವೂ ನೀತುವಿನ ಆರೋಗ್ಯದಲ್ಯಾವುದೇ ಬದಲಾವಣೆಗಳೂ ಆಗಲಿಲ್ಲ. ರಾತ್ರಿ ಹರೀಶನ ಬಲವಂತಕ್ಕೆ ಹೆಂಗಸರೆಲ್ಲರು ಅರಮನೆಗೆ ತೆರಳಿದರೆ ನಿಶಾ ಹೋಗುವುದಿಲ್ಲವೆಂದು ಹಠ ಮಾಡುತ್ತಿದ್ದು ಕಡೆಗೆ ಅಪ್ಪನ ಮಾತಿಗೊಪ್ಕೊಂಡು ಸುರೇಶಣ್ಣನನ್ನು ಕರೆದುಕೊಂಡು ತಾನು ಅರಮನೆಗೆ ತೆರಳಿದಳು. ಹರೀಶನ ಜೊತೆ ರೇವಂತ್....ಅಶೋಕ ಆಸ್ಪತ್ರೆಯಲ್ಲುಳಿದರೆ ಅಮ್ಮ ಹುಷಾರಾಗುವ ತನಕ ತಾನೆಲ್ಲಿಗೂ ಸಹ ಹೋಗುವುದಿಲ್ಲವೆಂದು ನಿಧಿ ಧೃಢವಾಗಿ ಅಲ್ಲೇ ಉಳಿದರೆ ನಿಕಿತಾ ಅಕ್ಕನಿಗೆ ಜೊತೆಯಾಗುಳಿದಳು. 

ಭಾನುವಾರದ ಸಂಜೆ ತನಕವೂ ಪರಿಸ್ಥಿತಿ ಚಿಂತಾಜನಕವಾಗಿ ಮುಂದುವರಿದಿದ್ದು ನೀತು ಹೃದಯದಲ್ಲಿ ಬ್ಲೀಡಿಂಗ್ ನಿಂತು ನಿಂತು ಆಗುತ್ತಲೇ ಮುಂದುವರಿದಿತ್ತು. ರಾಜೀವ್ ರೇವತಿ ಇಬ್ಬರೂ ಮಗಳಿಗೆ ಒದಗಿ ಬಂದಿರುವ ಪರಿಸ್ಥಿತಿಗೆ ಮೂಕರೇ ಆಗಿ ಹೋಗಿದ್ದು ಮೌನವಾಗೇ ಕಣ್ಣೀರು ಹರಿಸುತ್ತಿದ್ದರು. ಮನೆಯ ಸದಸ್ಯರಲ್ಯಾರ ಮುಖದಲ್ಲಿಯೂ ಕೊಂಚವೂ ಗೆಲುವಿರದೆ ತಮ್ಮ ಜೀವನದ ಹೋರಾಟದಲ್ಲಿ ಸೋತಿರುವ ರೀತಿ ಭಾಸವಾಗುತ್ತಿತ್ತು. ಭಾನುವಾರ ಸಂಜೆ ಇಲ್ಲಿ ಕೆಲವರು ಮಾತ್ರವೇ ಉಳಿದು ಮಿಕ್ಕವರು ಕಾಮಾಕ್ಷಿಪುರಕ್ಕೆ ಹಿಂದಿರುಗುವಂತೆ ಹರೀಶ ಸಲಹೆ ನೀಡಿದ ತಕ್ಷಣ ಎಲ್ಲರೂ ಒಕ್ಕೊರಿಲಿನಿಂದ ಅದನ್ನು ತಿರಸ್ಕರಿಸಿಬಿಟ್ಟರು.

ಸೋಮವಾರವೂ ಕಳೆದು ಮಂಗಳವಾರ ಮುಂಜಾನೆ ಸ್ಪೆಷಲಿಸ್ಟ್ ನೀತುಳನ್ನು ಚೆಕಪ್ ಮಾಡಿ ಹೊರಬಂದಾಗ......

ಹರೀಶ.......ಸರ್ ನನ್ನ ಮಡದಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆಯಾ ? ಆವಳು ಗುಣಮುಖ ಆಗ್ತಾಳಲ್ಲವಾ ?

ಸ್ಪೆಷಲಿಸ್ಟ್ ನಿಟ್ಟುಸಿರು ಬಿಡುತ್ತ.......ನಾನೀಗೆ ಹೇಳುತ್ತಿರುವೆನೆಂದು ನೀವು ಅನ್ಯತಾ ಭಾವಿಸಬೇಡಿ ಸರ್ ಆದರೆ ಇದೊಂದು ರೀತಿಯ ಪವಾಡ ಇರಬೇಕು. ನಾಲ್ಕು ದಿನಗಳಿಂದ ಹೃದಯದಲ್ಲಿ ನಿರಂತರದಿ ರಕ್ತ ಬ್ಲೀಡಿಂಗ್ ಆಗುತ್ತಿದ್ದರೂ ಸಹ ನಿಮ್ಮ ಮಡದಿ ಸೋಲನ್ನೊಪ್ಪದೆ ಇನ್ನೂ ಜೀವನಕ್ಕಾಗಿ ಹೋರಾಡುತ್ತಿದ್ದಾರೆ. ಇಷ್ಟು ಸಮಯದಿಂದಲೂ ರಕ್ತ ಸೋರಿಕೆಯಾಗಿಯೂ ವ್ಯಕ್ತಿ ಜೀವಂತವಾಗಿರುವುದನ್ನು ನಾನು ಹಿಂದೆ ನೋಡಿರಲಿಲ್ಲ. 

ಅವರ ಮಾನಸಿಕ ಸ್ಥೈರ್ಯ ತುಂಬಾನೇ ಗಟ್ಟಿಯಾಗಿದೆ ಆದರೆ ಅವರ ದೇಹ ನಾವು ನೀಡುತ್ತಿರುವ ಯಾವ ಚಿಕಿತ್ಸೆಗೂ ಸ್ಪಂಧಿಸುತ್ತಿಲ್ಲ. ಅವರ ಉಸಿರಾಟ ಸಾಮಾನ್ಯವಾಗಿರುವ ರೀತಿ ನಾವು ನೋಡಿಕೊಳ್ಳುತ್ತಿದ್ದೀವಿ ಆದರೆ ಅವರ ಹೃದಯದಲ್ಲಿನ ಬ್ಲೀಡಿಂಗ್ ಮಾತ್ರ ನಿಲ್ಲುತ್ತಿಲ್ಲ. ನಾವು ನೀಡುತ್ತಿರುವ ಮೆಡಿಸಿನ್ಸ್ ಪ್ರಭಾವದಿಂದ ಹಾರ್ಟಿನ ಬ್ಲೀಡಿಂಗ್ ನಿಲ್ಲಬೇಕಾಗಿತ್ತು ಆದರೆ ಹಾಗೆ ಆಗುತ್ತಿಲ್ಲ.

ರವಿ......ಡಾಕ್ಟರ್ ನನ್ನ ತಂಗಿಯಿನ್ನೂ ಅಪಾಯದಲ್ಲಿದ್ದಾಳಾ ಪ್ಲೀಸ್ ಸರ್ ಅವಳನ್ನು ಉಳಿಸಿಕೊಡಿ.

ವಿಕ್ರಂ......ಡಾಕ್ಟರ್ ನಿಮ್ಮ ಕಾಲಿಗೆ ಬೀಳ್ತೀನಿ ಆದರೆ ನನ್ನ ತಂಗಿಯ ಪ್ರಾಣ ಉಳಿಸಿರಿ.

ವರ್ಧನ್ ಕೂಡ ಹಿಂದಿರುಗಿ ಬಂದಿದ್ದು ಅವನನ್ನೂ ಸೇರಿಸಿ ಮನೆಯ ಹಿರಿಯರು ಮತ್ತು ಮಕ್ಕಳೆಲ್ಲರೂ ವೈದ್ಯರೆದುರಿಗೆ ಕೈ ಮುಗಿಯುತ್ತ ನೀತುಳನ್ನು ಉಳಿಸಿಕೊಡುವಂತೆ ಬೇಡಿಕೊಂಡರು. ಇಷ್ಟೊಂದು ಪ್ರೀತಿ ಆಪ್ಯಾಯತೆ ನೋಡಿ ವೈದ್ಯರ ತಂಡದವರು ದುಃಖಿತರಾಗಿ ಇವರಿಗಾಗಿ ತಾವೇನನ್ನೂ ಮಾಡಲಾಗುತ್ತಿಲ್ಲವಲ್ಲ ಎಂದು ತಮ್ಮನ್ನು ತಾನೇ ಅಸಹಾಯಕ ಸ್ಥಿತಿಯಲ್ಲಿ ನೋಡಿಕೊಳ್ಳುತ್ತಿದ್ದರು.

ಹಿರಿಯ ಸ್ಪೆಷಲಿಸ್ಟ್.......ನಾವು ನಿಮಗೆ ಏನೇನೋ ಹೇಳಿ ಸುಳ್ಳಿನ ಭರವನೆಗಳನ್ನು ನೀಡುವುದಿಲ್ಲ ಆದರೆ ನಾವೆಲ್ಲರೂ ನಮ್ಮ ಶಕ್ತಿ ಮೀರಿ ಪ್ರಯತ್ನ ಮಾಡ್ತಿದ್ದೀವಿ ಕೊನೆಯಲ್ಲಿ ನಾವೂ ಮನುಷ್ಯರಲ್ವಾ ನಮ್ಮಿಂದಾಗುವುದನ್ನು ಮಾಡಬಹುದು. ನಿಮ್ಮೆಲ್ಲರ ಸಂಕಟಗಳು ನಮಗೆ ಅರ್ಥವಾಗುತ್ತೆ ಆದರೆ ನಮ್ಮ ಮೆಡಿಸಿನ್ನುಗಳಿಗೆ ಅವರ ದೇಹ ಸ್ಪಂಧಿಸುತ್ತಲೇ ಇಲ್ಲ. ಇನ್ನು 24 ಘಂಟೆಗಳಲ್ಲಿ ರಕ್ತದ ಬ್ಲೀಡಿಂಗ್ ನಿಲ್ಲಬೇಕಿದೆ ಅವರ ಹಾರ್ಟ್ ಕೂಡ ಇದರಿಂದಾಗಿ ಒತ್ತಡದಲ್ಲಿದೆ. ಇದೇ ಪರಿಸ್ಥಿತಿ ಮುಂದಿನ ಮುಂದಿನ 48 ಘಂಟೆಗಳಲ್ಲಿಯೂ ಸಹ ಮುಂದುವರಿದರೆ ಅವರು ಬದುಕುಳಿಯುವ ಸಾಧ್ಯತೆ 1% ಗಿಂತಲೂ ಕಡಿಮೆ. ನಾವೆಲ್ಲರೂ ನಮ್ಮ ಕಡೆಯಿಂದೇನು ಮಾಡಬಹುದಿತ್ತೋ ಅದೆಲ್ಲವನ್ನೂ ಮಾಡುತ್ತಿದ್ದೇವೆ ಇನ್ನೇನಿದ್ದರೂ ದೇವರು ಪವಾಡವೇ ಮಾಡಬೇಕಾಗಿದೆ.

ವೈದ್ಯರ ಮಾತನ್ನು ಕೇಳಿ ಮನೆಯವರ ತಲೆಯ ಮೇಲೆ ಬರಸಿಡಿಲು ಬಡಿದಂತಾಗಿ ಪ್ರತಿಯೊಬ್ಬರೂ ದುಃಖಸಾಗರದಲ್ಲಿ ಮುಳುಗಿದರು.

ಮಂಗಳವಾರ ರಾತ್ರಿ ಹೊತ್ತಿನಷ್ಟೊತ್ತಿಗೆಲ್ಲ ಮನೆಯವರ ಮುಖದಲ್ಲಿ ನಿರಾಸೆ ಮತ್ತು ಘನಘೋರ ದುಃಖ ಛಾಯೆ ಮನೆಮಾಡಿತ್ತು. ಸವಿತಾಳ ಮಡಿಲಲ್ಲಿ ಸದ್ದು ಮಾಡದೆ ಕುಳಿತಿದ್ದ ನಿಶಾಳ ಮುಖದಲ್ಲಿ ಮೊದಲಿನ ಮುಗ್ದ ಸೌಂದರ್ಯವಿರದೆ ಕಳೆಗುಂದಿದ್ದು ಸಂಪೂರ್ಣ ಬಾಡಿ ಹೋಗಿ ಕಣ್ಣಿನಿಂದ ಕಂಬನಿ ಸುರಿಯುತ್ತಲಿತ್ತು. ಮನೆಯರು ಈ ದುಃಖಭರಿತ ಸಮಯದಲ್ಲಿ ಸರಿಯಾಗಿ ಊಟ ನಿದ್ರೆ ಮಾಡದೇ ತುಂಬ ಬಳಲಿ ಹೋದವರಂತೆ ಕಾಣಿಸುತ್ತಿದ್ದರು. ಘಟನೆಯು ನಡೆದ ನಾಲ್ಕು ದಿನಗಳ ನಂತರ ಗೋವಿಂದಾಚಾರ್ಯರು...ದೇವಾನಂದರು ಮತ್ತು ಶಿವರಾಮಚಂದ್ರರು ಆಸ್ಪತ್ರೆಗೆ ಆಗಮಿಸಿದರು. ಮೂವರಿಗೂ ಕೈ ಮುಗಿದು ಏನನ್ನಾದರೂ ಹೇಳುವ ಮುಂಚೆಯೇ.....

ಆಚಾರ್ಯರು......ನಮಗೆಲ್ಲವೂ ತಿಳಿದಿದೆ ಹರೀಶ ಸಾವು ಬದುಕಿನ ನಡುವೆ ಮಗಳು ನೀತು ನಾಲ್ಕು ದಿನಗಳಿಂದಲೂ ಹೋರಾಡ್ತಿದ್ದಾಳೆ ಆದರೆ ನಾವ್ಯಾವುದೇ ರೀತಿ ಸಹಾಯ ಮಾಡಲಾಗುತ್ತಿಲ್ಲ ಎಂಬಂತ ಕೊರಗೂ ನಮಗಿದೆ.

ರಾಜೀವ್......ಗುರುಗಳೇ ನೀವೇ ಹೀಗೆ ಹೇಳಿಬಿಟ್ಟರೆ ನಮಗಿನ್ಯಾರು ದಿಕ್ಕು ಹೇಗಾದರೂ ನನ್ನ ಮಗಳನ್ನು ಉಳಿಸಿಕೊಡಿ. ಈ ನನ್ನ ಕಂದನ ಮುಖ ನೋಡಿ ಗುರುಗಳೇ ನಾಲ್ಕು ದಿನಗಳಿಂದ ಸರಿಯಾಗಿ ಊಟ ನಿದ್ರೆಯನ್ನೂ ಮಾಡ್ತಿಲ್ಲ ಯಾವಾಗಲೂ ಅಮ್ಮ ಬೇಕೆಂದು ಕಣ್ಣೀರು ಸುರಿಸುತ್ತಾ ಅಳುತ್ತಿರುತ್ತಾಳೆ.

ಆಚಾರ್ಯರು......ನಮಗೆ ಅರಿವಿದೆ ಆದರೆ ನಮ್ಮ ಬಳಿ ನೀತುವಿನ ಪ್ರಾಣ ಉಣಿಸುವುದಕ್ಕೆ ಬೇಕಾಗಿರುವ ಔಷಧಿಗಳಿಲ್ಲ ಆದರೆ ಅದು ಯಾರ ಬಳಿ ಇದೆಯೆಂಬುದು ಮಾತ್ರ ತಿಳಿದಿದೆ.

ರೇವಂತ್.......ಗುರುಗಳೇ ಅದ್ಯಾರ ಬಳಿ ಇದೆಯಂತ ಹೇಳಿ ಅವರ ಕಾಲಿಗೆ ಬಿದ್ದು ಬೇಡಿಕೊಂಡಾದರೂ ತರುತ್ತೇನೆ.

ನಿಧಿ.....ಗುರುಗಳೇ ಎಷ್ಟೇ ಕಷ್ಟವಾದರೂ ಸರಿ ಅಮ್ಮನನ್ನು ನಾವು ಬದುಕಿಸಲೇಬೇಕು ನಾನೇನು ಮಾಡಬೇಕೆಂದು ಹೇಳಿ ನಾನು ನನ್ನ ಪ್ರಾಣವನ್ನಾದರೂ ನೀಡಲು ಸಿದ್ದಳಿರುವೆ.

ಆಚಾರ್ಯರು.....ಯಾರೂ ಅಧೀರರಾಗಬೇಡಿ ತಾಳ್ಮೆಯಿಂದಿರಿ ಆ ಔಷಧಿ ಹೊಂದಿರುವವರು ಎಲ್ಲಿದ್ದಾರೆಂದು ನಮಗೆ ತಿಳಿದಿಲ್ಲ ಆದರೆ ಅವರನ್ನು ಸಂಪರ್ಕಿಸುವ ಮಾರ್ಗ ಗೊತ್ತಿದೆ. ಮಗಳೇ ಸುಮ ನಾಳೆ ಮುಂಜಾನೆ ನಾಲ್ಕು ಘಂಟೆ ಹೊತ್ತಿಗೆ ನಿಶಾಳನ್ನು ಶುಭ್ರಳಾಗಿಸಿ ಬಿಳೀ ಬಣ್ಣದ ವಸ್ತ್ರಧಾರಣೆ ಮಾಡಾಸಿ ಅರಮನೆಯಲ್ಲಿ ಮಂದಿರದೊಳಗೆ ಕರೆದುಕೊಂಡು ಬಾರಮ್ಮ. 

ಅಲ್ಲಿ ನಿಶಾಳಿಂದಲೇ ಒಂದು ಕಾರ್ಯ ಮಾಡಿಸಬೇಕಿದೆ ಆಗಲೇ ನೀತುವಿನ ಪ್ರಾಣ ರಕ್ಷಿಸುವವರನ್ನು ನಾವು ಸಂಪರ್ಕಿಸಲು ಸಾಧ್ಯವಾಗೋದು. ಮಂದಿರದಲ್ಲಿ ನಾವು ಮತ್ತು ನಿಶಾಳನ್ನು ಬಿಟ್ಟು ಬೇರಾರಿಗೂ ಪ್ರವೇಶವಿರುವುದಿಲ್ಲ. ಎಲ್ಲರೂ ಪರಮಶಿವ ಮತ್ತು ಜಗನ್ಮಾತೆಯನ್ನು ಆರಾಧಿಸಿಕೊಳ್ಳಿ ಮುಂಜಾನೆ ಎಲ್ಲವೂ ಶುಭವಾಗಲೆಂದು. ಹರೀಶ ಮಹಿಳೆಯರನ್ನು ಅರಮನೆಗೆ ಕಳುಹಿಸಿಬಿಡು ಅವರಿಲ್ಲೇ ಉಳಿಯುವ ಅವಶ್ಯಕತೆಯಿಲ್ಲ.

ನಿಧಿ.......ಅಮ್ಮ ಗುಣಮುಖಳಾಗುವ ತನಕ ನಾನಿಲ್ಲಿಂದ ಹೊರಗೆ ಕದಲುವುದಿಲ್ಲ ಗುರುಗಳೇ ಕ್ಷಮಿಸಿ ನಿಮ್ಮಾಜ್ಞೆಯನ್ನು ಮೀರುತ್ತಿದ್ದೀನಿ.

ಆಚಾರ್ಯರು.......ಆಗಲಿ ಮಗಳೇ ನಿನ್ನಿಚ್ಚೆ. ನೀತು ನಿನ್ನ ಪ್ರಾಣ ಸ್ನೇಹಿತೆ ಎಂಬುದು ಗೊತ್ತಿದೆ ಶೀಲಾ ಆದರೆ ಯಾವ ಮಗುವು ಈ ಭೂಮಿಗೆ ಬರುವುದಕ್ಕೆ ನಿನ್ನ ಗೆಳತಿ ಕಾರಣಳಾಗಿರುವವಳೋ ಆ ಮಗುವನ್ನೇ ನೀನಿಂತಹ ಸಮಯದಲ್ಲಿ ನಿರ್ಲಕ್ಷಿಸಿದರೆ ನಿನ್ನ ಗೆಳತಿಗೆ ಸಂತೋಷವಾಗುತ್ತಾ ? ನಾಳೆ ನೀನು ಸುಕನ್ಯಾ ಆಸ್ಪತ್ರೆಗೆ ಬರುವ ಬದಲಿಗೆ ಅರಮನೆಯಲ್ಲೇ ಉಳಿದುಕೊಳ್ಳುವುದು ಸೂಕ್ತ ಇವರಿಬ್ಬರ ಜೊತೆ ನೀವೂ ಕೂಡ......ಎಂದು ರೇವತಿಯವರಿಗೆ ಸೂಚಿಸಿದರು.
* *
* *
ಬುಧವಾರ......

ಮುಂಜಾನೆ ಮೂರುವರೆ ಹೊತ್ತಿಗೆ ಸುಮ ಏಬ್ಬಿಸಿದಾಗ ಸ್ವಲ್ಪವೂ ತಂಟೆ ಮಾಡದೆ ಶುಭ್ರಳಾಗಿ ಅತ್ತೆ ಜೊತೆ ಸ್ನಾನ ಮುಗಿಸಿ ರೆಡಿಯಾದ ನಿಶಾ ಅರಮನೆಯ ದೇವಸ್ಥಾನಕ್ಕೂ ಬಂದಳು ಆಚಾರ್ಯರು ತಮ್ಮ ಏದುರಿನ ಆಸನದಲ್ಲಿ ನಿಶಾಳನ್ನು ಕೂರಿಸಿ ಹೊರಗಿರುವಂತೇಳಿದಾಗ

ನಿಶಾಳನ್ನು ಕೂರಿಸಿದ ಸುಮ........ಕಂದ ಇಲ್ಲಿ ಕೂತು ಮಾಮಿಯ ಪೂಜೆ ಮಾಡು ಗುರುಗಳೇನು ಹೇಳ್ತಾರೋ ಹಾಗೆ ಮಾಡು ಕಂದ ನಾನು ಆಚೆ ಇರ್ತೀನಿ.

ನಿಶಾ ಮೌನವಾಗಿಯೇ ತಲೆಯಾಡಿಸಿದರೆ ಸುಮ ಅಲ್ಲಿಂದ ಹೊರಗೆ ಬಂದು ಪರಾಂಗಣ ತಲುಪಿದಾಗಲ್ಲಿ ರೇವತಿ....ಅನುಷ...ರಜನಿ... ಪ್ರೀತಿ....ಶೀಲಾ....ಸವಿತಾ ಮೊದಲೇ ಕುಳಿತಿದ್ದರು.

ಆಚಾರ್ಯರು.......ನಿನ್ನ ಅಮ್ಮನಿಗೆ ಹುಷಾರಿಲ್ಲವಾ ಮಗಳೇ

ನಿಶಾ ಕಣ್ಣೀರು ಸುರಿಸುತ್ತ.......ನನ್ನಿ ಮಮ್ಮ ಬೇಕು.

ಆಚಾರ್ಯರು ಮಗುವಾನ ಕಣ್ಣೀರನ್ನೊರೆಸಿ ಅವಳ ಬಲಗೈಯಲ್ಲಿನ ಅಂಗೈನಲ್ಲಿ ನಿಶಾಳ ಕೊರಳಿನಲ್ಲಿರುವ ॐ ಕಾರದ ಡಾಲರನ್ನಿಟ್ಟು..... ಇದನ್ನು ಭದ್ರವಾಗಿ ಹಿಡಿದುಕೊಂಡು ॐ ನಮಃ ಶಿವಾಯಃ ಅಂತ ಹೇಳ್ತಿರು ಕಂದ ಅಮ್ಮ ಬೇಗ ಹುಷಾರಾಗ್ತಾಳೆ.

ನಿಶಾ ಸರಿಯೆಂದು ತಲೆಯಾಡಿಸಿ ಬಲಗೈ ಮುಷ್ಠಿಯಲ್ಲಿ ಡಾಲರನ್ನು ಹಿಡಿದುಕೊಂಡು ಜೋರಾಗಿ ॐ ನಮಃ ಶಿವಾಯಃ ಹೇಳತೊಡಗಿದರೆ ಅವಳ ಎಡಗೈ ಹಸ್ತವನ್ನು ತಮ್ಮೆರಡೂ ಕೈಗಳಲ್ಲಿ ತೆಗೆದುಕೊಂಡು ಆಚಾರ್ಯರು ಅವಳ ಮೂಲಕ ಔಷಧಿ ಹೊಂದಿರುವವರನ್ನು ಸಂರ್ಪಕಿಸಲು ಮಂತ್ರೋಚ್ಚಾರ ಮಾಡುತ್ತ ಪ್ರಯತ್ನಿಸುತ್ತಿದ್ದರು. ಕೆಲ ಹೊತ್ತಿನ ನಂತರ ಆಚಾರ್ಯರ ಮುಖದಲ್ಲಿ ಮುಗುಳ್ನಗೆ ಮೂಡಿದ್ದು ನಿಶಾಳನ್ನು ಕರೆದುಕೊಂಡು ದೇವರ ಗುಡಿಯಿಂದಾಚೆ ಬಂದಾಗ.......

ಶೀಲಾ.......ಏನಾಯ್ತು ಗುರುಗಳೇ ಅವರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಯಿತಾ ?

ಆಚಾರ್ಯರು.......ನೀತುವಿನ ಅನಾರೋಗ್ಯದ ಬಗ್ಗೆ ನಾನ್ಯಾರಿಗೆ ಸುದ್ದಿ ತಲುಪಿಸಲು ಪ್ರಯತ್ನಿಸುತ್ತಿದ್ದೆನೋ ಆ ಋಷಿ ಮುನಿಗಳಿಗೆ ನಾಲ್ಕು ದಿನಗಳ ಹಿಂದೆಯೇ ನಿಶಾಳ ಮೂಲಕ ಸುದ್ದಿಯು ತಲುಪಿದೆ. ಇವಳು ಅವರನ್ನೇಗೆ ಸಂಪರ್ಕಿಸಿದಳೆಂಬುದು ನಮಗೆ ತಿಳಿಯಲಿಲ್ಲ ಆದರೆ ಅವರಿಗೆ ವಿಷಯ ತಿಳಿಯುತ್ತಲೇ ತಮ್ಮ ಶಿಷ್ಯನ ಜೊತೆಗೂಡಿ ಕೆಲವು ಗಿಡಮೂಲಿಕೆ ಮತ್ತು ಬೇರುಗಳನ್ನು ಹುಡುಕಿತಂದು ನೀತು ಪ್ರಾಣರಕ್ಷಣೆಗೆ ಬೇಕಾದ ಔಷಧಿಯನ್ನು ತಯಾರಿಸಿ ನಮ್ಮ ಕಡೆಗೇ ಪ್ರಸ್ಥಾನಿಸಿದ್ದಾರೆ. ಅವರು ಆಸ್ಪತ್ರೆಗೆ ಬಂದಾಗ ಅಲ್ಲಿ ನಿಶಾ ಇರ್ಬೇಕು ಈ ಮಗುವಿಗೋಸ್ಕರ ಇವಳ ತಾಯಿಯನ್ನು ಕಾಪಾಡಲು ಅವರು ಬರುತ್ತಿರುವುದು.

ಸವಿತಾ......ಗುರುಗಳು ನೀವು ಅಪ್ಪಣೆ ನೀಡಿದರೆ ನಾನೀಗಲೇ ನಿಶಾ ಜೊತೆ ಆಸ್ಪತ್ರೆಗೆ ತೆರೆಳುವೆ.

ಆಚಾರ್ಯರು......ನಡಿಯಮ್ಮ ನಾವೂ ನಿಮ್ಮೊಂದಿಗೇ ಬರುತ್ತೇವೆ ಸುಮೇರ್ ಹೊರಡುವ ವ್ಯವಸ್ಥೆ ಮಾಡು.

ಸುಮೇರ್ ಸಿಂಗ್......ಗುರುಗಳೇ ಕಾರು ಸಿದ್ದವಾಗಿದೆ ಬನ್ನಿ.

ನಿಶಾ.....ತಮ್ಮ ತಾಚಿ ಮಾತು ಮಮ್ಮ.....ಎಂದು ಶೀಲಾಳ ಮುಂದೆ ನಿಂತು ಕೇಳಿದಾಗವಳು ಮಗಳನ್ನೆತ್ತಿಕೊಂಡು ಕಣ್ಣೀರಿಟ್ಟರೆ ನಿಶಾಳೂ ಅವಳನ್ನು ಬಿಗಿದಪ್ಪಿಕೊಂಡು ಒಂದೆರಡು ನಿಮಿಷ ಅತ್ತಳು.
ನಿಶಾಳ ಜೊತೆ ಸುಮ... ಸವಿತಾ ಹಾಗು ಆಚಾರ್ಯರು ಆಸ್ಪತ್ರೆಗೆ ತೆರಳಿದ್ದು ಬರುತ್ತಿರುವ ಋಕ್ಷಿ ಮುನಿಗಳ ಬಗ್ಗೆ ರಕ್ಷಕರಿಗೆ ಸೂಚೆನೆಯ ಕೊಟ್ಟು ಅವರನ್ನು ಆದರದಿಂದ ಒಳಗೆ ಬಿಡುವಂತೇಳಿದರು. ಇವರು ಆಸ್ಪತ್ರೆ ತಲುಪಿದ ಕೆಲ ಹೊತ್ತಿನಲ್ಲೇ ದಿವ್ಯ ತೇಜಸ್ಸುಳ್ಳ 95—100 ವರ್ಷದವರಾಗಿದ್ದ ಋಷಿ ಮುನಿವರ್ಯಯಾದ ವ್ಯಕ್ತಿ ತಮ್ಮ ಶಿಷ್ಯನ ಜೊತೆ ಆಗಮಿಸಿದರು. ಎಲ್ಲರೂ ಮುನಿವರ್ಯರಿಗೆ ವಂಧಿಸಿದಾಗ ಅವರು ಗೋವಿಂದಾಚಾರ್ಯರನ್ನು ನೋಡಿ ಮುಗುಳ್ನಕ್ಕು ಏನೂ ಆಗಲ್ಲವೆಂದು ಭರವಸೆಯನ್ನು ನೀಡಿದರು. ಅಪ್ಪನ ತೋಳಿನಲ್ಲಿದ್ದ ನಿಶಾಳ ತಲೆ ಮೇಲೆ ಕೈಯಿಟ್ಟು ಆಶೀರ್ವಧಿಸುತ್ತ.......

ಮುನಿವರ್ಯ.......ನಿನ್ನ ತಾಯಿಗೋಸ್ಕರ ನಮ್ಮನ್ನು ಕಾಡಿನಿಂದ ಈ ನಾಡಿಗೆ ಬರುವುದಕ್ಕೆ ವಿವಶರನ್ನಾಗಿ ಮಾಡಿಬಿಟ್ಟೆಯಾ ಮಗಳೇ. ಕೀರ್ತಿವಂತೆ...ಬುದ್ದಿವಂತೆ....ಆರೋಗ್ಯವಂತೆ ಮತ್ತು ಯಶಸ್ವಿಯಾಗಿ ಸುಖ ಸಂತೋಷ ಸಮೃದ್ದಿಯಿಂದ ಬಾಳಮ್ಮ. ಗೋವಿಂದಾಚಾರ್ಯ ಈ ಮಗುವಿನ ತಾಯಿಗೆ ನಾವು ಔಷಧಿ ನೀಡುವ ಸಮಯದಲ್ಲಿ ಈ ಮಗು ಸಹ ಜೊತೆಯಲ್ಲಿರಬೇಕಾದದ್ದು ಅವಶ್ಯಕ.

ಆಚಾರ್ಯರು......ನಿಮ್ಮ ಆದೇಶದ ಪಾಲನೆಯಾಗುತ್ತೆ ಮುನಿಗಳೇ ನಿಶಾಳನ್ನು ಒಳಗೆ ಹೋಗುವುದಕ್ಕೆ ಕಳುಹಿಸು ಹರೀಶ.

ಹರೀಶ.......ಕಂದ ಇವರ ಜೊತೆ ಅಮ್ಮನ ಹತ್ತಿರ ಹೋಗಮ್ಮ ಇವರೇನು ಹೇಳ್ತಾರೋ ಹಾಗೇ ಮಾಡು.

ನಿಶಾ ತಲೆಯಾಡಿಸಿ ಆತು ಪಪ್ಪ ಎಂದೇಳಿ ಮುನಿಗಳು ಮತ್ತವರ ಶಿಷ್ಯನ ಜೊತೆ ನೀತುವಿನ ಚಿಕಿತ್ಸೆ ನಡೆಯುತ್ತಿದ್ದ ಐಸಿಯು ಒಳಗಡೆ ಹೋದಳು. 

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 283

ವರ್ಧನ್ ಜೊತೆ ಮಾತನಾಡುತ್ತ ನೀತು ಮುಂದೆ ಹೋಗುತ್ತಿದ್ದರೆ ಅವಳ ಹಿಂದೆ ನಿಶಾಳನ್ನೆತ್ತಿಕೊಂಡು ನಿಧಿ ಅವಳ ಪಕ್ಕ ರಜನಿ ಮತ್ತು ಅನುಷ ಬರುತ್ತಿದ್ದರು. ಮಕ್ಕಳ ಹಿಂದೆ ಹರೀಶ...ರಾಣಾ ಮತ್ತಿತರರು ಬರುತ್ತಿದ್ದು ಹರೀಶ ಮಗಳಿಗೆ ಆನೆ ಸವಾರಿ ಮಾಡಿಸುವೆ ಮೊದಲು ಫ್ರೆಶಾಗಿ ಹಾಲು ಕುಡಿ ಅಂತ ಸಮಾಧಾನ ಮಾಡಿಕೊಂಡು ಬರ್ತಿದ್ದ. ಅರಮನೆ ಹೊರಗಿನ ಅಂಗಳವನ್ನು ಆರು ಜನ ಸೇವಕಿಯರು ಕ್ಲೀನ್ ಮಾಡುತ್ತಿರುವುದನ್ನು ನೋಡಿ ಅದರ ಬಗ್ಗೆ ಅಷ್ಟಾಗಿ ಯೋಚಿಸದೆ ಮುಂದಕ್ಕೆ ಹೆಜ್ಜೆಯಿಡುತ್ತಿದ್ದ ನೀತು ಕಣ್ಣಿಗೆ ಆ ದೃಶ್ಯವು ಕಾಣಿಸಿತು. 

ಆರು ಜನ ಸೇವಕಿಯರಲ್ಲೊಬ್ಬಳು ಸೊಂಟದಲ್ಲಿ ಕೈ ತೂರಿಸುತ್ತಿದ್ದು ಹೊರತೆಗೆದಾಗ ಕೈಯಲ್ಲಿ ಪಿಸ್ತೂಲಿರುವುದನ್ನು ನೋಡಿ ಕೈಯಲ್ಲಿಡಿದ ಫೈಲ್ಸ್ ಮತ್ತು ಫೋನ್ ಬಿಟ್ಟ ನೀತು ಚಿನ್ನಿ...ಎಂದು ಕೂಗುತ್ತ ಇಬ್ಬರು ಮಕ್ಕಳಿಗೆ ಅಡ್ಡಲಾಗಿ ನಿಂತಳು. ಅದೇ ಸಮಯಕ್ಕೆ ಯಶೋಮತಿ ಕೈಲಿದ್ದ ಪಿಸ್ತೂಲಿನಿಂದ ಮೂರು ಗುಂಡುಗಳು ಹಾರಿತು. ಇದೆಲ್ಲವೂ ಕೇವಲ 3—5 ಸೆಕೆಂಡುಗಳಲ್ಲಿ ನಡೆದು ಹೋಗಿದ್ದು ಯಾರಿಗೂ ಸಹ ಪ್ರತಿಕ್ರಿಯಿಸಲಿಕ್ಕೂ ಸಮಯವೇ ಸಿಗಲಿಲ್ಲ. 

ಮೊದಲನೇ ಗುಂಡು ನೀತು ಎಡಗಡೆ ತೋಳಿನಲ್ಲಿ ನುಗ್ಗಿದರೆ ಎರಡನೆಯ ಗುಂಡು ಅವಳ ಬೆನ್ನಿನ ಮೂಲಕ ಹೃದಯವನ್ನು ನಾಟಿತ್ತು. ಆದರೆ ಮೂರನೆಯ ಗುಂಡಿಗೆ ಅಡ್ಡಲಾಗಿ ಬಂದ ವೀರ ಸಿಂಗ್ ಹೊಟ್ಟೆಯ ಎಡಭಾಗದಲ್ಲಿ ಹೊಕ್ಕಿತು. ರಾಣಾ ಕತ್ತಿ ಹಿರಿದು ಮಿಂಚಿನಂತೆ ನುಗ್ಗಿ ಯಶೋಮತಿಯ ಕಡೆ ಕತ್ತಿ ಬೀಸಿದಾಗದು ಅವಳ ಬಲ ಮುಂಗೈಯನ್ನೇ ಕತ್ತರಿಸಿದ್ದು ಮುಂಗೈ ಪಿಸ್ತೂಲಿನ ಸಮೇತ ನೆಲಕ್ಕೆ ಬಿತ್ತು. ಎದೆ ಭಾಗಕ್ಕೆ ಗುಂಡು ಬಿದ್ದಿದ್ದ ನೀತು ಮಕ್ಕಳಿಬ್ಬರೂ ಸುರಕ್ಷಿತವಾಗಿ ಇರುವುದನ್ನು ಕಂಡು ಮುಗುಳ್ನಗೆಯೊಂದಿಗೆ ನೆಲಕ್ಕುರುಳಿ ಕಣ್ಮುಚ್ಚಿಕೊಂಡಳು. 

ಹರೀಶ... ರಜನಿ...ಅನುಷ....ವರ್ಧನ್ ಗರಬಡಿದವರಂತಾಗಿ ಹೋಗಿ ನಿಂತ ಜಾಗದಲ್ಲೇ ಕಲ್ಲಾಗಿ ಹೋಗಿದ್ದರು. ಆದರೆ ಸಮಯಕ್ಕನುಗುಣವಾಗಿ ಪ್ರತಿಕ್ರಿಸಿಯಿದ ರಾಣಾ ಹಾಗು ವಿಕ್ರಂ ಸಿಂಗ್ ತಕ್ಷಣ ನೀತುವಿನ ಬೆನ್ನು ಭಾಗದಲ್ಲಿ ಸುರಿಯುತ್ತಿರುವ ರಕ್ತ ತಡೆಯಲು ಬಟ್ಟೆಯನ್ನೊತ್ತಿಡಿದು ಅವಳನ್ನು ಹೆಲಿಕಾಪ್ಟರಿನಲ್ಲಿ ಸಂಸ್ಥಾನದ ಆಸ್ಪತ್ರೆಗೆ ಕೊಂಡೊಯ್ದರು.

ನಿಶಾ ಮಮ್ಮ....ಎಂದು ಕೂಗಿಕೊಂಡು ಅಳಲಾರಂಭಿಸಿದಾಗಲೇ ನಾಲ್ವರೂ ಎಚ್ಚೆತ್ತು ಹರೀಶ ಮಗಳನ್ನು ಎತ್ತಿಕೊಂಡರೆ ಅಷ್ಟೊತ್ತೂ ತಂಗಿಯನ್ನು ತೋಳಿನಲ್ಲಿ ಬಿಗಿಯಾಗಿ ಹಿಡಿದುಕೊಂಡು ನಿಂತಿದ್ದ ನಿಧಿ ನಿಂತಲ್ಲಿಯೇ ಕುಸಿದು ಬಿದ್ದಳು.

ಅಜಯ್ ಸಿಂಗ್..........ಸರ್ ಯುವರಾಣಿಯವರಿಗೆ ಯಾವುದೇ ಗುಂಡು ಬಿದ್ದಲ್ಲ ಗಾಬರಿಯಾಗ್ಬೇಡಿ ಮಾತೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ನಾವು ಯುವರಾಣಿಯನ್ನೂ ಅಲ್ಲಿಗೆ ಕರೆದೊಯ್ಯೋಣ ನಡೀರಿ.

ಶಾಕಿನಿಂದ ಕಲ್ಲಾಗಿ ಹೋಗಿದ್ದ ನಾಲ್ವರೂ ಸಹಜತೆಗೆ ಮರಳಿದ್ದು ನಿಧಿಯನ್ನು ಅಜಯ್ ಸಿಂಗ್ ಹೊತ್ಕೊಂಡು ಮುಂದೋಡಿದರೆ ಆತನ ಹಿಂದೆ ಎಲ್ಲರೂ ಹೆಲಿಕಾಪ್ಟರ್ ಏರಿಕೊಂಡರು. ರಕ್ಷಕರು ವೀರ್ ಸಿಂಗ್ ಹೊಟ್ಟೆಗೆ ಬಟ್ಟೆ ಕಟ್ಟಿ ಆತನನ್ನು ಸಹ ಆಸ್ಪತ್ರೆಗೆ ರವಾನಿಸಿದ್ದು ಗುಂಡು ಹಾರಿಸಿದ ಯಶೋಮತಿಯನ್ನು ಬಂಧಿಸಿ ಒಂದು ರೂಮಲ್ಲಿ ಕೂಡಿ ಹಾಕಿದರು.

ಸಂಸ್ಥಾನದ ಆಸ್ಪತ್ರೆಯ ಮುಖ್ಯ ದ್ವಾರದ ಬಳಿಯೇ ಹೆಲಿಕಾಪ್ಟರ್ ಇಳಿಯುತ್ತಿರುವುದನ್ನು ನೋಡಿ ಇದು ಸಂಸ್ಥಾನದ್ದೆಂದು ಗಮನಿಸಿದ ಕೆಲವು ವಾರ್ಡ್ ಬಾಯ್ಸ್ ಸ್ಟ್ರೆಚರ್ ತಳ್ಳಿಕೊಂಡು ಓಡೋಡಿ ಬಂದ್ರು. ನೀತುಳನ್ನು ಅದರ ಮೇಲೆ ಮಲಗಿಸಿದ ರಾಣಾ ಆಸ್ಪತ್ರೆಯೊಳಗಡೆ ತಾನೇ ತಳ್ಳಿಕೊಂಡು ಹೊರಟರೆ ಅಲ್ಲಿನ ಸ್ಟಾಫುಗಳಿಗೆ ತಕ್ಷಣ ಎಲ್ಲಾ ಪ್ರಮುಖ ವೈದ್ಯರನ್ನು ಆಪರೇಷನ್ ಥಿಯೇಟರಿಗೆ ಬರಲು ತಿಳಿಸೆಂದು ವಿಕ್ರಂ ಸಿಂಗ್ ಸೂಚಿಸಿದನು. ಹತ್ತು ನಿಮಿಷಕ್ಕೂ ಮುನ್ನವೇ ನೀತು ಆಪರೇಷನ್ ಥಿಯೇಟರಿನಲ್ಲಿದ್ದು ಹತ್ತು ಜನ ಸೀನಿಯರ್ ಸರ್ಜನ್ ಆಪರೇಷನ್ನಿನ ತಯಾರಿ ನಡೆಸುವುದರ ಜೊತೆಗೆ ಬೆನ್ನಿನ ಭಾಗದಲ್ಲಿ ಸುರಿಯುತ್ತಿದ್ದ ರಕ್ತವನ್ನು ನಿಲ್ಲಿಸುವ ಪ್ರಯತ್ನದಲ್ಲಿದ್ದರು. 

ನಿಧಿಯನ್ನು ಕೂಡ ಆಸ್ಪತ್ರೆಗೆ ತರಲಾಗಿದ್ದು ಅವಳನ್ನು ಪರೀಕ್ಷಿಸಿದ ವೈದ್ಯರು ಶಾಕ್ ಆಗಿದ್ದರಿಂದ ಇವರಿಗೆ ಪ್ರಜ್ಞೆ ತಪ್ಪಿದೆ ಇಂಜಕ್ಷನ್ ಕೊಡುವುದಾಗೇಳಿ ನಾಲ್ಕೈದು ಘಂಟೆಗಳಲ್ಲಿ ಪ್ರಜ್ಞೆ ಬರುವುದೆಂದು ತಿಳಿಸಿದರು. ಇಬ್ಬರು ಪೇಷಂಟುಗಳೂ ಸೂರ್ಯವಂಶಿ ಸಂಸ್ಥಾನಕ್ಕೆ ಸಂಬಂಧಿಸಿದವರು ಅವರಲ್ಲೊಬ್ಬಳು ಯುವರಾಣಿ ಎಂದು ತಿಳಿದೊಡನೆ ಆಸ್ಪತ್ರೆಯ ಸ್ಟಾಫುಗಳೆಲ್ಲರೂ ಮತ್ತಷ್ಟು ಚುರುಕಾಗಿ ಕೆಲಸ ಮಾಡತೊಡಗಿದರು. ಅಪ್ಪನ ತೋಳಿನಲ್ಲಿದ್ದ ನಿಶಾ ಒಂದೇ ಸಮ ಅಳುತ್ತಿದ್ದು ಯಾರೆಷ್ಟೇ ಸಮಾಧಾನ ಮಾಡಿದರೂ ಸುಮ್ಮನಾಗದೆ ಅಮ್ಮ ಬೇಕು ಎಂದು ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಳು.

ಹರೀಶ......ಕಂದ ಅಮ್ಮಂಗೆ ಗಾಯ ಆಯ್ತಲ್ವಾ ಅದಕ್ಕೆ ಡಾಕ್ಟರ್ ಚುಚ್ಚಿ ಮಾಡಲು ಕರೆದುಕೊಂಡು ಹೋಗಿದ್ದಾರೆ. ಇನ್ನು ಸ್ವಲ್ಪ ಹೊತ್ತು ಅಮ್ಮ ಬರ್ತಾಳೆ ನೀನು ಅಳಬೇಡಮ್ಮ ಕಂದ. ನೀನು ಅಳುತ್ತಿದ್ದರೆ ಅಮ್ಮಂಗೂ ಬೇಜಾರಾಗಿ ಅಳು ಬರುತ್ತೆ ಅದಕ್ಕೆ ಅಳಬೇಡ ಚಿನ್ನಿ.

ನಿಶಾ ಅಳುವುದನ್ನು ನಿಲ್ಲಿಸಿದರೂ ಅವಳ ಕಣ್ಣಿನಿಂದ ಒಂದೇ ಸಮ ಕಣ್ಣೀರು ಹರಿಯುತ್ತಿದ್ದು ಅಪ್ಪನನ್ನು ಬಿಗಿಯಾಗಿ ತಬ್ಬಿಕೊಂಡಿದ್ದಳು. ನಿಧಿ ಕೂಡ ಪ್ರಜ್ಞೆತಪ್ಪಿ ಮಲಗಿದ್ದು ಅವಳಿಗೆ ಡ್ರಿಪ್ಸ್ ಹಾಕಲಾಗಿದ್ದು ಅವಳ್ಜೊತೆಯಲ್ಲಿ ರಜನಿ—ಅನುಷ ಕುಳಿತಿದ್ದರು. ನಿಧಿ ಸಂಸ್ಥಾನದ ಯುವರಾಣೆ ಎಂದರಿವಾದಾಗ ಅವಳಿದ್ದ ರೂಮಿನಲ್ಲಿ ನಾಲ್ಕು ಜನ ನರ್ಸ್ ಜೊತೆ ಇಬ್ಬರು ಲೇಡಿ ಡಾಕ್ಟರ್ಸ್ ಕೂಡ ಉಳಿದುಕೊಂಡರು. ಹರೀಶನ ಜೊತೆ ವರ್ಧನ್ ಕೂಡ ಕಣ್ಣೀರಿಡುತ್ತ ತನ್ನ ಅಕ್ಕ ಹಾಗು ಅಣ್ಣನ ಮಗಳು ಸಕುಶಲವಾಗಿ ಹುಷಾರಾಗಲೆಂದು ದೇವರ ಹತ್ತಿರ ಪ್ರಾಥಿಸುತ್ತಿದ್ದನು. 

ರಾಣಾ ಮತ್ತು ವಿಕ್ರಂ ಸಿಂಗ್ ಆಚಾರ್ಯರು ಮೊದಲೇ ನೀತು ಪ್ರಾಣಕ್ಕೆ ಸಂಚಕಾರವಿದೆ ಎಂಬುದರ ವಿಷಯದಲ್ಲಿ ಮುನ್ಸೂಚನೆ ನೀಡಿದ್ದರೂ ತಾವುಗಳು ಮಾತೆಯ ರಕ್ಷಣೆ ಮಾಡುವ ಕಾರ್ಯದಲ್ಲಿ ವಿಫಲರಾಗಿದ್ದಕ್ಕೆ ಕಣ್ಣೀರಿಡುತ್ತ ಸ್ವಲ್ಪ ದೂರ ನಿಂತಿದ್ರು. ಹತ್ತು ನಿಮಿಷದಲ್ಲೇ ಸುಮಾರು 200 ಜನ ರಕ್ಷಕರು ಆಸ್ಪತ್ರೆಯನ್ನು ಸುತ್ತುವರಿದಿದ್ದು ನೀತು ಮತ್ತು ನಿಧಿಯ ಚಿಕಿತ್ಸೆ ನಡೆಯುತ್ತಿರುವ ಫ್ಲೋರನ್ನು ಪೂರ್ತಿ ಸೀಲ್ ಮಾಡಿ ಬಿಟ್ಟಿದ್ದರು.

ರಜನಿ ಕಣ್ಣೀರು ಸುರಿಸುತ್ತ........ಸ್ವಲ್ಪ ಹೊತ್ತಿಗೂ ಮುಂಚಿನವರೆಗೂ ಎಲ್ಲರೂ ಎಷ್ಟು ಸಂತೋಷದಲ್ಲಿದ್ದೆವು ಇದ್ದಕ್ಕಿದ್ದಂತೆ ಪರಿಸ್ಥಿತಿಯೇ ಬದಲಾಗಿ ಹೋಯ್ತಲ್ಲೆ.

ಅನುಷ ಅಳುತ್ತ........ಮಕ್ಕಳಿಗೆ ಗುಂಡು ಬೀಳದಂತೆ ಕಾಪಾಡಲು ಅಕ್ಕ ಇವರಿಬ್ಬರಿಗೆ ಅಡ್ಡಲಾಗಿ ಮಧ್ಯೆ ನಿಂತು ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಅವರ ಪರಿಸ್ಥಿತಿ ಹೇಗಿದೆಯೋ ? ಇಲ್ಲಿ ಅಮ್ಮನಿಗೆ ಗುಂಡೇಟು ಬಿದ್ದಿರುವುದನ್ನು ನೋಡಿ ನಿಧಿ ಪ್ರಜ್ಞೆತಪ್ಪಿ ಹೋಗಿದ್ದಾಳೆ. ದೇವರೇ ನಾವ್ಯಾರಿಗೂ ಅನ್ಯಾಯ ಮಾಡಿಲ್ಲ ನನ್ನ ಅಕ್ಕನನ್ನು ದಯವಿಟ್ಟು ಉಳಿಸಿಕೊಡು.

ರಜನಿ.......ಚಿನ್ನಿ ಹತ್ತಿರ ಹೋಗಿದ್ಯಾ ಪಾಪ ತುಂಬ ಅಳ್ತಿದ್ದಾಳೆ.

ಅನುಷ.......ಭಾವ ಹೇಗೋ ಅಳುವುದನ್ನು ನಿಲ್ಲಿಸಿದ್ದಾರೆ ಆದರಿನ್ನು ಕಣ್ಣಿಂದ ಕಂಬನಿ ಹರಿಯುವುದು ನಿಂತಿಲ್ಲ. ನಾನೂ ಕರೆದೆ ಅಪ್ಪನನ್ನು ಬಿಟ್ಟು ಬರಲ್ಲ ಅಂತಿದ್ದಾಳೆ ಅಕ್ಕನಿಗೇನೂ ಆಗಲ್ಲ ತಾನೇ ?

ರಜನಿ......ಏನೂ ಆಗಲ್ಲ ಕಣೆ ಮಕ್ಕಳನ್ನು ಹೀಗೆ ಅನಾಥರನ್ನಾಗಿ ಮಾಡಿ ಅವಳೆಲ್ಲಿಗೂ ಹೋಗಲ್ಲ ಕಣೆ ( ಮನಸ್ಸಿನಲ್ಲಿ ) ಇವಳಿಗೇನೊ ಹೇಳ್ಬಿಟ್ಟೆ ಆದರೆ ನನಗೇ ಭಯವಾಗ್ತಿದೆ ಪ್ಲೀಸ್ ಕಣೆ ನೀತು ಎಲ್ಲಿಗೂ ಹೋಗ್ಬೇಡ ಇಲ್ಲಿಗೆ ಬರುವಾಗ ನೀನು ಹೇಳಿದ ಮಾತನ್ನೀಗ ನೀನೇ ನಿಜ ಮಾಡಲು ಹೊರಟಿದ್ದೀಯಲ್ಲೆ. ದೇವರೇ ನನ್ನ ಪ್ರಾಣವನ್ನು ತೆಗೆದುಕೊಳ್ಳಿ ಆದರೆ ನನ್ನ ಗೆಳತಿಯನ್ನು ಬದುಕಿಸಿ ಕೊಡಿ......ಎಂದು ತನ್ನ ಪ್ರಾಣಗೆಳತಿಗಾಗಿ ಬೇಡಿಕೊಂಡಳು.
* *
* *
ಸತತ ಎರಡೂವರೆ ಘಂಟೆಗಳ ಆಪರೇಶನ್ ಬಳಿಕ ಡಾಕ್ಟರ್ಸ್ ಹೊರ ಬಂದಾಗ ಹರೀಶ—ವರ್ಧನ್ ಎದ್ದು ನಿಂತು.....

ವರ್ಧನ್.....ನಮ್ಮಕ್ಕ ಹೇಗಿದ್ದಾರೆ ಡಾಕ್ಟರ್ ?

ಸೀನಿಯರ್ ಸರ್ಜನ್......ಒಂದು ಗುಂಡು ಅವರ ಎಡ ಭುಜದಲ್ಲಿ ಬಿದ್ದಿದೆ ಅದರಿಂದ ಯಾವುದೇ ಅಪಾಯವಾಗಿಲ್ಲ ಆದರೆ ಬೆನ್ನಿನ ಕಡೆ ಬಿದ್ದ ಬುಲೆಟ್ ಅವರ ಅವರ ಹೃದಯಕ್ಕೆ ನಾಟಿತ್ತು ಅದೃಷ್ಟವಶಾತ್ ಹೃದಯವನ್ನು ಭೇಧಿಸಿಲ್ಲ. ಬುಲೆಟ್ ಪರಿಣಾಮ ಅವರ ಹೃದಯಕ್ಕೆ ಒಂದು ಸಣ್ಣ ರಂಧ್ರವಾಗಿ ಹೋಗಿದೆ ಅಲ್ಲಿಂದ ಸ್ವಲ್ಪ ಸ್ವಲ್ಪವೇ ರಕ್ತ ಸೋರಿಕೆಯಾಗ್ತಿದೆ. ಅದಿನ್ನೂ ನಿಂತಿಲ್ಲ ರಕ್ತ ನಿಲ್ಲುವವರೆಗೂ ನಾವು ಏನನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಧೈರ್ಯವಾಗಿರಿ ನಾವು ನಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ.

ಹರೀಶ ಕೈಮುಗಿದು.......ಡಾಕ್ಟರ್ ಹೇಗಾದರೂ ನನ್ನ ಹೆಂಡತಿಯನ್ನು ಉಳಿಸಿಕೊಡಿ. ನನ್ನ ಮಗಳು ಇಲ್ಲಿವರೆಗೂ ಅತ್ತಿದ್ದೇ ಇಲ್ಲ ಆದರಿಂದು ಅಳುವನ್ನೇ ನಿಲ್ಲಿಸ್ತಿಲ್ಲ ಪ್ಲೀಸ್ ಡಾಕ್ಟರ್.

ಸರ್ಜನ್......ನಾವೆಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೀವಿ ಸರ್ ಆಗಲೇ ದೆಹಲಿ ಮತ್ತು ಬಾಂಬೆಯಲ್ಲಿರುವ ಸ್ಪೆಷಲಿಸ್ಟುಗಳನ್ನು ಸಂಪರ್ಕಿಸಿ ಬರುವುದಕ್ಕೆ ಕೇಳಿದ್ದೀವಿ ಇನ್ನೇನು ಅವರೂ ಬರ್ತಿದ್ದಾರೆ. ನೀವು ಧೈರ್ಯವಾಗಿರಿ ನಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನೂ ನಾವು ಮಾಡ್ತೀವಿ ಭಗವಂತನ ಕೃಪೆಯಿದ್ದರೆ ಎಲ್ಲ ಒಳ್ಳೆಯದಾಗುತ್ತೆ.

ನಿಶಾ.....ನಾನಿ ಮಮ್ಮ ಹತ್ತ ಹೋತೀನಿ ಪಪ್ಪ.

ವರ್ಧನ್.......ಡಾಕ್ಟರ್ ದೂರದಿಂದಾದರೂ ಅಕ್ಕನನ್ನು ಮಗಳಿಗೆ ತೋರಿಸಬಹುದಾ ಪ್ಲೀಸ್.

ಡಾಕ್ಟರ್......ಈಗ ಬೇಡಿ ಸರ್ ದಯವಿಟ್ಟು ಅರ್ಥ ಮಾಡಿಕೊಳ್ಳಿರಿ ನಮಗೂ ಸ್ವಲ್ಪ ಟೈಂ ಕೊಡಿ ನಾವು ನಮ್ಮ ಶಕ್ತಿಮೀರಿ ಎಲ್ಲಾ ರೀತಿಯ ಪ್ರಯತ್ನವನ್ನು ಮಾಡ್ತಿದ್ದೀವಿ.

ನಿಶಾ ಪುನಃ ಅಪ್ಪನನ್ನು ಬಿಗಿದಪ್ಪಿಕೊಂಡು ಸದ್ದು ಮಾಡದೆ ಕಣ್ಣೀರು ಸುರಿಸತೊಡಗಿದರೆ ಹರೀಶ ಮಗಳನ್ನು ಸಮಾಧಾನ ಮಾಡುತ್ತಲೇ ತಾನೂ ಅಳುತ್ತಿದ್ದನು. ವರ್ಧನ್ ಅತ್ಯಂತ ದುಃಖಿತನಾಗಿ ಹರೀಶನಿಗೆ ಸಮಾಧಾನ ಮಾಡಿ ನಿಧಿ ಮಲಗಿದ್ದ ರೂಮಿಗೆ ಬಂದನು.

ರಜನಿ......ನೀತು ಹೇಗಿದ್ದಾಳೆ ? ಡಾಕ್ಟರ್ ಏನಂದರು ?

ಅನುಷ.......ಅಕ್ಕನ ಆರೋಗ್ಯ ಹೇಗಿದೆ ? ಏನೂ ಭಯವಿಲ್ಲವಲ್ಲ ?

ವರ್ಧನ್ ಕಣ್ಣೀರು ಸುರಿಸುತ್ತಲೇ ನೀತು ಆರೋಗ್ಯದ ಬಗ್ಗೆ ಹೇಳುತ್ತ ಇಬ್ಬರಿಗೂ ಸಮಾಧಾನ ಹೇಳಿ ಹೊರಬಂದನು.

ವರ್ಧನ್......ರಾಣಾ ಗುಂಡು ಹಾರಿಸಿದವಳ್ಯಾರೆಂದು ಗೊತ್ತಾಯ್ತಾ.

ರಾಣಾ.....ಅವಳೇ ಯಶೋಮತಿ ಸರ್.

ವರ್ಧನ್......ಅವಳಿಗ್ಯಾವುದೇ ತೊಂದರೆಯಾಗದಂತೆ ನೋಡ್ಕೊಳ್ಳಿ ಅಂತ ಎಲ್ಲರಿಗೂ ಹೇಳ್ಬಿಡು ನಿಧಿ ಎಚ್ಚರಗೊಂಡಾಗ ಅವಳೇ ಏನು ಮಾಡುವುದೆಂದು ಹೇಳ್ತಾಳೆ.
* *
* *
ಕಾಲೇಜು ಮುಗಿಸಿಕೊಂಡು ಮನೆಗೆ ಲೇಟಾಗಿ ಮರಳಿದ ನಿಕಿತಾ ಅಕ್ಕ ನಿಧಿಯ ನಂಬರಿಗೆ ಕರೆ ಮಾಡುತ್ತಿದ್ದರೆ ಅದನ್ಯಾರೂ ರಿಸೀವ್ ಸಹ ಮಾಡುತ್ತಿರಲಿಲ್ಲ. ಬೇಗನೇ ಫ್ರೆಶಾಗಿ ನೀತು ಮನೆಗೆ ಬಂದಾಗ ಅಲ್ಲಿ ಕೂಡ ಗಿರೀಶ ಅಪ್ಪ..ಅಮ್ಮ...ಎಲ್ಲರ ಮೊಬೈಲಿಗೂ ಟ್ರೈ ಮಾಡ್ತಿದ್ದು ಯಾರೊಬ್ಬರೂ ಅತ್ತಲಿಂದ ತೆಗೆಯುತ್ತಿರಲಿಲ್ಲ.

ನಿಕಿತಾ.......ಅಕ್ಕ ಫೋನ್ ತೆಗೀತಿಲ್ಲ ನೀವ್ಯಾರಾದ್ರೂ ಮಾಡಿದ್ರಾ ?

ನಯನಾ....ಅಕ್ಕ ನಾವು ಸ್ಕೂಲಿನಿಂದ ಬರುವಾಗ ಸವಿತಾ ಆಂಟಿ ಫೋನ್ ಮಾಡಿ ಮಾತಾಡಿದ್ರು ಆಗ ಅತ್ತೆ ಮಿಕ್ಕವರು ರಿಜಿಸ್ಟರ್ ಆಫೀಸಿನಲ್ಲಿದ್ದರು ಆಮೇಲೆ ಮಾಡ್ತೀನಿ ಅಂದಿದ್ರು ಆದರೀಗ್ಯಾರೂ ಫೋನೇ ತೆಗೀತಿಲ್ಲ.

ಸುಮ ಗಂಡನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಮನೆಯ ಗಂಡಸರೆಲ್ಲರೂ ಮನೆಗಾಗಮಿಸಿ ಐವರ ನಂಬರಿಗೂ ಟ್ರೈ ಮಾಡುತ್ತ ಯಾರೂ ಫೋನ್ ರಿಸೀವ್ ಮಾಡದಿರುವುದನ್ನು ಕಂಡು ಎಲ್ಲರೂ ಟೆನ್ಷನ್ನಿಗೊಳಗಾದರು.

ಸವಿತಾ.....ನಿಮ್ಮಲ್ಯಾರ ಹತ್ತಿರವೂ ರಾಣಾ ಅಥವ ಬೇರೆಯವರ ನಂಬರ್ ಇಲ್ಲವಾ ?

ಅಶೋಕ.....ಇಲ್ಲ ತಾಳಿ ಹೊರಗಿರುವ ರಕ್ಷಕರನ್ನೇ ವಿಚಾರಿಸುತ್ತೀನಿ ಅವರ ಬಳಿ ನಂಬರ್ ಇದ್ದರೆ ಒಳ್ಳೆಯದು.

ಆಶೋಕ ಸ್ವಲ್ಪ ಹೊತ್ತಲ್ಲೇ ಹಿಂದಿರುಗಿ......ರಾಣಾ ಮತ್ತಿತರರು ಸಹ ಫೋನ್ ರಿಸೀವ್ ಮಾಡ್ತಿಲ್ಲ ಅಲ್ಲೇನೋ ನಡೆದಿದೆ ಅನುಸುತ್ತಿದೆ.

ಎಲ್ಲರೂ ಭಯ ಮತ್ತು ಆತಂಕದಿಂದಲೇ ಸಮಯ ಕಳೆಯುತ್ತಿದ್ದು ಏಳು ಘಂಟೆಯ ಹೊತ್ತಿಗೆ ಗಿರೀಶ ಅಪ್ಪನಿಗೆ ಪುನಃ ಕರೆ ಮಾಡಿದಾಗ ಹರೀಶ ರಿಸೀವ್ ಮಾಡಿದನು.

ಪ್ರೀತಿ.....ಶ್!!! ಯಾರೂ ಮಾತಾಡ್ಬೇಡಿ ಗಿರೀಶ ಫೋನ್ ಸ್ಪೀಕರಿಗೆ ಹಾಕಿ ಮಾತಾಡು.

ಗಿರೀಶ......ಅಪ್ಪ ಏನಾಗ್ತಿದೆ ನೀವ್ಯಾರೂ ಫೋನ್ಯಾಕೆ ರಿಸೀವ್ ಮಾಡ್ತಿಲ್ಲ ಅಮ್ಮ ಎಲ್ಲಿ ? ಅಕ್ಕನೂ ಫೋನ್ ತೆಗೀತಿಲ್ವಲ್ಲ.

ಹರೀಶ ದುಃಖ ತಡೆದುಕೊಳ್ಳುತ್ತ......ಏನೀಲ್ಲ ಕಣೋ ನಾವೆಲ್ಲ....

ಅಣ್ಣನ ಧ್ವನಿ ಕೇಳಿದ ತಕ್ಷಣವೇ ನಿಶಾ ಅಪ್ಪನ ಫೋನಿನತ್ತ ಬಾಗಿ..... ಅಣ್ಣ...ಅಣ್ಣ...ಲಿಲ್ಲಿ ಢಂ..ಢಂ..ಆತು ಮಮ್ಮ ಗಾಯ ಆತು ಮಮ್ಮ ಚುಚ್ಚಿ ಮಾತಾರೆ....ನನ್ನಿ ಮಮ್ಮ ನೋಲಿಲ್ಲ ಅಣ್ಣ ನಂಗಿ ಭಯ ಆತು ಅಣ್ಣ ಬಾ...ಬಾ..ಬಾ...ಅಣ್ಣ...

ನಿಶಾಳ ಅಳುತ್ತಿರುವ ಧ್ವನಿ ಅವಳಾಡುತ್ತಿದ್ದ ಮಾತುಗಳನ್ನು ಕೇಳಿ ಮನೆಯಲ್ಲಿದ್ದವರಿಗೆ ಕೈಕಾಲುಗಳೇ ನಡುಗಲಾರಂಭಿಸಿ ಅವರೆಲ್ಲರ ದೇಹ ತಣ್ಣಗಾಗಿ ಹೋದಂತೆ ಭಾಸವಾಗುತ್ತಿತ್ತು.

ಶೀಲಾ ತಕ್ಷಣ ಫೋನ್ ಪಡೆದು......ರೀ ಏನಿದು ಚಿನ್ನಿ ಹೇಳ್ತಿರೋದು ಅಲ್ಲೇನಾಗ್ತಿದೆ ಹೇಳಿ ಚಿನ್ನಿ ಮೇಲಾಣೆ ನಿಜ ಹೇಳಿ.

ಹರೀಶ ಧೀರ್ಘವಾಗಿ ಉಸಿರನ್ನೆಳೆದುಕೊಂಡು......ಮನೆಯಲ್ಯಾರೂ ಗಾಬರಿಯಾಗ್ಬೇಡಿ ಹೇಳುವ ತನಕ ಸಮಾಧಾನವಾಗಿರಿ. ಸಂಜೆಯ ಹೊತ್ತಿಗೆ ನಾವು ಅರಮನೆಗೆ ಹಿಂದಿರುಗಿ ಬಂದಾಗ ನಿಶಾ ನಿಧಿಯನ್ನು ಸಾಯಿಸುವ ಉದ್ದೇಶದಿಂದ ಒಬ್ಬಾಕೆ ಗುಂಡು ಹಾರಿಸಿದಳು ಆದರೆ ಮಕ್ಕಳ ರಕ್ಷಣೆಗೆ ನೀತು ಅಡ್ಡವಾಗಿದ್ದಳು. ಅವಳಿಗೆರಡು ಗುಂಡು ಬಿದ್ದಿದೆ ಈಗ ನಾವೆಲ್ಲರೂ ಆಸ್ಪತ್ರೆಯಲ್ಲಿದ್ದೀವಿ ನೀತು ಆಪರೇಷನ್ ಥಿಯೇಟರಿನಲ್ಲಿದ್ದಾಳೆ. ಅಮ್ಮನಿಗೆ ಗುಂಡು ಬಿದ್ದಿದ್ದನ್ನು ನೋಡಿ ನಿಧಿ ಕೂಡ ಪ್ರಜ್ಞೆ ಕಳೆದುಕೊಂಡು ಮಲಗಿದ್ದಾಳೆ ಅನು—ರಜನಿ ಅವಳ ಜೊತೆಯಲ್ಲಿದ್ದಾರೆ.

ಹರೀಶ ಹೇಳಿದ್ದನ್ನು ಕೇಳಿ ಮನೆಯವರೆಲ್ಲರ ಎದೆ ಧಸಕ್ಕೆಂದಿದ್ದು ಸ್ವಲ್ಪ ಚೇತರಿಕೆಯಲ್ಲಿದ್ದ ಅಶೋಕ......ಹರೀಶ ನಾವೀಗಲೇ ಹೊರಡ್ತೀವಿ ಎಲ್ಲಿಗೆ ಬರಬೇಕೆಂದು ಹೇಳು ?

ಹರೀಶ.....ಒಂದ್ನಿಮಿಷ ಅಶೋಕ ಲೈನಲ್ಲಿರು ( ರಾಣಾನನ್ನು ಹತ್ತಿರ ಕರೆದು ಏನೋ ಹೇಳಿ ) ನೀವು ರೆಡಿಯಾಗಿರಿ ಅಲ್ಲಿಗೆ ಹೆಲಿಕಾಪ್ಟರ್ ಬರ್ತಿದೆ ಡಾಕ್ಟರ್ ಬಂದ್ರು ನಾನಾಮೇಲೆ ಮಾತಾಡ್ತೀನಿ.

ಅಮ್ಮನಿಗೆ ಗುಂಡು ಬಿದ್ದಿರುವ ವಿಷಯ ತಿಳಿಯುತ್ತಲೇ ಸುರೇಶನಿಗೆ ಅಘಾತವಾಗಿ ಗೋಡೆಗೊರಗಿ ಮಂಡಿಯಲ್ಲಿ ಮುಖ ಹುದುಗಿಸುತ್ತ ದುಕ್ಕುಡಿಸಿಕೊಂಡು ಅಳತೊಡಗಿದನು. ಯಾವಾಗ್ಲೂ ಅವನೊಟ್ಟಿಗೆ ಜಗಳವಾಡಲು ತುದಿಗಾಲಲ್ಲಿ ನಿಂತಿರುತ್ತಿದ್ದ ನಯನ ಇಂದು ಪೂರ್ತಿ ತಧ್ವಿರುದ್ದವಾಗಿ ಸುರೇಶನನ್ನು ತಬ್ಬಿಕೊಂಡು ತಾನೂ ಜೋರಾಗಿ ಅಳುತ್ತಿದ್ದಳು. ರಶ್ಮಿ...ದೃಷ್ಟಿ...ನಿಕಿತಾ...ನಮಿತಾ ಒಬ್ಬರನ್ನೊಬ್ಬರು ಅಪ್ಪಿಕೊಂಡು ದುಃಖದಿಂದ ಅಳುತ್ತಿದ್ದರೆ ಮನೆಯ ಹೆಂಗಸರ ಕಣ್ಣಲ್ಲಿ ಕಣ್ಣೀರಿನ ಕೋಡಿಯೇ ಹರಿಯತೊಡಗಿತು.

ಅಶೋಕ.......ಈಗ್ಯಾರೆಲ್ಲ ಹೊರಡೋದು ?

ಶೀಲಾ......ಯಾರೆಲ್ಲ ಎಂದರೇನು ಅಶೋಕ್ ? ಅಲ್ಲಿ ನನ್ನ ಗೆಳತಿ ಜೀವನದ ಹೋರಾಟ ನಡೆಸುತ್ತಿದ್ದಾಳೆ ನಾವೆಲ್ಲರೂ ಹೋಗೋದೇ.

ರಾಜೀವ್......ಚಿಕ್ಕ ಮಗು ಕಣಮ್ಮ ಶೀಲಾ ಜೊತೆಗೆ ಸುಕನ್ಯಾ ಸಹ ತುಂಬು ಗರ್ಭಿಣಿ........

ಸುಕನ್ಯಾ ಅಳುತ್ತಲೇ.....ನನಗೇನೂ ಆಗ್ತಿಲ್ಲ ಅಂಕಲ್ ಈ ಮಗು ನನ್ನ ಮಡಿಲಿಗೆ ಬರುವುದಕ್ಕೇ ನೀತು ಕಾರಣ ಅವಳ ಬಳಿ ನಾನು ಹೋಗಲೇ ಬೇಕು.

ಕೊನೆಗೆ ಮನೆಯವರೆಲ್ಲರೂ ಹೊರಡುವುದೆಂದು ನಿರ್ಧಾರವಾಗಿದ್ದು ಹೊರಗಿರುವ ರಕ್ಷಕರಿಗೆ ಎರಡೂ ಮನೆಯ ಕೀ ಕೊಟ್ಟು ನಾಯಿಗಳ ಜೊತೆ ಇತರೆ ಪ್ರಾಣಿ ಪಕ್ಷಿಗಳನ್ನೂ ನೋಡಿಕೊಳ್ಳುವಂತೆ ಹೇಳಿದರು.

ರಕ್ಷಕನೊಬ್ಬ.......ಸರ್ ಏನಾಯ್ತೆಂದು ಕೇಳಬಹುದಾ ?

ರೇವಂತ್ ಅಳುತ್ತಲೇ....ನಿಮ್ಮ ರಾಜಕುಮಾರಿಯವರ ಮೇಲೆ ದಾಳಿ ನಡೆಯಿತಂತೆ ಅವರಿಗಡ್ಡಲಾಗಿ ಬಂದ ನಿಮ್ಮ ಮಾತೆಗೆರಡು ಗುಂಡು ಬಿದ್ದಿದೆ ಅಂತಷ್ಟೇ ಗೊತ್ತಾಯ್ತು ಮಿಕ್ಕಂತೆ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತ ಕೂಡ ಗೊತ್ತಿಲ್ಲ.

ಅವನ ಉತ್ತರ ಕೇಳಿ ರಕ್ಷಕರಿಗೂ ಆಘಾತವಾಗಿದ್ದು ಎಲ್ಲರೂ ನೀತು ಸಕುಶಲವಾಗಿ ಹಿಂದಿರುಗಲೆಂದು ಬೇಡಿಕೊಂಡರು. ಅಷ್ಟರಲ್ಲೇ ಅಶೋಕನಿಗೆ ಕರೆ ಮಾಡಿ ಅತ್ತಲಿಂದ.......

ಸುಭಾಷ್......ಅಂಕಲ್ ಬೆಂಗಳೂರಿನಿಂದ ಮೂರು ಹೆಲಿಕಾಪ್ಟರ್ ಊರಿಗೆ ಹೊರಟಿದೆ ಇನ್ನರ್ಧ ಘಂಟೆಯಲ್ಲಿ ಫುಡ್ ಯೂನಿಟ್ಟನ್ನು ತಲುಪುತ್ತೆ ನೀವೆಲ್ಲರೂ ಅಲ್ಲಿಗೆ ಹೊರಟು ಬನ್ನಿ.

ಅಶೋಕ......ನೀನಲ್ಲೇ ಇದ್ದೀಯಾ ? ನೀತು ಹೇಗಿದ್ದಾಳೆ ? ಅಲ್ಲೇನು ನಡೆಯುತ್ತಿದೆಯೋ ?

ಸುಭಾಷ್......ನಾನೂ ಈಗಷ್ಟೇ ಬಂದೆ ಅಂಕಲ್ ಪೂರ್ತಿ ವಿಷಯ ನನಗೂ ಗೊತ್ತಿಲ್ಲ. ಬೆಳಿಗ್ಗೆ ನಿಧಿ ಫೋನ್ ಮಾಡಿ ಬರುವಂತೇಳಿದಳು ಅದಕ್ಕೆ ನಾನಿಲ್ಲಿಗೆ ತಲುಪಿದೆ ಈಗಿನ್ನೂ ಆಸ್ಪತ್ರೆಯ ಹೊರಗೆ ರಾಣಾ ಜೊತೆಯಲ್ಲಿದ್ದೀನಿ ಒಳಗಡೆ ಹೋಗಿಲ್ಲ ನೀವು ಹೊರಡಿ.

ರಾಜೀವ್.......ಶೀಲಾ ಮಗು ಹುಷಾರಾಗಿ ಎತ್ತಿಕೊಳ್ಳಮ್ಮ ಸುಕನ್ಯಾ ನೀನೂ ಹುಷಾರಾಗಿ ಕಣಮ್ಮ. ಮಕ್ಕಳೇ ಕೆಲವು ಬಟ್ಟೆ ತೆಗೆದುಕೊಳ್ಳಿ ಬೇಗ ಹೊರಡೋಣ.
* *
* *