Total Pageviews

Thursday, 23 January 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 259

ಒಂದು ವಾರದ ನಂತರ......
ಜುಲೈ 10ನೇ ಬುಧವಾರ.....

ಜಾಗಿಂಗ್ ಮುಗಿಸಿಕೊಂಡು ಬಂದ ಮಕ್ಕಳು ಶಾಲಾ ಕಾಲೇಜುಗಳಿಗೆ ರೆಡಿಯಾಗಲು ತೆರಳಿದರೆ ನಿಧಿ ಅಪ್ಪನ ಜೊತೆ ಕಾಫಿ ಕುಡಿಯುತ್ತ ಮಾತುಕತೆಯಲ್ಲಿ ತೊಡಗಿಕೊಂಡಿದ್ದಳು.

ಹರೀಶ.....ಮುಂದಿನ ಸೋಮವಾರದಿಂದ ನಿನ್ನ ಕಾಲೇಜ್ ಪ್ರಾರಂಭ ಅದಕ್ಕೆ ಬೇಕಾದ ತಯಾರಿಗಳನ್ನೆಲ್ಲಾ ಮಾಡಿಕೊಂಡಿದ್ದೀಯಾ ?

ನಿಧಿ.....ಹೂಂ ಅಪ್ಪ ನನಗಂತೂ ಕಾಲೇಜಿಗೆ ಹೋಗಲು ತುಂಬಾನೇ ಏಕ್ಸೈಟ್ ಆಗ್ತಿದೆ.

ಅಶೋಕ.......ಯಾಕಮ್ಮ ಆಶ್ರಮದಲ್ಲಿಯೂ ನೀನು ಕಾಲೇಜಿಗೆ ಹೋಗ್ತಿದ್ಯಲ್ಲವಾ ನಿನ್ನ ಬಿಬಿಎ ಮೊದಲ ವರ್ಷ ಅಲ್ಲಿಯೇ ತಾನೇ ಮುಗಿದಿರುವುದು.

ನಿಧಿ......ಮೊದಲ ಬಿಬಿಎ ಪರೀಕ್ಷೆಯನ್ನು ಅಲ್ಲೇ ಬರೆದಿದ್ದು ಅಂಕಲ್ ಆದರೆ ನಾನಲ್ಲಿ ಕಾಲೇಜಿಗೆ ಹೋಗುತ್ತಿರಲಿಲ್ಲ ಕೇವಲ ಪರೀಕ್ಷೆಯ ದಿನ ಮಾತ್ರ ಹೋಗಿದ್ದು.

ವಿಕ್ರಂ.....ಕಾಲೇಜ್ ಅಟೆಂಡಾಗದೆ ಏಕ್ಸಾಂ ಬರೆಯುವುದಕ್ಕೆ ನಿನಗೆ ಅವಕಾಶ ಕೊಟ್ಟರೇನಮ್ಮ ಅಟೆಂಡೆನ್ಸ್ ಬಗ್ಗೆ ಕೇಳಲಿಲ್ಲವಾ ?

ನಿಧಿ......ಇಲ್ಲ ಮಾವ ಬಿಬಿಎ ತರಗತಿಗಳಲ್ಲಿ ಸೈನ್ಸ್ ರೀತಿ ನಮಗೆ ಲ್ಯಾಬುಗಳೇ ಇರುವುದಿಲ್ಲವಲ್ಲ ಅದೊಂದು ಬೆನಿಫಿಟ್ ಜೊತೆಗೆ ಅಲ್ಲಿ
ಕಾಲೇಜಿನ ಪ್ರಿನ್ಸಿಪಾಲ್ ಆಚಾರ್ಯರ ಶಿಷ್ಯರೇ ಆಗಿದ್ದರಿಂದ ಅವರ ಜೊತೆ ಗುರುಗಳೇ ಮಾತನಾಡಿ ನಾನು ಕಾಲೇಜಿಗೆ ಬರುವುದಿಲ್ಲ ಅಂತ ಹೇಳಿದ್ದರು. ನನಗೆ ಆಶ್ರಮದಲ್ಲಿಯೇ ಬಿಬಿಎ ವಿಷಯವಾಗಿ ಎಲ್ಲಾ ತಾಲೀಮನ್ನೂ ನೀಡಲಾಗುತ್ತಿತ್ತು.

ರೇವಂತ್....ಅಲ್ಲಿನ ಪ್ರಿನ್ಸಿಪಾಲ್ ಆಚಾರ್ಯರ ಶಿಷ್ಯರು ಈಗಿಲ್ಲಿನ ಪ್ರಿನ್ಸಿಪಾಲ್ ನಿಮ್ಮಪ್ಪನಿಗೆ ತುಂಬ ಆಪ್ತರು.

ಹರೀಶ.....ಆದರೆ ವಿನಾಕಾರಣ ಕಾಲೇಜಿಗೆ ಹೋಗದೆ ಆಬ್ಸೆಂಟಾದ್ರೆ ನಾನಂತೂ ಪ್ರಿನ್ಸಿಪಾಲ್ ಹತ್ತಿರ ಬಂದು ನಿನ್ನ ಪರವಾಗಿ ಮಾತಾಡಲ್ಲ ನಿಧಿ ಅದನ್ನು ಮೊದಲೇ ಹೇಳಿ ಬಿಡ್ತೀನಿ.

ನೀತು ಕಿಚನ್ನಿನಿಂದ ಬರುತ್ತ........ರೀ ಕಾಲೇಜಿಗ್ಯಾಕಿವಳು ಚಕ್ಕರ್ ಹಾಕ್ತಾಳೆ ಹೇಳಿ ಹೋಗುವುದಕ್ಕೇ ಇಷ್ಟೊಂದು ಏಕ್ಸೈಟಾಗಿದ್ದಾಳಲ್ಲ. ನಾವು ರಾಜಸ್ಥಾನಕ್ಕೆ ಹೋಗುವ ಸಮಯದಲ್ಲಿ ನೀವೇ ಪ್ರಿನ್ಸಿಪಾಲ್ ಬಳಿಗೋಗಿ ಇವಳಿಗೆರಡು ವಾರ ರಜೆ ಕೊಡಿಸಿ ಸಾಕು ಕಾಲೇಜಿನ ವಿಷಯದಲ್ಲಿ ಮಿಕ್ಕಂತೆ ನಾನು ಅಪ್ಪ ಮಗಳ ಮಧ್ಯೂ ತಲೆ ಹಾಕಲ್ಲ.

ಅಶೋಕ......ಆಗಸ್ಟ್ 10ನೇ ತಾರೀಖಿನಂದು ರಾಜಸ್ಥಾನಕ್ಕೆ ತೆರಳಿ ಅಂತ ಆಚಾರ್ಯರು ಹೇಳಿದ್ರಲ್ಲ ಅಲ್ಲೇನೂ ತೊಂದರೆಯಿಲ್ಲ ತಾನೇ.

ನೀತು.......ಇಲ್ಲ ರಕ್ಷಕರು ಒಬ್ಬೊಬ್ಬರಾಗಿಯೇ ಸಂಸ್ಥಾನದ ಎಲ್ಲಾ ಶತ್ರುಗಳನ್ನೂ ಹಿಡಿದಿಡುತ್ತಿದ್ದಾರೆ ನಾವು ಹೋಗುವುದಕ್ಕೂ ಮುನ್ನ ಎಲ್ಲಾ ವಿರೋಧಿಗಳೂ ನಮ್ಮ ವಶದಲ್ಲಿರ್ತಾರೆ.

ಇವರ ಮಾತುಕತೆ ನಡೆಯುತ್ತಿದ್ದಾಗ ರವಿ ಜೋರಾಗಿ ನಗುವುದಕ್ಕೆ ಶುರುವಾಗಿದ್ದು ಅವನ ಮಡಿಲಲ್ಲಿ ಕುಳಿತಿದ್ದ ನಿಶಾ ಕೂಡ ಅವನ ಜೊತೆಗೂಡಿ ಕಿಲಕಿಲನೇ ನಗುತ್ತಿದ್ದರೆ ಅವರಿಬ್ಬರ ಪಕ್ಕದಲ್ಲಿ ಕುಳಿತಿದ್ದ ಶೀಲಾ ನಾಚಿಕೊಳ್ಳುತ್ತಿದ್ದಳು. ಅಲ್ಲಿದ್ದವರೆಲ್ಲರ ಗಮನ ಇವರ ಕಡೆ ತಿರುಗಿದ್ದು.....

ರಾಜೀವ್....ಏನಪ್ಪ ಮಾವ ಸೊಸೆ ಇಬ್ಬರೂ ತುಂಬ ನಗುತ್ತಿದ್ದೀರಲ್ಲ ಏನು ವಿಷಯವೆಂದು ಹೇಳಿದ್ರೆ ನಾವೂ ನಗ್ತೀವಪ್ಪ.

ರವಿ ನಗು ತಡೆದುಕೊಳ್ಳುತ್ತ.....ಏನಿಲ್ಲ ಅಂಕಲ್ ಶೀಲಾಳ ಹೊಟ್ಟೆ ಕಡೆ ಚಿನ್ನಿ ಕೈ ತೋರಿಸಿ ಬಲೂನ್ ರೀತಿ ಊದಿಕೊಂಡಿದೆ ಅಂತಿದ್ದಾಳೆ ಅದನ್ನು ಕೇಳಿ ನಗು ಬರ್ತಿದೆ.

ಸುಮ......ಚಿನ್ನಿ ಮರಿ ಶೀಲಾ ಮಮ್ಮನ ಹೊಟ್ಟೆಯೊಳಗೆ ನಿನ್ನ ಪುಟ್ಟ ತಮ್ಮ ಇದ್ದಾನೆ ಕಂದ.

ಶೀಲಾಳ ಹೊಟ್ಟೆಯನ್ನೇ ಪಿಳಿಪಿಳಿ ನೋಡಿದ ನಿಶಾ.......ಅತ್ತೆ ನನ್ನಿ ತಮ್ಮ ಲೆಲ್ಲಿ ನನ್ನಿ ಕಾಣಿಲ್ಲ.

ಸುಮ......ಈಗ ಕಾಣಲ್ಲ ಕಂದ ನಾಳೆ ಬರ್ತಾನೆ ನೋಡುವಿಯಂತೆ ನಡಿ ನಿನಗೆ ಸ್ನಾನ ಮಾಡಿಸ್ತೀನಿ ಇನ್ನೇನು ಪೂನಂ ಬರ್ತಾಳೆ ಅವಳ ಜೊತೆ ಆಟ ಆಡಬೇಕಲ್ಲವಾ.

ಸುಮಾಳ ಹೆಗಲೇರಿದ ನಿಶಾ........ಅತ್ತೆ ಪೂನಿ ಬಂತು ನಾನಿ ಆಟ ಆತೀನಿ ಕೋತಿ...ಪಕ್ಕಿ...ಕುಕ್ಕಿ...ಟಾಮಿ ಎಲ್ಲ ಆತಿ.

ಸುಮ.......ಆಯ್ತು ಕಂದ ಈಗ ಸ್ನಾನ ಮಾಡುವಂತೆ ಬಾ...ಎಂದೇಳಿ ಮಹಡಿಗೆ ಕರೆದೊಯ್ದಳು.

ರೇವತಿ....ನಿಧಿ ಕಾಲೇಜಿನಲ್ಲಿ ಹುಷಾರಾಗಿರಮ್ಮಅಲ್ಲೆಲ್ಲಾ ಅದೇನು ಸೀನಿಯರ್ ಹುಡುಗರು ಜೂನಿಯರ್ ಜೊತೆ ಮಾಡ್ತಾರಲ್ಲ...

ರೇವಂತ್......ರ್ಯಾಗಿಂಗ್ ಕಣಮ್ಮ...

ರೇವತಿ.....ಹೂಂ ಅದೇ ರ್ಯಾಗಿಂಗ್ ಮಾಡ್ತಾರಂತೆ ನೀನು ಅವರ ಹತ್ತಿರಕ್ಕೆಲ್ಲಾ ಹೋಗಬೇಡ ಕಣಮ್ಮ.

ಪ್ರೀತಿ.....ಅತ್ತೆ ಇವಳು ಹೋಗದಿದ್ದರೇನು ಅವರುಗಳೇ ಇವಳನ್ನು ಹುಡುಕಿಕೊಂಡು ಬರ್ತಾರೆ ಅಥವ ತಮ್ಮಲ್ಲಿಗೆ ಕರೆಸಿಕೊಳ್ತಾರೆ.

ಸುಭಾಷ್.......ನಿಧಿ ಮೊದಲ ದಿನ ನಿನ್ನನ್ನು ಕಾಲೇಜಿಗೆ ಬಿಡುವುದಕ್ಕೆ ನಾನೇ ಬರ್ತೀನಿ ಇಬ್ಬರೂ ಪೋಲಿಸ್ ಜೀಪಲ್ಲೇ ಹೋಗೋಣ ಆಗ ನಿನ್ನ ತಂಟೆಗ್ಯಾರೂ ಬರಲ್ಲ.

ವಿಕ್ರಂ.......ಇದೊಳ್ಳೆ ಐಡಿಯಾ ಕಣೋ ನಿಧಿ ನಿಮ್ಮಿಬ್ಬರ ಜೊತೆಗೆ ನಾನೂ ಬರ್ತೀನಿ ಪೋಲಿಸ್ ಅಧಿಕಾರಿ ಜೊತೆಗಿರುವುದನ್ನು ನೋಡಿ ಯಾರೂ ನಿನ್ನನ್ನು ಕೆಣಕುವುದಕ್ಕೆ ಬರೋದಿಲ್ಲ.

ನೀತು.......ಬೇಡ ಅಣ್ಣ ನಿಧಿ ಒಬ್ಬಳೇ ಹೋಗಲಿ ಕೆಲವೊಂದು ಕೆಲಸ ನಾವು ಯಾರ ಸಹಾಯವೂ ಇಲ್ಲದೆ ಮಾಡ್ಬೇಕು ಆಗಲೇ ಮುಂದೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಏದುರಿಸುವ ಧೈರ್ಯ ಬರುತ್ತೆ. ಕಾಲೇಜುಗಳಲ್ಲಿ ಇದೋಂದು ಸಾಮಾನ್ಯ ಸಮಸ್ಯೆ ನನ್ನ ಮಗಳು ಅಷ್ಟಕ್ಕೇ ಹೆದರಿ ನಿಮ್ಮಿಬ್ಬರನ್ನು ಜೊತೆಯಲ್ಲಿ ಕರೆದೊಯ್ಯುವುದಕ್ಕೆ ನನ್ನ ಸಮ್ಮತಿಯಿಲ್ಲ.

ಹರೀಶ........ಬೇಡ ಕಣೆ ವಿಕ್ರಂ—ಸುಭಾಷ್ ಹೇಳಿದ್ದು ಸರಿಯಾಗಿದೆ ಕಂದ ನೀನು ಚಿಕ್ಕಪ್ಪನ ಜೊತೆಯಲ್ಲೇ ಹೋಗಮ್ಮ ನಿಮ್ಮಮ್ಮ ಹೇಳಿದ ಮಾತು ಕೇಳ್ಬೇಡ.

ನೀತು.......ರೀ ಸುಮ್ನಿರಿ ನಿಧಿ ನೀನೊಬ್ಬಳೇ ಹೋಗು ಯಾರಾದ್ರೂ ನಿನ್ನನ್ನು ರ್ಯಾಗಿಂಗ್ ಮಾಡಿದರೆ ಮೊದಲ ಸಲ ಕ್ಷಮಿಸು ಅದನ್ನೇ ಮುಂದುವರಿಸಿದರೆ ಎರಡನೇ ಸಲ ಪ್ರಿನ್ಸಿಪಾಲ್ ಹತ್ತಿರ ಕಂಪ್ಲೇಂಟ್ ಮಾಡು. ಆಗಲೂ ನಿಲ್ಲಿಸದಿದ್ದರೆ ನಿನ್ನ ಮನಸ್ಸಿಗೇನು ತೋಚುತ್ತದೆ ಅದನ್ನೇ ಕೇಳಿ ಹಾಗೆಯೇ ಮಾಡಮ್ಮ.

ಹರೀಶ.....ಲೇ ನೀನು......

ನಿಧಿ.......ಅಮ್ಮ ಹೇಳಿದ್ದು ಸರಿಯಾಗಿದೆ ಅಪ್ಪ ನನಗೂ ಮೊದಲು ಚಿಕ್ಕಪ್ಪನ ಜೊತೆ ಅಥವ ರಕ್ಷಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಅಂತಿದ್ದೆ. ಆದರೀಗ ಅಮ್ಮ ಹೇಳಿದ್ದನ್ನು ಕೇಳಿ ನನಗೆಲ್ಲಾ ಅರ್ಥವಾಯಿತು ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಂಡರೆ ಅದರಲ್ಲಿರುವ ಆತ್ಮ ತೃಪ್ತಿಯೇ ಬೇರೆ. ನಾನೀ ರೀತಿಯ ಅನುಭವವೇ ಪಡೆದುಕೊಂಡಿಲ್ಲ ನೋಡೋಣ ಕಾಲೇಜಿನಲ್ಲಿ ರ್ಯಾಗಿಂಗ್ ಕೂಡ ನಡೆಯುತ್ತೋ ಇಲ್ಲವೋ ಅದೇ ಗೊತ್ತಿಲ್ಲವಲ್ಲ.

ಹರೀಶ.......ಆಯ್ತಮ್ಮ ಕಾಲೇಜಿನಲ್ಯಾವುದೇ ಸಮಸ್ಯೆಯಾದರೂ ನೀನು ನನಗೆ ಫೋನ್ ಮಾಡು ನಾನು ತಕ್ಷಣ ಬರ್ತೀನಿ.

ನೀತು......ರೀ ನಿಮ್ಮ ಮಗಳು ಕಾಲೇಜಿಗೆ ಹೋಗೋದು ಕಾರ್ಗಿಲ್ ಯುದ್ದಕ್ಕಲ್ಲ.

ಹರೀಶ......ನನ್ಮಗಳಿಗೆ ನಾನೇನಾದ್ರೂ ಹೇಳ್ತೀನಿ ನೀನು ನಮ್ಮಿಬ್ಬರ ಮಧ್ಯ ಬರ್ಬೇಡ.

ನೀತು....ಸರಿ ಏನಾದ್ರೂ ಮಾಡ್ಕೊಳ್ಳಿ.
* *
* *
ಅದೇ ದಿನ ರಾತ್ರಿ 12:30.......

ನಿದ್ದೆ ಮಾಡುತ್ತಿದ್ದ ಶೀಲಾಳಿಗೆ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ನೋವು ಪ್ರಾರಂಭಿಸಿದ್ದು ಒದ್ದಾಡುತ್ತಿದ್ದಾಗ ರವಿ ಎಚ್ಚರಗೊಂಡು ಹೆಂಡತಿಗೆ ಸಮಾಧಾನ ಮಾಡುತ್ತಿದ್ದನು.

ಶೀಲಾ......ರೀ ನೀತುಗೆ ಬರಲಿಕ್ಕೇಳಿ ಹೊಟ್ಟೆ ತುಂಬ ನೋಯ್ತಿದೆ.

ಫೋನ್ ರಿಂಗಾದ ಶಬ್ದಕ್ಕೆ ಎಚ್ಚರಗೊಂಡ ಹರೀಶ ಇಷ್ಟೊತ್ತಿನಲ್ಯಾಕೆ ರವಿ ಫೋನ್ ಮಾಡ್ತಿದ್ದಾನೆಂದು ರಿಸೀವ್ ಮಾಡುತ್ತ......

ಹರೀಶ......ಏನಾಯ್ತು ರವಿ ಇಷ್ಟೊತ್ತಿನಲ್ಲಿ ಫೋನ್ ಮಾಡಿರುವೆ ?

ರವಿ.......ಹರೀಶ ಬೇಗ ನೀತು ಜೊತೆ ಕೆಳಗೆ ಬಾ ಶೀಲಾಳಿಗೆ ತುಂಬ ಹೊಟ್ಟೆ ನೋವು ಆಗ್ತಿದೆ.

ಹರೀಶ ಫೋನಿಟ್ಟು........ನೀತು...ನೀತು...ಏದ್ದೇಳು ಬೇಗ...

ನೀತು......ಏನಾಯ್ತು ರೀ ಯಾಕೆ ಏಬ್ಬಿಸ್ತಿದ್ದೀರಾ ?

ಹರೀಶ.....ಶೀಲಾಳಿಗೆ ತುಂಬ ಹೊಟ್ಟೆ ನೋಯ್ತಿದೆಯಂತೆ ಬಹುಶಃ ಲೇಬರ್ ಪೇಯ್ನಿ ಪ್ರಾರಂಭವಾಗಿದೆ ಅನಿಸುತ್ತೆ ಈಗಲೇ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ನಡಿ.

ಹರೀಶ ನೈಟ್ ಪ್ಯಾಂಟಿನ ಮೇಲೆ ಶರ್ಟ್ ಧರಿಸಿ ಕೆಳಗೋಡಿದರೆ ನೀತು ಚೂಡಿ ಧರಿಸಿ ಏದುರು ರೂಮಿನ ಬಾಗಿಲು ಬಡಿದಳು.

ರೇವಂತ್ ಬಾಗಿಲು ತೆರೆಯುತ್ತ.....ಏನಾಯ್ತಮ್ಮ ನೀತು ?

ನೀತು.....ಅಣ್ಣ ಶೀಲಾಳಿಗೆ ಹೊಟ್ಟೆ ನೋವು ಪ್ರಾರಂಭವಾಗಿದ್ಯಂತೆ ಅತ್ತಿಗೆ ಚಿನ್ನಿ ಒಬ್ಬಳೇ ರೂಮಲ್ಲಿದ್ದಾಳೆ ನೀವವಳ ಜೊತೆಗಿರಿ ನಾವು ಶೀಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತೀವಿ.

ಪ್ರೀತಿ......ರೀ ನೀವು ಚಿನ್ನಿ ಜೊತೆಗಿರಿ ನಾನು ಕೆಳಗೋಗಿ ಬರ್ತೀನಿ.

ಇಬ್ಬರೂ ಕೆಳಗೆ ಬಂದಾಗ ರಾಜೀವ್—ರೇವತಿ ಕೂಡ ಶೀಲಾಳ ಹತ್ತಿರ ಬಂದಿದ್ದು ಅವಳಿಗೆ ವಿಪರೀತವಾಗಿ ಹೊಟ್ಟೆ ನೋಯುತ್ತಿತ್ತು.

ರೇವತಿ......ರವಿ ಬೇಗ ಆಸ್ಪತ್ರೆಗೆ ಕರೆದುಕೊಂಡೋಗೋಣ ಬಹುಶಃ ಲೇಬರ್ ಪೇಯ್ನಿ ಶುರುವಾಗಿರಬೇಕು.

ಪ್ರೀತಿ......ಅತ್ತೆ ಡಾಕ್ಟರ್ ಡೇಟ್ ಕೊಟ್ಟಿರುವುದು ತಿಂಗಳ ಕೊನೆಗೆ ಅಂತ ಆದರೆ ಮೂರು ವಾರಗಳ ಮುಂಚೆಯೇ ಪೇಯ್ನಿ....

ರೇವತಿ.......ಕೆಲವೊಮ್ಮೆ ಹಾಗಾಗುತ್ತೆ ಕಣಮ್ಮ ಬೇಗ ಹರೀಶ.

ಹರೀಶ ತಕ್ಷಣವೇ ಶೀಲಾಳನ್ನೆತ್ತಿಕೊಂಡು ಇನೋವಾ ಮಧ್ಯದ ಸೀಟ್ ಮೇಲೆ ಮಲಗಿಸಿದರೆ ಅವಳ ತಲೆಯನ್ನು ತಮ್ಮ ಮಡಿಲಿನಲ್ಲಿಟ್ಟು ಮಲಗಿಸಿಕೊಳ್ಳುತ್ತ ರೇವತಿಯೇ ಅವರೊಟ್ಟಿಗೆ ಹೊರಟರು. ಹರೀಶ ಮತ್ತು ರವಿ ಮುಂದೆ ಕುಳಿತು ಡ್ರೈವ್ ಹೊರಟರೆ ಅವರಿಂದೆ ನೀತು ಸಹ ರೇವಂತ್ ಜೊತೆ ತೆರಳಿದಳು. ಆಸ್ಪತ್ರೆಯಲ್ಲಿ ಶೀಲಾಳನ್ನು ಫುಲ್ ಚೆಕಪ್ ಮಾಡಿದ ವೈದ್ಯರು......

ಡಾಕ್ಟರ್......ಆಡ್ಮಿಷನ್ ಮಾಡ್ಬಿಡಿ ಸರ್ ಲೇಬರ್ ಪೇಯ್ನಿ ಈಗಲೇ ಪ್ರಾರಂಭವಾಗಿದೆ ಇವರನ್ನು ರೆಗ್ಯುಲರ್ ಚೆಕಪ್ ಮಾಡ್ತಿದ್ದ ಡಾಕ್ಟರಿಗೆ ನಾವು ಮೆಸೇಜ್ ಕಳಿಸಿದ್ದೀವಿ ಅವರಿನ್ನೇನು ಬರ್ತಿದ್ದಾರೆ.

ರೇವಂತ್ ಹೋಗಿ ಅಡ್ಮಿಷನ್ ಪ್ರಕ್ರಿಯೆಗಳನ್ನು ಮುಗಿಸಿ ಪೇಮೆಂಟ್ ಮಾಡಿ ಬರುವಷ್ಟರಲ್ಲಿ ವಿಷಯ ತಿಳಿದು ಅಶೋಕ...ರಜನಿ ಮತ್ತು ಸುಮ ಕೂಡ ಆಸ್ಪತ್ರೆಗೆ ಬಂದಿದ್ದರು.

ರಜನಿ.....ಏನೇ ಮೂರು ವಾರ ಮುಂಚೆಯೇ ಪೇಯ್ನಿ ಬಂದಿದ್ಯಲ್ಲ ಡಾಕ್ಟರ್ ಏನಂದರು ?

ನೀತು......ಶೀಲಾಳನ್ನು ಚೆಕಪ್ ಮಾಡ್ತಿದ್ದ ಡಾಕ್ಟರ್ ಬರ್ತಿದ್ದಾರಂತೆ ಅವರು ಬಂದ್ಮೇಲೆ ಗೊತ್ತಾಗುತ್ತೆ ಅಂತ ಅಡ್ಮಿಷನ್ ಮಾಡಿಸಿದ್ದಾರೆ.

ರೇವತಿ.....ರೇವಂತ್ ನೀನು ಸುಮ ಮನೆಗೆ ಹಿಂದಿರುಗಿ ನಾವೆಲ್ಲಾ ಇದ್ದೀವಲ್ಲ ಸುಮ ಮಕ್ಕಳನ್ನೂ ನೋಡಿಕೊಳ್ಬೇಕಲ್ಲ.
**

ಬೆಳಿಗ್ಗೆ 6:00 ಘಂಟೆ.....

ನಿಧಿ—ಗಿರೀಶ ಕೆಳಗೆ ಬಂದಾಗ....

ಸುಮ......ನಿಮ್ಮಿಬ್ಬರಿಗೂ ಕಂಗ್ರಾಟ್ಸ್ ನಮ್ಮ ಮನೆಗೊಬ್ಬ ಹೊಸ ಅತಿಥಿ ಬಂದಿದ್ದಾನೆ ನಿಮ್ಮ ತಮ್ಮ.

ಗಿರೀಶ.....ನನ್ನ ತಮ್ಮನಾ ? ಯಾರು ಅತ್ತೆ ? ಎಲ್ಲಿಂದ ಬಂದ ?

ಸುಮ.....ಬೆಳಿಗ್ಗೆ ಐದು ಘಂಟೆ ಸಮಯಕ್ಕೆ ಶೀಲಾಳಿಗೆ ಗಂಡು ಮಗು ಹುಟ್ಟಿದೆ ಕಣಪ್ಪ.

ನಿಧಿ ಸಂತೋಷದಿಂದ.....ಹೌದಾ ಅತ್ತೆ ಅವರೀಗೆಲ್ಲಿದ್ದಾರೆ ?

ರಾಜೀವ್.....ಮಧ್ಯರಾತ್ರಿ ಶೀಲಾಳಿಗೆ ಪೇಯ್ನಿ ಪ್ರಾರಂಭವಾದಾಗ ಆಸ್ಪತ್ರೆಗೆ ಕರೆದುಕೊಂಡು ಹೋದರು ಕಣಮ್ಮ.

ಸುಮ.....ಮುಂಜಾನೆ ಐದಕ್ಕೆ ಸರಿಯಾಗಿ ಪಾಪು ಹುಟ್ಟಿದೆ.

ರಶ್ಮಿ ಒಳಬರುತ್ತ.......ಆಂಟಿ ಯಾರಿಗೆ ಪಾಪು ಹುಟ್ಟಿದ್ದು ?

ಸುಮ......ನಿನ್ನ ಶೀಲಾ ಆಂಟಿಗೆ.

ನಯನ......ನಿಜವಾಗ್ಲೂ ದೊಡ್ಡಮ್ಮ......ಎಂದೇಳಿ ಶೀಲಾಳಿರುವ ರೂಮಿಗೋಡಿ ಹೊರಬಂದು......ಇಲ್ಯಾರೂ ಇಲ್ವಲ್ಲ ದೊಡ್ಡಮ್ಮ.

ರಾಜೀವ್.....ಆಸ್ಪೆತ್ರೆಯಲ್ಲಿದ್ದಾರೆ ಪುಟ್ಟಿ.

ದೃಷ್ಟಿ.......ತಾತ ನಾವೂ ಹೋಗಿ ನೋಡಬಹುದಾ ?

ಸುಮ......ಸಂಜೆ ನೀವು ಶಾಲಾ ಕಾಲೇಜು ಮುಗಿಸಿಕೊಂಡು ಬನ್ನಿ ಆಮೇಲೆ ನಿಮ್ಮಕ್ಕನ ಜೊತೆ ಹೋಗುವಿರಂತೆ ಈಗ ನಿಮ್ಮ ಜಾಗಿಂಗಿಗೆ ಹೊರಡಿ.

ದೃಪ್ಟಿ......ಮನೆಗೆ ತಮ್ಮ ಬಂದಿರುವ ಖುಷಿಯಲ್ಲಿ ಇವತ್ತು ನಾವೆಲ್ಲ ಜಾಗಿಂಗಿಗೆ ರಜೆ ಕೊಡ್ತೀವಿ.

ನಿಕಿತಾ—ನಮಿತಾ ಮನೆಯೊಳಗೆ ಬರುತ್ತ......

ನಮಿತ.....ಸುಮ ಆಂಟಿ ಇವತ್ತೇನಾದ್ರೂ ಸ್ವೀಟ್ ಮಾಡಿ ಮನೆಗೆ ಪುಟಾಣಿ ಪಾಪು ಬಂದಿದೆ.

ರಶ್ಮಿ.....ಲೇ ನಮಗೇ ಈಗ ಗೊತ್ತಾಗ್ತಿರೋದು ನಿನಗಾಗಲೇ ವಿಷಯ ಹೇಗೆ ಗೊತ್ತಾಯ್ತು.

ನಿಕಿತಾ......ಬೆಳಿಗ್ಗೆ ನಾಲ್ಕುವರೆಗೇ ಅನುಷ ಆಂಟಿ ಪ್ರತಾಪ್ ಅಂಕಲ್ ಜೊತೆ ಅಮ್ಮ ಸುಕನ್ಯಾ ಆಂಟಿ ಇಬ್ಬರೂ ಆಸ್ಪತ್ರೆಗೆ ಹೋದರು ಆಗ್ಲೇ ನಮಗೆ ಗೊತ್ತಾಯ್ತು.

ನಿಶಾ ಕೆಳಗಿಳಿದು ಓಡೋಡಿ ಬರುತ್ತ.....ಅತ್ತೆ...ಅತ್ತೆ ನನ್ನಿ ಕಾಂಪೇನ್ ಕೊಲು....ನನ್ನಿ ಮಮ್ಮ ಲೆಲ್ಲಿ ಹೋತು.

ಸುಮ ಅವಳನ್ನೆತ್ತಿಕೊಂಡು ಮುದ್ದಾಡಿ......ತಮ್ಮ ಎಲ್ಲಿ ? ತಮ್ಮ ಎಲ್ಲಿ ಅಂತ ಕೇಳ್ತಿದ್ಯಲ್ಲ ಚಿನ್ನಿ ನಿನ್ನ ತಮ್ಮ ಬಂದಿದ್ದಾನೆ ಕಂದ.

ಪ್ರೀತಿ ಹಿಂದೆಯೇ ಬಂದು......ಮಗು ಆಯ್ತಾ ? ಯಾವಾಗ ? ಶೀಲಾ ಮಗು ಇಬ್ಬರ ಆರೋಗ್ಯ ಹೇಗಿದೆ ?

ಸುಮ......ತಾಯಿ ಮಗು ಆರೋಗ್ಯವಾಗಿದ್ದಾರೆ ಸ್ವಲ್ಪ ಹೊತ್ತಿನಲ್ಲಿ ಇಬ್ಬರನ್ನೂ ವಾರ್ಡಿಗೆ ಶಿಫ್ಟ್ ಮಾಡ್ತಾರಂತೆ ಕಣೆ.

ನಿಶಾ........ನನ್ನಿ ತಮ್ಮ ಬಂತು ಲೆಲ್ಲಿ ಅತ್ತೆ ನಂಗಿ ಕಾಂತಿಲ್ಲ.

ರಾಜೀವ್......ನೀನು ಸ್ನಾನ ಮಾಡ್ಕೊಂಡು ನಿನ್ನ ತಮ್ಮನ ಹತ್ತಿರ ನೋಡಲು ಹೋಗುವಂತೆ ಈಗ ಕಾಂಪ್ಲಾನ್ ಕುಡಿ ಅಷ್ಟರಲ್ಲಿ ನಿನ್ನ ಅಮ್ಮನೂ ಬರ್ತಾಳೆ.

ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಶೀಲಾಳಿಗೆ ಗಂಡು ಮಗು ಜನಿಸಿದ್ದು ಮನೆಯಲ್ಲಿ ಮತ್ತೊಮ್ಮೆ ಹರ್ಷೋಲ್ಲಾಸದಂತ ವಾತಾವರಣ ನಿರ್ಮಾಣಗೊಂಡಿತ್ತು. ತಿಂಡಿ ತಿಂದು ರೆಡಿಯಾಗಿ ಪ್ರೀತಿ ಅತ್ತೆ....ಸುಮ ಅತ್ತೆ ಮತ್ತು ನಿಧಿ ಅಕ್ಕನ ಜೊತೆ ಪೂನಂ ಮತ್ತು ನಿಶಾ ಆಸ್ಪತ್ರೆಗೆ ಹೊರಟರು. ತೊಟ್ಟಿಲಿನಲ್ಲಿ ಮಲಗಿದ್ದ ಪುಟ್ಟ ತಮ್ಮನನ್ನು ನೋಡಿ ತುಂಬ ಖುಷಿಯಾದ ನಿಶಾ ಅಲ್ಲೇ ಕುಣಿದಾಡುತ್ತಿದ್ದರೆ ಅವಳ ಜೊತೆ ಪೂನಂ ಸೇರಿಕೊಂಡಳು.

ಅನುಷ......ತಮ್ಮ ಎಲ್ಲಿ ಅಂತ ಕೇಳ್ತಿದ್ಯಲ್ಲ ನೋಡಿಲ್ಲಿ ನಿನ್ನ ತಮ್ಮ ತಾಚಿ ಮಾಡ್ತಿದ್ದಾನೆ.

ನಿಶಾ........ಆಂಟಿ ನನ್ನಿ ತಮ್ಮ ತೊತೆ ಆಟ ಆತೀನಿ.

ಪ್ರೀತಿ.....ಅವನಿನ್ನೂ ತುಂಬ ಪುಟ್ಟವನು ಕಂದ ಸ್ವಲ್ಪ ದೊಡ್ಡವನಾಗಿ ಬೆಳೆಯಲಿ ಆಮೇಲೆ ಅಕ್ಕ...ಅಕ್ಕ...ಅಂತ ನಿನ್ನ ಹಿಂದೆಯೇ ಅವನೂ ಸುತ್ತಾಡ್ತಾ ಇರ್ತಾನೆ ಆಯ್ತಾ.

ಆತು ಎಂದೇಳಿ ಕುಣಿದಾಡುತ್ತಿದ್ದ ನಿಶಾ ಬಳಿಯ ಕೋಟ್ ಧರಿಸಿದ್ದ ಡಾಕ್ಟರ್ ರೂಮಿನೊಳಗೆ ಬಂದ ತಕ್ಷಣವೇ ಓಡೋಗಿ ಸುಮ ಅತ್ತೆಯ ಮಡಿಲನ್ನು ಸೇರಿಕೊಂಡಳು. ಶೀಲಾಳ ಮೂಲಕ ತನಗೆ ಹುಟ್ಟಿದ ಮಗನನ್ನು ನೋಡಿ ಹರೀಶನ ಕಣ್ಣಾಲಿಗಳು ತುಂಬಿ ಬಂದರೆ ನೀತು ಗಂಡನಿಗೆ ಸಮಾಧಾನ ಮಾಡಿ ಮಗುವಿಗೆ ಆಶೀರ್ವಧಿಸಿದಳು. ಮಗು ಜನಿಸಿರುವುದಕ್ಕೆ ಮನೆಯವರೆಲ್ಲರೂ ಸಂತೋಷಿಸುತ್ತಿದ್ದರೆ ತಮ್ಮ ಬಂದನೆಂದು ಎಲ್ಲರಿಗಿಂತ ತುಂಬ ಸಂತೋಷದಲ್ಲಿದ್ದ ನಿಶಾ ಕುಣಿದು ಕುಪ್ಪಳಿಸುತ್ತಿದ್ದು ಅವಳ ಖುಷಿಯನ್ನು ನೋಡಿ ಎಲ್ಲರಲ್ಲೂ ಸಂತೋಷ ಮನೆಮಾಡಿತ್ತು.
* *
* *
ಭಾನುವಾರ
ಜುಲೈ 14.......

ಶೀಲಾ ಮತ್ತು ಮಗುವನ್ನು ಶನಿವಾರದ ದಿನ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗಬಹುದೆಂದು ಡಾಕ್ಟರ್ ಅನುಮತಿ ನೀಡಿದ್ದರೆ ಶನಿವಾರದಂದು ಬೇಡ ಭಾನುವಾರ ಕರೆದೊಯ್ಯುವುದೆಂದು ರೇವತಿ ನಿರ್ಧರಿಸಿದರು. ಬೆಳಿಗ್ಗೆಯಿಂದ ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣವಿದ್ದು ನಿಶಾ ಸಹ ರೆಡಿಯಾಗಿ ತಮ್ಮ ಬರುವುದರ ಬಗ್ಗೆ ಎಲ್ಲರನ್ನೂ ಕೇಳುತ್ತಿದ್ದಳು. ಮನೆಯಿಂದಾಚೆ ಓಡಿದ ನಿಶಾ ಗೇಟಿನ ಬಳಿ ನಿಂತು ಕಾವಲಿರುವ ರಕ್ಷಕರಿಗೆ ಎಚ್ಚರಿಸುವ ರೀತಿಯಲ್ಲಿ ಬೆರಳು ತೋರಿಸಿ ಗೇಟ್ ತೆಗೆಯುವಂತೆ ಹೇಳುತ್ತಿದ್ದಳು. ನೀತು ಒಳಗಿಂದಲೇ ಮಗಳಾಟ ಗಮನಿಸುತ್ತಿದ್ದು ಹತ್ತಿರಕ್ಕೋಗಿ.....

ನೀತು......ಚಿನ್ನಿ ಇಲ್ಲೇನ್ಮಾಡ್ತಿದ್ದೀಯ ಕಂದ ಒಳಗೆ ನಡಿ.

ನಿಶಾ......ಮಮ್ಮ ನನ್ನಿ ತಮ್ಮ ಬಂತಿಲ್ಲ...

ನಿಧಿ.....ನಿನ್ನ ತಮ್ಮ ಬಂದಿಲ್ಲ ಅಂತ ನೀನು ಇವರಿಗೆ ಹೆದರಿಸ್ತಿದ್ದೀಯ ಈಗ ಬರ್ತಾನೆ ನಡಿ ಒಳಗಿರು.

ಅಷ್ಟರಲ್ಲೇ ಇನೋವಾ ಬಂದು ನಿಂತು ಅದರಿಂದ ರವಿ...ಹರೀಶ... ಶೀಲಾ ಕೆಳಗಿಳಿದರೆ ರೇವತಿ ಮಗುವನ್ನೆತ್ತಿಕೊಂಡು ಕೆಳಗಿಳಿದರು. ತಮ್ಮ ಬಂತು.....ತಮ್ಮ ಬಂತೆಂದು ಕಿರುಚಾಡಿದ ನಿಶಾ ಸುಮ್ಮನಿರು ಅಂತ ನೀತು ಹೇಳುತ್ತಿದ್ದರೂ ಕಿವಿಗೊಡದೆ ಕುಣಿದು ಕುಪ್ಪಳಿಸಿದಳು. ಪ್ರೀತಿ ಮತ್ತು ಸವಿತಾ ತಾಯಿ ಮಗುವಿಗೆ ಆರತಿ ಬೆಳಗಿ ಮನೆಯೊಳಗೆ ಬರಮಾಡಿಕೊಂಡರೆ ನಿಶಾ ಕೂಡ ಶೀಲಾಳ ಹಿಂದೆಯೇ ರೂಮನ್ನು ಸೇರಿ ತಮ್ಮನನ್ನು ನೋಡುತ್ತ ಶೀಲಾಳನ್ನು ಪ್ರಶ್ನಿಸುತ್ತಿದ್ದಳು.

ನೀತು......ನಿಮ್ಮ ಮಗಳಿಗೊಂದು ಆಟದ ಸಾಮಾನು ಸಿಕ್ಕಿದಂತಾಗಿ ಹೋಗಿದೆ ಕಣ್ರಿ.

ವಿಕ್ರಂ......ಪಾಪ ತಮ್ಮ ಎಲ್ಲಿ ಅಂತ ತುಂಬ ದಿನಗಳಿಂದಲೂ ನಮ್ಮ ಹತ್ತಿರವೆಲ್ಲ ಕೇಳ್ತಾ ಇದ್ದಳಲ್ಲ ಈಗ ತಮ್ಮ ಮನೆಗೆ ಬಂದಿರುವಾಗ ಚಿನ್ನಿ ಸುಮ್ಮನಿರ್ತಾಳ ಆಡಿಕೊಳ್ಳಲಿ ಬಿಡಮ್ಮ.

ರಕ್ಷಕನೊಬ್ಬ ಒಳಬಂದು......ಮಾತೆ ನಿಮ್ಮನ್ನು ಕೇಳಿಕೊಂಡು ಇಬ್ಬರು ಬಂದಿದ್ದಾರೆ.

ನೀತು ಜೊತೆ ಅನುಷ ಮತ್ತು ರೇವಂತ್ ಕೂಡ ಹೊರಗೆ ಬಂದಾಗ ಮನೆಗಾಗಮಿಸಿದ್ದ ಇಬ್ಬರು ನಮಸ್ಕರಿಸಿ.....

ವ್ಯಕ್ತಿ1......ಮೇಡಂ ನಾವು ಬೆಂಗಳೂರಿನ xxxx ಶೋರೂಮಿನಿಂದ ಬಂದಿದ್ದೀವಿ. ನೀವು ಬುಕ್ಕಿಂಗ್ ಮಾಡಿ ಕಾರುಗಳ ಡೆಲಿವರಿಯನ್ನು ನೀಡುವುದಕ್ಕೆ ತಂದಿದ್ದೀವಿ.

ವ್ಯಕ್ತಿ2.......ನೀವು ಹೇಳಿದ ರೀತಿ ಕಾರುಗಳನ್ನು ಟ್ರಕ್ಕಿನಲ್ಲೇ ನಾವು ತಂದಿದ್ದೀವಿ ಎಲ್ಲಿ ಇಳಿಸೋದು ಮೇಡಂ.

ನೀತು......ಎರಡೂ ಕಾರನ್ನೂ ಗೇಟಿನೊಳಗೇ ನಿಲ್ಲಿಸಿಬಿಡಿ ನೀವು ಗಿಫ್ಟ್ ಕವರ್ ತಂದಿದ್ದೀರಲ್ಲವಾ ?

ವ್ಯಕ್ತಿ1.....ಹೂಂ ಮೇಡಂ ತಂದಿದ್ದೀವಿ ಆದರೆ ಒಂದನ್ನು ಮಾತ್ರವೇ ತರುವುದಕ್ಕೆ ಹೇಳಿದ್ದಲ್ಲವಾ.

ನೀತು.....ಹೌದು ಬಿಳಿಯ ಬಣ್ಣದ ಕಾರಿಗೆ ಗಿಫ್ಟ್ ಕವರ್ ಹಾಕ್ಬಿಡಿ.

ವ್ಯಕ್ತಿಗಳಿಬ್ಬರೂ ಸರಿಯೆಂದು ತಮ್ಮ ಕೆಲಸದಲ್ಲಿ ತೊಡಗಿಕೊಂಡರು.

ಅನುಷ.......ಅಕ್ಕ ಹೊಸ ಕಾರು ಈಗ್ಯಾರಿಗೆ ಅಕ್ಕ ?

ರೇವಂತ್.....ಈಗಾಗಲೇ ನನ್ನದು ಅಣ್ಣನದ್ದು ಕಾರುಗಳೂ ಬಂದಿವೆ ಎಲ್ಲರಿಗೂ ಸಾಕಾಗುವಷ್ಟು ಕಾರುಗಳಿರುವಾಗ ಹೊಸದಾಗ್ಯಾಕಮ್ಮ ತರಿಸಿದೆ ?

ನೀತು......ಅಣ್ಣ ಇದು ನನ್ನ ಹಿರಿಮಗಳಿಗೆ ತಾಯಿ ಕೊಡುತ್ತಿರುವ ಉಡುಗೊರೆ ನಾಳೆಯಿಂದ ಅವಳ ಕಾಲೇಜ್ ಪ್ರಾರಂಭವಾಗುತ್ತಲ್ಲವ ಅದಕ್ಕೆ ಅವಳಿಗೆಂದು ತರಿಸಿದ್ದು.

ಅನುಷ......ಅಕ್ಕಾ ವಾವ್...ರೇಂಜ್ ರೋವರ್ ಸೂಪರ್ ಅಕ್ಕ ಒಳ್ಳೆ ಸೆಲೆಕ್ಷನ್. ಇದರ ಶೋರೂಂ ನಮ್ಮೂರಿನಲ್ಲಿ ಇಲ್ವಲ್ಲ .

ನೀತು......ಅವರು ಹೇಳಿದ್ದು ಕೇಳಿಸಿಕೊಳ್ಳಲಿಲ್ವಾ ಬೆಂಗಳೂರಿನಿಂದ ಬಂದಿದ್ದೀವಿ ಅಂದಿದ್ದು. ನಾನೇ ಸುಭಾಷಿಗೆ ಫೋನ್ ಮಾಡಿ ಅಲ್ಲೇ ಬುಕಿಂಗ್ ಮಾಡಿಸಿದ್ದು.

ಎರಡು ಕಾರಗಳನ್ನೂ ಕೆಳಗಿಳಿಸಿ ಮನೆಯ ಗೇಟಿನೊಳಗೆ ನಿಲ್ಲಿಸಿದ ನಂತರ ಬಿಳಿಯ ಬಣ್ಣದಕ್ಕೆ ಗಿಫ್ಟ್ ಕವರ್ ಹಾಕಲಾಯಿತು.

ರೇವಂತ್.....ಎರಡೆರಡು ಯಾಕೆ ತರಿಸಿದೆ ನೀತು ಒಂದು ಮಾತ್ರ ಸಾಕಾಗಿತ್ತಲ್ಲವಾ ?

ನೀತು.....ಅಣ್ಣ ದೂರದ ಊರುಗಳಿಗೆ ಪ್ರಯಾಣಿಸಬೇಕಾದರೆ ಈ ರೀತಿಯ ಕಾರುಗಳಲ್ಲಿ ಹೋಗುವುದು ತುಂಬಾನೇ ಸೇಫ್ಟಿ ಜೊತೆಗೆ ತುಂಬ ಆರಾಮವಾಗಿರುತ್ತೆ. ಗಿರೀಶ ಮೊಬೈಲಿನಲ್ಲಿ ಈ ಕಂಪನಿಯ ಕಾರನ್ನು ನೋಡುತ್ತ ಅಕ್ಕನಿಗೆ ಇದನ್ನೇ ಗಿಫ್ಟ್ ಕೊಟ್ಟರೆ ಚೆನ್ನಾಗಿರುತ್ತೆ ಅಂತ ತೋರಿಸಿದ ನನಗೂ ಇಷ್ಟವಾಯಿತು ಅದಕ್ಕೆ ಕಪ್ಪು ಬಿಳುಪು ಎರಡೂ ಬಣ್ಣಗಳದ್ದನ್ನು ತರಿಸಿಬಿಟ್ಟೆ.

ಹರೀಶ ಹೊರಬರುತ್ತ.......ಏನಿದು ರೇವಂತ್ ಯಾರಿದ್ದೀ ಕಾರುಗಳು ಗಿಫ್ಟ್ ಕವರ್ ಬೇರೆ ಹಾಕಿಸಿದ್ದೀಯಲ್ಲ.

ನೀತು.....ರೀ ನಿಮ್ಮ ಹಿರಿಮಗಳು ಕಾಲೇಜಿಗೆ ಹೋಗುವದಕ್ಕೆ ನಾನೇ ಈ ಕಾರನ್ನು ತರಿಸಿದ್ದು ಗಿಫ್ಟ್ ನೀಡೋಣ ಅಂತ ಚೆನ್ನಾಗಿದೆಯಾ ?

ಹರೀಶ....ಚೆನ್ನಾಗಿದೆ ಒಳ್ಳೆಯ ಛಾಯ್ಸ್ ಅಂದಾಗೆ ಹೆಸರೇನು ?

ಅನುಷ....ಭಾವ ರೇಂಜ್ ರೋವರ್ ಕೋಟಿಗೂ ಮೀರಿ ಇವುಗಳ ಬೆಲೆ ಆದರೆ ಅಷ್ಟೇ ಕಂಫರ್ಟಬಲ್ ಆಗಿರುತ್ತೆ.

ನಿಶಾ ಓಲಾಡುತ್ತ ಹೊರಬಂದು ಅಪ್ಪನ ಕಾಲಿಗೆ ಜೋತು ಬೀಳುತ್ತ ಮುಖ ಸಪ್ಪಗೆ ಮಾಡಿಕೊಂಡರೆ ಮಗಳನ್ನೆತ್ತಿಕೊಂಡ ಹರೀಶ..... ಯಾಕೆ ನನ್ನ ಕಂದ ಇಷ್ಟೊಂದು ಸಪ್ಪಗಿದ್ದಾಳಲ್ಲ.

ನಿಶಾ......ತಮ್ಮ ತಾಚಿ ಮಾತು ಪಪ್ಪ ನನ್ನಿ ತೊತೆ ಆಟ ಆಲಿಲ್ಲ.

ಹರೀಶ.....ಅವನಿನ್ನೂ ತುಂಬ ಪುಟ್ಟವನಲ್ಲವಾ ಕಂದ ಇನ್ನು ಸ್ವಲ್ಪ ದಿನಗಳಾಗಲಿ ಆಮೇಲೆ ನಿನ್ಜೊತೆ ಆಟ ಆಡ್ತಾನೆ. ಇಲ್ನೋಡು ಮಮ್ಮ ನಿನಗೆ ಹೊಸ ಕಾರು ತರಿಸಿದೆ.

ಕವರ್ ಹಾಕಲಾಗಿದ್ದ ಕಾರನ್ನು ನೋಡಿದ ನಿಶಾ....ಪಪ್ಪ ಕಾಲ್ ಲೆಲ್ಲಿ

ನೀತು ಮಗಳನ್ನೆತ್ತಿಕೊಂಡು ಗಿಫ್ಟ್ ಕವರ್ ಹಾಕಿದ್ದ ಕಾರಿನ ಹಿಂದೆ ನಿಂತಿದ್ದ ಮತ್ತೊಂದು ಕಾರನ್ನು ತೋರಿಸಿ ಮುಂದಿನ ಸೀಟಿನ ಮೇಲೆ ಮಗಳನ್ನು ಕೂರಿಸಿದಳು. ಡೆಲಿವರಿ ನೀಡಲು ಬಂದಿದ್ದವರು ಕಾರಿನ ಬಗ್ಗೆ ಸಮಗ್ರ ಮಾಹಿತಿಗಳನ್ನೂ ನೀಡಿ ಏನೇ ಪ್ರಾಬ್ಲಂ ಬಂದರೂ ಫೋನ್ ಮಾಡಿ ನಾವೇ ಬಂದು ಸರ್ವೀಸ್ ಮಾಡಿಕೊಡ್ತೀವೆಂದು ಹೇಳಿದಾಗ ರೇವಂತ್ ಇಬ್ಬರಿಗೂ ಬಕ್ಷೀಸ್ ಕೊಟ್ಟು ಕಳುಹಿಸಿದನು. ತಮ್ಮ ತಂಗಿಯರ ಜೊತೆಯಲ್ಲಿ ಹೊರಗೆ ಹೋಗಿದ್ದ ನಿಧಿ ಮನೆಗೆ ಹಿಂದಿರುಗಿದಾಗ

ರಶ್ಮಿ......ಮಮ್ಮ ಹೊಸ ಕಾರು ತರಿಸಿದ್ದೀರಾ ಸೂಪರಾಗಿದೆ.

ಗಿರೀಶ.....ಅಮ್ಮ ನಾನಂದು ತೋರಿಸಿದ್ದ ಮಾಡೆಲ್ಲಿನ ಕಾರೇ ಅಲ್ವಾ ಆಗಲೇ ಬುಕಿಂಗ್ ಮಾಡಿ ತರಿಸಿದ್ದೀರಲ್ಲ.

ನೀತು.....ಮತ್ತಿನ್ನೇನು ಅಕ್ಕನಿಗೆ ಇದೇ ಕಾರು ಚೆನ್ನಾಗಿರುತ್ತೆಂದು ತಮ್ಮ ಹೇಳಿರುವಾಗ ಅಮ್ಮನಾಗಿ ನಾನು ತರಿಸದಿದ್ದರೆ ಸರಿಯಾ.

ದೃಷ್ಟಿ.....ಅತ್ತೆ ರೇಂಜ್ ರೋವರ್ ಇದನ್ನು ಟಿವಿಯಲ್ಲಿ ನೋಡಿದ್ದೆ ಈಗ ನಮ್ಮೆನೆಯಲ್ಲೇ ನಿಂತಿದೆ.

ನಿಧಿ......ಅಮ್ಮ ಇದು ತುಂಬ ದುಬಾರಿ ಕಾರಲ್ಲವಾ ಇದೆಲ್ಲ ನನಗೆ ಯಾಕಮ್ಮ ಬೇಕಾಗಿತ್ತು.

ಹರೀಶ......ಅಪ್ಪ ಅಮ್ಮ ಮತ್ತು ದೊಡ್ಡವರು ಪ್ರೀತಿಯಿಂದ ನಿನಗೆ ಯಾವುದೇ ಕಾಣಿಕೆ ಕೊಟ್ಟರೂ ಬೇಡ ಅನ್ನಬಾರದು ಕಣಮ್ಮ ನಿಧಿ.

ಅನುಷ....ಈ ಕಾರು ನಿನಗಲ್ಲ ನಿನ್ನ ಕಾರು ಗಿಫ್ಟ್ ಪ್ಯಾಕಾಗಿದೆಯಲ್ಲ ಅದು ನೀನೇ ಓಪನ್ ಮಾಡು ಈ ದಾರ ಏಳಿ.

ಆಂಟಿ ಹೇಳುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದ ನಿಶಾ ಗುಡುಗುಡುನೇ ತಾನೇ ಫಸ್ಟ್ ಓಡೋಗಿ ತನ್ನ ಕೈಗೆ ಸಿಕ್ಕಿದ ದಾರವನ್ನಿಡಿದೆಳೆದರೂ ಕವರ್ ಸ್ವಲ್ಪವೂ ಸರಿಯಲಿಲ್ಲ.

ನಿಶಾ....ಆಂಟಿ ಬತ್ತಿಲ್ಲ...

ಹರೀಶ ಮಗಳನ್ನೆತ್ತಿಕೊಂಡು ತಾನೇ ಅವಳಿಂದ ದಾರವನ್ನೆಳೆಸಿದಾಗ ಬಿಳಿಯ ಬಣ್ಣದ ರೇಂಜ್ ರೋವರ್ ನೋಡಿ ಮನೆಯ ಮಕ್ಕಳೆಲ್ಲಾ ಕುಣಿದಾಡಿದರೆ ನಿಶಾ ಬಾನೆಟ್ ಮೇಲೆ ನಿಂತು ಕಿರುಚಾಡುತ್ತಿದ್ದಳು.

ನಿಕಿತಾ......ಅಕ್ಕ ನಿಮ್ಮ ಕಾರು ಸೂಪರಾಗಿದೆ.

ನಿಧಿ.....ಥಾಂಕ್ಸ್ ನಿಕ್ಕಿ ಅಮ್ಮ ತುಂಬ ಥಾಂಕ್ಸ್.....ಎಂದೇಳಿ ಅಮ್ಮನ ಬಳಿಬಂದು ತಬ್ಬಿಕೊಂಡಳು.

ನೀತು....ಅಮ್ಮನಿಗೇ ಮಕ್ಕಳು ಥಾಂಕ್ಸ್ ಹೇಳ್ತಾರಾ ಇದು ನಿನ್ನ ತಮ್ಮ
ಗಿರೀಶನ ಆಯ್ಕೆ ಇದೇ ಅಕ್ಕನಿಗೆ ಬೆಸ್ಟ್ ಅಂತ ತೋರಿಸಿದ.

ನಿಧಿ ತಮ್ಮನನ್ನೂ ತಬ್ಬಿಕೊಂಡು ಎಲ್ಲಾ ತಮ್ಮ ತಂಗಿಯರ ಜೊತೆಗೆ ಒಂದು ರೌಂಡಿಗೆ ಹೊರಟಾಗ.....

ಅಶೋಕ......ಮನೆಯಲ್ಲೀಗ 10 ಕಾರುಗಳಾಗಿವೆ ಜೊತೆಗೆ ನಮ್ಮ ರಕ್ಷಕರ ನಾಲ್ಕು ಜೀಪುಗಳೂ ಇವೆ. ಇಡೀ ಬೀದಿಯಲ್ಲಿ ನಮ್ಮನೇ ಕಿರುಗಳೇ ನಿಂತಿದ್ದರೆ ಪಾಪ ಉಳಿದ ಮನೆಯವರೆಲ್ಲಿ ನಿಲ್ಲಿಸ್ತಾರೆ.

ಸುಮ.......ಹೌದು ಅಶೋಕ್ ನೀವು ಹೇಳ್ತಿರೋದು ಸರಿಯಾಗಿದೆ ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದು.

ರವಿ......ಅದಕ್ಕೂ ಪರಿಹಾರ ಕಂಡುಕೊಂಡಾಗಿದೆ ಸುಮ ಏದುರಿನ ಖಾಲಿ ಸೈಟ್ ಮಾರಾಟಕ್ಕಿದೆ ಅದನ್ನು ಖರೀಧಿಸಲು ನಾನು ವಿಕ್ರಂ ಮಾತುಕತೆ ಆಡಿಕೊಂಡು ಬಂದಿದ್ದೀವಿ.

ರಾಜೀವ್.....ಅದನ್ನು ಖರೀಧಿಸಿ ಅಲ್ಲೇನು ಮಾಡೋದು ಅಂತ.

ವಿಕ್ರಂ......ಅಪ್ಪ ಆ ಸೈಟಿನಲ್ಲಿ ಒಳ್ಳೆಯ ಪಾರ್ಕಿಂಗ್ ವ್ಯವಸ್ಥೆ ಮಾಡಿಸಿ ಜೊತೆಗೆ ಕಾರನ್ನು ಸರ್ವೀಸ್ ಮಾಡಲು ಬೇಕಾಗಿರುವ ವ್ಯವಸ್ಥೆಗಳು ಇರುವಂತೆ ಸುಸಜ್ಜಿತವಾದ ಪಾರ್ಕಿಂಗ್ ಕಟ್ಟಿಸೋಣ ಅಂತ.

ರವಿ.....ಬುಧವಾರ ರಿಜಿಸ್ಟ್ರೇಷನ್ ಇದೆ ಶುಕ್ರವಾರದಿಂದಲೇ ಅಲ್ಲಿನ ಕೆಲಸ ಪ್ರಾರಂಭವಾಗುತ್ತೆ.

ರೇವತಿ......ಈಗ ಬೇಡ ಮಗುವಿಗೆ 15 ದಿನ ತುಂಬಿದ ನಂತರವೇ ನೀವಲ್ಲಿ ಕೆಲಸ ಶುರು ಮಾಡ್ಬೇಕು.

ನೀತು....ಆಯ್ತಮ್ಮ ಹಾಗೇ ಮಾಡೋಣ.
* *

4 comments:

  1. Mind-blowing story please continue the next part please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  2. Please continue the next part please today 2, 3 part upload mada ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  3. ನನಗ ಸ್ಟೋರಿ ಇಷ್ಟ ಆಯಿತು ರೀ
    ಅವು ಸ್ಟೋರಿ part continue ಮಾಡ ರೀ ಪ್ಲೀಸ್
    I am a full impressive
    Please continue story today post madari
    I am waiting pls 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  4. Sir innu nivu story upload madilliri sir please story upload madilliri please today bega bega upload madari sir please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete