ಗೋವಾದಿಂದ ಹೊರಟು ಕರ್ನಾಟಕದ ಬಾರ್ಡರ್ ಸಿಗುವ ಮುಂಚೆಯೇ ಒಂದು ಹೋಟಿಲಿನ ಹತ್ತಿರ ಅಶೋಕನಿಗೆ ಕಾರು ನಿಲ್ಲಿಸುವಂತೇಳಿದ ನೀತು ಎಲ್ಲರನ್ನು ಕರೆದುಕೊಂಡು ಕಾಫಿ ಕುಡಿದು ಸ್ವಲ್ಪ ರಿಲ್ಯಾಕ್ಸ್ ಆಗೋಣವೆಂದು ಒಳಹೊಕ್ಕಳು. ನೀತುಳನ್ನು ಹೊರಗೇ ನಿಲ್ಲಿಸಿಕೊಂಡ ರಜನಿ ಮುಂದೇನು......?
ನೀತು.......ಆ ಹಣದ ಬ್ಯಾಗುಗಳು ಎಸ್.ಯು.ವಿ ಹಿಂದಿನ ಸೀಟ್ ಕೆಳಗಿದೆ ನಾವು ಬಾರ್ಡರ್ ಚೆಕ್ ಪೋಸ್ಟ್ ಬಳಿ ತಲುಪಿದಾಗ ಅವರು ಖಂಡಿತವಾಗಿ ಲಗೇಜುಗಳನ್ನು ಚೆಕಿಂಗ್ ಮಾಡುತ್ತಾರೆ.
ರಜನಿ......ಈಗೇನೇ ಮಾಡುವುದು ನನಗೆ ನಿನಗೆ ಬಿಟ್ಟರೆ ಹಣದ ವಿಷಯ ಯಾರಿಗೂ ಗೊತ್ತಿಲ್ಲ .
ನೀತು......ಅದನ್ನೆಲ್ಲಾ ನಾನಾಗಲೇ ಯೋಚಿಸಿರುವೆ ನೀನು ಗಾಬರಿಯಾಗಬೇಡ. ನಾವಿಬ್ಬರು ಚಿನ್ನಿ ಜೊತೆ ಇಲ್ಲಿಂದ ಮುಂದೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುವುದು ಏಕೆಂದರೆ ಯಾವುದೇ ಸರ್ಕಾರಿ ಬಸ್ಸನ್ನು ಚೆಕ್ ಪೋಸ್ಟಿನ ಸಿಬ್ಬಂದಿಗಳು ಚೆಕಿಂಗ್ ಮಾಡುವುದಿಲ್ಲ . ಅದಕ್ಕಿಂತಲೂ ನಮಗೆ ಅನುಕೂಲಕರವಾಗಿದ್ದು ನಾವಿಬ್ಬರು ಮಹಿಳೆಯರು ಜೊತೆಗೆ ಒಂದು ವರ್ಷದ ಪುಟ್ಟ ಮಗಳೂ ಇರುತ್ತಾಳಲ್ಲ ಯಾರಿಗೂ ನಮ್ಮಿಬ್ಬರ ಬಗ್ಗೆ ಅನುಮಾನ ಬರುವುದಕ್ಕೆ ಸಾಧ್ಯವೇ ಇಲ್ಲ .
ರಜನಿ.......ಐಡಿಯಾ ತುಂಬ ಚೆನ್ನಾಗಿದೆ ಆದರೆ ನಮ್ಮ ಮನೆಯವರಿಗೆಲ್ಲಾ ಏನೆಂದು ಹೇಳಿ ಒಪ್ಪಿಸುವುದು.
ನೀತು.......ನೀನು ಒಳಗೆ ಹೋಗಿ ಹರೀಶ ಮತ್ತು ಅಶೋಕ ಇಬ್ಬರನ್ನು ಮಾತ್ರ ಕರೆದುಕೊಂಡು ಬಾ ಜೊತೆಗೆ ಚಿನ್ನಿಯನ್ನೂ ಎತ್ತಿಕೊಂಡು ಬಾ ಮಿಕ್ಕಿದ್ದು ನಾನು ನಿಭಾಯಿಸುವೆ.
ರಜನಿ ಹೋಟೆಲ್ಲಿನಿಂದ ನಿಶಾಳನ್ನೆತ್ತಿಕೊಂಡು ಹರೀಶ ಮತ್ತು ಅಶೋಕರ ಜೊತೆ ಹೊರ ಬಂದಾಗ......
ನೀತು..........ನೀವಿಬ್ಬರೂ ಈಗ ನಮಗ್ಯಾವ ಪ್ರಶ್ನೆಯನ್ನೂ ಕೇಳಬೇಡಿ ಮನೆಗೆ ತಲುಪಿದಾಗ ಎಲ್ಲಾ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿಸುವೆ ಅಲ್ಲಿಯವೆರೆಗೇನೂ ಕೆದಕಲು ಹೋಗಬೇಡಿ. ಈಗ ನನ್ನನ್ನು ರಜನಿಯನ್ನು ಇಲ್ಲಿಂದ ಎರಡು ಕಿಮಿ.. ಹಿಂದೆ ಸಿಕ್ಕಿದ xxxx ಊರಿನ ಬಸ್ ಸ್ಟಾಂಡಿಗೆ ಡ್ರಾಪ್ ಮಾಡಿ ನೀವೆಲ್ಲರೂ xxxx ಊರಿನ ಬಸ್ ಸ್ಟಾಂಡಿಗೆ ತಲುಪಿ ನಾವು ನಿಮ್ಮೆಲ್ಲರನ್ನು ಅಲ್ಲಿಯೇ ಸೇರಿಕೊಳ್ಳುತ್ತೇವೆ.
ಅಶೋಕ ಮತ್ತು ಹರೀಶನಿಗೆ ತಲೆಬುಡ ಅರ್ಥವಾಗದಿದ್ದರೂ ನೀತು ಏನೇ ಮಾಡಿದರೂ ಒಳ್ಳೆಯದಾಗಿರುತ್ತೆ ಎಂಬುದು ತಿಳಿದಿದ್ದರಿಂದ ಮೂವರನ್ನು ಎಸ್.ಯು.ವಿಯಲ್ಲಿ ಹತ್ತಿಸಿಕೊಂಡ ಹರೀಶ ಹಿಂದೆ ತಿರುಗಿಸಿದನು. ನೀತು ಮತ್ತು ರಜನಿ ಕೆಳಗಿಳಿದು ಹಣ ತುಂಬಿರುವ ಬ್ಯಾಗುಗಳನ್ನೂ ತಮ್ಮೊಂದಿಗೆ ಎತ್ತಿಟ್ಟುಕೊಂಡರು. ನಿಶಾ ಅಮ್ಮನ ತೋಳಿನಲ್ಲಿ ಸೇರಿಕೊಂಡು ಅಪ್ಪನಿಗೆ ಟಾಟಾ ಮಾಡಿದಾಗ ನೀತು ಗಂಡನಿಗೆ ಹೊರಡುವಂತೆ ಸನ್ನೆ ಮಾಡಿ ಕಳಿಸಿದಳು. 10-15 ನಿಮಿಷಗಳ ನಂತರ ಅಲ್ಲಿಗೆ ಬಂದ ಕರ್ನಾಟಕದ ಕೆ.ಎಸ್.ಆರ್.ಟಿ.ಸಿ ಯ ಬಸ್ಸಿನೊಳಗೆ ಹತ್ತುವ ಮುನ್ನ ನೀತು ಕಂಡಕ್ಟರ್ ಜೊತೆ xxxx ಊರಿಗೆ ಹೋಗಬೇಕು ಎಂದು ಕೇಳಿದಳು.
ಕಂಡಕ್ಟರ್.......ಬನ್ನಿ ಮೇಡಂ ನಮ್ಮ ಬಸ್ಸು ಅದೇ ಊರಿನ ಮೇಲೆ ಹುಬ್ಬಳ್ಳಿಗೆ ಹೋಗುತ್ತಿದೆ.....ಎಂದೇಳಿ ಬ್ಯಾಗುಗಳನ್ನು ಒಳಗೆ ಸಾಗಿಸಲು ಸಹಾಯ ಮಾಡಿದನು.
ಇಡೀ ಬಸ್ಸಿನಲ್ಲಿ ಅರ್ಧದಷ್ಟು ಮಾತ್ರ ಜನರಿರುವುದನ್ನು ಗಮನಿಸಿ ನಿಟ್ಟುಸಿರನ್ನು ಬಿಟ್ಟ ನೀತು ಮೂವರು ಕೂರುವಂತ ಸೀಟಿನ ಕೆಳಗೆ ತಮ್ಮ ಬ್ಯಾಗುಗಳನ್ನು ತಳ್ಳಿ ಕುಳಿತಳು. ಅಷ್ಟೊತ್ತಿನವರೆಗೂ ಅಮ್ಮನ ತೋಳಲ್ಲೇ ಇದ್ದು ಸುತ್ತಮುತ್ತ ಗಮನಿಸುತ್ತಿದ್ದ ನಿಶಾ ಬಸ್ಸನೇರಿದ ನಂತರ ಕೆಳಗಿಳಿದು ಅದರೊಳಗಿನ ಅಪರಿಚತರಾದ ಪ್ರಯಾಣಿಕರನ್ನು ನೋಡುತ್ತ ನಿಂತಳು. ರಜನಿ ಟಿಕೆಟ್ ಪಡೆದು ಮಗಳನ್ನು ಕೂಗಿದಾಗ ನಿಶಾ ಎದುರುಗಡೆ ಸೀಟಿನಲ್ಲಿ ಕುಳಿತಿದ್ದ ಹೆಂಗಸರೊಬ್ಬ ಮಡಿಲಿನಲ್ಲಿ ಮಲಗಿರುವ ಪುಟ್ಟ ಮಗುವನ್ನು ನೋಡಿ ಮುಗುಳ್ನಗುತ್ತ ಮಮ್ಮ.......ಮಮ್ಮ......ಎಂದು ಕೂಗಿ ಮಗುವಿನತ್ತ ಬೆರಳು ತೋರಿಸಿ ನಗುತ್ತಿದ್ದಳು.
ಹರೀಶ ಹೆಂಡತಿ ಮಗಳು ಮತ್ತು ರಜನಿಯನ್ನು ಬಸ್ ಸ್ಟಾಂಡಿನಲ್ಲಿ ಬಿಟ್ಟು ಹೋಟೆಲ್ಲಿಗೆ ಮರಳಿ ಬಂದಾಗ ಶೀಲಾ....ನೀವೊಬ್ಬರೇ ಬಂದಿದ್ದೀರ ನೀತು....ರಜನಿ ಮತ್ತು ನನ್ನ ಚಿನ್ನಿ ಎಲ್ಲೆಂದು ಕೇಳಿದಳು.
ಹರೀಶ......ಈಗೇನೂ ಕೇಳಬೇಡ ನಿನ್ನ ಸ್ನೇಹಿತೆ ಅದೇನು ಮಾಡುತ್ತಿದ್ದಾಳೋ ನನಗಂತೂ ಅರ್ಥವಾಗುತ್ತಿಲ್ಲ ನಮ್ಮನ್ನು ಮುಂದಿನ xxxx ಊರಿಗೆ ತಲುಪಿ ನಾನಲ್ಲಿಗೆ ಬರುತ್ತೇನೆಂದೇಳಿ ಕಳಿಸಿದಳು ನಡೀರಿ ನಾವಿಲ್ಲಿಂದ ಹೊರಡೋಣ.
ಎಲ್ಲರ ಮನಸ್ಸಿನಲ್ಲೂ ಇದ್ದಕ್ಕಿದ್ದ ಹಾಗೆ ಏನೂ ಹೇಳದೆ ನೀತು ಮತ್ತು ರಜನಿ ಮಗಳ ಜೊತೆ ಎಲ್ಲಿಗೋದರು ಎಂಬ ಪ್ರಶ್ನೆಯಿದ್ದರೂ ಉತ್ತರಿಸುವವರು ಮಾತ್ರ ಯಾರೂ ಇರಲಿಲ್ಲ . ಅರ್ಧ ಘಂಟೆಯಲ್ಲೇ ಬಸ್ಸು ಎರಡು ರಾಜ್ಯದ ಚೆಕ್ ಪೋಸ್ಟನ್ನು ದಾಟುತ್ತಿರುವಾಗ ನೀತು ಕಣ್ಣಿಗೆ ತಮ್ಮೆರಡೂ ಕಾರುಗಳನ್ನು ಅಲ್ಲಿನ ಸಿಬ್ಬಂದಿಗಳು ಚೆಕಿಂಗ್ ಮಾಡುತ್ತಿರುವುದು ಕಾಣಿಸಿತು. ಕಾರಿನ ಮುಂಭಾಗದಲ್ಲಿ ನಿಂತಿದ್ದ ಹರೀಶ ಮತ್ತು ಶೀಲಾಳ ದೃಷ್ಟಿ ಕೂಡ ನೀತುವಿನ ಮೇಲೆ ಬಿದ್ದಾಗ ಶೀಲಾ ಗಂಡನ ಕಡೆ ಪ್ರಶ್ನಾರ್ಥಕವಾಗಿ ನೋಡಿದ್ದಕ್ಕವನು ನನಗೇನೂ ಗೊತ್ತಿಲ್ಲವೆಂದು ತಲೆಯಾಡಿಸಿದನು. ನೀತುವಿನ ಚಾಣಾಕ್ಷತನದಿಂದ ಯಾವುದೇ ರೀತಿ ಅಡೆತಡೆಗಳಿಲ್ಲದೇ ಕೋಟ್ಯಾಂತರ ರುಪಾಯಿ ಹಣವನ್ನು ಗೋವಾದಿಂದ ಕರ್ನಾಟಕದೊಳಗೆ ಸಾಗಿಸಿದ್ದರು.
ನಿಶಾ ಬಸ್ಸಿನಲ್ಲಿದ್ದ ಸಾಕಷ್ಟು ಮಂದಿ ಪ್ರಯಾಣಿಕರನ್ನು ಪರಿಚಯ ಮಾಡಿಕೊಂಡಿದ್ದರೆ ಅಕ್ಷರಶಃ ಗೊಂಬೆಯಂತೆ ಕಾಣಿಸುವ ನಿಶಾಳನ್ನು ಎಲ್ಲರೂ ಪ್ರೀತಿ ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ಎರಡು ಘಂಟೆ ಬಸ್ಸಿನ ಪ್ರಯಾಣವನ್ನು ಮುಗಿಸಿ xxxx ಊರಿನ ಸ್ಟಾಂಡನ್ನು ತಲುಪಿ ಕೆಳಗಿಳಿಯಲು ಬ್ಯಾಗನ್ನೆತ್ತಿಕೊಂಡು ನೀತು ಮಗಳನ್ನು ಬಾ ಎಂದು ಕರೆದಾಗ ನಿಶಾ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಟಾಟಾ ಮಾಡುತ್ತ ಅಮ್ಮನ ಬಳಿಗೋಡಿದಳು. ಬಸ್ಸಿನ ಕಂಡಕ್ಟರ್ ಸಹಾಯದಿಂದ ಎರಡು ಬ್ಯಾಗುಗಳನ್ನು ಕೆಳಗಿಳಿಸಿದ ನೀತು ಮಗಳನ್ನೆತ್ತಿಕೊಂಡು ಆವನಿಗೆ ಧನ್ಯವಾದಗಳನ್ನು ತಿಳಿಸಿ ನಿಶಾಳನ್ನೊಂದು ಬ್ಯಾಗಿನ ಮೇಲೆ ಕೂರಿಸಿ ಗಂಡನಿಗೆ ಫೋನಾಯಿಸಿದಳು.
ಹತ್ತು ನಿಮಿಷದ ನಂತರ ಅಶೋಕನಿದ್ದ ಎಸ್ಯುವಿ ಬರುತ್ತಿದ್ದಂತೆ ಅದರೊಳಗೇ ಬ್ಯಾಗುಗಳನ್ನಿಟ್ಟು ಮುಂದಿನ ಸೀಟಲ್ಲಿ ನೀತು ಕುಳಿತರೆ ನಿಶಾ ಹಿಂದಿನ ಸೀಟಿನಲ್ಲಿದ್ದ ಅಕ್ಕ ಅಣ್ಣಂದಿರ ಜೊತೆ ಸೇರಿಕೊಂಡಳು. ಅಶೋಕ ಡ್ರೈವ್ ಮಾಡುತ್ತ ಪಕ್ಕದಲ್ಲಿ ಕಣ್ಮುಚ್ಚಿಕೊಂಡು ಕುಳಿತಿದ್ದ ಹೆಂಡತಿಯ ಕಡೆ ಆಗಾಗ ನೋಡುತ್ತಿದ್ದರೂ ಸಹ ಅವಳಿಗೆ ಪ್ರಶ್ನಿಸುವ ಧೈರ್ಯ ಬರಲಿಲ್ಲ . ಇನೋವಾದೊಳಗೆ ಹತ್ತಿದ ರಜನಿಗೆ........
ಶೀಲಾ......ಏನೇ ಇದೆಲ್ಲಾ ನೀವಿಬ್ಬರೂ ಅಲ್ಲಿಂದ ಇಲ್ಲಿಯವರೆಗೆ ಬಸ್ಸಿನಲ್ಲೇಕೆ ಬಂದಿದ್ದು ? ಏನು ವಿಷಯ ?
ಹರೀಶ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಹಿಂದೆ ತಿರುಗಿದರೆ ಶೀಲಾ....ಅನುಷ ಮತ್ತು ಸುಕನ್ಯಾ ಎಲ್ಲರೂ ರಜನಿಯ ಕಡೆ ಧಿಟ್ಟಿಸಿ ನೋಡುತ್ತ ಉತ್ತರಕ್ಕಾಗಿ ಕಾಯುತ್ತಿದ್ದರು.
ರಜನಿ ಎಲ್ಲರತ್ತ ಕಣ್ಣಾಯಿಸಿ.......ನನಗೇನೂ ಗೊತ್ತಿಲ್ಲ ಕಣೇ ನೀತು ಇಲ್ಲಿಂದ ನಾವಿಬ್ಬರು ಬಸ್ಸಿನಲ್ಲಿಯೇ ಹೋಗೋಣ ಎಂದಳು ನಾನೂ ಸರಿಯೆಂದು ಅವಳೊಟ್ಟಿಗೆ ಹೊರಟೆ. ಅವಳೇಕೆ ಹಾಗೆ ಹೇಳಿದಳೋ ಅದೇ ಪ್ರಶ್ನೆ ನನ್ನ ತಲೆಯಲ್ಲೂ ಕೊರೆಯುತ್ತಿದೆ ಮನೆಗೆ ಹೋಗಿ ಕೇಳಿ ನೋಡೋಣ.
ಎಲ್ಲರಿಗೂ ರಜನಿಯ ಉತ್ತರದಿಂದ ನಿರಾಸೆಯಾದರೂ ಅವಳಿಗೂ ಏನು ವಿಷಯವೆಂದು ಗೊತ್ತಿಲ್ಲ ಎಂದು ಹೇಳಿದಾಗ ಸುಮ್ಮನಾದರು. ಮಧ್ಯಾಹ್ನ ಹೋಟೆಲ್ಲೊಂದರಲ್ಲಿ ಊಟಕ್ಕೆ ನಿಲ್ಲಿಸಿದಾಗ ಶೀಲಾ ತನ್ನನ್ನು ನೋಡಿ ಪ್ರಶ್ನಿಸುವ ಮುಂಚೆಯೇ ನೀತು.......ನಾವೇಕೆ ಬಸ್ಸಿನಲ್ಲಿ ಬಂದೆವು ? ಕಾರಣವೇನು ? ಇದೇ ತಾನೇ ನಿನ್ನ ಪ್ರಶ್ನೆ ಅದಕ್ಕೆಲ್ಲಾ ಮನೆ ತಲುಪಿದ ನಂತರ ಉತ್ತರಿಸುವೆ ಈಗ ಯಾವುದನ್ನೂ ಹೇಳುವ ಮೂಡ್ ನನಗಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಎಲ್ಲರ ಪ್ರಶ್ನೆಗೂ ಫುಲ್ ಸ್ಟಾಪ್ ಇಟ್ಟಳು.
ಎರಡೂ ಕಾರುಗಳೂ ರಾತ್ರಿ ಒಂಬತ್ತಕ್ಕೆ ಮನೆ ತಲುಪಿದಾಗ ನೀತು ಈ ರಾತ್ರಿ ಇಲ್ಲೇ ಉಳಿಯುವಂತೇಳಿ ಸುಕನ್ಯಾಳನ್ನು ತಮ್ಮ ಮನೆಯಲ್ಲೇ ಉಳಿಸಿಕೊಂಡಳು. ಮಾರನೇ ದಿನ ಶನಿವಾರವಾಗಿದ್ದು ಎಲ್ಲರ ಶಾಲಾ ಕಾಲೇಜಿಗೂ ರಜೆಯಿದ್ದ ಕಾರಣ ತುಂಬ ತಡವಾಗಿ ಎಚ್ಚರಗೊಂಡರು. ಗಿರಿಗೆ ರಾತ್ರಿ ಬಂದಾಗಲೇ ಫೋನ್ ಮಾಡಿದ್ದ ನೀತು ಹಾಲಿನ ಕ್ಯಾನನ್ನು ಬಾಗಿಲ ಮುಂದಿಟ್ಟು ಹೋಗುವಂತೆ ಹೇಳಿದ್ದು ಅವನೂ ಸಹ ಹಾಗೇ ಮಾಡಿದ್ದನು. ಸುಕನ್ಯ ಹೆಂಗಸರಲ್ಲಿ ಎಲ್ಲರಿಗಿಂತಲೂ ಮುಂಚೆ ಎಚ್ಚರಗೊಂಡು ಫ್ರೆಶಾಗಿ ಹೊರಗಿಟ್ಟಿದ್ದ ಹಾಲು ಕಾಯಿಸಿ ಕಾಫಿ ಮಾಡುವಷ್ಟರಲ್ಲಿ ಹರೀಶ ಮತ್ತು ಅಶೋಕನೂ ಫ್ರೆಶಾಗಿದ್ದರು.
ರಜನಿ....ಶೀಲಾ...ಅನುಷ ಕೂಡ ಎಚ್ಚರಗೊಂಡಿದ್ದು ಒಬ್ಬರ ನಂತರ ಒಬ್ಬರು ಫ್ರೆಶಾಗಿ ಬಂದರೆ ಸುಕನ್ಯಾ ಎಲ್ಲರಿಗೂ ಕಾಫಿ ತಂದಿಟ್ಟಳು. ಹರೀಶ ಕಾಫಿ ಕುಡಿಯುತ್ತ ಪ್ರತಾಪನಿಗೆ ಫೋನ್ ಮಾಡಿ ತಾವು ಮನೆಗೆ ಬಂದಿರುವ ವಿಷಯವನ್ನು ತಿಳಿಸಿ ಅವನಿಗೆ ಬರುವಾಗ ಎಲ್ಲರಿಗೂ ತಿಂಡಿಯ ಪಾರ್ಸಲ್ ತರುವಂತೆ ಹೇಳಿದನು. ಸ್ವೆಟರ್ ಟೋಪಿ ಕಾಲುಗಳಿಗೆ ಸಾಕ್ಸ್ ಹಾಕಿಕೊಂಡಿದ್ದರೂ ಬೆಳಗಿನ ಚಳಿಗೆ ಗುಬ್ಬಚ್ಚಿಯಂತೆ ಅಮ್ಮನನ್ನು ಸೇರಿಕೊಂಡು ಮಲಗಿದ್ದ ನಿಶಾಳನ್ನ ತನ್ನ ಎದೆಗೆ ಅವುಚಿಕೊಂಡ ನೀತು ಇನ್ನೂ ನಿದ್ರಿಸುತ್ತಿದ್ದಳು. ಪ್ರತಾಪ್ ತಿಂಡಿ ತರುವಷ್ಟರಲ್ಲಿ ನೀತು ಮತ್ತು ನಿಶಾಳನ್ನು ಬಿಟ್ಟು ಮಿಕ್ಕವರೆಲ್ಲರೂ ಎಚ್ಚರಗೊಂಡು ಸ್ನಾನ ಮುಗಿಸಿ ರೆಡಿಯಾಗಿದ್ದರು. ಶೀಲಾ ತನ್ನ ಗೆಳತಿ ಮಗಳಿಬ್ಬರನ್ನು ಏಬ್ಬಿಸುವ ಪ್ರಯತ್ನ ಮಾಡಿದರೂ ಸಹ ಇಬ್ಬರೂ ಜಪ್ಪಯ್ಯಾ ಎಂದರೂ ಸಹ ಜಗ್ಗಾಡಲಿಲ್ಲ .
ಸುಕನ್ಯ ತಿಂಡಿಯಾದ ನಂತರ ಮನೆಗೆ ಹೊರಡುವ ಬಗ್ಗೆ ಹೇಳುತ್ತಿದ್ದಾಗ ಹೊರಗೆ ಬಂದ ನೀತು.......ಸ್ವಲ್ಪ ತಡಿಯೇ ನಾನೇ ರೆಡಿಯಾಗಿ ನಿನ್ನನ್ನು ಮನೆಗೆ ಡ್ರಾಪ್ ಮಾಡುವೆ ಜೊತೆಗೆ ಗೋವಾದಲ್ಲಿ ಖರೀಧಿಸಿರುವ ಕೆಲವೊಂದು ಬಟ್ಟೆಗಳು ನಮ್ಮ ಸೂಟಕೇಸಿನಲ್ಲೂ ಇದೆ ಅದನ್ನು ತೆಗೆದಿಟ್ಟುಕೋ ಎಂದವಳನ್ನು ರೂಮಿಗೆ ಕಳಿಸಿ ತಾನು ಬಾತ್ರೂಂ ಸೇರಿಕೊಂಡಳು. ನಿಶಾಳನ್ನು ಏಬ್ಬಿಸಲು ಯಾರೂ ಬಾರದಿದ್ದ ಕಾರಣ ಬೆಳಗಿನ 10 ಘಂಟೆಯವರೆಗೂ ಆರಾಮವಾಗಿ ನಿದ್ರಿಸಿದ ನಂತರ ಎಚ್ಚರಗೊಂಡಳು.
ಸುಕನ್ಯಾಳನ್ನು ಮನೆಗೆ ಬಿಟ್ಟು ಬಂದ ನೀತು ಕಡೆ ಎಲ್ಲರೂ ಪ್ರಶ್ನಾರ್ಥಕವಾಗಿ ನೋಡಿದಾಗ ಮೂವರೂ ಮಕ್ಕಳಿಗೆ ನಿಶಾಳನ್ನು ಕರೆದುಕೊಂಡು ಹೊರಗೆ ಆಡುತ್ತಿರಿ ಎಂದು ಕಳಿಸಿ ರಜನಿಗೆ ಎರಡು ಬ್ಯಾಗುಗಳನ್ನು ತರುವಂತೇಳಿದಳು. ರಜನಿ ತಂದ ಬ್ಯಾಗನ್ನು ಅಶೋಕ ತೆರದಾಗ ಒಳಗಿರುವ 2000 ರದ ನೋಟಿನ ಕಂತೆ ಕಂತೆಗಳನ್ನು ನೋಡಿ ಎಲ್ಲರೂ ಶಾಕಾಗಿ ಹೋದರು.
ರಜನಿ......ಈ ಹಣವೆಲ್ಲಾ ನಮಗೆ ಗೋವಾದ ರಿಸಾರ್ಟಿನಲ್ಲಿ ಸತ್ತು ಬಿದ್ದಿದ್ದರಲ್ಲಾ ಆ ನೀಗ್ರೋಗಳ ಕಾಟೇಜ್ ಒಳಗೆ ಸಿಕ್ಕಿದ್ದು .
ಹರೀಶ.......ಮತ್ತೆ ಆಗಲೇ ಕೇಳಿದಾಗ ನನಗೇನೂ ಗೊತ್ತಿಲ್ಲ ಅನ್ನುತ್ತಿದ್ದೆ .
ರಜನಿ......ಆಗಿನ ಸಮಯ ಮತ್ತು ಸ್ಥಳ ಈ ವಿಷಯದ ಬಗ್ಗೆ ಮಾತನಾಡಲು ಸೂಕ್ತವಾಗಿರಲಿಲ್ಲ ಅದಕ್ಕಾಗಿ ಗೊತ್ತಿಲ್ಲವೆಂದು ಹೇಳಿದೆ. ಆ ಐವರು ನೀಗ್ರೋಗಳು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ದ್ರೋಹಿಗಳು ಅವರ ಬಳಿ ಡ್ರಗ್ಸ್....ಗನ್ಸ್ ಮತ್ತು ಬಾಂಬುಗಳಿದ್ದುದು ನಿಮಗೂ ಗೊತ್ತಿದೆಯಲ್ಲ .
ಶೀಲಾ......ನೀತು ಅವರ ಸಾವಿನ ಬಗ್ಗೆ ನಿನಗೇನಾದರೂ ಗೊತ್ತಿದೆಯಾ ?
ನೀತು ಕೂಲಾಗಿ.......ಸಾಯಿಸಿದ್ದೆ ನಾನು ನನಗೆ ಗೊತ್ತಿಲ್ಲದೆ ಮತ್ಯಾರಿಗೆ ತಾನೇ ಗೊತ್ತಿರುತ್ತದೆ.
ನೀತು ಹೇಳಿದ ಮಾತನ್ನು ಕೇಳಿ ಹರೀಶ....ಶೀಲಾ....ಅಶೋಕ ಮತ್ತು ಅನುಷ ತಮ್ಮ ಪಕ್ಕದಲ್ಲೇ ಬಾಂಬು ಬಿದ್ದಂತೆ ಬೆದರಿ ಎದ್ದು ನಿಂತರು.
ನೀತು.......ರಿಲ್ಯಾಕ್ಸ್ ಏನೂ ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ ಆರಾಮವಾಗಿ ಕುಳಿತಿರಿ ಈ ವಿಷಯದ ಬಗ್ಗೆ ನಮ್ಮ ಮೇಲೆ ಯಾರಿಗೂ ಸಹ ಅನುಮಾನವಿಲ್ಲ . ಈ ಹಣದ ಬ್ಯಾಗನ್ನು ಕಾರಿನಲ್ಲಿ ಸಾಗಿಸಿಕೊಂಡು ತಂದಿದ್ದರೆ ಬಾರ್ಡರ್ ಬಳಿಯ ಚೆಕ್ಕಿಂಗ್ ಅವರುಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ತುಂಬಾ ಕಷ್ಟ ಎಂಬುದು ತಿಳಿದಿದ್ದರಿಂದಲೇ ನಾನು ರಜನಿ ಬಸ್ಸಿನಲ್ಲಿ ಪ್ರಯಾಣಿಸಿ ಮುಂದಿನ ಊರು ತಲುಪಿದ್ದು .
ರಜನಿ.......ಆ ದಿನ ರಾತ್ರಿ ನಾನು ನೀತು ಇಬ್ಬರೂ ರೆಸಾರ್ಟಿನಲ್ಲಿ ತಿರುಗಾಡುತ್ತ ನೀಗ್ರೋಗಳ ಕಾಟೇಜಿನ ಬಳಿ ತಲುಪಿದೆವು. ಆಗವರು ಬಾಂಬುಗಳನ್ನು ಚೆಕ್ ಮಾಡಿ ಡ್ರಗ್ಸುಗಳನ್ನು ಪ್ಯಾಕ್ ಮಾಡುತ್ತಿರುವುದನ್ನು ನಾವು ನೋಡಿದೆವು.
ನೀತು......ಅದನ್ನು ನೋಡಿ ಇವರೆಲ್ಲರೂ ದೇಶದಲ್ಲಿ ಬಾಂಬ್ ಸ್ಪೋಟಿಸುವ ಸಂಚು ನಡೆಸುತ್ತಿದ್ದಾರೆಂದರಿತು ಹೇಗಾದರೂ ಸರಿ ತಡೆಯಲೇಬೇಕೆಂದು ನಿರ್ಧರಿಸಿದೆವು. ನಾವು ಆ ಸಮಯದಲ್ಲಿ ಪೋಲಿಸರಿಗೇನಾದರು ಫೋನ್ ಮಾಡಿದ್ದರೆ ಅದರ ಸುಳಿವು ಆ ದೇಶದ್ರೋಹಿಗಳಿಗೆ ಹೇಗಾದರೂ ತಿಳಿಯುತ್ತದೆ ಅದರಿಂದ ನಮ್ಮ ಕುಟುಂಬಕ್ಕೇ ಮುಂದೆ ತೊಂದರೆಯಾಗುತ್ತೆಂದು ಯೋಚಿಸಿದೆ. ಅದಕ್ಕಾಗಿ ಆ ನೀಗ್ರೋಗಳಲ್ಲಿ ಹೊರಗಡೆ ಕಾವಲಿಗೆ ನಿಂತಿದ್ದವನ ಮೂಲಕ ಮಿಕ್ಕವರನ್ನೂ ಫ್ರೆಂಡ್ಸ್ ಮಾಡಿಕೊಂಡು ಮಾತನಾಡುತ್ತ ಸ್ವಾಮೀಜಿಗಳು ನನಗೆ ನೀಡಿರುವ ಕಾರ್ಕೋಟಕ ವಿಷವನ್ನು ಉಪಾಯದಿಂದ ಅವರು ಕುಡಿಯುತ್ತಿದ್ದ ವಿಸ್ಕಿಯೊಳಗೆ ಬೆರೆಸಿ ಈ ಲೋಕದಿಂದ ಅವರೆಲ್ಲರಿಗೂ ಮುಕ್ತಿ ನೀಡಿದೆ.
ನೀತುವಿನ ತರ್ಕಗಳನ್ನು ಕೇಳಿ ಯಾರಿಗೂ ಏನು ಹೇಳುವುದೆಂದೇ ಹೊಳೆಯದೆ ಕುಳಿತಿದ್ದಾಗ.......
ಅನುಷ.......ಅಕ್ಕ ನೀವು ಮಾಡಿದ್ದೇ ಸರಿ ನಮ್ಮ ದೇಶದೊಳಗೆ ವಿಧ್ವಂಸಕ ಕೃತ್ಯವೆಸಗಲು ಬಂದಿದ್ದ ಐವರು ಪಾಪಿಗಳನ್ನು ಸಾಯಿಸಿ ಒಳ್ಳೆಯದೇ ಮಾಡಿರುವಿರಿ. ಹೆಣ್ಣು ಅಭಲೆಯಲ್ಲ ಸರ್ವಶಕ್ತೆಯಾದ ಆದಿಶಕ್ತಿಯ ಅವತಾರವೇ ಕಲಿಯುಗದ ಹೆಣ್ಣೆಂದು ನೀವು ನಿರೂಪಿಸಿದ್ದೀರಿ. ನನಗೆ ನಿಮ್ಮ ತಂಗಿ ಎಂದು ಹೇಳಿಕೊಳ್ಳಲು ತುಂಬ ತುಂಬಾನೇ ಹೆಮ್ಮೆಯಾಗುತ್ತಿದೆ.
ತಂಗಿಯ ಮಾತುಗಳನ್ನು ಕೇಳಿ ನಸುನಕ್ಕ ನೀತು ಅವಳನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟರೆ ಒಂದು ಕಡೆ ಹರೀಶನೂ ಹೆಂಡತಿಯನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟನು. ಅದರಂತೆಯೇ ಶೀಲಾ ಕೂಡ ಗೆಳತಿಯ ದೃಷ್ಟಿ ತೆಗೆದು ಅಪ್ಪಿಕೊಂಡರೆ ಅಶೋಕ ತನ್ನ ಎರಡನೇ ಮಡದಿಯ ಬಗ್ಗೆ ಅತೀವ ಗರ್ವ ಪಡುತ್ತ ಎಲ್ಲರ ಮುಂದೆಯೇ ಅವಳ ತುಟಿಗೊಂದು ಸಿಹಿ ಚುಂಬನವಿತ್ತನು.
ಹರೀಶ.......ಎಲ್ಲವೂ ಒಳ್ಳೆಯದೇ ಆಯಿತು ಬಿಡು ನೀನು ನನ್ನ ಹೆಂಡತಿ ಎನ್ನುವ ಬದಲಿಗೆ ನಾನು ನಿನ್ನಂತ ಧೈರ್ಯವಂತೆಯ ಗಂಡನೆಂದು ಹೇಳಿಕೊಳ್ಳಲು ನನಗೆ ತುಂಬ ಹೆಮ್ಮೆಯಾಗುತ್ತಿದೆ. ಆದರೆ ನಮ್ಮ ಮುಂದೆ ಇರುವಂತ ಪ್ರಶ್ನೆ ಈ ಹಣವನ್ನೇನು ಮಾಡುವುದೆಂದು ಇದನ್ನು ಸರ್ಕಾರಕ್ಕೆ ಒಪ್ಪಿಸಿ ಬಿಡುವುದಾ ?
ನೀತು.......ರೀ ನಿಮಗೇನಾದರೂ ತಲೆಗಿಲೆ ಕೆಟ್ಟಿದೆಯಾ ಹೇಗೆ ? ಈ ಹಣವನ್ನು ಸರ್ಕಾರದ ವಶಕ್ಕೊಪ್ಪಿಸುವ ಉದ್ದೇಶ ನನಗಿದ್ದಿದ್ದರೆ ಆ ನೀಗ್ರೋಗಳ ಕಾಟೇಜಿನಿಂದ ಇದನ್ನು ತರುತ್ತಲೇ ಇರಲಿಲ್ಲ . ಅಲ್ಲೇನಾದರೂ ಹಣ ಪೋಲಿಸರ ಕೈಯಿಗೆ ಸಿಕ್ಕಿದ್ದರೆ ಏನಾಗುತ್ತಿತ್ತು ಇದರಲ್ಲಿ ಅರ್ಧದಷ್ಟು ಅಥವ ಪೂರ್ತಿಯಾಗೇ ಅವರುಗಳೇ ನುಂಗಿ ಕೇವಲ ಬಾಂಬು ಡ್ರಗ್ಸು ದೊರಕಿದೆಯೆಂಬ ರಿಪೋರ್ಟ್ ಬರೆಯುತ್ತಿದ್ದರು. ಈಗ ಒಂದು ವೇಳೆ ನಾವು ಈ ಹಣವನ್ನು ಸರ್ಕಾರಕ್ಕೆ ಒಪ್ಪಿಸುವುದು ಎಂದೇ ಇಟ್ಟುಕೊಳ್ಳಿ ಏನಂತ ಹೇಳಿ ಕೊಡುವುದು ? ಈ ಹಣವೆಲ್ಲ ಯಾರದು ? ನಿಮಗೆಲ್ಲಿ ಸಿಕ್ಕಿತು ? ಆಗ್ಯಾಕೆ ಪೋಲಿಸರಿಗೆ ತಿಳಿಸದೆ ನಿಮ್ಮ ಮನೆಗೆ ಕೊಂಡೊಯ್ದಿರಿ ಎಂದು ಕೇಳುವ ಪ್ರಶ್ನೆಗಳಿಗೇನು ನಿಮ್ಮ ಉತ್ತರ.
ನೀತು ಕೇಳಿದ್ದಕ್ಕೇನು ಉತ್ತರಿಸಬೇಕೆಂದೇ ತಿಳಿಯದೆ ತಬ್ಬಿಬ್ಬಾಗಿ ನಿಂತಿದ್ದ ಗಂಡನನ್ನು ನೋಡಿ ನಸುನಕ್ಕು......
ನೀತು......ನೀವು ಶಾಲೆಯಲ್ಲಿ ಪಾಠ ಹೇಳಿಕೊಡಲು ಯಾಕೆ ಹೋಗುತ್ತೀರಾ ?
ಹರೀಶ ಚಕಿತನಾಗಿ........ಇದೆಂತಹ ಪ್ರಶ್ನೆ ಅಲ್ಲಿಗೆ ವಿಧ್ಯಾರ್ಜನೆಗೆ ಬರುವ ಮಕ್ಕಳಿಗೆ ಉತ್ತಮವಾದ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗಲೆಂದು ಅವರಿಗೆ ಪಾಠ ಹೇಳಿಕೊಟ್ಟು ಅದನ್ನು ಅರ್ಥೈಸಲು.
ನೀತು......ಅದಕ್ಕಾಗಿ ನಿಮಗೆ ಸರ್ಕಾರದಿಂದ ಸಂಬಳ ಸಿಗುತ್ತಿದೆ ತಾನೇ ?
ಹರೀಶ......ಹೂಂ ನಾವು ಮಾಡುವ ಕೆಲಸಕ್ಕೆ ಪ್ರತಿಫಲವಾಗಿ ಸಂಬಳ ಕೊಡುತ್ತಾರೆ.
ನೀತು.......ಒಂದು ವೇಳೆ ಇನ್ಮುಂದೆ ನಿಮಗ್ಯಾವುದೇ ಸಂಬಳ ಕೊಡುವುದಿಲ್ಲವೆಂದು ಸರ್ಕಾರ ಹೇಳಿಬಿಟ್ಟರೆ ಆಗಲೂ ನೀವು ಶಾಲೆಯಲ್ಲಿ ಪಾಠ ಮಾಡಲು ಹೋಗುತ್ತೀರಾ ?
ಹರೀಶ....ಅದೇಗೆ ಕೊಡುವುದಿಲ್ಲ ಅನ್ನುತ್ತಾರೆ.
ನೀತು......ಕೇಳಿದ ಪ್ರಶ್ನೆಗೆ ಉತ್ತರಿಸಿ ಸಂಬಳ ಸಿಗದಿದ್ದರೂ ಶಾಲೆಗೆ ಹೋಗುತ್ತೀರಾ ಇಲ್ಲವಾ ?
ಎಲ್ಲರೂ ತದೇಕ ಚಿತ್ತದಿಂದ ಹರೀಶನ ಕಡೆ ನೋಡುತ್ತ ಅವನ ಉತ್ತರಕ್ಕಾಗಿ ಕಾಯುತ್ತಿದ್ದರೆ ಅವನು ಮೆಲ್ಲಗೆ ............ಇಲ್ಲಾ ಹೋಗುವುದಿಲ್ಲ ಎಂದನು.
ನೀತು......ಅಂದರೆ ನೀವು ಸಂಬಳ ಬಾರದೆ ಹೋದಲ್ಲಿ ಶಾಲೆಯ ಮಕ್ಕಳಿಗೆ ಪಾಠ ಹೇಳಿಕೊಡಲು ಹೋಗಲ್ಲ ಎಂದಾಯಿತು. ಆ ಐವರು ನೀಗ್ರೋಗಳು ನಮ್ಮ ದೇಶದಲ್ಲಿ ಬಾಂಬ್ ಸಿಡಿಸಿ ಅಮಾಯಕ ಜನರುಗಳನ್ನು ಸಾಯಿಸುವುದನ್ನು ತಡೆಯುವುದಕ್ಕಾಗಿ ನಾನು ಅವರನ್ನು ಯಮಲೋಕಕ್ಕೆ ಕಳುಹಿಸಿರುವೆ. ಅದರರ್ಥ ನಾನು ದೇಶದ ರಕ್ಷಣೆ ಮಾಡುವ ಕೆಲಸವನ್ನು ಮಾಡಿರುವೆ ಅದಕ್ಕೆ ಪ್ರತಿಫಲವಾಗಿ ಸರ್ಕಾರದಿಂದ ನನಗೇನು ಸಿಗುತ್ತಿತ್ತು ಒಂದು ಅಭಿನಂದನಾ ಪತ್ರ ಮತ್ತು ಕತ್ತಿಗೊಂದು ಮೆಡಲ್ ಅಲ್ಲವಾ. ಅದಾದ ನಂತರ ಗ್ಯಾಂಗಿನ ಇತರೆ ಸದಸ್ಯರಿಂದ ನನ್ನ ಮನೆಯವರನ್ನೆಲ್ಲಾ ಕಾಪಾಡುವವರು ಯಾರು ಸರ್ಕಾರ ಇಪ್ಪತ್ನಾಲ್ಕು ಘಂಟೆಯೂ ನಮಗೆ ರಕ್ಷಣೆ ಕೊಡುವುದಾ ? ಅದಕ್ಕೆ ನಾನು ಎಲ್ಲಿಯೂ ಮುಂಚೂಣಿಗೆ ಬಾರದೆ ತರೆ ಮರೆಯಲ್ಲಿ ಕೆಲಸ ಸಾಧಿಸಿರುವೆ ಅದರ ಪ್ರತಿಫಲವಾಗಿ ನನಗೆ ಈ ಹಣ ಸಿಕ್ಕಿದೆ ಅಂದರೆ ನನ್ನ ಕಾರ್ಯ ಸಾಧನೆಗೆ ಇದೊಂದು ರೀತಿ ಸಂಬಳವಿದ್ದಂತೆ ತಾನೇ. ಅಲ್ಲಿಗೆ ಇದು ನನ್ನ ಕಷ್ಟಾರ್ಜಿತದ ಸಂಪಾದನೆ ನನ್ನ ಹಣ ಅಂದರೆ ಇದನ್ನು ನಾನು ಹೇಗಾದರೂ ಖರ್ಚು ಮಾಡಲು ಸ್ವತಂತ್ರಳು ಅದನ್ನು ಕೇಳುವ ಹಕ್ಕು ಯಾರಿಗೂ ಇಲ್ಲವೆಂದರ್ಥ. ಈಗ ನೀವು ಜಾಸ್ತಿ ಚರ್ಚೆ ಮಾಡುತ್ತ ಕೂರುವ ಬದಲಿಗೆ ಬೇಗ ರೆಡಿಯಾದರೆ ಇಲ್ಲಿರುವ ಹತ್ತು ಕೋಟಿ ರೂ.. ಗಳಲ್ಲಿ ಐದು ಕೋಟಿಯನ್ನು ತೆಗೆದುಕೊಂಡು ಗಿರೀಶ....ಸುರೇಶ....ರಶ್ಮಿ ಮತ್ತು ಚಿನ್ನಿಯ ಹೆಸರಿನಲ್ಲಿ ನಾವು ಒಂದೊಂದು ಕೋಟಿ ಹಣವನ್ನು ಫಿಕ್ಸೆಡ್ ಇಡೋಣ. ಇನ್ನುಳಿದ ಒಂದು ಕೋಟಿಯನ್ನು ನನ್ನ ತಂಗಿಯಾದ ಅನುಷ ಹೆಸರಿನಲ್ಲಿಡುವುದು.
ಅನುಷ ಏನೋ ಹೇಳಲು ಹೊರಟಾಗ ಅವಳನ್ನು ಕೈ ತೋರಿಸಿ ತಡೆದು......
ನೀತು.......ನೀನೇನೂ ಹೇಳಲು ಹೋಗಬೇಡ ನಾನೇನು ಮಾಡುತ್ತಿರುವೆನೆಂದು ನನಗೆ ಗೊತ್ತಿದೆ ರೀ ಬೇಗ ರೆಡಿಯಾಗಿ ನಾನೂ ಬರ್ತೀನಿ ಅಶೋಕ ನೀವೂ ರೆಡಿಯಾಗಿ. ಮಕ್ಕಳ ಹೆಸರಿನಲ್ಲಿಡುವ ಹಣ ಅವರೆಲ್ಲರೂ ೨೨ ವರ್ಷ ವಯಸ್ಸಿನವರಾದ ಬಳಿಕವೇ ಅವರ ಕೈಗೆ ಸೇರುವಂತೆ ನೋಡಿಕೊಳ್ಳಬೇಕು ಅಲ್ಲಿಯವರೆಗೂ ಬರುವ ಮಾಸಿಕ ಬಡ್ಡಿಯನ್ನು ಅವರದೇ ಹೆಸರಿನಲ್ಲೊಂದು ಅಕೌಂಟ್ ಓಪನ್ ಮಾಡಿಸಿ ಅದರಲ್ಲಿ ಜಮೆ ಆಗುವ ರೀತಿ ವ್ಯವಸ್ಥೆ ಮಾಡಬೇಕಿದೆ. ಮಕ್ಕಳು 22 ವಯಸ್ಸಿಗೆ ಬರುವ ತನಕ ಈ ಫಿಕ್ಸೆಡ್ ಹಣಕ್ಕೆ ನಾನೇ ಕೇರ್ ಟೇಕರ್ ಆಗಿರುವೆ. ಶೀಲಾ ಇದರಲ್ಲಿ ಎರಡು ಕೋಟಿ ಹಣವನ್ನು ತೆಗೆದಿಡು ಅಣ್ಣನ ಮಕ್ಕಳಿಬ್ಬರೂ ಶಿವರಾತ್ರಿಗೆ ಬಂದಾಗ ಅವರ ಹೆಸರಿನಲ್ಲಿ ಐವತ್ತು ಐವತ್ತು ಲಕ್ಷಗಳನ್ನಿಟ್ಟು ಮಿಕ್ಕ ಒಂದು ಕೋಟಿಯು ಶೀಲಾ ಹೊಟ್ಟೆಯಲ್ಲಿರುವ ಮಗುವಾನ ಹೆಸರಿನಲ್ಲಿಡಬೇಕು.
ಇನ್ನುಳಿದ ಮೂರು ಕೋಟಿ ಹಣವನ್ನೇನು ಮಾಡುವೆ ಎಂಬುದರ ಬಗ್ಗೆ ನಾನು ಫ್ರೀಯಾಗಿರುವ ಸಮಯದಲ್ಲಿ ಯೋಚಿಸಿ ನಿರ್ಧರಿಸುವೆ. ಹಾಂ....ರವಿ ಅಣ್ಣನಿಗೆ ಒಂದು ಕಾರು ತೆಗೀಬೇಕು ಜೊತೆಗೆ ಅನುಷ ಕೂಡ ಕಾರು ಕಲಿಯುತ್ತಿದ್ದಾಳೆ ಅವಳು ಕೂಡ ತುಂಬಾನೇ ಚೆನ್ನಾಗಿ ಓಡಿಸುತ್ತಾಳೆ ಆದರಿನ್ನೂ ಲೈಸೆನ್ಸ್ ಬಂದಿಲ್ಲ . ಇವಳಿಗೊಂದು ಸ್ವಿಫ್ಟ್ ಕಾರು ಮತ್ತು ಮಕ್ಕಳಿಗೊಂದು ಏಲಕ್ರ್ಟಿಕ್ ಸ್ಕೂಟರ್ ತರೋಣ ನೀವಿನ್ನೂ ನಿಂತೇ ಇರುವಿರಲ್ಲ ಬೇಗ ರೆಡಿಯಾಗಿ ತುಂಬ ಕೆಲಸವಿದೆ ನೀವು ಮೂರೂ ಜನ ಹಣವನ್ನು ಜೋಪಾನವಾಗಿ ಪ್ಯಾಕ್ ಮಾಡಿ ಎತ್ತಿಡಿ. ಚಿನ್ನಿ ನಡಿಯಮ್ಮ ಪಪ್ಪನ ಜೊತೆಯಲ್ಲಿ ಸುತ್ತಾಡಿಕೊಂಡು ಬರುವಾಗ ಐಸ್ ಕ್ರೀಂ ತೆಗೆದುಕೊಂಡು ಬರೋಣ. ನಿಶಾ ಐಸ್ ಕ್ರೀಂ ಹೆಸರನ್ನು ಕೇಳಿದ ತಕ್ಷಣವೇ ಕೈಲಿದ್ದ ಬಾಲನ್ನು ಅಣ್ಣನ ಕಡೆಗೆಸೆದು ಖುಷಿಯಿಂದ ಕುಣಿದಾಡುತ್ತ ಒಳಗೋಡಿದಳು.
ನೀತು ತನ್ನಿಬ್ಬರು ಗಂಡಂದಿರ ಜೊತೆ ಮಗಳನ್ನೆತ್ತಿಕೊಂಡು ಬ್ಯಾಂಕಿಗೆ ತೆರಳಿ ಐವರ ಹೆಸರಿನಲ್ಲಿ ಒಂದೊಂದು ಕೋಟಿ ಫಿಕ್ಸೆಡಿಟ್ಟು ಅದರ ಬಡ್ಡಿಯನ್ನು ಮಾಸಿಕ ಲೆಕ್ಕದಲ್ಲಿ ಎಸ್.ಬಿ. ಖಾತೆಗೆ ಜಮೆಯಾಗುವಂತೆ ಅವರವರ ಹೆಸರಿನಲ್ಲಿ ಒಂದೊಂದು ಖಾತೆಯನ್ನು ತೆರೆಯುವ ವ್ಯವಸ್ಥೆ ಮಾಡಿಸಿದರು. ಬ್ಯಾಂಕ್ ಮಾನೇಜರ್ ಇಷ್ಟು ದೊಡ್ಡ ಮೊತ್ತದ ಹಣವನ್ನು ಫಿಕ್ಸೆಡ್ ಇಡುತ್ತಿರುವುದರಿಂದ ಸಂತೋಷಗೊಂಡು ತಾನೇ ಮನೆಗೆ ಬಂದು ಆ ಐವರ ಡೀಟೇಲ್ಸ್ ಪಡೆದುಕೊಂಡು ಎಸ್.ಬಿ. ಖಾತೆಯನ್ನು ತೆರೆಯುವ ವ್ಯವಸ್ಥೆ ಮಾಡುವುದಾಗಿ ಹೇಳಿದನು ಹರೀಶ ಮಗಳ ಹೆಸರಿನಲ್ಲೊಂದು ಏಜು಼ಕೇಶನ್ ಪಾಲಿಸಿ ಓಪನ್ ಮಾಡಿದರೆ ಅಶೋಕ ಕೂಡ ನಿಶಾಳ ಹೆಸರಿನಲ್ಲಿ ಇನ್ನೊಂದು ಪಾಲಿಸಿ ತೆರೆಸಿದನು. ಮೂವರೂ ಬ್ಯಾಂಕಿನ ಕೆಲಸಗಳನ್ನು ಮುಗಿಸಿಕೊಂಡು ಆಚೆ ಬಂದಾಗ ನಿಶಾ ಅಮ್ಮನ ಕೆನ್ನೆ ಸವರಿ ಐಸ್.....ಐಸ್.....ಎಂದು ಜ್ಞಾಪಿಸುತ್ತಿದ್ದಳು. ನೀತು ಮಗಳಿನ್ನೂ ಐಸ್ ಕ್ರೀಂ ಧ್ಯಾನದಲ್ಲೇ ಇರುವಳೆಂದು ತಿಳಿದು ನಗುತ್ತ ಅವಳಿಗೊಂದು ಮುತ್ತಿಟ್ಟು ನೇರವಾಗಿ ಪಾರ್ಲರಿಗೆ ತೆರಳಿ ಮಗಳಿಗೆ ಇಷ್ಟವಾದ ಐಸ್ ಕ್ರೀಂ ಖರೀಧಿಸಿ ಮನೆಯವರಿಗೂ ತೆಗೆದುಕೊಂಡರು.
No comments:
Post a Comment