Total Pageviews

Sunday, 12 May 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 97

ಬೆಳಿಗ್ಗೆ ಮನೆ ಮುಂದೆ ಬಂದು ನಿಂತ ಕಾಂಕ್ರೀಟ್ ಟ್ರಕ್ಕುಗಳನ್ನು ನೋಡಿ ನಿಶಾ ತುಂಬ ಸಂತಸದಿಂದಲೇ ಹ್ಯಾಟ್ ಧರಿಸಿ ತಾನೇ ಮೇಲುಸ್ತುವಾರಿ ವಹಿಸಿಕೊಂಡವಳಂತೆ ಸೊಂಟದ ಮೇಲೆ ಕೈಯಿಟ್ಟುಕೊಂಡು ಅಲ್ಲೇ ನಿಂತುಬಿಟ್ಟಳು. ರವಿ ಅವಳನ್ನೆತ್ತಿಕೊಂಡು ತಾರಸಿಯ ಮೇಲೇರಿದಾಗ ನಿಶಾ ಅಲ್ಲಿಗೆ ಮೆಷಿನ್ನಿನ ಮೂಲಕ ಬಂದು ಬೀಳುತ್ತಿದ್ದ ಕಾಂಕ್ರೀಟನ್ನು ನೋಡಿ ಸಂಭ್ರಮಪಡುತ್ತಿದ್ದಳು. ತಾರಸಿ ಮುಗಿದ ನಂತರ ಕೆಲಸಗಾರರಿಗೆ ಮನೆಯವರೇ ಊಟ ಬಡಿಸಿದರೆ ನಿಶಾ ತಾನೂ ಸಹಾಯ ಮಾಡುತ್ತ ಒಂದೊಂದೇ ಸ್ವೀಟನ್ನು ಅವರುಗಳಿಗೆ ನೀಡುತ್ತಿದ್ದಳು. ಕೆಲಸಗಾರರ ಜೊತೆ ತನ್ನ ತೊದಲು ನುಡಿಯಲ್ಲಿ ಮಾತನಾಡುತ್ತ ಅಮ್ಮನ ಬಳಿಗೋಡೋಡಿ ಬಂದು ಅವಳಿಂದ ತುತ್ತು ತಿನ್ನಿಸಿಕೊಳ್ಳುತ್ತಿದ್ದಳು. ನೀತು ಮೊದಲನೇ ಮಹಡಿಯ ತಾರಸಿ ರೀತಿಯಲ್ಲೇ ಈಗ ಕೂಡ ಕೆಲಸಗಾರರಿಗೆ ಮಗಳ ಕೈಯಿಂದ ಐನೂರರ ನೋಟು ಮತ್ತು ಸ್ವೀಟಿನ ಬಾಕ್ಸ್ ಕೊಡಿಸಿದಾಗ ಅವರು ಮಗುವಿಗೆ ಹೃದಯ ಪೂರ್ವಕವಾಗಿ ಹಾರೈಸಿದರು.

ಗಿರಿ ಫೋನ್ ಮಾಡಿ ಹುಡುಗರು ಕೆಲಸಕ್ಕೆ ಸೇರಲು ಕಾತುರರಾಗಿರುವ ವಿಷಯ ನೀತುವಿಗೆ ತಿಳಿಸಿದಾಗ ಸಂಜೆ ನಾಲ್ಕುವರೆಗೆ ಅವರನ್ನು ಕರೆದುಕೊಂಡು ಫ್ಯಾಕ್ಟರಿ ಜಮೀನಿನ ಬಳಿ ಬರುವಂತೇಳಿದಳು. ತಾರಸಿಯು ಮುಗಿದು ಊಟವಾದ ನಂತರ ಅಶೋಕ ಮತ್ತು ರವಿ ಫ್ಯಾಕ್ಟರಿ ಕಟ್ಟಡದ ಜಾಗಕ್ಕೆ ಹೊರಟಾಗ ನೀತು ತಾನು ಸಹ ಬರುವುದಾಗಿ ಅವರೊಂದಿಗೆ ತೆರಳಿದಳು. ಕಟ್ಟಡಗಳ ಅಡಿಪಾಯದ ಕಾಮಗಾರಿಯನ್ನು ವೀಕ್ಷಿಸಿದ ನೀತು ಆಫೀಸಿನಲ್ಲಿ ಕೆಲಸ ಮಾಡುವವರಿಗಾಗಿ ಕಟ್ಟಿಸುತ್ತಿದ್ದ ಫ್ಲಾಟುಗಳ ಜಾಗಕ್ಕೆ ಬಂದು ಅಲ್ಲಿ ಕೆಲಸವನ್ನು ನೋಡಿಕೊಳ್ಳುತ್ತಿದ್ದ ರಮೇಶನಿಗೆ.......

ನೀತು......ರಮೇಶ್ ಸರ್ ನಿಮ್ಮ ಕೆಲಸಗಾರರಿಗೆ ಯಾವುದೇ ಲೋಪ ದೋಶವಿರದಂತೆ ಕಟ್ಟಡಗಳೆಲ್ಲವೂ ಭದ್ರವಾಗಿ ನಿರ್ಮಿಸುವಂತೆ ಎಚ್ಚರಿಸಿ ಬಿಡಿ ಸ್ವಲ್ಪವೂ ದೋಶಪೂರಿತವಾಗಿ ಇರಬಾರದು.

ರಮೇಶ......ಮೇಡಂ ನೀವದರ ಬಗ್ಗೆ ಯಾವುದೇ ರೀತಿ ಚಿಂತೆ ಮಾಡಬೇಡಿ ನನ್ನ ಸ್ವಂತ ಬಿಲ್ಡಿಂಗ್ ಎನ್ನುವ ರೀತಿ ನಾನು ಖುದ್ದಾಗಿ ಎಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿರುವೆ.

ಇಬ್ಬರೂ ಮಾತನಾಡುತ್ತಿದ್ದಾಗ ಹತ್ತಿರ ಬಂದ ಗಿರಿ......ಆಂಟಿ ನಾನವರನ್ನೆಲ್ಲಾ ಕರೆದುಕೊಂಡು ಬಂದಿರುವೆ ನೀವೊಮ್ಮೆ ಮಾತನಾಡಿಬಿಡಿ ಎಂದು ಅವರತ್ತ ಕೈ ಬೀಸಿ ಹುಡುಗರನ್ನು ಕರೆದನು.

ಎಲ್ಲರೂ ಜಮೀನಿನಲ್ಲಿದ್ದ ಮರವೊಂದರ ನೆರಳಿನಡಿ ನಿಂತಾಗ......

ನೀತು......ಗಿರಿ ಇವರ ಬಗ್ಗೆಯೇ ಅಲ್ಲವಾ ನೀನು ಹೇಳಿದ್ದು ?

ಗಿರಿ....ಹೌದು ಮೇಡಂ ಇವರೇ ನನಗೆ ತುಂಬ ವರ್ಷಗಳಿಂದಲೂ ಪರಿಚಯವಿದ್ದಾರೆ ಕಷ್ಟಪಟ್ಟು ಕೆಲಸವನ್ನು ಮಾಡುತ್ತಾರೆ. ಇವರೆಲ್ಲರಿಗೂ ಒಂದು ರೀತಿ ಇವನೇ ಲೀಡರ್ ಇದ್ದಂತೆ ಹೆಸರು ಬಸ್ಯ .

ನೀತು......ಹೂಂ..ಬಸ್ಯ ಗಿರಿ ಮತ್ತವನ ತಂದೆ ಬಹಳ ವರ್ಷಗಳಿಂದಲೂ ನಮ್ಮ ಮನೆಗೆ ಹಾಲು ಕೊಡುತ್ತಾರೆ ಹಾಗಾಗಿ ಅವನು ನಿಮ್ಮ ಬಗ್ಗೆ ಹೇಳಿದ್ದಕ್ಕೆ ಇಲ್ಲಿಗೆ ಕರೆಸಿರುವೆ. ನಾವಿಲ್ಲ ಪ್ರಾರಂಭಿಸುವ ಫ್ಯಾಕ್ಟರಿಯಲ್ಲಿ ನೀವು ಸೆಕ್ಯೂರಿಟಿ ಗಾರ್ಡುಗಳ ಕೆಲಸ ಮಾಡುವುದಕ್ಕೆ ಒಪ್ಪಿಗೆ ಇದೆಯಾ ಅಥವ ಸೆಕ್ಯೂರಿಟಿ ಕೆಲಸವಾ ಎಂಬುದಾಗಿ ಅಸಡ್ಡೆ ಏನಾದರು ಹೊಂದಿರುವಿರಾ. ಮೊದಲೇ ಹೇಳಿ ಬಿಡುವೆ ಶ್ರಮವಹಿಸಿ ತುಂಬ ನಿಯತ್ತಿನಿಂದ ನೀವಿಲ್ಲಿ ಕೆಲಸ ಮಾಡುವುದಾದರೆ ಮಾತ್ರ ಒಪ್ಪಿಕೊಳ್ಳಿ ಇಲ್ಲವಾದರೆ ಬೇಡ ನಾನು ನೇರವಾಗಿ ಹೇಳಿ ಬಿಡುತ್ತೇನೆ. ಈಗ ಹೇಳಿ ನಿಮ್ಮ ಆಲೋಚನೆಗಳೇನು.

ಬಸ್ಯ......ಮೇಡಂ ನಾವು ಹತ್ತನೇ ತರಗತಿ ಓದಿದ ನಂತರ ಕಾಲೇಜಿಗೆ ಬಡತನದ ಕಾರಣ ಹೋಗುವುದಕ್ಕೆ ಸಾಧ್ಯವಾಗಲಿಲ್ಲ ಹಾಗಾಗಿ ಪೋಲಿಗಳಂತೆ ತಿರುಗಾಡಿಕೊಂಡಿದ್ದೆವು. ಅದರ ಜೊತೆ ಹೊಡೆದಾಟ ಬಡಿದಾಟ ಇವುಗಳಲ್ಲೂ ಭಾಗಿಯಾಗುತ್ತಿದ್ದ ಕಾರಣದಿಂದ ಹಳ್ಳಿಯವರು ನಮಗೆ ರೌಡಿ ಪೋಲಿಗಳೆಂದು ನಮ್ಮನ್ನು ಯಾವ ಕೆಲಸಗಳಿಗೂ ಕರೆಯುವುದಿಲ್ಲ . ಅವರೆಲ್ಲರೂ ನಮ್ಮನ್ನು ಕಂಡು ಹೆದರುವುದು ನಿಜವೇ ಆಗಿದ್ದರೂ ಸಹ ನಮಗೆ ಜನರನ್ನು ಹೆದರಿಸಿ ಬೆದರಿಸಿ ಹಣ ಸಂಪಾದನೆ ಮಾಡುವ ಕೆಟ್ಟ ಬುದ್ದಿ ದೇವರು ಎಂದಿಗೂ ಸಹ ನೀಡಲಿಲ್ಲ ಅದು ತುಂಬ ಒಳ್ಳೆಯದೇ ಆಯಿತು. 

ಆಗಾಗ ಪಟ್ಟಣದಲ್ಲಿ ರಾಜಕೀಯದವರು ಗಲಾಟೆ ಸ್ರ್ಟೈಕು ಮಾಡುವುದಕ್ಕೆ ನಮ್ಮನ್ನು ಕರೆಯುತ್ತಾರೆ ಆಗ ಸ್ವಲ್ಪ ಜಾಸ್ತಿ ಹಣ ಸಿಗುತ್ತದೆ ಆದರೆ ಅದೆಲ್ಲ ವರ್ಷ ಎರಡು ವರ್ಷಗಳಿಗೊಮ್ಮೆ ಮಾತ್ರ ಎರಡು ಬಾರಿ ಕರೆದಿದ್ದರು. ನಾವುಗಳು ಮಿಕ್ಕಂತೆ ಮೂಟೆ ಹೊರುವುದರಿಂದ ಎಲ್ಲಾ ರೀತಿ ಕೂಲಿ ಕೆಲಸಗಳನ್ನು ಮಾಡಲು ಸಿದ್ದರಿದ್ದೀವಿ ದುಡಿದು ಒಂದು ಹೊತ್ತು ತಿಂದರೂ ಸಾಕೆಂಬುದೇ ನಮ್ಮ ಜೀವನದ ಉದ್ದೇಶ. ನೀವು ನಮಗೆ ಫ್ಯಾಕ್ಟರಿಯಲ್ಲಿ ಉದ್ಯೋಗ ನೀಡಿದರೆ ಯಾಕಪ್ಪ ಇವರಿಗೆ ಇಲ್ಲಿ ಕೆಲಸ ಕೊಟ್ಟೆನೆಂದು ನಿಮ್ಮ ಮನಸ್ಸಿನಲ್ಲಿ ಒಮ್ಮೆಯೂ ಆ ಭಾವನೆ ಬರದಂತೆ ನಿಯತ್ತಿನಿಂದ ದುಡಿಯುತ್ತೇವೆ ಈ ಸ್ಥಳದಿಂದ ಒಂದು ಕಡ್ಡಿಯನ್ನು ಯಾರಿಗೂ ಹೊತ್ತುಕೊಂಡು ಹೋಗಲು ಅವಕಾಶ ನೀಡುವುದಿಲ್ಲವೆಂದು ನಿಮಗೆ ಭರವಸೆ ನೀಡುತ್ತೇವೆ ಮೇಡಂ.

ನೀತು.......ಅಷ್ಟು ಮಾಡಿದರೆ ಸಾಕು ನಿಮಗೆ ಕೆಲಸ ನೀಡಲು ನನಗೆ ಯಾವುದೇ ರೀತಿ ಸಮಸ್ಯೆಗಳೂ ಇಲ್ಲ ಈ ಹೊಡೆದಾಟಗಳ ವಿಷಯ ಇದಿನವರೆಗೆ ಏನೇ ಇದ್ದರೂ ಮರೆತು ಹೊಸ ಜೀವನವನ್ನು ಪ್ರಾರಂಭಿಸಿರಿ. ಈ ರಾಜಕೀಯ ಗಲಾಟೆಗಳಲ್ಲಿ ಭಾಗಿಯಾದಿರಿ ಅಂತ ಹೇಳಿದೆಯಲ್ಲ ಯಾವ ರೀತಿ.

ಬಸ್ಯ.......ಮೇಡಂ ರಾಜಕೀಯದವರು ತಮ್ಮ ಏದುರು ಪಾರ್ಟಿಯ ಜನರನ್ನು ಹೊಡೆಸಬೇಕಾದರೆ ಅಥವ ಅವರ ಕೈಕಾಲು ಮುರಿಯಬೇಕಿದ್ದರೆ ನಮ್ಮನ್ನು ಬಳಸಿಕೊಳ್ಳುತ್ತಾರೆ. ಕಾಮಾಕ್ಷಿಪುರದಲ್ಲಿ ಅಂತಹ ಯಾವುದೆ ಘಟನೆಗಳೂ ನಡೆದಿಲ್ಲ ಆದರೆ ಬೇರೆ ಊರುಗಳಲ್ಲಿ ಬಹಳಷ್ಟು ನಡೆಯುತ್ತವೆ ಆಗ ನಮ್ಮನ್ನು ಕರೆದೊಯ್ದು ಅಲ್ಲಿ ಗಲಾಟೆ ಮಾಡಿಸಿ ಹತ್ತೋ ಹದಿನೈದೊ ಸಾವಿರ ಕೊಡುತ್ತಾರೆ.

ನೀತು......ಪರವಾಗಿಲ್ಲ ಒಬ್ಬೊಬ್ಬರಿಗೆ 10-15 ಸಾವಿರ ಹೂಂ.

ಬಸ್ಯ......ಇಲ್ಲ ಮೇಡಂ ಒಬ್ಬೊಬ್ಬರಿಗಲ್ಲ ನಮ್ಮೆಲ್ಲರಿಗೂ ಸೇರಿ ಅಷ್ಟು ಹಣ ಕೊಡುವುದು ಗಲಾಟೆಗಳಲ್ಲಿ ನಮಗೇನಾದರು ಆದರೆ ಆಸ್ಪತ್ರೆ ಖರ್ಚಿಗೂ ಹಣ ಕೊಡುವುದಿಲ್ಲ ಕೆಲಸ ಮುಗಿದ ಮೇಲೆ ನಮ್ಮನ್ನು ಹತ್ತಿರ ಕೂಡ ಸೇರಿಸುವುದಿಲ್ಲ ಮೇಡಂ.

ನೀತು.....ಬಸ್ಯ ನೀವುಗಳು ಇನ್ಮುಂದೆ ಯಾವುದೇ ಹೊಡೆದಾಟಗಳಲ್ಲಿ ಭಾಗವಹಿಸಬಾರದು ಫ್ಯಾಕ್ಟರಿಯಲ್ಲಿ ನಿಯತ್ತಿನಿಂದ ಕಷ್ಟಪಟ್ಟು ಕೆಲಸ ಮಾಡಿ ನಿಮಗೆ ಬೇಕಾದ ಸಹಾಯ ನಾನು ಮಾಡುತ್ತೇನೆ.

ಬಸ್ಯ.......ಮೇಡಂ ಕೂಲಿ ಕೆಲಸದಲ್ಲಿ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಹಣ ಸಿಗುವುದಿಲ್ಲ ರಾಜಕೀಯ ಪುಡಾರಾಗಳು ತುಂಬ ಹಣದಾಸೆ ತೋರಿಸಿ ಕರೆದೊಯ್ಯುತ್ತಿದ್ದರು. ಈಗ ಕೆಲವು ದಿನಗಳ ಹಿಂದೆಯೂ ಬನ್ನಿ ಎಂದು ಕರೆದಿದ್ದರು ಆದರೆ ನಾವು ಹೋಗಲು ಒಪ್ಪಲಿಲ್ಲ ನಂತರ ಅವರೆಂದೂ ಕರೆದಿಲ್ಲ . ಇನ್ಮುಂದೆ ನಾವು ಯಾವುದೇ ಗಲಾಟೆಗಳಲ್ಲೂ ಪಾಲ್ಗೊಳ್ಳದೆ ಸಿಕ್ಕಿರುವ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತೇವೆ.

ನೀತು........ಈ ಹೊಡೆದಾಟ ಬಡಿದಾಟಗಳಿಂದ ನನಗ್ಯಾವುದೇ ಸಮಸ್ಯೆಗಳಿಲ್ಲ ಆದರೆ ಇನ್ಮುಂದೆ ನಾನು ಹೇಳಿದಾಗ ಮಾತ್ರ ಹೇಳಿದವರಿಗೆ ಹೇಗೆ.... ಎಲ್ಲಿ.... ಯಾವಾಗ.... ಎಷ್ಟು ಹೊಡೆಯಬೇಕೆಂದು ಹೇಳುವೆನೋ ಅಷ್ಟನ್ನು ಮಾತ್ರ ಮಾಡಿದರೆ ಸಾಕು. ಇದೇನಪ್ಪ ಹೀಗೆ ಹೇಳುತ್ತಿದ್ದಾಳೆಂದು ಯೋಚಿಸಲು ಹೋಗಬೇಡಿ ಈ ಸಮಾಜದಲ್ಲಿ ಹೆಣ್ಣೊಬ್ಬಳು ಅಭಲೆ ಅಂತ ತಿಳಾದುಕೊಂಡು ಕೆಲವರು ಅಂತಹವರ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ ಆಗಾಗ ಅಂತಹ ಗಂಡಸರಿಗೂ ಸ್ವಲ್ಪ ಬುದ್ದಿ ಕಲಿಸಬೇಕಾಗುತ್ತೆ . ನಿಮಗೆ ಸಂಬಳ ಇಲ್ಲಿ ಕೆಲಸ ಮಾಡುವುದಕ್ಕೆ ಸಿಗುತ್ತದೆ ಅಕಸ್ಮಾತ್ತಾಗಿ ಹೊಡೆದಾಟಗಳಲ್ಲಿ ನಾನು ಹೇಳಿದಾಗ ಭಾಗಿಯಾದರೆ ನಾ ನಿಮಗೆ ಬೇರೆ ಹಣವನ್ನೂ ನೀಡುವೆ ಸರಿಯಾ.

ಬಸ್ಯ......ಮೇಡಂ ನಾವು ಪೋಲಿ ರೌಡಿಗಳಂತೆ ಇರಬಹುದು ಆದರೆ ಯಾವತ್ತೂ ನಮ್ಮಲ್ಲಿ ಯಾರೊಬ್ಬರೂ ಒಮ್ಮೆಯೂ ಕೂಡ ಯಾವ ಹೆಣ್ಣಿನೊಂದಿಗೂ ಕೆಟ್ಟದಾಗಿ ವರ್ತಿಸಿಯೇ ಇಲ್ಲ . ಅಂತಹ ಕಚಡಾಗಳು ಇದ್ದರೆ ಹೇಳಿ ಮೇಡಂ ಈಗಲೇ ಹೋಗಿ ಅವರನ್ನು ಕತ್ತರಿಸಿ ಬರುತ್ತೇವೆ.

ನೀತು......ಇದೇ...ಇದೇ ಕೋಪ ಬೇಡ ಅನ್ನೋದು ನಾನು ಹೇಳಿದಾಗ ಎಷ್ಟು ಹೇಳುವೆನೋ ಅಷ್ಟನ್ನು ಮಾತ್ರ ಮಾಡಿದರೆ ಸಾಕು ಅದಕ್ಕಿಂತ ಜಾಸ್ತಿ ಏನೂ ಮಾಡಬಾರದು ತಿಳಿಯಿತಾ. ನೀವು ಒಟ್ಟು ಹದಿನೆಂಟು ಜನರ ಅಥವ ಇನ್ನೂ ಸ್ನೇಹಿತರಿದ್ದಾರಾ ?

ಬಸ್ಯ.......ಮೇಡಂ ನಮ್ಮ ಜೊತೆ ಇನ್ನೂ ಏಳು ಜನರಿದ್ದಾರೆ ಪಟ್ಟಣದ ಗೋಡೌನಿನಲ್ಲಿ ಲೋಡಿಂಗ್ ಕೂಲಿ ಮಾಡುವುದಾಗಿ ಮೊದಲೇ ಒಪ್ಪಿಕೊಂಡಿದ್ದರಿಂದ ಇಂದು ಅಲ್ಲಿಗೆ ಹೋಗಿದ್ದಾರೆ ನಾಳೆ ಅವರೂ ಬರುತ್ತಾರೆ.

ನೀತು......ಒಟ್ಟು 25 ಜನ ಗೆಳೆಯರು ಅಂತೇಳು ಸರಿ ಬಸ್ಯ ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಎಲ್ಲರನ್ನು ಜೊತೆಗೆ ಕರೆದುಕೊಂಡು ಇಲ್ಲಿಗೆ ಬಾ. ಇಲ್ಲಿ ಬರುವುದಕ್ಕೆ ಮುಂಚೆ ನೀವುಗಳೇ ಚರ್ಚಿಸಿ ಎಷ್ಟು ಸಂಬಳ ಬೇಕೆಂದು ಮಾತನಾಡಿಕೊಂಡು ನನಗೆ ತಿಳಿಸಿರಿ ನಂತರ ಮುಂದಿನ ವಿಷಯ ನಿಮಗೆ ಹೇಳುವೆ. ಈಗ ಸಧ್ಯಕ್ಕೆ ಈ 10 ಸಾವಿರ ಇಟ್ಟುಕೊಂಡಿರು ಊಟ ತಿಂಡಿ ಖರ್ಚಿಗೆ ಬೀಡಿ ಸಿಗರೇಟಿನ ತನಕ ಒಕೆ ಆದರೆ ಕುಡಿತದ ಚಟಗಳನ್ನು ಬಿಡಲೇಬೇಕು ಇಲ್ಲದಿದ್ದರೆ ಆ ಕ್ಷಣವೇ ಅವನನ್ನು ಹೊರಗೆ ಕಳಿಸುತ್ತೇನೆ.

ಬಸ್ಯ ಮತ್ತವನ ಸ್ನೇಹಿತರು ಒಕ್ಕೊರಲಿನಿಂದ.......ಖಂಡಿತವಾಗಿಯೂ ಮೇಡಂ ಇವತ್ತಿನಿಂದಲೇ ಯಾಕೆ ಈ ಕ್ಷಣದಿಂದಲೇ ನಾವ್ಯಾರೂ ಕುಡಿಯುವುದಿಲ್ಲವೆಂದು ತಾಯಿ ದುರ್ಗೆಯ ಮೇಲೆ ಪ್ರಮಾಣ ಮಾಡುತ್ತೇವೆ.

ಗಿರಿ.........ಮೇಡಂ ದುರ್ಗಾ ಮಾತೆಯ ಮೇಲೆ ಪ್ರಮಾಣ ಮಾಡಿದರೆ ಮುಗಿಯಿತು ಪ್ರಾಣ ಹೋದರೂ ಸಹ ಅದನ್ನು ಮುರಿಯುವ ಮಾತೇ ಇಲ್ಲ .

ನೀತು........ನಾಳೆ ಬೆಳಿಗ್ಗೆ ಬರುವ ಮುನ್ನ ನೀಟಾಗಿ ಕಟಿಂಗ್ ಶೇವಿಂಗ್ ಮಾಡಿಸಿಕೊಂಡು ಬನ್ನಿ ತಿಳಿಯಿತಾ ಈಗ ಹೊರಡಿ.

ಬಸ್ಯ.......ಸರಿ ಮೇಡಂ ನಾಳೆ ಬೆಳಿಗ್ಗೆ ಬರುತ್ತೇವೆಂದು ಗಿರಿಗೆ ಧನ್ಯವಾದ ತಿಳಿಸಿ ಹೋದರು.

ನೀತು.......ಏನಿವತ್ತು ಆಂಟಿ....ಆಂಟಿ ಅಂತ ಕರೆಯುವವನು ಮೇಡಂ ಅಂತಿದ್ದೀಯಾ ?

ಗಿರಿ.......ಆಂಟಿ ಅವರ ಮುಂದೆ ನಿಮ್ಮನ್ನು ಮೇಡಂ ಅಂತ ಕರೆದರೆ ಒಂದು ಮರ್ಯಾದೆ ಇರುತ್ತದೆ ಅದಕ್ಕೇ ಹಾಗೆ ಕರೆಯುತ್ತಿದ್ದುದು ಇವತ್ತು ಫ್ರೀಯಾ ?

ನೀತು ನಗುತ್ತ.....ಸದಾ ನಿನಗೆ ಅದೇ ಧ್ಯಾನ ಇನ್ನೊಂದು ದಿನ ಸ್ವಲ್ಪ ದಿನಗಳು ತುಂಬ ಬಿಝಿಯಾಗಿರುವೆ ನಂತರ ನೋಡೋಣ ಬೇಜಾರಾಗಬೇಡ ಕಣೋ.

ಗಿರಿ......ನನಗ್ಯಾಕೆ ಆಂಟಿ ಬೇಜಾರು ನಿಮ್ಮಂತಹ ಸೂಪರ್ ಆಂಟಿಯನ್ನೇ ಪಟಾಯಿಸಿಕೊಂಡಿರುವಾಗ ಎಂದೇಳಿ ಅಲ್ಲಿಂದ ಕಾಲ್ಕಿತ್ತನು.

ನೀತು ಅವನ ಮಾತಿಗೆ ಮುಗುಳ್ನಗುತ್ತ ಕಟ್ಟಡ ಕಾಮಗಾರಿಯ ಬಳಿ ಬಂದಾಗ.......

ರವಿ......ಯಾರಮ್ಮ ಅವರೆಲ್ಲರೂ ? ಆ ಹುಡುಗ ಮನೆಗೆ ಹಾಲು ತರುವ ಗಿರಿ ಅಲ್ಲವಾ ?

ನೀತು......ಹೌದಣ್ಣ ಗಿರಿ ತುಂಬ ಒಳ್ಳೆಯ ಹುಡುಗ ನೀವು ನೆನ್ನೆಯ ದಿನ ಕಾವಲುಗಾರರ ಸಮಸ್ಯೆ ಎಂದು ಹೇಳಿದಿರಲ್ಲ ಅದಕ್ಕಾಗಿ ಅವನ ಮೂಲಕ ಆ ಹುಡುಗರನ್ನು ಕರೆಸಿದ್ದೆ . ಅವರುಗಳಿಗೆ ಕೇಳುವವರ್ಯಾರೂ ಇಲ್ಲದೆ ಸ್ವಲ್ಪ ಪೋಲಿ ರೌಡಿತನ ಮಾಡುತ್ತಿದ್ದರು ಆದರೆ ಖಂಡಿತವಾಗಿ ನಿಯತ್ತಿನಿಂದ ದುಡಿಯುತ್ತಾರೆ ಅದಕ್ಕೆ ಫ್ಯಾಕ್ಟರಿ.....ಆಫೀಸು ಮತ್ತು ಫುಡ್ ಯೂನಿಟ್ಟಿನಲ್ಲಿ ಸೆಕ್ಯೂರಿಟಿಗಳ ಕೆಲಸಕ್ಕೆ ಅವರನ್ನು ನೇಮಿಸಿಕೊಳ್ಳುವ ಯೋಚನೆ ನನ್ನದು.

ರವಿ....ಪೋಲಿ ರೌಡಿಗಳು ಅಂತೀಯ ಅವರಿಗೆ ಕೆಲಸ ಕೊಡುವುದು ಸರಿಯಾ ಪುಟ್ಟಿ .

ನೀತು......ಅಣ್ಣ ಜನಗಳು ಅವರನ್ನು ಹೇಗೆ ಕರೆಯುತ್ತಾರೆ ಅವರು ಸಹ ಹಾಗೇ ನಡೆದುಕೊಳ್ಳುವರು ಅಷ್ಟೆ . ಆದರೆ ಅವರಲ್ಲಿಯೂ ಮಾನವೀಯತೆ ಹೆಣ್ಣಿನ ಬಗ್ಗೆ ಗೌರವ ಎಲ್ಲವೂ ಇದೆ ಈ ಮೊದಲೇ ಯಾವುದೋ ಒಂದು ಸಂಧರ್ಭದಲ್ಲಿ ನಾನು ಪರೀಕ್ಷೇ ಕೂಡ ಮಾಡಿದ್ದೆ ಅದಕ್ಕಾಗಿಯೇ ಕರೆಸಿದ್ದು . ಇವರುಗಳಿಗಿಂತ ಒಳ್ಳೇ ಕಾವಲುಗಾರರು ನಮಗೆ ಸಿಗುವುದಕ್ಕೆ ಸಾಧ್ಯವೇ ಇಲ್ಲ .

ರವಿ......ನೀನು ಹೇಳುವುದೂ ಸರಿಯೇ ಕಣಮ್ಮ ನಮ್ಮೆಲರಿಗಿಂತ ಜನರನ್ನು ಗುರುತಿಸಿ ಅವರ ಒಳ್ಳೆಯತನ ಮತ್ತು ನ್ಯೂನ್ಯತೆಗಳನ್ನು ಅರಿತುಕೊಳ್ಳಲು ನೀನೇ ಸರಿಯಾದವಳು ನೀನು ಹೇಳಿದಂತೆಯೇ ಮಾಡೋಣ ಇದರ ಬಗ್ಗೆ ನೀನೇನು ಹೇಳುವೆ ಅಶೋಕ.

ಅಶೋಕ......ನೀತು ಹೇಳಿದ ಮೇಲೆ ಚರ್ಚಿಸುವ ಅಗತ್ಯವೇ ಇಲ್ಲ ಹಾಗೇ ಮಾಡೋಣ.

ಮೂವರು ಇನ್ನೂ ಒಂದು ಘಂಟೆ ಕಾಲ ಫ್ಯಾಕ್ಟರಿ ಕಾಮಗಾರಿಯ ಹತ್ತಿರವೇ ಇದ್ದಾಗ ನೀತು ಪ್ರತಿಯೊಂದು ವಿಷಯವನ್ನು ರವಿ....ಅಶೋಕ....ರಮೇಶನಿಂದ ಆಸಕ್ತಿಯಿಂದ ಕೇಳಿ ತಿಳಿದುಕೊಂಡು ಮೂವರು ಮನೆಯ ಕಡೆ ಹೊರಟರು. ರಾತ್ರಿ ಊಟವಾದ ಬಳಿಕ ಎಲ್ಲರೂ ಪಾರ್ಕಿನಲ್ಲಿ ಮಾತನಾಡುತ್ತಿದ್ದಾಗ ಕಿರುಚಿ ಕೂಗುತ್ತಿದ್ದ ನಿಶಾಳನ್ನು ರೇಗಿಸಲು ಶ್ರೀದರ್ ಅಂಕಲ್ ನಿನಗೆ ಡಾಕ್ಟರ್ ಹತ್ತಿರ ಚುಚ್ಚಿ ಮಾಡಿಸುವೆ ಎಂದರು. ನಿಶಾ ಚುಚ್ಚಿ ಎಂಬ ಪದ ಕೇಳಿದ್ದೇ ತಡ ಗಾಬರಿಯಿಂದ ಅಮ್ಮನ ಬಳಿಗೋಡಿ ಅವಳ ಮಡಿಲನ್ನೇರಿ ಅಮ್ಮನನ್ನು ತುಂಬ ಗಟ್ಟಿಯಾಗಿ ತಬ್ಬಿಕೊಂಡು ಕುಳಿತಳು. ಶ್ರೀದರ್ ದಂಪತಿಗಳು ಎಷ್ಟೇ ಕರೆದು ತಪ್ಪಾಯಿತೆಂದರೂ ಅಮ್ಮನನ್ನು ಅವುಚಿಕೊಂಡಿದ್ದ ನಿಶಾ ಜಪ್ಪಯ್ಯ ಎಂದರೂ ಜಗ್ಗಲಿಲ್ಲ .

ಶೀಲಾ......ಅಂಕಲ್ ನೀವು ಚುಚ್ಚಿ ಮಾಡಿಸ್ತೀನಿ ಅಂದಿರಲ್ಲಾ ನಮ್ಮ ಚಿನ್ನಿ ಹೆದರುವುದು ಅದೊಂದಕ್ಕೆಯೇ ಆ ಸುದ್ದಿ ಎತ್ತಿದರೆ ಸಾಕು ಅವರಮ್ಮ ಪಕ್ಕದಲ್ಲೇ ಇರಬೇಕು ಇಲ್ಲದಿದ್ದರೆ ಅವಳ ಕಣ್ಣಿನಿಂದ ಗಂಗೆ ಯಮುನೆ ಸುನಾಮಿಯಂತೆ ಸುರಿಯಲು ಶುರುವಾಗುತ್ತೆ .......ಎಂದವಳೇ ಆಶ್ರಮದಲ್ಲಿನ ಇಂಜಕ್ಷನ್ ಘಟನೆಯನ್ನು ಎಲ್ಲರಿಗೂ ಹೇಳಿದಳು.

ಅದೇ ಬೀದಿಯಲ್ಲಿ ವಾಸಿಸುವ ಮಹಿಳೆಯೊಬ್ಬರು.......ನಿಜಕ್ಕೂ ನೀತು ಈ ಮಗುವನ್ನು ಯಾರೇ ಹೆತ್ತಿದ್ದರೂ ಸರಿ ಎಲ್ಲಾ ಅರ್ಥದಲ್ಲಿಯೂ ನೀನೇ ನಿಶಾಳಿಗೆ ನಿಜವಾದ ತಾಯಿ.

ನೀತು.......ಇವಳು ನನ್ನ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರಿದ್ದಳೆಂದರೆ ಒಂದು ವೇಳೆ ಇವಳೇನಾದರೂ ನನ್ನ ಮಡಿಲಿಗೆ ಬರದೇ ಹೋಗಿದ್ದರೆ ನಾನು ಬದುಕುತ್ತಿದ್ದೆನೋ ಇಲ್ಲವೋ ನನಗೆ ತಿಳಿದಿರಲಿಲ್ಲ ಆದರೆ ದೇವರು ನಮ್ಮಿಬ್ಬರಿಗೂ ಹಾಗೆ ಮಾಡದೆ ಅಮ್ಮ ಮಗಳನ್ನು ಸೇರಿಸಿಬಿಟ್ಟ .

ಬೆಳಿಗ್ಗೆ ಗಂಡನ ಜೊತೆ ಸುರೇಶನನ್ನು ಬೀಳ್ಕೊಟ್ಟು ಗಿರೀಶನಿಗೆ ತಾನೇ ಕಾಲೇಜಿಗೆ ಡ್ರಾಪ್ ಮಾಡುವೆನೆಂದ ನೀತು ಹಾಗೆಯೇ ಆ ಪೋಲಿ ಹುಡುಗರನ್ನೂ ತೋರಿಸುವಂತೇಳಿದಳು. ನೀತು ರೆಡಿಯಾಗಿ ಹೊರ ಬಂದಿದ್ದು ಅಣ್ಣನ ಜೊತೆ ಮಾತನಾಡುತ್ತ ನೀನೂ ಬಾ ಎಂದು ರಶ್ಮಿ ಅಕ್ಕನನ್ನು ಕರೆಯುತ್ತಿರುವುದನ್ನು ಕೇಳಿಸಿಕೊಂಡ ನಿಶಾ ತನ್ನ ಆಟವನ್ನು ಅರ್ಧಕ್ಕೇ ನಿಲ್ಲಿಸಿ ಅಮ್ಮನಿಗಿಂತ ಮೊದಲೇ ಹೋಗಿ ಗೇಟಿನ ಬಳಿ ನಿಂತಿದ್ದಳು. ನೀತು ಮಗಳ ಆತುರವನ್ನು ಕಂಡು ಹಣೆ ಚಚ್ಚಿಕೊಳ್ಳುತ್ತ.......ಚಿನ್ನಿ ನಿನ್ನನ್ನೂ ಕರೆದುಕೊಂಡು ಹೋಗುವೆ ಮೊದಲು ಬೇರೆ ಬಟ್ಟೆ ಹಾಕಿಸುವೆ ಬಾ ಎಂದಳು. ನೀತುಳಿಗಿಂತ ಮೊದಲೇ ರಜನಿ ಮಗಳನ್ನೆತ್ತಿಕೊಂಡು ಚಡ್ಡಿ ಟೀಶರ್ಟ್ ತೊಡಿಸಿದರೆ ಹಿಂದಿನ ದಿನ ಅಶೋಕ ತಂದು ಕೊಟ್ಟಿದ್ದ ಚಾಕೊಲೇಟುಗಳನ್ನು ಚಡ್ಡಿಯ ಜೇಬಿನೊಳಗೆ ಫುಲ್ ತುಂಬಿಸಿಕೊಂಡ ನಿಶಾ ಅಣ್ಣನ ಜೊತೆ ಕಾರನ್ನೇರಿದಳು.

ಕಾಲೇಜಿನ ಬಳಿ ತಲುಪಿದಾಗ ನೀತು ಮಗನಿಗೆ ಕಣ್ಸನ್ನೆಯಲ್ಲೇ ಕೇಳಿದ್ದಕ್ಕವನು ಕಾಲೇಜ್ ಗೇಟಿನ ಬಳಿಯೇ ನಿಂತಿದ್ದ ಐವರು ಹುಡುಗರತ್ತ ತೋರಿಸಿ........ಇವರೇ ಕಣಮ್ಮ ನಾನು ಹೇಳಿದ ಹುಡುಗರು ಎಂದನು.

ನೀತು......ಸರಿ ನೀನೀಗ ಹೋಗು ಸಂಜೆ ಕರೆದೊಯ್ಯಲು ನಾನೇ ಬರುತ್ತೇನೆ ನಿಮ್ಮ ಪ್ರಿನ್ಸಿಪಾಲ್ ರೂಂ...?

ಗಿರೀಶ......ಅಮ್ಮ ಏದುರಿಗೆ ಕಾಣುವ ನೀಲಿ ಬಾಗಿಲೇ ನಮ್ಮ ಪ್ರಿನ್ಸಿಪಾಲರ ಆಫೀಸ್.

ಗಿರೀಶ ಕೆಳಗಿಳಿದು ಕಾಲೇಜಿನತ್ತ ಹೊರಡುವ ಮುನ್ನ ತಂಗಿ ಕೆನ್ನೆಗೆ ಮುತ್ತಿಟ್ಟರೆ ನಿಶಾ ಕೂಡ ಅಣ್ಣನಿಗೆ ಟಾಟಾ ಮಾಡಿ ಹಿಂದಿನ ಸೀಟಿನಿಂದ ಮುಂದೆ ಬಂದು ರಶ್ಮಿಯ ಪಕ್ಕದಲ್ಲಿ ಪವಡಿಸಿದಳು.

ನೀತು ಫ್ಯಾಕ್ಟರಿ ಬಳಿ ಬರುವಷ್ಟರಲ್ಲೇ ಬಸ್ಯ ತನ್ನ 24 ಜನ ಸ್ನೇಹಿತರೊಂದಿಗೆ ನೀಟಾಗಿ ಕಟಿಂಗ್ ಶೇವಿಂಗನ್ನು ಮಾಡಿಸಿಕೊಂಡು ಬಂದು ಕಾದು ಕುಳಿತಿದ್ದನು. ರಶ್ಮಿಯನ್ನು ಅಪ್ಪನ ಬಳಿ ಹೋಗಿರು ನಾನವರ ಜೊತೆ ಸ್ವಲ್ಪ ಮಾತನಾಡಿಕೊಂಡು ಬರುವೆನೆಂದು ನೀತು ಕಳಿಸಿದರೆ ನಿಶಾ ಅಕ್ಕನ ಜೊತೆ ಹೋಗದೆ ಚಾಕೊಲೇಟ್ ಹಿಡಿದೆ ಅಮ್ಮನ ಹಿಂದೆ ಹೊರಟಳು.

ನೀತು.......ಬಸ್ಯ ಎಲ್ಲರೂ ಬಂದಿದ್ದೀರಾ ? ಸಂಬಳದ ವಿಷಯವಾಗಿ ಏನು ಯೋಚಿಸಿರುವಿರಿ ಎಲ್ಲರ ಹತ್ತಿರ ಚರ್ಚಿಸಿಯೇ ಬಂದಿದ್ದೀರ ತಾನೇ ?

ಬಸ್ಯ.......ಮೇಡಂ ನಾವೆಲ್ಲರೂ ನಿಮ್ಮ ಕೈಕೆಳಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ನೆನ್ನೆಯೇ ಸಿದ್ದರಿದ್ದೆವು ಜೊತೆಗೆ ಪ್ರಮಾಣ ಮಾಡಿದಂತೆ ಯಾರೂ ಸಹ ಹೆಂಡದ ಕಡೆ ತಿರುಗಿಯೂ ನೋಡಿಲ್ಲ . ನಮಗೆ ನಮ್ಮವರು ಅಂತ ಹೇಳಿಕೊಳ್ಳುವವರು ಯಾರೂ ಇಲ್ಲ ಇದ್ದವರೆಲ್ಲಾ ನಮ್ಮೊಂದಿಗೆ ಮಾತುಕತೆ ಬಿಟ್ಟೇ ಬಹಳ ವರ್ಷಗಳು ಕಳೆದುಹೋಗಿದೆ. ನನ್ನ ಬಳಿ ಒಂದು ಎಕರೆ ಜಮೀನಿದೆ ಅದರಲ್ಲೇ ಒಂದು ಮನೆ ಕಟ್ಟಿಕೊಂಡು ನಾವೆಲ್ಲರೂ ವಾಸ ಮಾಡುತ್ತಿದ್ದೇವೆ ನೀವು ತಿಂಗಳಿಗೆ ಎಂಟು ಸಾವಿರ ಕೊಟ್ಟರೆ ಸಾಕು.

ನೀತು......ಬಸ್ಯ ನಿನ್ನ ಸ್ನೇಹಿತರು 24 ಜನರಿದ್ದಾರೆ ಅಲ್ಲವಾ ಅವರನ್ನು ಆರು ಜನರ ನಾಲ್ಕು ತಂಡಗಳಾಗಿ ಮಾಡೋಣ. ಒಂದು ತಂಡ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಮತ್ತು ಎರಡನೇ ತಂಡ ಸಂಜೆ ಆರರಿಂದ ಬೆಳಿಗ್ಗೆ ಆರರ ತನಕ ಡ್ಯೂಟಿ ಮಾಡಬೇಕು. ಎರಡು ತಂಡದವರು ಈ ಫ್ಯಾಕ್ಟರಿಯಲ್ಲಿ ಮತ್ತೆರಡು ತಂಡದ ಸದಸ್ಯರು ಇಲ್ಲಿಂದ ಐದು ಕಿಮೀ ದೂರದ ನಮ್ಮ ಮತ್ತೊಂದು ಕಾರ್ಖಾನೆಯಲ್ಲಿ ಕೆಲಸ ಮಾಡಬೇಕಿದೆ. ವಾರದಲ್ಲಿ ಆರು ದಿನ ಕೆಲಸ ಭಾನುವಾರ ರಜೆ ಆದರೆ ಆ ದಿನವೂ ನಿಮ್ಮಲ್ಲಿ ನಾಲ್ಕು ಜನ ಇಲ್ಲಿ ನಾಲ್ವರು ಇನ್ನೊಂದು ಫ್ಯಾಕ್ಟರಿಯ ಬಳಿ ಕಾವಲಿಗೆ ಇರಬೇಕು. ಪ್ರತೀ ಭಾನುವಾರ ನಿಮ್ಮ ತಂಡದ ಹುಡುಗರನ್ನು ನೀನೆ ಬದಲಿಸಿ ಮಿಕ್ಕವರಿಗೆ ರಜೆ ನೀಡುವ ಕೆಲಸದ ಮೇಲುಸ್ತುವಾರಿ ನೋಡಿಕೊಳ್ಳಬೇಕು ಅಂದರೆ ನಿಮ್ಮಿಡೀ ತಂಡದ ಕಾರ್ಯ ಚಟುವಟಿಗಳ ಮೇಲುಸ್ತುವಾರಿ ನಿನ್ನದೇ ಆಗಿರುತ್ತದೆ ಎಲ್ಲರನ್ನೂ ನೀನೇ ನಿಭಾಯಿಸಿ ಲೋಪವಾಗದಂತೆ ನೋಡಿಕೊಳ್ಳಬೇಕು. ನಿಮ್ಮೆಲ್ಲರಿಗೂ ಪ್ರತೀ ತಿಂಗಳೂ ಹದಿನಾಲ್ಕು ಸಾವಿರ ಸಂಬಳವನ್ನ ನೀಡಲು ನಿರ್ಧರಿಸಿರುವೆ ಆದರೆ ಕೆಲಸದಲ್ಲಿ ಶ್ರದ್ದೆ ಪ್ರಾಮಾಣಿಕತೆ ಮತ್ತು ನಿಷ್ಠೆ ಇರಬೇಕು ಯಾರಿಂದಲೂ ಸಹ ಒಂದು ಕಂಪ್ಲೇಂಟ್ ಬರದಂತೆ ನಡೆದುಕೊಳ್ಳಿ ತಿಳಿಯಿತಾ.

ಸದಸ್ಯ 1.......ಮೇಡಂ ನಾವು ಬರೀ ಎಂಟು ಸಾವಿರವೇ ಸಾಕೆಂದರೆ ನೀವು ಹದಿನಾಲ್ಕು ಸಾವಿರಗಳನ್ನು ಕೊಡುತ್ತೀನಿ ಅಂತಿದ್ದೀರ. ನಮಗೆ ಅವಶ್ಯಕವಿರುವ ಹಣಕ್ಕಿಂತಲೂ ನೀವು ಜಾಸ್ತಿ ನೀಡುತ್ತಿರುವಿರಿ ಇದಕ್ಕಾಗಿ ನಾವು ಪ್ರಾಣವನ್ನು ನೀಡಲೂ ಸಿದ್ದರಿದ್ದೇವೆ.
ಅವನ ಮಾತಿಗೆ ಮಿಕ್ಕವರೂ ದನಿಗೂಡಿಸಿದರು.

ನೀತು......ನೀವ್ಯಾರೂ ಪ್ರಾಣ ನೀಡುವ ಅವಶ್ಯಕತೆಯೇ ಇಲ್ಲ ಅದರ ಬದಲಿಗೆ ಎಂತಹುದೇ ಕ್ಲಿಷ್ಟಕರವಾದ ಪರಿಸ್ಥಿತಿ ಏದುರಾದರೂ ನಿಮಗೆ ನಿಭಾಯಿಸುವ ಛಾತಿ ಹೊಂದಿರಬೇಕು. ಫ್ಯಾಕ್ಟರಿಗೆ ಬರುವ ಪ್ರತಿಯೊಬ್ಬರ ಜೊತೆಯೂ ಅವರು ಶ್ರೀಮಂತರೇ ಇರಲಿ ಅಥವ ಬಡವರೇ ಆಗಿರಲಿ ನಯವಿನಯದಿಂದ ಅವರೊಂದಿಗೆ ಮಾತನಾಡಿ ಏಕೆಂದರೆ ಪ್ರತಿಯೊಬ್ಬರಿಗೂ ಮಾರ್ಯಾದೆ ನೀಡುವುದು ನಮ್ಮ ಕರ್ತವ್ಯ . ಆದರೆ ದರ್ಪದಿಂದ ಮೆರೆದು ದೌಲತ್ತು ತೋರಿಸುವಂತ ಜನ ಬಂದರೆ ಮೊದಲು ಫ್ಯಾಕ್ಟರಿಯಲ್ಲಿ ನಾನು ಪರಿಚಯಿಸುವ ಜನರಿಗೆ ವಿಷಯ ತಿಳಿಸಿ ನಂತರ ಅವರೇನು ಹೇಳುವರೋ ಹಾಗೆ ಮಾಡುವಿರಂತೆ.

ಅಮ್ಮ ಅವರೊಂದಿಗೆ ಮಾತನಾಡುತ್ತಿದ್ದರೆ ನಿಶಾ ಒಂದು ಕೈಯಲ್ಲಿಡಿದ ಚಾಕೊಲೇಟ್ ತಿನ್ನುತ್ತ ಎಲ್ಲರನ್ನು ಧಿಟ್ಟಿಸಿ ನೋಡಿ ಇನ್ನೊಂದು ಕೈನಿಂದ ಜೇಬಿನೊಳಗಿದ್ದ ಚಾಕೊಲೇಟಲ್ಲಿ ಒಂದೊಂದನ್ನೇ ತೆಗೆದು ಅವರಿಗೆ ನೀಡುತ್ತಿದ್ದಳು. ನಿಶಾಳಿಂದ ಚಾಕೊಲೇಟ್ ಪಡೆದು ಅವಳ ತಲೆ ಸವರಿದಾಗ ನಿಶಾ ಅವರನ್ನು ದುರುಗುಟ್ಟಿ ನೋಡಿ ತಲೆ ಸವರದಂತೆ ತಲೆಯಳ್ಳಾಡಿಸಿ ಅವರುಗಳಿಗೆ ಬೆರಳು ತೋರಿ ಎಚ್ಚರಿಸುತ್ತಿದ್ದರೆ ಅವರೆಲ್ಲರ ಮುಖದಲ್ಲಿಯೂ ಮುಗುಳ್ನಗು ಮೂಡಿತ್ತು .

ಅಶೋಕ ಮತ್ತು ರವಿಯನ್ನು ಕರೆದ ನೀತು......ಇವರು ಅಶೋಕ ಅಂತ ಮತ್ತಿವರು ನನ್ನ ಅಣ್ಣ ರವಿ ಇಬ್ಬರು ನಿಮ್ಮ ಬಾಸ್ ಇವರೇನೇ ಹೇಳಿದರೂ ನೀವು ಅದರಂತೆಯೇ ಮಾಡಬೇಕು. ಈಗ ನಿಮ್ಮೆಲ್ಲರಿಗೂ ತಲಾ ಐದು ಸಾವಿರ ಹಣವನ್ನು ಮುಂಗಡವಾಗಿ ನೀಡುತ್ತೇನೆ ಇಂದಿನಿಂದಲೇ ಕೆಲಸಕ್ಕೆ ಸೇರಿಕೊಳ್ಳಿರಿ. ನಿಮಗೆಲ್ಲಾ ಯಾವ ರೀತಿ ಯೂನಿಫಾರಂ ಎಂದು ನಿರ್ಧರಿಸಿ ಅಶೋಕ ಅಥವ ರವಿ ಅಣ್ಣ ಹೇಳುತ್ತಾರೆ ಅದರಂತೆಯೇ ಇವರು ಹೇಳಿದ ಅಂಗಡಿಗೆ ಹೋಗಿ ನಿಮ್ಮ ಅಳತೆ ಕೊಟ್ಟು ಬನ್ನಿ ಯೂನಿಫಾರಂಗೆ ತಗಲುವ ವೆಚ್ಚೆವನ್ನೆಲ್ಲಾ ಕಂಪನಿಯೇ ನೀಡುತ್ತದೆ. 

ಬೆಳಗಿನ ಹೊತ್ತು ಇಲ್ಲಿ ಕಟ್ಟಡದ ಕೆಲಸಗಳು ನಡೆಯುವ ಕಾರಣ ನಿಮ್ಮೆಲ್ಲರಿಗೆ ಏನೂ ಕೆಲಸವಿರುವುದಿಲ್ಲ ಆದರೆ ರಾತ್ರಿ ಸಮಯ ಮತ್ತು ಭಾನುವಾರ ನೀವುಗಳೇ ಜವಾಬ್ದಾರಿ ಹೊರಬೇಕು ನಿಮಗೆ ಕಟ್ಟಡದ ಕಾಮಗಾರಿ ಕೆಲಸ ಮಾಡುವ ಮನಸ್ಸಿದ್ದರೆ ಆರ್ಕಿಟೆಕ್ಟ್ ರಮೇಶರವರ ಬಳಿ ಹೋಗಿ ನನ್ನ ಹೆಸರು ಹೇಳಿ ನೀತು ಮೇಡಂ ಕಳಿಸಿದರು ಅಂತ. ಈಗ ನೀವು ಮುಂಗಡ ಹಣ ಪಡೆದುಕೊಂಡು ಇವರು ಹೇಳಿದಂತೆ ಕರ್ತವ್ಯದಲ್ಲಿ ಸೇರಿಕೊಳ್ಳಿ ನಿಮಗೆ ಒಳ್ಳೆಯದಾಗಲಿ.

ಅಶೋಕ ಮೊದಲೇ ಅವರಿಗೆ ಕೊಡುವುದಕ್ಕೆಂದು ತಂದಿದ್ದ ಹಣದಿಂದ ಪ್ರತಿಯೊಬ್ಬರಿಗೂ ತಲಾ ಐದೈದು ಸಾವಿರ ನಿಶಾಳ ಕೈಯಿಂದಲೇ ಕೊಡಿಸಿದನು. ಅವರೆಲ್ಲರೂ ಹಣ ಪಡೆದುಕೊಂಡು ರವಿಯ ಹತ್ತಿರ ತಮ್ಮ ಹೆಸರು....ವಯಸ್ಸು.....ವಿಳಾಸ ಮತ್ತು ಫೋನ್ ನಂ...ಬರೆಸಿ ನೀತುವಿನ ಕಾಲಿಗೆ ನಮಸ್ಕರಿಸಿದರು. ನೀತು ಹಾಗೆ ಮಾಡದಂತೆ ಹೇಳಿದರೂ ಕೇಳದೆ.......ಮೇಡಂ ನಾವು ದುರ್ಗಾ ಮಾತೆಯ ಆರಾಧಕರು ನಿಮ್ಮಲ್ಲೂ ನಮಗೆ ಆ ತಾಯಿಯ ಪ್ರತಿರೂಪ ಕಾಣಿಸುತ್ತಿದೆ ನಮ್ಮ ಜೀವನವನ್ನು ಸರಿದಾರಿಗೆ ತಂದು ನಮಗೂ ಒಂದು ಒಳ್ಳೆ ಜೀವನ ನೀಡುತ್ತಿರುವಿರಿ ದಯವಿಟ್ಟು ನಮ್ಮನ್ನು ಹರಿಸಿ ಎಂದು ವಿನಯದಿಂದ ಕೇಳಿಕೊಂಡರು. ಈ ದಿನದಿಂದಲೇ ನಾವೆಲ್ಲರೂ ಕೆಲಸ ನಿರ್ವಹಣೆ ಮಾಡುವುದರ ಜೊತೆ ಕಟ್ಟಡದ ಕಾಮಗಾರಿಯಲ್ಲೂ ಕೂಡ ಸಹಾಯಕರಾಗಿ ದುಡಿಯುತ್ತೇವೆಂದು ಕೆಲಸದಲ್ಲಿ ತೊಡಗಿಕೊಂಡರು.

ನೀತು ತಾನಿನ್ನು ಬರುವೆ ಅನುಷ ಜೊತೆ ಮಾರ್ಕೆಟ್ಟಿಗೆ ಹೋಗಿ ಸೆಕ್ಯೂರಿಟಿ ಯೂನಿಫಾರಂ ವಿಚಾರಿಕೊಂಡು ನಿಮಗೆ ಫೋನ್ ಮಾಡುವೆ. ಬಸ್ಯನನ್ನು ಕರೆದ ನೀತು.......ಸಂಜೆ ಮೂರರ ಹೊತ್ತಿಗೆ ಪಟ್ಟಣದ ಸರ್ಕಾರಿ ಕಾಲೇಜಿನ ಹತ್ತಿರ ನೀವು ಐದಾರು ಜನ ಬನ್ನಿರಿ. ಆ ಕಾಲೇಜಿನ ಪ್ರಿನ್ಸಿಪಾಲ್ ಮಗ ಮತ್ತವನ ಸ್ನೇಹಿತರು ಅಲ್ಲಿ ಓದಲಿಕ್ಕೆ ಬರುವ ಹೆಣ್ಣು ಮಕ್ಕಳಿಗೆ ಪ್ರತಿನಿತ್ಯವೂ ಚುಡಾಯಿಸಿ ಕಿರುಕುಳ ನೀಡುತ್ತಿದ್ದಾನೆ ಸ್ವಲ್ಪ ಬುದ್ದಿ ಕಲಿಸಬೇಕಿದೆ.

ಬಸ್ಯ ಕೋಪದಿಂದ.......ಮೇಡಂ ನಾವು ಬರ್ತೀವಿ ಈ ರೀತಿ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವವರನ್ನು ಕಂಡರೆ ಮೈಯೆಲ್ಲಾ ಉರಿದು ಹೋಗುತ್ತೆ ಸಿಗಿದು ನೇತಾಕಿ ಬಿಡೋಣ ಅನಿಸುತ್ತದೆ.

ನೀತು.....ಅದೇನೂ ಬೇಡ ಒಂದು ಹದಿನೈದು ದಿನ ಮಂಚದಿಂದ ಕೆಳಗಿಳಿಯದಂತೆ ಬಡಿದರೆ ಸಾಕು ಅವರ ಜೊತೆ ಪ್ರಿನ್ಸಿಪಾಲಿಗೂ ಸರಿಯಾಗಿ ಬಿದ್ದರೆ ಚೆನ್ನಾಗಿರುತ್ತೆ ಏಕೆಂದರೆ ಅವನೇ ಇದಕ್ಕೆಲ್ಲಾ ಸಪೋರ್ಟ್ ಮಾಡಿ ಆ ಹುಡುಗರಿಗೆ ಉತ್ತೇಜಿಸುವವನು. ಆದರೆ ಅವರಿಗೆ ಬಡಿಯುವಾಗ ನೀವು.......ನನ್ನ ತಂಗಿಯನ್ನೇ ರೇಗಿಸಿ ಚುಡಾಯಿಸುವೆಯಾ ಅಂತ ಕೂಗಿ ಕೂಗಿ ಹೇಳುವುದನ್ನು ಮಾತ್ರ ಮರೆಯಬಾರದು ಸಂಜೆ ಕಾಲೇಜಿನ ಬಳಿ ಬೇಟಿಯಾಗುವೆ.

2 comments:

  1. ಸಿದ್ದಮ್ಮರಾಜ್12 May 2024 at 22:14

    ಕತೆ ಒಂದು ತರಹ ಎಲ್ಲಿಂದ ಎಲ್ಲಿಗೊ ಹೋಗುತ್ತಿದೆ. ಜೊತೆಗೆ ಕುತೂಹಲ. ಮುಂದುವರೆಸಿ

    ReplyDelete