Total Pageviews

Sunday, 3 November 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 236

ಎಲ್ಲರೂ ತಿಂಡಿ ಮುಗಿಸಿದ ಬಳಿಕ ಹಿರಿಯರು ಕೆಲಸಗಳಿಗೆ ತೆರಳಿದ್ದು ಮಕ್ಕಳು ಶಾಲಾ ಕಾಲೇಜಿಗೆ ಹೋದ ನಂತರ ನಿಶಾ ತನ್ನ ಫ್ರೆಂಡ್ಸನ್ನು ಸೇರಿಸಿಕೊಂಡು ತಾತನ ಜೊತೆ ಮನೆಯಂಗಳದಲ್ಲಿ ಆಡುತ್ತಿದ್ದಳು. ಕೊನೆಯವರಾಗಿ ಸೋದರತ್ತೆ ಸುಮಾಳ ಜೊತೆ ನಿಧಿ ತಿಂಡಿ ತಿನ್ನಲು ಕುಳಿತಾಗ ನಿಕಿತಾ ಮನೆಯೊಳಗೆ ಕಾಲಿಟ್ಟಳು.

ಸುಮ.......ಬಾರಮ್ಮ ನಿಕ್ಕಿ ತಿಂಡಿ ತಿನ್ನುವಂತೆ ಕೂತ್ಕೊ.

ನಿಕಿತಾ......ಆಂಟಿ ನಂದಾಯ್ತು ನೀವು ಆರಾಮವಾಗಿ ಮುಗಿಸಿರಿ ನಾನೇ ಬಡಿಸುವೆ. ಏನಕ್ಕ ಇವತ್ತು ಬೆಳಿಗ್ಗೆ ಜಾಗಿಂಗಿಗೇ ಬರಲಿಲ್ಲ.

ನಿಧಿ.....ಏದ್ದೇಳೋದೇ ಲೇಟಾಯ್ತು ಕಣೆ ಅದಕ್ಕೆ ಬರಲಿಲ್ಲ.

ತಿಂಡಿ ಕಾಫಿ ಮುಗಿಸಿ ಇಬ್ಬರೂ ಮಹಡಿ ರೂಂ ಸೇರಿಕೊಂಡಾಗ......

ನಿಕಿತಾ.....ಅಕ್ಕ ರಾತ್ರಿ ವೀಡಿಯೋ ನೋಡಿದ್ರಾ ಏನು ?

ನಿಧಿ ನಿಟ್ಟುಸಿರು ಬಿಡುತ್ತ.......ಅದೇ ವೀಡಿಯೋ ಕಾರಣಕ್ಕೆ ನನಗೆ ಬೆಳಿಗ್ಗೆ ಎಚ್ಚರವೇ ಆಗಲಿಲ್ಲ ಕಣೆ.

ನಿಕಿತಾ......ಯಾಕೆ ಏನಾಯ್ತು ?

ನಿಧಿ ರಾತ್ರಿಯ ಘಟನೆ ವಿವರಿಸಿದಾಗ ಜೋರಾಗಿ ನಗುತ್ತ......

ನಿಕಿತಾ......ಅಂತೂ ಕೊನೆಗೆ ನೀವೂನೂ ಮಾಸ್ಟ್ರಬೇಟ್ ಮಾಡಿದ್ರಾ

ನಿಧಿ.....ಏನೇ ? ನೀನೇನಂದೆ ?

ನಿಕಿತಾ.......ಅದೇ ಅಕ್ಕ ನೀವೂನೂ ಜಟಕಾ ಹೊಡ್ಕೊಂಡ್ರಾ ಅಂದೆ.

ನಿಧಿ....ಥೂ ನೀನು ತುಂಬ ಪೋಲಿ ಆಗೋಗಿದ್ದೀಯ ಅಕ್ಕನ ಜೊತೆ ಹೀಗೆಲ್ಲ ಮಾತಾಡ್ತಾರಾ.

ನಿಕಿತಾ.....ಮೊದಲಿಗೆ ಇಂಗ್ಲಿಷಿನಲ್ಲಿ ನಾನು ಫುಲ್ ಸ್ಟಿಂಡರ್ಡಾಗಿ ಕೇಳಿದ್ದು ನಿಮಗೆ ಅರ್ಥವಾಗಲಿಲ್ಲ ಅದಕ್ಕೇ ಅಚ್ಚ ಕನ್ನಡದಲ್ಲಿ ಕೇಳಿದೆ ಇದರಲ್ಲೇನು ತಪ್ಪು. ಅಕ್ಕ ಆ ಸಮಯದಲ್ಲಿ ನಿಮಗ್ಯಿವ ರೀತಿ ಫೀಲ್ ಆಯಿತೆಂಬುದನ್ನೇ ಹೇಳಲಿಲ್ಲವಲ್ಲ ಅದನ್ನೇಳಿ ಮೊದಲು.

ನಿಧಿ......ಥೂ ಹೋಗೆ ಸುಮ್ಮನೆ ಸತಾಯಿಸಬೇಡ.

ನಿಕಿತಾ......ಹೇಳಿ ಅಕ್ಕ ನಾನು ನಿಮಗೆಲ್ಲವನ್ನೂ ಹೇಳಲಿಲ್ಲವಾ ನನ್ನ ಹತ್ತಿರವೇನು ನಿಮ್ಮ ಮುಚ್ಚುಮರೆ ಹೇಳಿ ಕ್ವಿಕ್.

ನಿಧಿ ಯೋಚಿಸುತ್ತ.......ಹೇಗೆ ? ಏನು ಹೇಳಲಿ ಅಂತ ಗೊತ್ತಾಗ್ತಿಲ್ಲ ಕಣೆ ಆ ರೀತಿಯ ಫೀಲಿಂಗ್ ನನಗೆ ಹಿಂದೆಂದೂ ಆಗಿರಲಿಲ್ಲ ಒಂದು ರೀತಿ ಹೊಸತನದ ಫೀಲ್ ಆಗ್ತಿತ್ತು ಅದನ್ನೇಗೆ ಹೇಳಲಿ. ನನ್ನ ಇಡೀ ದೇಹವೆಲ್ಲಾ ಹೂವಿನಷ್ಟು ಹಗುರವಾದಂತೆ ಗಾಳಿಯಲ್ಲಿ ತೇಲುತ್ತಿರುವ ರೀತಿ ಭಾಸವಾಗುತ್ತಿತ್ತು. ಇದಕ್ಕಿಂತ ಹೆಚ್ಚು ಹೇಳಲು ನನ್ನಿಂದಾಗಲ್ಲ.

ನಿಕಿತಾ.......ಅರ್ಥವಾಗುತ್ತೆ ಅಕ್ಕ ಫಸ್ಟ್ ಟೈಂ ನನಗೂ ಕೂಡ ನಿಮ್ಮ ರೀತಿಯೇ ಫೀಲಾಗಿತ್ತು ಈಗೆಲ್ಲ ನಾರ್ಮಲ್ ಆಗೋಗಿದೆ.

ನಿಧಿ ಮುಗುಳ್ನಗುತ್ತ......ನಾರ್ಮಲ್ಲಾಗದೆ ಇನ್ನೇನು ನನ್ನ ತಮ್ಮನನ್ನೇ ಬುಟ್ಟಿಗೆ ಹಾಕಿಕೊಂಡಿದ್ದೀಯಲ್ಲ.

ನಿಕಿತಾ......ಓಹೋ ನಿಮ್ಮ ತಮ್ಮನೇನು ಪೆಪ್ಪರಮೆಂಟ್ ತಿನ್ನುವ ಪುಟಾಣಿ ಪಾಪುಅಂದ್ಕೊಂಡ್ರಾ ಒಳ್ಳೆ ಮ್ಯಾಚೋ ಮ್ಯಾನ್.

ನಿಧಿ.....ನನ್ನೆದುರಿಗೇ ನಿನ್ನ ಲವರ್ ಬಾಯ್ ಅದೂ ನನ್ನ ತಮ್ಮನನ್ನು ಹೊಗಳ್ತಿದ್ದೀಯ ಪರವಾಗಿಲ್ಲ ಕಣೆ.

ನಿಕಿತಾ......ಹೋಗಿಕ್ಕ ನೀವು ಪುನಃ ರೇಗಿಸಲು ಶುರುವಾದಿರಿ.

ಇಬ್ಬರೂ ಹೀಗೆಯೇ ಒಬ್ಬರನ್ನೊಬ್ಬರು ಚುಡಾಯಿಸುತ್ತ ಮಾತುಕತೆ ಆಡುತ್ತಿದ್ದರು.
* *
* *
ಮಧ್ಯಾಹ್ನ ಶಾಲೆಯಲ್ಲಿ ಹರೀಶ ತನ್ನ ಸಹ ಶಿಕ್ಷಕರೊಂದಿಗೆ ಊಟ ಮಾಡುತ್ತಿದ್ದಾಗ ಸುರೇಶ ಸ್ಟಾಫ್ ರೂಂ ಬಾಗಿಲನ್ನು ತಟ್ಟಿದನು.

ಸುಕನ್ಯಾ......ಒಳಗೆ ಬಾರೋ ಸುರೇಶ ಊಟವಾಯಿತಾ ?

ಸುರೇಶ........ಆಯ್ತು ಮಿಸ್ ಈಗಷ್ಟೇ ಮುಗಿಸಿದೆ ಅದು ಹರೀಶ್ ಸರ್ ಹತ್ತಿರ ಸ್ವಲ್ಪ ಕೆಲಸವಿತ್ತು.

ಶಿಕ್ಷಕ3.......ಲೋ ಸುರೇಶ ಈ ನಿನ್ನ ಹರೀಶ ಸರ್ ನಿಮ್ಮಪ್ಪ ಕಣೋ ನಮ್ಮೆದುರಿಗೂ ಅಪ್ಪ ಅಂತ ಕರೆಯದೆ ಸರ್ ಅಂತಿದ್ದೀಯಲ್ಲ ಕೇವಲ ಕ್ಲಾಸಿನಲ್ಲಿ ಸರ್ ಅಂತ ಕರೆದರೆ ಸಾಕು.

ಶಿಕ್ಷಕ5.......ಶಾಲೆಯಲ್ಲಿ ಅಪ್ಪ ಅಂತ ಕರೀಬೇಡ ಸರ್ ಅಂತ ಎಲ್ಲ ವಿಧ್ಯಾರ್ಥಿಗಳು ಕರೆಯುವಾಗ ನೀನೂ ಹಾಗೇ ಕರೆಯಬೇಕೆಂದು ಹರೀಶ್ ಸರ್ ಹೇಳಿರುತ್ತಾರೆ ಅದರಲ್ಲಿ ತಪ್ಪೇನಿಲ್ಲ. ಹೇಳು ಸುರೇಶ ಏನು ಕೆಲಸವಿತ್ತು ?

ಸುರೇಶ.....ಸರ್ ಅದು....

ಶಿಕ್ಷಕ8.......ಹರೀಶ್ ಸರ್ ಅದೇನೆಂದು ಕೇಳಿ ಏನೋ ಪರ್ಸನಲ್ ಇರಬೇಕು ನಮ್ಮೆದುರಿಗೆ ಹೇಳಲು ಹಿಂಜರಿಯುತ್ತಿದ್ದಾನೆ.

ಹರೀಶ ನಗುತ್ತ ಮೇಲೆದ್ದು ಮಗನ ಜೊತೆ ರೂಮಿನಿಂದಾಚೆ ಬಂದು

ಹರೀಶ.....ಹೇಳಪ್ಪ ರಾಜಕುಮಾರ ಅಪ್ಪನ ಹತ್ತಿರ ಏನು ಕೆಲಸವಿದೆ ಮನೆಗೆ ಹೋಗುವವರೆಗೂ ಕಾಯಲಾಗದಂತ ಕೆಲಸ.

ಸುರೇಶ.......ಅಪ್ಪ ನಾನೆಲ್ಲಿಯ ರಾಜಕುಮಾರ ಅಕ್ಕ ಚಿನ್ನಿ ಇಬ್ಬರು ತಾನೇ ರಾಜಕುಮಾರಿಯರು.

ಹರೀಶ.....ಆಯ್ತಪ್ಪ ಕಂದ ಈಗೇಳು ಏನು ಕೆಲಸವಿತ್ತು ?

ಸುರೇಶ.....ಅಪ್ಪ ನನಗೇನೂ ಕೆಲಸವಿಲ್ಲ......

ಹರೀಶ.....ಮತ್ತೆ ?

ಸುರೇಶ........ಅಪ್ಪ ನಾನು ಊಟ ಮಾಡುತ್ತಿದ್ದಾಗ ಯಾರೋ ಒಬ್ಬ ನಿನಗೆ ಪರಿಚಯದವರಂತೆ ನನ್ನನ್ನು ಕರೆದ. ಅವನಿಗೆ ನನ್ನ ಹೆಸರು ಗೊತ್ತಿರದಿದ್ದರೂ ನಾನು ನಿಮ್ಮ ಮಗನೆಂದು ಗೊತ್ತಿತ್ತು.

ಹರೀಶ......ಯಾರವನು ? ನೇರವಾಗಿ ನನ್ನ ಹತ್ತಿರ ಬಾರದೆ ನಿನ್ನನ್ನು ಯಾಕೆ ಕರೆದನಂತೆ ? ಅವನ ಹೆಸರೇನು ?

ಸುರೇಶ.....ನಾನೂ ಇದನ್ನೇ ಕೇಳಿದೆ ಅದಕ್ಕವನು ಈ ಬಾಕ್ಸ್ ನಿನ್ನ ತಂದೆಗೆ ತಲುಪಿಸು ನಾನ್ಯಾರೆಂಬುದು ಅವರಿಗೆ ಗೊತ್ತಾಗುತ್ತೆ ಅಂತ ಇದನ್ನು ನನಗೆ ಕೊಟ್ಟು ಹೋಗ್ಬಿಟ್ಟ......ಎಂದೇಳಿ ಕೈಯಲ್ಲಿದ್ದ ಪುಟ್ಟ ಬಾಕ್ಸನ್ನು ಅಪ್ಪನಿಗೆ ನೀಡಿದ.

ಗಿಫ್ಟ್ ಪ್ಯಾಕಾಗಿದ್ದ ಬಾಕ್ಸ್ ತಿರುಗಿಸಿ ನೋಡಿದರೆ ಅದರಲ್ಲಿ ಯಾರದ್ದೇ ಹೆಸರು ಬರೆದಿಲ್ಲದಿರುವುದನ್ನು ಗಮನಿಸಿದ ಹರೀಶ ಮಗನಿಗೆ ಕ್ಲಾಸಿಗೋಗೆಂದು ಕಳಿಸಿದನು. ಬಾಕ್ಸ್ ತೆರದಾಗ ಅದರೊಳಗೊಂದು ಮೊಬೈಲ್ ಮತ್ತು ಒಂದು ಪತ್ರವನ್ನು ಇಡಲಾಗಿತ್ತು. ಹರೀಶ ಅಲ್ಲಿದ್ದ ಮೊಬೈಲ್ ನೋಡಿ ಶಾಕಾಗುತ್ತ ಪತ್ರ ತೆರೆದರೆ.......

ಮಿಸ್ಟರ್ ಹರೀಶ್.....

ನಾನ್ಯಾರೆಂದು ನೀನು ತಲೆ ಕೆಡಿಸಿಕೊಳ್ಳಲು ಹೋಗ್ಬೇಡಿ ಅದರಿಂದ ಯಾವುದೇ ಪ್ರಯೋಜನವಿಲ್ಲ. ಸಂಜೆ ಸರಿಯಾಗಿ 5:30 ಹೊತ್ತಿಗೆ ನಿಮಗಾಗಿಯೇ ಕಳುಹಿಸಿರುವ ಮೊಬೈಲಿಗೆ ನಾನು ಫೋನ್ ಮಾಡಿ ಹೇಳ್ತೀನಿ ಅಲ್ಲಿವರೆಗೂ ತಾಳ್ಮೆಯಿಂದಿರಿ. ಇವನ್ಯಾರೋ ಹುಚ್ಚನೇ ಇರಬೇಕು ಅಂದುಕೊಳ್ಳಬೇಡಿ ಇನ್ನೊಂದು ಮುಖ್ಯವಾದ ವಿಷಯ ಇದರ ಬಗ್ಗೆ ಯಾರ ಹತ್ತಿರವೂ ಹೇಳಲು ಹೋಗ್ಬೇಡಿ ಯಾಕೆ ಗೊತ್ತ ? ಇದು ನಿಮ್ಮ ಕುಟುಂಬದ ಗೌರವಕ್ಕೆ ಸಂಬಂಧಸಿದ್ದು ಅದಕ್ಕಿಂತಲೂ ಪ್ರಮುಖವಾಗಿ ನಿಮ್ಮ ಮಡದಿಯ ಆತ್ಮಗೌರವ....ಮರ್ಯಾದೆ.... ಮುಖ್ಯವಲ್ಲವಾ. ಫೋನ್ ಬರುವ ತನಕ ಹಾಯಾಗಿರಿ ಹಾಂ...ನಾನು ಕಳುಹಿಸಿರುವ ಫೋನ್ ಆನ್ ಮಾಡುವುದನ್ನು ಮರೆಯಬೇಡಿ ಆಮೇಲೆ ನೀವೇ ಪಶ್ಚಾತ್ತಾಪ ಪಡಬೇಕಾಗುತ್ತೆ.

ನಿಮ್ಮ ಹಿತೈಶಿ.

ಹರೀಶ ಒಂದು ಕೈಯಲ್ಲಿ ಪತ್ರವನ್ನಿಡಿದು ಮತ್ತೊಂದರಲ್ಲಿ ಮೊಬೈಲ್ ಹಿಡಿದು ಎರಡನ್ನೂ ನೋಡುತ್ತ ನೀತುವಿನ ಮಾನ ಮರ್ಯಾದೆಯ ಪ್ರಶ್ನೆ ಅಂತಿದ್ದಾನೆ ಏನಿದರ ಅರ್ಥ ಎಂದಾಲೋಚಿಸುತ್ತ ಅವನಿಗೆ ತಲೆಯೇ ತಿರುಗುತ್ತಿತ್ತು.

ಪತ್ರದಲ್ಲಿ ಮಡದಿ ನೀತು ಬಗ್ಗೆ ಪ್ರಸ್ತಾಪವಿದ್ದು ಅವಳ ಆತ್ಮಗೌರವದ ಬಗ್ಗೆಯೂ ಬರೆದಿರುವುದನ್ನೋದಿದಾಗ ಹರೀಶನ ಮನಸ್ಸಲ್ಲಿ ಹತ್ತು ಹಲವಾರು ವಿಚಾರ ಸುಳಿದಾಡುತ್ತಿತ್ತು. ಇದೇ ಜಂಜಾಟದಲ್ಲಿಯೇ ಒದ್ದಾಡುತ್ತ ಮಧ್ಯಾಹ್ನ ಊಟದ ನಂತರದ ಶಾಲಾ ಸಮಯವನ್ನು ಕಳೆದ ಹರೀಶ ಮನೆಗೆ ಹಿಂದಿರುಗುವಾಗ ಯಾರೋ ಬಂದು ಅಪ್ಪನಿಗೆ ಒಂದು ಪಾರ್ಸಲ್ ಕೊಟ್ಟು ಹೋದನೆಂದು ಮನೆಯಲ್ಲಿ ಯಾರ ಹತ್ತಿರವೂ ಹೇಳಬಾರದೆಂದನು. ಸುರೇಶ.....ನಯನಾಳ ಜೊತೆಗೆ ಹಿಂದಿರುಗಿದಾಗ ಹರೀಶನ ಮುಖದಲ್ಲಿ ಮನೆಮಾಡಿದ್ದ ಆತಂಕವನ್ನು ಸುಮ ಗಮನಿಸಿದಳು.

ಹರೀಶ ಬಲವಂತದ ನಗು ನಗುತ್ತ.....ಎಲ್ಲಿ ನನ್ನ ಬಂಗಾರಿ ಕಾಣ್ತಿಲ್ಲ ?

ಸುಮ......ಶೀಲಾ ಜೊತೆ ಮಲಗಿದ್ದಾಳೆ ಮಕ್ಕಳೆಲ್ಲರೂ ನಮಿತಾಳ ಮನೆಗೆ ಹೋದರು.

ಸುರೇಶ......ಹಾಗಿದ್ದರೆ ನಾನೂ ಅಲ್ಲಿಗೇ ಹೋಗ್ತೀನಿ.

ನಯನ.....ದೊಡ್ಡಮ್ಮ ನಾನಾಮೇಲೆ ಬಂದು ಫ್ರೆಶಾಗ್ತೀನಿ.

ಇಬ್ಬರೂ ನಮಿತಾಳ ಮನೆಗೆ ಹೋದಾಗ ಹರೀಶ ಪತ್ರ ಮೊಬೈಲಿನ ಬಗ್ಗೆ ಯೋಚಿಸುತ್ತ ತಮ್ಮ ರೂಮಿನತ್ತ ಹೆಜ್ಜೆಯಿಟ್ಟರೆ ಸುಮ ಕೂಡ ಅವನ ಹಿಂದೆಯೇ ಬಂದಳು.

ಸುಮ........ಹರೀಶ್ ಏನು ವಿಷಯ ? ಯಾವುದೋ ಟೆನ್ಷನ್ನಿನಲ್ಲಿ ಇರುವಂತಿದೆ ?

ಹರೀಶ.....ಇಲ್ಲ ಸುಮ ಅಂತದ್ದೇನೂ ಇಲ್ವಲ್ಲ.

ಸುಮ.......ನಿಮ್ಮ ಮುಖದಲ್ಲೇ ಚಿಂತೆ ಎದ್ದು ಕಾಣಿಸ್ತಿದೆ ಅದೇನೆಂದು ನನ್ನ ಜೊತೆಯಲ್ಲೂ ಹಂಚಿಕೊಳ್ಳಬಾರದಾ ?

ಹರೀಶ ಹೇಳಲಾ ಬೇಡವಾ ಎಂದು ಅಸಮಃಜಸದಲ್ಲಿದ್ದು ಕೊನೆಗೆ ಯೋಚಿಸಿ.....ಅದು ನನ್ನ ಸ್ನೇಹಿತನೊಬ್ಬನ ಮಗನ ಬಗ್ಗೆ ನಾನು ಯೋಚಿಸುತ್ತಿದ್ದೆ.

ಸುಮ......ಯಾಕೆ ಅವನಿಗೇನಾಯ್ತು ?

ಹರೀಶ.......ಪಾಪ ನನ್ನ ಸ್ನೇಹಿತ ತುಂಬ ಸಾಧು ಮನುಷ್ಯ ಈಗವನ ಮಗ ಹಾದಿತಪ್ಪಿ ಕಾಲೇಜಿಗೂ ಹೋಗದೆ ಪೋಲಿಗಳ ಜೊತೆಯಲ್ಲಿ ತಿರುಗಾಡುತ್ತ ಬೀಡಿ ಸಿಗರೇಟಿನ ಚಟಕ್ಕೆ ಬಿದ್ದಿರುವುದನ್ನು ನಾನೇ ನೋಡಿದೆ. ಇದನ್ನೇಗೆ ನನ್ನ ಸ್ನೇಹಿತನಿಗೆ ಹೇಳುವುದೆಂದು ನನಗೇ ಅರ್ಥವಾಗ್ತಿಲ್ಲ ಏಕೆಂದರೆ ಅವನಿಗೆ ಹೃದಯ ಸಂಬಂಧಿ ಖಾಯಿಲೆ ಕೂಡ ಇದೆ.

ಸುಮ.....ಇದೊಂದು ಕ್ಲಿಷ್ಟಕರ ಸಮಸ್ಯೆಯೇ ಇದರ ಬಗ್ಗೆ ಚೆನ್ನಾಗಿ ಯೋಚಿಸಿಯೇ ತೀರ್ಮಾನಿಸಬೇಕು ಸಡನ್ನಾಗಿ ನಿಮ್ಮ ಸ್ನೇಹಿತನಿಗೆ ವಿಷಯ ಹೇಳುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ.

ಹರೀಶ.....ನಾನೂ ಅದನ್ನೇ ಯೋಚಿಸುತ್ತಿದ್ದೀನಿ ಒಂದು ಸ್ಟ್ರಾಂಗ್ ಕಾಫಿ ತಂದುಕೊಡು ನಾನು ಹೊರಗೆ ಹೋಗಿ ಬರ್ತೀನಿ.

ಸುಮ......ನೀವು ಫ್ರೆಶಾಗಿ ಅಷ್ಟರಲ್ಲಿ ತರುವೆ.
* *
* *
ಕಾಲೋನಿಯಿಂದ ಹೊರಬಂದ ಹರೀಶನಿಗೆ ಯಾವ ಕಡೆಗೋಗಲಿ ಎಂಬುದೇ ತಿಳಿಯದೆ ಕಾರನ್ನು ಟೌನಿನಿಂದಾಚೆ ತಿರುಗಿಸಿ ಒಂದೆಡೆ ನಿಲ್ಲಿಸಿಕೊಂಡು ಅನಾಮಿಕ ವ್ಯಕ್ತಿಯ ಫೋನಿನಾಗಿ ಕಾಯುತ್ತಿದ್ದನು. ಒಂದೊಂದು ನಿಮಿಷ ಕಳೆಯುವುದೂ ಹರೀಶನಿಗೆ ಒಂದೊಂದು ಯುವ ಕಳೆದಂತಾಗುತ್ತಿದ್ದು ಅವನಲ್ಲಿನ ಆತಂಕವೂ ಹೆಚ್ಚಾಗುತ್ತಿತ್ತು.
ಸಮಯ ಐದುವರೆ ಆಗುತ್ತಿದ್ದಂತೆ ಹರೀಶನ ಕೈಯಲ್ಲಿದ್ದ ಮೊಬೈಲ್ ರಿಂಗಾಗುತ್ತಿದ್ದು ಅದರಲ್ಲಿ ಪ್ರೈವೇಟ್ ನಂ.. ಎಂಬುದಾಗಿ ಡಿಸ್ಲೇ ಆಗುತ್ತಿತ್ತು. ಹರೀಶ ಆತಂಕದಲ್ಲೇ ರಿಸೀವ್ ಮಾಡಿ......

ಹರೀಶ.....ಹಲೋ ಯಾರಿದು ? ಈ ರೀತಿ ನನ್ನ ಹೆಂಡತಿಯ ಬಗ್ಗೆ ಪತ್ರದಲ್ಲಿ ಬರೆದು ಕಳಿಸಿರುವುದರ ಅರ್ಥವೇನು ?

ಅನಾಮಿಕ......ಮಿಸ್ಟರ್ ಹರೀಶ್ ಸಮಾಧಾನ ಯಾಕಿಷ್ಟು ಏಕ್ಸೈಟ್ ಆಗ್ತೀರಾ ನಾನೀಗ ಫೋನ್ ಮಾಡಿರುವುದೇ ಅದನ್ನು ಹೇಳಲಿಕ್ಕಾಗಿ ತಾನೇ ಸ್ವಲ್ಪ ತಾಳ್ಮೆಯಿಂದಿರಿ.

ಹರೀಶನಿಗೆ ಕೋಪವುಕ್ಕಿ ಬರುತ್ತಿದ್ದರೂ ಸಹ ತಾಳ್ಮೆಯಿಂದ ಅವನು ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದನು.

ಅನಾಮಿಕ.......ಮಿಸ್ಟರ್ ಹರೀಶ್ ನಾನ್ಯಾರು ? ನನಗೇನು ಬೇಕು ? ನಾನಿದೆಲ್ಲ ಯಾಕೆ ಮಾಡ್ತಿದ್ದೀನಿ ಅಂತ ಯೋಚಿಸುವುದಕ್ಕೆ ಹೋಗ್ಬೆಡಿ ಅದರಿಂದ್ಯಾವುದೇ ಪ್ರಯೋಜನವಿಲ್ಲ. ಈಗ ನೇರವಾಗಿಯೇ ನಾನು ವಿಷಯಕ್ಕೆ ಬರ್ತೀನಿ ನೀವೀಗ ಮಾತನಾಡುತ್ತಿರುವ ಮೊಬೈಲಿನ ಗ್ಯಾಲರಿಯಲ್ಲೊಂದು ವೀಡಿಯೋ ಇದೆ ಅದನ್ನು ನೋಡಿ ನಿಮ್ಮ ಮಡದಿ ನೀತು ಅವರಿಗೂ ತೋರಿಸಿ. ಹರೀಶ್ ವೀಡಿಯೋವನ್ನು ನಿಮ್ಮ ಮಡದಿಗೆ ತೋರಿಸುವುದನ್ನು ಮಾತ್ರ ಮರೆಯಬೇಡಿ ಅದು ತುಂಬಾ ಮುಖ್ಯ. ನಾಳೆ ಬೆಳಿಗ್ಗೆ 10 ಘಂಟೆಗೆ ಸರಿಯಾಗಿ ನಾನಿದೇ ನಂ..ಗೆ ಫೋನ್ ಮಾಡುವೆ ಆಗ ನಿಮ್ಮ ಮಡದಿ ತೆಗೆದುಕೊಂಡರೆ ಸಾಕು ನನಗೆನು ಬೇಕೆಂದು ಅವರಿಗೇ ಹೇಳ್ತೀನಿ ಒಕೆ ಹರೀಶ್ ಗುಡ್ ಬಾಯ್......ಎಂದೇಳಿ ಫೋನ್ ಕಟ್ ಮಾಡಿಬಿಟ್ಟನು.

ಹರೀಶ ಆತುರವಾಗಿ ಫೋನ್ ಗ್ಯಾಲರಿ ತೆರೆದಾಗ ಅದರಲ್ಲಿ ಒಂದೇ ಒಂದು ವೀಡಿಯೋ ಇದ್ದು ಅದನ್ನು ಪ್ಲೇ ಮಾಡಿದನು. ಮೊದಲಿಗೆ ಒಂದು ಬಾತ್ರೂಮಿನ ದೃಶ್ಯ ಮಾಡುತ್ತಿದ್ದು ಒಂದೆರಡು ನಿಮಿಷಗಳ ನಂತರ ಅಲ್ಲಿಗೆ ನೀತು ಬಂದವಳೇ ಬಟ್ಟೆ ಕಳಚಿ ಬೆತ್ತಲಾಗಿ ಸ್ನಾನ ಮಾಡುತ್ತಿರುವ ದೃಶ್ಯಾವಳಿಗಳು ಫುಲ್ ಹೆಚ್.ಡಿ. ಕ್ವಾಲಿಟಿಯಲ್ಲಿ ಸೆರೆ ಹಿಡಿಯಲಾಗಿತ್ತು. ನೀತುವಿನ ಮುಖ ಅವಳ ಪ್ರತೀ ಅಂಗಾಂಗಗಳೂ ಅತ್ಯಂತ ಸ್ಪಷ್ಟವಾಗಿ ವೀಡಿಯೋದಲ್ಲಿ ಕಾಣಿಸುತ್ತಿದ್ದು ಅದನ್ನೋಡಿದ ಹರೀಶನ ಕೈಯಿಂದ ಮೊಬೈಲ್ ಜಾರಿ ಬಿದ್ದರೆ ಅವನಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿತ್ತು.

No comments:

Post a Comment