Total Pageviews

Thursday, 7 November 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 243

ರಾತ್ರಿ 11:30 ಹೊತ್ತಿಗೆ ಇಬ್ಬರೂ ಮನೆಗೆ ಹಿಂದಿರುಗಿದಾಗ ರೇವಂತ್ ಬಾಗಿಲು ತೆಗೆದು.......

ರೇವಂತ್.....ನಾನ್ಯಾವುದೋ ಮುಖ್ಯವಾದ ಕೆಲಸಕ್ಕೆ ಹೋಗಿದ್ದೀರ ಅಂದ್ಕೊಂಡಿದ್ದೆ ನೀವೇನೋ ಶಾಪಿಂಗಿಗೆ ಹೋಗಿದ್ದಂತಿದೆ.

ಪ್ರೀತಿ........ಹೌದು ಕಣೆ ನೀತು ನಿಮ್ಮ ಪ್ಲಾನ್ ಈ ರೀತಿ ಅಂದಿದ್ದರೆ ನಾನು ನಿಮ್ಜೊತೆ ಬರ್ತಿದ್ನಲ್ಲ.

ಹರೀಶ.......ಯಾರಿಗೂ ಹೇಳದೆ ಹೋಗಿದ್ದೇ ಗುಟ್ಟಾಗಿ ಪರ್ಚೇಸ್ ಮಾಡಿಕೊಂಡು ಬರುವುದಕ್ಕಲ್ಲವಾ. ಪ್ರೀತಿ ಸ್ವಲ್ಪ ಕಾಫಿ ಮಾಡು.

ನೀತು.....ಅಣ್ಣ ಚಿನ್ನಿ ಸೈಜಿ಼ನ ಬಟ್ಟೆಗಳಂತೂ ತುಂಬ ವೆರೈಟಿಗಳಿತ್ತು ಬೇಗ ದೊಡ್ಡವಳಾಗಿ ಹೋಗ್ತಾಳಲ್ಲ ಅಂತ ಕೆಲವನ್ನು ಆರಿಸಿಕೊಂಡು ತಂದೆ. ಹೆಣ್ಣು ಮಕ್ಕಳ ಬಟ್ಟೆಗಳಂತೂ ತುಂಬಾನೇ ವೆರೈಟಿಯಿತ್ತು.

(ಗಿರೀಶ ಕೆಳಗಿಳಿದು ಬಂದಿದ್ದನ್ನು ನೋಡಿ) ಇನ್ನೂ ಮಲಗಿಲ್ಲವೇನೋ ಸುರೇಶ ಮಲಗಿದನಾ ?

ಗಿರೀಶ....ಹೂಂ ಅಮ್ಮ ಅಕ್ಕನಿಗೆ ವೀಡಿಯೋ ಕಾಲ್ ಮಾಡಿ ಚಿನ್ನಿ ಜೊತೆ ಮಾತನಾಡಿ ಹಾಗೇ ಮಲಗಿಬಿಟ್ಟ. ಇದೇನಮ್ಮ ಇಷ್ಟೊಂದು ಬ್ಯಾಗುಗಳಲ್ಲಿ ಪರ್ಚೇಸಿಂಗಾ ?

ಹರೀಶ.....ಎಲ್ಲಾ ಬ್ಯಾಗ್ ತೆಗೆದುಕೊಂಡೋಗಿ ಮೇಲಿನ ಖಾಲಿ ರೂಮಿನಲ್ಲಿಡು ನಾಳೆ ನೋಡುವಂತೆ.

ಗಿರೀಶ ತೆರಳಿದ ನಂತರ ನಾಲ್ವರೂ ಕಾಫಿ ಕುಡಿದು ಮಲಗುವುದಕ್ಕೆ ತೆರಳಿದರು.
* *
* *
ಮುಂಜಾನೆ ಏಳು ಘಂಟೆಗೆ ಮನೆ ಹತ್ತಿರ ಬಂದು......

ಬಸ್ಯ.....ಸರ್ ಮೂವರನ್ನು ತೋಟದ ಮನೆಯಲ್ಲಿ ಕೂಡಿಟ್ಟಿದ್ದೀವಿ.

ಹರೀಶ.....ಅಲ್ಲೇನೂ ತೊಂದರೆ ಆಗಲಿಲ್ಲ ತಾನೇ.

ಬಸ್ಯ......ಇಲ್ಲ ಸರ್ ಯಾವ ಪ್ರಾಬ್ಲಂ ಆಗಲಿಲ್ಲ ಎಲ್ಲ ಆರಾಮವಾಗಿ ಆಯಿತು ರಕ್ಷಕರು ತುಂಬಾನೇ ಫಾಸ್ಟಾಗಿದ್ದಾರೆ ನಾವು ಒಬ್ಬನನ್ನು ಹೊರಗೆ ತರುವಷ್ಟರಲ್ಲಿ ಇನ್ನಿಬ್ಬರನ್ನವರು ವ್ಯಾನಿನಲ್ಲಿ ಕೂರಿಸಿದ್ದರು. ಆ ಮನೆಯಲ್ಲಿ ಎರಡು ಮೊಬೈಲ್ ಒಂದು ಟ್ಯಾಬ್ ಬಿಟ್ಟರೆ ಬೇರೆ ಏನೂ ಇರಲಿಲ್ಲ ಅದನ್ನು ತಂದಿದ್ದೀವಿ.

ಹರೀಶ......ಅದನ್ನಿಲ್ಲಿಗೇ ತಂದಿದ್ದೀಯಾ ?

ಬಸ್ಯ.....ಹೂಂ ಸರ್ ಈ ಕವರಿನಲ್ಲಿದೆ.

ನೀತು ಹತ್ತಿರ ಬರುತ್ತ.......ಅದನ್ನಿಲ್ಲಿ ಕೊಡು ಅವರಲ್ಲೇ ಎರಡ್ಮೂರು ದಿನ ಕೊಳೆಯುತ್ತಿರಲಿ ಆಮೇಲೆ ವಿಚಾರಿಸೋಣ. ಬಾ ಇನ್ನೇನು ತಿಂಡಿ ರೆಡಿಯಾಗುತ್ತೆ ತಿನ್ಕೊಂಡೇ ಹೋಗುವಂತೆˌ

ಬಸ್ಯ.....ಇಲ್ಲಾಕ್ಕ ನಿದ್ರೆ ಮಂಪರಿದೆ ಹೋಗಿ ಸ್ವಲ್ಪ ಮಲಗ್ತೀನಿ.

ನೀತು......ಆಯ್ತು ಕಣೋ ರೆಸ್ಟ್ ಮಾಡು ಆ ಮೂವರ ಜೊತೆಯಲ್ಲಿ ಯಾರೂ ಮಾತನಾಡಲು ಹೋಗ್ಬೇಡಿ ಟೈಮಿಗೆ ಕ್ಯಾಂಟೀನಿನಿಂದ ತಿಂಡಿ ಊಟ ತಂದುಕೊಡಿ ಸಾಕು.

ಬಸ್ಯ.....ಆಯ್ತಕ್ಕ ಹಾಗೇ ಮಾಡ್ತೀವಿ.

ಹರೀಶ.....ಯಾಕೆ ಎರಡ್ಮೂರು ದಿನ ತಳ್ಳಿದೆ ಇವತ್ತು ಭಾನುವಾರ ರಜೆಯಿತ್ತಲ್ಲ ಇವತ್ತೇ ಅವರಿಗೊಂದು ಗತಿ ಕಾಣಿಸಬಹುದಿತ್ತು.

ನೀತು.....ಎರಡ್ಮೂರು ದಿನ ತಾಳ್ಮೆಯಿಂದಿರಿ ಆಮೇಲೆ ನೋಡೋಣ.

ಹರೀಶ.....ನಡಿ ಕಾಫಿ ಕುಡಿಯುತ್ತ ನನ್ನ ಬಂಗಾರಿ ಏದ್ದಿದ್ದರೆ ಅವಳ ಜೊತೆ ಮಾತನಾಡಬಹುದು.

ನೀತು......ಅವಳಾಗಲೇ ಎದ್ದು ಶೃಂಗೇರಿಯಲ್ಲಿ ಪ್ರಥಮ ಪೂಜೆಗೆ ಹೋಗಿದ್ದಾಳೆ ಆಮೇಲೆ ಆ ಕಡೆಯಿಂದ ಫೋನ್ ಬರುತ್ತೆ ಆವಾಗ ನಿಮ್ಮ ಚಿಣಿಮಿಣಿ ಜೊತೆ ಮಾತಾಡುವಿರಂತೆ.
* *
* *
ಶನಿವಾರ ಸಂಜೆ ಏಳರ ಹೊತ್ತಿಗೆ ಮನೆ ತಲುಪಿ ಸುಭಾಷ್ ಅಣ್ಣನನ್ನು ತಬ್ಬಿಕೊಂಡ ನಿಧಿಯನ್ನು ಸ್ವಾಗತಿಸಿ ನಿಕಿತಾಳನ್ನೂ ಅಪ್ಪಿಕೊಂಡು ವಿವೇಕ್ ಕೈ ಕುಲುಕಿ ಮೂವರನ್ನು ಮನೆಯೊಳಗೆ ಕರೆದೊಯ್ದನು. ಮನೆ ಮಹಡಿಯಲ್ಲಿದ್ದ ಸಿಂಗಲ್ ರೂಮಿನಲ್ಲಿ ನಿಧಿ ಜೊತೆ ಬಂದಿದ್ದ ನಾಲ್ವರು ರಕ್ಷಕರಿಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಸುಭಾಷ್ ತಾಯಿ.....ಯಾಕಮ್ಮ ನಿಧಿ ಇಷ್ಟು ಲೇಟ್ ಮಾಡ್ಕೊಂಡೆ ಸ್ವಲ್ಪ ಮುಂಚೆಯೇ ಬರಬಾರದಿತ್ತಾ. ನಿಕಿತಾ ಹೇಗಿದ್ದೀಯಮ್ಮ ? ಬನ್ನಿ ವಿವೇಕ್ ಕುಳಿತುಕೊಳ್ಳಿ ಇದೂ ನಿಮ್ಮ ಮನೆಯಂತೆ ತಿಳಿಯಿರಿ.

ನಿಧಿ......ಅತ್ತೆ ಶೃಂಗೇರಿಯಲ್ಲಿ ಪೂಜೆ ತಿಂಡಿ ಮುಗಿದ ತಕ್ಷಣವೇ ಹೊರಟೆವು ಆದರೆ ದಾರಿ ಮಧ್ಯೆ ಎರಡು ಕಡೆ ನಿಲ್ಲಿಸಿಕೊಂಡೆ ಬಂದ್ವಿ ಜೊತೆಗೆ ವಾರದ ಕೊನೆ ರಷ ಸ್ವಲ್ಪ ಜಾಸ್ತಿಯಿತ್ತಲ್ಲ ಲೇಟಾಯ್ತು.

ವಿವೇಕ್......ನಾವಿಲ್ಲಿ ಬಂದು ನಿಮಗೆ ತೊಂದರೆ ಕೊಟ್ಟೆ ಅಕ್ಕ....

ಸುಭಾಷ್ ತಾಯಿ......ಅಕ್ಕ ಅಂತಾನೂ ಕರಿತೀಯ ಅಕ್ಕನ ಮನೆಗೆ ಬಂದರೆ ತೊಂದರೆ ಅಂತಿದ್ದೀಯಲ್ಲ ವಿವೇಕ್ ನೀವೆಲ್ಲರೂ ಬಂದಿದ್ದು ನನಗೆ ತುಂಬ ಖುಷಿ. ನಿಧಿ ನಮ್ಮ ಪುಟಾಣಿಯನ್ನೂ ಕರೆತಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಕಣಮ್ಮ.

ನಿಧಿ......ಅತ್ತೆ ಅವಳೇನೋ ಖುಷಿಯಿಂದ ಬಂದ್ಬಿದ್ತಾಳೆ ಆದರವಳಿಗೆ ಅಮ್ಮನ ನೆನಪು ಯಾವಾಗ ಬರುತ್ತೆಂದು ಹೇಳಕ್ಕಾಗಲ್ಲ ಅವಳಂತೂ ಸ್ವಲ್ಪ ಡೇಂಜರ್ ಅಮ್ಮನ ಜೊತೆಗೆ ಬಂದರೆ ಸರಿ.

ಸುಭಾಷ್.....ಬನ್ನಿ ವಿವೇಕ್ ಸರ್ ಫ್ರೆಶಾಗಿ ಆಮೇಲೆ ಆರಾಮವಾಗಿ ಮಾತನಾಡೊಣ ನೀವಿಬ್ರೂ ನಡೀರಿ ಅದು ನಿಮ್ಮ ರೂಂ.
* *
* *
ಶೃಂಗೇರಿಯಲ್ಲಿ ಮುಂಜಾನೆ ಪ್ರಥಮ ಪೂಜೆ ಮುಗಿಸಿಕೊಂಡು ಎಲ್ಲರ ತಿಂಡಿಯಾದ ನಂತರ ವಿವೇಕ್...ನಿಧಿ ಮತ್ತು ನಿಕಿತಾ ಬೆಂಗಳೂರಿನ ಕಡೆ ಹೊರಟರೆ ವಿಕ್ರಂ ಮಾವನ ಹೆಗಲೇರಿದ್ದ ನಿಶಾ ಅವರಿಗೆ ಟಾಟಾ ಮಾಡಿ ಬೀಳ್ಕೊಟ್ಟು ತಾತನ ಜೊತೆ ಕೀಟಲೆ ಮಾಡುತ್ತ ಅಲ್ಲಿಂದ ಹೊರನಾಡಿನತ್ತ ಹೊರಟರು. ತಾಯಿ ಅನ್ನಪೂರ್ಣೇಶ್ವರಿ ದರ್ಶನ ಮಾಡಿಕೊಂಡು ಅಲ್ಲಿ ಪ್ರಸಾದ ಸ್ವೀಕರಿಸಿದ ಬಳಿಕ ಮನೆಗೆ ಬೇಕಾದ ಸಂಬಾರ ಸ್ಪೈಸಸ್ ತೆಗೆದುಕೊಂಡು ಕಾಮಾಕ್ಷಿಪುರದ ಕಡೆ ಹೊರಟರೆ ಇನೋವಾ ಕೊನೆಯ ಸೀಟಿನಲ್ಲಿ ಮಾವನ ಜೊತೆ ನಿಶಾ ಹಾಯಾಗಿ ಮಲಗಿಕೊಂಡು ಪ್ರಯಾಣಿಸುತ್ತಿದ್ದಳು. 

ಕಾಮಾಕ್ಷಿಪುರದ ಮನೆಗೆ ತಲುಪಿದಾಗಲೂ ವಿಕ್ರಂ ಹಾಗು ನಿಶಾ ನಿದ್ದೆ ಮಂಪರಿನಲ್ಲಿದ್ದು ಅದೇ ಅವಸ್ಥೆಯಲ್ಲಿ ಮನೆಯೊಳಗೆ ಬಂದರು. ಅಮ್ಮ ನೆಲದಲ್ಲಿ ಕುಳಿತಿದ್ದರೆ ಅವಳ ಮಡಿಲಲ್ಲಿ ತಲೆಯಿಟ್ಟು ಗಿರೀಶಣ್ಣ ಮಲಗಿರುವುದನ್ನು ಕಂಡ ನಿಶಾ ಗುಡುಗುಡುನೇ ಓಡಿ ಬಂದು ಅಮ್ಮನ ಮಡಿಲಿಗೆ ಜಿಗಿದಳು. ಸುರೇಶ.....ಅಣ್ಣ ಮೇಲೆದ್ದೇಳು ನಮ್ಮನೇ ಚೋಟಾ ಶೈತಾನ್ ಬಂತು ನಮ್ಮಲ್ಯಾರನ್ನೂ ಇನ್ನು ಅಮ್ಮನ ಹತ್ತಿರ ಸುಳಿದಾಡಲೂ ಬಿಡೋಲ್ಲ ಅಲ್ವ ನನ್ನ ಮರಿ ಶೈತಾನ್....ಎಂದು ತಂಗಿಯ ಕೆನ್ನೆ ತಿವಿದನು.

ನಿಶಾ ಅಮ್ಮನಿಗೆ ಕಂಪ್ಲೇಂಟ್ ಮಾಡುವ ಬದಲು ತಾನೇ ಹೋಗಿ ಅಣ್ಣನ ಬೆನ್ನಿಗೆರಡು ಗುದ್ದಿ ಕೆನ್ನೆಗೆ ಮುತ್ತಿಟ್ಟು ಕಚ್ಚುತ್ತ ಕಿಲಕಿಲನೆ ನಕ್ಕು ಅಮ್ಮನ ಮಡಿಲಿಗೆ ಸೇರಿಕೊಂಡಳು. ನಿಶಾ ಹಿಂದಿರುಗಿ ಬಂದಿದ್ದು ಮನೆಯಲ್ಲಿ ಹರ್ಷೋಲ್ಲಾಸದ ವಾತಾವರಣ ಕೂಡಿಕೊಂಡಿತು. ಸೋಮವಾರದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ನಿಕಿತಾಳ ಆಸೆಯಂತೆ ಕಾಮಾಕ್ಷಾಪುರದ ಮೆಡಿಕಲ್ ಕಾಲೇಜಿನಲ್ಲೇ ಸೀಟು ದಕ್ಕಿಸಿಕೊಂಡರೆ ಎಲ್ಲರೂ ತುಂಬ ಖುಷಿಪಟ್ಟು ಅವಳನ್ನು ಅಭಿನಂಧಿಸಿದರು. ವಿವೇಕ್ ಅಲ್ಲಿಂದಲೇ ಚೆನೈಗೆ ಪ್ರಯಾಣ ಬೆಳೆಸಿದರೆ ನಿಧಿ—ನಿಕಿತಾ ಇನ್ನೂ ಎರಡ್ಮೂರು ದಿನ ಅಣ್ಣನ ಮನೆಯಲ್ಲಿ ಉಳಿಯುವವರಿದ್ದರು.
* *
* *
ಮಂಗಳವಾರ ಫುಡ್ ಯೂನಿಟ್ಟಿನ ಕೆಲಸಗಳನ್ನು ನೋಡಿಕೊಂಡು ನೀತು ತಾನೊಬ್ಬಳೇ ತೋಟದ ಮನೆಗೆ ಬಂದಾಗ ಬಸ್ಯನ ಇಬ್ಬರು ಹುಡುಗರು ಅಲ್ಲಿ ಕಾವಲಿಗಿದ್ದರು.

ನೀತು.....ಸೀನ ತುಂಬಾನೇ ಚಾಲಾಕಿದ್ದೀಯ ಕಣೋ ಜೀವನ್ ನಿನ್ನ ಅದೇಗೆ ಸುಲಭವಾಗಿ ನಂಬಿಬಿಟ್ಟ ನನಗದೇ ಇನ್ನೂ ಅರ್ಥವಾಗಿಲ್ಲ.

ಸೀನ.......ಅಕ್ಕ ನೀವೇ ಮುಂಚೆ ಹೇಳಿದ್ರಲ್ಲ xxxx ಸಿಟಿಯಲ್ಲಿ ಈ ಜೀವನ್ ಎಂಬುವವನು ಸಾಹುಕಾರನ ಹೆಣವನ್ನು ಪಡೆದುಕೊಂಡಿದ್ದ ದಾಖಲೆಯಲ್ಲಿ ಅವರ ಮಗನೆಂದು ಬರೆದಿದ್ದ ಅಂತ ಅದನ್ನೇ ನನ್ನ ಪ್ಲಾನಿನಲ್ಲಿ ಅಳವಡಿಸಿಕೊಂಡೆ. ಸಾಹುಕಾರನದ್ದು ಸಹಜ ಸಾವಲ್ಲ ಅದೊಂದು ಕೊಲೆ ಅದನ್ನು ಮಾಡಿಸಿದ್ದು ಒಬ್ಬಳು ಹೆಂಗಸು ಅಂತ ಕಥೆ ಕಟ್ಟಿ ಅವನು ನಂಬುವಂತೆ ಮಾಡಿದೆ. ಮೊದಲಿಗೆ ಇಲ್ಲಿ ಜೀವನ್ ಅನ್ನುವವರು ಯಾರೂ ಇಲ್ಲ ಅಂದ್ಬಿಟ್ಟ ಯಾವಾಗ ಸಾಹುಕಾರನ ಕೊಲೆ ಅಂದೆನೋ ಅವನ ಮನಸ್ಸು ಚೇಂಜಾಯ್ತು ನಮ್ಮ ಬಕರಾ ಹಳ್ಳಕ್ಕೆ ಬಿತ್ತು. ಅಕ್ಕ ಈ ಮೂವರಲ್ಲೊಬ್ಬ ನಿಮ್ಮ ಮೇಲೆ ಯಾವುದೊ ಹಳೇ ಸೇಡನ್ನು ಇಟ್ಟುಕೊಂಡಿದ್ದಾನೆ ಆದರೆ ಏನಂತ ತಿಳಿಯಲಿಲ್ಲ.

ನೀತು......ಅದನ್ನೆಲ್ಲ ನಾನು ನೋಡಿಕೊಳ್ತೀನಿ ಎಲ್ಲಿ ಕೆಳಗಿದ್ದಾರಾ ?

ಸೀನ......ಹೌದಕ್ಕ ನೀವು ಹೇಳಿದಂತೆ ಮೂವರನ್ನು ಬೇರೆ ಬೇರೆಯ ರೂಮಿನಲ್ಲಿಟ್ಟಿದ್ದೀವಿ.

ನೀತು.......ಸರಿ ನಾನೋಗಿ ಮಾತಾಡ್ತೀನಿ ನೀನು ಮನೆಯಿಂದ ಇಲ್ಲಿ ಯಾರೇ ಬಂದರೂ ನಾನಿರುವ ವಿಷಯ ಹೇಳ್ಬೇಡ ಯಾಕೆಂದ್ರೆ ಇದರ ಬಗ್ಗೆ ನಮ್ಮೆಜಮಾನರನ್ನು ಬಿಟ್ಟರೆ ಇನ್ಯಾರಿಗೂ ಗೊತ್ತಿಲ್ಲ.

ಸೀನ.....ಆಯ್ತಕ್ಕ ನೀವು ಹೋಗಿ ನಾನು ಹೊರಗಿನಿಂದ ಬೀಗವನ್ನೇ ಹಾಕಿ ಇಬ್ಬರೂ ಮೇಲಿರುತ್ತೀವಿ.

ನೀತು ನೆಲಮಾಳಿಗೆಗೆ ಬಂದು ಒಳಗಿನಿಂದ ಬಾಗಿಲಿಗೆ ಚಿಲಕ ಹಾಕಿ ಮೊದಲ ರೂಮಿನೊಳಗೆ ಬಂದಾಗ ಚೇರಿನ ಹ್ಯಾಂಡ್ ರೆಸ್ಟಿಗೆ ಕೈಯಿ ಸೇರಿಸಿ ಕಟ್ಟಲಾಗಿದ್ದು ಕಾಲುಗಳನ್ನು ಚೇರಿನ ಕಾಲುಗಳಿಗೆ ಕಟ್ಟಿದ್ದು ಸೊಂಟವನ್ನೂ ಸಹ ಚೇರಿಗೆ ಕಟ್ಟಿಹಾಕಲಾಗಿದ್ದ ವ್ಯಕ್ತಿ ತಲೆ ತಗ್ಗಿಸಿ ಕುಳಿತಿದ್ದನು. ನೀತು ರೂಂ ಲೈಟ್ ಹಾಕಿದಾಗ ಯಾರು ಬಂದವರೆಂದು ತಲೆಯೆತ್ತಿ ನೋಡಿದರೆ ಏದುರಿಗೆ ಯೌವನದಿಂದ ಬಳುಕುತ್ತಿರುವ ಹೆಣ್ಣನ್ನು ನೋಡಿ ಫುಲ್ ಕನ್ಫ್ಯೂಸ್ ಆದನು.

ನೀತು......ಓಹೋಹೋ..ಮಿಸ್ಟರ್ ಸುನಿಲ್ ಏನು ಹೇಗಿದ್ದೀಯ ?ನಾನ್ಯಾರೆಂದು ನಿನಗೆ ಗುರುತು ಸಿಗಲಿಲ್ಲವಾ ಸರಿಯಾಗಿ ನೋಡು.

ಸುನಿಲ್ ಧಿಟ್ಟಿಸಿ ನೋಡುತ್ತ......ನೀತು ನೀನು ನೀತು ತಾನೇ...

ನೀತು....ಎಸ್ ಅದೇ ನೀತು ನಿನ್ನಿಬ್ಬರು ಸ್ನೇಹಿತರು ಕಾಲೇಜಿನಲ್ಲಿ ನನ್ನಿಂದೆ ನಾಯಿಗಳಂತೆ ಸುತ್ತುತ್ತಿದ್ದರಲ್ಲ ಅದೇ ನೀತು. ಇನ್ನೂ ನನ್ನ ಮರೆಯದೆ ನೆನಪಿನಲ್ಲಿಟ್ಟುಕೊಂಡಿದ್ದೀಯ ಪರವಾಗಿಲ್ಲ ಕಣೋ.

ಸುನಿಲ್.......ನೀನು ಶೀಲಾ ನಮ್ಮ ಕಾಲೇಜಿನ ಬ್ಯೂಟಿ ಕ್ವೀನಲ್ಲವಾ ಹೇಗೆ ಮರೆಯಲು ಸಾಧ್ಯ.

ನೀತು......ನೀನಿನ್ನೂ ಕಾಲೇಜಿನ ಗುಂಗಿನಲ್ಲಿರುವಂತಿದೆ ಅದಿರಲಿ ಇದ್ದಕ್ಕಿದ್ದ ಹಾಗೆ ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ನಿನಗ್ಯಾಕೆ ಬಂತೋ ? ಇದನ್ನೆಲ್ಲಾ ಪ್ಲಾನ್ ಮಾಡಿದವರು ಯಾರು ?

ಸುನಿಲ್.....ಅದರ ಬಗ್ಗೆ ನನಗೇನೂ ಗೊತ್ತಿಲ್ಲ ನಿಜ ಹೇಳ್ತಿದ್ದೀನಿ. ನಮ್ಮ ಮಾವ ರಿಟೈರ್ಡ್ ಪೋಲಿಸ್ ಇನಸ್ಪೆಕ್ಟರ್ ನನ್ನನ್ನು ಇಲ್ಲಿಂದ ಹೋಗಲು ಬಿಟ್ಬಿಡು ಅವರಿಗೇನಾದರೂ ಗೊತ್ತಾಗದೆ ನಿನಗೇ ಕಷ್ಟ.ನನ್ನ ಕಿಡ್ನಾಪ್ ಮಾಡಿರುವ ಕೇಸಿನಲ್ಲಿ ನೀನು ಜೈಲ್ ಸೇರುತ್ತೀಯ.

ನೀತು ನಗುತ್ತ......ಓ ಸುನಿಲ್ ನಿನಗಿನ್ನೂ ಪರಿಸ್ಥಿತಿ ಅರ್ಥವಾಗಿಲ್ಲ ಅನಿಸುತ್ತೆ. ನೀನಗೇನಾಯ್ತು ? ನಿನ್ನ ಯಾರಾದರೂ ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾರಾ ? ಅಥವ ನೀನೇ ಎಲ್ಲಿಗಾದರೂ ಹೋಗಿದ್ದೀಯ ? ಇದ್ಯಾವ ವಿಷಯಗಳು ನಿನ್ನ ಮನೆಯವರಿಗೆ ಗೊತ್ತೆ ಆಗುವುದಿಲ್ಲ ಕಣೋ. ನಿನ್ನ ಮಾವ ರಿಟೈರ್ಡ್ ಪೋಲಿಸ್ ಇನಸ್ಪೆಕ್ಟರ್ ಆದರೀಗ xxxx ಸಿಟಿಯ ಎಸ್ಪಿ ನಾನು ಹೇಳಿದ ಹಾಗೆ ಮಾಡ್ತಾನೆ ಗೊತ್ತ.

ಸುನಿಲ್.....ನೀನು ಮಾಡ್ತಿರೋದು ತಪ್ಪು ಸ್ವಲ್ಪವೂ ಸರಿಯಲ್ಲ.

ನೀತು......ನನಗೂ ಗೊತ್ತಿದೆ ಕಣೋ ಇದೆಲ್ಲ ತಪ್ಪು ಅಂತ ಆದರೆ ನೀವಾಗಿಯೇ ತಾನೇ ನನ್ನನ್ನು ಕೆಣಕಿಕೊಂಡು ಬಂದಿದ್ದು. ಈಗ ನನ್ನ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ಯಾರು ? ನೀವೇ ತಾನೇ ಹಾಗಿದ್ದರೂ ನಾನು ಸುಮ್ಮನೆ ಕೂತಿರಬೇಕೇನು ?

ಸುನಿಲ್....ಯಾವ ಸೇಡು ನನಗದರ ಬಗ್ಗೆ ಏನೂ ಗೊತ್ತಿಲ್ಲ ಪ್ಲೀಸ್ ನನ್ನನ್ನು ನಂಬು ನೀತು ನನಗೇನೂ ಗೊತ್ತಿಲ್ಲ.

ನೀತು.....ಪಕ್ಕದ ರೂಮಿನಲ್ಲಿ ಆ ನಿನ್ನ ಸ್ನೇಹಿತರಾದ ಮನೋಜ್ ಮತ್ತು ಜೀವನ್ ಕೂಡ ಬಂಧಿಯಾಗಿದ್ದಾರೆ ಈಗಲೂ ನಿನಗೇನೂ ಗೊತ್ತಿಲ್ಲ ಅಂತ ಹೇಳ್ತೀಯಾ.

ಸುನಿಲ್....ಕಾಲೇಜಿನ ಪ್ರಕರಣ ಆದಾಗ ಆ ವಿಷಯ ಮನೆಯಲ್ಲಿ ಗೊತ್ತಾಗಿ ನಮ್ಮಪ್ಪ ಅಮ್ಮ ಹುಡುಗಿಯನ್ನು ಚುಡಾಯಿಸಲು ನೀನು ಕಾಲೇಜಿಗೆ ಹೋಗೋದಾ ಅಂತ ತುಂಬ ಬೈದರು. ನಿನ್ನ ಕೈಯನ್ನು ಹಿಡಿಯಲು ಹೋದಾಗಲೂ ಮನೋಜನಿಗೆ ನಾನು ಬೇಡ ಅಂತ ತುಂಬ ಹೇಳಿದೆ ಆದರವನು ಕೇಳಲಿಲ್ಲ. ಅವರು ಮಾಡಿದ ತಪ್ಪಿಗೆ ಮನೆಯಲ್ಲಿ ನನಗೆ ಶಿಕ್ಷೆಯಾಯ್ತು.

ನೀತು....ಅವರಿಬ್ಬರು ಕಚಡಾ ಲೋಫರ್ಸ್ ಆದರೆ ನೀನು ಸಭ್ಯಸ್ಥ ಆದರಿನ್ನೂ ನೀನವರ ಜೊತೆ ಸೇರಿಕೊಂಡಿದ್ದೀಯಲ್ಲೋ.

ಸುನಿಲ್.....ಅದಕ್ಕೂ ಕಾರಣವಿದೆ ನೀತು.

ನೀತು......ಏನದು ಹೇಳು.

ಸುನಿಲ್......ಅದೆಲ್ಲ ಹೇಳಲಿಕ್ಕಾಗಲ್ಲ ಪ್ಲೀಸ್ ಹಳೆಯದನ್ನೇ ಮತ್ತೆ ಕೆದಕಲು ಹೋಗ್ಬೇಡ ( ಕೈ ಮುಗಿದು ಅಳುತ್ತ ) ಪ್ಲೀಸ್ ನನ್ನ ಬಿಟ್ಬಿಡು ನನ್ನೊಬ್ಬಳೇ ಮಗಳು ನನಗಾಗಿ ಕಾಯ್ತಿರ್ತಾಳೆ ಅಪ್ಪನೆಂದರವಳಿಗೆ ಪಂಪಪ್ರಾಣ. ಒಂದು ದಿನವೂ ನಾನವಳ ಜೊತೆಗಿರದಿದ್ದರೆ ಊಟ ತಿಂಡಿ ಮಾಡೋದಿಲ್ಲ. ನೀನು ನನ್ನನ್ನಿಲ್ಲಿಗೆ ಕಿಡ್ನಾಪ್ ಮಾಡಿಸಿರುವೆ ಅಲ್ಲವಳು ಹೇಗಿರುತ್ತಾಳೋ ಏನೋ ಊಟ ಮಾಡಿದ್ದಾಳೋ ಅಂತ ನನಗೆ ತುಂಬ ಚಿಂತೆ ಆಗ್ತಿದೆ. ನೀತು ನಿನ್ನ ಕಾಲಿಗೆ ಬೀಳ್ತೀನಿ ಮಗಳ ಮೇಲಾಣೆ ನನಗೆ ಅವರಿಬ್ಬರು ನಿನ್ನ ವಿರುದ್ದ ಸೇಡು ತೀರಿಸಿಕೊಳ್ಳುವ ಪ್ಲಾನ್ ಮಾಡುತ್ತಿದ್ದಾರೆಂಬುದೂ ಗೊತ್ತಿಲ್ಲ.....ಎಂದು ಬಿಕ್ಕಿ ಬಿಕ್ಕಿ ಜೋರಾಗಿ ಅಳತೊಡಗಿದನು.

ಸುನಿಲ್ ಕಣ್ಣೀರು ಕಂಡು ನೀತುವಿಗೆ ತನ್ನಿಬ್ಬರು ಮಕ್ಕಳ ನೆನಪಾಗಿ ಅವರೂ ಸಹ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಅಕಸ್ಮಾತ್ ಅವರಿಬ್ಬರು ನನ್ನ ಮಡಿಲಿಗೆ ಬರದೆ ಹೋಗಿದ್ದರೆ ಅವರ ಕಥೆಯೇನು ಎಂದಾಲೋಚಿಸಿ ಸುನಿಲನ ಭುಜ ತಟ್ಟಿದಳು.

ನೀತು.......ನೀನೀಗೆ ಅಳುತ್ತ ಕುಳಿತರೆ ಎಲ್ಲಾ ಸಮಸ್ಯೆ ಸರಿಯಾಗುತ್ತೆ ಅಂದುಕೊಂಡಿದ್ದೀಯ ಇಲ್ಲ ತಾನೇ. ನನಗೂ ಹೆಣ್ಣು ಮಕ್ಕಳಿದ್ದಾರೆ ಅವರಿಗೆ ತಂದೆಯ ಆಶ್ರಯವಿಲ್ಲದಿದ್ದರೆ ಏನಾಗುತ್ತೆಂಬುದು ನನಗೂ ಅರ್ಥವಾಗುತ್ತೆ. ನೀನು ಧೈರ್ಯವಾಗಿ ನನಗೆಲ್ಲವನ್ನು ತಿಳಿಸಿದರೆ ನಾನು ನಿನಗೆ ಖಂಡಿತವಾಗಿ ಸಹಾಯ ಮಾಡ್ತೀನಿ ಜೊತೆಗೆ ಇಲ್ಲಿಂದ ನಿನ್ನನ್ನು ಮಗಳ ಹತ್ತಿರ ಕಳಿಸಿಕೊಡ್ತೀನಿ ಏನು ವಿಷಯ ಹೇಳು.

ಸುನಿಲ್ ಒಂದೈದು ನಿಮಿಷ ಅತ್ತು ಸಮಾಧಾನಗೊಂಡಾಗ........... ಕಾಲೇಜಿನಲ್ಲಿ ನಡೆದ ಘಟನೆಯಿಂದ ಮನೆಯವರು ನನ್ನನ್ನು ಚೆನ್ನಾಗಿ ಬೈದಿದ್ದಕ್ಕೆ ನಾನು ಮನೋಜ್—ಜೀವನ್ ಇಬ್ಬರ ಸ್ನೇಹವನ್ನು ಬಿಟ್ಟಿದ್ದೆ ಆಮೇಲೆ ನನಗೂ ಕೆಲಸ ಸಿಕ್ಕಿತು ನಂತರ ಮದುವೆಯೂ ಆಯಿತು. ಇವರಿಬ್ಬರ ಸಹವಾಸ ಇಲ್ಲದೆ ನಾನು ನನ್ನ ಜೀವನದಲ್ಲಿ ತುಂಬಾನೇ ನೆಮ್ಮದಿಯಾಗಿದ್ದೆ ಪ್ರೀತಿಸುವ ಮಡದಿ ಮುದ್ದಾದ ಮಗಳು ಇವರೇ ನನ್ನ ಪ್ರಪಂಚವಾಗಿತ್ತು. ಈಗ್ಗೆ ನಾಲ್ಕು ವರ್ಷಗಳ ಹಿಂದೆ ಒಂದು ದಿನ ಆಕಸ್ಮಿಕವಾಗಿ ನನಗೆ ಮನೋಜ್ ಬೇಟಿಯಾದ ತುಂಬಾನೇ ವರ್ಷ ಆಗಿದೆಯಲ್ಲ ಅವನಿಗೂ ಮದುವೆಯಾಗಿತ್ತು ಸರಿ ಹೋಗಿರಬಹುದು ಅಂತ ಹಳೆಯ ಕಹಿಯನ್ನು ಮರೆತು ಅವನೊಟ್ಟಿಗೆ ಸ್ನೇಹದಿಂದಲೇ ಮಾತನಾಡಿದೆ. 

ಪುನಃ ನಮ್ಮಿಬ್ಬರ ನಡುವೆ ಆತ್ಮೀಯತೆ ಮೂಡಿದ್ದು ಒಬ್ಬರ ಮನೆಗೊಬ್ಬರು ಆಗಾಗ ಬಂದು ಹೋಗುವುದು ಮಾಡ್ತಿದ್ವಿ. ಮನೋಜ್ ಹೆಂಡತಿಯೂ ನನ್ನ ಹೆಂಡತಿ ಜೊತೆ ತುಂಬಾ ಕ್ಲೋಸ್ ಆಗಿದ್ದಳು. ಆದರೊಂದು ದಿನ ನನ್ನ ಜೀವನವೇ ಅಲ್ಲೋಲಕಲ್ಲೋಲ ಆಗೋಯ್ತು. ನನ್ನ ಹೆಂಡತಿ ಇದ್ದಕ್ಕಿದ್ದಂತೆ ಒಂದು ದಿನ ಆತ್ಮಹತ್ಯೆಗೆ ಶರಣಾಗಿ ಪ್ರಾಣ ಬಿಟ್ಟಿದ್ದಳು ಅದಕ್ಕೆ ಕಾರಣ ಮನೋಜ್.

ನೀತು ಶಾಕಾಗಿ......ಅವನೇನು ಮಾಡಿದ ?

ಸುನಿಲ್........ಮನೋಜ್ ಹೇಗೋ ನನ್ನ ಹೆಂಡತಿ ಸ್ನಾನ ಮಾಡ್ತಿದ್ದ ವೀಡಿಯೋ ತೆಗೆದುಕೊಂಡು ಒಮ್ಮೆ ನನ್ಜೊತೆ ಮಲಗಿ ನನ್ನಾಸೆಯ ತೀರಿಸೆಂದು ಅವಳನ್ನು ಬ್ಲಾಕ್ಮೇಲ್ ಮಾಡ್ತಿದ್ದ. ನನ್ನ ಹೆಂಡತಿ ನನಗೂ ಈ ವಿಷಯ ಹೇಳದೆ ಒಬ್ಬಳೇ ನೋವನ್ನು ಅನುಭವಿಸುತ್ತಿದ್ದಳು ಕೊನೆಗವನ ಕಾಚ ತಾಳಲಾರದೆ ಅತ್ಯಹತ್ಯೆಗೆ ಶರಣಾಗಿ ನನ್ನನ್ನು ನನ್ನ ಮಗಳನ್ನು ಒಂಟಿಯಾಗಿಸಿ ಹೊರಟು ಹೋದಳು. 

ಅದಾದ ಒಂದು ವರ್ಷದ ನಂತರ ಬೀರುವಿನಲ್ಲಿದ್ದ ನನ್ನ ಹೆಂಡತಿಯ ಡೈರಿಯಿಂದ ನನಗೀ ವಿಷಯವೆಲ್ಲ ತಿಳಿಯಿತು ಅದನ್ನೋದಿ ನಾನು ಮನೋಜ್ ಜೊತೆ ಜಗಳಕ್ಕಿಳಿದೆ. ಅದಕ್ಕವನು ನಿನ್ನ ಹೆಂಡತಿ ಸತ್ತೋಗಿದ್ದರೂ ಅವಳ ವೀಡಿಯೋ ಇನ್ನೂ ನನ್ನ ಹತ್ತಿರವಿದೆ ಅದನ್ನು ನೆಟ್ಟಿನಲ್ಲಿ ಹಾಕಿ ಮಾನ ಹಾರಾಜಾಕುವೆ ಎಂದು ನನ್ನನ್ನೇ ಹೆದರಿಸಿದ. ಹಾಗೇನಾದರು ಅವನು ಮಾಡಿಬಿಟ್ಟರೆ ನನ್ನ ಮಗಳ ಮೇಲದರ ಪರಿಣಾಮ ಬೀರುತ್ತೆ ಅದರಿಂದಾಗುವ ಪರಿಣಾಮ ನೆನೆದು ನಾನು ಹೆದರಿ ಸುಮ್ಮನಾದೆ.

ನೀತು......ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ ಸುನಿಲ್ ದಯವಿಟ್ಟು ನನ್ನ ಕ್ಷಮಿಸು ಆದರೂ ನೀನಿನ್ನೂ ಅವರ ಜೊತೆಗಿಲರೋದ್ಯಾಕೆ ?

ಸುನಿಲ್.......ಅವರಿಬ್ಬರಿಗೂ ಹಣದ ಅವಶ್ಯಕತೆ ಇತ್ತು ಅದಕ್ಕಾಗಿ ಕಳೆದವಾರ ನನಗೆ ಫೋನ್ ಮಾಡಿ ಕರೆಸಿಕೊಂಡು ಪುನಃ ಸತ್ತಿರುವ ನನ್ನ ಹೆಂಡತಿಯ ವೀಡಿಯೋ ತೋರಿಸಿ ಹೆದರಿಸಿ ಎರಡು ಲಕ್ಷಗಳನ್ನ ಪಡೆದುಕೊಂಡಿದ್ದರು. ಅವರಿಬ್ಬರೂ ಸೇರಿ ಏನೋ ಪ್ಲಾನ್ ಮಾಡ್ತಾ ಇದ್ದರು ಅದೇನೆಂಬುದು ನನಗೆ ಗೊತ್ತಿಲ್ಲ ಆದರವರು ನಿನ್ನ ವಿರುದ್ದ ಏನೋ ಮಾಡ್ತಿದ್ದಾರೆಂದು ನನಗೆ ಗೊತ್ತಾಯ್ತು. ಈ ವಿಷಯ ನಿನಗೆ ತಿಳಿಸಬೇಕೆಂದು ಹಳೆ ಊರಿನಲ್ಲಿ ನನಗೆ ಗೊತ್ತಿರುವವರನ್ನೆಲ್ಲಾ ವಿಚಾರಿಸಿದೆ ಆದರೆ ಯಾರಿಗೂ ನಿನ್ನ ಬಗ್ಗೆ ಗೊತ್ತಿರಲಿಲ್ಲ. ನೆನ್ನೆಯ ದಿನ ಕೊನೇ ಬಾರಿ ಐದು ಲಕ್ಷ ಹಣ ತಂದುಕೊಟ್ಟರೆ ನಿನ್ನ ಹೆಂಡತಿಯ ವೀಡಿಯೋ ನಿನಗೇ ಕೊಡುವುದಾಗಿ ಮನೋಜ್ ಹೇಳಿದ್ದ ಅದನ್ನೇ ಕೊಡುವುದಕ್ಕೆಂದು ನಾನು ಜೀವನ್ ಮನೆಗೆ ಹೋಗಿದ್ದೆ ಅಷ್ಟರಲ್ಲೇ ನಿನ್ನ ಕಡೆಯವರು ನನ್ನನ್ನೂ ಅವರ ಜೊತೆ ಇಲ್ಲಿಗೆ ಕರೆತಂದಿದ್ದಾರೆ.

ನೀತು.....ನಿನ್ನ ಮೇಲೆ ನನಗಾಗಲೂ ಕೋಪವಿರಲಿಲ್ಲ ಕಣೋ ಕಾಲೇಜಿನಲ್ಲೂ ನೀನು ನನ್ನ ಕೆಣಕುವುದಾಗಲಿ ಚುಡಾಯಿಸುವಂತ ಕಚಡಾ ಕೆಲಸ ಯಾವತ್ತೂ ಮಾಡಿರಲಿಲ್ಲ. ಮರಣಿಸಿರುವ ಹೆಂಡತಿ ಬಗ್ಗೆ ನಿನಗೆಷ್ಟು ಪ್ರೀತಿಯಿದೆ ಎಂಬುದನ್ನು ತಿಳಿದು ನಾನು ಮಾಡಿದ್ದು ತಪ್ಪಾಗಿದೆ ಅನ್ನೋದು ಗೊತ್ತಾಗಿದೆ. ಮನೋಜ್ ವಿರುದ್ದ ನಿನಗೆ ಸೇಡು ತೀರಿಸಿಕೊಳ್ಳಬೇಕೆಂದು ಅನಿಸಲ್ಲವಾ ?

ಸುನಿಲ್......ಅವನನ್ನು ತುಂಡು ತುಂಡಾಗಿ ಕತ್ತರಿಸಬೇಕೆಂದು ನನಗೆ ಅನಿಸುತ್ತೆ ಆದರೇನು ಮಾಡಲಿ ನಾನು ನಿಸ್ಸಹಾಯಕ ಸ್ಥಿತಿಯಲ್ಲಿ ಇದ್ದೀನಲ್ಲ.

ನೀತು......ನಾನು ನಿನಗೆ ಸಹಾಯ ಮಾಡ್ತೀನಿ ಕಣೋ ಆದರೆ ನೀನು ಸಧ್ಯಕ್ಕಿಲ್ಲೇ ಇರು ನಾನು ಪುನಃ ಸಂಜೆ ಬರ್ತೀನಿ ಆಗ ಮಾತಾಡೋಣ .......ಎಂದೇಳಿ ಹೊರಬಂದಾಗ ತೋಟದ ಮನೆಯ ಕಾಂಪೌಂಡಿನಲ್ಲಿ ನಿಂತಿದ್ದ ವ್ಯಕ್ತಿಯನ್ನು ನೋಡಿ ಶಾಕಾದಳು.

No comments:

Post a Comment