Total Pageviews

Monday, 7 April 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 321

ಪ್ಯಾರಿಸಿನಲ್ಲೀಗ ರಾತ್ರಿ 10 ಘಂಟೆಯಾಗಿದ್ದು ಸುಜೋಯ್ ಆಫೀಸ್ ಮತ್ತು ಮನೆಯಲ್ಲೂ ತಾನೇ ಆವಿಷ್ಕರಿಸಿದ್ದ ಸೀಕ್ರೆಟ್ ಡಿವೈಸುಗಳನ್ನು ಇನ್ಸ್ಟಾಲ್ ಮಾಡಿದ್ದ ವೀರೇಂದ್ರ ಅಲ್ಲಿಂದ ಪ್ಯಾರಿಸಿಗೆ ಮರಳಿ ಬಂದು ಸುಮೇರ್ ಜೊತೆ ಎರಡೂ ಕಡೆಗಳಲ್ಲೂ ಮಾನಿಟರ್ ಮಾಡುತ್ತಿದ್ದ. ರಾತ್ರಿ ಹನ್ನೊಂದು ಘಂಟೆ ಹೊತ್ತಿಗೆ ಪ್ಯಾರಿಸ್ ನಗರದಲ್ಲಿನ ವಿಶಾಲ್ ಮನೆಗೆ ಸುಜೋಯ್ ಆಗಮಿಸಿದ್ದನ್ನು ಮಾನಿಟರಿನಲ್ಲಿ ನೋಡಿದ ವೀರೇಂದ್ರ ತಕ್ಷಣವೇ ನೀತುವಿಗೆ ಕರೆ ಮಾಡಿದನು. ಭಾರತದಲ್ಲೀಗ ಸಮಯ ರಾತ್ರಿ 2:30 ಯಾಗಿದ್ದು ಎರಡನೇ ರಿಂಗಿನಲ್ಲಿ ಫೋನ್ ರಿಸೀವ್ ಮಾಡುತ್ತ..........

ನೀತು......ಹೇಳಪ್ಪ ವೀರೂ.

ವೀರೇಂದ್ರ.......ಆಂಟಿ ವಿಶಾಲ್ ಮನೆಗೆ ಸುಜೋಯ್ ಬಂದಿದ್ದಾನೆ ನಿಮ್ಮ ಮೇಲ್ ಅಕೌಂಟಿಗೆ ಅದರ ಲಿಂಕ್ ಕಳಿಸಿದ್ದೀನಿ ಲ್ಯಾಪ್ಟಾಪಲ್ಲಿ ಓಪನ್ ಮಾಡಿ ನೋಡಬಹುದು.

ನೀತು.......ಆಯ್ತಪ್ಪ ನಾನಾಮೇಲೆ ಫೋನ್ ಮಾಡ್ತೀನಿ.

ನೀತು ತನ್ನನ್ನು ಸೇರಿಕೊಂಡು ಮಲಗಿದ್ದ ಮಗಳನ್ನು ಪಕ್ಕಕ್ಕೆ ನೀಟಾಗಿ ಸರಿಸಿ ಮಲಗಿಸಿ ಮಂಚದಿಂದ ಇಳಿಯುವಷ್ಟರಲ್ಲಿ ಹರೀಶ ಕೂಡ ಎಚ್ಚರಗೊಂಡಿದ್ದು ಇಬ್ಬರೂ ಲ್ಯಾಪ್ಟಾಪಿನಲ್ಲಿ ಸುಜೋಯ್ ಹಾಗು ವಿಶಾಲ್ ನಡುವಿನ ಮಾತುಕತೆಗಳನ್ನು ನೋಡತೊಡಗಿದರು. ಇಬ್ಬರ ನಡುವೆ ಸುಧೀರ್ಘವಾಗಿ ಎರಡು ಘಂಟೆಗಳ ಕಾಲ ಸಂಸ್ಥಾನದ ವಿಷಯವಾಗಿಯೇ ಮಾತುಕತೆ ನಡೆಯುತ್ತಿದ್ದು ನಂತರ ಅಲ್ಲಿಂದೆದ್ದು ಮಲಗುವುದಕ್ಕೆ ತೆರಳಿದರು.

ನೀತು ಲ್ಯಾಪ್ಟಾಪ್ ಕ್ಲೋಸ್ ಮಾಡುತ್ತ.........ಇದೇನ್ರಿ ಇವರಿಬ್ಬರೂ ಯಾವುದೇ ಕಾರಣಕ್ಕೂ ನಾವು ಭಾರತದ ನೆಲದಲ್ಲಿ ಕಾಲಿಡಬಾರ್ದು ಅಂತ ಡಿಸೈಡ್ ಮಾಡಿಬಿಟ್ಟಿದ್ದಾರೆ. ಮುಂದೇನ್ಮಾಡೋದು ?

ಹರೀಶ.......ಏನೇ ಆದರೂ ಸರಿಯೇ ಅವರನ್ನು ನಮ್ಮ ದೇಶಕ್ಕೆ ಕರೆತರಲೇಬೇಕು ಅಲ್ಲವರು ತಮ್ಮನ್ನು ರಕ್ಷಿಸಿಕೊಳ್ಳಲು ಸರಿಯಾದ ಏರ್ಪಾಡುಗಳನ್ನೂ ಮಾಡಿಕೊಂಡಿದ್ದಾರೆ. ಅವರ ಸೆಕ್ಯೂರಿಟಿಯಲ್ಲಿನ ಜನರನ್ನು ಯಾಮಾರಿಸಲು ಸಾಧ್ಯವಾಗುತ್ತೆಂದು ಕಾಣ್ತಿಲ್ಲ ಅವರೆಲ್ಲ ಯಾವುದೋ ಪ್ರೊಫೆಷನಲ್ ಸಂಘನೆಯವರೆಂದೂ ಕಾಣ್ತಿದೆ. ಇನ್ನು ಹೊರಗಿನ್ಯಾವುದೋ ದೇಶದಲ್ಲಿ ರಕ್ತಪಾತ ಹರಿಸುವುದಕ್ಕೂ ಕೂಡ ಸಾಧ್ಯವಿರದ ಮಾತು.

ನೀತು......ರೀ ನಾನೊಮ್ಮೆ ರಾಣಾ ಜೊತೆ ಮಾತಾಡಿ.........

ಹರೀಶ......ಬೇಡ ನೀತು ನಿನ್ಯಾವುದೇ ಆದೇಶವನ್ನು ನೀಡಿದರೂ ನಮ್ಮ ರಕ್ಷಕರು ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಹಿಂದೂ ಮುಂದು ಯೋಚಿಸಲ್ಲ. ನಾವು ತಿಳಿದೂ ಅವರ ಪ್ರಾಣಕ್ಕೆ ಅಪಾಯ ತರುವಂತಹ ಕೆಲಸ ಮಾಡಲೇಬಾರದು ನೀನು ಮಲಗು ಇಬ್ಬರನ್ಮೂ ನಮ್ಮ ದೇಶಕ್ಕೇಗೆ ಕರೆತರಬಹುದೆಂದು ನಾನು ಯೋಚಿಸ್ತೀನಿ.

ನೀತು.......ಇನ್ನೇನು ಮಲಗೋದು ಆಗಲೇ ಐದು ಘಂಟೆಯಾಗಿದೆ ನಾನು ಸ್ನಾನ ಮುಗಿಸಿ ಬರ್ತೀನಿ. ನೆನ್ನೆಯಿಂದ ನನ್ನ ಕಂದ ಆಲೂ ಪರೋಟ ಬೇಕು ಅಂತಿದ್ಳು ಬೇಗ ಏದ್ದಿದ್ದೀನಲ್ಲ ಹೋಗದನ್ನೇ ರೆಡಿ ಮಾಡ್ತೀನಿ.

ನೀತು ಸ್ನಾನಕ್ಕೆ ತೆರಳಿದರೆ ಹರೀಶ ಮಂಚಕ್ಕೊರಗಿಕೊಂಡು ವಿಶಾಲ್ ಹಾಗು ಸುಜೋಯ್ ಇಬ್ಬರನ್ನೂ ಯುರೋಪಿನಿಂದ ಭಾರತಕ್ಕೆ ಹೇಗೆ ಕರೆತರಬಹುದೆಂದ ಬಗ್ಗೆ ಯೋಚಿಸತೊಡಗಿದನು.
* *
* *
ನೀತು ಸ್ನಾನ ಮುಗಿಸಿ ಕಿಚನ್ನಿಗೆ ಬಂದು ಆಲುಗೆಡ್ಡೆಗಳನ್ನು ಬೇಯಲು ಇಟ್ಟು ಗ್ರೈಂಡರಿನಲ್ಲಿ ಗೋಧಿ ಹಿಟ್ಟನ್ನು ಕಲಸುತ್ತಿದ್ದಾಗ ತಾವೂ ಸ್ನಾನ ಮುಗಿಸಿ ಬಂದ.......

ಸೌಭಾಗ್ಯ......ಇದೇನಮ್ಮ ನೀತು ನೀನಿಷ್ಟು ಬೇಗ ಏನ್ಮಾಡ್ತಿದ್ದೀಯ ?

ನೀತು......ಅಕ್ಕ ಇವತ್ತು ಬೇಗ ಎಚ್ಚರವಾಯ್ತು ಆಲೂ ಪರೋಟಕ್ಕೆ ರೆಡಿ ಮಾಡಲು ಬಂದೆ ನೆನ್ನೆಯಿಂದ ನಿಮ್ಮ ಚಿಲ್ಟಾರಿ ಕೇಳ್ತಿದ್ದಾಳಲ್ಲ ಅದಕ್ಕೆ ಮಾಡಿಕೊಡೋಣ ಅಂತ.

ಸೌಭಾಗ್ಯ.......ಮೊದಲವಳು ಕೇಳಿದ್ದನ್ನು ಮಾಡಿಕೊಡು ನನ್ನ ಚಿನ್ನಿ ಮರಿ ಸಂತೋಷವಾಗಿದ್ರೆ ಮನೆಯಲ್ಲೂ ಸಂತೋಷ ತುಂಬಿರುತ್ತೆ. ಈ ಸುಭಾಷ್—ಪಾವನ ಇಬ್ಬರನ್ನೂ ವಾಪಸ್ ಕರೆಸುವ ಯೋಚನೆಯೇ ಇಲ್ವಾ ಅವರಿಬ್ಬರೂ ಹೋಗಾಗಲೇ ಹತ್ತು ದಿನಗಳಾಗಿದೆ ಇನ್ನೆಷ್ಟು ದಿನ ಸುತ್ತಾಡ್ಬೇಕಂತೆ ನಿನ್ನ ಮಗನಿಗೆ ?

ನೀತು......ಅಕ್ಕ ಅವನೇನನ್ನೂ ಕೇಳಿಲ್ಲ ನಾನೇ ಕಳಿಸಿರೋದು ಪಾಪ ಈಗ್ತಾನೆ ಮದುವೆಯಾಗಿದೆ ಕೆಲ ದಿನ ಸುತ್ತಾಡಿಕೊಂಡು ಬರಲಿ ಬಿಡಿ.

ಸೌಭಾಗ್ಯ.....ನೀನಿಲ್ಲಿ ಇಷ್ಟೊಂದು ಜವಾಬ್ದಾರಿ ಕೊಟ್ಟಿರುವಾಗ ಇಲ್ಲಿ ಕೆಲಸ ಕಾರ್ಯ ನೋಡುವುದನ್ನು ಬಿಟ್ಟು ಹೊರ ದೇಶದಲ್ಲೆಲ್ಲೋ ಸುತ್ತಾಡ್ತಾ ಇರೋದಾ.

ನೀತು.......ಅಲ್ಲಿಗೋಗೂ ಕೆಲಸ ಮಾಡ್ತಿದ್ದಾನೆ ಅಕ್ಕ ನೀವು ಅವನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಆರಾಮವಾಗಿದ್ಬಿಡಿ. ನನ್ನ ಹಿರಿ ಮಗನಿಗೆ ಯಾವಾಗೇನು ಕೆಲಸ ವಹಿಸಬೇಕೆಂದು ನನಗೆ ಗೊತ್ತಿದೆ.

ರಜನಿ ಒಳಬರುತ್ತ.......ಅಕ್ಕನ ಚಿಂತೆ ಅವನು ಸುತ್ತಾಡ್ತಿರೋದಕ್ಕಲ್ಲ ಕಣೆ ಟಿವಿ ಸೀರಿಯಲ್ಲಲ್ಲಿ ಬರುತ್ತಲ್ಲ ಅತ್ತೆ ಸೊಸೆಯ ಜಗಳ ಅದೇ ರೀತಿ ಅಕ್ಕನಿಗೂ ಪಾವನ ಜೊತೆ ಜಗಳವಾಡುವಾಸೆ. ಆದರೆ ಪಾಪ ಪಾವನ ಅತ್ತೆಯೆದುರು ಜೋರಾಗಿ ಮಾತನಾಡುವುದಿರಲಿ ಉಸಿರೇ ಬಿಡಲ್ಲ ಅದೇ ಅಕ್ಕನ ಸಮಸ್ಯೆಗೆ ಮೂಲ ಕಾರಣ ಅಲ್ವಾ ಅಕ್ಕ.

ರಜನಿಗೊಂದು ಗುದ್ದಿ ನಗುತ್ತ ಸೌಭಾಗ್ಯ.......ನಿನಗ್ಯಾವಾಗಲೂ ಬರಿ ತಮಾಷೆ ಕಣೆ ಪಾವನ ಚಿನ್ನದಂತ ಹುಡುಗಿ ನಾನ್ಯಾಕೆ ಅವಳ ಜೊತೆ ಜಗಳವಾಡ್ಬೇಕು ?

ನಿಧಿ ಹಿಂದಿನಿಂದ ತಬ್ಬಿಕೊಂಡವರ ಕೆನ್ನೆಗೆ ಮುತ್ತಿಟ್ಟು......ಅತ್ತೆ ಆಂಟಿ ನಿಮ್ಮನ್ನು ರೇಗಿಸ್ತಿದ್ದಾರೆ ನಡೀರಿ ಅಜ್ಜಿ ನಿಮ್ಮನ್ನು ಕರೀತಿದ್ದಾರೆ...... ಎಂದಾಗ ಸೌಭಾಗ್ಯ ಅಲ್ಲಿಂದ ತೆರಳಿದರು.

ಶೀಲಾ ಕೂಡ ಸ್ನಾನ ಮುಗಿಸಿ ಬಂದು.....ಹಾಲಿನ್ನೂ ಬಂದಿಲ್ವಾ ? ನೀವಿಬ್ರೇನು ಇವತ್ತಿಷ್ಟು ಬೇಗ ರೆಡಿಯಾಗಿದ್ದೀರಲ್ಲ ?

ರಜನಿ......ಸುಮ ಹೊರಗೆ ಹಾಲನ್ನೇ ಪಡೀತಿದ್ದಾಳೆ ಜೊತೆಗೆ ಗಿರಿಗೆ ಬೆಣ್ಣೆ ಬೇಕೆಂದು ಹೇಳ್ತಿದ್ಳು.

ಸುಮ ಹಾಲು ತರುವಷ್ಟರಲ್ಲಿ ಅನುಷ—ಪ್ರೀತಿ ಸಹ ಬಂದಿದ್ದು ಎಲ್ರೂ ತಿಂಡಿಯ ಸಿದ್ದತೆಯಲ್ಲಿ ತೊಡಗಿಕೊಂಡರು. ಶನಿವಾರ—ಭಾನುವಾರ ಹಾಗು ರಜೆಯ ದಿನಗಳಲ್ಲಿ ಮನೆಯಲ್ಲಡುಗೆ ಮಾಡುವಂತಿಲ್ಲ ಎಂದು ರೇವತಿ ತಾಕೀತು ಮಾಡಿರುವುದರಿಂದ ಸವಿತಾ ಕೂಡ ರೆಡಿಯಾಗಿ ಇಲ್ಲಿನ ಅಡುಗೆಗೆ ಸಹಾಯ ಮಾಡಲು ಬಂದಳು. ಗಂಡಸರೆಲ್ಲರೂ ಕಾಫಿ ಕುಡಿಯುತ್ತ ಮಾತುಕತೆಯಲ್ಲಿದ್ದರೆ ರೋಹನ್—ವಿವೇಕ್ ಸಹ ಅವರಿಗೆ ಜೊತೆಯಾದರು.

ವಿವೇಕ್.......ಹರೀಶೆಲ್ಲಿ ಕಾಣಿಸ್ತಿಲ್ಲ ?

ರವಿ.....ಚಿನ್ನಿ ಇನ್ನೂ ಏದ್ದಿಲ್ಲಾಂತ ಕಿಣುತ್ತೆ ಅದಕ್ಕವನೂ ಬಂದಿಲ್ಲ.

ಅಪ್ಪನಿಂದ ಫ್ರೆಶಾಗಿಸಿಕೊಂಡು ಕೆಳಗೋಡಿ ಬಂದ ನಿಶಾ ನೇರವಾಗಿ ಕಿಚ್ಚನ್ನಿನೊಳಗೋಡಿ ಅಮ್ಮನನ್ನು ತಬ್ಬಿಕಂಡು........ಮಮ್ಮ ನನ್ನಿ ಕಾಂಪೇನ್ ಕೊಡು ಪಪ್ಪ ಕಾಪಿ ಬೇಕು ಅಂತ ಕೇಳಿ ಮಮ್ಮ.

ರಜನಿ.....ನಿಮ್ಮಪ್ಪನಿಗೆ ಕಾಫಿ ಬೇಕಂತಾ ? ಪಪ್ಪ ಎಲ್ಲಿ ?

ನಿಶಾ......ಪಪ್ಪ ಮೇಲೆ ಪೋನ್ ಮಾತಿದೆ ನನ್ನಿ ಕಾಂಪೇನ್ ಬೇಕು.

ಪ್ರೀತಿ......ಆಯ್ತಮ್ಮ ಬಂಗಾರಿ ಆಚೆ ಕೂತಿರು ನಾನೇ ತರ್ತೀನಿ.

ನೀತು......ನಿಧಿ ಬಾರಮ್ಮ ನಿಮ್ಮಪ್ಪನಿಗೆ ಕಾಫಿ ಬೇಕಂತೆ ತಗೊಂಡು ಹೋಗಿ ಕೊಟ್ಟು ಬಾ.

ನಿಧಿ ಕಾಫಿ ತಂದಾಗ ಹರೀಶ ಯಾರೊಟ್ಟಿಗೋ ಫೋನಿನಲ್ಲಿ ಚರ್ಚೆ ಮಾಡುತ್ತಿದ್ದು ಮಗಳಿಂದ ಕಾಫಿ ಪಡೆದು ಅವಳ ತಲೆ ನೇವರಿಸುತ್ತ ನಾನು ಸ್ವಲ್ಪ ಹೊತ್ತಿನಲ್ಲಿ ಬರ್ತೀನೆಂದು ಮಗಳನ್ನು ಕಳಿಸಿದನು.

ಅಶೋಕ......ನಿಮ್ಮಪ್ಪ ಬರ್ಲಿಲ್ವಾ ನಿಧಿ ? ಏನ್ಮಾಡ್ತಿದ್ದಾನೆ ?

ನಿಧಿ........ಅಪ್ಪ ಯಾರೊಟ್ಟಿಗೋ ಫೋನಲ್ಲಿ ಮಾತಾಡ್ತಿದ್ದಾರೆ ಅಂಕಲ್ ನನ್ನೂ ಕಳಿಸಿಬಿಟ್ರು ಆಮೇಲೆ ಬರ್ತೀನಂತ.

ಎಲ್ಲರೂ ಸ್ನಾನ ಮುಗಿಸಿ ರೆಡಿಯಾಗಿದ್ದು ತಿಂಡಿಗೆ ಕುಳಿತಾಗ ನಿಶಾ ತುಂಬಾನೇ ಖುಷಿಯಿಂದ ತನ್ನ ತಟ್ಟೆ ಹಿಡಿದು ಬಂದು ಸೋಫಾದಲ್ಲಿ ಇಡುತ್ತ ತಾನೂ ಏರಿಕೊಂಡಳು.

ಸುರೇಶ......ಏನ್ ಚಿನ್ನಿ ಮರಿ ತುಂಬ ಖುಷಿಯಾಗಿದ್ದೀಯಲ್ಲ.

ನಿಶಾ........ಅಣ್ಣ ಇದಿ ನಂಗೆ ಇಟ್ಟ ಆಲೂ ರೋಲಿ ರೋಲಿ.

ಸುರೇಶ.....ಇದು ರೋಲಿ ಅಲ್ಲ ಕಣಮ್ಮ ಪರೋಟ ಅಂತ ಹೇಳು.

ನಿಶಾ......ಅಣ್ಣ ನಾನಿ ಆಮೇಲಿಳಿ ಈಗ ನಾನಿ ತಿಂತಿ.

ಸುರೇಶ ನಗುತ್ತ ತಾನೂ ಒಂದು ಪೀಸ್ ಪರೋಟ ಮುರಿದು ಬೆಣ್ಣೆ ಅದ್ದಿ ತಂಗಿಗೆ ತಿನ್ನಿಸಿದ ನಂತರ ಕಿಚ್ಚನ್ನಿಗೆ ತೆರಳಿದರೆ ನಿಶಾ ಫುಲ್ ಖುಷಿಯಿಂದ ಪರೋಟ ತಿನ್ನುತ್ತ ಕುಳಿತಳು.

ಅಶೋಕ.........ಏನ್ ಹರೀಶ ಬೆಳಿಗ್ಗೆಯಿಂದ ಕೆಳಗೇ ಬಂದಿರಲಿಲ್ಲ ಫುಲ್ ಭಿಝಿಯಾಗಿದ್ದೆ.

ಹರೀಶ....ಭಿಝಿಯೇನಿಲ್ಲ ಒಬ್ಬ ಹಳೇ ಸ್ನೇಹಿತ ತುಂಬ ದಿನಗಳಾದ ನಂತರ ಇವತ್ತೇ ಫೋನ್ ಮಾಡಿದ್ದ ಅವನೊಟ್ಟಿಗೆ ಮಾತಾಡ್ತಿದ್ದೆ ಅಷ್ಟೆ ನೀವೆಲ್ರೇನೂ ರೆಡಿಯಾಗಿದ್ದೀರಲ್ಲ ಫ್ಯಾಕ್ಟರಿಗಾ ? ಇವತ್ತು ಶನಿವಾರ ರಜೆ ತಾನೇ ?

ರೇವಂತ್......ನಮಗ್ಯಾವಾಗ ರಜೆ ಭಾವ ನಾವು ತೆಗೆದುಕೊಂಡಾಗ ರಜೆ ಈಗ ಆರ್ಡರ್ಸ್ ಸ್ವಲ್ಪ ಜಾಸ್ತಿಯಿದೆ ಅದನ್ನು ಪೂರೈಸಬೇಕಲ್ಲ.

ರವಿ.......ನಾಳೆಯೂ ಫುಲ್ ವರ್ಕಿಂಗ್ ಡೇ.

ವಿವೇಕ್......ಮೊದಲು ಕೆಲಸ ಆಮೇಲೆ ರಜೆ ನಾನೂ ಹೈದರಬಾದಿಗೆ ಹೋಗ್ಬೇಕಿದೆ ಸಂಜೆ ಹತ್ತು ದಿನಗಳಿಗೆ ರೋಹನ್ ರಾತ್ರಿ ಹೊರಡ್ತಾನೆ ಅದಕ್ಕೆ ಇಲ್ಲಿ ಮಗಳೊಟ್ಟಿಗೆ ಸಮಯ ಕಳೆಯುತ್ತ ಇರೋದು.

ವಿಕ್ರಂ.......ರೋಹನ್ ನೀನ್ಯಾವ ಕಡೆಗೆ ?

ರೋಹನ್ ಪುಟ್ಟ ಮಗಳನ್ನು ಮಡಿಲಲ್ಲಿ ಮಲಗಿಸಿಕೊಂಡು ಆಡಿಸಿ ಮುದ್ದು ಮಾಡುತ್ತಲೇ........ಸರ್ ಬಾಂಬೆಗೆ ಒಂದು ವಾರ ಠಿಕಾಣಿ.

ವಿಕ್ರಂ.....ನಿನಗಲ್ಲಿ ಫ್ಫೀಯಿದ್ರೆ ಒಂದು ಕೆಲಸವಾಗ್ಬೇಕಲ್ಲ.

ರೋಹನ್......ಏನಾಗ್ಬೇಕು ಹೇಳಿ.......ಎಂದು ಅದರ ಬಗ್ಗೆ ಪೂರ್ತಿ ವಿವರ ತಿಳಿದುಕೊಂಡು......ನೀವಾ ಫೈಲ್ ಕೊಡಿ ನಿಮ್ಮ ಕೆಲಸವೂ ಆಯ್ತೆಂದು ತಿಳಿದುಕೊಳ್ಳಿ.

ಇತ್ತ ಕಿಚನ್ನಿನಲ್ಲಿ.........

ನಿಧಿ.......ಅಮ್ಮ ಒಂದು ವಾರದಲ್ಲಿ ವೀರೂ ಬರ್ತಾನೆ ಅಂದಿದ್ರಲ್ಲ ಇವತ್ತಿಗೆ ಹತ್ತು ದಿನಗಳಾಯ್ತು ಇನ್ನೂ ಬಂದಿಲ್ಲ ಅಲ್ಲಿ ಅಂತದ್ದೇನು ಕಿತ್ತು ದಬ್ಬಾಕ್ತಿದ್ದಾನೆ ?

ನೀತು........ನಾನಿಲ್ಲಿದ್ದೀನಿ ಅವನೇನು ಮಾಡ್ತಿದ್ದಾನೆ ಅಂತ ನನಗೆ ಹೇಗೇ ಗೊತ್ತಾಗುತ್ತೆ ? ನೀನೇ ಫೋನ್ ಮಾಡ್ಬಾರ್ದಿತ್ತಾ ?

ನಿಧಿ.......ಫೋನ್ ಮಾಡಿದ್ದೆ ಅಮ್ಮ ಕೆಲಸವಿನ್ನೂ ಮುಗಿದಿಲ್ಲ ಅಂತ ಹೇಳ್ಬಿಟ್ಟ ಬೇರೇನೂ ಹೇಳಲೇಯಿಲ್ಲ.

ನೀತು.......ಅವನೆಲ್ಲಾ ಕೆಲಸಗಳನ್ನೂ ಮುಗಿಸಿಕೊಂಡು ಬರಲಿ ಬಿಡು ಆಗ್ಯಾವುದೇ ಟೆನ್ಷನ್ ಅವನಿಗೂ ಇರಲ್ಲ.

ನಿಶಾ ತಟ್ಟೆ ಹಿಡಿದು ಬಂದು.......ಮಮ್ಮ ರೋಲಿ ಖಾಲಿ ಆತು ಇನ್ನಿ ಬೇಕು ಮಮ್ಮ.

ನೀತು......ನೀನು ಇನ್ನೊಂದು ಪರೋಟ ತಿಂದ್ರೆ ಮಧ್ಯಾಹ್ನ ಊಟ ಬೇಡ ಅಂತೀಯ.

ನಿಶಾ......ಪೀಸ್ ಮಮ್ಮ ನನ್ನಿ ರೋಲಿ ಬೇಕು.

ಸುಮ......ಇಲ್ಲಿ ಬಾರಮ್ಮ ಕಂದ ಕೊಡ್ತೀನಿ ನೀತು ತಿನ್ನುವಾಗ ತಿನ್ನಲಿ ಬಿಡು ಮಧ್ಯಾಹ್ನದ ಚಿಂತೆ ಈಗಲೇ ಯಾಕೆ ಮಾಡ್ತೀಯ.

ಗಂಡಸರೆಲ್ಲರೂ ಅವರವರ ಕೆಲಸಗಳಿಗೆ ತೆರಳಿದರೆ ರೋಹನ್ ತನ್ನ ಮಗಳನ್ನು ಆಡಿಸುತ್ತ ಕುಳಿತಿದ್ದರೆ ಅವನ ಪಕ್ಕದಲ್ಲಿ ನಿಶಾ ಕುಳಿತು ತಂಗಿಯನ್ನಾಡಿಸುತ್ತಿದ್ದಳು.

ಹರೀಶ.......ನೀತು ರೆಡಿಯಾಗಿ ಬಾ ಹೊರಗೆ ಹೋಗಿ ಬರೋಣ ಚಿನ್ನಿ ನೀನಿಲ್ಲೇ ಆಡ್ತಿರು ಕಂದ ಈಗ ಪೂನೀ ಬರ್ತಾಳೆ.

ನಿಶಾ.....ಆತು ಪಪ್ಪ ನನ್ನಿ ಚಾಕಿ ಬೇಕು.

ಹರೀಶ......ಆಯ್ತು ಕಂದ ಬರ್ತಾ ತರ್ತೀನಿ ರೋಹನ್ ಬಾಂಬೆಗೆ ಹೊರಡೋವರೆಗೂ ಮಗಳ ಜೊತೆಗಿದ್ದು ಆಡಿಸುತ್ತಿರು.

ರೋಹನ್......ಅದಕ್ಕೇ ಅಲ್ವಾ ಸರ್ ಇಲ್ಲೇ ಪಟ್ಟಾಗಿ ಕೂತಿರೋದು.

ನೀತು—ಹರೀಶ ತೆರಳಿದರೆ ಮಹಡಿಯ ರೂಮಲ್ಲಿ ತಮ್ಮ ತಂಗಿಯರ ಜೊತೆ ಪಬ್ಲಿಕ್ ಪರೀಕ್ಷೆಯನ್ಯಾವ ರೀತಿ ಏದುರಿಸಬೇಕೆಂದು ನಿಕಿತಾ ಜೊತೆ ನಿಧಿ ಅವರೆಲ್ಲರಿಗೂ ತಿಳುವಳಿಕೆ ಕೊಡುತ್ತಿದ್ದಳು.

1 comment:

  1. ಕಥೆ ಸಕತ್ತಾಗಿ ಇದೆ, ಮುಂದುವರಿಯಲಿ ಹಾಗೆ ಪ್ರತಿ ದಿನ ಕೊಡಿ

    ReplyDelete