ನಿನ್ನಣ್ಣ ರೈತಾಪಿ ಜನ ಕಷ್ಟಪಟ್ಟು ದುಡಿದು ನಿನ್ನನ್ನು ಸಲುಹಿದ್ದರು ಅತ್ತಿಗೆ ತಾಯಿಯ ಪ್ರೀತಿ ಮಮತೆಯನ್ನೆಲ್ಲಾ ನಿನಗೆ ಧಾರೆಯೆರೆದಿದ್ದರು ಅದೆಲ್ಲವೂ ಹೆಣ್ಣಿನ ಪ್ರೀತಿಯೆದುರು ಮರೆತೋಗಿತ್ತಲ್ಲವಾ. ಈಗ ಏಳು ತಿಂಗಳ ಹಿಂದಷ್ಟೇ ನಿನ್ನ ಅತ್ತಿಗೆ ಸುಂದರವಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು ಆದರೆ ಮುಂಚಿನಿಂದಲೂ ಡ್ರಗ್ಸ್ ವ್ಯಸನಿಯಾಗಿದ್ದ ಈ ವಿಶಾಲ್ ಮಗಳಿಗೆ ಮಗು ಹೆರುವಷ್ಟೂ ಪುರುಸೊತ್ತಿರಲಿಲ್ಲ. ಮೂರು ತಿಂಗಳ ಹಿಂದೆ ನಿನ್ನ ಅಣ್ಣ ಅತ್ತಿಗೆಯನ್ನು ನೀನೇ ಫ್ರಾನ್ಸಿಗೆ ಕರೆಸಿಕೊಂಡಿದ್ದೆ ಆದರೆ ಅವರು ಪುನಃ ಭಾರತಕ್ಕೆ ಹಿಂದಿರುಗಿ ಬರಲೇ ಇಲ್ವಲ್ಲ ಯಾಕೆ ?
ವಿಶಾಲ್ ತೊದಲುತ್ತಲೇ......ಅದು..ಅವರಿದ್ದ ಕಾರ್ ಆಕ್ಸಿಡೆಂಟ್ ಆಗಿ ಇಬ್ರೂ....
ನೀತು ನಗುತ್ತ......ಇರಲಿ ಆ ವಿಷಯ ಆಮೇಲೆ ಮಾತನಾಡೋಣ. ಒಂದು ದಿನ ನಿನ್ನತ್ತಿಗೆ ನಿನಗೆ ವೀಡಿಯೋ ಕಾಲ್ ಮಾಡಿ ಮಗಳನ್ನು ತೋರಿಸುತ್ತಿದ್ದಾಗ ಈ ನಿನ್ನ ಹೆಂಡತಿ ಮಗುವನ್ನು ನೋಡಿಬಿಟ್ಟಳು. ಇವಳಿಗದೇನು ಅನ್ನಿಸ್ತೋ ನಾ ಕಾಣೆ ಆದರೆ ಆ ಮಗು ನನಗೆ ಬೇಕು ಅಂತ ಹಠ ಹಿಡಿದು ಬಿಟ್ಟಳಲ್ವಾ ? ಇವಳ ಹಠ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತ ಹೋದಂತೆ ನೀವೆಲ್ಲರೂ ಸೇರಿ ಒಂದು ಪ್ಲಾನ್ ರಚಿಸಿ ಆ ಮುಗ್ದ ದಂಪತಿಗಳನ್ನು ಮಗುವಿನೊಂದಿಗೆ ಫ್ರಾನ್ಸ್ ದೇಶಕ್ಕೆ ಕರೆಸಿಕೊಂಡಿದ್ರಿ.
ನಿಮ್ಮ ಕಪಟ ನಾಟಕಗಳ ಬಗ್ಗೆ ಗೊತ್ತಿರದ ಮುಗ್ದ ದಂಪತಿಗಳು ಮಗನಂತೆ ಸಾಕಿದ್ದ ನಿನ್ನನ್ನು ನೋಡುವುದಕ್ಕಾಗಿ ಓಡೋಡಿ ಬಂದರು. ಪಾಪ ಅವರಿಗೇನು ಗೊತ್ತಿತ್ತು ಅಲ್ಲಿ ಅವರ ಸಾವು ಅವರಿಬ್ಬರನ್ನೂ ಏದುರು ನೋಡ್ತಿದೆ ಅಂತ. ಒಂದೆರಡು ದಿನ ಮನೆಯಲ್ಲೆಲ್ಲರೂ ಅವರಿಬ್ಬರನ್ನು ಆದರದಿಂದ ಸತ್ಕರಿಸಿ ತುಂಬಾನೇ ಚೆನ್ನಾಗಿ ನೋಡಿಕೊಂಡ್ರಿ. ನಿಮ್ಮ ಪ್ಲಾನಿನ ಪ್ರಕಾರ ಅವರಿಬ್ಬರನ್ನೂ ಹತ್ತಿರದಲ್ಲೊಂದು ದೇವಸ್ಥಾನವಿದೆ ಹೋಗಿ ಪೂಜೆ ಮಾಡಿಸಿಕೊಂಡು ಬರುವಂತೇಳಿ ಡ್ರೈವರ್ ಜೊತೆ ಕಳಿಸಿಕೊಟ್ರಿ ಆದರೆ ಮಗುವನ್ನು ಮಾತ್ರ ಕಳಿಸಲಿಲ್ಲ ಹೌದಲ್ವಾ.
ಸ್ವಲ್ಪವೂ ಕಲ್ಮಶವಿಲ್ಲದ ಮನಸ್ಸಿನ ನಿನ್ನ ಅಣ್ಣ ಅತ್ತಿಗೆ ಸಂತೋಷದಿಂದ ಇಲ್ಲದಿರುವ ದೇವಸ್ಥಾನಕ್ಕೆಂದು ಮನೆಯಿಂದ ಹೊರಟವರು ಪಾಪ ನೇರವಾಗಿ ದೇವರ ಹತ್ತಿರವೇ ಹೋಗಿ ಸೇರಿಕೊಂಡರು. ಏನೂ ಅರಿಯದಿರುವ ಮುಗ್ದ ಮುದ್ದಾದ ಕಂದಮ್ಮನನ್ನು ನಿಮ್ಮಂತಾ ಪಾಪಿಗಳ ಮಧ್ಯೆ ಒಂಟಿಯಾಗಿ ಬಿಟ್ಟು.
ವಿಶಾಲ್—ಸುಜೋಯ್ ಕುಟುಂಬ ನೀತುವಿಗೆ ಈ ವಿಷಯವೆಲ್ಲಾ ಹೇಗೆ ತಿಳಿಯಿತೆಂದು ಅಚ್ಚರಿಗೊಂಡಿದ್ದರೆ ವಿಶಾಲ್ ಅಳಿಯ ಮಾತ್ರ ತಲೆತಗ್ಗಿಸಿ ಕುಳಿತಿದ್ದನು.
ನೀತು.......ಪಾಪ ಮುಗ್ದ ದಂಪತಿಗಳು ದೇವಸ್ಥಾನಕ್ಕೆಂದು ತುಂಬ ಸಂತೋಷದಲ್ಲಿ ಹೋಗುತ್ತಿದ್ದಾಗ ಅವರ ಕಾರಿಗೊಂದು ದೊಡ್ಡ ಟ್ರಕ್ ಬಂದು ಗುದ್ದಿತು. ಕಾರಿನ ಸಮೇತ ಮುನ್ನೂರು ಅಡಿಗಳ ಪ್ರಪಾತಕ್ಕೆ ಬಿದ್ದ ದಂಪತಿಗಳಿಬ್ಬರೂ ಮರಳಿಬಾರದ ಲೋಕದತ್ತ ಮಗಳನ್ನಿಲ್ಲಿ ಒಂಟಿಯನ್ನಾಗಿಸಿ ಹೊರಟು ಹೋದರು. ಆ ಟ್ರಕ್ ಓಡಿಸುತ್ತಿದ್ದ ವ್ಯಕ್ತಿ ಯಾರು ಸುಜೋಯ್ ?
ನೀತು ಕೇಳಿದ ಪ್ರಶ್ನೆಗೆ ಸುಜೋಯ್ ಕೈಕಾಲುಗಳು ನಡುಗುತ್ತಿದ್ದು ಆತನ ಹೃದಯ ಬಡಿತ ಫುಲ್ ಏರಿಕೆಯಾಗಿತ್ತು.
ನೀತು.....ಯಾರಾ ಟ್ರಕ್ ಓಡಿಸ್ತಾ ಇದ್ದಿದ್ದು ಅಂತ ನಿನ್ನನ್ನೇ ಕೇಳಿದ್ದು ಸುಜೋಯ್ ಹೇಳು......ಎಂದು ಘರ್ಜಿಸಿದಳು.
ಸುಜೋಯ್ ಭಯದಲ್ಲಿ ನಡುಗುತ್ತ.........ನ..ನ..ನಂಗೆ ಗೊತ್ತಿಲ್ಲ.
ನೀತು......ನಂಗೆ ಗೊತ್ತಿಲ್ಲ (ನಗುತ್ತ) ನಿನ್ನ ಎರಡನೇ ಮಗ ತಾನೇ ಆ ಟ್ರಕ್ ಓಡಿಸಿಕೊಂಡು ಬಂದು ಆಕ್ಸಿಡೆಂಟ್ ಮಾಡಿ ಪಾಪ ಆ ಮುಗ್ದ ದಂಪತಿಗಳನ್ನು ಸಾಯಿಸಿದವನು.
ಸುಜೋಯ್.....ಮೇಡಂ ತಪ್ಪಾಯ್ತು ಮೇಡಂ ದಯವಿಟ್ಟು ಕ್ಷಮಿಸಿ ನಾವು ಮಾಡಿದ ತಪ್ಪಿನ ಅರಿವಾಗಿದೆ ಮೇಡಂ ಕ್ಷಮಿಸಿಬಿಡಿ.
ನೀತು.......ಕ್ಷಮಿಸಿಬಿಡಿ ಎಷ್ಟು ಸುಲಭವಾಗಿ ಕೇಳ್ಬಿಟ್ಟೆ ಸುಜೋಯ್ ನೀವೆಲ್ಲರೂ ಸೇರಿ ಮಾಡಿರುವ ಪಾಪಗಳಿಗೆ ಕ್ಷಮೆ ನೀಡಲಾಗುತ್ತಾ. ಅಮ್ಮನ ಮಡಿಲಿನಲ್ಲಿ ಒಂದು ದಿನವೂ ಮಲಗಲಾಗದ ರೀತಿ ನನ್ನ ಪ್ರಾಣವಾಗಿರುವ ಕಿರಿಮಗಳಿಂದ ಅವಳ ತಂದೆ ತಾಯಿ ಇಬ್ಬರನ್ನೂ ಕಿತ್ತುಕೊಂಡ್ರಿ. ಅದೇ ರೀತಿ ಈ ಡ್ರಗ್ ಅಡಿಕ್ಟ್ ಒಂದು ಮಗುವಿಗಾಗಿ ಆಸೆಪಟ್ಟಳೆಂದು ಆ ಮಗುವಿನ ತಂದೆ ತಾಯಿಯನ್ನೂ ಸಾಯಿಸಿದ್ರಿ ಇದಕ್ಕೆ ನಾನು ನಿಮ್ಮನ್ನು ಕ್ಷಮಿಸಬೇಕಾ ? ಸುಜೋಯ್ ನಿನ್ನೆರಡನೇ ಮಗ ಆ ಪುಟ್ಟ ಕಂದನನ್ನು ತಂದೆ ತಾಯಿಯಿಂದ ದೂರ ಮಾಡ್ಬಿಟ್ಟ ಅದು ತಪ್ಪಾ ಅಪರಾಧವಾ ? ಅಜಯ್ ನನಗ್ಯಾಕೋ ಸುಜೋಯ್ ಎರಡನೇ ಮಗನ ಭುಜದ ಮೇಲವನ ತಲೆಯಿರುವುದು ಸ್ವಲ್ಪವೂ ಇಷ್ಟವಾಗ್ತಿಲ್ಲ ಕತ್ತರಿಸಿ ಅವನ ತಾಯಿಯ ಮಡಿಲಲ್ಲಿ ಇಟ್ಬಿಡಪ್ಪ.
ಅಜಯ್ ಸಿಂಗ್ ಕತ್ತಿಯನ್ನಿರಿದು ಬರುತ್ತಿದ್ದರೆ ಎರಡೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು ಸುಜೋಯ್ ಎರಡನೇ ಮಗ ಪ್ರಾಣದ ಭೀತಿಯಿಂಧ ಕಿರುಚಿಕೊಳ್ಳುತ್ತಿದ್ದು ಕ್ಷಣದಲ್ಲೇ ಚೀರಾಟವೆಲ್ಲ ಉಡುಗೋಗಿತ್ತು. ಆತನ ತಲೆಯನ್ನು ಕಡಿದಾಕಿದ ಅಜಯ್ ಸಿಂಗ್ ತಲೆಯನ್ನವನ ತಾಯಿಯ ಮಡಿಲಿನಲ್ಲಿಟ್ಟು ನೀತು ಹಿಂದೆ ಬಂದು ಕೈಕಟ್ಟಿ ನಿಂತನು.
ನೀತು.......ನೋಡಿದ್ರಾ ಮಾಡಿರುವ ಕರ್ಮಗಳಿಗೆ ಯಾವತ್ತಾದ್ರೂ ಸರಿಯೇ ಪ್ರತಿಫಲವನ್ನು ಅನುಭವಿಸಲೇ ಬೇಕಲ್ವಾ.
ವರ್ಧನ್ ಒಳಬರುತ್ತ.......ಅಕ್ಕ ನಾನೆಲ್ಲವನ್ನೂ ಕೇಳಿಸಿಕೊಳ್ತಿದ್ದೆ ಈ ಪಾಪಿಗಳಲ್ಯಾರೊಬ್ಬರೂ ಬದುಕಿರಲೇಬಾರದು ರಾಣಾ ಎಲ್ಲರನ್ನು ಕತ್ತರಿಸಿ ಬಿಸಾಕು.
ನೀತು ತಮ್ಮನ ಭುಜ ತಟ್ಟುತ್ತ.........ತಾಳ್ಮೆಯಿಂದಿರು ವರ್ಧನ್ ಈ ಪಾಪಿಗಳಿಗೆ ಶಿಕ್ಷೆ ಸಿಕ್ಕೇ ಸಿಗುತ್ತೆ ಆತುರವೇಕೆ ನಿನಗೆ ತಿಳಿಸಬೇಕಾದ ವಿಷಯವಿನ್ನೂ ಇದೆ ನಿನಗಾಗಿಯೇ ಕಾಯ್ತಿದ್ದೆ. ರಾಣಾ ಈ ವಿಶಾಲ್ ಮಗಳು ಅಳಿಯ ಇಬ್ಬರನ್ನೂ ಈ ಕ್ಷಣವೇ ಜೈಸಲ್ಮೇರಿಗೆ ಕಳಿಸಿಬಿಡು ಅಲ್ಲಿನ ಕಾರಾಗೃಹದಲ್ಲಿ ಪ್ರತಿದಿನ ಪ್ರತಿಕ್ಷಣವೂ ಇವರಿಬ್ಬರಿಗೆ ನರಕದ ದರ್ಶನವಾಗ್ಬೇಕು ಆದರೆ ಸಾಯಬಾರದು.
ರಾಣಾ ಸೂಚನೆ ಮೇರೆಗೆ ರಕ್ಷಕರು ಅವರಿಬ್ಬರನ್ನು ಎಳೆದೊಯ್ದರೆ ವಿಶಾಲ್ ಮತ್ತವನ ಮಡದಿ ಪರಿಪರಿಯಾಗಿ ನೀತುವಿನ ಮುಂದೆ ಬೇಡಿಕೊಂಡರೂ ಸಹ ಅವಳು ಮುಗುಳ್ನಗುತ್ತ ಕುಳಿತಿದ್ದಳು.
ನೀತು......ಹತ್ತು ಜನ ಪಾಪಿಗಳಲ್ಲಿ ಮೂವರ ಕಥೆ ಮುಗೀತು ಈಗ ಉಳಿದಿರುವವರು ಏಳು ಮಂದಿ. ದಿಲೇರ್ ಸಿಂಗ್ ಈ ಸುಜೋಯ್ ಮಕ್ಕಳಿಬ್ಬರು ಮತ್ತವನ ಸೊಸೆ ಇಲ್ಲಿರುವುದು ಬೇಕಾಗಿಲ್ಲ ಅನಿಸುತ್ತೆ ಮೂವರನ್ನೂ ಯಮನ ಹತ್ತಿರ ಕಳಿಸಿಬಿಡು.
ನೀತು ಆದೇಶವನ್ನು ಕೇಳಿ ಸುಜೋಯ್ ಮತ್ತವನ ಮಡದಿಯಿಬ್ಬರ ಆಕ್ರಂದನ ಜೋರಾಗುತ್ತಿದ್ದರೆ ಅವರ ಹಿರಿ—ಕಿರಿ ಮಕ್ಕಳಿಬ್ಬರ ತಲೆ ಕಡಿದಾಕಿದ ದಿಲೇರ್ ಸೊಸೆಯ ಹಣೆಗೊಂದು ಬುಲೆಟ್ ನುಗ್ಗಿಸಿದ. ಸುಜೋಯ್—ವಿಶಾಲ್ ತಾವು ಮಾಡಿದ್ದ ದುಶ್ಕೃತ್ಯಗಳಿಂದಾಗಿ ತಮ್ಮ ಮಕ್ಕಳೆಲ್ಲರನ್ನೂ ಕಳೆದುಕೊಂಡು ರೋಧಿಸುತ್ತಿದ್ದರೆ ಸುಮೇರ್ ಅವರ ಮುಖಕ್ಕೆ ನೀರನ್ನೆರಚುತ್ತ ಸುಮ್ಮನೆ ಕೂರುವಂತೇಳಿದನು.
ನೀತು........ನಿನಗೆ ವಿಷಯ ಗೊತ್ತಿರಲಿಕ್ಕಿಲ್ಲ ವರ್ಧನ್ ಹತ್ತು ವರ್ಷದ ಹಿಂದೆ ಅಣ್ಣ (ರಾಣಾ ಪ್ರತಾಪ್) ಸಣ್ಣ ಕಂಪನಿಯ ಜೊತೆಯಲ್ಲಿ ಸೇರಿ ಜರ್ಮನಿ ಹಾಗು ಫ್ರಾನ್ಸ್ ದೇಶಗಳಲ್ಲಿ ಸಂಸ್ಥಾನದ ಕಂಪನಿ ಸ್ಥಾಪನೆ ಮಾಡಿದ್ರು. ಅಣ್ಣನ ಪರಿಶ್ರಮಕಾಕೆ ಫಲವೂ ದೊರೆಯಿತು ಕೇವಲ ನಾಲ್ಕೈದು ವರ್ಷಗಳಲ್ಲೇ ಎರಡೂ ದೇಶಗಳಲ್ಲಿ ಕಂಪನಿಗಳು ಸಹ ಆಕಾಶದೆತ್ತರಕ್ಕೆ ಬೆಳೆಯುತ್ತ ಹೋದವು. ಅಣ್ಣ ಅಲ್ಲಿಗೋಗಿ ಕಂಪನಿ ಕಾರ್ಯವನ್ನು ನೋಡಿಕೊಳ್ಳಲು ಸಾಧ್ಯವಿಲ್ಲದಿದ್ದ ಕಾರಣ ತನ್ನಿಬ್ಬರು ಆಪ್ತ ಗೆಳೆಯರನ್ನು ಎರಡೂ ದೇಶಗಳಲ್ಲಿನ ದಿನನಿತ್ಯದ ಕೆಲಸಗಳನ್ನು ನೋಡಿ
ಕೊಳ್ಳಲು ಉಸ್ತುವಾರಿಗಳನ್ನಾಗಿ ಹೆಸರಿಸಿ ಇವರಿಬ್ಬರನ್ನು ಕಳಿಸಿದ್ದರು.
ಕೊಳ್ಳಲು ಉಸ್ತುವಾರಿಗಳನ್ನಾಗಿ ಹೆಸರಿಸಿ ಇವರಿಬ್ಬರನ್ನು ಕಳಿಸಿದ್ದರು.
ಇವರಿಬ್ಬರೂ ಅಲ್ಲಿಗೋಗಿ ಕಂಪನಿ ವಹಿವಾಟುಗಳನ್ನು ವಹಿಸಿಕೊಂಡಾಗ ಅಲ್ಲಿಂದ ಸಃಸ್ಥಾನಕ್ಕೆ ಬರುತ್ತಿದ್ದ ಲಾಭಾಂಶವನ್ನು ನೋಡಿ ಇಬ್ಬರಿಗೂ ತಲೆ ತಿರುಗಿತು. ಇಬ್ಬರೂ ಸೇರಿ ಕಂಪನಿಯ ಅಕೌಂಟಿನಲ್ಲಿ ಏರುಪೇರು ಮಾಡುತ್ತ ಕಂಪನಿ ಹಣವನ್ನು ದೋಚಿ ಪನಾಮ ಐಲ್ಯಾಂಡಿನಲ್ಲಿರುವ ಬ್ಯಾಂಕೊಂದಕ್ಕೆ ವರ್ಗಾಯಿಸುತ್ತಿದ್ರು. ಕಂಪನಿಗಳಿಂದ ಮೊದಲು ಬರುತ್ತಿದ್ದ ಲಾಭ ಈಗ ಯಾಕೆ ಬರುತ್ತಿಲ್ಲ ಅಂತ ಅಣ್ಣನಿಗೆ ಅನುಮಾನ ಬಂದು ಇವರನ್ನು ಕೇಳಿದಾಗಲೆಲ್ಲಾ ಏನಾದರೊಂದು ಸಬೂಬು ಹೇಳಿ ನಂಬಿಸಿ ಬಿಡ್ತಿದ್ರು.
ಎರಡುವರೆ ವರ್ಷದ ಹಿಂದೆ ಅಣ್ಣ ತಾನೇ ಎರಡು ದೇಶಗಳಿಗೆ ಬೇಟಿಕೊಡಲು ಬರುವುದಾಗಿ ಹೇಳಿದಾಗ ಇಬ್ಬರಿಗೂ ತಾವು ಮಾಡುತ್ತಿದ್ದ ಮೋಸದ ಸಂಗತಿ ಅಣ್ಣನಿಗೆಲ್ಲಿ ತಿಳಿಯುತ್ತೋ ಎಂದು ಹೆದರಿದ್ದರು. ಆದರಿವರ ಅದೃಷ್ಟ ಗಟ್ಟಿಯಾಗಿತ್ತು ಅದೇ ಸಮಯಕ್ಕೆ ಅತ್ತಿಗೆ ಗರ್ಭಿಣಿಯಾದ ಸುದ್ದಿ ತಿಳಿದು ಅಣ್ಣ ಹೋಗುವುದನ್ನು ಕ್ಯಾನ್ಸಲ್ ಮಾಡಿಬಿಟ್ರು ಅದೇ ಇವರಿಗೆ ವರದಾನವಾಗಿ ಪರಿಣಮಿಸಿತು. ಅಣ್ಣ ಇಲ್ಲಿಯೇ ಅತ್ತಿಗೆಯ ಜೊತೆ ಇರುತ್ತಿದ್ದು ಇವರಿಬ್ಬರೂ ಗುಟ್ಟಾಗಿ ಭಾರತಕ್ಕೆ ಬಂದು ಅಣ್ಣನ ವಿರೋಧಿಗಳನ್ನು ಭೇಟಿಯಾಗಿ ಅವರೆಲ್ಲರನ್ನೂ ಒಟ್ಟುಗೂಡಿಸುತ್ತ ಷಡ್ಯಂತ್ರವನ್ನು ರೂಪಿಸತೊಡಗಿದರು.
ನಮ್ಮ ದುರಾದೃಷ್ಟ ಅಣ್ಣ ಅತ್ತಿಗೆ ಇವರ ಷಡ್ಯಂತ್ರಕ್ಕೆ ಬಲಿಯಾಗಿ ಹೋದರು. ವರ್ಧನ್ ನೀನು ಅತ್ತಿಗೆಯನ್ನು ದೇವತೆಯಂತೆ ಪೂಜಿಸುತ್ತಿದ್ದೆ ಇವರುಗಳಿಂದಾಗಿಯೇ ಅತ್ತಿಗೆ ಇಂದು ನಮ್ಮೊಂದಿಗಿಲ್ಲ. ಇವರೆಲ್ಲರೂ ನಿನ್ನ ಅಪರಾಧಿಗಳು ನಾನು ಮೇಲಿರ್ತೀನಿ ಇವರ ಕಥೆ ಮುಗಿಸಿ ಬಂದ್ಬಿಡು.
ನೀತು ತೆರಳಿದ ನಂತರ ವರ್ಧನ್ ತನ್ನ ಹೃದಯದಾಳದಲ್ಲಿದ್ದ ಎಲ್ಲಾ ವೇದನೆಗಳನ್ನು ಅವರುಗಳ ಮೇಲೆ ಕ್ರೌರ್ಯದ ಮುಖೇನ ತೋರಿಸಿ ನಾಲ್ವರನ್ನೂ ಯಮಪುರಿಗೆ ರವಾನಿಸಿಬಿಟ್ಟನು. ನೀತು ಮೇಲೆ ಬಂದಾಗ ಅರಮನೆಯ ಪರಾಂಗಣದಲ್ಲಿ ರಜನಿಯ ಮಡಿಲಿನಲ್ಲಿ ಕುಳಿತಿದ್ದ ಆ ಪುಟ್ಟ ಹೆಣ್ಣು ಮಗು ಕಿಲಕಾರಿ ಹಾಕುತ್ತಿತ್ತು. ನೀತು ಪಕ್ಕ ಬಂದು ಕುಳಿತಾಗ ಅವಳತ್ತ ವಾಲಿಕೊಂಡ ಮಗು ನೀತು ಮುಖದ ಮೇಲೆಲ್ಲಾ ತನ್ನ ಪುಟ್ಟ ಹಸ್ತವನ್ನಾಡಿಸುತ್ತ ನಗುತ್ತಿತ್ತು. ಕೆಲ ಹೊತ್ತಿನ ಬಳಿಕ ವರ್ಧನ್ ಬಂದು.......
ವರ್ಧನ್.....ಅಕ್ಕ ಈ ಮಗುವಿನ ಬಗ್ಗೆ ಏನು ಯೋಚಿಸಿದ್ದೀರಾ ?
ರಜನಿ........ಮಗು......?????
ವರ್ಧನ್.......ಸರಿಯಾದ ನಿರ್ಧಾರ ಅಕ್ಕ xxxx ಮಡಿಲಿನಲ್ಲಿ ಈ ಮಗುವಿಗೂ ತಂದೆ ತಾಯಿಯ ಪ್ರೀತಿ ಸಿಗುತ್ತೆ. ಅಕ್ಕ ಅದಕ್ಕೆ ಬೇಕಾದ ಎಲ್ಲಾ ಕಾಗದ ಪತ್ರಗಳನ್ನು ನಾನು ಕಳುಹಿಸಿ ಕೊಡ್ತೀನಿ ನೀವೇನೂ ತೋಂದರೆ ತೆಗೆದುಕೊಳ್ಳಲು ಹೋಗ್ಬೇಡಿ.
ನೀತು......ಆಯ್ತು ಕಣೋ ನೀನೂ ನಮ್ಜೊತೆ ಊರಿಗೆ ಬರ್ತೀಯ ?
ವರ್ಧನ್........ಇಲ್ಲ ಅಕ್ಕ ಸೋಮವಾರದಿಂದ ಪಾರ್ಲಿಮೆಂಟ್ ಸೆಷನ್ಸ್ ಶುರುವಾಗ್ತಿದೆ ನಾನಲ್ಲಿರಲೇ ಬೇಕು.
ರಜನಿ ಮಗುವಿನ ಜೊತೆ ರೂಮಿಗೆ ತೆರಳಿದರೆ ನೀತು...ವರ್ಧನ್... ಸುಭಾಷ್....ರಾಣಾ...ಹಾಗು ಇತರರು ಇನ್ನೂ ಕೆಲ ವಿಷಯಗಳ ಬಗ್ಗೆ ಚರ್ಚಿಸುತ್ತ ಕುಳಿತರು.
**
ಕಾಮಾಕ್ಷಿಪುರ.....
ಭಾನುವಾರ......
ಇಂದು ರಜೆಯ ದಿನವಾಗಿದ್ದು ಎಲ್ಲಾ ಗಂಡಸರೂ ಮನೆ ಹೊರಗಿನ ಅಂಗಳದಲ್ಲಿ ಕಾಫಿ ಕುಡಿಯುತ್ತ ಮಾತನಾಡುತ್ತಿದ್ದರೆ ಅನುಷಾಳಿಂದ ಫ್ರೆಶಾಗಿಸಿಕೊಂಡು ಓಡೋಡಿ ಬಂದ ನಿಶಾ ಅಪ್ಪನನ್ನು ಸೇರುತ್ತ......
ನಿಶಾ......ಪಪ್ಪ ನನ್ನಿ ಮಮ್ಮ ಎಲ್ಲಿ ಬರುತ್ತೆ ?
ರೇವಂತ್.......ಅದು ಎಲ್ಲಿ ಬರುತ್ತೆ ಅಲ್ಲ ಕಂದ ಅಮ್ಮ ಯಾವಾಗ ಬರುತ್ತೆ ಅಂತ ಕೇಳು.
ನಿಶಾ......ಮಮ್ಮ ಆವಾಗ ಬರುತ್ತೆ ಪಪ್ಪ ?
ಹರೀಶ......ನಿಮ್ಮಮ್ಮ ನಾಳೆ ಬರುತ್ತೆ ಬಂಗಾರಿ.
ನಿಶಾ.......ಮಮ್ಮ ನಾಳೆ ಬರುತ್ತೆ.....
ಪ್ರೀತಿ........ಅಮ್ಮ ನಾಳೆ ಬರುತ್ತೆ ಚಿನ್ನಿ ಮರಿ ನೀನೀಗ ಕಾಂಪ್ಲಾನ್ ಕುಡಿ ಆಮೇಲೆ ನಿಂಗೆ ಚಾನ ಮಾಡಿಸ್ತೀನಿ.
ನಿಶಾ.....ಆತು ಅತ್ತೆ......ಎಂದೇಳಿ ಅಪ್ಪನ ಮಡಿಲಲ್ಲಿ ಕಾಂಪ್ಲಾನ್ ಕುಡಿದ ಬಳಿಕ ನಾಯಿಗಳ ಜೊತೆಯಾಡುತ್ತ ಇದ್ದಕ್ಕಿದ್ದಂತೆ...... ಪಪ್ಪ... ಪಪ್ಪ.... ಹೆಲಿಚಾಪಲ್ ಬಂತು ನನ್ನಿ ಮಮ್ಮ ಬಂತು....ಮಮ್ಮ ಬಂತು ಎಂದು ಕುಣಿದಾಡಲು ಶುರುವಾದಳು.
ವಿಕ್ರಂ......ಇಲ್ಲ ಕಣಮ್ಮ ಕಂದ ಅಮ್ಮ ನಾಳೆ ಬರುತ್ತೆ.
ನಿಶಾ......ಇಲ್ಲ...ಇಲ್ಲ...ನನ್ನಿ ಮಮ್ಮ ಬಂತು.
ಅಷ್ಟರಲ್ಲೇ ಮಕ್ಕಳು ಜಾಗಿಂಗ್ ಮುಗಿಸಿ ಬಂದಿದ್ದು ಅವರಿಗೂ ಅಮ್ಮ ಬಂತೆಂದು ಹೇಳಿದ ನಿಶಾ ಕುಣಿದಾಡುತ್ತಿದ್ದಳು.
ರಾಜೀವ್.........ಅಮ್ಮ ಬಂತೆಂದು ಕುಣಿತಿದ್ದಾಳೆ ಆಮೇಲೆ ಅಮ್ಮ ಬರದಿದ್ದಾಗ ಸಪ್ಪಗಾಗಿ ಹೋಗ್ತಾಳೆ.
ದೃಷ್ಟಿ......ತಾತ ನಾವಿದ್ದೀವಲ್ಲ ಚಿನ್ನಿ ಸಪ್ಪಗಿರಲು ಬಿಡಲ್ಲ.
ನಿಧಿ........ಬಾ ಚಿನ್ನಿ ನಿಂಗೆ ಉಯ್ಯಾಲೆ ಆಡಿಸ್ತೀನಿ.
ನಿಶಾ ಮನೆ ಗೇಟನ್ನಿಡಿದು ನಿಂತು ಹೊರಗೆ ನೋಡುತ್ತ.......ನಾನಿ ಬರಲ್ಲ ಅಕ್ಕ ನನ್ನಿ ಮಮ್ಮ ಬಂತು.
ಎಲ್ಲರೂ ನಿಶಾಳನ್ನು ಕರೆದರೂ ಅವಳು ಮಾತ್ರ ಗೇಟಿನ ಬಳಿಯಿಂದ ಕದಲದೆ ಪಟ್ಟಾಗಿ ನಿಂತಿದ್ದಾಗ ಮನೆ ಮುಂದೆ ಜಾನಿಯ ಜೀಪು ಬಂದು ನಿಂತಿತು. ಅಮ್ಮ ಕೆಳಗಿಳಿದಿದ್ದನ್ನು ನೋಡಿ ಕುಣಿದಾಡಿಬಿಟ್ಟ ನಿಶಾ ಅಮ್ಮ ಎತ್ತಿಕೊಂಡಾಕ್ಷಣ ಅವಳನ್ನು ಬಿಗಿಯಾಗಿ ತಬ್ಬಿಕೊಂಡು ಬಿಟ್ಟಳು.
ಅಶೋಕ.......ನಮಗ್ಯಾರಿಗೂ ಹೆಲಿಕಾಪ್ಟರ್ ಶಬ್ದವೇ ಕೇಳಿಸಲಿಲ್ಲ ನೀತು ನಿನ್ನ ಮಗಳು ಅದನ್ನೇಗೆ ಗ್ರಹಿಸಿದಳೋ ಕಾಣೆ ಅಮ್ಮ ಬಂತು ಅಂತ ಅಷ್ಟೊತ್ತಿನಿಂದ ಕುಣಿದಾಡ್ತಿದ್ದಾಳೆ.
ನೀತು........ನನ್ನ ಮಗಳಲ್ಲವಾ ಅದಕ್ಕೇ ಇವಳಿಗೆ ಗೊತ್ತಾಗೋಯ್ತು.
ನಿಶಾ......ಮಮ್ಮ ನೀ ಎಲ್ಲಿ ಹೋಬೇಡ....ಹೋಬೇಡ.
ನೀತು......ಇಲ್ಲ ಕಂದ ನಾನೆಲ್ಲಿಗೂ ಹೋಗಲ್ಲ.
ರೇವಂತ್.......ನೀನು ರಾಣಾ ಇಬ್ಬರೇ ಬಂದಿದ್ದೀರಲ್ಲ ರಜನಿ ಮತ್ತು ಸುಭಾಷ್ ಎಲ್ಲಿ ?
ನೀತು ಎಲ್ಲಾ ಮಕ್ಕಳನ್ನೂ ತಬ್ಬಿಕೊಂಡ ನಂತರ......ಅಣ್ಣ ಅವರೂ ಬರ್ತಾರೆ ಆದರದಕ್ಕಿಂತ ಮುಂಚೆ ನಿಮ್ಮೆಲ್ಲರಿಗೂ ಕೆಲವು ವಿಷಯ ಹೇಳುವುದಿತ್ತು ಒಳಗೆ ನಡೀರಿ ಹೇಳ್ತೀನಿ. ಗಿರೀಶ ನೀವು ಮಕ್ಕಳೆಲ್ರೂ ಏದುರು ಮನೆಯಲ್ಲಿರಿ ನಿಮ್ಮಿ ನಿಮ್ಮಮ್ಮ ಎಲ್ಲಿ ?
ನಿಕಿತಾ......ಅಮ್ಮ ಒಳಗೇ ಇದ್ದಾರೆ ಆಂಟಿ.
ನಿಶಾ......ನಾನಿ ಹೋಗಲ್ಲ ಮಮ್ಮ.
ನೀತು.......ನಿನ್ನೆಲ್ಲಿಗೂ ಕಳಿಸ್ತಿಲ್ಲ ಕಂದ.
ಎಲ್ಲರೂ ಮನೆಯ ಲಿವಿಂಗ್ ಹಾಲಿನಲ್ಲಿ ಸೇರಿದಾಗ ತಿಂಡಿ ಕೆಲಸ ಮಾಡ್ತಿದ್ದ ಹೆಂಗಸರನ್ನೂ ಕಿಚನ್ನಿನಿಂದ ಕರೆದ ನೀತು ತನಗೆಲ್ಲರೂ ಕಾಣಿಸುವ ಜಾಗದಲ್ಲಿ ಮಗಳನ್ನು ಕೂರಿಸಿಕೊಂಡು ಕುಳಿತಳು.
ರೇವತಿ.......ಏನಮ್ಮ ಅಷ್ಟು ಮುಖ್ಯವಾದ ವಿಷಯವಾ ?
ನೀತು......ಹೇಳ್ತೀನಮ್ಮ ನಿಧಿ ನಾನು ಹೇಳುವುದನ್ನು ತಾಳ್ಮೆಯಿಂದ ಕೇಳಿಸ್ಕೊ ಏಕ್ಸೈಟಾಗ್ಬೇಡ.
ನಿಧಿ.....ನಾನು ಏಕ್ಸೈಟಾಗುವಂತ ವಿಷಯವೇನಮ್ಮ ?
ನೀತು........ತಾಳ್ಮೆಯಿಂದಿರು ತಿಳಿಯುತ್ತೆ. ನಿಧಿ—ನಿಶಾ ಇವರಿಬ್ಬರ ಜೀವದ ಹಿಂದೆ ಬಿದ್ದಿದ್ದವರೆಲ್ಲರ ಗತಿ ಏನಾಯ್ತೆಂಬುದು ನಿಮಗೆಲ್ಲ ಗೊತ್ತಿದೆ. ಆದರೆ ನಿಮಗೆ ಗೊತ್ತಿರದ ಇನ್ನೊಂದು ಸತ್ಯವಿತ್ತು ಅದು ನನಗೆ ನಮ್ಮೆಜಮಾನ್ರಿಗೆ ಬಿಟ್ಟು ಬೇರಾರಿಗೂ ಗೊತ್ತಿಲ್ಲ. ರಾಜಸ್ಥಾನದ ಸಿಎಂ...ಅವನ ಜೊತೆಗಾರರು...ಚಂಚಲಾದೇವಿ ಜೊತೆ ಮಿಕ್ಕವರು ನಿಶಾಳ ಹಿಂದೆ ಬಿದ್ದಿದ್ದ ವಿಷಯ ನಿಮಗೆ ಗೊತ್ತಿತ್ತು ಆದರೆ ಎಲ್ಲರನ್ನೂ ಒಗ್ಗೂಡಿಸಿದ್ದ ಕಾಣದ ಕೈಗಳು ಯಾವತ್ತಿಗೂ ಮುಂದೆ ಬಂದಿರಲಿಲ್ಲ ತೆರೆ ಮರೆಯಲ್ಲೇ ಉಳಿದಿದ್ದವು. ಅವರಿಬ್ಬರನ್ನಿಡಿದು ತರುವುದಕ್ಕಾಗಿ ನಾನು ದುಬೈಗೆ ಹೋಗಿದ್ದು..........ಎಂದು ಪ್ರತಿಯೊಂದು ವಿಷಯ ವಿವರವಾಗಿ ಮನೆಯವರಿಗೆ ಹೇಳಿದರೂ ಏಳು ತಿಂಗಳ ಮಗುವಿನ ಬಗ್ಗೆ ಚಕಾರವೆತ್ತಲಿಲ್ಲ.
ನಿಧಿಯ ಕಂಗಳಿಂದ ಕಣ್ಣೀರು ಹರಿಯುತ್ತಿದ್ದು ಏದ್ದು ಬಂದವಳೇ ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡು.......
ನಿಧಿ.......ಅಮ್ಮ ನಾನು ಬೇಡವೆಂದಿದ್ದರೂ ನೀವು ಪುನಃ ಸಾವಿನ ದವಡೆಗ್ಯಾಕೆ ಹೋಗಿದ್ದು ನಿಮಗೆನಾದ್ರೂ......
ನೀತು.......ನಾನು ಸಾವಿನ ದವಡೆಗೆ ಹೋಗಿರಲಿಲ್ಲ ಕಣಮ್ಮ ಅವರ ಸಾವಾಗಿ ಹೋಗಿದ್ದೆ. ಈಗ ನನ್ನ ಮನಸ್ಸಿಗೆ ಸಮಾಧಾನವಾಗ್ತಿದೆ ನನ್ನ ಮಕ್ಕಳಿಂದೆ ಬಿದ್ದಿದ್ದವರೆಲ್ಲರೂ ನಿರ್ನಾಮಗೊಂಡಿದ್ದಾರೆ. ಈಗ ನನ್ನೀ ಬಂಗಾರಿ ಅಣ್ಣ ಅಕ್ಕನ ಜೊತೆ ಯಾವ ಭಯವೂ ಇಲ್ಲದೆ ರಕ್ಷಕರ ಬೆಂಗಾವಲಿರದಿದ್ದರೂ ಹಾಯಾಗಿ ಸುತ್ತಾಡಬಹುದು.
ಅಶೋಕ......ಹರೀಶ ನೀವಿಬ್ರು ಎಲ್ಲಾ ವಿಷಯವನ್ನೂ ನಮ್ಮಿಂದ ಮುಚ್ಚಿಟ್ಟಿದ್ರಲ್ಲ.
ಸುಮ.......ಕಳೆದ ಬಾರಿ ನೀತು ಸಾವಿನತ್ತ ಹೋಗಿ ಹಿಂದಿರುಗಿ ಬಂದಿದ್ಳು ಅದನ್ನು ನೆನೆದರೆ ಈಗಲೂ ನನ್ನೆದೆ ನಡುಗುತ್ತೆ.
ನಿಧಿ.......ವೀರೂ ನಿನಗೆಲ್ಲವೂ ಗೊತ್ತಿದ್ರೂ ನನಗೇನೂ ಹೇಳಲಿಲ್ಲ ಆಮೇಲಿದೆ ನಿಂಗೆ.
ವೀರೇಂದ್ರ........ಆಂಟಿ ಹೇಳ್ಬೇಡ ಅಂದಿದ್ರು ಅದಕ್ಕೆ ಹೇಳಲಿಲ್ಲ.
ನೀತು......ನಿಧಿ ಅವನದ್ದೇನೂ ತಪ್ಪಿಲ್ಲ ಸುಮ್ನಿರಮ್ಮ ನನ್ನ ಮಾತಿನ್ನೂ ಮುಗಿದಿಲ್ಲ ಇದಕ್ಕಿಂತಲೂ ಮುಖ್ಯ ವಿಷಯವೊಂದು ಹೇಳ್ಬೇಕಿದೆ.
ಸೌಭಾಗ್ಯ.......ಇನ್ನೇನಾಯ್ತಮ್ಮ ಹೆದರಿಸ್ಬೇಡ ಬೇಗ ಹೇಳ್ಬಿಡು.
ನೀತು........ಹೆದರುವಂತದ್ದೇನಲ್ಲ ಅಕ್ಕ ನಾನಿಷ್ಟು ದಿನಗಳಿಂದಲೂ ನಿಮಗ್ಯಾರಿಗೂ ತಿಳಿಸದೆ ಮುಚ್ಚಿಟ್ಟಿದ್ದ ವಿಷಯವನ್ನೀಗ ಹೇಳುವ ಸಮಯ ಬಂದಿದೆ.
ಹರೀಶ......ಇನ್ಯಾವ ವಿಷಯವೂ ಇಲ್ವಲ್ಲ ನೀತು ಹೊಸದಾಗಿ ನಿನಗೆ ಏನಾದರೂ ತಿಳಿಯಿತಾ ?
ನೀತು.......ಹೊಸ ವಿಷಯವಲ್ಲ ಹಳೆಯದ್ದೇ ನಮ್ಮ ಮನೆಯೊಳಗಿನ ವಿಷಯ ನಿಮಗೂ ಗೊತ್ತಿಲ್ಲ. ನನ್ನ ಅನುಷ....ಪ್ರತಾಪ್ ಮೂವರಿಗೆ ಬಿಟ್ಟರೆ ಬೇರಾರಿಗೂ ಗೊತ್ತಿರದ ವಿಷಯ.
ಅಕ್ಕ ತನ್ನ ಹೆಸರನ್ನೇಳಿದ್ದೇ ತಡ ಅನುಷ ಮಂಡಿ ಮಡಚಿಕೊಂಡು ಮುಖ ಹುದುಗಿಸಿ ಅಳುವುದಕ್ಕೆ ಪ್ರಾರಂಭಿಸಿದಳು. ಹೆಂಗಸರೆಲ್ಲರೂ ಅವಳಿಗೆ ಸಮಾಧಾನ ಮಾಡುತ್ತಿದ್ದರೆ ರೇವತಿ ಮಗಳನ್ನು ತಮ್ಮೆದೆಗೆ ಒತ್ತಿಕೊಂಡು ಓಲೈಸತೊಡಗಿದರು. ಅನು ಆಂಟಿ ಅಳುತ್ತಿರುವುದು ನೋಡಿ ನಿಶಾ ಕೂಡ ಕಣ್ಣೀರಿಡುತ್ತ ಅನುಷಾ ಮಡಿಲಿಗೇರಿ ತನ್ನ ಪ್ರೀತಿಯ ಆಂಟಿಯನ್ನು ತಬ್ಬಿಕೊಂಡಳು. ಪ್ರತಾಪ್ ಸಹ ಕುಳಿತಲ್ಲೇ ಕಂಬನಿ ಸುರಿಸುವುದನ್ನು ಕಂಡು......
ಹರೀಶ......ನೀತು ಇವರಿಬ್ಬರು ತುಂಬ ದುಃಖಪಡ್ತಿದ್ದಾರೆ ಅದೇನು ವಿಷಯವೋ ನನಗೆ ಗೊತ್ತಿಲ್ಲ ನೀನೂ ಹೇಳ್ಬೇಡ ಬಿಟ್ಬಿಡು ಇಬ್ಬರಿಗೆ ಬೇಸರವಾಗುತ್ತೆ.
ನೀತು.......ಹಾಗೇ ಬಿಡಲಾಗುವುದಿಲ್ಲ ಕಣ್ರಿ ಮುಂದೊಂದು ದಿನ ಇಬ್ಬರೂ ಅದನ್ನೆದುರಿಸಲೇಬೇಕು ನಾನೂ ಸಮಯಕ್ಕಾಗಿ ಕಾಯ್ತಿದ್ದೆ ಅದೀಗ ಬಂದಿದೆ. ಅಮ್ಮ ನೀವವಳನ್ನು ಬಿಡಿ ಅನು ಇಲ್ನೋಡು.
ರೇವತಿ......ನೋಡಮ್ಮ ನನ್ನ ಮಗಳೆಷ್ಟು ದುಃಖ ಪಡ್ತಿದ್ದಾಳೆ ಅನು ಅಳ್ಬೇಡ ಕಣಮ್ಮ ಯಾಕೆ ಏನಾಯ್ತಮ್ಮ ?
ನೀತು.......ಅಮ್ಮ ಸ್ವಲ್ಪ ಹೊತ್ತು ಸಮಾಧಾನವಾಗಿರಿ ಆಮೇಲೆಲ್ಲಾ ವಿಷಯ ತಿಳಿಯುತ್ತೆ. ಅನು ಇಲ್ನೋಡು ನೀನು ಹಳೆಯದನ್ನೆಲ್ಲಾ ಯೋಚಿಸ್ತಾ ಒಳಗೊಳಗೇ ಕೊರಗುವುದು ಬೇಕಾಗಿಲ್ಲ ನಿನಗೆ ನಿನ್ನ ಅಕ್ಕನ ಮೇಲೆ ನಂಬಿಕೆಯಿದೆ ತಾನೇ ?
ಅಕ್ಕನ ಕೈಗಳನ್ನು ಭದ್ರವಾಗಿಡಿದಿದ್ದ ಅನುಷ ಕಣ್ಣೀರು ಸುರಿಸುತ್ತಲೇ ಹೂಂ ಎಂದು ತಲೆಯಾಡಿಸಿದಳು.
ನೀತು......ನೀನು ಧೈರ್ಯವಾಗಿರಿ ಮಿಕ್ಕಿದ್ದೆಲ್ಲ ನನಗೆ ಬಿಡು ಅಮ್ಮ ಮಧ್ಯದಲ್ಲೇನೂ ಹೇಳದೆ ಪೂರ್ತಿ ಕೇಳ್ಬಿಡಿ. ಇದು ಅನುಷಾಳ ಡಿಗ್ರಿ ಕಡೇ ವರ್ಷದ ಪರೀಕ್ಷೆಯು ಮುಗಿದ ದಿನದ ವಿಷಯ ಆವಾಗಿನ್ನೂ ಇವಳ ಹೆತ್ತ ತಂದೆ ತಾಯಿ ಬದುಕಿದ್ರು. ಅಂದು ಪರೀಕ್ಷೆಗಳು ಮುಗಿದ ಸಂತೋಷದಲ್ಲಿ ಅನು ತನ್ನ ಗೆಳತಿಯರ ಜೊತೆ ಸಿನಿಮಾ ನೋಡಲು ಹೋಗಿದ್ದು ಅಲ್ಲಿಂದ ಆಟೋದಲ್ಲಿ ಗೆಳತಿಯರು ಮನೆಗೆ ಹಿಂದಿರುಗಿ ಬರುವಾಗ ಅಪಘಾತವಾಗಿ ಇವರಿದ್ದ ಆಟೋ ಮಗುಚಿಕೊಂಡಿತು.
ಯಾರಿಗೂ ದೊಡ್ಡ ಮಟ್ಟದ ಗಾಯಗಳೇನೂ ಆಗದಿದ್ದರೂ ಅನು ಆಟೋ ಕೆಳಗೆ ಸಿಕ್ಕಾಕಿಕೊಂಡಿದ್ದು ಕಬ್ಬಿಣದ ರಾಡ್ ಇವಳ ಹೊಟ್ಟೆ ಭಾಗಕ್ಕೆ ಬಲವಾಗಿ ಒತ್ತುತ್ತಿತ್ತು. ಎಲ್ಲರೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ ಬಳಿಕ ಎರಡ್ಮೂರು ದಿನಗಳಾದರೂ ಅನುಷಾಳಿಗೆ ಹೊಟ್ಟೆಯ ಭಾಗದಲ್ಲಿನ ನೋವು ಕಡಿಮೆಯಾಗಲಿಲ್ಲ. ಪುನಃ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಂಡಾಗವರು ಸ್ಕಾನಿಂಗ್ ಮಾಡಿದಾಗಲೇ ತಿಳಿದಿದ್ದು ಅನುಷಾ ಹೊಟ್ಟೆ ಭಾಗದಲ್ಲಿ ಒಳಗೇ ಇಂಟರ್ನಲ್ ಬ್ಲೀಡಿಂಗ್ ಆಗ್ತಿದೆ ಅಂತ.
ಎಲ್ಲಾ ರೀತಿಯ ಚೆಕಪ್ಪನ್ನೂ ಮಾಡಿದ ನಂತರ ಒಂದು ಸಣ್ಣ ಸರ್ಜರಿ ಮಾಡಬೇಕೆಂದು ವೈದ್ಯರು ಸೂಚಿಸಿದರು. ಅನುಷಾ ಮೇಲೆ ಆಟೋ ಬಿದ್ದ ರಭಸಕ್ಕೆ ಇವಳ ಗರ್ಭಕೋಶದ ಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಕಾರಣಕ್ಕೇ ಇಂಟರ್ನಲ್ ಬ್ಲೀಡಿಂಗ್ ಆಗ್ತಿತ್ತು. ಸಣ್ಣ ಸರ್ಜರಿ ನಂತರ ಅನು ಆರೋಗ್ಯವಂತೆ ಆಗಿದ್ದರೂ ಇವಳನ್ನು ಗುಣಪಡಿಸಲಿಕ್ಕಾಗಿ ವೈದ್ಯರು ಇವಳ ಗರ್ಭ ಕೋಶವನ್ನೇ ತೆಗೆಯಬೇಕಾಗಿ ಬಂದಿತ್ತು. ಅನುಷ ಜೀವನದಲ್ಲಿ ಎಂದಿಗೂ ಗರ್ಭಧರಿಸಲು ಸಾಧ್ಯವಿಲ್ಲದಂತಾಗಿ ಹೋಗಿತ್ತು.
ಅಲ್ಲಿವರೆಗೂ ಮೌನವಾಗಿದ್ದ ಅನುಷ ಅಮ್ಮನನ್ನು ತಬ್ಬಿಕೊಂಡು ಅಳಲಾರಂಭಿಸಿದರೆ ಆಂಟಿಯ ಮುಂದೆ ಕುಳಿತಿದ್ದ ನಿಶಾ ತಾನೂ ಕಣ್ಣೀರು ಸುರಿಸುತ್ಫ ಆಳುತ್ತಿದ್ದಳು. ಮನೆಯ ಹೆಂಗಸರು ಗಂಡಸರ ಕಣ್ಣಲ್ಲೂ ಕಣ್ಣೀರು ಜಿನುಗುತ್ತಿದ್ದು ಅನುಷಾಳಿಗ್ಯಾವ ರೀತಿಯಲ್ಲಿ ಸಮಾಧಾನ ಮಾಡಬೇಕೆಂಬುದೇ ಯಾರಿಗೂ ತಿಳಿಯದಂತಾಗಿತ್ತು.
**




Excellent.. story andre ege erabeku.. kutuhala jasti agthane hoguthe
ReplyDelete