ಬಷೀರ್......ಮಾತೆ ವಿಶಾಲ್—ಸುಜೋಯ್ ಇಬ್ಬರೂ ಕುಟುಂಬ ಸಮೇತರಾಗಿಲ್ಲಿಗೆ ಬಂದಿದ್ದಾರೆ ಅವರ ಜೊತೆ ಕೆಲವು ಸೆಕ್ಯೂರಿಟಿಯ ಜನರೂ ಬಂದಿದ್ರು. ಆದರೀ ದೇಶದ ರಾಜ ಮನೆತನದ ಅಧಿಕಾರಿಗಳ ಪರಿಚಯವನ್ನು ವರ್ಧನ್ ಸರ್ ಮೂಲಕ ನನಗಾಗಿದ್ದು ಅವರಿಂದ ಸಹಾಯ ಪಡೆದುಕೊಂಡು ಸೆಕ್ಯೂರಿಟಿಯವರನ್ನು ದೇಶದೊಳಗೆ ಪ್ರವೇಶ ಮಾಡದಂತೆ ಏರ್ಪೋಟಿನಲ್ಲೇ ತಡೆಹಿಡಿಯಲಾಗಿದೆ ಎಲ್ಲ ಇನ್ನೂ ಏರ್ಪೋಟಿನಲ್ಲಿಯೇ ಇದ್ದಾರೆ. ನಾನಿಲ್ಲಿಗೆ ಬಂದ ಮಾರನೇ ದಿನ ನನ್ನನ್ನು xxxx ಮತ್ತು xxxx ದೇಶದಲ್ಲಿ ಸಂಸ್ಥಾನದ ಕಂಪನಿಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಸಂಪರ್ಕಿಸಿದ್ದರು.
ರಾಣಾ.......ಅವರು ನಿನ್ನನ್ಯಾಕೆ ಸಂಪರ್ಕಿಸಿದ್ದು ?
ಬಷೀರ್ ಖಾನ್........ಇಲ್ಲಿನ ಮೀಟಿಂಗಿಗೆ ಯುವರಾಣಿಯರೂ ಬರುತ್ತಿದ್ದಾರಾ ? ಅವರೊಂದಿಗೆ ಎಷ್ಟು ಜನ ಸೆಕ್ಯೂರಿಟಿಯವರು ಬರುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು. ಇದರ ಜೊತೆ ಇಲ್ಲಿನ ಒಂದು ಮಾಫಿಯಾ ತಂಡವರನ್ನೂ ಅವರಿಬ್ಬರು ಸಂಪರ್ಕಿಸಿ ಮಾತೆ ಹಾಗು ಯುವರಾಣಿಯರನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದ ಬಗ್ಗೆಯೂ ನಮಗೆ ತಿಳಿಯಿತು.
ರಾಣಾ ಕೋಪಗೊಳ್ಳುತ್ತ.........ಏನಂದೆ ? ನಡಿ ಈಗವರೆಲ್ಲಿದ್ದಾರೆ ?
ಬಷೀರ್ ಖಾನ್......ರಾಣಾ ಆವೇಶ ಪಡ್ಬೇಡ ಈಗ ಅವರಲ್ಯಾರೂ ಜೀವಂತವಾಗಿಲ್ಲ ಮೊನ್ನೆ ರಾತ್ರಿಯೇ ನಾನು ಸುಮೇರ್ ಇಲ್ಲಿರುವ ರಾಜಮನೆತನದ ಸೆಕ್ಯೂರಿಟಿಯವರ ಜೊತೆಗೂಡಿ ಮಾಫಿಯಾ ತಂಡದವರ ಜೊತೆ ಎರಡೂ ದೇಶಗಳಲ್ಲಿ ನಮ್ಮ ಸಂಸ್ಥಾನದ ಕಂಪನಿ ನೋಡಿಕೊಳ್ಳುತ್ತಿದ್ದವರ ಕುಟುಂಬದ ಸರ್ವನಾಶ ಮಾಡಿದ್ದೀವಿ. ಈಗ ಇಲ್ಯಾವುದೇ ರೀತಿಯ ಅಪಾಯವೂ ಇಲ್ಲ.
ಸುಮೇರ್.......ಮಾತೆ ಮುಖ್ಯವಾದ ವಿಷಯವೆಂದರೆ ಸುಜೋಯ್ ಮತ್ತು ವಿಶಾಲ್ ಕುಟುಂಬ ಇಲ್ಲಿಗೆ ಬಂದಿರುವುದು ಒಂದು ಪ್ರೈವೇಟ್ ವಿಮಾನದಲ್ಲಿ ಜೊತೆಗವರು ನಾಳೆ ಸಂಜೆಯೇ ಹಿಂದಿರುಗಿ ತಮ್ಮ ದೇಶಕ್ಕೆ ಹೊರಡುವವರಿದ್ದಾರೆ.
ಬಷೀರ್ ಖಾನ್.......ಅವರು ಪ್ರೈವೇಟ್ ವಿಮಾನದಲ್ಲಿ ಸೆಕ್ಯೂರಿಟಿ ಜೊತೆ ಬಂದಿದ್ದಾರೆ ನಾವಿಲ್ಲಿಂದ ಅವರನ್ನು ಯಾವುದೇ ಸಣ್ಣದಾದ ಸುಳಿವೂ ಸಿಗದ ರೀತಿ ನಮ್ಮ ದೇಶಕ್ಕೆ ಕರೆದೊಯ್ಯುವುದು ಹೇಗೆಂದು ನನಗೆ ಹೊಳೆಯುತ್ತಿಲ್ಲ.
ಸುಭಾಷ್........ಅವರು ಬಂದಿರುವ ಪ್ರೈವೇಟ್ ವಿಮಾನ ಯಾವ ಕಂಪನಿಗೆ ಸೇರಿದ್ದು ?
ಬಷೀರ್.......ಅದ್ಯಾವ ಕಂಪನಿಗೂ ಸೇರಿದ ವಿಮಾನವಲ್ಲ ಫ್ರಾನ್ಸ್ ದೇಶದ ಮಾರ್ಕ್ ಎಂಬಾತನಿಗೆ ಸೇರಿದ ವಯಕ್ತಿಕ ವಿಮಾನವದು.
ಸುಭಾಷ್.......ಏರ್ಪೋಟಿನಲ್ಲಿರುವ ಕಸ್ಟಮ್ಸ್ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡಿದ್ದೀರ ಬಷೀರ್ ?
ಬಷೀರ್........ಅವರು ನನಗೆ ಪರಿಚಯವಿಲ್ಲ ಆದರೆ ವರ್ಧನ್ ಸರ್ ಕೃಪೆಯಿಂದ ಇಲ್ಲಿನ ರಾಜಮನೆತನದ ಅಧಿಕಾರಿಗಳು ನಮಗೇನಾದ್ರು ಸಹಾಯ ಮಾಡಿಕೊಡ್ತಾರೆ.
ಸುಭಾಷ್......ಅಷ್ಟಾದ್ರೆ ಸಾಕು ಕೆಲಸ ಸುಲಭವಾಗುತ್ತೆ ನಡೀರಿ ಈಗ ನಾವ್ಯಾವ ಪ್ಲಾನಿನಲ್ಲಿ ಕೆಲಸ ಮಾಡ್ಬೇಕೆಂದು ನಿಮಗೆ ದಾರಿಯಲ್ಲಿ ಹೇಳ್ತೀನಿ. ಚಿಕ್ಕಮ್ಮ ನೀವೇನೂ ಟೆನ್ಷನ್ ತಗೋಬೇಡಿ ನಾವೆಲ್ಲವನ್ನು ನೋಡಿಕೊಳ್ತೀವಿ ವಿಶಾಲ್—ಸುಜೋಯ್ ಕುಟುಂಬದವರನ್ನೆಲ್ಲಾ ಇಲ್ಲಿಂದ ನಮ್ಮ ದೇಶಕ್ಕೆ ಹೊತ್ತೋಯ್ಯುವುದಂತೂ ಖಚಿತ.
**
ನೀತು ಫ್ರೆಶಾಗಿ ರಜನಿ ಹಾಗು ರಾಣಾ ಜೊತೆ ರಿಸಾರ್ಟಿನ ಆಫೀಸಿಗೆ ತೆರಳಿ ಪ್ರಪಂಚದ ನಾನಾ ದೇಶಗಳಲ್ಲಿರುವ ಸಂಸ್ಥಾನದ ಹಲವಾರು ವ್ಯವಹಾಲಗಳನ್ನು ನೋಡಿಕೊಳ್ಳುತ್ತಿದ್ದ ಪ್ರಮುಖರನ್ನು ಪರಿವಾರದ ಜೊತೆಗೇ ಬೇಟಿಯಾಗಿ ಮಾತುಕತೆ ನಡೆಸಿದಳು. 34 ದೇಶಗಳಲ್ಲಿದ್ದ ಹಲವಾರು ಕಂಪನಿ....ರೆಸಾರ್ಟ್ ಮತ್ತು ಐಷರಾಮಿ ಹೋಟೆಲ್ಲಿನ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡಳು.
ಸುಮಾರು ಹತ್ತು ದೇಶಗಳಲ್ಲಿರುವ ವ್ಯವಹಾರಗಳು ಅತ್ಯಂತ ಲಾಭದಾಯಕವೇ ಆಗಿದ್ದು ಅವುಗಳನ್ನು ಬಿಟ್ಟು ಉಳಿದವುಗಳನ್ನು ಮಾರಾಟ ಅಥವ ಪರಭಾರೆ ನೀಡುವುದಾಗಿ ನೀತು ಮಾತುಕತೆಯ ಸಂಧರ್ಭದಲ್ಲೇ ತೀರ್ಮಾನಿಸಿ ಬಿಟ್ಟಿದ್ದಳು. ರಾತ್ರಿ ಊಟದ ಸಮಯವಾದಾಗ ವಿಶಾಲ್ ಮತ್ತು ಸುಜೋಯ್ ಇಬ್ಬರ ಕುಟುಂಬದವರನ್ನೂ ತಮ್ಮ ಜೊತೆಯಲ್ಲೇ ಡಿನ್ನರಿಗೆ ಆಹ್ವಾನ ಕಳಿಸಿದಳು.
ವಿಶಾಲ್......ನಮ್ಮಿಬ್ಬರ ಕುಟುಂಬದವರನ್ನು ಮಾತ್ರ ರಾತ್ರಿ ಡಿನ್ನರಿಗೆ ಆಹ್ವಾನಿಸಿದ್ದಾರಲ್ಲ ನಮ್ಮ ಮೇಲೇನಾದ್ರೂ ಅನುಮಾನ ಬಂದಿದ್ಯಾ ?
ಸುಜೋಯ್......ನಾವೆಲ್ಲಿಯೂ ಪರದೆಯ ಮುಂದೆ ಬಂದೇ ಇಲ್ವಲ್ಲ ಹೀಗಿರುವಾಗ ಅನುಮಾನ ಹೇಗೆ ಬರಲಿಕ್ಕೆ ಸಾಧ್ಯವಿದೆ.
ವಿಶಾಲ್......ಇಲ್ಲ ಕಣೋ ನನಗೇನೋ ಸರಿ ಕಾಣ್ತಿಲ್ಲ ಇದ್ದಕ್ಕಿದ್ದಂತೆ ರಾಜಸ್ಥಾನದ ಸಿಎಂ....ಮಂತ್ರಿಗಳು....ಶಾಸಕರ ಜೊತೆ ಹಲವಾರು ಭಿಝಿನೆಸ್ ಪ್ರಮುಖರೂ ಕಾಣೆಯಾಗಿದ್ದಾರೆ. ಅವರು ಸಾಲದಂತೆ ಹಿಮಾಚಲ ರಾಜಮನೆತನದ ಚಂಚಲಾದೇವಿಯವರ ಕುಟುಂಬವೂ ಸಹ ಅರಮನೆಯಿಂದೆಲ್ಲಾಗೆ ಹೋದರೆಂದು ಗೊತ್ತಾಗಲಿಲ್ಲ. ಇವರ ಕಥೆ ಬಿಡು ಎಲ್ಲರಿಗಿಂತಲೂ ನಮ್ಮ ಪಾಲಿಗೆ ಟ್ರಂಪ್ ಕಾರ್ಡಿನಂತಿದ್ದ ಯಶೋಮತಿ ಅವಳೂ ಕೂಡ ಸಂಪರ್ಕಕ್ಕೆ ಸಿಗ್ತಿಲ್ಲ ಅಲ್ಲಿ ಬೇರೇನೊ ನಡೀತಿದೆ ಆದರೇನು ಅಂತ ನಮಗೆ ತಿಳಿಯುತ್ತಿಲ್ಲ.
ಸುಜೋಯ್.......ಇದರ ಬಗ್ಗೆ ಮೊದಲೇ ಅನುಮಾನವಿದೆ ಅಂತ ನೀನು ಹೇಳಿದ್ದಿದ್ರೆ ನಾವಿಲ್ಲಿಗೆ ಬರದೇ ಇರಬಹುದಿತ್ತಲ್ಲ.
ವಿಶಾಲ್........ಹಾಗೆ ಮಾಡಲಾಗುವುದಿಲ್ಲ ಕಣೋ ಕಂಪನಿಯ ಮುಖ್ಯಸ್ಥರಾಗಿ ಅದ್ಯಾರೋ ನೀತು ಎನ್ನುವವಳ ನೇಮಕವಾಗಿದೆ ಅವರ ಕಛೇರಿಯಿಂದಲೇ ನಮಗೆ ನೇರವಾಗಿ ಆದೇಶ ಬಂದಿದೆ. ನಾವಿಲ್ಲಿಗೆ ಬರದೇ ಅಲ್ಲೇ ಉಳಿದುಕೊಂಡಿದ್ದರೆ ನಮ್ಮಿಬ್ಬರನ್ನವರು ಕಂಪನಿಯಿಂದ ಒದ್ದು ಹೊರ ಹಾಕಿರುತ್ತಿದ್ರು ಆಗೇನು ಮಾಡೋದು.
ಸುಜೋಯ್......ಈಗ ಬಂದಿದ್ದಾಗಿದೆಯಲ್ಲ ನಡಿ ಡಿನ್ನರಿಗೆ ಹೋಗಿ ನೋಡೋಣ ಅಲ್ಲಿಯೇ ಗೊತ್ತಾಗುತ್ತೆ.
ಇಬ್ಬರೂ ತಮ್ತಮ್ಮ ಕುಟುಂಬದೊಂದಿಗೆ ರೆಸಾರ್ಟಿನ ವಿಶೇಷವಾದ ಡೈನಿಂಗ್ ಏರಿಯಾಗೆ ಬಂದಾಗಲ್ಲಿ ರಜನಿ ಜೊತೆ ನೀತು ಇಬ್ಬರೇ ಸೋಫಾದಲ್ಲಿ ಕುಳಿತು ಮಾತನಾಡುತ್ತಿದ್ದರೆ ರಾವ್ ಮತ್ತು ಕೆಲವು ಸಂಸ್ಥಾನದ ಅಧಿಕಾರಿಗಳು ದೂರದಲ್ಲಿದ್ದರು. ರಾವ್ ಹತ್ತಿರ ಬಂದು ಇಬ್ಬರೂ ಗೌರವ ಸೂಚಿಸಿದಾಗ.......
ರಾವ್.......ನೀವಿಬ್ರೂ ಇಲ್ಲೇ ಇರಿ ಮೇಡಂಗೆ ತಿಳಿಸಿ ಬರ್ತೀನಿ.
ನೀತು ಬಳಿ ಬಂದ ರಾವ್........ಮೇಡಂ ವಿಶಾಲ್—ಸುಜೋಯ್ ಫ್ಯಾಮಿಲಿ ಬಂದಿದ್ದಾರೆ ಅವರನ್ನಿಲ್ಲಿಗೇ ಕರೆಸಲಾ ?
ನೀತು......ಅವರನ್ನು ಡೈನಿಂಗ್ ಟೇಬಲ್ಲಿನಲ್ಲಿ ಕೂರುವಂತೆ ಹೇಳ್ಬಿಡಿ ರಾವ್ ಸರ್ ಜೊತೆಗೆ ನೀವೂ ನಿಮ್ಮ ಅಧಿಕಾರಿಗಳು ಕುಳಿತಿರಿ ನಾವು ಅಲ್ಲಿಗೇ ಬರ್ತೀವಿ.
ರಾವ್ ತೆರಳಿದಾಗ ರಜನಿ.......ಲೇ ಇಬ್ಬರ ಕುಟುಂಬದಲ್ಲಿ ಒಟ್ಟು 10 ಜನರಷ್ಟೇ ಇರೋದು ಎಲ್ಲರೂ ದೊಡ್ಡವರೇ ಆದರೆ ಆ ಮಹಿಳೆಯ ಜೊತೆಯಲ್ಲಿರುವ ಪುಟ್ಟ ಮಗು.........?
ನೀತು........ಆ ಮಗು...........???????
ರಜನಿ........ಲೇ ನೀನಿಷ್ಟು ದೊಡ್ಡ ವಿಷಯವನ್ನು ನನ್ನಿಂದಲೇ ಮರೆ ಮಾಚಿದ್ದೆಯಲ್ಲ ಇದು ಸರಿಯಾ ?
ನೀತು.......ಲೇ ಈ ವಿಷಯ ನನಗೆ xxxx ಮತ್ತು xxxx ಮೂವರಿಗೆ ಬಿಟ್ಟು ಇನ್ಯಾರಿಗೂ ಗೊತ್ತಿಲ್ಲ ನನ್ನ ಗಂಡನ ಬಳಿಯೂ ನಾನೀ ಬಗ್ಗೆ ಏನನ್ನೂ ಹೇಳಿಲ್ಲ ಈಗ ನಿನಗೇ ಹೇಳ್ತಿರೋದು.
ರಜನಿ.......ಲೇ ದೇವರು ಈ ರೀತಿ ಅನ್ಯಾಯ ಮಾಡಬಾರದಿತ್ತು ಕಣೆ ಪಾಪ ಯಾರಿಗೂ ದ್ರೋಹ ಮಾಡದ ಮುಗ್ದೆ ಅವಳು ಅವಳಿಂತಹ ಶಿಕ್ಷೆ ಕೊಡೋದಾ.
ನೀತು.......ಎಲ್ಲವೂ ವಿಧಿ ಲಿಖಿತ ಕಣೆ ನಾವದನ್ನು ಬದಲಾಯಿಸಲು ಸಾಧ್ಯವಿಲ್ಲ ಇಲ್ಲೆಲ್ಲವೂ ಸರಿ ಹೋದರೆ ಈ ಮಗು.......???????
ರಜನಿ.......ನಿನ್ನಾಲೋಚನೆ ಸರಿಯಾಗಿದೆ ಕಣೆ ಈ ಮಗು....?????
ನೀತು.....ನಡಿ ಹೋಗೋಣ ನನ್ನ ಮಕ್ಕಳ ಕಡೆಯ ವಿರೋಧಿಗಳು ನಮಗಾಗಿ ಏದುರು ನೋಡ್ತಿದ್ದಾರೆ.
ಇಬ್ಬರೂ ಡೈನಿಂಗ್ ಟೇಬಲ್ಲಿನ ಬಳಿ ಬಂದಾಗ ಅಲ್ಲಿ ಕುಳಿತಿದ್ದವರೆಲ್ಲ ಏದ್ದು ನಿಂತು ಗೌರವ ಸಲ್ಲಿಸಿದರೆ ನೀತು ಅವರನ್ನು ಕೂರುವಂತೆ ಸನ್ನೆ ಮಾಡಿದಳು.
ರಾವ್........ಮೇಡಂ ಇವರು ವಿಶಾಲ್ ಅಂತ ಸಂಸ್ಥಾನಕ್ಕೆ ಸೇರಿದ ಫ್ರಾನ್ಸ್ ದೇಶದಲ್ಲಿನ ಕಂಪನಿಗಳ ಜವಾಬ್ದಾರಿ ನೋಡಿಕೊಳ್ತಿದ್ದಾರೆ. ಇವರು ಸುಜೋಯ್ ಅಂತ ಜರ್ಮನಿ ದೇಶದಲ್ಲಿರುವ ಕಂಪನಿಗಳ ಉಸ್ತುವಾರಿಗಳೆಲ್ಲವೂ ಇವರದ್ದೇ.
ನೀತು........ನೈಸ್ ಟು ಮೀಟ್ ಯು ಮಿಸ್ಟರ್ ವಿಶಾಲ್ ಮಿಸ್ಟರ್ ಸುಜೋಯ್ ನಿಮ್ಮ ಫ್ಯಾಮಿಲಿಯ ಪರಿಚಯ ಮಾಡಿಸಿ.
ವಿಶಾಲ್........ಗುಡ್ ಇವನಿಂಗ್ ಮೇಡಂ ಇವಳು ನನ್ನ ಹೆಂಡತಿ ಈಕೆ ನನ್ನೊಬ್ಬಳೇ ಮಗಳು ಇವರು ನನ್ನ ಅಳಿಯ ಇವಳು ನನ್ನ ಮೊಮ್ಮಗಳು ನಾವೈದೇ ಜನರ ಫ್ಯಾಮಿಲಿ ಮೇಡಂ.
ಸುಜೋಯ್........ಮೇಡಂ ಇವಳು ನನ್ನ ಹೆಂಡತಿ ನನಗೆ ಮೂರು ಜನ ಗಂಡು ಮಕ್ಕಳು ಹಿರಿಯವನಿಗೆ ಮದುವೆಯಾಗಿದೆ ಇವಳೇ ನನ್ನ ಹಿರಿ ಸೊಸೆ.
ನೀತು......ಮೂವರೂ ಗಂಡು ಮಕ್ಕಳಾ ವೆರಿ ನೈಸ್ ಸುಜೋಯ್ ಇನ್ನಿಬ್ಬರಿಗಿನ್ನೂ ಮದುವೆ ಯಾಕೆ ಮಾಡಿಲ್ಲ ?
ಸುಜೋಯ್........ವರ್ಷದ ಹಿಂದಷ್ಟೇ ಹಿರಿ ಮಗನ ಮದುವೆಯು ನಡೆಯಿತು ಚಿಕ್ಕವರಿಬ್ಬರೂ ಈಗಷ್ಟೇ ನನ್ನ ಜೊತೆ ನಮ್ಮ ಕಂಪನಿಯ ಕೆಲಸಗಳನ್ನು ನೋಡಿಕೊಳ್ತಿದ್ದಾರೆ.
ನೀತು......ಜಸ್ಟ್ ಎ ಸ್ಮಾಲ್ ಕರೆಕ್ಷನ್ ಮಿಸ್ಟರ್ ಸುಜೋಯ್ ನಿಮ್ಮ ಕಂಪನಿಯಲ್ಲ ಸೂರ್ಯವಂಶಿ ಸಂಸ್ಥಾನದ ಕಂಪನಿ ಅಂತೇಳಿ.
ಸುಜೋಯ್.......ಸಾರಿ ಮೇಡಂ.
ಡಿನ್ನರ್ ಮುಗಿದ ನಂತರ ಒಂದು ಘಂಟೆ ಇಬ್ಬರ ಬಳಿ ಫ್ರಾನ್ಸ್ ಹಾಗು ಜರ್ಮನಿ ದೇಶದಲ್ಲಿನ ಕಂಪನಿಗಳ ಪ್ರಗತಿ ಮತ್ತು ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ ನೀತು ಆ ಮುದ್ದಾದ ಮಗುವನ್ನು ಸಹ ಎತ್ತಿ ಮುದ್ದಾಡಿದಳು. ನೀತುವಿನ ತೋಳಿಗೆ ಸೇರಿಕೊಂಡ ಮಗು ತನ್ನ ಅಮ್ಮನೇ ಕರೆಯುತ್ತಿದ್ದರೂ ಬರಲ್ಲ ಎನ್ನುತ್ತ ನೀತುಳನ್ನೇ ಬಿಗಿಯಾಗಿ ತಬ್ಬಿಕೊಳ್ಳುತ್ತಿತ್ತು. ಏಳು ತಿಂಗಳಿನ ಮಗುವಿಗೆ ಸಮಾಧಾನ ಮಾಡಿ ಮುದ್ದಾಡಿದ ನೀತು ತಾಯಿಗೆ ಮಗುವನ್ನು ಕೊಟ್ಟಳು.
ವಿಶಾಲ್........ಮೇಡಂ ಒಂದು ರಿಕ್ವೆಸ್ಟ್ ಇತ್ತು.
ನೀತು.....ಹೇಳಿ.
ವಿಶಾಲ್.......ನಾಳೆಯೇ ನಾವಿಬ್ಬರೂ ಹಿಂದಿರುಗಿ ಹೊರಡಬೇಕಿತ್ತು ಅದಕ್ಕೆ ನೀವು ಪರ್ಮಿಷನ್ ನೀಡಿದರೆ.......
ನೀತು.......ನಾಳೆ ನಾಳಿದ್ದೆರಡು ದಿನ ಸಂಸ್ಥಾನದ ಮೀಟಿಂಗ್ ಅಂತ ನಿಮ್ಮಿಬ್ಬರಿಗೂ ಮೊದಲೇ ತಿಳಿಸಲಾಗಿತ್ತಲ್ಲವಾ ಆದರೂ ನಾಳೆಯೇ ಯಾಕೆ ಹಿಂದಿರುಗಬೇಕು ಅಂತದ್ದೇನು ಕಾರಣ ?
ವಿಶಾಲ್.........ನಾಳಿದ್ದು ನಮ್ಮ ಬಾಲ್ಯ ಸ್ನೇಹಿತನ ಮಗಳ ಮದುವೆ ಕಾರ್ಯಕ್ರಮದಲ್ಲೂ ಭಾಗಿಯಾಗಬೇಕಿದೆ ಪ್ಲೀಸ್ ಮೇಡಂ.
ನೀತು........ಒಕೆ ಮದುವೆ ನಾಳಿದ್ದು ತಾನೇ ಇರೋದು ನಾಳೆಯ ಮೀಟಿಂಗ್ ಮುಗಿಸಿಕೊಂಡು ರಾತ್ರಿ ಹೋಗುವಿರಂತೆ.
ಸುಜೋಯ್........ನಾಳೆ ಮುಂಜಾನೆ ಹೋಗುವುದಕ್ಕೆ ನೀವು.......
ನೀತು........ನೋ ಛಾನ್ಸ್ ಮಿಸ್ಟರ್ ಸುಜೋಯ್ ನೀವಿಬ್ಬರೂ ನನ್ನ ಅಣ್ಣನಾದ ಮಹರಾಜ ರಾಣಪ್ರತಾಪರಿಗೆ ಅತ್ಯಾಪ್ತ ಗೆಳೆಯರೆಂದು ನನಗೆ ಗೊತ್ತಿದೆ ಆದರೀಗ ಸಂಸ್ಥಾನದ ಆಡಳಿತಾಧಿಕಾರ ಇರುವುದು ನನ್ನ ಹತ್ತಿರ ನಾನು ಹೇಳಿದ್ದೇ ನಡೆಯಬೇಕು. ನನ್ನ ಅಣ್ಣನಿಗೆ ನೀವು ಆಪ್ತರೆಂದಿರುವಾಗ ಇವರ ಪರಿಚಯವೂ ನಿಮಗೆ ಇರಬೇಕಲ್ವಾ ?
ಇಬ್ಬರೂ ಹಿಂದಿರುಗಿ ನೋಡಿದಾಗಲ್ಲಿ ರಾಣಾ ಕೈ ಕಟ್ಟಿಕೊಂಡು ಅತೀ ಗಾಂಭೀರ್ಯದಿಂದ ನಿಂತಿದ್ದು ಅವಳನ್ನು ನೋಡುತ್ತಲೇ ಇಬ್ಬರ ಮುಖಗಳೂ ಬಿಳಿಚಿಕೊಂಡವು.
ನೀತು.......ಯಾಕಾಗೇ ನಿಂತ್ಬಿಟ್ರಿ ? ಗುರುತು ಸಿಗಲಿಲ್ವಾ ? ಷಂಷೇರ್ ಸಿಂಗ್ ರಾಣಾ. ನಿಮ್ಮಬ್ಬರಿಗೂ ಯಜಮಾನಿಯಾದ ನನ್ನ ಹಿರಿಯ ಮಗಳು ನಿಧಿಗೆ ತಾಯಿಯ ಬಗ್ಗೆ ಸ್ವಲ್ಪ ಪ್ರೀತಿ ಜಾಸ್ತಿ ಅದಕ್ಕಾಗಿ ನನ್ನ ಸುರಕ್ಷತೆಗೆಂದು ರಾಣಾ ಜೊತೆಯಲ್ಲಿ ಬಂದಿದ್ದಾನೆ ರಾಜಕುಮಾರಿಯ ಆದೇಶದ ಮೇರೆಗೆ. ಈಗ ನೀವು ಹೊರಡಿ ನಾಳೆ ಮೀಟಿಂಗಿನಲ್ಲೇ ಬೇಟಿಯಾಗೋಣ.
ವಿಶಾಲ್—ಸುಜೋಯ್ ತಮ್ಮ ಪರಿವಾರಗಳೊಟ್ಟಿಗೆ ಅಲ್ಲಿಂದ ತಮ್ಮ ಕಾಟೇಜಿನತ್ತ ತೆರಳಿದರೆ ನೀತು ಮುಖದಲ್ಲಿ ಕ್ರೂರವಾದ ಮುಗುಳ್ನಗೆ ಮೂಡಿತು. ಇಬ್ಬರ ಫ್ಯಾಮಿಲಿ ಕಾಟೇಜಿಗೆ ಸೇರಿಕೊಂಡಾಗ.........
ಸುಜೋಯ್.......ನಿನ್ನ ಅನುಮಾನ ನಿಜವೇ ಕಣೋ ರಾಣಾ ಎಷ್ಟೋ ವರ್ಷಗಳಿಂದ ಅರಮನೆಯಿಂದ ದೂರವುಳಿದಿದ್ದ ಆದರೀಗ ಹಿಂದಿರುಗಿ ಬಂದಿದ್ದಾನೆ. ನಾವು ನಾಳೆ ಬೆಳಿಗ್ಗೆಯೇ ಹೊರಡೋಣ ಮುಂದೇನಾಗುತ್ತೋ ಆಮೇಲೆ ನೋಡಿಕೊಳ್ಳೋದು.
ವಿಶಾಲ್........ಈಗದೂ ಸಾಧ್ಯವಿಲ್ಲ ರಾಣಾ ಇಲ್ಲಿದ್ದಾನೆಂದರೆ ಇಡೀ ರೆಸಾರ್ಟ್ ಪೂರ್ತಿ ಸೀಲ್ ಮಾಡಿಸಿರ್ತಾನೆ ಅವನಿಗೆ ತಿಳಿಯದಂತೆ ಒಳಗ್ಯಾರೂ ಬರಲಾಗದು ಹೊರಗೂ ಹೋಗಲಾಗದು. ಈಗೇನೂ ಮಾಡಲಿಕ್ಕಾಗಲ್ಲ ನಾಳೆ ಮೀಟಿಂಗ್ ಅಟೆಂಡ್ ಮಾಡೋಣ.
* *
ಮಾರನೇ ದಿನ ಮೀಟಿಂಗ್ ಪ್ರಾರಂಭಿಸಿದ ನೀತು ಮೊದಲಿಗೆ ತಾನೇ ಎಲ್ಲರನ್ನು ಸ್ವಾಗತಿಸಿದ ಬಳಿಕ ಕಂಪನಿಯ ಏಳಿಗೆಗಾಗಿ ನೀವೆಲ್ಲರೂ ಸಲಹೆಗಳಿದ್ದರೆ ನೀಡುವಂತೆ ಅಲ್ಲಿಗಾಗಮಿಸಿದ್ದ ಪ್ರತಿಯೊಬ್ಬರಿಗೂ ಸಮಯ ನೀಡಿದಳು. ತಾವು ಹೇಳುವುದನ್ನು ಸಂಸ್ಥಾನದ ಅತ್ಯುನ್ನತ ಆಡಳಿತ ಚುಕ್ಕಾಣಿ ಹಿಡಿದಿರುವ ನೀತು ಮೇಡಂ ಕೇಳುತ್ತಾರೆಂದು ತಿಳಿದು ಉತ್ಸಾಹದಿಂದಲೇ ತಮ್ತಮ್ಮ ವಿಚಾರಗಳನ್ನು ತಿಳಿಸಿದರು. ಹಾಗೂ ಹೀಗೂ ಹೇಗೋ ಇಡೀ ಮೀಟಿಂಗಿನಲ್ಲಿ ಕುಳಿತಿದ್ದ ವಿಶಾಲ್ ಮತ್ತು ಸುಜೋಯ್ ರಾತ್ರಿ ಡಿನ್ನರ್ ಮುಗಿಸಿ ನೀತು ಬಳಿ ಅನುಮತಿ ಪಡೆದು ಕುಟುಂಬದವರನ್ನು ಕರೆದುಕೊಂಡು ವಿಮಾನ ನಿಲ್ದಾಣದತ್ತ ದೌಡಾಯಿಸಿದರು.
ಸುಭಾಷ್.........ಪ್ಲಾನ್ ರೆಡಿಯಾಗಿದೆ ಚಿಕ್ಕಮ್ಮ ಅವರಿಲ್ಲಿಂದೆಲ್ಲಿಗೂ ತಪ್ಪಿಸಿಕೊಂಡು ಹೋಗಲಾಗದು ಬಷೀರ್—ಸುಮೇರ್ ಇಬ್ಬರೂ ಏರ್ಪೋಟಿನಲ್ಲೇ ಕಾಯ್ತಿದ್ದಾರೆ.
ನೀತು.....ನಿಮ್ಮಲ್ಯಾರೂ ಮುಂದೋಗಿ ಡೀಲ್ ಮಾಡಿಲ್ಲ ತಾನೇ ?
ಸುಭಾಷ್.......ಇಲ್ಲ ಚಿಕ್ಕಮ್ಮ ಇಲ್ಲಿನ ಶೇಖ್ ಅವರುಗಳಿಂದಲೇ ಎಲ್ಲಾ ಡೀಲಿಂಗ್ ಮಾಡಿಸಿದ್ದು ಹಣ ಕೊಟ್ಟಿದ್ದೂ ಅವರೇ ನಮ್ಮಲ್ಲಿ ಯಾರೊಬ್ಬರೂ ಮುಂದೆ ಹೋಗಲೇ ಇಲ್ಲ.
ರಜನಿ........ಏನದು ಪ್ಲಾನ್ ?
ಸುಭಾಷ್......ಆಂಟಿ ಅಂತದ್ದೇನೂ ದೊಡ್ಡ ಪ್ಲಾನ್ ಮಾಡಿಲ್ಲ ಇಲ್ಲಿಗೆ ವಿಶಾಲ್—ಸುಜೋಯ್ ಬಂದಿದ್ದು ಪ್ರೈವೇಟ್ ವಿಮಾನದಲ್ಲಿ ತಾನೆ. ಅದರ ಚಾಲಕರನ್ನು ವರ್ಧನ್ ಅಂಕಲ್ ಪರಿಚಿತರ ಮೂಲಕ ನಾವು ಹಣ ನೀಡಿ ಖರೀಧಿ ಮಾಡಿದ್ದೀವಿ. ಈಗ ವಿಶಾಲ್ ಕುಟುಂಬದವರ ಜೊತೆ ಏರ್ಪೋಟಿಗೆ ಹೋದಾಗ ಚಾಲಕರಿಬ್ಬರು ವಿಮಾನ ಹಾರಾಟ ನಡೆಸುವ ಸ್ಥಿತಿಯಲ್ಲಿಲ್ಲ ಏಂಜಿನ್ನಿನಲ್ಲಿ ದೋಷವುಂಟಾಗಿದೆ ಅಂತ ಹೇಳ್ತಾರೆ. ಅದನ್ನು ಸರಿಪಡಿಸಲು ಬಿಡಿಭಾಗ ಅಮೇರಿಕಾದಿಂದಲೇ ಬರಬೇಕು ಜೊತೆಗೆ ಇಂಜಿನಿಯರ್ಸ್ ಕೂಡ ಆಗಲೇ ವಿಮಾನವು ಹಾರಾಡಲು ಸಿದ್ದವಾಗುತ್ತೆ ಅಂತ ಹೇಳ್ತಾರೆ.
ರಜನಿ.......ಅವರು ಬಂದಿದ್ದ ಪ್ರೈವೇಟ್ ವಿಮಾನ ಕೆಟ್ಟಿದೆ ಅಂತೇಳಿ ಅವರನ್ನಿಲ್ಲೇ ತಡೆದಿಡಲು ಸಾಧ್ಯವಾಗುತ್ತಾ ? ಅವರು ರೆಗ್ಯುಲರಾಗಿ ಸಂಚಾರ ಸೇವೆ ನೀಡುವ ವಿಮಾನದಲ್ಲಿ ಟಿಕೆಟ್ ಖರೀಧಿಸಿ ಕೂಡ ತಮ್ಮ ದೇಶಕ್ಕೆ ಹಿಂದಿರುಗಬಹುದಲ್ವಾ ?
ಸುಭಾಷ್...........ಇನ್ನೂ ಎರಡ್ಮೂರು ದಿನ ಅವರಿಗೆ ಯಾವುದೇ ವಿಮಾನದಲ್ಲಿಯೂ ಟಿಕೆಟ್ ಸಿಗದಂತೆ ನೋಡಿಕೊಳ್ಳುವ ವ್ಯವಸ್ಥೆ ಕೂಡ ಮಾಡಿದ್ದಾಗಿದೆ. ಈಗ ಅವರಿಗುಳಿದಿರುವುದೊಂದೇ ದಾರಿ.
ರಜನಿ ಕುತೂಹಲದಿಂದ........ಏನದು ?
ಸುಭಾಷ್.......ಆಂಟಿ ಅದು.........???????
ಕಥೆ ಅದ್ಬುತ, ದಯಮಾಡಿ ಪ್ರತಿ ದಿನ ಬರಿಯಿರಿ, ಬಹಳ ಸೊಗಸಾಗಿದೆ
ReplyDeleteThumbha changide kutuhala jasti agtha ede
ReplyDeleteಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ದಯವಿಟ್ಟು ನಂದು ಒಂದು ವಿನಂತಿ ಆದಷ್ಟು ಬೇಗ ಬೇಗ ದಿನಕ್ಕೆ 2, 3, 4, 5, ಸ್ಟೋರಿ ಬರೆಯಿರಿ
ReplyDelete2 ದಿನ ಆಯಿತು ಸ್ಟೋರಿ ಅಪ್ಲೋಡ್ ಮಾಡಿಲ್ಲರಿ ಓದುವ ಕಾತುರ ಹೆಚ್ಚಾಗುತ್ತಿದೆ ದಯವಿಟ್ಟು ಸ್ಟೋರಿ ಮಿಸ್ ಮಾಡದೆ ಅಪ್ಲೋಡ್ ಇವತ್ತು 4, 5, 6 Part upload mada ri please bega bega story upload mada ri please my personal humble request ri 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಕಥೆ ಅದ್ಬುತ, ದಯಮಾಡಿ ಪ್ರತಿ ದಿನ ಬರಿಯಿರಿ, ಬಹಳ ಸೊಗಸಾಗಿದೆ
ReplyDeleteThumbha changide kutuhala jasti agtha ede
ಓದುವ ಕಾತುರ ಹೆಚ್ಚಾಗುತ್ತಿದೆ ದಯವಿಟ್ಟು ಸ್ಟೋರಿ ಮಿಸ್ ಮಾಡದೆ ಅಪ್ಲೋಡ್ ಮಾಡ ರೀ ಇವತ್ತು 4, 5, 6 Part upload mada ri please bega bega story upload mada ri please my personal humble request ri 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏