Total Pageviews

Tuesday, 9 April 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 38

ಡಾಕ್ಟರ್ ಬಂದು ಎಲ್ಲರನ್ನು ಹೊರಗೆ ಕಳುಹಿಸಿ ಶೀಲಾಳ ಸಮಕ್ಷಮದಲ್ಲಿ ನೀತುಳನ್ನು ಪರೀಕ್ಷಿಸಿದ ಬಳಿಕ ಅವಳಿಗೊಂದು ಇಂಜಕ್ಷನ್ ನೀಡಿದರು. ಡಾಕ್ಟರ್ ರೂಮಿನಿಂದ ಹೊರಬಂದು........ನೋಡಿ ನೀವು ಗಾಬರಿಯಾಗುವಂತ ಸಂಗತಿಯೇನಿಲ್ಲ ಯಾವುದೋ ಘಟನೆಯಿಂದ ಅವರ ಮನಸ್ಸಿಗೆ ಆಘಾತವಾಗಿದ್ದು ಅದರ ಪರಿಣಾಮದಿಂದ ಬಿ.ಪಿ. ಸ್ವಲ್ಪ ಕಡಿಮೆಯಾಗಿ ಜ್ಞಾನ ತಪ್ಪಿದ್ದಾರೆ. ನೀವೆಲ್ಲರೂ ಸಾಧ್ಯವಾದಷ್ಟೂ ಅವರು ಎಚ್ಚರಗೊಂಡ ಬಳಿಕ ಸಂತೋಷದಿಂದ ನಗು ನಗುತ್ತಿರುವಂತೆ ನೋಡಿಕೊಳ್ಳಿರಿ. ಈ ರೀತಿ ಆಘಾತ ಒಂದೆರಡು ದಿನಗಳು ಮಾತ್ರ ಆದರೆ ಅವರಿಗೆ ನೋವುಂಟು ಮಾಡಿರುವ ಘಟನೆಯನ್ನು ಮರೆಯುವಂತೆ ಮಾಡಿ. ನಾನವರಿಗೆ ನಿದ್ರೆಗಾಗಿ ಇಂಜೆಕ್ಷನ್ ನೀಡಿರುವೆ ಬೆಳಿಗ್ಗಿನವರೆಗೂ ಅವರು ನೆಮ್ಮದಿಯಾಗಿ ನಿದ್ರೆ ಮಾಡಿದರೆ ಅವರ ಮನಸ್ಸಿಗೂ ನಿಮ್ಮದಿಯಾಗಿ ಎಲ್ಲವೂ ಸರಿ ಹೋಗುತ್ತದೆ ಎಂದೇಳಿ ಹೊರಟನು.

ಹರೀಶ ತನ್ನಿಬ್ಬರು ಮಕ್ಕಳನ್ನು ಬಲವಂತವಾಗಿ ರೂಮಿನಲ್ಲಿ ಮಲಗಿಸಿದರೆ ರಶ್ಮಿ ತನ್ನ ಮಮ್ಮನ ಕೈಯನ್ನು ಹಿಡಿದುಕೊಂಡು ಅವಳ ಪಕ್ಕದಲ್ಲೇ ನಿದ್ರೆಗೆ ಜಾರಿದ್ದಳು. ನೀತು ಮಲಗಿದ್ದ ಮಂಚದ ಪಕ್ಕದಲ್ಲೇ ಚೇರಿನ ಮೇಲೆ ಕುಳಿತ ರಜನಿ ಮತ್ತು ಶೀಲಾ ಪರಸ್ಪರ ಮಾತನಾಡುತ್ತಿದ್ದರೆ ಹೊರಗೆ ಹಾಲಿನ ಸೋಫಾದಲ್ಲಿ ಇಂದಿನ ಘಟನೆಗಳನ್ನು ಯೋಚಿಸುತ್ತ ಹರೀಶ ಕುಳಿತಿದ್ದನು. ಅಶೋಕ ಕೂಡ ಮನಃಪೂರಕವಾಗಿ ನೀತುಳನ್ನು ತನ್ನ ಹೆಂಡತಿಯಾಗಿ ಸ್ವೀಕಾರ ಮಾಡಿದ್ದರೂ ತನ್ನ ಮನಸ್ಸಿಗೆ ಆಗುತ್ತಿರುವ ನೋವನ್ನು ಯಾರ ಮುಂದೆಯೂ ಸಹ ತೋರಿಸಿಕೊಳ್ಳಲಾರದೆ ಒಳಗೊಳಗೇ ದುಃಖಿಸುತ್ತಿದ್ದನು. ರವಿ ಕೂಡ ವಿಷಯ ತಿಳಿದು ಆಫೀಸಿನಿಂದ ನೀತು ಮನೆಗೆ ಧಾವಿಸಿ ಹರೀಶನಿಗೆ ಸಮಾಧಾನ ಹೇಳುತ್ತ ಎಲ್ಲಾ ಒಳ್ಳೆಯದೇ ಆಗುತ್ತೆ ನಮ್ಮ ನೀತು ಬೆಳಿಗ್ಗೆಗೆಲ್ಲಾ ಹುಷಾರಾಗಿರುತ್ತಾಳೆ ನೀನು ಭಯಪಡಬೇಡ ಎಂದು ಹರೀಶನಿಗೆ ಧೈರ್ಯ ನೀಡುತ್ತಿದ್ದನು.

ನೀತು ಕೈ ಹಿಡಿದೇ ಕುಳಿತಿದ್ದ ಶೀಲಾ ಪಕ್ಕದಲ್ಲಿದ್ದ ರಜನಿಗೆ........ಖಂಡಿತ ಆ ಮಗು ಇವಳಿಂದ ದೂರವಾದ ನೋವನ್ನು ಇವಳಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ . ನನ್ನ ಪ್ರಾಣ ತೆಗೆದುಕೋ ದೇವರೇ ಆದರೆ ನನ್ನ ಗೆಳತಿಯನ್ನು ಬೇಗ ಹುಷಾರಾಗುವಂತೆ ಮಾಡೆಂದು ಬೇಡಿಕೊಳ್ಳುತ್ತಿದ್ದಳು. ಹಿಂದಿನ ರಾತ್ರಿ ನೀತು ಮತ್ತು ತನ್ನ ಗಂಡನ ಕಾಮದಾಟವನ್ನು ನೋಡಿದ್ದ ರಜನಿಯ ಮನಸ್ಸಿನಲ್ಲಿ ನೀತು ಬಗ್ಗೆ ಸ್ವಲ್ಪ ಗೊಂದಲವಿತ್ತು . ಆದರೆ ಯಾರ ಹತ್ತಿರವೂ ಸುಳಿಯದ ಮಗು ನೀತುಳನ್ನು ನೋಡಿ ತಾನಾಗಿಯೇ ಅವಳ ಮಡಿಲನ್ನು ಸೇರಿದ್ದು......... ತದನಂತರ ಮಗು ಹಾಗು ನೀತು ಇಬ್ಬರು ಬೇರ್ಪಡುವಾಗ ಅವರ ಕಣ್ಣಿನಲ್ಲಿ ಹರಿಯುತ್ತಿದ್ದ ನೀರು ಮತ್ತು ಮುಖದಲ್ಲಿನ ವೇದನೆ .......ಮನೆ ತಲುಪುತ್ತಿದ್ದಂತೆಯೇ ಮಗುವಿನಿಂದ ದೂರವಾದ ಆಘಾತದಲ್ಲಿ ನೀತು ಜ್ಞಾನ ತಪ್ಪಿದ್ದನ್ನು ಕಂಡು ರಜನಿ ಮನಸ್ಸಿನಲ್ಲಿಯೂ ನೀತು ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವವು ಬೆಳೆಯಿತು. 

ಶೀಲಾಳ ಮಾತಿಗೆ ತಲೆದೂಗಿಸಿದ ರಜನಿ .........ಹೌದು ನೀನು ಹೇಳುತ್ತಿರುವುದು ಸತ್ಯವಾಗಿದೆ. ಎಲ್ಲರನ್ನು ಪ್ರೀತಿಸಲು ಮತ್ತು ಎಲ್ಲರಿಂದ ಪ್ರೀತಿ ಪಡೆಯುವುದಕ್ಕಾಗಿಯೇ ನೀತು ಜನಿಸಿರುವಳು ಅನಿಸುತ್ತೆ . ನಮ್ಮ ಯಾರ ಹತ್ತಿರಕ್ಕೂ ಬರದಿದ್ದ ಮಗು ಹೇಗೆ ಸ್ವಂತ ತಾಯಿಯನ್ನು ಸೇರಿಕೊಳ್ಳುವಂತೆ ನೀತು ಮಡಿಲನ್ನು ಸೇರಿಕೊಂಡಿತ್ತು . ದೇವರೇ ಬೆಳಿಗ್ಗೆ ಎಚ್ಚರವಾದಾಗ ನೀತು ಮೊದಲಿನಂತೆಯೇ ಆಗಿರಲೆಂದು ಬೇಡಿದಳು. ರಜನಿಗೆ ತನ್ನ ಗಂಡನ ಜ್ಞಾಪಕವಾಗಿ ಒಂದು ನಿಮಿಷವೆಂದು ಶೀಲಾಳಿಗೆ ತಿಳಿಸಿ ಹೊರಗೆ ಬಂದಾಗ ಅಶೋಕ ಮತ್ತು ರವಿ ಕುಳಿತು ಮಾತನಾಡುತ್ತಿರುವುದನ್ನು ಕಂಡು ನಿಟ್ಟುಸಿರನ್ನು ಬಿಟ್ಟಳು. 

ಅಶೋಕ ತನ್ನ ಹೆಂಡತಿಗೆ ತಾರಸಿಯಲ್ಲಿ ಕುಳಿತಿರುವ ಹರೀಶನಿಗೂ ಸಮಾಧಾನ ಹೇಳಿ ಬಾ ಎಂದು ಕಳಿಸಿದನು. ರಜನಿ ತಾರಸಿಗೆ ಬಂದಾಗ ಹರೀಶ ಗೋಡೆಗೊರಗಿಕೊಂಡು ಆಕಾಶವನ್ನು ಧಿಟ್ಟಿಸುತ್ತ ತನ್ನದೇ ಆಲೋಚನೆಯಲ್ಲಿದ್ದನು. ಅವನ ಹೆಗಲಿನ ಮೇಲೆ ಕೈಯಿಟ್ಟ ರಜನಿಯ ಕಡೆ ನೋಡಿ ಕಣ್ಣೀರು ಸುರಿಸತೊಡಗಿದ ಹರೀಶನನ್ನು ತನ್ನ ತೋಳಿನಲ್ಲಿ ರಜನಿ ಬಿಗಿದಪ್ಪಿಕೊಂಡಾಗ ಅವನ ಸಹನೆಯ ಕಟ್ಟೆಯೊಡೆದು ಅಳಲಾರಂಭಿಸಿದನು. ರಜನಿ ಕೂಡ ಅವನಿಗೆ ಸಮಾಧಾನ ಹೇಳಿ ಅವನ ಪಕ್ಕದಲ್ಲಿ ಕುಳಿತು ಬಹಳ ಸಮಯದವರೆಗೂ ಅವನೊಂದಿಗೆ ಮಾತನಾಡಿ ಅವನು ತನ್ನ ನೋವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡಿದಳು.

ಬೆಳಿಗ್ಗೆ ನೀತುವಿಗೆ ಎಚ್ಚರವಾದಾಗ ಎಲ್ಲರೂ ಅವಳ ಮಂಚದ ಸುತ್ತಲೂ ನಿಂತು ಅವಳನ್ನೇ ನೋಡುತ್ತ ಅವಳೇನು ಹೇಳುವಳೆಂದು ಕಾದಿದ್ದರು. ನೀತು ಒಂದು ಮಾತನ್ನಾಡದೆ ಮಂಚದಿಂದಿಳಿದಾಗ ಶೀಲಾ ಅವಳ ಕೈಯನ್ನಿಡಿದು ಎಲ್ಲಿಗೆ ಎಂದುದಕ್ಕೆ ಫ್ರೆಶಾಗಿ ಬರುವೆನೆಂದು ಬಾತ್ರೂಂ ಹೊಕ್ಕಳು. ನೀತು ಫ್ರೆಶಾಗಿ ಬಂದಾಗ ಎಲ್ಲರೂ ಅವಳಿಗಾಗಿ ಹಾಲಿನಲ್ಲ ಕುಳಿತು ಕಾಯುತ್ತಿದ್ದರೆ ಅವಳು ಹರೀಶನೆದುರು ನಿಂತು ನೀವೊಬ್ಬರೇ ಒಳಗೆ ಬನ್ನಿ ಸ್ವಲ್ಪ ಮಾತನಾಡಬೇಕಿದೆ ಎಂದೇಳಿ ಯಾರ ಕಡೆಯೂ ನೋಡದೆ ರೂಮಿಗೋದಳು. 

ನೀತು ನಡೆದುಕೊಂಡ ರೀತಿ ಎಲ್ಲರಿಗೂ ಗಾಬರಿ ಹುಟ್ಟಿಸಿ ಸುರೇಶ ರೂಮಿನ ಕಡೆ ಹೊರಟಾಗ ಅವನನ್ನು ತಡೆದ ಹರೀಶ ನಾನು ವಿಚಾರಿಸುತ್ತೇನೆ ನಿಮ್ಮಮ್ಮ ಈಗ ಯಾವುದೋ ವೇದನೆಯಲ್ಲಿದ್ದಾಳೆ ನೀನಿಲ್ಲೇ ಕುಳಿತಿರು ಎಂದು ಎಲ್ಲರಿಗೂ ಸಮಾಧಾನ ಹೇಳಿ ರೂಮಿನೊಳಗೆ ಪ್ರವೇಶಿಸಿದಾಗ ಬಾಗಿಲು ಹಾಕಿ ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿರಿ ಎಂದು ಗಂಡನಿಗೆ ಹೇಳಿದಳು.

ನೀತು ಗಂಡನನ್ನು ತಬ್ಬಿಕೊಂಡು ಅಳಲಾರಂಭಿಸಿದಾಗ ಅವಳ ಮನಸ್ಸಿನ ವೇದನೆ ಕಣ್ಣೀರಿನ ರೂಪದಲ್ಲಿ ಹಗುರವಾಗಲೆಂದು ಹರೀಶ ಕೂಡ ಸಮಾಧಾನಗೊಳಿಸದೆ ಅವಳ ತಲೆ ಸವರುತ್ತ ಗಟ್ಟಿಯಾಗಿ ಅಪ್ಪಿಕೊಂಡ.
ಹತ್ತು ನಿಮಿಷ ಅತ್ತು ಸಮಾಧಾನಗೊಂಡ ನೀತು ಗಂಡನಿಂದ ದೂರವಾಗಿ ಏನೋ ಹೇಳಲು ಬಯಸಿದಾಗ ಅವಳ ತುಟಿಗಳ ಮೇಲೆ ಬೆರಳಿಟ್ಟ ಹರೀಶ.................
................ನೀನೇನೂ ಹೇಳಬೇಡ ಹೆಂಡತಿಯ ಅಂತರಾಳದಲ್ಲಿನ ನೋವು ಅರ್ಥ ಮಾಡಿಕೊಳ್ಳುವಷ್ಟು ನಾನು ಮುಠಾಳನಲ್ಲ . ನಿನಗೆ ಗೊತ್ತ ನೀನು ಎರಡನೇ ಸಲ ಗರ್ಭಿಣಿಯಾದಾಗ ನಾನೇಷ್ಟು ಖುಷಿಯಲ್ಲಿದ್ದೆ . ಈ ಬಾರಿ ನಮ್ಮ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಲಿದೆ ಅಂತ ತಿಳಿದು ಆದರೆ ಸುರೇಶ ಜನಿಸಿದನು. ಅವನು ಹುಟ್ಟಿದ ಮರುದಿನ ನೀನು ಮುಂದೆ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಳ್ಳುವೆ ಎಂದಾಗ ನನಗೆ ಅತೀವ ನೋವುಂಟಾದರೂ ನನ್ನ ಸಹಧರ್ಮಿಣಿಯ ನಿರ್ಧಾರಕ್ಕೆ ತಲೆಬಾಗಿದೆ. ಮದುವೆ ಆದಾಗ ನನಗೆ ಒಬ್ಬಳು ಹೆಣ್ಣು ಮಗು ಜನಿಸಿದರೆ ಅವಳು ಪಪ್ಪ......ಪಪ್ಪ ಎಂದು ಪ್ರೀತಿಯಿಂದ ಮನೆಯ ತುಂಬ ಒಡಾಡುತ್ತಿರುವಾಗ ಅವಳ ಕಾಲ್ಗೆಜ್ಜೆಗಳ ನಿನಾದವನ್ನು ಕೇಳಲು ನಾನು ತುಂಬ ಆಸೆಪಟ್ಟಿದ್ದೆ . ಆದರೆ ಎರಡು ಬಾರಿಯೂ ನಮಗೆ ಗಂಡು ಮಕ್ಕಳೇ ಜನಿಸಿದರು. ಹಾಗಂತ ನನಗೆ ನನ್ನ ಮಕ್ಕಳ ಬಗ್ಗೆಯಾಗಲಿ ನಿನ್ನ ಮೇಲಾಗಲಿ ಕಿಂಚಿತ್ತು ಬೇಸರ ಬರಲೇ ಇಲ್ಲ. ದೇವರು ನನಗೆ ನಿಮ್ಮೂವರನ್ನು ನೀಡಿದ್ದಕ್ಕೆ ನಾನು ತುಂಬ ಸಂತೋಷವಾಗಿದ್ದೆ . ಆದರೆ ಮನಸ್ಸಿನಾಳದಲ್ಲೆಲ್ಲೋ ಒಬ್ಬಳು ಹೆಣ್ಣು ಮಗಳಿಲ್ಲದ ಕೊರಗು ಸದಾ ನನ್ನನ್ನು ಕಾಡುತ್ತಲಿತ್ತು . ನೆನ್ನೆ ದಿನ ಆ ಮಗು ನಿನ್ನ ಮಡಿಲಿನಲ್ಲಿ ನಗುತ್ತ ಕಿಲಕಾರಿ ಹಾಕುತ್ತಿರುವುದನ್ನು ನೋಡಿ ನನ್ನ ಹೃದಯ ತುಂಬಿ ಬಂತು. ಆದರೆ ಸಂಜೆಗೆಲ್ಲಾ ಮಗುವಿನಿಂದ ದೂರವಾಗಲೇಬೇಕೆಂಬ ಸತ್ಯದ ಅರಿವು ನನ್ನನ್ನು ಮಗುವಿನ ಹತ್ತಿರ ಸುಳಿಯದಂತೆ ತಡೆದಿತ್ತು . ಮನೆಗೆ ಬಂದ ಬಳಿಕ ನಿನ್ನ ಕಣ್ಣಿನಲ್ಲಿನ ಕಂಬನಿ...... ಹೃದಯದಲ್ಲಿ ಮಗುವಿನಿಂದ ದೂರವಾಗಿರುವ ನೋವು.......ನನ್ನನ್ನು ನೋಡಿ ನಿನ್ನ ಮುಖದಲ್ಲಿ ಏನೋ ಬೇಡಿಕೊಳ್ಳುತ್ತಿರುವ ಭಾವನೆ ನನಗೆಲ್ಲವೂ ಅರ್ಥವಾಗುತ್ತದೆ. ದೇವರು ಆ ಮಗುವಿನ ರೂಪದಲ್ಲಿ ನನ್ನ ಕನಸನ್ನು ಈಡೇರಿಸಲು ನಿರ್ಧರಿಸಿದಂತಿದೆ. ನೀನೇನೂ ಚಿಂತೆ ಮಾಡಬೇಡ ಆ ಮಗುವನ್ನು ನಾವು ದತ್ತು ಸ್ವೀಕಾರ ಮಾಡೋಣ. ಆ ಮಗುವಿಗೆ ಯಾವ ಕೊರತೆಯೂ ಆಗದಂತೆ ನಮ್ಮಿಬ್ಬರ ಪ್ರೀತಿಯನ್ನೆಲ್ಲಾ ಧಾರೆ ಎರೆದು ಅವಳನ್ನು ಬೆಳೆಸೋಣ. ಇದೇ ತಾನೇ ನೀನು ನನ್ನ ಜೊತೆ ಮಾತನಾಡಬೇಕೆಂದಿದ್ದು ಎಂದಾಗ ನೀತು ಕಂಬನಿ ಸುರಿಸುತ್ತ ಮುಗುಳ್ನಕ್ಕು ಹೌದೆಂಬಂತೆ ತಲೆಯಾಡಿಸಿ ಗಂಡನನ್ನು ಅಪ್ಪಿಕೊಂಡಳು. ಹರೀಶ ಅವಳ ಕಣ್ಣೀರನ್ನೊರೆಸಿ ಬೇಗ ರೆಡಿಯಾಗು ನಾವು ಈಗಲೇ ಆಶ್ರಮಕ್ಕೆ ಹೋಗಿ ದತ್ತು ಸ್ವೀಕಾರ ಮಾಡಿಕೊಳ್ಳುವ ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ನಮ್ಮ ಮಗಳನ್ನು ಅವಳ ಮನೆಗೆ ಕರೆತರೋಣ ಎಂದಾಗ ನೀತು ಸಂತಸದಿಂದ ರೆಡಿಯಾಗತೊಡಗಿದಳು.

ಹರೀಶ ಹೊರಬಂದು ಎಲ್ಲರಿಗೂ ನೀತು ಮನಸ್ಸಿನ ಭಾವನೆಗಳನ್ನು ತಿಳಿಸಿ ತನ್ನ ನಿರ್ಧಾರವನ್ನು ಹೇಳಿದಾಗ ಅವರೆಲ್ಲರೂ ಬಹಳ ಸಂತೋಷಪಟ್ಟರೆ ಗಿರೀಶ — ಸುರೇಶ ತಮಗೂ ಒಬ್ಬಳು ಮುದ್ದಿನ ತಂಗಿ ಬರಲಿದ್ದಾಳೆಂದು ಎಲ್ಲರಿಗಿಂತಲೂ ಜಾಸ್ತಿ ಖುಷಿಯಲ್ಲಿದ್ದರು. ನೀತು ರೆಡಿಯಾಗಿ ಹೊರಗೆ ಬಂದಾಗ ರಜನಿ ಅವಳನ್ನು ಬಿಗಿದಪ್ಪಿ ಅಳುತ್ತ ಕಿವಿಯಲ್ಲಿ..........ನೀನು ನಿಜಕ್ಕೂ ಗ್ರೇಟ್ ನೀತು ಆದರೆ ನನ್ನ ಕ್ಷಮಿಸಿಬಿಡು ಕಾರಣವೇನೆಂದು ಮಾತ್ರ ಕೇಳಬೇಡ ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿಬಿಡು ಎಂದು ಪಿಸುಗುಟ್ಟಿದಳು. 

ನೀತು ಸಹ ರಜನಿಯ ಕಿವಿಯಲ್ಲಿ ಮೆಲ್ಲನೆ...........ನನಗೆ ಗೊತ್ತು ರಜನಿ ನೀನು ಏತಕ್ಕಾಗಿ ನನ್ನ ಬಳಿ ಕ್ಷಮೆ ಕೇಳುತ್ತಿರುವೆ ಅಂತ ಆದರ ವಿಷಯ ನಾವು ಇನ್ನೊಮ್ಮೆ ಮಾತನಾಡೋಣ ಈ ಸಂತಸದ ಸಮಯದಲ್ಲಿ ಅದನ್ನು ಪ್ರಸ್ತಾಪಿಸುವುದು ಬೇಡವೆಂದಳು. ಅಶೋಕ ಕೂಡ ತನ್ನ ಎರಡನೇ ಮಡದಿಯ ಕಡೆ ಹೆಮ್ಮೆಯಿಂದ ನೋಡಿದಾಗ ನೀತು ಕೂಡ ಕಣ್ಣಿನಲ್ಲೇ ಕೃತಜ್ಞತೆ ಸಲ್ಲಿಸಿ ಗೆಳತಿ ಶೀಲಾಳನ್ನು ತಬ್ಬಿಕೊಂಡಳು. ತಾನಗಾಗಿ ಎದುರು ನೋಡುತ್ತಿದ್ದ ಸುರೇಶ ಮತ್ತು ಗಿರೀಶನನ್ನು ಪ್ರೀತಿ ಮಾಡಿದ ಬಳಿಕ ರಶ್ಮಿಯನ್ನು ಸ್ವಲ್ಪ ಗಟ್ಟಿಯಾಗಿ ತಬ್ಬಿಕೊಂಡು ಎಲ್ಲರ ಜೊತೆಗೂಡಿ ಆಶ್ರಮದ ಕಡೆ ಹೊರಟಳು.

ನೀತು ತನ್ನ ಕುಟುಂಬದವರೊಂದಿಗೆ ಆಶ್ರಮವನ್ನು ತಲುಪಿ ಇನೋವಾದಿಂದ ಕೆಳೆಗಿಳಿದವಳೆ ಒಂದೇ ಉಸಿರಿನಲ್ಲಿ ಒಳಗೋಡಿದಳು. ನೀತುಳನ್ನು ನೋಡಿ ಮಾನೇಜರ್ ಅವಳ ಹತ್ತಿರ ಬಂದು.......ಏನ್ ಮೇಡಂ ನೀವಿಲ್ಲಿ ? ಏನು ವಿಷಯ ? ನೀತು ಸುತ್ತಮುತ್ತ ಕಣ್ಣಾಯಿಸಿ........ ಮಗು ಮಗು ಎಲ್ಲಿದೆ ಎಂದು ಕೇಳಿದಳು. ಮಾನೇಜರ್ ಅವಳನ್ನು ಮಗುಯಿರುವ ರೂಮಿಗೆ ಕರೆದೊಯ್ದಾಗ ಸುಧಾಳ ತೊಡೆ ಮೇಲೆ ಕುಳಿತಿದ್ದ ಮಗು ನೀತು ಕಡೆ ಕಾಣಿಸುತ್ತಿದ್ದಂತೆ ಅದರ ಮುಖದಲ್ಲಿ ಹೃದಯ ತಂಪೆನಿಸುವಂತ ಮುಗುಳ್ನಗೆ ಮೂಡಿತು. ಮಗು ಸುಧಾಳ ಮಡಿಲಿನಿಂದ ಕೆಳಗಿಳಿದು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ತನ್ನೆರಡೂ ಕೈಗಳನ್ನೂ ನೀತುವಿನ ಕಡೆಗೆ ತನ್ನನ್ನು ಎತ್ತಿಕೊಳ್ಳುವಂತೆ ನಡೆದುಕೊಂಡು ಬರುತ್ತಿರುವಾಗ ಮಗು ಬಳಿ ಓಡಿದ ನೀತು ಅದನ್ನೆತ್ತಿಕೊಂಡು ಆಲಂಗಿಸಿಕೊಂಡಳು. ಮಾನೇಜರ್ ಅವಳ ಹತ್ತಿರ ಬಂದು......ಮೇಡಂ ನೆನ್ನೆ ನಿವು ಇಲ್ಲಿಂದ ತೆರಳಿದ ಬಳಿಕ ಮಗು ತುಂಬ ಹೊತ್ತಿನವರೆಗೆ ಅಳುತ್ತಿದ್ದು ನಂತರ ಸುಮ್ಮನಾದರೂ ಸಪ್ಪಗಾಗಿ ಹೋಗಿತ್ತು . ಪ್ರತಿದಿನದ ನಗು ತುಂಟತನವಿಲ್ಲದೆ ಮಗುವಿನ ಮುಖ ಬಾಡಿದಂತಾಗಿತ್ತು . ಈಗ ನೋಡಿ ನಿಮ್ಮ ಮಡಿಲನ್ನು ಸೇರುತ್ತಿದ್ದಂತೆ ಮೊದಲಿನಂತೆಯೇ ಹೇಗೆ ಮುಖವನ್ನರಳಿಸಿಕೊಂಡು ನಗುತ್ತಿದ್ದಾಳೆ. ನೀತು ಕುಟುಂಬದ ಮಿಕ್ಕವರೂ ಅಲ್ಲಿಗೆ ಬಂದಾಗ ಹರೀಶ...ರವಿ ಮತ್ತು ಅಶೋಕ ಮಾನೇಜರ್ ಜೊತೆ ಮಾತನಾಡಬೇಕೆಂದು ಅವನನ್ನು ಆಫೀಸಿಗೆ ಕರೆದೊಯ್ದರು. ಮಾನೇಜರ್ ಏನು ವಿಷಯವೆಂದು ಕೇಳಿದಾಗ ಹರೀಶನೇ ಮಾತು ಪ್ರಾರಂಭಿಸಿ............ .............ನಿಮ್ಮ ಆಶ್ರಮದ ಆ ಮಗುವನ್ನು ನಾನು ನನ್ನ ಹೆಂಡತಿ ದತ್ತು ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ ಅದಕ್ಕಾಗಿ ರೂಪಿಸಿರುವ ಕಾನೂನು ಪ್ರಕ್ರಿಯೆಗಳನ್ನು ಅದೆಲ್ಲವನ್ನು ತಿಳಿಸಿ ನಾವು ಅದೆಲ್ಲವನ್ನು ಪಾಲಿಸಿಯೇ ಕಾನೂನಿನ ರೀತಿ ನಮ್ಮ ಮಗಳನ್ನು ದತ್ತು ಸ್ವೀಕಾರ ಮಾಡುತ್ತೇವೆ ನಮಗೆ ಸಹಾಯ ಮಾಡಿ.

ಮಾನೇಜರ್ ನೆನ್ನೆಯ ದಿನ ಮಗು ಮತ್ತು ನೀತುವಿನ ಒಡನಾಟವನ್ನು ನೋಡಿಯೇ ಈ ಬಗ್ಗೆ ಅನುಮಾನ ಬಂದಿದ್ದು ಈಗ ಹರೀಶನ ಮಾತುಗಳಿಂದ ಅವನಿಗದು ನಿಶ್ಚಯವಾಗಿ ಹೋಯಿತು. ಹರೀಶನ ಮಾತಿಗೆ ಮಾನೇಜರ್ ಉತ್ತರಿಸುತ್ತ........ಸರ್ ವಿಷಯ ತಿಳಿದು ತುಂಬ ಸಂತೋಷವಾಯಿತು ಆದರೆ ಮುಗುವಿನ ಆರೈಕೆ ಲಾಲನೆ ಪಾಲನೆಗಳನ್ನು ನನ್ನ ಹೆಂಡತಿ ಸುಧಾ ಒಬ್ಬಳೇ ನೋಡಿಕೊಳ್ಳುತ್ತಿರುವುದು ಅದರಿಂದಾಗಿ ಅವಳನ್ನೊಮ್ಮೆ ಕೇಳಿ ಬರುತ್ತೇನೆಂದಾಗ ಅವನ ಹಿಂದೆಯೇ ಮೂವರೂ ಹೊರಟರು. ಮಾನೇಜರ್ ತನ್ನ ಹೆಂಡತಿಗೆ ನೀತು ಮತ್ತು ಹರೀಶ ಮಗುವನ್ನು ದತ್ತು ಪಡೆದುಕೊಳ್ಳಲು ಬಂದಿರುವ ವಿಷಯ ತಿಳಿಸಿದಾಗವಳು ಅದಕ್ಕೊಪ್ಪದೆ ಮಗುವನ್ನು ನೀತುವಿನಿಂದ ಕಸಿದುಕೊಂಡು ತನ್ನ ಮನೆಯ ಕಡೆ ಓಡಿದಳು. ಎಲ್ಲರು ಅವಳ ನಡೆಯಾಂದ ಚಕಿತರಾಗಿ ತಡೆಯುವ ಪ್ರಯತ್ನ ಮಾಡಿದರೂ ನಿಲ್ಲದೆ ಮನೆಯೊಳಗೆ ಸೇರಿಕೊಂಡ ಸುಧಾ ಬಾಗಿಲನ್ನು ಹಾಕಿಕೊಂಡಳು.

ನೀತು ಮನೆ ಬಾಗಿಲನ್ನು ಬಡಿಯುತ್ತ.........ದಯವಿಟ್ಟು ಬಾಗಿಲು ತೆಗೆಯಿರಿ ಮಗುವನ್ನು ನನ್ನಿಂದ ದೂರ ಮಾಡುವ ಪ್ರಯತ್ನ ಮಾಡಬೇಡಿ ಮಗುವಿಲ್ಲದೆ ನಾನು ಬದುಕಿರಲಾರೆ ಸ್ವಲ್ಪ ಅರ್ಥ ಮಾಡಿಕೊಳ್ಳಿ ಪ್ಲೀಸ್ ಎಂದು ಅಳತೊಡಗಿದಳು. ಅವಳ ಅಳುವನ್ನು ಕೇಳಿ ಬಾಗಿಲು ತೆರೆದು ಹೊರಬಂದ ಸುಧಾ......ನೋಡಿ ಈ ಮಗು ನನ್ನದು ನಾನು ಯಾರಿಗೂ ಕೊಡುವುದಿಲ್ಲ . ನಿಮಗೆ ದತ್ತು ಪಡೆಯುವ ಮನಸ್ಸಿದ್ದರೆ ಆಶ್ರಮದಲ್ಲಿ ಇನ್ನೂ ೧೭೫ ಜನ ಮಕ್ಕಳಿದ್ದಾರೆ ಅವರಲ್ಲಿ ಯಾರನ್ನಾದರೂ ದತ್ತು ತೆಗೆದುಕೊಳ್ಳಿ ಈ ಮಗುವೇ ನಿಮಗೇಕೆ ಬೇಕು ? ನೀತು ಅವಳ ಮಾತಿಗೇನೂ ಉತ್ತರಿಸದೆ ಸುತ್ತ ಯಾರಿದ್ದಾರೆಂದೂ ಯೋಚಿಸದೆ ನೇರವಾಗಿ ಸುಧಾ ಕಾಲನ್ನಿಡಿದು ಈ ಮಗುವನ್ನೇ ತನಗೆ ನೀಡುವಂತೆ ಅಂಗಾಲಾಚಿದಳು. ನೀತು ತನ್ನ ಕಾಲನ್ನಿಡಿದಿದ್ದನ್ನು ಕಂಡು ಸುಧಾಳಿಗೆ ಆಶ್ಚರ್ಯವಾಗಿ ಹಿಂದೆ ಸರಿಯುವ ಪ್ರಯತ್ನ ಮಾಡಿದರೆ ನೀತು ಅವಳ ಕಾಲನ್ನು ಗಟ್ಟಿಯಾಗಿ ಹಿಡಿದಿದ್ದಳು. ಹರೀಶ ಹೆಂಡತಿಯ ಬಳಿ ಬಂದು ಅವಳನ್ನೆತ್ತಿ ಸಮಾಧಾನಪಡಿಸಲು ಪ್ರಯತ್ನಿಸಿದಾಗ ನೀತು ಗಂಡನನ್ನು ತಬ್ಬಿಕೊಂಡು.........ನೀವಾದರೂ ಹೇಳಿ ಆ ಮಗು ನನ್ನ ಹೃದಯದ ಒಂದು ಭಾಗವಲ್ಲ ನನ್ನಿಡೀ ಹೃದಯವೇ ಆ ಮಗುವಾಗಿ ಹೋಗಿದೆ. ನನಗೆ ಕೊಡಲಿಕ್ಕೆ ಹೇಳಿರಿ.

ನೀತು ಸ್ಥಿತಿಯನ್ನು ಎಲ್ಲರ ಕಣ್ಣಿನಲ್ಲೂ ನೀರು ಜಿನುಗಿದರೆ ಮಾನೇಜರ್ ಹೆಂಡತಿ ಮುಂದೆ ನಿಂತು........... ..............ಸುಧಾ ಏನು ಮಾಡ್ತಿದ್ದೀಯಾ ? ನಾವು ಹಾಗೆಲ್ಲ ಮಗುವನ್ನು ದತ್ತು ಪಡೆಯಲು ಬಂದಿರುವವರಿಗೆ ಮಗುವನ್ನು ಕೊಡುವುದಿಲ್ಲವೆಂದು ಹೇಳಬಾರದು. ಈ ವಿಷಯ ಯಜಮಾನರಿಗೆ ಗೊತ್ತಾದರೆ ಅವರಿಗೆಷ್ಟು ಬೇಸರವಾಗುವುದಿಲ್ಲ . ಈ ಮಗು ಆಶ್ರಮದಲ್ಲಿ ಬೆಳೆದು ದೊಡ್ಡವಳಾಗುವುದಕ್ಕಿಂತ ಇಂತಹ ಒಳ್ಳೆ ಮನಸ್ಸಿನ ಸದ್ಗುಣ ವಿದ್ಯಾವಂತ ಕುಟುಂಬದ ಮಗಳಾಗಿ ಬೆಳೆದರೆ ಅವಳ ಭವಿಷ್ಯವೂ ಉಜ್ವಲವಾಗಿರುತ್ತದೆ. ನೀನು ಹೀಗೆ ಮಾತನಾಡುತ್ತಿರುವುದು ಸ್ವಲ್ಪವೂ ಸರಿಯಿಲ್ಲ . ಮಗುವಿನ ಬಗ್ಗೆ ನಿನಗೆ ಪ್ರೀತಿ ಅಕ್ಕರೆಯಿದೆ ಅದನ್ನು ನಾನೂ ಒಪ್ಪಿಕೊಳ್ತೀನಿ ಹಾಗೇ ಇಲ್ಲಿರುವ ಪ್ರತೀ ಮಕ್ಕಳ ಮೇಲೂ ನಿನಗೆ ಮಮಕಾರವಿದೆ. ಮಕ್ಕಳನ್ನು ದತ್ತು ಪಡೆದುಕೊಳ್ಳಲು ಬಂದವರೆಲ್ಲರನ್ನೂ ನೀನು ಹೀಗೇ ಕಳಿಸಿದ್ದೀಯಾ ಇಲ್ಲ ತಾನೇ. ಪ್ರತಿಯೊಂದು ಮಗುವಿಗೆ ಒಳ್ಳೆಯದಾಗಲೆಂದು ಹಾರೈಸುತ್ತ ಅವರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷವು ಸಿಗಲೆಂದು ನೀನು ಆಶೀರ್ವಧಿಸಿ ತಾನೇ ಬೀಳ್ಕೊಡುವುದು. ಹಾಗೆಯೇ ಈ ಮಗುವಿನ ಜೀವದಲ್ಲಿಯೂ ಸುಖ ಸಂತಸ ತುಂಬಿರಲಿ ಎಂದು ಹಾರೈಸಿ ಅವರಿಗೆ ದತ್ತು ತೆಗೆದುಕೊಳ್ಳಲು ಅವಕಾಶ ನೀಡು. ಆಶ್ರಮದ ಯಜಮಾನರು ನಾವಿಬ್ಬರು ಎಂತಹ ದನನೀಯ ಪರಿಸ್ಥಿತಿಯಲ್ಲಿ ಇದ್ದಾಗ ನಮಗೆ ಸಹಾಯ ಹಸ್ತ ನೀಡಿದರೆಂಬ ವಿಷಯ ನಿನಗಾಗಲೇ ಮರೆತು ಹೋಯಿತಾ ? ಅವರು ಬಂದಾಗ ಹೀಗೇಕೆ ಮಾಡಿದೆ ಎಂದು ಕೇಳುತ್ತಾರೆ ಆಗೇನು ಉತ್ತರ ಕೊಡುವೆ ? ಪ್ರತೀ ಮಗುವಿನ ಭವಿಷ್ಯದ ಬಗ್ಗೆ ಯಜಮಾನರ ಕುಟುಂಬದವರೆಲ್ಲರೂ ಎಷ್ಟೊಂದು ಕಾಳಜಿ ವಹಿಸುತ್ತಾರೆಂದು ನನಗಿಂತ ಚೆನ್ನಾಗಿ ನಿನಗೇ ಗೊತ್ತಿದೆ ಅಲ್ಲವಾ. ಅವರಿಗೇನಾದರೂ ನೀನು ಮಗು ದತ್ತು ಪಡೆದುಕೊಳ್ಳಲು ಬಂದವಿರಿಗೆ ನಿರಾಕರಿಸಿ ಕಳಿಸಿರುವ ವಿಷಯ ತಿಳಿದರೆ ಮೊದಲು ನಮ್ಮಿಬ್ಬರನ್ನೇ ಇಲ್ಲಿಂದ ಆಚೆ ಓಡಿಸುತ್ತಾರೆ. ಆಗ ನೀನೇ ಯೋಚಿಸು ಆಮ್ರದಿಂದ ಇಲ್ಲಿರುವ ಮಕ್ಕಳಿಂದ ದೂರವಾಗಿ ನಿನಗೆ ಬದುಕಲು ಸಾಧ್ಯವಾ ? ಇಲ್ಲಾ ತಾನೇ. ಅದಕ್ಕೆ ಇವರಿಗೆ ಅಡ್ಡಿಪಡಿಸುವ ಬದಲು ಒಳ್ಳೆ ಮನಸ್ಸಿನಿಂದ ಮಗುವನ್ನು ಕಳುಹಿಸಿಕೊಡು. ಒಮ್ಮೆ ಅವರನ್ನೇ ನೋಡು ಅವರ ವಿಧ್ಯಾರ್ಹತೆ ಅಂತಸ್ಥೇನು ನಮ್ಮಿಬ್ಬರ ಯೋಗ್ಯತೆ ಏನು ? ಕೇವಲ ಮಗು ಮೇಲಿರುವ ಪ್ರೀತಿಗೋಸ್ಕರ ಅವರು ನಿನ್ನ ಕಾಲಿಗೆ ಬೀಳುವುದಕ್ಕೂ ಕೂಡ ಹಿಂದೆ ಮುಂದೆ ಯೋಚಿಸಲಿಲ್ಲ . ಆ ಮಗುವಿಗೂ ನಿನಗಿಂತ ಅವರ ಮಡಿಲಿನಲ್ಲಿ ಇರುವುದಕ್ಕಾಗಿ ಹಂಬಲಿಸುತ್ತದೆ ಎಂಬ ವಿಷಯ ಕೂಡ ನಿನಗೆ ಚೆನ್ನಾಗಿ ತಿಳಿದಿದೆ. ಈಗಿನ್ನೇನೂ ಮಾತನಾಡದೆ ಮಗುವನ್ನು ಅವರಿಗೊಪ್ಪಿಸು ಅಷ್ಟೆ .

ಗಂಡನ ಮಾತನ್ನು ಕೇಳಿ ಸುಧಾ ನೀತುವಿನ ಕಡೆ ನೋಡಿದಾಗ ಅವಳು ಕಂಬನಿ ಸುರಿಸುತ್ತ ಕೈ ಮುಗಿದು ಅವಳನ್ನು ಆಂಗಾಲಾಚುತ್ತ ಗಂಡನ ಆಸರೆಯಲ್ಲಿ ನಿಂತಿದ್ದರೆ ಅವಳು ಅಳುತ್ತಿರುವುದನ್ನು ನೋಡಿ ಮಗು ತಾನೂ ಕಡ ಅಶ್ರುತರ್ಪಣ ನೀಡುತ್ತಿತ್ತು . ನೀತು ಮಗುವನ್ನು ನೀತುವಿಗೊಪ್ಪಿಸಿ ಅವಳ ಕಾಲಿಗೆ ಬಿದ್ದು ........ .......ಮೇಡಂ ಈ ಮಗುವಿನ ಮೇಲಿನ ಮೋಹದಿಂದಾಗಿ ನಾನು ಹಾಗೆ ವರ್ತಿಸಿಬಿಟ್ಟೆ . ಈ ಮಗು ನನ್ನನ್ನು ಬಿಟ್ಟು ಬೇರ್ಯಾರ ಬಳಿ ಹೋಗದಿದ್ದ ಕಾರಣ ಮಗುವಿನ ಮೇಲೆ ನನಗೊಬ್ಬಳಿಗೇ ಹಕ್ಕಿರುವುದೆಂದು ನಾನು ತಿಳಿದಿದ್ದೆ ಆದರೆ ಆಶ್ರಮದಲ್ಲಿರುವ ಪ್ರತೀ ಮಕ್ಕಳೂ ನನ್ನ ಮಕ್ಕಳು ಎಂಬ ವಿಷಯವನ್ನು ಮರೆತಿದ್ದೆ ನೀವು ನಾ ಮಾಡಿದ ತಪ್ಪನ್ನು ದಯವಿಟ್ಟು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತ ಪಶ್ಚಾತ್ತಾಪಪಟ್ಟಳು. ನೀತು ಅವಳಿಗೆ ಎದ್ದೇಳುವಂತೇಳಿ ಅವಳ ಕಣ್ಣನ್ನೊರೆಸಿ.......ನನಗೂ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತೆ ಆದರೆ ಈ ಮಗುವಿಲ್ಲದೆ ನಾನು ಬದುಕಿರಲಾರೆ. ನಾವು ಈ ಊರಿನಲ್ಲಿ ವಾಸಿಸುವುದಿಲ್ಲ ಆದರೆ ನಮಗೆ ಇಲ್ಲಿ ಕೂಡ ಮನೆಯಿದೆ ಆಗಾಗ ಬರುತ್ತಿರುತ್ತೇವೆ. ಈ ಊರಿಗೆ ಬಂದಾಗಲೆಲ್ಲಾ ನನ್ನೀ ಮುದ್ದು ಕಂದಮ್ಮನನ್ನು ನಿಮ್ಮ ಹತ್ತಿರ ಖಂಡಿತವಾಗಿ ಕರೆದುಕೊಂಡು ಬರುವೆ ಎಂದಳು. ನೀತು ತೋಳಿನಲ್ಲಿ ಸೇರಿಕೊಂಡಿದ್ದ ಮಗು ತನ್ನ ಅಳುವನ್ನು ನಿಲ್ಲಿಸಿ ಅವಳ ಮುಖ ಸವರುತ್ತ ಕಿಲಕಿಲನೆ ನಗುತ್ತಿತ್ತು . ಸುಧಾಳ ಕಾಲನ್ನಿಡಿದು ನೀತು ತನಗೆ ಮಗು ನೀಡುವಂತೆ ಬೇಡಿಕೊಳ್ಳುವುದನ್ನು ನೋಡಿದ್ದ ಅವಳ ಕುಟುಂಬದವರಿಗೆ ಮಗುವಿನ ಬಗ್ಗೆ ನೀತುವಿನ ಹೃದಯದಲ್ಲಿ ಅಡಗಿರುವ ಪ್ರೀತಿ ಮತ್ತು ಸಮರ್ಪಣಾ ಭಾವನೆಯನ್ನು ಕಂಡು ಕಣ್ಣೀರು ಸುರಿಸಿದ್ದರೆ ಪ್ರತೀ ಘಟನೆಗಳಿಗೂ ಸಾಕ್ಷಿಯಾಗಿದ್ದ ರಜನಿಯ ಮನಸ್ಸಿನಲ್ಲಿಯೂ ನೀತು ಬಗೆಗಿನ ಗೌರವ ಹೆಚ್ಚಾಗಿತ್ತು .

No comments:

Post a Comment