Total Pageviews

Wednesday, 17 April 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 59

ಮಂಗಳವಾರ ಬೆಳಿಗ್ಗೆ 5 ಕ್ಕೇ ಎದ್ದ ನೀತು ಮೊದಲಿಗೆ ತಾನು ಫ್ರೆಶಾಗಿ ಮಗಳನ್ನು ಕೂಡ ಪೂತುಣಿಸುತ್ತ ಏಬ್ಬಿಸಿ ಅವಳೊಂದಿಗೇ ಸ್ನಾನ ಮಾಡಿ ಅಮ್ಮ ಮಗಳಿಬ್ಬರೂ ರೆಡಿಯಾಗಿ ಮನೆಯಲ್ಲಿರುವ ದೇವರ ಗುಡಿಗೆ ಬಂದಾಗ ರಜನಿ ಆಗಲೇ ಸ್ನಾನ ಮಾಡಿಕೊಂಡು ಪೂಜೆಯ ತಯಾರಿ ಮಾಡುತ್ತಿದ್ದಳು. ನೀತು ಮಗಳನ್ನು ಮಡಿಲಿನಲ್ಲಿ ಕೂರಿಸಿಕೊಂಡು ರಜನಿಯ ಸಹಾಯದಿಂದ ಒಂಬತ್ತು ದಿನಗಳ ದೇವಿ ಅನುಷ್ಟಾನದ ಪೂಜೆ ಪ್ರಾರಂಭಿಸಿದಳು. ಹರೀಶ ಕೂಡ ಡ್ರೈವಿಂಗ್ ಕ್ಲಾಸಿಗೆ ಹೊರಟಾಗ ಹೆಂಡತಿ ಮಗಳು ಮತ್ತು ರಜನಿ ಪೂಜೆ ಮಾಡುತ್ತಿರುವುದನ್ನು ಕಂಡು ಅವರಿಗೆ ಡಿಸ್ಟರ್ಬ್ ಮಾಡದೆಯೇ ಹೋಗುತ್ತಿರುವುದನ್ನು ನೋಡಿ ಅಮ್ಮನ ಮಡಿಲಿನಲ್ಲಿ ಕುಳಿತಿದ್ದ ನಿಶಾ ಅಪ್ಪನಿಗೆ ಟಾಟಾ ಮಾಡುತ್ತಿದ್ದಳು. 

ನಿಶಾ ಇಂದು ಬಹು ಬೇಗನೆ ಎದ್ದಿದ್ದರಿಂದ ನಿದ್ರೆಯು ಪೂರ್ತಿಯಾಗದೆ ಅಮ್ಮನ ಮಡಿಲಿನಲ್ಲಿ ಕುಳಿತು ಆಕಳಿಸುತ್ತಿರುವುದನ್ನು ಕಂಡು ಹರೀಶನಿಗೆ ಸ್ವಲ್ಪ ಬೇಸರವಾದರೂ ಏನೂ ಹೇಳದೆಯೇ ಹೊರಟನು. ಒಂದು ಘಂಟೆಗಳ ಕಾಲ ನೀತು ಮಗಳ ಜೊತೆಯಲ್ಲಿ ಸ್ವಾಮೀಜಿ ಹೇಳಿಕೊಟ್ಟಂತೆ ಪೂಜೆ ನೆರವೇರಿಸಿ ಆರತಿ ಮಾಡುವಷ್ಟರಲ್ಲಿ ಹರೀಶ ಕೂಡ ಮರಳಿ ಬಂದಿದ್ದನು. ರಜನಿ ಮೂವರಿಗೂ ಕಾಫಿ ನಿಶಾಳಿಗೆ ಕಾಂಪ್ಲಾನ್ ಮತ್ತು ಮಕ್ಕಳಿಬ್ಬರಿಗೂ ಹಾರ್ಲಿಕ್ಸ್ ತಂದು ಕೊಟ್ಟಾಗ ನಿಶಾ ಅಪ್ಪನ ತೊಡೆಯನ್ನೇರಿಕೊಂಡು ಅವನ ಕೈನಿಂದಲೇ ಕಾಂಪ್ಲಾನ್ ಕುಡಿದು ಸೋಫಾ ಮೇಲೇ ಪುನಃ ನಿದ್ರೆಗೆ ಜಾರಿಕೊಂಡಳು. 

ಹರೀಶ ಮಕ್ಕಳಿಬ್ಬರ ಜೊತೆ ತಿಂಡಿ ಸೇವಿಸಿ ಶಾಲೆಗೆ ಹೊರಡುವ ಮುನ್ನ ಮಲಗಿದ್ದ ಮಗಳ ಕೆನ್ನೆ ಸವರಿ........ನೀತು ಪ್ರತಿದಿನವೂ ನನ್ನ ಮಗಳು ಬೆಳಿಗ್ಗೆ ಬೇಗ ಏಳಬೇಕೇನು ನೋಡು ಪಾಪ ನಮಗೆ ಟಾಟಾ ಮಾಡುತ್ತ ಬೀಳ್ಕೊಡುತ್ತಿದ್ದವಳು ಆಲಸ್ಯದಿಂದ ಮಲಗಿಕೊಂಡಿದ್ದಾಳೆ. ನೀತು.......ಇಲ್ಲಾರಿ ಇವತ್ತು ಮೊದಲನೇ ದಿನವಾದ್ದರಿಂದ ಸ್ವಾಮೀಜಿಯವರು ಇವಳಿಂದಲೇ ಪೂಜೆ ಪ್ರಾರಂಭಿಸುವಂತೆ ಹೇಳಿದ್ದ ಕಾರಣ ಏಬ್ಬಿಸಿದ್ದೆ ನಾಳೆಯಿಂದ ನಾನೊಬ್ಬಳೇ ಏಳುವುದು. ರೀ ಸಂಜೆ ನಾವು ಪುರೋಹಿತರ ಮನೆಗೆ ಹೋಗಿ ಬರೋಣ ನೀವು ಟ್ಯೂಶನ್ನಿನ್ನಿಂದ ಸ್ವಲ್ಪ ಬೇಗ ಬರುವ ಪ್ರಯತ್ನ ಮಾಡಿ ಎಂದಾಗ ಹರೀಶ ಕೂಡ ಸಮ್ಮತಿಸಿ ತೆರಳಿದನು.

ಸಂಜೆ ಹರೀಶ ಟ್ಯೂಶನ್ ಮುಗಿಸಿ 7 ಕ್ಕೇ ಬಂದಾಗ ಗಂಡ ಹೆಂಡತಿ ಇಬ್ಬರೂ ಪುರೋಹಿತರ ಮನೆಗೆಂದು ಹೊರಟ ಸಮಯ ನಿಶಾ ತಾನೂ ಬರುವುದಾಗಿ ಓಡೋಡಿ ಬಂದರೆ ಗಂಡನಿಗಿಂತ ಮೊದಲೇ ಮಗಳನ್ನು ಎತ್ತಿಕೊಂಡ ನೀತು ಅವಳಿಗೆ ಅಣ್ಣಂದಿರ ಜೊತೆಯಲ್ಲಿ ಆಟವಾಡುತ್ತಿರುವಂತೇಳಿ ಓಪ್ಪಿಸಿದಳು. ಪೂಜೆಯ ಬಗ್ಗೆ ಪುರೋಹಿತರಲ್ಲಿ ಮಾತನಾಡಿ ಪೂಜೆಗೆ ಬೇಕಾದ ಸಾಮಾಗ್ರಿಗಳನ್ನೆಲ್ಲಾ ಅವರಿಗೆ ತರುವಂತೇಳಿ ಹಣ ನೀಡಿ ಪೂಜೆ ಸಂಜೆ 6 ವರೆಗೆಂದು ನಿಗದಿ ಮಾಡಿಕೊಂಡು ಚಿನ್ನದಂಗಡಿಗೆ ತೆರಳಿ 12 ಲಕ್ಷ್ಮಿ ವಿಗ್ರಹಗಳಿಗಾಗಿ ಆರ್ಡರ್ ನೀಡಿದರು. ನೀತು ಗಂಡನ ಜೊತೆ ಸ್ವಲ್ಪ ಮಾತನಾಡುವುದಿದೆ ಎಂದು ಹತ್ತಿರದ ಪಾರ್ಕಿಗೆ ಅವನನ್ನ ಕರೆದೊಯ್ದು ಪೂಜೆಗೆ ಮಾಡುತ್ತಿರುವ ಅನುಷ್ಟಾನ ಮತ್ತು ಒಪ್ಪೊತ್ತಿನ ಆಹಾರ ಸೇವನೆ ಬಗ್ಗೆ ತಿಳಿಸಿದಳು. ಹರೀಶ ತಾನೂ ಕೂಡ ಮಗಳಿಗಾಗಿ ಒಪ್ಪೊತ್ತಿನ ಆಹಾರ ಸೇವಿಸುವ ಬಗ್ಗೆ ನೀತು ಅವನನ್ನು ಮಾಡದಂತೆ ಹೇಗೋ ಒಪ್ಪಿಸಿದಳು.

ನೀತು ದೀರ್ಘವಾಗಿ ನಿಟ್ಟುಸಿರನ್ನು ಬಿಟ್ಟು ತನ್ನ ಆತ್ಮೀಯ ಗೆಳತಿ ಶೀಲಾಳ ಮನಸ್ಸಿನಲ್ಲಿರುವ ಆತಂಕದ ಬಗ್ಗೆ ಗಂಡನಿಗೆ ವಿವರಿಸಿ ಅದಕ್ಕೆ ತಾನು ಸೂಚಿಸಿದ ಪರಿಹಾರದ ಬಗ್ಗೆಯೂ ಅವನಿಗೆ ತಿಳಿಸುತ್ತ ನನಗೋಸ್ಕರ ಅಥವ ಹುಟ್ಟುವ ಆ ಮಗುವಿಗೋಸ್ಕರವಾದರೂ ನೀವು ಶೀಲಾಳನ್ನು ಹೆಂಡತಿಯಾಗಿ ಸ್ವೀಕರಿಸಿರಲೇಬೇಕು ಎಂದು ಬೇಡಿಕೊಂಡಳು. ಹರೀಶ ಹೆಂಡತಿಯನ್ನು ಅಚ್ಚರಿಯಿಂದ ನೋಡುತ್ತ........ನೀತು ನೀನೇನು ಹೇಳ್ತಾ ಇದ್ದೀಯಾ ಅಂತ ಗೊತ್ತು ತಾನೆ. ನನಗೂ ಶೀಲಾಳ ಬಗ್ಗೆ ಸ್ನೇಹ ಪ್ರೀತಿ ಇದೆ ಆದರೆ ಅವಳನ್ನು ನಿನ್ನ ಸ್ಥಾನದಲ್ಲಿ ನೋಡುವುದು ನನ್ನಿಂದ ಅಸಾಧ್ಯವಾದ ಮಾತೆಂದು ತಿಳಿದಿದ್ದರೂ ನೀನು ಈ ನಿರ್ಧಾರವನ್ನೇಕೆ ತಗೊಂಡೆ ?

ನೀತು ಗಂಡನ ಕೈ ಹಿಡಿದುಕೊಂಡು.......ರೀ ನಾನು ತುಂಬ ಯೋಚಿಸಿಯೇ ಈ ನಿರ್ಧಾರಕ್ಕೆ ಬಂದಿರುವುದು. ಮನೆಗೆ ಬಂದಿದ್ದ ಸ್ವಾಮೀಜಿಗಳೂ ಕೂಡ ನಾನು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ ಶೀಲಾಳಿಗೆ ಮುಂದಿನ ದಿನಗಳಲ್ಲಿ ಎದುರಾಗುವ ಕಷ್ಟದ ಸಮಯದಲ್ಲಿ ನಾವಿಬ್ಬರೇ ಅವಳಿಗೆ ಆಸರೆ ಎಂದು ಹೇಳಿದರು. ನಿಮ್ಮ ಜೀವನದಲ್ಲಿ ನನ್ನ ಸ್ಥಾನವನ್ನು ಯಾರೂ ಸಹ ಅಲಂಕರಿಸಲಾಗದು ಎಂದು ಶೀಲಾಳಿಗೂ ಗೊತ್ತಿದೆ ಆದರೆ ಅವಳ ಬಗ್ಗೆ ನಿಮ್ಮ ಹೃದಯದಲ್ಲಿಯೂ ಸ್ವಲ್ಪ ಜಾಗವಿರುವ ಬಗ್ಗೆ ನನಗೆ ತಿಳಿದಿದೆ. ಪ್ರಪಂಚದಲ್ಲಿ ಶೀಲಾ ಎಲ್ಲರಿಗಿಂತಲೂ ಜಾಸ್ತಿ ನನ್ನ ಮೇಲೇ ನಂಬಿಕೆ ಇಟ್ಟುಕೊಂಡಿದ್ದಾಳೆಂದು ಸ್ವಾಮೀಜಿಯವರು ಕೂಡ ಹೇಳಿದರು ಅದಕ್ಕೆ ನೆನ್ನೆಯಿಂದ ಅವಳಿಗೇನು ಅನಾಹುತ ಏದುರಾಗಲಿದೆ ಎಂದು ಯೋಚಿಸುತ್ತ ನನಗಂತು ತುಂಬ ಆತಂಕವಾಗಿದೆ. ರೀ ದಯವಿಟ್ಟು ಒಪ್ಪಿಕೊಳ್ಳಿ ಹುಟ್ಟುವ ಮಗು ಅನೈತಿಕ ಸಂಬಂಧದ ಫಲವೆಂದು ಅವಳಿಗೆ ಅನಿಸುವುದು ಬೇಡ.

ಹರೀಶ ಹೆಂಡತಿಯನ್ನು ತಬ್ಬಿಕೊಂಡು........ಆ ಮಗು ನನ್ನದು ನೀತು ಅದೇಗೆ ಅನೈತಿಕವಾಗುತ್ತೆ ಶೀಲಾಳ ಮನಸ್ಸಿನಲ್ಲಿರುವ ಆತಂಕ ನಿವಾರಿಸಲು ನಾನವಳ ಕತ್ತಿಗೆ ತಾಳಿ ಕಟ್ಟಲು ಮನಃಪೂರ್ವಕವಾಗಿ ಸಿದ್ದನಿರುವೆ. ಅವಳಿಗೆ ಯಾವುದೇ ರೀತಿ ಕಷ್ಟವೂ ಎದುರಾಗದಂತೆ ನಾವಿಬ್ಬರೂ ಸೇರಿ ನೋಡಿಕೊಳ್ಳೋಣ ಮದುವೆಯು ಯಾವಾಗ ? ಎಲ್ಲಿ ? ಹೇಗೆ ? ಎಂಬುದನ್ನು ನೀನೇ ನಿರ್ಧರಿಸು.

ನೀತು ಗಂಡನ ಕೆನ್ನೆಗೆ ಮುತ್ತಿಟ್ಟು.........ನಾನಾಗಲೇ ಯೋಚಿಸಿರುವೆ ರಜನಿಯೂ ದೀಪಾವಳಿ ಮುಗಿಯುವ ತನಕ ಇಲ್ಲಿಯೇ ಇರುತ್ತಾಳೆ. ಶನಿವಾರ ಅಶೋಕ ಮತ್ತು ರಶ್ಮಿ ಬರುವಾಗ ಅವರೊಂದಿಗೆ ಶೀಲಾಳನ್ನು ಕೂಡ ಕರೆತರಲು ಹೇಳಿರುವೆ ಏಕೆಂದರೆ ರವಿ ಅಣ್ಣನಿಗೆ ಆಫೀಸಿನಲ್ಲಿ ತುಂಬ ಕೆಲಸವಿದೆಯಂತೆ. ಸೋಮವಾರದ ದಿನ xxxx ಊರಿನ ಹೊರಗಿರುವ ವೆಂಕಟೇಶ್ವರನ ದೇವಸ್ಥಾನದಲ್ಲಿ ನಿಮ್ಮಿಬ್ಬರಿಗೂ ಮದುವೆ ಮಾಡಿಸಲು ನಿರ್ಧರಿಸಿರುವೆ ಹಾಗಾಗಿ ನೀವು ಆ ದಿನ ಶಾಲೆಗೆ ರಜೆ ತೆಗೆದುಕೊಳ್ಳಿ ಸರಿಯಾ. ಈಗ ನಡೆಯಿರಿ ಘಂಟೆ 9 ಆಗಿ ಹೋಗಿದೆ ಮಗಳು ಮಲಗಿಬಿಟ್ಟಿರುತ್ತಾಳೋ ಏನೋ ಎಂದು ಗಂಡನನ್ನು ಕರೆದುಕೊಂಡು ಹೊರಟಳು.

ಮುಂದಿನ ಮೂರು ದಿನಗಳ ಕಾಲ ನೀತು ಪ್ರತಿದಿನ ಪೂಜಾ ಕಾರ್ಯದಲ್ಲಿ ತೊಡಗಿದ್ದರೆ ರಜನಿ ರಾತ್ರಿಯ ವೇಳೆ ಹರೀಶನಿಗೆ ಹೆಣ್ಣಿನ ಸುಖ ನೀಡುತ್ತ ಬೆಳಿಗ್ಗೆ ಅಡುಗೆ ಕೆಲಸಗಳನ್ನೂ ನೋಡಿಕೊಳ್ಳುತ್ತಿದ್ದಳು. ನಿಶಾಳ ಆಟೋಟಗಳು ದಿನ ಕಳೆದಂತೆ ಜಾಸ್ತಿಯಾಗುತ್ತಿದ್ದು ಯಾವಾಗಲೂ ಫುಲ್ ಮಸ್ತಿಯಲ್ಲೇ ಮನೆಯಲ್ಲೆಲ್ಲಾ ಓಡಾಡುತ್ತ ಎಲ್ಲರನ್ನು ಸಂತೋಷಗೊಳಿಸುತ್ತಿದ್ದಳು . ಶುಕ್ರವಾರ ರಾತ್ರಿ ಎಸೈ ಕೂಡ ಊಟಕ್ಕೆ ಜೊತೆಯಾಗಿ ನಂತರ ಮಾತನಾಡುತ್ತ ಕುಳಿತಾಗ ಹರೀಶ ಅವನಿಗೆ ಶುಕ್ರವಾರ ಪೂಜೆಯ ಸಮಯದವರೆಗೂ ಮನೆಯ ಕಡೆ ಸುಳಿಯದಂತೆ ಹೇಳಿದನು. 

ಪ್ರತಾಪ್ ಗಾಬರಿಯಿಂದ ಎಲ್ಲರ ಕಡೆ ನೋಡಿ......ಅಣ್ಣ ನನ್ನಿಂದೇನಾದರು ತಪ್ಪಾಗಿದೆಯಾ ಅದನ್ನು ಹೇಳಿ ತಕ್ಷಣ ಸರಿಪಡಿಸಿಕೊಳ್ಳುವೆ ಆದರೆ ಈ ರೀತಿ ಶಿಕ್ಷೆಯನ್ನು ಕೊಡಬೇಡಿ ಅದಕ್ಕೆ ಮೊದಲು ನಾನು ಕ್ಷಮೆ ಕೇಳಿಬಿಡುವೆ ಎಂದು ಅಣ್ಣನ ಕಾಲಿಗೆ ಬಿದ್ದನು. ಹರೀಶ ಅವನನ್ನು ಎತ್ತಿ ಕೂರಿಸುತ್ತ .........ನೀನೇನೂ ತಪ್ಪು ಮಾಡಿಲ್ಲ ಕಣೋ ಹಾಗೇ ನಾವು ನಿನಗೆ ಶಿಕ್ಷೆ ಕೂಡ ನೀಡುತ್ತಿಲ್ಲ . ನಾವೆಲ್ಲರೂ ಸೇರಿ ನಿನಗೆ ಒಂದು ಉಡುಗೊರೆ ಕೊಡಬೇಕೆಂದಿದ್ದೇವೆ ಏನು ಅಂತ ಈಗಲೇ ಕೇಳಬೇಡ ಅದು ನಿನಗೆ ತಿಳಿಯದೆ ಇದ್ದರೇ ಉತ್ತಮ. ಹಾಗಾಗಿ ಪೂಜೆ ಸಮಯದ ತನಕ ಮನೆ ಕಡೆ ಸುಳಿಯಬೇಡವೆಂದು ಹೇಳಿದ್ದು ಎಂದಾಗ ಎಸೈ ಕೂಡ ಒಪ್ಪಿಕೊಂಡನು.

ಶನಿವಾರ ಬೆಳಿಗ್ಗೆ ನಿಶಾ ಅಣ್ಣಂದಿರ ಜೊತೆ ಮನೆ ಹೊರಗಿನ ಅಂಗಳದಲ್ಲಿ ಚೆಂಡಿನ ಆಟವಾಡುತ್ತಿದ್ದಾಗ ಮನೆ ಮುಂದೆ ನಿಂತ ಕಾರಿನಿಂದಿಳಿದ ರಶ್ಮಿಯನ್ನು ನೋಡಿ ಅವಳತ್ತ ಓಡಿದಳು. ರಶ್ಮಿಯಿಂದ ಕೆಲ ಹೊತ್ತು ಮುದ್ದು ಮಾಡಿಸಿಕೊಂಡು ಅಶೋಕನ ತೋಳಿಗೇರಿ ಅವನೊಂದಿಗೆ ಸ್ವಲ್ಪ ಮಸ್ತಿ ಮಾಡಿದ ಬಳಿಕ ಶೀಲಾಳ ಎದೆಗೆ ಕಚ್ಚಿಕೊಂಡು ಬಿಟ್ಟಳು. ರಶ್ಮಿ ಅಮ್ಮನ ಬಳಿ ಹೋಗಿ.......ಅಮ್ಮ ನನ್ನನ್ನು ಮಾತ್ರ ಅಜ್ಜಿ ತಾತನ ಜೊತೆ ಕಳಿಸಿ ನೀನಿಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವೆ ಹೋಗಮ್ಮ ನಿನ್ನ ಜೊತೆ ಮಾತನಾಡುವುದಿಲ್ಲವೆಂದು ಮುಖ ಊದಿಸಿಕೊಂಡು ನಿಂತಳು.

ರಜನಿ ಮಗಳ ತಲೆ ಸವರುತ್ತ......ನನ್ನ ಮುದ್ದು ಬಂಗಾರಿಗೆ ಅಮ್ಮನ ಮೇಲೆ ಕೋಪ ಬಂದಿದೆಯಾ. ನಾನಿಲ್ಲಿ ಬಂದಿದ್ದು ಗಿರೀಶನನ್ನು ಚೆನ್ನಾಗಿ ಗಮನಿಸಿ ಅವನು ನಿನ್ನನ್ನು ಜೀವನಪೂರ್ತಿ ಚೆನ್ನಾಗಿ ನೋಡಿಕೊಳ್ಳುವನಾ ಅಂತ ತಿಳಿದುಕೊಳ್ಳಲು. ನನ್ನ ಮಗಳು ಪುಣ್ಯವಂತೆ ಒಳ್ಳೆಯ ಗಂಡನೇ ಸಿಗುತ್ತಿದ್ದಾನೆ ಎಂದಾಗ ರಶ್ಮಿ ನಾಚಿಕೆ ಮತ್ತು ಸಂತೋಷದಿಂದ ಅಮ್ಮನನ್ನು ತಬ್ಬಿಕೊಂಡಳು. ನೀತು ಇದನೆಲ್ಲಾ ನೋಡಿ ರಶ್ಮಿಯನ್ನು ಮಾತಾಡಿಸಿ ಮೊದಲು ಹೋಗಿ ಫ್ರೆಶಾಗುವಂತೆ ಕಳಿಸಿದ ಬಳಿಕ......ಏನು ತುಂಬ ಬುದ್ದಿವಂತೆ ಆಗಿ ಹೋಗಿರುವೆ ಮಗಳಿಗೆ ಸರಿಯಾಗಿ ಟೋಪಿ ಹಾಕಿದೆ ಎಂದಾಗ ರಜನಿ......ಎಲ್ಲಾ ನಿನ್ನ ಸಹವಾಸ ದೋಷ ಎಂದಾಗ ಇಬ್ಬರು ನಗಲು ಪ್ರಾರಂಭಿಸಿದರು.

ನೀತುಳಿಂದ ಪೂಜೆ ಮತ್ತು ಅದರ ಅನುಷ್ಟಾನವನ್ನು ವಿವರವಾಗಿ ಕೇಳಿ ತಿಳಿದುಕೊಂಡ ಶೀಲಾ ಗೆಳತಿಯ ಕಡೆ ನೋಡುತ್ತ........ನೀತು ನೀನಿನ್ನೂ ನನ್ನಿಂದ ಏನೋ ಮುಚ್ಚಿಡುತ್ತಿದ್ದೀಯಾ ಅಂತ ನನಗೆ ಅನ್ನಿಸುತ್ತಿದೆ ಎಂದಾಗ ನೀತು ತಡಬಡಿಸಲು ಶುರುವಾಗಿದ್ದನ್ನು ಕಂಡು ಶೀಲಾಳಿಗೆ ಅವಳ ಅನುಮಾನ ನಿಜವೆಂಬುದು ಅರ್ಥವಾಗಿ ಹೇಳುವಂತೂ ಪೀಡಿಸಿದಳು. ರಜನಿಯೇ ಗೆಳತಿಯ ಕೈ ಅದುಮೀ ಶೀಲಾಳಿಗೆ ಒಪ್ಪೊತ್ತಿನ ಬಗ್ಗೆ ತಿಳಿಸಿದಾಗ ಕೋಪಗೊಂಡ ಶೀಲಾ.........ನೀತು ನೀನು ಹೀಗೆ ಮಾಡುತ್ತೀಯಾ ಅಂತ ನಾನು ತಿಳಿದಿರಲಿಲ್ಲ . ನಿಶಾ ನಮ್ಮ ಮೂವರಿಗೂ ಮಗಳು ತಾನೇ ಹಾಗಿದ್ದ ಮೇಲೆ ನಾವೆಲ್ಲರೂ ಯಾಕೆ ಒಪ್ಪೊತ್ತುಫ ಮಾಡವುದು ಬೇಡ ಅನ್ನುತ್ತೀಯಾ ಎಂದು ಗೆಳತಿಗೆ ಬೈದಳು. ನೀತು ಏನೇನೋ ಸಮಜಾಯಿಷಿ ನೀಡಿ ಗೆಳತಿಯ ಕೋಪ ಕಡಿಮೆಗೊಳಿಸಿ ಅವಳನ್ನು ಅಪ್ಪಿಕೊಂಡಳು.

ನೀತು ಫೋನಿಗೆ ಕರೆ ಮಾಡಿದ ಅನುಷ ತಾನು ಬಸ್ ಸ್ಟಾಂಡ್ ತಲುಪಿರುವುದಾಗಿ ಮನೆಗೆ ಬರುವುದು ಹೇಗೆ ಎಂದು ಕೇಳಿದಳು. ನೀತು ಅವಳಿಗೆ ಬಸ್ ಸ್ಟಾಂಡಿನ ಎದುರಿಗೆ ಕಾಣುವ ರಾಘವೇಂದ್ರ ದೇವಸ್ಥಾನ ಮುಂದೆ ನಿಂತಿರುವಂತೆ ತಿಳಿಸಿ ತಾನು ಈಗಲೇ ಬರುವುದಾಗಿ ಹೇಳಿ ಶೀಲಾಳಿಗೆ ಅವಳ ವಿಷಯ ಪೂರ್ತಿ ಹೇಳುವಂತೆ ರಜನಿಗೆ ತಿಳಿಸಿದಳು. ಲಿವಿಂಗ್ ರೂಮಿನಲ್ಲಿ ಹರೀಶನ ಜೊತೆ ಹರಟೆ ಹೊಡೆಯುತ್ತ ಆರಾಮವಾಗಿ ಕುಳಿತಿದ್ದ ಅಶೋಕನನ್ನು ಏಬ್ಬಿಸಿಕೊಂಡು ಬಸ್ ಸ್ಟಾಂಡಿನ ಕಡೆ ಹೊರಟಳು. 

ರಾಘವೇಂದ್ರ ದೇವಸ್ಥಾನ ತಲುಪಿ ನೀತು ಫೋನ್ ಮಾಡಿದಾಗ ಏದುರಿಗೆ ನಿಂತಿದ್ದ ಯುವತಿ ಫೋನ್ ರಿಸೀವ್ ಮಾಡಿ ಮಾತನಾಡಿದ್ದನ್ನು ಕಂಡು ಅವಳ ಬಳಿ ಬಂದು ಅನುಷ ಎಂದು ಕರೆದಳು. ಪ್ರತಾಪನಂತೆಯೇ 28 ವರ್ಷದ ಸುಂದರ ಯುವತಿಯು ನೀತು ಅಕ್ಕ ಎಂದವಳನ್ನು ಅಪ್ಪಿಕೊಂಡು ಬೇಟಿಯಾದಾಗ ನೀತು ಕೂಡ ಅವಳ ತಲೆ ಸವರಿ ನಡಿ ಮನೆಗೆ ಹೋಗಿ ಮಾತನಾಡೋಣ ಎಂದಳು. ಅನುಷ ತನ್ನೊಂದಿಗೆ ತಂದಿದ್ದ ಕೆಲವು ಲಗೇಜುಗಳನ್ನು ಅಶೋಕನೇ ಕಾರಿನ ಡಿಕ್ಕಿಯಲ್ಲಿ ಇರಿಸಿದಾಗ ಅವನನ್ನು ಗೆಳತಿಯ ಯಜಮಾನರು ಆದರೆ ನನಗೂ ಆತ್ಮೀಯ ಸ್ನೇಹಿತರು ಎಂದು ಪರಿಚಯ ಮಾಡಿಸಿ ಮೂವರೂ ಮನೆಯ ಕಡೆ ಹೊರಟರು.

ನೀತು ಮನೆ ತಲುಪಿದಾಗ ಹೊರಗೆ ಕಟ್ಟಡದ ಕೆಲಸಗಾರರ ಜೊತೆ ತನ್ನದೇ ಭಾಷೆಯಲ್ಲಿ ಏನೋ ಹೇಳುತ್ತಿದ್ದ ನಿಶಾ ಅಮ್ಮನನ್ನು ನೋಡಿ ಮಮ್ಮ.....ಮಮ್ಮ ಎಂದು ಓಡಿ ಬಂದು ಅವಳಿಗೆ ನೇತಾಕಿಕೊಂಡಳು. ನೀತು ಕೆಲಸಗಾರರಿಗೆ.......ಏನು ನನ್ನ ಮಗಳು ನಿಮಗೆಲ್ಲಾ ತಲೆ ತಿನ್ನುತ್ತಿದ್ದಳಾ ಸ್ವಲ್ಪ ತರಲೆ ಆದರೆ ಇವಳಿಗೆ ಮೇಲೆ ಬರಲು ಅವಕಾಶ ನೀಡಬೇಡಿ. ಇವಳು ಅಲ್ಲಿಗೆ ಬಂದರೆ ನಿಮ್ಮ ಕೆಲಸಕ್ಕೂ ತೊಂದರೆ ಜೊತೆಗೆ ಮರಳಿನಲ್ಲಿ ಇವಳ ಆಟ ಇಟ್ಟಿಗೆ ಅದು ಇದು ಎತ್ತುತ್ತ ಪೆಟ್ಟು ಮಾಡಿಕೊಂಡಾಳು ಅಂತ. ಕೆಲಸಗಾರರು ನಗುತ್ತ.....ಇಲ್ಲಾ ಮೇಡಂ ಪುಟ್ಟಿ ತುಂಬ ಚೂಟಿ ಇದ್ದಾಳೆ. ಇವಳು ಮೇಲೆ ಬರಲು ನಾವು ಬಿಡುವುದಿಲ್ಲ ಅಕಸ್ಮಾತ್ತಾಗಿ ಇವಳು ಬಂದರೂ ನೀವು ಭಯಪಡಬೇಡಿ ಪುಟ್ಟಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ.

ಅಮ್ಮನ ತೋಳಿನಲ್ಲಿದ್ದ ನಿಶಾ ಯಾರಿದು ಹೊಸಬರು ಎಂದು ಅನುಷ ಕಡೆ ಪಿಳಿಪಿಳಿ ಅಂತ ನೋಡುತ್ತಿದ್ದರೆ ಅನುಷ ಅವಳ ಕೆನ್ನೆ ಸವರಿ ತನ್ನ ಜೊತೆ ಬರುವಂತೆ ಕರೆಯುತ್ತಿದ್ದರೂ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡ ನಿಶಾ ಬರಲ್ಲ ಎಂದು ತಲೆ ಆಳ್ಳಾಡಿಸುತ್ತ ಅವಳನ್ನೇ ನೋಡುತ್ತಿದ್ದಳು. ನೀತು ಮನೆಯೊಳಗೆ ಬಂದು ಎಲ್ಲರಿಗೆ ಅನುಷಾಳನ್ನು ಪರಿಚಯ ಮಾಡಿಸಿ ಮಕ್ಕಳ ಸ್ಟಡಿ ಟೇಬಲ್ ಇಟ್ಟಿದ್ದ ರೂಮಿನಲ್ಲಿ ಸಿಂಗಲ್ ಮಂಚವನ್ನು ಹಾಕಿಸಿದ್ದು ಅನುಷಳ ಲಗೇಜನ್ನು ಅಲ್ಲಿಯೇ ಇರಿಸಿದಳು. ಪ್ರತಿಯೊಬ್ಬರೂ ಅನುಷ ಜೊತೆ ಪ್ರೀತಿಯಿಂದ ಮಾತನಾಡುತ್ತಿದ್ದು ಅವರ ಆಪ್ಯಾಯತೆಗೆ ಅನುಷಳ ಕಣ್ಣಿನಲ್ಲಿ ನೀರೂರಿತು.

ಶೀಲಾ ಅವಳ ತಲೆ ಸವರಿ............ಯಾಕಮ್ಮ ಅಳುತ್ತಿರುವೆ ನಿನಗೆ ನಮ್ಮ ಜೊತೆ ಇರುವುದಕ್ಕೆ ಏನಾದರು ತೊಂದರೆ ಇದೆಯಾ ಎಂದಾಕ್ಷಣ ಇಲ್ಲ ಎಂದು ತಲೆ ಅಳ್ಳಾಡಿಸಿದ ಅನುಷ........ಇಲ್ಲ ನನಗಂತು ತುಂಬಾನೇ ಸಂತೋಷವೇ ಆಗಿದೆ. ಎರಡು ವರ್ಷಗಳ ಹಿಂದೆ ಅಮ್ಮ ತೀರಕೊಂಡ ಬಳಿಕ ನಾನು ಒಂಟಿಯಾಗೇ ಇದ್ದು ಈಗ ನಿಮ್ಮೆಲ್ಲರ ಆಪ್ಯಾಯತೆ ಮತ್ತು ಪ್ರೀತಿಯಿಂದ ಸಂತೋಷವಾಗಿ ಕಣ್ಣಲ್ಲಿ ನೀರೂರಿತಷ್ಟೆ . ನನಗಂತು ನಿಮ್ಮೆಲ್ಲರ ಜೊತೆ ಇರುವುದಕ್ಕೆ ಹೇಳಿಕೊಳ್ಳಲಾರದಷ್ಟು ಸಂತಸವಾಗಿದೆ.

ನೀತು ಅವಳನ್ನು ತಬ್ಬಿಕೊಂಡು.........ನಿನ್ನನ್ನು ಹೊರಗಿನವಳೆಂದು ತಿಳಿಯಬೇಡ ತಂಗಿ ತನ್ನ ಅಕ್ಕನ ಮನೆಗೆ ಬಂದಿದ್ದಾಳೆಂದು ತಿಳಿ ಆಗ ನೋಡು ಈ ಮನೆ ನಿನಗೂ ಸ್ವಂತದಂತೆಯೇ ಕಾಣಿಸುತ್ತದೆ. ದೀಪಾವಳಿ ನಂತರ ಎಲ್ಲರೂ ಅವರ ಊರಿಗೆ ಹೋಗಿ ಬಿಡುವರು ಗಂಡ ಮಕ್ಕಳು ಶಾಲಾ ಕಾಲೇಜಿಗೆ ಆಗ ಮನೆಯಲ್ಲಿಳಿವುದು ನಾನು ನನ್ನ ಚಿನ್ನಿ ಮಾತ್ರ .

ಅಮ್ಮನ ಕಾಲಿಗೆ ಒರಗಿಕೊಂಡು ಅಳುತ್ತಿದ್ದ ಅನುಷಾಳ ಕಡೆಯೇ ನೋಡುತ್ತಿದ್ದ ನಿಶಾ ಅಮ್ಮನಿಗೆ ಎತ್ತಿಕೋ ಎಂದು ಅವಳ ತೋಳಿಗೆ ಸೇರಿಕೊಂಡು ಅನುಷಾಳ ಕಣ್ಣೀರನ್ನು ಒರೆಸಿದಾಗ ಅವಳು ಮಗುವನ್ನೆತ್ತಿಕೊಂಡು ಅಪ್ಪಿ ಮುದ್ದಾಡಿದಳು. ಸಂಜೆಯವರೆಗೆ ಅನುಷ ಕೂಡ ಮನೆಯಲ್ಲಿ ಒಬ್ಬಳಾಗಿ ಬೆರೆತು ಅಡುಗೆ ಕೆಲಸದಲ್ಲೂ ಎಲ್ಲರೊಂದಿಗೆ ಕೈ ಜೋಡಿಸಿದಳು.

ರಾತ್ರಿ ಊಟವಾದ ಬಳಿಕ ಗಂಡ....ಅಶೋಕ ಮತ್ತಿಬ್ಬರು ಗಂಡು ಮಕ್ಕಳಿಗೆ ಲಿವಿಂಗ್ ಹಾಲಿನಲ್ಲಿ ಮಲಗಿರಿ ಅಂತೇಳಿ ಶೀಲಾ ಮತ್ತು ರಜನಿಯನ್ನು ಮಕ್ಕಳ ರೂಮಿಗೆ ಹೋಗಲು ನೀತು ಹೇಳಿದಳು. ಅಶೋಕ........... ನೀತು ಇದು ಸರಿಯಲ್ಲ ಪುಟ್ಟಿಯನ್ನು ನನ್ನ ಜೊತೆ ಮಲಗಿಸಿ ಹೋದರೆ ಸರಿ ಇಲ್ಲದಿದ್ದರೆ.......... ಎಂದಾಗ ಎಲ್ಲರೂ ಇವರಿಬ್ಬರ ಕಡೆಯೇ ನೋಡುತ್ತಿದ್ದರು. ನೀತು ಸೊಂಟದ ಮೇಲೆ ಕೈಯಿಟ್ಟುಕೊಂಡು ಅಶೋಕನ ಎದುರಿಗೆ ನಿಂತು........ಇಲ್ಲದಿದ್ದರೆ ಮುಂದೇನು ಮಾಡುವಿರಿ ಅಂತ ಹೇಳಲಿಲ್ಲ ಎಂದು ಕೋಪದಿಂದ ಅವನ ಕಡೆ ನೋಡಿದರೆ ತನ್ನೆದುರಿಗೆ ಸಾಕ್ಷಾತ್ ಕಾಳಿಕಾ ದೇವಿಯೇ ನಿಂತಿರುವಂತೆ ಹೆದರಿದ ಅಶೋಕ.......ಅದು ನಾನು......ಮಗುವನ್ನು ಮಲಗಿಸದಿದ್ದರೆ ನಾನು ಒಬ್ಬನೇ ಮಲಗುವೆ ಅಷ್ಟೆ .

ಮೊದಲು ಹುಲಿಯಂತೆ ಗರ್ಜಿಸಿದ ಅಶೋಕ ಈಗ ಬಾಲ ಸುಟ್ಟ ಬೆಕ್ಕಿನಂತೆ ಮುದುರಿಕೊಂಡಿರುವುದನ್ನು ಕಂಡು ಎಲ್ಲರಿಗಿಂತ ಜೋರಾಗಿ ರಜನಿಯೇ ನಗುತ್ತಿದ್ದಳು. ಅಶೋಕ ಎಲ್ಲರ ಕಡೆ ನೋಡಿ ನೀತುವಿನ ಕಡೆ ತಿರುಗಿದರೆ ಅವಳಿನ್ನೂ ಕಣ್ಣನ್ನು ಅರಳಿಸಿಕೊಂಡು ಅವನನ್ನೇ ದುರುಗುಟ್ಟಿ ನೋಡುತ್ತಿರುವುದನ್ನು ಕಂಡು ತಕ್ಷಣವೇ ರಗ್ಗನ್ನು ಮುಖದ ಮೇಲೆಳೆದುಕೊಂಡು ಮಲಗಿಬಿಟ್ಟನು. 

ಹರೀಶ ನಗುತ್ತ.............ಅಶೋಕ ನನ್ನ ಹೆಂಡತಿ ಎದುರು ಯಾರೇ ನಿಲ್ಲಲು ಭಯಪಡುವಾಗ ನೀನ್ಯಾಕೆ ಸುಮ್ಮನೆ ಸಿಂಹಿಣಿಗೆ ಕೋಪ ತರಿಸುತ್ತೀಯೆ ಎಂದ ಗಂಡನ ಕಡೆ ನೀತುವಿನ ಕೆಂಗಣ್ಣಿನ ದೃಷ್ಟಿ ಬೀಳುತ್ತಿದ್ದಂತೆ ಅವನು ಕೂಡ ಗಪ್ ಚಿಪ್ ಆಗಿಹೋದನು. ಮಕ್ಕಳಿಬ್ಬರು ಮೊದಲೇ ಅಮ್ಮನಿಗೆ ಹೆದರಿಕೊಂಡು ಮುಸುಗು ಹಾಕಿ ಮಲಗಿದ್ದರೆ ನೀತು ಮಗಳ ಜೊತೆಗೆ ರಶ್ಮಿ ಮತ್ತು ಅನುಷಾಳನ್ನು ತನ್ನ ರೂಮಿಗೆ ಕರೆದೊಯ್ದು ಮಲಗುತ್ತ ಅನುಷ ಜೊತೆ ಔಪಚಾರಿಕವಾಗಿ ಕೆಲ ಹೊತ್ತು ಮಾತನಾಡುತ್ತ ಮಲಗಿದಳು.

ಬೆಳಿಗ್ಗೆ ತಿಂಡಿ ಸಮಯದಲ್ಲಿ ಬಂದ ಆರ್ಕಿಟೆಕ್ಟ್ ರಮೇಶ ಎಲ್ಲರಿಗೂ ವಿಶ್ ಮಾಡಿ ಅಶೋಕ ಮತ್ತು ಹರೀಶನ ಜೊತೆ ಮಾತನಾಡುತ್ತ ಈ ಬುಧವಾರ ಮೊದಲನೇ ಮಹಡಿಗೆ ತಾರಸಿ ಹಾಕಿಸೋಣವಾ ಎಂದು ಕೇಳಿದನು. ಹರೀಶ ಹೆಂಡತಿಯನ್ನು ಕರೆದು ವಿಷಯ ತಿಳಿದಾಗವಳು..........ಹಾಕಿಸೋಣ ಅಂದು ದಿನ ಕೂಡ ಚೆನ್ನಾಗಿದೆ ಆದರೆ ನೀವು ಕಾಂಕ್ರೀಟನ್ನು ಇಲ್ಲೇ ಕಲಸುವಿರೋ ಅಥವ ಅಥವ ರೆಡಿ ಮಿಕ್ಸ್ ಕಾಂಕ್ರೀಟೇ ತರಿಸುವಿರೋ ಎಂದು ಕೇಳಿದ್ದಕ್ಕೆ ರಮೇಶ.....ಇಲ್ಲ ಮೇಡಂ ಲಾರಿಗಳಿಂದ ನೇರವಾಗಿ ತರಿಸುವೆ ಎಂದನು. 

ನೀತು ಗಂಡನಿಗೆ ..........ರೀ ನಿಮ್ಮ ತಮ್ಮನಿಗೆ ಫೋನ್ ಮಾಡಿ ಅಡುಗೆಯವರ ಫೋನ್ ನಂ.. ಪಡೆದುಕೊಂಡು ಬುಧವಾರಕ್ಕೆ ತಾರಸಿಗೆ ಬರುವ ಎಲ್ಲಾ ಕಾರ್ಮಿಕರು ಮತ್ತು ಮನೆಯಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಿ ಕಳಿಸುವಂತೆ ಹೇಳಿಬಿಡಿ ಅದರ ಜೊತೆಗೆ ಸ್ವೀಟ್ ಕೂಡ. ಅಶೋಕ ತಿಂಡಿ ಮುಗಿಸಿಕೊಂಡು ಫ್ಯಾಕ್ಟರಿ ಕಾಯನಿಮಿತ್ತವಾಗಿ ಊರಿಗೆ ಮರಳಿ ಹೊರಟಾಗ ನೀತು ಅವನೊಂದಿಗೆ ಹೊರಬಂದು........ರೀ ಬುಧವಾರ ಸಂಜೆಯೇ ಬರಲು ಪ್ರಯತ್ನ ಮಾಡಿ ಮಗಳ ಮತ್ತು ಸೊಸೆಯಾಗುವವಳ ಜೊತೆ ಇದು ನಮಗೆ ಮೊದಲ ದೀಪಾವಳಿ ಜೊತೆಗೆ ರವಿ ಅಣ್ಣನನ್ನು ಕರೆದುಕೊಂಡು ಬನ್ನಿ ಪಾಪ ಅವರು ಬಸ್ಸಿನಲ್ಲಿ ಬರಬೇಕಾಗುತ್ತೆ ಎಂದೇಳಿ ಬೀಳ್ಕೊಟ್ಟಳು.

ಅನುಷ ಜೊತೆ ರೂಮಿನಲ್ಲಿ ಕುಳಿತಿದ್ದ ನೀತು ಅವಳ ಮನಸ್ಸಿನಲ್ಲಿರುವ ವಿಷಯ ತಿಳಿದುಕೊಳ್ಳಲು......ಅನು ನೀನ್ಯಾಕೆ ಇನ್ನೂ ಮದುವೆಯಾಗಿಲ್ಲ ನಿನ್ನ ವಯಸ್ಸಿಗೆ ನನ್ನ ಇಬ್ಬರೂ ಮಕ್ಕಳೂ ಸ್ಕೂಲಿಗೆ ಹೋಗುತ್ತಿದ್ದರು. ಯಾರನ್ನಾದರೂ ಪ್ರೀತಿಸಿದ್ದೀಯಾ ಅಕ್ಕ ಅಂತೀಯ ನನ್ನ ಜೊತೆ ಹೇಳಿಕೊಳ್ಳಬಾರದ ?
ಅನುಷ.......ಇಲ್ಲಾಕ್ಕ ನಾನು ನಿಮ್ಮನ್ನು ಮನಸ್ಸಿನಿಂದ ಅಕ್ಕ ಅಂತ ಕರೆಯುತ್ತಿರುವುದು ನಿಮ್ಮೊಂದಿಗೆ ನಾನು ಎಲ್ಲವನ್ನು ಹಂಚಿಕೊಳ್ಳುವೆ. ಮಾಸ್ಟರ್ ಡಿಗ್ರಿ ಮುಗಿಸಿ ನನಗೆ ಟೀಚರ್ ಅಥವ ಪ್ರೋಫೆಸರ್ ಆಗಬೇಕೆಂದು ಆಸೆಯಿತ್ತು ಆದರಂತೆ ಮಾಸ್ಟರ್ಸ್ ಮುಗಿಯುವ ಹೊತ್ತಿಗೆ ಅಪ್ಪ ತೀರಿಕೊಂಡರು. ಅಪ್ಪನದ್ದು ಪ್ರೈವೇಟ್ ಕಂಪನಿಯಲ್ಲಿ ಕೆಲಸವಾಗಿದ್ದ ಕಾರಣ ಮನೆಯ ಆದಾಯ ನಿಂತು ಹೋಗಿ ನನ್ನ ಮತ್ತು ಅಮ್ಮನ ಜವಾಬ್ದಾರಿ ನನ್ನ ಹೆಗಲಿನ ಮೇಲೇ ಬಿತ್ತು . ಅದೇ ಸಮಯದಲ್ಲಿ ನನಗೆ xxxxx ಪ್ರೈವೇಟ್ ಬ್ಯಾಂಕಿನಲ್ಲಿ ಉದ್ಯೋಗವು ದೊರಕಿತು. ಅಪ್ಪ ತೀರಿಕೊಂಡ ನಂತರ ಅಮ್ಮನ ಆರೋಗ್ಯವೂ ಹದಗೆಡುತ್ತ ಬಂದು ನನ್ನ ಗಮನವೆಲ್ಲಾ ಅವಳ ಕಡೆಗೇ ಇದ್ದುದರಿಂದ ಮದುವೆ ಕಡೆ ಮನಸ್ಸು ಹೊರಳಲೇ ಇಲ್ಲ . 

ನೆಂಟರು ಅಪ್ಪ ತೀರಿಕೊಂಡ ಬಳಿಕ ನಮ್ಮಿಬ್ಬರ ಜವಾಬ್ದಾರಿ ಎಲ್ಲಿ ತಮ್ಮ ಹೆಗಲಿನ ಮೇಲೆ ಬೀಳುವುದೋ ಎಂದಾಲೋಚಿಸಿ ನಮ್ಮಿಂದ ದೂರವೇ ಉಳಿದರು. ಹಾಗೆಯೇ ಎರಡು ವರ್ಷಗಳು ಕಳೆದ ನಂತರ ಅಮ್ಮ ಕೂಡ ನನ್ನನ್ನು ಒಂಟಿಯಾಗಿ ಮಾಡಿ ಹೊರಟು ಹೋದರು ಅವರಿಗೆ ಅಗ್ನಿ ಕೊಡಲೂ ಯಾರ ಇಲ್ಲದೆ ಅದನ್ನೂ ನಾನೇ ಮಾಡಬೇಕಾಗಿ ಬಂತು. ಆ ನಂತರ ನೆಂಟರು ಬಂದು ಅವನನ್ನು ಮದುವೆಯಾಗು ಇವನನ್ನು ಮದುವೆಯಾಗು ಎಂದೆಲ್ಲಾ ಹೇಳಿದರೂ ನಾನು ಅವರ ಮಾತಿಗೆ ಬೆಲೆ ಕೊಡಲಿಲ್ಲ. 

ಇನ್ನು ಹುಡುಗಿ ಒಬ್ಬಳೇ ಇದ್ದಾಳೆ ಎಂದರೆ ಸುತ್ತಲಿನ ಗಂಡಸರು ಯಾವ ದೃಷ್ಟಿಯಿಂದ ನೋಡುತ್ತಾರೆಂದು ನಿಮಗೂ ಗೊತ್ತಿದೆ. ನಾನು ಬಾಡಿಗೆಗಿದ್ದ ಮನೆ ಓನರ್ ಕೂಡ ನನ್ನ ಬಗ್ಗೆ ಕೆಟ್ಟ ದೃಷ್ಟಿ ಇಟ್ಟುಕೊಂಡಿದ್ದ ಆದರೆ ನಾನು ಯಾರ ಜೊತೆಯಲ್ಲೂ ಜಾಸ್ತಿ ಮಾತನಾಡದೇ ನಾನಾಯಿತು ನನ್ನ ಕೆಲಸವಾಯಿತು ಎಂದು ಇದ್ದ ಕಾರಣ ಅವನ ಬೇಳೆಕಾಳು ನನ್ನ ಬಳಿ ಬೇಯಲಿಲ್ಲ . ಅಕ್ಕ ನನಗೂ ಮದುವೆ ಗಂಡ ಮಕ್ಕಳು ಎಂಬ ಬಗ್ಗೆ ತುಂಬ ಆಸೆಗಳಿವೆ ಆದರೆ ಅದೆಲ್ಲವೂ ನೆರವೇರುವುದೋ ಇಲ್ಲವೋ ತಿಳಿಯದು.

ನೀತು ಅವಳ ಕೆನ್ನೆ ಸವರಿ.......ಈಗ ನೀನು ಒಂಟಿಯಲ್ಲ ನಾನು ಹಾಗು ಮತ್ತಿಬ್ಬರು ಅಕ್ಕಂದಿರೂ ನಿನ್ನ ಜೊತೆ ಇದ್ದೀವಿ. ನಾವೆಲ್ಲರೂ ಸೇರಿ ನಿನಗೊಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಸುತ್ತೇವೆ ಆದರೆ ಯಾರನ್ನಾದರು ಲವ್ ಮಾಡಿದ್ಯಾ ಎಂಬ ಪ್ರಶ್ನೆಗೆ ನೀನು ಉತ್ತರಿಸಲೇ ಇಲ್ಲವಲ್ಲ .

ಅನುಷ ನಾಚಿಕೊಳ್ಳುತ್ತ........ಅಕ್ಕ.....ಅದು.....ಅದು ಕಾಲೇಜಿನಲ್ಲಿ ಓದುವಾಗ ಪ್ರತಾಪ್ ಎಂಬ ಹುಡುಗ ನನಗೆ ತುಂಬ ಇಷ್ಟವಾಗಿದ್ದ . ಪಾಪ ಅವನಿಗೆ ಅಪ್ಪ ಅಮ್ಮ ಯಾರೂ ಇಲ್ಲದೆ ಒಂಟಿಯಾಗಿ ತಾನೇ ದುಡಿದು ಓದುತ್ತಿದ್ದ ಆದರೆ ಶತಮೂರ್ಖ ಅಕ್ಕ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಸಹ ಮಾಡದೆ ಒಂದು ದಿನ ಇದ್ದಕ್ಕಿದ್ದಂತೆ ಊರಿನಿಂದಲೇ ಕಣ್ಮರೆಯಾದ ಈಗಲೂ ನನಗೆ ಸದಾ ಜ್ಞಾಪಕವಾಗುತ್ತೆ ಆದರೆ ಅವನಿಗೆ ನನ್ನ ನೆನಪು ಇದೆಯೋ ಅಥವ ಮದುವೆಯಾಗಿ ಹೆಂಡತಿಯ ಜೊತೆ ಆರಾಮವಾಗಿದ್ದಾನೊ ಗೊತ್ತಿಲ್ಲ . ಅವನನ್ನು ನೋಡಿಯೇ ಆರೇಳು ವರ್ಷಗಳಾಗಿ ಹೋಗಿದೆ.

ನೀತು ಮನದಲ್ಲೇ.......ಅಂದರೆ ಎರಡೂ ಕಡೆ ಬೆಂಕಿ ಇನ್ನೂ ಉರಿಯುತ್ತಿದೆ ಶುಕ್ರವಾರ ಲಕ್ಷ್ಮಿ ಪೂಜೆಯಂದು ಇವರಿಬ್ಬರನ್ನು ಬೇಟಿ ಮಾಡಿಸಬೇಕು.
ನೀತು.......ನೀನು ಡ್ಯೂಟಿಗೆ ಯಾವಾಗಿನಿಂದ ಜಾಯಿನ್ ಆಗಬೇಕು ಸ್ವಲ್ಪ ದಿನ ಟೈಂ ಕೊಟ್ಟಿದ್ದಾರಾ ಹೇಗೆ ?

ಅನುಷ........ಹಾಂ..ಅಕ್ಕ ನಾನು ತುಂಬ ದೂರದ ಊರಿನಿಂದ ಇಲ್ಲಿಗೆ ಬಂದಿರುವ ಕಾರಣ ಜಾಯಿನ್ನಾಗಲು ಹತ್ತು ದಿನಗಳ ಕಾಲಾವಕಾಶವಿದೆ. ಇಲ್ಲಿಗೆ ಬರುವ ಮುಂಚೆ ಸೋಮವಾರದಿಂದಲೇ ಡ್ಯೂಟಿಗೆ ಹೋಗುವ ಆಲೋಚನೆಯಿತ್ತು ಆದರೆ ನಿಮ್ಮನ್ನೆಲ್ಲಾ ಬೇಟಿಯಾದ ಬಳಿಕ ತುಂಬ ದಿನಗಳ ನಂತರ ನನಗೂ ಸಿಕ್ಕಿರುವ ಪರಿವಾದ ಜೊತೆ ದೀಪಾವಳಿ ಹಬ್ಬ ಮುಗಿಸಿಕೊಂಡೇ ಡ್ಯೂಟಿಗೆ ಹೋಗಲು ನಿರ್ಧರಿಸಿರುವೆ.

No comments:

Post a Comment