ನೀತು ಅವಳ ಬೆನ್ನು ಸವರಿ ಒಳ್ಳೆಯದು ನಡೀ ಆಚೆ ಹೋಗೋಣ ಇಂದು ಭಾನುವಾರ ನನ್ನ ಗಂಡನೂ ಮಗಳ ಜೊತೆ ಸೇರಿಕೊಂಡು ಅವರೂ ಕೋತಿಯಾಗಿದ್ದಾರೋ ಏನೋ ನೋಡೋಣ ಎಂದು ಹೊರಬಂದರೆ ಅವಳ ಆಲೋಚನೆಗೆ ತಕ್ಕಂತೆ ಹರೀಶ ಮಗಳ ಜೊತೆ ಹೊರಗಿನ ಅಂಗಳದಲ್ಲಿ ಆಟವಾಡುತ್ತಿದ್ದನು. ನೀತು ಗಂಡನಿಗೆ ಗದರುತ್ತ.......ರೀ ಅವಳೇನೋ ಪುಟ್ಟ ಮಗು ನಿಮಗಾದರೂ ಬುದ್ದಿ ಬೇಡವಾ ? ಹೊರಗೆ ಇಷ್ಟು ಬಿಸಿಲಿದೆ ಅಲ್ಲೇ ಆಟವಾಡಿಸುತ್ತಿದ್ದೀರಲ್ಲ ಅದರ ಬದಲು ಅವಳನ್ನು ಕರೆದೊಯ್ದು ಬಿಸಿಲಿನಿಂದ ರಕ್ಷಣೆಗಾಗಿ ಅವಳಿಗೊಂಡದು ಕ್ಯಾಪ್ ತೆಗೆದುಕೊಡೋಣ ಅನ್ನುವ ಚಿಂತೆಯೂ ಇಲ್ಲ . ನನ್ನ ಮಗಳಿಗೆ ಎಲ್ಲವನ್ನೂ ನಾನೆ ನಿಮಗೆ ಹೇಳಿಕೊಡಬೇಕಾ ಅಪ್ಪನಾಗಿ ನಿಮಗೆ ಸ್ವಲ್ಪವೂ ಜವಾಬ್ದಾರಿ ಅನ್ನೋದೇ ಇಲ್ಲವಾ ?
ಶೀಲಾ ಮತ್ತು ರಜನಿ ಕೂಡ ಗೆಳತಿಯ ಕಿರುಚಾಟ ಕೇಳಿ ಹೊರಬಂದು ರಜನಿ......ಲೇ ನೀತು ಏನೋ ಇಂದು ರಜಾ ಅಂತ ಮಗಳ ಜೊತೆ ಆಟವಾಡುತ್ತಿದ್ದಾರೆ ನೀನು ಅಷ್ಟಕ್ಕೇ ಗದರುವುದಾ ? ಅದರ ಬದಲಿಗೆ ಮೆಲ್ಲಗೆ ಸ್ವಲ್ಪ ಪ್ರೀತಿಯಿಂದ ಹೇಳಲಾಗುವುದಲ್ಲವಾ ?
ರಜನಿಯನ್ನು ಗಂಡನ ಕಡೆ ತಳ್ಳಿದ ನೀತು.......ನನಗಗದೆಲ್ಲವೂ ಗೊತ್ತಿಲ್ಲ ಕಣಮ್ಮ ಅದೇಗೋ ನೀನೇ ಸ್ವಲ್ಪ ಯಾಕೆ ಜಾಸ್ತಿ ಪ್ರೀತಿಯಿಂದ ಹೇಳು ಆದರೆ ನಾನು ಹೇಳಿದ ಕೆಲಸವಾಗಬೇಕಷ್ಟೆ ಇಲ್ಲದಿದ್ದರೆ ಗಂಡನ ಜೊತೆ ನಿನ್ನನ್ನೂ ಆಚೆ ನಿಲ್ಲಿಸುವೆ.
ಸುರೇಶ...ಗಿರೀಶ....ರಶ್ಮಿ ಇವರನ್ನು ನೋಡಿ ನಗುತ್ತಿರುವುದನ್ನು ಕಂಡ ನೀತು............ಓ ನಿಮಗೆ ಇದೆಲ್ಲವೂ ಕಾಮಿಡಿ ರೀತಿ ಕಾಣಿಸುತ್ತಿದೆಯಾ ? ಆಟ ನಿಲ್ಲಿಸಿ ಒಳಗೋಗಿ ಓದಿಕೊಂಡರೆ ನೀವು ಮೂವರೂ ಬಚಾವ್ ಇಲ್ಲದಿದ್ದರೆ ಗ್ರಹಚಾರ ನೆಟ್ಟಗಿರೋಲ್ಲ ಎಂದ ಮರುಗಳಿಗೆಯೇ ಮೂವರೂ ರೂಮಿಗೋಡಿ ಓದಿಕೊಳ್ಳಲು ಕುಳಿತರು. ನಿಶಾ ಅಮ್ಮನ ಕೋಪದ ಬಗ್ಗೆ ತಲೆಕೆಡಿಸಿಕೊಳ್ಳದೆ ಅವಳನ್ನೂ ಆಟಕ್ಕೆ ಕರೆಯುತ್ತಿದ್ದಳು.
ಶೀಲಾ ನಗುತ್ತ.......ನನ್ನ ಮುದ್ದು ಕಂದಮ್ಮ ಒಬ್ಬಳೇ ನಿನಗೆ ಹೆದರದವಳು ಎಂದಾಗ ನೀತು ಮಗಳ ತಲೆ ಸವರುತ್ತ.......ಪಾಪ ಇವಳಿನ್ನೂ ಚಿಕ್ಕವಳಲ್ಲವಾ ಶಾಲೆಗೆ ಹೋಗುವಂತಾಗಿ ಬಾಲ ಬಿಚ್ಚಲಿ ಇವಳಿಗೂ ಇದೆ ಇವಳಪ್ಪನ ಜೊತೆ ಮುದುಕಿ ಹಬ್ಬ ಎಂದು ಮಗಳ ಕಡೆ ಬೆರಳು ತೋರಿಸಿದಾಗ ನಿಶಾ ಓಡಿ ಹೋಗಿ ಅಪ್ಪನ ಹೆಗಲಿಗೆ ನೇತಾಕಿಕೊಂಡಳು. ಹರೀಶ ಮಗಳನ್ನು ಆಕ್ಟಿವಾ ಮುಂದೆ ನಿಲ್ಲಿಸಿಕೊಂಡು.......ನಡೀ ಮಗಳೇ ನನ್ನ ನಿನ್ನ ಇಬ್ಬರನ್ನೂ ನಿಮ್ಮಮ್ಮನಿಂದ ಕಾಪಾಡುವವರು ಇಲ್ಲಿ ಯಾರೂ ಇಲ್ಲ ಎಂದ ತಕ್ಷಣ ನೀತು ಇಬ್ಬರಿಗೂ ಇರುವಂತೇಳಿ ತನ್ನ ಚಪ್ಪಲಿ ಹಾಕಿಕೊಂಡು ಗಂಡನ ಹಿಂದೆ ಕುಳಿತು ನಡೆಯಿರಿ ಎಂದಳು.
ನಿಶಾ ಸದ್ದು ಮಾಡದೆ ಆಕಡೆ ಈಕಡೆ ನೋಡುತ್ತ ನಿಂತಿದ್ದು ಅಂಗಡಿ ತಲುಪಿದಾಗ ನೀತು ಮಗಳನ್ನೆತ್ತಿಕೊಂಡು ಒಳಗೆ ಹೋದಳು. ಅಂಗಡಿಯಲ್ಲಿ ತರಹೇವಾರಿ ಹ್ಯಾಟುಗಳನ್ನು ನೋಡಿ ನಿಶಾ ಖುಷಿಯಿಂದ ಮಮ್ಮ........ ಮಮ್ಮ ಎಂದು ಒಂದೊಂದನ್ನೆತ್ತಿ ತೋರಿಸುತ್ತಿದ್ದರೆ ನೀತು ಮಗಳ ಸಂತೋಷವನ್ನು ನೋಡಿ ನಗುತ್ತ ಅವಳಿಗೆ ಮೂರು ಮತ್ತು ರಶ್ಮಿಗಾಗಿ ಎರಡು ಹ್ಯಾಟ್ ಸೆಲೆಕ್ಟ್ ಮಾಡಿದಳು. ಅಲ್ಲಿಂದ ಹೊರಬಂದು ಚಿನ್ನದ ಅಂಗಡಿಗೆ ತೆರಳಿದ ಮೂವರೂ ಲಕ್ಷ್ಮಿಯ ವಿಗ್ರಹಗಳನ್ನು ಪಡೆದುಕೊಂಡ ಬಳಿಕ ನೀತು ಗಂಡನಿಗೆ.......ಈ ಅನುಷಾಳಿಗೆ ಒಂದು ಚಿನ್ನದ ಸರ ತೆಗೆದುಕೊಳ್ಳೋಣ ಪಾಪ ಮಾಮೂಲಿ ಸರ ಹಾಕಿಕೊಂಡಿದ್ದಾಳೆ ಎಂದಾಗ ಹರೀಶನೂ ಸಮ್ಮತಿಸಿ ಅವಳಿಗೊಂದು ಸರ ತೆಗೆದುಕೊಂಡರು.
ನಿಶಾ ಪಪ್ಪ.....ಪಪ್ಪ.....ಎಂದು ಎಲ್ಲಾ ಕಡೆಗೂ ಕೈಯನ್ನು ತೋರಿಸುತ್ತಿದ್ದರೆ ಹರೀಶ ಮಗಳ ಖುಷಿಯಲ್ಲಿ ಒಂದಾಗಿ......ಹಾಂ ಮಗಳೇ ನೀನು ದೊಡ್ಡವಳಾಗು ಎಲ್ಲಾ ತೆಗೆದುಕೊಡ್ತೀನಿ ಎನ್ನುತ್ತಿದ್ದ . ಅಂಗಡಿಯಿಂದಾಚೆ ಕಾಲಿಟ್ಟಾಕ್ಷಣ ಅಲ್ಲಿ ನಿಂತಿದ್ದ ಬಲೂನ್ ಮಾರುವವನನ್ನು ಕಂಡ ನಿಶಾ ಅಮ್ಮನ ಮಾಂಗಲ್ಯವನ್ನಿಡಿದು ಎಳೆಯುತ್ತ ತೆಗೆದುಕೊಡು ಎನ್ನುತ್ತಿದ್ದಳು. ಅವಳಿಗೆ ಐದಾರು ಬೆಲೂನ್ ತೆಗೆದುಕೊಂಡಾಗ ನಿಶಾಳ ಸಂತೋಷ ಮುಖದಲ್ಲಿ ನಗುವಿನ ಮೂಲಕ ಇಮ್ಮಡಿಗೊಂಡು ಎದ್ದು ಕಾಣಿಸುತ್ತಿತ್ತು .
ಅನುಷಾಳನ್ನು ಕರೆದ ನೀತು ಎಲ್ಲರ ಮುಂದೆಯೇ ಅವಳ ಕತ್ತಿನಲ್ಲಿದ್ದ ರೋಲ್ಡ್ ಗೋಲ್ಡ್ ಚೈನನ್ನು ತೆಗೆದು ಚಿನ್ನದ ಸರ ಹಾಕಿದ ನೀತು........ನನ್ನ ತಂಗಿ ಈ ರೀತಿ ಆರ್ಟಿಫಿಶಿಯಲ್ ಹಾಕಿಕೊಂಡಿರುವುದು ನನಗೆ ಸ್ವಲ್ಪ ಕೂಡ ಇಷ್ಟವಿಲ್ಲ . ಈಗ ನಿನ್ನ ಬಾಯಿಂದ ಒಂದೇ ಒಂದು ಮಾತೂ ಹೊರಬರದೆ ತೆಪ್ಪಗೆ ಹೋಗಿ ಕೆಲಸವನ್ನು ಮಾಡಿಕೋ ಎಂದವಳಿಗೆ ಮಾತನಾಡೀವ ಅವಕಾಶವನ್ನೂ ನೀಡದೆ ಕಿಚನ್ನಿಗೆ ಕಳಿಸಿದಳು. ಅಣ್ಣಂದಿರು ರಶ್ಮಿ ಅಕ್ಕ ಓದುತ್ತಿರುವುದನ್ನು ನೋಡಿದ ನಿಶಾ ಅಲ್ಲಿಂದ ಅಪ್ಪನ ಬಳಿ ಬಂದು ಅವನೊಂದಿಗೆ ಕಾರ್ಟೂನುಗಳನ್ನ ಲ್ಯಾಪ್ಟಾಪಿನಲ್ಲಿ ಹಾಕಿಸಿಕೊಂಡು ನೋಡತೊಡಗಿದಳು.
ಮಾರನೇ ಸೋಮವಾರ ಗಿರೀಶನನ್ನು ಶಾಲೆಗೆ ಬಿಟ್ಟು ಹರೀಶ ಮರಳಿದಾಗ ನೀತು ಮಗಳನ್ನು ಮನೆಯಲ್ಲೇ ಬಿಟ್ಟು ಗಂಡ ಮತ್ತು ಶೀಲಾಳನ್ನು ಕರೆದುಕೊಂಡು ಪ್ರತಾಪನ ಮನೆಗೆ ಬಂದಳು. ಈ ಮೊದಲೇ ಅವನಿಂದ ಕೀ ಪಡೆದುಕೊಂಡಿದ್ದ ನೀತು ಮನೆಯೊಳಗೆ ಇಬ್ಬರನ್ನು ಕರೆದೊಯ್ದು ವಧು ವರರಂತೆ ಅಲಂಕಾರ ಮಾಡಿ ಅಲ್ಲಿಂದ ಚಿನ್ನದ ಅಂಗಡಿಗೆ ಬಂದಳು. ಶೀಲಾಳ ಕತ್ತಿನ ಮಾಂಗಲ್ಯ ಪಡೆದುಕೊಂಡು ಇಬ್ಬರಿಗೂ ಕಾರಿನಲ್ಲೇ ಕುಳಿತಿರುವಂತೇಳಿ ಒಳಗೆ ಹೋದ ನೀತು ಮಾಂಗಲ್ಯವನ್ನು ಮೊದಲೇ ತಾನು ಸೆಲೆಕ್ಟ್ ಮಾಡಿಟ್ಟಿದ್ದ ಚಿನ್ನದ ಎರಡೆಳೆ ಚೈನಿಗೆ ಹಾಕಿಸಿ ಅದಕ್ಕೆ ಕರಿಮಣಿ ಮತ್ತು ಚಿನ್ನದ ಗುಂಡುಗಳನ್ನು ಸಹ ಪೋಣಿಸಿಕೊಂಡು ಹೊರಗೆ ಬರುತ್ತ ಹೂವು ಪೂಜೆಯ ಸಾಮಾಗ್ರಿಗಳು ಮತ್ತು ಗುಲಾಬಿ ಹೂವಿನ ಹಾರ ಖರೀಧಿಸಿಕೊಂಡು ತಂದಳು.
ಅಲ್ಲಿಂದ ನೇರವಾಗಿ xxxxx ಊರಿನ ಹೊರಗಿದ್ದ ಶ್ರೀನಿವಾಸ ದೇವರ ಗುಡಿಗೆ ಎಸ್.ಯು.ವಿ ಓಡಿಸಿದ ನೀತು ಅಲ್ಲಿನ ಪುರೋಹಿತರಿಗೆ.......ಅರ್ಚಕರೆ ನನ್ನ ಸ್ನೇಹಿತೆಗೆ ಅವಳ ಗಂಡನಿಂದ ಮರು ಮಾಂಗಲ್ಯವನ್ನು ಧಾರಣೆ ಮಾಡಿಸಬೇಕಿತ್ತು ದೋಷ ಪರಿಹಾರಕ್ಕಾಗಿ ಎಂದು ಕಥೆ ಕಟ್ಟಿ ಗಂಡ ಮತ್ತು ಶೀಲಾಳನ್ನು ಕರೆತಂದು ಇಬ್ಬರಿಗೂ ಶಾಸ್ರ್ತೋಕ್ತವಾಗಿ ಮದುವೆ ಮಾಡಿಸಿ ಗೆಳತಿಯನ್ನೇ ತನ್ನ ಸವತಿಯಾಗಿ ಸ್ವೀಕರಿಸಿದಳು. ಮನೆಗೆ ಹಿಂದಿರುಗುವಾಗ ಹಿಂದಿನ ಸೀಟಿನಲ್ಲಿ ಕುಳಿತ ಶೀಲಾ ಗಂಡನ ಎದೆ ಮೇಲೆ ತಲೆಯಿಟ್ಟು ಆನಂದ ಬಾಷ್ಪವನ್ನು ಸುರಿಸುತ್ತಿರುವುದನ್ನು ಕಂಡ ನೀತು.........ಲೇ ನನಗೆ ಒಳ್ಳೆ ಮಸ್ತಾಗಿರುವ ಮಾಲು ಸವತಿಯಾಗಿ ಬಂದಳಲ್ಲಾ ಅಂತ ಅಳಬೇಕಾದವಳು ನಾನು ಇಲ್ಲಿ ನೋಡಿದರೆ ನೀನು ಕಣ್ಣೀರ ಕೋಡಿಯನ್ನೇ ಹರಿಸುತ್ತಿರುವೆ ಎಂದು ಗೇಲಿ ಮಾಡುತ್ತ ಪ್ರತಾಪನ ಮನೆಗೆ ಕರೆತಂದು ಇಬ್ಬರು ಬಟ್ಟೆ ಬದಲಾಯಿಸಿಕೊಂಡ ಬಳಿಕ ತಮ್ಮ ಮನೆಯ ಹಾದಿ ಹಿಡಿದರು.
ದಾರಿಯುದ್ದಕ್ಕೂ ಅಳುತ್ತಿದ್ದ ಶೀಲಾಳನ್ನು ತಬ್ಬಿಕೊಂಡು ಸಂತೈಸುತ್ತಿದ್ದ ಹರೀಶ......ನನಗೆ ಈಗ ಇಬ್ಬರು ಹೆಂಡತಿಯರನ್ನು ಸಮಾಧಾನಪಡಿಸುವ ಜವಾಬ್ದಾರಿ ಸಿಕ್ಕಿದೆ ಶೀಲಾ ಈಗ ನೀನು ಅಳುವನ್ನು ನಿಲ್ಲಿಸದಿದ್ದರೆ ಇಲ್ಲೇ ಮಲಗಿಸಿಕೊಂಡು ನಾನು ಶುರು ಹಚ್ಚಿಕೊಳ್ಳಬೇಕಾಗುತ್ತೆ ಎಂದು ಇಬ್ಬರೂ ಸವತಿಯರು ಅವನ ಕಡೆ ದುರುಗುಟ್ಟಿ ನೋಡತೊಡಗಿದರು. ಮನೆ ತಲುಪಿ ನೀತು ಗೆಳತಿಯ ಕೈ ಹಿಡಿದುಕೊಂಡು.......ಲೇ ನಿನ್ನನ್ನು ಮನೆಯೊಳಗೆ ವಿಧಿವತ್ತಾಗಿ ಗೃಹಪ್ರವೇಶ ಮಾಡಿಸಲು ಆಗುವುದಿಲ್ಲ ಅದಕ್ಕೆ ನನ್ನನ್ನು ಕ್ಷಮಿಸೆಂದು ಕೇಳಿದಳು. ಶೀಲಾ ಗೆಳತಿಯನ್ನು ತಬ್ಬಿಕೊಂಡು.......ಲೇ ನೀನು ನನಗಾಗಿ ಮಾಡಿರುವ ತ್ಯಾಗ ಯಾರಿಂದಲೂ ಸಹ ಮಾಡಲು ಸಾಧ್ಯವಿಲ್ಲ ಕಣೇ ನಾನು ಹರೀಶರ ಮಡದಿಯಾಗಿ ತುಂಬ ಸಂತೋಷವಾಗಿರುವೆ. ನಾನು ಇಡೀ ಜೀವನ ನಿನಗೆ ಚಿರಋಣಿಯಾಗಿದ್ದರೂ ಕಡಿಮೆಯೇ ನಡಿ ಬೇಗ ಹರೀಶರ ಹೆಂಡತಯಿ ರೂಪದಲ್ಲಿ ಮನೆಯೊಳಗೆ ಕಾಲಿಟ್ಟು ನನ್ನ ಮಗಳನ್ನು ಎತ್ತಿಕೊಳ್ಳಲು ತುಂಬ ಕಾತುರಳಾಗಿರುವೆ.
ಅನುಷಾಳ ಜೊತೆಯಲ್ಲೂ ನಿಶಾ ತುಂಬ ಚೆನ್ನಾಗಿ ಬೆರೆತಿದ್ದು ಅವಳ ಮತ್ತು ರಶ್ಮಿಯ ಜೊತೆ ಕಾರ್ಟೂನ್ ನೋಡುತ್ತ ತನಗಾಗುತ್ತಿದ್ದ ಖುಷಿಯನ್ನು ತೋರ್ಪಡಿಸಲು ಕಿರುಚಿ ಕೂಗುತ್ತ ಹಲ್ಲಾ ಮಾಡುತ್ತಿದ್ದಳು. ಶೀಲಾ ಮನೆಯೊಳಗೆ ಕಾಲಿಟ್ಟು ಮಗಳನ್ನು ಎತ್ತಿಕೊಂಡು ಅಪ್ಪಿದಾಗ ಈ ಹಿಂದಿನ ಎಲ್ಲಾ ಭಾವನೆಗಳಿಗಿಂತಲೂ ಹರೀಶನ ಮಡದಿಯಾಗಿ ಮಗುವನ್ನೆತ್ತಿಕೊಂಡ ಅನುಭವ ಭಿನ್ನವಾಗಿತ್ತು .
ಹೀಗೆಯೇ ಎರಡು ದಿನ ಕಳೆದ ನಂತರ ಬುಧವಾರ ಮನೆ ಮುಂದೆ ಮೂರ್ನಾಲ್ಕು ದೊಡ್ಡ ದೊಡ್ಡ ಕಾಂಕ್ರೀಟ್ ಲಾರಿಗಳು ಶಬ್ದ ಮಾಡುತ್ತ ನಿಂತಿರುವುದನ್ನು ಸೋಫಾ ಮೇಲೇರಿ ಕಿಟಕಿಯಿಂದ ನೋಡಿದ ನಿಶಾ ಅಮ್ಮನಿಗೆ ತನ್ನನ್ನು ಹೊರಗೆ ಹೋಗುವುದಕ್ಕೆ ಬಾಗಿಲು ತೆರೆಯುವಂತೆ ಪೀಡಿಸುತ್ತಿದ್ದರೆ ನೀತು ಬೇಡ ಎನ್ನುತ್ತಿದ್ದಳು. ನೀತುಳನ್ನು ಪಕ್ಕಕ್ಕೆ ಸರಿಸಿದ ಶೀಲಾ ಮಗಳಿಗೆ ಬಿಸಿಲಿನ ಕ್ಯಾಪ್ ಹಾಕಿ ಅವಳನ್ನೆತ್ತಿಕೊಂಡು ಹೊರಗೆ ಬಂದು ಅಲ್ಲಿ ನಿಂತಿರುವ ಲಾರಿಗಳನ್ನು ತೋರಿಸುತ್ತಿದ್ದಳು. ಅವಳ ಹಿಂದೆಯೇ ನೀತು...ರಶ್ಮಿ....ರಜನಿ ಮತ್ತು ಅನುಷ ಹೊರಗೆ ಬಂದು ಎಲ್ಲರೂ ತಾರಸಿ ಹಾಕುವುದನ್ನು ನೋಡುತ್ತಿದ್ದರೆ ನಿಶಾ ಕಾಂಕ್ರೀಟ್ ಲಾರಿಗಳ ಮೇಲಿರುವ ದೊಡ್ಡ ಗೋಲಾಕಾರದಲ್ಲಿ ತಿರುಗುತ್ತಿರುವುದನ್ನೇ ನೋಡುತ್ತಿದ್ದಳು. ರಮೇಶ ಖುದ್ದಾಗಿ ನಿಶಾಳನ್ನು ಮೇಲಕ್ಕೆ ಎತ್ತಿಕೊಂಡು ಹೋದಾಗ ಅಲ್ಲಿನ ಕಾಂಕ್ರೀಟ್ ಕೆಲಸವನ್ನು ಇದೇನೆಂದು ಆಶ್ಚರ್ಯವಾಗಿ ನೋಡುತ್ತಿದ್ದ ನಿಶಾ ಕೆಳಗೆ ನಿಂತಿರುವ ಅಮ್ಮ ಮತ್ತಿತರರ ಕಡೆ ನೋಡಿ ಕೂಗುತ್ತ ಕೈ ಬೀಸುತ್ತಿದ್ದಳು.
ಮಧ್ಯಾದ ಹೊತ್ತಿಗೆ ತಾರಸಿ ಕೆಲಸವು ಮುಗಿಯುವ ಮುನ್ನವೇ ಅಡುಗೆಯವರು ಊಟವನ್ನು ತಲುಪಿಸಿದ್ದರು. ಎಲ್ಲಾ ಕೆಲಸಗಾರರಿಗೂ ಅನುಷ....ರಜನಿ....ಶೀಲಾ ಮತ್ತು ರಶ್ಮಿ ಬಡಿಸುತ್ತಿದ್ದರೆ ನೀತು ಮಗಳನ್ನು ಕೂರಿಸಿಕೊಂಡು ಅವಳಿಗೆ ಅಲ್ಲಿಗೆ ತಂದಿರುವ ಮೊಸರನ್ನ ತಿನ್ನಿಸುತ್ತ ಅವಳ ಕೈಗೆರಡು ಜಹಂಗೀರನ್ನು ಕೊಟ್ಟಿದ್ದಳು. ಯಾವುದೇ ಭೇದಭಾವವ ತೋರಿಸದೆ ಮನೆಯವರೂ ಕೆಲಸಗಾರರಿಗಾಗಿ ತರಿಸಿದ್ದ ಊಟವನ್ನೇ ಮಾಡುತ್ತಿರುವುದನ್ನು ಕಂಡ ರಮೇಶ ಮತ್ತು ಕೆಲಸಗಾರರಿಗೆ ನೀತು ಮತ್ತವಳ ಕುಟುಂಬದ ಬಗ್ಗೆ ಗೌರವ ಹೆಚ್ಚಿತು. ನಿಶಾ ಮೊದಲೇ ಊಟ ಮಾಡಿ ಮನೆಯ ಅಂಗಳದಲ್ಲಿ ಓಡಾಡುತ್ತ ಅಲ್ಲಿನ ಕೆಲಸಗಾರರಿಗೆ ತಾನೇ ಸ್ವೀಟನ್ನು ಎತ್ತಿಕೊಂಡು ಹೋಗಿ ಅವರಿಗೆ ತಿನ್ನುವಂತೆ ನೀಡುತ್ತಿದ್ದರೆ ಕೆಲಸಗಾರರು ಮಗುವಿನ ಮುಗ್ದ ಮನಸ್ಸಿಗೆ ತಲೆದೂಗುತ್ತಿದ್ದರು. ಶೀಲಾಳಿಗೆ ಈ ಮೊದಲೇ ಹರೀಶ ಕೊಟ್ಟು ಹೋಗಿದ್ದ ಹಣದಲ್ಲಿ ಅವಳು ತಾರಸಿ ಹಾಕಲು ಬಂದಿದ್ದ ೧೪ ಕೆಲಸಗಾರರಿಗೆ ಮತ್ತು ಲಾರಿಗಳ ಜೊತೆ ಬಂದಿದ್ದ ಎಂಟು ಜನರಿಗೆ ತಲಾ ೫೦೦ ರೂಗಳನ್ನು ಸ್ವೀಟ್ ಜೊತೆಗೆ ಮಗಳಿಂದಲೇ ಕೊಡಿಸಿದಾಗ ಅವರು ಸಂತೋಷದಿಂದ ಮಗುವನ್ನು ಹರಸಿ ಹೋದರು. ಬುಧವಾರ ಕೆಲಸವಿರುವ ಕಾರಣ ತಾನೂ ರವಿ ಗುರುವಾರ ಸಂಜೆಯೊಳಗೆ ತಲುಪುತ್ತೇವೆಂದು ಅಶೋಕ ಮೊದಲೇ ನೀತುವಿಗೆ ಫೋನ್ ಮಾಡಿ ತಿಳಿಸಿದ್ದನು.
ಮಾರನೆಯ ಗುರುವಾರ ನರಕ ಚರ್ತುದಶಿಯ ದಿನದಂದು ಕಾಲೋನಿಯ ಮಕ್ಕಳು ಹೊಡೆಯುತ್ತಿರುವ ಪಟಾಕಿ ಶಬ್ದಕ್ಕೆ ಹೆದರಿಕೊಂಡಿದ್ದ ನಿಶಾ ರೂಮಿನಲ್ಲಿ ಮಂಚವೇರಿ ಹೊದಿಗೆ ಹೊದ್ದು ಮಲಗಿಬಿಟ್ಟಿದ್ದಳು. ಹರೀಶ ಮಗಳು ಹೆದರುತ್ತಾಳೆಂದು ಅವಳನ್ನು ಕರೆಯುವ ಪ್ರಯತ್ನವನ್ನೇ ಮಾಡದೇ ಇರುವುದಕ್ಕೆ ಮನೆಯ ಮಿಕ್ಕವರೂ ದನಿಗೂಡಿಸಿದರು. ಆದರೆ ಮಗಳನ್ನು ಈ ರೀತಿ ಪುಕ್ಕಲುತನದಿಂದ ಬೆಳೆಸುವುದು ಇಷ್ಟವಿಲ್ಲದ ನೀತು ತಾನೇ ಮಗಳನ್ನು ಎತ್ತಿಕೊಂಡು ಹೊರಗೆ ಕರೆ ತಂದದ್ದನ್ನು ನೋಡಿ ಮಿಕ್ಕವರು ಮಾತನಾಡುವ ಮುನ್ನ ಅವರಿಗೆ ಸುಮ್ಮನಿರುವಂತೇಳಿದಳು. ನೀತು ಮಗಳನ್ನು ಮನೆಯಿಂದ ಹೊರಗೆ ಕರೆತಂದಾಗಲೂ ಅವಳು ಭಯದಿಂದ ಅಮ್ಮನನ್ನು ತಬ್ಬಿಕೊಂಡಿದ್ದರೂ ಚಿಂತಿಸದೆ ಸುರೇಶ — ಗಿರೀಶರಿಗೆ ಪಟಾಕಿ ಹೊಡೆಯುವಂತೆ ಹೇಳಿದಾಗ ಅವರಿಬ್ಬರೂ ಅಪ್ಪನ ಕಡೆ ನೋಡುತ್ತಿರುವುದನ್ನು ಕಂಡ ನೀತು ಗಂಡನ ಕಡೆ ತಿರುಗಿದಳು. ಹರೀಶ.......ಲೇ ಮಗಳು ಹೆದರುತ್ತಾಳೆಂದು ನಾನು ಪಟಾಕಿನೇ ತಂದಿಲ್ಲ ಎಂದಾಗ ನೀತು ಕೋಪಗೊಂಡು ............ ರೀ ಹೀಗೇ ಬಿಟ್ಟರೆ ಅವಳಿಗೆ ಧೈರ್ಯ ಹೇಗೆ ತಾನೇ ಬರುತ್ತದೆ. ಇಲ್ಲ ನನ್ನ ಮಗಳು ಈಗಿನಿಂದಲೇ ತನ್ನ ಮನಸ್ಸಿನಲ್ಲಿರುವ ಭಯವನ್ನು ಗೆಲ್ಲಲೇಬೇಕು ನಾನು ಮಗಳನ್ನು ಹಾಗೆಯೇ ಬೆಳೆಸುವುದು ಎಂದು ಮಕ್ಕಳನ್ನು ಕರೆದೊಯ್ದು ಸಾಕಷ್ಟು ಪಟಾಕಿ ತರುವಂತೆ ಗಂಡನನ್ನು ಕಳಿಸಿದಳು.಼
ಗಂಡ ಪಟಾಕಿ ತಂದ ಬಳಿಕ ಮಗಳನ್ನೆತ್ತಿಕೊಂಡು ಬಂದ ನೀತು ಗಿರೀಶ....ಸುರೇಶ ಮತ್ತು ರಶ್ಮಿಗೆ ಪಟಾಕಿ ಹಚ್ಚುವಂತೆ ಹೇಳಿದಳು. ಹತ್ತು ಹದಿನೈದು ನಿಮಿಷಗಳ ಕಾಲ ಔಪಟಾಕಿ ಸದ್ದಿಗೆ ಬೆಚ್ಚಿ ಬಿದ್ದು ಕಿರುಚಾಡುತ್ತ ಅಳುತ್ತಿದ್ದ ನಿಶಾ ಅಮ್ಮನ ತೋಳಿನಲ್ಲಿ ಕ್ರಮೇಣವಾಗಿ ಅವಳ ಭಯವೂ ಕಡಿಮೆಯಾಗಿ ಅಕ್ಕ ಅಣ್ಣಂದಿರು ಪಟಾಕಿ ಹೊಡೆಯುವುದನ್ನು ಕುತೂಹಲದಿಂದ ನೋಡುತ್ತಿದ್ದಳು. ಸಂಜೆಯ ಹೊತ್ತಿಗೆಲ್ಲಾ ನಿಶಾಳ ಭಯವು ಪೂರ್ತಿ ಮಾಯವಾಗಿದ್ದು ತಾನೂ ಪಟಾಕಿ ಹಚ್ಚುವೆ ಎಂದು ಅಪ್ಪನನ್ನು ಎಳೆದುಕೊಂಡು ಹೋಗುತ್ತಿದ್ದಳು.
ಶೀಲಾ ನಗುತ್ತ.......ನೀತು ನೀನು ಮಾಡುವುದು ಒಂದೆರಡಲ್ಲ ಕಣೆ. ಮೊದಲು ಮಗಳು ಹೆದರಿಕೊಳ್ಳುವಳು ಅನ್ನುವ ಚಿಂತೆಯಿತ್ತು ಈಗ ಎಲ್ಲರಿಗಿಂತ ಮೊದಲು ತಾನೇ ಪಟಾಕಿ ಹೊಡೆಯಲು ಓಡುತ್ತಿದ್ದಾಳಲ್ಲ ಎನ್ನುವ ಚಿಂತೆ ಶುರುವಾಗಿದೆ. ಹರೀಶ ಮಗಳನ್ನು ಒಂದು ಕ್ಷಣವೂ ಬಿಡದೆ ಅವಳನ್ನೆತ್ತಿಕೊಂಡೇ ಪಟಾಕಿ ಹೊಡೆಸುತ್ತ ಅವಳನ್ನು ಸಂತೋಷಪಡಿಸುತ್ತಿದ್ದನು. ಅನುಷ...ರಶ್ಮಿ....ನೀತು....ರಜನಿ ಮತ್ತು ಶೀಲಾ ಕೂಡ ಹೂಕುಂದ ಚಕ್ರ ಮತ್ತಿತ್ತರ ಪಟಾಕಿಗಳನ್ನು ಹೊಡೆಯುತ್ತಿರುವುದನ್ನು ನೋಡಿ ನಿಶಾ ಖುಷಿಯಿಂದ ಕುಣಿದಾಡುತ್ತಿದ್ದಳು. ಅದೇ ಸಮಯಕ್ಕೆ ಬಂದ ರವಿ ಮತ್ತು ಅಶೋಕ ತಾವು ಬರುವಾಗಲೇ ತುಂಬ ಜಾಸ್ತಿಯೇ ಪಟಾಕಿಗಳನ್ನು ತಂದಿದ್ದು ಈಗ ಅಶೋಕನೇ ಖುದ್ದು ಮಗಳನ್ನೆತ್ತಿಕೊಂಡು ಪಟಾಕಿ ಹೊಡೆಸುತ್ತಿದ್ದನು.ಎಲ್ಲರೂ ರಾತ್ರಿ ಊಟ ಮಾಡುತ್ತಿದ್ದಾಗಲೂ ನಿಶಾಳ ಪಟಾಕಿ ಕಥೆ ಮುಗಿಯದೆ ಎಲ್ಲರ ಮುಂದಕ್ಕೂ ಹೋಗಿ ಅವರಿಗರ್ಥ ಆಗುತ್ತೋ ಇಲ್ಲವೋ ಎಂಬ ಚಿಂತೆಯಿಲ್ಲದೆ ತನ್ನ ಮಾತನ್ನು ಹೇಳುತ್ತಿದ್ದರೆ ಶೀಲಾ ಮಗಳ ಹಿಂದೆ ಸುತ್ತುತ್ತಾ ಅವಳಿಗೆ ಊಟ ಮಾಡಿಸುತ್ತಿದ್ದಳು.
ಮಾರನೆಯ ದಿನ ಲಕ್ಷ್ಮಿ ಪೂಜೆಗಾಗಿ ಮನೆಯನ್ನು ಹೂವಿನಿಂದ ಸಿಂಗರಿಸಿ ಲಿವಿಂಗ್ ಹಾಲಿನಲ್ಲಿ ಅಧ್ಬುತದಿ ಒಂದು ಮಂಟವನ್ನು ಗಿರೀಶ ತನ್ನ ಕಲಾಕೌಶಲ್ಯದಿಂದ ನಿರ್ಮಿಸಿದನು. ಆ ದಿನದ ವಿಶೇಷ ಪೂಜೆಗಾಗಿ ನೀತು ಮತ್ತು ಹರೀಶ ಮನೆಯ ಪ್ರತಿಯೊಬ್ಬರಿಗೂ ಹೊಸ ಬಟ್ಟೆಗಳನ್ನು ತಂದಿದ್ದು ಅನುಷ ಕೂಡ ತನಗಾಗಿ ತಂದಿದ್ದ ನೀಲಿ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದಳು. ಮನೆಯವರೇ ಅಡುಗೆ ಮಾಡುವುದೆಂದ ಮೊದಲೇ ನಿಶ್ಚಯವಾಗಿರುವುದನ್ನು ತಿಳಿದಿದ್ದ ಹರೀಶನ ಸಂಸಾರ ಈ ಮೊದಲು ಬಾಡಿಗೆಗಿದ್ದ ಮನೆಯ ಸೊಸೆ ಕೂಡ ಮಧ್ಯಾಹ್ನವೇ ಮನೆಗೆ ಬಂದು ಶೀಲಾ....ರಜನಿ....ಅನುಷಾರಿಗೆ ಜೊತೆಯಾಗಿದ್ದರೆ ರಶ್ಮಿ ಕೂಡ ತನ್ನ ಕೈಲಾದ ಸಹಾಯ ಮಾಡುತ್ತಿದ್ದಳು. ಎಲ್ಲರೂ ಸೇರಿ ನೀತುಳನ್ನು ಅಡುಗೆ ಮನೆಯೊಳಗೆ ಬರದಂತೆ ತಡೆದಿದ್ದು ಅವಳು ಹೊರಗಿನ ಚಟುವಟಿಕೆಗಳನ್ನು ಗಮನಿಸಿಕೊಳ್ಳುತ್ತಿದ್ದಳು. ನಿಶಾ ಅಶೋಕನ ಜೊತೆ ಸೇರಿಕೊಂಡು ಕೋತಿಯ ರೀತಿ ಆಡುತ್ತ ಮಜ ಮಾಡಿಕೊಂಡಿದ್ದಳು.
ಮಧ್ಯಾಹ್ನ ಹರೀಶನಿಗೆ ಫೋನ್ ಮಾಡಿದ ಪ್ರತಾಪ.....ಅಣ್ಣ ಈಗಲಾದರೂ ನಾನು ಬರಬಹುದಾ ಕಾಲೋನಿ ಗೇಟ್ ಬಳಿಯೇ ನಿಮ್ಮ ಫೋನಿಗಾಗಿ ಕಾದು ನಿಂತು ಈಗ ನಾನೇ ಮಾಡಿದೆ ಎಂದನು. ಹರೀಶ ಹೆಂಡತಿಗೆ ವಿಷಯವನ್ನು ತಿಳಿಸಿದಾಗ ಬರುವಂತೇಳಿ ಎಂದು ಸನ್ನೆ ಮಾಡಿ ಅನುಷಾಳನ್ನು ರೂಮಿಗೆ ಕರೆದೊಯ್ದು ನಾ ಹೇಳುವ ತನಕವೂ ಹೊರಗೆ ಬರದಂತೆ ಕಟ್ಟುನಿಟ್ಟಾಗಿ ಆಜ್ಞೆ ಮಾಡಿದಳು.ಎಸೈ ಪ್ರತಾಪ್ ಬರುವಾಗಲೇ ನಿಶಾ ಇಷ್ಟಪಡುವ ಸ್ವೀಟ್ಸ್ ಮತ್ತು ಸಾಕಷ್ಟು ಪಟಾಕಿಗಳನ್ನು ಹೊತ್ತು ತಂದು ಹರೀಶ...ರವಿ ಮತ್ತು ಅಶೋಕ ಮೂವರ ಆಶೀರ್ವಾದ ಪಡೆದು ನಿಶಾಳನ್ನೆತ್ತಿಕೊಂಡು ಮುದ್ದಾಡುತ್ತಿದ್ದನು. ನೀತು ಮಗಳನ್ನು ಅವನಿಂದ ಪಡೆದುಕೊಂಡು ಅಶೋಕನಿಗೆ ಒಪ್ಪಿಸಿ ಪ್ರತಾಪನನ್ನು ತನ್ನ ಜೊತೆ ರೂಮಿಗೆ ಕರೆದೊಯ್ದಳು.
ಪ್ರತಾಪ ರೂಂ ಒಳಗೆ ಕಾಲಿಟ್ಟಾಗ ಅನುಷ ಮತ್ತು ಪ್ರತಾಪ್ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟು ವರ್ಷಗಳ ನಂತರ ನೋಡಿ ಸಂತೋಷದ ಜೊತೆ ಶಾಕಾಗಿದ್ದರು. ನೀತು ನಗುತ್ತ........ನಿಮ್ಮಿಬ್ಬರಿಗೂ ಹದಿನೈದು ನಿಮಿಷದ ಕಾಲಾವಕಾಶ ನೀಡುವೆ ಅದೇನು ಮಾತನಾಡುವಿರೋ ಮಾತಾಡಿಕೊಳ್ಳಿ ಆದರೆ ಮದುವೆಯ ಬಗ್ಗೆ ಒಂದು ನಿರ್ಧಾರಕ್ಕೆ ಬರದಿದ್ದರೆ ಇನ್ಮುಂದೆ ಒಬ್ಬರನ್ನೊಬ್ಬರು ಬೇಟಿ ಮಾಡಲು ಬಿಡುವುದಿಲ್ಲ ಎಂದು ರೂಂ ಬಾಗಿಲನ್ನು ಮುಂದೆ ಎಳೆದುಕೊಂಡು ಹೊರಬಂದಳು. ಎಲ್ಲರೂ ಲಿವಿಂಗ್ ಹಾಲಿನಲ್ಲಿ ಅವರಿಗಾಗಿ ಕಾಯುತ್ತಿದ್ದ 20 ನಿಮಿಷದ ನಂತರ ಹೊರಬಂದ ನವ ಜೋಡಿಗಳು ಒಟ್ಟಾಗಿ ಹರೀಶನಿಗೆ ನಮಸ್ಕರಿಸಿದಾಗ ಅವನು ಆಶೀರ್ವಧಿಸುತ್ತ ...........ನೀವಿಬ್ಬರೂ ಇಷ್ಟು ವರ್ಷಗಳ ನಂತರ ಒಂದಾಗುವುದಕ್ಕೆ ಕಾರಣ ನೀತು ಮಾತ್ರ . ಅವಳೇ ನಿನ್ನನ್ನು ಈ ಊರಿಗೆ ವರ್ಗಾವಣೆ ಮಾಡಿಸಿ ಕರೆತಂದಿದ್ದು ಈ ವಿಷಯವನ್ನು ನನ್ನ ಹೆಂಡತಿ ಯಾರಿಗೂ ಹೇಳಿರಲಿಲ್ಲ ಎಂದಾಗ ಅವಳನ್ನು ತಬ್ಬಿಕೊಂಡ ಅನುಷ ಅಳುತ್ತ........ನಿಜಕ್ಕೂ ಅಕ್ಕ ನೀವು ತುಂಬ ತುಂಬ ಗ್ರೇಟ್ . ಈಗ ನಮ್ಮ ಬಂಧು ಬಾಂಧವರೇ ಯಾಕೆ ಸ್ವಂತ ರಕ್ತ ಸಂಬಂಧಿಗಳೂ ಮಾಡದಿರುವ ಕಾರ್ಯವನ್ನು ನೀವು ಈ ಮೊದಲು ಗುರುತು ಪರಿಚಯವಿಲ್ಲದಿದ್ದ ನನಗಾಗಿ ಮಾಡಿದಿರಿ ತುಂಬ ಥ್ಯಾಂಕ್ಸ್ ನಿಮ್ಮ ಋಣ ಪ್ರಾಣವನ್ನು ನೀಡಿದರೂ ತೀರಿಸಲಾರೆ ಎಂದಳು.
ನೀತು ಬದಲಿಗೆ ಶೀಲಾ ಅವಳ ತಲೆ ಸವರಿ.......ಅವಳನ್ನು ಅಕ್ಕ ಅಂತ ಕರೆಯುತ್ತೀಯಾ ಇನ್ನು ಅಕ್ಕ ತಂಗಿಯ ನಡುವೆ ಎಂತಹ ಋಣ. ಇನ್ಮುಂದೆ ಹೀಗೆಲ್ಲಾ ಮಾತನಾಡಬೇಡ ನಾವುಗಳ್ಯಾರೂ ರಕ್ತ ಸಂಬಂಧಿಗಳಲ್ಲ ಆದರೂ ಒಂದೇ ಅವಿಭಾಜ್ಯ ಕುಟುಂಬದ ಸದಸ್ಯರು ಅರ್ಥವಾಗಿದೆ ತಾನೇ ಎಂದಾಗ ಅನುಷ ಹೂಂ ಎಂದು ತಲೆಯಾಡಿಸಿ ಅವಳನ್ನು ತಬ್ಬಿಕೊಂಡಳು. ಪ್ರತಾಪ್ ಮತ್ತು ಅನು ಎಲ್ಲರಿಂದಲು ಆಶೀರ್ವಾದ ಪಡೆದ ಬಳಿಕ ಮಕ್ಕಳು ಕೂಡ ಇಬ್ಬರಿಗೂ ಶುಭಾಶಯವನ್ನು ತಿಳಿಸಿದರು.
ಸಂಜೆ ಬೇಗನೆ ಹರೀಶನ ಶಾಲೆಯ ಮುಖ್ಯೋಪಾಧ್ಯಾಯರ ಕುಟುಂಬ.....ಆರ್ಕಿಟೆಕ್ಟ್ ರಮೇಶನ ಕುಟುಂಬ ಮತ್ತು ಒಟ್ಟಾಗಿ ಆಹ್ವಾನಿಸಿದ್ದ ಒಂಬತ್ತು ಕುಟುಂಬಗಳ ಸದಸ್ಯರ ಸಮಕ್ಷಮ ಪುರೋಹಿತರ ಉಪಸ್ಥಿತಿಯಲ್ಲಿ ನೀತು ಮತ್ತು ಹರೀಶ ಮಗಳೊಂದಿಗೆ ದೇವಿಯ ಆರಾಧನೆ ಮತ್ತು ಪೂಜೆಯನ್ನು ನೆರವೇರಿಸಿದರು. ನೀತು ತಾನು ಮುಂದಾಗದೆ ಹರೀಶನ ಎರಡನೇ ಮಡದಿಯ ಸ್ಥಾನ ಅಲಂಕರಿಸಿದ್ದ ಶೀಲಾ ಮತ್ತವನ ಪ್ರೇಯಸಿಯ ಸ್ಥಾನದಲ್ಲಿದ್ದ ರಜನಿ ಇಬ್ಬರನ್ನು ಮೀಂದೆ ಮಾಡಿ ಅವರ ಜೊತೆಯಲ್ಲಿ ಮಗಳಿಂದಲೇ ಮುತ್ತೈದೆಯರಿಗೆಲ್ಲಾ ಅರಿಶಿನ....ಕುಂಕುಮ....ಹಣ್ಣು...ಹೂವು ಇತ್ಯಾದಿಗಳ ಜೊತೆ ಸೀರೆ ಬೆಳ್ಳಿ ಲಕ್ಷ್ಮಿ ವಿಗ್ರಹವನ್ನು ದಾನವಾಗಿ ಕೊಡಿಸಿ ಅವರೆಲ್ಲರ ಆಶೀರ್ವಾದವೂ ಮಗಳಿಗೆ ಸಿಗುವಂತೆ ಮಾಡಿದಳು.
ಈಗಾಗಲೇ ಅಡುಗೆ ಕಾರ್ಯವು ಸಂಪೂರ್ಣಗೊಂಡಿದ್ದ ಕಾರಣ ಮನೆಯ ಮಕ್ಕಳು ಮತ್ತು ಆಹ್ವಾನಿತ ಕುಟುಂಬದ ಮಕ್ಕಳನ್ನು ಹರೀಶನು ಹೊರಗೆ ಕರೆತಂದು ಪಟಾಕಿ ಕಾರ್ಯಕ್ರಮ ಶುರುಮಾಡಿದನು. ಹರೀಶನ ಶಾಲೆ ಮುಖ್ಯೋಪಾಧ್ಯಾಯರ ಮಡದಿಯ ಕಂಕುಳಿನಲ್ಲಿದ್ದ ನಿಶಾ ಪಟಾಕಿ ಶಬ್ದಕ್ಕೆ ಕುಣಿಯಲಾರಂಭಿಸಿ ಹೊರಗೆ ಹೋಗಲು ಕೊಸರಾಡುತ್ತ ಇರುವುದನ್ನು ಕಂಡ ಅನುಷ ಅವಳನ್ನೆತ್ತಿಕೊಂಡು ಹೊರಗೆ ಕರೆತಂದು ಅಶೋಕನಿಗೆ ಒಪ್ಪಿಸಿದಳು. ಮನೆಯ ಮಕ್ಕಳು ಮತ್ತು ಆಹ್ವಾನಿತ ಕುಟುಂಬದ ಮಕ್ಕಳೆಲ್ಲರೂ ಒಟ್ಟಾಗಿ ಪಟಾಕಿ ಹೊಡೆದು ಸಂಭ್ರಮಿಸುವುದನ್ನು ನೋಡಿ ಮುಖ್ಯೋಪಾಧ್ಯಾಯರು ಹರೀಶನ ಬೆನ್ನು ತಟ್ಟಿ.............ನಿಜಕ್ಕೂ ಹರೀಶ ಹಬ್ಬದ ಸಮಯದಲ್ಲಿ ನೀನು ಇಂತಹ ಒಳ್ಳೆ ಕೌಟುಂಬಿಕ ವಾತಾವರಣ ಸೃಷ್ಟಿಸಿರುವುದನ್ನು ನೋಡಿ ನನಗೆ ತುಂಬ ಸಂತೋಷದ ಜೊತೆಗೆ ನಿನ್ನ ಬಗ್ಗೆ ತುಂಬ ಹೆಮ್ಮೆಯಾಗುತ್ತಿದೆ ಎಂದರೆ ಹರೀಶ......ಸರ್ ಇದೆಲ್ಲದಕ್ಕೂ ಕಾರಣ ನನ್ನ ಹೆಂಡತಿ ಮತ್ತವಳ ಗೆಳತಿಯರು ಎಂದನು. ಮುಖ್ಯೋಪಾಧ್ಯಾಯರು ತಮ್ಮ ಮಡದಿಯ ಜೊತೆಗೂಡಿ ನೀತು...ರಜನಿ ಮತ್ತು ಶೀಲಾಳನ್ನು ಇಂತಹ ಒಳ್ಳೆಯ ಆಲೋಚನೆಗಾಗಿ ಬಾಯ್ತುಂಬ ಹೊಗಳುತ್ತಿದ್ದಾಗ ಇತರೆ ಅತಿಥಿಗಳು ಸಹ ಅವರಿಗೆ ಜೊತೆಯಾದರು.
ಅಶೋಕ ಮತ್ತು ರವಿಯ ಜೊತೆಗಿದ್ದ ನಿಶಾ ತನ್ನ ಅಣ್ಣಂದಿರು...ರಶ್ಮಿ ಅಕ್ಕ ಮತ್ತು ಬಂದಿದ್ದ ಅತಿಥಿತಗಳ ಮಕ್ಕಳೊಂದಿಗೆ ಸಂಭ್ರಮದಿಂದ ಪಟಾಕಿ ಹೊಡೆದು ಕಿರುಚಿ ಕೂಗಾಡುತ್ತ ಅಪ್ಪ ಅಮ್ಮ ಆಂಟಿ ಎಲ್ಲರನ್ನೂ ಕರೆದು ಎಲ್ಲರೊಂದಿಗೂ ಫುಲ್ ಏಂಜಾಯ್ ಮಾಡುತ್ತಿದ್ದಳು. ರಾತ್ರಿ ಎಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಊಟ ಮಾಡುತ್ತ ಸಂತೋಷದಿಂದ ಕಾಲಕಳೆಯುತ್ತಿದ್ದರೆ ಇಂದು ಸ್ವಲ್ಪ ಜಾಸ್ತಿಯೇ ಕುಣಿದು ಕುಪ್ಪಳಿಸಿದ್ದ ನಿಶಾ ಅದಾಗಲೇ ಊಟ ಮುಗಿಸಿ ಶೀಲಾಳ ಮಡಿಲಲ್ಲಿ ನಿದ್ರೆಗೆ ಜಾರಿದ್ದಳು
ಒಬ್ಬೊಬ್ಬರಾಗಿ ತಮ್ತಮ್ಮ ಮನೆಗಳಿಗೆ ಹೊರಡುವಾಗ ಮನೆಯವರೆಲ್ಲರೂ ಪ್ರೀತಿ ಆದರದಿಂದ ಎಲ್ಲರನ್ನೂ ಬೀಳ್ಕೊಡುತ್ತಿದ್ದರೆ ಆರ್ಕಿಟೆಕ್ಟ್ ರಮೇಶನ ಮಡದಿ ಭಾರತಿಯ ಕಣ್ಣು ಹರೀಶನ ಮೇಲೇ ಇರುವುದನ್ನು ರಜನಿ ಮತ್ತು ನೀತು ಗಮನಿಸಿ ಕಣ್ಣಿನಲ್ಲೇ ಸನ್ನೆ ಮಾಡಿಕೊಂಡು ನಗುತ್ತಿದ್ದರು.
No comments:
Post a Comment