Total Pageviews

Saturday, 27 April 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 78

ಬೆಳಿಗ್ಗೆ ಎಂಟು ಘಂಟೆಗೆ ಕೆಲಸವಿದೆ ಎಂದೇಳಿ ಹೋಗಿದ್ದ ನೀತು ಮತ್ತು ಅಶೋಕ ರಾತ್ರಿ ಹೆನ್ನೆರಡರ ಸಮಯವಾಗಿದ್ದರೂ ಮನೆಗಿನ್ನೂ ಬಾರದೆ ಇದ್ದು ಜೊತೆಗೆ ಅವರ ಮೊಬೈಲುಗಳು ಸಹ ಆಫಾಗಿದ್ದರಿಂದ ರಜನಿ ತುಂಬ ಆತಂಕಗೊಂಡಿದ್ದಳು. ಹರೀಶನಿಗೆ ಕರೆ ಮಾಡಿದರೆ ಅವನ ಫೋನ್ ಸಹ ಆಫಾಗಿದ್ದು ಬೇರೆ ಯೋಚನೆ ಮಾಡದೆ ನೇರವಾಗಿ ಶೀಲಾಳಿಗೆ ಕರೆ ಮಾಡಿದಳು. ಇತ್ತ ಶೀಲಾ.....ರವಿ ಮತ್ತು ಅನುಷ ಕೂಡ ಮೂವರ ಫೋನ್ ಸಿಗದೆ ಆತಂಕದಲ್ಲಿದ್ದಾಗಲೇ ರಜನಿ ಕರೆ ಮಾಡಿ ಅವರ್ಯಾರು ಇನ್ನೂ ಮನೆಗೆ ಬಂದಿಲ್ಲ ಎಂದು ತಿಳಿಸಿದಳು. ರವಿ ಪಾಪ ಶೀಲಾಳಿಗೆ ಸಮಾಧಾನ ಮಾಡುತ್ತ ಮತ್ತೊಂದು ಕಡೆ ಅವನನ್ನು ನೀತು ಬಲವಂತದಿಂದ ಊರಿಗೆ ಕಳಿಸಿದ್ದರಿಂದ ಒಳಗೊಳಗೇ ಚಡಪಡಿಸುತ್ತಿದ್ದನು. ಈಗ ನೋಡಿದರೆ ಮೂವರ ಫೋನ್ ಕೂಡ ಆಫಾಗಿದ್ದು ಯಾವುದೇ ವಿಷಯವೂ ತಿಳಿಯದೆ ಅಲ್ಲೇನಾಗಿದೆ ? ಮಂಜುನಾಥ ಅವರಿಗೆ ಸಿಕ್ಕಿದನಾ ? ಅಥವ ಯಾವುದಾದರು ಅನಾಹುತ ಜರುಗಿದೆಯಾ ಎಂದು ರವಿಯಲ್ಲಿ ಅತಂಕ ಮೂಡಿತ್ತು.

ಆದರೆ ಅದನ್ನು ಯಾರ ಬಳಿಯೂ ಹೇಳುವಂತಿರಲಿಲ್ಲ ಇದು ಇನ್ನೊಂದು ರೀತಿಯ ಸಮಸ್ಯೆಯೂ ಅವನಿಗೆ ಎದುರಾಗಿತ್ತು . ಅನುಷ ಸಹ ಆತಂಕದಲ್ಲಿದ್ದು ಪ್ರತಾಪನಿಗೆ ಫೋನ್ ಮಾಡಿ ತಕ್ಷಣವೇ ಮನೆಗೆ ಬರುವಂತೆ ಹೇಳಿ ಕರೆಸಿಕೊಂಡಳು. ಪ್ರತಾಪ್ ವಿಷಯ ತಿಳಿದು ಆ ಊರಿನಲ್ಲಿ ತನಗೆ ಪರಿಚಯವಿದ್ದ ಎಸೈಗೆ ಕರೆ ಮಾಡಿ ಅವನ ಸಹಾಯ ಪಡೆಯುವೆ ಎಂದಾಗ ರವಿ ಅವನನ್ನು ತಡೆದು........ಈಗಲೇ ಯಾರಿಗೂ ತಿಳಿಸಬೇಡ ನಾ ಇಲ್ಲಿಗೆ ಬರುವಾಗಲೇ ನೀತು ಹೇಳಿದ್ದಳು ಅಕಸ್ಮಾತ್ ನನ್ನ ಫೋನ್ ಆಫಾಗಿದ್ದರೆ ನಾನಾಗೇ ಕರೆ ಮಾಡುವ ತನಕ ಯಾರೂ ಆತಂಕಗೊಳ್ಳಬೇಡಿ ಅಂತ ಅದಕ್ಕೀಗ ಸುಮ್ಮನಿರು. ಇತ್ತ ರವಿ.....ಪ್ರತಾಪ್....ಶೀಲಾ ಮತ್ತು ಅನುಷ ಆತಂಕದಲ್ಲಿ ಕಾಲ ಕಳೆಯುತ್ತಿದ್ದರೆ ಅತ್ತ ಕಡೆ ರಜನಿಯೊಬ್ಬಳೇ ತುಂಬ ಚಡಪಡಿಸುತ್ತಿದ್ದಳು.

ಮೂವರೂ ಬೆಂಕಿ ಆರುವವರೆಗೂ ಇನೋವಾದೊಳಗೇ ಕಾಯುತ್ತ ಕುಳಿತಿದ್ದಾಗ ಹರೀಶ......ಅಲ್ಲಾ ನೀತು ಎಸ್.ಯು.ವಿ ಯನ್ನು ಅಲ್ಲೇ ಏಕೆ ಬಿಟ್ಟು ಬಂದಿದ್ದು ಅದನ್ನು ತೆಗೆದುಕೊಂಡು ಬರಬಹುದಿತ್ತಲ್ಲಾ ?

ನೀತು.......ರೀ ನಾನು ಸ್ವಲ್ಪ ಮುಂದಾಲೋಚಿಯೇ ಅದನ್ನು ಅಲ್ಲಿ ಬಿಡಲು ಹೇಳಿದ್ದು . ಅಶೋಕ ಅವರಿಂದ ಏಟು ತಿಂದು ಜ್ಞಾನ ತಪ್ಪಿದ್ದಾಗ ನಾನು ನಿಮಗೆ ಫೋನ್ ಮಾಡಲೆಂದು ನನ್ನ ಮೊಬೈಲ್ ಆನ್ ಮಾಡಿದ್ದೆ ನಂತರ ನೀವು ಅಲ್ಲಿಗೆ ಬಂದ ನಂತರವೇ ನಿಮ್ಮ ಫೋನನ್ನು ಆಫ್ ಮಾಡಿಸಿದ್ದು . ಅಂದರೆ ನಮ್ಮಿಬ್ಬರ ಫೋನ್ ಅಲ್ಲಿನ ಟವರ್ ಸಿಗ್ನಲ್ಲಿನಲ್ಲಿ ರೆಕಾರ್ಡ್ ಆದಂತೆಯೇ ಅದು ಪೋಲಿಸರಿಗೆ ತನಿಖೆಯಲ್ಲಿ ತಿಳಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ಮೊದಲೇ ಸೇಫಾಗಿರಲು ಎಸ್.ಯು.ವಿ ಟೈರನ್ನು ಪಂಕ್ಚರ್ ಮಾಡಿಸಿದ್ದು ಜೊತೆಗೆ ಗಾಡಿಯನ್ನೂ ಅಲ್ಲೇ ಬಿಟ್ಟು ಬಂದಿದ್ದು .

ಅಶೋಕ.......ಪೋಲಿಸರು ತನಿಖೆ ಯಾಕೆ ಮಾಡ್ತಾರೆ ನಾವ್ಯಾರೂ ಮಂಜುನಾಥನ ವಿಷಯವಾಗಿ ಅವರಿಗೆ ಕಂಪ್ಲೇಂಟ್ ಕೊಡುವುದಿಲ್ಲವಲ್ಲ ?

ಹರೀಶ........ಹೂಂ ನೀನು ಹೇಳೋದು ಕೂಡ ಸರಿಯೇ. ಮಂಜುನಾಥ ಏನಾದರು ರವಿ ಕೈಗೆ ಸಿಕ್ಕಿಬಿಟ್ಟಿದ್ದರೆ ಅವನು ಬಡಿದೇ ಸಾಯಿಸಿ ಬಿಡುತ್ತಿದ್ದ ಇನ್ನು ಮಗ ಕಾಣೆಯಾಗಿದ್ದಾನೆಂದು ಕಂಪ್ಲೇಂಟ್ ಕೊಡುವುದಂತು ಸಾಧ್ಯವಿಲ್ಲದ ಮಾತು.

ನೀತು ಇಬ್ಬರನ್ನು ದುರುಗುಟ್ಟಿಕೊಂಡು ನೋಡುತ್ತ........ರೀ ನಿಮ್ಮಿಬ್ಬರಿಗೆ ಸ್ವಲ್ಪ ತಲೆ ಅನ್ನೊದು ಇದೆಯಲ್ಲಾ ಅದನ್ನೂ ಆಗಾಗ ಉಪಯೋಗಿಸಿರಿ. ಇಲ್ಲಿ ಕೇವಲ ಮಂಜುನಾಥ ಒಬ್ಬನೇ ಕಾಣೆಯಾಗಿಲ್ಲ ಅವನ ಜೊತೆ ಅವನ ಸ್ನೇಹಿತನೂ ಕಣ್ಮರೆಯಾಗಿದ್ದಾನೆ ಹಾಗಿರುವಾಗ ಅವನ ಮನೆಯವರು ಸುಮ್ಮನೆ ಕೂರುತ್ತಾರಾ ? ಅವರು ಕಂಪ್ಲೇಂಟ್ ಕೊಟ್ಟರೆ ಪೋಲಿಸರು ತನಿಖೆ ಮಾಡುತ್ತಾರೆ ಆಗ ಅವರಿಬ್ಬರ ಮೊಬೈಲಿನ ಕೊನೆಯ ಲೊಕೇಷನ್ ಯಾವುದೆಂದು ಹುಡುಕುತ್ತ ಹೋದಾಗ ನಮ್ಮ ಮೊಬೈಲುಗಳೂ ಅದೇ ಟವರಿನಲ್ಲಿ ಆಕ್ಟಿವ್ ಆಗಿದ್ದ ವಿಚಾರ ಅವರಿಗೆ ತಿಳಿಯುವುದಿಲ್ಲವಾ ? ಆಗ ನಮ್ಮನ್ನು ವಿಚಾರಿಸಲು ಬಂದರೆ ನೀವಿಬ್ಬರು ಅವರ ಪ್ರಶ್ನೆಗಳಿಗೆ ಧೈರ್ಯವಾಗಿ ಉತ್ತರಿಸುತ್ತೀರಾ ? ಸಾಧ್ಯವೇ ಇಲ್ಲ . ಪೆದ್ದುಪೆದ್ದಾಗಿ ಏನೇನೋ ಬಡಬಡಿಸುತ್ತೀರ ಆಗವರಿಗೆ ಅನುಮಾನ ಬರುವುದಿಲ್ಲವಾ ? ಇವರ ರೀತಿ ದೊಡ್ಡ ಹೀರೊ ತರಹ ಹೋಗಿ ಒಂದೇ ಏಟಿಗೆ ಜ್ಞಾನತಪ್ಪಿ ಬಿದ್ದಂತೆ ಎಂದಾಗ ಅಶೋಕ ತಲೆತಗ್ಗಿಸಿ ಕುಳಿತನು.

ಹರೀಶ......ಲೇ ಪಾಪ ಬಿಡು ಅಶೋಕನನ್ನ ಅದೆಷ್ಟು ಸಲ ಅದೇ ವಿಷಯಕ್ಕೆ ಬಯುತ್ತಾ ಇರ್ತೀಯಾ ? ಆ ಇಬ್ಬರನ್ನು ನೀನೊಬ್ಬಳೇ ಹೇಗೆ ನಿಭಾಯಿಸಿದೆ ? ನಿನಗೇನು ತೊಂದರೆ ಆಗಲಿಲ್ಲ ತಾನೆ ?

ನೀತು.......ನನಗೆ ಕೋಪ ಬಂದಾಗಲೆಲ್ಲಾ ಬೈತೀನಿ ನೀವೂ ಇವರನ್ನು ವಹಿಸಿಕೊಂಡು ಮಾತನಾಡುವುದು ಸರಿಯಲ್ಲ ಅದನ್ನು ಮೊದಲು ತಿಳಿಯಿರಿ. ಆ ಇಬ್ಬರು ಬಡ್ಡಿ ಮಕ್ಳನ್ನ ಹೇಗೆ ನಿಭಾಯಿಸಿದೆ ಆ ವಿಷಯವನ್ನು ನಿಮಗೆ ಹೇಳುವುದಿಲ್ಲ ಆದರೆ ಅವರಿಂದ ನನಗ್ಯಾವುದೇ ತೊಂದರೆಯೂ ಆಗಲಿಲ್ಲ . ಅವರಿಬ್ಬರನ್ನು ನಾನು ಸಾಯಿಸದೆ ಹೋಗಿದ್ದರೆ ಶೀಲಾಳಿಗೆ ತೊಂದರೆ ಕಟ್ಟಿಟ್ಟ ಬುತ್ತಿಯಾಗಿತ್ತು ಜೊತೆಗೆ ಈ ಅಶೋಕ ಮಾಡಿದಂತ ಸಾಹಸದಿಂದ ರಜನಿ ಮತ್ತು ರಶ್ಮಿ ಕೂಡ ಅಪಾಯದಲ್ಲಿ ಸಿಲುಕುತ್ತಿದ್ದರು. ಅವರು ಮೊದಲೇ ಹೆಂಡ ಕುಡಿದು ಗಾಂಜಾದ ನಶೆಯಲ್ಲಿದ್ದರು ಇವರೋ ಅವರೆದುರು ದೊಂಬರಾಟ ಆಡಲಿಕ್ಕೆ ಹೋಗಿ ಒಂದೇ ಹೊಡೆತದಿಂದ ಮಕಾಡೆ ಮಲಗಿಬಿಟ್ಟರು.............ಇನ್ನೂ ಒಂದೇ ಸಮನೇ ಬೈಯುತ್ತಿದ್ದಳು.

ನೀತು ತುಂಬ ಕೋಪದಲ್ಲಿದ್ದಾಳೆಂದು ಅಶೋಕ ಮತ್ತು ಹರೀಶನಿಗೆ ಅರ್ಥವಾಗಿದ್ದು ಇಬ್ಬರು ಅವಳನ್ನು ಕೆಣಕುವ ಬದಲಿಗೆ ತೆಪ್ಪಗಿರುವುದೇ ತಮ್ಮ ಆರೋಗ್ಯಕ್ಕೆ ಉತ್ತಮವೆಂದರಿತು ಸುಮ್ಮನಿದ್ದರು. ಇಟ್ಟಿಗೆಯ ಗೂಡಿಗೆ ಇವರು ಹಚ್ಚಿದ್ದ ಬೆಂಕಿ ಪೂರ್ತಿಯಾಗಿ ಆರಿದ ಬಳಿಕ ಮೂವರು ಅಲ್ಲಿಗೆ ಹೋಗಿ ರಾಜುವಿನ ಮತ್ತು ಮಂಜುನಾಥನ ದೇಹದ ಕಳೇಬರವೇನಾದರು ಉಳಿದಿದೆಯಾ ಎಂದು ಪರಿಶೀಲಿಸಿದರು. ಅವರಿಬ್ಬರ ದೇಹ ಸಂಪೂರ್ಣ ಸುಟ್ಟು ಬೂದಿಯಾಗಿದ್ದು ಬರೀ ಕೆಲವು ಮೂಳೆಗಳು ಮಾತ್ರ ಅಲ್ಲಿ ಉಳಿದಿತ್ತು . ನೀತು ಇಬ್ಬರಿಗೆ ಸುತ್ತಮುತ್ತ ನೀರು ಇರುವುದಾ ಎಂದು ಹುಡುಕಿ ಎಂದೊಡನೆ ಅಶೋಕ ಮತ್ತು ಹರೀಶ ಅಲ್ಲೆಲ್ಲಾ ತಡಕಾಡಿ ಕೊನೆಗೂ ಒಂದು ಡ್ರಮ್ಮಿನಲ್ಲಿ ನೀರು ದೊರಕಿತು. ಅದನ್ನು ಕಷ್ಟಪಟ್ಟು ಹೆಣಗಳನ್ನು ಸುಟ್ಟಿರುವ ಜಾಗದ ಬಳಿ ತಂದು ಬೆಂಕಿ ಹಚ್ಚಿದ್ದ ಜಾಗಕ್ಕೆ ಸುರಿದು ತಣ್ಣಗಾಗಿಸಿದರು. ನೀತು ಹೆಣಗಳ ಪಳೆಯುಳಿಕೆ ಮೂಳೆಗಳನ್ನೆಲ್ಲಾ ಶೇಖರಿಸಿ ಅದನ್ನು ಇನೋವಾಗೆ ಸಾಗಿಸುವಂತೆ ಗಂಡಂದಿರಿಗೆ ತಿಳಿಸಿ ಎಲ್ಲಾ ಕೆಲಸಗಳ ಮುಗಿಸಿ ಹೊರಟಾಗ ಸಮಯ ಮಧ್ಯರಾತ್ರಿ ಎರಡಾಗಿತ್ತು .

ನೀತು ತನ್ನ ಮೊಬೈಲ್ ಆನ್ ಮಾಡಿ ಮೊದಲು ರಜನಿಗೆ ಕರೆ ಮಾಡಿ ತಾನೀಗ ಮನೆಗೆ ಬರುತ್ತಿರುವ ವಿಷಯ ಹೇಳಿದ್ದಕ್ಕವಳು ಪ್ರಶ್ನಿಸಲು ಹೊರಟಾಗ ನೀತು ಅವಳನ್ನು ತಡೆಯುತ್ತ ಮಿಕ್ಕಿದ್ದೆಲ್ಲಾ ಮನೆಗೆ ಬಂದ ನಂತರ ಮಾತಾಡೋಣ ಎಂದಳು. ಶೀಲಾ ಮತ್ತಿತರರು ಕೂಡ ಆತಂಕದಲ್ಲಿದ್ದಾರೆ ಅವರಿಗೆ ಕರೆ ಮಾಡುವಂತೆ ರಜನಿ ತಿಳಿಸಿದಾಗ ನೀತು ಗೆಳತಿಗೆ ಫೋನ್ ರಿಂಗಿಸಿದಳು. ಶೀಲಾ ಕರೆ ರಿಸೀವ್ ಮಾಡುತ್ತಲೇ ಪ್ರಶ್ನೆಗಳ ಸುರಿಮಳೆ ಸುರಿಸತೊಡಗಿದರೆ ನೀತುವಿನ ಒಳ ಮನಸ್ಸು ಈಗ ತಾನೇ ತನ್ನ ಪ್ರಾಣ ಸ್ನೇಹಿತೆ ಹೆತ್ತ ಮಗನನ್ನು ಕೈಯಾರೆ ಕೊಂದು ಸುಟ್ಟು ಹಾಕಿರುವುದನ್ನು ನೆನೆದು ತುಂಬ ನೋವು ಅನುಭವಿಸುತ್ತಿತ್ತು . ಆದರೂ ತನ್ನ ಕುಟುಂಬದ ಒಳಿತಿಗಾಗಿ ತಾನೇನು ಮಾಡಬೇಕಿತ್ತೋ ಅದನ್ನು ಸಾಧಿಸಿದ ಸಮಾಧಾನವೂ ಅವಳಿಗಿತ್ತು .

ನೀತು.......ಲೇ ಯಾವುದೋ ಕೆಲಸದ ಮೇಲೆ ನಾವು ಹೊರಗೆ ಬಂದಿದ್ದೆವು ಅದೇ ಜಮೀನಿನ ಮಾರಾಟದ ಸಲುವಾಗಿ ಮಾತನಾಡಬೇಕಿತ್ತಲ್ಲ ಆದರೆ ಆ ಹೋಟೆಲ್ಲಿನ ಒಳಗೆ ಸಿಗ್ನಲ್ಲೇ ಸಿಗುತ್ತಿರಿಲಿಲ್ಲ . ಈಗ ಕೆಲಸವೆಲ್ಲಾ ಮುಗಿದ ಬಳಿಕ ಅಲ್ಲಿಂದ ಹೊರಟ ತಕ್ಷಣ ನಿನಗೆ ಫೋನ್ ಮಾಡುತ್ತಿರುವೆ ಏನೂ ಆತಂಕಪಡಬೇಡ ನನ್ನ ಜೊತೆ ಹರೀಶ ಮತ್ತು ಅಶೋಕ ಇಬ್ಬರೂ ಇದ್ದಾರೆ ನಾವು ಆರಾಮವಾಗಿದ್ದೀವಿ. ಈಗ ಹೇಳು ಅಲ್ಲಿ ಎಲ್ಲರೂ ಆರಾಮ ತಾನೇ ? ಚಿನ್ನಿ ಹೇಗಿದ್ದಾಳೆ ? ನಾನು ಕಾಣದೆ ಹುಡುಕುತ್ತಿದ್ದಳಾ ಅಥವ ಆಟ ಆಡಿಕೊಂಡಿದ್ದಳಾ ?

ಶೀಲಾ.......ಸರಿ ನೀನು ಯಾವಾಗ ಬರುವೆ ? ಚಿನ್ನಿ ನಿನ್ನನ್ನು ಹುಡುಕುತ್ತಲೇ ಇದ್ದಳು ಮಮ್ಮ........ಮಮ್ಮ ಅಂತ ಅಲ್ಲಿಂದ ಇಲ್ಲಿಗೆ ಓಡಾಡುತ್ತ ಆದರೆ ಗಿರೀಶ ಸುರೇಶ ಇಬ್ಬರೂ ಅವಳನ್ನು ಆಟವಾಡಿಸುತ್ತ ಎಲ್ಲಾ ಮರೆಸಿದ್ದರು. ಈಗ ಅವರ ಜೊತೆಯಲ್ಲೇ ಮಲಗಿದ್ದಾಳೆ ತಾಳು ಅನುಷ ಮಾತನಾಡ್ತಾಳಂತೆ.

ಅನುಷಾಳ ಜೊತೆ ಕೆಲಹೊತ್ತು ಮಾತನಾಡಿ ಅಲ್ಲಿಗೆ ಪ್ರತಾಪ್ ಕೂಡ ಬಂದಿರುವ ವಿಷಯ ತಿಳಿದು ಅವನ ಜೊತೆಗೂ ಮಾತಾಡಿದ ನೀತು ನಾಳೆ ಬೆಳಿಗ್ಗೆ ಒಂದು ಟ್ಯಾಕ್ಸಿ ಅರೇಂಜ್ ಮಾಡಿ 5 ಘಂಟೆಗೆಲ್ಲಾ ರವಿಯನ್ನು ಅಶೋಕನ ಮನೆಗೆ ಕಳಿಸಿಕೊಡುವ ವ್ಯವಸ್ಥೆ ಮಾಡುವಂತೆ ಹೇಳಿದಳು. ಪ್ರತಾಪ್ ಫೋನ್ ರವಿಗೆ ನೀಡುತ್ತ ತಕ್ಷಣವೇ ಟ್ಯಾಕ್ಸಿಯವನಿಗೆ ಕರೆ ಮಾಡಿ ಬೆಳಿಗ್ಗೆ ನಾಲ್ಕುವರೆಗೆಲ್ಲಾ ತಾನು ಹೇಳುವ ಮನೆ ಬಳಿ ಬರುವಂತೆ ತಿಳಿಸಿದನು. ರವಿಗೆ ಬೆಳಿಗ್ಗೆ ಬೇಗನೇ ಹೊರಡಲು ಹೇಳಿದ ನೀತು ಆಫೀಸಿಗೆ ಎರಡು ದಿನ ರಜೆ ಕೂಡ ಹಾಕಿ ಮಿಕ್ಕ ವಿಷಯ ಇಲ್ಲಿ ಬಂದಾಗ ಹೇಳುವೆ ಎಂದಳು.

ಶೀಲಾ.....ನೀನು ಯಾವಾಗ ಬರ್ತೀಯಾ ?

ನೀತು.......ನಾಳೆ ರಾತ್ರಿಯೊಳಗೆ ಎಲ್ಲರೊಂದಿಗೆ ಬರುವೆ. ನಾಳೆ ಜಮೀನಿನ ರಿಜಿಸ್ರ್ಟೇಶನ್ ಕೂಡ ಇದೆಯಲ್ಲ ಅದನ್ನು ಮುಗಿಸಿಕೊಂಡು ಹೊರಡುತ್ತೇವೆ ನೀನಿನ್ನು ಆತಂಕಪಡದೆ ಆರಾಮವಾಗಿ ಮಲಗು ಬೆಳಿಗ್ಗೆ ಬೇಗ ಏಳಲು ಹೋಗಬೇಡ ಸ್ವಲ್ಪ ಅನುಷಾಳಾಗೆ ಫೋನ್ ಕೊಡು.

ನೀತು.......ಅನು ರವಿ ಅಣ್ಣನನ್ನು ಇನ್ನೆರಡ್ಮೂರು ಘಂಟೆಯಲ್ಲಿ ಕಳಿಸಿಕೊಡು ಆಗ ಅಣ್ಣನಿಗೆ ಸ್ವಲ್ಪ ಕಾಫಿ ಮಾಡಿಕೊಡು ಆದರೆ ಶೀಲಾಳನ್ನು ಮಾತ್ರ ಏಳಲು ಬಿಡಬೇಡ ತುಂಬ ಟೆನ್ಷನ್ ಮಾಡಿಕೊಂಡಿದ್ದಾಳೆ ಸ್ವಲ್ಪ ರೆಸ್ಟ್ ಮಾಡಲಿ. ನೀನು ಸಹ ಬ್ಯಾಂಕಿಗೆ ರಜೆ ಹಾಕಿಬಿಡು ಹೇಗೂ ಅಣ್ಣನಿಂದ ನಿಮ್ಮ ಎಂ.ಡಿ ಗೆ ಆಗಲೇ ಎಲ್ಲ ವಿಷಯ ತಿಳಿಸಿಯಾಗಿದೆ ಸೋಮವಾರ ಹೋಗಿ ರಾಜೀನಾಮೆ ಕೊಟ್ಟು ಬರೋಣ. ಚಿನ್ನಿ ಎದ್ದಾಗ ಅವಳ ಸಂಪೂರ್ಣ ಜವಾಬ್ದಾರಿ ನಿನ್ನದು.

ಅನುಷ......ಸರಿಯಕ್ಕ ನಾನೆಲ್ಲಾ ನೋಡಿಕೊಳ್ಳುವೆ ನೀವು ಆರಾಮವಾಗಿ ಬನ್ನಿ ಇಲ್ಲಿನ ಬಗ್ಗೆ ಚಿಂತಿಸಲು ಹೋಗಬೇಡಿ ಚಿನ್ನಿಯನ್ನು ನಾನೇ ನಿಭಾಯಿಸುವೆ.

ನೀತು ಫೋನ್ ಕಟ್ ಮಾಡಿ ಮನೆ ತಲುಪುವ ತನಕ ಹಿಂದಿನ ಸೀಟಿನಲ್ಲಿ ಕಣ್ಮುಚ್ಚಿಕೊಂಡು ಇಂದು ನಡೆದ ಘಟನೆಗಳ ಬಗ್ಗೆ ಯೋಚಿಸುತ್ತಿದ್ದಳು. ಮನೆಗೆ ಬಂದಾಗ ಇವರ ದಾರಿಯನ್ನೇ ಎದುರು ನೋಡುತ್ತಿದ್ದ ರಜನಿಗೆ ನಾನು ಮೊದಲು ಸ್ನಾನ ಮಾಡಿ ಬರುವೆನೆಂದೇಳಿ ಸ್ವಾಮೀಜಿಗಳು ಕೊಟ್ಟಿದ್ದ ಚೊಂಬುಗಳನ್ನು ಎತ್ತಿಕೊಂಡು ನೀತು ಬಾತ್ರೂಮಿಗೆ ಹೋದಳು. ಅದರಲ್ಲಿನ ಒಂದು ಚೊಂಬಿನಲ್ಲಿದ್ದ ಪವಿತ್ರವಾದ ಜಲದಿಂದ ದೇಹವನ್ನು ಶುದ್ದೀಕರಿಸಿಕೊಂಡು ಸ್ನಾನ ಮುಗಿಸಿ ಹೊರಬಂದು ರಜನಿ ಕೊಟ್ಟ ಕಾಫಿ ಕುಡಿಯತೊಡಗಿದಳು. ಅದುವರೆಗೆ ರಜನಿಗೆ ಜಮೀನಿನ ವಿಷಯದ ಮಾತುಕತೆಗೆ ಹೋಗಿದ್ದೆವೆಂದು ಹರೀಶ ಒಂದು ಕಥೆ ಕಟ್ಟಿ ಹೇಳಿದ್ದನು. ನೀತು ನಿನ್ನೆಯಿಂದಲೂ ನಿದ್ದೆ ಮಾಡಿರದ ಕಾರಣ ಕಾಫಿ ಕುಡಿದು ಬೆಳಿಗ್ಗೆ ರವಿ ಅಣ್ಣ ಬಂದಾಗ ಏಳಿಸುವಂತೆ ರಜನಿಗೆ ಹೇಳಿ ರಶ್ಮಿಯ ಪಕ್ಕದ ರೂಮಿನಲ್ಲಿ ಹರೀಶನೊಂದಿಗೆ ಹೋಗಿ ಮಲಗಿದಳು.

ಬೆಳಿಗ್ಗೆ ಆರುವರೆಗೆಲ್ಲಾ ರವಿ ಬಂದಾಗ ನೀತು ಫ್ರೆಶಾಗಿ ಅವನನ್ನು ರೂಮಿಗೆ ಕರೆದೊಯ್ದು........ಅಣ್ಣ ನೀವು ಮಂಜುನಾಥನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮಗೆ ಆಸ್ಪತ್ರೆಯಲ್ಲಿ ಪರಿಚಯಿಸಿದ್ದ ಸ್ವಾಮೀಜಿಗಳು ತಮ್ಮ ಜೊತೆ ಅವನನ್ನು ಹಿಮಾಲಯಕ್ಕೆ ಕರೆದೊಯ್ದಿದ್ದಾರೆ ಇನ್ನು ಅಲ್ಲಿಂದ ಹಿಂದಿರುಗಿ ಬರುವನೋ ಅಥವಾ ಸನ್ಯಾಸಿಯಾಗಿ ಅಲ್ಲೇ ನೆಲೆಸುವನೋ ನನಗೆ ತಿಳಿಯದು ಆದರೀ ವಿಷಯ ಹೊರಗಿನವರಿಗೆ ತಿಳಿಸಲಿಕ್ಕೆ ಹೋಗಬೇಡಿ. ನೀವೀಗಲೇ ಅವನ ರೆಸಿಡೆನ್ಷಿಯಲ್ ಕಾಲೇಜಿಗೆ ಹೋಗಿ ಅಲ್ಲಿನ ವ್ಯವಸ್ಥಾಪಕರಿಂದ ಅವನು ಹೇಗೆ ಕಣ್ಮರೆಯಾದ ಎಂಬುದನ್ನು ತಿಳಿದುಕೊಂಡು ಅದೇ ಊರಿನ ಠಾಣೆಯಲ್ಲಿ ಮಂಜುನಾಥ ಕಣೆಯಾದ ಬಗ್ಗೆ ನೀವೂ ಒಂದು ಕಂಪ್ಲೇಂಟ್ ಕೊಟ್ಟು ಬನ್ನಿ . ರವಿ ಸರಿಯೆಂದು ಹೊರಟಾಗ ಅವನನ್ನು ತಡೆದು ತಾನೂ ಸಹ ನಿಮ್ಮ ಜೊತೆ ಬರುವುದಾಗಿ ಹರೀಶ ಕೂಡ ಹೊರಟನು.

ನೀತು ತಿಂಡಿ ತಿನ್ನುತ್ತಿರುವಾಗ ಅವಳಿಗೊಂದು ಫೋನ್ ಬಂದು ಅತ್ತಲಿಂದ ಪೋಲಿಸ್ ಪೇದೆಯೊಬ್ಬ ಕರೆ ಮಾಡಿ ಪಾಳು ಬಿದ್ದಿರುವ ಮನೆ ಹತ್ತಿರ ನಿಮ್ಮ ಎಸ್.ಯು.ವಿ ನಿಂತಿರುವುದು ನಿಮಗೆ ತಿಳಿದಿದೆಯಾ ಎಂದು ಕೇಳಿದನು. ನೀತು ತಟ್ಟನೆ........ಹಾಂ ಸರ್ ನೆನ್ನೆ ಸಂಜೆ ಆ ರಸ್ತೆಯಲ್ಲಿ ಹೋಗುವಾಗ ಪಂಕ್ಚರ್ ಆಗಿದ್ದರಿಂದ ಅಲ್ಲೇ ನಿಲ್ಲಿಸಿ ಬರಬೇಕಾಯಿತು. ಈಗ ಯಾರಾದರು ಪಂಕ್ಚರ್ ಹಾಕುವವರನ್ನು ಕರೆತಂದು ರೆಡಿ ಮಾಡಿಸುವ ಅಂತಲೇ ಇದ್ದೆ ಅಷ್ಟರಲ್ಲೇ ನೀವು ಫೋನ್ ಮಾಡಿದ್ರಿ . ಪೇದೆ ಸರಿ ನಾನು ಇಲ್ಲಿಯೇ ಇರುವೆ ಹತ್ತಿರದಲ್ಲೇ ಒಬ್ಬ ಪಂಕ್ಚರ್ ಹಾಕುವವನು ಸಹ ಇದ್ದಾನೆ ನೀವು ನೇರವಾಗಿ ಬಂದುಬಿಡಿ ನಾನು ಅವನನ್ನು ಕರೆಸಿರುವೆ. ನೀತು ಸರಿ ಎಂದೇಳಿ ತಿಂಡಿ ಮುಗಿಸಿ ಹೊರಟಾಗ ಅಶೋಕ ತಾನೂ ಬರುವುದಾಗಿ ಹೇಳಿದ್ದಕ್ಕೆ ಅವನನ್ನು ಸ್ವಲ್ಪ ದೂರ ಕರೆದೊಯ್ದ ನೀತು......ನಾನು ರಜನಿ ಹೋಗುತ್ತೇವೆ ನೀವು ಬಂದರೆ ಪೋಲಿಸರಿಗೆ ಸುಮ್ಮನೆ ಅನುಮಾನ ಬರಬಹುದು ನೀವು ಹೋಗಿ ಜಮೀನಿನ ರಿಜಿಸ್ರ್ಟೇಶನ್ ಕೆಲಸವನ್ನು ಮುಗಿಸಿಕೊಂಡು ಬನ್ನಿರಿ ಎಂದೇಳಿ ರಜನಿಯ ಜೊತೆ ಆಟೋದಲ್ಲಿ ಹೊರಟಳು.

ನೀತು ಮತ್ತು ರಜನಿ ಎಸ್.ಯು.ವಿ ನಿಲ್ಲಿಸಿದ್ದ ಜಾಗವನ್ನು ತಲುಪಿದಾಗ ಎಂಟತ್ತು ಮಂದಿ ಪೋಲಿಸರು ಕಾರಿನ ಬಳಿಯೇ ನಿಂತು ಪಾಳು ಬಿದ್ದಿರುವ ಮನೆಯತ್ತ ನೋಡಿ ತಮ್ಮಲ್ಲೇ ಚರ್ಚೆ ನಡೆಸುತ್ತಿದ್ದರು. ನೀತು ಅವರಲ್ಲಿದ್ದ ಇನಸ್ಪೆಕ್ಟರ್ ಹತ್ತಿರ ಹೋಗಿ ಅವನಿಗೆ ತಾನೇ ಕಾರಿನ ಒಡತಿ ನೆನ್ನೆ ಸಂಜೆ ಇಲ್ಲಿ ಪಂಕ್ಚರ್ ಆಗಿದ್ದ ಕಾರಣ ನಿಲ್ಲಿಸಿ ಹೋಗಬೇಕಾಯಿತು ಎಂದಳು. ಅಷ್ಟರಲ್ಲೇ ಅಶೋಕ ಎಸ್ಪಿ ಕಡೆಯಿಂದ ಆ ಇನಸ್ಪೆಕ್ಟರಿಗೆ ಫೋನ್ ಮಾಡಿಸಿ ಬಂದಿರುವ ಮಹಿಳೆಯರು ತಮ್ಮ ಕುಟುಂಬದ ಪರಿಚಯಸ್ಥರು ಅವರಿಗೆ ಕಾರ್ ಪಂಕ್ಚರ್ ಹಾಕಿಸಲು ಸಹಾಯ ಮಾಡಿ ಕ್ಷೇಮವಾಗಿ ತೆರಳುವಂತೆ ನೋಡಿಕೊಳ್ಳಿ ಎಂದು ಆಜ್ಞಾಪಿಸಿದನು. ಎಸ್ಪಿ ಆಜ್ಞೆ ಕೇಳಿ ಅಚ್ಚರಿಗೊಂಡ ಇನಸ್ಪೆಕ್ಟರ್ ಅವರಿಬ್ಬರ ಕಡೆಗೊಮ್ಮೆ ನೋಡಿ ಪೇದೆಯನ್ನು ಕರೆದು ತಕ್ಷಣವೇ ಪಂಕ್ಚರ್ ಹಾಕುವವನನ್ನು ಕರೆತರಲು ಕಳಿಸಿದನು. ಎಸ್ಪಿ ಖುದ್ದಾಗಿ ಕರೆ ಮಾಡಿದ್ದರಿಂದ ಇವರು ಯಾವುದೋ ದೊಡ್ಡ ಮನೆತನದವರೇ ಇರಬೇಕೆಂದು ತಿಳಿದ ಇನಸ್ಪೆಕ್ಟರ್ ಅವರ ಕಾರಿಗೆ ಪಂಕ್ಚರ್ ಹಾಕಿಸಿ ಗೌರವದಿಂದ ಅಲ್ಲಿಂದ ಕಳಿಸಿಕೊಟ್ಟನು.

ಸಂಜೆ ಅಶೋಕ ಜಮೀನಿನ ರಿಜಿಸ್ರ್ಟೇಶನ್ ಮುಗಿಸಿಕೊಂಡು ಬಂದಾಗ ನೀತು ತಾರಸಿಯಲ್ಲಿ ಹರೀಶನ ಜೊತೆ ಮಾತನಾಡುತ್ತಿರುವ ವಿಷಯ ತಿಳಿದು ತಾನೂ ಅತ್ತ ಹೆಜ್ಜೆ ಹಾಕಿದನು. ರಜನಿ ಗಂಡನನ್ನು ತಡೆಯುತ್ತ .........ರೀ ನೀತು ಕೂಡ ಏನೂ ಹೇಳುತ್ತಿಲ್ಲ ಹರೀಶ ಅವರು ಫೋನ್ ಮಾಡಿದಾಗ ಮೊದಲು ನಾನೇ ಅವರ ಜೊತೆ ಮಾತನಾಡಿದೆ. ನನ್ನ ಜೊತೆ ಔಪಚಾರಿಕವಾಗಿ ಮಾತನಾಡಿ ನೀತುವಿಗೆ ಫೋನ್ ಕೊಡುವಂತೇಳಿದಾಗ ಇವಳು ಫೋನ್ ತೆಗೆದುಕೊಂಡು ತಾರಸಿಗೆ ಹೋಗಿದ್ದಾಳೆ. ಅದೇನು ಅಂತಹ ಗುಟ್ಟಿನ ವಿಷಯ ನನ್ನೆದುರಿಗೆ ಮಾತನಾಡಲಾಗದಂತದ್ದು ನೀವಾದರೂ ಹೇಳಿ.

ಅಶೋಕ ಹೆಂಡತಿಯ ಕೆನ್ನೆ ಸವರಿ........ನೋಡು ರಜನಿ ಕೆಲವು ವಿಷಯಗಳು ಗೌಪ್ಯವಾಗಿ ಇದ್ದರೇ ಮಾತ್ರ ಇಡೀ ಕುಟುಂಬಕ್ಕೆ ಒಳಿತು. ಈ ವಿಷಯ ನಿನಗೆ....ಶೀಲಾ....ಅನುಷ ಅಷ್ಟೇ ಏಕೆ ರವಿಗೂ ಸಹ ತಿಳಿದಿಲ್ಲ ಅಂದರೆ ನೀನೇ ಅರ್ಥೈಸಿಕೋ ಅದೆಷ್ಟು ಸೂಕ್ಷ್ಮವಾದದ್ದು ಅಂತ. ನಾವೇನೇ ಮಾಡಿದರೂ ಅದು ಇಡೀ ಕುಟುಂಬದ ಒಳ್ಳೆಯದಕ್ಕೇ ಎಲ್ಲರೂ ಸಂತೋಷದಿಂದ ನಗುನಗುತ್ತ ಬಾಳಬೇಕೆಂದು ಯಾಕೆ ನಿನಗೆ ನೀತು ಮೇಲೆ ನಂಬಿಕೆ ಇಲ್ಲವಾ ?

ರಜನಿ......ರೀ ನೀತುವಿನ ಮೇಲೆ ನನಗೆ ಎಲ್ಲರಿಗಿಂತ ಅದ್ಯಾಕೆ ನನಗೆ ನನ್ನ ಮೇಲಿರುವ ನಂಬಿಕೆಗಿಂತಲೂ ಅಪಾರವಾದ ನಂಬಿಕೆಯಿದೆ. ಆದರೆ ಅವಳೊಬ್ಬಳೇ ಈ ರೀತಿ ಚಿಂತೆ ಮಾಡುತ್ತ ಟೆನ್ಷನ್ನಿನಲ್ಲಿ ಇರುವುದನ್ನು ನನ್ನಿಂದ ನೋಡಲಾಗುತ್ತಿಲ್ಲ ಅದಕ್ಕೆ ಕೇಳಿದೆ. ನಮಗೆ ಹೇಳಬಹುದಾದ ವಿಷಯವಾಗಿದ್ದರೆ ಎಲ್ಲರಿಗಿಂತಲೂ ಮೊದಲು ನೀತು ನನಗೆ ಅಥವ ಶೀಲಾಳ ಜೊತೆ ಹಂಚಿಕೊಳ್ಳುತ್ತಿದ್ದಳು. ಈಗ ಅವಳೇ ನಮ್ಮಿಂದ ವಿಷಯ ಮರೆಮಾಚುತ್ತಿದ್ದಾಳೆ ಎಂದರೆ ಯಾವತ್ತಿಗೂ ಅದು ನಮಗೆ ತಿಳಿಯುವುದಿಲ್ಲ ಎಂಬುದು ಖಚಿತ.

ಅಶೋಕ ಹೆಂಡತಿಯ ತುಟಿಗೆ ಮುತ್ತಿಟ್ಟು ತಾರಸಿಗೆ ಹೋದಾಗ ನೀತು ಗಂಡ ಹೇಳುತ್ತಿದ್ದ ವಿಷಯಗಳನ್ನು ಗಮನದಿಂದ ಕೇಳಿಸಿಕೊಂಡು ಮುಂದೇನು ಮಾಡಬೇಕೆಂದು ಹೇಳಿ ಫೋನ್ ಇಟ್ಟಳು.

ಅಶೋಕನ ಕೈ ಹಿಡಿದ ನೀತು........ರೀ ಮೊನ್ನೆ ಕಾಲೇಜಿನವರು ಹುಡುಗರನ್ನು ಹತ್ತಿರದ ಸಿಟಿಗೆ ಯಾವುದೋ ಮ್ಯೂಸಿಯಂ ತೋರಿಸಲು ಕರೆತಂದಿದ್ದರಂತೆ. ಆ ಸಮಯವನ್ನು ಉಪಯೋಗಿಸಿಕೊಂಡ ಮಂಜುನಾಥ ಟಾಯ್ಲೆಟ್ಟಿಗೆಂದೇಳಿ ಹೋದವನು ಅಲ್ಲಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿದ್ದಾನೆ. ಕಾಲೇಜಿನವರು ಕೂಡ ಅವನು ಕಾಣೆಯಾದ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ದೂರು ಕೊಟ್ಟಿದ್ದಾರಂತೆ ಈಗ ರವಿ ಅಣ್ಣ ಸಹ ಅದೇ ಠಾಣೆಯಲ್ಲಿ ಮಗ ಕಣ್ಮರೆಯಾಗಿರುವ ಬಗ್ಗೆ ಕಂಪ್ಲೇಂಟ್ ಕೊಟ್ಟರಂತೆ. ಇನ್ನೇನು ಅಲ್ಲಿಗೋದ ಕೆಲಸ ಮುಗಿಯಿತಲ್ಲಾ ಅವರನ್ನು ನೇರವಾಗಿ ಕಾಮಾಕ್ಷಿಪುರಕ್ಕೆ ಬರಲು ಹೇಳಿದೆ.

ಅಶೋಕ........ಅದೆಲ್ಲ ಸರಿ ನೀತು ಇನೋವಾದಲ್ಲಿರುವ ಅಸ್ಥಿಗಳನ್ನು ಏನು ಮಾಡುವುದು ?

ನೀತು.......ಅದಕ್ಕಿಂತ ಮೊದಲು ನನ್ನ ಅಜ್ಜಿ ಮನೆಯ ಹತ್ತಿರ ಹೋಗಿ ಮಂಜುನಾಥನ ಸ್ನೇಹಿತನ ಮನೆಯ ಕಡೆಯಿಂದ ಪೋಲಿಸರಿಗೆ ಯಾವುದಾದರು ದೂರು ಬಂದಿದೆಯಾ ಎಂದು ತಿಳಿದುಕೊಳ್ಳಬೇಕು. ಈಗಿನ್ನೂ ನಾಲ್ಕು ಘಂಟೆ ನಾನು ರಜನಿ ಮತ್ತು ರಶ್ಮಿಯನ್ನು ಕರೆದುಕೊಂಡು ಅಜ್ಜಿ ಮನೆ ಬಳಿ ಹೋಗುವೆ ನೀವು ಇನೋವಾ ತೆಗೆದುಕೊಂಡು ನೇರವಾಗಿ ಊರಿಗೆ ತಲುಪಿ ಅಸ್ಥಿಗಳ ವಿಷಯ ನಾಳೆ ನೋಡಿಕೊಳ್ಳೋಣ.

ಅಶೋಕ ಸರಿಯೆಂದು ಊರಿಗೆ ಹೊರಟ ನಂತರ ನೀತು ಕೂಡ ರಜನಿ ಮತ್ತು ರಶ್ಮಿಯ ಜೊತೆ ತನ್ನ ಅಜ್ಜಿ ಮನೆಯನ್ನು ತಲುಪಿದಳು. ನೀತು ಬಂದಿರುವುದನ್ನು ನೋಡಿ ಪಕ್ಕದ ಮನೆಯಾಕೆ ಅವಳ ಬಳಿ ಬಂದು....... ನೀತು ಮಧ್ಯಾಹ್ನ ಯಾರೋ ಪೋಲಿಸಿನವರು ಬಂದಿದ್ದರು ಶೀಲಾ ಮಗನ ಸ್ನೇಹಿತನ್ಯಾರೋ ಕಾಣೆಯಾದ ಅದರ ಬಗ್ಗೆ ವಿಚಾರಿಸಲು ಶೀಲಾಳ ಮನೆಗೆ ಹೋಗಿದ್ದರಂತೆ. ಅಲ್ಲಿ ಯಾರೂ ಇಲ್ಲವೆಂದು ಇಲ್ಲಿ ನೀನು ಇದ್ದರೆ ಅವರ ಬಗ್ಗೆ ತಿಳಿಯಬಹುದೆಂದು ಪಕ್ಕದ ಮನೆಯವರು ಹೇಳಿದ್ದಕ್ಕೆ ಇಲ್ಲಿಗೆ ಬಂದಿದ್ದರು. ಅವಳು ವಿಷಯ ಹೇಳುತ್ತಿದ್ದಾಗಲೇ ಬೆಳಿಗ್ಗೆ ಎಸ್.ಯು.ವಿ ಬಳಿ ಸಿಕ್ಕಿದ್ದ ಇನಸ್ಪೆಕ್ಟರ್ ಮನೆಯ ಎದುರು ಜೀಪಿನಿಂದ ಇಳಿದನು.
ಅವನು ನೀತು ಹಾಗು ರಜನಿಯ ಕಡೆ ನೋಡಿ ಗಾಬರಿಗೊಂಡರೂ ಸಂಬಾಳಿಸಿಕೊಳ್ಳುತ್ತ......ಮೇಡಂ ನೀವು ಇಲ್ಲಿ ? ನೀತು ಅಂದರೆ.........?

ನೀತು......ನನ್ನ ಹೆಸರೇ ನೀತು ಇದು ನನ್ನ ಅಜ್ಜಿ ಮನೆ ಆದರೆ ನಾನು ಹುಟ್ಟಿ ಬೆಳೆದಿದ್ದೆಲ್ಲಾ ಇಲ್ಲಿಯೇ ಈಗ ಮದುವೆಯಾಗಿ ಕಾಮಾಕ್ಷಿಪುರದಲ್ಲಿ ನೆಲೆಸಿರುವೆ ನೀವೇನು ನನ್ನ ಮನೆ ಹತ್ತಿರ ಯಾಕೆ ಬಂದಿದ್ದೀರಾ ? ಏನು ಸಮಾಚಾರ ?

ಇನಸ್ಪೆಕ್ಟರ್.......ಮೇಡಂ ನಿಮ್ಮ ಬಳಿ ಶೀಲಾ ಮತ್ತು ರವಿ ಎಂಬುವವರ ಮಗನ ಬಗ್ಗೆ ಕೇಳಲು ಬಂದಿರುವೆ. ಅವರ ಮಗನ ಸ್ನೇಹಿತ ರಾಜು ಎಂಬುವವನು ನೆನ್ನೆಯಿಂದಲೂ ಕಾಣೆಯಾಗಿದ್ದಾನಂತೆ ಅದರ ಬಗ್ಗೆ ಅವನ ಮನೆಯವರು ನಮಗೆ ಕಂಪ್ಲೇಂಟ್ ಕೊಟ್ಟಿದ್ದಾರೆ ಹಾಗಾಗಿ ವಿಚಾರಿಸಲು ಬಂದಿರುವೆ.

ನೀತು........ಶೀಲಾ ನನ್ನ ಬಾಲ್ಯದ ಗೆಳತಿ ಕೆಲವು ದಿನಗಳಿಂದ ಅವಳಿಗೆ ಆರೋಗ್ಯ ಸರಿಯಿಲ್ಲ ಕಾರಣದಿಂದ ನನ್ನ ಜೊತೆ ನಮ್ಮೂರಿನಲ್ಲೇ ಇದ್ದಾಳೆ. ಎರಡ್ಮೂರು ದಿನಗಳಿಂದ ಅವಳ ಗಂಡ ರವಿ ಅಣ್ಣನೂ ಅಲ್ಲಿಯೇ ಉಳಿದುಕೊಂಡಿದ್ದರು ಆದರೆ ನೆನ್ನೆ ಅವರು ನನ್ನ ಗಂಡನ ಜೊತೆ ತಮ್ಮ ಮಗನನ್ನು ನೋಡಿಕೊಂಡು ಬರಲು xxxxx ಊರಿನ ರೆಸಿಡೆನ್ಷಿಯಲ್ ಕಾಲೇಜಿಗೆ ಹೋಗಿದ್ದಾರೆ ಅವರ ಮಗ ಮಂಜುನಾಥ ಅಲ್ಲಿಯೇ ತಾನೇ ಓದುತ್ತಿರುವುದು. ನೀವು ಹೇಳಿದ ಅವನ ಸ್ನೇಹಿತ ಯಾವತ್ತಿನಿಂದ ಕಾಣಿಸುತ್ತಿಲ್ಲವಂತೆ ?

ಇನಸ್ಪೆಕ್ಟರ್.......ಮೇಡಂ ನೆನ್ನೆಯಿಂದ ಕಾಣೆಯಾಗಿದ್ದಾನೆಂದು ಹೇಳಿದರು.

ನೀತು........ಹಾಗಿದ್ದರೆ ನನ್ನ ಗೆಳತಿ ಅಥವ ಅವಳ ಗಂಡ ಈ ವಿಷಯದಲ್ಲಿ ನಿಮಗ್ಯಾವುದೇ ಸಹಾಯವನ್ನು ಮಾಡಲಾರರು ಇಬ್ಬರೂ ನಮ್ಮೂರಿನಲ್ಲಿ ಇದ್ದರಲ್ಲ . ಆದರೂ ಅವರನ್ನು ವಿಚಾರಿಸಬೇಕೆಂದರೆ ನಾನೀಗಲೇ ಫೋನ್ ಮಾಡಿ ಕೊಡುವೆ.

ಇನಸ್ಪೆಕ್ಟರ್.......ಛೆ...ಛೇ....ಮೇಡಂ ನೀವು ಹೇಳಿದ ಮೇಲೆ ಮುಗಿಯಿತು ನಿಮ್ಮ ಮಾತಿನಲ್ಲಿ ನನಗೆ ಪೂರ್ತಿ ನಂಬಿಕೆಯಿದೆ. ಆ ಹುಡುಗ ರಾಜು ಏನಾದರೂ ನಿಮ್ಮ ಸ್ನೇಹಿತೆಯ ಮಗನನ್ನು ಬೇಟಿಯಾಗಿದ್ದನಾ ಎಂದು ತಿಳಿದುಕೊಳ್ಳಲು ಬಂದೆವು. ಅವನ ಎಲ್ಲಾ ಗೆಳೆಯರನ್ನು ವಿಚಾರಿಸಿದ ರೀತಿಯಲ್ಲಿ ಇವನನ್ನು ಕೇಳೋಣ ಅಂತ ಆದರೆ ನಿಮ್ಮ ಸ್ನೇಹಿತೆಯ ಮಗ xxxxx ಊರಿನಲ್ಲಿ ಓದುತ್ತಿದ್ದಾನೆ ಎಂದರೆ ಅವನನ್ನು ಬೇಟಿಯಾಗಿ ಮಾತನಾಡಿರುವ ಸಾಧ್ಯತೆಯೇ ಇಲ್ಲ . ಈ ವಯಸ್ಸಿನ ಹುಡುಗರು ಅದೆಲ್ಲಿ ಹಾಳಾಗಿ ಹೋಗುವರೋ ನೋಡಿ ಮೇಡಂ ಅವರನ್ನು ಹುಡುಕುವ ಕರ್ಮ ನಮ್ಮದು. ನಾನಿನ್ನು ಹೊರಡುವೆ ಮೇಡಂ ನಿಮಗೇನಾದ್ರು ತೊಂದರೆಯಾಗಿದ್ದರೆ ಕ್ಷಮಿಸಿ ಇನ್ನು ಈ ಕಡೆ ಬರುವುದಿಲ್ಲ................ಎಂದೇಳಿ ಎಲ್ಲಿ ತನ್ನ ಬಗ್ಗೆ ಎಸ್ಪಿಯ ಹತ್ತಿರ ಕಂಪ್ಲೇಂಟ್ ಮಾಡಿಬಿಡುವರೋ ಎಂದು ಹೆದರಿ ಜಾಗ ಖಾಲಿ ಮಾಡಿದನು. ನೀತು ಅವನ ಅವಸ್ಥೆಗೆ ಮನದಲ್ಲೇ ನಗುತ್ತ ಅಕ್ಕಪಕ್ಕದ ಮನೆಯವರ ಜೊತೆ ಕೆಲ ಸಮಯ ಮಾತಾಡಿ ರಜನಿ ಮತ್ತು ರಶ್ಮಿಯೊಂದಿಗೆ ತನ್ನೂರಿಗೆ ಹೊರಟಳು.

No comments:

Post a Comment