ಅಪ್ಪ ಅಮ್ಮನ ಜೊತೆ ಹಿರಿ ಮಗಳು ಹಾಗು ಇತರೆ ಮಕ್ಕಳಿಗೂ ತಾನು ಹುಟ್ಟಿ ಬೆಳೆದ ಮನೆಯನ್ನು ತೋರಿಸಿ ಅಕ್ಕ ಪಕ್ಕದವರಿಗೆ ಎಲ್ಲರನ್ನೂ ಪರಿಚಯಿಸಿ ಹಿರಿಯ ಮಗಳೆಂದು ನಿಧಿಯನ್ನು ಹೆಮ್ಮೆಯಿಂದ ನೀತು ಎಲ್ಲರ ಮುಂದೆ ಹೇಳಿಕೊಳ್ಳುತ್ತಿದ್ದಳು. ಕೆಲ ತಿಂಗಳ ಹಿಂದೆ ದಸರಾ ರಜೆ ಸಮಯದಲ್ಲಿ ಇಲ್ಲಿಗೆ ಬಂದಿದ್ದಾಗ ರವಿ ತಂದಿಟ್ಟಿದ್ದ ಗುಳ್ಳೆಗಳನ್ನು ಮಾಡುವ ಲಿಕ್ವಿಡ್ ಬಾಟಲ್ ತೆಗೆದು ಸುರೇಶ ಗುಳ್ಳೆ ಊದುತ್ತಿದ್ದರೆ ನಿಶಾ ಹೊರಗಡೆ ಕೇಳಿಸುವಷ್ಟು ಜೋರಾಗಿ ಕಿರುಚಾಡುತ್ತ ಗುಳ್ಳೆಗಳ ಹಿಂದೆ ಓಡಿ ಅವನ್ನು ಹೊಡೆಯುತ್ತಿದ್ದಳು.
ಪಕ್ಕದ ಮನೆಯಾಕೆ......ನೀತು ನಿಜಕ್ಕೂ ನಿನ್ನ ಮನೆಯವರ ಬಗ್ಗೆ ತಿಳಿದು ತುಂಬಾ ಸಂತೋಷವಾಯಿತು ಕಣಮ್ಮ. ಗೃಹಪ್ರವೇಶದಲ್ಲಿ ನಿನ್ನ ತಂದೆ ತಾಯಿಯ ಸ್ಥಾನದಲ್ಲಿರುವವರ ಪರಿಚಯ ಮಾಡಿಸಿದ್ದೆ ಆದರೆ ನಿಧಿಯನ್ನು ಬೇಟಿಯಾಗಿ ಖುಷಿಯಾಗುತ್ತಿದೆ. ನಿನ್ನ ಕಿರಿಯ ಮಗಳೆಲ್ಲಿ ಕಿರುಚಾಡುತ್ತಿರುವ ಶಬ್ದ ಮಾತ್ರ ಕೇಳಿಸುತ್ತಿದೆಯಲ್ಲ.
ನೀತು.....ಆಂಟಿ ಅವಳಿಗೆ ಆಡುವುದಕ್ಕೆ ಜೊತೆಗಿದ್ದರೆ ಸಾಕು ಬೇರೆ ಏನೂ ಬೇಕಾಗಿಲ್ಲ.
ಕೆಲ ಹೊತ್ತು ಎಲ್ಲರೊಂದಿಗೆ ಮಾತನಾಡಿ ಮುಸ್ಸಂಜೆ ಕಳೆದ ನಂತರ ಅಶೋಕನ ಮನೆಗೆ ಹಿಂದಿರುಗಿ ರಾತ್ರಿಯ ಊಟಕ್ಕೆ ಆರ್ಡರ್ ಮಾಡಿ ರೆಡಿಯಾದಳು.
ನೀತು......ಅಮ್ಮ ನಾನು ಹೋಗಿ ಬರ್ತೀನಿ ನೀವೆಲ್ಲರೂ ಊಟ ಮುಗಿಸಿ ಮಲಗಿ ಬರುವುದಕ್ಕೆ ತಡವಾಗಬಹುದು.
ರಾಜೀವ್.......ಈಗಿನ್ನೂ ಏಳು ಘಂಟೆಯೂ ಆಗಿಲ್ಲ ಕಣಮ್ಮ ನೀನು ಹೋಗಿ ಬಾ ನಾವೆಲ್ಲ ಒಟ್ಟಿಗೆ ಊಟ ಮಾಡೋಣ.
ನಿಶಾ......ಮಮ್ಮ ನಾನಿ ಬೇಲ....ಮಮ್ಮ..
ನೀತು ಮಗಳ ತಲೆ ಸವರಿ......ನೀನು ಮನೆಯಲ್ಲಿ ಅಣ್ಣ ಅಕ್ಕಂದಿರ ಜೊತೆ ಆಡಿಕೊಂಡಿರು ಕಂದ ಅಮ್ಮ ಬೇಗ ಹೋಗಿ ಬರ್ತಾಳೆ ನಿಕಿತಾ ನಡಿಯಮ್ಮ ನಾವು ಹೊರಡೋಣ.
ಅಮ್ಮ ಮತ್ತು ನಿಕಿತಾಕ್ಕ ಹೊರಟಾಗ ಅವರಿಗೆ ಟಾಟಾ ಮಾಡಿ ಒಳಗೆ ಬಂದ ನಿಶಾ ಕೂಗಿ ಕಿರುಚಾಡುತ್ತ ಹಲ್ಲಾ ಮಾಡಿ ಕುಡಿದಾಡುತ್ತಿದ್ದಳು.
* *
* *
ಒಂದು ಮಧ್ಯಮ ವರ್ಗದ ಮನೆ......
ಸುಮಾರು 58—60 ವರ್ಷದ ವ್ಯಕ್ತಿ.....ಅಲ್ಲ ಕಣೋ ನಿಮ್ಮಮ್ಮನಿಗೆ ಬುದ್ದಿಯಿಲ್ಲ ಜನರನ್ನು ಬೇಗ ನಂಬಿ ಬಿಡ್ತಾಳೆ ನಿನಗೂ ಕೂಡ ಬುದ್ದಿ ಇರಲಿಲ್ಲವೇನೋ ? ಯಾರೋ ಗುರುತು ಪರಿಚಯ ಇಲ್ಲದವರು ಕಾವ್ಯನ ಆಪರೇಷನ್ನಿಗೆ ಸಹಾಯ ಮಾಡ್ತೀನಿ ಅಂದಾಕ್ಷಣ ಮಾರಾಟ ಮಾಡಬೇಕಿದ್ದ ಪುಡಿಗಳನ್ನು ಕೊಟ್ಟು ಬಂದಿರುವೆಯಲ್ಲ.
ಹಿರಿಮಗ......ಅಪ್ಪ ಕಾವ್ಯ ತಮ್ಮನ ಮಗಳಾದರೂ ಅವಳು ನನಗೆ ನನ್ನ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಪಾತ್ರಳು. ಅವಳಿಗೋಸ್ಕರ ನಾ ಏನು ಬೇಕಾದರೂ ಮಾಡಲು ಸಿದ್ದ ಅವರು ಖಂಡಿತಾ ನಮ್ಮ ಕಾವ್ಯ ಪುಟ್ಟಿಯ ಆರೋಗ್ಯ ಸುಧಾರಿಸುವುದಕ್ಕೆ ಸಹಾಯ ಮಾಡ್ತಾರೆ.
ಅಷ್ಟರಲ್ಲೇ ನೀತು ಕರೆ ಮಾಡಿ ಮನೆಯ ವಿಳಾಸ ತಿಳಿದುಕೊಂಡು 20 ನಿಮಿಷದ ಬಳಿಕ ಆ ಮನೆಯ ಮುಂದೆ ಎಸ್.ಯು.ವಿ ನಿಲ್ಲಿಸಿ ತಾನು ನಿಕಿತಾಳ ಜೊತೆ ಇಳಿದಳು. ಮನೆಯ ಹಿರಿಯರಿಬ್ಬರ ಜೊತೆ ಅವರ ಇಬ್ಬರು ಮಕ್ಕಳು ಸೊಸೆಯಂದಿರು ಹಾಗು ಮಗಳು ಅಳಿಯ ಕೂಡ ನೀತುಳಿಗೆ ಕೈ ಮುಗಿದು ಸ್ವಾಗತಿಸಿದರೆ ಪ್ರತಿಯಾಗಿ ಅವಳೂ ಕೂಡ ವಂಧಿಸಿದಳು.
ನೀತು.......ನೀವು ಶ್ರೀನಿವಾಸ ಭಟ್ಟರು ತಾನೇ ?
ಭಟ್ಟರು.......ಹೌದು ಕಣಮ್ಮ ಆದರೆ ನನ್ನ ಪರಿಚಯ ನಿಮಗೆ ಹೇಗೆ ಎಂಬುದು ಗೊತ್ತಾಗಲಿಲ್ಲ ನನಗೆ ನಿಮ್ಮನ್ನು ನೋಡಿದ ನೆನಪಿಲ್ಲ.
ನೀತು ಮುಗುಳ್ನಕ್ಕು....ನಿಮಗೆ ರಾಘವೇಂದ್ರ ರಾವ್ ನೆನಪಿದ್ದಾರಾ ?
ಭಟ್ಟರು ಕೈಯೆತ್ತಿ ಮುಗಿಯುತ್ತ....ಬುದ್ದಿಯೋರು ನನಗೆ ದೇವರಿಗೆ ಸಮಾನ ಅವರಿಂದಲೇ ನಾನು ಶ್ರೀನಿವಾಸ ಭಟ್ಟನೆಂದು ಪ್ರಸಿದ್ದಿಗೆ ಬಂದಿದ್ದು.
ನೀತು......ನನ್ನ ಮದುವೆಯಲ್ಲಿ ನೀವೇ ಅಡುಗೆ ಕಾರ್ಯ ಮಾಡಿದ್ದು ನಿಮಗೆ ನೆನಪಿರಬಹುದು ನನ್ನ ಗಂಡ ಆಗಾಗ ನಿಮ್ಮ ಕೈರುಚಿಯನ್ನು ನೆನೆದು ಕೊಂಡಾಡುತ್ತಾರೆ. ನಾನು ರಾಘವೇಂದ್ರ ರಾವ ಅವರ ಮೊಮ್ಮಗಳು ನೀತು ಅಂತ.
ಭಟ್ಟರು ಸಂತೋಷಗೊಂಡು......ಜ್ಞಾಪಕವಿದೆ ಕಣಮ್ಮ ನೀತು ನಿಮ್ಮ ಮದುವೆ ಹರೀಶನೆಂಬ ಅಧ್ಯಾಪಕರ ಜೊತೆ ನಡೆಯಿತು ಆ ದಿನವನ್ನು ನಾನೆಂದಿಗೂ ಮರೆಯುವಂತಿಲ್ಲ. ನಿಮ್ಮ ಮದುವೆಯೇ ನನ್ನ ಪಾಲಿಗೆ ರಾಘವೇಂದ್ರ ಬುದ್ದಿಯೋರು ನೀಡಿದ ಮೊದಲನೇ ಕಾಂಟ್ರಾಕ್ಟ್. ಅದೇ ಮದುವೆಯಿಂದ ನಾನೂ ವ್ಯಕ್ತಿಗತವಾಗಿ ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವುದನ್ನು ಪ್ರಾರಭ ಮಾಡಿದ್ದು. ಬುದ್ದಿಯೋರೇ ನನಗೆ ಅಡುಗೆ ಮಾಡಲು ಬೇಕಾದ ಸಲಕರಣೆಗಳನ್ನು ಖರೀಧಿಸಿ ಕೊಟ್ಟು ನಿಷ್ಠೆ ಮತ್ತು ರುಚಿಯಾಗಿ ಅಡುಗೆ ಮಾಡಿಕೊಂಡು ಜೀವನ ಸಾಗಿಸು ಎಂದು ಹಾರೈಸಿದ್ದರು.
ನೀತು......ನಾನು ನಿಮಗಿಂತ ಚಿಕ್ಕವಳು ನನ್ನನ್ನು ನೀವು ಎಂಬುದಾಗಿ ಸಂಭೋಧಿಸುವ ಬದಲು ನೀನು ಎಂದರೆ ಉತ್ತಮ.
ಭಟ್ಟರು ತಲೆ ಅಳ್ಳಾಡಿಸಿ.......ಛೇ...ಛೇ...ಎಲ್ಲಾದರೂ ಉಂಟಾ ರಾಘವೇಂದ್ರ ಬುದ್ದಿಯೋರ ಮೊಮ್ಮಗಳು ನೀವು ನಿಮ್ಮನ್ನು ನಾನು ಏಕವಚನದಲ್ಲಿ ಕರೆಯುವ ಬಗ್ಗೆ ಕನಸಿನಲ್ಲೂ ಯೋಚಿಸಲಾರೆ.
ನೀತು.....ಭಟ್ಟರೇ ನಿಮ್ಮ ಮೊಮ್ಮಗಳನ್ನು ಕರೆಯಿರಿ.
ಭಟ್ಟರ ಕಿರಿಯ ಮಗ ಹಾಗು ಸೊಸೆ ತಮ್ಮೊಂದಿಗೆ ಎರಡು ವರ್ಷದ ಮುದ್ದಾದ ಮಗುವನ್ನು ಕರೆತಂದಾಗ ನೀತು ಪ್ರೀತಿಯಿಂದ ಮಗುವಿನ ತಲೆ ನೇವರಿಸಿ ಎತ್ತಿಕೊಂಡಳು. ಆರೋಗ್ಯದಲ್ಲಿ ವೆತ್ಯಾಸವಿರುವುದು ಮಗುವಿನ ಸುಂದರವಾದ ಮುಖ ಕಳೆಗುಂದಿರುವುದರಿಂದ ಚೆನ್ನಾಗಿ ಅರಿವಾಗುತ್ತಿತ್ತು.
ನೀತು.....ಭಟ್ಟರೇ ನಿಮ್ಮ ಮಗ ಸೊಸೆ ಮೊಮ್ಮಗಳನ್ನು ನಾನೀಗಲೇ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಬಳಿ ಮಾತನಾಡಿ ಬರುತ್ತೇನೆ.
ಭಟ್ಟರು......ನಿಮ್ಮ ತಾತನವರು ನನಗೆ ದಾರಿದೀಪವಾಗಿದ್ದರೆ ನೀವು ನಮ್ಮ ಒಬ್ಬಳೇ ಮೊಮ್ಮಗಳಿಗೆ ಜೀವಧಾರೆ ಎರೆಯುತ್ತಿದ್ದೀರಿ ನಾನು ಈ ಜನ್ಮದಲ್ಲಲ್ಲ ಏಳೇಳು ಜನ್ಮಗಳಲ್ಲಿಯೂ ನಿಮ್ಮ ಋಣಭಾರವನ್ನು ತೀರಿಸಲು ಸಾಧ್ಯವಿಲ್ಲ.
ನೀತು......ಇದರಲ್ಲಿ ಋಣ ಎಂಬುದೇನೂ ಇಲ್ಲ ಭಟ್ಟರೇ ಅಕಸ್ಮಾತ್ ಇದ್ದರೂ ಅದನ್ನು ತೀರಿಸುವುದಕ್ಕೆ ದಾರಿಯೂ ಇರುತ್ತದೆ. ಯಾರಿಗೆ ಗೊತ್ತಿದೆ ನಾಳೆ ನಾನು ನಿಮ್ಮ ಬಳಿ ಏನಾದರೂ ಸಹಾಯವನ್ನು ಕೇಳಿ ಬಂದರೂ ಬರಬಹುದು ನಾವೀಗ ಹೋಗಿ ಬರುತ್ತೀವಿ.
ರಾತ್ರಿ ಒಂಬತ್ತೂವರೆ ಸಮೀಪಕ್ಕೆ ಭಟ್ಟರ ಮನೆಗೆ ಹಿಂದಿರುಗಿ......
ನೀತು.......ಭಟ್ಟರೇ ಏನೂ ಭಯವಿಲ್ಲ ಮುಂದಿನ ಸೋಮವಾರದ ದಿನ ನಿಮ್ಮ ಮೊಮ್ಮಗಳಿಗೆ ಡಾಕ್ಟರ್ ಆಪರೇಷನ್ ಮಾಡಲಿದ್ದಾರಂತೆ ಆಮೇಲೆ ಎಲ್ಲಾ ಮಕ್ಕಳಂತೆಯೇ ಇವಳೂ ಕೂಡ ಆಡಬಹುದೆಂದೂ ಹೇಳಿದರು. ನಾನು ಆಪರೇಷನ್ ಮತ್ತು ಆಸ್ಪತ್ರೆಯ ಖರ್ಚುಗಳಿಗೆ ಮುಂಗಡ ಹಣವನ್ನು ಪಾವತಿ ಮಾಡಿದ್ದೀನಿ ಸೋಮವಾರದಂದು ನಾನೂ ಕೂಡ ಆಸ್ಪತ್ರೆಗೆ ಬರುವೆ. ಆಗಲೇ ಉಳಿದ ಮೊತ್ತವನ್ನು ಸಹ ಪಾವತಿ ಮಾಡಿಬಿಡುವೆ. ಈ ಹಣ ನಿಮ್ಮ ಬಳಿ ಇಟ್ಟುಕೊಂಡಿರಿ ಏನೇ ಅವಶ್ಯಕತೆಯಿದ್ದರೂ ಯಾವುದೇ ಸಂಕೋಚವಿಲ್ಲದೆ ನನಗೆ ಫೋನ್ ಮಾಡಿ ನಾನು ವ್ಯವಸ್ಥೆ ಮಾಡಿಸುತ್ತೇನೆ.
ನೀತು ನೀಡಿದ 500ರ ಕಂತೆ ನೋಡಿ ಪಡೆದುಕೊಳ್ಳಲು ಹಿಂಜರಿದ ಭಟ್ಟರ ಮಡದಿಯ ಕೈಗೆ ಬಲವಂತವಾಗಿ ನೀಡಿದ ನೀತು...ನನ್ನ ಬಳಿ ಹಣವಿದೆ ಅದರ ಅವಶ್ಯಕತೆಯೀಗ ನಿಮ್ಮ ಮೊಮ್ಮಗಳ ವೈಧ್ಯಕೀಯ ಚಿಕಿತ್ಸೆಗೆ ಅಗತ್ಯವಿರುವಾಗ ನಾನೇಕೆ ಹಿಂಜರಿಯಲಿ. ಸೋಮವಾರದ ದಿನ ಮುಂಜಾನೆ ನಾನು ನೇರವಾಗಿ ಆಸ್ಪತ್ರೆಗೇ ಬರುವೆ ಮಿಕ್ಕಿದ್ದೆಲ್ಲಾ ವಿಷಯವನ್ನೂ ನಿಮ್ಮ ಮಗ ಸೊಸೆಯ ಜೊತೆ ಮಾತನಾಡಿರುವೆ. ನಾನಿನ್ನೂ ಹೋಗಿ ಬರ್ತೀನಿ.....ಎಂದು ಕೈ ಮುಗಿದಳು.
ಭಟ್ಟರ ಮಡದಿ ನೀತುವಿಗೆ ಅರಿಶಿನ ಕುಂಕುಮ ನೀಡಿ ಗಂಡನೊಟ್ಟಿಗೆ ಕೈ ಮುಗಿದರೆ ಅವರಿಬ್ಬರು ಮಕ್ಕಳು ಸೊಸೆಯರ ಜೊತೆ ಬೇಡವೆಂದು ಹೇಳಿದರೂ ಕೇಳದೆ ನೀತುವಿನ ಕಾಲಿಗೆರಗಿ ನಮಸ್ಕರಿಸಿದರು. ಅಲ್ಲೇ ವಾಸವಿರುವ ಭಟ್ಟರ ಮಗಳೂ ಸಹ ಗಂಡನೊಂದಿಗೆ ನೀತು ಕಾಲಿಗೆ ನಮಸ್ಕರಿಸಿ ಮನೆಯ ಪುಟ್ಟ ಕಂದಮ್ಮನ ಬಾಳನ್ನು ಬೆಳಗುವುದಕ್ಕೆ ಸಹಾಯ ಮಾಡುತ್ತಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಎಲ್ಲರಿಗೂ ನಮಸ್ಕರಿಸಿ ಅವರಿಂದ ಬೀಳ್ಗೊಂಡು ಕಾರನ್ನೇರಿದಾಗ ನೀತುಳನ್ನು ತಬ್ಬಿಕೊಂಡ ನಿಕಿತಾ......ಆಂಟಿ ಎಲ್ಲರಿಗೂ ನಿಮ್ಮಷ್ಟೇ ಒಳ್ಳೆ ಹೃದಯ ಇದ್ದಿದ್ದರೆ ಪ್ರಪಂಚವೆಷ್ಟು ಸುಂದರವಾಗಿರುತ್ತಿತ್ತಲ್ಲವಾ.....ಎಂದುದಕ್ಕೆ ನೀತು ಮುಗುಳ್ನಗುತ್ತ ಆಕೆ ಕೆನ್ನೆ ಸವರಿದಳು. ಮನೆ ತಲುಪಿ ಅಮ್ಮ ಅಪ್ಪನಿಗೆ ವಿಷಯ ತಿಳಿಸಿ ಮಗಳಿಗಾಗಿ ಹುಡುಕಾಡಿದರೆ.......
ನಿಧಿ.....ಅಮ್ಮ ನಿಮ್ಮ ಲಿಲಿಪುಟ್ ಆಗಲೇ ಊಟ ಮಾಡಿಕೊಂಡು ಸುರೇಶನ ಜೊತೆ ಮಲಗಿದ್ದಾಳೆ ಬನ್ನಿ ನಾವೂ ಊಟ ಮಾಡೋಣ. ಅಪ್ಪ ಫೋನ್ ಮಾಡಿದ್ರು ನೀವು ಫೋನ್ ತೆಗೀಲಿಲ್ಲ ಅನ್ನುತ್ತಿದ್ರು ಬಂದ ಮೇಲೆ ಫೋನ್ ಮಾಡಿಸುವಂತೇಳಿದರು.
ನೀತು ಗಂಡನ ಜೊತೆ ಮಾತನಾಡಿ ಭಟ್ಟರ ವಿಷಯವನ್ನು ಹೇಳಿದರೆ ಹರೀಶನಿಗೆ ಹೆಂಡತಿಯ ಬಗ್ಗೆ ತುಂಬ ಹೆಮ್ಮೆಯಾಯಿತು. ಎಲ್ಲರೂ ಊಟ ಮಾಡಿ ಮಲಗಿದರೆ ಕಾಮಾಕ್ಷಿಪುರದಲ್ಲಿ ಇಂದು ರಾತ್ರಿ ಕೂಡ ಪ್ರೀತಿ ಮತ್ತು ಸುಮಾ ಇಬ್ಬರನ್ನು ಜೊತೆಯಲ್ಲೇ ಮಂಚದ ಮೇಲೆ ಕೆಡವಿಕೊಂಡಿದ್ದ ಹರೀಶ ಚೆನ್ನಾಗಿ ಬಜಾಯಿಸಿಬಿಟ್ಟನು.
* *
ಮುಂಜಾನೆ 9:30 ಘಂಟೆಗೆ ನೀತು ಕಾಮಾಕ್ಷಿಪುರದ ಮನೆ ತಲುಪಿ ತನ್ನತ್ತ ಓಡೋಡಿ ಬಂದ ಜರ್ಮನ್ ಶೆಪರ್ಡ್ ನಾಯಿಗಳ ತಲೆ ಸವರಿ ಅವುಗಳ ಮೈ ತಡವಿ ಮುದ್ದಾಡಿದ ನಿಶಾ ಮನೊಯೊಳಗಿದ್ದ ಕುಕ್ಕಿ ಮರಿಯನ್ನೂ ಮುದ್ದಾಡಿ ಶೀಲಾಳ ರೂಮಿಗೆ ಓಡಿದಳು. ಅವಳಿಂದ ಮುದ್ದು ಮಾಡಿಸಿಕೊಂಡು ಎಲ್ಲಾ ಕಡೆ ಸುತ್ತಾಡಿ ಅನುಷಾಳಳೆದುರು ನಿಂತು......
ನಿಶಾ......ಆಂಟಿ ನನ್ನಿ ಪಪ್ಪ ಲೆಲ್ಲಿ.....?
ಅನುಷ ಅವಳನ್ನೆತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು ಉತ್ತರಿಸುವ ಮುನ್ನ ಅಲ್ಲಿಗೆ ಬಂದ ರಜನಿ ಮಗಳ ಕೆನ್ನೆಯನ್ನು ಪ್ರೀತಿಯಿಂದ ಗಿಂಡುತ್ತ....
ನಿನ್ನಿ ಪಪ್ಪ ಟಾಟಾ ಹೋಯ್ತು ಚಿನ್ನಿ ಬೇಡ ಅಂತು.
ಅಪ್ಪ ಟಾಟಾ ಹೋಗಿದ್ದು ನನ್ನನ್ನು ಕರೆದುಕೊಂಡು ಹೋಗಿಲ್ಲವೆಂದು ತಿಳಿದ ನಿಶಾ ಬೇಸರಗೊಂಡು ಅನುಷಾಳ ತೋಳಿನಿಂದ ಕೆಳಗಿಳಿದು ಸೋಫಾದಲ್ಲಿ ಕುಳಿತಿದ್ದ ಅಮ್ಮನ ಬಳಿಗೋಡಿ ಅವಳ ಮಡಿಲಿನಲ್ಲಿ ಮುಖವಿಟ್ಟು ಕಣ್ಣೀರು ಸುರಿಸತೊಡಗಿದಳು. ನೀತು ಮಗಳನ್ನೆತ್ತಿ ಕೂರಿಸಿಕೊಂಡು ಕಣ್ಣನ್ನೊರೆಸಿ ಸಮಾಧಾನ ಮಾಡಿದರೆ ನಿಶಾ...... ಪಪ್ಪ ಟಾಟಾ ಹೋತು ನನ್ನಿ ಬೇಲ ಅಂತು.....ಎಂದಮ್ಮನಿಗೆ ಚಾಡಿ ಹೇಳುತ್ತ ಮುಸಿಮುಸಿ ಅಳುತ್ತಿದ್ದಳು. ಮಹಡಿಯಲ್ಲಿದ್ದ ಹರೀಶ ಕೆಳಗೆ ಇಳಿದು ಬಂದು ಮಗಳನ್ನು ಕಂಡೊಡನೇ....ಚಿನ್ನಿ ಎಂದು ಕೂಗಿದಾಗ ಅಪ್ಪನ ಕಡೆ ತಿರುಗಿದ ನಿಶಾಳ ಮುಖವರಳಿಕೊಂಡು....ಪಪ್ಪ ಎಂದು ಕೂಗುತ್ತ ಅವನ ಬಳಿಗೋಡಿ ಹೆಗಲೇರಿಕೊಂಡಳು. ಅಪ್ಪನನ್ನು ತಬ್ಬಿ ತುಂಬ ಹೊತ್ತು ಅವನಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದ ಮಗಳನ್ನು ಕೆಳಗಿಸಿ......
ನೀತು.......ಚಿನ್ನಿ ನೀನಿನ್ನೂ ಚಾನ ಮಾಡಿಲ್ಲ ಕಂದ ನಡಿ ಮೊದಲು ನಿನಗೆ ಚಾನ ಮಾಡಿಸಬೇಕು.
ಅನುಷ.....ಅಕ್ಕ ನೀವು ಕೂತಿರಿ ಚಿನ್ನಿಗೆ ನಾನೇ ಸ್ನಾನ ಮಾಡಿಸುವೆ ಎಂದೇಳಿ ಅವಳನ್ನು ಕರೆದುಕೊಂಡು ಮಹಡಿಗೆ ಹೋದಳು.
ಹರೀಶ........ನೀತು ಭಟ್ಟರು ಆ ಊರಿನಲ್ಲಿ ಒಳ್ಳೆಯ ಹೆಸರುವಾಸಿ ಅಡುಗೆಯವರಲ್ಲವಾ ಆದರೀಗ ಹಣಕಾಸಿನ ತೊಂದರೆಗೆ ಯಾಕೆ ಸಿಲುಕಿಕೊಂಡರು.
ನೀತು....ರೀ ನಾನದರ ಬಗ್ಗೆ ವಿಚಾರಿಸಲಿಲ್ಲ ಪಾಪ ಮನೆಯವರೆಲ್ಲಾ ಮಗುವಿನ ಆರೋಗ್ಯದ ಚಿಂತೆಯಲ್ಲಿ ತುಂಬ ದುಃಖದಲ್ಲಿದ್ದರು ಅಂತ ಸಮಯದಲ್ಲೀ ವಿಷಯ ಕೇಳುವುದು ಸರಿಯಲ್ಲವೆನಿಸಿತು. ನಾವೇಗು ಮುಂದಿನ ಸೋಮವಾರ ಅವರ ಮೊಮ್ಮಗಳ ಆಪರೇಷನ್ ಟೈಂಗೆ ಹೋಗಬೇಕಿದೆಯಲ್ಲ ಆಗಲೇ ಮಾತಾಡೋಣ.
ಹರೀಶ.......ಆಯ್ತು ಹಾಗೇ ಮಾಡೋಣ ಆದರೆ ನೀನೇನೇ ಹೇಳು ಭಟ್ಟರ ಕೈರುಚಿ ಮರೆಯಲಾಗದು.
ನೀತು.....ಅವರೇ ಮನೆಯಲ್ಲಿ ತಯಾರಿಸಿರುವ ಕೆಲವು ಸಾಂಬಾರ್ ಪುಡಿಗಳನ್ನು ಕೊಟ್ಟಿದ್ದಾರೆ ಅದರಿಂದಲೇ ಇಂದು ಸಾರು ಮಾಡೋಣ ಅವರ ಕೈರುಚಿ ಇನ್ನೂ ಹಾಗೆಯೇ ಇದೆಯಾ ಎಂಬುದು ತಿಳಿಯುತ್ತೆ.
ಸುಮ.....ನೀತು ನೀನು ಅಡುಗೆ ಮನೆಯಲ್ಲಿಟ್ಟಿರುವ ಬ್ಯಾಗಿನೊಳಗೆ ಹಲವಾರು ರೀತಿಯ ಪುಡಿಗಳ ಪ್ಯಾಕೆಟ್ ಇದೆ. ವಾಂಗೀಬಾತ್.... ರಸಂ... ಸಾಂಬಾರ್.... ಹುಳಿಯನ್ನದ ಗೊಜ್ಜು.... ಇನ್ನೂ ಹಲವಾರು. ಇಂದು ಅದೇ ಪುಡಿಯಲ್ಲಿ ಸಾಂಬಾರ್ ಮಾಡಿದರೆ ರುಚಿ ಹೇಗಿರುತ್ತೆ ಎಂಬುದೂ ತಿಳಿಯುತ್ತೆ ನೋಡಲಿಕ್ಕಂತೂ ಚೆನ್ನಾಗಿದೆ.
ನೀತು......ಭಟ್ಟರೇ ಮಾಡಿದ್ದಾರೆಂದ ಮೇಲೆ ಚೆನ್ನಾಗಿರುತ್ತೆ ಅನಿಸುತ್ತೆ ಅತ್ತಿಗೆ ನೋಡೋಣ ಅವರ ಕೈರುಚಿ ಸಮಯ ಕಳೆದಿದ್ದರೂ ಇನ್ನೂ ಹಾಗೇ ಉಳಿದಿದೆಯಾ ಅಂತ.
ಅಷ್ಟರಲ್ಲಿ ರೆಡಿಯಾಗಿ ಓಡೋಡಿ ಬಂದು ಅಪ್ಪನನ್ನು ಸೇರಿಕೊಂಡು ನಿಂತ ನಿಶಾ.....ನಲಿ ಟಾಟಾ ಹೋಗನ ನನ್ನಿ ಶೂ ಬೇಕು.
ಹರೀಶ ಮಗಳ ಕೆನ್ನೆ ತಡವಿ.......ಶೂ ಯಾಕಮ್ಮ ಕಂದ ನಿನ್ನ ಬಳಿ ನಾಲ್ಕು ಶೂ ಇದೆಯಲ್ಲ. ನಿಧಿ ಎಲ್ಲಿನ್ನೂ ಬಂದಿಲ್ಲವಲ್ಲ ?
ನಿಶಾ ತಲೆ ಅಳ್ಳಾಡಿಸುತ್ತ.......ಪಪ್ಪ ಶೂ ಲಿಲ್ಲ ಶೂ ಬೇಕು.
ನೀತು......ರೀ ಚಿಲ್ಟಾರಿಯ ಪಾದ ಬೆಳೆಯುತ್ತಿದೆ ಅದಕ್ಕೆ ಶೂಗಳೆಲ್ಲಾ ಟೈಟಾಟಿ ಪಾಪ ಕಾಲಿನ ಬೆರಳುಗಳು ಮಡಚಿ ನೋಯುತ್ತವೆ. ನಿಧಿ ನಮ್ಮ ಹಿಂದೆಯೇ ಬರುತ್ತಿದ್ದಳು ಸವಿತಾಳ ಯಜಮಾನರು ಮನೆಗೆ ಬಂದಿರುವುದು ತಿಳಿಯುತ್ತಲೇ ನಿಕಿತಾ ಮತ್ತು ನಮಿತಾರನ್ನು ಅವರ ಮನೆಗೆ ಡ್ರಾಪ್ ಮಾಡಿ ಬರುತ್ತಾಳೆ ಅಲ್ಲೇ ಲೇಟಾಗಿರಬೇಕು.
ಹರೀಶ......ಕಂದ ನಿನ್ನ ಕಾಲಿನ ಬೆರಳು ನೋಯುತ್ತಿದೆಯಾ ಮಗಳೇ ಎಂದರೆ ನಿಶಾ ತನ್ನ ಕಾಲೆತ್ತಿ ತೋರಿಸಿ ಹೂಂ ಎಂದು ತಲೆ ಕುಣಿಸುತ್ತ ಅಪ್ಪನ ಕೈ ಹಿಡಿದೆಳೆಯುತ್ತಿದ್ದಳು.
ಹರೀಶ.....ನಡಿ ಕಂದ ನಾವು ಹೋಗಿ ನಿನಗೆ ಶೂ ತೆಗೆದುಕೊಂಡು ಬರೋಣ ಅದಕ್ಕೂ ಮೊದಲು ಹೋಗಿ ತಿಂಡಿ ತಿನ್ನು. ( ಅಷ್ಟರಲ್ಲೇ ನಿಧಿ ಮತ್ತಿತರ ಹೆಣ್ಣು ಮಕ್ಕಳು ಬಂದಿದ್ದನ್ನು ನೋಡಿ) ನಯನ ನೀನು ನಮ್ಮ ಜೊತೆಯಲ್ಲಿ ಬಾರಮ್ಮ ಶಾಲೆಯ ಯೂನಿಫಾರಂ ಶೂಗಳನ್ನು ತೆಗೆದುಕೊಳ್ಳಬೇಕು.
ಸುರೇಶ.....ಅಪ್ಪ ನನ್ನದೂ ಶಾಲೆಯ ಶೂ ಕಿತ್ತೊಗಲು ಸಮೀಪಿಸಿದೆ ನನಗೂ ಶೂ ಬೇಕು.
ಹರೀಶ......ಆಯ್ತು ನೀನೂ ನಡೆಯಪ್ಪ ಮೊದಲು ತಿಂಡಿ ತಿನ್ನೋಣ.
* *
* *
ಮಧ್ಯಾಹ್ನ ಊಟದ ಸಮಯಕ್ಕಿಂತಲೂ ಮುಂಚೆಯೇ ಮನೆಗೆ ಬಂದ ರವಿಯ ಮುಖದಲ್ಲಿ ಚಿಂತೆ ಎದ್ದು ಕಾಣಿಸುತ್ತಿತ್ತು.
ಪ್ರೀತಿ....ಅಣ್ಣ ಏನಾದರೂ ಸಮಸ್ಯೆಯಾ ? ನಿಮ್ಮ ಮುಖದಲ್ಲಿ ಚಿಂತೆ ಇರುವಂತೆ ಕಾಣಿಸುತ್ತಿದೆ.
ಶೀಲಾ.....ಹೌದು ರೀ ನೀವು ವಿಕ್ರಂ ಫ್ಯಾಕ್ಟರಿಯಲ್ಲಿನ ಕಾಮಗಾರಿಗಳ ಕಡೆ ಗಮನ ಹರಿಸಬೇಕಾದವರು ಮನೆಗ್ಯಾಕೆ ಹಿಂದಿರುಗಿರುವಿರಿ ಅದುವೇ ಇಷ್ಟು ಚಿಂತಾಕ್ರಾಂತರಾಗಿ ಹೇಳಿ.
ರವಿ......ಆ ಫ್ಯಾಕ್ಟರಿಯಲ್ಲಿ ಮುಂಚೆ ಮಾನೇಜರ್ ಆಗಿದ್ದ ವ್ಯಕ್ತಿ ಕೆಲ ಹೊತ್ತಿಗೂ ಮುಂಚೆ ಬಂದಿದ್ದ. ಅವನೊಟ್ಟಿಗೆ ಮಾತನಾಡಿದಾಗ ಅಲ್ಲಿ ಮುಂಚೆ ಕೆಲಸ ಮಾಡುತ್ತಿದ್ದವರು ಬೇರೆ ಬೇರೆ ಕಡೆ ಕೆಲಸಗಳಿಗಾಗಿ ಸೇರಿರುವುದು ಮತ್ತೀಗ ಅವರನ್ನು ಕಷ್ಟವೆನ್ನುತ್ತಿದ್ದ. ಹೊಸದಾಗಿ ಅಲ್ಲಿ ಕೆಲಸಗಾರರನ್ನು ನೇಮಕ ಮಾಡಿಕೊಂಡರೂ ಅವರಿಗೆ ಕೆಲಸದ ಬಗ್ಗೆ ತರಬೇತಿ ಕೊಡಿಸಬೇಕು ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ ಇದಕ್ಕೆಷ್ಟು ಸಮಯ ಹಿಡಿಯುತ್ತೋ ತಿಳಿಯದು.
ನೀತು......ಅಣ್ಞ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದ್ದೇ ಇರುತ್ತೆ ನಾಳಿದ್ದು ಅಣ್ಣಂದಿರಿಬ್ಬರೂ ಬರುತ್ತಾರಲ್ಲ ಆಗ ಮಾನೇಜರ್ ಜೊತೆ ಮಾತನಾಡಿ ಪರಿಹಾರ ಕಂಡು ಹಿಡಿದರಾಯಿತು ನೀವು ಫ್ರೆಶಾಗಿ ಬನ್ನಿ
ರವಿ......ನೀತು ಎಲ್ಲಿ ನನ್ನ ಮುದ್ದಿನ ಕೂಸು ಕಾಣುತ್ತಿಲ್ಲವಲ್ಲ.
ರಜನಿ....ಅಪ್ಪನ ಜೊತೆ ಶೂ ತೆಗೆಸಿಕೊಳ್ಳಲು ಹೋಗಿದ್ದಾಳೆ ಇನ್ನೇನು ಅವರೂ ಬರಬಹುದು.
ಸುಮ.....ಅಣ್ಣ ನೀವು ಫ್ರೆಶಾಗಿ ಬನ್ನಿ ನಾನು ಕಾಫಿ ತರುವೆ.
ಕಾರಿನಿಂದಿಳಿದ ನಿಶಾ ತನ್ನ ಶೂಗಳಿದ್ದ ಬ್ಯಾಗನ್ನು ಯಾರಿಗೂ ಕೂಡ ಮುಟ್ಟಲು ಬಿಡದೆ ತನ್ನಿಂದಲೂ ಎತ್ತಲಾಗದೆ ಅದನ್ನೆಳೆದುಕೊಂಡು ಮನೆಯೊಳಗೆ ಬಂದವಳೇ ಅಮ್ಮನ ಬಳಿಗೋಡಿ ತನ್ನ ಹೊಸ ಶೂ ತೋರಿಸುತ್ತ ಖುಷಿ ಪಡುತ್ತಿದ್ದಳು. ನಯನ ಕೂಡ ಯೂನಿಫಾರಂ ಶೂಗಳನ್ನು ಒಂದು ಬದಿಯಲ್ಲಿಟ್ಟು ಬಂದರೆ ಸುರೇಶ ಮಾತ್ರ ಸಪ್ಪಗೆ ಮುಖ ಮಾಡಿಕೊಂಡು ಕುಳಿತನು.
ಶೀಲಾ....ನೀನು ಶೂ ತೆಗೆಸಿಕೊಳ್ಳಲಿಲ್ಲವೇನೋ ? ಸಪ್ಪಗ್ಯಾಕಿದ್ಡೀಯ
ಸುರೇಶ.....ಸ್ಕೂಲಿನ ಶೂಗಳನ್ನು ತೆಗೆದುಕೊಂಡಾಯಿತು ಇನ್ನೊಂದು ಸ್ಪೋರ್ಟ್ಸ್ ಶೂ ಬೇಕೆಂದರೆ ಅಪ್ಪ ನಾಳೆ ತೆಗೆದುಕೊಳ್ಳೋಣ ದುಡ್ಡಿಲ್ಲ ಅಂದುಬಿಟ್ಟರು. ಈ ಚಿಲ್ಟಾರಿಯ ಶೂ ಹುಡುಕೋದೇ ನಮಗೆ ದೊಡ್ಡ ಕೆಲಸವಾಗಿತ್ತು. ಇನ್ನೊಂದ್ಸಲ ನಾನಂತೂ ಇವಳ ಜೊತೆ ಮಾರ್ಕೆಟ್ಟಿಗೆ ಹೋಗಲ್ಲ.
ಅಮ್ಮನನ್ನು ಸೇರಿಕೊಂಡು ನಿಂತಿದ್ದ ನಿಶಾ ಅಮ್ಮನ ಕೆನ್ನೆ ಸವರಿ......ಮಮ್ಮ ನನ್ನಿ ಏನ್ ಮಾದಿಲ್ಲ....ನನ್ನಿ ಏನ್ ತೋತ್ತಿಲ್ಲ ಮಮ್ಮ.....
ಮಗಳನ್ನೆತ್ತಿ ಮಡಿಲಲ್ಲಿ ಕೂರಿಸಿಕೊಂಡ ನೀತು.......ಹೂಂ ಕಂದ ನೀನೇನೂ ಮಾಡಿಲ್ಲ ನಿಮ್ಮಣ್ಣ ಶೂ ಸಿಗಲಿಲ್ಲ ಅಂತ ನಿನ್ನ ಸುಮ್ಮನೆ ರೇಗಿಸ್ತಿದ್ದಾನೆ. ರೀ ನೀವ್ಯಾಕ್ರಿ ದುಡ್ಡಿಲ್ಲ ಅಂದಿದ್ದು ಅವನು ಕೇಳಿದಂತ ಶೂ ತೆಗೆದುಕೊಡಬಾರದಿತ್ತಾ ?
ಹರೀಶ.....ನಾನು ಕಾರ್ಡ್ ಮನೆಯಲ್ಲೇ ಮರೆತು ಹೋಗಿದ್ದೆ ಜೇಬಲ್ಲಿ ಇದ್ದದ್ದು ಬರೀ 5000 ಮಾತ್ರ. ಇವರೆಲ್ಲರ ಶೂಗಳಿಗೇ ನಾಲ್ಕುವರೆ ಸಾವಿರ ಆಯಿತು ಇನ್ನಿವನು ಕೇಳಿದ ಶೂ ಬೆಲೆ 1500 ಅಂಗಡಿಯಲ್ಲಿ ಡಿಜಿಟಲ್ ಪೇಮೆಂಟ್ ಕೂಡ ಕೆಲಸ ಮಾಡ್ತಿರಲಿಲ್ಲ ಇನ್ನು ಹಣ ಹೇಗೆ ಕೊಡೋದು ಹೇಳು. ಸುರೇಶ ಸಂಜೆ ಹೋಗಿ ತರೋಣ ಕಣೋ.
ಫ್ರೆಶಾಗಿ ಬಂದ ರವಿ.....ಈ ಹಣ ತೊಗೋ ಸುರೇಶ ಶೂ ಜೊತೆಗೇನು ಇಷ್ಟವಾಗುತ್ತೋ ಅದನ್ನೂ ತೆಗೆದುಕೋ...ಎಂದು 5000 ನೀಡಿದನು.
ಸುರೇಶ ಹಣ ಜೇಬಿಗಿಳಿಸಿ.....ಸಂಜೆ ಅಪ್ಪ ನೀನು ಬೇಡ ನಾನು ಅಕ್ಕ ಅಥವ ಅಣ್ಣನ ಜೊತೆ ಹೋಗಿ ಶೂ ತರ್ತೀನಿ.
ರವಿ ಮಾಮ ಅಣ್ಣನಿಗೆ ಹಣ ಕೊಟ್ಟಿದ್ದನ್ನು ನೋಡಿದ ನಿಶಾ ತಾನೂ ರವಿಯ ಮುಂದೆ ನಿಂತು ಎರಡೂ ಕೈ ಚಾಚಿ.....ನಂಗಿ ಏನೂ ಲಿಲ್ಲ ನಂಗಿ ಕೊಲು.
ಮಗಳಾಟ ನೋಡಿ ಮುಗುಳ್ನಕ್ಕ ಶೀಲಾ....ರೀ ಮಗನಿಗೆ ಕೊಟ್ಟರೆ ಸಾಕ ಮಗಳು ಕೇಳ್ತಿದ್ದಾಳಲ್ಲ ಅವಳಿಗೂ ಕೊಡಿ.
ನಿಶಾಳನ್ನೆತ್ತಿ ಕೂರಿಸಿಕೊಂಡ ರವಿ.......ಏನ್ ಬೇಕು ಕಂದ ನಿಂಗೆ ?
ಅದಕ್ಕೇನು ಉತ್ತರಿಸಬೇಕೆಂದು ತಿಳಿಯದ ನಿಶಾ ತನ್ನನ್ನೇ ನೋಡುತ್ತ ಕುಳಿತಿದ್ದ ಎಲ್ಲರ ಕಡೆಗೊಮ್ಮೆ ದೃಷ್ಟಿ ಹಾಯಿಸಿ ಸುರೇಶಣ್ಣನ ಮೇಲೇ ನೆಟ್ಟು ಅವನತ್ತ ಕೈ ತೋರಿ.......ಅಣ್ಣ ಕೊತ್ತಿ ನಂಗಿ ಲಿಲ್ಲ ನಂಗಿ ಬೇಕು......ಎಂದೇಳಿ ಪುನಃ ಕೈ ಚಾಚಿದಳು.
ರವಿ ನಗುತ್ತ.....ಅಣ್ಣಂಗೆ ಕೊಟ್ಟಿದ್ದು ನಿಂಗೂ ಬೇಕಾ....ಎಂದುದಕ್ಕೆ ನಿಶಾ ಹೂಂ ಎಂದು ತಲೆಯಾಡಿಸಿದಾಗ ಜೇಬಿನಿಂದ ಪರ್ಸ್ ತೆಗೆದು ಅವಳ ಕೈಗೇ ಕೊಟ್ಟನು. ಪರ್ಸನ್ನು ತಡಕಾಡಿದ ನಿಶಾ ಅದರಲ್ಲಿದ್ದ 10 ರುಪಾಯಿಯ ನೋಟೊಂದನ್ನು ತೆಗೆದುಕೊಂಡು ಸುರೇಶನ ಮುಂದೆ ನಿಂತು ಅವನತ್ತ ಕೈ ಚಾಚಿ ನೋಟು ನೀಡಿ.....ಅಣ್ಣ ನಾನೂ ಟಾಟಾ ಬತ್ತೀನಿ.
ಸುರೇಶ ತಂಗಿಯೆದುರು ಮಂಡಿಯೂರಿ......ಏನ್ ಬೇಕು ನಿಂಗೆ ?
ನಿಶಾ ತನ್ನ ಪುಟ್ಟ ಕಾಲನ್ನೆತ್ತಿ ತೋರಿಸುತ್ತ.....ನಂಗಿ ಶೂ ಬೇಕು.
ಸುರೇಶ......ಈಗ ತಾನೇ ಅಪ್ಪ ನಿಂಗೆ ಶೂ ತೆಗೆದು ಕೊಟ್ಟಾಯಿತಲ್ಲಾ ಇನ್ನೂ ಶೂ ಬೇಕಾ ನಿಂಗೆ.
ನಿಶಾ ಫುಲ್ ಕನಫ್ಯೂಸಾಗಿ ಏನು ಹೇಳಬೇಕೆಂದು ತೋಚದೆ ನಿಂತರೆ ಅಲ್ಲಿಗೆ ಬಂದ ಗಿರೀಶ ತಂಗಿಯನ್ನೆತ್ತಿಕೊಂಡು.....ಸರಿ ಚಿನ್ನಿ ಸಂಜೆ ಹೋಗಿ ನಿಂಗೆ ಶೂ ತರೋಣ ಆಮೇಲೇನು ಬೇಕು ನಿಂಗೆ.
ನಿಶಾ ಖುಷಿಯಿಂದ ಅಣ್ಣನನ್ನು ತಬ್ಬಿಕೊಂಡು......ಚಾಕಿ...ಬಿಕ್ಕಿ ಎಲ್ಲ ಬೇಕು......ಕೀಕು ಬೇಕು.
ನೀತು.....ಸರಿ ಈಗ ಊಟ ಮಾಡಿ ಮಲಗು ಸಂಜೆ ಅಣ್ಣನ ಜೊತೆ ಟಾಟಾ ಹೋಗುವಂತೆ. ನಿಧಿ ಸಂಜೆ ತಂಗಿಯರನ್ನು ಕರೆದುಕೊಂಡು xxxx ಅಂಗಡಿಗೆ ಹೋಗಿ ಅಲ್ಲಿ ನಯನಾಳಿಗೆ ಸ್ಕೂಲಿನ ಸಮವಸ್ತ್ರ ತೆಗೆದುಕೊಂಡು ಬಾ.
ನಿಧಿ.....ಅಮ್ಮ ನನಗೆ ಆ ಅಂಗಡಿ ಎಲ್ಲಿದೆ ಎಂಬುದೇ ಗೊತ್ತಿಲ್ಲವಲ್ಲ.
ಗಿರೀಶ.....ಅಕ್ಕ ನೀವು ಮೊದಲು ನಮಿತಾಳ ಮನೆಗೋಗಿ ಅಲ್ಲಿಂದ ಅವರಿಬ್ಬರನ್ನೂ ಕರೆದುಕೊಳ್ಳಿ ಅವರಿಗೆ ಎಲ್ಲಾ ಅಡ್ರೆಸ್ಸೂ ಗೊತ್ತಿದೆ. ನೀವು ಪರ್ಚೇಸ್ ಮುಗಿಸಿದ ನಂತರ xxxx ಬೇಕರಿಗೆ ಬನ್ನಿ ನಾವೂ ಅಲ್ಲಿಗೇ ಬರುತ್ತೀವಿ.
ಎಲ್ಲರ ಊಟವಾದ ನಂತರ ತಾತನ ಜೊತೆ ನಿಶಾ ನಿದ್ರೆ ಮಾಡಲು ತೆರಳಿದರೆ ಮಕ್ಕಳೆಲ್ಲರೂ ಮಹಡಿ ಸೇರಿಕೊಂಡರು. ಬೆಂಗಳೂರಿಗೆ ಇಲಾಖೆಯ ಕಾರ್ಯ ನಿಮಿತ್ತ ತೆರಳಿದ್ದ ಪ್ರತಾಪ್ ಮನೆಗೆ ಬಂದಾಗ ಅವನ ಮುಖದಲ್ಲಿ ಟೆನ್ಷನ್ ಇರುವುದನ್ನು ಕಂಡ ಹರೀಶ ಏನೆಂದು ಕೇಳಿದನು.
ಪ್ರತಾಪ್.......ಅಣ್ಣ ಶಾಸಕ ಅವನ ಮಗ ಮತ್ತು ಎಸ್ಪಿ ಕಾಣೆಯಾದ ಬಗ್ಗೆ ನಮ್ಮನ್ನು ಪ್ರಶ್ನಿಸಲು ಡಿಜಿಪಿಯವರು ಕರೆಸಿಕೊಂಡಿದ್ದರು. ಅಲ್ಲಿ ಶಾಸಕನ ಬಗ್ಗೆ ಅಥವ ಎಸ್ಪಿ ಬಗ್ಗೆ ನಮಗ್ಯಾವುದೇ ಮಾಹಿತಿಯೂ ಇಲ್ಲವೆಂದು ತಿಳಿದಾಗ ಕೇಸನ್ನು ಸಿಐಡಿಗೆ ವರ್ಗಾಯಿಸಿದ್ದಾರೆ. ಈಗ ಸಿಐಡಿ ಅಧಿಕಾರಿಗಳೇ ಮುಂದಿನ ಶಾಸಕನ ಬಗ್ಗೆ ವಿಚಾರಿಸುವುದಕ್ಕೆ ಕಾಮಾಕ್ಷಿಪುರಕ್ಕೆ ಬರಲಿದ್ದಾರೆ.
ಸುಮ ಗಾಬರಿಗೊಳ್ಳುತ್ತ.....ತನಿಖೆಯಲ್ಲಿ ಶಾಸಕನ ವಿಷಯಗಳೆಲ್ಲಾ ಹೊರಬಂದರೆ ನಮ್ಮ ಬಗ್ಗೆಯೂ ತಿಳಿಯಬಹುದು ಈಗ ನಾವೇನು ಮಾಡೋದು ಪ್ರತಾಪ್ ?
ಪ್ರತಾಪ್....ಅದೇ ನನಗೂ ತಿಳಿಯುತ್ತಿಲ್ಲ ಸಿಐಡಿ ಅಧಿಕಾರಿಗಳ ಬಳಿ ಸಣ್ಣದೊಂದು ಕ್ಲೂ ದೊರೆತರೂ ಜನ್ಮ ಜಾಲಾಡಿ ಬಿಡುತ್ತಾರೆ ಅದೇ ನನಗೂ ಚಿಂತೆಯಾಗಿರುವುದು.
ರವಿ......ಶಾಂತವಾದ ಮನಸ್ಸಿನಿಂದ ಯೋಚಿಸದರೆ ನಮಗೇನಾದ್ರು ಹೊಳೆಯಬಹುದು.
ಎಲ್ಲರೂ ತಮ್ಮದೇ ತರ್ಕ ವಿಥರ್ಕಗಳನ್ನು ಹೇಳುತ್ತಿದ್ದರೆ ನೀತು....... ನಾವೇನೂ ಮಾಡಬೇಕಾಗಿಲ್ಲ ಹೇಗೆ ನಡೆಯುತ್ತಿದೆಯೋ ಹಾಗೆಯೇ ನಡೆಯಲಿ. ಸಿಐಡಿಯವರಿಗೆ ನಮ್ಮ ವಿರುದ್ದ ಯಾವುದೇ ಸಾಕ್ಷಿಗಳು ದೊರೆಯುವುದಿಲ್ಲ ಅದಂತೂ ಖಚಿತ ಆದರೆ ನಮ್ಮ ಮತ್ತು ಶಾಸಕನ ಬಗೆಗಿನ ಒಂದು ಘಟನೆಯಿಂದ ಅವರು ನಮ್ಮ ಮನೆಗೆ ಬಂದರೂ ಬರಬಹುದು.
ಪ್ರತಾಪ್.....ಏನತ್ತಿಗೆ ಅದು ? ಯಾವುದಾದರೂ ಸಾಕ್ಷಿಯಾ ? ನಾನು ಈಗಲೇ ಅದನ್ನು ನಾಶ ಮಾಡಿ ಬರುತ್ತೀನಿ ಹೇಳಿ.
ನೀತು......ಅದು ಸಾಕ್ಷಿಯೂ ಅಲ್ಲ ಆ ವಿಷಯವನ್ನು ನಮ್ಮಲ್ಯಾರೂ ಮುಚ್ಚಿಡುವುದಕ್ಕೂ ಸಾಧ್ಯವಿಲ್ಲ ಈಗೇನೂ ಚಿಂತೆ ಮಾಡಬೇಡಿ ನಾಳೆ ಸಿಐಡಿಯವರು ಬಂದರೆ ನಿಮಗೇ ತಿಳಿಯುತ್ತೆ ಎಲ್ಲಾ ಆರಾಮವಾಗಿ ಕಾಲ ಕಳೆಯಿರಿ ಟೆನ್ಷನ್ನಿನ ವಿಷಯವೇನಲ್ಲ.
* *
ಸಂಜೆ......
ನಿಶಾ 3/4 ಪ್ಯಾಂಟ್ ಮತ್ತು ಟೀಶರ್ಟ್ ಹಾಕಿಕೊಂಡು ರೆಡಿಯಾಗಿ ಸುರೇಶಣ್ಣನಿಂದ ತನ್ನ ಹೊಸ ಶೂ ಹಾಕಿಸಿಕೊಳ್ಳುತ್ತಿದ್ದಳು. ಅಪ್ಪನ ಬಳಿಗೋಡಿ ಕೆನ್ನೆಗೆ ಮುತ್ತಿಟ್ಟ ನಿಶಾ ಅಮ್ಮನಿಗೂ ಮುತ್ತಿಟ್ಟು....ಅಣ್ಣ ತೊತೆ ಟಾಟಾ ಹೋತೀನಿ.....ಎಂದೇಳಿ ಎಲ್ಲರಿಗೂ ಕೈಬೀಸಿ ತಾನೇ ಮೊದಲು ಮನೆಯಾಚೆ ಓಡಿದಳು.
ರೇವತಿ.....ಸುರೇಶ—ಗಿರೀಶ ಜೋಪಾನ ಕಣ್ರಪ್ಪ ತಂಗಿಯನ್ನು ನೀವೆ
ಹುಷಾರಾಗಿ ನೋಡಿಕೊಳ್ಳಬೇಕು.
ಸುರೇಶ.....ಅಜ್ಜಿ ಚಿಂತೆಯಿಲ್ಲ ಅವಳು ಫುಲ್ ಖುಷಿಯಾಗಿರ್ತಾಳೆ.
ಗಿರೀಶ.....ಅಕ್ಕ ನಿಮ್ಮೆಲ್ಲರ ಪರ್ಚೇಸ್ ಮುಗಿದ ನಂತರ ಬೇಕರಿ ಬಳಿ ಬಂದುಬಿಡಿ ನಾವೂ ಅಲ್ಲೇ ಸಿಗ್ತೀವಿ.
ಸುರೇಶ ತಂಗಿಯನ್ನೆತ್ತಿ ಆಕ್ಟಿವಾದಲ್ಲಿ ಮಧ್ಯ ಕೂರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಕೊಸರಾಡಿ ಕೆಳಗಿಳಿದ ನಿಶಾ ಗಿರೀಶಣ್ಣನ ಮುಂದೆ ನಿಂತು ಎಲ್ಲರಿಗೂ ಟಾಟಾ ಮಾಡುತ್ತ ತೆರಳಿದರೆ ನಿಧಿ ತಂಗಿಯರನ್ನು ಕರೆದುಕೊಂಡು ಕಾರಲ್ಲಿ ಹೊರಟಳು.
ನೀತು.....ರೀ ನಿಮ್ಮ ಪಲ್ಸರ್ ಆಕ್ಸಿಡೆಂಟ್ ಆದಾಗಿನಿಂದ ಕಾಣಿಸ್ತಿಲ್ಲ ಎಲ್ಲಿಗೆ ಹೋಯ್ತು ?
ಸುಮ......ರಿಪೇರಿಗೆ ಕೊಟ್ಟಿರಬೇಕು ಇನ್ನೂ ಬಂದಿಲ್ಲವಾ ಹರೀಶ ?
ಹರೀಶ......ನಾನೂ ರಿಪೇರಿ ಮಾಡಿಸೋಣ ಅಂತಿದ್ದೆ ಆಕ್ಸಿಡೆಂಟಾದ ಗಾಡಿ ಬೇಡ ಏಕ್ಸಚೇಂಜ್ ಮಾಡಿಬಿಡೋಣ ಅಂತೇಳಿ ಬುಲೆಟನ್ನು ಬುಕ್ಕಿಂಗ್ ಮಾಡಿದ್ದೀವಿ ಇನ್ನೆರಡು ದಿನಗಳಲ್ಲಿ ಬರಬಹುದು.
ಅಷ್ಟರಲ್ಲೇ ಮನೆ ಮುಂದೆ ಟೆಂಪೋವೊಂದು ನಿಂತು ಅದರಿಂದಿಳಿದ ವ್ಯಕ್ತಿ ಅನುಷ ಯಾರೆಂದು ಕೇಳಿದನು. ಅನುಷಾ ಮುಂದೆ ಬಂದಾಗ ಅವಳಿಂದ ಸಹಿ ಪಡೆದು ಎರಡು ಪಾರ್ಸಲ್ ತೆಗೆದಿಟ್ಟು ಹೋದನು.
ರಾಜೀವ್....ಏನಮ್ಮ ಇದು ಅನು ? ಇಷ್ಟು ದೊಡ್ಡದಾದ ಪಾರ್ಸಲ್ ತರಿಸಿದ್ದೀಯಲ್ಲ.
ಅನುಷ......ಅಪ್ಪ ಇದೇನೆಂದು ನನಗೂ ತಿಳಿಯುತ್ತಿಲ್ಲ ( ಹಿಂದಿನದ್ದು ಜ್ಞಾಪಿಸಿಕೊಳ್ಳುತ್ತ ) ಭಾವ ಇದನ್ನು ನಾವು ದೆಹಲಿಯಲ್ಲಿ ಬುಕಿಂಗ್ ಮಾಡಿದ್ದು ಈಗ ತಲುಪಿದೆ.
ಹರೀಶ......ಹೂಂ ನನಗೆ ಮರೆತೇ ಹೋಗಿತ್ತು ನಡಿ ಒಳಗಿಡೋಣ.
ನೀತು.....ಏನ್ರೀ ಇದು ?
ಅನುಷ......ಅಕ್ಕ ಇದನ್ನು ನಿಧಿಗಾಗಿ ತರಿಸಿರುವುದು ಅವಳು ಬಂದ ನಂತರ ಅವಳೇ ಓಪನ್ ಮಾಡಲಿ.
ಪ್ರೀತಿ.......ಇದೇನೆಂದಾದರೂ ಹೇಳು.
ಹರೀಶ....ಸರ್ಪ್ರೈಸ್ ಅವಳು ಬಂದ ಮೇಲೆ ಎಲ್ಲರಿಗೂ ತಿಳಿಯುತ್ತೆ.
* *
* *
ಅಣ್ಣಂದಿರ ಜೊತೆ ಶೂ ಅಂಗಡಿಗೆ ಬಂದಿದ್ದ ನಿಶಾ ಅವರು ತಮಗಾಗಿ ಶೂ ಖರೀಧಿಸುವ ತನಕ ಸುಮ್ಮನೆ ನಿಂತಿದ್ದು ನಂತರ ಗಿರೀಶಣ್ಣನ ಕೈ ಹಿಡಿದೆಳೆದು ತನ್ನ ಕಾಲನ್ನು ತೋರಿಸಿ.....ನಂಗಿ ಶೂ...ಶೂ ಎಂದಳು.
ಗಿರೀಶ.......ಚಿನ್ನಿ ಬೆಳಿಗ್ಗೆ ನಿನಗೆ ಪಪ್ಪ ಮೂರು ಶೂ ತೆಗೆದುಕೊಟ್ಟರು ಅಲ್ಲವಾ ಈಗ ಬೇಡ ಚಪ್ಪಲಿ ತೆಗೆದುಕೊಳ್ಳೋಣ.
ನಿಶಾ ಕೈ ಅಳ್ಳಾಡಿಸುತ್ತ....ಅಣ್ಣ ಶೂ ಬೇಲ...ಬೇಲ....ಚಪ್ಪಿ
ಗಿರೀಶ....ಹೂಂ ಚಿನ್ನಿ ನಿನಗೆ ಚಪ್ಪಲಿ ತೆಗೊಳ್ಳೋಣ. ಸರ್ ಇವಳ ಸೈ಼ಜಿನ ಚಪ್ಪಲಿ ತೋರಿಸಿ. ಹಲವು ಜೊತೆ ಚಪ್ಪಲಿ ಹಾಕಿ ನೋಡಿದ ಬಳಿಕ ಎರಡು ಜೊತೆಗಳನ್ನು ಖರೀಧಿಸಿದರೆ ತಾನು ಹಾಕಿಕೊಂಡಿದ್ದ ಕೆಂಪು ಬಣ್ಣದ ಸುಂದರ ಚಪ್ಪಲಿ ಬಿಚ್ಚಲು ನಿಶಾ ಸುತಾರಾಂ ಒಪ್ಪದೆ......ಅಣ್ಣ ಇದಿ ಬೇಕು....ಇದಿ ಬೇಕು....ಎನ್ನುತ್ತಿದ್ದಳು. ಅಂಗಡಿಯವ ನಗುತ್ತ ನಿಶಾ ಧರಿಸಿಕೊಂಡು ಬಂದಿದ್ದ ಶೂ ಪ್ಯಾಕ್ ಮಾಡಿ ಅವರ ಕೈಗಿಟ್ಟನು. ಗಿರೀಶಣ್ಣನ ಕೈ ಹಿಡಿದುಕೊಂಡು ನಡೆಯುತ್ತಿದ್ದ ನಿಶಾಳ ದೃಷ್ಟಿ ಅಲ್ಲಿನ ಅಂಗಡಿಗಳ ಮೇಲೆಲ್ಲಾ ಸರಿದಾಡುತ್ತಿದ್ದು ಒಂದಂಗಡಿ ಮುಂದೆ ಇಟ್ಟಿದ್ದ 3 ಅಡಿ ಎತ್ತರದ ಟೆಡ್ಡಿಯ ಮೇಲೆ ನೆಟ್ಟಿತು. ಅದನ್ನು ನೋಡಿ ಅಚ್ಚರಿಗೊಂಡ ನಿಶಾ ನಿಂತಲ್ಲೇ ನಿಂತರೆ......
ಸುರೇಶ....ಅಣ್ಣ ಈಗಿವಳು ಈ ಟೆಡ್ಡಿ ಬೇಕೆಂದು ಕೇಳ್ತಾಳೆ.
ನಿಶಾ ಬೇಕೆಂದು ಕೇಳದೆ ಅದನ್ನೇ ನೋಡುತ್ತ ನಿಂತಿರುವುದನ್ನು ಕಂಡ ಗಿರೀಶ ಬುದ್ದಿ ಉಪಯೋಗಿಸಿ ಅಮ್ಮನಿಗೆ ಕರೆಮಾಡಿ ವಿಷಯವನ್ನು ತಿಳಿಸಿದ. ಮಗಳಿಗೆ ಇಷ್ಟವಾಗಿದ್ದರೆ ತೆಗೆದುಕೊಡುವಂತೆ ಅಮ್ಮನಿಂದ ಪರ್ಮಿಷನ್ ಪಡೆದುಕೊಂಡು......
ಗಿರೀಶ....ಅಮ್ಮ ಪರ್ಮಿಷನ್ ಕೊಟ್ಟಿದ್ದಾರೆ.
ಸುರೇಶ......ಅಮ್ಮ ಒಪ್ಪಿದ ಮೇಲೆ ನಡಿಯಣ್ಣ ತೆಗೆದುಕೊಳ್ಳೋಣ ಚಿನ್ನಿಗಿದು ತುಂಬ ಇಷ್ಟವಾಗಿದೆ. ಆದರೆ ಇಷ್ಟು ದೊಡ್ಡ ಗೊಂಬೆ ನಾವು ಹೇಗೆ ತೆಗೆದುಕೊಂಡು ಹೋಗೋದು ?
ಗಿರೀಶ.....ಬೇಕರಿ ಪಕ್ಕದಲ್ಲೇ ಇದೆಯಲ್ಲವಾ ಅಕ್ಕ ಬಂದಾಗ ಅವರ ಕಾರಿನಲ್ಲಿಡೋಣ ಅಲ್ಲಿವರೆಗೆ ನಡೆದೇ ಹೋದರಾಯಿತು.
ತಂಗಿಯನ್ನು ಕರೆದುಕೊಂಡು ಅಂಗಡಿಯೊಳಗೆ ಬಂದ ಅಣ್ಣಂದಿರು ನಾಲ್ಕುವರೆ ಅಡಿ ಎತ್ತರದ ಮುದ್ದಾಗಿರುವ ಟೆಡ್ಡಿಯ ಬಗ್ಗೆ ಚೌಕಾಸಿ ಮಾಡಿ ಖರೀಧಿಸಿದಾಗ ನಿಶಾ ಮುಖ ಸಂತಸದಿಂದ ಅರಳಿ ಗಿರೀಶನ ಕಾಲಿಗೆ ಗಟ್ಟಿಯಿಗಿ ನೇತಾಕಿಕೊಂಡಳು. ಅಂಗಡಿಯವನಿಗೆ ದುಡ್ಡು ಕೊಡುತ್ತಿದ್ದಾಗ ಕ್ಯಾಷ್ ಕೌಂಟರಿನ ಪಕ್ಕದಲ್ಲಿಟ್ಟಿದ್ದ ಕಿವಿಯ ಡ್ರಾಪ್ಸಿನ ಮೇಲೆ ಗಿರೀಶನ ದೃಷ್ಟಿ ನೆಟ್ಟು ಅದನ್ನೆತ್ತಿಕೊಂಡು ಬೆಲೆ ಕೇಳಿದನು.
ಸುರೇಶ.....ಅಣ್ಣ ಇದು ಚಿನ್ನಿಗೆ ದೊಡ್ಡದಾಯಿತಲ್ಲವಾ ?
ಗಿರೀಶ.....ಇದು ಚಿನ್ನಿಗಲ್ಲ ಕಣೋ ಅಕ್ಕನಿಗೆ. ನಾವಿಲ್ಲಿಯವರೆಗೂ ಅಕ್ಕನಿಗ್ಯಾವುದೇ ಗಿಫ್ಟ್ ಕೊಟ್ಟಿಲ್ಲವಲ್ಲ ಅದಕ್ಕೆ ತೆಗೆದುಕೊಂಡೆ ಇದು ಅಕ್ಕನಿಗೆ ಚೆನ್ನಾಗಿ ಕಾಣಿಸುತ್ತಲ್ಲವಾ ?
ಸುರೇಶ.....ಸೂಪರಾಗಿದೆ ಅಣ್ಣ ಅಕ್ಕ ಖಂಡಿತ ಖುಷಿಪಡ್ತಾಳೆ.
ನಿಧಿ ಹುಡುಗಿಯರ ಜೊತೆ ಬೇಕರಿ ತಲುಪಿದ್ದು ತಮ್ಮಂದಿರಿನ್ನೂ ಸಹ ಬಂದಿರದಿದ್ದನ್ನು ನೋಡಿ ಫೋನ್ ಕೈಗೆತ್ತಿಕೊಂಡಾಗ.......
ನಯನ......ಅಕ್ಕ ಅಲ್ನೋಡಿ ಎಷ್ಟು ದೊಡ್ಡ ಟೆಡ್ಡಿ ತೆಗೆದುಕೊಂಡು ಬರ್ತಿದ್ದಾರೆ.
ನಮಿತ.....ತಂಗಿಗೆ ದೊಡ್ಢ ಗಿಫ್ಟನ್ನೇ ತೆಗೆದುಕೊಟ್ಟಿರುವಂತಿದೆ.
ನಿಧಿ.......ಏನಿದು ಗಿರೀಶ ಇಷ್ಟು ದೊಡ್ಡ ಟೆಡ್ಡಿ ಯಾಕೆ ತೆಗೆದುಕೊಂಡೆ ಚಿನ್ನಿ ನೀನೇ ಹಠ ಮಾಡಿದ್ಯಾ ?
ನಿಶಾ ಇಲ್ಲವೆಂದು ತಲೆಯಾಡಿಸಿದರೆ ಸುರೇಶ........ಇಲ್ಲ ಅಕ್ಕ ಚಿನ್ನಿ ಸುಮ್ಮನೆ ಇದನ್ನೇ ನೋಡ್ತಾ ನಿಂತಿದ್ಳು ನಾವು ಅಮ್ಮನ ಬಳಿ ಕೇಳಿದ ನಂತರವೇ ಇದನ್ನು ಖರೀಧಿಸಿದ್ದು.
ಅಕ್ಕನನ್ನು ಪಕ್ಕಕ್ಕೆ ಕರೆದೊಯ್ದ ಗಿರೀಶ.......ಅಕ್ಕ ನಮ್ಮ ಹತ್ತಿರವಿದ್ದ ಹಣ ಪೂರ್ತಿ ಖಾಲಿಯಾಗಿದೆ ಬೇಕರಿಯಲ್ಲಿ ನೀವೇ ಕೊಡ್ಬೇಕು.
ತಮ್ಮನ ಕೆನ್ನೆ ತಟ್ಟಿದ ನಿಧಿ......ನಾನಿರುವಾಗ್ಯಾಕೆ ಚಿಂತೆ ಬಾ.
ನಿಶಾ ತನಗೆ ಬೇಕಾದ್ದನ್ನು ಅಕ್ಕಂದಿರಿಂದ ತಿನ್ನಿಸಿಕೊಂಡು ಎಲ್ಲರೂ ತಿಂದಾದ ನಂತರ ಟೆಡ್ಡಿಯನ್ನು ಕಾರಿನೊಳಗಿಟ್ಟರು. ನಿಶಾ ಅಕ್ಕಂದಿರ ಜೊತೆ ಹೋಗದೆ ಅವರಿಗೆ ಟಾಟಾ ಮಾಡಿ ಗಿರೀಶಣ್ಣನ ಕೈ ಹಿಡಿದಳು. ಮೊದಲು ಮನೆ ತಲುಪಿದ ನಿಶಾ ಹೊರಗೆ ಹುಲ್ಲಿನ ಮೇಲೆ ಕುಳಿತಿದ್ದ ಅಮ್ಮನ ಬಳಿಗೋಡಿ ಅವಳ ಮಡಿಲಿಗೇರಿ ತನ್ನ ಹೊಸ ಚಪ್ಪಲಿ ತೋರಿಸುತ್ತ ಅಣ್ಣ ತೆಗೆದುಕೊಟ್ಟನೆಂದು ಖುಷಿಯಿಂದ ಹೇಳುತ್ತಿದ್ದಳು ನಮಿತ ಮತ್ತು ನಿಕಿತಾಳನ್ನು ಅವರ ಮನೆಗೆ ಡ್ರಾಪ್ ಮಾಡಿ ಬಂದಾಗ ನಯನ ದೊಡ್ಡ ಟೆಡ್ಡಿಯನ್ನೆತ್ತಿಕೊಂಡು ಬಂದಿದ್ದನ್ನು ನೋಡಿದ ನಿಶಾ ತಾತನ ಕೆನ್ನೆ ತಟ್ಟಿ ಟೆಡ್ಡಿಯತ್ತ ಕೈ ತೋರಿ.....ನಂದು ಗೊಂಬಿ ನಂದು ಎನ್ನುತ್ತ ನಲಿದಾಡುತ್ತಿದ್ದಳು.
ರಾತ್ರಿ ಊಟದ ಸಮಯ......
ಅಶೋಕ......ಏನೀವತ್ತು ಸಾಂಬಾರ್ ಇಷ್ಟು ಡಿಫರೆಂಟಾಗಿದೆ ?
ರಾಜೀವ್.....ಹೌದು ಕಣಮ್ಮ ಮಧ್ಯಾಹ್ನದ ರುಚಿಗೂ ಈಗಿನದಕ್ಕೂ ತುಂಬಾನೇ ವೆತ್ಯಾಸವಿದೆ.
ಸುಮ.....ಯಾಕೆ ಮಾವ ರುಚಿಯಾಗಿಲ್ಲವಾ ?
ರಾಜೀವ್.....ಛೇ ನಾನೆಲ್ಲಿ ಹಾಗೇ ಹೇಳಿದೆ ತುಂಬ ರುಚಿಯಾಗಿದೆ.
ಹರೀಶ....ಭಟ್ಟರು ಕೊಟ್ಟಿದ್ದ ಪುಡಿಯಿಂದಲೇ ಸಾಂಬಾರ್ ಮಾಡಿದ ಹಾಗಿದೆ ಹೌದಾ ?
ಪ್ರೀತಿ.....ಹೂಂ ನಿಮಗೆ ತಿಳಿದೋಯಿತಾ ?
ಹರೀಶ.....ನಮ್ಮ ಮದುವೆಯಲ್ಲಿ ಮಾಡಿದ್ದ ಸಾಂಬಾರಿನ ರುಚಿ ಈಗ ಸಹ ನನ್ನ ನಾಲಿಗೆಯಲ್ಲಿ ಕಟ್ಟಿದಂತಿದೆ. ನೀತು ಭಟ್ಟರ ಕೈರುಚಿ ಇಷ್ಟು ವರ್ಷಗಳ ನಂತರವೂ ಅಧ್ಬುತವಾಗಿದೆ.
ಅಶೋಕ......ನಿಮ್ಮಿಬ್ಬರ ಮದುವೆಯ ಬಗ್ಗೆ ಗೊತ್ತಿಲ್ಲ ಆದರೀವತ್ತಿನ ಸಾಂಬಾರ್ ಸೂಪರಾಗಿದೆ ಮೊದಲೂ ಚೆನ್ನಾಗಿರುತ್ತಿತ್ತು ಆದರಿದು ಅದಕ್ಕಿಂತ ಒಂದೆಜ್ಜೆ ಮುಂದಿದೆ ಅಷ್ಟೆ.
ಅನುಷ....ಅಕ್ಕ ಹಾಗಿದ್ದರೆ ನಾಳೆ ಭಟ್ಟರು ನೀಡಿರುವ ವಾಂಗೀಬಾತ್ ಪುಡಿಯಿಂದ ವಾಂಗೀಬಾತ್ ಮಾಡೋಣ ಅದನ್ನೂ ಟೇಸ್ಟ್ ಮಾಡಿ ರುಚಿ ತಿಳಿಯಬಹುದು.
ಸುಮ.....ಆಯ್ತು ಕಣೆ ಅದನ್ನೇ ಮಾಡೋಣ.
ಊಟವಾದ ನಂತರ ಇಬ್ಬರು ಗಂಡಂದಿರನ್ನು ಹೊರಗೆ ಕರೆದೊಯ್ದ ನೀತು ಅರ್ಧ ಮುಕ್ಕಾಲು ಘಂಟೆವರೆಗೆ ಸಿಐಡಿಯವರ ಬಗ್ಗೆ ಚರ್ಚಿಸಿ
ಹಿಂದಿರುಗಿದಳು. ತಮ್ಮ ರೂಮಿಗೆ ಕಾಲಿಟ್ಟಾಗ ನಿಧಿ ಜೊತೆ ಮಲಗಿದ್ದ ನಿಶಾ ಮಂಚದ ಮೇಲೆ ದೊಡ್ಡ ಟೆಡ್ಡಿಯನ್ನಿಟ್ಟುಕೊಂಡು ಆಡುತ್ತಾ ಇರುವುದನ್ನು ನೋಡಿ......
ನೀತು....ಚಿನ್ನಿ ಇದನ್ನಿಟ್ಟುಕೊಂಡರೆ ಅಮ್ಮ ಎಲ್ಲಿ ಮಲಗುವುದು ? ನಾಳೆ ಎದ್ದ ಮೇಲೆ ಇಡುವಂತೆ ಈಗ ಕೆಳಗಿಡ್ತೀನಿ ಕಂದ ಆಯ್ತಾ.
ನಿಶಾ ತಲೆಯಾಡಿಸಿ ಅಪ್ಪ..ಅಮ್ಮ..ಅಕ್ಕನಿಗೆ ಗುಲ್ ನೈಟ್ ಹೇಳುತ್ತ ಗೋಡೆಯ ಕಡೆ ಮುಖ ಮಾಡಿ ಮಲಗಿದರೆ ನಿಧಿಗೆ ಇಲ್ಲಿ ಮಲಗು ಎಂದೇಳಿದ ಹರೀಶ ಪಕ್ಕದ ರೂಮಿನಲ್ಲಿದ್ದ ಕಾಮಕನ್ಯೆಯರಾಗಿರುವ ಪ್ರೀತಿ ಮತ್ತು ಸುಮಾರ ತೊಡೆಗಳ ನಡುವೆ ಸೇರಿಕೊಳ್ಳಲು ತೆರಳಿದ.
* *
* *
ಬೆಳಿಗ್ಗೆ ತಿಂಡಿ ಮುಗಿಸಿದ ನಂತರ ಹರೀಶ ಹಿರಿಯ ಮಗಳಿಗೆ ತರಿಸಿದ್ದ ಪಾರ್ಸಲ್ ನೀಡಿದಾಗ ಅವಳ ತುಟಿಗಳಲ್ಲಿ ಮುಗುಳ್ನಗೆ ಕಣ್ಣಿನಲ್ಲಿ ಕಂಬನಿ ಮಿಡಿಯಿತು.
ರಾಜೀವ್....ಮೊದಲು ತೆಗೆದು ನೋಡಮ್ಮ ನಿಮ್ಮಪ್ಪ ನಿನಗೇನನ್ನು ತರಿಸಿದ್ದಾನೆಂದು ನೋಡುವ ಕುತೂಹಲ ನಮಗೂ ಇದೆ.
ನಿಧಿ.....ತಾತ ಈ ದೊಡ್ಡ ಬಾಕ್ಸಿನಲ್ಲಿರುವುದು ವೀಣೆ ಚಿಕ್ಕದರಲ್ಲೇನಿದೆ ಅಂತ ಮಾತ್ರ ಗೊತ್ತಿಲ್ಲ.
ಅನುಷ.....ಇದರಲ್ಲಿ ವೀಣೆ ಇದೆ ಅಂತ ನಿನಗೇಗೆ ಗೊತ್ತಾಯ್ತು ?
ನಿಧಿ.....ಆಂಟಿ ಬಾಕ್ಸಿನ ಸೈಜ಼್ ಮತ್ತಿದರ ಶೇಪ್ ನೋಡಿ ಅಂದಾಜು ಮಾಡಿದೆ ಅದು ನಿಜವಾಯಿತು.
ನಿಧಿ ಮತ್ತು ಅನುಷ ಸೇರಿ ಪಾರ್ಸಲ್ ತೆಗೆದಾಗ ಹರೀಶನೇ ಒಳಗಿದ್ದ ವೀಣೆಯನ್ನೆತ್ತಿ ಮಗಳಿಗೆ ಉಡುಗೊರೆಯಾಗಿ ನೀಡಿದನು.
ಶೀಲಾ.....ಇದನ್ನು ಮೊದಲು ನಿಮ್ಮಮ್ಮ ನುಡಿಸಿದರೇ ಚೆನ್ನು ಕಣೆ.
ನಿಧಿ.....ಹೂಂ ಅಮ್ಮ ನೀವೇ ಮೊದಲು ನುಡಿಸಿದರೆ ನನಗೆ ತುಂಬ ಖುಷಿಯಾಗುತ್ತೆ.
ನೀತು....ನನಗಿದೆಲ್ಲಾ ಗೊತ್ತಿಲ್ಲ ನಿಧಿ ನೀನೇ ನುಡಿಸು ನಾ ಕೇಳ್ತೀನಿ.
ಶೀಲಾ ಗೆಳತಿಯನ್ನು ಗುರಾಯಿಸಿ......ಮಗಳು ಹೇಳಿದ್ದನ್ನು ಸುಮ್ಮನೆ ಮಾಡು ನಿನಗೇನು ಗೊತ್ತಿದೆ ಗೊತ್ತಿಲ್ಲವೆಂದು ನನಗೆ ಗೊತ್ತಿದೆ.
ಹರೀಶನೇ ವೀಣೆಯನ್ನು ಹೆಂಡತಿಯ ಕೈಗಿತ್ತರೆ ಅದನ್ನೆತ್ತಿ ಕಣ್ಣುಗಳಿಗೆ ಒತ್ತಿಕೊಂಡ ನೀತು ಚಕ್ಕಲಮಟ್ಟೆ ಹಾಕಿ ವೀಣೆಯನ್ನು ಮಡಿಲಿನಲ್ಲಿ ಇಟ್ಟುಕೊಂಡು ಕಣ್ಮುಚ್ಚಿ ಸರಸ್ವತಿ ದೇವಿಯನ್ನಾರಾಧಿಸಿ ನುಡಿಸಲು ಪ್ರಾರಂಭಿಸಿದಾಗ ಹರೀಶನ ಅಚ್ಚರಿಗೆ ಕೊನೆಯೇ ಇಲ್ಲದಂತಾಯಿತು. ಅಶೋಕನ ಕಾಲಿಗೊರಗಿಕೊಂಡು ನಿಂತಿದ್ದ ನಿಶಾಳಿಗೆ ಇದೆಲ್ಲವೇನೂ ಅರ್ಥವಾಗದಿದ್ದರೂ ವೀಣೆಯ ನಿನಾದ ಕೇಳಿ ಅಮ್ಮನ ಬಳಿ ಬಂದು ಕಣ್ಣು ಬಾಯಿ ಬಿಟ್ಟುಕೊಂಡು ಒಮ್ಮೆ ವೀಣೆ ಒಮ್ಮೆ ಅಮ್ಮನನ್ನು ನೋಡುತ್ತ ನಿಂತುಬಿಟ್ಟಳು. ಹದಿನೈದು ನಿಮಿಷದ ನಂತರ ನೀತುವಿನ ವೀಣಾವಾದನ ಮುಕ್ತಾಯಗೊಂಡರೆ ಎಲ್ಲರೂ ಚಪ್ಪಾಳೆ ತಟ್ಟಿದರು. ಎಲ್ಲರನ್ನೂ ಅನುಸರಿಸಿದ ನಿಶಾ ತಾನೂ ಚಪ್ಪಾಳೆ ತಟ್ಟುತ್ತ ಅಮ್ಮನ ಹೆಗಲಿಗೆ ನೇತಾಕಿಕೊಂಡು ಕೆನ್ನೆಗೆ ಮುತ್ತಿಡುತ್ತಿದ್ದಳು.
ನಿಧಿ.....ಅಮ್ಮ ನೀವು ವೀಣೆ ನುಡಿಸುತ್ತಿದ್ದರೆ ನನಗೆ ಬೇರೊಂದು ಲೋಕಕ್ಕೆ ಹೋದಂತಾಗಿತ್ತು ನಿಜಕ್ಕೂ ಸೂಪರ್ ಕಣಮ್ಮ.
ಶೀಲಾ.....ನಿಮ್ಮಮ್ಮನಿಗೆ ಏನೇನು ಗೊತ್ತಿದೆ ಎಂಬುದನ್ನು ಅವಳಾಗಿ ತೋರಿಸಿಕೊಳ್ಳುವ ತನಕ ನಿಮಗ್ಯಾರಿಗೂ ತಿಳಿಯುವುದಿಲ್ಲ ಕಣಮ್ಮ.
ಗಿರೀಶ......ಅಮ್ಮ ಮದುವೆಯಾದ ನಂತರ ತಮ್ಮ ಟ್ಯಾಲೆಂಟನ್ನೆಲ್ಲಾ ಬೀರುವಿನಲ್ಲಿಟ್ಟು ಬೀಗ ಹಾಕಿದ್ದರು. ಆದರೆ ಚಿನ್ನಿ ಮನೆಗೆ ಕಾಲಿಟ್ಟ ನಂತರ ಒಂದೊಂದಾಗಿ ಅಮ್ಮನ ಟ್ಯಾಲೆಂಟ್ ಆಚೆ ಬರುತ್ತಿದೆ.
ಸುರೇಶ.......ಮತ್ತೆ ನನ್ನೀ ಮುದ್ದಿನ ಚೋಟ್ ಮೆಣಸಿನಕಾಯೇನು ಸಾಮಾನ್ಯಳಾ.....ಎಂದೇಳಿ ತಂಗಿ ಜುಟ್ಟನ್ನಿಡಿದು ಮೆಲ್ಲನೆಳೆದನು.
ಹರೀಶ ಏನೂ ಮಾತನಾಡದೆ ಪ್ರೀತಿಯಿಂದ ಹೆಂಡತಿಯ ತಲೆ ಸವರಿ ಅವಳ ಕೆನ್ನೆ ತಟ್ಟಿ ಹಿಂದೆ ಸರಿದನು.
ದೃಷ್ಟಿ......ಅತ್ತೆ ನೀವು ವೀಣೆ ನುಡಿಸುತ್ತಿದ್ದನ್ನು ನೋಡಿದಾಗ ನನಗೆ ನನ್ನ ಬಗ್ಗೆಯೇ ಶೇಮ್ ಆಗುತ್ತಿತ್ತು ಓದುವುದನ್ನು ಬಿಟ್ಟರೆ ಯಾವುದೇ ರೀತಿಯ ಟ್ಯಾಲೆಂಟೂ ನನ್ನಲ್ಲಿಲ್ಲವಲ್ಲ.
ರಶ್ಮಿ.....ಮಮ್ಮ ನಮಗೂ ವೀಣೆ ನುಡಿಸುವುದನ್ನು ಹೇಳಿಕೊಡಿ.
ನೀತು.....ಆಯ್ತಮ್ಮ ಆದರೀ ವೀಣೆಯಲ್ಲಿ ನೀವು ಕಲಿಯುವುದಕ್ಕೆ ಆಗಲ್ಲ ಇದು ಏಳು ತಂತಿಗಳ ವೀಣೆ ನಿಮಗೆ ಐದು ತಂತಿಗಳ ವೀಣೆ ತಂದು ಆಮೇಲೆ ಹೇಳಿಕೊಡ್ತೀನಿ. ಚಿನ್ನಿ ನೀನೂ ಕಲಿತೀಯಾ ಕಂದ ನಿನಗೂ ಹೇಳಿಕೊಡಲಾ ?
ನಿಶಾ ತಲೆ ಅಳ್ಳಾಡಿಸಿ....ನಂಗಿ ಬೇಲ....ಬೇಲ....ನಾನಿ ಆಟ ಆತೀನಿ .....ಎಂದೇಳಿ ಕುಕ್ಕಿ ಮರಿಯ ಜೊತೆ ಮನೆಯಾಚೆ ಓಡಿದರೆ ಅವಳ ಆಟ ನೋಡಿ ಎಲ್ಲರೂ ನಗುತ್ತಿದ್ದರು.
ಕತೆಯಂತೂ ಬಹಳ ಕುತೂಹಲಭರಿತವಾಗಿದೆ
ReplyDelete....🔥 ಬಾಸ್
ReplyDeleteThank you.. super.. nimage devaru holle bareyuva vide kottidane. Niuve munde film gu story bareyalu avakasa sikali
ReplyDelete