ಮನೆ ತಲಪುವವರೆಗೂ ಪಕ್ಕದ ಸೀಟಿನಲ್ಲಿದ್ದ ನಿಶಾ ಅಮ್ಮನ ಬಳಿ ಕರುವಿನ ಬಗ್ಗೆ ಏನೇನೋ ಹೇಳುತ್ತಿದ್ದು ಮನೆ ಮುಂದೆ ಕಾರು ನಿಂತ ತಕ್ಷಣ ಕೆಳಗಿಳಿದು ಅಪ್ಪನ ಬಳಿಗೋಡಿ ಅವನಿಗೆ ಕರುವಿನ ಜೊತೆ ತಾನೇನು ಆಡಿದೆನೆಂದು ವರದಿ ಒಪ್ಪಿಸುತ್ತಿದ್ದಳು. ರಾತ್ರಿ ಊಟವಾದ ನಂತರ ಮಕ್ಕಳೆಲ್ಲರೂ ಮಹಡಿಯಲ್ಲಿ ಸೇರಿಕೊಂಡರೆ ಹಿರಿಯರೆಲ್ಲಾ ಮನೆಯಾಚೆಗಿನ ಹುಲ್ಲು ಹಾಸಿನಲ್ಲಿ ಕುಳಿತು ಮಾತನಾಡುತ್ತಿದ್ದರು.
ಹರೀಶ.....ವಿಕ್ರಂ ನಿಮ್ಮ ಫ್ಯಾಕ್ಟರಿ ಕೆಲಸಗಾರರ ವಿಷಯ ಏನಾಯ್ತು ಅಲ್ಲಿ ಮುಂಚೆ ಕೆಲಸ ಮಾಡುತ್ತಿದ್ದವರು ಪುನಃ ಬರಲು ಒಪ್ಪಿದರಾ ?
ವಿಕ್ರಂ........ಅರ್ಧಕ್ಕಿಂತ ಜಾಸ್ತಿ ಕಾರ್ಮಿಕರ ಜೊತೆ ಮಾತನಾಡಿರುವೆ ಎಲ್ಲರೂ ಸಂತೋಷದಿಂದ ಕೆಲಸಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಇನ್ನುಳಿದವರ ಜೊತೆ ನಾಳೆ ಮಾತನಾಡಿ ಅವರನ್ನು ಒಪ್ಪಿಸಿದ ಬಳಿಕ ನಾನು ರವಿ ಇಬ್ಬರೂ ಬಾಂಬೆಗೆ ಹೋಗಿ ಬರ್ತೀವಿ.
ರಾಜೀವ್.....ಬಾಂಬೆಗಾ ? ಯಾಕೋ ?
ವಿಕ್ರಂ.....ಅಪ್ಪ ಫ್ಯಾಕ್ಟರಿಯಲ್ಲಿರುವ ಮೆಷಿನರಿಗಳ ದುರಸ್ಥಿ ಕೆಲಸವು ನಡೆಯುತ್ತಿದೆ ಓಪನಿಂಗ್ ಆದ ಹದಿನೈದು ದಿನಗಳಲ್ಲೇ ಪ್ರೊಡಕ್ಷನ್ ಶುರು ಮಾಡಬಹುದು. ನಾವು ತಯಾರಿಸುವ ಕೆಮಿಕಲ್ಸುಗಳನ್ನು ಮಾರಾಟ ಮತ್ತು ಸರಬರಾಜು ಮಾಡುವುದಕ್ಕಾಗಿ ಕೆಲವು ಕಂಪನಿ ಜೊತೆ ಮಾತುಕತೆ ಆಡಬೇಕಾಗಿದೆ ಮಾರ್ಕೆಟಿಂಗ್ ತಾನೇ ತುಂಬಾ ಮುಖ್ಯವಾದುದ್ದು. ನಾವಿಲ್ಲಿ ಪ್ರೊಡಕ್ಷನ್ ಮಾಡಿದರೂ ನಮಗೆಲ್ಲೂ ಖರೀಧಿದಾರರೇ ಸಿಗದೆ ಹೋದರೆ ಏನಾಗುತ್ತೆ ಯೋಚಿಸಿ.
ಅಶೋಕ....ಹೌದು ಅಂಕಲ್ ಅದೇ ವಿಷಯವಾಗಿ ನಾನು ರೇವಂತ್ ಕೂಡ ಚೆನೈ ಕಡೆ ಹೋಗುತ್ತಿದ್ದೀವಿ ಜೊತೆಗೆ ನಮ್ಮ ಗ್ಲಾಸ್ ಪ್ಲೈವುಡ್ ಮಾರ್ಕೆಟಿಂಗ್ ಮಾಡಿ ಅಲ್ಲಿ ಹೊಸ ಖರೀಧಿದಾರರ ಜೊತೆಯಲ್ಲೂ ಮಾತುಕತೆ ನಡೆಸಬೇಕಿದೆ.
ರೇವತಿ......ಇಲ್ಲಿವರೆಗೂ ಕೈ ಹಿಡಿದು ತಂದಿರುವ ದೇವರು ಮುಂದೂ ನಿಮ್ಮೆಲ್ಲರ ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ನೀಡುತ್ತಾನೆ.
ರಜನಿ......ಆಚಾರ್ಯರು ಹೇಳಿದ್ದಾರಲ್ಲ ಅಮ್ಮ ಚಿನ್ನಿ ಈ ಮನೆಯ ಪುಟ್ಟ ಭಾಗ್ಯದೇವತೆ ಅಂತ ಅವಳಿರುವಾಗ ನಾವು ಸೋಲುವುದಕ್ಕೆ ಸಾಧ್ಯವಿದೆಯಾ ?
ಆರೀಫ್......ಅಶೋಕ ಸರ್ ನಮ್ಮೂರಿನಲ್ಲೂ ಆರೇಳು ಪ್ಲೈವುಡ್ ಮತ್ತು ಗ್ಲಾಸ್ ಸಗಟು ವ್ಯಾಪಾರಿಗಳು ನನಗೆ ಪರಿಚಯವಿದ್ದಾರೆ. ನಾಳೆ ಹೇಗೂ ನೀತು ಮೇಡಂ ನಮ್ಮೂರಿಗೆ ಬರುತ್ತಿದ್ದಾರಲ್ಲ ಅವರಿಗೆ ಅಲ್ಲಿನ ವ್ಯಾಪಾರಸ್ಥರನ್ನು ಪರಿಚಯ ಮಾಡಿಸುವೆ ನಂತರ ನೀವು ವ್ಯವಹಾರ ಮಾತನಾಡಿಕೊಳ್ಳಬಹುದು.
ನೀತು.....ಈ ವ್ಯವಹಾರಗಳೆಲ್ಲ ಅಶೋಕ ಮತ್ತಿತರರೇ ನೋಡಲಿ ಈ ವಿಷಯಕ್ಕೆ ನಾನಂತೂ ತಲೆ ಹಾಕುವುದಿಲ್ಲ.
ಹರೀಶ......ನೀತು ನಾಳೆ ನೀನೊಬ್ಬಳೇ ಹೋಗುವುದಾ ? ಚಿನ್ನವನ್ನು ಸಾಗಾಟ ಮಾಡುವುದು ತುಂಬ ರಿಸ್ಕಿಯಲ್ಲವಾ ?
ನೀತು.....ಇಲ್ಲ ರೀ ನಾನು ಬೇರೆ ಕಾರಿನಲ್ಲಿ ಹೋಗ್ತೀನಿ ಪ್ರತಾಪನೂ ನಮ್ಮ ಜೊತೆ ಬರುತ್ತಾನೆ. ಅವನು ಯೂನಿಫಾರಂನಲ್ಲಿ ಆರೀಫಿನ ಜೊತೆ ಕಾರಿನಲ್ಲಿದ್ದರೆ ನಮ್ಮ ವೆಹಿಕಲ್ ತಪಾಸಣೆ ಮಾಡುವುದನ್ನು ತಪ್ಪಿಸುವುದು ಅನುಕೂಲವಾಗಿರುತ್ತೆ.
ರವಿ....ನಿನ್ನ ಯೋಚನೆ ಸರಿಯಾದದ್ದೇ ಕಣಮ್ಮ ಚಿನ್ನ ತಲುಪಿಸಿದ ನಂತರ ನೀವಿಬ್ಬರೂ ಹಿಂದಿರುಗಿ ಬರಬಹುದು.
ನೀತು.....ಇಲ್ಲ ಅಣ್ಣ ವ್ಯವಹಾರ ಮುಗಿಯುವವರೆಗೂ ನಾನಲ್ಲಿಯೇ ಇರಬೇಕು ಇರಡ್ಮೂರು ದಿನಗಳ ನಂತರ ಆರೀಫ್ ಡ್ರಾಪ್ ಮಾಡ್ತಾನೆ
ರೇವಂತ್.....ಪುಟ್ಟಿ ನೀನಲ್ಲಿ ಉಳಿದುಕೊಳ್ಳಲು ಯಾವುದಾದರೂ ಒಳ್ಳೆಯ ಹೋಟೆಲ್ಲಿನಲ್ಲಿ ರೂಂ ಬುಕ್ಕಿಂಗ್ ಮಾಡಲಾ ?
ಆರೀಫ್.....ಏನ್ ರೇವಂತ್ ಸರ್ ನನ್ನ ಮನೆಯಿಲ್ಲವಾ ? ಅಲ್ಯಾರು ಇರ್ತಾರೆ ಹೇಳಿ ನಾನೊಬ್ಬನೇ ಜೊತೆಗೆ ನೀತು ಮೇಡಂಗೆ ಅಲ್ಯಾವ ತೊಂದರೆಯೂ ಆಗುವುದಿಲ್ಲ ಸೇಫಾದ ಜಾಗ.
ರಜನಿ.....ಇವಳಿಗೆಲ್ಲಾ ಜಾಗಗಳೂ ಸೇಫಾಗಿರುತ್ತೆ ಇವಳಿಂದ ಬೇರೆ ಜನಗಳು ಸೇಫಾಗಿರಬೇಕಷ್ಟೆ.
ನೀತು......ರೀ ಸೋಮವಾರ ಭಟ್ಟರ ಮೊಮ್ಮಗಳ ಆಪರೇಷನ್ ನಡೆಯುತ್ತೆ ಅಲ್ಲಾಗೆ ನಾನು ಹೋಗಲು ಸಾಧ್ಯವಾಗುವುದಿಲ್ಲ ಅಂತ ಅನಿಸುತ್ತೆ. ನೀವು ಚಿನ್ನಿಯನ್ನೂ ಕರೆದುಕೊಂಡು ಹೋಗಿ ಬನ್ನಿ.
ಹರೀಶ......ಸರಿ ನಾನು ಚಿನ್ನಿ ಹೋಗಿ ಬರ್ತೀವಿ ಆದರೆ ನೀನಿಲ್ಲದಿದ್ರೆ ನನ್ನ ಮಗಳು ರಂಪ ಮಾಡ್ತಾಳೆ ನೋಡು.
ನೀತು....ನನ್ನ ಮಗಳು ಬುದ್ದಿವಂತೆ ಕಣ್ರಿ ಅವಳಿಗೆ ನಾನು ಹೇಳಿಯೇ ಹೋಗ್ತೀನಿ ನೋಡಿ ಅಮ್ಮ ಬೇಕೆಂದು ಹಠವನ್ನೇ ಮಾಡಲ್ಲ.
ರಜನಿ....ಹರೀಶ್ ನಿಮ್ಮ ಜೊತೆ ಸುಮಾ ಅವರನ್ನೂ ಕರೆದುಕೊಂಡು ಹೋಗಿ ಚಿನ್ನಿಯ ಜೊತೆ ಅವರಿದ್ದರೆ ಅನುಕೂಲವಾಗುತ್ತೆ.
ರೇವತಿ.....ಹೌದು ಕಣಪ್ಪ ಹರೀಶ ಮಗುವಿನ ಜೊತೆಗೊಬ್ಬರಿದ್ದರೆ ಅನುಕೂಲ ಸುಮ ನೀನು ಹೋಗಿ ಬಾರಮ್ಮ.
ಸುಮ.....ಹೂಂ ಅತ್ತೆ ಹಾಗೆಯೇ ನೀತು ಹುಟ್ಟಿದ ಮನೆಯನ್ನು ಸಹ ನೋಡಿಕೊಂಡು ಬಂದಂತಾಗುತ್ತೆ ಹೇಗೂ ಇವರು ರವಿ ಅಣ್ಣ ಇಬ್ಬರು ಬಾಂಬೆಗೆ ಹೋಗುತ್ತಿದ್ದಾರಲ್ಲ.
ಪ್ರೀತಿ.....ಅಕ್ಕ ನಾನು ಹೋಗಲಾ ?
ರಜನಿ......ಬೇಡ ನೀನು ನನ್ನ ಜೊತೆಗಿರು ಇಲ್ಯಾರು ಕೆಲಸಗಳನ್ನೆಲ್ಲಾ ಮಾಡ್ತಾರೆ ಅದಕ್ಕೆ ನೀನಿಲ್ಲೇ ಇರಬೇಕು.
ಕೆಲಹೊತ್ತು ಹೀಗೇ ಚರ್ಚೆ ಮಾಡುತ್ತ ಎಲ್ಲರೂ ಮಲಗುವುದಕ್ಕಾಗಿ ತೆರಳಿದಾಗ ಎರಡನೇ ಮಹಡಿಯ ರೂಮೊಂದರಲ್ಲಿ ಆರೀಫನಿಗೆ ಮಲಗಲು ವ್ಯವಸ್ಥೆ ಮಾಡಲಾಗಿತ್ತು. ನೀತು ರುಮಲ್ಲಿ ಮಗಳನ್ನು ಕೂರಿಸಿಕೊಂಡು.......
ನೀತು......ನನ್ನ ಮುದ್ದು ಬಂಗಾರಿ ನಾಳೆ ಮಮ್ಮ ಮೂರು ದಿನ ಬೇರೆ ಊರಿಗೆ ಹೋಗಿ ಬರ್ತಾಳೆ ಕಂದ. ನೀನಿಲ್ಲಿ ಅಜ್ಜಿ... ತಾತ... ಅಕ್ಕ.....
ಅಣ್ಣನ ಜೊತೆ ಆಡಿಕೊಂಡಿರು ಅಮ್ಮ ಬೇಕು ಅಂತ ಹಠ ಮಾಡದೆ ಜಾಣೆಯಾಗಿ ಇರಬೇಕು ಗೊತ್ತಾಯ್ತಾ.
ನಿಶಾ ತಲೆ ಅಳ್ಳಾಡಿಸಿ......ಪಪ್ಪ......?
ನೀತು.......ಪಪ್ಪ ನಿನ್ನ ಜೊತೆಗೇ ಇರುತ್ತೆ ಕಂದ.
ಮಗಳ ಜೊತೆ ಮಾತನಾಡುತ್ತ ಅವಳಿಗೆ ತಿಳಿ ಹೇಳಿ ಇತರೆ ಮಕ್ಕಳಿಗೆ ತಂಗಿಯ ಮೇಲೆ ಗಮನ ಇಡುವಂತೇಳಿದ ನೀತು ಮಲಗಿಕೊಂಡಾಗ ನಿಶಾ ಅಮ್ಮನನ್ನು ಸೇರಿಕೊಂಡು ನಿದ್ರೆಗೆ ಜಾರಿದಳು. ಬೆಳಿಗ್ಗೆ ಆರು ಘಂಟೆಗೆ ರೆಡಿಯಾದ ನೀತು...ಆರೀಫ್ ಮತ್ತು ಪ್ರತಾಪ್ ಹೊರಟಾಗ ಇನ್ನೂ ನಿದ್ದೆಯ ಮಂಪರಿನಲ್ಲಿ ಅಮ್ಮನ ತೋಳಿನಲ್ಲಿದ್ದ ನಿಶಾ ಅವಳ ಕೆನ್ನೆಗೆ ಮುತ್ತಿಟ್ಟು......ಬೇಗ ಬಾ ನಂಗಿ ಚಾಕಿ ತಕೊಂಬಾ ಅಂತೇಳಿ ಏನೇನೋ ವಟಗುಟ್ಟಿತ್ತಿದ್ದಳು. ಅಶೋಕನ ವರ್ಣಾ ಕಾರಿನಲ್ಲಿ ನೀತು ಹೊರಟರೆ ಆರೀಫಿನ ಎಸ್.ಯು.ವಿ ನಲ್ಲಿ ಯೂನಿಫಾರಂನಲ್ಲಿದ್ದ ಪ್ರತಾಪ್ ಕುಳಿತು ಜಾನಿ ತೋಟದತ್ತ ಹೊರಟರು. ಅಮ್ಮನಿಗೆ ಟಾಟ ಮಾಡಿ ಬೀಳ್ಕೊಟ್ಟ ನಿಶಾ ಓಲಾಡುತ್ತ ಶೀಲಾಳ ರೂಂ ಸೇರಿ ಮಂಚ ಏರಿಕೊಂಡವಳೇ ನಿದ್ರೆಗೆ ಜಾರಿದಳು.
ರೇವತಿ......ಮಗು ತಾನಾಗೇ ಏಳುವವರೆಗೂ ಯಾರೂ ಅವಳನ್ನು ಏಬ್ಬಿಸಲು ಹೋಗಬೇಡಿ.
ಅನುಷ......ಇಲ್ಲಮ್ಮ ಯಾರೂ ಡಿಸ್ಟರ್ಬ್ ಮಾಡಲ್ಲ.
ಜಾನಿಯ ತೋಟದಲ್ಲಿಟ್ಟಿದ್ದ ಚಿನ್ನದ ಬ್ಯಾಗುಗಳನ್ನು ಎಸ್.ಯು.ವಿ ಹಿಂಭಾಗದಲ್ಲಿ ನೀಟಾಗಿ ಜೋಡಿಕೊಂಡ ಬಳಿಕ ಆರೀಫ್ ಪಕ್ಕದಲ್ಲಿ ಪ್ರತಾಪ್ ಆಸೀನನಾದರೆ ಅವರ ಗಾಡಿಯ ಹಿಂದೆ ನೀತು ಕೂಡ ತನ್ನ ಕಾರನ್ನು xxxx ಸಿಟಿಯ ಕಡೆ ದೌಡಾಯಿಸಿದಳು.
No comments:
Post a Comment