ಸುರೇಶ......ಚಿನ್ನಿ ನೀನಿಲ್ಲೇ ನಿಂತು ಬಾಲ್ ಬಂದಾಗ ಅದನ್ನೆತ್ತಿ ನಿನ್ನ ಗಿರೀಶಣ್ಣನಿಗೆ ಕೊಡಬೇಕು ಆಯ್ತಾ.
ಟೀಶರ್ಟ್ ಮತ್ತು ನಿಕ್ಕರ್ ಧರಿಸಿ ಶೂ ತೊಟ್ಟು ತಲೆಗೊಂದು ಕ್ಯಾಪ್ ಹಾಕಿಕೊಂಡು ನಿಂತಿದ್ದ ನಿಶಾ ಅಣ್ಣನ ಮಾತಿಗೆ ತಲೆಯಾಡಿಸಿದಳು. ಗಿರೀಶ ಬೌಲಿಂಗ್ ಮಾಡುತ್ತಿದ್ದರೆ ಸುರೇಶನ ಬ್ಯಾಟಿಂಗ್ ನಡೆದಿತ್ತು ಆದರೆ ಪಾಪ ನಿಶಾ ಫೀಲ್ಡರಾಗಿ ಬಾಲ್ ಎತ್ತಿಕೊಡಲು ನಿಂತಿದ್ದಳು. ಸುರೇಶಣ್ಣ ಹೊಡೆಯುತ್ತಿದ್ದ ಚೆಂಡಿನ ಹಿಂದೆ ಗುಡುಗುಡುನೇ ಓಡುತ್ತ ಅದನ್ನೆತ್ತಿ ಗಿರೀಶಣ್ಣನ ಕಡೆ ಎಸೆಯುವುದೇ ಅವಳಿಗೊಂದು ಸಂತಸ ನೀಡುತ್ತಿದ್ದ ಸಂಗತಿಯಾಗಿತ್ತು. ಮನೆಯ ಮುಂದೆ ನಿಂತ ಎರಡು ಪೋಲಿಸ್ ವಾಹನದಿಂದ ಆರು ಜನರಿಳಿದರೆ ಅವರಲ್ಲೊಬ್ಬನಾಗಿದ್ದ ಪ್ರತಾಪ್ ಮಿಕ್ಕವರನ್ನು ಮನೆಯೊಳಗೆ ಕರೆತಂದನು. ಚೂಟಿಯಿಂದ ಬಾಲ್ ಎಸೆಯುತ್ತಿದ್ದ ನಿಶಾಳನ್ನು ನೋಡಿ ಐವರ ಮುಖದಲ್ಲಿ ನಗು ಮೂಡಿದರೆ ಪ್ರತಾಪ್ ಅಣ್ಣನ ಮಗಳನ್ನೆತ್ತಿ ಮುತ್ತಿಟ್ಟು ಆಡುವುದಕ್ಕೆ ಕಳುಹಿಸಿ ಐವರನ್ನು ಮನೆಯೊಳಗೆ ಕರೆತಂದು ಕೂರಿಸಿದನು.
ಪ್ರತಾಪ್ ಎಲ್ಲರ ಪರಿಚಯ ಮಾಡಿಕೊಟ್ಟು......ರವಿ ಅಣ್ಣ ಇವರು ಸಿಐಡಿ ಅಧಿಕಾರಿಗಳು ಬೆಂಗಳೂರಿನಿಂದ ಬಂದಿದ್ದಾರೆ.
ಅಶೋಕ......ಹಲೋ ನೀವೆಲ್ಲರೂ ನಮ್ಮ ಮನೆಗೆ ಬಂದಿದ್ದು ತುಂಬ ಸಂತೋಷ ಆದರೆ ನೀವು ಬಂದಿರುವ ರೀತಿ ಗಮನಿಸಿದರೆ ನೀವಿಲ್ಲಿಗೆ ನಮ್ಮನ್ನು ಪರಿಚಯ ಮಾಡಿಕೊಳ್ಳಲು ಬಂದ ರೀತಿ ಕಾಣಿಸುತ್ತಿಲ್ಲ.
ಸಿಐಡಿ1......ನಿಮ್ಮ ಊಹೆ ನಿಜ ಮಿಸ್ಟರ್ ಅಶೋಕ್ ನಾವಿಲ್ಲಿ ನಿಮ್ಮ ಪರಿಚಯ ಮಾಡಿಕೊಳ್ಳಲು ಬಂದಿಲ್ಲ ಬದಲಿಗೆ ಕೆಲವು ಸಂಗತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಬಂದಿದ್ದೀವಿ. ನಿಮ್ಮ ನಮ್ಮೊಂದಿಗೆ ಪೂರ್ಣ ಸಹಕಾರ ನೀಡುತ್ತೀರೆಂದು ಆಶಿಸುತ್ತೇನೆ.
ರವಿ....ಖಂಡಿತವಾಗಿ ಸರ್. ಆದರೆ ನಮ್ಮಿಂದ ಯಾವ ವಿಷಯವನ್ನು ತಿಳಿದುಕೊಳ್ಳಲು ಬಂದಿದ್ದೀರೆಂಬುದು ಗೊತ್ತಾಗಲಿಲ್ಲ.
ಸಿಐಡಿ4.....ಮನೆಯಲ್ಲಿ ಹರೀಶ ಎಂಬುವವರು ಇಲ್ಲ ಅವರೆಲ್ಲಿಗೆ ಹೋಗಿದ್ದಾರೆ ?
ವಿಕ್ರಂ......ಹರೀಶ ಹೆಂಡತಿಯೊಟ್ಟಿಗೆ ಹೊರಗೆ ಹೋಗಿದ್ದಾನೆ ಇನ್ನೇನು ಬರಬಹುದು ಅವನಿಂದೇನು ಕೆಲಸವಿತ್ತು ನಮಗೆ ಹೇಳಬಹುದಾ ?
ಸಿಐಡಿ5......ಕೆಲವು ದಿನಗಳ ಹಿಂದೆ ಹರೀಶರ ಬೈಕಿಗೆ ಶಾಸಕರ ಮಗ ವಿಕ್ಕಿಯ ಕಾರಿನಿಂದ ಆಕ್ಸಿಡೆಂಟ್ ಆಗಿತ್ತಲ್ಲ ಅದರ ಬಗ್ಗೆ ವಿಚಾರಿಸಲು ಬಂದಿದ್ದೀವಿ.
ಅಶೋಕ.......ಪ್ರತಾಪ್ ಆಕ್ಸಿಡೆಂಟ್ ವಿಷಯವಾಗಿ ಕೊನೆಗೂ ಕೇಸ್ ದಾಖಲಾಯಿತಾ ?
ಪ್ರತಾಪ್.....ಇಲ್ಲ ಅಣ್ಣ ಕೇಸ್ ದಾಖಲಾಗಿಲ್ಲ.
ಅಶೋಕ......ಮತ್ಯಾಕೆ ನೀವು ಆ ವಿಷಯ ಕೇಳುತ್ತಿರುವಿರಿ ? ಕೇಸ್ ದಾಖಲು ಮಾಡಲು ನಿಮ್ಮ ಇಲಾಖೆಯ ಹಿರಿಯರೇ ಅಡ್ಡಗಾಲನ್ನು ಹಾಕುತ್ತಿದ್ದಾರಲ್ಲ ಅದರ ಬಗ್ಗೆ ಕ್ರಮ ತೆಗೆದುಕೊಳ್ಳಬಾರದ.
ಸಿಐಡಿ1......ಅದರ ಬಗ್ಗೆ ಆಮೇಲೆ ಮಾತನಾಡೋಣ ಶಾಸಕರು ಮತ್ತವರ ಮಗ ನಾಲ್ಕೈದು ದಿನಗಳಿಂದಲೂ ಕಾಣೆಯಾಗಿದ್ದಾರೆ. ಅವರ ಮನೆಯಲ್ಲೂ ಸಹ ಯಾರೊಬ್ಬರ ಸುಳಿವೂ ಇಲ್ಲ. ಅವರನ್ನು ಹುಡುಕುವ ಹೊಣೆ ನಮ್ಮ ಮೇಲಿದೆ ಅದಕ್ಕಾಗಿಯೇ ಬಂದಿದ್ದೀವಿ.
ರೇವಂತ್.....ಶಾಸಕ ಅವರ ಮಗ ಕಾಣೆಯಾಗಿರುವುದಕ್ಕೂ ನಮಗೆ ಎಲ್ಲಿಯ ಸಂಬಂಧ ? ಅವರು ನಮಗೆ ಪರಿಚಯಸ್ಥರೇನೂ ಅಲ್ಲವಲ್ಲ ಅವರ ಬಗ್ಗೆ ಅವರ ಕುಟುಂಬದವರನ್ನು ವಿಚಾರಿಸಿದರೆ ಒಳ್ಳೆಯದು.
ಸಿಐಡಿ2.......ಶಾಸಕರ ಮಗನಿಂದ ಹರೀಶ ಎಂಬುವವರ ಬೈಕಿಗೆ ಅಪಘಾತವಾಗಿತ್ತು ಅದರ ಕೇಸ್ ಕೂಡ ದಾಖಲಾಗದಂತೆ ಇಲ್ಲಿನ ಎಸ್ಪಿ ಖುದ್ದು ತಡೆದಿದ್ದರ ಬಗ್ಗೆ ನಮಗೆ ಗೊತ್ತಿದೆ. ನೀವ್ಯಾಕೆ ಶಾಸಕರ ಮೇಲಿನ ಕೋಪದಲ್ ಅವರಿಬ್ಬರಿಗೆ ಏನಾದ್ರು ಮಾಡಿರಬಾರದು.
ಮನೆಯ ಗಂಡಸರು ನಗುತ್ತಿದ್ದರೆ ಅಶೋಕ......ಸರ್ ಶಾಸಕ ಮತ್ತು ಅವರ ಮಗನನ್ನು ನಾವೇ ಕಿಡ್ನಾಪ್ ಮಾಡಿದ್ದೀವೆಂದು ನೀವು ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದೀರಿ.
ರವಿ......ನೋಡಿ ಸರ್ ನಾವು ಸಭ್ಯ ಸುಸಂಸ್ಕೃತ ಕುಟುಂಬದವರು. ಈ ರೀತಿ ದ್ವೇಶ ಸಾಧಿಸುವುದೆಲ್ಲವೂ ನಮಗೆ ಗೊತ್ತಿದ ವಿಷಯ. ನನ್ನ ತಮ್ಮ ಪ್ರತಾಪ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರೂ ಶಾಸಕರ ಮಗ ನಶೆಯ ಅಮಲಿನಲ್ಲಿ ಆಕ್ಸಿಡೆಂಟ್ ಮಾಡಿದಾಗ ಅವನ ವಿರುದ್ದ ಕೇಸ್ ದಾಖಲಿಸಲೂ ಅವನ ಮೇಲಧಿಕಾರಿಯೇ ಅವಕಾಶ ಕೊಡದೆ ತಡೆಹಿಡಿದಿದ್ದರು. ಅಧಿಕಾರಿಯಾಗಿ ಅವನೇ ಏನೂ ಮಾಡಲಾಗದಿದ್ದ ಸಂಧರ್ಭದಲ್ಲಿ ನಮ್ಮಂತಹವರೇನು ತಾನೇ ಮಾಡಲು ಸಾಧ್ಯ ಹೇಳಿ.
ಅಷ್ಟರಲ್ಲೇ ಹೆಂಡತಿ ಮತ್ತು ಅತ್ತೆ ಮಾವನೊಟ್ಟಿಗೆ ಹೊರ ಹೋಗಿದ್ದ ಹರೀಶ ಹಿಂದಿರುಗಿದಾಗ ಸಿಐಡಿ ಅಧಿಕಾರಿಗಳ ತಂಡದ ಲೀಡರಾಗಿದ್ದ ವ್ಯಕ್ತಿ ಎದ್ದು ನಿಂತು ಕೈ ಮುಗಿಯುತ್ತ ಹರೀಶನ ಮುಂದೆ ನಿಂತವನೇ ಕಾಲಿಗೆ ನಮಸ್ಕರಿಸಿದನು. ಹರೀಶನ ಬಳಿಕ ಪಕ್ಕದಲ್ಲಿದ್ದ ನೀತುವಿನ ಕಾಲಿಗೂ ನಮಸ್ಕರಿಸಿ ಎದ್ದು ನಿಂತವನ ಭುಜ ತಟ್ಟಿದ ಹರೀಶ ತನ್ನ ಅಪ್ಪುಗೆಯಲ್ಲಿ ತಬ್ಬಿಕೊಂಡನು. ನೀತು ಕೂಡ ಆ ಯುವಕನ ತಲೆ ನೇವರಿಸಿ ಆಶೀರ್ವಧಿಸುತ್ತ.......
ನೀತು...ಏನ್ ಸುಭಾಷ್ ಹೇಗಿದ್ದೀಯ ? ಅಮ್ಮ ಹೇಗಿದ್ದಾರೆ ? ನೀನು ಗುಜರಾತಿನಿಂದ ಯಾವಾಗ ಬಂದೆ ?
ಸುಭಾಷ್......ಚಿಕ್ಕಮ್ಮ ನಾನು ಚೆನ್ನಾಗಿದ್ದೀನಿ ಅಮ್ಮನೂ ಆರಾಮ ನಿಮ್ಮನ್ನೆಲ್ಲ ನೋಡಲು ಹೋಗಿ ಬರೋಣ ಅಂತಿದ್ದರು ಆದರೆ ನನಗೆ ಕೆಲಸದ ಒತ್ತಡ ಸ್ವಲ್ಪ ಜಾಸ್ತಿಯಾಗಿದ್ದ ಕಾರಣ ಇಲ್ಲಿಗೆ ಬರುವುದಕ್ಕೆ ತಡವಾಯಿತು. ನಾನೀಗ ಗುಜರಾತಿನಲ್ಲಿಲ್ಲ ನಮ್ಮ ರಾಜ್ಯದ ಸಿಐಡಿ ವಿಭಾಗದಲ್ಲಿ ಅಧಿಕಾರಿಯಾಗಿದ್ದೀನಿ.
ಹರೀಶ.....ತುಂಬ ಸಂತೋಷ ಕಣೋ ನಿನ್ನ ಏಳಿಗೆಯ ಬಗ್ಗೆ ತಿಳಿದು ನನಗೆ ತುಂಬಾನೇ ಖುಷಿಯಾಯಿತು ಬಾ ಮನೆಯವರನ್ನು ನಿನಗೆ ಪರಿಚಯ ಮಾಡಿಸ್ತೀನಿ.
ಸುಭಾಷ್......ಎಲ್ಲರ ಪರಿಚಯವೂ ಆಗಿದೆ ಸರ್ ಆದರೆ ಮೊದಲು ನೀವು ನನ್ನನ್ನು ಕ್ಷಮಿಸಬೇಕು.
ಹರೀಶ....ಯಾಕೋ ನೀನೇನು ತಪ್ಪು ಮಾಡಿದೆ ಅಂತ ಕ್ಷಮಿಸಬೇಕು ಹೇಳು. ಓ ಇಷ್ಟು ದಿನಗಳ ನಂತರ ಮನೆಗೆ ಬಂದಿರುವೆ ಅಂತಾನ ?
ಸುಭಾಷ್......ಅದುವೇ ಒಂದು ಕಾರಣ ಸರ್ ಆದರೆ ನಿಮ್ಮ ಮನೆಗೆ ನಾನು ಸಿಐಡಿ ಅಧಿಕಾರಿಯಾಗಿ ಬಂದಿದ್ದು ಮಹಾಪರಾಧ. ನೀವು ನನ್ನ ಜೀವನದಲ್ಲಿ ದೇವರ ಸ್ಥಾನದಲ್ಲಿರುವವರು ನಿಮ್ಮ ಮನೆಯ ಬಾಗಿಲಿಗೆ ನಾನೀಗೆ ಬಂದಿದ್ದು ತಪ್ಪಲ್ಲವಾ.
ನೀತು......ವಿಷಯವೇನೆಂದು ಬಿಡಿಸಿ ಹೇಳು.
ಪ್ರತಾಪನೇ ಮುಂದೆ ಬಂದು ಸಿಐಡಿ ಬಂದಿರುವ ಕಾರಣ ಹೇಳಿದಾಗ
ಹರೀಶ......ನೀನು ಕರ್ತವ್ಯ ನಿರ್ವಹಿಸುವುದಕ್ಕಾಗಿ ಬಂದಿರುವೆ ಹೀಗೆ ಬಂದಿದ್ದರಲ್ಲೇನು ತಪ್ಪಿದೆ. ನಶೆಯ ಅಮಲಲ್ಲಿ ಆಕ್ಸಿಡೆಂಟ್ ಮಾಡಿದ ವ್ಯಕ್ತಿಯನ್ನು ಬಿಡಿಸುವುದಕ್ಕೆ ನಿಮ್ಮ ಇಲಾಖೆಯ ಎಸ್ಪಿ ಖುದ್ದಾಗಿಯೇ ಬರ್ತಾನೆ ಎಂದ ಮೇಲೆ ಸಾಮಾನ್ಯ ಜನರಿಗೆ ನ್ಯಾಯ ಸಿಗುವುದಾದ್ರು ಹೇಗೆ ಹೇಳು.
ಸುಭಾಷ್.......ನೀವೇನೂ ಚಿಂತಿಸದಿರಿ ಸರ್ ಅವರನ್ನು ಹುಡುಕಲು ಸರ್ಕಾರ ನನ್ನನ್ನು ನೇಮಿಸಿದೆ. ಅವರೆಲ್ಲರೂ ಸಿಗಲಿ ಮಾಡಿದ ತಪ್ಪಿಗೆ ಶಿಕ್ಷೆ ಕೊಡಿಸದೆ ಬಿಡುವುದಿಲ್ಲ ಅಥವ ನಾನೇ ಕೈಕಾಲು ಮುರಿಯುವೆ.
ಹರೀಶ......ಏನೇ ಮಾಡುವುದಿದ್ದರೂ ಕಾನೂನಿನ ಚೌಕಟ್ಟಿನಲ್ಲೇ ಮಾಡಬೇಕು ಗೊತ್ತಾಯ್ತಾ.
ನೀತು......ನೀನು ಮೊದಲು ಕೂತ್ಕೊಳೋ ನಾನೀಗಲೇ ನಿಮಗೆಲ್ಲ ತಿಂಡಿ ತರುವೆ.
ಸುಭಾಷ್......ಚಿಕ್ಕಮ್ಮ ಈಗ ತಿಂಡಿ ಏನೂ ಬೇಡ ಆಮೇಲಾಗಲಿ ನಿಮ್ಮ ಕೈಯಿಂದ ಕಾಫಿ ಕುಡಿದು ತುಂಬ ದಿನಗಳಾಗಿದೆ ಮೊದಲಿದನ್ನೇ ಕೊಡಿ.
ನೀತು ಎಲ್ಲರಿಗೂ ಕಾಫಿ ತಂದು ಕೊಟ್ಟು ಮಾತನಾಡುತ್ತ ಕುಳಿತಿದ್ದಾಗ ಮನೆಯೊಳಗೆ ಸುಸ್ತಾಗಿ ಓಲಾಡುತ್ತ ಬಂದ ನಿಶಾ ಟೀಯಾಯಿಯ ಮೇಲಿದ್ದ ತನ್ನ ಗೊಂಬೆ ಬಾಟಲ್ ತೆಗೆದುಕೊಂಡು ನೀರನ್ನು ಕುಡಿದು ಅಪ್ಪನ ಬಳಿಗೋಗಿ ಅವನ ಮಡಿಲಲ್ಲಿ ತಲೆಯಿಟ್ಟು ನಿಂತಳು.
ಗಿರೀಶ ಒಳಗೆ ಬರುತ್ತ.......ಚಿನ್ನಿ ಬಾ ಆಟ ಆಡೋಣ.
ನಿಶಾ ಕೈ ಅಳ್ಳಾಡಿಸಿ.....ಅಣ್ಣ ನಾ ಬಲಲ್ಲ....ನಾ ಬಲಲ್ಲ.....
ಹರೀಶ ಮಗಳನ್ನೆತ್ತಿ ಮಡಿಲಲ್ಲಿ ಕೂರಿಸಿಕೊಂಡು....ಯಾಕಮ್ಮ ಚಿನ್ನಿ ಮರಿ ನನ್ನ ಮುದ್ದು ಬಂಗಾರ ಅಣ್ಣನ ಜೊತೆ ಆಟ ಆಡಲ್ಲವಾ.
ಅಪ್ಪನನ್ನು ಕಣ್ಬಿಟ್ಟು ನೋಡಿದ ನಿಶಾ......ಪಪ್ಪ ನನ್ನಿ ಸುಸಿ ಆತು ನಾ ಹೋಲಲ್ಲ....ನಂಗಿ ಸುಸಿ ಆತು....
ನೀತು.......ಗಿರೀಶ ಇವಳಂತದ್ದೇನು ಮಾಡ್ತಿದ್ದಳು ಸುಸ್ತಾಗಿದೆ ಅಂತ ಹೇಳ್ತಿದ್ದಾಳಲ್ಲ ?
ದೃಷ್ಟಿ.......ಅತ್ತೆ ಸುರೇಶ ಹೊಡೆಯುತ್ತಿದ್ದ ಬಾಲನ್ನೆ ಎತ್ತಿಕೊಡಲು ಪಾಪ ಓಡಾಡಿ ಓಡಾಡಿ ತುಂಬ ಸುಸ್ತಾಗಿದ್ದಾಳೆ.
ಸುಭಾಷ್......ಏನೋ ಗಿರೀಶ ನನ್ನನ್ನು ಮರೆತು ಬಿಟ್ಟೆಯಾ ?
ಗಿರೀಶ ಅವನನ್ನು ಗಮನಿಸಿ.....ಓ ಸುಭಾಷಣ್ಣ ನಾನು ನಿಮ್ಮನ್ನು ನೋಡಲಿಲ್ಲ ಕ್ಷಮಿಸಿ ನೀವ್ಯಾವಾಗ ಬಂದಿರಿ.....ಎಂದವನ ಹತ್ತಿರಕ್ಕೆ ಬಂದು ತಬ್ಬಿಕೊಂಡನು.
ಸುಭಾಷ್.....ನೀವೆಲ್ಲ ಆಡುತ್ತಿದ್ದಾಗ ನಾನೂ ಗಮನಿಸಲಿಲ್ಲ ಕಣೋ ಹೇಗಿದ್ದೀಯಾ ? ತುಂಬ ದೊಡ್ಡವನಾಗಿ ಬಿಟ್ಟೆ ಎಲ್ಲಿ ಆ ತರ್ಲೆ ?
ಸುರೇಶನೂ ಒಳಬಂದು ಸುಭಾಷನನ್ನು ತಬ್ಬಿಕೊಂಡರೆ ನೀತು ಇತರೆ ಮಕ್ಕಳನ್ನು ಅವನಿಗೆ ಪರಿಚಯ ಮಾಡಿಸಿದಳು.
ಸುಭಾಷ್......ಚಿಕ್ಕಮ್ಮ ಈ ಮುದ್ದಾದ ಬಂಗಾರಿ ಮತ್ತು ನಿಧಿ ಹಿರಿಯ ಮಗಳು ಈ ಬಗ್ಗೆ ಗೊತ್ತಾಗಲಿಲ್ಲ.
ನೀತು ಕಣ್ಣಲ್ಲೇ ಸನ್ನೆ ಮಾಡಿದ್ದನ್ನು ಅರ್ಥೈಸಿಕೊಂಡ ಸುಭಾಷ್ ತನ್ನ ಕಿರಿಯ ಅಧಿಕಾರಿಗಳನ್ನು ಮುಂದಿನ ತನಿಖೆಗಾಗಿ ಹೊರಡುವಂತೇಳಿ ಕಳುಹಿಸಿದನು. ಅವರು ತೆರಳಿದ ಬಳಿಕ ನೀತು ಎಲ್ಲಾ ವಿಷಯವನ್ನು ಕೂಲಂಕುಷವಾಗಿ ವಿವರಿಸಿದಾಗ ಸಂತೋಷಗೊಂಡು ನೀತುಳನ್ನು ಒಂದು ಬದಿಯಿಂದ ತಬ್ಬಿಕೊಂಡನು.
ಸುಭಾಷ್.......ನಿಧಿ ನಿನಗೆ ಗೊತ್ತಾ ನಿಮ್ಮಮ್ಮನನ್ನು ನಾನು ಚಿಕ್ಕಮ್ಮ ಅಂತಲೇ ಕರೆಯೋದು ಆದರೆ ನನಗೆ ತಾಯಿಯ ಸಮಾನ. ನಾನು ಯಾವಾಗಲೂ ಹೇಳುತ್ತಿದ್ದೆ ಇಬ್ಬರು ತಮ್ಮಂದಿರೇ ಇದ್ದಾರಲ್ಲ ಒಬ್ಬಳು ತಂಗಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ. ನೋಡೀಗ ಐದು ಜನ ತಂಗಿ ಸಿಗುವಂತೆ ಮಾಡಿದ್ದಾರೆ. ಚಿನ್ನಿ ಮರಿ ಬಾ ಪುಟ್ಟ ನಾನೂ ಅಣ್ಣ.
ನಿಶಾ ಕೈಚಾಚಿ........ಚಾಕಿ ಕೊಟ್ಟಿ ಬತೀನಿ.
ಸುಭಾಷ್........ಬಾರಮ್ಮ ಬಂಗಾರಿ ನಾವೀಗಲೇ ಅಂಗಡಿಗೆ ಹೋಗಿ ನಿಂಗೆ ತುಂಬ ಚಾಕ್ಲೇಟ್ ತೆಗೊಂಡು ಬರೋಣ.
ಸುಭಾಷ್ ಅಷ್ಟು ಹೇಳಿದ್ದೇ ತಡ ಅಪ್ಪನ ಮಡಿಲಿನಿಂದ ಜಾರಿಕೊಂಡ ನಿಶಾ ಅವನ ಬಳಿಗೋಡಿ ಸೇರಿಕೊಂಡಳು.
ಸುಭಾಷ್........ಚಿಕ್ಕಮ್ಮ ನಾನು ಈ ಊರಿನಿಂದ ಯಾಕಾದರೂ ದೂರ ಹೋದೆನೋ ಅನಿಸುತ್ತಿದೆ ತಂಗಿಯರಿಲ್ಲದಿದ್ದಾಗ ಅವರಿಗಾಗಿ ಪರಿತಪಿಸುತ್ತಿದೆ ಈಗ ಸಿಕ್ಕಿದರೂ ದೂರದಲ್ಲಿದ್ದೀನಿ.
ನೀತು......ನೀನೂ ನನಗೆ ಹಿರಿಯ ಮಗನೇ ಅಲ್ಲವೇನೋ ಎಲ್ಲೇ ಕೆಲಸ ಮಾಡುತ್ತಿರು ಆಗಾಗ ಬಂದು ಹೋಗುತ್ತಿರು ಅಷ್ಟೆ ಸಾಕು.
ಹರೀಶ......ಮುಂದಿನ ಸಲ ಬರುವಾಗ ನಿಮ್ಮಮ್ಮನನ್ನೂ ಜೊತೆಗೇ ಕರೆದುಕೊಂಡು ಬರಬೇಕು ತಿಳಿಯಿತಾ.
ಸುಭಾಷ್......ಖಂಡಿತವಾಗಿಯೂ ಕರೆತರುವೆ ಸರ್. ಊರಿಗೆ ಬಂದ ತಕ್ಷಣವೇ ನಾನು ನಿಮ್ಮ ಹಳೇ ಮನೆಗೆ ಹೋಗಿದ್ದೆ ಆದರೆ ನೀವಲ್ಲಿಲ್ಲ ಅಂತ ಪಕ್ಕದ ಮನೆಯವರು ಹೇಳಿದರು. ಅವರು ಹೊಸದಾಗಿಯೇ ಅಲ್ಲಿಗೆ ಬಂದವರಂತೆ ನಿಮ್ಮ ಅಡ್ರೆಸ್ ಗೊತ್ತಿಲ್ಲವೆಂದರು ಮನೆಯ ಓನರ್ ಸಹ ಇರಲಿಲ್ಲ ಇನ್ನು ಶಾಲೆಗೆ ರಜೆ ಇದೆಯಲ್ಲ ಹಾಗಾಗಿ ನಿಮ್ಮ ಬೇಟಿಯಾಗಲು ತಡಪಡಿಸುತ್ತಿದೆ ಈಗ ನಿರಾಳವಾಯಿತು. ನೀವೇನು ಚಿಂತಿಸಬೇಡಿ ಸರ್ ಶಾಸಕ ಎಸ್ಪಿ ಸಿಗಲಿ ಅವರಿಗೊಂದು ಗತಿಯನ್ನು ಕಾಣಿಸದೆ ಬಿಡುವುದಿಲ್ಲ ಇಲ್ಲೇ ನರಕ ತೋರಿಸ್ತೀನಿ.
ಹರೀಶ......ಅವನು ಸಿಗುವುದಿಲ್ಲ ಬಿಡು......ಎಂದು ಶಾಸಕನ ಬಗ್ಗೆ ಎಲ್ಲಾ ವಿಷಯಗಳನ್ನೂ ಹೇಳಿದನು.
ಸುಭಾಷ್......ಒಳ್ಳೆಯದನ್ನೇ ಮಾಡಿರುವಿರಿ ಸರ್ ಇಂತಹ ಜನರು ಬದುಕಿರಲಿಕ್ಕೂ ಲಾಯಕ್ಕಿಲ್ಲ ನನಗೆ ಸಿಕ್ಕಿದ್ದರೆ ನಾನೂ ಸಹ ಅದನ್ನೇ ಮಾಡುತ್ತಿದ್ದೆ.
ನಿಶಾ.....ಅಣ್ಣ ನಂಗಿ ಚಾಕಿ ಲಿಲ್ಲ.....
ಸುಭಾಷ್......ಸಾರಿ ಪುಟ್ಟಿ ಮಾತಾಡ್ತಾ ನಿನ್ನನ್ನೇ ಮರೆತುಬಿಟ್ಟೆ ನಿಧಿ ನೀನೂ ಜೊತೆಗೆ ಬಾ. ದೃಷ್ಟಿ....ರಶ್ಮಿ....ನಯನ ನೀವೂ ನಡೆಯಿರಿ ಚಿಕ್ಕಮ್ಮ ಇವರನ್ನು ಸ್ವಲ್ಪ ಹೊರಗೆ ಕರೆದುಕೊಂಡು ಹೋಗ್ತೀನಿ.
ನೀತು......ನಿನ್ನ ತಂಗಿಯರೇ ಅಲ್ಲವಾ ಕರೆದುಕೊಂಡೋಗು ತಗೋ ಹೊರಗಿರುವ ಕಾರಿನಲ್ಲಿ ಹೋಗಿ ಬನ್ನಿ.
ತಂಗಿಯರನ್ನು ಕರೆದುಕೊಂಡು ಸುಭಾಷ್ ತೆರಳಿದ ನಂತರ......
ವಿಕ್ರಂ......ನೀತು ಯಾರೀ ಸುಭಾಷ್ ? ಅವನಿಗೆ ಶಾಸಕನ ಬಗ್ಗೆ ಎಲ್ಲ ವಿಷಯ ಹೇಳಿದಿರಲ್ಲ.
ನೀತು.......ಅಣ್ಣ ಇವನು ನನಗೆ ಹಿರಿಯ ಮಗನಿದ್ದಂತೆಯೇ ಎಂದು ಹೇಳಿದರೆ ತಪ್ಪಾಗಲ್ಲ. ಅವನ ಬಗ್ಗೆ ಹೇಳುವುದಾದರೆ ಚಿಕ್ಕಂದಿನಿಂದ ಇವರ ಶಾಲೆಯಲ್ಲೇ ಓದುತ್ತಿದ್ದ ತುಂಬ ಬುದ್ದಿವಂತ ಹುಡುಗ. ಇವನ ತಂದೆ ಚಿಕ್ಕಂದಿನಲ್ಲೇ ತೀರಿಕೊಂಡಿದ್ದರು ತಾಯಿ ಕಷ್ಟಪಟ್ಟು ದುಡಿದು ಮಗನನ್ನು ಓದಿಸಿ ಬೆಳೆಸುತ್ತಿದ್ದರು. ಹತ್ತನೇ ತರಗತಿಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದುಕೊಂಡಿದ್ದ ಪ್ರತಿಭಾವಂತ ಆದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದನ್ನು ಕಂಡು ಓದು ಮೊಟಕುಗೊಳಿಸಿ ಕೆಲಸಕ್ಕಾಗಿ ಅಲ್ಲಿಲ್ಲಿ ಅಲೆಯುತ್ತಿದ್ದಾಗ ಇವರ ಕಣ್ಣಿಗೆ ಬಿದ್ದು ಮನೆಗೆ ಕರೆತಂದರು. ನಾನು ಇವರು ಸೇರಿ ಅವನಿಗೆ ಬುದ್ದಿ ಹೇಳಿ ಮುಂದಿನ ವಿಧ್ಯಾಭ್ಯಾಸ ಮಾಡಲು ವೆಚ್ಚವನ್ನು ಭರಿಸುವುದಾಗಿ ಹೇಳಿದೆವು. ಅಂದಿನಿಂದ ಇವನು ಐಪಿಎಸ್ ಮಾಡುವವರೆಗೂ ಎಲ್ಲ ಖರ್ಚನ್ನು ಇವರೇ ನೋಡಿಕೊಂಡಿದ್ದು. ನಮ್ಮ ಮನೆಯಲ್ಲಿ ಅವನು ಎಂದಿಗೂ ಹಿರಿಯ ಮಗನಂತೆಯೇ ಕಾಣುವುದು ಅವನಿಗೂ ನಮ್ಮ ಬಗ್ಗೆ ತುಂಬ ಗೌರವ ಮತ್ತು ಅದಕ್ಕಿಂತಲೂ ಹೆಚ್ಚು ಪ್ರೀತಿ. ಶಾಸಕನ ಮಗ ಇವನ ಕೈಗೆ ಸಿಕ್ಕಿದ್ದರೂ ನರಕಕ್ಕೇ ಕಳುಹಿಸುತ್ತಿದ್ದ.
ರಾಜೀವ್......ಇದರಿಂದ ಒಂದು ಪಾಠ ನಿಜವಾದಂತಾಯಿತು ನಾವು ಹಿಂದೇನೇ ಸತ್ಕಾರ್ಯ ಮಾಡಿದ್ದರೂ ಅದರ ಪ್ರತಿಫಲ ಮುಂದೊಮ್ಮೆ ನಮಗೆ ಸಿಕ್ಕೇ ಸಿಗುತ್ತದೆಂಬುದು. ಮನೆಗೆ ವಿಚಾರಣೆ ಮಾಡಲೆಂದು ಬಂದಿದ್ದ ಸಿಐಡಿ ಅಧಿಕಾರಿ ಇದೇ ಮನೆಯ ಹಿರಿಯ ಮಗನಂತಿರುವ ವ್ಯಕ್ತಿ ಎಂದು ತಿಳಿದು ಸಂತೋಷವಾಯಿತು. ಹರೀಶ ನೀತು ನಿಜಕ್ಕೂ ನೀವಿಬ್ಬರೂ ತುಂಬ ಒಳ್ಳೆಯ ಕೆಲಸ ಮಾಡಿರುವಿರಿ ವಿದ್ಯಾ ದಾನದ ಮುಂದೆ ಬೇರಾವ ದಾನವೂ ಇಲ್ಲ ಅದೇ ಅತ್ಯುತ್ತಮವಾದದ್ದು.
ಒಂದೆರಡು ಘಂಟೆಗಳ ಬಳಿಕ ಮನೆಗೆ ಹಿಂದಿರುಗಿದ ಮಕ್ಕಳ ಕೈಯಲ್ಲಿ ಹಲವಾರು ಬ್ಯಾಗುಗಳಿರುವುದನ್ನು ನೋಡಿ ಎಲ್ಲರು ಅಚ್ಚರಿಪಟ್ಟರು.
ವಿಕ್ರಂ.....ಏನಿದು ಚಾಕ್ಲೇಟ್ ತರುವುದಕ್ಕೆಂದು ಹೋಗಿದ್ದವರು ಇಡೀ ಮಾರ್ಕೆಟ್ಟನ್ನೇ ತಂದಿರುವಂತಿದೆ.
ನಿಶಾ ಖುಷಿಯಿಂದ ಕಿಲಕಾರಿ ಹಾಕುತ್ತ ಅಮ್ಮನ ಬಳಿ ಬಂದು....ಅಣ್ಣ ನಂಗಿ ಚಾಕಿ....ಬಿಕ್ಕಿ....ಐಸ್ ಎಲ್ಲ ಕೊತು ಮಮ್ಮ....ನಂಗಿ ಶೂ....
ಸುಭಾಷ್.....ವಿಕ್ರಂ ಸರ್ ಅಣ್ಣನಾಗಿ ತಂಗಿಯರಿಗೆ ಅವರಿಗಿಷ್ಟವಾದ ಉಡುಗೊರೆ ತೆಗೆದುಕೊಡುವುದು ನನ್ನ ಹಕ್ಕು ನೀವು ಬೇಡವೆನ್ನದಿರಿ.
ಹರೀಶ......ಯಾರೂ ನಿನ್ನ ಹಕ್ಕನ್ನು ಕಸಿದುಕೊಳ್ಳಲ್ಲ ಕಣೋ ಆದರೆ ನಿನ್ನಿಬ್ಬರು ತಮ್ಮಂದಿರು ಮುನಿಸಿಕೊಂಡಿದ್ದಾರಲ್ಲ.
ಸುಭಾಷ್....ಏಯ್ ನಾಳೆ ನಿಮ್ಮಿಬ್ಬರನ್ನೂ ಕರೆದುಕೊಂಡು ಹೋಗಿ ನಿಮಗೂ ಗಿಫ್ಟ್ ಕೊಡಿಸುವೆ ಕಣ್ರೋ ಇವತ್ತು ತಂಗಿಯರ ದಿನ.
ತಕ್ಷಣ ಅವನ ಬಳಿಗೋದ ನಿಶಾ.....ಅಣ್ಣ ನಾನಿ ಬೇಲ....ನಾನಿ ಬತ್ತೀನಿ.....ನಂಗಿ ಐಸ್ ಬೇಕು.
ಸುಭಾಷ್ ಅವಳನ್ನೆತ್ತಿ ಮುದ್ದಾಡುತ್ತ.......ನೀನು ಬಂಗಾರಿ ಕಂದ ನಿನ್ನನ್ನು ಬಿಟ್ಟು ನಾನು ಹೋಗ್ತೀನಾ.
ಆ ದಿನ ಸಂಜೆವರೆಗೂ ಮನೆಯಲ್ಲಿದ್ದ ಸುಭಾಷ್ ಶಾಸಕನ ಅನೈತಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಹೊರಡುವಾಗ.....
ಸುಭಾಷ್.......ಸರ್ ಶಾಸಕನ ಕೇಸಿನ ಬಗ್ಗೆ ನೀವು ಚಿಂತಿಸದಿರಿ ಆತ ಮಗ ಮತ್ತು ಎಸ್ಪಿ ಜೊತೆಗೂಡಿ ಅಕ್ರಮ ವ್ಯವಹಾರ ಮಾಡುತ್ತಿದ್ದ ಎಂಬುದನ್ನು ನಾನು ಪ್ರೂವ್ ಮಾಡುವೆ ನಿಮ್ಮ ಬಗ್ಗೆ ಯಾರಿಗೂ ಸಹ ಏನೂ ತಿಳಿಯುವುದಿಲ್ಲ. ಚಿನ್ನಿ ಮರಿ ನಾಳೆ ಟಾಟಾ ಹೋಗೋಣ ಈಗ ಅಣ್ಣ ಹೋಗಿ ಬರ್ತಾನೆ.....ಎಂದು ಎಲ್ಲರಿಂದ ಬೀಳ್ಗೊಂಡನು.
ಎರಡೇ ದಿನದಲ್ಲಿ ಶಾಸಕನ ಅನೈತಿಕ ಚಟುವಟಿಕೆಗಳ ಬಗ್ಗೆ ಸಾಕ್ಷಿಗಳ ಸಂಗ್ರಹಣೆ ಮಾಡಿದ ಸುಭಾಷ್ ಅದೇ ಕಾರಣದಿಂದ ಶಾಸಕ ಮಗ ಮತ್ತು ಎಸ್ಪಿಯ ಜೊತೆ ಕಣ್ಮರೆಯಾಗಿದ್ದಾನೆ ಎಂಬುದಾಗ ಸರ್ಕಾರಕ್ಕೆ ವರದಿ ನೀಡಿ ಕೇಸನ್ನು ತಿರುಗಿಸಿಬಿಟ್ಟನು. ಗುರುವಾರದ ದಿನ ಎಲ್ಲರ ಜೊತೆ ಮನೆಯಲ್ಲೇ ಕಾಲಕಳೆದ ಸುಭಾಷ್ ತಂಗಿಯರನ್ನು ತುಂಬ ಪ್ರೀತಿಯಿಂದ ಕಾಣುತ್ತಿದ್ದರೆ ನಿಧಿ ಕೂಡ ಅಣ್ಣನೆಂಬ ಗೌರವ ಮತ್ತು ಹಕ್ಕನ್ನು ಚಲಾಯಿಸುತ್ತಿದ್ದಳು. ಬೆಂಗಳೂರಿಗೆ ಹಿಂದಿರುಗುವ ಮುನ್ನ ನೀತುಳನ್ನು ತಬ್ಬಿಕೊಂಡು ಕಣ್ಣೀರಿಟ್ಟ ಸುಭಾಷ್ ತನಗೆ ವಿದ್ಯಾದಾನ ಮಾಡಿದ ಗುರುಗಳ ಕಾಲಿಗೆ ನಮಸ್ಕರಿಸಿದನು. ನಿಧಿ ಮತ್ತಿತರರು ಕೂಡ ಅಣ್ಣನನ್ನು ತಬ್ಬಿಕೊಂಡು ಬೀಳ್ಕೊಟ್ಟು ರಾಖಿಯ ಹಬ್ಬದಂದು ಯಾವ ಕಾರಣಕ್ಕೂ ಮಿಸ್ಸಾಗದೆ ಬರಬೇಕೆಂಬ ಬೇಡಿಕೆಯನ್ನಿಟ್ಟಾಗ ಸುಭಾಷ್ ಸಹ ಖುಷಿಯಿಂದ ಸಮ್ಮತಿಸಿ ಆನಂದ ಭಾಷ್ಟದೊಂದಿಗೆ ಕರ್ಮಭೂಮಿ ಬೆಂಗಳೂರಿನತ್ತ ಹೊರಟನು.
ನಿಮ್ಮ ಬಗ್ಗೆ ಬಹಳ ಬೇಜಾರಾಗುತ್ತದೆ, ಪ್ರತಿ ದಿನ ನೀತುಗಾಗಿ ಕಾಯುತ್ತಿರುತ್ತೇವೆ.
ReplyDeleteEn madodu bro... nanna kelasa, family madhya idella hakbeku. so kelavondu sari late agutte
DeleteKathe thumbha chanagi naditha ede.. bega bega aki. Nauve nima strory gagai kayutha erutheve
ReplyDeleteEn madodu bro... nanna kelasa, family madhya idella hakbeku. so kelavondu sari late agutte
DeleteNimage kathe bareyuva vide divaru kotidane.. nannu yavatu story ge bekagi kadu kutadu ella adre nimma katege yavagulu kayutha eruthene . Family sentiment, sex jothe kutuhalanu eruthe
Deleteಬೇಜಾರಾದಾಗ ಸಮಯ ಕಳೆಯಲು ಕತೆ ಓದುತ್ತೇವೆ. ಅದರೆ ನಿಮ್ಮ ಕತೆಗಾಗಿ ಪ್ರತಿ ಕ್ಷಣವೂ ಕಾದು ಕತೆ ಓದಿದ ನಂತರ ಮುಂದಿನ ಕತೆಗಾಗಿ ಕಾಯುವ ಹಾಗೆ ಬರೆಯುತ್ತೀರಾ.ಹ್ಯಾಟ್ಸಪ್ ಸಾರ್👏👏👏
ReplyDelete