ವಿಕ್ರಂ ಸಿಂಗ್....ಮಾತೆ ಬೆಳಿಗ್ಗೆ ಏಳು ಘಂಟೆ ಹೊತ್ತಿಗೆ ನಾವೆಲ್ಲರೂ ಅಲ್ಲಿಗೆ ತಲುಪುತ್ತೀವಿ. ರಾಣಾ ಮತ್ತವನ ಜೊತೆಗಾರರನ್ನು ನಮ್ಮ ಜೊತೆಯಲ್ಲೇ ಕರೆತರಲು ಯುವರಾಣಿಯ ಆಜ್ಞೆಯಾಗಿದೆ. ಅಲ್ಲಿ ಎಲ್ಲವೂ ಕ್ಷೇಮವಾಗಿದೆಯಾ ? ಏನಾದರೂ ಸಮಸ್ಯೆ ?
ನೀತು.....ಸಮಸ್ಯೆ ಏದುರಾಗಿದೆ ಅದಕ್ಕೆ ನಿಮ್ಮನ್ನು ಬರುವುದಕ್ಕಾಗಿ ಹೇಳಿದ್ದು ನಾಳೆ ಬಂದಾಗ ಮಾತನಾಡೋಣ. ನೀವೆಷ್ಟು ಜನರು ಬರುತ್ತಿದ್ದೀರ ?
ವಿಕ್ರಂ ಸಿಂಗ್......ಮೂರು ಛಾಪರಿನಲ್ಲಿ ನಾನು ರಾಣಾ ಜೊತೆಗೆ ಅವನ ಕನಿಷ್ಟ 15—20 ಅನುಚರರು ಬಂದೇ ಬರ್ತಾರೆ.
ನೀತು.....ನಿಮ್ಮನ್ನು ಮನೆಗೆ ಕರೆತರಲು ರಕ್ಷಕರೇ ಬರುತ್ತಾರೆ.
ಹರೀಶ......ನೀತು ಯಾರೀ ರಾಣಾ ? ನಿಧಿ ಅವನಿಗಿಲ್ಲಿ ಬರುವಂತೆ ಆಜ್ಞೆ ಮಾಡಿದ್ದಾಳಲ್ಲ.
ನೀತು....ನನಗೂ ಗೊತ್ತಿಲ್ಲ ಕಣ್ರಿ ನಿಧಿನೇ ಹೇಳಬೇಕು.
ನಿಶಾ ಇಂದು ಸ್ವಲ್ಪವೂ ತಂಟೆ ಮಾಡದೆ ಶೀಲಾಳ ತೊಡೆಯಲ್ಲಿ ತಲೆ ಇಟ್ಕೊಂಡು ಮಲಗಿ ಎಲ್ಲರನ್ನು ನೋಡುತ್ತಿದ್ದರೆ ಅವಳಿಂದು ಯಾವ ಕೀಟಲೆಯನ್ನೂ ಮಾಡದೆ ಸುಮ್ಮನಿರುವುದನ್ನು ಕಂಡು ಮನೆಯ ಸದಸ್ಯರೆಲ್ಲರೂ ಬೇಸರವಾಗಿದ್ದರು. ಅಷ್ಟೊತ್ತಿನಿಂದ ಲ್ಯಾಪ್ಟಾಪಿನಲ್ಲಿ ಹುಡುಕಾಡುತ್ತಿದ್ದ ಸುರೇಶ ಮತ್ತು ನಯನ ಕೆಳಗಿಳಿದು ಬಂದು.....
ನಯನ.....ಆಂಟಿ ಇಲ್ನೋಡಿ ಈ ಹುಡುಗನೇ ನಮ್ಮ ಕಾರಿಗೆ ಲೆಟರ್ ಅಂಟಿಸಿದ್ದವನು.
ವಿಕ್ರಂ......ಈ ಹುಡುಗ ಇವನಿನ್ನೂ ಚಿಕ್ಕವನು ಐದಾರನೇ ಕ್ಲಾಸಲ್ಲಿ ಓದುವವನಂತೆ ಕಾಣಿಸ್ತಾನೆ.
ವಿವೇಕ್.......ಹೌದು ವಿಕ್ರಂ ಆದರೆ ಇಷ್ಟು ಚಿಕ್ಕ ಹುಡುಗರ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಅಂತ ಮಾಡಿಸಿದ್ದಾರೆ.
ಜಾನಿ.....ಈ ಹುಡುಗನನ್ನೆಲ್ಲೋ ನೋಡಿದ್ದೀನಿ ಜ್ಞಾಪಕ ಬರ್ತಿಲ್ಲ.
ರಜನಿ.....ಜ್ಞಾಪಿಸಿಕೋ ಜಾನಿ ಇದು ನಮ್ಶ ಚಿನ್ನಿಯ ವಿಷಯ.
ಜಾನಿ.....ಹುಡುಗನನ್ನು ನೋಡಿದ್ದೀನಿ ಅದಂತೂ ಗ್ಯಾರೆಂಟಿ ಆದರೆ ಇವನ್ಯಾರೆಂದು ಗೊತ್ತಾಗ್ತಿಲ್ಲ.
ಆರೀಫ್......ನಮ್ಮ ಪ್ರಿನ್ಸಸ್ಸಿಗೋಸ್ಕರ ನೆನಪು ಮಾಡಿಕೊಳ್ಳಿ ಸರ್.
ಒಂದು ನಿಮಿಷ ಯೋಚಿಸಿದ ಜಾನಿ......ಈ ಹುಡುಗನ ಬಗ್ಗೆ ನಮಗೆ ಯಾರು ಹೇಳ್ತಾರೆಂದು ತಿಳಿಯಿತು. ನಯನ ಪುಟ್ಟಿ ಆ ಹುಡುಗನ ಫೋಟೋ ನನ್ನ ಮೊಬೈಲಿಗೆ ಕಳಿಸು.
ನೀತು.....ಜಾನಿ ನೀನು ಆರೀಫ್ ಹೋಗಿ ಹುಡುಗನಿಗೆ ನಮ್ಮ ಕಾರ್ ಡೋರಿಗೆ ಲೆಟರ್ ಅಂಟಿಸಲು ಯಾರು ಹೇಳಿದರೆಂದು ತಿಳಿದುಕೋ ಗಿರೀಶ ನೀನು ಜೊತೆಯಲ್ಲಿ ಹೋಗು.
ಪ್ರೀತಿ.....ಗಿರೀಶ ಇನ್ನೂ ಚಿಕ್ಕವನು ಕಣೆ ಬೇಡ.
ಗಿರೀಶ......ಅತ್ತೆ ಮುದ್ದಿನ ತಂಗಿ ಅಂತ ಬಾಯಲ್ಲಿ ಕರೆದರೆ ಸಾಕಾ ? ಅವಳಿಗೆ ಸಂಕಷ್ಟ ಏದುರಾಗಿರುವಾಗ ನಾನು ಹೆದರಿ ಮನೆಯೊಳಗೆ ಕುಳಿತರೆ ಅಣ್ಣನಾಗಿರುವುದಕ್ಕೇ ನಾನು ನಾಲಾಯಕ್ ತಾನೇ ನೀವು ಹೆದರಬೇಡಿ ನಾನೆಲ್ಲ ಮ್ಯಾನೇಜ್ ಮಾಡಬಲ್ಲೆ. ಚಿನ್ನಿ ಮರಿ ನಾನು ಹೋಗಿ ಬರ್ತೀನಿ.
ನಿಶಾ.....ಅಣ್ಣ ನಂಗಿ ಭಯ ಆತು.
ರವಿ ಅವಳನ್ನೆತ್ತಿಕೊಂಡು........ನೀನೇನೂ ಹೆದರಿಕೊಳ್ಳಬೇಡ ಕಂದ ನಾವೆಲ್ಲರೂ ನಿನ್ನ ಜೊತೆಗಿಲ್ಲವಾ ಯಾರೂ ಬರಲ್ಲ....ಎಂದವಳಿಗೆ ಭಯ ಹೋಗಲಾಡಿಸಲು ಮಕ್ಕಳಿಗೆ ಅವಳನ್ನು ಆಟವಾಡಿಸಿರೆಂದು ಹೇಳಿದನು.
ಮೂವರೂ ತೆರಳಿದ ಸ್ವಲ್ಪ ಹೊತ್ತಿನಲ್ಲೇ ಮೂವರು ಗುರುಗಳು ಸಹ ಮನೆಗೆ ಆಗಮಿಸಿದ್ದು ಗೋವಿಂದಾಚಾರ್ಯರು ಮೊದಲಿಗೆ ವಿಭೂತಿ ತೆಗೆದುಕೊಂಡು ಕೆಲವು ಮಂತ್ರೋಚ್ಚಾರಗಳನ್ನು ಮಾಡಿ ನಿಶಾಳ ಹಣೆಗಿಟ್ಟರು.
ಆಚಾರ್ಯರು......ಏನೋ ಅಶುಭದ ಸೂಚನೆ ದೊರೆತಿದ್ದಕ್ಕೆ ನಾವು ಬೆಳಗಿನವರೆಗೂ ಕಾಯದೆ ತಕ್ಷಣ ಹೊರಟು ಬಂದೆವು. ಏನಾಯ್ತು ?
ಹರೀಶ ಗುರುಗಳಿಗೆ ಪ್ರತಿಯೊಂದು ವಿಷಯವನ್ನು ಹೇಳಿದಾಗ.....
ಆಚಾರ್ಯರು......ಹರೀಶ ನಿನ್ನ ಕಣ್ಣಲ್ಲಿ ಕಣ್ಣೀರು ಬಂದಿದ್ದನ್ನು ನಿಧಿ ಏನಾದರು ನೋಡಿದಳಾ ?
ಹರೀಶ....... ನಿಶಾ ನಿದ್ದೆಯಲ್ಲಿ ಯಾರೋ ಅವಳನ್ನು ಎತ್ಕೊಂಡು ಹೋಗ್ತಾರೆ ಅಂತ ಕನವರಿಸುತ್ತಿದ್ದುದನ್ನು ಕೇಳಿ ನನ್ನ ಕಣ್ಣಲ್ಲೂ ನೀರು ಬಂತು ಅಗಲೇ ನಿಧಿ ಮನೆಗೆ ಬಂದಿದ್ದು. ಇದರಲ್ಲೇನು ವಿಶೇಷವಿದೆ ಗುರುಗಳೇ ?
ಆಚಾರ್ಯರು.......ಹರೀಶ ವಿಶೇಷವೂ ಇದೆ ಬಿಡಿಸಲಾಗದಂತಹ ಅನುಭಂಧವೂ ಇದೆ. ಕಿರಿ ಮಗಳು ನಿಶಾ ಹೇಗೆ ಅಮ್ಮನ ಮಗಳೋ ಅದೇ ರೀತಿ ನಿಧಿ ಅಪ್ಪನ ಮಗಳು. ನಿಮ್ಮ ಬಗ್ಗೆ ಅವಳಿಗೆ ಮೊದಲ ಬಾರಿ ನಾನು ಹೇಳಿದಾಗ ನಿಧಿ ಕೇಳಿದ ಪ್ರಶ್ನೆಯೇನು ಗೊತ್ತಿದೆಯಾ ?
ಅಮ್ಮನಿಗೆ ಹೆಂಗರುಳು ವಿಶಾಲವಾದ ಮನಸ್ಸಿರುವವಳೇ ಅಮ್ಮ ಖಂಡಿತ ನನ್ನನ್ನೂ ಮಗಳಾಗಿ ಸ್ವೀಕರಿಸುತ್ತಾರೆ. ಆದರೆ ಅಪ್ಪ ನನ್ನನ್ನೂ ನಿಶಾಳಂತೆ ಮಗಳೆಂದು ಸ್ವೀಕರಿಸದೆ ಹೋದರೆ ನಾನೆಲ್ಲಿಗೆ ಹೋಗಲಿ ನನಗ್ಯಾರಿದ್ದಾರೆ ಗುರುಗಳೇ ಅಂತ ಕೇಳಿದಳು. ಹರೀಶ ನನಗೆ ನಿನ್ನ ಬಗ್ಗೆ ಸಂಪೂರ್ಣವಾಗಿ ವಿಶ್ವಾಸವಿತ್ತು ನೀನದನ್ನು ಉಳಿಸಿಕೊಂಡು ನಿಧಿಯನ್ನು ಮನಃಪೂರ್ವಕವಾಗಿ ಮಗಳೆಂದು ಸ್ವೀಕರಿಸಿದೆ. ನಿಮ್ಮ ನಡುವಿನ ಇದೇ ಬಿಡಿಸಲಾಗದ ಭಾಂಧವ್ಯವೇ ನಿಧಿಯಿಂದ ಇಲ್ಲಿಗೆ ರಾಣಾನನ್ನು ಕರೆಸುವಂತೆ ಮಾಡಿರುವುದು.
ನೀತು.....ಗುರುಗಳೇ ಯಾರೀತ ರಾಣಾ ? ಇದಕ್ಕಿಂತಲೂ ಮುಂಚೆ ಒಮ್ಮೆಯೂ ಇವನ ಹೆಸರನ್ನೇ ಕೇಳಿರಲಿಲ್ಲ.
ಆಚಾರ್ಯರು.....ರಾಣಾ ಪೂರ್ತಿ ಹೆಸರು ಶಂಷೇರ್ ಸಿಂಗ್ ರಾಣಾ ನಿಯತ್ತು ಮತ್ತು ಸ್ವಾಮಿ ನಿಷ್ಠೆಗೆ ಪರ್ಯಾರ ಹೆಸರೇ ಶಂಷೇರ್ ಸಿಂಗ್ ರಾಣಾ. ವಿಕ್ರಂ ಸಿಂಗ್...ದಿಲೇರ್ ಸಿಂಗ್ ಮತ್ತು ಸುಮೇರ್ ಸಿಂಗ್ ಈ ಮೂವರೂ ಸೂರ್ಯವಂಶಿ ರಾಜಮನೆತನದ ನಿಷ್ಠಾವಂತರಾಗಿದ್ದರೆ ಇವರೆಲ್ಲರಿಗಿಂತ ನೂರು ಪಟ್ಟು ಮೇಲಿರುವಂತ ವ್ಯಕ್ತಿಯೇ ರಾಣಾ.
ನಿಧಿ ಐದು ವರ್ಷದವಳಿದ್ದಾಗ ಒಂದು ಘಟನೆ ನಡೆಯಿತು ಅದರ ಬಗ್ಗೆ ಈಗ ಹೇಳುವ ಅವಶ್ಯಕತೆಯೂ ಇಲ್ಲ ಅದೇನೆಂದು ನಿಧಿಗೂ ಸಹ ತಿಳಿದಿಲ್ಲ. ಆಗ ಮಹರಾಣಿ ಸುಧಾಮಣಿಯ ಆದೇಶದ ಮೇರೆಗೆ ರಾಣಾ ಅರಮನೆ ತ್ಯಜಿಸಿ ಜೈಪುರದಿಂದ ನೂರು ಮೈಲಿ ದೂರದಲ್ಲಿನ ಪುಷ್ಕರ್ ಎಂಬಲ್ಲಿ ಅಜ್ಞಾತವಾಸಕ್ಕೆ ತೆರಳಿದ್ದನು. ಸುಧಾಮಣಿಯ ಆದೇಶದಲ್ಲಿ ಪ್ರಮುಖವಾದದ್ದು ಅವಳಾಗಲಿ...ಮಹರಾಜರೆ ಆಗಲಿ ಅಥವ ಯುವರಾಣಿಯಾಗಲಿ ಕರೆಯುವವರೆಗೆ ಅಜ್ಞಾತವಾಸದಿಂದ ಬರಬಾರದೆಂಬುದು. ನಿಧಿಗೆ ಮಾತ್ರ ಅವನನ್ನು ಸಂಪರ್ಕಿಸುವುದು ಹೇಗೆಂದು ತಿಳಿದಿತ್ತು ಅದುವೇ ಅವಳ ಮೊದಲನೇ ತಾಯಿಯಿಂದ.
ಈಗ ಹರೀಶನ ಕಣ್ಣಲ್ಲಿ ನೀರು ಕಂಡು ವಿಚಲಿತಳಾಗಿ ನಿಧಿ ಅವನಿಗೆ ಬರುವಂತೆ ಆಜ್ಞಾಪಿಸಿರುವಾಗ ಬರದೇ ಇರ್ತಾನ ಬಂದೇ ಬರ್ತಾನೆ. ಅವನು ರಾಣಾಪ್ರತಾಪನಿಗೆ ಆತ್ಯಾಪ್ತನಾಗಿದ್ದರೂ ಮಹರಾಣಿಯ ಜೊತೆ ಅವನ ಒಡನಾಟವೇ ತಾಯಿ ಮಗನಂತಿದ್ದು ಅವಳನ್ನೀತ ಕರೆಯುತ್ತಿದ್ದುದೇ ಮಾತೆ ಅಂತ ಅಷ್ಟು ಆಪ್ಯಾಪತೆ ಅವರಿಬ್ಬರ ಮಧ್ಯೆ ಇತ್ತು. ಅವನಿಗೆ ಇನ್ನೊಂದು ಮುಖವಿದೆ ಅದುವೇ ಸರ್ವನಾಶದ್ದು ಸೂರ್ಯವಂಶಿ ರಾಜಮನೆತನ ಮತ್ತು ಸಂಸ್ಥಾನದ ವಿರುದ್ದ ಯಾರೇ ತಲೆ ಎತ್ತಿದರೂ ಅವರನ್ನು ಜೀವಂತವಾಗಿ ಇವನು ಉಳಿಸಿರುವಂತ ನಿದರ್ಶನವೇ ಇಲ್ಲ. ಅವನ ಬೆಂಬಲಕ್ಕಿರುವ ನಿಷ್ಠಾವಂತರ ಪಡೆ ಸಹ ತುಂಬ ಚಾಣಾಕ್ಷರು.....ಬುದ್ದಿವಂತರು ಮತ್ತು ಆಗಾಧವಾಗಿದ್ದಾರೆ. ರಾಣಾ ಅರಮನೆಯಲ್ಲೇ ಉಳಿದಿದ್ದರೆ ಮಹರಾಜ— ಮಹರಾಣಿ ಇಬ್ಬರನ್ನು ಸಾಯಿಸುವುದಾಗಲಿ ಅವರ ಹತ್ತಿರವೂ ಸಹ ಯಾರೂ ಸುಳಿದಾಡಲು ಈತ ಬಿಡುತ್ತಿರಲಿಲ್ಲ. ಮಹದೇವ ಶಿವನ ವಿಧ್ವಂಸಕ ಪ್ರತಿರೂಪವೇ ಕಾಲಭೈರವ ಈ ರಾಣಾ ಕಲಿಯುಗದ ಕಾಲಭೈರವನ ಅವತರಿಣಿಕೆ ಎಂದರೂ ತಪ್ಪಿಲ್ಲಿ. ಹೇಗೂ ನಾಳೆ ಬರ್ತಿದ್ದಾನಲ್ಲ ಆಗ ಏದುರಿಗೇ ಬೇಟಿಯಾಗುವಿರಿ.
ನಿಧಿ ಮತ್ತೆಲ್ಲರೂ ಮನೆಗೆ ಹಿಂದಿರುಗಿದ್ದು ಗುರುಗಳಿಗೆ ನಮಿಸಿದರು.
ಆಚಾರ್ಯರು.....ರಾಜಕುಮಾರಿಯ ಅಧಿಕಾರವನ್ನು ಪ್ರಯೋಗಿಸಿ ಕಡೆಗೂ ರಾಣಾ ವನವಾಸದಿಂದ ಮರಳಿ ಬರಲು ಆದೇಶ ನೀಡಿದೆ.
ನಿಧಿ........ಅಪ್ಪನ ಕಣ್ಣಿನಿಂದ ಕಣ್ಣೀರು ಬಂದಿದ್ದನ್ನು ನಾನಿಲ್ಲಿವರೆಗೆ ನೋಡಿರಲಿಲ್ಲ ಈ ದಿನ ಅದನ್ನೂ ನೋಡುವಂತಾಯಿತು. ಅಮ್ಮನ ಮುಖ ನೋಡಿ ಗುರುಗಳೇ ಸದಾ ಲವಲವಿಕೆಯಿಂದ ಕೂಡಿರುವ ಉತ್ಸಾಹದ ಚಿಲುಮೆಯಂತೆ ಇರುತ್ತಿತ್ತು ಆದರಿಂದ ಬಾಡಿ ಹೋಗಿದೆ. ಅತ್ತೆಯರು...ಮಾವಂದಿರು...ಚಿಕ್ಕಪ್ಪ...ಚಿಕ್ಕಮ್ಮ..ಆಂಕಲ್ ಮತ್ತು ಆಂಟಿಯರ ಜೊತೆ ಅಜ್ಜಿ ತಾತನ ಮುಖದಲ್ಲೂ ಆತಂಕ ತುಂಬಿದೆ. ನನ್ನೀ ತಮ್ಮ ತಂಗಿಯರು ಭಯದ ವಾತಾವರಣದಲ್ಲಿರುವ ರೀತಿ ಹೀಗೆ ಹೆದರಿ ಕುಳಿತಿರುವುದನ್ನು ನಾನೇಗೆ ನೋಡಲಿ. ಇವರೆಲ್ಲರ ಸಂತೋಷ....ನಗು ಕೇವಲ ನನ್ನ ಮುದ್ದಿನ ತಂಗಿ ಸಂತೋಷದಲ್ಲಿ ಇರುವುದನ್ನೇ ಅವಲಂಭಿಸಿದೆ.
ಸದಾ ಏನಾದರೊಂದು ತರಲೆ ಮಾಡಿ ಮನೆಯವರೆಲ್ಲ ಮುಗುಳ್ನಗುವಂತೆ ಮಾಡುತ್ತಿದ್ದ ನನ್ನ ತಂಗಿ ಇಂದು ಹೆದರಿಕೊಂಡು ನಿದ್ದೆಯಲ್ಲೂ ಕನವರಿಸುವಂತಾಗಿದ್ದಾಳೆ. ಮನೆಯ ಬಾಗಿಲಿಗೇ ಶತ್ರುಗಳು ಬಂದು ರಣಕಹಳೆ ಊದಿರುವಾಗ ನಾನೂ ಅವರು ಬಯಸಿರುವ ಯುದ್ದವನ್ನೇ ಹಿಂದಿರುಗಿ ನೀಡುತ್ತಿರುವೆ. ಈ ಯುದ್ದದ ಸಾರಥ್ಯ ವಹಿಸಿಕೊಳ್ಳಲು ರಾಣಾನಿಗಿಂತ ಸೂಕ್ತವಾಗಿರುವ ವ್ಯಕ್ತಿ ಯಾರಿದ್ದಾರೆ ಹೇಳಿ ಅದಕ್ಕಾಗಿಯೇ ಬರುವುದಕ್ಕೆ ಆಜ್ಞೆ ಕೊಟ್ಟೆ. ನಾನು ಮಾಡಿದ್ದರಲ್ಲೇನೂ ತಪ್ಪಿಲ್ಲ ತಾನೇ.
ಆಚಾರ್ಯರು......ನೀನು ಮಾಡಿದ್ದು ತಪ್ಪೆಂದು ನಾನು ಹೇಳಲಿಲ್ಲ ಮಗಳೇ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿರುವೆ. ರಾಣಾ ಬೆಳಿಗ್ಗೆ ಇಲ್ಲಿಗೆ ತಲುಪುತ್ತಾನಂತೆ ಈಗಷ್ಟೆ ನಿಮ್ಮಮ್ಮನಿಗೆ ವಿಕ್ರಂ ಸಿಂಗ್ ಫೋನ್ ಮಾಡಿ ತಿಳಿಸಿದ್ದಾನೆ.
ನಿಧಿ......ಸುರೇಶ ಹೊರಗಿರುವ ರಕ್ಷಕರಿಗೆ ಒಳಗೆ ಬರುವಂತೇಳು. ಅಪ್ಪ ಗಿರೀಶ ಎಲ್ಲಿ ಕಾಣಿಸ್ತಿಲ್ಲ.
ಜಾನಿ...ಆರೀಫ್ ಜೊತೆಯಲ್ಲಿ ಗಿರೀಶ ಎಲ್ಲಿ ಹೋದನೆಂದು ತಿಳಿದು
ಸುಭಾಷ್......ಸರ್ ನನಗಾದರೂ ತಿಳಿಸಬಾರದಿತ್ತಾ ಅಲ್ಯಾವ ರೀತಿ ಅಪಾಯ ಇದೆಯೋ ಏನೋ.
ನೀತು......ಚಿನ್ನಿ ಜೊತೆ ನನ್ನ ಮುದ್ದಿನ ತಂಗಿ ಅಂತ ಆಟವಾಡಿದರೆ ಮಾತ್ರ ಅವನು ಅಣ್ಣನಾಗಿ ಹೋಗ್ತಾನಾ ಸುಭಾಷ್ ? ಇವಳಿಗೆ ಕಷ್ಟ ಏದುರಾಗಿರುವಾಗ ಅವನು ಹೆದರಿ ಮನೆಯಲ್ಲಿ ಕುಳಿತಿರಬೇಕ ?
ನಿಧಿ.....ನನ್ನ ತಮ್ಮ ಧೈರ್ಯವಂತ...ಸಾಹಸಿ ಕಣಮ್ಮಾ ಎಲ್ಲವನ್ನೂ ನಿಭಾಯಿಸುತ್ತಾನೆ ಬಿಡಿ ( ಅಲ್ಲಿಗೆ ಬಂದ ರಕ್ಷಕರ ಕಡೆ ತಿರುಗಿ ) ಇಂದು ಮಧ್ಯಾಹ್ನ ಫುಡ್ ಪ್ರೊಸೆಸಿಂಗ್ ಯೂನಿಟ್ಟಿಗೆ ನೀವೆಲ್ಲಾ ಬಂದಿದ್ರಲ್ಲ ಅಲ್ಲಿಗೆ ಹೋಗುವ ದಾರಿ ಗೊತ್ತಿದೆ ತಾನೇ.
ಅವರಲ್ಲೊಬ್ಬ.......ಗೊತ್ತಿದೆ ಯುವರಾಣಿ.
ನಿಧಿ.......ನಾಳೆ ಬೆಳಿಗ್ಗೆ ಆರು ಘಂಟೆಗೆ ನಿಮ್ಮಲ್ಲಿ ಐದು ಜನ ಬೇರೆ ಬೇರೆ ಕಾರುಗಳನ್ನು ತೆಗೆದುಕೊಂಡು ಅಲ್ಲಿಗೆ ಹೋಗ ಬೇಕಾಗಿದೆ ರಾಜಸ್ಥಾನದಿಂದ ವಿಕ್ರಂ ಸಿಂಗ್ ಬರ್ತಿದ್ದಾರೆ.
ಆಚಾರ್ಯರು......ಪೂರ್ತಿ ವಿಷಯ ಹೇಳಮ್ಮ ವಿಕ್ರಂ ಸಿಂಗ್ ಜೊತೆ ರಾಣಾ ಕೂಡ ಬರ್ತಿದ್ದಾನೆ.
ರಕ್ಷಕರಲ್ಲೊಬ್ಬ......ಗುರುಗಳೆ ನೀವು ಹೇಳುತ್ತಿರುವ ರಾಣಾ...
ಆಚಾರ್ಯರು.....ಹೌದು ನಿಮ್ಮ ಊಹೆ ನಿಜ ಅವನೇ ಬರ್ತಿರೋದು ಶಂಷೇರ್ ಸಿಂಗ್ ರಾಣಾ.
ಆ ಹೆಸರನ್ನು ಕೇಳಿದ್ದೇ ತಡ ರಕ್ಷಕರ ದೇಹವೊಮ್ಮೆ ಕಂಪಿಸಿದ್ದನ್ನು ಮನೆಯವರೆಲ್ಲರೂ ಗಮನಿಸಿದ್ದು ರಾಣಾ ಎಂತಹ ವ್ಯಕ್ತಿಯೆಂಬ ಬಗ್ಗೆ ತಾವೇ ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ವಿಕ್ರಂ......ಸುಭಾಷ್ ಹೋಗಿದ್ದ ಕೆಲಸ ಏನಾಯ್ತು ?
ರೇವಂತ್.....ಅಣ್ಣ ಇನೋವಾದಲ್ಲಿ ಆರು ಜನ ಅಲ್ಲೇ ಕಾಲೋನಿ ಕಡೆಯೇ ದೃಷ್ಟಿ ನೆಟ್ಟಿದ್ದರು.
ಸುಭಾಷ್......ಅಂಕಲ್ ಅವರಲ್ಲಿ ಮೂರು ಜನರ ಕೈಯಲ್ಲಿ ಗನ್ ಇರುವುದನ್ನು ನೋಡಿದ್ವಿ ಅವರನ್ನು ನೋಡಿದರೆ ಪ್ರೋಫೆಷನಲ್ಸ್ ರೀತಿ ಕಾಣಿಸುತ್ತಿದ್ದರು.
ರವಿ.......ಈಗ ಅವರನ್ನು ಹಿಡಿಯಬೇಕೇನು ?
ಪ್ರತಾಪ್.....ಇಲ್ಲ ಅಣ್ಣ ಅವರನ್ನು ಹಿಡಿಯಲು ಹೋದರೆ ಅವರ ಇತರೆ ಜೊತೆಗಾರರು ಎಚ್ಚೆತ್ತುಕೊಳ್ಳಬಹುದು ಅಥವ ನಮ್ಮ ಮನೆ ಮೇಲೆ ಅಪರಾತ್ರಿಯಲ್ಲಿ ದಾಳಿ ಮಾಡಬಹುದೆಂದು ಸುಮ್ಮನಾದೆವು.
ರಜನಿ.....ಮತ್ತೀಗ ಮುಂದೇನು ? ಅವರೆಲ್ಲರೂ ಅಲ್ಲೇ ಇರುವುದು ಎಷ್ಟು ಸರಿ ಏನಾದರೂ ಮಾಡಬೇಕಿತ್ತಲ್ಲವಾ.
ಸುಭಾಷ್.....ಆಂಟಿ ಅವರೀಗ ಅಲ್ಲಿಲ್ಲ ಚಿಂತಿಸಬೇಡಿ ಪ್ರತಾಪ್ ತನ್ನ ಠಾಣೆಗೆ ಕರೆ ಮಾಡಿ ಪೋಲೀಸರು ಬೀಟ್ ಬಂದಂತೆ ಮಾಡಿ ಇಲ್ಲೆಲ್ಲ ನಿಲ್ಲುವುದು ಸರಿಯಲ್ಲ ಅಂತ ಅವರಿಂದ ಹೇಳಿಸಿ ಅವರು ಕಾಲೋನಿ ಹೊರಗಿನಿಂದ ಹೋಗುವಂತೆ ಮಾಡಿದ್ದೀವಿ.
ಸವಿತಾಳ ಮಡಿಲಲ್ಲಿ ಕುಳಿತಿದ್ದ ನಿಶಾ ಸದ್ದಿಲ್ಲದೆ ಸುಮ ಅತ್ತೆಯಿಂದ ಊಟ ಮಾಡಿಸಿಕೊಂಡು ಸವಿತಾಳ ಮಡಿಲಲ್ಲೇ ಮಲಗಿಕೊಂಡಳು. ಸ್ವಲ್ಪ ಹೊತ್ತಿನಲ್ಲೇ ಜಾನಿ...ಗಿರೀಶ ಮತ್ತು ಆರೀಫ್ ಹಿಂದಿರುಗಿ......
ಜಾನಿ........ಎಲ್ಲಾ ವಿಷಯ ತಿಳಿದುಕೊಂಡು ಬಂದಿದ್ದೀವಿ ಎರಡು ಸಾವಿರ ರೂ.. ಕೊಟ್ಟು ಆ ಹುಡುಗನಿಂದ ಕವರನ್ನು ಕಾರಿನ ಡೋರಿಗೆ ಅಂಟಿಸುವಂತೆ ಹೇಳಿ ಕೆಲಸ ಮಾಡಿದ್ದಾರೆ ಆದರೊಂದು ತಪ್ಪನ್ನೂ ಮಾಡಿದ್ದಾರೆ. ಹುಡುಗನಿಗೆ ಕವರ್ ಕೊಡಲು ತಾವೆಲ್ಲರೂ ಊರಲ್ಲಿ ಬಂದು ಉಳಿದುಕೊಂಡಿರುವ ಮನೆಯ ಹತ್ತಿರ ಕರೆದೊಯ್ದಿದ್ದರಂತೆ. ಆ ಹುಡುಗ ಅವರೆಲ್ಲರೂ ಇರುವ ಮನೆ ನಮಗೆ ತೋರಿಸಿದ್ದಾನೆ.
ಗಿರೀಶ.......ಅಪ್ಪ ಮನೆ ಹೊರಗೆ 7—8 ಕಾರುಗಳಿದ್ದವು ಜೊತೆಗೆ 12 ಜನ ಧಾಂಡಿಗರು ಹೊರಗೇ ನಿಂತಿದ್ದರು ಒಳಗೆಷ್ಟು ಜನರಿದ್ದಾರೆಂದು ಗೊತ್ತಿಲ್ಲ. ಅವರೆಲ್ಲರೂ ನೋಡುವುದಕ್ಕೆ ಒಳ್ಳೆ ಬಾಡಿ ಬಿಲ್ಡರುಗಳಂತೆ ಕಾಣಿಸ್ತಾ ಇದ್ದರು.
ಜಾನಿ......ಪ್ರತಾಪ್ ನಿನ್ನ ಠಾಣೆಯ ಪೋಲಿಸರನ್ನು ಕರೆಸು ಹೇಗಿದ್ರು ಇಲ್ಲಿ ಹತ್ತು ಜನ ರಕ್ಷಕರು ನಾವೆಲ್ಲ ಇದ್ದೀವಿ ಜೊತೆಗೆ ಬಸ್ಯನ ಕಡೆಯ ಹುಡುಗರನ್ನೂ ಕರೆಸೋಣ. ಇಂದು ರಾತ್ರಿಯೇ ಅವರನ್ನೆಲ್ಲಾ ನಾವು ಹಿಡಿಯಬೇಕು.
ಆಚಾರ್ಯರು......ಈಗ ಯಾರೇನೂ ಮಾಡುವ ಅಗತ್ಯವಿಲ್ಲ ಮನೆ ಹೊರಗೆ ಸುರಕ್ಷತೆಗಾಗಿ ರಕ್ಷಕರಿದ್ದಾರೆ ನಾಳೆ ರಾಣಾ ಬರುತ್ತಾನಲ್ಲ ಅವನೇ ಎಲ್ಲವನ್ನೂ ನೋಡಿಕೊಳ್ತಾನೆ ನಿಶ್ಚಿಂತೆಯಿಂದಿರಿ. ನಮಗೆ ಮೂರು ಚಾಪೆಗಳನ್ನು ಕೊಡಮ್ಮ ನಿಧಿ ನಾವು ಹೊರಗಿನ ಅಂಗಳದ ಜಾಗದಲ್ಲೇ ಮಲಗ್ತೀವಿ.
ರೇವತಿ........ಗುರುಗಳೇ ನಿಮ್ಮನ್ನು ಹೊರಗೆ ಅಂಗಳದಲ್ಲಿ ಹೇಗೆ ಮಲಗಿಸುವುದು ಒಳಗೆ ಆರಾಮವಾಗಿ ಮಲಗಿರಿ.
ನಿಧಿ.....ಅಜ್ಜಿ ಗುರುಗಳ ಆಶ್ರಮವಿರುವ ಜಾಗದಲ್ಲಿ ವರ್ಷದ ನಾಲ್ಕು ತಿಂಗಳು ಹಿಮ ಬೀಳುತ್ತೆ ಆಗ ಮಾತ್ರ ಗುರುಗಳು ಕುಟೀರದೊಳಗೆ ಮಲಗುತ್ತಿದ್ದುದು ಮಿಕ್ಕಂತೆ ಹೊರಗೆ ಪ್ರಕೃತಿಯ ಮಡಿಲಲ್ಲೇ ಅವರು ಮಲಗೋದು. ಬನ್ನಿ ಗುರುಗಳೇ ಇಂದು ಆಶ್ರಮದ ದಿನಗಳನ್ನು ನೆನೆಪು ಮಾಡಿಕೊಳ್ಳುತ್ತ ನಾನೂ ನಿಮ್ಮೊಂದಿಗೆ ಹೊರಗೆ ಮಲಗುವೆ.
ರಾಜೀವ್ ಒಬ್ಬರನ್ನು ಬಿಟ್ಟು ಮನೆಯ ಗಂಡಸರೆಲ್ಲರೂ ಮನೆಯಾಚೆ ವಿಶಾಲವಾದ ತಾರಸಿಯ ಕೆಳಗೆ ಆಯಾಸ ಪರಿಹರಿಸಿಕೊಳ್ಳುವುದಕ್ಕೆ ಮಲಗಿದರೆ ನಿಧಿಯೊಟ್ಟಿಗೆ ನಿಕಿತಾ ಜೊತೆಯಾದಳು. ಗುರುಗಳು ಮಂತ್ರಿಸಿ ಇಟ್ಟಿದ್ದ ವಿಭೂತಿಯ ಮಹಿಮೆಯಿಂದ ಸವಿತಾ ಮಡಿಲಲ್ಲಿ ನೆಮ್ಮದಿಯಾಗಿ ಮಲಗಿದ್ದ ನಿಶಾ ಕನಸಿನಲ್ಲಿ ಹರ್ಷೋಲ್ಲಾಸದ ದೃಶ್ಯ ಕಾಣುತ್ತ ತುಟಿಗಳಲ್ಲಿ ಮುಗುಳ್ನಗೆಯೊಂದಿಗೆ ಮಲಗಿದ್ದಳು. ಮುದ್ದಿನ ಮಗಳ ಮನಸ್ಸಿಗಾದ ಆಘಾತದ ನೋವನ್ನು ತಾನು ಅನುಭವಿಸಿದ್ದ ನೀತುಳಿಗೆ ಮಲಗಲು ಮನಸ್ಸಿಲ್ಲದಿದ್ದರೂ ನಾಳೆಯ ದಿನ ಆಲಸ್ಯ ಇರಬಾರದೆಂಬ ಕಾರಣಕ್ಕೆ ಸವಿತಾಳ ಪಕ್ಕದಲ್ಲೇ ಕುಳಿತು ತಾನೂ ಸಹ ರೆಸ್ಟ್ ಮಾಡುತ್ತಿದ್ದಳು.
ಅಬ್ಬಾ ಕತೆಯ ಕಾರ್ಯಕರ್ತನಿಗೆ ನನ್ನದೊಂದು ನಮಸ್ಕಾರಗಳು. ಕತೆಯಂತೂ ವರ್ಣಿಸಲು ಅಸಾದ್ಯವಾಗಿದೆ
ReplyDelete