ಬುಧವಾರ ಬೆಳಿಗ್ಗೆ 10:00
ರಾಜಸ್ಥಾನ.......
ಸೇಠ್ ಧನಿಕ್ ಲಾಲ್ ಮತ್ತು ಬ್ರಿಜೇಶ್ ಮಿಶ್ರಾ ಜೈಪುರದಿಂದ 15 ಕಿಮಿ.. ದೂರದಲ್ಲಿರುವ ಅವರದ್ದೇ ಒಂದು ಐಷಾರಾಮಿ ಬಂಗಲೆಯ ಒಳಗೆ ಕುಳಿತು ಟೀ ಕುಡಿಯುತ್ತ ಮಾತುಕತೆಯಲ್ಲಿ ತೊಡಗಿದ್ದಾಗಲ್ಲಿಗೆ ಈ ಗುಂಪಿನ ಪ್ರಮುಖ ವ್ಯಕ್ತಿಯಾದ 55 ವರ್ಷದ ಕಿಶೋರಿ ಸಿಂಗ್ ಜಗಮಲ್ ಆಗಮಿಸಿದನು. ಇಬ್ಬರೂ ಮೇಲೆದ್ದು ವಿಶ್ ಮಾಡಿದಾಗ
ಕಿಶೋರಿ ಸಿಂಗ್......ಬ್ರಿಜೇಶ್ ಕೆಲಸ ಎಲ್ಲಿವರೆಗೆ ಬಂತು ?
ಬ್ರಿಜೇಶ್.....ನಾವು ಪ್ರಾರಂಭಿಸಿದ ಕೆಲಸಗಳಲ್ಲಿ ಇಲ್ಲಿವರೆಗೆ ಯಾವ ಕೆಲಸ ತಾನೇ ಪೂರ್ಣಗೊಳ್ಳದೆ ಉಳಿದಿದೆ ಸರ್. ನಾವು ಯಾರಿಗೆ ಸುಪಾರಿ ನೀಡಿದ್ದೇವೋ ಅವನ ಕಡೆಯ ಜನ ಅಲ್ಲಿಗೆ ತೆರಳಿದ್ದು ಇಡೀ ಕುಟುಂಬಕ್ಕೇ ಎಚ್ಚರಿಕೆ ನೀಡಿದ್ದಾರೆ. ನಾವಿಲ್ಲಿಂದ ಬರೆದು ಕಳಿಸಿದ್ದ ಪತ್ರ ಮಗುವನ್ನು ದತ್ತು ತೆಗೆದುಕೊಂಡಿರುವ ದಂಪತಿ ಕೈಗೆ ಸೇರಿದೆ.
ಸೇಠ್......ಈಗ ಅವರಿಗ್ಯಾವುದೇ ದಾರಿಗಳಿಲ್ಲ ಸರ್ ಮಗುವನ್ನು ನಮ್ಮ ವಶಕ್ಕೆ ನೀಡದಿದ್ದರೆ ಮನೆಯ ಸದಸ್ಯರನ್ನೆಲ್ಲಾ ಒಬ್ಬೊಬ್ಬರಾಗಿ ಸಾಯಿಸುವ ಏರ್ಪಾಡನ್ನೂ ಮಾಡಲಾಗಿದೆ.
ಬ್ರಿಜೇಶ್......ಹೌದು ಸರ್ ನೆನ್ನೆ ಮುಂಜಾನೆಯಷ್ಟೇ ರಮಣ ದಾಸ್ ಫೋನ್ ಮಾಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತಿಳಿಸಿದ.
ಕಿಶೋರಿ ಸಿಂಗ್....ಆದರೂ ನಾವು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಅವರು ಖಂಡಿತ ಅರಮನೆಯಲ್ಲಿ ಸುಮೇರ್ ಸಿಂಗ್ ಅವನಿಗೆ ವಿಷಯ ತಿಳಿಸಿರುತ್ತಾರೆ. ಸೂರ್ಯವಂಶಿಗಳ ಕಟ್ಟಕಡೆಯ ವಾರಸುದಾರಳನ್ನು ಅಪಹರಿಸಲು ಯಾರೋ ಸಂಚು ರೂಪಿಸಿದ್ದಾರೆ ಎಂಬುದನ್ನೂ ತಿಳಿಸಿರುತ್ತಾರೆ.
ಬ್ರಿಜೇಶ್.....ಯಾರಿಗೇ ವಿಷಯ ತಿಳಿದರೂ ಏನೂ ಮಾಡಲಾಗದು ಸರ್ ಅದು ಕರ್ನಾಟಕ ರಾಜಸ್ಥಿನವಲ್ಲ. ಅದಲ್ಲದೆ ನಾವು ಸುಪಾರಿ ನೀಡಿರುವ ವ್ಯಕ್ತಿ ಅಲ್ಲಿನ ಭೂಗತ ಜಗತ್ತಿನ ಅನಭಿಶಕ್ತ ದೊರೆ ಅವನ ಬೆನ್ನೆಲುಬಾಗಿ ಸರ್ಕಾರದ ಕೆಲವು ಮಂತ್ರಿಗಳ ಜೊತೆ ಅಧಿಕಾರಿಗಳು ಕೂಡ ಬೆಂಬಲ ನೀಡುತ್ತಿದ್ದಾರೆ. ನಾವು ಕೊಟ್ಟಿರುವ ಹಣದ ಆಫರ್ ಕೇಳಿಯೇ ಅವನು ಕೆಲಸ ಮಾಡಿಕೊಡಲು ತಕ್ಷಣ ಒಪ್ಪಿಕೊಂಡ ಅಂತ ಶಾಸಕ ರಮಣದಾಸ್ ಹೇಳ್ತಿದ್ದ. ಆ ಮಗು ಖಂಡಿತವಾಗಿಯೂ ನಮ್ಮ ವಶಕ್ಕೆ ಸಿಕ್ಕೇ ಸಿಕ್ತಾಳೆ.
ಕಿಶೋರಿ ಸಿಂಗ್......ಆ ಮಗು ನಮ್ಮ ವಶಕ್ಕೆ ಬಂದರೆ ಸಾಕು ಇಡೀ ಸೂರ್ಯವಂಶಿ ಸಂಸ್ಥಾನದ ಆಸ್ತಿಯನ್ನೆಲ್ಲಾ ನಾವು ಕಬಳಿಸಿಕೊಳ್ಳಲು ತುಂಬ ಅನುಕೂಲವಾಗುತ್ತೆ.
ಸೇಠ್......ಹೌದು ಸರ್ ಆ ಮಗು ಸಿಕ್ಕಿಬಿಟ್ಟರೆ ಸಾಕು ನಮ್ಮನ್ಯಾರೂ ತಡೆಯಲ್ಲಿಕ್ಕೆ ಸಾಧ್ಯವಾಗುವುದಿಲ್ಲ. ಈ ಸುಮೇರ್ ಸಿಂಗ್ ಇಂತಹ ಸಣ್ಣ ಪುಟ್ಟ ರಕ್ಷಕರನ್ನೆಲ್ಲಾ ಕ್ರಿಮಿಗಳಂತೆ ಹೊಸಕಿ ಹಾಕಬಹುದು.
ಮೂವರೂ ಸಂತೋಷದಿಂದ ಮಾತನಾಡುತ್ತ ಟೀ ಕುಡಿಯುವಾಗ ಅಲ್ಲಿಗೆ ತುಂಬ ಬೆದರಿದವನಂತೆ ಬಂದ ಗುಂಪಿನ ನಾಲ್ಕನೇ ವ್ಯಕ್ತಿ ವಿನೋದ್ ಪಾಠಕನನ್ನು ನೋಡಿ.....
ಕಿಶೋರಿ ಸಿಂಗ್.......ಏನಾಯ್ತು ವಿನೋದ್ ಮುಖದಲ್ಲಿ ಯಾಕಿಷ್ಟು ಭಯ ಆವರಿಸಿಕೊಂಡಿದೆ ?
ವಿನೋದ್.....ಸರ್ ನಿಮಗಿನ್ನೂ ವಿಷಯ ತಿಳಿದಿಲ್ಲವಾ ?
ಬ್ರಿಜೇಶ್.....ಯಾವುದರ ಬಗ್ಗೆ ಹೇಳ್ತಿದ್ದೀಯ ?
ವಿನೋದ್......ನಾನೀಗಷ್ಟೇ ಮನೆಯಿಂದ ನ್ಯೂಸ್ ನೋಡಿಕೊಂಡು ಇಲ್ಲಿಗೆ ಬರುತ್ತಿದ್ದೀನಿ.
ಕಿಶೋರಿ ಸಿಂಗ್.....ನಾನೂ ನ್ಯೂಸ್ ನೋಡಿದೆ ಆದರೆ ಅದರಲ್ಲೇನು ವಿಶೇಷವಾದ ಸುದ್ದಿಯೇ ಇರಲಿಲ್ಲವಲ್ಲ.
ವಿನೋದ್......ಸರ್ ನನ್ನ ಹೆಂಡತಿ ಕರ್ನಾಟಕದವಳಲ್ಲವಾ ಅವಳು ಸಾಮಾನ್ಯವಾಗಿ ಕನ್ನಡ ನ್ಯೂಸ್ ಛಾನೆಲ್ ನೋಡ್ತಾಳೆ.
ಸೇಠ್.....ವಿಷಯವೇನೆಂದು ಹೇಳುವುದರ ಬದಲು ಹೀಗ್ಯಾಕೆ ಸುತ್ತಿ ಬಳಸಿಕೊಂಡು ಬರ್ತಿದ್ದೀಯ.
ವಿನೋದ್.....ಸೇಠ್ ಜೀ ನೀವು ಬ್ರಿಜೇಶ್ ಇಬ್ಬರೂ ಸೂರ್ಯವಂಶಿ ರಾಜಮನೆತನದ ಯುವರಾಣಿಯನ್ನು ಅಪಹರಿಸಲು ಶಾಸಕನಿಗೆ ಸುಪಾರಿ ಕೊಟ್ಟಿದ್ರಲ್ಲ......
ಬ್ರಿಜೇಶ್.......ಹೌದು ಏನಾಯ್ತೀಗ ? ಮಗುವಿನ ಅಪಹರಣವಾಗಿ ಹೋಯಿತಾ ? ಮತ್ತೆ ನಮಗಿನ್ನೂ ಫೋನೇ ಬಂದಿಲ್ಲವಲ್ಲ.
ವಿನೋದ್......ಮಗುವಿನ ಅಪಹರಣ ಆಗುವುದಿರಲಿ ಆ ಶಾಸಕ ರಮಣದಾಸ್ ಯಾವ ಭೂಗತ ದೊರೆಗೆ ಈ ಕೆಲಸ ವಹಿಸಿದ್ದನೋ ಅದೇ ಡಾನ್ ರಮನಾಥ್ ಅವರಿಬ್ಬರ ಜೊತೆ ಅವನ ಗ್ಯಾಂಗಿನ ಎಲ್ಲ ರೌಡಿಗಳನ್ನು ನೆನ್ನೆ ಯಾರೋ ಸಾಯಿಸಿದ್ದಾರೆ.
ಮೂವರೂ ಕುಳಿತಲ್ಲಿಂದ ಜಿಗಿದು ನಿಂತರೆ ಸೇಠ್......ಏನೇಳ್ತಿದ್ದೀಯ ನೀನು ವಿನೋದ್ ? ಅವನೊಬ್ಬ ದೊಡ್ಡ ಡಾನ್ ಅವನನ್ಯಾರೋ ಸಾಯಿಸಿರೋರು ?
ವಿನೋದ್.....ಕೇವಲ ಸಾಯಿಸಿದ್ದು ಮಾತ್ರವಲ್ಲ ಆ ಡಾನ್ ಅವನ ಮೂರು ಜನ ಮಕ್ಕಳು...ನಿಮ್ಮ ಪರಿಚಯದ ಶಾಸಕ ರಮಣದಾಸ್ ಮತ್ತು ರೌಡಿಯ ಇಡೀ ಗ್ಯಾಂಗಿನವರನ್ನೆಲ್ಲಾ ತುಂಡು ತುಂಡುಗಳಾಗಿ ಕತ್ತರಿಸಿ ಹಾಕಿದ್ದಾರೆ. ಪೋಲಿಸರಿಗಿನ್ನೂ ಯಾರ ಬಾಡಿಯ ಪಾರ್ಟ್ ಯಾವುದೆಂದೇ ಗೊತ್ತಾಗುತ್ತಿಲ್ಲವಂತೆ ಜೊತೆಗೆ ಯಾರು ಮಾಡಿದ್ದೆಂದು ಸಣ್ಣದೊಂದು ಸುಳಿವೂ ಸಹ ದೊರಕಿಲ್ಲವಂತೆ.
ಆ ಸುದ್ದಿ ಕೇಳಿ ಮೂವರ ಮುಖದಲ್ಲೂ ಬೆವರು ಮೂಡಿ ಅವರೆಲ್ಲರ ಎದೆಯೊಳಗೆ ಭಯದ ನಡುಕವುಂಟಾಯಿತು. ಹತ್ತು ಹದಿನೈದು ನಿಮಿಷ ಅಲ್ಲಿ ಮೌನ ಆವರಿಸಿಕೊಂಡಿದ್ದು ನಂತರ......
ಕಿಶೋರಿ ಸಿಂಗ್........ಇದೆಲ್ಲವನ್ನು ಖಂಡಿತವಾಗಿ ರಾಜಮನೆತನದ ರಕ್ಷಕರದ್ದೇ ಕೆಲಸ. ಶಾಸಕ ಸಾಯುವಾಗ ಈ ಕೆಲಸ ಅವನಿಗ್ಯಾರು ಕೊಟ್ಟರೆಂದು ಹೇಳಿರದಿದ್ದರೆ ಸಾಕು.
"" ಹೇಳದಿದ್ದರೆ ನಾವು ಬಿಡಬೇಕಲ್ಲ ನಮಕ್ ಹರಾಂ ""
ನಾಲ್ವರೂ ಧ್ವನಿ ಬಂದತ್ತತಿರುಗಿದರೆ ಉದ್ದನೇ ಖಡ್ಗವನ್ನಿಡಿದ ರಾಣಾ ಸಾಕ್ಷಾತ್ ಯಮ ಸ್ವರೂಪಿಯಾಗಿ ನಿಂತಿದ್ದರೆ ಅವನ ಜೊತೆಯಲ್ಲೇ ಬಷೀರ್ ಖಾನ್....ವಿಕ್ರಂ ಸಿಂಗ್ ಮತ್ತು ವೀರ್ ಸಿಂಗ್ ರಾಣಾ ಜೊತೆ ಇಪ್ಪತ್ತು ಜನ ರಕ್ಷಕರು ಮನೆಯೊಳಗೆ ಕಾಲಿಟ್ಟರು. ರಕ್ಷಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ನಾಲ್ವರನ್ನು ಸುತ್ತುವರಿದು ಕುತ್ತಿಗೆಯ ಮೇಲೆ ಕತ್ತಿಯನ್ನಿಟ್ಟು ನಿಂತರು. ನಾಲ್ವರೂ ಭಯದಿಂದ ನಡುಗಿ ಬೆವರುತ್ತಾ ತಮ್ಮ ಕಣ್ಣೆದುರಿಗೇ ಸಾವನ್ನು ನೋಡುತ್ತಿದ್ದರೆ ಕಿಶೋರಿ ಸಿಂಗ್ ತನ್ನ ನಡುಗುತ್ತಿರುವ ಧ್ವನಿಯಲ್ಲಿ.......ಶಂಷೇರ್ ಸಿಂಗ್ ರಾಣಾ ನೀನಾ... ಎಂದನು.
ರಾಣಾ ಅಲ್ಲಿದ್ದ ಕುರ್ಚಿಯೊಂದರ ಮೇಲೆ ಕುಳಿತು......ಯುವರಾಣಿ ನಮಗೆ ದೇವರ ಸಮಾನ ನಮ್ಮ ಗೌರವದ ಪ್ರತೀಕ. ನೀವು ಅವರನ್ನ ಅಪಹರಿಸಲು ಸಂಚು ಮಾಡುತ್ತಿದ್ದರೂ ನಾವು ನೋಡಿಕೊಂಡು ಸುಮ್ಮನಿರುತ್ತೀವಿ ಅಂತ ಹೇಗೆ ಯೋಚಿಸಿದಿರೋ ನಮಕ್ ಹರಾಂ. ನೀವೆಲ್ಲ ನಮ್ಮ ಮಹರಾಜರ ಸ್ನೇಹಿತರಾಗಿದ್ರಿ ಅಲ್ಲವ ? ಅದರೂ ಮಹರಾಜರ ಮಗಳನ್ನೇ ಅಪಹರಿಸುವಂತ ನೀಚ ಕೆಲಸ ಮಾಡಲು ಸಂಚು ಮಾಡಿದ್ದೀರ. ಇದು ನೆನ್ನೆ ಮೊನ್ನೆಯ ಯೋಜನೆ ಅಲ್ಲವೇಅಲ್ಲ ಹಲವಾರು ವರ್ಷಗಳಿಂದ ನೀವೆಲ್ಲರೂ ಯಾವುದೋ ಒಳಸಂಚನ್ನು ರೂಪಿಸುತ್ತಿದ್ರಿ ಅಂತ ತಿಳಿಯುತ್ತೆ.
ಬಷೀರ್—ವೀರ್ ಸಿಂಗ್ ಇಂದು ಸಂಜೆಯೊಳಗೆ ಈ ನಾಲ್ವರ ವಂಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ವಶದಲ್ಲಿರಬೇಕು. ಹೆಂಗಸರು—ಮುದುಕರು— ಮಕ್ಕಳೆಂದು ನೋಡದೆ ಯಾರನ್ನೂ ಬಿಡದಂತೆ ಎಳೆದೊಯ್ದು ಜೈಸಲ್ಮೇರಿನ ನಮ್ಮ ಬಂಧಿಖಾನೆಗೆ ತಳ್ಳಿರಿ. ಇವರಲ್ಯಾರೂ ಸಾಯಬಾರದು ಅದರ ಬಗ್ಗೆ ಎಚ್ಚರವಿರಲಿ ರಾಜಕುಮಾರಿ ಕೆಲವು ದಿನಗಳ ನಂತರ ಬರುತ್ತಾರೆ ಅವರೇ ಇವರೆಲ್ಲರ ಬಗ್ಗೆ ನಿರ್ಣಯ ಕೈಗೊಳ್ಳುತ್ತಾರೆ ಅಲ್ಲಿಯವರೆಗೂ ಇವರೆಲ್ಲ ಜೀವಂತವಾಗಿರಲಿ. ಎಷ್ಟು ಹಿಂಸೂಯನ್ನಾದರೂ ನೀಡಿ ಇವರೆದೆಯಲ್ಲಿ ಬಚ್ಚಿಟ್ಟುಕೊಂಡಿರುವ ಸತ್ಯವನ್ನೆಲ್ಲಾ ಹೊರಗೆ ಕಕ್ಕಿಸಿ ಆದರೂ ಸಾಯಬಾರದಷ್ಟೆ.
ನಾಲ್ವರೂ ಭಯದಿಂದ ನಡುಗುತ್ತ ಕ್ಷಮೆಯಾಚಿಸುತ್ತಿದ್ದರೆ ರಕ್ಷಕರು ಅವರ ಕೈಗಳನ್ನು ಹಿಂದಕ್ಕೆ ಸೇರಿಸಿ ಕಟ್ಟಿಬಿಟ್ಟರು.
ಕಿಶೋರಿ ಸಿಂಗ್......ರಾಣಾ ಕ್ಷಮಿಸಿಬಿಡು ಇನ್ಯಾವತ್ತೂ ಅರಮನೆ ಅಥವ ರಾಜಕುಮಿರಿಯ ಕಡೆ ತಿರುಗಿಯೂ ನೋಡುವುದಿಲ್ಲ.
ರಾಣಾ......ನೋಡುವುದಕ್ಕೆ ನಾನು ಬಿಡಬೇಕಲ್ಲ.
ಸೇಠ್......ನಿನಗೇನು ಬೇಕು ಕೇಳು ರಾಣಾ ಎಷ್ಟು ದುಡ್ಡು ಬೇಕಿದ್ರೂ ಕೊಡುವುದಕ್ಕೆ ನಾವು ಸಿದ್ದ.
ಅವನ ಮಾತನ್ನು ಕೇಳಿ ರಾಣಾ ಸಹಿತ ಅಲ್ಲಿದ್ದವರೆಲ್ಲ ನಗುತ್ತಿದ್ದರೆ ನಾಲ್ವರಿಗೂ ತಮ್ಮ ಕಡೇ ಅವಕಾಶವೂ ಜಾರಿ ಹೋಯಿತೆಂಬುದು ತಿಳಿಯಿತು.
ಕಿಶೋರಿ ಸಿಂಗ್.....ಇದನ್ನೆಲ್ಲಾ ಮಾಡಿದ್ದು ನಾವು ನಮ್ಮ ಕುಟುಂಬದ ಸದಸ್ಯರನ್ನಾದರೂ ಕ್ಷಮಿಸಿಬಿಡು.
ರಾಣಾ.......ತಂದೆ ಹೆಸರನ್ನು ಹೇಳುವುದಕ್ಕೂ ತೊದಲಿಸುವ ಪುಟ್ಟ ಮಗುವನ್ನು ಅಪಹರಿಸಿ ಸಂಸ್ಥಾನದ ಆಸ್ತಿ ದೋಚಲು ನೀವೆಲ್ಲರೂ ಹೊಂಚು ಹಾಕಿದರೆ ನಾವು ನಿಮ್ಮ ಕುಟುಂಬದವರನ್ನು ಕ್ಷಮಿಸಬೇಕ. ನಿಮ್ಮ ನಾಲ್ವರ ಖಾಂದಾನಲ್ಯಾರೂ ಸಹ ಜೀವಂತವಾಗಿ ಉಳಿಯಲ್ಲ. ನಿಮ್ಶನ್ನು ಕಾಪಾಡುವುದಕ್ಕೆ ನಿಮ್ಮ ಬೆನ್ನ ಹಿಂದಿರುವ ರಾಜಕೀಯದ ನಾಯಕರು ಬರುತ್ತಾರೆಂದು ಭಾವಿಸಬೇಡಿ. ಇನ್ನು ಕೆಲವು ದಿನಗಳಲ್ಲಿ ಅವರೂ ನಿಮ್ಮ ಜೊತೆ ಬಂಧಿ ಖಾನೆಯಲ್ಲಿರ್ತಾರೆ. ಇವರನ್ನೆಲ್ಲಾ ನೇರವಾಗಿ ಜೈಸಲ್ಮೇರಿಗೆ ರವಾನಿಸಿ ಮುಂದಿನದ್ದನ್ನೆಲ್ಲಾ ಅಜಯ್ ಮತ್ತು ದಿಲೇರ್ ಸಿಂಗ್ ನೋಡಿಕೊಳ್ತಾರೆ ಎಳೆದೊಯ್ಯಿರಿ.
ಕ್ಷಮಿಸುವಂತೆ ಬೇಡಿಕೊಳ್ಳುತ್ತ ಕಿರುಚಾಡಿದಾಗ ರಕ್ಷಕರು ನಾಲ್ವರ ಬಾಯೊಳಗೂ ಬಟ್ಟೆ ತುರುಕಿ ತಮ್ಮ ಜೀಪಿನೊಳಗೆ ತುಂಬಿಸಿಕೊಂಡು ಅಲ್ಲಿಂದ ಹೊರಟರು. ರಾಣಾ...ವಿಕ್ರಂ ಸಿಂಗ್ ಇಬ್ಬರೂ ಇಡೀ ಮನೆ ಜಾಲಾಡಿ ತಮಗೆ ಬೇಕಾಗಿರುವಂತ ದಾಖಲೆಗಳು...ಹತ್ತಾರು ಪೆನ್ ಡ್ರೈವ್....ಮೂರು ಲ್ಯಾಪ್ಟಾಪ್ ಹಾಗು ಇನ್ನಿತರ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ತಾವಲ್ಲಿಗೆ ಬಂದಿದ್ದ ಬಗ್ಗೆ ಸಣ್ಣನೇ ಸುಳಿವು ಕೂಡ ಸಿಗದಂತೆ ಮಾಡಿ ತೆರಳಿದರು.
* *
* *
ಶನಿವಾರ
ಕಾಮಾಕ್ಷಿಪುರದ ಮನೆ.......
ಹಿಂದಿನ ದಿನ ಸವಿತಾ—ಸುಕನ್ಯಾರ ಹೊಸ ಮನೆಯ ಗೃಹಪ್ರವೇಶದ ಪೂಜೆ ದೇವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿತ್ತು. ನಿಶಾ ಬಗ್ಗೆ ತಿಳಿದುಕೊಂಡು ಅವಳನ್ನು ಅಪಹರಿಸಲು ಸುಪಾರಿ ಪಡೆದಿದ್ದ ಭೂಗತ ಲೋಕದ ಡಾನ್ ಮತ್ತವನ ಸಹಚರರು ಮರಣಿಸಿದ್ದರೆ ಆತ ಯಾರಿಂದ ಸುಪಾರಿ ಪಡೆದಿದ್ದನೋ ಅವರನ್ನೆಲ್ಲಾ ರಾಜಸ್ಥಾನದಲ್ಲಿ ರಾಣಾ ತನ್ನ ವಶಕ್ಕೆ ಪಡೆದುಕೊಂಡಿದ್ದು ಈಗ್ಯಾವುದೇ ಆತಂಕವೂ ಸಹ ಇರಲಿಲ್ಲ. ಮುಂದೇನು ಎಂದು ಯೋಚಿಸುತ್ತ ಮನೆ ಮುಂದಿನ ಉಯ್ಯಾಲೆಯಲ್ಲಿ ಕುಳಿತಿದ್ದ ನೀತು ಪಕ್ಕದಲ್ಲವಳ ಗಂಡ ಕೂರುತ್ತ.....
ಹರೀಶ......ಏನು ಯೋಚಿಸ್ತಿದ್ದೀಯ ? ಈಗ ನಮ್ಮ ಕಂದನ ಮೇಲೆ ಆವರಿಸಿದ್ದ ಆತಂಕದ ಛಾಯೆ ನಿವಾರಣೆಗೊಂಡಿದೆ.
ನೀತು......ರಾಜಸ್ಥಾನದಲ್ಲಿರುವ ವಿರೋಧಿಗಳೆಲ್ಲರೂ ನಿರ್ಮೂಲನೆ ಆಗುವವರೆಗೂ ನಾವು ಯಾವುದನ್ನೂ ಸಲೀಸಾಗಿ ತೆಗೆದುಕೊಳ್ಳಲೇ ಬಾರದು ಕಣ್ರಿ. ನಮ್ಮ ಮಕ್ಕಳೀಗ ಅತ್ಯಂತ ಸುರಕ್ಷಿತವಾಗಿದ್ದಾರೆ ನಿಜ ಆದರೆ ಅವಳಿಂದ ತಂದೆ ತಾಯಿಯರನ್ನು ಬೇರ್ಪಡಿಸಿದ್ದವರಿನ್ನೂ ಜೀವಂತವಾಗಿದ್ದಾರೆ ಅವರೆಲ್ಲರೂ ಸಾಯುವವರೆಗೆ ನನಗೆ ಸ್ವಲ್ಪವೂ ಸಮಾಧಾನವಿಲ್ಲ.
ಹರೀಶ......ಸಧ್ಯಕ್ಕಿಲ್ಲೇನೂ ಕೆಲಸವಿಲ್ಲ ಅಂತ ನೀನು ಅವರಿಬ್ಬರನ್ನು ರಾಜಸ್ಥಾನಕ್ಕೆ ಕರೆದೊಯ್ಯುವ ಬಗ್ಗೆ ಯೋಚಿಸುತ್ತಿದ್ದೀಯ.
ನೀತು.....ಆ ಬಗ್ಗೆಯೂ ಯೋಚಿಸ್ತಿದ್ದೆ ಅದರ ಜೊತೆ ಮಕ್ಕಳಿಬ್ಬರೂ ಒಂದೇ ದಿನ ಹುಟ್ಟಿದ್ದು ಅವರಿಬ್ಬರ ತಾರೀಖು ವರ್ಷಗಳೆರಡು ಬೇರೆ ಬೇರೆ ಆಗಿದ್ದರೂ ಇಬ್ಬರೂ ಜನಿಸಿದ್ದು ಮಾತ್ರ ವಿಜಯದಶಮಿಯ ದಿನದಂದೇ. ಹಳೆಯ ತಲೆಮಾರಿನಲ್ಲಿ ಹುಟ್ಟಿನ ದಿನದಂದು ಯಾವ ನಕ್ಷತ್ರ ಇರುತ್ತಿತ್ತೋ ಅಂದೇ ಅವರ ಜನ್ಮದಿನವನ್ನು ಆಚರಿಸುತ್ತಿದ್ದರು ಕಾಲಕ್ರಮೇಣ ನಾವದನ್ನು ತ್ಯಜಿಸಿ ತಾರೀಖಿನ ಪ್ರಕಾರ ಆಚರಿಸಲು ಮುಂದಾದೆವು. ನಮ್ಮ ಪೂರ್ವಜರು ಆಚರೆಣೆಗೆ ತಂದಿರುವಂತಹ ಸಂಪ್ರದಾಯವನ್ನೇ ಮುಂದುವರಿಸಲು ನಾನು ಇಚ್ಚಿಸುತ್ತೀನಿ ಕಣ್ರೀ ಅಂದ್ರೆ ಇಬ್ಬರೂ ಮಕ್ಕಳ ಹುಟ್ಟು ಹಬ್ಬವನ್ನು ವಿಜಯದಶಮಿಯಂದೆ ಆಚರಿಸಲು ತೀರ್ಮಾನಿಸಿರುವೆ ನೀವೇನಂತೀರಾ.
ಹರೀಶ......ಒಳ್ಳೆ ಯೋಚನೆ ಕಣೆ ವಿಜಯದಶಮಿಗಿಂತಲೂ ಒಳ್ಳೆಯ ದಿನ ಯಾವುದಿದೆ ಆ ದಿನವೇ ನಮ್ಮಿಬ್ಬರೂ ಹೆಣ್ಣುಮಕ್ಕಳ ಹುಟ್ಟಿದ ದಿನವನ್ನು ಆಚರಿಸೋಣ. ಇಡೀ ಮನೆಯನ್ನು ಅಲಂಕರಿಸಿ ನಮ್ಮ ಪರಿಚಯದವರನ್ನೆಲ್ಲಾ ಕರೆದು ಗ್ರಾಂಡಾಗಿ ಆಚರಿಸಬೇಕು.
ನೀತು......ಹೌದು ಭವ್ಯವಾಗಿಯೇ ಆಚರಿಸೋಣ ಆದರೆ ಇಲ್ಲಲ್ಲ ಅವರಿಬ್ಬರ ತಾಯ್ನಾಡಿನಲ್ಲಿ ಅಂದರೆ ಉದಯಪುರ ಅರಮನೆಯಲ್ಲಿ ಅದುವೇ ಸೂರ್ಯವಂಶಿ ರಾಜವಂಶದ ಪರಂಪರೆಯ ಅನುಸಾರವೆ ಆಚರಿಸಬೇಕು. ಆದರೆ ಅದಕ್ಕೂ ಮುನ್ನ ನನ್ನ ಮಕ್ಕಳಿಗೆ ಏದುರಾಗಿ ನಿಂತಿರುವ ಶತ್ರುಗಳನ್ನೆಲ್ಲಾ ನಾಶ ಮಾಡಬೇಕಿದೆ ಅದು ಮುಖ್ಯ.
ಹರೀಶ......ಈ ಮನೆಯಲ್ಯಾಕೆ ಆಚರಿಸುವುದು ಬೇಡ ? ಅವರು ನಮ್ಮ ಮಕ್ಕಳೇ ಅಲ್ಲವಾ.
ನೀತು......ರೀ ಅವರಿಬ್ಬರೂ ನಮ್ಮ ಮಕ್ಕಳೇ ಕಣ್ರಿ ಅದನ್ಯಾರೂ ಸಹ ಬದಲಾಯಿಸಲು ಸಾಧ್ಯವಿಲ್ಲ ಹಾಗಾಗುವುದಕ್ಕೆ ನಾನು ಬಿಡುವುದೂ ಇಲ್ಲ. ಆದರೆ ರಾಜಸ್ಥಾನ ಅವರಿಬ್ಬರ ಜನ್ಮಭೂಮಿಯೂ ಹೌದು ಅದರ ಜೊತೆಗೆ ಅವರಿಬ್ಬರ ಕರ್ಮಭೂಮಿ ಕೂಡ. ಅಲ್ಲಿ ಅವರಿಗೆ ತಮ್ಮದೇ ಆದ ಬಹಳಷ್ಟು ಜವಾಬ್ದಾರಿಗಳಿವೆ ಅದನ್ನವರಿಬ್ಬರೂ ನಿಭಾಯಿಸಲೇಬೇಕಿದೆ. ನಿಶಾ ಇನ್ನೂ ಚಿಕ್ಕವಳು ಅವಳಿಗಿನ್ನೂ 17— 18 ವರ್ಷಗಳವರೆಗೆ ಜೀವನದ ಹಲವಾರು ಪಾಠಗಳನ್ನು ಕಲಿಸುವ ಜೊತೆಗೆ ಸರಿತಪ್ಪುಗಳ ಅರಿವನ್ನೂ ಮೂಡಿಸುವ ಜವಾಬ್ದಾರಿಗಳು ನಮ್ಮಿಬ್ಬರ ಮೇಲಿದೆ. ಆದರೆ ನಿಧಿ ಆಚಾರ್ಯರ ಆಶ್ರಮದಲ್ಲಿಯೇ ಬೆಳೆದಿರುವುದರಿಂದ ಅವಳು ಸಂಪೂರ್ಣ ಪರಿಪಕ್ವಳಾಗಿದ್ದಾಳೆ ಈಗ ಅವಳೇ ಅಲ್ಲಿನ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ ಆದರೆ ಅವಳಿಲ್ಲೇ ನಮ್ಮ ಜೊತೆಯಲ್ಲಿದ್ದುಕೊಂಡು ತನ್ನ ಕರ್ತವ್ಯವನ್ನೂ ಸಹ ಯಾವುದೇ ಚ್ಯುತಿಬಾರದಂತೆ ನಿಭಾಯಿಸಬೇಕು.
ಹರೀಶ....ನಿನ್ನ ಪ್ರತಿಯೊಂದು ನಿರ್ಧಾರದಲ್ಲೂ ನಾನು ಜೊತೆಗಿರುವೆ ಆದರೆ ನೀನೀ ಮೊದಲೇ ಹೇಳಿರುವಂತೆ ಮಕ್ಕಳಿಗೆ ಅವರ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರವನ್ನೂ ತಂದೆ ತಾಯಿಗಳಾಗಿ ನಾವಿಬ್ಬರೂ ನೀಡಬೇಕಾಗಿರುವುದು ನಮ್ಮ ಕರ್ತವ್ಯ.
ಗೇಟ್ ತೆರೆದುಕೊಂಡು ಒಳಗೆ ಬಂದ ನಿಧಿ ಅಪ್ಪ ಅಮ್ಮನನ್ನು ನೋಡಿ ಉಯ್ಯಾಲೆ ಹತ್ತಿರ ನಿಂತು......ಏನಪ್ಪ ಅಮ್ಮನ ಜೊತೆಯಲ್ಲಿ ನೀವು ಆರಾಮವಾಗಿ ಉಯ್ಯಾಲೆ ಆಡ್ತಿದ್ದೀರಾ ?
ಹರೀಶ ಮಗಳನ್ನು ಮಧ್ಯ ಕೂರಿಸಿಕೊಳ್ಳುತ್ತ.......ನಿನ್ನ ವಿಷಯವಾಗಿ ಮಾತನಾಡ್ತಿದ್ವಿ ಅಷ್ಟರಲ್ಲೇ ನೀನು ಬಂದೆ. ಈಗೆಲ್ಲಿಗಮ್ಮ ಹೋಗಿದ್ದೆ ?
ನಿಧಿ......ಅಪ್ಪ ನಾಳೆ ಭಾನುವಾರ ಸವಿತಾ ಆಂಟಿ ಮತ್ತು ಸುಕನ್ಯಾ ಆಂಟಿ ಇಬ್ಬರೂ ತಮ್ಮ ಹೊಸ ಮನೆಗೆ ಶಿಫ್ಟಾಗುತ್ತಿದ್ದಾರಲ್ಲ ಅದಕ್ಕೇ ಸವಿತಾ ಆಂಟಿ ಮನೆಗೆ ಹೋಗಿದ್ದೆ.
ನೀತು......ಬಸ್ಯನಿಗೆ ನೆನ್ನೆ ಇಬ್ಬರ ಮನೆಗೆ ಹುಡುಗರನ್ನು ಕಳಿಸೆಂದು ಹೇಳಿದ್ದೆ ಪ್ಯಾಕಿಂಗ್ ಮಾಡಲು ಸಹಾಯವಾಗಲಿ ಅಂತ ಇನ್ನೊಮ್ಮೆ ಜ್ಞಾಪಿಸಿ ಬಿಡ್ತೀನಿ.
ನಿಧಿ.....ಚಿಂತೆಯಿಲ್ಲಮ್ಮ ನಾನೂ ಫೋನ್ ಮಾಡಿದ್ದೆ ಬಸ್ಯನೇ ಇಬ್ಬರ ಮನೆಗೂ 4—4 ಜನರನ್ನು ಕರೆತಂದು ಬಿಟ್ಟಿದ್ದಾನೆ ಜೊತೆಗೆ ಪ್ಯಾಕಿಂಗ್ ಸಹ ಮುಗಿದಿದೆ ನಾಳೆ ಶಿಫ್ಟ್ ಮಾಡುವ ಸಮಯಕ್ಕೆ ಅವರೇ ನಮ್ಮ ಫ್ಯಾಕ್ಟರಿಯ ಗಾಡಿ ತೆಗೆದುಕೊಂಡು ಬರ್ತಾರೆ.
ಹರೀಶ....ಸರಿ ಬಿಡಮ್ಮ ಅದರ ಬಗ್ಗೆ ಚಿಂತೆಯಿಲ್ಲ. ಈಗ ನಾನೊಂದು ವಿಷಯ ಕೇಳುವೆ ನಿನ್ನ ಮನಸ್ಸಿನಲ್ಲಿರುವುದನ್ನು ನೀನು ನಮ್ಮಿಬ್ಬರಿಗೆ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಬೇಕು.
ಅಪ್ಪ ಅಮ್ಮನ ಮುಖಚರ್ಯೆ ಸೂಕ್ಷ್ಮವಾಗಿ ಗಮನಿಸಿದ ನಿಧಿ ಅಪ್ಪ ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದಿದ್ದಾರೆ ಎಂಬುದನ್ನರಿತು ........ಅಪ್ಪ ನೀವೇನು ಕೇಳಬೇಕೆಂದಿದ್ದೀರೋ ನನಗೆ ಅರಿವಾಯಿತು. ಅಮ್ಮ ನಾನು ಜವಾಬ್ದಾರಿಗಳನ್ನು ಹೊರುವುದಕ್ಕೆ ಸಿದ್ದಳಾಗಿದ್ದೀನಿ ಆದರೆ ನೀವು ನನ್ನ ಜೊತೆಗಿದ್ದರೆ ಮಾತ್ರ. ನಾನ್ಯಾವುದೇ ಕಾರಣಕ್ಕೂ ರಾಜಸ್ಥಾನದಲ್ಲೇ ಉಳಿದುಕೊಂಡು ಸಂಸ್ಥಾನದ ಕಂಪನಿಯಲ್ಲಿನ ವ್ಯವಹಾರಗಳನ್ನು ನೋಡಿಕೊಳ್ಳಲಾರೆ ಅದಕ್ಕೆ ನಾನಂತೂ ಈಗಲೇ ಸಿದ್ದಳಿಲ್ಲ. 13 ವರ್ಷಗಳಿಂದ ಆಶ್ರಮದ ಕಠಿಣ ಜೀವನವನ್ನು ನಾನು ಬದುಕಿದ್ದೆ ಈಗ ಅಪ್ಪ ಅಮ್ಮನ ಪ್ರೀತಿ ನನಗೆ ಒಲಿದು ಬಂದಿರುವಾಗ ನಿಮ್ಮನ್ನು ಬಿಟ್ಟು ನಾನೆಲ್ಲಿಗೂ ಹೋಗುವುದಿಲ್ಲ.
ನೀತು......ಹುಚ್ಚುಡುಗಿ ನಿನ್ನ ನಮ್ಮಿಂದ ದೂರ ಕಳಿಸುವುದಕ್ಕೆ ನಾವು ಕೂಡ ಸಿದ್ದರಿಲ್ಲ ಗೊತ್ತಾಯ್ತಾ. ನಾವು ಹೇಳ್ತಿರೋದು ಸಂಸ್ಥಾನದ ಅಧೀನದಲ್ಲಿರುವ ಕಂಪನಿಗೆ ಈಗ್ಯಾರೂ ಯಜಮಾನರಿಲ್ಲ ನೀನು ಆ ಸ್ಥಾನದಲ್ಲಿ ಕೂರಬೇಕು ಆದರೆ ಇಲ್ಲಿಂದಲೇ ಎಲ್ಲಾ ಕೆಲಸಗಳನ್ನೂ ನಿರ್ವಹಣೆ ಮಾಡು ನಿನ್ನ ಜೊತೆ ನಾನಿರುತ್ತೀನಿ.
ನಿಧಿ......ಅಮ್ಮ ನನಗೆ 18 ವರ್ಷ ತುಂಬಿದ್ದು ಸೂರ್ಯವಂಶಿ ರಾಜ ಮನೆತನದ ಯುವರಾಣಿಯಾಗಿ ಅಲ್ಲಿನ ಅಧಿಕಾರಗಳೆಲ್ಲವೂ ನನಗೆ ದೊರೆಯುತ್ತದೆ. ಆದರೆ ಕಂಪನಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಅಮ್ಮನೇ ತೆಗೆದುಕೊಳ್ಳಬೇಕು.
ಹರೀಶ......ನಿಮ್ಮಮ್ಮ ಯಾವ ಅಧಿಕಾರದಿಂದ ಕಂಪನಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿದೆ ಪುಟ್ಟಿ ಅದರ ಬಗ್ಗೆ ಯೋಚಿಸು.
ನಿಧಿ.......ಅಪ್ಪ ಕಂಪನಿಯ ಕಾರ್ಯಚಟುವಟಿಕೆಗೆ ಒಂದು ಗ್ರೂಪ್ ಸ್ಥಾಪನೆ ಮಾಡಲಾಗುತ್ತೆ ಅದೇ ಬೋರ್ಡ್ ಆಫ್ ಡೈರೆಕ್ಟರ್ಸ್ ಅದಕ್ಕೆ ನಾನು ಚೇರ್ಮನ್ ಆಗುವ ಬದಲಿಗೆ ಆ ಸ್ಥಾನದಲ್ಲಿ ಅಮ್ಮನನ್ನು ಕೂರಿಸುವೆ. ಆಗ ಅಮ್ಮ ಯಾವುದೇ ಅಡಚಣೆಗಳೂ ಇಲ್ಲದ ರೀತಿ ಕಂಪನಿಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರಳು. ನಾನೀಗಲೇ ಆ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ದಳಿಲ್ಲ ತಮ್ಮ ತಂಗಿಯರ ಜೊತೆ ನನ್ನ ಜೀವನದ ಸುವರ್ಣ ಯುಗವನ್ನು ನಾನೀಗ ಕಳೆಯಲು ಇಚ್ಚಿಸಿಕೊಂಡಿರುವ ಮನಸ್ಸಿದೆ. ಕಂಪನಿಯ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳಲು ಅಮ್ಮನಿಗಿಂತ ಸೂಕ್ತಳಾದ ವ್ಯಕ್ತಿ ಮಗಳಿಗ್ಯಾರಿದ್ದಾರೆ ಹೇಳಿ.
ಹರೀಶ ನಾಟಕವಾಡುತ್ತ......ನನ್ನಿಬ್ಬರೂ ಮಕ್ಕಳೂ ಅಪ್ಪನಿಂದಲೇ ಚೆನ್ನಾಗಿ ಮುದ್ದು ಮಾಡಿಸಿಕೊಳ್ತಾರೆ ಆದರೆಲ್ಲಾ ಜವಾಬ್ದಾರಿಗಳನ್ನೂ ಅಮ್ಮನಿಗೇ ವಹಿಸುತ್ತಾರೆ ಅಪ್ಪ ಲೆಕ್ಕಕ್ಕೇ ಇಲ್ಲ.
ನೀತು......ಲೇ ನಿಮ್ಮಪ್ಪನಿಗೆ ಹೊಟ್ಟೆ ಉರಿಯುತ್ತಿದೆ ಆ ಹಿಂದಿ ಭಾಷೆ ಸಿನಿಮಾಗಳಲ್ಲಿ ಸಾಹುಕಾರನ ಪಕ್ಕದಲ್ಲಿರುತ್ತಾರಲ್ಲ ಮುನ್ಷಿ ಅಂತೇಳಿ ನಿಮ್ಮಪ್ಪನಿಗೆ ಆ ಪೋಸ್ಟ್ ಕೊಟ್ಬಿಡೋಣ ಕಣೆ ಖುಷಿಯಾಗ್ತಾರೆ.
ಹರೀಶ.......ಅದನ್ನೆಲ್ಲಾ ನೀವಿಬ್ಬರೇ ನೋಡಿಕೊಳ್ಳಿ ನಾನಂತು ನನ್ನ ಮುದ್ದಿನ ಕಂದನ ಜೊತೆ ಆಡಿಕೊಂಡಿರ್ತೀನಿ.
ನೀತು.....ಸರಿ ಕಣಮ್ಮ ಅದರ ವಿಷಯ ಆಮೇಲೆ ಮಾತನಾಡೋಣ ಈಗ್ಯಾಕೆ ಯೋಚಿಸೋದು ಬಿಡು. ಎಲ್ಲಿ ತಿಂಡಿ ತಿಂದಾಗಿನಿಂದ ನನ್ನ ಚಿಲ್ಟಾರಿಯ ಸದ್ದೇ ಇಲ್ವಲ್ಲ ಮನೆಯಲ್ಲೇ ಇದ್ದಾಳೋ ಯಾರದ್ರೂ ಹೊರಗೆ ಕರೆದುಕೊಂಡು ಹೋಗಿದ್ದಾರೋ ನೋಡೋಣ ನಡಿ.
ಮೂವರೂ ಮನೆಯೊಳಗೆ ಬಂದರೆ ಸೋಫಾದಲ್ಲಿ ಪೇಪರ್ ಓದುತ್ತ ಕುಳಿತಿದ್ದ ತಾತನನ್ನು ಒರಗಿಕೊಂಡು ನಿಂತಿದ್ದ ನಿಶಾ ಕಣ್ಣು ಬಾಯನ್ನು ತೆರೆದುಕೊಂಡು ಟಿವಿಯೊಳಗೆ ಮುಳುಗಿ ಹೋಗಿದ್ದಳು. ಒಂದ್ನಿಮಿಷ ಸಮಯದಲ್ಲೇ ಅವಳ ಮುಖದಲ್ಲಿ ಕೋಪ....ಆಕ್ರೋಶ.....ಭಯ... ಖುಷಿ ಹೀಗೇ ಹಲವಾರು ಭಾವನೆಗಳು ಮೂಡುತ್ತಿರುವುದನ್ನು ಮೂವರೂ ನೋಡುತ್ತಿದ್ದರೆ ನಿಶಾ ಅವರ ಕಡೆ ತಿರುಗಿಯೂ ಕೂಡ ನೋಡದೆ ಟಿವಿಯಲ್ಲೇ ಮುಳುಗಿದ್ದಳು.
ನೀತು.....ಇದೇನ್ರಿ ನಿಮ್ಮ ಚಿಲ್ಟಾರಿ ಈ ಕಡೆ ತಿರುಗಿಯೂ ನೋಡ್ತಿಲ್ಲ.
ನಿಧಿ.......ಅಮ್ಮ ಟಿವಿ ಕಡೆ ನೋಡಿ ಅಲ್ಲಿ ಜಿಂಕೆಯೊಂದನ್ನು ಹುಲಿ ಅಟ್ಟಿಸಿಕೊಂಡು ಹೋಗ್ತಿದೆಯಲ್ಲ ಅದನ್ನೇ ಬಾಯ್ತೆರೆದುಕೊಂಡು ನೋಡುತ್ತ ಸುತ್ತಮುತ್ತ ಏನಿದೆ ಅನ್ನುವುದನ್ನೂ ಮರೆತಿದ್ದಾಳೆ.
ನೀತು......ಪ್ರಾಣಿಗಳೆಂದರೆ ಇವಳಿಗದೇನು ಪಂಚಪ್ರಾಣವೋ.
ಹರೀಶ......ಮುಂದಿನ ಶುಕ್ರವಾರ ಸರ್ಕಾರದ ಯಾವುದೋ ಒಂದು ಇಲಾಖೆಯಲ್ಲಿನ ಬಡ್ತಿಗಾಗಿ ನಮ್ಮ ಶಾಲೆಯಲ್ಲಿ ಪರೀಕ್ಷೆ ನಡೀತಿದೆ ಹಾಗಾಗಿ ಅಂದು ಶಾಲೆಗೆ ರಜೆಯಿರುತ್ತೆ. ಒಟ್ಟು ಮೂರು ದಿನ ರಜೆ ಇರುತ್ತಲ್ಲ ಮಕ್ಕಳಿಗೊಂದು ದಿನ ಕಾಲೇಜಿಗೆ ರಜೆ ಹಾಕಿಸಿ ನಾವ್ಯಾಕೆ ಮೈಸೂರಿಗೆ ಹೋಗಿ ಬರಬಾರದು.
ನೀತು......ಮೈಸೂರಿಗಾ ?
ರಜನಿ ಹತ್ತಿರ ಬಂದು.......ಏನಮ್ಮ ಇದು ನಿಮ್ಮ ಚರ್ಚೆ ಫ್ಯಾಮಿಲಿ ಸೀಕ್ರೆಟ್ ಮೀಟಿಂಗಾ ನಮಗೆ ಹೇಳೋ ಹಾಗಿಲ್ಲವಾ ?
ನೀತು ಗೆಳತಿಯ ಭುಜಕ್ಕೆ ಗುದ್ದಿದರೆ ನಿಧಿ.......ಅಂಟಿ ಮುಂದಿನವಾರ ಅಪ್ಪ ಮೈಸೂರಿಗೆ ಹೋಗಿಬರೋಣ ಅಂತಿದ್ದಾರೆ.
ರಜನಿ......ಮೈಸೂರಿಗಾ ಅಲ್ಯಾರಿದ್ದಾರೆ ?
ನೀತು......ನನಗೇನು ಗೊತ್ತು.
ಹರೀಶ......ನಾವು ಇದಕ್ಕೂ ಮುಂಚೆ ಮೈಸೂರಿಗೆ ಹೋಗಿಲ್ಲ ಅಲ್ಲಿನ ಕೆ.ಆರ್.ಎಸ್. ಡ್ಯಾಂ....ಚಾಮುಂಡಿಬೆಟ್ಟ......ಅರಮನೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮುದ್ದಿನ ಮಗಳಿಗೆ ಝೂ ತೋರಿಸಬೇಕಿದೆ.
ನೀತು.....ಎಲ್ಲಿಗಾದ್ರೂ ಕರ್ಕೊಂಡ್ ಹೋಗಿ ಆದರೆ ಝೂ ಒಳಗಡೆ ಹೋಗಿ ಹೊರಗೆ ಬರುವವರೆಗೂ ನಿಮ್ಮ ಮುದ್ದಿನ ಮಗಳ ಎಲ್ಲಾ ಜವಾಬ್ದಾರಿಯೂ ನಿಮ್ಮದೇ ನನಗೂ ಅವಳಿಗೆ ಆ ಜಾಗದಲ್ಯಾವ ಸಂಬಂಧವೂ ಇಲ್ಲ.
ಸುಮ......ನೀತು ಹಾಗ್ಯಾಕೇ ಹೇಳ್ತೀಯಾ ?
ನೀತು.....ನೀವೂ ನೋಡಿಲ್ಲವಾ ಅತ್ತಿಗೆ ಮನೆಯಲ್ಲೇ ನಾಯಿ...ಗಿಣಿ ಗುಬ್ಬಚ್ಚಿ ಎಲ್ಲವನ್ನೂ ಸೇರಿಸಿಕೊಂಡಿರ್ತಾಳೆ. ಅಲ್ನೋಡಿ ಟಿವಿಯಲ್ಲಿ ಪ್ರಾಣಿಗಳನ್ನು ನೋಡುತ್ತ ನಮ್ಮ ಕಡೆ ತಿರುಗಿಯೂ ನೋಡ್ತಿಲ್ಲವಲ್ಲ. ಇನ್ನು ಝೂ ಒಳಗೆಷ್ಟು ಪ್ರಾಣಿಗಳಿರುವುದಿಲ್ಲ ಅಲ್ಲಿಂದ ಇವಳಾಚೆಗೆ ಬರ್ತಾಳೆ ಅಂತ ನನಗೆ ಸ್ವಲ್ಪವೂ ನಂಬಿಕೆಯಿಲ್ಲ ನನ್ನನ್ನೂ ಒಂದು ಬೋನಿನೊಳಗೆ ಕೂರಿಸಿಬಿಡಿ ಅಂತ ಹೇಳಿದ್ರೂ ಆಶ್ಚರ್ಯವಿಲ್ಲ.
ಅವಳ ಮಾತಿಗೆ ಎಲ್ಲರೂ ನಗುತ್ತಿದ್ದಾಗ ಟಿವಿ ಹತ್ತಿರಕ್ಕೋಡಿದ ನಿಶಾ ಅದಕ್ಕೆ ಎಚ್ಚರಿಕೆ ನೀಡುವಂತೆ ಬೆರಳು ತೋರಿಸುತ್ತ......ಏಯ್ ಏತ್ ಕೊತ್ತಿನಿ.....ಪಪ್ಪ ನೋಲು ಬತ್ತಿಲ್ಲ.....ಎಲ್ಲ ಹೋತು ಬತ್ತಿಲ್ಲ.
ನೀತು......ನೋಡಿದ್ರಾ ಅತ್ತಿಗೆ ಪ್ರೋಗ್ರಾಂ ನಡುವೆ ಜಾಹೀರಾತು ಬಂದಿದ್ದಕ್ಕೇ ಹೀಗಾಡ್ತಾಳೆ ಇನ್ನು ಝೂ ಒಳಗೆ ಹೇಗಾಡ್ತಾಳೋ.
No comments:
Post a Comment