ಆಚಾರ್ಯರು......ಯಾವುದರ ಬಗ್ಗೆ ಹೇಳುತ್ತಿರುವೆ ?
ರಾಣಾ.....ಕಿರಿಯ ರಾಜಕುಮಾರಿ ಅರಮನೆಗೆ ಬಂದಿದ್ದ ವಿಷಯ ಎಲ್ಲರಿಗೂ ತಿಳಿದಿರುತ್ತೆ ಆದರೆ ಅವರು ಈ ಊರಿನಲ್ಲಿರುವ ಬಗ್ಗೆ ವಿರೋಧಿಗಳಿಗೆ ಹೇಗೆ ತಿಳಿಯಿತು ? ಭೂಗತ ಲೋಕದ ವ್ಯಕ್ತಿ ನಮ್ಮ ಯುವರಾಣಿಯನ್ನು ಅಪಹರಿಸಲು ಸುಪಾರಿ ಪಡೆದಿದ್ದಾನೆ ಎಂದರೆ ಅದನ್ನು ಕೊಟ್ಟಿರುವವರು ಖಚಿತವಾಗಿ ರಾಜಸ್ಥಾನದ ಮೂಲದವರೆ ಆಗಿರುತ್ತಾರೆ ಯಾರವರು ? ವಿಕ್ರಂ ನೀನು ದಿಲೇರ್ ಕೆಲ ದಿನಗಳಿಂದೆ ಇಲ್ಲಿಗೆ ಬಂದು ಹೋಗಿದ್ದೀರ ನಿಮ್ಮಿಬ್ಬರ ಕಡೆಯಿಂದ ರಾಜಕುಮಾರಿ ಇಲ್ಲಿರುವ ವಿಷಯ ಹೊರಗಿನವರಿಗೆ ತಿಳಿಯುವುದು ಸಾಧ್ಯವಿಲ್ಲದ ಮಾತು. ಆದರೆ ಈ ಸುದ್ದಿ ಹೊರಗಿನ ವ್ಯಕ್ತಿಗಳಿಗೆ ತಿಳಿದಿರುವುದು ಮಾತ್ರ ರಾಜಸ್ಥಾನದಿಂದಲೇ ಸುದ್ದಿ ಕೊಟ್ಟವರು ಯಾರು ಯಾರಿಗೆ ?
ವಿಕ್ರಂ ಸಿಂಗ್.......ನಮ್ಮ ಜೊತೆ ಸಂಸ್ಥಾನದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪಾವನ ಎಂಬುವವರು ಸಹ ಬಂದಿದ್ದರು. ಕಂಪನಿ ಒಳಗೆ ಕೆಲವರು ಷಡ್ಯಂತ್ರ ನಡೆಸಿ ಅನೈತಿಕ ಚಟುವಟಿಗಳಲ್ಲಿ ಕೂಡ ಭಾಗಿಯಾಗಿದ್ದಾರೆಂದು ಅವಳು ಅನುಮಾನ ವ್ಯಕ್ತಪಡಿಸಿದ್ದಕ್ಕೆ ಮಾತೆ ನೀಡಿದ ಆದೇಶದನ್ವಯ ನನ್ನ ಮೂರು ಜನ ಚಾಣಾಕ್ಷ ಬಂಟರನ್ನು ಅವಳ ಸಹಾಯಕ್ಕೆ ನೇಮಿಸಿದ್ದೀನಿ.
ಬಾಗಿಲ ಬಳಿ ನಿಂತಿದ್ದ ರಾಣಾನ ಬಂಟನೊಬ್ಬ.......ಕ್ಷಮಿಸಿರಿ ನನಗೆ ಮಾತನಾಡಲು ಅನುಮತಿ ಇದೆಯಾ ?
ಆಚಾರ್ಯರು.....ಅದೇನು ಹೇಳಬೇಕೆಂದಿರುವೆಯೋ ಹೇಳು.
ಆತ.....ರಾಜಕುಮಾರಿ ಇಲ್ಲಿರುವ ವಿಷಯ ಹೊರಬಂದಿರುವುದು ಖಚಿತವಾಗಿಯೂ ಈ ಪಾವನ ಅವರ ಮೂಲಕವೇ.
ನೀತು.....ಪಾವನ ತುಂಬ ಒಳ್ಳೆಯ ಹುಡುಗಿ ಅನಾಥಳು ಅದಕ್ಕಿಂತ ಮೇಲಾಗಿ ಸುಧಾಮಣಿಯವರಿಗೆ ತಂಗಿಯಂತಿದ್ದವಳು.
ರಾಣಾ.......ಪಾವನ...ಪಾವನ....ಸಂಸ್ಥಾನದ ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ಹುಡುಗಿ ಮಾತೆಗೆ ತುಂಬ ಆಪ್ತಳಾಗಿದ್ದವಳು ಅವಳು ಯಾವುದೇ ಕಾರಣಕ್ಕೂ ದ್ರೋಹ ಮಾಡುವುದಿಲ್ಲ.
ಆತ (ಬಂಟ)......ಅವರು ದ್ರೋಹ ಮಾಡದಿದ್ದರೂ ಈಗ ಜಗತ್ತಿನಲ್ಲಿ ಲಭ್ಯವಿರುವಂತ ವೈಜ್ಞಾನಿಕ ಸಂಶೋಧಗಳ ಸಹಾಯದಿಂದ ವಿಷಯ ತಿಳಿದುಕೊಳ್ಳುವುದು ತುಂಬ ಸುಲಭದ ಕೆಲಸ.
ಆಚಾರ್ಯರು.....ಹೇಗೆ ? ಬಿಡಿಸಿ ಹೇಳು.
ಆತ......ಎಲ್ಲದಕ್ಕಿಂತಲೂ ಮುಖ್ಯವಾಗಿ ಮೊಬೈಲ್ ಫೋನ್ ಅದನ್ನು ಹ್ಯಾಕ್ ಮಾಡಿ ಅದರ ಮೂಲಕವೇ ವಿಷಯ ತಿಳಿದುಕೊಳ್ಳುವುದು ಸುಲಭದ ಕೆಲಸ. ಒಂದು ಕೆಲಸ ಮಾಡಿದರೆ ಮುಂದಿನೊಂದು ಘಂಟೆ ಒಳಗೆ ಕೆಲವು ಮಾಹಿತಿ ತಿಳಿದುಕೊಳ್ಳಬಹುದು.
ರಾಣಾ......ಮುಂದೆ ಹೇಳು.
ಆತ......ನಮ್ಮಲ್ಲಿರುವ ಕಂಪ್ಯೂಟರ್ ಪರಿಣಿತರಿಂದ ಪಾವನಾಳ ಮೊಬೈಲ್ ಚೆಕ್ ಮಾಡಿಸಿದರೆ ಅದರಲ್ಲಿ ಏನಾದರೂ ಕಿತಾಪತಿಯನ್ನ ಮಾಡಿದ್ದಾರಾ ಎಂಬುದು ತಿಳಿದು ಹೋಗುತ್ತೆ.
ರಾಣಾ.....ಒಳ್ಳೆಯ ಸಲಹೆ ಬೇಷ್. ವಿಕ್ರಂ ಸಿಂಗ್ ನೀನು ಪಾವನಾಳ ಸಹಾಯಕ್ಕೆ ನೇಮಿಸಿರುವ ಬಂಟರ ಮೂಲಕ ಅವಳ ಮೊಬೈಲನ್ನು ನಮ್ಮ ಪರಿಣಿತರಿಂದ ಈಗಲೇ ಚೆಕ್ ಮಾಡಿಸುವ ವ್ಯವಸ್ಥೆ ಮಾಡು.
ವಿಕ್ರಂ ಸಿಂಗ್ ಮಾಡಿದ ಕೆಲವು ಫೋನ್ ಕರೆಗಳಿಂದಾಗಿ ಪಾವನಾಳ ಫೋನ್ ಈಗ ಸಂಸ್ಥಾನದ ಚಾಣಾಕ್ಷ ತಜ್ಞರ ಕೈ ಸೇರಿದ್ದು ಅದನ್ನವರು ಪರಿಶೀಲನೆ ಮಾಡತೊಡಗಿದರು.
ಸವಿತಾ.....ಪಾವನ ಇಲ್ಲಿಗೆ ಬಂದಿದ್ದಾಗ ನಮ್ಮೆಲ್ಲರ ಜೊತೆಯಲ್ಲೂ ತುಂಬ ಹೊಂದಿಕೊಂಡಿದ್ದಳು ಅವಳಿರೀತಿ ಮಾಡಿರಲ್ಲ.
ಸುಮ.....ಹೌದು ಸವಿತಾ ನನಗೂ ಪಾವನ ದ್ರೋಹ ಮಾಡಿರುತ್ತಾಳೆ ಅಂತ ಅನಿಸುತ್ತಿಲ್ಲ ಅವಳೆಷ್ಟು ಸೌಮ್ಯ ಸ್ವಭಾವದವಳು.
ನೀತು.....ಮುಗ್ದೆ ಕೂಡ ಅತ್ತಿಗೆ ಮೋಸ...ವಂಚನೆ ತಿಳಿಯದವಳು ನೋಡೋಣ ಸ್ವಲ್ಪ ಹೊತ್ತಿನಲ್ಲೇ ಗೊತ್ತಾಗುತ್ತೆ.
ಅರ್ಧ ಘಂಟೆಯ ನಂತರ ವಿಕ್ರಂ ಸಿಂಗಿಗೆ ಬಂದ ಫೋನಿನಿಂದ ಎಲ್ಲ ವಿಷಯವೂ ತಿಳಿಯಿತು.
ವಿಕ್ರಂ ಸಿಂಗ್......ಪಾವನಾಳ ಫೋನಿನಲ್ಲಿ ಯಾರೋ ಒಂದು ಬಗ್ ಸಾಪ್ಟ್ ವೇರ್ ಹಾಕಿದ್ದಾರಂತೆ. ಅದರ ಸಹಾಯದಿಂದ ಆ ಫೋನಲ್ಲಿ ಅವಳೇನೇ ಮಾಡಲಿ ಇತರರಿಗೆ ಅದೆಲ್ಲವೂ ತಿಳಿಯುತ್ತಿತ್ತು. ನಾವು ಇಲ್ಲಿಂದ ತೆರಳಿದ ನಂತರ ಪಾವನಾಳ ಜೊತೆ ನೀವು ಮಾತನಾಡಿದಿರ ಮಾತೆ.
ನೀತು.......ಹಲವಾರು ಬಾರಿ ಮಾತನಾಡಿರುವೆ.
ರಾಣಾ.......ಈ ಊರು ಮನೆಯವರ ಬಗ್ಗೆ ?
ನೀತು.....ಅವಳು ನಮ್ಮ ಮನೆಯಲ್ಲಿದ್ದುದು ಕೆಲವೇ ಘಂಗಳಾದರೂ ನಮಗೆಲ್ಲಾ ತುಂಬ ಆತ್ಮೀಯಳಾಗಿ ಹೋಗಿದ್ದಳು. ಸಾಮಾನ್ಯವಾಗಿ ಫೋನ್ ಮಾಡಿದಾಗಲೆಲ್ಲಾ ಊರು...ಮನೆಯವರ ಬಗ್ಗೆ ನಾವು ಮಾತನಾಡುತ್ತಿದ್ದುದು ಸಾಮಾನ್ಯ.
ರಾಣಾ.....ಪಾವನಾಳ ಫೋನ್ ಯಾರೋ ಕದ್ದಾಲಿಸಿ ಇಲ್ಲಿನ ಎಲ್ಲಾ ವಿಷಯವನ್ನೂ ತಿಳಿದುಕೊಂಡಿದ್ದಾರೆ. ಮಾತೆ ಅವಳಿಂದ ಯಾರಾದ್ರು ಅವಳ ಫೋನ್ ಪಡೆದುಕೊಂಡಿದ್ದರಾ ಎಂಬ ಬಗ್ಗೆ ನೀವು ಅವಳನ್ನು ಕೇಳಿ ತಿಳಿದುಕೊಂಡರೆ ಔಚಿತ್ಯ.
ನೀತು ಫೋನ್ ಮಾಡಲು ಹೊರಟಾಗ ತಡೆದ ವಿಕ್ರಂ ಸಿಂಗ್ ಪಾವನ ಹತ್ತಿರ ಸಹಾಯಕ್ಕೆಂದು ನೇಮಿಸಿದ್ದ ತನ್ನ ಬಂಟನ ಫೋನಿಗೆ ಕರೆ ಮಾಡಿ ಅದನ್ನು ಪಾವನಾಳಿಗೆ ನೀಡುವಂತೇಳಿ ತನ್ನ ಫೋನಿನ ಸ್ಪೀಕರ್ ಆನ್ ಮಾಡಿ ನೀತುಳಿಗೆ ಕೊಟ್ಟು ಮಾತನಾಡಿರೆಂದನು.
ನೀತು......ಪಾವನ ಹೇಗಿದ್ದೀಯಮ್ಮ ?
ಪಾವನಾ.....ಅಕ್ಕ ನಾನು ಚೆನ್ನಾಗಿದ್ದೀನಿ ಆದರೆ ಇಲ್ಲೇನಾಗ್ತಿದೆ ಅಂತ ತಿಳಿಯುತ್ತಿಲ್ಲ. ನನ್ನ ಫೋನಿನಲ್ಲಿ ಯಾರೋ ಬಗ್ ಹಾಕಿದ್ದಾರೆಂದು ಇವರೆಲ್ಲ ಹೇಳ್ತಿದ್ದಾರೆ.
ನೀತು......ನೀನು ಗಾಬರಿಯಾಗಬೇಡ ನಾವಿಬ್ಬರೂ ಮಾತನಾಡುವ ವಿಷಯ ತಿಳಿದುಕೊಳ್ಳಲು ಯಾರೋ ನಿನ್ನ ಮೊಬೈಲಿಗೆ ಬಗ್ ಹಾಕಿ ನಮ್ಮಿಬ್ಬರ ಮಾತುಕತೆ ಕೇಳಿಸಿಕೊಂಡಿದ್ದಾರೆ. ಈಗ ಸರಿಯಾಗಿ ನೀನು ನೆನೆಪು ಮಾಡಿಕೊಂಡು ನಿನ್ಮ ಫೋನ್ ಯಾರಿಗಾದರೂ ಕೊಟ್ಟಿದ್ಯಾ ಅಂತ ಯೋಚಿಸಿ ಹೇಳು.
ಪಾವನ ಕೆಲಹೊತ್ತು ಯೋಚಿಸಿ......ಇಲ್ಲಾಕ್ಕ ನಾನ್ಯಾರಿಗೂ ಫೋನ್ ಕೊಟ್ಟಿಲ್ಲ ಆದರೆ ಕಳೆದ ವಾರ ಒಂದು ಮೀಟಿಂಗಿತ್ತು. ಅದು ನಮ್ಮ ಮಹರಾಜರ ಸ್ನೇಹಿತರ ಕಂಪನಿ ಜೊತೆಯಲ್ಲಿ ಅವರೆಲ್ಲರೂ ನಮ್ಮ ಮಹರಾಜರ ಮಿತ್ರರೇ. ಮೀಟಿಂಗಿಗೆಂದು ನಮ್ಮನ್ನು xxx ರೆಸಾರ್ಟಿಗೆ ಕರೆಸಿಕೊಂಡಿದ್ದರು ಅಲ್ಲಿ ಮೀಟಿಂಗಿಗೆ ಫೋನ್ ಕೊಂಡೊಯ್ಯುವ ಅನುಮತಿಯಿಲ್ಲ ಎಂದೇಳಿದಾಗ ನಾನು ನನ್ನ ಜೊತೆಗಿದ್ದ ಕಂಪನಿಯ ಇಬ್ಬರು ನಮ್ಮ ಮೊಬೈಲನ್ನು ಅಲ್ಲಿನ ಕೌಂಟರಿನವರಿಗೆ ಕೊಟ್ಟಿದ್ದೆವು. ಮೀಟಿಂಗ್ ಮುಗಿಸಿಕೊಂಡು ನಮ್ಮ ಮೊಬೈಲ್ ಪಡೆದು ನಾವೆಲ್ಲರು ಹಿಂದಿರುಗಿ ಬಂದೆವು.
ನೀತು.....ನಾನಿಲ್ಲಿ ನಿನಗೆ ಕೊಟ್ಟ ಹಣದ ಬಗ್ಗೆ ಯಾರಿಗಾದರು ನೀನು ಹೇಳಿದೆಯಾ ? ಹಣ ಎಲ್ಲಿಂದ ಬಂತೆಂದು.
ಪಾವನ......ರಾವ್ ಸರ್ ಒಬ್ಬರಿಗೆ ಮಾತ್ರ ಹಣ ನೀವು ಕೊಟ್ಟಿದ್ದು ಅಂತ ಹೇಳಿದೆ ಅದನ್ನು ನಿಮಗೆ ಆವತ್ತೇ ಹೇಳಿದೆನಲ್ಲ ಅಕ್ಕ ಆದರೆ ರಾವ್ ಸರ್ ಬೇರೆ ಯಾರಿಗಾದರೂ ಹೇಳಿರುವರಾ ಎಂದು ಗೊತ್ತಿಲ್ಲ. ಅಕ್ಕ ಅಲ್ಲೇನಾದರೂ ಸಮಸ್ಯೆ ಆಗಿದೆಯಾ ?
ನೀತು......ಹೂಂ ಕಣಮ್ಮ ಅದಕ್ಕಾಗಿಯೇ ಇದೆಲ್ಲ ಮಾಡ್ತಿರೋದು.
ಪಾವನ.....ಛೇ ಎಲ್ಲ ನನ್ನಿಂದಲೇ ಆಗಿರೋದು ನಾನು ಫೋನನ್ನು ಯಾರಿಗೂ ಕೊಡಬಾರದಿತ್ತು ಎಲ್ಲ ನನ್ನಿಂದಲೇ......
ನೀತು......ಪಾವನ ನಿನ್ನಿಂದೇನೂ ತಪ್ಪಾಗಿಲ್ಲ ಕಣಮ್ಮ ಯಾವುದೇ ಕಾರಣಕ್ಕೂ ನಿನ್ನನ್ನು ನೀನು ಧೂಷಿಸಿಕೊಳ್ಳಬೇಡ ಗೊತ್ತಾಯ್ತಾ ನಿನ್ನ ಕೆಲಸ ನೋಡಿಕೊಂಡು ಧೈರ್ಯವಾಗಿರು ನಾನಲ್ಲಾಗೆ ಸಾಧ್ಯವಿದ್ದಷ್ಟು ಬೇಗ ಬರ್ತೀನಿ.
ರಾಣಾ.....ಪಾವನ ಚೆನ್ನಾಗಿದ್ದೀಯ ? ನಿನಗೆ ನೆನಪಿಲ್ಲದಿರಬಹುದು ನಾನು ಶಂಷೇರ್ ಸಿಂಗ್ ರಾಣಾ.
ಪಾವನಾ.....ಅಣ್ಣ ನೀವಾ ? ನಿಮ್ಮನ್ನು ಮರೆಯುವುದಕ್ಕಾಗುತ್ತಾ ? ಅಣ್ಣ ನೀವ್ಯಾವಾಗ ವಾಪಸ್ ಬಂದಿರಿ ?
ರಾಣಾ.....ನಾವು ಬೇಟಿಯಾದಾಗ ಮಾತಾಡೋಣ. ಈಗ ನೀನು ಹೇಳಿದ xxx ರೆಸಾರ್ಟಿಗೆ ಯಾವತ್ತು ಹೋಗಿದ್ದು ? ಎಷ್ಟೊತ್ತಿಗೆ ?
ಪಾವನ ಹೇಳಿದ್ದನ್ನು ಕೇಳಿ ತನ್ನ ಬಂಟನಿಗೆ ಸನ್ನೆ ಮಾಡಿದ ರಾಣಾ ಯಾವುದೇ ರೀತಿ ಭಯಪಡದೆ ಆರಾಮವಾಗಿರೆಂದು ಫೋನಿಟ್ಟನು.
ಸುಮೇರ್ ಸಿಂಗಿಗೆ ಫೋನ್ ಮಾಡಿ.......ಸುಮೇರ್ ನಾನು ರಾಣಾ ಈಗಲೇ ಅಂದರೆ ಈ ಕ್ಷಣವೇ ಇಡೀ ಅರಮೆನೆಯ ಎಲ್ಲಾ ಬಾಗಿಲು ಮುಚ್ಚಿಬಿಡು ಒಳಗಿನಿಂದ ಯಾರೂ ಹೊರಗೆ ಹೋಗುವಂತಿಲ್ಲ ಅದೇ ರೀತಿ ಹೊರಗಿನಿಂದ ಯಾರನ್ನೇ ಆಗಲಿ ಒಳಗೆ ಬಿಡಬೇಡ. ಯಾವ ಸಾಮಾಗ್ರಿಗಳೇ ಆಗಿರಲಿ ಅದು ದಿನಸಿ ಆಗಿದ್ದರೂ ಸರಿ ಪರಿಶೀಲನೆ ಆಗದೆ ಗೇಟಿನಿಂದ ಒಳಗೆ ಬರಬಾರದು ತಿಳಿಯಿತಾ.
ಸುಮೇರ್......ಗೊತ್ತಾಯ್ತು ರಾಣಾ ಆದರೆ ಭಾನುಪ್ರತಾಪ್ ಹೊರಗೆ ಹೋಗುವವರಿದ್ದಾರೆ ಅವರನ್ನು......
ರಾಣಾ.....ಅವರೇನು ನಮ್ಮ ಮಹರಾಜರಾ ಸುಮೇರ್ ಈಗಲೇ ತಡಿ ಅಡ್ಡ ಬಂದವರನ್ನು ಯಮನ ಕಡೆ ಕಳುಹಿಸು. ಹಾಂ ಇನ್ನೊಂದು ಮುಖ್ಯವಾದ ಸಂಗತಿ ಭಾನುಪ್ರತಾಪರನ್ನು ಅವರ ಮನೆಯೊಳಗೆ ಗೃಹ ಬಂಧನದಲ್ಲಿಡು ಜೊತೆಗೆ ಅವರ ಬಳಿ ಯಾವುದೇ ರೀತಿಯ ಫೋನ್ ಇರಬಾರದು.
ಸುಮೇರ್......ಸರಿ ಈಗಲೇ ಎಲ್ಲವನ್ನೂ ಮಾಡಿ ನಿನಗೆ ತಿಳಿಸುವೆ.
ನೀತು.....ಭಾನುಪ್ರತಾಪ್ ಅವರನ್ನು ಗೃಹಬಂಧನದಲ್ಲಿಡುವುದು ಸರಿಯಾ ರಾಣಾ ?
ಆಚಾರ್ಯರು.....ಇದು ಯುದ್ದನೀತಿ ಕಣಮ್ಮ ನೀತು ಹತ್ತಿರದಲ್ಲಿನ ಶತ್ರುಗಳನ್ನೇ ಯುದ್ದಕ್ಕೂ ಮುನ್ನ ವಶಪಡಿಸಿಕೊಂಡಿರಬೇಕು ಆಗಲೇ ನಾವು ಯುದ್ದ ಜಯಿಸಲು ಸಾಧ್ಯ.
ಹರೀಶ......ನೀವೆಲ್ಲರೂ ಆ ರೌಡಿಗಳು ನಮ್ಮೂರಿನಲ್ಲಿ ಉಳಿದಿದ್ದ ಮನೆ ಹತ್ತಿರ ಹೋಗಿದ್ರಲ್ಲ ಅಲ್ಲೇನಾಯ್ತು ?
ಆಚಾರ್ಯರು.....ಏನಾಗಿರುತ್ತೆ ಹರೀಶ ಹೋಗಿದ್ದವನು ಯಮನ ಆಪ್ತ ಅಲ್ಲಾರೂ ಜೀವಂತವಾಗಿರಲು ಸಾಧ್ಯವಿಲ್ಲ ಹೌದಾ ರಾಣಾ ?
ರಾಣಾ......ವಿರೋಧಿಗಳಿಗೆ ಎರಡನೇ ಅವಕಾಶ ನೀಡಲು ನಾನು ಮಹಾತ್ಮನಾ ಗುರುಗಳೆ. ಚಿಂತಿಸಬೇಡಿ ಅವರಲ್ಯಾರ ಹೆಣವೂ ಸಹ ಸಿಗದಂತೆ ವ್ಯವಸ್ಥೆ ಮಾಡಲಾಗಿದೆ.
ಸುಭಾಷ್......ಸರ್ ಅಲ್ಲಿಗೆ ಬಸ್ಯ ಮತ್ತವನ ಕೆಲವು ಹುಡುಗರನ್ನು ಕರೆಸಿಕೊಂಡೆವು ಅವರಿಗೆ ಈ ಊರು ಚೆನ್ನಾಗಿ ತಿಳಿದಿದೆಯಲ್ಲ ಅಂತ. ಅವರ ಸಹಾಯದಿಂದ ಅಲ್ಲಿಂದ 42 ರೌಡಿಗಳ ಹೆಣವನ್ನೂ ಸಾಗಿಸಿ ಸುಟ್ಟುಬಿಡುವ ವ್ಯವಸ್ಥೆಯಾಗಿದೆ.
ನೀತು......ಪಾವನ ಮತ್ತು ನನ್ನ ಮಾತುಗಳನ್ನು ಕದ್ದಾಲಿಸಿದ ವ್ಯಕ್ತಿ ? ಅವನ ಕಥೆಯೇನು ?
ರಾಣಾ......ಚಿಂತಿಸದಿರಿ ಮಾತೆ ಸಂಜೆಯೊಳಗೆ ಅವರೆಲ್ಲರೂ ನಮ್ಮ ವಶದಲ್ಲಿರುತ್ತಾರೆ.
ಹೊರಗಿನಿಂದ ಗುಡುಗುಡುನೇ ಓಡಿ ಬಂದ ನಿಶಾ......ಮಮ್ಮ ನಾನಿ ಟಾಟಾ ಹೋತಿನಿ ಬಾ.
ನೀತು ಮುಗುಳ್ನಕ್ಕು....ಎಲ್ಲಿಗಮ್ಮ ನೀನು ಟಾಟಾ ಹೋಗೋದು.
ನಿಶಾ ತನ್ನೆರಡೂ ಕೈಗಳನ್ನು ಮೇಲೆತ್ತಿ ಚಕ್ರದಂತೆ ಸುತ್ತಿಸಿ......ಮಮ್ಮ ನಾನಿ ಗುಡುಗುಡು.....ಗುಡುಗುಡು....ಟಾಟಾ ಹೋಗನ ಬಾ.
ರಾಜೀವ್.....ಏನ್ ಹೇಳ್ತಿದ್ದಾಳಮ್ಮ ಇವಳು ?
ನೀತು......ಅಪ್ಪ ಮಕ್ಕಳೆಲ್ಲ ಪಕ್ಕದ ಸೈಟಿನಲ್ಲಿದ್ದಾರಲ್ಲ ಆಗ ಇಲ್ಲಿಗೆ ಹೆಲಿಕಾಪ್ಟರ್ ಬಗ್ಗೆ ಮಾತಾಡಿರಬೇಕು ಅದಕ್ಕೆ ಇವಳು ಅದರಲ್ಲಿ ರೌಂಡ್ ಹೋಗೋಣ ಅಂತಿರೋದು.
ಹರೀಶ.....ನೀನು ಹೆಲಿಕಾಪ್ಟರಲ್ಲಿ ಹೋಗ್ಬೇಕಾ ಕಂದ.
ನಿಶಾ.....ಹೂಂ ಪಪ್ಪ ನಲಿ ಹೋಗನ.
ತಂಗಿಯ ಜೊತೆ ಬಂದಿದ್ದ ಸುರೇಶನನ್ನು ನೋಡಿ ನೀತು......ಇದು ನಿನ್ನದೇ ಕೆಲಸವಾ ಸುರೇಶ ನೀನೇ ಹೇಳಿಕೊಟ್ಟಿರಬೇಕು ಇವಳಿಗೆ ನಿನಗೆರಡು ಭಾರಿಸಬೇಕು.
ನಿಶಾ ಅಮ್ಮನೆದುರು ಕೈಚಾಚಿ ನಿಂತು.........ಮಮ್ಮ ಅಣ್ಣ ಏನ್ ಮಾದಿಲ್ಲ ನಾನಿ ಮಾದೆ ನಂಗಿ ಏತ್ ಕೊಲು.
ನಿಶಾಳ ಮಾತನ್ನು ಕೇಳಿ ಮನೆಯವರೆಲ್ಲರ ತಲೆ ತಿರುಗಿದರೆ ಅಲ್ಲಿದ್ದ ಮೂವರು ಗುರುಗಳ ಜೊತೆ ವಿಕ್ರಂ ಸಿಂಗ್ ಮತ್ತು ರಾಣಾ ತಾಯಿ ಮಗಳ ನಡುವಿನ ಭಾಂಧವ್ಯವನ್ನು ಆಸ್ವಾಧಿಸಿ ನೋಡುತ್ತಿದ್ದರು.
ರಜನಿ......ಏನೇ ಇದು ಆಶ್ಚರ್ಯ ಯಾವಾಗಲೂ ಅಣ್ಣನಿಗೆ ಏಟು ಕೊಡು ಅಂತಿದ್ದ ಚಿಲ್ಟಾರಿ ಇವತ್ತು ಅಣ್ಣನ ಪರವಾಗಿ ವಾದಿಸುತ್ತ ತನ್ನ ಕೈ ಚಾಚಿಕೊಂಡು ನಿಂತಿದ್ದಾಳೆ ಎರಡು ಕೊಡೆ.
ಅಮ್ಮನನ್ನೇ ನೋಡುತ್ತಿದ್ದ ನಿಶಾ ಅಮ್ಮ ಕೈ ಮೇಲೆತ್ತಿದ ತಕ್ಷಣ ತಿರುಗಿ ಹೊರಗೋಡಿದವಳೇ ಅದಕ್ಕಿಂತಲೂ ವೇಗವಾಗಿ ಹಿಂದಿರುಗಿ ಅಪ್ಪನ ಹತ್ತಿರಕ್ಕೋಡಿ ಅವನ ಕಾಲ್ಸಂದಿಯಲ್ಲಿ ಸೇರಿ ಸೋಫಾದ ಕೆಳಗಡೆ ತೂರಿಕೊಂಡಳು.
ಅಲ್ಲಿಗೆ ಬಂದ ರಕ್ಷಕನೊಬ್ಬ.......ಮಾತೆ ಇವರು ನಿಮ್ಮನ್ನು ನೋಡಲು ಬಂದಿದ್ದಾರೆ.
ನೀತು.......ಇವರು ನಮ್ಮ ಪರಿಚಯದವರೇ ನೀನು ಹೋಗೆಂದು.... ಮನೆಗೆ ಡಾಕ್ಟರ್ ಶಾಲಿನಿಯನ್ನು ಬರಮಾಡಿಕೊಂಡು...ಬನ್ನಿ ಶಾಲಿನಿ ಏನೀವತ್ತು ಹಾಸ್ಪಿಟಲ್ಲಿಗೆ ಹೋಗಿಲ್ಲವಾ ?
ಶಾಲಿನಿ........ಯಾಕೆ ನೀತು ಮರೆತುಹೋಯ್ತ ನೆನ್ನೆ ಫ್ಯಾಕ್ಟರಿಯಲ್ಲಿ ಪೂಜೆಗೆ ಬಂದಿದ್ದಾಗಲೇ ಹೇಳಿದ್ದೆನಲ್ಲ ನಾಳೆ ನಿಶಾಳಿಗೆ ಇಂಜಕ್ಷನ್ ಡೇಟ್ ಅಂತ. ಏನೀವತ್ತು ಮನೆಯವರೆಲ್ಲ ರಜೆ ತೆಗೆದುಕೊಂಡಿದ್ದೀರ ಮಕ್ಕಳೂ ಶಾಲಾ ಕಾಲೇಜಿಗೆ ಹೋಗಿಲ್ಲ ಜೊತೆಗೆ ಹೊರಗಿಷ್ಟು ಟೈಟ್ ಸೆಕ್ಯೂರಿಟಿ ಇದೆ.
ನೀತು.......ಸಾರಿ ಶಾಲಿನಿ ನನಗೆ ಮರೆತೋಗಿತ್ತು ಯಾವುದೋ ಸಣ್ಣ ಟೆನ್ಷನ್ನಿನಲ್ಲಿದ್ದ ಕಾರಣ ಮರೆತುಬಿಟ್ಟಿದ್ದೆ ಸೆಕ್ಯೂರಿಟಿ ಯಾಕೆ ಎಂಬುದು ನಿನಗೆ ಇನ್ನೊಮ್ಮೆ ಹೇಳ್ತೀನಿ. ಚಿನ್ನಿ ಬಾರಮ್ಮ ಕಂದ ಆಚೆ ಡಾಕ್ಟರ್ ಆಂಟಿ ನಿನಗೆ ಚುಚ್ಚಿ ಮಾಡುವುದಕ್ಕೆ ಬಂದಿದ್ದಾರೆ ನನ್ನ ಜಾಣೆ ಕಂದ ಅಲ್ಲವಾ ನೀನು ಬಾರಮ್ಮ ಬಂಗಾರಿ.
ನಿಶಾ ಕೆಳಗೆ ತೂರಿಕೊಂಡೇ......ನಾನಿ ಬಲಲ್ಲ ಮಮ್ಮ....ಪಪ್ಪ ನಂಗಿ ಚುಚ್ಚಿ ಬೇಲ ನೋಲು ಮಮ್ಮ ನಂಗಿ ಚುಚ್ಚಿ ಮಾಲುತ್ತೆ.
ಹರೀಶ.....ಚಿನ್ನಿ ಈಗ ಚುಚ್ಚಿ ಮಾಡಿಸ್ಕೊಂಡ್ರೆ ನಾಳೆ ನಿಂಗೆ ಜ್ವರಗಿರ ಏನೂ ಬರಲ್ಲ ಕಂದ ಆಚೆ ಬಾ.
ನಿಶಾ.....ನಾನಿ ಬಲಲ್ಲ ಪಪ್ಪ ನಂಗಿ ಚುಚ್ಚಿ ಬೇಲ.
ಎಲ್ಲರೂ ಬಹಳ ಪೂತುಣಿಸಿ ಕರೆದರೂ ಬಾರದೆ ಸೋಫಾದ ಕೆಳಗೆ ತೂರಿಕೊಂಡಿದ್ದ ನಿಶಾ ಹಠ ಹಿಡಿದಿರುವುದನ್ನು ನಗುವಿನೊಂದಿಗೆ ಆಚಾರ್ಯರ ಜೊತೆ ಇತರರೂ ನೋಡುತ್ತಿದ್ದರು. ಕೊನೆಗೆ ಇವಳು ಹೀಗೆ ಕರೆದರೆ ಬರಲ್ಲವೆಂದು......
ನೀತು......ಚಿನ್ನಿ ಬರ್ತೀಯ ಆಚೆಗೆಳೆದು ಎರಡು ಕೊಡಲಾ ಬಾ.
ಅಮ್ಮ ಗದರಿದಾಗ ಮುಖ ಸಪ್ಪಗೆ ಮಾಡಿಕೊಂಡು ಹೊರಬಂದ ನಿಶಾ ಅಪ್ಪನ ಕಡೆ ನೋಡಿ ಅಪ್ಪನೂ ಸಹಾಯ ಮಾಡಲ್ಲವೆಂದರಿತು ಅಮ್ಮನಿಗೆ ಶರಣಾಗಿ ಅವಳನ್ನು ತಬ್ಬಿಕೊಂಡರೆ ನೀತು ಮಗಳಿಗೆ ಬುದ್ದಿ ಹೇಳುತ್ತ ರೂಮಿಗೆ ಕರೆದೊಯ್ದಳು.
ಶೀಲಾ......ಗುರುಗಳೇ ನಮ್ಮ ನಿಶಾಳಿಗೆ ಇಂಜಕ್ಷನ್ ಕೊಡಿಸುವುದೇ ಒಂದು ದೊಡ್ಡ ಸಾಹಸ ಮಾಡಿದಂತೆ ತುಂಬ ಹೆದರಿಕೊಳ್ತಾಳೆ. ಇನ್ನು ಅರ್ಧ ಘಂಟೆ ಅಮ್ಮನೊಬ್ಬಳನ್ನು ಬಿಟ್ಟು ಬೇರೆ ಯಾರ ಹತ್ತಿರವೂ ಹೋಗಲ್ಲ.
ಆಚಾರ್ಯರು......ಎಲ್ಲವೂ ಅವಳ ಒಳ್ಳೆಯದಕ್ಕೆ ಅಲ್ಲವೇನಮ್ಮ. ಹರೀಶ ನಾವು ಏದುರು ಮನೆಯಲ್ಲಿರುತ್ತೀನಿ ಇವರೊಟ್ಟಿಗೆ ನಾನು ಮಾತನಾಡುವುದಿದೆ ಅಲ್ಲಿಗ್ಯಾರೂ ಬರದಂತೆ ನೋಡಿಕೋ.
ಹರೀಶ......ಸರಿ ಗುರುಗಳೇ.
ರೂಮಿನಿಂದ ಹೊರಬಂದ ನೀತು......ವಿಕ್ರಂ ಸಿಂಗ್ ಗುರುಗಳೊಟ್ಟಿಗೆ ಮಾತನಾಡಿದ ನಂತರ ಮಕ್ಕಳಿಗೊಂದು ಹೆಲಿಕಾಪ್ಟರಲ್ಲಿ ರೌಂಡ್ ಹೊಡೆಸಿಕೊಂಡು ಬನ್ನಿ ಮಗಳು ತುಂಬ ಆಸೆ ಪಡ್ತಿದ್ದಾಳೆ.
ವಿಕ್ರಂ ಸಿಂಗ್......ಆಗಲಿ ಮಾತೆ.
ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡೇ ಎಲ್ಲರ ಕಡೆಯೂ ಕಣ್ಣಿನಿಂದ ಮುತ್ತಿನ ಹನಿ ಉದುರಿಸುತ್ತಲೇ ನೋಡುತ್ತಿದ್ದ ನಿಶಾಳ ತುಟಿಗಳಲ್ಲಿ ಮಂದಹಾಸ ಮೂಡಿತು.
* *
* *
ಏದುರು ಮನೆಯಲ್ಲಿ........
ರಾಣಾ......ಗುರುಗಳೇ ನನಗೆ ತಿಳಿದಿರುವಂತೆ ನೀವು ನಮ್ಮನಾಗಲಿ ಅಥವ ಇಲ್ಲಿ ಏದುರಾಗಿದ್ದ ಸಮಸ್ಯೆಯಿಂದಾಗಲಿ ಇಲ್ಲೇ ಉಳಿದಿಲ್ಲ. ಏನು ವಿಷಯ ಗುರುಗಳೇ ?
ವಿಕ್ರಂ ಸಿಂಗ್......ಹೌದು ಗುರುಗಳೇ ನಾನೂ ಬಂದಾಗಿನಿಂದಲೂ ಗಮನಿಸುತ್ತಿರುವೆ ನೀವು ಯಾವುದೋ ವಿಷಯದಿಂದಾಗಿ ತುಂಬ ವಿಚಲಿತಗೊಂಡಿದ್ದೀರಿ ಅನಿಸುತ್ತಿದೆ.
ಆಚಾರ್ಯರು ತಮ್ಮ ಶಿಷ್ಯರತ್ತ ನೋಡಿ.......ರಾಣಾ..ವಿಕ್ರಂ ನಿಮ್ಮ ಊಹೆ ನಿಜ. ನಾನಿಲ್ಲಿ ನಿಮ್ಮನ್ನಾಗಲಿ ಅಥವ ಏದುರಾಗಿದ್ದ ಸಮಸ್ಯೆ ಕಾರಣದಿಂದಾಗಲಿ ಇಲ್ಲಿ ಉಳಿದುಕೊಳ್ಳಲಿಲ್ಲ ನನಗೆ ಬೇರೊಂದು ಭವಿಷ್ಯದ ಚಿಂತೆ ಕಾಡುತ್ತಿದೆ. ಸೂರ್ಯವಂಶಿ ರಾಜಮನೆತನ ಮತ್ತು ಸಂಸ್ಥಾನಕ್ಕೆ ಮುಖ್ಯಸ್ಥೆಯಾಗಿ ರಾಜಕುಮಾರಿ ನಿಧಿ ಇನ್ನು ಕೆಲವು ದಿನಗಳಲ್ಲೇ ಅಧಿಕಾರ ವಹಿಸಿಕೊಳ್ಳುತ್ತಾಳೆ. ಆದರೆ ಉದಯಪುರದ ಅರಮನೆಯಲ್ಲೊಂದು ಘೋರ ಆಪತ್ತು ಕಾಯುತ್ತಿದೆ.
ವಿಕ್ರಂ ಸಿಂಗ್......ಏನದು ಗುರುಗಳೇ.
ಆಚಾರ್ಯರು......ಅರಮನೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕೆ ನೂರು ವರ್ಷಗಳ ನಂತರ ಮತ್ತೊಮ್ಮೆ ರಕ್ತತರ್ಪಣ ಬಯಸುತ್ತಿದೆ.
ರಾಣಾ.....ರಕ್ತತರ್ಪಣ ಅರ್ಥವಾಗಲಿಲ್ಲ ಗುರುಗಳೇ.
ಆಚಾರ್ಯರು.....ಸುಮಾರು 100 ವರ್ಷಗಳ ಹಿಂದೆ ಅರಮನೆಯ ಹೆಬ್ಬಾಗಿಲಿನಲ್ಲಿ ರಕ್ತದ ಸಿಂಚನವಾಗಿತ್ತು ಅದೇ ರೀತಿ ನೂರು ವರ್ಷದ ಬಳಿಕ ಅರಮನೆ ಹೆಬ್ಬಾಗಿಲು ರಕ್ತತರ್ಪಣವನ್ನು ಬಯಸುತ್ತಿದೆ.
ವಿಕ್ರಂ ಸಿಂಗ್.....ಏನ್ ಹೇಳ್ತಿದ್ದೀರ ಗುರುಗಳೇ.
ಅಚಾರ್ಯರು......ಹೌದು ನನ್ನ ಶಾಸ್ತ್ರ....ಭವಿಷ್ಯದ ದೂರದೃಷ್ಟಿ... ಹಿಂದೆ ನಡೆದಿರುವ ಕೆಲವು ಘಟೆಗಳ ಆಧಾರದ ಮೇಲೆ ವಿಶ್ಲೇಷಿಸಿದ ಸಮಯದಲ್ಲಿ ನನಗೆ ತಿಳಿದು ಬಂದಿದ್ದು ಇದೇ ಸಂಗತಿ. ನೂರು ವರ್ಷ ಹಿಂದೆ ಪೂರ್ವ ಮಹರಾಜ ರಾಣಾಪ್ರತಾಪರ ಅಜ್ಜಿಯು ಅರಮನೆ ಹೆಬ್ಬಾಗಿಲಿನಲ್ಲಿ ರಕ್ತತರ್ಪಣ ನೀಡಿ ಪ್ರಾಣ ತ್ಯಜಿಸಿದ್ದರು. ಈಗದೇ ಪುನರಾರ್ವತನೆ ಆಗುವ ಸಂಕೇತಗಳು ನನಗೆ ಸಿಕ್ಕಿದೆ ಆದರೆ ಈಗ ಅರಮನೆ ಯಾರ ರಕ್ತ ಬಯಸುತ್ತಿದೆ ಎಂದು ಗೊತ್ತ.
ಇಬ್ಬರೂ ಗಾಬರಿಯಿಂದ......ಯಾರದ್ದು ಗುರುಗಳೇ.
ಆಚಾರ್ಯರು.....ನಿಮ್ಮಿಬ್ಬರು ರಾಜಕುಮಾರಿಯರಿಗೆ ತಾಯಿಯ ಪ್ರೀತಿ....ವಾತ್ಸಲ್ಯ ಮತ್ತು ಮಮತೆ ನೀಡಿ ಅವರ ಮೇಲ್ಯಾವುದೇ ವಿಪ್ಪತ್ತೂ ಸಹ ಬಾರದಂತೆ ಕಾಯುತ್ತಿರುವ ತಾಯಿಯ ರಕ್ತ ಅಂದರೆ ನೀತುವಿನ ರಕ್ತವನ್ನು ಅರಮನೆ ಬಯಸುತ್ತಿದೆ. ಇವರೆಲ್ಲರೂ ಅಲ್ಲಿಗೆ ಬಂದಾಗ ನೀತು ಮೇಲೆ ದಾಳಿ ನಿಶ್ಚಿತವಾಗಿಯೂ ನಡೆದೇ ತೀರುತ್ತದೆ ಅದನ್ನೇ ನೀವೆಲ್ಲರೂ ಸೇರಿ ತಪ್ಪಿಸಲು ಪ್ರಯತ್ನಿಸಬೇಕು. ದಾಳಿಯು ನಿಖರವಾಗಿ ನಡೆದಿದ್ದೇ ಆದಲ್ಲಿ ನೀತು ಬದುಕುಳಿಯುವ ಸಾಧ್ಯತೆ ಕೇವಲ ಒಂದರಷ್ಟು ಮಾತ್ರ.
ನೀತು ಸಾವನ್ನು ಈ ಮನೆಯಲ್ಲಿರುವ ಯಾರಿಂದಲೂ ಜೀರ್ಣಿಸಿಕೊಳ್ಳಲಾರರು ನೀತುವಿನ ಅಗಲಿಕೆಯ ನೋವಿಂದ ಹೊರಬರಲು ಇವರಿಗೆ ಸಾಧ್ಯವಾಗದು. ಸ್ನೇಹ....ಪ್ರೀತಿ ಮತ್ತು ಗೌರವದಿಂದ ಯಾರಿಗೂ ಯಾರ ಬಗ್ಗೆಯೂ ಈರ್ಷ್ಯೆಯೂ ಸಹ ಇಲ್ಲದೆ ಅನ್ಯೋನ್ಯವಾಗಿರುವ ಕುಟುಂಬ ಛಿದ್ರವಾಗಿ ಹೋಗುತ್ತೆ. ರಾಜಕುಮಾರಿಯರಿಗೂ ಸಹ ತಾಯಿಯ ಅಗಲಿಕೆಯನ್ನು ಸಹಿಸಲು ಸಕ್ಷಮರಲ್ಲ. ನೀವಿಬ್ಬರೇ ನೋಡಿದಿರಲ್ಲ ಕಿರಿಯ ರಾಜಕುಮಾರಿ ಅಮ್ಮನ ಮುದ್ದಿನ ಮಗಳು ಹುಟ್ಟಿದ ದಿನದಂದೇ ಹೆತ್ತ ತಾಯಿಯನ್ನು ಕಳೆದುಕೊಂಡ ನತಧೃಷ್ಟೆ ಪಾಪ ಆ ಮಗು. ಆದರೆ ನೀತು ರೂಪದಲ್ಲಿ ಅವಳಿಗೆ ತಾಯಿಗಿಂತಲೂ ಮಿಗಿಲಾದ ಪ್ರೀತಿ....ಮಮತೆ ಅವಳಿಗೆ ದೊರೆಯಿತು. ಈ ಬಾರಿ ತಾಯಿಯ ಅಗಲಿಕೆಯನ್ನು ಆ ಮಗುವಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನೀವೆಲ್ಲರು ಎಚ್ಚರಿಕೆಯಿಂದ ಇದ್ದು ಯಾವುದೇ ಅನಾಹುತ ಆಗುವುದನ್ನು ಮೊದಲೇ ಗ್ರಹಿಸಿ ಅದನ್ನು ತಡೆಯಬೇಕಿದೆ.
ವಿಕ್ರಂ ಸಿಂಗ್.......ಗುರುಗಳೇ ಮಾತೆಯವರನ್ನು ಅರಮನೆಗೆ ಬರದ ರೀತಿ ತಡೆಯಲಾಗುವುದಿಲ್ಲವಾ ? ಏಕೆಂದರೆ ಅವರಿಗೆ ಗಂಡಾಂತರ ಇರುವುದೇ ಅರಮನೆಯಲ್ಲಿ ತಾನೇ.
ಆಚಾರ್ಯರು......ರಾಜಕುಮಾರಿಯರು ತಾಯ್ನಾಡಿಗೆ ಬರಲೇ ಬೇಕಾಗಿದೆ ಸಂಸ್ಥಾನವನ್ನೇ ಅವಲಂಭಿಸಿ ಬದುಕುತ್ತಿರುವ ಲೆಕ್ಕವೇ ಇಲ್ಲದಷ್ಟು ಕುಟುಂಬಗಳು ಉಳಿಯಬೇಕಾದರೆ ಅತಿ ಶೀಘ್ರದಲ್ಲೇ ನಿಧಿ ಸಂಸ್ಥಾನದ ಅಧಿಕಾರವನ್ನು ವಹಿಸಿಕೊಳ್ಳಬೇಕಿದೆ. ಆದರಲ್ಲಿಗೆ ತಾಯಿಯಿಲ್ಲದೆ ಇಬ್ಬರೂ ರಾಜಕುಮಾರಿಯರೂ ಯಾವ ಕಾರಣಕ್ಕೂ ಬರುವುದಿಲ್ಲ. ಇದನ್ನೇಳಿ ನಿಮ್ಮಿಬ್ಬರನ್ನು ಎಚ್ಚರಿಸುವುದಕ್ಕೇ ನಾನಿಲ್ಲಿ ನಿಮಗಾಗಿ ಕಾಯುತ್ತಿದ್ದುದು ನೀತು ರಕ್ಷಣೆ ನಿಮ್ಮೆಲ್ಲರ ಜವಾಬ್ದಾರಿ ಸ್ವಲ್ಪವೂ ಎಚ್ಚರತಪ್ಪದಿರಿ. ಅವಳಿಗೇನೇ ಆದರೂ ಕೂಡ ಪ್ರೀತಿಯೇ ತುಂಬಿರುವ ಈ ಒಟ್ಟು ಕುಟುಂಬ ಸರ್ವನಾಶದ ಹಾದಿಯತ್ತಲೇ ಹೋಗುವುದಂತೂ ನಿಶ್ಚಿತ. ಪರಸ್ಪರರ ಬಗ್ಗೆ ಪ್ರೀತಿ...ಆಪ್ಯಾಯತೆ.. ಗೌರವ ತುಂಬಿರುವ ಈ ಅನ್ಯೋನ್ಯ ಕುಟುಂಬದ ಅಡಿಪಾಯವೇ ನೀತು ಅವಳ ರಕ್ಷಣೆ ನಿಮ್ಮೆಲ್ಲರ ಜವಾಬ್ದಾರಿ.
ರಾಣಾ.....ನಮ್ಮ ಪ್ರಾಣ ನೀಡಿಯಾದರೂ ಮಾತೆಯ ರಕ್ಷಣೆಯನ್ನು ಮಾಡುತ್ತೀವಿ ಗುರುಗಳೇ.
ವಿಕ್ರಂ ಸಿಂಗ್.....ಮಾತೆಯ ರಕ್ಷಣೆಗೆ ನಾವು ಯಾವ ತ್ಯಾಗಕ್ಕಾದರೂ ಸಿದ್ದರಿದ್ದೀವಿ ಗುರುಗಳೇ.
ಆಚಾರ್ಯರು......ದೇವರು ಎಲ್ಲಾ ರೀತಿಯಲ್ಲೂ ಒಳ್ಳೆಯದನ್ನೇ ಮಾಡಲೆಂದು ಪ್ರಾರ್ಥಿಸೋಣ.
ನೂರಾರು ವರ್ಷದ ಇತಿಹಾಸವುಳ್ಳ ಉದಯಪುರ ಸೂರ್ಯವಂಶಿ ರಾಜಮನೆತನದ ಐತಿಹಾಸಿಕ ಅರಮನೆ ನೀತುವಿನ ರಕ್ತಕ್ಕಾಗಿಯೇ ಹಂಬಲಿಸುತ್ತಿದೆ. ಕೆಲವು ದಿನಗಳ ನಂತರ ಮುಂದೆ ತನಗೇನೇನು ಕಾದಿದೆ ಎಂಬುದರ ಅರಿವಿಲ್ಲದೆ ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಅದೇ ಅರಮನೆಗೆ ಬರುವವಳಿದ್ದಳು ಅಥವ ಒಂದು ಅರ್ಥದಲ್ಲಿ ನೀತು ತನ್ನ ಜೀವನದ ಅಂತ್ಯದ ಕಡೆಗೆ ಹೆಜ್ಜೆಯಿಡುವವಳಿದ್ದಳು.
No comments:
Post a Comment