ಶ್ರೀಧರ್—ರುಕ್ಮಿಣಿ ದಂಪತಿಗಳ ಜೊತೆ ದೇವಸ್ಥಾನದಲ್ಲಿ ಪೂಜೆಯ ಜೊತೆ ಹರಿಕಥೆಯಲ್ಲಿ ಪಾಲ್ಗೊಂಡು ಹಿಂದಿರುಗಿದ್ದ ರಾಜೀವ್ ಮತ್ತು ರೇವತಿ ಸೋಫಾದಲ್ಲಿ ಕುಳಿತಾಗ....
ಸುಮ.....ಅತ್ತೆ ಊಟ ಬಡಿಸಲಾ ?
ರಾಜೀವ್......ಬೇಡ ಕಣಮ್ಮ ದೇವಸ್ಥಾನದಲ್ಲಿಯೇ ಪ್ರಸಾದವನ್ನೂ ವಿತರಣೆ ಮಾಡಿದ್ದರು ಅದೇ ಸಾಕಾಗಿದೆ.
ಶೀಲಾ.....ಆಂಟಿ ಹರಿಕಥೆ ಚೆನ್ನಾಗಿತ್ತಾ ? ದೇವಸ್ಥಾನದಲ್ಯಾವ ಪೂಜೆ ನಡೆದಿದ್ದು ?
ರೇವತಿ......ಶೀಲಾ ಹರಿಕಥೆ ನಡೆಸಿಕೊಟ್ಟ ವ್ಯಕ್ತಿ ಅತ್ಯಧ್ಬುತವಾಗಿಯೇ ನಡೆಸಿಕೊಟ್ಟರು ಕಣಮ್ಮ ಅದರ ಜೊತೆ ಸತ್ಯನಾರಿಯಣನ ಪೂಜೆ ಎಲ್ಲರೂ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡಿದ್ದರು.
ರಾಜೀವ್......ಮುಂದಿನ ತಿಂಗಳು ನಾವು ಕೂಡ ಮಾಡಿಸುವುದಾಗಿ ಹೆಸರು ನೊಂದಾಯಿಸಿ ಅಡ್ವಾನ್ಸ್ ನೀಡಿ ಬಂದಿದ್ದೀವಿ ಕಣಮ್ಮ.
ಶೀಲಾ.....ಒಳ್ಳೆಯದೇ ಅಂಕಲ್ ರಜೆಯ ದಿನದಲ್ಲಾದರೆ ಎಲ್ಲರಿಗೂ ಪೂಜೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅನುಕೂಲವಾಗುತ್ತಿತ್ತು.
ರೇವತಿ......ನಾವೂ ಅದನ್ನೇ ಯೋಚಿಸಿ ಮುಂದಿನ ತಿಂಗಳಿನ ಕೊನೆ ಭಾನುವಾರ ಮಾಡಿಸುವುದಾಗಿ ನಿಶ್ಚಯ ಮಾಡಿ ಹೆಸರು ಬರೆಸಿದ್ವಿ.
ಸುಮ.....ಅಗಸ್ಟ್ ತಿಂಗಳಿನಲ್ಲಿ ಶೀಲಾಳ ಮಗು ಜನಿಸುವ ಮುಂಚೆ ಸತ್ಯನಾರಾಯಣನ ಪೂಜೆ ಮಾಡಿಸುತ್ತಿರುವುದು ಒಳ್ಳೆಯದೆ ಅತ್ತೆ.
ನೀತು......ಅಮ್ಮ ಪೂಜೆಗೆ ನೀವು ಅಪ್ಪನೇ ಕುಳಿತುಕೊಳ್ಳಬೇಕು ಹಿರಿಯರಾಗಿ ನೀವೇ ನಡೆಸಿಕೊಡುವುದು ಸರಿ.
ಶೀಲಾ......ಹೌದು ಆಂಟಿ ನೀವು ಅಂಕಲ್ ಪೂಜೆಗೆ ಕೂರುವುದೇ ಸರಿ ಬೇರೆಯವರಿಗೆ ಕುಳಿತುಕೊಳ್ಳಿರೆಂದು ನೀವು ಹೇಳದೆ ನೀವಿಬ್ಬರೆ ಪೂಜೆ ನೆರವೇರಿಸಿಕೊಡಿ.
ರಾಜೀವ್......ಆಯ್ತಮ್ಮ ಶೀಲಾ ನೀನು ಹೇಳಿದಂತಾಗಲಿ. ನೀತು ನೀವೆಲ್ಲರೂ ಮೈಸೂರಿಗೆ ಎಷ್ಟೊತ್ತಿಗಮ್ಮ ಹೊರಡುವುದು. ಇನ್ನೂ ಶಾಲಾ ಕಾಲೇಜಿನಿಂದ ಮಕ್ಕಳು ಬಂದಿಲ್ಲವಾ ?
ದೃಷ್ಟಿ ಒಳಬರುತ್ತ........ನಾವು ಬಂದಾಯ್ತು ತಾತ ಆದರಿನ್ನೂ ಮಾವ ಸುರೇಶ...ನಯನ ಶಾಲೆಯಿಂದ ಬರಬೇಕು.
ಸುಮ......ನಿಮ್ಮಿ ನೀನು ಲಗೇಜ್ ಪ್ಯಾಕ್ ಮಾಡಿಕೊಂಡಿದ್ದೀಯ ?
ನಮಿತಾ.......ಆಂಟಿ ನಾನು ಬೆಳಿಗ್ಗೆಯೇ ಬ್ಯಾಗ್ ಪ್ಯಾಕಿಂಗ್ ಮಾಡಿ ಮೇಲಿನ ರೂಮಲ್ಲಿಟ್ಟಿದ್ದೀನಿ.
ಗಿರೀಶ......ನಾನೇ ಇನ್ನೂ ಬಟ್ಟೆ ಪ್ಯಾಕ್ ಮಾಡಿಲ್ಲ ಬಂದೆ......
ಶೀಲಾ.......ಕೂತ್ಕೋ ಬಾ ನಿಮ್ಮಮ್ಮ ನಿಮ್ಮೆಲ್ಲರ ಲಗೇಜನ್ನು ಪ್ಯಾಕ್ ಮಾಡಿ ಇನೋವಾದಲ್ಲಿ ಇರಿಸಿದ್ದಾಗಿದೆ.
ನೀತು.....ಗಿರೀಶ ನೀನು ಹ್ಯಾಂಡಿಕ್ಯಾಂ ಮತ್ತು ಕ್ಯಾಮೆರಾ ತೆಗೆದುಕೊ ಹಾಗೆಯೇ ಛಾರ್ಜರ್ ಮರೆಯಬೇಡ.
ಗಿರೀಶ ಆಯ್ತಮ್ಮ ಎಂದೇಳಿ ಮಹಡಿಗೋದರೆ ಅವನ ಹಿಂದೆ ದೃಷ್ಟಿ ಮತ್ತು ನಮಿತಾ ಕೂಡ ತೆರಳಿದರು.
ರಾಜೀವ್.......ಎಲ್ಲಮ್ಮ ನನ್ನ ಬಂಗಾರಿ ಕಾಣಿಸ್ತಿಲ್ಲ ಮಲಗಿದ್ದಾಳಾ ?
ಅದೇ ಸಮಯಕ್ಕೆ ಶೀಲಾಳ ರೂಮಿನಿಂದ ಕಣ್ಣುಜ್ಜಿಕೊಳ್ಳುತ್ತ ಆಚೆಗೆ ಬಂದ ನಿಶಾ.....ಮಮ್ಮ ಸುಸು ಎಂದು ಅಮ್ಮನಿಗೆ ನೇತಾಕಿಕೊಂಡು ಅವಳ ಜೊತೆ ಬಾತ್ರೂಂ ಸೇರಿದಳು. ನೀತು ಮಗಳನ್ನು ಫ್ರೆಶಾಗಿಸಿ ಕರೆತರುವಷ್ಟರಲ್ಲಿ ಹರೀಶ ಮಕ್ಕಳು ಶಾಲೆಯಿಂದ ಹಿಂದಿರುಗಿದ್ದು ಅವರ ಜೊತೆಯಲ್ಲಿ ಸುಕನ್ಯಾ ಹಾಗು ಸವಿತಾ ಕೂಡ ಬಂದಿದ್ದರು. ಎಲ್ಲರೂ ಫ್ರೆಶಾಗಿ ಕಾಫಿ ಕುಡಿಯುತ್ತಿದ್ದರೆ ಅಜ್ಜಿ ತಾತ ಮೊಮ್ಮಕ್ಕಳಿಗೆ ಮೈಸೂರಿನಲ್ಲಿ ಹುಷಾರಾಗಿ ಓಡಾಡಬೇಕೆಂದು ಬುದ್ದಿವಾದ ಹೇಳುತ್ತ ಇದ್ದರೆ ನಿಶಾ ತಾತನ ಮಡಿಲಲ್ಲಿ ನಿಂತು ಅವರೊಟ್ಟಿಗೆ ಕೀಟಲೆಯನ್ನು ಮಾಡುತ್ತಿದ್ದು ತಾತನೂ ಮೊಮ್ಮಗಳ ಜೊತೆ ಆಡುತ್ತಿದ್ದರು.
ಎಲ್ಲರೂ ರೆಡಿಯಾದಾಗ ರಕ್ಷಕರಲ್ಲೊಬ್ಬ ತಾನು ಡ್ರೈವ್ ಮಾಡುವುದಾಗಿ ಹೇಳಿ ಇನೋವಾ ಡ್ರೈವಿಂಗ್ ಜವಾಬ್ದಾರಿ ಹೊತ್ತರೆ ಅವನ ಪಕ್ಕ ಹರೀಶ ಕುಳಿತನು. ನೀತು ಎಲ್ಲರಿಂದ ಬೀಳ್ಗಂಡು ಗಂಡು ಮಕ್ಕಳ ಜೊತೆಗೆ ಕೊನೆಯ ಸೀಟಿನಲ್ಲಿ ಕುಳಿತು ಮೂವರು ಹೆಣ್ಣುಮಕ್ಕಳನ್ನು ಮಧ್ಯದ ಸೀಟಿನಲ್ಲಿ ಕೂರಿಸಿದಳು. ನಿಶಾ ಎಲ್ಲರಿಂದ ಮುದ್ದು ಮಾಡಿಸಿಕೊಂಡ ಬಳಿಕ ಮುಂದಿನ ಸೀಟಿನಲ್ಲಿ ಅಪ್ಪನ ಮಡಿಲಲ್ಲಿ ನಿಂತು ಎಲ್ಲರಿಗೂ ಟಾಟಾ ಮಾಡುತ್ತ ಒಂದು ಪುಟ್ಟ ಪ್ರವಾಸಕ್ಕಾಗಿ ಮೈಸುರಿನ ಕಡೆಗೆ ಹೊರಟರು.
* *
* *
ರೇವಂತ್ ಜೊತೆಯಲ್ಲಿ ಪ್ರೀತಿ...ನಿಧಿ ಮತ್ತು ನಿಕಿತಾ ಮೈಸೂರನ್ನು ತಲುಪಿದ್ದು ಎಲ್ಲರಿಗಾಗಿ ಸ್ಟಾರ್ ಹೋಟೆಲ್ಲಿನಲ್ಲಿ ಎಂಟು ಲಕ್ಷುರಿ ರೂಂ ಬುಕ್ ಮಾಡಲಾಗಿತ್ತು. ರಾತ್ರಿಯ ಊಟವನ್ನೆಲ್ಲರೂ ಸೇರಿ ಮಾಡಿದ ನಂತರ ನಿಧಿ ಅಮ್ಮನಿಗೆ ಊರಿನಲ್ಲಿ ಹುಡುಗರ ಜೊತೆಯಲ್ಲಿ ನಡೆದ ಘಟನೆಯ ಬಗ್ಗೆ ತಿಳಿಸಿದಳು. ನೀತು ತಕ್ಷಣವೇ ಸುಭಾಷಿಗೆ ಫೋನ್ ಮಾಡಿ ವಿಷಯದ ಬಗ್ಗೆ ತಿಳಿದುಕೊಂಡು ಹುಡುಗರಿಗೆ ತಕ್ಕ ಶಿಕ್ಷೆಯನ್ನ ಕೊಡಿಸುವಂತೆ ಅವನ ಸ್ನೇಹಿತ ಎಸ್ಪಿಗೆ ಹೇಳುವಂತೆ ಸೂಚಿಸಿದಳು.
ರೇವಂತ್—ಪ್ರೀತಿ ಒಂದು ರೂಮಿಗೆ ಸೇರಿದರೆ ನಿಧಿ ಜೊತೆ ನಯನ ಮತ್ತು ನಿಕಿತಾ ಒಂದು ರೂಂ ಸುರೇಶ—ಗಿರೀಶ ಇಬ್ಬರಿಗೊಂದು ರೂಂ ರಶ್ಮಿ—ದೃಷ್ಟಿ ಜೊತೆಯಲ್ಲಿ ನಮಿತಾ ಒಂದು ರೂಂ ಸೇರಿಕೊಂಡರು. ರಕ್ಷಕರಿಗಾಗಿ ಮೂರು ರೂಮನ್ನು ಕಾಯ್ದಿರಿಸಲಾಗಿದ್ದರೆ ಅವರಲ್ಲಿ ಒಬ್ಬೊಬ್ಬ ತಮ್ಮ ರೂಮಿನ ಹೊರಗೆ ನಿಂತು ಸರತಿಯಲ್ಲಿ ಕಾವಲು ಕಾಯುತ್ತಿದ್ದರು. ಕೊನೆಯದಾಗಿ ತಮ್ಮ ರೂಮಿನಲ್ಲಿ ಮಲಗಿದ್ದ ನೀತು ಗಂಡನ ಹೊಟ್ಟೆ ಮೇಲೆ ಕುಳಿತು ಅಪ್ಪನಿಗೆ ತನ್ನದೇ ಪ್ರಶ್ನೆಗಳನ್ನು ಕೇಳುತ್ತಿದ್ದ ಮಗಳನ್ನು ನೋಡುತ್ತ ಮುಗುಳ್ನಗುತ್ತಿದ್ದಳು.
ನಿಶಾ.....ಪಪ್ಪ ನಾನಿ ಎಲ್ಲಿ ಬಂದಿ ಪಪ್ಪ.
ಹರೀಶ ಮಗಳ ಕೆನ್ನೆ ಸವರುತ್ತ......ನಾವೀಗ ಮೈಸುರಿಗೆ ಬಂದಿದ್ದೀವಿ ಕಂದ.
ನಿಶಾ.....ಆಕೆ ಪಪ್ಪ ?
ಹರೀಶ......ಯಾಕೆ ಅಂದರೆ ಚಿನ್ನಿ ಮರಿ ನಾಳೆ ನಾವು ಚಾಮುಂಡಿ ತಾಯಿಯ ಗುಡಿಗೆ ಹೋಗಬೇಕಲ್ಲ. ನಾಳೆ ನೀನು ಮಾಮಿಗೆ ಯಾವ ರೀತಿ ಜೋತ ಮಾಡ್ತೀಯಾ ತೋರಿಸಮ್ಮ ಕಂದ.
ನಿಶಾ ತನ್ನೆರಡೂ ಕೈಗಳನ್ನು ಜೋಡಿಸಿಕೊಂಡು ಕಣ್ಮುಚ್ಚಿ ಅಪ್ಪನಿಗೆ ತೋರಿಸುತ್ತ.......ಮಾಮಿ ತೋತ...ಎಂದಾಗ ನೀತು ನಕ್ಕಳು.
ಹರೀಶ.....ಮಾಮಿ ತೋತ ಅಲ್ಲ ಕಂದ ಮಾಮಿ ಜೋತ ಹೇಳಮ್ಮ ಬಂಗಾರಿ ಮಾಮಿ ಜೋತ ಅಂತ ಹೇಳು.
ನಿಶಾ ಸ್ವಲ್ಪ ತಡವರಿಸಿದರೂ ಸರಿಯಾಗಿ ಉಚ್ಚಾರಣೆ ಮಾಡುತ್ತ..... ಮಾಮಿ ಜೋತ....ಎಂದಳು.
ಹರೀಶ.....ವೆರಿ ಗುಡ್ ಕಂದ ನೀನು ಮಾಮಿ ಹತ್ತಿರ ಏನು ಬೇಕೆಂದು ಕೇಳಿಕೊಳ್ತೀಯಾ ಹೇಳು.
ನಿಶಾ ತನ್ನ ಪುಟ್ಟ ಮೆದುಳಿನಲ್ಲಿ ಆಲೋಚಿಸುತ್ತಿದ್ದರೆ ಗಂಡ ಹೆಂಡತಿ ಇಬ್ಬರೂ ಮಗಳನ್ನೇ ನೋಡುತ್ತಿದ್ದರು.
ನಿಶಾ ಬಹಳ ಯೋಚಿಸಿ.......ನಂಗಿ ಐಚೀಂ ಬೇಕು...ಚಾಕಿ ಬೇಕು ಮಮ್ಮ ಏತ್ ಬೇಲ.
ಹರೀಶ ಮುಗುಳ್ನಗುತ್ತ......ಮಮ್ಮನ ಏಟು ಬೇಡವಾ ಕಂದ
ನಿಶಾ ತಲೆ ಅಳ್ಳಾಡಿಸುತ್ತ.......ನಂಗಿ ಏತ್ ಬೇಲ ಪಪ್ಪ ಅಣ್ಣಗೆ ಏತ್ ಬೇಕು ನಂಗಿ ಬೇಲ.
ನೀತು........ಚಿನ್ನಿ ನಿಂಗೆ ಅಣ್ಣನ್ನ ಕಂಡರೆ ಇಷ್ಟ ಇಲ್ಲವಾ ಪುಟ್ಟಿ ? ಸರಿ ಸುರೇಶಣ್ಣನನ್ನ ನಾವು ಈಗಲೇ ಇಲ್ಲಿಂದ ಓಡಿಸಿಬಿಡೋಣ. ನೀವು ಈಗಲೇ ಹೋಗಿ ಸುರೇಶನಿಗೆ ನಾಲ್ಕೇಟು ಕೊಟ್ಟು ಓಡಿಸಿಬಿಡಿ ಚಿನ್ನಿಗೆ ಅಣ್ಣನ್ನ ಕಂಡ್ರೆ ಸ್ವಲ್ಪವೂ ಇಷ್ಟವಿಲ್ಲ ಹೋಗಿ ಬೇಗ.
ನೀತು ನಿಧಾನವಾಗಿ ಎಲ್ಲವನ್ನು ಹೇಳುತ್ತಿದ್ದರಿಂದ ನಿಶಾ ಅದನ್ನೆಲ್ಲಾ ಅರ್ಥೈಸಿಕೊಂಡಿದ್ದು ಅಪ್ಪನ ಮೇಲಿನಿಂದ ಕೆಳಗಿಳಿದು ಬಾಗಿಲಿನತ್ತ ಓಡಿ ಅದನ್ನು ತೆಗೆಯಲಾಗದೆ ಅಪ್ಪನ ಕೈಯನ್ನೆಳೆಯುತ್ತ ಬಾಗಿಲನ್ನು ತೆಗೆಯುವಂತೆ ಕರೆದೊಯ್ದಳು. ಮಗಳೇನು ಮಾಡುತ್ತಿರುದ್ದಾಳೆಂದು ಚೆನ್ನಾಗಿ ಅರಿತಿದ್ದ ನೀತು ಮನಸ್ಸಿನಲ್ಲೇ ಅಣ್ಣನ ಮೇಲೆ ತಂಗಿಗಿರುವ ಪ್ರೀತಿಯನ್ನು ಕಂಡು ಹೆಮ್ಮೆ ಪಡುತ್ತಿದ್ದಳು. ಹರೀಶ ಬಾಗಿಲು ತೆಗೆದ ತಕ್ಷಣ ಹೊರಗೋಡಿದ ನಿಶಾ ಅಣ್ಣನ ರೂಂ ಯಾವುದೆಂಬುದನ್ನು ತಿಳಿಯದೆ ಏದುರಿನ ರೂಂ ಬಾಗಿಲು ತಟ್ಟಿದಳು. ನಿಧಿ ಬಾಗಿಲನ್ನು ತೆರೆದಾಗ ಅವಳನ್ನೊಮ್ಮೆ ನೋಡಿ ಒಳಗೋಡಿದ ನಿಶಾ ಅಲ್ಲೆಲ್ಲೂ ಅಣ್ಣ ಕಾಣಿಸದೆ ಅಕ್ಕನ ಬಳಿ ಹಿಂದಿರುಗಿ ಕೈ ಅಳ್ಳಾಡಿಸುತ್ತ........
ನಿಶಾ......ಅಣ್ಣ ಲಿಲ್ಲ ನನ್ನಿ ಅಣ್ಣ ಲಿಲ್ಲ.....
ನಿಧಿ.....ಅಣ್ಣ ಆ ರೂಮಿನಲ್ಲಿದೆ ಚಿನ್ನಿ.....
ಅಕ್ಕನ ಮಾತು ಮುಗಿಯುವ ಮುನ್ನವೇ ಅವಳು ಕೈ ತೋರಿಸದತ್ತ ಓಡಿದ ನಿಶಾ ರೂಮಿನ ಬಾಗಿಲು ಬಡಿಯತೊಡಗಿದಳು.
ನಿಧಿ.....ಅಮ್ಮ ಏನಾಯ್ತು ಇವಳಿಗೆ ?
ನೀತು......ಸುಮ್ಮನೆ ನೋಡ್ತಿರು ಹೇಳ್ತೀನಿ.
ಗಿರೀಶ ಬಾಗಿಲು ತೆಗೆದಾಗ ಅಣ್ಣನನ್ನು ಪಕ್ಕಕ್ಕೆ ಸರಿಸಿ ಒಳಗೋಡಿದ ನಿಶಾ ಮಂಚವನ್ನೇರಿ ಟಿವಿ ನೋಡುತ್ತಿದ್ದ ಸುರೇಶನ ಮೇಲಕ್ಕೆ ಹತ್ತಿ ಅವನನ್ನು ಬಿಗಿಯಾಗಿ ತಬ್ಬಿಕೊಂಡಳು.
ಸುರೇಶ ತಂಗಿಯ ಬೆನ್ನು ಸವರಿ......ಏನಾಯ್ತಮ್ಮ ಚಿನ್ನಿ ?
ನಿಶಾ.....ಅಣ್ಣ ನನ್ನಿ ಅಣ್ಣ ಎಲ್ಲಿ ಹೋಬೆಲ....ಎಲ್ಲಿ ಹೋಬೆಲ...
ನೀತು ಹಿರಿಮಗಳಿಗೆ ವಿಷಯ ಹೇಳುತ್ತ ಗಂಡನಿಗೆ.....ಇದೇ ನೋಡ್ರಿ ಅಣ್ಣ ತಂಗಿಯರ ಪ್ರೀತಿಯ ಬೆಸುಗೆ ಅನ್ನೋದು. ಗಿರೀಶ ನೀನೋಗಿ ನಿಮ್ಮಪ್ಪನ ಜೊತೆ ಮಲಗು ನಾನಿಲ್ಲಿ ಮಲಗ್ತೀನಿ. ನಿಧಿ ಹೋಗಮ್ಮ ಕಂದ ಮಲಗಿಕೋ ನಾಳೆ ಬೆಟ್ಟಕ್ಕೆ ಹೋಗ್ಬೇಕಿದೆ ಇಲ್ಲಿ ಈ ಎರಡು ತರಲೆಗಳ ಜೊತೆ ನಾನಿರುವೆ....ಎಂದು ಗಂಡ ಮಕ್ಕಳಿಬ್ಬರನ್ನು ಕಳಿಸಿ ತಾನು ಕಿರಿಮಗ ಮಗಳ ಪಕ್ಕದಲ್ಲಿ ಮಲಗಿಕೊಂಡಳು.
ಅಣ್ಣನನ್ನು ತಬ್ಬಿಕೊಂಡು ಅವನ ಮೇಲೇ ಮಲಗಿದ್ದ ನಿಶಾ ಅಮ್ಮನ ಕಡೆಯೇ ನೋಡುತ್ತಿದ್ದು ಅಣ್ಣನನ್ನು ತನ್ನಿಂದೆಲ್ಲಿ ದೂರ ಕಳಿಸುವಳೊ ಎಂದು ಯೋಚಿಸುತ್ತ ಅವಳ ಪುಟ್ಟ ಕಂಗಳಲ್ಲೆರಡು ಮುತ್ತಿನ ಹನಿ ಉದುರಿದವು.
ನೀತು ಮಗಳ ಕಣ್ಣೀರನ್ನೊರೆಸಿ....ಚಿನ್ನಿ ನಿನ್ನಣ್ಣನ್ನ ಎಲ್ಲಿಗೂ ಕಳಿಸಲ್ಲ ಕಂದ ಹೆದರಬೇಡ ಆರಾಮವಾಗಿ ಮಲಗಿಕೋ ಆಯ್ತಾ. ಬಾಯಿಲ್ಲಿ ಅಣ್ಣನ ಪಕ್ಕದಲ್ಲೇ ಮಲಗುವಂತೆ ಸುರೇಶ ಟಿವಿ ಆಫ್ ಮಾಡಪ್ಪ.
ಸುರೇಶ....ಇವಳಿಗೇನಾಯ್ತಮ್ಮ ?
ನೀತು ಮಗನಿಗೆ ವಿಷಯ ಹೇಳಿದಾಗವನು ನಗುತ್ತ ತಂಗಿಯ ಕೆನ್ನೆ ಸವರಿ ಪಕ್ಕದಲ್ಲಿ ಮಲಗಿಸಿಕೊಂಡು ಅವಳನ್ನು ತಟ್ಟುತ್ತಿದ್ದರೆ ನಿಶಾ ಅಣ್ಣನನ್ನು ಸೇರಿಕೊಂಡೇ ನಿದ್ರೆಗೆ ಜಾರಿಬಿಟ್ಟಳು.
* * Continue.........
ಬೆಳಿಗ್ಗೆ ಹರೀಶ ಬಾಗಿಲು ತಟ್ಟಿದಾಗ ಸ್ನಾನ ಮಾಡಿ ರೆಡಿಯಾಗಿದ್ದ ನೀತು ಬಾಗಿಲು ತೆರೆದು ಗಂಡನನ್ನೊಳಗೆ ಕರೆದಾಗ ಹರೀಶನ ತುಟಿ ನಗುವಿನಿಂದ ಅರಳಿತು. ಹಾಸಿಗೆಯಲ್ಲಿ ನಿಶಾ ಎತ್ತೆತ್ತಲೋ ತಿರುಗಿ ಉರುಗಿಕೊಂಡು ಅಣ್ಣನ ಮೇಲೆ ಕಾಲುಗಳನ್ನು ಚಾಚಿ ಮಲಗಿದ್ದನ್ನು ನೋಡಿ......
ಹರೀಶ......ಇವರಿಬ್ಬರನ್ನಿನ್ನೂ ಏಬ್ಬಿಸಿಲ್ಲವಾ ಎಲ್ಲರೂ ರೆಡಿಯಾಗಿ ಕಾಯುತ್ತಿದ್ದಾರೆ ದೇವಸ್ಥಾನಕ್ಕೆ ಹೋಗಲು ಲೇಟಾಗುತ್ತೆ ಕಣೆ.
ನೀತು....ರೀ ಸುರೇಶನ್ನ ನಿಮ್ಮ ರೂಮಿಗೆ ಕರೆದೊಯ್ಯಿರಿ ಚಿಲ್ಟಾರೀನ ನಾನಿಲ್ಲಿ ರೆಡಿ ಮಾಡುವೆ.
ಪ್ರೀತಿ ಒಳಗೆ ಬರುತ್ತ.....ನನ್ನ ಕಂದನ್ನ ನಾನೇ ರೆಡಿ ಮಾಡೋದು.... ಎನ್ನುತ್ತ ನಿಶಾಳನ್ನೆಬ್ಬಿಸಿ ಮುದ್ದು ಮಾಡುತ್ತ ಕರೆದೊಯ್ದರೆ ಇದನ್ನು ನೋಡುತ್ತ ಹರೀಶ—ನೀತು ತಮ್ಮ ವಿಸ್ತೃತವಾದ ಪರಿವಾರದ ಬಗ್ಗೆ ಹೆಮ್ಮೆ ಪಡುತ್ತಿದ್ದರು.
ಚಾಮುಂಡಿಬೆಟ್ಟ ತಲುಪಿ ಅಪ್ಪನ ತೋಳಿಗೇರಿದ ನಿಶಾ ತಾವೆಲ್ಲರೂ ವಿಶೇಷ ದರ್ಶನಕ್ಕೆ ನೇರವಾಗಿ ಹೋಗುವಾಗ ಸುತ್ತಲೂ ದೇವಿಯ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದ ಜನಜಂಗುಳಿಯತ್ತ ಕೈ ಬೀಸುತ್ತ ಮುಗುಳ್ನಗೆ ಬೀರುತ್ತಿದ್ದಳು. ನಾಡಿನ ತಾಯಿ ಚಾಮುಂಡೇಶ್ವರಿಗೆ ಎಲ್ಲ ಮಕ್ಕಳ ಹೆಸರಿನಲ್ಲೂ ವಿಶೇಷ ಪೂಜೆ ಮಾಡಿಸಿ ಊರಿನಿಂದಲೇ ಖರೀಧಿಸಿ ತಂದಿದ್ದ ಕಾಣಿಕೆಗಳನ್ನು ತಾಯಿಗೆ ಸಮರ್ಪಿಸಿ ಎಲ್ಲರಿಗೂ ಹಾರೈಸುವಂತೆ ಭಕ್ತಿಭಾವದಿಂದ ನಮಿಸಿ ಹೊರಬಂದರು.
ನಮಿತಾ......ಅಂಕಲ್ ನಾವೀಗ ಮುಂದೆಲ್ಲಿಗೆ ಹೋಗ್ತಿರೋದು ?
ರೇವಂತ್......ಈಗ ವಾಪಸ್ ಹೋಟೆಲ್ಲಿಗೆ ಹೋಗೋಣ ಸಂಜೆಗೆ ಕೆ.ಆರ್.ಎಸ್. ಡ್ಯಾಂ ನೋಡಲು ಹೋಗೋದು.
ಗಿರೀಶ......ಅಮ್ಮ ಮೈಸೂರಿನಲ್ಲಿರುವ ಜಗನ್ಮೋಹನ ಗ್ಯಾಲರಿಗೆ ನಾವು ಹೋಗಿ ಬರ್ತೀವಿ.
ನಿಧಿ......ಹೌದಮ್ಮ ಜೊತೆಗೆ ಸ್ವಲ್ಪ ಆರ್ಟ್ ಸಂಬಂಧಿಸಿದ ಪರ್ಚೇಸ್ ಕೂಡ ಮಾಡುವುದಿದೆ ನಾವೆಲ್ಲರೂ ಹೋಗ್ತೀವಿ.
ಹರೀಶ.....ಸರಿ ಕಣಮ್ಮ ಆದರೆ ಹುಷಾರಾಗಿ ಹೋಗಿ ಬನ್ನಿ....ಎಂದು ಅವರ ಜೊತೆ ಕೆಲವು ರಕ್ಷಕರನ್ನು ಕಳುಹಿಸಿದನು.
ನೀತು.....ಅತ್ತಿಗೆ ಮೈಸೂರಿಗೆ ಬಂದು ಮೈಸೂರ್ ಸಿಲ್ಕ್ ಸೀರೆಯನ್ನೇ ಖರೀಧಿಸದಿದ್ದರೆ ಹೇಗೆ ನಾವಲ್ಲಿಗೆ ಹೋಗೋಣ.
ರೇವಂತ್....ನಡೀ ಎಲ್ಲರಿಗೂ ಪರ್ಚೇಸ್ ಮಾಡಿಕೊಂಡು ಬರೋಣ ಭಾವ ಮೈಸೂರ್ ಸಿಲ್ಕಿನ ರೇಷ್ಮೆ ಪಂಚೆ ತುಂಬ ಚೆನ್ನಾಗಿರುತ್ತಂತಲ್ಲ. ಹೇಗೂ ಸಧ್ಯದಲ್ಲೇ ಗಣೇಶನ ಹಬ್ಬ ಬರ್ತಿದೆ ನಾವು ಗಂಡಸರೆಲ್ಲರಿಗೆ ತೆಗೆದುಕೊಂಡರೆ ಹೇಗೆ ?
ಹರೀಶ.....ಹೌದು ರೇವಂತ್ ಮೈಸೂರ್ ಸಿಲ್ಕ್ ಬಗ್ಗೆ ಕೇಳಿದ್ದೀನೆಯೇ ಹೊರತು ನೋಡಿಲ್ಲ ನಡೀ ನೋಡೇ ಬಿಡೋಣ. ನೀತು ನಿಮ್ಮೆಲ್ಲರ ಜೊತೆ ಮನೆಯ ಹೆಣ್ಣುಮಕ್ಕಳಿಗೂ ಕೂಡ ಒಳ್ಳೊಳ್ಳೆ ಸುಂದರವಾದ ಸೀರೆಗಳನ್ನು ತೆಗೆದುಕೋ ಗೌರಿ ಹಬ್ಬದ ಪೂಜೆಯಲ್ಲಿ ಎಲ್ಲರೂ ಸೀರೆ ಉಟ್ಟುಕೊಳ್ಳಲಿ. ನಮ್ಮ ಚಿನ್ನಿ ನಯನ ಇಬ್ಬರೇ ಚಿಕ್ಕವರು ಉಳಿದ ಹೆಣ್ಮಕ್ಕಳೆಲ್ಲರೂ ಸೀರೆ ಉಡುವಷ್ಟು ದೊಡ್ಡವರಾಗಿದ್ದಾರಲ್ಲ.
ನೀತು.....ನಿಮ್ಮ ಮುದ್ದಿನ ಮಗಳಿಗೇನೂ ಬೇಡ್ವಾ ?
ಹರೀಶ.....ಯಾಕೆ ಬೇಡ ? ಚಿನ್ನಿ ನಯನ ಇಬ್ಬರಿಗೂ ರೇಷ್ಮೆ ಲಂಗ ಬ್ಲೌಸ್ ಹೊಲೆಸುವುದಕ್ಕೆ ಸೀರೆ ತೆಗೆದುಕೋ.
ಪ್ರೀತಿ....ಮೈಸೂರ್ ಸಿಲ್ಕ್ ಸ್ವಲ್ಪ ದುಬಾರಿ ಇಬ್ಬರಿಗೂ ಲಂಗ ಬ್ಲೌಸ್ ಹೊಲೆಸಿದರೆ ವೇಸ್ಟಾಗುತ್ತೆ.
ನೀತು.....ಎಷ್ಟಾದರೂ ವೇಸ್ಟಾಗಲಿ ನಡೀರಿ ಅತ್ತಿಗೆ ನಮ್ಮ ಮಕ್ಕಳ ಖುಷಿಗಿಂತ ಯಾವುದು ತಾನೇ ದುಬಾರಿ.
ಅತ್ತಿಗೆ—ನಾದಿನಿ ಮುನ್ನಡೆದರೆ ಅವರಿಂದ ಹರೀಶ—ರೇವಂತ್ ಸಹ ಮಾತನಾಡುತ್ತ ಹೊರಟಿದ್ದು ನಿಶಾ ಅದಾಗಲೇ ಮಾವನ ತೋಳಲ್ಲಿ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದಳು.
* *
* *
Nimma baravanige kaleyanu mechale beku
ReplyDelete