ಕಾಮಾಕ್ಷಿಪುರದ ಮನೆ.......
ಮಹಡಿಯ ರೂಮಿನಲ್ಲಿ ಅನುಷಾಳಿಂದ ಫ್ರೆಶಾಗಿಸಿಕೊಂಡು ಕೆಳಗೆ ಕಿರುಚಾಡುತ್ತ ಬಂದ ನಿಶಾ ನೇರವಾಗಿ ಕಿಚ್ಚನಿಗೆ ತೆರಳಿ ಅಮ್ಮನನ್ನು ತಬ್ಬಿಕೊಂಡು ಅವಳಿಂದ ಚೆನ್ನಾಗಿ ಮುದ್ದು ಮಾಡಿಸಿಕೊಂಡಳು.
ನಿಶಾ...ಮಮ್ಮ ನನ್ನಿ ಲಾಲಾ ಕೊಲು....ಎಂದೇಳಿ ಹೊರಗೋಡುತ್ತ ಯಾರ ಕೈಗೂ ಸಿಗದೆ ಅಪ್ಪನ ಮಡಿಲಿಗೇರಿ ಪವಡಿಸಿದಳು. ಮನೆಯ ಎಲ್ಲಾ ಸದಸ್ಯರೂ ಎದ್ದು ಫ್ರೆಶಾಗಿದ್ದರೆ ಹೆಂಗಸರೆಲ್ಲರೂ ಸ್ನಾನ ಕೂಡ ಮುಗಿಸಿ ರೆಡಿಯಾಗಿದ್ದರು. ದೊಡ್ಡವರಿಗೆ ಕಾಫಿ ಟೀ ಜೊತೆ ಮಕ್ಕಳಿಗೆ ಹಾರ್ಲಿಕ್ಸ್ ಮತ್ತು ಬೋರ್ನವೀಟ ಮಾಡಿಕೊಡಲಾಗುತ್ತಿತ್ತು. ಅಪ್ಪನ ಮಡಿಲಲ್ಲಿ ಕುಳಿತು ಸುರೇಶಣ್ಣನ ಕಡೆ ಬೆರಳು ತೋರಿಸಿ......
ನಿಶಾ......ಪಪ್ಪ ಅಣ್ಣ ನಂಗಿ ಐಸ್ ಕೊಲಿಲ್ಲ ಹೋಗು ನಾ ಕೊಲಲ್ಲ ಅಂತು ಪಪ್ಪ ಅಣ್ಣಗೆ ಬೇಯಿ ಏತ್ ಕೊಲು.
ನೆನ್ನೆಯ ದಿನ ಸಪ್ಪಗೆ ಮಲಗಿದ್ದ ಮಗಳು ಈಗ ತನ್ನ ಹಳೆ ಅವತಾರಕ್ಕೆ ಮರಳಿದ್ದನ್ನು ಕಂಡು ಹರೀಶ ಸಂತೋಷಗೊಂಡು ಅವಳನ್ನು ಮುದ್ದು ಮಾಡಿ ಸುರೇಶನಿಗೆ ಗದರಿದರೆ ಕಿಲಕಿಲನೆ ನಗುತ್ತಿದ್ದ ಮಗಳ ಮುಖ ನೋಡುತ್ತ ಕಿಚನ್ ಬಾಗಿಲಲ್ಲಿ ನಿಂತಿದ್ದ ನೀತು ಆನಂದದ ಕಣ್ಣೀರು ಸುರಿಸುತ್ತಿದ್ದಳು.
ಸವಿತಾ.......ದೇವರ ದಯೆಯಿಂದ ಎಲ್ಲವೂ ಒಳ್ಳೆಯದಾಗುತ್ತೆ ಕಣೆ ಚಿನ್ನಿ ನೋಡು ಬೆಳಿಗ್ಗೆಯಿಂದ ಎಷ್ಟು ಲವಲವಿಕೆಯಲ್ಲಿದ್ದಾಳೆ.
ನೀತು......ನನ್ನ ಕಂದ ಹೀಗೆ ನಗುತ್ತಿದ್ದರೆ ಸಾಕು ನನಗಿನ್ನೇನು ಬೇಡ.
ಸುಮ....ನೆನ್ನೆ ದಿನ ನಮ್ಮ ಮನೆಗೆ ಹಿಡಿದಿದ್ದ ಗ್ರಹಣ ಇಂದು ಸರಿದಿದೆ ಅಂತ ತಿಳಿ ನೀತು ತಗೋ ನೀನೂ ಕಾಫಿ ಕುಡಿ ನೆನ್ನೆ ರಾತ್ರಿಯೂ ಏನ್ ತಿಂದಿಲ್ಲವಲ್ಲ.
ನೀತು......ಅತ್ತಿಗೆ ನಾನೊಬ್ಬಳೇನಾ ಮನೆಯಲ್ಯಾರೂ ಸಹ ರಾತ್ರಿ ಏನೂ ತಿಂದಿಲ್ಲ ಬೇಗ ತಿಂಡಿ ಮಾಡಿಬಿಡೋಣ ರಾಜಸ್ಥಾನದಿಂದ ಬರುತ್ತಿರುವವರಿಗೂ ಸೇರಿಸಿ ಮಾಡಬೇಕು.
ಸಮಯ 7:25.......
ರಕ್ಷಕರು ಮನೆಯಿಂದ ತೆಗೆದುಕೊಂಡು ಹೋಗಿದ್ದ ಐದು ಕಾರುಗಳು ಹಿಂದಿರುಗಿ ಬಂದಿದ್ದು ಗೇಟಿನೊಳಗೆ ಕಾಲಿಟ್ಟ ವಿಕ್ರಂ ಸಿಂಗ್ ಹಿಂದೆಯೆ ಒಳಬಂದ ಕಪ್ಪು ಜೀನ್ಸ್ ಬಿಳಿಯ ಶಾರ್ಟ್ ಕುರ್ತಾ ಹಣೆಯಲ್ಲಿ ಪುಟ್ಟ ಚಂದನದ ತಿಲಕ ಬಲ ಮೊಣಕೈಯಲ್ಲಿ " ॐ " ಕಾರದ ಡಾಲರ್ ಜೊತೆ ಸೇರಿಸಿ ಪೋಣಿಸಿ ಸುತ್ತಿಕೊಂಡ ಕಪ್ಪನೇ ದೈವೀ ದಾರ ಎಡಗೈನಲ್ಲಿ ವಿಶಿಷ್ಟವಾದ ಖದ್ಗವನ್ನಿಡಿದ ಆರುವರೆ ಅಡಿಗಳೆತ್ತರದ 40 ವರ್ಷದ ಅಸುಪಾಸಿನ ಧೃಢಕಾಯ ವ್ಯಕ್ತಿ ಒಳಬಂದು ಮೊದಲಿಗೆ ಗುರುಗಳ ಸಮಕ್ಷಮ ಶಿರಭಾಗಿ ನಮಿಸಿದನು.
ಆಚಾರ್ಯರು........ಮಹರಾಣಿ ನೀಡಿದ್ದ ಅಜ್ಞಾತವಾಸದಿಂದ ನಿನಗೆ ಕೊನೆಗೂ ರಾಜಕುಮಾರಿ ಮುಕ್ತಿ ನೀಡಿದ್ದಾಳಲ್ಲ ರಾಣಾ.
ರಾಣಾ.....ಅವರದ್ದೊಂದು ಕರೆಗಾಗಿ ವರ್ಷಗಳಿಂದಲೂ ಕಾಯುತ್ತಿದ್ದೆ ಗುರುಗಳೇ.
ನಿಧಿ ಮುಂದೆಯೂ ಮೊಣಕಾಲೂರಿ ಶಿರ ಭಾಗಿಸಿದ ರಾಣಾ....ನಿಮ್ಮ ಸೇವಕನ ವಂದನೆಗಳನ್ನು ಸ್ವೀಕರಿಸಿ ರಾಜಕುಮಾರಿ.
ನಿಧಿ......ನಿನಗೂ ವಂದನೆಗಳು ರಾಣಾ ವಸವಾಸ ಮುಗಿದಿದೆ ನಿನ್ನ ಕರ್ತವ್ಯವನ್ನು ನಿರ್ವಹಿಸುವ ಸಮಯ ಬಂದಿದೆ.
ರಾಣಾ ಜೊತೆ ಬಂದಿದ್ದ 20 ಜನ ಯೋದ್ದರೂ ಸಹ ತಾವು ನಿಂತಲ್ಲೇ ಮಂಡಿಯೂರಿ ನಮಿಸಿದರೆ ನಿಧಿ ರಾಜಕುಮಾರಿಯ ರೀತಿಯಲ್ಲೇ ಎಲ್ಲರ ವಂದನೆಗಳನ್ನು ಸ್ವೀಕರಿಸಿದಳು. ಮೂವರು ಗುರುಗಳೊಟ್ಟಿಗೆ ಎಲ್ಲರು ಮನೆಯೊಳಗೆ ಆಗಮಿಸಿದರೆ ರಾಣಾನ ಇಬ್ಬರು ಸಹಚರರು ಬಾಗಿಲಿನ ಅಕ್ಕಪಕ್ಕ ಪಹರೆಯಂತೆ ನಿಂತರು. ಇನ್ನೂ ಕೂಡ ಅಪ್ಪನ ಮಡಿಲಿನಲ್ಲಿ ಕುಳಿತು ಕುಕ್ಕಿ ಮರಿಗಳನ್ನು ತನ್ನ ಪಕ್ಕದಲ್ಲಿ ಕೂರಿಸಿದ್ದ ನಿಶಾ ಅವುಗಳೊಂದಿಗೆ ಆಡುತ್ತಿದ್ದರೆ ವಿಕ್ರಂ ಸಿಂಗ್ ಮೊದಲಿಗೆ ತಮ್ಮ ಕಿರಿಯ ರಾಜಕುಮಾರಿಗೆ ಗೌರವ ಸಲ್ಲಿಸಿದ ನಂತರ ರಾಣಾ ಕೂಡ ಮಂಡಿಯೂರಿ ವಂಧಿಸಿದನು. ರಾಣಾ ಮುಖವನ್ನೇ ನೋಡುತ್ತಿದ್ದ ನಿಶಾಳಿಗೆ ಏನನ್ನಿಸಿತೋ ಏನೋ ಮುಂದೆ ಬಾಗಿ ಅವನ ಮೀಸೆಯ ಕೂದಲನ್ನೆಳೆದು ಕಿಲಕಿಲನೇ ನಕ್ಕರೆ ರಾಣಾ ಕಣ್ಣಲ್ಲಿ ಕಣ್ಣೀರಿನ ಧಾರೆ ಹರಿಯಿತು.
ಆಚಾರ್ಯರು......ಏನಿದು ರಾಣಾ ನಿನ್ನ ಕಣ್ಣಲ್ಲೂ ನೀರು ಬರುತ್ತಾ.
ರಾಣಾ.......ಗುರುಗಳೇ ನಾನೂ ಮನುಷ್ಯನೇ ಅಲ್ಲವಾ. ಮಾತೆ ಸಹ ಇದೇ ರೀತಿ ನನ್ನ ಮೀಸೆಯನ್ನೆಳೆದು ಅಶೀರ್ವಧಿಸುತ್ತಿದ್ದರು ಈಗ ಏದುರಿಗೆ ಸಾಕ್ಷಾತ್ ಅವರನ್ನೇ ನೋಡುತ್ತಿರುವಂತಿದೆ.
ಆಚಾರ್ಯರು......ಸುಧಾಮಣಿಯ ಪ್ರತಿರೂಪವೇ ಅಲ್ಲವಾ ರಾಣಾ ನಿಮ್ಮ ಕಿರಿಯ ರಾಜಕುಮಾರಿ. ಇವರು ಹರೀಶ ಅಂತ.......
ರಾಣಾ.......ರಾಣಾ ಅಜ್ಞಾತ ವಾಸದಲ್ಲಿದ್ದನೇ ಹೊರತು ಎಲ್ಲರ ಬಗ್ಗೆ ನನಗೆ ವಿಷಯ ತಿಳಿಯುತ್ತಿತ್ತು ಗುರುಗಳೇ. ಇವರು ನಮ್ಮ ಇಬ್ಬರೂ ರಾಜಕುಮಾರಿಯರಿಗೆ ತಂದೆ ಸಮಾನರಲ್ಲ ತಂದೆಗಿಂತಲೂ ತುಂಬ ಮೇಲ್ಪಟ್ಟವರು ನಿಮ್ಮೀ ಸೇವಕನ ವಂದನೆ ಸ್ವೀಕರಿಸಿ.
ಹರೀಶ......ನಾನೊಬ್ಬ ಸಾಮಾನ್ಯ ವ್ಯಕ್ತಿ ರಾಣಾ ನನ್ನನ್ನು ನೀನಿಷ್ಟು ಎತ್ತರದಲ್ಲಿಟ್ಟು ಗೌರವ ನೀಡಿದ್ದಕ್ಕೆ ಧನ್ಯವಾದಗಳು.
ನೀತು ಏದುರಿಗೆ ಮಂಡಿಯೂರಿ ಗೌರವ ಸಲ್ಲಿಸಿದ ರಾಣಾ.....ತಾಯಿ ನನ್ನ ಪ್ರಕಾರ ದೇವರಿಗಿಂತಲೂ ಪೂಜನೀಯವಾದ ಸ್ಥಾನ. ನಮ್ಮ ಮಹರಾಣಿಯವರು ನನಗೆ ತಾಯಿಯ ಪ್ರತಿರೂಪವೇ ಆಗಿದ್ದರು ಅದೇ ರೀತಿ ನಮ್ಮ ಯುವರಾಣಿಯರಿಗೆ ತಾಯಿಯ ಮಡಿಲಿನಲ್ಲಿ ಮಲಗುವ ಸುಖಕರ ಸಾನಿಧ್ಯವನ್ನು ಕಲ್ಪಿಸಿರುವ ನೀವು ಸಹ ನನಗೆ ಮಾತೆಯ ಸಮಾನರೇ. ನನ್ನ ವಂದನೆಗಳನ್ನು ಸ್ವೀಕರಿಸಿ.
ನೀತು....ಮನಃಪೂರ್ವಕವಾಗಿ ನಿನ್ನ ವಂದನೆಗಳನ್ನು ಸ್ವೀಕರಿಸಿದ್ದೀನಿ ಏದ್ದೇಳು ರಾಣಾ. ನೀನು ನನ್ನನ್ನು ಮಾತೆ ಎಂದು ಕರೆದಿರುವೆ ವಿಕ್ರಂ ಸಿಂಗ್ ಕೂಡ ಮಾತೆ ಅಂತಲೇ ಕರೆಯುತ್ತಾರೆ ಅದೇ ಅಧಿಕಾರದಿಂದ ನಾನೊಂದು ಮಾತು ಹೇಳಿದರೆ ನಡೆಸಿಕೊಡುವಿರಾ ?
ರಾಣಾ....ಮಾತೆ ಹೇಳಬಾರದು ಆದೇಶಿಸಬೇಕು ನಾವು ಅದರಂತೆ ನಡೆದುಕೊಳ್ಳುತ್ತೀವಿ.
ನೀತು.....ನಿಮ್ಮೆಲ್ಲರ ಹೃದಯ ಮತ್ತು ಮನಸ್ಸಿನಲ್ಲಿ ಸೂರ್ಯವಂಶಿ ಸಂಸ್ಥಾನ ಮತ್ತು ರಾಜ ವಂಶಸ್ಥರ ಬಗ್ಗೆ ಅಪಾರವಾದ ಪ್ರೀತಿ ಮತ್ತು ಗೌರವ ಅತ್ಯಧಿಕವಾಗಿದೆ ಎಂಬುದು ತಿಳಿದಿದೆ ಅದನ್ಯಾರೂ ಕೂಡ ಪ್ರಶ್ನಿಸಲು ಸಾಧ್ಯವಿಲ್ಲ. ನಿಮ್ಮ ಯುವರಾಣಿಯರಿಬ್ಬರೂ ನಿಮಗಿಂತ ತುಂಬ ಕಿರಿಯವರು ನೀವು ಪ್ರತೀ ಬಾರಿಯೂ ಈ ರೀತಿ ಕಾಲನ್ನೂರಿ ಶಿರಭಾಗಿಸಿ ನಮಿಸುವ ಅಗತ್ಯವಿಲ್ಲ ಗೌರವ ಮನಸ್ಸಿನಲ್ಲಿರದ್ದರೆ ಸರಿ. ನಿಮ್ಮೆಲ್ಲರ ಪ್ರೀತಿ....ಹಾರಕೈ...ನಿಷ್ಠೆ....ಬೆಂಬಲ ಮತ್ತು ಸರಿಯಾದ ಮಾರ್ಗದರ್ಶನ ಅವರಿಬ್ಬರಿಗೂ ತುಂಬ ಅವಶ್ಯಕ ಮತ್ತು ಅಗತ್ಯವಿದೆ.
ನೀವೆಲ್ಲರೂ ನಿಂತುಕೊಂಡೆ ಕೈಮುಗಿದು ಗೌರವ ತೋರಿಸಿದರೆ ಸಾಕು ಮಂಡಿಯೂರಿ ಕೂರುವುದು ಬೇಡ. ಇದನ್ನೆಲ್ಲಾ ನೋಡಿದರೆ ನೀವು ನಮ್ಮ ಗುಲಾಮರೆಂಬ ಭಾವನೆ ಮೂಡುತ್ತದೆ. ನೀವ್ಯಾರೂ ನಮಗೆ ಗುಲಾಮರಲ್ಲ ನೀವೆಲ್ಲರು ಸಂಸ್ಥಾನದ ಏಳಿಗೆ ಮತ್ತು ಸಂಸ್ಥಾನವನ್ನು ಕಾಪಾಡುವ ವೀರ ಯೋಧರು ಎಂಬುದು ನನ್ನ ಭಾವನೆ ಅದೇ ರೀತಿ ನಿಮ್ಮ ರಾಜಕುಮಾರಿಯರು ನಿಮಗೆ ಗೌರವ ನೀಡಿ ನಡೆದುಕೊಳ್ತಾರೆ ಕೆಲವು ಸಮಯದಲ್ಲಿನ ರಾಜಪರಂಪರೆಗಳು ಮತ್ತು ಸಂಧರ್ಭಗಳಲ್ಲಿ ಶಿಷ್ಟಾಚಾರವನ್ನು ನಿಭಾಯಿಸಬೇಕೆಂದು ನನಗೆ ತಿಳಿದಿದೆ ಆದರೆ ಎಲ್ಲ ಜಾಗಗಳಲ್ಲೂ ಅದನ್ನೇ ಅನುಸರಿಸುವುದು ಬೇಡ. ಇಷ್ಟನ್ನೂ ನೀವು ನಿಮ್ಮ ಸಹಚರರು ಅನುಸರಿಸಿ ನಡೆದುಕೊಳ್ಳಬೇಕೆಂಬುದು ನನ್ನ ಮನವಿ.
ರಾಣಾ.....ನಿಮ್ಮಾಜ್ಞೆಯಂತೆಯೇ ನಡೆದುಕೊಳ್ಳುತ್ತೀವಿ.
ಆಚಾರ್ಯರು......ನೀತು ಹೇಳಿದ್ದಕ್ಕೆ ನಿನ್ನದೇನೂ ಆಕ್ಷೇಪವಿಲ್ಲವಲ್ಲ ರಾಣಾ.
ರಾಣಾ.....ಮಾತೆಯ ಆಜ್ಞೆಯನ್ನು ಪ್ರಶ್ನಿಸುವ ಅಧಿಕಾರ ಮೇಲಿರುವ ಭಗವಂತರಿಗೇ ಇಲ್ಲ ಇನ್ನು ನನ್ನಂತ ಸಾಮಾನ್ಯ ಮಾನವರಿಗಿದೆಯಾ ಗುರುಗಳೇ.
ನೀತು....ಮೊದಲು ಒಟ್ಟಿಗೆ ಉಪಹಾರ ಸೇವಿಸಿ ನಂತರ ಮುಂದಿನ ವಿಷಯದ ಬಗ್ಗೆ ಮಾತನಾಡೋಣ.
ಮನೆಯವರ ಜೊತೆ ಮೂವರು ಗುರುಗಳು....ವಿಕ್ರಂ ಸಿಃಗ್...ರಾಣಾ ಮತ್ತವರ ಎಲ್ಲಾ ಅನುಯಾಯಿಗಳಿಗೂ ಸಾಕಾಗುವಷ್ಟು ಮನೆಯಲ್ಲಿ ಮಾಡಿರುವ ಇಡ್ಲಿ....ಪೊಂಗಲ್...ಚಟ್ನಿ...ಗೊಜ್ಜಿನ ಜೊತೆ ನಿಶಾಳಿಗೆ ಪ್ರಿಯವಾದ ಕ್ಯಾರೆಟ್ ಹಲ್ವಾ ಕೂಡ ನೀಡಲಾಯಿತು. ಅಣ್ಣಂದಿರ ಮುಂದೆ ನೆಲದಲ್ಲಿ ಕುಳಿತಿದ್ದ ನಿಶಾ ಅವರಿಬ್ಬರಿಂದ ಕ್ಯಾರೆಟ್ ಹಲ್ವಾ ತಿನ್ನಿಸಿಕೊಂಡು ಒಬ್ಬೊಬ್ಬರಾಗಿ ಎಲ್ಲಾ ಅಕ್ಕಂದಿರಿಂದಲೂ ಹಲ್ವಾನೇ ತಿನ್ನಿಸಿಕೊಂಡ ನಂತರ ಅಪ್ಪನ ಮಡಿಲಿಗೆ ಸೇರಿಕೊಂಡಳು.
ಹರೀಶ.....ಚಿನ್ನಿ ಮರಿ ನೀನು ಬರೀ ಹಲ್ವಾ ತಿಂತಿದ್ದೀಯಲ್ಲಮ್ಮ ಕಂದ ಇಡ್ಲಿ ತಿನ್ನಲ್ವಾ.
ಅಪ್ಪನ ತಟ್ಟೆಯನ್ನೆಲ್ಲಾ ನೋಡಿ........ಪಪ್ಪ ಬೆಣ್ಣಿ ಲಿಲ್ಲ.
ರೇವಂತ್......ಚಿನ್ನಿ ಇಡ್ಲಿಗೂ ನಿಂಗೆ ಬೆಣ್ಣೆ ಬೇಕಾ ಪುಟ್ಟಿ.
ನಿಶಾ ಹೂಂ ಎಂದು ತಲೆ ಕುಣಿಸುತ್ತಿದ್ದಾಗ ಬೆಣ್ಣೆ ಡಬ್ಬಿ ತಂದ ಅನುಷ......ಅಣ್ಣ ಊಟಕ್ಕೆ ಬಿಟ್ಟರೆ ಮಿಕ್ಕಿದ್ದಕ್ಕೆಲ್ಲಾ ಇವಳಿಗೆ ಬೆಣ್ಣೆ ಬೇಕು.... ಎಂದೇಳಿ ಹರೀಶನ ತಟ್ಟೆಗೆ ಬೆಣ್ಣೆ ಹಾಕಿದಳು. ಆಂಟಿ ಇನ್ನೂ ಚೊಪ್ಪ.. ಇನ್ನಿ ಚೊಪ್ಪ...ಎಂದು ಹೇಳಿ ತನಗೆ ಬೇಕಿದ್ದಷ್ಟು ಬೆಣ್ಣೆ ಹಾಕಿಸಿಕೊಂಡ ನಂತರ ಅಪ್ಪನಿಂದ ಇಡ್ಲಿ ಪೀಸನ್ನು ಬೆಣ್ಣೆಯಲ್ಲಿ ಅದ್ದಿ ಮುಳುಗಿಸಿದ ಬಳಿಕವೇ ತಿನ್ನಿಸಿಕೊಂಡಳು. ಇಡ್ಲಿಗಿಂತ ಜಾಸ್ತಿ ಬೆಣ್ಣೆ ಮತ್ತು ಹಲ್ವಾ ತಿನ್ನಿಸಿಕೊಂಡಿದ್ದ ನಿಶಾ ಸಾಕೆಂದು ಕೆಳಗಿಳಿದು ಅಪ್ಪನ ತಟ್ಟೆಯಲ್ಲಿದ್ದ ಬೆಣ್ಣೆಯನ್ನೆಲ್ಲಾ ಬಳಿದು ತಿಂದ ನಂತ ಕಿಚನ್ನಿನಲ್ಲಿ ಕೈ ತೊಳೆಸಿಕೊಂಡು ಸುರೇಶನ ಕುತ್ತಿಗೆಗೆ ಹಿಂದಿನಿಂದ ನೇತಾಕಿಕೊಂಡಳು. ಅಣ್ಣ ನನ್ನನ್ನು ಉಯ್ಯಾಲೆ ಆಡಿಸು ಎಂದಾಗ ತಿಂಡಿ ತಿನ್ಕೊಂಡು ಹೋಗಣ ಎಂದರೆ ಅವನ ತೊಡೆ ಮೇಲೆ ಕುಳಿತ ನಿಶಾ ಗಿರೀಶಣ್ಣನ ತಟ್ಟೆಯಿಂದ ಹಲ್ವಾ ತೆಗೆದುಕೊಂಡು ಸುರೇಶಣ್ಣನಿಗೆ ತಿನ್ನಿಸಿದಳು.
ಪ್ರೀತಿ....ನೆನ್ನೆ ಎಷ್ಟೊಂದು ಸಪ್ಪಗಿದ್ದಳೋ ಇವತ್ತಷ್ಟೇ ಲವಲವಿಕೆಯ ಪ್ರತಿರೂಪದಂತಿದ್ದಾಳೆ. ದೇವರು ಇವಳು ಸದಾ ಹೀಗೆ ಇರುವಂತೆ ನೋಡಿಕೊಳಲ್ಲಿ ಸಾಕು.
ಅಣ್ಣ ತಿಂಡಿ ತಿಂದ ನಂತರ ಅವನನ್ನೆಳೆದುಕೊಂಡು ಊಯ್ಯಾಲೆಯ ಕಡೆ ಕರೆದೊಯ್ದರೆ ನಿಧಿ ತಮ್ಮ ತಂಗಿಯರನ್ನೆಲ್ಲಾ ಅಲ್ಲಿಗೆ ಕಳಿಸಿದಳು.
ಎಲ್ಲರ ತಿಂಡಿ ಕಾಫಿ ಮುಗಿದಾಗ...
ಆಚಾರ್ಯರು......ಈಗ ವಿಷಯಕ್ಕೆ ಬರೋಣ.
ಹರೀಶ.....ನಮ್ಮ ಕಾಲೋನಿಯ ಹೊರಗೆ ಕೆಲವರು ಕಾರಿನಲ್ಲಿದ್ದು ಮನೆಯವರ ಮೇಲೆ ನಿಗಾ ವಹಿಸುತ್ತಿದ್ದಾರೆ.
ಅಶೋಕ......ನೆನ್ನೆ ರಾತ್ರಿ ನನ್ನ ತಮ್ಮ ಪ್ರತಾಪ್ ಪೋಲಿಸ್ ಅಧಿಕಾರಿ ಅವರನ್ನೆಲ್ಲಾ ಅಲ್ಲಿಂದ ಹೋಗುವಂತೆ ಮಾಡಿದ್ದ ಆದರಿಂದು ಬೆಳಿಗ್ಗೆ ಬೇರೆ ಕಾರಿನಲ್ಲಿ ಬಂದು ಅಲ್ಲೇ ನಿಂತಿದ್ದಾರೆ.
ಸುಭಾಷ್.....ಬೇರೆ ಕಡೆಯಿಂದಲೂ ಹಲವು ಜನ ಇಲ್ಲಿಗೆ ಬಂದು ನಿಶಾಳನ್ನೇ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ತಿಳಿಯಿತು....ಎಂದು ನೆನ್ನೆಯ ದಿನ ದೊರೆತ ಪತ್ರವನ್ನು ಅವರಿಗೆ ಕೊಟ್ಟನು.
ವಿಕ್ರಂ ಸಿಂಗ್ ಮತ್ತು ರಾಣಾ ಹಿಂದಿಯಲ್ಲಿ ಬರೆದಿದ್ದ ಪತ್ರವನ್ನು ಓದಿದ ನಂತರ ನೀತು.......ನೀವಿಬ್ಬರು ಏನ್ ಮಾಡ್ತೀರೋ ನನಗೆ ಗೊತ್ತಿಲ್ಲ ಆದರೆ ನನ್ನ ಮಗಳ ಮುಖದಲ್ಲಿ ನೆನ್ನೆಯ ರೀತಿ ಇನ್ನೊಮ್ಮೆ ಭಯ ಕಾಣಿಸಿಕೊಳ್ಳಬಾರದು ಅಷ್ಟೆ.
ವಿಕ್ರಂ ಸಿಂಗ್.....ಈ ಊರಿಗೆ ಹೊರಗಿನಿಂದ ಬಂದಿರುವವರು ಎಲ್ಲಿ ಉಳಿದುಕೊಂಡಿದ್ದಾರೆಂದು ಗೊತ್ತಿದೆಯಾ ?
ಜಾನಿ.....ನೆನ್ನೆ ರಾತ್ರಿ ನಾವಲ್ಲಿಗೆ ಹೋಗಿದ್ವಿ ಕಾಲೋನಿಯ ಗೇಟಿನ ಹತ್ತಿರ ಇರುವವರನ್ನು ಬಿಟ್ಟು ಮಿಕ್ಕವರೆಲ್ಲ ಅದೇ ಮನೆಯಲ್ಲಿದ್ದಾರೆ.
ರಾಣಾ.....ವಿಕ್ರಂ ನೀನು ಕಾಲೋನಿ ಹೊರಗಿನವರನ್ನು ನೋಡಿಕೋ ನಾನಾ ಅವರಡಗಿರುವ ಮನೆ ಕಡೆ ಹೋಗ್ತೀನಿ. ನಾನಲ್ಲಿಗೆ ತಲುಪಿದ ನಂತರ ನಿನಗೆ ಸಿಗ್ನಲ್ ನೀಡುವೆ ನಂತರ ದಾಳಿ ಮಾಡು.
ಮುಂದಿನ ಹತ್ತು ನಿಮಿಷದಲ್ಲೇ ರಾಣಾ ಮತ್ತವನ ಸಹಚರರು ಪ್ಲಾನ್ ಸಿದ್ದಪಡಿಸಿದ್ದು ರಾಣಾ ಜೊತೆಯಲ್ಲಿ ಅವನ 15 ಜನ ಅನುಚರರು ಹಾಗು ವಿಕ್ರಂ ಸಿಂಗ್ ಜೊತೆ ಇನ್ನುಳಿದ ಐವರು ಮತ್ತು ಮನೆ ಹತ್ತಿರ ಇರುವ ಇಬ್ಬರು ರಕ್ಷಕರು ಹೋಗುವುದೆಂದು ನಿರ್ಧಾರವಾಯಿತು. ಅಪ್ಪನನ್ನೊಪ್ಪಿಸಿ ರಾಣಾ ಜೊತೆಯಲ್ಲಿ ನಿಧಿ ಕೂಡ ಹೊರಟರೆ ನೀತು ಅವಳ ಹಿಂದೆ ಸುಭಾಷ್...ಜಾನಿ ಮತ್ತು ಆರೀಫನನ್ನು ಕಳಿಸಿದಳು. ವಿಕ್ರಂ ಸಿಂಗ್ ಜೊತೆಯಲ್ಲಿ ಅಶೋಕ....ರೋಹನ್ ಮತ್ತು ರೇವಂತ್ ಕಾಲೋನಿ ಗೇಟಿನ ಕಡೆ ತೆರಳಿದರೆ ಉಳಿದವರು ಮನೆಯಲ್ಲಿದ್ದರು.
ಅರ್ಧ ಘಂಟೆಯಲ್ಲಿ ಕಾಲೋನಿಯ ಹೊರಗೆ ಕಾರಿನಲ್ಲಿ ಕುಳಿತು ಮನೆಯ ಸದಸ್ಯರ ಚಲನವಲನ ಗಮನಿಸುತ್ತಿದ್ದ ಐದು ಜನರನ್ನು ವಿಕ್ರಂ ಮತ್ತವನ ಅನುಚರರ ವಶದಲ್ಲಿದ್ದು ಅವರನ್ನೆಲ್ಲಾ ಮನೆಗೇ ಎಳೆದು ತಂದಿದ್ದರು. ಒಂದು ಘಂಟೆಯ ನಂತರ ರಾಣಾ...ನಿಧಿ ಮತ್ತು ಇತರರೆಲ್ಲರೂ ಮನೆಗೆ ಮರಳಿ ಬಂದಿದ್ದು.......
ರಾಣಾ.....ವಿಕ್ರಂ ಸಿಂಗ್ ಇವರನ್ನೆಲ್ಲಾ ಇಲ್ಲಿಗ್ಯಾಕೆ ಎಳೆದುತಂದೆ ?
ವಿಕ್ರಂ ಸಿಂಗ್.....ಇವರನ್ಯಾರು ಯಾವ ಕಾರಣಕ್ಕೆ ಕಳಿಸಿರುವುದೆಂದು ತಿಳಿದುಕೊಳ್ಳಲು ಎಳೆದುತಂದೆ. ಆದರೆ ಇವರಿಗೆ ಗೊತ್ತಿರುವುದಿಷ್ಟೇ ಸಮಯ ಅನುಕೂಲವಾದಾಗ ನಮ್ಮ ಕಿರಿಯ ರಾಜಕುಮಿರಿಯನ್ನು ಅಪಹರಣ ಮಾಡಲು ಕಾಯುತ್ತಿದ್ದರಂತೆ.
ಸುಭಾಷ್....ಇವರಲ್ಯಾರಿಗೂ ಪೂರ್ತಿ ವಿಷಯ ಗೊತ್ತಿಲ್ಲ ಇವರಿಗೆ ಬೇರೆ ಯಾರೋ ಸುಪಾರಿ ಕೊಟ್ಟಿದ್ದಾರೆ.
ವಿಕ್ರಂ (ಮಾವ).....ಇವರೆಲ್ಲ ಸುಪಾರಿ ತೆಗೆದುಕೊಂಡು ಕೆಲಸಕ್ಕಿರುವ ಗೂಂಡಾಗಳಾ ಸುಭಾಷ್ ?
ಸುಭಾಷ್.......ಹೌದು ಅಂಕಲ್ ರಮನಾಥ್ ಅಂತ ಬೆಂಗಳೂರಿನಲ್ಲಿ ಭೂಗತ ದೊರೆ ಇದ್ದಾನೆ ಇವರೆಲ್ಲರನ್ನು ಅವನೇ ಕಳಿಸಿದ್ದಾನೆ. ಮನೆ ಅಡ್ರೆಸ್ ಹೇಳಿ ಈ ಮನೆಯ ಕಿರಿಮಗಳನ್ನು ಕಿಡ್ನಾಪ್ ಮಾಡಿ ತಂದು ಒಪ್ಪಿಸುವಂತೆ ಅವನೇ ಆದೇಶಿಸಿ ಕಳಿಸಿರುವುದು.
ರೇವತಿ......ದೇವರೇ ನನ್ನ ಪುಟ್ಟ ಕಂದನ ಹಿಂದೆ ರೌಡಿಗಳು ಕೂಡ ಬೀಳುವಂತಾಯಿತಲ್ಲ.
ಶೀಲಾ......ಸುಭಾಷ್ ನೀನು ಪೋಲಿಸ್ ಅಧಿಕಾರಿ ಅವರನ್ನೆಲ್ಲಾ ಬಂಧಿಸಿ ನನ್ನ ಕಂದನಿಗೇನೂ ಆಗದಂತೆ ನೋಡಿಕೋ.
ಸುಭಾಷ್......ಆಂಟಿ ಅದಷ್ಟು ಸುಲಭವಲ್ಲ ನಾನು ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಈ ಕೇಸಿನಲ್ಲಿ ತಲೆ ಹಾಕುವ ಅಧಿಕಾರ ನನಗಿಲ್ಲ. ಅದರ ಜೊತೆ ನಮ್ಮ ಇಲಾಖೆಯ ಕೆಲವರು ಅವನಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ.
ರಾಣಾ.....ನೀವೇನೂ ಚಿಂತಿಸಬೇಡಿ ಇದೆಲ್ಲ ಪೋಲಿಸರಿಂದ ಆಗುವ ಕೆಲಸವಲ್ಲ ಅದಕ್ಕೇನು ಮಾಡಬೇಕಿತ್ತೋ ಅದರ ವ್ಯವಸ್ಥೆ ನಾನಾಗಲೆ ಮಾಡಿದ್ದೀನಿ.....ಎಂದೇಳಿ ಸನ್ನೆ ಮಾಡಿದಾಗ ಆ ಐವರನ್ನೂ ರಾಣಾ ಅನುಚರರು ಅಲ್ಲಿಂದ ಎಳೆದೊಯ್ದರು.
ಆಚಾರ್ಯರು......ಏನದು ?
ವಿಕ್ರಂ ಸಿಂಗ್........ಉದಯಪುರದಿಂದ ಆಗಲೇ ಬಷೀರ್ ಖಾನ್ ತಂಡದ ಜೊತೆ ಬೆಂಗಳೂರಿಗೆ ಹೊರಟಿದ್ದಾನೆ ಅವನ ಜೊತೆಗೆ......
ಆಚಾರ್ಯರು......ಪೂರ್ತಿ ಹೇಳು ಅವನ ಜೊತೆಯಲ್ಯಾರು ರಾಣಾ ತಮ್ಮನಾ ?
ರಾಣಾ.....ಹೌದು ಗುರುಗಳೇ ನಾನು ಫೋನ್ ಮಾಡಿದ ತಕ್ಷಣವೇ ಮೊದಲವನೇ ಹೊರಟಿದ್ದು.
ಆಚಾರ್ಯರು......ಸರಿಹೋಯ್ತು ಯಮನ ಅತ್ಯಾಪ್ತರೇ ಅಲ್ಲಿಂದ ಬೆಂಗಳೂರಿನತ್ತ ಬರುತ್ತಿದ್ದಾರೆ ಅಂತಾಯ್ತು. ನೀವೆಲ್ಲರೂ ಯಾವುದೇ ಚಿಂತಿಯಿಲ್ಲದೆ ನಿಶ್ಚಿಂತರಾಗಿರಿ ಯುವರಾಣಿಯನ್ನು ಅಪಹರಿಸಲು ಹೊಂಚು ಹಾಕಿರುವ ವ್ಯಕ್ತಿ ಇನ್ನು ಬದುಕಿರುವುದಿಲ್ಲ ಎಲ್ಲಾ ಯಮನ ಅತ್ಯಾಪ್ತ ಬಂಧುಗಳೇ ಅವನನ್ನು ಬೇಟೆಯಾಡಲು ಬರುತ್ತಿದ್ದಾರಲ್ಲ. ಯಮನ ಪರಮ ಶಿಷ್ಯ ಇಲ್ಲೇ ಇದ್ದಾನೆ ಕೊನೆಯವನೆಲ್ಲಿ ರಾಣಾ ?
ರಾಣಾ....ಅವನನ್ನು ದಿಲೇರ್ ಸಿಂಗ್ ಬಳಿ ಕಳುಹಿಸಿದ್ದೀನಿ ಮಾತೆ ಅವನಿಗೊಪ್ಪಿಸಿರುವ ಕೆಲಸಕ್ಕೆ ಸಹಾಯವಾಗಲಿ ಅಂತ.
ಆಚಾರ್ಯರು.....ನೋಡಿದ್ಯಾ ನಿಧಿ ನಿನ್ನೊಂದು ಕರೆಯಿಂದ ಇಷ್ಟು ವರ್ಷಗಳು ವನವಾಸದಲ್ಲಿದ್ದ ಯಮದೂತರೆಲ್ಲರನ್ನು ಬಡಿದೆಬ್ಬಿಸಿದೆ. ಈಗವರು ರಕ್ತದ ಕೋಡಿ ಹರಿಸಲ್ಲ ಸಮುದ್ರವನ್ನೇ ಸೃಷ್ಟಿಸುತ್ತಾರೆ.
ಹರೀಶ......ಗುರುಗಳೇ ನಿಧಿ ಏನಾದರೂ ತಪ್ಪು ಮಾಡಿದ್ದರೆ ನೀವು ದಯಮಾಡಿ ಅವಳನ್ನು ಕ್ಷಮಿಸಿ ನಾನವಳ ಪರವಾಗಿ ಕ್ಷಮೆ ಕೇಳ್ತಿನಿ.
ಆಚಾರ್ಯರು....ಛೇ...ಛೇ...ನಿಧಿ ತಪ್ಪು ಮಾಡಿದ್ದರೆ ತಾನೇ ನಾನು ಕ್ಷಮಿಸುವುದು ನಾನವಳಿಗೆ ಹೇಳಿದ ಅರ್ಥವೇ ಬೇರೆ ಹರೀಶ. ಕೆಲವು ವರ್ಷಗಳಿಂದ ಮರೆಯಾಗಿದ್ದ ಯಮಧೂತರೆಲ್ಲರೂ ಇವಳ ಫೋನ್ ಕರೆಯಿಂದ ಮೈಕೊಡವಿ ಎದ್ದು ನಿಂತಿದ್ದಾರೆ ಅಂತ ಹೇಳಿದೆ. ನಿಧಿ ಯಾವುದೇ ತಪ್ಪನ್ನೂ ಮಾಡಿಲ್ಲ ಹರೀಶ ಪ್ರೀತಿಯೇ ತುಂಬಿರುವಂತ ನಿಮ್ಮೀ ಮನೆ ಬಾಗಿಲಿಗೆ ವಿರೋಧಿಗಳು ಬಂದು ನಿಂತ ಸಮಯದಲ್ಲಿ ಅವರನ್ನೆದುರಿಸಿ ಹುಟ್ಟಡಗಿಸುವಂತೆ ಮಾಡಲು ರಾಣಾನಂತ ವೀರರ ಅಗತ್ಯವಿದೆ. ಸುಮೇರ್....ವಿಕ್ರಂ ಮತ್ತು ದಿಲೇರ್ ಮೂವರು ಕೂಡ ಸಾಹಸಿ ಯೋಧರೇ ಎಂತಹ ಪರಿಸ್ಥಿತಿಯನ್ನಾದರೂ ಏದುರಿಸಲು ನಿಲ್ಲುವ ಛಾತಿಯಿದೆ. ಆದರೆ ರಾಣಾ ಮತ್ತಿವನ ಸೈನ್ಯದ ವಿಷಯವೇ ಬೇರೆ ಈ ಮೂವರನ್ನೂ ಬೆಳೆದು ನಿಂತಿರುವರುವವರು ಅದನ್ನು ಇವರೂ ಸಹ ಒಪ್ಪಿಕೊಳ್ತಾರೆ. ಏನು ವಿಕ್ರಂ ಸಿಂಗ್ ನಾನು ಹೇಳಿದ್ರಲ್ಲಿ ತಪ್ಪಿದೆಯಾ ?
ವಿಕ್ರಂ ಸಿಂಗ್.....ಇಲ್ಲ ಗುರುಗಳೇ ರಾಣಾನ ಬಗ್ಗೆ ನೀವು ಹೇಳಿದ್ದೆಲ್ಲ ಸತ್ಯವೇ. ಈಗ ಏದುರಾಗಿರುವ ಸಮಸ್ಯೆ ನಿಭಾಯಿಸಲು ನಮಗೆ ಒಂದು ದಿನವಾದರೂ ಬೇಕಾಗುತ್ತಿತ್ತು ಆದರಿವನು ಕೇವಲ ಒಂದು ಘಂಟೆಯಲ್ಲೇ ಎಲ್ಲಾ ತೀರ್ಮಾನಗಳನ್ನೂ ಮಾಡಿಬಿಟ್ಟ ಅದಕ್ಕಾಗೇ ನಮಗೂ ರಾಣಾ ಜೊತೆ ಕೆಲಸ ಮಾಡಲು ಸಂತೋಷವಾಗುತ್ತೆ.
ಬಹಳ ಅಧ್ಭತವಾದ ಕತಾ ಹಂದರ
ReplyDelete