Total Pageviews

Saturday, 1 March 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 294

ಸಂಜೆ ಮನೆಗೆ ಬರುತ್ತಿದ್ದ ಅತಿಥಿಗಳಿಗೆ ಪ್ರಸಾದ ವಿನಿಯೋಗಿಸಿದ ನಂತರ ಗಣೇಶನ ಕಥಾವಾಚನ ಮಾಡಿ ಪೂಜೆ ಮಹಾಮಂಗಳಾರತಿ ನೆರವೇರಿಸಿಲಾಯಿತು. ನಿಶಾ ಅಮ್ಮನ ಮಡಿಲಲ್ಲಿ ಸದ್ದಿಲ್ಲದೆ ಕುಳಿತು ಎಲ್ಲವನ್ನೂ ನೋಡುತ್ತಿದ್ದು ಗಣೇಶನ ಮೂರ್ತಿಯನ್ನು ಅಪ್ಪ ಮತ್ತು ರವಿ ಮಾಮ ಸಡಿಲಿಸಿ ಎತ್ತಿ ಕೆಳಗಿಟ್ಟಾಗ......

ನಿಶಾ......ಪಪ್ಪ ಮಾಮ ಗಂಪತಿ ಮಾಮಿ ತೆಗೀತು ಮಮ್ಮ.

ನೀತು.....ಈಗ ಗಣಪತಿ ಮಾಮೀನ ತಗೊಂಡೋಗಿ ಜಾನಿ ಅಂಕಲ್ ತೋಟದಲ್ಲಿ ನೀರಿನೊಳಗೆ ಹಾಕಬೇಕು ಕಂದ.

ನಿಶಾ......ಯಾಕೆ ಮಮ್ಮ ?

ನೀತು ಮಗಳಿಗೆ ಸುಲಭವಾಗಿ ಅರ್ಥವಾಗುವಂತೆ ಪೂಜೆ ಪದ್ದತಿಗಳ ಬಗ್ಗೆ ಹೇಳುತ್ತಿದ್ದಳು. ಮನೆಯ ಗಂಡಸರೆಲ್ಲರೂ ಗಣೇಶನ ಮೂರ್ತಿ ತೆಗೆದುಕೊಂಡು ಜಾನಿ ತೋಟದ ಕಡೆ ಹೊರಟಾಗ ಮಕ್ಕಳು ಕೂಡ ಅವರೊಟ್ಟಿಗೆ ಹೊರಟರು. ನಿಶಾ ಅಣ್ಣಂದಿರ ಜೊತೆ ಕುಣಿದಾಡುತ್ತ ಗಣಪತಿ ಬಪ್ಪ ಮೊರೆಯಾ ಎಂದು ಕೂಗುತ್ತ ಹೋದಳು.

ವರ್ಧನ್......ಅಕ್ಕ ನಾನೀಗಲೇ ಹೊರಡಬೇಕಾಗಿದೆ ಪೂರ್ವದಲ್ಲಿನ ರಾಜ್ಯಗಳಲ್ಲೇನೋ ಗಲಭೆ ಪ್ರಾರಂಭವಾಗಿದೆಯಂತೆ ನಾನೇ ಕೇಂದ್ರ ಗೃಹ ಸಚಿವನಾಗಿರುವಾಗ ಹೋಗಲೇಬೇಕು.

ರೇವತಿ......ಆಯ್ತಪ್ಪ ನಿನ್ನ ಕರ್ತವ್ಯ ಮುಖ್ಯವಾದದ್ದು ಮೊದಲು ಊಟ ಮಾಡು ಹಬ್ಬದ ದಿನ ಮನೆಯಿಂದ ಖಾಲಿ ಹೊಟ್ಟೆಯಲ್ಲಿ ಹೋಗಬಾರದು ಸುಮ ಊಟ ಬಡಿಸಮ್ಮ.

ಸುಮಾಳಿಗಿಂತ ಮುಂಚೆ ಸವಿತಾ ತಾನೇ ಊಟದ ತಟ್ಟೆ ರೆಡಿ ಮಾಡಿ ಡೈನಿಂಗ್ ಟೇಬಲ್ಲಿಗೆ ತಂದಿಟ್ಟು ವರ್ಧನ್ ಊಟ ಮುಗಿಸುವ ತನಕ ಅಲ್ಲಿಯೇ ಉಳಿದಳು. ಕೈತೊಳೆದು ಹಿಂದಿರುಗುವಾಗ ಕಾಲು ಜಾರಿ ಬೀಳಲಿದ್ದ ಸವಿತಾಳನ್ನು ಹಿಡಿದು ಮೇಲೆತ್ತಿದಾಗ ಅವಳು ಕೆಲವು ಕ್ಷಣ ವರ್ಧನ್ ಬಾಹು ಬಂಧನದಲ್ಲಿರಬೇಕಾಗಿ ಬಂದಿತ್ತು. ಜೀವನದಲ್ಲಿ ಇಲ್ಲಿವರೆಗೂ ಯಾವುದೇ ಹೆಣ್ಣಿನ ಮೋಹದ ಬಲೆಯಲ್ಲಿ ಬೀಳದಿದ್ದ ವರ್ಧನ್ ಹೃದಯ ಬಾಗಿಲನ್ನು ಮೊದಲ ಬಾರಿ ಸವಿತಾ ಬಡಿದಿದ್ದಳು. ವರ್ಧನ್ ವಿಚಲಿತಗೊಂಡಿದ್ದರೂ ತಕ್ಷಣವೇ ಸಂಭಾಳಿಸಿಕೊಳ್ಳುತ್ತ ಹೊರಗೆ ಬಂದಿದ್ದರೂ ಸವಿತಾ ಆತನ ಮನಮಂದಿರದಲ್ಲಿ ಅಳಿಯದ ಛಾಪನ್ನು ಮೂಡಿಸಿ ಬಿಟ್ಟಿದ್ದಳು. ಗಣಪತಿ ವಿಸರ್ಜನೆ ಮಾಡಿ ಎಲ್ಲಾ ಮನೆಗೆ ಹಿಂದಿರುಗಿದಾಗ ಅವರನ್ನೆಲ್ಲಾ ಮಾತನಾಡಿಸಿ ಮಕ್ಕಳನ್ನು ಮುದ್ದಾಡಿದ ವರ್ಧನ್ ತನ್ನ ದೇಶ ಸೇವೆಯ ಕರ್ತವ್ಯ ನಿರ್ವಹಣೆಗೆ ತನ್ನ ಕಾರ್ಯಸ್ಥಾನದತ್ತ ಪ್ರಯಾಣ ಬೆಳೆಸಿದನು.

ಶನಿವಾರ ಬೆಳಿಗ್ಗೆ ಮನೆಯವರನ್ನು ಆಶೀರ್ವಧಿಸಿ ಆಚಾರ್ಯರು ತಮ್ಮಿಬ್ಬರು ಶಿಷ್ಯರ ಜೊತೆ ಆಶ್ರಮಕ್ಕೆ ಹೊರಟರೆ ಅವರೊಟ್ಟಿಗೆ ರಾಣಾ....ವಿಕ್ರಂ ಸಿಂಗ್ ಎಲ್ಲರಿಂದ ಬೀಳ್ಗೊಂಡು ಹೊರಟರು. ಇಲ್ಲೇ ಉಳಿದಿದ್ದ ವೀರ್ ಸಿಂಗ್ ಮತ್ತು ಸುಮೇರ್ ವಿಷಯವಾಗಿ ನಿಧಿ ಮತ್ತು ಕುಟುಂಬದ ರಕ್ಷಣೆಗೆಂದು ಗುರುಗಳೇ ಇರುವಂತೇಳಿದ್ದಾರೆಂಬ ಕಾರಣವನ್ನು ನೀತು ಗಂಡನಿಗೆ ತಿಳಿಸಿದಳು.
* *
* *
ಶನಿವಾರ....
ಏದುರು ಮನೆ ರೂಂ......

ರಶ್ಮಿ.......ಲೇ ದೃಷ್ಟಿ ನನಗನ್ನಿಸೋ ಪ್ರಕಾರ ನಿನಿಗಿಂತ ಮುಂಚೆಯೇ ನಮಿತ ನಮ್ಮ ಮಾಲಿನೊಂದಿಗೆ ಡಿಂಗ್ ಡಾಂಗ್ ಆಡಿ ಬಿಟ್ಟಿದ್ದಾಳೆ.

ದೃಷ್ಟಿ ಅಚ್ಚರಿಗೊಳ್ಳುತ್ತ.....ಹೌದಾ ಅದೇಗೇ ಹೇಳ್ತೀಯಾ ?

ರಶ್ಮಿ......ಅವಳ ವರ್ತನೆ ನಡವಳಿಕೆ ಮತ್ತವಳ ಮುಖದಲ್ಲಿ ಹೊಳಪು ನೋಡಿದರೆ ಅನುಮಾನ ಬರ್ತಿದೆ ಅದಕ್ಕಿಂತ ಮುಖ್ಯವಾದದ್ದನ್ನು ನಾನು ನೋಡಿದೆ ಕಣೆ.

ದೃಷ್ಟಿ......ಏನೇ ಅದು ?

ರಶ್ಮಿ......ಮೊನ್ನೆ ಗಿರೀಶ ಅವಳ ಬ್ಯಾಕ್ ಇಂಜಿನ್ ಸವರುತ್ತಿದ್ದ ಅಲ್ಲಿ ಯಾರೂ ನೋಡ್ತಿಲ್ಲ ಅಂದ್ಕೊಂಡಿದ್ದ ಆದರೆ ನಾನು ನೋಡ್ಬಿಟ್ಟೆ.

ದೃಷ್ಟಿ.......ಲೇ ನೀನೇನೇ ಮಾಡ್ತಿದ್ದೀಯ ನಾನಿಲ್ಲಿ ಬೆರಳಾಡಿಸುತ್ತಲೇ ದಿನ ದೂಡ್ತಿದ್ದೀನಿ ಅಲ್ನೋಡಿದ್ರೆ ನಮಿತಾಳಿಗೂ ಗಿರೀಶ್ ಗೋಲ್ ಹೊಡೆದು ಬಿಟ್ಟಿದ್ದಾನೆ ನನ್ನ ಕಥೆ ಏನೀಗ ?

ರಶ್ಮಿ......ನಾನೂ ಟ್ರೈ ಮಾಡ್ತಿಲ್ವೇನೇ ಆದರೆ ಮನೆಯಲ್ಲಿಟ್ಟು ಜನ ಇರುವಾಗ ಏಕಾಂತಕ್ಕೂ ಟೈಂ ನಮಗೆಲ್ಲಿ ಸಿಗ್ತಿದೆ ನೀನೇ ಹೇಳು.

ದೃಷ್ಟಿ......ನನ್ನ ಅದೃಷ್ಟವೇ ಸರಿಯಿಲ್ಲ ಅನ್ನಿಸ್ತಿದೆ ಕಣೆ.

ಅಷ್ಟರಲ್ಲಿ ನಯನ ಬರುತ್ತ......ರಶ್ಮಿ ಅಕ್ಕ ನಡೀರಿ ನಿಮ್ಮನ್ನ ಆಂಟಿ ಕರಿತಿದ್ದಾರೆ ಬೇಗ ಬನ್ನಿ.

ಮೂವರು ಮನೆಯೊಳಗೆ ಬಂದಾಗ......

ರಜನಿ.......ರಶ್ಮಿ ನೀನೊಂದು ಕೆಲಸ ಮಾಡ್ಬೇಕಮ್ಮ ನಮ್ಮ ಮನೆ ಬೀರುವಿನಲ್ಲಿ xxx ಇಟ್ಟಿದ್ದೀನಿ ಅದನ್ನು ತೆಗೆದುಕೊಂಡು ಬಾರಮ್ಮ.

ರಶ್ಮಿ.....ಅಮ್ಮ ಅಲ್ಲಿಂದಲೇ ತಾನೇ ಬರ್ತಿದ್ದೀವಿ ನಯನ ಹತ್ತಿರವೇ ಹೇಳಿ ಕಳಿಸಿದ್ರೆ ಇವಳೇ ತಗೊಂಡು ಬರ್ತಿದ್ಳು.

ರಜನಿ....ಲೇ ಏದುರು ಮನೆಯಲ್ಲಲ್ಲ ಕಣೆ xxxx ಊರಿನ ಮನೆಯ ಬೀರುವಿನಲ್ಲಿದೆ ನಿಮ್ಮಪ್ಪನ ಡ್ರೈವರ್ ಬಂದಿದ್ದಾರೆ ಅವರ ಜೊತೆ ಹೋಗಿ ತಂದ್ಬಿಡು ಗೊತ್ತಾಗದಿದ್ರೆ ಅಲ್ಲಿಂದ ನಂಗೆ ಫೋನ್ ಮಾಡು.

ರಶ್ಮಿ ತಲೆಯೋಡಿಸುತ್ತ.....ಅಮ್ಮ ದೃಷ್ಟೀನೂ ನನ್ಜೊತೆ ಬರ್ತಾಳೆ ಮಮ್ಮ ನಮ್ಮಿಬ್ಬರ ಪ್ರೊಟೆಕ್ಷನ್ನಿಗೆ ಗಿರೀಶನನ್ನೂ ಕಳಿಸಿಕೊಡಿ.

ನೀತು ನಗುತ್ತ.......ಈಗಿನಿಂದಲೇ ಮೂವರು ಜೊತೆಗಿರಬೇಕಾ ? ಸರಿ ಹೋಗಿ ಬನ್ರಮ್ಮ ಇವತ್ತೇ ಬರ್ತೀರೋ ನಾಳೆ ಭಾನುವಾರವೋ.

ದೃಷ್ಟಿ......ನೋಡಣ ಅತ್ತೆ ಅಲ್ಲೋಗಿ ಡಿಸೈಡ್ ಮಾಡ್ತೀವಿ.

ಸುಮ......ಲೇ ನೀನೇನಷ್ಟು ದೊಡ್ಡವಾಗೋದ್ಯಾ.

ರಜನಿ......ಲೇ ಸುಮ್ನಿರು ಪಾಪ ಅವಳ ಮೇಲ್ಯಾಕೆ ರೇಗ್ತೀಯಾ ಸರಿ ಕಣಮ್ಮ ಇವತ್ತಲ್ಲೇ ಉಳಿದುಕೊಂಡು ನಾಳೆ ಆರಾಮವಾಗಿ ಬನ್ನಿ.

ದೃಷ್ಟಿ.....ಥಾಂಕ್ಯೂ ಆಂಟಿ ನಮ್ಮಮ್ಮನೇ ಸುಮ್ಮನೆ ರೇಗ್ತಿರ್ತಾರೆ.

ರಶ್ಮಿ.....ನಡಿ ದೃಷ್ಟಿ ಬಟ್ಟೆ ಪ್ಯಾಕ್ ಮಾಡಿಕೊಳ್ಬೇಕು.

ನಿಧಿ......ಹೋಗಪ್ಪ ಸೆಕ್ಯೂರಿಟಿ ಗಾರ್ಡ್ ನೀನೂ ಎರಡು ಜೊತೆ ಬಟ್ಟೆ ಹಾಕಿಕೊಂಡು ರೆಡಿಯಾಗು ಇಬ್ಬರೂ ಮೇಡಂಗಳ ಸೆಕ್ಯೂರಿಟಿ ಹೊಣೆ ನಿನ್ನದೇ ಅಲ್ವಾ.......ಎಂದಾಗ ಹೆಂಗಸರು ನಗುತ್ತಿದ್ದು ಗಿರೀಶ ಅಲ್ಲಿಂದ ಸೈಲೆಂಟಾಗಿ ಕಾಲ್ಕಿತ್ತನು.

ನಿಧಿ......ಅಮ್ಮ ನಾನು ಚಿನ್ನಿ ನಿಕ್ಕಿ ನನ್ನ ಫ್ರೆಂಡ್ಸ್ ಮನೆ ಕಡೆ ಹೋಗಿ ಬರ್ತೀವಿ.

ನೀತು.....ಆಯ್ತಮ್ಮ ಸುಮೇರ್ ನಿನ್ನ ಜೊತೆಗಿರ್ತಾನೆ ಅವನೇ ಗಾಡಿ ಡ್ರೈವ್ ಮಾಡ್ತಾನೆ ನೀವು ಹಿಂದೆ ಕೂತಿರಿ.

ನಿಶಾ.......ಮಮ್ಮ ನಂಗಿ ದಾಚಿ ಬೇಕು ಮಮ್ಮ ಅಕ್ಕಗೆ ಹೇಳು.

ನೀತು.....ನಿಧಿ ಇವಳಿಗದೇನು ಬೇಕೊ ತೆಗೆದುಕೊಡಮ್ಮ ಹೋಗು ಅಕ್ಕಂಗೆ ಹೇಳಿದ್ದೀನಿ ತಂಟೆ ಮಾಡದೆ ಹೋಗಿ ಬರಬೇಕು.

ನಿಶಾ.....ಆತು ಮಮ್ಮ ನಾನಿ ಗುಡ್ ಗಲ್.

ಏದುರು ಮನೆಯಲ್ಲಿ.....

ರಶ್ಮಿ......ಇವತ್ತು ರಾತ್ರಿ ನಿನ್ನ ಸೀಲ್ ಹರಿಯೋದು ಗ್ಯಾರೆಂಟಿ ಕಣೆ.

ದೃಷ್ಟಿ.......ಸೂಪರ್ ಕಣೆ ಸಮಯಕ್ಕೆ ಸರಿಯಾಗಿ ನಿನ್ನ ತಲೆ ಓಡಿತು.

ರಶ್ಮಿ.....ನಾನಲ್ಲಿ ನಿಮ್ಮಿಬ್ಬರನ್ನೇ ಬಿಟ್ಟು ನನ್ನ ಫ್ರೆಂಡ್ ಮನೆಗೋಗ್ತೀನಿ ನೀವಿಬ್ರೂ ಚೆನ್ನಾಗಿ ಏಂಜಾಯ್ ಮಾಡಿ ಇಂತಾ ಛಾನ್ಸ್ ಮತ್ತೊಮ್ಮೆ ಸಿಗುತ್ತೋ ಸಿಗಲ್ವೋ ಗೊತ್ತಿಲ್ಲ.

ದೃಷ್ಟಿ.......ಇಂತಾ ಛಾನ್ಸಿಗೋಸ್ಕರ ನಾನೆಷ್ಟು ದಿನಗಳಿಂದ ಕಾಯ್ತಿದ್ದೆ ಬಿಡ್ತೀನಾ ಆದರೆ ನೀನ್ಯಾಕೇ ಫ್ರೆಂಡ್ ಮನೆಗೆ ಹೋಗ್ಬೇಕು.

ರಶ್ಮಿ......ಇದು ನಿನಗೆ ಮೊದಲನೇ ಸಲ ಅದಕ್ಕೆ ನೀವಿಬ್ರು ಮಾತ್ರವೇ ಇದ್ದರೆ ಸರಿ ನನ್ನ ಬಗ್ಗೆ ತಲೆ ಕೆಡಿಸಿಕೊಳ್ಬೇಡ ಏಂಜಾಯ್ ಮಾಡು.

ದೃಷ್ಟಿ.....ಒಕೆ ನಾನು ಫ್ರೆಶಾಗಿ ಬರ್ತೀನಿ.....ಎಂದೇಳಿ ಬಾತ್ರೂಮಿಗೆ ಹೋದರೆ ರಶ್ಮಿ ರಾತ್ರಿಯ ಬಗ್ಗೆ ಸ್ಕೆಚ್ ಹಾಕತೊಡಗಿದಳು.

ದೀಪಕ್—ವಿಜಯ್ ಇಬ್ಬರ ಮನೆ ರಾತ್ರಿ ಖಾಲಿಯಿರಲ್ಲ ರಾಜೇಶನ ಮನೇಲಿ ಅವನೊಬ್ಬನೇ ಇರೋದು ಎಸ್ ಅವನೇ ಸರಿ ಅವನ್ಜೊತೆ ರಾತ್ರಿ ರಂಗೀನ್ ಮಾಡಿಕೊಳ್ಳೋಣ. ರಶ್ಮಿ ತನ್ನ ಮೊಬೈಲಿನಲ್ಲಿರುವ ಮತ್ತೊಂದು ಸಿಮ್ ಆನ್ ಮಾಡಿ ರಾಜೇಶನಿಗೆ ಫೋನ್ ಮಾಡಿ ಸಂಜೆ ಬಂದು ರಾತ್ರಿ ಅವನ ಜೊತೆಯಲ್ಲೇ ಕಳೆಯುವುದಾಗಿ ಹೇಳಿದ ತಕ್ಷಣವೇ ಆತ ಕುಣಿದಾಡಿ ಬಿಟ್ಟನು. ಮೂವರೂ ಮಧ್ಯಾಹ್ನ ಊಟ ಮುಗಿಸಿಕೊಂಡು ಹೊರಟರೆ ದೃಷ್ಟಿಗಂತೂ ಇವತ್ತು ಸೀಲ್ ಹರಿಯುತ್ತೆ ಎಂಬುದನ್ನು ನೆನೆದು ಫುಲ್ ಏಕ್ಸೈಟಾಗಿ ಹೋಗಿದ್ದಳು.

ಸುರೇಶ ತಂಗಿಯನ್ನೆತ್ತಿ ತಂದು ಅಮ್ಮನ ಮಡಿಲಲ್ಲಿ ಕೂರಿಸುತ್ತ....

ಸುರೇಶ......ಅಮ್ಮ ಹಿಡ್ಕೊಂಡು ಕೂರಿಸು ನಿನ್ನ ಚಿಲ್ಟಾರೀನ ನನಗೆ ಬರೆಯುವುದಕ್ಕೂ ಬಿಡ್ತಿಲ್ಲ.

ನೀತು......ಯಾಕಮ್ಮ ಕಂದ ಅಣ್ಣಂಗೆ ಓದಕ್ಕೆ ಬಿಡ್ತಿಲ್ಲ.

ನಿಶಾ.......ಇಲ್ಲ ಮಮ್ಮ ನಾನಿ ಏನ್ ಮಾಡಿಲ್ಲ ಅಣ್ಣ ಸುಮ್ಮೆ ಹೇಳಿ ಮಮ್ಮ ನಾನಿ ಮಾಡಿಲ್ಲ.

ನೀತು.......ನೀನು ಪಪ್ಪನ ಜೊತೆ ಆಟವಾಡ್ತಿರು ಅಣ್ಣ ಓದಿಕೊಂಡು ಬಂದು ನಿನ್ನ ಆಟ ಆಡಿಸ್ತಾನೆ ಆಯ್ತ.

ನಿಶಾ......ಆತು ಮಮ್ಮ ಅಣ್ಣ ಬೇಗ ಬಾ ನಾನಿ ಉಲಾಲೆ ಆಡನ.

ಸುರೇಶ.......ಆಯ್ತು ಚಿನ್ನಿ ಮರಿ ಓಡ್ಕೊಂಡ್ ಬೇಗ ಬರ್ತೀನಿ.

ಹರೀಶ ಮಗಳನ್ನೆತ್ತಿಕೊಂಡು.....ನನ್ನ ಕಂದ ಉಯ್ಯಾಲೆಯಲ್ಲಿ ಆಟ ಆಡ್ಬೇಕ ನಡಿ ಪಪ್ಪ ನಿಂಗೆ ಉಯ್ಯಾಲೆ ಆಡಿಸುತ್ತೆ......ಎಂದೇಳಿ ಅಪ್ಪ ಮಗಳು ಪಕ್ಕದ ಸೈಟಿನತ್ತ ತೆರಳಿದರು.

ಶೀಲಾ.......ನಿಧಿ ನಿನಗೆ ಮಿಡ್ ಟರ್ಮ್ ಏಕ್ಸಾಂ ಅನ್ನೋದು ಇರಲ್ವ.

ನಿಧಿ.......ಇರುತ್ತಂತೆ ಆಂಟಿ ಆದರೆ ದಸರಾ ಮುಗಿದ ನಂತರ ಈಗಿಲ್ಲ. ಈಗೇನಿದ್ದರೂ ಶಾಲೆಯಿಂದ ಪಿಯುವರೆಗಿನ ಕ್ಲಾಸುಗಳಿಗೆ ಮಾತ್ರವೇ ನಡೆಯುತ್ತೆ ನಮಗಿಲ್ಲ. ಅಮ್ಮ ಆವತ್ತು ಆಂಟಿ ಅತ್ತೆಯನ್ನು ನಾನು ಅರಮನೆಯ ನೆಲಮಾಳಿಗೆಗೆ ಕರೆದುಕೊಂಡು ಹೋಗಿದ್ದೆ ಆದರಲ್ಲಿ ತಿಜೋರಿಯೊಳಗಿದ್ದ ಹಣದ ರಾಶಿ ಗುಡ್ಡಗಳೇ ಮಾಯವಾಗಿತ್ತು.

ಶೀಲಾ.....ಹೌದು ಕಣೆ ನಿಧಿ ಅಲ್ಲಿಗೆ ಕರೆದೊಯ್ಯುವಾಗಲೇ ಹೇಳ್ತಿದ್ಲು ತಿಜೋರಿಯಲ್ಲಿ ಜೋಡಿಸಿರುವಷ್ಟು ಹಣದ ರಾಶಿಯನ್ನು ನೀವೆಲ್ಲೂ ನೋಡಿರಲು ಸಾಧ್ಯವಿಲ್ಲ ಅಂತ ಆದರಲ್ಲೇನೂ ಇರಲಿಲ್ಲ.

ನೀತು......ಅದನ್ನೆಲ್ಲಾ ವರ್ಧನ್ ಮೂಲಕ ಕಳುಹಿಸಿ ಕೊಟ್ಟು ದೆಹಲಿ ರಿಸರ್ವ್ ಬ್ಯಾಂಕಿನ ನನ್ನ ವಿಶೇಷ ಅಕೌಂಟಿನಲ್ಲಿ ಜಮೆಯಾಗಿದೆ. ಈಗ ಅದೇ ಹಣವನ್ನು ಮೂರು ಕಡೆಯೂ ಕಟ್ಟುತ್ತಿರುವ ಸರಸ್ವತಿ ವಿದ್ಯಾಲಯದ ಕಟ್ಟಡಗಳಿಗೆ ಬಳಕೆ ಮಾಡಿಕೊಳ್ಳೋದು. ಅಲ್ಲೆಷ್ಟು ಹಣವಿತ್ತೆಂದು ಗೊತ್ತ ?

ನಿಧಿ......ನನಗೇನು ಗೊತ್ತಮ್ಮ ಆದರೆ ನನಗಿಂತಲೂ ಎತ್ತರಕ್ಕೆ ಹಣದ ಬಂಡಲ್ಲುಗಳನ್ನು ಜೋಡಿಸಿದ್ದನ್ನು ನೋಡಿದೆನಲ್ಲ.

ನೀತು.....ನಾಲ್ಕುವರೆ ಲಕ್ಷ ಕೋಟಿಗಳು.

ರಜನಿ.....ಏನಂದ್ಯೇ ನಾಲ್ಕುವರೆ ಲಕ್ಷ ಕೋಟಿಗಳಾ ? ಅಷ್ಟೊಂದು ಹಣವಿತ್ತಾ ಅದುವೇ ಕ್ಯಾಶ್ ರೂಪದಲ್ಲಿ.

ಪಾವನಾ......ಅಕ್ಕ ಅದಕ್ಕಿಂತಲೂ ಜಾಸ್ತಿ ಹಣ ಕಂಪನಿಯ ಎಲ್ಲಾ ಬ್ಯಾಂಕ್ ಅಕೌಂಟುಗಳನ್ನು ಸೇರಿಸಿದರೆ ಅವುಗಳಲ್ಲಿದೆ.

ಪ್ರೀತಿ.....ನಾಲ್ಕುವರೆ ಕೋಟಿ ಅಂದರೇನು ಕಡಿಮೆ ಮೊತ್ತವ ಪಾವನ ನಮ್ಮ ರಾಜ್ಯದ ಬಜೆಟ್ಟಿಗಿಂತಲೂ ಜಾಸ್ತಿ ಇದಕ್ಕಿಂತಲೂ ಜಾಸ್ತಿ ಹಣ ಕಂಪನಿಯ ಅಕೌಂಟಿನಲ್ಲಿ ಇದೆಯಾ ?

ನೀತು.......ಏಳು ಲಕ್ಷ ಕೋಟಿಗೂ ಅಧಿಕ ಮೊತ್ತವಿದೆ ನಾನು ಈಗ ಹೇಳುತ್ತಿರುವುದು ಲಿಕ್ವಿಡಿಟಿ ಅಮೌಂಟ್ ಲೆಕ್ಕವಷ್ಟೆ ಇನ್ನೂ ಯಾವ ಸ್ಥಿರಾಸ್ತಿಗಳ ಲೆಕ್ಕ ಹೇಳಿಲ್ಲ.

ಅನುಷ......ಅಂದರೀಗ ಅಕ್ಕ ಅತ್ಯಂತ ಸಿರಿವಂತರು ಅಂದಂಗಾಯ್ತು ಅವರ ಅಕೌಂಟಿನಲ್ಲಿ ತಾನೇ ನಾಲ್ಕುವರೆ ಲಕ್ಷ ಕೋಟಿಗಳಿರೋದು.

ಸುಕನ್ಯಾ.......ಇದರ ಜೊತೆ ಪಾಪ ನಿಧಿ ರಾಜಕುಮಾರಿ ಆಗಿದ್ದರೂ ಅವಳಿಗೆ ಕಂಪನಿ ಅಕೌಂಟಿನಿಂದ ಒಂದು ರುಪಾಯಿ ಹಣ ತೆಗೆಯಲು ಆಗದಂತೆ ಮಾಡಿಬಿಟ್ಟಿದ್ದಾರೆ.

ನೀತು......ಈ ಹಣಕ್ಕೆ ನಾನು ಕೇವಲ ಕಾವಲುಗಾರ್ತಿ ಅಷ್ಟೆ ಇದರ ಮೇಲೆ ನನಗ್ಯಾವುದೇ ಹಕ್ಕೂ ಇರುವುದಿಲ್ಲ. ಇದೆಲ್ಲವೂ ನಿಧಿ ಮತ್ತು ನಿಶಾ ಇಬ್ಬರಿಗೂ ಸೇರಿದ್ದು ಇವರಿಬ್ಬರಿಗೂ 25 ವರ್ಷದವರಾದಾಗ ಅವರವರ ವಿರಾಸತ್ತನ್ನು ಅವರಿಗೆ ಒಪ್ಪಿಸುವುದು ನನ್ನ ಕರ್ತವ್ಯ.

ನಿಧಿ......ಅಮ್ಮ ನನ್ನದು ನಿಮ್ಮದು ಒಂದೇ ಬ್ಲಡ್ ಗ್ರೂಪ್ ಚಿನ್ನಿದೂ ಅಪ್ಪನದ್ದು ಒಂದೇ ಗ್ರೂಪ್ ಅಲ್ವಾ ಅಮ್ಮ.

ನೀತು......ಹೌದು ಯಾಕೀಗ ಈ ಪ್ರಶ್ನೆ ?

ನಿಧಿ.....ಹೇಳ್ತೀನಿ ತಾಳಿ. ಅಕಸ್ಮಾತ್ ನನಗೆ ಅಪಘಾತವಾಯಿತೆಂದು ಊಹಿಸಿಕೊಳ್ಳಿ ಏನೂ ಹೇಳ್ಬೇಡಿ ಸುಮ್ಮನೆ ಊಹೆ ಮಾಡಿಕೊಂಡಿರಿ. ಆ ಅಪಘಾತದಲ್ಲಿ ನನ್ನೆರಡೂ ಕಿಡ್ನಿಗಳೂ ಡ್ಯಾಮೇಜಾಗಿ ಹೋಗಿದೆ ನಾನು ಬದುಕಬೇಕಿದ್ದರೆ ನೀವು ನನಗೊಂದು ಕಿಡ್ನಿ ಕೊಡಬೇಕಾಗಿದೆ. ಅಂತಹ ಸಮಯದಲ್ಲಿ ಅಮ್ಮ ನೀವು ನನಗೆ ಕಿಡ್ನಿ ದಾನ ಮಾಡಿ ನನ್ನ ಪ್ರಾಣ ಉಳಿಸುತ್ತೀರಾ ?

ನಿಧಿ ಇದನ್ನು ಹೇಳುವುದಕ್ಕೂ ಮುಂಚೆಯೇ ಮನೆಯ ಗಂಡೆಸರೆಲ್ಲಾ ಬಂದು ಲಿವಿಂಗ್ ಹಾಲಿನಲ್ಲಿ ಸೇರಿಕೊಂಡು ಇಬ್ಬರ ನಡುವಿನ ಮಾತು ಕೇಳುತ್ತ ಕುಳಿತರು.

ನೀತು.......ಇದೆಂತಾ ಪ್ರಶ್ನೆಯೇ ಅಮ್ಮನಾಗಿ ಮಗಳ ಪ್ರಾಣವನ್ನು ಉಳಿಸಲು ಹಿಂದೆ ಮುಂದೆ ಯೋಚಿಸ್ತೀನಾ ನನ್ನೆರಡೂ ಕಿಡ್ನಿಗಳನ್ನು ಕೊಡಬೇಕಾಗಿದ್ದರೂ ಕೊಡ್ತೀನಿ.

ನಿಧಿ.....ಯಾಕೆ ?

ನೀತು......ನಿನಗೇನಾಗಿದೆಯೇ ? ಯಾವುದಾದ್ರೂ ನಶೆ ಮಾಡಿದ್ಯಾ ಹೇಗೆ ? ಏನೇನೋ ಕೇಳ್ತಿದ್ದೀಯಲ್ಲ.

ನಿಧಿ.....ನೀವು ನನ್ನ ಪ್ರಶ್ನೆಗೆ ಉತ್ತರಿಸಿ ಅಮ್ಮ.

ನೀತು......ನೀನು ನನ್ನ ಮಗಳು ಕಣೆ ತಾಯಿಯಾದವಳು ಮಗಳ ಸಂತೋಷ....ಆರೋಗ್ಯಕ್ಕೋಸ್ಕರ ಏನನ್ನಾದರೂ ತ್ಯಾಗ ಮಾಡಲು ಸದಾ ಸಿದ್ದಳಿರುತ್ತಾಳೆ.

ನಿಧಿ......ನೀನ್ಯಾಕಮ್ಮ ತ್ಯಾಗ ಮಾಡ್ಬೇಕು ಕೆಲವು ತಿಂಗಳಿನ ಮುಂಚೆ ನಾನ್ಯಾರೆಂಬುದೂ ನಿಮಗೆ ಗೊತ್ತಿರಲಿಲ್ಲ ಆದರೂ ನೀವ್ಯಾಕೆ ನನಗೆ ಕಿಡ್ನಿ ದಾನ ಮಾಡ್ತೀರಾ ?

ಹರೀಶನೂ ಕಿರಿ ಮಗಳನ್ನೆತ್ತಿಕೊಂಡು ಬಾಗಿಲ ಬಳಿ ನಿಂತು ಅಮ್ಮ ಮಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದು......ಇವತ್ತೇನಾಯ್ತಮ್ಮ ನಿಧಿ ಏನೇನೋ ಮಾತಾಡ್ತಿದ್ದೀಯಲ್ಲಮ್ಮ ?

ನಿಧಿ......ಅಪ್ಪ ನೀವು ಮಧ್ಯ ಬರಬೇಡಿ ಇದು ನನ್ನ ಅಮ್ಮನ ಮಧ್ಯೆ ಮಾತ್ರ ನಡೆಯುವ ಮಾತುಕತೆ ಹೇಳಿ ಅಮ್ಮ.

ನೀತು ಮೌನವಾಗಿ ಮಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರೆ ನಿಧಿ ತಾನೇ ಮುಂದುವರಿಸುತ್ತ.......ನೀವು ಹೇಳಲ್ಲ ಬಿಡಿ ಪರವಾಗಿಲ್ಲ ನಾನೇ ಹೇಳ್ತೀನಿ. ಯಾಕೆ ಗೊತ್ತ ? ನಾನು ಕೇವಲ ನಾಮಕಾವಸ್ಥೆಗೆ ಈ ಮನೆ ಮಗಳಾಗಿ ನಿಮ್ಮ ಹಿರಿಮಗಳಾಗಿ ಬಂದವಳಲ್ಲ. ಅಮ್ಮ ನಿಮ್ಮ ನರನಾಡಿಗಳಲ್ಲಿ ರಕ್ತದ ಕಣಕಣದಲ್ಲೂ ಹೃದಯ ಮನಸ್ಸಿನಲ್ಲಿ ಸಂಪೂರ್ಣ ನಾನು ನಿಮ್ಮ ಹಿರಿ ಮಗಳಾಗಿ ಬೆರತು ಹೋಗಿದ್ದೀನಿ. ಅದಕ್ಕಾಗಿ ನೀವು ನನಗೋಸ್ಕರ ಯಾವುದೇ ತ್ಯಾಗ ಮಾಡುವುದಕ್ಕೂ ಮುನ್ನ ಒಮ್ಮೆಯೂ ಯೋಚಿಸುವುದಿಲ್ಲ. 

ಅದರ ಉದಾಹರಣೆಯೂ ಅರಮನೆಯಲ್ಲಿನ ಗುಂಡಿನ ದಾಳಿಯ ಸಮಯದಲ್ಲಿ ನೋಡಿದ್ದಾರೆ. ನಾನಿಲ್ಲಿಗೆ ಬಂದಾಗಿನಿಂದಲೂ ಪ್ರತೀ ತಿಂಗಳೂ ಅಪ್ಪ ನನಗೆ ಖರ್ಚಿಗೆ ಅಂತ ಐದು ಸಾವಿರ ಕೊಡ್ತಾರೆ ನಾನದನ್ನು ನನ್ನ ಹಕ್ಕೆಂದು ಅಪ್ಪನಿಗೆ ಬೇಡವೆನ್ನದೆ ಪಡೆದುಕೊಳ್ತೀನಿ. ಅಪ್ಪನಂತೆ ಅಶೋಕ ಅಂಕಲ್..ರವಿ ಮಾವ...ವಿಕ್ರಂ...ರೇವಂತ್ ಮಾವ....ಚಿಕ್ಕಪ್ಪ...ಸುಭಾಷ್ ಅಣ್ಣನೂ ನನಗೆ ಪ್ರತೀ ತಿಂಗಳೂ ಹಣ ಕೊಡುತ್ತಿದ್ದಾರೆ. ನಾನ್ಯಾರಿಗೂ ಬೇಡ ಅನ್ನದೇ ಹಣ ಪಡೆದುಕೊಳ್ತಿದ್ದೀನಿ ಯಾಕೇಳಿ ಅವರೆಲ್ಲರೂ ನನಗೆ ಪ್ರೀತಿಯಿಂದ ಕೇಡುತ್ತಾರೆ ನನ್ನ ಮೇಲಿರುವ ಪ್ರೀತಿಗೋಸ್ಕರ. ಈ ಮನೆಯವರ ಮೇಲೆ ಇಲ್ಲಿನ ಪ್ರತೀ ವಸ್ತುವಿನ ಮೇಲೂ ನಾನು ಈ ಮನೆಯ ಹಿರಿಮಗಳಾಗಿ ಹಕ್ಕಿರುವಾಗ ಅರಮನೆ ಅಥವ ಸಂಸ್ಥಾನದ ವಿಷಯ ಬಂದಾಗ ಮಾತ್ರ ಅದು ಕೇವಲ ನನಗೂ ನಿಶಾಳಿಗಷ್ಟೇ ಸಂಬಂಧಿಸಿದ್ದೆಂದು ನೀವ್ಯಾಕೆ ಹೇಳ್ತೀರಾ ? 

ಸಂಸ್ಥಾನದ ಹಣದಲ್ಲಿ ನನ್ನ ತಮ್ಮಂದಿರು ಸುರೇಶ...ಗಿರೀಶನಿಗೆ ಹಕ್ಕಿಲ್ಲವಾ ಅಥವ ನಯನ.. ರಶ್ಮಿ....ದೃಷ್ಟಿ...ನಮಿತಾ...ನಿಕಿತಾ ಇವರೆಲ್ಲರೂ ನಾಮಾಕಾವಸ್ಥೆಗೆ ಮಾತ್ರ ನನ್ನ ತಂಗಿಯರಾ ? ಅವರಿಗೆ ಈ ಅಕ್ಕನ ಹಣದ ಮೇಲ್ಯಾವ ವ್ಯಾಮೋಹವಿಲ್ಲ ಅಂತ ಗೊತ್ತಿದೆ ಆದರೆ ಅಕ್ಕನ ಮೇಲೂ ಅವರಿಗೆ ಹಕ್ಕಿಲ್ಲವಾ ಅಮ್ಮ ? ನನಗೆ ಅರಮನೆ ಸಂಸ್ಥಾನದ ಒಂದು ರುಪಾಯಿ ಕೂಡ ಬೇಕಾಗಿಲ್ಲ ಅದಕ್ಕಿಂತಲೂ ಜಾಸ್ತಿ ಬೆಲೆಕಟ್ಟಲಾಗದಷ್ಟು ಪ್ರೀತಿ ಆಪ್ಯಾಯತೆ ನನಗಿಲ್ಲಿ ಸಿಗ್ತಿದೆ ನನಗಿಷ್ಟೇ ಸಾಕು. 

ಅಕಸ್ಮಾತ್ ನಾನು ನಿಶಾ ಸೂರ್ಯವಂಶಿ ಸಂಸ್ಥಾನಕ್ಕೆ ಸೇರಿದವರಾಗಿರದೆ ಸಾಮಾನ್ಯರ ಮಕ್ಕಳಾಗಿ ಹುಟ್ಟಿ ನಿಮ್ಮ ಮಡಿಲಿಗೆ ಸೇರಿದ್ದರೆ ನೀವು ನಮ್ಮಿಬ್ಬರನ್ನು ತಿರಸ್ಕರಿಸುತ್ತಿದ್ರಾ ? ಖಂಡಿತಾವಾಗಿಯೂ ಇಲ್ಲ ಯಾಕೆಂದರೆ ನಿಮಗೆ ಅಪ್ಪನಿಗೆ ಪ್ರೀತಿಸುವುದಷ್ಟೇ ಗೊತ್ತಿರೋದು ಅದರಿಂದ್ಯಾವುದೇ ರೀತಿ ಪ್ರತಿಫಲವನ್ನೂ ನೀವು ಅಪೇಕ್ಷಿಸುವುದೂ ನಿಮಗೆ ತಿಳಿದಿಲ್ಲ. ಆದರೆ ನೀವ್ಯಾಕೆ ಸಂಸ್ಥಾನದ ಹಣದ ವಿಷಯ ಬಂದಾಗಲೆಲ್ಲಾ ಅದನ್ನು ಕೇವಲ ಜವಾಬ್ದಾರಿಯ ದೃಷ್ಟಿಯಲ್ಲಿ ಮಾತ್ರ ನೋಡ್ತೀರಾ ? ಅಲ್ಲಿನ ಹಣದ ಮೇಲೆ ನನ್ನ ತಮ್ಮ ತಂಗಿಯರಿಗ್ಯಾವುದೇ ರೀತಿಯ ಹಕ್ಕೂ ಇಲ್ಲ ಇದು ಕೇವಲ ನಿನಗೆ ನಿಶಾಳಿಗೆ ಮಾತ್ರ ಸೇರಿದ್ದೆಂದು ಒಂದು ಸಲ ಖಡಾಖಂಡಿತವಾಗಿ ಹೇಳಿಬಿಡಿ ಅಮ್ಮ ನಾನೀ ಕ್ಷಣವೇ ನಿಮ್ಮೆಲ್ಲರಿಂದ ದೂರ ಹೊರಟು ಹೋಗ್ತೀನಿ ಯಾವತ್ತಿಗೂ ಹಿಂದಿರುಗಿ ಬರಲ್ಲ.

ಅಮ್ಮ ಮಗಳ ನಡುವಿನ ವಾಗ್ವಾದ ಅತಿರೇಕವನ್ನು ತಲುಪಿದ್ದು ಮನೆ ಸದಸ್ಯರೆಲ್ಲರೂ ನೀತುವಿನ ಉತ್ತರವನ್ನೇ ಏದುರು ನೋಡುತ್ತಿದ್ದರು. ಮಗಳಾಡುತ್ತಿದ್ದ ಮಾತುಗಳನ್ನು ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳುತ್ತಿದ್ದ ನೀತು ಮುಖದಲ್ಯಾವುದೇ ಭಾವನೆಗಳೂ ಸಹ ಇರಲಿಲ್ಲ. ಮನೆಯ ಮುಂಬಾಗಿಲಿನ ಬಳಿ ಸುಮೇರ್ ಮತ್ತು ವೀರ್ ಸಿಂಗ್ ಕೂಡ ಇದ್ದು ತಾಯಿ ಮಗಳ ನಡುವೆ ಏನೋ ನಡೆಯುತ್ತಿದೆ ಎಂಬುದು ಅವರಿಗೆ ತಿಳಿದರೂ ಅರ್ಥವೇನೂ ಆಗುತ್ತಿರಲಿಲ್ಲ. ಎಲ್ಲರೂ ನೀತು ಮಗಳಿಗೆ ಏನೆಂದು ಉತ್ತರಿಸುತ್ತಾಳೆಂದು ಏದುರು ನೋಡುತ್ತಿದ್ದಾಗಲೇ ಅವಳ ಬಲಗೈ ಮಿಂಚಿನ ವೇಗದಲ್ಲಿ ಹಿರಿಮಗಳ ಕಪಾಳಕ್ಕೆ ಅಪ್ಪಳಿಸಿತು. ಅಮ್ಮ ಅಕ್ಕನ ಹತ್ತಿರ ಬಂದು ಅವರಿಬ್ಬರ ಮಾತನ್ನೇ ಕೇಳುತ್ತಿದ್ದ ನಿಶಾ ಅಕ್ಕನ ಕೆನ್ನೆಗೆ ಅಮ್ಮ ಭಾರಿಸುತ್ತಿದ್ದಂತೆ ಹಿಂದಿರುಗೋಡಿ ಅಪ್ಪನನ್ನು ಸೇರಿಕೊಂಡಳು.

ನೀತು.....ನೀನು ಮನೆಯಲ್ಲಿ ಎಲ್ಲಾ ಮಕ್ಕಳಿಗಿಂತ ದೊಡ್ಡವಳೇ ನಿಜ ಆದರೆ ನೀನಿನ್ನೂ ಅಮ್ಮನನ್ನು ಪ್ರಶ್ನಿಸುವಷ್ಟು ದೊಡ್ಡವಳಾಗಿಲ್ಲ. ನಾನೇನೇ ಮಾಡಿದರೂ ಇಡೀ ಕುಟುಂಬದ ಒಳಿತು ಅದರಲ್ಲಿರುತ್ತದೆ ನಿನ್ಮೇಲೆ ನನಗೆ ಅಥವ ನಿಮ್ಮಪ್ಪನಿಗೆ ಮಾತ್ರವಲ್ಲ ಇಡೀ ಕುಟುಂಬದ ಪ್ರತಿಯೊಬ್ಬರಿಗೂ ಸಮಾನ ಹಕ್ಕಿದೆ ಗೊತ್ತಾಯ್ತಾ.

ನಿಧಿ ಅಮ್ಮನನ್ನು ಬಿಗಿಯಾಗಿ ತಬ್ಬಿಕೊಂಡು......ಥಾಂಕ್ಯೂ ಅಮ್ಮ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು ಜೊತೆಗೆ ನಿಮ್ಮನ್ನು ಈ ರೀತಿಯಲ್ಲಿ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಕ್ಷಮಿಸಿಬಿಡಿ.

ನೀತು......ನೀನೇನೂ ಸಮಜಾಯಿಷಿ ನೀಡುವ ಅಗತ್ಯವಿಲ್ಲ ಕಣೇ ನಿನ್ನ ಮನಸ್ಸಿನಲ್ಲಿರುವ ವಿಷಯ ಅಮ್ಮನಾಗಿ ನನಗರ್ಥವಾಗಲ್ಲವಾ. ಚಿನ್ನಿ ನೀನ್ಯಾಕೆ ಓಡೋದೆ ಬಾಯಿಲ್ಲಿ.

ಅಮ್ಮನ ಮುಂದಿನ ಟಾರ್ಗೆಟ್ ನಾನಿರಬಹುದಾ ಎಂದುಕೊಂಡ ನಿಶಾ.......ನಾನಿ ಬರಲ್ಲ ಮಮ್ಮ....ಎನ್ನುತ್ತ ಅಪ್ಪನ ಹಿಂದೆ ನಿಂತಳು. ನಿಧಿ ಮನೆಯವರನ್ನೆಲ್ಲಾ ಕ್ಷಮೆಯಾಚಿಸಿದರೆ ಎಲ್ಲರೂ ಅವಳನ್ನು ತಬ್ಬಿಕೊಂಡು ಪ್ರೀತಿಯನ್ನಷ್ಟೇ ನೀಡುತ್ತಿದ್ದರು. ಮನೆಯಲ್ಲಿ ಕವಿದಿದ್ದ ಬಿಸಿಯಾದ ವಾತಾವರಣ ತಂಪಾಗಿ ಹೋಗಿದ್ದು ನೀತು ನೆಲದ ಮೇಲೆ ಕಾಲು ಚಾಚಿಕೊಂಡು ಕುಳಿತಿದ್ದು ನಿಧಿ ಅಮ್ಮನ ತೊಡೆ ಮೇಲೆ ತಲೆ ಇಟ್ಟುಕೊಂಡು ಮಲಗಿದ್ದಳು. ಅಪ್ಪನ ಹತ್ತಿರ ಸೇರಿಕೊಂಡಿದ್ದ ನಿಶಾ ಅಪ್ಪಿತಪ್ಪಿಯೂ ಅಮ್ಮನ ಹತ್ತಿರ ಸುಳಿಯಲಿಲ್ಲ. ಸುರೇಶನೂ ಬಂದು ಅಮ್ಮನ ಮಡಿಲಲ್ಲಿ ತಲೆಯಿಟ್ಟ ಮರುಗಳಿಗೆಯೇ ಗುಡುಗುಡುನೇ ಓಡಿ ಬಂದ ನಿಶಾ ಅಣ್ಣನ ಮೇಲೆ ಕುಳಿತು ಅವನನ್ನು ಎಳೆದಾಡುತ್ತ ದೂರ ಸರಿಸಿ ಅಕ್ಕನನ್ನೂ ತಳ್ಳಾಡಿ ತಾನು ಅಮ್ಮನ ಮಡಿಲಿನಲ್ಲಿ ಏಕಮೇವಾಧಿಪತ್ಯ ಸಾಧಿಸಿಕೊಂಡಳು.

ರಜನಿ......ಈಗಾ ವಿಷಯ ಬಿಟ್ಟಾಕಿ ಪಾವನ ಇನ್ಮುಂದೆ ನಮ್ಮನ್ನು ನೀನು ಅಕ್ಕ ಅಂತ ಕರೆಯುವ ಹಾಗಿಲ್ಲ.

ಪಾವನ......ಯಾಕೆ ಅಕ್ಕ ನನ್ನಿಂದೇನಾದರೂ ತಪ್ಪಾಯಿತಾ ?

ಪ್ರೀತಿ......ನೋಡು ಕರೀಬೇಡ ಅಂದರೂ ಕರಿತಿದ್ದೀಯಲ್ಲ ಸುಭಾಷ್ ನೀತುಳನ್ನ ಏನಂತ ಕರಿತಾನೆ ?

ಪಾವನ.....ಚಿಕ್ಕಮ್ಮ ಅಂತ ತಾನೇ ಕರೆಯೋದು ಹಿರಿಮಗ ಆಗ್ಬೇಕು.

ರಜನಿ......ಮತ್ತೆ ನೀನವಳನ್ನು ಅತ್ತೆ ಅಂತ ಕರೆಯೋದು ಬಿಟ್ಟು ಅಕ್ಕ ಅಂದರೆ ನೀನೂ ಸುಭಾಷಿಗೆ ಚಿಕ್ಕಮ್ಮ ಆಗೋಗ್ತೀಯಲ್ವೇನೇ ಗುಗ್ಗು. ಆಗ ಸುಭಾಷ್ ನಿನಗೂ ಮಗನಂತಾಗಿ ಹೋಗ್ತಾನಲ್ಲವಾ ? ಚಿಕ್ಕಮ್ಮ ಎಲ್ಲಾದ್ರೂ ಮಗನನ್ನೇ ಮದುವೆಯಾಗಿದ್ದುಂಟಾ ? ಇಲ್ಲ ತಾನೇ ಅದ್ಕೆ ಇನ್ಮುಂದೆ ನೀತುಳನ್ನು ಅತ್ತೆ ಅಂತ ಕರೆಯಬೇಕು ನಮ್ಮನ್ನೆಲ್ಲಾ ಆಂಟಿ ಚಿಕ್ಕಮ್ಮ ಏನಾದ್ರೂ ಕರಿ ಅರ್ಥವಾಯ್ತಾ ?

ಪಾವನಾ......ಹೂಂ ಗೊತ್ತಾಯ್ತು.

ಮನೆಯವರು ಹೀಗೆಯೇ ಸಂತೋಷದಿಂದ ಮಾತನಾಡುತ್ತದ್ದರೆ ನಿಶಾ ಆಡುತ್ತಲೇ ಅಮ್ಮನ ಮಡಿಲಲ್ಲಿ ಮಲಗಿಬಿಟ್ಟಳು.
* *
* *

No comments:

Post a Comment