ಸ್ವಾಮೀಜಿಗಳು ಮಗಳ ಬಗ್ಗೆ ಆಡಿದ ಮಾತುಗಳನ್ನು ಕೇಳಿ ನೀತು ನಿಂತಲ್ಲೇ ಕಲ್ಲಾಗಿ ಕಣ್ಣೀರು ಸುರಿಸುತ್ತಿದ್ದರೆ ಗಂಡನ ಕೈ ಹೆಗಲ ಮೇಲೆ ಇಟ್ಟಾಗ ಎಚ್ಚೆತ್ತು ಮಗಳನ್ನೆತ್ತಿ ಮುದ್ದಾಡುತ್ತ ಅಪ್ಪಿಕೊಂಡಳು.
ರೇವತಿ ಮಗಳಿಗೆ ಧೈರ್ಯ ಹೇಳಿ......ನೀತು ಯಾಕಿಷ್ಟು ಹೆದರುವೆ ಗುರುಗಳು ಹೇಳಲಿಲ್ಲವಾ ಚಿನ್ನಿ ನಿನ್ನ ಮಗಳಾಗಿಯೇ ನಮ್ಮೆಲ್ಲರ ಜೊತೆ ಇರುತ್ತಾಳೆಂದು ಇನ್ನೇಕೆ ಭಯ ?
ನೀತು......ಅಮ್ಮ ಮೊದಲು ಅಣ್ಣಂದಿರು ಮುಚ್ಚಿಟ್ಟ ಕಷ್ಟದ ವಿಷಯ ಹೇಳಿದರು ಈಗ ನನ್ನ ಮಗಳ ಮೇಲೆ ಮತ್ತೊಂದು ಕುಟುಂಬದವರ ಛಾಯೆಯಿದೆ ಅದರ ಬಗ್ಗೆ ತಿಳಿದುಕೊಳ್ಳಬೇಕೆಂದರೆ ನನಗೆ ತುಂಬಾ ಭಯವಾಗುತ್ತಿದೆ.
ತಾಯಿ ಮಗಳಿಗೆ ಉತ್ತರಿಸುವ ಮುನ್ನವೇ ನಿಶಾ ಅಮ್ಮನ ಕಣ್ಣೀರು ಒರೆಸಿ ಕೆನ್ನೆಗೆ ಮುತ್ತಿಟ್ಟು ಖಾಲಿಯಾದ ತನ್ನೆರಡೂ ಕೈ ಮುಂದಕ್ಕೆ ಚಾಚುತ್ತ.......ಮಮ್ಮ ಲಾಲು ಕಾಲಿ ಕೊಲು.....ಎಂದಳು. ನೀತು ಮಗಳನ್ನು ಮುದ್ದಾಡಿ ಇನ್ನೊಂದು ಲಾಡು ತೆಗೆದು ತಾನೇ ಮಗಳಿಗೆ ತಿನ್ನಿಸತೊಡಗಿದಳು.
ಹರೀಶ......ಸ್ವಾಮೀಜಿಗಳು ಹೇಳಿದ ವಿಷಯವನ್ನೇ ಮನಸ್ಸಿನೊಳಗೆ ಇಟ್ಟುಕೊಂಡು ಯೋಚಿಸುತ್ತಿರಬೇಡ ನೀತು ಏನೇ ಇದ್ದರೂ ನಾವೆಲ್ಲ ಜೊತೆಯಾಗಿ ಏದುರಿಸೋಣ.
ಗಂಡನ ಮಾತಿನಿಂದ ಸಮಾಧಾನಗೊಂಡ ನೀತು........ಅಣ್ಣ ಈಗ ಹೇಳಿ ನೀವು ನಮ್ಮೆಲ್ಲರಿಂದ ಯಾವ ವಿಷಯ ಮುಚ್ಚಿಟ್ಟಿರುವುದು ? ಅಪ್ಪ ಅಮ್ಮನ ಜೊತೆ ಅತ್ತಿಗೆಯರಿಗೂ ಇದರ ಸುಳಿವೇ ಸಿಗಲಿಲ್ಲವಲ್ಲ ಇನ್ನಾದರೂ ಹೇಳಬಾರದಾ.
ರೇವಂತ್ ತಂಗಿಯ ತಲೆ ಸವರಿ ನಕ್ಕು.....ಗುರುಗಳು ಎಲ್ಲಾ ವಿಷಯ ತಿಳಿದ ಸರ್ವಂತರ್ಯಾಮಿಗಳು ಪುಟ್ಟಿ ನಾವಿಷ್ಟು ದಿನ ಮುಚ್ಚಿಟ್ಟಿರುವ ವಿಷಯ ಎಲ್ಲರಿಗೂ ತಿಳಿಯುವ ಹಾಗೆ ಮಾಡಿಬಿಟ್ಟರು. ಎಲ್ಲದರ ಬಗ್ಗೆ ನಿಮಗೆ ತಿಳಿಸುತ್ತೇನೆ ಪ್ರಾಮಿಸ್ ಆದರೆ ಸರಿಯಾದ ಸಮಯ ಬರಲಿ. ರಶ್ಮಿಯನ್ನು ಕರೆತರಲು ನೀವೊಬ್ಬರೆ ಹೋಗಬೇಡಿ ಅಶೋಕ್ ನಿಮ್ಮ ಜೊತೆ ನಾನೂ ಬರ್ತೀನಿ.
ಹರೀಶ ರೇಗಿಸುತ್ತ......ತಂಗಿಯ ಪ್ರಶ್ನೆಗೆ ಹೆದರಿ ಇಲ್ಲಿಂದ ಬೇರೆಡೆಗೆ ಓಡುತ್ತಿರುವಂತಿದೆ.
ರೇವಂತ್....ಮಿಸ್ಟರ್ ಭಾವ ನನ್ನ ತಂಗಿ ಮುಂದೆ ನೀವೇ ಬಾಲವನ್ನು ಮುದುರಿಕೊಂಡಿರುತ್ತೀರ ಎಂದ ಮೇಲೆ ನನ್ನದೇನು ಹೇಳಿ.
ಎಲ್ಲರೂ ನಗುನಗುತ್ತಲೇ ಕಾಲಕಳೆದು ಊಟವಾದ ನಂತರ ಅಜ್ಜಿಯ ಮನೆಯಿಂದ ರಶ್ಮಿಯನ್ನು ಕರೆತರಲು ಅಶೋಕನ ಜೊತೆ ರೇವಂತ್ ಕೂಡ ಹೊರಟನು. ಎಲ್ಲರೊಡನೆ ನಗುನಗುತ್ತ ಮಾತನಾಡುತ್ತಿದ್ದರೂ ಮಗಳ ಬಗ್ಗೆಯೇ ಯೋಚಿಸುತ್ತ ಮಡಿಲಲ್ಲೇ ಕೂರಿಸಿಕೊಂಡು ಅವಳ ತಲೆಯನ್ನು ಸವರುತ್ತಿದ್ದರಿಂದ ನಿಶಾ ಹಾಗೆಯೇ ಅಮ್ಮನ ಮಡಿಲಲ್ಲಿ ನಿದ್ರೆಗೆ ಜಾರಿಕೊಂಡಳು. ನಿಕಿತಾಳಿಗೂ ಮಧ್ಯಾಹ್ನದ ಊಟವನ್ನು ತಲುಪಿಸಿದ ಗಿರೀಶ ಸಂಜೆಯವರೆಗೆ ಚೆನ್ನಾಗಿ ಓದಿಕೊಂಡು ಬಿಡು ಇವತ್ತಿನ ರಾತ್ರಿ ನಮ್ಮ ಮನೆಯಲ್ಲೇ ಉಳಿಯಬೇಕಲ್ಲ ಎಂದ. ನಿಕಿತಾ ಕೂಡ ನಗುತ್ತ...ಹೂಂ ಅಮ್ಮ ಫೋನ್ ಮಾಡಿದ್ದರು ನಾಳೆ ಪುನಃ ಬೆಟ್ಟದ ದೇವಸ್ಥಾನಕ್ಕೆ ಹೋಗುತ್ತಿದ್ದೀವಂತೆ ರಶ್ಮಿ ಬಂದಳಾ ? ಇಲ್ಲ ಅಶೋಕ್ ಅಂಕಲ್ ಕರೆತರಲು ಹೋಗಿದ್ದಾರೆ ಊಟ ಮಾಡಿ ನೀನು ಓದಿಕೋ ಸಂಜೆ ಏಳಕ್ಕೆ ಕರೆದೊಯ್ಯಲು ನಾನೇ ಬರುವೆ. ಹರೀಶ ಮತ್ತಿತರರು ನಾಳೆ ದೇವಸ್ಥಾನಕ್ಕೆ ತೆರಳಲು ಬಸ್ ಬುಕ್ಕಿಂಗ್ ಮತ್ತು ಅಡುಗೆಯವರಿಗೆ ನಾಳೆ ತಿಂಡಿ ಹಾಗು ಊಟಕ್ಕೇನು ಮಾಡುವುದು ಎಂದೇಳಿ ಅದನ್ನೆಲ್ಲಾ ರೆಡಿ ಮಾಡುತ್ತಿದ್ದರು.
ಸಂಜೆ ಏಳುವರೆಗೆ ನಿಕಿತಾ ಮನೆ ತಲುಪಿದ ಕೆಲ ಹೊತ್ತಿನಲ್ಲೇ ರಶ್ಮಿ ಸಹ ಬಹಳ ದಿನಗಳ ನಂತರ ತನ್ನ ಭವಿಷ್ಯದ ಮನೆಯೊಳಗೆ ಬಂದು ಎಲ್ಲಾ ಕಡೆಯೂ ನೋಡುತ್ತಿದ್ದಳು. ರಶ್ಮಿಯನ್ನು ಕಂಡ ನಿಶಾ ಅಕ್ಕಾ... ಎಂದು ಕೂಗುತ್ತ ಅವಳತ್ತ ಓಡಿದರೆ ರಶ್ಮಿ ಅವಳನ್ನೆತ್ತಿಕೊಂಡು ತುಂಬ ಮುದ್ದಾಡುತ್ತ ಕಣ್ಣಿನಿಂದ ಕಂಬನಿ ಸುರಿಸುತ್ತಿದ್ದಳು. ನಿಶಾಳನ್ನೆ ತುಂಬ ಸಮಯ ಮುದ್ದಾಡಿದ ರಶ್ಮಿ ಹೊರಗೇ ಕುಳಿತಿದ್ದ ರಾಜೀವ್...ವಿಕ್ರಂ.. ರವಿ ಮತ್ತು ಭಾವೀ ಮಾವ ಹರೀಶನ ಅಶೀರ್ವಾದ ಪಡೆದು ಎದುರು ಸಿಕ್ಕ ತನ್ನ ಮಮ್ಮಳನ್ನು ತಬ್ಬಿಕೊಂಡರೆ ನಿಶಾ ಕೂಡ ಅಮ್ಮನ ಕತ್ತಿಗೆ ನೇತಾಕಿಕೊಂಡಳು. ರಶ್ಮಿಗೆ ಆಶೀರ್ವಾದ ನೀಡಿದ ರೇವತಿ ಆಕೆಯ ಯೋಗಕ್ಷೇಮ ವಿಚಾರಿಸಿದ ಬಳಿಕ ಮಿಕ್ಕವರನ್ನೂ ಮಾತನಾಡಿಸಿದ ರಶ್ಮಿ ಹೊರಗೆ ಗುಂಪುಗೂಡಿದ್ದ ಗಿರೀಶ ಅಂಡ್ ಗ್ಯಾಂಗಿನ ಹತ್ತಿರಕ್ಕೆ ತೆರಳಿದಳು.
ರಶ್ಮಿ......ಸುರೇಶ ಮನೆಯಲ್ಲೆಲ್ಲೂ ಆ ಪುಟ್ಟ ನಾಯಿ ಮರಿ ಇಲ್ಲವೇ ಇಲ್ಲ ಜೊತೆಗೆ ದೊಡ್ಡ ನಾಯಿಗಳೂ ಕಾಣೆ ಎಲ್ಲಿಗೆ ಹೋದವು ?
ಸುರೇಶ.....ಇಲ್ಲಿ ಎಲ್ಲರೂ ಬಂದಿರುವಾಗ ಅವುಗಳನ್ನು ಇಲ್ಲಿಯೇ ಇಟ್ಟುಕೊಂಡು ನೋಡಿಕೊಳ್ಳಲು ಕಷ್ಟವಾಗುತ್ತೆಂದು ಅಮ್ಮ ನೆನ್ನೆ ದಿನ ಮೂರನ್ನೂ ಜಾನಿ ಅಂಕಲ್ ತೋಟಕ್ಕೆ ಕಳಿಸಿದ್ದಾರೆ.
ಇತ್ತ ಹೆಂಗಸರು......
ರೇವತಿ......ನೀತು ಮದುವೆ ಮತ್ತು ಶಿವರಾತ್ರಿ ಪೂಜೆಗೆ ಎಲ್ಲರಿಗೂ ಆಹ್ವಾನ ನೀಡಿದ್ದೀಯಾ ?
ನೀತು.....ಹೂಂ ಅಮ್ಮ ಪೂಜೆಗೆ ಎಲ್ಲಾ ಹತ್ತಿರದ ಪರಿಚಯಸ್ಥರಿಗೂ ಮತ್ತು ಮದುವೆಗೆ ದೂರದವರಿಗೂ ಹೇಳಿದ್ದೀವಿ. ಅನುಷ ಮೊದಲಿದ್ದ ಊರಿನಿಂದ ಅವಳ ಕೆಲವು ಗೆಳತಿಯರೂ ಬರುತ್ತಿದ್ದಾರೆ ಪ್ರತಾಪನ ಕಡೆಯಿಂದ ಅವರ ಇಲಾಖೆಯವರೇ ಸುಮಾರು 150 ಜನ ಸೇರುವ ನಿರೀಕ್ಷೆಯಿದೆ.
ರೇವತಿ......ಅದಕ್ಕೆ ಬೇಕಾದ ಏರ್ಪಾಡು ಮತ್ತು ಮದುವೆಗೆ ಬರುವ ಅತಿಥಿಗಳಿಗೆ ಕಾಣಿಕೆ ನೀಡಲು ತಯಾರಿ ಮಾಡಿದ್ದೀಯ ?
ನೀತು.....ಚಿಂತೆನೇ ಬೇಡಮ್ಮ ನಾವದನ್ನೆಲ್ಲ ಆಗಲೇ ರೆಡಿ ಮಾಡಿಟ್ಟು ಕೆಲ ದಿನಗಳೇ ಆಗಿವೆ. ಅತ್ತಿಗೆಯರಿಗೆ ಅದನ್ನೆಲ್ಲಾ ತೋರಿಸಿದೆ ನೀವು ಆಗ ಹೊರಗೆ ಹೋಗಿದ್ರಲ್ಲ ನಡೀರಿ ನೀವೂ ನೋಡಿ ಇನ್ನೇನಾದರು ಬಾಕಿ ಉಳಿದಿದ್ದರೆ ಹೇಳಿ.
ರೇವತಿ......ರಜನಿ ಎಲ್ಲರನ್ನೂ ಊಟಕ್ಕೆ ಏಬ್ಬಿಸಿ ಬಿಡಮ್ಮ ನಾಳೆಯ ದಿನ ಬೆಳಿಗ್ಗೆ ಐದಕ್ಕೆಲ್ಲಾ ಹೊರಡಬೇಕಿದೆ.
ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತರೆ ನಿಶಾ ಪ್ರತಿಯೊಬ್ಬರ ಹತ್ತಿರವೂ ಅಡ್ಡಾಡುತ್ತ ತನಗೇನು ಬೇಕಿದೆಯೋ ಅದನ್ನವರಿಂದಲೇ ಸ್ವಲ್ಪ ಸ್ವಲ್ಪ ತಿನ್ನಿಸಿಕೊಂಡು ಕೀಟಲೆ ಮಾಡುತ್ತಿದ್ದು ಮನೆಯಲ್ಲಿ ಹರ್ಷೋಲ್ಲಾಸದ ವಾತಾವರಣ ನಿರ್ಮಾಣವಾಗಿತ್ತು . ಬೆಳಿಗ್ಗೆ ಎಲ್ಲರೂ ರೆಡಿಯಾದ ನಂತರ ನಿಶಾಳನ್ನು ತುಂಬ ಕಷ್ಟಪಟ್ಟು ರಶ್ಮಿ ಏಬ್ಬಿಸಿದರೆ ಅವಳು ತನ್ನ ಕಣ್ಣುಜ್ಜಿಕೊಳ್ಳುತ್ತ ರಜನಿ ಬಳಿ ತೆರಳಿ ರಶ್ಮಿಯತ್ತ ಕೈ ತೋರಿ......ಅಕ್ಕ ತಾಚಿ ಬೇಲ....ಏಲು....ಏಲು.....ಅಂತ ಏಬ್ಬಿಸಿ ಬಿಟ್ಟಳೆಂದು ಚಾಡಿ ಹೇಳತೊಡಗಿದಳು. ರಜನಿ ಮಗಳನ್ನೆತ್ತಿಕೊಂಡು.....ನಿನ್ನ ಅಕ್ಕನಿಗೆ ನಾವು ನಾಲ್ಕೇಟು ಕೊಡೋಣ ಈಗ ಚಾನ ಮಾಡಿ ರೆಡಿಯಾಗಿ ಬಸ್ ಒಳಗೆ ನಿದ್ದೆ ಮಾಡುವಿಯಂತೆ. ಶುಭ್ರವಾಗಿ ಸ್ನಾನ ಮಾಡಿಸಿಕೊಂಡು ರೆಡಿಯಾಗಿದ್ದ ನಿಶಾ ತುಂಬ ಪುಟ್ಟವಳಾಗಿದ್ದು ನಿದ್ದೆ ಸಾಲದೆ ಅಪ್ಪನ ಹೆಗಲಿಗೇರಿಕೊಂಡು ನಿದ್ದೆಗೆ ಜಾರಿದಳು. ಮನೆಯ ಮುಂದೆ ಮಿನಿ ಬಸ್ ಬರುವಷ್ಟರಲ್ಲಿ ಎಲ್ಲರೂ ರೆಡಿಯಾಗಿದ್ದು ಸ್ವಾಮೀಗಳು ಬಂದ ನಂತರ ಬೆಟ್ಟದ ಕಡೆ ಹೊರಟರು.
ಬೆಳಿಗ್ಗೆ ಏಳು ಘಂಟೆಗೆ ಬೆಟ್ಟಕ್ಕೆ ತಲುಪಿದಾಗ ಅಲ್ಲಿನ ದೇವಸ್ಥಾನದ ಅರ್ಚಕರು ಸ್ವಾಮೀಜಿಗಳ ಕಾಲಿಗೆ ಧೀರ್ಘದಂಡ ನಮಸ್ಕಾರವನ್ನು ಮಾಡುತ್ತ ಆದರದಿಂದ ಸ್ವಾಗತಿಸಿದರು. ಮುಂದಿನ ಎರಡು ಘಂಟೆ ಕಾಲ ಸ್ವಾಮೀಜಿಗಳ ಮುಂದಾಳತ್ವದಲ್ಲಿ ವಿಧಿವತ್ತಾಗಿ ಪೂಜೆಯನ್ನು ನೆರವೇರಿಸಿ ಮಂಗಳಾರತಿ ತೀರ್ಥ ಪ್ರಸಾದವನ್ನು ನೀಡಿದ ಬಳಿಕ ಎಲ್ಲರಿಗೂ ತಿಂಡಿ ಮುಗಿಸಿಕೊಂಡು ದೇವಸ್ಥಾನದ ಪಕ್ಕದಲ್ಲಿರುವಂತ ಜ್ಞಾನಮಂದಿರಕ್ಕೆ ಬರಲು ತಿಳಿಸಿದರು. ದೇವಸ್ಥಾನ ಹೊರಗೆ ಎಲ್ಲರೂ ತಿಂಡಿ ತಿನ್ನುತ್ತಿದ್ದಾಗಲೇ ಕುಣಿದಾಡುತ್ತ ಬಂದ ಮೊಲಗಳನ್ನು ನೋಡಿ ನಿಶಾ ಸಂತೋಷದಿಂದ.....ಮಮ್ಮ....ಕುಕ್ಕಿ....ಕುಕ್ಕಿ.....ಎಂದು ಕೂಗಿ ಕುಣಿದಾಡಿದಳು. ನೀತು ಮಗಳನ್ನು ತೊಡೆ ಮೇಲೆ ಕೂರಿಸಿಕೊಂಡು
.......ಚಿನ್ನಿ ಇದು ಕುಕ್ಕಿ ಅಲ್ಲ ಪುಟ್ಟಿ ಮೊಲ ಹೇಳು ಮೊಲ ಅಂತ...... ಎಂದರೆ ನಿಶಾ ಮೊಲ ಎನ್ನಲು ಬಾರದೆ ನೊಲ...ನೊಲ.....ಎನ್ನುತ್ತ ಅವುಗಳಿಗೆ ಕ್ಯಾರೇಟ್ ತಿನ್ನಿಸುತ್ತ ಖುಷಿಯಿಂದ ಹಿಗ್ಗುತ್ತಿದ್ದಳು.
No comments:
Post a Comment