ಅಶೋಕ...ರಜನಿ...ರಶ್ಮಿ ಕಾಮಾಕ್ಷಿಪುರದ ಮನೆಗೆ ತಲುಪಿದಾಗ ಹರೀಶ ಅಂಬೆಗಾಲಿಡುತ್ತ ಮುಂದೆ ಸಾಗುತ್ತಿದ್ದರೆ ಅಪ್ಪನ ಬೆನ್ನ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ ನಿಶಾ ನಗುತ್ತ ಗಲಾಟೆ ಮಾಡುತ್ತಿದ್ದಳು.
ಅಶೋಕ......ಚಿನ್ನಿ ಏನಮ್ಮಾ ಮಾಡ್ತಿದ್ದೀಯಾ ?
ನಿಶಾ......ಅಂಕು....ಆನೆ...ಆನೆ....ಕೂಚಿ....ಎಂದು ನಗುತ್ತಿದ್ದಳು.
ನೀತು.....ರಾಜಸ್ಥಾನದಲ್ಲಿ ಆನೆ ಕುದುರೆಯ ಮೇಲೆ ಕುಳಿತಿದ್ದಳಲ್ಲಾ ಇಲ್ಲಿ ಅವ್ಯಾವೂ ಇಲ್ಲವಲ್ಲ ಅದಕ್ಕೆ ಅವರಪ್ಪನೇ ಆನೆಯಾಗಿ ಮಗಳ ಸವಾರಿ ಮಾಡಿಸುತ್ತಿದ್ದಾರೆ.
ನಿಶಾ.....ಅಕ್ಕ....ಅಕ್ಕ.....ಎಂದು ಅಪ್ಪನ ಬೆನ್ನ ಮೇಲೆ ಕುಳಿತೇ ರಶ್ಮಿ ಕಡೆ ಕೈ ಚಾಚಿದಾಗ ಅವಳೂ ಚಿನ್ನಿಯನ್ನೆತ್ತಿಕೊಂಡು ಮುದ್ದಾಡಿದಳು.
ಹರೀಶ......ರಜನಿ ಈಗ ನಿಮ್ಮಮ್ಮನ ಆರೋಗ್ಯ ಹೇಗಿದೆ ? ಎಲ್ಲವೂ ಆರಾಮ ತಾನೇ.
ಶೀಲಾ.....ಅಲ್ಲ ಕಣೆ ಆಂಟಿಯನ್ನೂ ಇಲ್ಲಿಗೆ ಕರೆದುಕೊಂಡು ಬರದೇ ನೀನೊಬ್ಬಳೇ ಬಂದಿರುವೆಯಲ್ಲ.
ನೀತು.....ಹೌದು ಕಣೆ ಆಂಟಿ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅವರನ್ನು ಅಲ್ಯಾರು ನೋಡಿಕೊಳ್ತಾರೆ ಅಂಕಲ್ಲಿಗೇ ಕಷ್ಟ .
ರಜನಿ....ನಾನೂ ತುಂಬ ಕರೆದೆ ಕಣೆ ಆದರೆ ಅಪ್ಪನಿಗೆ ಕೆಲಸಗಳಿದೆ ಇನ್ನು ಅಮ್ಮ ಇಲ್ಲದಿದ್ದರೆ ಅಪ್ಪ ಸರಿಯಾಗಿ ಊಟ ತಿಂಡಿ ಮಾಡಲ್ಲ. ಅದಕ್ಕೆ ಅಮ್ಮಾ ಅಲ್ಲೇ ಉಳಿದುಕೊಂಡರು ಚಿಂತೆಯಿಲ್ಲ ಅಡುಗೆಗೆ ಮತ್ತು ಮನೆ ಕೆಲಸಕ್ಕೆ ಆಗಲೇ ಒಬ್ಬಳನ್ನು ನೇಮಿಸಿ ಬಂದಿರುವೆ. ಈಗ ಆರೋಗ್ಯವೂ ಚೆನ್ನಾಗಿದೆ ಸ್ವಾಮೀಜಿಗಳು ಕೊಟ್ಟಿದ್ದ ಅನಾರೋಗ್ಯ ನಿವಾರಕ ಪುಡಿ ಕುಡಿಸಿದಾಗಿನಿಂದ ಆರಾಮವಾಗಿದ್ದಾರೆ.
ಅಶೋಕ.....ಮಹಡಿ ಮನೆಯ ಕೆಲಸಗಳು ಮುಗಿದಂತೆ ಕಾಣುತ್ತಿದೆ ಆದಷ್ಟು ಬೇಗ ಗೃಹಪ್ರವೇಶಕ್ಕೆ ಸಿದ್ದತೆ ಮಾಡಿಕೊಳ್ಳಬೇಕು.
ಹರೀಶ....ನನ್ನ ಪ್ರಕಾರ ಕೇವಲ ಮನೆ ಮಟ್ಟಿಗೆ ಮಾತ್ರ ನಾವು ಪೂಜೆ ಮಾಡಿಕೊಂಡರೆ ಸಾಕೆನಿಸುತ್ತದೆ. ಈಗಾಗಲೇ ನಾಲ್ಕು ಫಂಕ್ಷನ್ ಸ್ವಲ್ಪ ಗ್ರಾಂಡಾಗಿ ಮಾಡಿದ್ದೀವಿ ಗೃಹಪ್ರವೇಶ ಸಿಂಪಲ್ಲಾಗಿ ಮಾಡೋಣ.
ಶೀಲಾ.....ನಾನೂ ಬೆಳಿಗ್ಗೆ ನೀತು ಜೊತೆ ಇದನ್ನೇ ಹೇಳುತ್ತಿದ್ದೆ ಪೂಜೆ ಯುಗಾದಿ ಹಬ್ಬದ ದಿನದಂದೇ ಇರುವುದರಿಂದ ಇತರರೂ ಅವರವರ ಮನೆಗಳಲ್ಲಿ ಹಬ್ಬ ಆಚರಿಸುತ್ತಿರುತ್ತಾರೆ. ನಮಗೆ ತುಂಬ ಹತ್ತಿರವಿರುವ 50—60 ಜನರನ್ನು ಕರೆದು ಮಾಡಿಬಿಡೋಣ.
ನೀತು.....ಶೀಲಾ ಯೋಚನೆ ನನಗೂ ಹಿಡಿಸಿತು ಇನ್ನು ಅಪ್ಪ ಅಮ್ಮ ಕೂಡ ಬರುವುದಿಲ್ಲ ಅದಕ್ಕೆ ಕೆಲವರನ್ನು ಕರೆದು ಗೃಹಪ್ರವೇಶವನ್ನು ಮುಗಿಸೋಣ ಫ್ಯಾಕ್ಟರಿ ಮತ್ತು ಫುಡ್ ಯೂನಿಟ್ ಗ್ರಾಂಡಾಗಿಯೇ ಉದ್ಗಾಟನೆ ಮಾಡೋಣ ಆಗ ಎಲ್ಲರನ್ನು ಕರೆದರಾಯಿತು.
ಹರೀಶ....ಸರಿ ಸಂಜೆ ನಾನು ರವಿ ಪುರೋಹಿತರ ಬಳಿ ಹೋಗಿ ಪೂಜೆ ವಿಷಯವಾಗಿ ಮಾತನಾಡಿಕೊಂಡು ಬರುತ್ತೀವಿ ನೀವು ಅಡುಗೆಯ ಬಗ್ಗೆ ಡಿಸೈಡ್ ಮಾಡಿ.
ರಜನಿ......ಅಡುಗೆ ಬಗ್ಗೆ ಡಿಸೈಡ್ ಮಾಡುವುದಕ್ಕೇನಿದೆ ಹತ್ತಿರದವರೇ ತಾನೆ ಬರುವುದು ನಾವೆಲ್ಲರೂ ಸೇರಿ ಮಾಡಿದರಾಯಿತು.
ನೀತು.....ಬೇಡ ಕಣೆ ಭಟ್ಟರಿಂದಲೇ ತರಿಸೋಣ ಎಲ್ಲಾ ಪೂಜೆಯ ಕಾರ್ಯದಲ್ಲಿ ಯಾವ ಟೆನ್ಷನ್ ಇಲ್ಲದೇ ಆರಾಮವಾಗಿ ಪಾಲ್ಗೊಳ್ಳಲಿ. ಮನೆಯವರೇ ಅಡುಗೆ ಮಾಡುತ್ತ ಕುಳಿತರೆ ಪೂಜೆಗೆ ನಿಮ್ಮಲ್ಯಾರೂ ಇರುವುದಕ್ಕೆ ಆಗುವುದಿಲ್ಲ.
ಸಂಜೆ ಹರೀಶ ಪಲ್ಸರ್ ಮೇಲೆ ಕುಳಿತಾಗ ಅವನಿಂದ ರವಿ ಕೂಡ ಏರಿ ಕುಳಿತದ್ದನ್ನು ನೋಡಿ ನಿಶಾ ಗುಡುಗುಡು ಅಂತ ಅಪ್ಪನತ್ತ ಓಡಿದಳು. ಅದೇ ಸಮಯಕ್ಕೆ ತನಗೆ ಹೊಸ ಸಿಮ್ ಕೊಳ್ಳಲು ಗಿರೀಶನ ಜೊತೆ ಹೊರಟಿದ್ದ ರಶ್ಮಿ ಅಕ್ಕನನ್ನು ತಾನ್ಯಾರ ಜೊತೆ ಹೋಗುವುದೆಂದು ನಿಶಾಳಿಗೆ ಕನ್ಫೂಸ್ ಆಗಿತ್ತು.
ಹರೀಶ......ಚಿನ್ನಿ ನೀನು ಅಣ್ಣನ ಜೊತೆ ಹೋಗ್ತಿಯೋ ಅಥವ ನನ್ನ ಜೊತೆ ಬರ್ತೀಯೋ ?
ನಿಶಾ ಇನ್ನೂ ಡಿಸೈಡ್ ಮಾಡದೇ ಅಪ್ಪ ಅಣ್ಣ ಇಬ್ಬರನ್ನೂ ನೋಡುತ್ತ ನಿಂತಿದ್ದಾಗ ಹಿಂದಿನಿಂದ ಮಗಳನ್ನೆತ್ತಿಕೊಂಡ ನೀತು.....ಚಿನ್ನ ಮಮ್ಮ ಜೊತೆ ನಮಿತ ಅಕ್ಕನ ಮನೆಗೆ ಬರ್ತಾಳೆ. ನಮಿತ ಅಕ್ಕನ ಹೆಸರನ್ನು ಕೇಳುತ್ತಿದ್ದಂತೆ ನಿಶಾಳ ಮುಖ ಖುಷಿಯಲ್ಲಿ ಅರಳಿಕೊಂಡಿದ್ದು ಅಪ್ಪ ಅಣ್ಣ ಇಬ್ಬರಿಗೂ ಟಾಟಾ ಮಾಡಿ ಅಮ್ಮನ ಜೊತೆ ಆಕ್ಟಿವಾ ಮೇಲೇರಿ ನಿಂತಳು.
ಹರೀಶ......ನೀತು ಏನೀವತ್ತು ಕಾರನ್ನೇ ತೆಗೆದುಕೊಂಡು ಹೋಗು ಆಕ್ಟಿವಾದಲ್ಲೇಕೆ ಹೋಗುತ್ತಿರುವೆ ?
ನೀತು.......ರೀ ಕಾರಲ್ಲಿ ಓಡಾಡಿ ಬೋರಾಗಿದೆ ಅನುಷಾಳ ಆಕ್ಟಿವಾ ತುಂಬ ದಿನದಿಂದ ನಿಂತೇ ಇದೆಯಲ್ಲ ಇದರಲ್ಲೇ ಹೋಗ್ತೀವಿ. ನೀವು ಪುರೋಹಿತರ ಜೊತೆ ಮಾತನಾಡಿ ಲಿಸ್ಟ್ ತೆಗೆದುಕೊಂಡು ಬನ್ನಿ.
ರವಿ.....ಅದನ್ನೆಲ್ಲಾ ನಾನು ಹರೀಶ ನೋಡಿಕೊಳ್ತೀವಿ ನೀನು ಮಗಳ ಜೊತೆ ಆರಾಮವಾಗಿ ಹೋಗಿ ಬಾ.
ಸವಿತಾಳ ಮನೆ ತಲಪುತ್ತಿದ್ದಂತೆ ಅಕ್ಕ....ಅಕ್ಕ.....ಎಂದು ಕೂಗುತ್ತ ಒಳಗೋಡಿದ ನಿಶಾ ಎದುರು ಸಿಕ್ಕ ನಮಿತಾಳ ಮುಂದೆ ನಿಂತು ತನ್ನ ಕೈಗಳನ್ನೆತ್ತಿದಳು. ನಮಿತಾಳಿಗೂ ನಿಶಾಳ ಜೊತೆಯಲ್ಲಿರುವುದಕ್ಕೆ ತುಂಬ ಇಷ್ಟವಿದ್ದು ಅವಳನ್ನೆತ್ತಿ ಮುದ್ದಾಡುತ್ತ ಅಕ್ಕ ಅಮ್ಮನಿಗೆ ಹೇಳಿ ತನ್ನ ರೂಂ ಸೇರಿಕೊಂಡರು. ನೀತು ಮನೆಯ ಗೃಹಪ್ರವೇಶ ಮತ್ತಿದರ ಬಗ್ಗೆ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಸವಿತಾಳಿಗೆ ತಿಳಿಸಿ ನೀವೆಲ್ಲಾ ಹಿಂದಿನ ದಿನವೇ ಬರಬೇಕು ಕೆಲಸ ತುಂಬಾನೇ ಇರುತ್ತೆ ನಾವುಗಳೇ ಮಾಡಬೇಕಿದೆ. ಸವಿತಾಳ ಹಿರಿ ಮಗಳಾದ ನಿಕಿತಾ......ಆಂಟಿ ನನ್ನ ದ್ವಿತೀಯ ಪಿಯು ಏಕ್ಸಾಂ ಕೂಡ ಅಷ್ಟರಲ್ಲಿ ಮುಗಿದಿರುತ್ತೆ ನಾನೂ ನಿಮ್ಮ ಕೆಲಸಗಳಲ್ಲಿ ಸಹಾಯ ಮಾಡುತ್ತೀನಿ. ಮೂವರು ಕುಳಿತು ಮಾತನಾಡುತ್ತಿದ್ದರೆ ಸವಿತಾ ಆಂಟಿ ಕೊಟ್ಟ ಸ್ವೀಟ್ಸ್ ತಿನ್ನುತ್ತ ಮನೆಯ ಒಳಗೆಲ್ಲಾ ನಮಿತಾಕ್ಕನ ಜೊತೆ ಸೇರಿಕೊಂಡು ನಿಶಾ ಫುಲ್ ಹಲ್ಲಾ ಮಾಡುತ್ತ ಕುಣಿದು ಕುಪ್ಪಳಿಸುತ್ತಿದ್ದಳು.
* *
ದಿನಗಳು ಚಕಚಕನೆ ಉರುಳುತ್ತ ಇನ್ಮೂರು ದಿನಗಳಲ್ಲಿ ಯುಗಾದಿ ಹಬ್ಬ ಬರುವುದರ ಜೊತೆ ನೀತು—ಹರೀಶರ ಕನಸಿನ ಮನೆ ಮಹಡಿ ಮೇಲಿನ ಕಟ್ಟಡದ ಗೃಹಪ್ರವೇಶವೂ ನಡೆಯಲಿತ್ತು. ನೀತು ಮನೆಯ ಮಕ್ಕಳ ಜೊತೆ ನಮಿತ—ನಿಕಿತಾಳಿಗೂ ಹೊಸ ಬಟ್ಟೆ ಮತ್ತು ನಾಲ್ವರು ಹೆಣ್ಣು ಮಕ್ಕಳಿಗೆ ಚಿನ್ನದ ಸರವನ್ನೂ ತಂದಿದ್ದಳು. ನಿಶಾಳಿಗಂತು ಮಹಡಿಯ ಮೆಟ್ಟಿಲನ್ನು ಹತ್ತುವುದು ಇಳಿಯುವುದೇ ಸಂಭ್ರಮದ ಸಂಗತಿಯಾಗಿದ್ದು ಸುಸ್ತಾದ ತಕ್ಷಣ ಕಿಚನ್ನಿಗೆ ಹೋಗಿ ನೀರು ಕುಡಿದು ಸೋಫಾ ಮೇಲೇ ಪಸರಿಸಿಕೊಳ್ಳುತ್ತಿದ್ದಳು. ಪುಟ್ಟ ಜಿಂಕೆ ಮರಿಯಂತೆ ಕುಣಿದಾಡುತ್ತಿದ್ದ ನಿಶಾಳನ್ನು ಹಿಡಿದು ಕೂರಿಸುವುದೇ ಮನೆಯವರಿಗೆ ತುಂಬ ತ್ರಾಸದಾಯಕವಾಗಿತ್ತು. ಶೀಲಿ ಮತ್ತು ಸುಕನ್ಯಾ ಪ್ರೆಗ್ನೆಂಟಾದ ಕಾರಣ ಅವರಿಂದ ಜಾಸ್ತಿ ಕೆಲಸ ಮಾಡಿಸದೆ ನೀತು...ರಜನಿ..ಅನು ಹಾಗು ಸವಿತಾರೇ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಯುಗಾದಿಯ ಹಿಂದಿನ ದಿನ ಬೆಳಿಗ್ಗೆಯಿಂದಲೇ ಮನೆಯವರಿಗೆಲ್ಲಾ ತಿಂಡಿ ಊಟವನ್ನು ಅಡುಗೆ ಭಟ್ಟರೇ ಕಳುಹಿಸುತ್ತಿದ್ದು ಹೆಂಗಸರಿಗೆ ಅನುಕೂಲವಾಗಿ ಗೃಹಪ್ರವೇಶದ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯಕವಾಗಿತ್ತು.
ಯುಗಾದಿ ಹಬ್ಬದ ದಿನ ಮೊದಲು ದೇವರ ಪೂಜೆ ನೆರವೇರಿಸಿ ಬಳಿಕ ಎಲ್ಲರೂ ಹೇಳಿದಂತೆ ಹರೀಶ ಮಡದಿಯ ಜೊತೆ ಗೃಹಪ್ರವೇಶದ ಪೂಜೆಗೆ ಕುಳಿತಾಗ ನೀತು ಮಡಿಲಲ್ಲಿ ಮಗಳನ್ನು ಕೂರಿಸಿಕೊಂಡಳು. ಮನೆಯ ಸುತ್ತಮುತ್ತಲಿನವರು ಹರೀಶನ ಶಾಲಾ ಸಿಬ್ಬಂದಿ ರಮೇಶ ಮತ್ತವನ ಕುಟುಂಬ...ಜಾನಿ...ಹಾಲಿನ ಗಿರಿ ಹೀಗೇ ಕೆಲವರನ್ನು ಪೂಜೆಗೆ ಆಹ್ವಾನಿಸಲಾಗಿತ್ತು. ಅಶೋಕ ಹೊಸದಾಗಿ ಖರೀಧಿಸಿದ್ದ ಡಿಜಿಟಲ್ ಕ್ಯಾಮೆರಿದಲ್ಲಿ ಗಿರೀಶ ಫೋಟೋ ತೆಗೆಯುತ್ತಿದ್ದು ಸುರೇಶ ಕ್ಯಾಮ್ ಕೋಡರಿನಿಂದ ಪೂಜೆಯ ವೀಡಿಯೊ ತೆಗೆಯುತ್ತಿದ್ದನು. ಸುಧೀರ್ಘವಾದ ಪೂಜೆಯಲ್ಲಿ ಕೆಲಹೊತ್ತು ಅಮ್ಮನ ಮಡಿಲಿನಲ್ಲೇ ಕುಳಿತಿದ್ದ ನಿಶಾ ನಮಿತ..ರಶ್ಮಿ...ನಿಕಿತಾ ಅಕ್ಕಂದಿರ ಬಳಿಗೋಡಿದಳು. ಅಣ್ಣಂದಿರು ತಂಗಿಯನ್ನು ವಿವಿಧ ಭಂಗಿಗಳಲ್ಲಿ ನಿಲ್ಲಿಸಿ ವೀಡಿಯೋ ಫೋಟೋ ತೆಗೆಯುತ್ತಿದ್ದರೆ ನಿಶಾ ಅವರಿಗೆ ಫೋಸ್ ಕೊಟ್ಟು ತುಂಬಾ ಸಂಭ್ರಮಪಡುತ್ತಿದ್ದಳು. ಗೃಹಪ್ರವೇಶದ ಪೂಜೆ ಮುಗಿಸಿ ಆಗಮಿಸಿದ್ದ ಅತಿಥಿಗಳಿಗೆ ಭೋಜನ ಪೂರೈಸಿ ಅವರನ್ನು ಸತ್ಕರಿಸಿ ಬೀಳ್ಕೊಟ್ಟರು. ನೀತು ಪೂಜೆಯಲ್ಲಿ ಕುಳಿತಿದ್ದ ಕಾರಣ ಇತರೆ ಜವಾಬ್ದಾರಿಗಳನ್ನೆಲ್ಲಾ ರಜನಿ....ಅನುಷ ಮತ್ತು ಸವಿತಾ ವಹಿಸಿಕೊಂಡಿದ್ದರು.
* *
* *
ಮಹಡಿ ಮನೆಯ ಪ್ರತೀ ರೂಮಿಗೂ ಡಬಲ್ ಕಾಟ್ ಮಧ್ಯದಲ್ಲಿನ ವಿಶಾಲ ಲಿವಿಂಗ್ ಏರಿಯಾದಲ್ಲಿ ಆರಾಮದಾಯಕ ಸೋಫಾಗಳು ಎಲ್.ಇ.ಡಿ ದೊಡ್ಡ ಪರದೆಯ ಟಿವಿ ಮತ್ತಿತರ ಅಗತ್ಯ ವಸ್ತುಗಳನ್ನು ಖರೀಧಿಸಿ ತಂದು ಸುಂದರವಾಗಿ ಅಲಂಕರಿಸಲಾಯಿತು. ನೀತು ತಾವು ಕೆಳ ಮನೆಯಲ್ಲಿರುತ್ತಿದ್ದ ರೂಮನ್ನು ರವಿ—ಶೀಲಾಳಿಗೆ ಬಿಟ್ಟು ಮಹಡಿಯಲ್ಲಿ ಮಗಳಿಗೋಸ್ಕರ ಅವಳಿಗಿಷ್ಟವಾದ ಕಾರ್ಟೂನಿನ ಟೈಲ್ಸ್ ಹಾಕಲಾಗಿದ್ದ ರೂಮಿಗೆ ಶಿಫ್ಟಾದರು. ಯಾರೂ ಇಲ್ಲದಿರುವಾಗ ನಿಶಾ ಮೆಟ್ಟಿಲುಗಳಿಂದ ಕೆಳಗಿಳಿಯದಂತೆ ಎರಡೂ ಕಡೆ ಗ್ಲಾಸಿನಲ್ಲಿ ಅಡ್ಡಕ್ಕೆ ಡೋರ್ ಹಾಕಿಸಲಾಗಿತ್ತು.
ಎರಡನೇ ಮಹಡಿಯ ನಾಲ್ಕು ರೂಮುಗಳಲ್ಲಿ ಎರಡನ್ನು ಸುರೇಶ—ಗಿರೀಶ ಆಕ್ರಮಿಸಿಕೊಂಡರೆ ಅವರ ಏದುರಿನ ರೂಂ ಬಾಗಿಲ ಮೇಲೆ ರಶ್ಮಿ ತನ್ನೆಸರನ್ನು ಬರೆದಳು. ಅಶೋಕನ ಮನೆಯ ಮಹಡಿಯಲ್ಲಿ ನವ ದಂಪತಿಗಳಿದ್ದರೆ ಕೆಳಗಡೆ ರಜನಿ—ಅಶೋಕರ ವಾಸ್ತವ್ಯವಿತ್ತು. ಅಲ್ಲಿನ ಮಹಡಿಯಲ್ಲಿ ರಶ್ಮಿಯ ರೂಂ ಕೂಡ ಸುಸಜ್ಜಿತವಾಗಿ ಅಲಂಕರಿಸಲಾಗಿತ್ತು. ಈ ಮನೆಯಲ್ಲಿನ ಕಿಚನ್ ಕೇವಲ ಕಾಫಿ ಟೀ ಮಾಡುವುದಕ್ಕಷ್ಟೇ ಸೀಮಿತಗೊಂಡಿದ್ದು ಎಲ್ಲರ ತಿಂಡಿ ಊಟದ ವ್ಯವಸ್ಥೆ ನೀತು ಮನೆಯ ಕಿಚನ್ನಿನಲ್ಲಿಯೇ ಸಿದ್ದಪಡಿಸುತ್ತಿದ್ದರು. ಕೆಳಗಿದ್ದ ಎರಡು ರೂಂ ಗೋಡೆಗಳನ್ನು ತೆಗೆದು ನವೀಕರಿಸಿ ಅಲ್ಲಿ ಎಲ್ಲರೂ ಕುಳಿತುಕೊಂಡು ಊಟ ಮಾಡುವುದಕ್ಕೆ ಹೊಸ ಡೈನಿಂಗ್ ಟೇಬಲ್ ಹಾಕಲಾಯಿತು.
* *
* *
ಒಂದು ಭಾನುವಾರದ ಮುಂಜಾನೆ ಅಮ್ಮನಿಂದ ಉಪ್ಪಿಟ್ಟು ತನ್ನಿಷ್ಟದ ಕೇಸರೀಬಾತ್ ತಿನ್ನಿಸಿಕೊಳ್ಳುತ್ತ ಮನೆಯಂಗಳಕ್ಕೆ ಬಂದಿದ್ದ ಗುಬ್ಬಚ್ಚಿ ಗಿಣಿ ಮತ್ತಿತರ ಪಕ್ಷಿಗಳಿಗೆ ನಿಶಾ ಹಣ್ಣು...ಧಾನ್ಯ ನೀಡುತ್ತಿದ್ದಳು. ಮನೆ ಹಿರಿಯರು ಅಂಗಳದಲ್ಲೇ ಕುಳಿತು ಮಾತನಾಡುತ್ತಿದ್ದಾಗ ಗೇಟನ್ನು ತೆರೆದು ಒಳಗೆ ಕಾಲಿಟ್ಟ ದಯಾನಂದ ಸ್ವಾಮೀಜಿ ಶಿವರಾಮಚಂದ್ರ ಗುರುಗಳನ್ನು ನೋಡಿ ಎಲ್ಲರೂ ಮೇಲೆದ್ದು ಅವರಿಗೆ ವಂದಿಸಿದರು. ನೀತು ಸಹ ಮಗಳಿಗೆ ತಿಂಡಿ ತಿನ್ನಿಸುವುದನ್ನು ನಿಲ್ಲಿಸಿ ಕೈ ತೊಳೆದು ಅವರಿಗೆ ನಮಸ್ಕರಿಸಿದಳು.
ಇಬ್ಬರು ಗುರುಗಳ ಹಿಂದೆಯೇ ಬಂದಿದ್ದ ಅತ್ಯಂತ ತೇಜಸ್ಸುಳ್ಳ ವ್ಯಕ್ತಿ.......ಮಗಳೇ ನೀನು ಊಟ ಮಾಡಿಸುವುದನ್ನು ನಿಲ್ಲಿಸಿ ಬರಬೇಡ ಹೋಗು ಮೊದಲು ಮಗುವಿಗೆ ಊಟ ಮಾಡಿಸು.
ಶಿವರಾಮಚಂದ್ರ......ಇವರು ನಮ್ಮ ಪೂಜನೀಯ ಗುರುಗಳು ಗೋವಿಂದಾಚಾರ್ಯರು ಎಂಬುದು ಇವರ ನಾಮಧೇಯ.
ಮೂವರು ಪೂಜನೀಯ ಗುರಗಳ ದೃಷ್ಟಿಯೂ ತಮ್ಮತ್ತ ತಿರುಗಿಯೂ ನೋಡದೆ ತನ್ನ ಸುತ್ತಲೂ ಕುಳಿತಿದ್ದ ಮೂರು ನಾಯಿಗಳು ಮತ್ತು ಹಲವಾರು ಪಕ್ಷಿಗಳ ಜೊತೆ ಆಡುತ್ತಿದ್ದ ನಿಶಾಳ ಮೇಲೇ ನೆಟ್ಟಿತ್ತು.
ಗೋವಿಂದಾಚಾರ್ಯರು......ಶ್ವಾನಗಳ ಜೊತೆ ನಿರ್ಭೀತಿಯಿಂದಲೇ ಪಕ್ಷಿಗಳೂ ಕುಳಿತು ಚಿಲಿಪಿಲಿ ಗುಟ್ಟುವುದು ತಾಯಿ ಆಧಿಶಕ್ತಿಯ ಅನುಗ್ರಹದಿಂದಲೇ ಸಾಧ್ಯ. ಹರೀಶ ನಿನ್ನ ಮಡದಿ ಮಗಳಿಗೆ ಊಟ ಮಾಡಿಸಿದ ಬಳಿಕ ನಾನು ನಿಮ್ಮಿಬ್ಬರೊಡನೆ ಏಕಾಂತದಲ್ಲಿ ಮಾತನಾಡಲು ಇಚ್ಚಿಸುವೆ.
ಹರೀಶ ವಿನಮ್ರತೆಯಿಂದ ಕೈಮುಗಿದು.....ಆಗಲಿ ಪೂಜ್ಯರೆ ನೀವು ಹೇಳಿದಂತೆ ನಾನು ನೀತು ನಿಮ್ಮ ಸಮಕ್ಷಮ ಹಾಜರಿರುತ್ತೀವಿ ಆದರೆ ಮೊದಲು ನಿಮ್ಮ ಪೂಜ್ಯ ಚರಣವನ್ನು ನಮ್ಮ ಮನೆಯೊಳಗಿಟ್ಟು ನಮ್ಮನ್ನು ಅನುಗ್ರಹಿಸಬೇಕೆಂದು ಆಗ್ರಹಿಸಿಕೊಳ್ಳುವೆ.
ಗೋವಿಂದಾಚಾರ್ಯರು ಮನೆಯೊಳಗೆ ಬಂದು ಸೋಫಾದ ಮೇಲೆ ಕುಳಿತುಕೊಳ್ಳಲು ನಿರಾಕರಿಸಿ ನೆಲದಲ್ಲಿ ಚಾಪೆ ಹಾಸುವಂತೆ ಸೂಚಿಸಿ ಅದರ ಮೇಲೆ ಕುಳಿತಾಗ ಅವರಿಬ್ಬರು ಶಿಷ್ಯರೂ ಗುರುಗಳ ಹಿಂದೆ ಆಸೀನರಾದರು. ನೀತು ಹೊರಗಿದ್ದು ಮಗಳಿಗೆ ತಿಂಡಿ ತಿನ್ನಿಸುತ್ತಿದ್ದರೆ ಉಳಿದವರೆಲ್ಲರೂ ಗುರುಗಳ ಮುಂದೆ ಕುಳಿತು ಅವರೇನು ಸೂಚನೆ ನೀಡುತ್ತಾರೆಂದು ಕಾಯುತ್ತಿದ್ದರು. ಶೀಲಾ ಮೂವರು ಗುರುಗಳಿಗೂ ನೀರಿನ ಜೊತೆ ಹಣ್ಣಿನ ರಸ ತಂದಿಟ್ಟಾಗ ಅವಳಿಗೆ ಆಶೀರ್ವಧಿಸಿದ ಗೋವಿಂದಾಚಾರ್ಯರು......ತಾಯಿಯಾಗುತ್ತಿರುವ ಹೆಣ್ಣಿನಿಂದ ನೀರು ಸೇವಿಸದರೂ ಅದು ಅಮೃತಕ್ಕೆ ಸಮಾನ ನೀನು ಹಣ್ಣಿನ ರಸವನ್ನೇ ತಂದಿಟ್ಟಿರುವೆಯಲ್ಲ ಮಗಳೇ.
ಶೀಲಾ ಕೈ ಮುಗಿದು.....ಗುರುಗಳೇ ತಾವೇನು ಸ್ವೀಕರಿಸುತ್ತೀರೆಂದು ನನಗೆ ತಿಳಿಯದು ಅದಕ್ಕಾಗಿಯೇ ಹಣ್ಣಿನ ರಸ ತಂದಿರುವೆ. ನೀವು ಅಪ್ಪಣೆ ಕೊಟ್ಟರೆ ನೀವು ಆಜ್ಞಾಪಿಸಿದಂತೆ ನಾವು ಭೋಜನವನ್ನು ಸಿದ್ದಪಡಿಸುತ್ತೇವೆ.
ಗೋವಿಂದಾಚಾರ್ಯರು ನಸುನಕ್ಕು......ಈ ಮನೆಯಲ್ಲಿ ಆದಿಶಕ್ತಿ ವರ ಪ್ರಸಾದದಿಂದ ಜನಿಸಿದ ಮಗುವಿದ್ದಾಳೆ ಹಾಗಾಗಿ ನಾವಿಲ್ಲಿಯೇ ಭೋಜನ ಮಾಡಿಕೊಂಡೆ ತೆರಳುತ್ತೇವೆ. ಆದರೆ ನಮ್ಮ ಭೋಜನ ಸಾತ್ವಿಕ ಪದ್ದತಿಯಲ್ಲಿ ಉಪ್ಪು...ಹುಳಿ....ಖಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಗಳು ಅನುಷ ಸಿದ್ದಪಡಿಸಿದರೆ ಉತ್ತಮ.
ಗುರುಗಳು ತನ್ನ ಕೈಯಿಂದ ಭೋಜನ ಮಾಡುವ ಇಚ್ಚೆ ವ್ಯಕ್ತಪಡಿಸಿ ಆಜ್ಞಾಪಿಸಿದ್ದಕ್ಕೆ ಕೃತಜ್ಞಳಾದ ಅನುಷ ಅವರಿಗೆ ವಂದಿಸಿ ಕಿಚ್ಚನ್ನಿನತ್ತ ತೆರಳಿದರೆ ಅವಳಿಗೆ ಸಹಾಯ ಮಾಡೆಂದು ರಶ್ಮಿಯನ್ನು ಗುರುಗಳೇ ಕಳುಹಿಸಿದರು. ನೀತು ಸಹ ಒಳಬಂದು ಮೂವರಿಗೂ ನಮಸ್ಕರಿಸಿ ಎದುರು ಕುಳಿತರೆ ಹೊರಗಿನಿಂದ ಕಿರುಚಾಡುತ್ತ ಮನೆಯೊಳಗೆ ಬಂದ ನಿಶಾಳ ಹಿಂದೆಯೇ ಪುಟ್ಟ ಕುಕ್ಕಿ ಮರಿಯೂ ಕುಣಿದಾಡುತ್ತ ಬಂದಿತು. ಆಚಾರ್ಯರು ನಿಶಾ ತಲೆ ನೇವರಿಸಿ ಆಶೀರ್ವಧಿಸುತ್ತ....ಜೀವನದಲ್ಲಿ ಯಶಸ್ಸು...ಶ್ರೇಯಸ್ಸು...ಸರಸ್ವತಿ ಮಾತೆಯ ಕೃಪೆ...ಲಕ್ಷ್ಮಿ ಮಾತೆಯ ಶ್ರೀರಕ್ಷೆ ಸದಾ ನಿನ್ನ ಮೇಲಿರಲಿ ಮಗು.
ನಿಶಾ ಅವರನ್ನೇ ಧಿಟ್ಟಿಸಿ ಪಿಳಿಪಿಳಿ ಎಂದು ನೋಡಿ....ಕುಕ್ಕಿ....ಕುಕ್ಕಿ ಎಂದು ನಾಯಿ ಮರಿಯತ್ತ ಕೈ ತೋರಿಸಿದಳು.
ಆಚಾರ್ಯರು ನಗುತ್ತ...ನಿನ್ನ ಕುಕ್ಕಿ ಮರಿಗೂ ಆಶೀರ್ವಧಿಸಬೇಕಾ ಎಂದುದಕ್ಕೆ ನಿಶಾ ಹೂಂ...ಹೂಂ...ಎಂದು ತಲೆಯಾಡಿಸಿ ಓಡೋಗಿ ಅಶೋಕನ ಮೇಲೆ ಜಿಗಿದು ಅವನ ಕತ್ತಿಗೆ ನೇತಾಕಿಕೊಂಡಳು.
ಆಚಾರ್ಯರು.....ಹರೀಶ ನೀನು ನೀತು ಇಬ್ಬರೇ ನನ್ನ ಜೊತೆ ಬನ್ನಿರಿ ಮಗು ಇಲ್ಲೇ ಆಡಿಕೊಂಡಿರಲಿ.
ಹರೀಶ ಆಚಾರ್ಯರನ್ನು ಆದರದಿಂದ ಮಹಡಿ ಮನೆಗೆ ಕರೆದೊಯ್ದು ಅವರಿಗೆ ಕುಳಿತುಕೊಳ್ಳಲು ಆಸನ ಹಾಕಿದಾಗ ಹಿಂದೆಯೇ ಬಂದಿದ್ದ ನೀತುಳಿಗೆ ಬಾಗಿಲು ಹಾಕೆಂದು ಹೇಳಿದರು.
ಆಚಾರ್ಯರು.....ಮಗಳೇ ನಿನ್ನ ಮಗಳ ಬಗ್ಗೆ ನಿನಗೆ ಯಾವ ರೀತಿ ಭಾವನೆಗಳಿದೆ ?
ನೀತು.....ಆಚಾರ್ಯರೇ ನಾನವಳನ್ನು ಹೊರಲಿಲ್ಲ ಹೆರಲಿಲ್ಲ ಆದರೆ ನಾನು ಹೆತ್ತ ಇಬ್ಬರು ಮಕ್ಕಳಿಗಿಂತಲೂ ಅವಳೆ ನನಗೆ ಪ್ರೀತಿಪಾತ್ರಳು. ಅವಳು ನನ್ನೊಂದಿಗೆ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದರ ಮೊದಲೇ ನಾನು ಪ್ರಾಣ ತ್ಯಜಿಸಲು ಇಚ್ಚಿಸುತ್ತೇನೆ.
ಹರೀಶ.....ನನಗಂತು ಅವಳೇ ಸರ್ವಸ್ವ ಎಂದರೆ ತಪ್ಪಾಗಲಾರದು.
ಆಚಾರ್ಯರು....ನಿಮ್ಮ ಮನಸ್ಸಿನಲ್ಲಿ ಆ ಮಗುವಿನ ಮೇಲೆ ಅದೆಷ್ಟು ಪ್ರೀತಿಯಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಆದರೂ ಮಾತನ್ನು ಪ್ರಾರಭಿಸುವ ಮುನ್ನ ಪ್ರಶ್ನಿಸಿದೆ. ಮಗಳೇ ನೀತು ನೀನು ಅರಮನೆಗೆ ಹೋಗಿದ್ದಾಗ ಆರಾಧನಾ ಎಂಬುವವಳನ್ನು ಬೇಟಿಯಾದೆಯಾ ?
ನೀತು.....ಇಲ್ಲ ಗುರುಗಳೇ ಆದರೆ ಸುಮೇರ್ ಸಿಂಗ್ ಬಾಯಿಂದ ಅವಳ ಬಗ್ಗೆ ಕೇಳಿದೆ. ಸುಧಾಮಣಿಗೆ ಅವರೇ ಆರೈಕೆ ಮಾಡಿದರೆಂದು ಸುಮೇರ್ ಹೇಳುತ್ತಿದ್ದ.
ಆಚಾರ್ಯರು ನಿಟ್ಟುಸಿರು ಬಿಡುತ್ತ.....ರಾಜಮನೆತನಗಳಲ್ಲಿ ನಮ್ಮ ಮುಂದೆ ಜನರ ನಿಜ ಮುಖದ ಪರಿಚಯವೇ ಆಗುವುದಿಲ್ಲ. ನಮ್ಮ ಸೂಕ್ಷ್ಮ ಮನಸ್ಸಿನಿಂದ ಅವರನ್ನು ಗಮನಿಸಿದಾಗಲೇ ಅವರ ಬಗೆಗಿನ ಸತ್ಯವು ನಮಗೆ ಅರಿವಾಗುತ್ತದೆ. ಆರಾಧನಾ ಅರಮನೆಯಲ್ಲಿ ನನ್ನ ಅಚ್ಚುಮೆಚ್ಚಿನ ನಿರ್ಮಲ ಮನಸ್ಸಿನವಳಾದ ಸುಧಾಮಣಿಯ ಆರೈಕೆ ಮಾಡುತ್ತಿದ್ದರೂ ಅವಳ ಸಾವಿನಲ್ಲಿ ಈಕೆಯದ್ದೇ ಮುಖ್ಯ ಕೈವಾಡ.
ನೀತು.....ಆರಾಧನ ಚಿಕ್ಕಂದಿನಿಂದಲೂ ಸುಧಾಮಣಿಯ ತವರಿನಲ್ಲಿ ಅವರ ಜೊತೆಗೇ ಬೆಳೆದವಳೆಂದು ಸುಮೇರ್ ಹೇಳುತ್ತಿದ್ದ ಅಂತಿದ್ದೂ ಅವರ ಸಾವಿನಲ್ಲಿ ಈಕೆಯ ಕೈವಾಡ ಹೇಗೆ ಸಾಧ್ಯ ಗುರುಗಳೇ ?
ಗೋವಿಂದಾಚಾರ್ಯರು....ಅದನ್ನೇ ನೀನು ಕಂಡು ಹಿಡಿಯಬೇಕಿದೆ. ಸುಮೇರ್ ಸಿಂಗ್ ಅವನಿಗೆ ತಿಳಿದದ್ದನ್ನು ಮಾತ್ರವೇ ನಿನಗೆ ಹೇಳಿದ ಆದರೆ ಕತ್ತಲಿನಲ್ಲಿ ಮರೆಯಾಗಿರುವ ರಹಸ್ಯವನ್ನು ಹೊರತರುವುದು ನಿನ್ನ ಜವಾಬ್ದಾರಿ. ನಿಶಾಳಿಗೆ ನೀನು ತಾಯಿಯ ಪ್ರೀತಿ ಕೊಟ್ಟರಷ್ಟೇ ಸಾಲದು ಅವಳಿಗೆ ಗುರುವಾಗಿ ದಾರಿ ತೋರಿಸಿ...ಅವಳ ರಕ್ಷಕಳಾಗಿ ವಿರೋಧಿಗಳನ್ನು ಏದುರಿಸಿ ನಿಲ್ಲಬೇಕು ಇದು ನಿನ್ನಿಂದ ಸಾಧ್ಯವಾ ?
ನೀತು....ನನ್ನ ಮಗಳಿಗೋಸ್ಕರ ನಾನು ಏನು ಬೇಕಾದರು ಮಾಡಲು ಸಿದ್ದ ಗುರುಗಳೇ ಆಜ್ಞಾಪಿಸಿ.
ಆಚಾರ್ಯರು.....ನಿಶಾಳ ತಾತ ಸೂರ್ಯಪ್ರತಾಪ್ ಅಜ್ಜಿಯಾದಂತ ಅನ್ನಪೂರ್ಣದೇವಿ ಹಾಗು ತಂದೆ ತಾಯಿಯರನ್ನು ಅತ್ಯಂತ ನೀಚ ಷಡ್ಯಂತ್ರವನ್ನು ರಚಿಸಿ ಸಾಯಿಸಿಬಿಟ್ಟರು. ನೀನು ಆ ರಹಸ್ಯವನ್ನೆಲ್ಲಾ ಭೇಧಿಸಿ ನಿನ್ನ ಮಗಳ ಭವಿಷ್ಯವನ್ನು ಸುರಕ್ಷಿತವಾಗಿಸಬೇಕು.
*
*
*
No comments:
Post a Comment