ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಾಗ ಈ ಮೊದಲೇ ಅಶೋಕ ಬುಕ್ ಮಾಡಿದ್ದ ಮಿನಿ ಇವರಿಗಾಗಿ ಹೊರಗೆ ಕಾಯುತ್ತಿತ್ತು. ಎಲ್ಲರೂ ಅದನ್ನೇರಿ ಕುಳಿತರೆ ನಮಿತ ಅಕ್ಕನ ಪಕ್ಕ ಕುಳಿತ ನಿಶಾ ಕಿಟಕಿಯಾಚೆ ನೋಡಿ ಕಿರುಚಾಡುತ್ತ ಕೀಟಲೆ ಮಾಡುತ್ತ ಆಗಾಗ ಮಿಕ್ಕವರ ಹತ್ತಿರ ಹೋಗಿ ಸೇರಿಕೊಳ್ಳುತ್ತಿದ್ದಳು. ಹರಿದ್ವಾರ ತಲುಪಿ
ಕಾಯ್ದಿರಿಸಿರುವ ಲಕ್ಷುರಿ ಹೋಟೆಲ್ಲಿನ ರೂಂ ಸೇರುವಷ್ಟರಲ್ಲೇ ಸಂಜೆಯಾಗಿತ್ತು. ರೂಂ ಫೋನ್ ಮೊಳಗಿ ರಿಸೆಪ್ಷನ್ನಿನಿಂದ ಹರೀಶನಿಗೆ ಕರೆ ಬಂದು ಆತನನ್ನು ಯಾರೋ ಕಾಯುತ್ತಿರುವ ಬಗ್ಗೆ ತಿಳಿಸಲಾಯಿತು
ಕಾಯ್ದಿರಿಸಿರುವ ಲಕ್ಷುರಿ ಹೋಟೆಲ್ಲಿನ ರೂಂ ಸೇರುವಷ್ಟರಲ್ಲೇ ಸಂಜೆಯಾಗಿತ್ತು. ರೂಂ ಫೋನ್ ಮೊಳಗಿ ರಿಸೆಪ್ಷನ್ನಿನಿಂದ ಹರೀಶನಿಗೆ ಕರೆ ಬಂದು ಆತನನ್ನು ಯಾರೋ ಕಾಯುತ್ತಿರುವ ಬಗ್ಗೆ ತಿಳಿಸಲಾಯಿತು
ಹರೀಶ.....ಇಲ್ಯಾರು ನನ್ನನ್ನು ನೋಡಲು ಬಂದಿರೋದು ನಮಗಿಲ್ಲಿ ಯಾರ ಪರಿಚಯವೂ ಇಲ್ಲವಲ್ಲ.
ನೀತು......ಹೋಗಿ ನೋಡಿದರೆ ತಾನೇ ತಿಳಿಯುತ್ತೆ ನಾನು ಚಿನ್ನಿ ಪ್ರೆಶ್ ಆಗುತ್ತೀವಿ ನೀವು ಹೋಗಿ ಬನ್ನಿ.
ಹರೀಶ ಕೆಳಗೆ ಬಂದಾಗ ಕಾವಿ ವಸ್ತ್ರಧಾರಿಯಾದ ವ್ಯಕ್ತಿಯೊಬ್ಬರು ತಮ್ಮ ಪರಿಚಯ ಮಾಡಿಕೊಂಡು xxxx ಆಶ್ರಮದಲ್ಲಿ ತಮಗಾಗಿ ಗೋವಿಂಚಾರ್ಯ ಗುರುಗಳು ಏದುರುನೋಡುತ್ತಿದ್ದಾರೆ. ನೀವು ಪತ್ನಿ
ಸಮೇತರಾಗಿ ಬರಬೇಕೆಂದು ನನ್ನ ಬಳಿ ಹೇಳಿ ಕಳುಹಿಸಿದ್ದಾರೆ ನೀವು ಈಗಲೇ ಬರುವುದಾದರೆ ನಾನಿಲ್ಲೇ ಕಾಯುತ್ತಿರುತ್ತೇನೆ. ಹರೀಶ ಹತ್ತು ನಿಮಿಷದಲ್ಲಿ ಮಡದಿಯೊಂದಿಗೆ ಬರುವುದಾಗಿ ಹೇಳಿ ನೀತುಳಿಗೆ ವಿಷಯ ತಿಳಿಸಿ ತಾನು ರೆಡಿಯಾಗತೊಡಗಿದನು. ನೀತು ಮಗಳನ್ನು ಎತ್ತಿಕೊಂಡು ರಜನಿಯ ಬಳಿ ಹೋಗಿ......
ನೀತು......ರಜನಿ ಗುರುಗಳು ನನ್ನ ಹರೀಶರನ್ನು xxxx ಆಶ್ರಮದಲ್ಲಿ ಕಾದಿರುವಂತೆ ಅದಕ್ಕೆ ನಾವಲ್ಲಿಗೆ ಹೋಗಬೇಕಿದೆ ನೀನೇ ಇವಳನ್ನು ಸಂಭಾಳಿಸಿಕೋ.
ಅಶೋಕ.....ಬಾ ಚಿನ್ನಿ ಅಮ್ಮಂಗೆ ಟಾಟಾ ಮಾಡು ನಾನು ನೀನು ಅಣ್ಣ ಅಕ್ಕ ಎಲ್ಲರೂ ಆಚೆ ಹೋಗಿ ಸುತ್ತಾಡಿಕೊಂಡು ಐಸ್ ತಿಂದು ಬರೋಣ ಆಯ್ತಾ.
ನಿಶಾಳಿಗಿನ್ನೇನು ಬೇಕಿತ್ತು ತಟ್ಟನೆ ಅಶೋಕನ ಹೆಗಲಿಗೇರಿ ಅಮ್ಮನತ್ತ ಕೈಬೀಸಿ ಟಾಟಾ ಮಾಡಿ ಅವನೊಂದಿಗೆ ತೊದಲು ನುಡಿಯಲ್ಲಿ ಏನೊ ಹೇಳತೊಡಗಿದಳು.
* *
* *
ನೀತು ಹಾಗು ಹರೀಶ xxxx ಆಶ್ರಮವನ್ನು ತಲುಪಿದಾಗ ಅವರು ಬರುವುದನ್ನೇ ಎದುರು ನೋಡುತ್ತಿದ್ದ ವಿಕ್ರಂ ಸಿಂಗ್ ಬಾಗಿಲಿನಲ್ಲೇ ಅವರಿಗೆ ಬೇಟಿಯಾದನು.
ಹರೀಶ......ವಿಕ್ರಂ ಸಿಂಗ್ ನೀವು ಯಾವಾಗ ಬಂದಿರಿ ?
ವಿಕ್ರಂ ಸಿಂಗ್......ನಾನು ಬೆಳಿಗ್ಗೆಯೇ ಬಂದೆ ಆದರೆ ಗುರುಗಳನ್ನಿನ್ನೂ ಬೇಟಿಮಾಡುವ ಅವಕಾಶ ಸಿಕ್ಕಿಲ್ಲ. ನೀವು ಬಂದಾಗ ಜೊತೆಯಲ್ಲೇ ಬರುವಂತೆ ನನಗೆ ಅವರ ಶಿಷ್ಯರೊಬ್ಬರಿಂದ ಅಪ್ಪಣೆ ಮಾಡಿದ್ದಾರೆ.
ಹರೀಶ....ಗುರುಗಳು ಯಾವ ಕೋಣೆಯಲ್ಲಿದ್ದಾರೆ ?
ಅಷ್ಟರಲ್ಲೇ ಶಿಷ್ಯನೊಬ್ಬ ಬಂದು ಮೂವರಿಗೂ ಹಿಂಬಾಲಿಸುವಂತೇಳಿ ಗೋವಿಂದಾಚಾರ್ಯರ ಬಳಿ ಕರೆದೊಯ್ದನು. ಆಚಾರ್ಯರ ಕೋಣೆ ತಲುಪುವ ಮುನ್ನ ಎದುರಾದ ರೂಮಿನ ಕಿಟಕಿಯಿಂದ ತರುಣಿಯು ನೀತುವಿನ ಕಡೆಯೇ ನೋಡುತ್ತಿದ್ದು ನೀತು ದೃಷ್ಟಿಯೂ ಆಕೆ ಮೇಲೆ ಬಿದ್ದಾಗ ನೀತುವಿನ ತುಟಿಗಳಲ್ಲಿ ಮುಗುಳ್ನಗೆ ಮೂಡಿತು. ಮೂವರೂ ಗೋವಿಂದಾಚಾರ್ಯರಿಗೆ ನಮಸ್ಕರಿಸಿ ಅವರ ಹಿಂದೆ ನಿಂತಿದ್ದ ಗುರು ಶಿವರಾಮಚಂದ್ರ ಮತ್ತು ದೇವಾನಂದ ಸ್ವಾಮೀಜಿಗಳಿಗೂ ನಮಿಸಿ ಎದುರಿಗೆ ಕುಳಿತರು.
ಗೋವಿಂದಾಚಾರ್ಯರು.....ನಮ್ಮ ಯುವರಾಣಿ ಹೇಗಿದ್ದಾಳೆ ಹರೀಶ
ಹರೀಶ......ಅವಳಿಗೇನು ಗುರುಗಳೇ ಆರಾಮವಾಗಿ ಆಡಿಕೊಂಡು ಸಂತೋಷದಿಂದ ಕಾಲ ಕಳೆಯುತ್ತಿದ್ದಾಳೆ. ಈಗಲೂ ಪ್ರತಾಪ್ ಮತ್ತು ಅಶೋಕನ ಜೊತೆ ಸುತ್ತಾಡಿಕೊಂಡು ಬರಲು ಹೋಗಿದ್ದಾಳೆ.
ಗೋವಿಂದಾಚಾರ್ಯರು......ಸಂತೋಷ. ನಾನು ಈ ದಿವನೇ ನೀವು ಹರಿದ್ವಾರಕ್ಕೆ ಬರಬೇಕೆಂದು ಹೇಳಿದ್ದೇಕೆ ಅಂತ ಗೊತ್ತಿದೆಯಾ ?
ನೀತು....ನಾಳೆ ಮೇ 10ನೇ ತಾರೀಖು ರಾಣಾಪ್ರತಾಪ್ ಸುಧಾಮಣಿ ಇಬ್ಬರೂ ಜನಿಸಿದ್ದು ನಾಳೆಯ ದಿನ ಜೊತೆಗೆ ಅವರ ವಿವಾಹದ ದಿನ ಕೂಡ ಮೇ 10. ಆದರೆ ನೀವು ನಮ್ಮೆಲ್ಲರನ್ನೂ ಹರಿದ್ವಾರಕ್ಕೆ ಬನ್ನಿರಿ ಎಂದು ಏಕೆ ಹೇಳಿದಿರೆಂದು ಮಾತ್ರ ನನಗೆ ತಿಳಿದಿಲ್ಲ ಗುರುಗಳೇ.
ಗೋವಿಂದಾಚಾರ್ಯರು ಅಚ್ಚರಿಯಿಂದ........ಅವರಿಬ್ಬರ ಹುಟ್ಟಿದ ದಿನದ ಬಗ್ಗೆ ನಿನಗೆ ಹೇಗೆ ತಿಳಿಯಿತು ?
ನೀತು.....ಸುಧಾಮಣಿಯವರ ಡೈರಿಯ ಮೂಲಕ ತಿಳಿಯಿತು. ವಿಕ್ರಂ ಸಿಂಗ್ ನಿಶಾಳನ್ನು ಆಶ್ರಮದ ಬಳಿ ಬಿಟ್ಟು ತೆರಳಿದಾಗ ಅವಳ ಜೊತೆ ರಾಣಾಪ್ರತಾಪರ ಒಂದು ಪುಟ್ಟ ಮರದ ಪೆಟ್ಟಿಗೆಯೂ ಅವಳ ಬ್ಯಾಗ್ ಒಳಗಿತ್ತು. ಅದರಲ್ಲಿದ್ದ ಕಾಗದ ಮತ್ತು ಅರಮನೆಯಲ್ಲಿ ಸುಧಾಮಣಿ ಬರೆದಿದ್ದ ಡೈರಿಯನ್ನು ನಾನು ಎರಡು ದಿನದ ಹಿಂದಷ್ಟೆ ಓದಿದೆ. ನನಗೆ ಅದರಿಂದ ಬಹಳಷ್ಟು ವಿಷಯಗಳೂ ಗೊತ್ತಾಯಿತು. ಸುಧಾಮಣಿ ಜನ್ಮ ನೀಡಿದ ಮಗಳನ್ನು ನಾನು ದತ್ತು ಸ್ವೀಕರಿಸಿ ನನ್ನ ಸ್ವಂತ ಮಗಳ ರೀತಿ ಲಾಲನೆ ಪೋಷಣೆ ಮಾಡುತ್ತಿರುವಾಗ ಮಹಾರಾಜ ಮತ್ತು ಮಹಾರಾಣಿಯರು ಮಗಳಾಗಿ ದತ್ತು ಸ್ವೀಕರಿಸಿದ ಹುಡುಗಿಯೂ ಸಹ ನನಗೆ ಹಿರಿಯ ಮಗಳಲ್ಲವೇ ಗುರುಗಳೇ ? ನನ್ನ ಹಿರಿಮಗಳಾದ ನಿಧಿ ಎಲ್ಲಿ ಕಾಣಿಸುತ್ತಿಲ್ಲವಲ್ಲ ಗುರುಗಳೆ ?
ನೀತುವಿನ ಮಾತುಗಳನ್ನು ಕೇಳಿ ಹರೀಶ ಅಚ್ಚರಿಯಿಂದ ಹೆಂಡತಿಯ ಕಡೆ ನೋಡುತ್ತಿದ್ದರೆ ಮೂವರು ಗುರುಗಳು ಕೂಡ ಅವಳನ್ನು ನೋಡುತ್ತಿದ್ದರು. ವಿಕ್ರಂ ಸಿಂಗ್ ತುಟಿಗಳಲ್ಲಿ ಮಾತ್ರ ನಗು ಮೂಡಿತ್ತು.
ಗೋವಿಂದಾಚಾರ್ಯರು......ನಿಧಿ ಬಗ್ಗೆಯೂ ನಿನಗೆ ತಿಳಿದಿದೆ ತುಂಬ ಸಂತೋಷ ಮಗಳೇ. ಹೌದು ರಾಣಾಪ್ರತಾಪ್ ಮತ್ತು ಸುಧಾಮಣಿ ಮದುವೆಯಾದ ಮೊದಲನೇ ವರ್ಷವೇ ಈ ಮಗುವನ್ನು ಮಗಳಾಗಿ ದತ್ತು ಸ್ವೀಕಾರ ಮಾಡಿದ್ದರು. ಆದರೆ ರಾಜಸ್ಥಾನದ ವಾತಾವರಣದಲ್ಲಿಮಗುವಿಗೆ ಹೊಂದಿಕೊಳ್ಳುವುದು ಕಷ್ಟಕರವಾಗಿ ಮೂರು ಸಲ ಆಕೆಗೆ ಮರಣದ ಸನಿಹಕ್ಕೆ ಕರೆದೊಯ್ಯುವಷ್ಟು ಆರೋಗ್ಯ ಹದಗೆಟ್ಟಿದ್ದರಿಂದ ನಾನೇ ಅವಳನ್ನು ನಮ್ಮ ಆಶ್ರಮದ ತಂಪು ವಾತಾವರಣದಲ್ಲಿಯೇ ಬೆಳೆಸಬೇಕೆಂದು ಸಲಹೆ ನೀಡಿದ್ದೆ. ಸುಧಾಮಣಿಯ ಮಾತೃ ಹೃದಯ ತನ್ನ ಮಗಳನ್ನು ತನ್ನಿಂದ ದೂರ ಕಳಿಸಲು ಒಪ್ಪಿರಲಿಲ್ಲ ಆದರೆ ಮಗಳ ಆರೋಗ್ಯದ ದೃಷ್ಟಿಯಿಂದ ಬೇರೆ ದಾರಿಯೂ ಅವಳಿಗಿರಲಿಲ್ಲ. ಪ್ರತೀ ವರ್ಷ ಮೂರ್ನಾಲ್ಕು ತಿಂಗಳು ಸುಧಾಮಣಿ ಸಹ ನಮ್ಮ ಆಶ್ರಮದಲ್ಲಿ ಉಳಿದುಕೊಂಡು ಮಗಳಿಗೆ ಪ್ರೀತಿಯ ಧಾರೆಯೆರೆಯುತ್ತಿದ್ದಳು. ಸುಧಾಮಣಿ ಮತ್ತು ರಾಣಾಪ್ರತಾಪ್ ಮರಣ ಹೊಂದಿದ್ದರೂ ಅವರ ಅಸ್ಥಿಗಳನ್ನಿನ್ನೂ ವಿಸರ್ಜನೆ ಮಾಡಲಾಗಿಲ್ಲ. ನಾಳೆ ಅವರ ಹುಟ್ಟಿದ ಮತ್ತು ಸತಿಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನ ಅದಕ್ಕೆ ಅವರಿಬ್ಬರ ಅಸ್ಥಿಗಳನ್ನು ನಾಳೆ ವಿಧಿವತ್ತಾಗಿ ನಿಧಿ ಮತ್ತು ನಿಶಾಳಿಂದ ಗಂಗಾ ಮಾತೆಯಲ್ಲಿ ವಿಲೀನ ಮಾಡಿಸಲು ನಾನು ನಿಮ್ಮೆಲ್ಲರನ್ನೂ ಇಲ್ಲಿಗೆ ಬರುವಂತೆ ಹೇಳಿದ್ದು.
ನೀತು......ಅವರಿಬ್ಬರ ಆತ್ಮಕ್ಕೆ ಶಾಂತಿ ದೊರೆಯುವ ಸತ್ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ ಗುರುಗಳೇ ಆದರೆ ನನ್ನ ಹಿರಿಮಗಳು ನಿಧಿ ಎಲ್ಲೆಂದು ನೀವು ಹೇಳಲಿಲ್ಲ.
ನೀತುವಿನ ಮಾತು ಮುಗಿಯುತ್ತಿದ್ದಂತೆ ಅವರಿದ್ದ ಕೋಣೆ ಬಾಗಿಲಿನ ಹತ್ತಿರ ಬಂದು ನಿಂತ 19ರ ತರುಣಿಯ ಕಂಗಳಲ್ಲಿ ಅಶ್ರುಧಾರೆಯು ಹರಿಯುತ್ತಿತ್ತು. ನೀತು ಹಿಂದಿರುಗಿ ನೋಡಿ ಮೇಲೆದ್ದು ತರುಣಿ ಹತ್ತಿರ ತೆರಳಿ ತಲೆ ಸವರಿದಾಗ ಅಷ್ಟೂ ಹೊತ್ತಿನವರೆಗೂ ತಡೆದುಕೊಂಡಿದ್ದ ದುಃಖವನ್ನು ಹೊರಹಾಕಲು ನೀತುಳನ್ನು ಬಿಗಿದಪ್ಪಿಕೊಂಡ ತರುಣಿ ಅಳಲಾರಂಭಿಸಿದಳು. ನೀತು ತರುಣಿಯ ತಲೆ ನೇವರಿಸುತ್ತ ಅವಳಿಗೆ ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾ ಅವಳೊಟ್ಟಿಗೆ ತಾನೂ ಕಣ್ಣೀರು ಸುರಿಸುತ್ತಿದ್ದಳು.
ನೀತು......ಸಾಕು ಕಣಮ್ಮ ಅಳಬೇಡ ನಿಧಿ ಯಾಕಿಷ್ಟು ದುಃಖ ?
ನಿಧಿ ಕಣ್ಣೀರು ಒರೆಸಿಕೊಂಡು......ನಾನು ನಿಮ್ಮನ್ನು ಅಮ್ಮನೆಂದು ಕರೆಯಬಹುದಾ ?
ನೀತು......ನಾನು ನಿನ್ನನ್ನು ಹೆತ್ತಿರದೆ ಇರಬಹುದು ಅಥವ ನಿನ್ನನ್ನು ಸಾಕಿ ಸಲುಹದೆ ಇರಬಹುದು ಆದರೂ ನೀನು ನನ್ನ ಹಿರಿ ಮಗಳೇ ನಿಧಿ ಅದರಲ್ಲಿ ಯಾವ ಸಂಶಯವಿಲ್ಲ. ಎರಡು ದಿನಗಳಿಗಿಂತಲೂ ಮುಂಚೆ ನನಗೆ ನಿನ್ನ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ ಜೊತೆಗೆ ಗುರುಗಳೂ ನಿನ್ನ ಬಗ್ಗೆ ಹೇಳಿರಲಿಲ್ಲ. ಆದರೆ ಅಣ್ಣ ರಾಣಾಪ್ರತಾಪರ ಪತ್ರ ಓದಿದ ನಂತರ ಸುಧಾಮಣಿಯವರ ಡೈರಿಯನ್ನೂ ನಾನು ಓದಿ ನಿನ್ನ ಬಗ್ಗೆ ತಿಳಿದುಕೊಂಡೆ. ಮೂರು ದಿನಗಳಿಂದಲೂ ನಿನ್ನ ನೋಡಿ ಮಾತನಾಡಲು ನಾನೆಷ್ಟು ಹಾತೊರೆಯುತ್ತಿದ್ದೆ ಗೊತ್ತ ನನ್ನನ್ನು ಅಮ್ಮ ಎಂದು ಕರೆಯಲು ನೀನು ಸಂಕೋಚಪಡುವ ಅಗತ್ಯವಿಲ್ಲ.
ನಿಧಿ....ಸುಧಾಮಣಿ ಅಮ್ಮ ಮರಣ ಹೊಂದಿದ ನಂತರ ಅಪ್ಪ ಒಂದೇ ಒಂದು ಬಾರಿ ಆಶ್ರಮಕ್ಕೆ ಬಂದು ನನ್ನನ್ನು ಬೇಟಿಯಾಗಲು ಬಂದಿದ್ದು ಮುಂದಿನ ತಿಂಗಳು ನನ್ನನ್ನೂ ಅರಮನೆಗೆ ಕರೆದೊಯ್ಯುವುದಾಗಿ ಹೇಳಿದ್ದರು. ಆಗಲೇ ನನಗೆ ಪುಟ್ಟ ತಂಗಿ ಜನಿಸಿರುವ ಬಗ್ಗೆ ತಿಳಿಸಿದ್ರು ಆದರೆ ಇಲ್ಲಿರವರೆಗೂ ನಾನವಳನ್ನು ನೋಡಿಯೇ ಇಲ್ಲ. ತಿಂಗಳಿನ ನಂತರ ನಾನು ಆಶ್ರಮದಿಂದ ಶಾಶ್ವತವಾಗಿ ಮನೆಗೆ ಹಿಂದಿರುಗುವ ಸಮಯ ನಿಗಿಧಿಯಾಗಿತ್ತು ಆದರೆ ಅಪ್ಪನೂ ನನ್ನನ್ನು ಒಂಟಿಯಾಗಿಸಿ ಮರಳಿ ಬಾರದೂರಿಗೆ ಹೋಗಿಬಿಟ್ಟರು. ನನ್ನ ತಂಗಿಗೆ ನಿಮ್ಮ ಮಮತೆ ಪ್ರೀಥಿಯ ಆಸರೆ ಸಿಕ್ಕಿತು ಆದರೆ ನನಗೆ ಅಮ್ಮ ?
ನೀತು.....ಹಿಂದೆ ನಡೆದಿದ್ದನ್ನು ಚಿಂತಿಸಿ ಯಾವುದೇ ಪ್ರಯೋಜನವೂ ಇಲ್ಲ ಮಗಳೇ ಮುಂದೇನು ಮಾಡುವುದೆಂದೇ ನಾವು ಯೋಚಿಸಿ ಆ ದಾರಿಯಲ್ಲಿ ನಡೆಯಬೇಕಷ್ಟೆ. ಈಗ ನಿನ್ನ ಜೊತೆ ನಿನ್ನಮ್ಮ ನಾನಿರುವೆ ನಿನಗ್ಯಾರೂ ಇಲ್ಲ ಅಥವ ತಂಗಿಯೊಬ್ಬಳೇ ನಿನಗಿರುವುದು ಎಂದು ಯೋಚಿಸಬೇಡ ನಾವೆಲ್ಲರೂ ನಿನ್ನೊಡನೇ ಇದ್ದೀವಿ. ಎರಡು ವರ್ಷ ಹಿಂದಿನವರೆಗೂ ನಿನಗೆ ಸುಧಾ ಅಮ್ಮನ ಪ್ರೀತಿ ವಾತ್ಸಲ್ಯ ವರ್ಷದಲ್ಲಿ ಮೂರ್ನಾಲ್ಕು ತಿಂಗಳಾದರೂ ಸರಿ ದೊರಕುತ್ತಿತ್ತು ಅಲ್ಲವ. ಆದರೆ ನಿನ್ನ ಪುಟ್ಟ ತಂಗಿಯ ಬಗ್ಗೆ ಯೋಚಿಸಿ ನೋಡು ತಾನು ಹುಟ್ಟಿದ ದಿನ ಅಮ್ಮನನ್ನು ಕಳೆದುಕೊಂಡು ಕನಿಷ್ಠ ಒಮ್ಮೆಯಾದರೂ ತಾಯಿಯ ಮಡಿಲಿನಲ್ಲಿ ಮಲಗುವ ಸೌಭಾಗ್ಯವೂ ಅವಳಿಗೆ ಸಿಗಲಿಲ್ಲ . ಅಪ್ಪ ಎಂದರೆ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳುವ ಮುಂಚೆಯೇ ಅವರನ್ನೂ ಕಳೆದುಕೊಂಡು ಕೆಲವು ತಿಂಗಳು ಅನಾಥಾಶ್ರಮದಲ್ಲಿ ಅನಾಥೆಯಂತಿದ್ದಳು. ನಾನು ಅವಳನ್ನು ಮಗಳಾಗಿ ನಾಮಕಾವಸ್ಥೆಗೆ ಮಾತ್ರ ಸ್ವೀಕರಿಸಿಲ್ಲ ಅವಳು ನನ್ನ ಜೀವನದ ಒಂದು ಭಾಗವು ಅಲ್ಲ ನನ್ನ ಇಡೀ ಜೀವನವೇ ನನ್ನ ಮುದ್ದಿನ ಮಗಳಾಗಿದ್ದಾಳೆ. ಅವಳು ನನ್ನ ಮಡಿಲಿಗೆ ಬಂದಾಗಲೇ ನನ್ನಲ್ಲಿನ ಮಾತೃತ್ವ ಪರಿಪೂರ್ಣವಾಗಿ ನನ್ನಲ್ಲೂ ಹೊಸ ಚಿಲುಮೆಯೊಡೆಯಿತು. ನಿನ್ನ ಬಗ್ಗೆ ತಿಳಿದು ದೇವರು ನನಗೆ ಹಿರಿ ಮಗಳನ್ನೂ ನೀಡಿದ್ದಾನೆಂದು ತುಂಬ ಸಂತೋಷಪಟ್ಟೆ. ನಿನ್ನ ನೊಡಲು ನಿನ್ನನ್ನು ತಬ್ಬಿಕೊಂಡು ಮುದ್ದಾಡಲು ಮೂರು ದಿನ ನಾನೆಷ್ಟು ವ್ಯಾಕುಳಲಾಗಿದ್ದೆ ಅಂತ ನಿನಗೇಗೆ ಹೇಳಲಿ.
ನಿಧಿ......ಅಮ್ಮ ನಿಮ್ಮ ಬಗ್ಗೆ ಗುರುಗಳು ನನಗೆ ಸಾಕಷ್ಟು ಹೇಳಿದ್ದಾರೆ ನಿಮ್ಮ ಕುಟುಂಬದ ಎಲ್ಲರ ಪರಿಚಯ ಅವರ ಫೋಟೋಗಳನ್ನೂ ಸಹ ಗುರುಗಳು ನನಗೆ ತೋರಿಸಿದ್ದಾರೆ ಆದರೆ ನನ್ನ ಪುಟ್ಟ ತಂಗಿಯ ಫೋಟೋ ತೋರಿಸಿಯೇ ಇಲ್ಲ.
ನೀತು.......ಇಂದೇ ಕೊನೆ ಇನ್ಮುಂದೆ ಯಾವತ್ತೂ ನಿಮ್ಮ ಕುಟುಂಬ ಅಂತ ನೀನು ಹೇಳಬಾರದು ನನ್ನ ಕುಟುಂಬ ಅನ್ನಬೇಕು. ನೀನು ನಮ್ಮ ಮನೆಯ ಹಿರಿಯ ಮಗಳಲ್ಲವಾ ಪುಟ್ಟಿ.
ಇವರಿಬ್ಬರ ಬೇಟಿಯನ್ನು ನೋಡುತ್ತಿದ್ದ ಗೋವಿಂದಾಚಾರ್ಯರು ಹತ್ತಿರ ಬಂದು ನಿಧಿಯ ತಲೆ ನೇವರಿಸಿ..........ಆರು ತಿಂಗಳ ಮಗು ಆಗಿದ್ದಾಗ ಸುಧಾ ಮತ್ತು ರಾಣಾ ನಿನ್ನನ್ನು ಮಗಳಾಗಿ ಸ್ವೀಕರಸಿದರು. ನಿನಗೆ ಐದು ವರ್ಷ ತುಂಬುವವರೆಗೂ ಅಪ್ಪ ಅಮ್ಮನ ನೆರಳಿನಲ್ಲೇ ಅವರ ಮುದ್ದಿನ ಮಗಳಾಗಿದ್ದು ನಂತರ ನಮ್ಮ ಆಶ್ರಮಕ್ಕೆ ಬಂದೆ. ಈಗ ನಿನಗೆ 19 ವರ್ಷ ತುಂಬಿದೆ 14 ವರ್ಷದ ವನವಾಸದ ನಂತರ ನಿನ್ನ ತಾಯಿಯ ಮಡಿಲಿಗೆ ಮರಳುತ್ತಿರುವೆ ಅದಕ್ಕಾಗಿ ಸಂತೋಷಿಸು ಮಗಳೇ. ನಿನ್ನ ಹೆತ್ತ ತಾಯಿ ಯಾರೆಂದು ನಮಗೂ ಗೊತ್ತಿಲ್ಲ ಆದರೆ ನಿನಗೆ ಸುಧಾಳ ನಂತರ ಅವಳಿಗಿಂತಲೂ ಜಾಸ್ತಿ ಪ್ರೀತಿಸುವ ನೀತು ಎಂಬ ತಾಯಿಯ ಸಾನಿಧ್ಯ ದೊರೆಯಲಿದೆ. ನೀತು ನಿನ್ನ ಮೇಲೆಷ್ಟು ಪ್ರೀತಿಯ ಧಾರೆ ಸುರಿಸುತ್ತಾಳೋ ತಪ್ಪು ಮಾಡಿದಾಗ ನಿನಗೆ ಶಿಕ್ಷಿಸಿ ತಿದ್ದಿ ಬುದ್ದಿ ಹೇಳುವುದರಲ್ಲೂ ನಿಸ್ಸೀಮಳು.
ನೀತು...ಗುರುಗಳೇ ನಿಮ್ಮ ಸಾನಿಧ್ಯದಲ್ಲಿ ಬೆಳೆದಿರುವ ನನ್ನೀ ಮಗಳು ಯಾವ ತಪ್ಪನ್ನೂ ಮಾಡಲಾರಳು. ರೀ ನೀವ್ಯಾಕೆ ದೂರ ನಿಂತು ಹೀಗೆ ಕಣ್ಣೀರು ಸುರಿಸುತ್ತಿರುವಿರಿ ? ನಿಮಗೆ ನಮ್ಮ ಮೊದಲನೇ ಮಗುವು ಹೆಣ್ಣಾಗಬೇಕೆಂಬ ಆಸೆಯಿತ್ತಲ್ಲವಾ ? ನೋಡಿ ದೇವರು 19 ವರ್ಷದ ನಂತರವಾದರೂ ನಿಮ್ಮಾಸೆ ಈಡೇರಿಸಿದ್ದಾರೆ ಅದಕ್ಕೆ ಖುಷಿಪಡುವ ಬದಲು ನೀವು ಅತ್ತರೆ ಹೇಗೆ ? ನಿಧಿ ಇವರ್ಯಾರೆಂದು ಗೊತ್ತ ?
ನಿಧಿ (ಹರೀಶನತ್ತ ನೋಡಿ).....ಹೂಂ ಅಮ್ಮ ಇವರು ಅ....ಅ....ಅ..
ಹರೀಶ ಸಮೀಪಕ್ಕೆ ಬಂದು......ಯಾಕಮ್ಮ ಇವಳನ್ನು ಅಮ್ಮ ಅಂತ ಒಪ್ಪಿಕೊಳ್ಳಲು ಕ್ಷಣಿಕವೂ ತಡ ಮಾಡಲಿಲ್ಲ ಆದರೆ ನನ್ನ ಅಪ್ಪ ಅಂತ ಕರೆಯಲು ತುಂಬ ಯೋಚಿಸುತ್ತಿರುವೆ ? ಯಾಕಮ್ಮ ನನಗೆ ಅಷ್ಟೂ ಯೋಗ್ಯತೆ ಇಲ್ಲವಾ ?
ಹರೀಶನ ಮಾತಿನಿಂದ ನಿಧಿ ಜೋರಾಗಿ ಅಳುತ್ತ ಅವನನ್ನು ತಬ್ಬಿ..... ಕ್ಷಮಿಸಿ ಅಪ್ಪ ನಾನು ಅನಾಥಳಾಗಿ ಹುಟ್ಟಿದವಳು. ಸುಧಾ ಅಮ್ಮ ರಾಣಾ ಅಪ್ಪ ನನ್ನನ್ನು ದತ್ತು ಸ್ವೀಕರಿಸಿ ಅಪ್ಪ ಅಮ್ಮನ ಪ್ರೀತಿಯನ್ನು ಧಾರೆಯೆರೆದರು. ಅವರ ಸ್ಥಾನದಲ್ಲಿ ಕೆಲವು ದಿನಗಳಿಗೂ ಮುಂಚೆ ಬೇರೆ ಯಾರನ್ನೂ ಊಹಿಸಿಕೊಳ್ಳಲಿಕ್ಕೂ ನನ್ನಿಂದ ಸಾಧ್ಯವಿರಲಿಲ್ಲ. ಆದರೆ ಗುರುಗಳು ನಿಮ್ಮ ಬಗ್ಗೆ ಕುಟುಂಬಲ್ಲಿನ ಇತರರ ಬಗ್ಗೆ ಪೂರ್ತಿ ಹೇಳಿದಾಗ ನಿಮ್ಮನ್ನೆಲ್ಲಾ ಯಾವಾಗ ಬೇಟಿಯಾಗುವೆನೋ ? ನಾನೂ ಕುಟುಂಬದಲ್ಲಿ ಒಬ್ಬಳಾಗುವ ಅವಕಾಶ ಸಿಗುತ್ತೋ ಇಲ್ಲವೋ ಎಂದೇ ಪ್ರತಿದಿನ ಯೋಚಿಸುತ್ತಿದ್ದೆ.
ಹರೀಶ ಕಣ್ಣೀರಿನೊಂದಿಗೆ ನಿಧಿಯ ಹಣೆಗೆ ಮುತ್ತಿಟ್ಟು.......ನಿನಗೆ ಈ ಅವಕಾಶವನ್ನು ಯಾರೂ ಕೊಡಬೇಕಾಗಿಲ್ಲ ಮಗಳೇ ಅದು ನಿನ್ನದೇ ಹಕ್ಕು. ರಾಣಾಪ್ರತಾಪ್ ಮತ್ತು ಸುಧಾಮಣಿ ಅವರೊಂದಿಗೆ ನಮಗೆ ಜನ್ಮಜನ್ಮದ ಋಣಾನುಬಂಧ ಇದ್ದಂತಿದೆ. ಈ ಜನ್ಮದಲ್ಲಿ ಅವರಿಬ್ಬರ ಋಣ ತೀರಿಸಲು ಅವರ ಇಬ್ಬರೂ ಮಕ್ಕಳಿಗೆ ತಂದೆ ತಾಯಿಯಾಗುವ ಸೌಭಾಗ್ಯ ನಮಗೆ ಲಭಿಸಿದೆ.
ನಿಧಿ......ಅಮ್ಮ ನನ್ನ ತಂಗಿ ತಮ್ಮಂದಿರನ್ನು ಬೇಟಿಯಾಗಲು ನಾನು ತುಂಬ ಕಾತುರಳಾಗಿರುವೆ.
ನೀತು......ಇವತ್ತೊಂದು ದಿನ ನೀನು ಗುರುಗಳ ಜೊತೆಯಲ್ಲಿ ಇರು. ನಾಳೆ ಬೆಳಿಗ್ಗೆ ತಂದೆ ತಾಯಿಯ ಅಸ್ಥಿ ವಿಸರ್ಜನೆ ಮಾಡಿದ ನಂತರ ನಿನ್ನನ್ನು ಒಂದು ಕ್ಷಣಕ್ಕೂ ನನ್ನಿಂದ ದೂರ ಮಾಡುವುದಿಲ್ಲ.
ಹರೀಶ.....ಗುರುಗಳೇ ನಾವು ಮಗಳನ್ನು ನಮ್ಮ ಜೊತೆಯಲ್ಲಿಯೇ ಕರೆದೊಯ್ಯಲು ನೀವು ಅಪ್ಪಣೆ ಕೊಡುವಿರಾ ?
ಗೋವಿಂದಾಚಾರ್ಯರು......ಇವಳ ಆಶ್ರಮದಲ್ಲಿನ ವಾಸ ವರ್ಷದ ಹಿಂದೆಯೇ ಮುಗಿಯಿತು. ರಾಣಾ ಮತ್ತು ಸುಧಾ ಬದುಕಿದ್ದಿದ್ದರೆ ಈಕೆ ಅವರ ಮನೆಗೆ ಸೇರುವವಳಿದ್ದಳು ಆದರೆ ವಿಧಿ ಬೇರೆಯದ್ದೇ ಇವಳ ಪಾಲಿಗೆ ಬರೆಯಿತು. ಈಗ ಅವರಿಬ್ಬರಿಗಿಂತಲೂ ಹೆಚ್ಚು ಪ್ರೀತಿಸುವ ತಂದೆ ತಾಯಿ ಇವಳಿಗೆ ದೊರೆತಿದ್ದಾರೆ ಅದನ್ನು ತಡೆಯುವುದಕ್ಕೆ ನಾವ್ಯಾರು ? ನಿಜಕ್ಕೂ ಹರೀಶ ನನಗಿಂದು ಹೃದಯಾಳದಿಂದ ತುಂಬ ಸಂತೋಷವಾಗುತ್ತಿದೆ ನೀವಿಬ್ಬರು ಇವಳನ್ನು ಮಗಳಾಗಿ ಸ್ವೀಕಾರ ಮಾಡುತ್ತೀರೋ ಅಥವ ನಿಧಿ ನಿಮ್ಮಿಬ್ಬರನ್ನು ತಂದೆ ತಾಯಿಯರ ಸ್ಥಾನದಲ್ಲಿ ಒಪ್ಪಿಕೊಳ್ಳುತ್ತಾಳೋ ಎಂಬುದೇ ನನ್ನ ಚಿಂತೆಯಾಗಿತ್ತು. ಆದರೆ ಜಗನ್ಮಾತೆ ಆದಿಶಕ್ತಿಯ ಕೃಪೆಯಿಂದ ಎಲ್ಲವೂ ಸುಲಲಿತವಾಗಿ ಸಂಪನ್ನಗೊಂಡಿತು. ಮಗಳೇ ನಿಧಿ ಇಂದು ನೀನು ಆಶ್ರಮದಲ್ಲಿಯೇ ಉಳಿದುಕೋ ನಾಳೆಯಿಂದ ನೀನು ನಿನ್ನ ಅಪ್ಪ ಅಮ್ಮನ ಪ್ರೀತಿಯ ಛಾವಣಿಯಡಿ ಇರುವಂತೆ.
ನಿಧಿ ಇನ್ನೂ ಹರೀಶನನ್ನು ತಬ್ಬಿಕೊಂಡೆ ನಿಂತಿದ್ದು....ಆಗಲಿ ಗುರುಗಳೆ
ನೀವು ಹೇಳಿದಂತೆಯೇ ನಡೆದುಕೊಳ್ಳುವೆ.
ನೀತು.....ನೀನಿಷ್ಟು ಸರಾಗವಾಗಿ ಕನ್ನಡ ಮಾತನಾಡುವೆ ಹೇಗೆ ?
ಗೋವಿಂದಾಚಾರ್ಯರು......ನಿಧಿ ಬರೀ ಕನ್ನಡವಲ್ಲ ದೇಶದಲ್ಲಿನ 17 ಭಾಷೆಗಳನ್ನು ಓದಲು...ಬರೆಯಲು ಮತ್ತು ಮಾತನಾಡಲು ಬಲ್ಲಳು.
ಹರೀಶ.....ನನ್ನ ಮಗಳು ಮಲ್ಟಿ ಟಾಲೆಂಟೆಡ್ ಹುಡುಗಿ. ಈಗ ನೀನು ಯಾವ ತರಗತಿಯಲ್ಲಿರುವೆ ?
ನಿಧಿ.....ಮೊದಲನೇ ವರ್ಷದ ಬಿಬಿಎ ಮುಗಿದಿದೆ ಅಪ್ಪ.
ಹರೀಶ.....ಚಿಂತೆಯಿಲ್ಲ ಬಿಡು ಎರಡನೇ ವರ್ಷದಿಂದ ನಮ್ಮೂರಿನ ಕಾಲೇಜಿನಲ್ಲೇ ಮುಂದುವರಿಸುವಂತೆ ನಂತರ ಅಲ್ಲಿಯೇ ಎಂಬಿಎ ಓದಬೇಕು ಸರಿಯಾ.
ರಾತ್ರಿ ಎಂಟವರೆಗೂ ಆಧಿಶಕ್ತಿಯು ಕರುಣಿಸಿದ ಹಿರಿ ಮಗಳೊಟ್ಟಿಗೆ ಕಳೆದ ನೀತು ಹರೀಶ ನಾಳೆ ಮುಂಜಾನೆ ಗಂಗಾ ತೀರದಲ್ಲಿ ತಾಯಿ ಗಂಗೆಯ ಸಮಕ್ಷಮ ನಿಧಿಯನ್ನು ತಮ್ಮ ಮಗಳಾಗಿ ಸ್ವೀಕರಿಸುವ ನಿರ್ಧಾರವನ್ನು ಆಚಾರ್ಯರಿಗೆ ತಿಳಿಸಿದರು.
ನೀತುವಿಗೆ ಫೋನ್ ಮಾಡಿದ ಅಶೋಕ.....ಎಲ್ಲಿದ್ದೀರ ? ನೀವಿನ್ನೂ ಬಂದಿಲ್ಲ ಇಲ್ಲಿ ಚಿನ್ನಿ ಎಲ್ಲಾ ಕಡೆ ನಿನಗಾಗಿ ಹುಡುಕುತ್ತ ಓಡಾಡುತ್ತ ಅವಳ ಹಿಂದೆ ನಮ್ಮನ್ನೂ ಓಡಾಡಿಸುತ್ತಿದ್ದಾಳೆ ಮಮ್ಮ ಎಲ್ಲಿ ಅಂತ.
ನೀತು ನಗುತ್ತ....ಇನ್ನರ್ಧ ಘಂಟೆ ಅವಳನ್ನು ಸಂಭಾಳಿಸಿ ನಾವಷ್ಟು ಸಮಯದಲ್ಲಿ ಹಿಂದಿರುಗಿ ಬರುತ್ತೇವೆಂದು ಫೋನಿಟ್ಟಳು.
ನಿಧಿ.....ಅಮ್ಮ ನೀವು ಹೋಗಬೇಕ ?
ನೀತು......ಈ ಒಂದು ರಾತ್ರಿ ಮಾತ್ರ ನಾವು ದೂರವಿರುವುದು ಪುಟ್ಟಿ ನಾಳೆಯಿಂದ ನನ್ನೀ ಮಗಳನ್ನು ಎಲ್ಲಿಯೂ ಬಿಡುವುದಿಲ್ಲ.
ನಿಧಿ......ಅಮ್ಮ ನಾನು ಯಾವುದಕ್ಕೂ ಹೆದರುವುದಿಲ್ಲ ಆದರೆ ನಾನು ಒಂಟಿಯಾಗಿರುವೆ ಅಂತ ಭಯವಾಗುತ್ತೆ ಅಷ್ಟೆ.
ನೀತು....ಸುಧಾ ಅಮ್ಮ ದೇವರ ಬಳಿ ತೆರಳಿದ್ದರೇನು ನನ್ನೀ ಮಗಳ ಹತ್ತಿರ ಈ ನಿನ್ನ ನೀತು ಅಮ್ಮ ಸದಾ ಇರುತ್ತಾಳೆ ಕಂದ ಹೆದರಬೇಡ.
ವಿಕ್ರಂ ಸಿಂಗ್ ನಿನಗೆ ಆರಾಧನಾ ಗೊತ್ತಿರಬೇಕಲ್ಲವಾ ?
ಮಹಾರಾಜ ಮತ್ತು ಮಹಾರಾಣಿಯ ಮೊದಲನೇ ಪುತ್ರಿಯನ್ನು ನೀತು ಹಾಗು ಹರೀಶ ತಮ್ಮ ಜೇಷ್ಠ ಮಗಳಾಗಿ ಸ್ವೀಕರಿಸುತ್ತಿರುವುದು ನೋಡಿ ಸಂತೋಷದಲ್ಲಿದ್ದ ವಿಕ್ರಂ ಸಿಂಗ್......ಹೂಂ ಮೇಡಂ ನನಗೆ ಆರಾಧನಾ ಬಗ್ಗೆ ಗೊತ್ತಿದೆ ಆದರೆ ಈಗವರು ಎಲ್ಲಿದ್ದಾರೆಂದು ಮಾತ್ರ ತಿಳಿದಿಲ್ಲ.
ನೀತು......ಅವಳನ್ನು ಹುಡುಕಿಸು ವಿಕ್ರಂ ಸಾಧ್ಯವಾದಷ್ಟು ಶೀಘ್ರದಲ್ಲಿ ಅವಳು ನಮ್ಮ ವಶದಲ್ಲಿರಬೇಕು. ಅವಳೆಲ್ಲಿಯೇ ಅಡಗಿದ್ದರೂ ಸರಿ ಹುಡುಕಿ ಕರೆದು ತಾ ಜೊತೆಗೆ ಅವಳಿಗೆ ಸಂಬಂಧಿಸಿದವರು ಯಾರೇ ಇದ್ದರೂ ಅವರನ್ನೂ ಕೂಡ.
ವಿಕ್ರಂ ಸಿಂಗ್.....ವಾತಾಳ ಗರ್ಭದಲ್ಲೇ ಅಡಗಿದ್ದರೂ ಸರಿ ನಾನೆಳೆದು ತರುತ್ತೇನೆ. ಮಹಾರಾಜ ಮಹಾರಾಣಿಯ ಸಾವಿನಲ್ಲಿ ನಿಮಗೆ ಅವರ ಮೇಲೆ ಅನುಮಾನವಿದೆಯಾ ?
ನೀತು.......ಅವರನ್ನು ಹುಡುಗಿದ ಬಳಿಕವೇ ಆ ಬಗ್ಗೆ ನಾವು ಮುಂದೆ ಮಾತಾಡೋಣ. ಆಚಾರ್ಯರೇ ಅಪ್ಪಣೆ ಕೊಡಿ ನನ್ನ ಚಿನುಕುರುಳಿ ಅಮ್ಮ ಕಾಣಿಸುತ್ತಿಲ್ಲ ಅಂತ ರಂಪ ರಾದ್ದಾಂತ ಮಾಡುತ್ತಿದ್ದಾಳೆ ನಾನು ಬೇಗ ಹೋಗಬೇಕಿದೆ.
ಹರೀಶ......ನಮ್ಮೀ ಮಗಳನ್ನು ಇಷ್ಟು ವರ್ಷಗಳ ಕಾಲ ನೀವು ನಿಮ್ಮ
ಸಾನಿಧ್ಯದಲ್ಲಿ ಇಟ್ಟುಕೊಂಡು ಪೋಷಣೆ ಮಾಡಿದ್ದಕ್ಕಾಗಿ ನಿಮಗೆ ನಾ ಆಜನ್ಮ ಋಣಿಯಾಗಿರುವೆ......ಎನ್ನುತ್ತ ಗೋವಿಂದಾಚಾರ್ಯರ ಕಾಲಿಗೆ ಧೀರ್ಘದಂಡ ನಮಸ್ಕರಿಸಿದನು.
ಹರೀಶನನ್ನು ಎದ್ದು ನಿಲ್ಲುವಂತೇಳಿ ಆಚಾರ್ಯರು.....ಅದು ನನ್ನ ಕರ್ತವ್ಯವಾಗಿತ್ತು ಹರೀಶ ನಾಳೆಯಿಂದ ಇವಳು ನಿಮ್ಮ ಮಗಳಾಗಿ ಈಕೆಯ ಸಂಪೂರ್ಣ ಜವಾಬ್ದಾರಿಯೂ ನಿಮ್ಮದಾಗುತ್ತೆ.
ನಿಧಿ ಕಾಲಿಗೆ ನಮಸ್ಕರಿಸಲು ಹೊರಟಾಗ ಅವಳನ್ನು ತಡೆದ ಹರೀಶ
ತಬ್ಬಿಕೊಂಡು........ಹೆಣ್ಣು ಮಕ್ಕಳಿಗೆ ತಂದೆ ಕಾಲಿನ ಹತ್ತಿರ ಸ್ಥಾನವಲ್ಲ ಮಗಳೇ ಅವಳು ತಂದೆ ತಲೆಯಲ್ಲಿನ ಕಿರೀಟವಿದ್ದಂತೆ.
ಆಚಾರ್ಯರು.....ಹರೀಶ ಹೆಣ್ಣು ಮಕ್ಕಳ ಬಗ್ಗೆ ನಿನ್ನ ಭಾವನೆಗಳನ್ನು ತಿಳಿದು ನನ್ನ ಹೃದಯ ತುಂಬಿ ಬಂದಿದೆ. ಸದಾಕಾಲ ಸುಖವಾಗಿರಿ ನಾಳೆ ಮುಂಜಾನೆ ನಾವು " ಹರ್ ಕಿ ಪೌರಿ " ಯಲ್ಲಿ ಸೇರೋಣ.
ನೀತು ಹೊರಡುವುದಕ್ಕೂ ಮುನ್ನ ನಿಧಿಗೆ ಕೈಯಾರೆ ಊಟ ಮಾಡಿಸಿ ಅವಳ ಕೆನ್ನೆಗೆ ಮುತ್ತಿಟ್ಟರೆ ಹರೀಶ ಮಗಳನ್ನು ತಬ್ಬಿ ಸಂತೋಷದಿಂದ ಕಣ್ಣೀರು ಹರಿಸಿದನು.
ದಾರಿಯಲ್ಲಿ.........
ಹರೀಶ.......ನೀತು ಮಗಳ ವಿಷಯ ನೀನೇನೂ ಹೇಳಿರಲಿಲ್ಲವಲ್ಲ ಯಾಕೆ ?
ನೀತು.......ಮೊದಲೇ ನಿಮಗೆ ನಿಧಿ ಬಗ್ಗೆ ತಿಳಿಸಿ ಬಿಟ್ಟಿದ್ದರೆ ಗಂಡನ ಮುಖದಲ್ಲಿ ಆ ಕ್ಷಣ ನೋಡಿದ ಸಂತೋಷ ನೋಡುವ ಸೌಭಾಗ್ಯ ನನಗೆ ಸಿಗುತ್ತಿತ್ತಾ ಹೇಳಿ.
ಹರೀಶ.......ನಿಜಕ್ಕೂ ನಮ್ಮ ಜನ್ಮ ಸಾರ್ಥಕವಾಯಿತು ನೀತು ನಮ್ಮ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುವ ಗಂಡು ಮಕ್ಕಳು ಅತ್ಯಂತ ವಿನಯ ಮತ್ತು ಸಂಭಾವಿತಳಾದ ಹಿರಿಮಗಳು.......
ನೀತು ಅರ್ದದಲ್ಲಿಯೇ.......ಅವರ ಜೊತೆ ಅಪ್ಪನನ್ನೇ ಕೋತಿ ರೀತಿ ಕುಣಿದಾಡಿಸುವ ತರಲೆ ಚಿನುಕುರುಳಿ......ಹ್ಹ...ಹ್ಹ....ಹ್ಹ...ಹ್ಹ.
ಹೆಂಡಿತಿಯ ಮಾತಿಗೆ ಹರೀಶನೂ ನಗುತ್ತ ಅವಳನ್ನು ತಬ್ಬಿಕೊಂಡು ಹೋಟೆಲ್ ತಲುಪಿದಾಗ ಕೆಳಗಿನ ಲಾಬಿಯಲ್ಲೇ ಅಶೋಕನ ಜೊತೆ ಮಕ್ಕಳೆಲ್ಲರೂ ಕುಳಿತಿದ್ದ ಬಾಗಿಲಿನತ್ತ ದೃಷ್ಟಿ ನೆಟ್ಟಿ ಅವನ ಮಡಿಲಲ್ಲಿ ಕುಳಿತಿದ್ದ ನಿಶಾ ಅಮ್ಮ ಕಾಣುತ್ತಲೇ ಓಡಿ ಬಂದು ಜೋತು ಬಿದ್ದಳು.
ನಮಿತ.......ಆಂಟಿ ನೀವಿಷ್ಟೊತ್ತು ಬಾರದೆ ಇದ್ದುದಕ್ಕೆ ಚಿನ್ನಿ ಫುಲ್ ಬೇಸರಗೊಂಡು ಎಲ್ಲಾ ಕಡೆ ನಿಮಗಾಗಿ ಹುಡುಕುತ್ತಿದ್ದಳು ಅದಕ್ಕೆ ಇವಳನ್ನು ಕೆಳಗೆ ಕರೆದುಕೊಂಡು ಬಂದು ಅಮ್ಮ ಬರ್ತಾಳೆ ಅಂತೇಳಿ ಕೂರಿಸಿಕೊಂಡಿದ್ದೆವು ಊಟವನ್ನೂ ಮಾಡಿಲ್ಲ.
ನೀತು......ಚಿನ್ನಿ ನೀನಿನ್ನೂ ಊಟ ಮಾಡಿಲ್ಲವಾ ಬಂಗಾರಿ.....
ನಿಶಾ ಇಲ್ಲವೆಂದು ತಲೆಯಾಡಿಸಿ ತನಗೆ ಹೊಟ್ಟೆ ಹಸಿಯುತ್ತಿದೆ ಊಟ ಮಾಡಿಸೆಂದು ಬೆರಳನ್ನು ಬಾಯಿಯತ್ತ ತೋರಿಸಿದಳು. ಮಗಳಿಗೆ ಊಟ ಮಾಡಿಸಿ ಮಲಗಿಸಿದ ನಂತರ ಆಶ್ರಮದಲ್ಲಿ ಆರ್ಚಾಯರ ಜೊತೆಗಿನ ಮಾತುಕತೆ ಹಾಗು ತಾವೆಲ್ಲರೂ ಇಲ್ಲಿಗೆ ಬಂದಿರುವುದಕ್ಕೆ ಕಾರಣವನ್ನೂ ತಿಳಿಸಿದರು. ನಿಧಿಯ ಬಗ್ಗೆ ಹೇಳಿದಾಗ ಮೊದಲಿಗೆ ಎಲ್ಲರೂ ಅಚ್ಚರಿಗೊಂಡರೆ ಬಳಿಕ ಸಂತೋಷದಿಂದ ನಾಳೆ ಅವಳನ್ನು ಬೇಟಿಯಾಗಲು ಉತ್ಸುಕರಾದರು.
ಶೀಲಾ......ನೀನು ನಮಗೂ ಯಾವ ವಿಷಯ ಹೇಳಿರಲಿಲ್ಲವಲ್ಲ .
ನೀತು......ನಾನೇ ಮೊದಲು ನಿಧಿಯನ್ನು ಬೇಟಿಯಾಗಬೇಕೆಂದು ಯಾರ ಹತ್ತಿರವೂ ಅವಳ ವಿಷಯ ಪ್ರಸ್ತಾಪಿಸಿರಲಿಲ್ಲ. ನಾಳೆಯಿಂದ ಅವಳು ನಮ್ಮ ಜೊತೆಯಲ್ಲೇ ಇರುತ್ತಾಳಲ್ಲ ನಿನಗೆಷ್ಟು ಬೇಕಾದರೂ ಮಾತನಾಡಿಕೋ ಆಯ್ತಾ.
ರಜನಿ......ಮತ್ತೆ ನಮ್ಮ ಮನೆ ಮಗಳ ಜೊತೆ ನಾವು ಮಾತನಾಡದೆ ನೀನೇ ಮಾತನಾಡುತ್ತಿರಬೇಕೇನೂ ?
ಸುರೇಶ......ವಾವ್ ಅಮ್ಮ ನನಗೊಬ್ಬಳು ಪುಟ್ಟ ತಂಗಿ ದೊರಕಿದಳು ಈಗ ಅಕ್ಕ ಫುಲ್ ಮಜಾ ?
ಹರೀಶ.....ನೀನು ಸರಿಯಾಗಿ ಓದದಿದ್ದರೆ ಅಕ್ಕನಿಂದ ನಿನ್ನ ಬೆಂಡ್ ತೆಗಿಸ್ತೀನಿ ಗೊತ್ತಾಯ್ತಾ.
ಎಲ್ಲರೂ ಹೀಗೇ ಮಾತನಾಡಿದ ನಂತರ ತಮ್ತಮ್ಮ ರೂಮಿಗೆ ತೆರಳಿ ನಿದ್ರೆಗೆ ಶರಣಾದರೆ ನೀತು ಹರೀಶ ತಮ್ಮ ಮಧ್ಯೆ ನಿಶ್ಚಿಂತೆಯಿಂದ ಮಲಗಿದ್ದ ಮಗಳನ್ನು ನೋಡುತ್ತ ನಿಧಿ ಬಗ್ಗೆ ಮಾತನಾಡುತ್ತಿದ್ದರು.
Really story is super, please continue, not for delay
ReplyDeleteHi
ReplyDelete