ಸ್ಥಳ....ಹರ್ ಕಿ ಪೌರಿ — ಹರಿದ್ವಾರ.
ಮೂವರು ಗುರುಗಳಿಗೂ ನಮಸ್ಕರಿಸಿ ನಿಧಿಯನ್ನು ಶೀಲಾ....ರವಿ...
ರಜನಿ....ಅಶೋಕ...ಸುಕನ್ಯಾ...ಸವಿತಾರಿಗೆ ಪರಿಚಯಿಸಿದ ನೀತು
ತನ್ನ ಹಿರಿಯ ಮಗಳನ್ನೂ ಅವರಿಗೆ ಭೇಟಿ ಮಾಡಿಸಿದಳು.
ನಿಧಿ....ಅಮ್ಮ ನಿಶಾ...ಸುರೇಶ ಮತ್ಯಾರು ಕಾಣಿಸುತ್ತಿಲ್ಲ.
ನೀತು ನಗುತ್ತ....ಎಲ್ಲರೂ ನನ್ನ ಲಿಲಿಪುಟ್ ಜೊತೆ ಬರುತ್ತಿದ್ದಾರೆ ಈಗ ನೋಡು ಇಲ್ಲಿಗೆ ಬರುತ್ತಲೇ ನನ್ನ ಚಿಲ್ಟಾರಿಯ ನೌಟಂಕಿ ಶುರುವಾಗಿ ದೊಡ್ಡ ನಾಟಕ ಮಾಡ್ತಾಳೆ.
ನಿಧಿ....ಯಾಕೆ ?
ನೀತು....ನೀನೇ ನೋಡ್ತೀಯಲ್ಲ ಗೊತ್ತಾಗುತ್ತೆ.
ಗಿರೀಶಣ್ಣನ ಕೈ ಹಿಡಿದು ತನ್ನದೇ ಗುಂಗಿನಲ್ಲಿ ಏನೋ ವಟಗುಟ್ಟತ್ತಾ ಬರುತ್ತಿದ್ದ ನಿಶಾಳನ್ನು ನೋಡಿ ನಿಧಿಯ ಕಂಗಳು ಆನಂದದ ಕಂಬನಿ ಸುರಿಸಿದರೆ ನೀತು ಮಗಳನ್ನು ತಬ್ಬಿಕೊಂಡಳು. ಎಲ್ಲಾ ಮಕ್ಕಳನ್ನು ಮುಂದೆ ಬಿಟ್ಟುಕೊಂಡು ಅವರ ಹಿಂದೆ ಪ್ರತಾಪ್ ಮತ್ತು ಅನುಷಾ ಬರುತ್ತಿದ್ದರು. ಪೌರಿ ಸಮೀಪಿಸುತ್ತಿದ್ದಂತೆ ಏದುರಿಗೆ ವಿಶಾಲವಾಗಿ ಹರಿಯುತ್ತಿದ್ದ ಗಂಗಾ ನದಿಯನ್ನು ಕಂಡ ನಿಶಾ ಕುಡಿದಾಡುವುದನ್ನು ನಿಲ್ಲಿಸಿ ತನ್ನ ಪುಟ್ಟ ಮೇದುಳಿನಲ್ಲಿ ಹಿಂದಿನ ಘಟನೆಗಳನ್ನು ಮೆಲುಕು
ಹಾಕುತ್ತ ನಿಂತಳು. ಹಿಂದೆ ವಾರಣಾಸಿಯಲ್ಲಿ ಅಪ್ಪ ತನ್ನನ್ನೆತ್ತಿ ನದಿಯ ಒಳಗೆ ಮುಳುಗಿಸಿ ಎತ್ತಿದ್ದನ್ನು ನೆನೆದು ಈಗಲೂ ಅಪ್ಪ ಹಾಗೆಯೇ ಮಾಡಬಹುದೆಂಬ ಅನುಮಾನದಿಂದ ಸುತ್ತಲೂ ನೋಡಿ ಅಪ್ಪನನ್ನು ಕಂಡು ಅವನನ್ನೇ ಧಿಟ್ಟಿಸಿ ನೋಡತೊಡಗಿದಳು. ಹರೀಶ ಕೈಗಳನ್ನು ಮುಂದೆ ಚಾಚಿ....ಬಾ ಚಿನ್ನಿ ನೀರು ನೋಡಿಲ್ಲಿ ಎನ್ನುತ್ತಿದ್ದಂತೆಯೇ....
ಅಣ್ಣನಿಂದ ಕೈ ಬಿಡಿಸಿಕೊಂಡು ನಾ ಬಲ್ಲ...ನಾ ಬಲ್ಲ...ಎಂದು ಕಿರುಚಿ ಹಿಂದಿರುಗಿ ಓಡತೊಡಗಿದಳು. ಅವಳ ಹಿಂದೆ ಬರುತ್ತಿದ್ದಂತ ಪ್ರತಾಪ್ ಅವಳನ್ನಿಡಿದು ಎತ್ತಿಕೊಂಡರೆ ಕೈ ಕಾಲುಗಳನ್ನು ಬಡಿದು ಅವನಿಂದ ಬಿಡಿಸಿಕೊಳ್ಳಲು ಹೆಣಗಾಡುತ್ತಿದ್ದಳು. ನೀತು ತಾನೇ ಹೋಗಿ ಮಗಳ ತಲೆ ನೇವರಿಸಿ ಎತ್ತಿಕೊಂಡಾಗ ಅಮ್ಮನನ್ನು ಬಿಗಿದಪ್ಪಿಕೊಂಡ ನಿಶಾ
.......ಮಮ್ಮ ಪಪ್ಪ ಬೇಲ ನೀಲು ಹಾಕಿ ಬೇಲ ಪಪ್ಪ ಬೇಲ ಮಮ್ಮ....
ಎಂದು ಹತ್ತಿರ ಹತ್ತಿರ ಬಂದ ಹರೀಶನನ್ನು ನೋಡಿ ಕಿರುಚಿ ಅಮ್ಮನ ಕುತ್ತಿಗೆಗೆ ಇನ್ನೂ ಗಟ್ಟಿಯಾಗಿ ನೇತಾಕಿಕೊಂಡಳು.
ರಜನಿ.....ಏನಾಯ್ತು ಇವಳಿಗೆ ನೆನ್ನೆ ರಾತ್ರಿಯೆಲ್ಲಾ ಅಪ್ಪನ ಮೇಲೇರಿ ಮಲಗಿದ್ಳು ಈಗ ಅಪ್ಪ ಬೇಡ ಅಂತ ದೂರ ತಳ್ತಿದ್ದಾಳೆ.
ನೀತು ನಗುತ್ತ......ಇವರು ಕಾಶಿಯಲ್ಲಿ ನದಿಯಲ್ಲಿ ಅದ್ದಿಬಿಟ್ಟಿದ್ದರಲ್ಲ ಅದನ್ನೇ ನೆನೆದು ಈಗಲೂ ಅಪ್ಪ ನನ್ನನ್ನು ಮುಳುಗಿಸುತ್ತಾರೆ ಅಂತ ಹೆದರಿ ದೂರ ತಳ್ತಿರೋದು. ರೀ ನೀವು ಸ್ವಲ್ಪ ಹೊತ್ತು ದೂರವೇ ಇರಿ ಚಿನ್ನಿಯ ಭಯ ಸ್ವಲ್ಪ ಕಡಿಮೆಯಾಗಲಿ ಇಲ್ಲಾಂದ್ರೆ ಇನ್ನೂ ಗಲಾಟೆ ಮಾಡ್ತಾಳೆ. ಗುರುಗಳೇ ಇಲ್ಲಿಯೂ ಮಕ್ಕಳಿಬ್ಬರು ನದಿಯಲ್ಲಿ ಸ್ನಾನ ಮಾಡಬೇಕೇನು ?
ಆಚಾರ್ಯರು....ಹಿರಿಮಗಳು ಗಂಗೆಯಲ್ಲಿ ಮಿಂದಿದ್ದಾಳೆ ಚಿಕ್ಕವಳನ್ನ ಅವಳ ಮಡಿಲಲ್ಲಿ ಕೂರಿಸಿ ಗಂಗೆಯ ನಾಲ್ಕು ಹನಿ ಪ್ರೋಕ್ಷಣೆ ಮಾಡು ಅಷ್ಟೇ ಸಾಕು.
ನಿಶಾ ಇನ್ನೂ ಅಮ್ಮನನ್ನು ತಬ್ಬಿಕೊಂಡು ಅಪ್ಪನನ್ನೇ ಗುರಾಯಿಸುತ್ತಾ ಹತ್ತಿರ ಬರಬೇಡವೆಂದು ಕೈ ಅಳ್ಳಾಡಿಸುತ್ತಿದ್ದಳು.
ನೀತು ಮಗಳ ಕೆನ್ನೆಗೆ ಮುತ್ತಿಟ್ಟು.....ಚಿನ್ನಿ ಪಪ್ಪ ನಿನ್ನ ನೀರಲ್ಲಿ ಅದ್ದಲ್ಲ ಪುಟ್ಟಿ ನೋಡಿಲ್ಲಿ ನಿನ್ನ ನಿಧಿ ಅಕ್ಕ. ಅಕ್ಕನ ಜೊತೆ ಕುಳಿತು ಮಾಮಿಯ ಪೂಜೆ ಮಾಡ್ತೀಯಾ ಅಲ್ಲವ ಚಿನ್ನಿ.
ಅಮ್ಮನನ್ನು ತಬ್ಬಿಕೊಂಡೇ ಕತ್ತನ್ನು ಸ್ವಲ್ಪ ತಿರುಗಿಸಿ ನಿಧಿಯನ್ನು ಕಂಡ ನಿಶಾಳ ತುಟಿಗಳಲ್ಲಿ ಅನಾಯಾಸವಾಗಿ ಮಂದಹಾಸವು ಮೂಡಿತು.
ತಂಗಿಯನ್ನು ಮುದ್ದಾಡಲು ಕಾತುರಳಾಗಿದ್ದ ನಿಧಿ ಬಾ ಎಂದು ಕೈಯಿ ಚಾಚಿದಾಗ ಅಮ್ಮನ ಕಡೆ ನೋಡಿ ಅವಳೊಪ್ಪಿಗೆ ಪಡೆದ ನಿಶಾ ನಿಧಿ ತೋಳಿಗೆ ಜಾರಿಕೊಂಡಳು. ತಂಗಿಯನ್ನು ತಬ್ಬಿಕೊಳ್ಳುತ್ತಲೇ ಮುತ್ತಿನ ಸುರಿಮಳೆಗೈದ ನಿಧಿಯ ಕಂಗಳು ಆನಂದದ ಭಾಷ್ಪ ಸುರಿಸುತ್ತಿದ್ದವು.
ನೀತು ಅವಳ ತಲೆ ಸವರಿ......ನಿಧಿ ಇನ್ಮೇಲೆ ಇವಳು ನಿನ್ನ ಜೊತೆಗೇ ಇರುತ್ತಾಳಲ್ಲವ ದಿನಾ ಮುದ್ದು ಮಾಡುವಂತೆ ಮೊದಲು ಪೂಜೆಯ ಕಾರ್ಯ ಮುಗಿಸಿ ಅಪ್ಪ ಅಮ್ಮನ ಆತ್ಮಕ್ಕೆ ಶಾಂತಿ ಕೊಡಬೇಕು.
ಮುಂದಿನ ಎರಡು ಘಂಟೆಗಳ ಸಮಯ ಮಹರಾಜ ರಾಣಾಪ್ರತಾಪ್ ಹಾಗು ಮಹರಾಣಿ ಸುಧಾಮಣಿಯ ಆತ್ಮದ ಶಾಂತಿಗಾಗಿ ಗುರುಗಳು ಗೋವಿಂದಾಚಾರ್ಯರ ಮುಂದಾಳತ್ವದಲ್ಲಿ ಪೂಜೆ ನೆರವೇರಿಸಿದರು.
ನಿಶಾಳನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದ ನಿಧಿ ತಂಗಿ ಕೈಯನ್ನಿಡಿದು ಆಚಾರ್ಯರು ಸೂಚಿಸಿದಂತೆ ಪೂಜೆಯ ವಿಧಿವಿಧಾನಗಳನ್ನು ತಾನೇ ಮಾಡುತ್ತಿದ್ದಳು. ಗಂಗಾ ನದಿಯಲ್ಲಿ ಅಸ್ತಿಗಳನ್ನು ವಿಸರ್ಜನೆ ಮಾಡೊ ಸಿಮಯದಲ್ಲಿ ನೀರನ್ನು ಕಂಡು ಹೆದರಿದ ನಿಶಾ ಅಮ್ಮನ ಹೆಗಲಿಗೇರಿ ಸ್ವಲ್ಪ ಶಾಂತಳಾದ ಬಳಿಕ ನೀತು ಕಿರಿಮಗಳ ಕೈಯನ್ನು ಹಿರಿಮಗಳಿಗೆ ತಾಕುವಂತಿಡಿದು ಅಸ್ತಿ ವಿಸರ್ಜನೆ ಕಾರ್ಯ ಸಂಪನ್ನಗೊಳಿಸಿದರು.
ಆಚಾರ್ಯರು...ನಿಮ್ಮೆಲ್ಲರಿಗೂ ಹರಿದ್ವಾರಕ್ಕೆ ಬರುವಂತೇಳಿದ್ದ ಕೆಲಸ ಪೂರ್ಣಗೊಂಡಿತು. ಇಂದಿನಿಂದ ಕೇಧಾರನಾಥ ಮತ್ತು ಬದ್ರಿನಾಥನ ಸನ್ನಿಧಾನ ಜನಮಾನಸಕ್ಕೆ ತೆರೆದುಕೊಳ್ಳಲಿದೆ. ದೇವಭೂಮಿಯಲ್ಲಿ ಕಾಲಿಟ್ಟು ಈ ಕ್ಷೇತ್ರಗಳಿಗೆ ಭೇಟಿ ನೀಡದೆ ಹೋಗುವುದು ಸರಿಯಲ್ಲ ನೀವೆಲ್ಲರೂ ಅಲ್ಲಿಗೆ ಹೋಗಿಬಂದರೆ ಮನೆಯ ಮಕ್ಕಳೆಲ್ಲರಿಗೂ ಒಳ್ಳೆ ಭವಿಷ್ಯ ಮತ್ತು ಆರೋಗ್ಯದ ಭಾಗ್ಯ ದೊರೆಯುತ್ತದೆ. ಇದರ ಬಗ್ಗೆ ನೀನೇನು ಹೇಳುವೆ ಹರೀಶ.
ಹರೀಶ.....ನಾವೂ ಈ ಬಗ್ಗೆ ಯೋಚಿಸಿದ್ದೆವು ಆದರೆ ಕೇಧಾರನಾಥನ ಕಪಾಟು ಯಾವಾಗ ತೆರೆಯುತ್ತದೆಂಬುದು ತಿಳಿದಿರಲಿಲ್ಲ. ಈಗ ನೀವು ಹೇಳಿದ ನಂತರ ಅರಿವಾಯಿತು ನಾವು ಖಂಡಿತವಾಗಿ ಚಾರ್ ದಾಮ್ ದರ್ಶನವನ್ನು ಮುಗಿಸಿಕೊಂಡೇ ಹಿಂದಿರುಗುತ್ತೇವೆ. ಗುರುಗಳೇ ನಿಮ್ಮ ಮುಂದಿನ ದರ್ಶನ ಯಾವಾಗ ಸಾಧ್ಯವಾಗಬಹುದು ?
ಆಚಾರ್ಯರು.....ನನ್ನ ಆಶ್ರಮದ ದ್ವಾರ ನಿಮಗಾಗಿ ಯಾವಾಗಲೂ ತೆರೆದಿರುತ್ತದೆ ಇನ್ನು ನಿನ್ನ ಹಿರಿ ಮಗಳಿಗೆ ಆಶ್ರಮಕ್ಕೆ ಬರುವ ದಾರಿ ಸಹ ತಿಳಿದಿದೆ ಯಾವಾಗ ಬೇಕಿದ್ದರೂ ಬರಬಹುದು. ದೇವಾನಂದ ತಿಂಗಳಿಗೊಮ್ಮೆ ನಿಮ್ಮಲ್ಲಿಗೆ ಬಂದು ನಿಮ್ಮೆಲ್ಲರ ಕುಶಲೋಪರಿಯನ್ನು ವಿಚಾರಿಸಿಕೊಂಡು ನಮಗೆ ತಿಳಿಸುತ್ತಾನೆ. ಮಗಳೇ ನೀತು ಇದನ್ನು ತೆಗೆದುಕೋ ಇದು ತಪೋಶಕ್ತಿಯ ನಿರ್ಮಲವಾದ ದ್ರವ್ಯ. ನೀವೆಲ್ಲರು ಮನೆಗೆ ತಲುಪಿದ ನಂತರ ಶುಕ್ರವಾರದಂದು ಇದನ್ನು ದೇವರೆದುರಿಗೆ ಇಟ್ಟು ಪೂಜೆ ಮಾಡಿ ಇಲ್ಲಿಗೆ ಆಗಮಿಸಿರುವ ಕುಟುಂಬದ ಸದಸ್ಯರಿಗೆ ಸೇವಿಸಲು ನೀಡಬೇಕು. ಈ ದ್ರವ್ಯವನ್ನು ಶುದ್ದವಾದ ಪಾತ್ರೆಯಲ್ಲಿ ಹಾಕಿ ಇಲ್ಲಿ ಕುಟುಂಬದ ಎಷ್ಟು ಜನ ಸದಸ್ಯರಿದ್ದಾರೋ ಅಷ್ಟೆ ಲೋಟ ನೀರನ್ನು ಬೆರಸಿದ ನಂತರ ಎಲ್ಲರೂ ಒಂದೊಂದು ಲೋಟವನ್ನು ಗ್ರಹಿಸಬೇಕು ಇದನ್ನು ಬೇರೆ ಯಾರಿಗೂ ಸಹ ನೀಡಬಾರದು ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಗು ನಿಧಿ ಒಬ್ಬಳು ತಾಯಿಯಿಂದ ನಿನ್ನನ್ನು ನಮ್ಮ ಆಶ್ರಮದ ಸುಪರ್ಧಿಗೆ ತೆಗೆದುಕೊಂಡು ಈಗ ನಿನ್ನನ್ನು ಮತ್ತೊಬ್ಬ ತಾಯಿಯ ಮಡಿಲಿಗೆ ಒಪ್ಪಿಸುತ್ತಿರುವೆ. ಈ ತಾಯಿಯ ಮಮತೆಯ ಆಸರೆಯಲ್ಲಿ ಸುಖವಾಗಿರಮ್ಮ. ಪರಮೇಶ್ವರ ಮತ್ತು ಆದಿಶಕ್ತಿಯು ನಿಮ್ಮೆಲ್ಲರಿಗೂ ಸದಾಕಾಲ ಒಳ್ಳೆಯದನ್ನೇ ಮಾಡಲಿ.
ಪ್ರತಿಯೊಬ್ಬರೂ ಮೂವರು ಗುರುಗಳ ಚರಣಗಳಿಗೆ ಭಕ್ತಿಪೂರ್ವಕ ನಮಸ್ಕಾರ ಮಾಡಿದರೆ ಅವರೂ ಸಹ ಎಲ್ಲರಿಗೂ ಮನಃಪೂರ್ವಕ ಆಶೀರ್ವಧಿಸಿ ಹಾರೈಸಿ ಅಲ್ಲಿಂದ ಆಶ್ರಮಕ್ಕೆ ತೆರಳಿದರು.
* *
* *
ಹೋಟೆಲ್ ರೂಮಿಗೆ ಹಿಂದಿರುಗುವ ಮುನ್ನ ಎಲ್ಲರೂ ಊಟಕ್ಕಾಗಿ ಒಂದು ಕೌಟುಂಬಿಕ ರೆಸ್ಟೋರೆಂಟಿನಲ್ಲಿ ಕುಳಿತಾಗ ಶೀಲಾ....ರಜನಿ
....ಅನುಷ....ಸವಿತಾ ಮತ್ತು ಸುಕನ್ಯಾ ತಮ್ಮೊಂದಿಗೆ ನಿಧಿಯನ್ನು ಕೂರಿಸಿಕೊಂಡು ಮಾತನಾಡಿ ಪರಿಚಯ ಮಾಡಿಕೊಳ್ಳುತ್ತಿದ್ದರು. ಈಗ ನದಿಯಿಂದ ದೂರ ಬಂದಿದ್ದರಿಂದ ನಿಶಾ ಪುನಃ ಅಪ್ಪನ ಹೆಗಲ ಮೇಲೇರಿಕೊಂಡು ಟೇಬಲ್ಲಿನಲ್ಲಿಟ್ಟಿರುವ ತಿಂಡಿಗಳಲ್ಲಿ ತನಗೇನೇನು ಬೇಕೋ ಅದನ್ನು ತೋರಿಸಿ ಅಪ್ಪನಿಂದಲೇ ತಿನ್ನಿಸಿಕೊಳ್ಳುತ್ತಿದ್ದಳು. ಊಟ ಚಾಕು...ಚಾಕು...ಎಂದ ನಿಶಾ ಅಪ್ಪನ ಕಿವಿಯಲ್ಲಿ ಐಸ್ ಐಸ್
ಎಂದು ಪಿಸುಗುಟ್ಟಿದರೆ ಎದುರಿಗೆ ನೀತು ಅಪ್ಪ ಮಗಳನ್ನು ನೋಡುತ್ತ
ಊಟ ಮಾಡುತ್ತಿದ್ದಳು.
ಎಲ್ಲರೂ ಲಾಡ್ಜಿಗೆ ತಲುಪಿದಾಗ ನೀತು ತನ್ನೊಂದಿಗೆ ನಿಧಿಯನ್ನು ಸಹ ತಮ್ಮ ರೂಮಿಗೆ ಕರೆದೊಯ್ದರೆ ನಿಶಾ ಕೂಡ ಅಮ್ಮನ ಹಿಂದೆ ಓಡಿ ಬಂದಳು.
ನೀತು.....ಏನಮ್ಮ ಇದೊಂದೇ ಬ್ಯಾಗನ್ನು ತಂದಿರುವೆ ?
ನಿಧಿ.....ನನ್ನ ಹತ್ತಿರ ಇರುವುದು ಆರು ಜೊತೆ ಬಟ್ಟೆಗಳು ಅದನ್ನಿಡಲು ಒಂದೇ ಬ್ಯಾಗ್ ಸಾಕಲ್ಲವಾ ಅಮ್ಮ.
ನೀತು.....ಆಶ್ರಮದಲ್ಲಿ ನಿನಗೇನು ಅವಶ್ಯಕತೆಯಿತ್ತೆಂಬುದು ನನಗೆ ತಿಳಿಯದು ಆದರೀಗ ನೀನು ನಿನ್ನ ಮನೆಯಲ್ಲಿರುವೆ ಅದಕ್ಕೆ ಇನ್ನೂ ಬಟ್ಟೆಗಳು ಬೇಕಾಗಿದೆ.
ನಿಧಿ.....ಆರು ಚೂಡಿದಾರ್ ಇದೆಯಲ್ಲ ಅಷ್ಟು ಸಾಕಮ್ಮ.
ನೀತು.....ನನ್ನ ಮಗಳು ಹಾಕಿದ್ದನ್ನೇ ಹಾಕುತ್ತಿದ್ದರೆ ಅಮ್ಮನಾಗಿ ನಾನು
ಹೇಗೆ ನೋಡಿಕೊಂಡಿರಲಿ. ಈಗ ಸ್ವಲ್ಪ ರೆಸ್ಟ್ ತೆಗೆದುಕೋ ಸಂಜೆ ನಾವು ಹೋಗಿ ಸ್ವಲ್ಪ ಬಟ್ಟೆ ತೆಗೆದುಕೊಂಡು ಬರೋಣ ಮಿಕ್ಕಿದ್ದನ್ನು ದೆಹಲಿ ಅಥವ ನಮ್ಮೂರಿಗೆ ಹೋದ ಮೇಲೆ ತೆಗೆದುಕೊಳ್ಳೋಣ.
ಸುರೇಶ ರೂಮಿನೊಳಗೆ ಬಂದು....ಅಮ್ಮ ಅಕ್ಕನ ಜೊತೆ ಸರಿಯಾಗಿ ಮಾತನಾಡಲು ಮಹಿಳಾ ತಂಡದವರು ನನಗೆ ಅವಕಾಶ ನೀಡಲಿಲ್ಲ ಅದಕ್ಕೆ ಇಲ್ಲಿಗೆ ಬಂದೆ.
ನಿಧಿ ತಮ್ಮನ ತಲೆ ಸವರಿ.....ಕೈಗೇನು ಮಾಡಿಕೊಂಡೆ ?
ಸುರೇಶ.....ಇದಾ ಅಕ್ಕ ಸಣ್ಣ ಆಕ್ಸಿಡೆಂಟ್ ಆಗಿತ್ತು.
ನಿಶಾ ತಟ್ಟನೆ.....ಅಕ್ಕ ಅಕ್ಕ....ನಾನಿ ಬಿದ್ದಿ....ಢಂ....ಬಿದ್ದಿ...ಎಂದೇಳಿ
ತನ್ನ ಕೈ ಕಾಲುಗಳನ್ನು ತೋರಿಸತೊಡಗಿದಳು.
ನಿಧಿ.....ಅಮ್ಮ ನಾನು ಸ್ವಲ್ಪ ಹೊತ್ತು ತಮ್ಮ ತಂಗಿಯರ ಜೊತೆಗಿದ್ದು ಬರ್ತೀನಿ.
ನಿಶಾ ಚಂಗನೇ ನೆಗೆದು....ನಾನು....ನಾನು...
ನೀತು.....ಹೋಗಿ ಬಾರಮ್ಮ ಅವರೂ ನಿನ್ನ ಜೋತೆ ಮಾತನಾಡಲು ಕಾಯುತ್ತಿದ್ದಾರೆ ಇವನನ್ನು ಒಳಗೆ ಕಳಿಸಿ ಎಲ್ಲಾ ನೋಡಲ್ಲಿ ಬಾಗಿಲ ಆಚೆಯೇ ನಿಂತಿದ್ದಾರೆ. ಇನ್ನು ನೀನು ಚಿನ್ನಿ ಮಂಚ ಹತ್ತಿ ಮಲಗಿಕೋ ಇಲ್ಲಾಂದ್ರೆ ಸಂಜೆ ಟಾಟಾ ಕರ್ಕೊಂಡು ಹೋಗಲ್ಲ ಅಷ್ಟೆ.
ಅಮ್ಮ ಮೆಲ್ಲನೆ ಗದರಿದ್ದೇ ತಡ ಮಂಚವೇರಿ ದಬ್ಬಾಕಿಕೊಂಡ ನಿಶಾ ನಿಮಿಷದೊಳಗೇ ಆಯಾಸಗೊಂಡಿದ್ದರಿಂದ ನಿದ್ರೆಗೆ ಜಾರಿದಳು. ನಿಧಿ ತನ್ನಿಬ್ಬರು ತಮ್ಮಂದಿರು ಮತ್ತು ರಶ್ಮಿ...ನಿಕಿತಾ ಹಾಗು ನಮಿತಾಳನ್ನು ಪರಿಚಯ ಮಾಡಿಕೊಂಡು ಅವರೊಡನೆ ಮಾತನಾಡುತ್ತ ಕುಳಿತಳು.
ನೀತು ಗಂಡನಿಗೆ ಮಗಳೊಟ್ಟಿಗೆ ಮಲಗಿರಲು ತಿಳಿಸಿ ರೂಮಿನಿಂದ ಕೆಳಗೆ ಬಂದಾಗ ಹೋಟೆಲ್ಲಿನ ಲಾಬಿಯಲ್ಲಿ ವಿಕ್ರಂ ಸಿಂಗ್ ಅವಳು ಬರುವುದನ್ನೇ ಕಾದು ಕುಳಿತಿದ್ದನು.
ನೀತು.....ವಿಕ್ರಂ ನಾವು ರೆಸ್ಟೋರೆಂಟಲ್ಲಿ ಕುಳಿತು ಮಾತನಾಡೋಣ ಅಂದ ಹಾಗೆ ಭಾನುಪ್ರಕಾಶ್ ವಿಷಯವಾಗಿ ಏನಾದರು ಸುದ್ದಿ ?
ವಿಕ್ರಂ ಸಿಂಗ್.....ಹೂಂ ಮೇಡಂ ಇದು ಅವರ ಫೋನ್ ಡೀಟೇಲ್ಸ್ ಇಲ್ಲಿ ಮೊದಲು ಕಾಣುತ್ತಿರುವ ನಂ.. ಭಾನುಪ್ರಕಾಶ್ ಅವರ ಅಕ್ಕ ಚಂಚಲಾದೇವಿ ಅವರದ್ದು. ಪ್ರತಿದಿನ ಅಕ್ಕನ ಜೊತೆ ಭಾನುಪ್ರಕಾಶ್ ಕನಿಷ್ಠ 8—10 ಬಾರಿ ಮಾತನಾಡುತ್ತಾರೆ.
ನೀತು.....ಈ ಚಂಚಲಾದೇವಿ ಈಗೆಲ್ಲಿದ್ದಾರೆ ? ಅವರ ಹಿನ್ನೆಲೆ ಏನು ?
ವಿಕ್ರಂ ಸಿಂಗ್.....ಚಂಚಲಾದೇವಿ ಮಹಾರಾಜ ಸೂರ್ಯಪ್ರಕಾಶರ ತಂಗಿ ಭಾನುಪ್ರತಾಪರಿಗಿಂತ ಹಿರಿಯವರು. ಅವರ ಮದುವೆ ಕೂಡ ಹಿಮಾಚಲ ಪ್ರದೇಶದ ರಾಜಕುಟುಂಬದಲ್ಲಿಯೇ ಆಗಿದೆ. ಅಲ್ಲಿನ ಮಹಾರಾಜರಾಗಿದ್ದ ವೀರಸಿಂಗ್ ಅವರ ಎರಡನೇ ಮಗನಾದ ಶೇರ್ ಸಿಂಗ್ ಜೊತೆ ಚಂಚಲಾದೇವಿಯವರ ವಿವಾಹ ಆಗಿರುವುದು. ಆದರೆ ಅವರ ರಾಜಮನೆತನದ ಆಸ್ತಿಗಳು ಸೂರ್ಯವಂಶಕ್ಕೆ ಹೋಲಿಸಿದರೆ ಏನೂ ಅಲ್ಲವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಕಡಿಮೆ. ನನಗೆ ತಿಳಿದಂತೆ ಚಂಚಲಾದೇವಿಯವರು ತಮ್ಮ ಭಾನುಪ್ರತಾಪರಿಗೆ ಹತ್ತಿರವಾಗಿದ್ದರೆ ಅಣ್ಣನಾದ ಸೂರ್ಯಪ್ರತಾರರೊಂದಿಗೆ ಅವರ ಒಡನಾಟ ಅಷ್ಟಾಗಿ ಚೆನ್ನಾಗಿರಲಿಲ್ಲ. ಅವರು ವಿವಾಹವಾಗಿ ಹಿಮಾಚಲಕ್ಕೆ ತೆರಳಿದ ಬಳಿಕ 4 — 5 ಬಾರಿಯಷ್ಟೆ ರಾಜಸ್ಥಾನದ ತವರಿಗೆ ಬಂದಿರಬಹುದು. ಇನ್ನು ಮಹಾರಾಜ ರಾಣಾಪ್ರತಾಪರ ಮದುವೆಯ ಸಮಯದಲ್ಲಿಯೂ ಅವರು ಸ್ವಂತ ಸೋದರತ್ತೆ ಆಗಿದ್ದರೂ ಸಹ ಒಂದು ದಿನದ ಮಟ್ಟಿಗೆ ಬಂದು ವಿವಾಹದಲ್ಲಿ ಹೊರಗಿನವರಂತೆ ಪಾಲ್ಗೊಂಡು ಹಿಂದಿರುಗಿ ಹೋಗಿದ್ದರು.
ನೀತು.....ಈ ಚಂಚಲಾದೇವಿ ಬಗ್ಗೆ ನನಗೆ ಸಂಪೂರ್ಣ ಮಾಹಿತಿಗಳು ಬೇಕು. ಅವರ ಗಂಡ ಮನೆ ಮಕ್ಕಳು ಅವರಿಗಿರುವ ವರ್ಚಸ್ಸು ಪ್ರತೀ ವಿಷಯದ ಬಗ್ಗೆ ವಿವರವಾಗಿ ತಿಳಿಯಬೇಕು. ಇವರ ಜೊತೆ ಭಾನು ಅವರನ್ನೂ ಪ್ರತಿಗಳಿಗೆಯೂ ನಿಮ್ಮವರು ಹಿಂಬಾಲಿಸುತ್ತಿರಲಿ ಅವರು ಏನೇ ಮಾಡಲಿ....ಎಲ್ಲಿಗೇ ಹೋಗಲಿ...ಯಾರನ್ನೇ ಬೇಟಿಯಾಗಲಿ ಅದರ ಸಂಪೂರ್ಣ ವಿವರ ಕಲೆಹಾಕಿ. ಅಕ್ಕನ ಜೊತೆ ಪ್ರತಿದಿನವೂ ಮಾತನಾಡುವಂತದ್ದೇನಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸಿ.
ವಿಕ್ರಂ ಸಿಂಗ್.....ಚಂಚಲಾದೇವಿಯವರ ವಿವರಗಳನ್ನು ಕಲೆಹಾಕಲು ಆಗಲೇ ನಮ್ಮವರು ಹಿಮಾಚಲಕ್ಕೆ ತೆರಳಿದ್ದಾರೆ ಅದರ ಜೊತೆ ಭಾನು ಅವರ ಮೇಲೂ ನಮ್ಮವರ ಕಣ್ಣು ಇಪ್ಪತ್ನಾಲ್ಕು ಘಂಟೆಯೂ ಇದೆ. ಅವರ ಮಾತುಕತೆಯ ವಿವರಗಳನ್ನು ತಿಳಿದುಕೊಳ್ಳಲು ನಾವು ತುಂಬ ಪ್ರಯತ್ನಿಸಿದೆವು ಆದರೆ ಇನ್ನೂ ಸಫಲರಾಗಿಲ್ಲ.
ನೀತು.....ಅದಕ್ಕೂ ಏನಾದರು ದಾರಿ ಹುಡುಕಬೇಕಾಗಿದೆ ಅವರಿಬ್ಬರ ಮಾತಿನ ವಿವರಗಳು ತಿಳಿದುಕೊಳ್ಳುವುದು ತುಂಬ ಅವಶ್ಯಕ.
ವಿಕ್ರಂ ಸಿಂಗ್.....ಇಬ್ಬರು ಮಹಾರಾಜ ಮಹಾರಾಣಿಯರನ್ನು ಕೊಂದ ಪಾಪಿಗಳಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವುದು ಕಷ್ಟವೇನಿಲ್ಲ ಅದಕ್ಕೆ ನಿಮ್ಮ ಊರಿನಲ್ಲೂ ನಮ್ಮವರನ್ನು ಕಾವಲಿಗೆ ಕಳುಹಿಸಬಹುದಾ ?
ನೀತು.....ನೀನು ಯೋಚಿಸುವುದರಲ್ಲೂ ತಪ್ಪಿಲ್ಲ ಆದರೆ ಸಧ್ಯಕ್ಕೇನು ಬೇಡ ಮುಂದೆ ಅವಶ್ಯಕತೆಯಿದ್ದರೆ ನಾನೇ ಕರೆಸಿಕೊಳ್ಳುವೆ. ಅಂದ ಹಾಗೆ ಸಂಸ್ಥಾನದ ಅಧೀನದಲ್ಲಿ ಎಷ್ಟು ಜನ ಸೆಕ್ಯೂರಿಟಿಗಿದ್ದಾರೆ ?
ವಿಕ್ರಂ ಸಿಂಗ್....ಸೂರ್ಯವಂಶದ ಸಂಸ್ಥಾನದ ಅಧೀಶದಲ್ಲಿರುವಂತ ಎಲ್ಲಾ ಫ್ಯಾಕ್ಟರಿ.....ಹೋಟೆಲ್...ಶಾಪಿಂಗ್ ಮಾಲ್ ಮತ್ತು ಇತರೆ ವ್ಯಾವಹಾರಿಕ ಸ್ಥಳಗಳ ಜೊತೆ ನಾಲ್ಕು ಅರಮನೆಗಳಿಗೂ ಒಟ್ಟಾಗಿ 4750 ಜನ ಸೆಕ್ಯೂರಿಟಿದ್ದಾರೆ. ಇವರಲ್ಲದೆ ರಾಜಮನೆತನದವರಿಗೆ ಕಾವಲು ನೀಡುವುದಕ್ಕಾಗಿ ಪ್ರತ್ಯೇಕವಾದ ತಂಡದವರಿದ್ದಾರೆ. ಅವರ ನಿಷ್ಠೆ ಸಂಪೂರ್ಣವಾಗಿ ರಾಜಮನೆತನದ ಒಳಿತಿಗಾಗಿ ಮೀಸಲಾಗಿದೆ. ರಾಜಮನೆತನಕ್ಕಾಗಿ ಪ್ರಾಣ ಕೊಡುವುದಕ್ಕೂ ಹಿಂಜರಿಯುವುದಿಲ್ಲ ಜೊತೆಗೆ ಪ್ರಾಣ ತೆಗೆಯಲೂ ಯೋಚಿಸುವುದಿಲ್ಲ. ಇವರೇ 650 ಜನ ಇದ್ದಾರೆ ಅವರಲ್ಲಿ 150 ಜನ ಪ್ರತ್ಯೇಕವಾಗಿ ಜೈಸಲ್ಮೇರಿನ ಅರಮನೆ ಆವರಣದಲ್ಲಿರುವ ಅತಿಥಿ ಗೃಹದಲ್ಲಿದ್ದಾರೆ. ಅವರನ್ನು ವಿಶೇಷವಾದ ಸಂಧರ್ಭಗಳಲ್ಲಿ ಮಾತ್ರ ಮಹಾರಾಜರು ಬಳಸಿಕೊಳ್ಳುತ್ತಿದ್ದರು. ಇವರೆಲ್ಲರು ತುಂಬ ಶಕ್ತಿವಂತರಾಗಿರುವ ಜೊತೆಗೆ ತುಂಬ ಚಾಣಾಕ್ಷರು ಅವರ ನಾಯಕ ದಿಲೇರ್ ಸಿಂಗ್ ಅಂತ ರಾಣಾಪ್ರತಾರರ ಅತ್ಯಂತ ವಿಶ್ವಾಸಪಾತ್ರ ವ್ಯಕ್ತಿ. ನಿಜ ಹೇಳಬೇಕೆಂದರೆ ನನಗಿಂತಲೂ ದಿಲೇರ್ ಸಿಂಗ್ ಒಂದು ಕೈ ಮೇಲು. ರಾಜಕುಮಾರಿ ನಿಶಾ ಮತ್ತು ನಿಮ್ಮ ಬಗ್ಗೆ ತಿಳಿದಾಗಿನಿಂದಲೂ ಅವನು ನಿಮ್ಮನ್ನು ಬೇಟಿಯಾಗಲು ತುಂಬಾ ಕಾತುರನಾಗಿದ್ದಾನೆ.
ನೀತು.....ನಾವೂ ಸಾಧ್ಯವಾದಷ್ಟು ಬೇಗ ಜೈಸಲ್ಮೇರಿಗೆ ಹೋಗೋಣ ಆದರೀಗ ನನಗೆ ಸಾಧ್ಯವಿಲ್ಲ ನಾನು ಬರುವ ಮುನ್ನ ತಿಳಿಸುತ್ತೇನೆ. ನೀನೀಗ ಹೊರಡು ವಿಕ್ರಂ ನಿನ್ನ ವಿಶ್ವಾಸದ ಜನರಿಗೆ ಭಾನುಪ್ರತಾಪ್ ಮತ್ತು ಚಂಚಲಾದೇವಿ ಇಬ್ಬರ ಹಿಂದೆ 24 ಘಂಟೆ ನಿಯೋಜಿಸು.
ವಿಕ್ರಂ ಸಿಂಗ್ ತೆರಳಿದಾಗ ನೀತು ಕುಳಿತಿದ್ದ ಟೇಬಲ್ಲಿಗೆ ಬಂದ.....
ನಿಧಿ......ಅಮ್ಮ ನನ್ನನ್ನು ಹೆತ್ತವಳ್ಯಾರೆಂದು ನನಗೆ ಗೊತ್ತಿಲ್ಲ ನಂತರ ನನಗೆ ತಾಯಿಯ ಪ್ರೀತಿಯನ್ನು ಧಾರೆಯೆರೆದ ಸುಧಾ ಅಮ್ಮ ಕೂಡ ನನ್ನನ್ನು ಒಂಟಿಯಾಗಿಸಿ ಹೊರಟು ಹೋದರು. ಇದೆಲ್ಲವೂ ಕೇವಲ ರಾಜಮನೆತನದ ಆಸ್ತಿಗಾಗಿ ನಡೆಯುತ್ತಿದೆ ನಮಗೇನೂ ಬೇಡಾಮ್ಮ. ಇವರೆಲ್ಲರ ವಿರುದ್ದ ಹೋರಾಡುತ್ತ ನಿಮಗೇನಾದರೂ ಸಂಭವಿಸಿದರೆ ನಾನು ಬದುಕಿರಲಾರೆ ಇನ್ನು ಚಿನ್ನಿಯ ಬಗ್ಗೆ ಯೋಚಿಸಿ.
ನೀತು ಮಗಳ ಕೆನ್ನೆ ಸವರಿ......ನನಗೇನೂ ಆಗುವುದಿಲ್ಲ ಕಣಮ್ಮ ಏಕೆಂದರೆ ವಿರೋಧಿಗಳ್ಯಾರೆಂದು ನಾನು ಊಹಿಸಿರುವೆ ನೀನು ನನ್ನ ಬಗ್ಗೆ ಚಿಂತಿಸದಿರು. ಇನ್ನೂ ನಿನ್ನ ಮತ್ತು ಚಿನ್ನಿ ಜೊತೆ ನಾನು ಬಹಳ ವರ್ಷ ಬಾಳಿ ಬದುಕಬೇಕಿದೆ. ರಾಜಮನೆತನದ ಆಸ್ತಿಯನ್ನು ನಾವು ತ್ಯಜಿಸಿದರೆ ಎಲ್ಲವೂ ಸರ್ಕಾರದ ಪಾಲಾಗಲಿದೆಯೇ ಹೊರತು ಆ ವಿರೋಧಿಗಳಿಗೆ ಏನೂ ದೊರಕುವುದಿಲ್ಲ. ಅದರಿಂದ ರಾಜಮನೆತನ ಮತ್ತು ಅಲ್ಲಿನ ಕೆಲಸವನ್ನೇ ನಂಬಿಕೊಂಡು ಬಾಳುತ್ತಿರುವ ಸಾವಿರ ಕುಟುಂಬಗಳು ಬೀದಿ ಪಾಲಾಗಿ ಹೋಗುತ್ತಾರೆ ಅದು ನಿನಗೆ ಬೇಕ ? ಆಸ್ತಿಯನ್ನು ನಾವು ಬೇಡವೆಂದರೂ ವಿರೋಧಿಗಳು ಸುಮ್ಮನಾಗಿ ಬಿಡುತ್ತಾರೆಂದು ನೀನು ಹೇಗೆ ಊಹಿಸಿರುವೆ ನೀವು ಬದುಕಿರುವಷ್ಟು ದಿನವೂ ಅವರೆಲ್ಲರೂ ಆಸ್ತಿ ಕಬಳಿಸಲು ಶತಪ್ರಯತ್ನ ಮಾಡುತ್ತಾರೆ. ಅದಕ್ಕಿರುವುದೊಂದೇ ಮಾರ್ಗ ಎಲ್ಲಾ ವಿರೋಧಿಗಳನ್ನೂ ಅವರು ಮಾಡಿದ ಪಾಪಗಳಿಗಾಗಿ ಮರಣದಂಡನೆ ನೀಡುವುದೇ ಆಗಿದೆ. ಇದು ನಿನ್ನ ಮತ್ತು ನಿಶಾಳ ಹಕ್ಕು ನಿಮ್ಮಿಬ್ಬರಿಂದ ಇದನ್ನು ಯಾರೂ ಕಬಳಿಸಲು ನಾನು ಅವಕಾಶವನ್ನೇ ನೀಡುವುದಿಲ್ಲ.
ನಿಧಿ......ಸರಿ ಅಮ್ಮ ನೀವು ಹೇಳಿದಂತೆಯೇ ಆಗಲಿ ಆದರೆ ನೀವು ಎಲ್ಲಿಗೇ ಹೋದರೂ ನಾನು ನಿಮ್ಮ ರಕ್ಷಣೆಗೆ ಬರುತ್ತೇನೆ ಅಷ್ಟೆ.
ನೀತು ಮುಗುಳ್ನಗುತ್ತ......ತಾಯಿ ಮಗಳನ್ನು ರಕ್ಷಿಸಬೇಕು ಎಂಬುದು ನಿಯಮ ಕಣಮ್ಮ.
ನಿಧಿ.....ಅಮ್ಮ ಆಶ್ರಮದಲ್ಲಿ ಎಂತಹುದೇ ಕ್ಲಿಷ್ಟಕರವಾದ ಪರಿಸ್ಥಿತಿ ಎದುರಾದರೂ ನಿಭಾಯಿಸುವಷ್ಟು ನನ್ನನ್ನು ಸಕ್ಷಮಗೊಳಿಸಿದ್ದಾರೆ. ನನ್ನ ತಮ್ಮ ತಂಗಿ ಮತ್ತು ಅಪ್ಪನಿಗೆ ಪೆಟ್ಟಾಗುವಂತೆ ಮಾಡಿರುವವರ ವಿರುದ್ದವೇ ನಾವು ಮೊದಲು ಸೇಡು ತೀರಿಸಿಕೊಳ್ಳಬೇಕು.
ನೀತು......ಊರಿಗೆ ಮರಳಿದ ನಂತರ ನಾನು ಮೊದಲಿಗೆ ಮಾಡುವ ಕೆಲಸವೇ ಅದು ನೀನೂ ಜೊತೆಯಲ್ಲಿರುವಂತೆ ಆದರೆ ನಾನೇನು ಹೇಳುತ್ತೀನೋ ಅಷ್ಟನ್ನು ಮಾತ್ರ ಮಾಡಬೇಕು. ಈಗ ನಡಿ ನಿನಗೆ ಸ್ವಲ್ಪ ಶಾಪಿಂಗ್ ಮಾಡಿಕೊಂಡು ಬರೋಣ.
* *
* *
ನಿಶಾ ಅಪ್ಪನ ಮೇಲೇರಿ ಮಲಗಿರುವುದನ್ನು ನೋಡಿ ನೀತು ನಗುತ್ತ ಗಂಡನಿಗೆ ತಾನು...ನಿಧಿ...ಸವಿತಾ ಮತ್ತು ನಿಕಿತಾ ಶಾಪಿಂಗಿಗಾಗಿ ಹೋಗುತ್ತಿರುವೆವು ಅಂತ ತಿಳಿಸಿದಳು.
ಹರೀಶ.....ಲೇ ನನ್ನ ಬಂಗಾರಿ ಎದ್ದರೆ ಮೊದಲು ಕೇಳುವುದು ನಿನ್ನನ್ನೆ ನಾನೇನು ಮಾಡಲಿ.
ನೀತು.....ರೀ ನನ್ನ ಮುದ್ದಿನ ಮಗಳು....ಚಿನ್ನ....ರನ್ನ....ಬಂಗಾರಿ ಅಂತ ಏನೇನೋ ಹೇಳ್ತೀರಲ್ಲ ಸ್ವಲ್ಪ ಹೊತ್ತು ನಿಮಗೆ ಮಗಳನ್ನು ನಿಭಾಯಿಸಲು ಆಗಲ್ಲವಾ ನಾವು ಹೋಗಿ ಬರುತ್ತೀವಿ.
ಹೆಂಡತಿ ತೆರಳಿದ ಸ್ವಲ್ಪ ಹೊತ್ತಿನ ಬಳಿಕ ಎಚ್ಚರಗೊಂಡ ಮಗಳನ್ನು ಮುದ್ದಾಡಿದ ಹರೀಶ ಅವಳನ್ನು ಫ್ರೆಶಾಗಿಸಿದರೆ ಅನುಷ ಅವಳನ್ನು ರೆಡಿ ಮಾಡಿದಳು.
ನಿಶಾ.....ಪಪ್ಪ ಮಮ್ಮ ಲೆಲ್ಲಿ ?
ಹರೀಶ.....ನಿಮ್ಮಮ್ಮ ಅಕ್ಕ ಹೊರಗೆ ಹೋಗಿದ್ದಾರೆ ನಾನು ನೀನು ಅಕ್ಕ ಎಲ್ಲರೂ ಟಾಟಾ ಹೋಗಿ ಬರೋಣ ಜೊತೆಗೆ ಐಸ್....ಚೀಯ ಎಲ್ಲಾ ತಿನ್ನೋಣ.
ನಿಶಾ ಖುಷಿಯಿಂದ.....ಪಪ್ಪ ಚಿಯಾ ( ಸ್ವೀಟ್ಸ್ )ಬೇಕು ಬೇಕು...
ಹರೀಶ...ರವಿ...ಅಶೋಕ ಮತ್ತು ಶೀಲಾ ಎಲ್ಲಾ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೊರಗೆ ಸುತ್ತಾಡಲು ಹೊರಟರೆ ರಜನಿ ಸುಕನ್ಯಾ ತಾವು ಹೋಟೆಲ್ಲಿನಲ್ಲೇ ಉಳಿಯುವುದಾಗಿ ಹೇಳಿದರು.
* *
* *
ನೀತು.....ನೀನಿಲ್ಲಿವರೆಗೂ ಜೀನ್ಸೇ ಹಾಕಿಲ್ಲವಾ ?
ನಿಧಿ......ಅಮ್ಮ ಆಶ್ರಮದಲ್ಲಿ ಜೀನ್ಸ್ ಹಾಕಲು ಅವಕಾಶವಿರಲಿಲ್ಲ ನಿಮಗೇನೂ ಅಭ್ಯಂತರವಿಲ್ಲ ಅಂದರೆ ನಾನೀಗ ಹಾಕಲು ರೆಡಿ.
ಸವಿತಾ.....ನಿಮ್ಮಮ್ಮನೇ ಜೀನ್ಸ್ ಹಾಕ್ತಾಳೆ ಇನ್ನು ನೀನು ಹಾಕಿದರೆ ಬೇಡ ಅಂತಾಳಾ ಬಿಂದಾಸ್ ಹಾಕ್ಕೋ.
ನಿಕಿತಾ.....ಅಕ್ಕ ನಾನೂ ಮೊದಲು ಜೀನ್ಸ್ ಬೇಡ ಅಂತಿದ್ದೆ ಆಮೇಲೆ ಆಂಟಿಯೇ ಬೈದರು. ಜೀನ್ಸ್ ಹಾಕಿಕೊಂಡಾಗ ಶರ್ಟು ಟೀಶರ್ಟನ್ನೇ ಹಾಕಬೇಕೆಂದಿಲ್ಲ ಜೀನ್ಸ್ ಮೇಲೆ ಶಾರ್ಟ್ ಟಾಪ್ಸ್ ಅಥವ ಚೂಡಿಯ ಟಾಪನ್ನೂ ಹಾಕಿಕೊಳ್ಳಬಹುದು ಅಂತ ಈಗ ನಾನೂ ಕೂಡ ಜೀನ್ಸ್ ಹಾಕ್ತೀನಿ.
ನಿಧಿ....ನಿಕ್ಕಿ ನಿನಗೆ ಜೀನ್ಸ್ ಚೆನ್ನಾಗಿಯೂ ಕಾಣಿಸುತ್ತೆ.
ನಿಕಿತಾ.....ಅಕ್ಕ ನೀವು ಕಂಪ್ಲೀಟ್ ಫಿಟ್ಟಾಗಿದ್ದೀರ ನಿಮಗಂತು ಜೀನ್ಸ್ ಪರ್ಫೆಕ್ಟಾಗಿ ಕಾಣಿಸುತ್ತೆ ಹಾಕಿ ನೋಡಿ.
ಹಿರಿಮಗಳು ನಿಧಿಗೆ 8 —10 ಜೊತೆ ಬಟ್ಟೆಗಳ ಜೊತೆ ಒಳ ಉಡುಪು ಖರೀಧಿಸಿದ ನೀತು ಬಲವಂತ ಮಾಡಿ ನಿಕಿತಾಳಿಗೂ ನಾಲ್ಕು ಜೊತೆ ಬಟ್ಟೆ ತೆಗೆದುಕೊಟ್ಟಳು. ನಾಲ್ವರೂ ಖರೀಧಿ ಮಾಡಿಕೊಂಡು ಮರಳಿ ಹೋಟೆಲ್ಲಿಗೆ ತಲುಪಿದಾಗ ಹರೀಶನ ಜೊತೆ ಮಿಕ್ಕವರು ಹಿಂದಿರುಗಿ ಬರುತ್ತಿದ್ದರು. ಎಲ್ಲರು ಹೋಟೆಲ್ಲಿನ ಹೊರಗೇ ಬೇಟಿಯಾದಾಗ......
ಅಶೋಕ.....ನೀತು ನಾಳಿದ್ದು ನಾವು ಚಾರ್ ದಾಮ್ ಯಾತ್ರೆಗಾಗಿ ಒಂದು ಮಿನಿ ಬಸ್ ಬುಕ್ ಮಾಡಿದ್ದೀವಿ. ಡೆಹ್ರಾಡೂನ್...ಮಸ್ಸೂರಿ
....ಹೃಷಿಕೇಶ....ಪಂಚ ಪ್ರಯಾಗಗಳ ನಂತರ ಯಮುನೋತ್ರಿ.... ಗಂಗೋತ್ರಿ...ಬದ್ರಿನಾಥ ಮತ್ತು ಕೇಧಾರನಾಥನ ದರ್ಶನ ಮಾಡಿಸಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡುತ್ತಾರೆ.
ರವಿ.....ಆ ಕಡೆ ತುಂಬ ಚಳಿಯಂತೆ ನಾವ್ಯಾರೂ ಬೆಚ್ಚಗಿನ ಸ್ವೆಟರನ್ನೇ ತಂದಿಲ್ಲ ನಾಳೆ ಎಲ್ಲರೂ ಹೋಗಿ ಖರೀಧಿಸಬೇಕು.
ನಿಧಿ.....ಅಂಕಲ್ ಆ ಭಾಗದ ಚಳಿ ಸ್ವೆಟರಿನಿಂದ ತಡೆಯಲಾಗದು ಏನಿದ್ದರು ಒಳ್ಳೆ ಕ್ವಾಲಿಟಿಯ ಜರ್ಕಿನ್ ತೆಗೆದುಕೊಳ್ಳಬೇಕು.
ನೀತು.....ನೀನು ಮೊದಲೇ ಹೇಳಿದ್ದರೆ ನಾವು ನಮಗೆಲ್ಲಾ ಜರ್ಕಿನ್ ತೆಗೆದುಕೊಂಡು ಬರಬಹುದಿತ್ತು ಗಂಡಸರು ನಾಳೆ ತಗೋತಿದ್ರು.
ನಿಧಿ......ಅಮ್ಮ ಈ ಭಾಗದ ಚಳಿಯ ಬಗ್ಗೆ ನಿಮಗೆ ತಿಳಿದಿರುತ್ತೆಂದು ನಾನು ಸುಮ್ಮನಿದ್ದೆ.
ಹರೀಶ......ಹೋಗಲಿ ಬಿಡಮ್ಮ ನಾಳೆ ಎಲ್ಲರೂ ಹೋಗಿ ಖರೀಧಿ ಮಾಡೋಣ . ಇವತ್ತು ತುಂಬ ಆಶ್ಚರ್ಯಕರ ಘಟನೆ ನಡೆಯಿತು ಕಣೆ ನೀತು. ನಿನ್ನ ಲಿಲಿಪುಟ್ ಮೊದಲ ಬಾರಿಗೆ. ಐಸ್ ಕ್ರೀಂ ಬೇಡ ಅಂತ ದೂರ ತಳ್ಳಿಬಿಟ್ಟಳು ಗೊತ್ತ.
ನೀತು.....ನನ್ನ ಮಗಳು ಐಸ್ ಬೇಡ ಅನ್ನೋದ ಸಾಧ್ಯವೇ ಇಲ್ಲ.
ಶೀಲಾ.....ಇಲ್ಲ ಕಣೆ ನಿಜ ಹೊರಗೆ ಛಳಿ ಇದೆಯಲ್ಲ ಐಸ್ ಬಾಯಿ ಒಳಗೆ ಹಾಕಿದ ತಕ್ಷಣ ಥೂ.... ಕುಳು ಕುಳು ಅಂತ ಉಗಿದು ನಂಗೆ ಬೇಡ...ಬೇಡ...ಅಂತ ದೂರ ತಳ್ಳಿಬಿಟ್ಟಳು.
ಅನುಷ.....ಅಕ್ಕ ಅಲ್ಲಿ ಅಣ್ಣನ ಜೊತೆ ನೀರಿನ ಫೈಟೇಂನ್ ನೋಡುತ್ತ ಕಿರುಚಾಡುತ್ತಿರುವುದು ನಿಮಗೆ ಕೇಳಿಸುತ್ತಿಲ್ಲವಾ ಅಲ್ಲಿ ನೋಡಿ.
ರವಿ.....ಗಿರೀಶ ಎಲ್ಲರೂ ಒಳಗೆ ಬನ್ನಿ ಛಳಿ ಜಾಸ್ತಿಯಾಗುತ್ತಿದೆ ಬೇಗ ಊಟ ಮಾಡಿ ಮಲಗೋಣ.
ಊಟವಾದ ನಂತರ.....
ಸುರೇಶ.....ಅಮ್ಮ ನಾನೀವತ್ತು ಅಕ್ಕನ ಜೊತೆ ಮಲಗಿಕೊಳ್ತೀನಿ.
ನಿಧಿ ತಮ್ಮನ ಮಾತಿಗೆ ನಕ್ಕರೆ ನೀತು.....ಊರಿಗೆ ಹೋದ ನಂತರ ನೀನು ನಿಮ್ಮಕ್ಕನ ಹೆಗಲಿಗೇ ನೋತಾಕಿಕೋ ಅಲ್ಲಿವರೆಗೂ ಅಣ್ಣನ ಜೊತೆ ರೂಮಿನಲ್ಲಿರು ಓಡೀಗ ಮಲಗಿಕೋ.
ಅಪ್ಪನ ಮೇಲೇರಿ ಮಲಗಿದ್ದ ನಿಶಾಳ ದೃಷ್ಟಿಯು ನಿಧಿ ಅಕ್ಕನ ತಲೆ ಸವರಿ ಮುದ್ದಿಸುತ್ತಿದ್ದ ಅಮ್ಮನ ಮೇಲಿದ್ದು ಅವಳಿಗೆ ಫುಲ್ ಹೊಟ್ಟೆ ಉರಿಯುತ್ತಿತ್ತು. ಅಪ್ಪನ ಎದೆಯಿಂದ ಕೆಳಗಿಳಿದು ಅಮ್ಮನನ್ನು ದಾಟಿ ಅಕ್ಕ ಮತ್ತು ಅಮ್ಮನ ಮಧ್ಯೆ ಸೇರಿಕೊಂಡ ನಿಶಾ ಅಕ್ಕನನ್ನು ದೂರ ತಳ್ಳುತ್ತ ಅಮ್ಮನನ್ನು ಸೇರಿಕೊಂಡು ಮಲಗಿಬಿಟ್ಟಳು.
ನೀತು.....ಎಷ್ಟು ಹೊಟ್ಚೆಯುರಿ ರೀ ನಿಮ್ಮ ಮಗಳಿಗೆ.
ಹರೀಶ....ಮತ್ತೆ ನೀನು ಅವಳನ್ನು ಮುದ್ದಿಸದೆ ನಿಧಿಯನ್ನು ಮಾತ್ರ ಮುದ್ದು ಮಾಡುತ್ತಿದ್ದರೇನು ಮಾಡ್ತಾಳೆ ನಿದ್ದೆ ಬರಲಿ ನಾನು ಪುನಃ ಎತ್ತಿಕೊಂಡು ಮಲಗಿಸಿಕೊಳ್ತೀನಿ.
ನಿಧಿ ತನ್ನ ಪುಟ್ಟ ತಂಗಿ ಅಪ್ಪ ಅಮ್ಮನೊಟ್ಟಿಗೆ ಯಾವ ರೀತಿಯಲ್ಲಿ ಮಧುರವಾದ ಬಾಂಧವ್ಯ ಹೊಂದಿರುವಳೆಂದು ನೋಡಿ ನಗುತ್ತ ತಾನೂ ಕಣ್ಮುಚ್ಚಿ ಮಲಗಿಕೊಂಡಳು.
ಕತೆಯಂತೂ ಅದ್ಭುತವಾಗಿದೆ, ತಡಮಾಡದೇ ಮುಂದುವರೆಸಿ
ReplyDeletePlease bega bega story aki
ReplyDeleteಎಲ್ಲಾ ಎಪಿಸೋಡ್ ಅಲ್ಲು ಒಂದಾದರೂ ಕೇದಾಟದ ಕಥೆ ಹಾಕು ಗುರು
ReplyDeleteಕತೆ ಚನ್ನಾಗಿ ಮುಂದುವರಿತಾಇದೆ ಕಾಯ್ತಾ ಇದ್ದೇನೆ ಕಾಯಿಸದೆ ದಿನ ದಿನ ಅಪ್ಲೊಡ್ ಮಾಡಿ
ReplyDelete