ಬಸ್ಯನನ್ನು ಕಳುಹಿಸಿ ಮನೆಯೊಳಗೆ ಬಂದ ನೀತು ಮಧ್ಯಾಹ್ನವೇ ಮನೆಗೆ ಬಂದಿರುವ ಅಶೋಕ...ರವಿ ಮತ್ತು ಅನುಷಾಳನ್ನು ನೋಡಿ ಏನು ಸಮಾಚಾರವೆಂದು ಕೇಳಿದಳು.
ರಜನಿ..ನಾವಿಬ್ರೂ ಅಷ್ಟೊತ್ತಿನಿಂದ ಇದನ್ನೇ ಕೇಳ್ತಿದ್ದೀವಿ ಕಣೆ ಆದರೆ ಯಾರೂ ಬಾಯಿ ಬಿಡ್ತಾನೇ ಇಲ್ಲ ಗರಬಡಿದವರಂತೆ ಕೂತಿದ್ದಾರೆ.
ನೀತು ಮೂವರ ಮುಖದ ಭಾವನೆಗಳನ್ನು ಗಮನಿಸಿ ಅನುಮಾನ ಧೃಡಪಡಿಸಿಕೊಳ್ಳಲು......ಶಾಸಕ ಫೋನ್ ಮಾಡಿ ಹೆದರಿಸಿದನಾ ?
ಮೂವರೂ ಅಚ್ಖರಿಯಿಂದ ಅವಳನ್ನೇ ನೋಡಿದರೆ ರವಿ.....ನಿನಗೆ ಹೇಗಮ್ಮ ತಿಳಿಯಿತು ?
ನೀತು ಅದಕ್ಕೇನೂ ಉತ್ತರಿಸದೆ ಗಂಡನಿಗೆ ಫೋನ್ ಮಾಡಿ ಇನ್ನೂ ತೋಟದಲ್ಲಿರುವ ವಿಷಯ ತಿಳಿದು ಜಾನಿಗೆ ಫೋನ್ ಕೊಡುವಂತೇಳಿ
...........ಜಾನಿ ಏನೇ ಕೆಲಸವಿದ್ದರೂ ಸರಿ ನನ್ನ ಗಂಡ ಮಗಳ ಜೊತೆ ನೀನು ಮನೆಗೆ ಬಾ ದಾರಿಯಲ್ಲಿ ಯಾರೇ ಅಡ್ಡಬಂದರೂ ಕಾರನ್ನು ನಿಲ್ಲಿಸಬೇಡ ಮಿಕ್ಕಿದ್ದು ಮನೆಗೆ ಬಂದಾಗ ಮಾತಾಡೋಣ.
ಗಿರೀಶನಿಗೂ ಕರೆ ಮಾಡಿ ಸವಿತಾಳ ಮನೆಯಿಂದ ನೇರವಾಗಿ ಅಕ್ಕನ ಜೊತೆ ಮನೆಗೆ ಬರುವಂತೇಳಿದಳು.
ಅನುಷ.......ಆವತ್ತು ಭಾವನ ಬೈಕಿಗೆ ಗುದ್ದಿದ್ದು ಬರೀ ಟ್ರೈಲರಂತೆ ಇನ್ನೂ ಬಹಳ ದೊಡ್ಢ ಅನಾಹುತಗಳೇ ಆಗುತ್ತೆ ಅಂದ.
ಅಶೋಕ......ಪೋಲಿಸ್ ಎಸ್ಪಿ ಕೂಡ ಅವನ ಜೊತೆಯಲ್ಲಿದ್ದ ನಾವು ಪೋಲಿಸರ ಸಹಾಯವನ್ನೂ ಕೇಳಲಾಗುವುದಿಲ್ಲ ಪ್ರತಾಪ್ ಕೂಡ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಅವನ ಹಿರಿಯ ಅಧಿಕಾರಿಯೇ ಶಾಸಕನ ಜೊತೆ ಶಾಮೀಲಾಗಿರುವಾಗ ಅವನೇನು ಮಾಡ್ತಾನೆ. ಆದ್ರೆ ನಾವು ಸುಮ್ಮನೆ ಕೈ ಕಟ್ಟಿ ಕುಳಿತಿದ್ದರೆ ಶಾಸಕ ಇನ್ನೇನಾದರು ಮಾಡೇ ಮಾಡ್ತಾನೆ ಅನಿಸುತ್ತೆ.
ಶೀಲಾ ಗಾಬರ ಮತ್ತು ಭಯದಿಂದ......ಅನು ಏನೇ ಹೇಳ್ತಿದ್ದೀಯ ? ನನ್ನ ಚಿನ್ನಿಗೆ ಕಾರು ಗುದ್ದಿದ್ದು ಆಕಸ್ಮಿಕವಲ್ಲ ಶಾಸಕನೇ ಪ್ಲಾನ್ ಮಾಡಿ ಗುದ್ದಿಸಿದ ಅಂದೆಯಾ ?
ರವಿ.....ಹಾಗೇನೂ ಇಲ್ಲ ಕಣೆ....
ಶೀಲಾ....ರೀ ನೀವು ಸುಮ್ಮನಿರಿ ಅನು ನೀ ಹೇಳು
ಅನುಷ.....ಅಕ್ಕ ನನಗಿಷ್ಟು ಗೊತ್ತಿತ್ತೋ ಅಷ್ಟನ್ನೂ ಹೇಳಿರುವೆ ನನಗೆ ಅಶೋಕ ಭಾವ ಇಷ್ಟೇ ವಿಷಯ ಹೇಳಿದ್ದು.
ಶೀಲಾ......ಅಶೋಕ್ ಏನಿವಳು ಹೇಳ್ತಿರೋದು ? ಈಗ ನೀನೇ ಎಲ್ಲ ವಿಷಯ ನಮಗೆ ಹೇಳಬೇಕು.
ರಜನಿ.....ರೀ ಗುಮ್ಮನಂತೆ ಕೂತಿದ್ದೀರಲ್ಲ ಬಾಯಿ ಬಿಡಿ ಇದು ನಮ್ಮ
ಕುಟುಂಬಕ್ಕೆ ಸಂಬಂಧಿಸಿದ ವಿಷಯ ಎಲ್ಲದಕ್ಕಿಂತಲೂ ಮುಖ್ಯವಾಗಿ ನಮ್ಮ ಮುದ್ದಿನ ಕಣ್ಮಣಿಗೆ ಆಕ್ಸಿಡೆಂಟ್ ಮಾಡಿಸುವ ಹುನ್ನಾರ.
ಮನೆಯೊಳಗೆ ಬರುತ್ತಿದ್ದ ನಿಧಿ ಮತ್ತು ಗಿರೀಶನಿಗೆ ಆಕ್ಸಿಡೆಂಟ್ ಬಗ್ಗೆ ಮಾತ್ರ ಕೇಳಿಸಿ ಇಬ್ಬರ ಮುಖದಲ್ಲೂ ಕ್ರೋಧ ಭುಗಿಲೆದ್ದಿತು.
ನಿಧಿ......ಆಂಟಿ ಯಾರು ನನ್ನ ಚಿನ್ನಿಗೆ ಆಕ್ಸಿಡೆಂಟ್ ಮಾಡಿಸಿದ್ದು ?
ಗಿರೀಶ....ಹೇಳಿ ಆಂಟಿ....
ನೀತು......ಗಿರೀಶ ನೀನು ಮೇಲೆ ಹೋಗು.
ಗಿರೀಶ.....ಅಮ್ಮ ನಾನು..
ನೀತು.....ಮೇಲೆ ಹೋಗು ಅಂತ ಹೇಳಿದೆನೋ ಇಲ್ಲವೋ.
ಗಿರೀಶ ಹೋಗಲು ಇಷ್ಟವಿಲ್ಲದಿದ್ದರೂ ಅಮ್ಮನಿಗೆ ಏದುರಾಡದೆ ತಲೆ ತಗ್ಗಿಸಿಕೊಂಡು ಮಹಡಿಯೇರಿದನು.
ರಜನಿ.....ನನಗೇನೂ ಗೊತ್ತಿಲ್ಲ ನಿಧಿ ಈಗಷ್ಟೇ ಅನುಷ ಆಕ್ಸಿಡೆಂಟಿನ ಬಗ್ಗೆ ಹೇಳುತ್ತಿದ್ದಳು ಯಾರೋ ಬೇಕೆಂದೇ ಮಾಡಿಸಿದ್ದಾರಂತೆ. ರೀ ನೀವಿನ್ನೂ ಬಾಯಿ ಬಿಡದೆ ಸುಮ್ಮನಿದ್ದೀರಲ್ಲ ಮಾತನಾಡಿ ಆ ಶಾಸಕ ನಿಮಗೇನು ಹೇಳಿದ.
ಅಶೋಕ ಮಾತನಾಡುವ ಮುನ್ನವೇ ಹರೀಶ ಮತ್ತು ಜಾನಿ ಮನೆಗೆ ಮರಳಿದ್ದು ಅವರ ಜೊತೆಯೇ ನಾಯಿಗಳು ಮತ್ತು ಕುಕ್ಕಿ ಮರಿಯ ಜೊತೆ ನಿಶಾ ಕುಣಿದಾಡುತ್ತ ಬಂದಳು.
ನಿಶಾ.....ಮಮ್ಮ ಕುಕ್ಕಿ ಬಂತು....ಅಕ್ಕ ನನ್ನಿ ಕುಕ್ಕಿ ನೋಲು....
ನೀತು....ಹೂಂ ಬಂಗಾರಿ ನಿನ್ನದೇ ಕುಕ್ಕಿ ಈಗ ನೀನು ಮೇಲೆ ಹೋಗಿ ಅಕ್ಕ ಅಣ್ಣನ ಜೊತೆ ಆಟವಾಡು ಸರಿಯಾ. ರಶ್ಮಿ ಸ್ವಲ್ಪ ಕೆಳಗೆ ಬಂದು ಚಿಲ್ಟಾರೀನ ಮೇಲೆ ಕರೆದುಕೊಂಡು ಹೋಗಮ್ಮ.
ನಿಶಾ ಅಕ್ಕನ ಜೊತೆ ತೆರಳಿದಾಗ ಜಾನಿ....ಏನು ಎಲ್ಲರೂ ತುಂಬಾನೇ ಸೀರಿಯಸ್ಸಾಗಿದ್ದೀರಲ್ಲ ?
ರಜನಿ ಸಂಕ್ಷಿಪ್ತವಾಗಿ ವಿಷಯ ತಿಳಿಸುತ್ತಿದ್ದಾಗ ನಿಧಿ ಕೂಡ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದಳು.
ಹರೀಶ.....ಅಶೋಕ ಏನು ವಿಷಯ ಹೇಳು.
ಅಶೋಕ......ಈಗ ಸ್ವಲ್ಪ ಹೊತ್ತಿಗೂ ಮುಂಚೆ ಈ ಊರಿನ ಶಾಸಕ ರಾಜೀವ್ ನನಗೆ ಫೋನ್ ಮಾಡಿದ್ದ. ಆ ದಿನ ಅವನ ಮಗ ಬೇಕು ಅಂತಲೇ ಪ್ಲಾನ್ ಮಾಡಿ ನಿನ್ನ ಬೈಕಿಗೆ ಗುದ್ದಿದ್ದಂತೆ.
ಹರೀಶ.....ಯಾಕೆ ಅಂತ ನೀನು ಕೇಳಲಿಲ್ಲವಾ ? ಅವನಿಗೂ ನಮ್ಮ ಜೊತೆ ಯಾವುದೇ ಮಾತುಕತೆಯೂ ಇಲ್ಲವಲ್ಲ ಹಾಗಿದ್ದರೆ ನಮ್ಮನ್ನು ಟಾರ್ಗೆಟ್ ಮಾಡಿದ್ದೇಕೆ ?
ಅಶೋಕ.....ಕೇಳಿದೆ ಹರೀಶ ಅದಕ್ಕವನು ಸುಮ್ಮನೆ ನಕ್ಕು ನಾಳೆ ಪುನಃ ಫೋನ್ ಮಾಡಿದಾಗ ಹೇಳ್ತೀನಿ ಅಲ್ಲಿವರೆಗೆ ನಿನ್ನ ಮನೆಯಲ್ಲಿ ಇನ್ಯಾರಿಗೂ ಆಕ್ಸಿಡೆಂಟ್ ಆಗದಿರಲಿ ಅಂತ ಬೇಡಿಕೊಳ್ಳುತ್ತಿರು ಅಂತ ಹೇಳಿ ಫೋನ್ ಇಟ್ಟು ಬಿಟ್ಟ.
ಹರೀಶ.....ನನ್ನ ಮಗ ಮಗಳಿಗೆ ಬೇಕಂತ ಗುದ್ದಿಸಿದನಾ ಬಡ್ಡಿಮಗ ಅವನನ್ನು ಸುಮ್ಮನೆ ಬಿಡುವುದಿಲ್ಲ.
ಜಾನಿ.....ನಾನೀಗಲೇ ಹೋಗಿ ಶಾಸಕ ಮತ್ತವನ ಮಗನ ಕೈ ಕಾಲು ಮುರಿದು ಬರುತ್ತೀನಿ..... ಎಂದು ಮೇಲೆದ್ದನು.
ರಜನಿ...ಶೀಲಾ....ಅನುಷ....ರವಿ ಗಾಬರಿ ಮತ್ತು ಭಯಗ್ರಸ್ತರಾಗಿ ನೋಡುತ್ತಿದ್ದರೆ ನಿಧಿ ನಾನೂ ಬರ್ತೀನಿ ಅಂಕಲ್ ಅಂತ ಜಾನಿಯ ಜೊತೆ ಹೊರಟಿದ್ದರೂ ನೀತು ಮೌನವಾಗಿದ್ದಳು.
ಜಾನಿ.....ನಿಧಿ ಅಂದರೆ ನೀನೇ ಅಲ್ಲವ ಪುಟ್ಟಿ. ನಿನ್ನ ಅಂಕಲ್ ನಾನು ಇರುವಾಗ ನೀನು ಬರಬೇಕಾಗಿಲ್ಲಮ್ಮ ನನ್ನ ಲಿಟಲ್ ಪ್ರಿನ್ಸಸ್ಸಿಗೆ ನೋವು ಕೊಟ್ಟವರಿಗೆ ಶಿಕ್ಷಿಸಲು ನಾನೊಬ್ಬನೇ ಸಾಕು.
ನೀತು.......ಯಾರೂ ಎಲ್ಲಿಗೂ ಹೋಗಬೇಕಾಗಿಲ್ಲ ತೆಪ್ಪಗೆ ಕುಳಿತಿರಿ. ಅನು ಹೋಗಿ ಕಾಫಿ ಮಾಡಿಕೊಂಡು ಬಾರಮ್ಮ ನಿಧಿ ನೀನು ಬಾ ನನ್ನ ಪಕ್ಕ ಸುಮ್ಮನೆ ಕುಳಿತುಕೋ.
ನಿಧಿ.....ಅಮ್ಮ ಅದು ಚಿನ್ನಿ ಆಕ್ಸಿಡೆಂಟ್....
ನೀತು.....ನನ್ನ ಪಕ್ಕ ಬಂದು ಕೂರು ಅಂತ ಹೇಳಿದೆನೋ ಇಲ್ಲವೋ ಇದು ರಾಜಸ್ಥಾನದ ಮರುಭೂಮಿಯಲ್ಲ ಆರು ಜನರ ತಲೆ ಕಡಿದು ಹಾಕಿದರೂ ಯಾರಿಗೂ ತಿಳಿಯದಿರುವುದಕ್ಕೆ ಗೊತ್ತಾಯ್ತ ನಾವೇನೇ ಮಾಡಿಧರೂ ತುಂಬ ಯೋಚಿಸಿ ಮಾಡಬೇಕು. ಜಾನಿ ನೀನೂ ಅಲ್ಲಿ ಕೂರು ಆವೇಶ ಒಳ್ಳೆಯದಲ್ಲ.
ನಿಧಿ...ಅಮ್ಮ ನಿಮಗೆ ರಾಜಸ್ಥಾನದ ವಿಷಯ....
ನೀತು.....ನಿಮ್ಮಮ್ಮ ಕಣೆ ನಾನು ನನ್ನಿಂದ ನೀನು ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ತಿಳಿದುಕೋ. ನಿನಗಿರುವ ಕ್ಷಮತೆಯ ಬಗ್ಗೆ ತಿಳಿದಿರುವುದಕ್ಕೇ ನಾನು ನಿನ್ನನ್ನು ಮೇಲೆ ಹೋಗು ಅಂತ ಹೇಳಲಿಲ್ಲ ಇಲ್ಲೇ ಇರುವುದಕ್ಕೆ ಸಮ್ಮತಿಸಿದೆ. (ಗಂಡನ ಕಡೆ ತಿರುಗಿ) ಹೌದು ರೀ ಆವತ್ತು ನಿಮ್ಮ ಬೈಕಿಗೆ ಕಾರು ಗುದ್ದಿದ್ದು ಪ್ರೀ ಪ್ಲಾನ್ಡ್ ಆಗಿತ್ತು ಅದನ್ನು ಮಾಡಿದ್ದು ಶಾಸಕನ ಮಗನೇ ಆಗಿದ್ದರೂ ಮಾಡಿಸಿದ್ದು ಶಾಸಕ.
ಶೀಲಾ....ನಿನ್ನ ಗಂಡ...ಮಗ ಮತ್ತು ಪ್ರಾಣಕ್ಕಿಂತಲೂ ಹೆಚ್ಚಾದ ಚಿನ್ನಿ ಇವರಿಗೆ ಆಕ್ಸಿಡೆಂಟ್ ಮಾಡಿಸಿರುವ ವಿಷಯ ತಿಳಿದಿದ್ದರೂ ನೀನು ಇಷ್ಟೊಂದು ಕೂಲಾಗಿರುವೆ.
ರಜನಿ.....ಹೂಂ ಕಣೆ ನಮ್ಮೆಲ್ಲರಿಗಿಂತ ಜಾಸ್ತಿ ಕೋಪ ನಿನಗೇ ತಾನೇ ಬರಬೇಕಿತ್ತು ಅಂದರೆ ನಿನಗೆ ಎಲ್ಲಾ ವಿಷಯ ಮೊದಲೇ ತಿಳಿದಿದೆ.
ನೀತು....ನಾನೇನು ಮಾಡಬೇಕಿತ್ತು ಹೇಳು. ಶಾಸಕ ಮತ್ತವನ ಮಗ ಸೇರಿಕೊಂಡು ನನ್ನ ಗಂಡ...ಮಗ ಮತ್ತು ಮಗಳಿಗೆ ಆಕ್ಸಿಡೆಂಟ್ ಮಾಡಿಸಿದ ಅಂತ ಗೋಳಾಡಬೇಕಿತ್ತಾ ? ನಿಮಗೆ ಗೊತ್ತಿರುವುದು ಬರೀ ಆಕ್ಸಿಡೆಂಟ್ ಯಾಕೆ ಮಾಡಿಸಿದ ಅಂತ ಹೇಳಿದರೆ ಆವಾಗ ನೀವು ಹೇಗೆ ರಿಯಾಕ್ಟ್ ಮಾಡುತ್ತೀರೋ ಏನೋ.
ಅಶೋಕ ಏನೋ ಹೇಳಲು ಹೊರಟಾಗ ಮಹಡಿಯಿಂದ ಗಿರೀಶಣ್ಣನ ಜೊತೆ ಕೆಳಗಿಳಿದು ಬಂದ ನಿಶಾ ಅಮ್ಮನ ಮುಂದೆ ನಿಂತು.....ಮಮ್ಮ ಊತ ಕೊಲು....ಎಂದು ಬಾಯಿಗೆ ಬೆರಳು ತೋರಿಸುತ್ತ ನಿಂತಳು.
ನೀತು ಮಗಳನ್ನೆತ್ತಿಕೊಂಡು....ನನ್ನ ಬಂಗಾರಿಗೆ ಹೊಟ್ಟೆ ಹಸಿತಿದೆಯಾ ಚಿನ್ನಿ ( ನಿಶಾ ಹೂಂ ಅಂತ ತಲೆಯಾಡಿಸಿದಳು ) ಅನು ನನ್ನ ಚಿನ್ನಿಗೆ ಊಟ ತೆಗೆದುಕೊಂಡು ಬಾರಮ್ಮ ಹಾಗೇ ನಮ್ಮೆಲ್ಲರಿಗೂ ಅನ್ನಕ್ಕೆ ಇಟ್ಟುಬಿಡು. ರಜನಿ ಮಾಡಿದ್ದನ್ನೆಲ್ಲಾ ನಾನು ಬಸ್ಯನಿಗೆ ಕೊಟ್ಟುಬಿಟ್ಟೆ.
ನೀತು ಮಗಳನ್ನೆತ್ತಿಕೊಂಡು ಊಟ ಮಾಡಿಸಲು ಹೊರಗೆ ಹೋದರೆ ಒಳಗೆ ಇವರೆಲ್ಲರೂ ತಮ್ಮದೇ ಚರ್ಚೆಯಲ್ಲಿ ಮುಳುಗಿದ್ದರು. ನೀತು ಮಗಳಿಗೆ ಊಟ ಮಾಡಿಸಿ ಶೀಲಾಳ ರೂಮಲ್ಲೇ ಮಲಗಿಸಿ ಉಳಿದ ಎಲ್ಲರನ್ನೂ ಬಲವಂತದಿಂದ ಊಟಕ್ಕೆಬ್ಬಿಸಿ ತಾನೂ ಕುಳಿತಳು. ಎಲ್ಲರೂ ಊಟ ಮುಗಿಸುವಷ್ಟರಲ್ಲಿ ಪ್ರತಾಪ್ ಕೂಡ ಬಂದು ಊಟ ಮಾಡಿದನು.
No comments:
Post a Comment