Total Pageviews

Thursday, 25 July 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 166

ಮೂವರು ತೆರಳಿದ ನಂತರ......

ನೀತು.....ರೀ ಮನೆಯಲ್ಲಿ ಹೆಂಗಸರು ಮಕ್ಕಳೆಲ್ಲರೂ ಇದ್ದಾರೆ ನೀವು ಮನೆಯಲ್ಲಿರಿ ನನಗೆ ಸ್ವಲ್ಪ ಕೆಲಸವಿದೆ ಹೋಗಿ ಬರ್ತೀನಿ.

ಹರೀಶ.....ಆ ಎಸ್ಪಿ ಹತ್ತಿರಾನ ? ನಾನೂ ಬರಲಾ ?

ನೀತು.....ನಿಮಗೆ ಈಗಷ್ಟೆ ಹೇಳಿದೆನಲ್ಲ ಮನೆಯಲ್ಲಿ ಹಂಗಸರ ಜೊತೆ ಮಕ್ಕಳಿದ್ದಾರೆ ಅವರೆಲ್ಲರನ್ನು ನೋಡಿಕೊಳ್ಳಲು ನೀವಿಲ್ಲೇ ಇರಬೇಕು ಅಂತ ಅರ್ಥವಾಗಲಿಲ್ಲವಾ. ಅಲ್ಲಿ ನನ್ಜೊತೆ ಬಸ್ಯ ಮತ್ತವನ ಎಲ್ಲಾ ಹುಡುಗರಿರುತ್ತಾರೆ ನೀವೇನು ಟೆನ್ಷನ್ ತೆಗೋಬೇಡಿ ಇಲ್ಲಿ ಜಾನಿ ಸಹ ಇದ್ದರೆ ಒಳ್ಳೆಯದು.

ನೀತು ಮನೆಯಿಂದ ಹೊರಟು ಕಾಲೋನಿ ಗೇಟು ದಾಟಿದಾಕ್ಷಣವೇ ಅವಳಿದ್ದ ಎಸ್.ಯು.ವಿ ಹಿಂದೆ ಒಂದು ಮಾರುತಿ ವ್ಯಾನ್ ಕೂಡ ಹಿಂಬಾಲಿಸಿಕೊಂಡು ಹೊರಟಿತು. ಸ್ವಲ್ಪ ದೂರ ಸಾಗಿದಾಗ ತನ್ನಿಂದೆ ಒಂದು ವ್ಯಾನ್ ಹಿಂಬಾಲಿಸುತ್ತಿರುವುದನ್ನರಿತ ನೀತು ನೇರವಾಗಿ ನಾ ತೋಟದ ಮನೆಗೆ ಹೋದರೆ ಇವರಿಗೆ ಅಲ್ಲಿನ ಬಗ್ಗೆ ತಿಳಿದು ಹೋಗುತ್ತೆ ಅದು ಯಾವುದೇ ಕಾರಣಕ್ಕೂ ಆಗಬಾರದು ಎಂದಾಲೋಚಿಸಿ ತನ್ನ ಕಾರನ್ನು ಟೌನಿನ ಕಡೆ ತಿರುಗಿಸಿದಳು. ತಾನೆಷ್ಟೇ ನಿಧಾನವಾಗಿದ್ದರೂ ವ್ಯಾನ್ ಕೂಡ ಅಷ್ಟೇ ನಿಧಾನವಾಗಿ ಹಿಂಬಾಲಿಸುತ್ತಿದ್ದು ಅದರೊಳಗೆ ಎಷ್ಟು ಜನರಿದ್ದಾರೆ ಅವರ ಬಳಿ ಯಾವ್ಯಾವ ಆಯುಧಗಳಿವೆ ಎಂದು ತಿಳಿಯದ ಕಾರಣ ನೀತು ರಿಸ್ಕ್ ತೆಗೆದುಕೊಳ್ಳದೆ ಕಾರನ್ನು ಊರಿನ ತುಂಬ ಬಿಝಿಯಾಗಿರುವ ಮಾಲ್ ಮುಂದೆ ನಿಲ್ಲಿಸಿ ತಾನೂ ಒಳಗೆ ಹೊರಟಳು. ಮಾಲ್ ಒಳಗೆ ಹೋಗುವಾಗ ಅತ್ತಿತ್ತ ಸಾಮಾನ್ಯವಾಗಿ ನೋಡುವಂತೆ ಕಣ್ಣಾಡಿಸಿದಾಗ ವ್ಯಾನಿನಿಂದಿಬ್ಬರು ಕೆಳಗಿಳಿದು ತಾವು ಕೂಡ ತನ್ನನ್ನೇ ಹಿಂಬಾಲಿಸಿಕೊಂಡು ಮಾಲ್ ಒಳಗೆ ಬರುತ್ತಿರುವುದು ಕಂಡಳು. ಆ ಮಾಲ್ ಮೂರು ರಸ್ತೆಗಳು ಸೇರುವ ಜಾಗದಲ್ಲಿದ್ದು ಅಲ್ಲಿಗೆ ಮೂರು ರಸ್ತೆಗಳಿಂದಲೂ ಒಳಗೆ ಹೋಗಲು ಡೋರುಗಳಿದ್ದು ನೀತು ಆ ಇಬ್ಬರ ಕಣ್ತಪ್ಪಿಸಿ ಚಾಲಾಕಿತನದಿಂದ ಇನ್ನೊಂದು ಡೋರ್ ಮೂಲಕ ಹೊರಗೆ ಬಂದವಳೇ ಆಟೋ ಒಂದನ್ನು ಹತ್ತಿಕೊಂಡಳು. ಇಡೀ ಮಾಲ್ ಒಳಗೆ ಜನಸಂಧಣಿ ತುಂಬ ಜಾಸ್ತಿಯಿದ್ದು ಅವರಿಬ್ಬರ ಕಣ್ಣಿಗೆ ನೀತು ಕಾಣಿಸದೆ ವ್ಯಾನ್ ಹತ್ತಿರ ಹಿಂದಿರುಗಿ.....

ರೌಡಿ 2......ಗುರು ಮಾಲಲ್ಲಿ ತುಂಬ ಜನರಿದ್ದಾರೆ ಅವಳೆಲ್ಲಿ ಯಾವ ಕಡೆ ಹೋದಳೋ ಗೊತ್ತಾಗಲಿಲ್ಲ.

ರೌಡಿ 1......ಎಲ್ಲಿಗಾದರೂ ಹೋಗಲಿ ವಾಪಸ್ ಕಾರಿನ ಹತ್ತಿರ ಬಂದೆ ಬರ್ತಾಳೆ ಇವತ್ತು ಹೇಗಾದರೂ ಇವಳನ್ನು ಕಿಡ್ನಾಪ್ ಮಾಡಿಕೊಂಡು ಯಜಮಾನರ ಹತ್ತಿರ ಕರೆದುಕೊಂಡು ಹೋಗಬೇಕು.

ರೌಡಿ 4......ಗುರು ಯಾರಿವಳು ?

ರೌಡಿ 1......ಯಾರಿಗೆ ಗೊತ್ತು ಆ ಮನೆಯಲ್ಲಿರುವ ಕಾರುಗಳ ನಂ... ಅಷ್ಟೇ ಕೊಟ್ಟಿರೋದು ಅದರಲ್ಲಿ ಯಾರೇ ಇದ್ದರೂ ಸರಿ ಕಿಡ್ನಾಪ್ ಮಾಡಿಕೊಂಡು ಬರುವಂತೆ ಯಜಮಾನರು ಆಜ್ಞಾಪಿಸಿದ್ದಾರೆ . ಈಗ ಅವಳು ಬರುವ ತನಕ ಇಲ್ಲೇ ಕಾಯೋಣ.

ಹಾಲಿನ ಗಿರಿಗೆ ಫೋನ್ ಮಾಡಿದ ನೀತು ಅವನೂ ಟೌನಿನಲ್ಲಿಯೇ ಇರುವುದನ್ನು ತಿಳಿದು ತಕ್ಷಣವೇ xxxx ಜಾಗಕ್ಕೆ ಬರುವಂತೇಳಿ ತಾನು ಕುಳಿತಿದ್ದ ಆಟೋದವನಿಗೆ ಅಲ್ಲಿಗೆ ಹೋಗುವಂತೇಳಿದಳು. ನೀತು ಕೆಳಗಿಳಿದು ಆಟೋದವನಿಗೆ ಹಣ ಕೊಡುವಷ್ಟರಲ್ಲಿ ಗಿರಿ ಸಹ ಅಲ್ಲಿಗೆ ಬಂದನು.

ಗಿರಿ.....ಆಂಟಿ ಮೊದಲೇ ಫೋನ್ ಮಾಡಿದ್ದರೆ ನಾನು ಮನೆ ಹತ್ತಿರ ಬರುತ್ತಿದ್ದೆ ನೀವು ಆಟೋಧಲ್ಯಾಕೆ ಬಂದ್ರಿ.

ನೀತು.....ಗಿರಿ ಈಗೇನೂ ಕೇಳದೆ ಬಸ್ಯನ ತೋಟದ ಮನೆಗೆ ನಡಿ.

ದಾರಿಯುದ್ದಕ್ಕೂ ಯೋಚಿಸುತ್ತಲೇ ಬಂದ ನೀತು ತೋಟದ ಮನೆಗೆ ತಲುಪಿ ಬಸ್ಯ ಮತ್ತವನ ಹುಡುಗರು ಅವಳಿಗೆ ನಮಸ್ಕರಿಸಿದರೂ ತನ್ನ ಆಲೋಚನೆಯಲ್ಲೇ ಮುಳುಗಿದ್ದಳು. ತಕ್ಷಣ ಮಗಳಿಗೆ ಫೋನಾಕಿ....

ನೀತು.....ಎಲ್ಲಿದ್ದೀಯಾ ?

ನಿಧಿ......ಅಮ್ಮ ನಾವಿನ್ನೂ ಫ್ಯಾಕ್ಟರಿ ಹತ್ತಿರವೇ ಇದ್ದೀವಿ ಇಲ್ಲೇನೂ ತೊಂದರೆಯಿಲ್ಲ ನೀವು ಮನೆಯಲ್ಲಿದ್ದೀರಾ ?

ನೀತು.....ಇಲ್ಲ ಕಣಮ್ಮ ನಾನೂ ಹೊರಗಿರುವೆ ನೀವು ಹೋಗುವಾಗ ನಿಮ್ಮ ಕಾರಿನ ಹಿಂದೆ ಯಾರಾದರು ಫಾಲೋ ಮಾಡುತ್ತಿದ್ರಾ ?

ನಿಧಿ.....ಹೂಂ ಅಮ್ಮ ಒಂದು ಮಾರುತಿ ವ್ಯಾನ್ ನಾವು ಕಾಲೋನಿ ಗೇಟ್ ದಾಟಿದಾಗಿನಿಂದ ನಮ್ಮನ್ನೇ ಫಾಲೋ ಮಾಡಿಕೊಂಡು ಇಲ್ಲಿ ತನಕ ಬಂದಿದೆ ಈಗಲೂ ಫ್ಯಾಕ್ಟರಿಯಿಂದ ಸ್ವಲ್ಪ ದೂರದಲ್ಲೇ ನಿಂತಿದೆ ಆದರೆ ಅದರಿಂದ್ಯಾರೂ ಕೆಳಗಿಳಿದಿಲ್ಲ. ನಿಮಗೇಗೆ ಗೊತ್ತಾಯ್ತು ?

ನೀತು ತನ್ನ ಜೊತೆ ನಡೆದ ಘಟನೆ ಹೇಳಿದಾಗ ನಿಧಿ....ಅದಕ್ಕೆ ಅಮ್ಮ ನಾನು ನಿಮ್ಮ ಜೊತೆಗಿರುತ್ತೀನಿ ಅಂದಿದ್ದು ನೀವೊಬ್ಬರೇ ಎಲ್ಲಿಗೂ ಹೋಗಬೇಡಿ.

ನೀತು.....ನನಗೇನೂ ಆಗಲ್ಲ ಕಂದ ನೀನು ಟೆನ್ಷನ್ ಮಾಡ್ಕೊಬೇಡ.
ನನ್ನ ಕಾರು ಕಾಂಪ್ಲೆಕ್ಸ್ ಹತ್ತಿರವೇ ನಿಂತಿದೆ ಅವರು ನಾನಿನ್ನೂ ಮಾಲ್ ಒಳಗಿರುವೆ ಅಂದುಕೊಂಡು ಹೊರಗೇ ಕಾಯುತ್ತಿರಬೇಕು.

ನಿಧಿ.....ಅಮ್ಮ ನಾವು ಅವರನ್ನೇ ಎತ್ತಾಕಿಕೊಂಡು ಬಂದರೆ ಹೇಗೆ ?

ನೀತು...ಅದು ತುಂಬಾನೇ ಬಿಝಿ ಜಾಗ ಪುಟ್ಟಿ ಅಲ್ಲಿ ನೂರಾರು ಜನ
ಓಡಾಡುತ್ತಿರುತ್ತಾರೆ ಅವರೆಲ್ಲರ ಮುಂದೆ ಹೊಡೆದಾಡಿದರೆ ಶಾಸಕನಿಗೆ ನಾವೇ ಮಾಡಿದ್ದೆಂದು ಗೊತ್ತಾಗಿ ಬಿಡುತ್ತೆ.

ನಿಧಿ....ಅಮ್ಮ ಅಲ್ಯಾರು ಹೊಡೆದಾಡುತ್ತಾರೆ ಅಲ್ಲಿಂದಲೇ ಅವರನ್ನು ಹೊತ್ತುಕೊಂಡು ಬರಬೇಕೆಂದೇನೂ ನಾನು ಹೇಳಲಿಲ್ಲ.

ನೀತು.....ಮತ್ತೆಲ್ಲಿಂದ ?

ನಿಧಿ.....ಈಗ ನೀವೆಲ್ಲಿದ್ದೀರ ನಾನಲ್ಲಿಗೇ ಬರ್ತೀನಿ ಆದರೆ ನನಗೆ ಅಲ್ಲಿ ಬರಲು ದಾರಿಯೇ ಗೊತ್ತಿಲ್ಲವಲ್ಲ.

ನೀತು ಸುತ್ತಮುತ್ತ ನೋಡಿ.....ನೀನಲ್ಲೇ ಇರು ನಾನು ಗಿರಿ ಅಂತೇಳಿ ಒಬ್ಬ ಹುಡುಗನನ್ನು ಕಳಿಸ್ತೀನಿ ಅವನು ನಿನ್ನ ಹಿಂದಿನ ದಾರಿಯಿಂದ ನಾನಿರುವಲ್ಲಿಗೆ ಕರೆ ತರುತ್ತಾನೆ. ನಿನ್ನ ಅಶೋಕ ಅಂಕಲ್ಲಿಗೆ ಫೋನ್ ಕೊಡು ಅವರಿಗೇ ಹೇಳುವೆ.

ನಿಧಿ ಫೋನ್ ನೀಡಿದಾಗ ಅಶೋಕ......ಹೇಳು ನೀತು.

ನೀತು.....ಈಗಲ್ಲಿಗೆ ಗಿರಿ ಬರ್ತಾನೆ ಅವನ ಜೊತೆಯಲ್ಲಿ ನಿಧಿಯನ್ನು ಕಳಿಸಿ ಹಾಗೇ ನೀವು ಮನೆಗೆ ಹೋಗುವಾಗ ಹುಷಾರು ಶಾಸಕನ ಕಡೆ ರೌಡಿಗಳು ನಮ್ಮೆಲ್ಲರನ್ನು ಹಿಂಬಾಲಿಸುತ್ತಿದ್ದಾರೆ.

ಅಶೋಕ.....ನಾವೂ ಗಮನಿಸಿದೆವು ನೀನೇನೂ ಟೆನ್ಷನ್ ಪಡಬೇಡ ನಾನೆಲ್ಲ ನೋಡಿಕೊಳ್ತೀನಿ. ನೀನೆಲ್ಲಿರುವೆ ?

ನೀತು....ತೋಟದ ಮನೆಯಲ್ಲಿ ಇಲ್ಲಿಗೆ ನಮ್ಮನೆಯ ಯಾವ ಕಾರೂ ಸಹ ಬರಬಾರದು ಶಾಸಕನ ಕಡೆಯವರಿಗೆ ಈ ಜಾಗದ ಬಗ್ಗೆ ಯಾವ ಕಾರಣಕ್ಕೂ ಗೊತ್ತಾಗಲೇಬಾರದು.

ಅಶೋಕ.....ಸರಿ ಹಾಗೇ ಆಗಲಿ.

ನೀತು.....ಗಿರಿ ಫ್ಯಾಕ್ಟರಿ ಹತ್ತಿರ ಹೋಗಿ ನನ್ನ ಹಿರಿ ಮಗಳನ್ನು ಇಲ್ಲಿಗೆ ಕರೆದುಕೊಂಡು ಬಾ ಆದರೆ ಹಿಂದಿನ ದಾರಿಯಲ್ಲಿ ಹೋಗು.
* *
* *
ನೀತು.....ಬಸ್ಯ ನಿನ್ನ ಹುಡುಗರು ನಾವು ಶಾಸಕನ ಮಗನನ್ನು ಇಲ್ಲಿಗೆ ಕಿಡ್ನಾಪ್ ಮಾಡಿಕೊಂಡು ಬಂದಿದ್ದ ಗುಡ್ಡದ ಹತ್ತಿರ ಹೋಗಿದ್ರಾ ?

ಬಸ್ಯ.....ಹೂಂ ಮೇಡಂ ಹೋಗಿದ್ರು ಅಲ್ಲೊಂದು ಬ್ಯಾಗ್ ಮಾತ್ರವೇ ಸಿಕ್ಕಿದೆ ಅದರಲ್ಲಿ 30 ಸಾವಿರ ಹಣ ಮತ್ತು ಕೆಲವು ಪ್ಯಾಕೆಟ್ ಡ್ರಗ್ಸಿವೆ ಕೆಳಗಿನ ರೂಮಲ್ಲಿಟ್ಟಿದ್ದೀವಿ.

ಅವರಿಬ್ಬರೂ ಮಾತನಾಡುತ್ತಿರುವಾಗ ಗಿರಿ ಜೊತೆ ನಿಧಿ ಬಂದು....

ನಿಧಿ......ಅಮ್ಮ ನೀವು ಕಾರನ್ನು ಟೌನಿನೊಳಗೆ ನಿಲ್ಲಿಸಿ ಇಲ್ಲಿವರೆಗೇಗೆ ಬಂದ್ರಿ ನೇರವಾಗಿ ಮನೆಗೇ ಹೋಗೋದು ತಾನೇ.

ನೀತು.....ಈಗ ಬಂದಿದ್ದಾಯ್ತಲ್ಲ ಬಿಡು ಅಲ್ಲಿ ಕಾಯುತ್ತಿರುವವರನ್ನು ಹೇಗೆ ಹೊತ್ತು ತರುವುದೆಂದು ಹೇಳು.

ನಿಧಿ....ಸಿಂಪಲ್ ಅಮ್ಮ ನಾನು ಕಾರಿನ ಹತ್ತಿರ ಹೋಗಿ ಅಲ್ಲೇ ನಿಂತು
ನಿಮಗೆ ಫೋನ್ ಮಾಡುವಂತೆ ನಾಟಕವಾಡಿ ಅವರ ಗಮನ ನನ್ನತ್ತ ಸೆಳೆಯುವೆ. ಅಲ್ಲಿಂದ ಕಾರು ತೆಗೆದುಕೊಂಡು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಅವರನ್ನು ಬಡಿದು ಎತ್ತಾಕಿಕೊಂಡು ಬರುವುದು ಅಷ್ಟೆ.

ನೀತು......ನೀನು ನಿಭಾಯಿಸಬಲ್ಲೆ ಅಂತ ಗೊತ್ತಿದೆ ಕಂದ ಆದರಲ್ಲಿಗೆ ನೀನೊಬ್ಬಳೇ ಹೋಗುವುದು ಬೇಡ. ಬಸ್ಯ ಈಗಿಲ್ಲೆಷ್ಟು ಜನರಿದ್ದೀರ ? ನಿಮ್ಮ ಹತ್ತಿರ ಗಾಡಿ ಇದೆಯಾ ?

ಬಸ್ಯ.....ಮೇಡಂ ನನ್ನನ್ನೂ ಸೇರಿಸಿ 9 ಜನರಿದ್ದೀವಿ ಓಡಾಡುವುದಕ್ಕೆ ಫ್ಯಾಕ್ಟರಿಯ ಗೂಡ್ಸ್ ಬೊಲೆರೋ ಇದೆ.

ನೀತು....ಗಿರಿ ನೀನು ನಿಧಿ ಜೊತೆ xxxx ಮಾಲ್ ಹತ್ತಿರ ಹೋಗಿ ಅಲ್ಲಿ
ನನ್ನ ಕಾರಿದೆ ಅದನ್ನು ತೆಗೆದುಕೊಂಡು xxxx ಊರಿನ ರಸ್ತೆಯ ಕಡೆ ಹೋಗಿ ಆದರೆ ಅಲ್ಲಿರುವ ವ್ಯಾನ್ ನಿಮ್ಮನ್ನು ಹಿಂಬಾಲಿಸಿ ಬರುತ್ತಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಬಸ್ಯ ನಿನ್ನ ಐವರು ಹುಡುಗರನ್ನು xxx ರಸ್ತೆಯಲ್ಲೊಂದು ನಿರ್ಜನ ಜಾಗದಲ್ಲಿರುವುದಕ್ಕೆ ಹೇಳು ಅವರು ನಿಂತಿರುವ ಜಾಗದ ಬಗ್ಗೆ ಗಿರಿಗೆ ತಿಳಿಸಲಿ. ನಿಧಿ ನೀನು ಅಲ್ಲೇ ಕಾರು ನಿಲ್ಲಿಸು ಮುಂದೇನು ಮಾಡಬೇಕೆಂದು ನಾನು ಹೇಳಬೇಕಾಗಿಲ್ಲ.

ನಿಧಿ.....ಅಮ್ಮ ಪ್ಲಾನ್ ಚೆನ್ನಾಗಿದೆ ಆ ರಸ್ತೆ ನಿರ್ಜನವಾಗಿರುತ್ತಾ ?

ಗಿರಿ.....ಹೂಂ ಅಲ್ಲಿ ಯಾವಾಗಲೋ ಒಂದೊಂದು ಗಾಡಿ ಓಡಾಡುತ್ತೆ ಮಿಕ್ಕಂತೆ ಆ ಕಡೆ ಸಂಚಾರವೇ ಇರುವುದಿಲ್ಲ.

ನೀತು.....ಅವರೆಲ್ಲರನ್ನು ಇಲ್ಲಿಗೆ ಕರೆದುಕೊಂಡು ಬರಬೇಡಿ xxxx ನಾಲೆಯ ಹತ್ತಿರ ಒಂದು ಹಳೆಯ ಪಾಳು ಬಿದ್ದಿರುವ ಮನೆಯಿದೆ ಅಲ್ಲಿಗೇ ಕರೆದೊಯ್ಯಿರಿ ನಾನಲ್ಲಿಗೇ ಬರ್ತೀನಿ. ನಿಮ್ಮಲ್ಲೊಬ್ಬರು ಆ ವ್ಯಾನಿಗೂ ಗತಿ ಕಾಣಿಸಬೇಕು ಗೊತ್ತಾಯ್ತಾ.

ಬಸ್ಯನ ಹುಡುಗರು........ಹೂಂ ಮೇಡಂ ಎಲ್ಲವೂ ಅರ್ಥವಾಯಿತು ನೀವು ಹೇಳಿದಂತೆಯೇ ಮಾಡ್ತೀವಿ.

ಗಿರಿ ಮತ್ತು ನಿಧಿ ತೆರಳಿದ ನಂತರ ಬಸ್ಯನ ಹುಡುಗರೂ ಬೋಲೆರೋ
ತೆಗೆದುಕೊಂಡು ತಮಗೆ ತಿಳಿಸಿದ ಜಾಗದತ್ತ ಹೊರಟರು. ನೀತುವಿನ ತಲೆಯಲ್ಲಿ ನೂರಾರು ವಿಚಾರಗಳು ಸುತ್ತಾಡುತ್ತಿದ್ದು ಅವಳು ವಿವಿಧ ಕೋನಗಳಲ್ಲಿ ಯೋಚಿಸುತ್ತಿದ್ದಳು.

ನೀತು ಮನದಲ್ಲೇ....ಇವರು ಪ್ರತಿದಿನವೂ ನಮ್ಮನ್ನು ಹಿಂಬಾಲಿಸುತ್ತ ಬರುತ್ತಿರುತ್ತಾರೆ ಎಲ್ಲರನ್ನೂ ಇವತ್ತೇ ಮಟ್ಟ ಹಾಕಿದರೆ ಹೇಗೆ ? ಆದರೆ ಅದನ್ನು ಕಾರ್ಯರೂಪಕ್ಕೆ ಯಾವ ರೀತಿ ತರುವುದು ?

ನೀತು ಮನದಲ್ಲಿ ಸಾಧಕ ಬಾಧಕಗಳ ಬಗ್ಗೆ ಹಲವು ಯೋಜನೆಗಳು ಮೂಡುತ್ತಿದ್ದು 10 ನಿಮಿಷದಲ್ಲೇ ಒಂದು ಸ್ಪಷ್ಟವಾದ ರೂಪರೇಷವು ಸಿದ್ದಗೊಂಡಿತು.

ನೀತು.....ಬಸ್ಯ ನಿನ್ನ ಮಿಕ್ಕ ಹುಡುಗರು ಫ್ಯಾಕ್ಟರಿ ಹತ್ತಿರ ಇದ್ದಾರಾ ?

ಬಸ್ಯ.....ಮೇಡಂ ನಾಲ್ವರು ಫುಡ್ ಯೂನಿಟ್ಟಿನ ಹತ್ತಿರ ಇದ್ದಾರೆ 4 ಜನ ಫ್ಯಾಕ್ಟರಿಯ ಹತ್ತಿರ ಉಳಿದೆಂಟು ಜನರು ಹಿಂದಿನ ಕ್ವಾರ್ಟಸ್ ಒಳಗಿದ್ದಾರೆ.

ನೀತು......ಈಗಲೇ ಕ್ವಾರ್ಟಸ್ಸಿನಲ್ಲಿರುವವರಿಗೆ ಅಶೋಕ ಸರ್ ಬಳಿ ಹೋಗುವಂತೇಳು ಮಿಕ್ಕಿದ್ದನ್ನು ಅವರೇ ಹೇಳ್ತಾರೆ.

ಅಶೋಕನಿಗೆ ಫೋನ್ ಮಾಡಿದ ನೀತು.....ರೀ ನಿಮ್ಮನ್ನು ಫಾಲೋ ಮಾಡಿಕೊಂಡು ಬಂದಿದ್ದ ವ್ಯಾನ್ ಇನ್ನೂ ಫ್ಯಾಕರಿ ಹತ್ತಿರ ಇದೆಯಾ.

ಅಶೋಕ.....ಹೂಂ ಕಣೆ ರಸ್ತೆ ತಿರುವಿನ ಹಿಂದೆಯೇ ನಿಲ್ಲಿಸಿಕೊಂಡು ಅದರಲ್ಲಿ ಐದು ಜನ ನಾವು ಹೊರಡುವುದನ್ನೇ ಕಾಯುತ್ತಿದ್ದಾರೆ.

ನೀತು.....ಈಗ ನಮ್ಮ ಸೆಕ್ಯುರಿಟಿ ಹುಡುಗರು ನಿಮ್ಮ ಬಳಿ ಬರ್ತಾರೆ ಅವರು ಮತ್ತು ಕಟ್ಟಡದ ಕೆಲಸದವರಲ್ಲಿ ಕೆಲವರನ್ನು ಸೇರಿಸಿಕೊಂಡು ನೀವು ಗೊತ್ತಾಗದಂತೆ ವ್ಯಾನನ್ನು ಸುತ್ತುವರಿದು ಐವರನ್ನು ಹಿಡಿದು xxxx ನಾಲೆಗಿಂತ ಸ್ವಲ್ಪ ಮುಂದೆ ಒಂದು ಪಾಳು ಬಿದ್ದಿರುವ ಮನೆ ಇದೆ ಅಲ್ಲಿಗೆ ಎಳೆದು ತನ್ನಿ ನಾನಲ್ಲಿಗೆ ಬರುವೆ.

ಅಶೋಕ.........ಇದೊಳ್ಳೆ ಐಡಿಯಾ ಹಾಗೇ ಮಾಡೋಣ ನಿನ್ನನ್ನು ಕರೆದುಕೊಂಡು ಹೋಗಲು ನಾನು ಬರಲಾ ?

ನೀತು.....ಬೇಡ ನೀವಲ್ಲಿಯೇ ಇರಿ ನಿಧಿ ಮತ್ತು ಗಿರಿ ಕೂಡ ಅಲ್ಲಿಗೇ ಬರ್ತಾರೆ ನನ್ನ ಮಗಳು ನಿಮ್ಮ ಜವಾಬ್ದಾರಿ.

ಅಶೋಕ....ಅದು ಸರಿ ಕಣೆ ಆದರೆ ನಿಧಿ ಯಾಕಲ್ಲಿಗೆ ಬರಬೇಕು ?

ನೀತು.....ಅವಳಲ್ಲಿಗೆ ಬಂದಾಗ ನೀವೇ ನೋಡಿ ಗೊತ್ತಾಗುತ್ತೆ.
* *
* *
ಇಬ್ಬರು ಅಣ್ಣಂದಿರು ಮೂವರು ಅಕ್ಕಂದಿರ ಜೊತೆ ಆಡುತ್ತ ಆಗಾಗ ಹುಲ್ಲಿನ ಮೇಲೆ ಕುಳಿತು ಮಾತನಾಡುತ್ತಿದ್ದ ಅಪ್ಪ ಮತ್ತು ಜಾನಿಗೂ ಪ್ಲಾಸ್ಟಿಕ್ ಬಾಲಿನಿಂದ ಹೊಡೆಯುತ್ತಿದ್ದ ನಿಶಾ ತನ್ನದೇ ಮಸ್ತಿಯಲ್ಲಿ ಆಡುತ್ತಿದ್ದಳು. ಜಾನಿಯ ಫೋನ್ ರಿಂಗಾಗಿ......

ಜಾನಿ.....ಹೇಳು ನೀತು.

ನೀತು.....ಮನೆಯಲ್ಲಿದ್ದೀಯಾ ತಾನೇ ಅಲ್ಲೇ ಹರೀಶರೂ ಇದ್ದರೆ ಸ್ಪೀಕರ್ ಆನ್ ಮಾಡು.

ಹರೀಶ...ಹೇಳು ನೀತು ಯಾಕೆ ಗಾಬರಿಯಾಗಿರುವೆ ?

ಗಂಡ ಮತ್ತು ಜಾನಿಗೆ ಇಂದೇನು ನಡೆಯಿತು ಮತ್ತು ಫ್ಯಾಕ್ಟರಿ ಹತ್ತಿರ ಏನಾಗುತ್ತಿದೆ ಎಂದು ವಿವರವಾಗಿ ಹೇಳಿದಳು.

ಹರೀಶ.....ನೀನಲ್ಲೊಬ್ಬಳೇ ಇದ್ದೀಯಾ ? ನಿಧಿಗ್ಯಾಕೆ ಹೋಗುವುದಕ್ಕೆ ನೀನು ಒಪ್ಪಿಕೊಂಡೆ ಅವಳ ಬದಲು ನಾನು ಹೋಗುತ್ತಿದ್ದೆ.

ನೀತು.....ರೀ ಅವಳು ನಮ್ಮೆಲ್ಲರಿಗಿಂತ ಸಕ್ಷಮಳೆಂಬುದು ನಿಮಗೂ ಗೊತ್ತಿದೆ ಅವಳ ವಿಷಯ ಬಿಡಿ. ಜಾನಿ ನೀನು ಕಾಲೋನಿಯ ಗೇಟ್ ಹತ್ಥಿರ ಹೋಗಿ ಅಲ್ಲಿ ಹೊರಗೆ ಯಾವುದಾದರು ಕಾರಿನಲ್ಲಿ ರೌಡಿಗಳ ರೀತಿ ಇರುವವರು ಕಾಯುತ್ತಿದ್ದಾರೆ ಅಂತ ನೋಡಿ ನನಗೆ ತಿಳಿಸು.

ಮೂರು ನಿಮಿಷದ ನಂತರ......

ಜಾನಿ......ಒಂದು ಅಂಬಾಸಿಡರ್ ಕಾರಿದೆ ಕಾಲೋನಿಯಿಂದ ಸ್ವಲ್ಪ ಹತ್ತಿರದಲ್ಲೇ ನಿಂತಿದೆ ಹೊರಗೆ ಮೂವರಿದ್ದಾರೆ ಅವರೆಲ್ಲರು ಗೇಟಿನ ಕಡೆಯೇ ನೋಡುತ್ತಿದ್ದಾರೆ ಖಂಡಿತ ಶಾಸಕನ ರೌಡಿಗಳೇ.
ನೀತು....ಅದೊಂದೇ ಕಾರು ಇರುವುದಾ ?

ಜಾನಿ....ಅದೊಂದು ಮಿಕ್ಕಂತೆ ರಸ್ತೆಯೆಲ್ಲ ಖಾಲಿ.

ನೀತು.....ನೀನೊಂದು ಕೆಲಸ ಮಾಡು ಮನೆಯಲ್ಲಿರುವ ಅಶೋಕನ ಕಾರನ್ನೇ ತೆಗೆದುಕೊಂಡು ಕಾಲೋನಿಯ ಗೇಟ್ ಹತ್ತಿರ ನಿಧಾನವಾಗಿ
ಹೊರಗೆ ಬರಬೇಕು. ಅಂಬಾಸಿಡರ್ ನಿನ್ನನ್ನು ಹಿಂಬಾಲಿಸುತ್ತಿರುವ ಬಗ್ಗೆ ಕನ್ಫರ್ಮ್ ಮಾಡಿಕೊಂಡು xxxx ಊರಿನ ರಸ್ತೆಯತ್ತ ಕಾರು ತಿರುಗಿಸು ಅಲ್ಲೇ ಬಸ್ಯ ಎಂಬವನು ಕಾಯುತ್ತಿರುತ್ತಾನೆ. ಅವನಿಗೆ ನಿನ್ನ ನಂ...ಕೊಟ್ಟಿರುತ್ತೀನಿ ನಿನಗೂ ಅವನ ನಂ...ಕಳಿಸ್ತೀನಿ.

ಜಾನಿ......ಎಲ್ಲಾ ಒಕೆ ಆದರೇನು ಮಾಡಬೇಕೆಂದೇ ಹೇಳುತ್ತಿಲ್ಲವಲ್ಲ ಸುಮ್ಮನೆ ಕಾರು ತೆಗೆದು.......

ನೀತು ಅರ್ಧದಲ್ಲೇ ತುಂಡರಿಸಿ.....ಆತುರಗೆಟ್ಟ ಆಂಜನೇಯ ಪೂರ್ತಿ ಹೇಳುವ ತನಕ ಕೇಳಿಸಿಕೋ. ನೀನು ಆ ರಸ್ತೆಗೆ ತಲುಪಿದಾಗ ಬಸ್ಯನ ನಂಬರಿಗೆ ಫೋನ್ ಮಾಡು ಅವನಿರುವ ಜಾಗದಿಂದ ನಿನಗೆ ಸಿಗ್ನಲ್ ಕೊಡ್ತಾನೆ. ಅಲ್ಲಿಂದ ಸ್ವಲ್ಪವೇ ಮುಂದೆ ತೆಗೆದುಕೊಂಡೋಗಿ ಕಾರನ್ನು ನಿಲ್ಲಿಸು ಆದರೆ ಕೆಳಗಿಳಿಯಬೇಡ. ಅಂಬಾಸಿಡರಿನಲ್ಲಿರುವ ಜನರು ಕೆಳಗಿಳಿದಾಗ ನೀನು ಬಸ್ಯ ಮತ್ತವನ ಹುಡುಗರು ಸೇರಿಕೊಂಡು ಅವರ ಮೇಲೆ ಅಟ್ಯಾಕ್ ಮಾಡಿ ಎಲ್ಲರನ್ನೂ ಹಿಡಿಯಲೇಬೇಕು. ಅವರನ್ನೆಲ್ಲಿಗೆ ಕರೆತರಬೇಕೆಂದು ಬಸ್ಯನಿಗೆ ಗೊತ್ತು ನೀನು ಅಲ್ಲಿಂದಲೆ ಮನೆಗೆ ಹಿಂದಿರುಗಿ ಹೊರಟುಬಿಡು.

ಜಾನಿ.....ಓಕೆ ಡನ್ ನಾನೀಗಲೇ ಹೊರಡ್ತೀನಿ.

ಜಾನಿ ಮನೆ ತಲುಪಿ ಹರೀಶನಿಗೆ ವಿಷಯ ತಿಳಿಸಿ ಅಶೋಕನ ಕಾರು ತೆಗೆದುಕೊಂಡು ಹೊರಟನು. ಮನೆಯೊಳಗಿಂದ ಐವರು ಹೆಂಗಸರು ಹೊರಬಂದಾಗ ಬಸ್ಯನ ಹುಡುಗರು ರವಿಯನ್ನು ಮನೆಗೆ ಕರೆತಂದು ಬಿಟ್ಟು ಅವರೂ ಗೇಟಿನ ಹತ್ತಿರವೇ ನಿಂತರು.

ಶೀಲಾ....ರೀ ನೀವೊಬ್ಬರೇ ಬಂದಿದ್ದೀರಲ್ಲ ನಿಧಿ ಮತ್ತು ಅಶೋಕರು ನಿಮ್ಮ ಜೊತೆ ಬರಲಿಲ್ಲವಾ ?

ರವಿ.....ಗಿರಿ ಫ್ಯಾಕ್ಟರಿಗೆ ಬಂದು ನಿಧಿಯನ್ನು ಅವರಮ್ಮನ ಹತ್ತಿರವೇ ಕರೆದೊಯ್ದ ಇನ್ನು ಅಶೋಕನಿಗೆ ನೀತುವೇ ಏನೋ ಕೆಲಸ ಹೇಳಿ ಕಳಿಸಿದ್ದಾಳೆ ಏನೆಂದು ನನಗೆ ಗೊತ್ತಿಲ್ಲ ಹರೀಶ ನಿನಗೇನಾದರು ಈ ವಿಷರದ ಬಗ್ಗೆ ಗೊತ್ತ ?

ಹರೀಶ ಎಲ್ಲರಿಗೂ ವಿಷಯ ತಿಳಿಸಿದಾಗ ಹೆಂಗಸರು ಗಾಬರಿಗೊಂಡು ತುಂಬ ಹೆದರಿದರು.

ಸವಿತಾ.....ಅಲ್ಲಿ ನೀತು ನಿಧಿ ಇಬ್ಬರೇ ಇದ್ದಾರೆ ನಾವುಹೋಗಬೇಕು.

ಹರೀಶ......ಬೇಡ ನಾವು ಮನೆಯಲ್ಲೇ ಇರಬೇಕೆಂದು ನಿನ್ನ ಗೆಳತಿ ಕಟ್ಟಪ್ಪಣೆ ಮಾಡಿದ್ದಾಳೆ. ಅಲ್ಲಿ ಅವಳೊಟ್ಟಿಗೆ ಬಸ್ಯ ಮತ್ತವನ ಇತರೆ ಹುಡುಗರಿದ್ದಾರೆ ಏನೂ ಭಯವಿಲ್ಲ. ಶಾಸಕನ ಅಂತ್ಯಕ್ಕಾಗಿ ನೀತು ನಾಂದಿ ಹಾಕಲು ಪ್ರಾರಂಭಿಸಿದ್ದಾಳೆ. ಗಂಡ...ಮಗ..ಮುದ್ದಿನ ಮಗಳ ಆಕ್ಸಿಡೆಂಟಿಗೆ ಕಾರಣಾದವನನ್ನು ನನ್ನ ರುದ್ರಕಾಳಿ ಬಿಡ್ತಾಳಾ.

1 comment:

  1. ಅಬ್ಬಾ, ಕತೆ ಅದ್ಭುತವಾಗಿದೆ, ಮುಂದೆ ಏನಾಯಿತು

    ReplyDelete