Total Pageviews

Saturday, 6 July 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 158

ಡೆಹ್ರಾಡೂನ್ ಮತ್ತು ಮಸ್ಸೂರಿಯನ್ನು ನೋಡಿಕೊಂಡು ಸಂಜೆಯ ಹೊತ್ತಿಗೆ ಮಿನಿ ಬಸ್ ಹೃಷಿಕೇಶವನ್ನು ತಲುಪಿದಾಗ ಅಲ್ಲಿಯೇ ಒಂದು ಒಳ್ಳೆಯ ಹೋಟೆಲ್ಲಿನಲ್ಲಿ ರಾತ್ರಿ ವಾಸ್ತವ್ಯ ಹೂಡಿದರು. ದಿನವೆಲ್ಲಾ ಅಣ್ಣ ಅಕ್ಕಂದಿರ ಜೊತೆ ಕುಣಿದು ಕುಪ್ಪಳಿಸಿ ಕೂಳೆ ಮಾಡಿದ್ದ ನಿಶಾ ಬಿಸಿಬಿಸಿ ಕಾಂಪ್ಲಾನ್ ಮಾತ್ರ ಕುಡಿದು ತನಗೆ ಊಟ ಬೇಡವೆಂದೇಳಿ ಅಮ್ಮನ ಮಡಿಲಿನಲ್ಲೇ ನಿದ್ರೆಗೆ ಜಾರಿಕೊಂಡಳು. ಮಾರನೇ ದಿನ ಹೃಷಿಕೇಶದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ " ಲಕ್ಷಣ ಜೂಲಾ " ನೋಡಿಕೊಂಡು ಎಲ್ಲರೂ ರಿವರ್ ರಾಫ್ಟಿಂಗ್ ಜಾಗಕ್ಕೆ ಬಂದು ಅಲ್ಲಿ ರಬ್ಬರ್ ದೋಣಿಯಲ್ಲಿ ರಾಫ್ಟಿಂಗ್ ಮಾಡುತ್ತಿರುವುದನ್ನು ನೋಡುತ್ತ ನಿಂತರು. ಪ್ರತಾಪನ ತೋಳಿನಲ್ಲಿದ್ದ ನಿಶಾ ಅತ್ಯಂತ ರಭಸವಾಗಿ ಹರಿಯುತ್ತಿದ್ದ ಗಂಗಾ ನದಿಯಲ್ಲಿ ದೋಣಿಯ ಮೇಲೆ ಕುಳಿತಿದ್ದವರು ಮುಂದೆ ಸಾಗುತ್ತಿರುವುದನ್ನು ನೋಡಿ ಜೋರಾಗಿ ಕಿರುಚುತ್ತ ತುಂಬ ಖುಷಿಯಲ್ಲಿ ಮುಷ್ಠಿಯಿಂದ ಪ್ರತಾಪನಿಗೆ ಗುದ್ದುತ್ತ ಚಪ್ಪಾಳೆ ತಟ್ಟುತ್ತ ಫುಲ್ ಏಂಜಾಯ್ ಮಾಡುತ್ತಿದ್ದಳು.

ಗಿರೀಶ.....ನಾವೂ ಇದರಲ್ಲಿ ಹೋಗಬಹುದಾ ?

ನಿಧಿ.....ನಿನಗೆ ಹರಿಯುವ ನೀರಿನಲ್ಲಿ ಈಜಲು ಬರುತ್ತಾ ?

ಗಿರೀಶ.....ಅಷ್ಟಾಗಿ ಬರಲ್ಲ ಸ್ವಲ್ಪ ಗೊತ್ತಿದೆ ಅಷ್ಟೆ ಅಕ್ಕ.

ನಿಧಿ......ಹಾಗಿದ್ದರೆ ಇದು ತುಂಬಾನೇ ರಿಸ್ಕಿ ಸಾಹಸ ನೀನು ಯಾವ ಕಾರಣಕ್ಕೂ ಹೋಗಲೇಬಾರದು. ಕೆಲವೊಮ್ಮೆ ನೀರಿನ ರಭಸಕ್ಕೆ ಇಡೀ ದೋಣಿಯೇ ಮಗುಚಿಕೊಳ್ಳುತ್ತೆ ಆಗ ನಾವೇ ಅದನ್ನು ಎತ್ತಿ ಸರಿಪಡಿಸಿಕೊಂಡು ಮುಂದುವರಿಯಬೇಕು ಅಥವ ಈಜುತ್ತ ನಾವು ದಡ ಸೇರಿಕೊಳ್ಳಬೇಕು. ಮೊದಲು ನಿನಗೆ ಈಜುವುದನ್ನು ಕಲಿಸಿದರೆ ಆಮೇಲೆ ಈ ರೀತಿ ಸಾಹಸಗಳ ಬಗ್ಗೆ ಹೇಳಿಕೊಡಬಹುದು.

ರಶ್ಮಿ......ಅಕ್ಕ ನೀವೂ ರಾಫ್ಟಿಂಗ್ ಮಾಡಿದ್ದೀರಾ ?

ನಿಧಿ.....ಕಳೆದ ನಾಲ್ಕು ವರ್ಷಗಳಿಂದಲೂ ನಾನಿಲ್ಲಿಗೆ ರಾಫ್ಟಿಂಗಿಗಾಗಿ ಬರುತ್ತಿದ್ದೀನಿ ಈ ಬಾರಿ ಬಂದಿರಲಿಲ್ಲ ಅಷ್ಟೆ.

ಪ್ರತಾಪ್....ನಿಧಿ ನಿನಗೆ ರಾಫ್ಟಿಂಗ್ ಗೊತ್ತಿದೆಯಾ ನಾನೂ ಬಹಳಷ್ಟು
ಸಲ ರಾಫ್ಟಿಂಗಿಗೆ ಹೋಗಿದ್ದೀನಿ ಆದರೆ ಗಂಗಾ ನದಿಯಲ್ಲಿ ಮಾಡಿಲ್ಲ. ಇವತ್ತು ಮಗಳು ಚಿಕ್ಕಪ್ಪ ಸೇರಿ ಗಂಗೆಯಲ್ಲಿಳಿದು ಒಂದು ರೌಂಡ್ ರಾಫ್ಟಿಂಗಿಗೆ ಹೋಗೋಣವಾ ?

ನಿಧಿ.....ನಾನು ರೆಡಿ ಚಿಕ್ಕಪ್ಪ ಗಂಗಾ ನದಿ ಅದರಲ್ಲಿಯೂ ಹೃಷಿಕೇಶ ಈ ಜಾಗದಲ್ಲಿ ರಾಫ್ಟಿಂಗ್ ಮಾಡುವ ಮಜವೇ ಬೇರೆ.

ನೀತು.....ಯಾರೂ ಎಲ್ಲಿಗೂ ಹೋಗಬೇಕಾಗಿಲ್ಲ ತೆಪ್ಪಗಿದ್ದರೆ ಸಾಕು.

ನಿಧಿ.....ಅಮ್ಮ ಪ್ಲೀಸ್ ಒಪ್ಪಿಕೋ ನಾನು ನನ್ನ ಜೊತೆ ಆಶ್ರಮದಿಂದ ಗುರುಗಳೊಬ್ಬರು ಪ್ರತಿವರ್ಷ 45 ಕಿಮೀ.. ನಡೆದುಕೊಂಡು ಇಲ್ಲಿಗೆ ರಾಫ್ಟಿಂಗಿಗಾಗಿ ಬರುತ್ತಿದ್ದೆವು. ಗುರುಗಳಿಂದಲೇ ನಾನು ಇಲ್ಲಿ ಉಕ್ಕಿ ಹರಿಯುವ ಗಂಗಾ ನದಿಯನ್ನು ಈಜುವುದು ಮತ್ತು ರಾಫ್ಟಿಂಗನ್ನು ಮಾಡುವ ವಿದ್ಯೆ ಕಲಿತಿರುವೆ. ನನಗೇನೂ ಆಗಲ್ಲ ಅಮ್ಮ ನೀರಿನಲ್ಲಿ ಮೀನಿನಂತೆ ಈಜುವುದನ್ನೂ ಕಲಿಸಿದ್ದಾರೆ ಪ್ರವಾಹದ ವಿರುದ್ದವಾಗಿ ಈಜುವ ತರಬೇತಿಯೂ ನನಗಿದೆ.

ನಿಧಿ ಹಾಗೂ ಹೀಗೂ ಅಮ್ಮನನ್ನೊಪ್ಪಿಸಿ ಚಿಕ್ಕಪ್ಪ ಪ್ರತಾಪನ ಜೊತೆ ರಾಫ್ಟಿಂಗ್ ಮಾಡಲು ತೆರಳಿದಳು. ಒಂದು ಘಂಟೆಯ ಬಳಿಕ ಅವರು
ಕುಳಿತಿದ್ದ ದೋಣಿಯು ಮನೆಯವರೆಲ್ಲರೂ ಕಾಯುತ್ತಿದ್ದ ಸ್ಥಳದಲ್ಲಿ ಕಂಡಾಗ ಸುರೇಶ ಮತ್ತು ಗಿರೀಶ ಜೋರಾಗಿ ಕಿರುಚಿ ಅಕ್ಕ ಚಿಕ್ಕಪ್ಪನಿಗೆ ಥಮ್ಸಪ್ ತೋರಿಸುತ್ತಿದ್ದರು. ಅಪ್ಪನ ತೋಳಿನಲ್ಲಿದ್ದ ನಿಶಾ ಚಿಕ್ಕಪ್ಪ ಮತ್ತು ಅಕ್ಕ ದೋಣಿಯಲ್ಲಿ ಹೋಗುತ್ತಿರುವುದನ್ನು ನೋಡಿ ತಾನೂ ಅವರಿಗೆ ಕೈ ಬೀಸಿ ಅಪ್ಪನ ಕೆನ್ನೆ ಸವರುತ್ತ ಅವರತ್ತ ಕೈ ತೋರಿಸಿದಳು.
ನೀತು ಮಗಳ ಸಾಹಸಕ್ಕೆ ನಿಬ್ಬೆರಗಾಗಿದ್ದರೂ ಸಾವಿನೊಡನೆ ಸರಸ ಆಡುತ್ತಿರುವುದನ್ನು ಕಂಡು ಅವಳ ಮಾತೃ ಹೃದಯ ಬಡಿದುಕೊಳ್ಳುತ್ತ ಢವಢವ ಹೊಡೆದುಕೊಳ್ಳುತ್ತಿತ್ತು. ಗಂಡ ಮತ್ತು ಅಕ್ಕನ ಮಗಳಿಬ್ಬರೂ ಉಕ್ಕೇರಿ ಹರಿಯುತ್ತಿದ್ದ ಗಂಗೆಯಲ್ಲಿ ರಾಫ್ಟಿಂಗ್ ಮಾಡುತ್ತಿರುವುದನ್ನು ನೋಡಿ ಅನುಷ ದೇವರಿಗೆ ಕೈ ಮುಗಿದು ಏನೂ ಆಗದಿರುವಂತೆ ಕಾಪಾಡೆಂದು ಬೇಡಿಕೊಳ್ಳುತ್ತಿದ್ದಳು. ಮನೆಯ ಇತರೆ ಸದಸ್ಯರೆಲ್ಲಾ ಅವರಿಬ್ಬರ ಸಾಹಸವನ್ನು ಕಂಡು ಸಂತೋಷಿಸುತ್ತ ಅದರ ಬಗ್ಗೆಯೇ ಮಾತನಾಡುತ್ತ ನಿಂತರು. ಅಶೋಕ ತನ್ನ ವೀಡಿಯೋ ಕ್ಯಾಮೆರಾದಲ್ಲಿ ಅವರ ರಾಫ್ಟಿಂಗ್ ವೀಡಿಯೊ ಶೂಟ್ ಮಾಡಿಕೊಂಡನು.

ಒಂದು ಘಂಟೆಯ ನಂತರ ಅವರಿಬ್ಬರು ಮನೆಯವರಿದ್ದ ಸ್ಥಳವನ್ನು ತಲುಪಿದಾಗ ನಿಧಿ ಸಂಪೂರ್ಣ ಒದ್ದೆ ಮುದ್ದೆಯಾಗಿ ಪ್ರತಾಪನ ಜೊತೆ ಬಂದಿದ್ದಳು.

ನೀತು ಗಾಬರಿಯಿಂದ....ನಿಧಿ ಏನಾಯಿತಮ್ಮ ? ಪ್ರತಾಪ್ ಇವಳು ಬೋಟಿನಿಂದ ಕೆಳಗೆ ಬಿದ್ದಳೇನು ? ಹೇಳು ಬೇಗ.

ಪ್ರತಾಪ್....ಅತ್ತಿಗೆ ಸ್ವಲ್ಪ ಸಮಾಧಾನವಾಗಿರಿ ಎಲ್ಲಾ ಹೇಳ್ತಿನಿ.

ನೀತು....ಏನು ಸಮಾಧಾನ ಮಾಡಿಕೊಳ್ಳಲಿ ? ನಿಧಿ ನಾನೆಷ್ಟು ಬೇಡ ಅಂದೆ ನೀನೇ ಹಠ ಮಾಡಿ ಹೋದೆಯಲ್ಲ ಎಲ್ಲಿ ಪೆಟ್ಟಾಗಿದೆ ನನಗೆ ತೋರಿಸು.

ನಿಧಿ.....ಅಮ್ಮ ನನಗೇನೂ ಆಗಿಲ್ಲ ಅದು.....

ನೀತು...ಏನು ಬೇಗ ಹೇಳು ನನ್ನ ಎದೆ ಹೊಡೆದುಕೊಳ್ತಿದೆ.

ಹರೀಶ.....ಅವರು ಹೇಳುವ ತನಕ ಸುಮ್ಮನಿರು....

ನೀತು.....ರೀ ನೀವು ಸುಮ್ಮನಿರಿ ನಿಮಗೇನು ಗೊತ್ತು ನನಗೆ ಹೇಗೆಲ್ಲ ಆಗುತ್ತಿದೆ ಅಂತ ಮಧ್ಯ ಬಂದುಬಿಟ್ರು ಬಾಯಿ ಹಾಕಲು.

ನೀತುಳನ್ನು ಗಟ್ಟಿಯಾಗಿ ತಬ್ಬಿಕೊಂಡ ನಿಧಿ.....ಅಮ್ಮ ನನಗೇನೂ ಆಗಿಲ್ಲ ನೋಡು ನಿನ್ನೆದುರಿಗೆ ಆರಾಮವಾಗಿದ್ದೀನಿ ನನಗೆ ಗಾಯವೂ ಆಗಿಲ್ಲ.

ಅಕ್ಕ ಚಿಕ್ಕಪ್ಪ ಬಂದಿದ್ದನ್ನು ನೋಡಿ ಚಪ್ಪಾಳೆ ತಟ್ಟುತ್ತ ಕಿರುಚಾಡುತ್ತಿದ್ದ ನಿಶಾ ಅಮ್ಮ ಗರಂ ಆಗಿದ್ದನ್ನು ನೋಡಿ ಸೈಲೆಂಟಾಗಿ ಗಿರೀಶಣ್ಣನನ್ನು ಸೇರಿಕೊಂಡು ನಿಂತುಬಿಟ್ಟಿದ್ದಳು. ನೀತು ಮುಂದೇನಾದರು ಹೇಳಲು ಹೊರಡುವಷ್ಟರಲ್ಲಿ ಇಬ್ಬರು ದಂಪತಿಗಳು ತಮ್ಮೊಂದಿಗೆ 20 ವರ್ಷದ ಮಗಳ ಜೊತೆ ಇವರಿದ್ದಲ್ಲಿಗೆ ಬಂದವರೇ ನಿಧಿ ಮುಂದೆ ಕೈ ಮುಗಿದು ಅವಳ ಕಾಲಿಗೆ ಬೀಳಲು ಮುಂದಾದರು. ನಿಧಿ ಅವರನ್ನು ತಡೆಯುತ್ತ ಹಾಗೆ ಮಾಡದಂತೆ ಹೇಳಿದಾಗ ನೀತು ಸಮೇತ ಎಲ್ಲರೂ ಶಾಕಾಗಿ ನೋಡುತ್ತಿದ್ದರು.

ಹರೀಶ...ಯಾರಮ್ಮ ಇವರು ?

ನಿಧಿ.....ಅಪ್ಪ ಇವರು......

ಆ ವ್ಯಕ್ತಿ.....ಸರ್ ಈಕೆ ನಿಮ್ಮ ಮಗಳ ನಿಜಕ್ಕೂ ಧೈರ್ಯಶಾಲಿ ಹಾಗು ಸಾಹಸಿ ಸರ್ ನಿಮ್ಮ ಮಗಳು. ಇಂದು ನಿಮ್ಮ ಮಗಳು ನಮ್ಮ ಪ್ರಾಣ ಕಾಪಾಡಿಬಿಟ್ಟಳು ಅದಕ್ಕಾಗಿ ಅವಳಿಗೆ ಕೃತಜ್ಞತೆ ಹೇಳಲು ಬಂದೆವು.

ಅಶೋಕ......ಯಾಕೆ ನಿಮಗೇನಾಗಿತ್ತು ?

ಹೆಂಗಸು.....ಇವಳು ನಮ್ಮ ಮಗಳು. ಒಬ್ಬಳೇ ಮಗಳೆಂದು ತುಂಬ ಮುದ್ದಿನಿಂದ ಸಾಕಿದ್ದೆವು ಅದೇ ಇವತ್ತು ನಮಗೆ ಕಂಟಕವಾಗಿತ್ತು. ನಾನು ರಾಫ್ಟಿಂಗಿಗೆ ಹೋಗಬೇಡ ಎಂದರೂ ಹಠ ಮಾಡಿ ಹೋದಳು ಆದರೆ ಇವಳಿದ್ದ ಬೋಟ್ ನೀರಿನ ಏರಿಳಿತದಲ್ಲಿ ಹೋಗುತ್ತಿರುವಾಗ ಆಯತಪ್ಪಿ ನೀರಿಗೆ ಬಿದ್ದುಬಿಟ್ಟಳು. ಯಾರೂ ಸಹಾಯಕ್ಕೆ ಬಾರದಿದ್ದ ಸಮಯದಲ್ಲಿ ನಿಮ್ಮ ಮಗಳು ನೀರಿಗೆ ನೆಗೆದು ನನ್ನ ಮಗಳ ಪ್ರಾಣ ಉಳಿಸಿದಳು ಅದಕ್ಕೆ ಇವಳಿಗೆಷ್ಟೇ ಧನ್ಯವಾದ ತಿಳಿಸಿದರೂ ನನಗೆ ಸಮಾಧಾನವೇ ಆಗುತ್ತಿಲ್ಲ.

ಮಗಳ ಕಾರ್ಯಕ್ಕೆ ಹೆಮ್ಮೆಪಟ್ಟ ನೀತು ಅವಳನ್ನು ತಬ್ಭಿಕೊಂಡು ತಲೆ ನೇವರಿಸಿ ಕೆನ್ನೆಗೆ ಮುತ್ತಿಟ್ಟರೆ ಇನ್ನೊಂದು ಕಡೆಯಿಂದ ಹರೀಶನೂ ಮಗಳನ್ನು ಆಲಿಂಗಿಸಿಕೊಂಡನು.

ರವಿ....ಎಲ್ಲವೂ ಒಳ್ಳೆಯದೇ ಆಯಿತಲ್ಲವಾ ಇನ್ನು ಮುಂದೆ ನೀನು ಅಪ್ಪ ಅಮ್ಮನ ಮನಸ್ಸಿಗೆ ನೋವಾಗುವ ಕೆಲಸಗಳನ್ನು ಮಾಡಬೇಡ. ಇವತ್ತು ನಮ್ಮ ಹುಡುಗಿ ನಿನ್ನನ್ನು ಕಾಪಾಡಿದಳು ನಾಳೆ ಹೆಚ್ಚು ಕಡಿಮೆ ಆದರೆ ಯಾರಿಗೆ ನೋವಾಗುತ್ತೆ ಅಂತ ಯೋಚಿಸಬೇಕಮ್ಮ.

ಹುಡುಗಿ.....ಸಾರಿ ಅಂಕಲ್ ಇನ್ನೆಂದೂ ಅಪ್ಪ ಅಮ್ಮನಿಗೆ ನೋವು ನೀಡುವಂತ ಕೆಲಸ ಮಾಡುವುದಿಲ್ಲ. ನಿನಗೆ ತುಂಬ ಥಾಂಕ್ಸ್ ನೀನು ನನ್ನ ಪ್ರಾಣವನ್ನಲ್ಲ ಅಪ್ಪ ಅಮ್ಮನನ್ನು ಉಳಿಸಿಬಿಟ್ಟೆ.

ನಿಧಿ.....ಇಟ್ಸ್ ಒಕೆ ಕೂಲ್ ಡೌನ್ ಏನೂ ಆಗಲಿಲ್ಲವಲ್ಲ.

ಪ್ರತಾಪ್.....ನೋಡಿದ್ರಾ ಅತ್ತಿಗೆ ನೀವು ಸುಮ್ಮನೆ ಹೆದರುತ್ತಿದ್ದಿರಿ ನಮ್ಮ ನಿಧಿ ಎಂತಾ ಸಾಹಸ ಮಾಡಿದ್ದಾಳೆ ಅದಕ್ಕಾಗಿ ನೀವು ಹೆಮ್ಮೆ ಪಡಬೇಕು.

ನೀತು.....ಹೆಮ್ಮೆ ಪಡುವಂತ ಕೆಲಸ ಮಾಡಿದ್ದಾಳೆ ಆದರಿವಳು ನಾನು ಬೇಡವೆಂದರೂ ಹೋದಳು ಅದಕ್ಕೆ ಕೋಪ.

ನಿಧಿ.....ಅಮ್ಮ ನಾನೀವತ್ತು ಹೋಗಿದ್ದಕ್ಕೇ ತಾನೇ ಅವರ ಒಬ್ಬಳೇ ಮಗಳ ಪ್ರಾಣ ಉಳಿಸಲು ನೆರವಾದಂತಾಗಿದ್ದು ಪ್ಲೀಸ್ ಇದೊಂದು ಸಲ ನನ್ನ ಕ್ಷಮಿಸಿಬಿಡು ಇನ್ನೆಂದೂ ನಿನ್ನ ಮಾತು ಮೀರುವುದಿಲ್ಲ.

ನೀತು.....ನನ್ನ ಮಗಳು ನನ್ನ ಹೆಮ್ಮೆ ನನ್ನ ಗೌರವ ಕಣೆ ಆದರೆ ನನ್ನ ಮನಸ್ಸಿನ ಉದ್ವೇಗ ಹೇಗೆ ಅರ್ಥ ಮಾಡಿಸಲಿ ಬಿಡು ಎಲ್ಲವೂ ಒಳ್ಳೆ ರೀತಿಯಲ್ಲಿ ಮುಗಿಯಿತಲ್ಲ. ನಡಿ ನೀನು ವ್ಯಾನಿನಲ್ಲಿ ಡ್ರೆಸ್ ಚೇಂಜ್ ಮಾಡಿಕೋ ಶೀತ ಆಗುತ್ತೆ ಒದ್ದೆ ಬಟ್ಟೆ ಹಾಕಿಕೊಂಡಿದ್ದೀಯಲ್ಲ ನೀನು ಪ್ರತಾಪ್ ಬೇರೆ ಬಟ್ಟೆ ಹಾಕಿಕೋ ಅನು ಗಂಡನನ್ನು ಗಮನಿಸು ಹೀಗೆ ಸುಮ್ಮನೆ ನಿಂತಿರುವೆಯಲ್ಲ.

ನಿಧಿ ಡ್ರೆಸ್ ಚೇಂಜ್ ಮಾಡಿಕೊಂಡು ಬಂದಾಗ....

ರಶ್ಮಿ.....ಅಕ್ಕ ನೀವು ನನಗೂ ಸ್ವಿಮ್ಮಿಂಗ್ ಕಲಿಸಿಕೊಡಿ.

ನಮಿತ....ಅಕ್ಕ ನನಗೆ ಫಸ್ಟ್.

ಸುರೇಶ.....ಅದ್ಯಾಕೆ ನಿಮಗೆ ಫಸ್ಟ್ ಇವಳು ನಮ್ಮಕ್ಕ ಎಲ್ಲರಿಗಿಂತ ನನಗೇ ಮೊದಲು ಕಲಿಸಿಕೊಡುವುದು. ಚಿಕ್ಕಪ್ಪ ನಿಮಗಿಷ್ಟು ಚೆನ್ನಾಗಿ ಸ್ವಿಮ್ಮಿಂಗ್ ಬರುತ್ತೆ ಅಂತ ನಮಗೆ ಹೇಳೇ ಇರಲಿಲ್ಲ.

ಪ್ರತಾಪ್ ನಗುತ್ತ......ಇವತ್ತಿಗೆ ಮುಂಚೆ ನಾವು ಯಾವತ್ತಾದರೂ ನದಿ ಇರುವ ಕಡೆ ಹೋಗಿದ್ದೀವಾ ಹೇಳು ನನ್ನ ಸ್ವಿಮ್ಮಿಂಗ್ ಬಗ್ಗೆ ಹೇಳಲು.

ನಿಧಿ ತಂಗಿಯನ್ನೆತ್ತಿಕೊಂಡು.....ಚಿನ್ನಿ ನೀನೂ ಸ್ವಿಮ್ಮಿಂಗ್ ಕಲಿತೀಯ
......ಎಂದು ನದಿಯ ಕಡೆ ಕೈ ತೋರಿಸಿದಳು.

ನಿಶಾ ಗಾಬರಿಗೊಂಡು......ಬೇಲಾ....ಬೇಲಾ.....ಎಂದು ಕಿರುಚಾಡಿ ಅಕ್ಕನ ತೋಳಿನಿಂದ ಕೆಳಗೆ ಜಾರಿ ಅಮ್ಮನ ಮಡಿಲಿಗೆ ಸೇರಿದಳು.
* *
* *
ಆ ದಿನವೂ ಹೃಷಿಕೇಶದಲ್ಲಿಯೇ ಉಳಿದುಕೊಂಡು ಮಾರನೇ ದಿನ ದೇವಪ್ರಯಾಗಕ್ಕೆ ಪ್ರಯಾಣ ಬೆಳೆಸಿದರು. ಅಲಕಾನಂದ ಹಾಗು ಭಾಗೀರಥಿ ನದಿಗಳ ಸಂಗಮವಾಗಿ ಅಲ್ಲಿಂದ ಗಂಗೆ ಎಂಬ ಹೆಸರಿಂದ ಮುಂದೆ ಹರಿಯುವ ಪವಿತ್ರವಾದ ಸ್ಥಳವನ್ನು ತಲುಪಿದರು. ಅಲ್ಲಿ ಶಂಕರಾಚಾರ್ಯರು ಸ್ಥಾಪಿಸಿರುವ ಶ್ರೀ ಸೀತಾರಾಮರ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಪವಿತ್ರ ಸಂಗಮ ಸ್ಥಾನದಲ್ಲೂ ಪೂಜೆ ನೆರವೇರಿಸಿದರು. ನೀತು ನಾಲ್ವರು ಹೆಣ್ಣು ಮಕ್ಕಳನ್ನೇ ಎಲ್ಲರ ಮುಂದೆ ನಿಲ್ಲಿಸಿ ಅಲ್ಲಿನ ಅರ್ಚಕರು ಹೇಳಿದಂತೆ ಅವರಿಂದ ಪೂಜೆ ಮಾಡಿಸುತ್ತಿದ್ದರೆ ನಿಶಾ ಮಾತ್ರ ಅಮ್ಮನ ತೋಳಿನಿಂದ ಕೆಳಗಿಳಿಯುವ ಲಕ್ಷಣವೇ ಇರಲಿಲ್ಲ. ಅಪ್ಪ ಎಷ್ಟೇ ಕರೆದರೂ ಕಣ್ಣೆದುರಿಗೆ ಕಾಣುತ್ತಿದ್ದ ನದಿಯಲ್ಲಿ ಪುನಃ ಎಲ್ಲಿ ಅದ್ದಿ ಬಿಡುತ್ತಾರೆಂಬ ಭಯದಿಂದ ಅಪ್ಪ ತನ್ನ ಹತ್ತಿರ ಬಂದರೆ ಕಿರುಚುತ್ತಿದ್ದಳು.

ಶೀಲಾ....ರೀ ನೀವು ಸ್ವಲ್ಪ ಹಿಂದೆಯೇ ನಿಂತಿರಿ ನದಿ ಹತ್ತಿರ ನಿಮ್ಮನ್ನು ನೋಡಿದರೆ ಪಾಪ ಅವಳು ಹೆದರಿಕೊಳ್ತಾಳೆ.

ರಜನಿ ನಗುತ್ತ......ಅಪ್ಪ ಎಲ್ಲಿ ನನ್ನನ್ನು ಪುನಃ ನೀರಿನಲ್ಲಿ ಅದ್ದುವನೊ ಅಂತ ಪಾಪ ನಮ್ಮ ಚಿನ್ನಿಗೆ ಭಯ.

ಅವಳ ಮಾತಿಗೆ ಎಲ್ಲರೂ ನಗುತ್ತಿದ್ದರೆ ನೀತು ಮಗಳನ್ನೆತ್ತಿಕೊಂಡು ಅವಳ ಕೈಯಿಂದಲೂ ಸಂಗಮ ಸ್ಥಾನದಲ್ಲಿ ಪೂಜೆ ಮಾಡಿಸಿದಳು.
ಅಲ್ಲಿಂದ ಮುಂದುವರಿದು ಯಮುನೋತ್ರಿ......ಗಂಗೋತ್ರಿ ದರ್ಶನ ಮಾಡಿಕೊಂಡು ನಾಲ್ಕನೇ ರಾತ್ರಿ ಬದರೀನಾಥದಲ್ಲಿ ಉಳಿದರು.

ನೀತು.....ನಾಳೆ ಬದರೀನಾಥನ ದರ್ಶನ ಮಾಡಿಕೊಂಡು ನಾಳೆಯೇ ಕೇದಾರಕ್ಕೆ ಹೋರಡುವುದಾ ?

ಅನುಷ...ಅಕ್ಕ ನಿಧಿ ಇದ್ದ ಆಶ್ರಮ ಉತ್ತರಾಖಂಡದಲ್ಲೇ ಇರುವುದು
ಅಂತ ಅವಳು ಹೇಳಿದಳಲ್ಲ ಅವಳನ್ನೇ ಕೇಳೋಣ. ನಿಧಿ ಇಲ್ಲಿ ಬಾ.

ನಿಧಿ ಹತ್ತಿರ ಬಂದು...ಹೇಳಿ ಆಂಟಿ.

ಅನುಷ.....ನಾವು ನಾಳೆಯೇ ಕೇಧಾರಕ್ಕೆ ಹೊರಡಬಹುದಾ ?

ನಿಧಿ.....ಹೂಂ ಆಂಟಿ ನಾಳೆ ಮುಂಜಾನೆ ಬದರೀನಾಥನ ದರ್ಶನದ ಬಳಿಕ ನಾವು ಇಲ್ಲಿಂದ ಗೌರಿಕುಂಡ್ ಅಲ್ಲಿಗೆ ತಲುಪೋಣ ನಾಳೆ ರಾತ್ರಿ ಅಲ್ಲಿಯೇ ಉಳಿದು ನಾಳಿದ್ದು ಬೆಳಿಗ್ಗೆ ಅಲ್ಲಿಂದ ಹೊರಡೋದು. ಹಾಂ ಎಲ್ಲದಕ್ಕಿಂತ ಮುಖ್ಯವಾದ ವಿಷಯ ಗೌರಿಕುಂಡ್ ಅಲ್ಲಿಂದ ಕೇದಾರ ದೇವಸ್ಥಾನದವರೆಗೂ ನಾವು ನಡೆದುಕೊಂಡೇ ಹೋಗಬೇಕು.

ನೀತು.....ಎಷ್ಟು ದೂರ ನಡಿಬೇಕಮ್ಮ ?

ನಿಧಿ.....ಅಮ್ಮ ಸುಮಾರು 15 — 16 ಕಿಮೀ.. ಇರಬಹುದು ಆದರೆ ನಡೆಯಲಾಗದಿದ್ದರೆ ಕುದುರೆಯೂ ಇರುತ್ತೆ ಅದರಲ್ಲಿ ಕುಳಿತು ನಾವು ಹೋಗಬಹುದು.

ನೀತು.....ನಿಮ್ಮಲ್ಲಿ ಯಾರಿಗಾದರೂ ಸುಸ್ತು....ಆಯಾಸ ಅಥವಾ ಆರೋಗ್ಯದಲ್ಲಿ ಏನಾದರೂ ವೆತ್ಯಾಸ ಅನಿಸುತ್ತಿದೆಯಾ ?

ಶೀಲಾ.....ಇಲ್ಲಾ ಕಣೆ ಗರ್ಭಿಯರಾಗಿದ್ದರೂ ನನಗೆ ಸುಕನ್ಯಾಳಿಗೂ ಯಾವ ರೀತಿಯಲ್ಲೂ ತೊಂದರೆ ಆಗುತ್ತಿಲ್ಲ.

ಸುಕನ್ಯಾ......ನಾನೂ ಪೂರ್ತಿ ಆರೋಗ್ಯದಿಂದ ಇದ್ದೀನಿ ಈಗಂತೂ ಮೊದಲಿಗಿಂತಲೂ ಹುರುಪಿನಲ್ಲಿದ್ದೀನಿ.

ಅಶೋಕ ಇವರಿದ್ದಲ್ಲಿಗೆ ಬಂದು....ಆದರೂ ನಾವು ಯಾವುದೇ ರಿಸ್ಕ್
ತೆಗೆದುಕೊಳ್ಳೋದು ಬೇಡ 16 ಕಿಮೀ.. ನಡೆಯುವುದೆಂದರೆ ಏನು ಹುಡುಗಾಟದ ವಿಷಯವಾ.

ಹರೀಶ......ಬೇಡ ಮಕ್ಕಳು ಶೀಲಾ...ಸುಕನ್ಯಾ ಕುದುರೆ ಮೇಲೆಯೇ ಬರಲಿ ನಾವೆಲ್ಲರೂ ನಡೆದುಕೊಂಡು ಹೋಗೋಣ.

ನೀತು.....ಹೂಂ ರೀ ಮಕ್ಕಳು ಕುದುರೆಯ ಮೇಲೇ ಬರಲಿ ಸವಿತಾ ನೀನೂ ರಜನಿ ಕುದುರೆಯ ಮೇಲೆ ಬನ್ನಿ.

ಸವಿತಾ.....ನಾನೂ ಆಚಾರ್ಯರು ಮನೆಯಲ್ಲಿ ಪೂಜೆ ಮಾಡಿದಾಗ ಕೊಟ್ಟ ತೀರ್ಥ ಸೇವಿಸಿರುವೆ ಅದರಿಂದ ನನಗೂ ಆಯಾಸ ಸುಸ್ತು ಆಗುವುದಿಲ್ಲ ನಿನ್ನೊಂದಿಗೆ ನಾನೂ ನಡೆದುಕೊಂಡು ಬರ್ತೀನಿ.

ರಜನಿ....ನಾನೂ ನಡ್ಕೊಂಡೇ ಬರೋದು ಆಗದಿದ್ದಾಗ ಸ್ವಲ್ಪ ದೂರ ಅಶೋಕ ನನ್ನ ಎತ್ತಿಕೊಳ್ತಾರೆ.

ಅಶೋಕ.....ಆಮೇಲೆ ಆ ಕಡೆಯಿಂದ ನನ್ನ ನಾಲ್ಕು ಜನರು ಹೆಗಲ ಮೇಲೆ ಹೊತ್ತುಕೊಂಡು ಬರಬೇಕಷ್ಟೆ.

ನೀತು.....ರೀ ಶುಭವಾಗಿ ಮಾತಾಡಿ ಏನದು ಅಸಹ್ಯ ಚಿನ್ನಿ ನೀನು ಕುದುರೆ ಮೇಲೆ ಸುರೇಣ್ಣನ ಜೊತೆ ಕೂತು ಬಾ.

ಮಾರನೇ ಬೆಳಿಗ್ಗೆ ಬದರೀನಾಥನ ದರ್ಶನ ಮತ್ತು ಪೂಜೆ ಮುಗಿಸಿದ ನಂತರ ಎಲ್ಲರೂ ಗೌರಿಕುಂಡವನ್ನು ತಲುಪಿದರು. ರಾತ್ರಿ ಅಲ್ಲುಳಿದು ಮುಂಜಾನೆ ಅವಶ್ಯಕತೆಯಿರುವ ಲಗೇಜನ್ನು ಮಾತ್ರ ತೆಗೆದುಕೊಂಡು ಕೇಧಾರನಾಥನ ಸನ್ನಿಧಾನದತ್ತ ಹೊರಟರು. ತಲೆಗೆ ಬೆಚ್ಚನೆ ಟೋಪಿ ಕೈಗೆ ಗ್ಲೌಸು....ಕಾಲಿಗೆ ಸಾಕ್ಸ್ ಶೂ.....ಪುಟ್ಟ ಬೆಚ್ಚಗಿರುವ ಜರ್ಕಿನ್ ಧರಿಸಿಕೊಂಡು ಕುದುರೆ ಮೇಲೆ ಸುರೇಣ್ಣನ ಜೊತೆಯಲ್ಲಿ ಕುಳಿತಿದ್ದ ನಿಶಾ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ಅಪ್ಪನನ್ನು ಕೂಗುತ್ತ ಅಮ್ಮನಿಗೆ ಕೈ ಬೀಸಿ ಸಂತೋಷದಲ್ಲಿದ್ದಳು. ಅಕ್ಕನೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸುತ್ತ ನಿಕಿತಾ...ರಶ್ಮಿ....ನಮಿತಾ ನಡೆಯುತ್ತ ನಿಧಿ ತನಗೆ ತಿಳಿದಿರುವ ವಿಷಯಗಳನ್ನು ತಂಗಿಯರಿಗೆ ವಿವರಿಸುತ್ತ ಹೆಜ್ಜೆಯಿಡುತ್ತಿದ್ದಳು. ಸುಕನ್ಯಾ ಮತ್ತು ಶೀಲಾರಿಬ್ಬರನ್ನು ಒಂದೊಂದು ಕುದುರೆಯ ಮೇಲೆ ಕೂರಿಸಲಾಗಿದ್ದ ಅವರ ಜೊತೆ ರವಿ ಅಶೋಕ ಮಾತನಾಡುತ್ತ ನಡೆದುಕೊಂಡು ಸಾಗುತ್ತಿದ್ದರು. ನಿಶಾಳಿದ್ದ ಕುದುರೆ ಪಕ್ಕ ಗಿರೀಶನನ್ನು ಜೊತೆಯಾಗಿಸಿಕೊಂಡು ಅಣ್ಣನ ಜೊತೆ ಚರ್ಚೆ ನಡೆಸುತ್ತ ಪ್ರತಾಪ್ ಮುನ್ನಡೆದರೆ ನೀತು...ಅನುಷ...ಸವಿತಾ..ರಜನಿ ತಮ್ಮದೇ ಮಾತುಕತೆಯನ್ನಾಡುತ್ತ ಹೆಜ್ಜೆ ಹಾಕುತ್ತಿದ್ದರು. ಜೀವನದಲ್ಲಿ ಮೊದಲ ಬಾರಿ ಇಷ್ಟು ಛಳಿಯ ವಾತಾವರಣ ಮೇಲಿಂದ ಬೀಳುತ್ತಿದ್ದ ಸಣ್ಣ ಸಣ್ಣ ಹಿಮದ ಕೆಳಗೆ ಕೇಧಾರನಾಥನ ಸನ್ನಿಧಾನದ ಕಡೆ ನಡೆದು ಸಾಗುತ್ತಿರುವುದೇ ಒಂದು ಕಲ್ಪನಾತೀತವಾದ ಅಮೋಘ ಅನುಭವ ಎಲ್ಲರಿಗೂ ಆಗುತ್ತಿತ್ತು.ಹರಿದ್ವಾರದಲ್ಲಿಯೇ ಕೊರೆಯುವಂತ ಛಳಿಗೆ ಬೇಕಾದ ಬೆಚ್ಚನೆಯ ಉಡುಗೆಗಳನ್ನು ಖರೀಧಿಸಿದ್ದರಿಂದ ಯಾರಿಗೂ ನಡುಗುವ ಪರಿಸ್ಥಿತಿಯೇ ಇರಲಿಲ್ಲ. ಅಡಿಯಿಂದ ಮುಡಿಯವರೆಗೂ ಪೂರ್ತಿ ಪ್ಯಾಕಾಗಿದ್ದ ನಿಶಾ ಸುರೇಶಣ್ಣನ ಜೊತೆ ಕುದುರೆಯ ಮೇಲೆ ಕುಳಿತು ಸುತ್ತಲಿನ ಬೆಟ್ಟ ಗುಡ್ಡ ಬೀಳುತ್ತಿದ್ದ ಹಿಮ ಮತ್ತು ಪರ್ವತಗಳ ಕಡೆ ನೋಡುತ್ತ ಅಣ್ಣನಿಗೂ ಅವನ್ನೆಲ್ಲಾ ತೋರಿಸುತ್ತ ಸಂತಸದಿಂದ ಹರ್ಷೋಲ್ಲಾಸದಲ್ಲಿ ಮುಳುಗಿದ್ದಳು.

ನೀತು.....ಚಿನ್ನಿ ಮರಿ ಕುಳು ಕುಳು (ಛಳಿ) ಆಗ್ತಿದೆಯಾ ಕಂದ.

ನಿಶಾ ತಲೆ ಅಳ್ಳಾಡಿಸಿ....ಲಿಲ್ಲ ಮಮ್ಮ ಕುಳು ಕುಳು ಲಿಲ್ಲ.

ಸಂಜೆಯ ಮಬ್ಬುಗತ್ತಲೇ ಆವರಿಸಿಕೊಳ್ಳುವ ಮುನ್ನವೇ ಕೇಧಾರನ ಸನ್ನಿಧಾನವನ್ನು ಸಮೀಪಿಸಿದಾಗ ಗಿರೀಶ ಅಕ್ಕನೊಂದಿಗೆ ತನ್ನದೇ ಸಮಸ್ಯೆಯ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಸುತ್ತಿದ್ದನು.

ನಿಧಿ.....ನಿನ್ನ ಪೇಂಟಿಂಗ್ ಪ್ರದರ್ಶನದ ಬಗ್ಗೆ ತಿಳಿದು ನನಗಂತೂ ತುಂಬ ಹೆಮ್ಮೆಯಾಗುತ್ತಿದೆ ಕಣೋ. ಮುಂದೆ ಯಾವ ಚಿತ್ರಗಳನ್ನು ಬರೆಯಬೇಕೆಂದು ಯೋಚಿಸಿರುವೆ.

ಗಿರೀಶ.....ಅಕ್ಕ ಅದೇ ನನಗೀಗ ಸಮಸ್ಯೆ ಆಗಿರುವುದು ಮುಂದಿನ ತಿಂಗಳು ಜೂನ್ ಕೊನೇ ವಾರದಲ್ಲಿ ಇನ್ನೊಂದು ಚಿತ್ರಕಲೆ ಪ್ರದರ್ಶನ ನಡೆಯುತ್ತೆ ಅಂತ ಮೆಸೇಜ್ ಬಂದಿದೆ. ನನಗೆನು ಬಿಡಿಸಬೇಕು ಅಂತ ಹೊಳೆಯುತ್ತಲೇ ಇಲ್ಲ. ಒಂದು ಬಾರಿ ಇದನ್ನು ಚಿತ್ರಿಸಲಾ ಅನಿಸುತ್ತೆ ಇನ್ನೊಂದು ಸಲ ಬೇರೆಯ ಬಗ್ಗೆ ಒಲವು ಮೂಡುತ್ತೆ ಏನು ಮಾಡಲಿ ಅಂತಾನೇ ಹೊಳೆಯುತ್ತಿಲ್ಲ.

ನಿಧಿ...ನಿನ್ನ ಮನಸ್ಸಿನಲ್ಲಿರುವ ಗೊಂದಲ ನನಗರ್ಥವಾಯಿತು ಒಮ್ಮೆ
ನೀನು ಬಿಡಿಸಿರುವ ಚಿತ್ರಗಳನ್ನು ನೋಡಿದ ಮೇಲೆ ನೀನು ಯಾವ ವಿಷಯದಲ್ಲಿ ಮುಂದುವರೆದರೆ ಸೂಕ್ತವೆಂದು ನಾನು ಹೇಳಬಲ್ಲೆ. ಈಗ ಸಧ್ಯಕ್ಕೊಂದು ಸಿಂಪಲ್ಲಾಗಿ ಹೇಳ್ತೀನಿ ಕೇಳು ಇಲ್ಲಿಂದ ನಾವು ಮನೆಗೆ ಹಿಂದಿರುಗುವ ತನಕ ನೀನು ಮನಸ್ಸಿನಲ್ಲೇ ಇಲ್ಲಿ ನಿನ್ನ ಕಣ್ಣಿಗೆ ಬಿದ್ದಂತಹ ಪ್ರಕೃತಿ ಸೌಂದರ್ಯವನ್ನು ಸಾಮಾನ್ಯ ಜೀವನದ ಜೊತೆ ಜೋಡಿಸಿ ಏನಾದರೂ ಊಹೆ ಮಾಡಿಕೊಂಡು ನೋಡು. ಆ ಬಗ್ಗೆ ನಿನಗೆ ಸ್ಪಷ್ಟವಾದ ಚಿತ್ರಣ ಬರಬೇಕೆಂದೇನೂ ಇಲ್ಲ ನಿನಗೆ ಅದರ ಕಲ್ಪನೆ ಬರಬೇಕಷ್ಟೆ ಮಿಕ್ಕಿದ್ದನ್ನು ನಾವು ಮನೆಯಲ್ಲಿ ಚರ್ಚೆ ನಡೆಸಿ ಮುಂದಿನದ್ದನ್ನು ನಿರ್ಧರಿಸೋಣ.

ಗಿರೀಶ.....ಅಕ್ಕ ನೀವೂ ಪೇಟಿಂಗ್ ಮಾಡುತ್ತೀರಾ ?

ನಿಧಿ ಮುಗುಳ್ನಕ್ಕು......ಆಶ್ರಮದಲ್ಲಿ ನಾನು ಒಂಟಿಯಾಗಿದ್ದೆನಲ್ಲಾ ನನ್ನ ವಯಸ್ಸಿನವರೂ ಅಲ್ಯಾರು ಇರಲಿಲ್ಲ. ಆ ಸಮಯದಲ್ಲಿ ನನ್ನ ಒಂಟಿತನವನ್ನು ಹೋಗಲಾಡಿಸಿದ್ದು ಇದೇ ಚಿತ್ರಕಲೆ ಮತ್ತು ಸಂಗೀತ.

ಹರೀಶ ಹತ್ತಿರ ಬಂದು ಮಗಳನ್ನು ಒಂದು ಕಡೆಯಿಂದ ಬಳಸಿ....ನನ್ನ ಮಗಳಿಗೆ ಚಿತ್ರಕಲೆ ಮತ್ತು ಸಂಗೀತ ಗೊತ್ತಿದೆ ಅಂತಾಯ್ತು. ಅಕ್ಕ ತಮ್ಮನ ಜೋಡಿ ಚೆನ್ನಾಗಿರುತ್ತೆ ಸಂಗೀತದಲ್ಲಿ ನೀನು ಯಾವುದನ್ನು ಕಲಿತಿರುವೆ ಮಗಳೇ ?

ನಿಧಿ....ಅಪ್ಪ ಆಶ್ರಮದಲ್ಲೊಬ್ಬರು ಗುರುಗಳಿದ್ದರು ಅವರ ಪತ್ನಿಯು ಅಂದರೆ ನನ್ನ ಗುರುಮಾತೆ ನನಗೆ ವೀಣೆ ಮತ್ತು ವಾಯಿಲಿನ್ ಎರಡು ವಾದ್ಯಗಳ ನುಡಿಸುವುದನ್ನು ಕರಗತ ಮಾಡಿಸಿದ್ದಾರೆ. ಅದರ ಜೊತೆ ಕರ್ನಾಟಕ ಸಂಗೀತ....ಹಿಂದೂಸ್ತಾನಿ ಮತ್ತು ಶಾಸ್ತ್ರೀಯ ಗಾಯನೆ ಇವುಗಳನ್ನೂ ಸಹ ಕಲಿಸಿದ್ದಾರೆ.

6 comments:

  1. ಸಿದ್ದಮ್ಮರಾಜ್6 July 2024 at 21:43

    ಅಬ್ಬಾ, ಕತೆ ಬಹಳ ಚೆನ್ನಾಗಿದೆ, ಬದರೀನಾಥ ಮತ್ತು ಕೇದಾರನಾಥದ ಪ್ರವಾಸವನ್ನು ಇನ್ನೂ ವಿವರಿಸಬಹುದಾಗಿತ್ತು. ಏನೇ ಆಗಲಿ ಕತೆ ಬಹಳ ಚೆನ್ನಾಗಿದೆ. ನಾನು ಕೇದಾರನಾಥ್, ಬದರಿ ಯಾತ್ರೆ ಮಾಡಿದ ನೆನಪಾಯಿತು

    ReplyDelete
  2. ಯಾತ್ರೆಯನ್ನು ನೆನಪು ಮಾಡಿಕೊಂಡು ಮತ್ತೆ ಹೊಗಿ ಬಂದಾಗೆ ಆಯಿತು ಕತೆ ಮುಂದೆ ಏನಾಯಿತು ಅಂತ ಬೇಗನೇ ಹಾಕಿ

    ReplyDelete
  3. ಈ ಮೊದಲು ಎಲ್ಲಾ ಪ್ರತಿ ದಿನ ಬರುತ್ತಿದ್ದೆ. ಏಕೆ ನಮ್ಮನ್ನು ಎಲ್ಲಾ ಸತಾಯಿಸುತ್ತಿರುವೆ.

    ReplyDelete
  4. ವೇರ್ ಇಸ್ ದ ಸ್ಟೋರಿ ಬಾಸ್

    ReplyDelete
  5. ಏಕೆ, ಪ್ರತಿ ದಿನ ಬರುತ್ತಿದ್ದ ನೀತು ಎಲ್ಲಿಗೆ ಹೋಗಿದ್ದಾಳೆ. ಬೇಗ ಬಾರವ್ವ

    ReplyDelete