ಮನೆ ಬಾಗಿಲು ಬಡಿದ ಶಬ್ದದಿಂದ ಮೂವರ ಗಮನ ಅತ್ತ ತಿರುಗಿದ್ದು ಯಾರೆಂದು ನೋಡಲು ಹರೀಶ ಮೇಲೆದ್ದನು. ಹರೀಶ ಬಾಗಿಲನ್ನು ತೆರೆಯುತ್ತಿದ್ದಂತೆ ಅವನ ಕಾಲುಗಳ ಮಧ್ಯೆ ನುಸುಳಿಕೊಂಡ ನಿಶಾ ನೇರವಾಗಿ ಅಮ್ಮನತ್ತ ಓಡಿದಳು. ಅವಳನ್ನು ಮಹಡಿಯ ಮನೆಗೆ ಕರೆತಂದ ರಶ್ಮಿಯತ್ತ ನೋಡಿ.....
ಹರೀಶ.....ಏನಾಯ್ತಮ್ಮ ಇವಳನ್ನೇಕೆ ಇಲ್ಲಿಗೆ ಕರೆತಂದಿರುವೆ ?
ರಶ್ಮಿ......ಅಂಕಲ್ ಅಮ್ಮ ಬೇಕು ಅಂತ ಚಿನ್ನಿ ಕೆಳಗೆ ತುಂಬ ಗಲಾಟೆ ಮಾಡುತ್ತಿದ್ದಳು ಅದಕ್ಕೆ ಶೀಲಾ ಆಂಟಿ ಕರೆದೊಯ್ಯಲು ಹೇಳಿದರು.
ನೀತು......ಚಿನ್ನಿ ನೀನು ಗಲಾಟೆ ಮಾಡ್ತಿದ್ಯಾ ?
ನಿಶಾ ಹೂಂ ಇಲ್ಲ ಎಂದು ತಲೆಯನ್ನು ಎರಡೂ ಕಡೆ ಅಳ್ಳಾಡಿಸಿದನ್ನು ನೋಡಿ ಗೋವಿಂದಾಚಾರ್ಯರು ನಗುತ್ತಿದ್ದರು.
ರಶ್ಮಿ......ಮಮ್ಮ ನಾವೆಲ್ಲ ಹೊರಗೆ ಕೂತಿದ್ವಿ ಇವಳು ಕುಕ್ಕಿಯ ಜೊತೆ ಆಡ್ತಿದ್ದಾಗ ಸುರೇಶ ಅದನ್ನೆತ್ತಿಕೊಂಡು ಇವಳಿಗೆ ಕೊಡದೆ ಸತಾಯಿಸಿ ಆಟವಾಡಿಸಿದ್ದಕ್ಕೆ ನಿಮ್ಮ ಹತ್ತಿರ ಬರಲು ಗಲಾಟೆ ಮಾಡುತ್ತಿದ್ದಳು. ಶೀಲಾ ಆಂಟಿನೇ ಮೊದಲಿವಳನ್ನು ಕರೆದೊಯ್ದು ಅವಳಮ್ಮನ ಬಳಿ ಬಿಡಮ್ಮ ಇಲ್ಲದಿದ್ದರೆ ಕೋಪಿಸಿಕೊಂಡು ಸೋಫಾ ಕೆಳಗೆ ಸೇರುತ್ತಾಳೆ ಅಂತ ಕಳಿಸಿದರು.
ರಶ್ಮಿ ಹಿಂದೆಯೇ ಕಳ್ಳ ಬೆಕ್ಕಿನಂತೆ ಬಂದು ನಿಂತ ಸುರೇಶಣ್ಣನನ್ನು ನೋಡುತ್ತಲೇ ನಿಶಾ.....ಮಮ್ಮ ಅಣ್ಣ ಬೇಲಾ....ಬೇಲಾ....ಅಣ್ಣ....ಬೇಲಾ...ಎಂದು ಅವನತ್ತ ಕೈ ತೋರಿಸಿದಳು.
ನೀತು ಮಗಳಿಗೆ ಸಮಾಧಾನ ಮಾಡಿ.......ಸರಿ ರಶ್ಮಿ ಇವಳಿಲ್ಲಿಯೇ ಇರ್ತಾಳೆ ನೀನು ಕೆಳಗಿರು ಸುರೇಶ ಆಮೇಲಿದೆ ನಿನಗೆ ಮಾರಿ ಹಬ್ಬ ತಂಗಿಯನ್ನೇ ಸತಾಯಿಸ್ತೀಯ? ಕೆಳಗೆ ಬಂದು ನಿನಗೆ ಮಾಡ್ತೀನಿ.
ಸುರೇಶ ಹೆದರುತ್ತಲೇ ಏನೋ ಹೇಳಲು ಹೊರಟರೆ ಹರೀಶ ಕೆಳಗಿರು ಆಮೇಲೆ ಮಾತಾಡೋಣವೆಂದು ಇಬ್ಬರನ್ನೂ ಕಳುಹಿಸಿದ.
ಹರೀಶ......ಗುರುಗಳೇ ಒಂದು ರಾಜ ಕುಟುಂಬವನ್ನೇ ಸರ್ವನಾಶ ಮಾಡಿದರೆ ಅಂತಹ ಪಾಪಿಗಳಿಗೆ ಅದರಿಂದೇನು ಸಿಗುತ್ತದೆ ಕೇವಲ ಐಶ್ವರ್ಯಕ್ಕಾಗಿ ಹೀಗೆ ಮಾಡಲು ಮನಸ್ಸಾದರೂ ಹೇಗೆ ಬರುತ್ತದೆ.
ಆಚಾರ್ಯರು ನಗುತ್ತ..........ಕೇವಲ ಐಶ್ವರ್ಯ ? ಹರೀಶ ನಿನಗೆ ಸೂರ್ಯವಂಶಿಗಳ ಇತಿಹಾಸದ ಬಗ್ಗೆ ಸರಿಯಾಗಿ ತಿಳಿದಿರಲಿಕ್ಕಿಲ್ಲ ಅದಕ್ಕೆ ಹೀಗೆ ಮಾತನಾಡುತ್ತಿರುವೆ. ಅವರ ಬಳಿ ಇರುವುದು ಕೇವಲ ಐಶ್ವರ್ಯವಷ್ಟೇ ಅಲ್ಲ ಒಂದು ರೀತಿಯಲ್ಲಿ ಕುಬೇರನ ಖಜಾನೆ ಅಂತ ಹೇಳಿದರೂ ಅತಿಶಯೋಕ್ತಿಯಲ್ಲ. ಸಹಸ್ರಾರು ಕೋಟಿಗಳ ಆಸ್ತಿಗಾಗಿ ಬರೀ ದ್ವೇಶ....ಅಸೂಯೆ....ಅಹಂಕಾರ....ಅತಿಯಾಸೆಗಳನ್ನಷ್ಟೇ ಮನಸ್ಸಿನಲ್ಲಿ ತುಂಬಿಕೊಂಡಿರುವ ವ್ಯಕ್ತಿ ಏನನ್ನಾದರೂ ಮಾಡುತ್ತಾನೆ.
ಈಗ ಸೂರ್ಯವಂಶದ ಆಸ್ತಿಯನ್ನು ರಾಣಾಪ್ರತಾಪ್ ಸ್ಥಾಪಿಸಿರುವ ಒಂದು ಟ್ರಸ್ಟ್ ನಿರ್ವಹಿಸುತ್ತಿದೆ ಆದರೆ ಅವರಿಗೂ ಹಣವನ್ನು ಪೂರ್ತಿ ಉಪಯೋಗಿಸಲು ಅಧಿಕಾರವಿಲ್ಲ. ರಾಣಾಪ್ರತಾಪ್ — ಸುಧಾಮಣಿ ತಮಗೆ ಹೆಣ್ಣು ಮಗು ಹುಟ್ಟಿದರೆ ಅವಳಿಗೆ ನಿಶಾ ಎಂಬ ಹೆಸರಿಡಲು ನಿರ್ಧರಿಸಿದ್ದರು. ವಿಧಿಯಾಟ ನೋಡು ಇವಳನ್ನು ನೀವು ಮಗಳಾಗಿ ದತ್ತು ಸ್ವೀಕರಿಸಿದ ನಂತರ ಅದೇ ಹೆಸರನ್ನೇ ಇವಳಿಗೆ ನಾಮಕರಣ ಮಾಡಿರುವಿರಿ. ಈಗ ಸೂರ್ಯವಂಶದ ಸಮಸ್ತ ಆಸ್ತಿಗೂ ನಿಶಾಳೇ ಏಕೈಕ ವಾರಸುದಾರಳು ಇವಳು ವಯಸ್ಕಳಾಗುವವರೆಗೆ ಅದನ್ನು ಜೋಪಾನವಾಗಿ ಕಾಪಾಡುವ ಜವಾಬ್ದಾರಿ ನಿಮ್ಮಿಬ್ಬರದ್ದು.
ಹರೀಶ......ಕ್ಷಮಿಸಿ ಗುರುಗಳೇ ನನಗೆ ಸರ್ಕಾರಿ ನೌಕರಿಯಿದೆ ನನಗೆ ಬರುವ ಆದಾಯದಿಂದ ನನ್ನ ಮಗಳಿಗೆ ಯಾವ ಕೊರತೆ ಬಾರದಂತೆ ನೋಡಿಕೊಳ್ಳುವಷ್ಟು ಸಮರ್ಥನಾಗಿರುವೆ. ಈ ಆಸ್ತಿಯಿಂದಾಗಿ ನಾಲ್ವರು ತಮ್ಮ ಜೀವ ಕಳೆದುಕೊಂಡಿರುವರು ಈಗ ಅದೇ ಆಸ್ತಿಯ ವಿಷಯವಾಗಿ ನನ್ನ ಮಗಳಿಗೆ ಯಾವ ತೊಂದರೆ ಆಗಬಾರದು ಅದು ಯಾರ ಪಾಲಾದರೂ ಸರಿಯೇ.
ಆಚಾರ್ಯರು......ಹೀಗೆ ಹಿಂದೆ ಸರಿಯಲಾಗುವುದಿಲ್ಲ ನೀವಿಬ್ಬರು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲೇ ಬೇಕಾಗಿದೆ. ಸೂರ್ಯವಂಶ ಸಂಸ್ತಾನದ ಸಮಸ್ತ ಆಸ್ತಿಗೂ ನಿಶಾಳೇ ವಾರಸುದಾರಳಾಗಿರುವಾಗ ಇವಳ ಪ್ರಾಣಕ್ಕೆ ಸಂಚಕಾರವಿದೆ. ಆಸ್ತಿಗೋಸ್ಕರ ತಾತ...ಅಜ್ಜಿ..ತಂದೆ ತಾಯಿಯರನ್ನು ಕೊಂದಿರುವ ಪಾಪಿಗಳಿಗೆ ಈ ಹಸುಗೂಸನ್ನು ಕೊಲ್ಲುವುದು ಯಾವ ಲೆಕ್ಕ.
ಹರೀಶ ಆವೇಶದಿಂದ......ಇಲ್ಲ ಗುರುಗಳೇ ನನ್ನ ಮಗಳಿಗೆ ಯಾವ ರೀತಿಯಲ್ಲೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಯಾರೇ ಬಂದರೂ ಏದುರಿಸಿ ನಿಲ್ಲುವೆ.
ಆಚಾರ್ಯರು ಮುಗುಳ್ನಕ್ಕು.....ಎಷ್ಟು ಜನರೆದುರು ನಿಲ್ಲಲು ಸಾಧ್ಯ ಹರೀಶ ? ಪ್ರತೀ ಗಳಿಗೆಯೂ ನೀನು ಮಗಳ ಜೊತೆಯಲ್ಲೇ ಇರಲು ಸಾಧ್ಯವಿದೆಯಾ ?
ಹರೀಶ......ನಿಮ್ಮ ಮಾತಿನ ಅರ್ಥ ತಿಳಿಯಲಿಲ್ಲ ಗುರುಗಳೇ.
ಅಚಾರ್ಯರು......ನಿಶಾಳಿಗೆ ದೊರಕಿರುವ ವಂಶಪಾರಂಪರ್ಯದ ಆಸ್ತಿಯ ಮೇಲೆ ರಣಹದ್ದುಗಳ ದೃಷ್ಟಿ ಬಹಳ ವರ್ಷಗಳಿಂದಲೂ ಇದೆ. ಹೇಗಾದರೂ ಯಾವ ರೀತಿಯಲ್ಲಾದರೂ ಸರಿ ಅದನ್ನು ತಮ್ಮದಾಗಿ ಮಾಡಿಕೊಳ್ಳಬೇಕೆಂಬ ಮಹದಾಸೆಯಿಂದ ಅವರು ಏನನ್ನಾದರೂ ಮಾಡಲು ಸಿದ್ದರಿದ್ದಾರೆ. ರಾಜರಾಗಿದ್ದೂ ತಮ್ಮನ್ನು ಮತ್ತು ಸಂಸ್ಥಾನದ ಇಬ್ಬರು ಮಹಿಳೆಯರನ್ನು ಕಾಪಾಡಿಕೊಳ್ಳಲು ಅವರಿಂದ ಸಾಧ್ಯವೇ ಆಗಲಿಲ್ಲ ಎಂದ ಮೇಲೆ ಸಾಮಾನ್ಯನಾಗಿ ನಿನ್ನೀ ಪುಟ್ಟ ಮಗಳನ್ನು ಅಂತಹ ರಣಹದ್ದುಗಳಿಂದ ನಿನಗೆ ಕಾಪಾಡಲು ಸಾಧ್ಯವಿದೆಯಾ ? ನಿಮಗೆ ನೇರವಾಗಿ ಪ್ರಶ್ನಿಸುವೆ ಎರಡು ಆಯ್ಕೆ ನಿಮಗಿದೆ ಅದರಲ್ಲಿ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರೋ ಅದು ನಿಮಗೆ ಬಿಟ್ಟಿದ್ದು. ಮೊದಲನೇ ಆಯ್ಕೆ ನಿಮ್ಮ ಮಗಳಿಗೆ ಅವಳ ಹಕ್ಕನ್ನು ಸಿಗುವಂತೆ ಮಾಡಿ ಇವಳಿಗೆ ಜನ್ಮ ಕೊಟ್ಟ ತಂದೆ ತಾಯಿಯ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡುವುದು. ಎರಡನೇ ಆಯ್ಕೆ ಈ ಆಸ್ತಿ ಉಸಾಬರಿಯೆಲ್ಲಾ ನಮಗೇಕೆ ಹೇಗೂ ಇಬ್ಬರು ಮಕ್ಕಳಿದ್ದಾರೆ ಅವರ ಜೊತೆ ನೆಮ್ಮದಿಯಾಗಿರೋಣ ಇವಳ ಹಣೆಯಲ್ಲಿ ಬರೆದ ರೀತಿಯೇ ಆಗಲಿದೆ ಎಂದು ಮಗುವನ್ನು ದೂರ ಮಾಡುವುದು. ನಿಮ್ಮಿಬ್ಬರ ಆಯ್ಕೆ ಯಾವುದು ?
ಮಗಳನ್ನು ದೂರ ಮಾಡಬೇಕೆಂಬ ವಿಚಾರ ಕೇಳಿಯೇ ಹರೀಶನಿಗೆ ನಡುಕ ಉಂಟಾದರೆ ಮಡಿಲಲ್ಲಿ ಕುಳಿತಿದ್ದ ಮಗಳನ್ನು ನೀತು ತುಂಬ ಗಟ್ಟಿಯಾಗಿ ಅಪ್ಪಿಕೊಂಡಳು.
ನೀತು ಕಣ್ಣೀರಿನೊಂದಿಗೆ.....ನನ್ನ ಮಗಳು ನನ್ನಿಂದ ದೂರವಾದ ಕ್ಷಣ ನನ್ನ ಆತ್ಮವೂ ಪರಮಾತ್ಮನ ಬಳಿ ಸೇರಿಕೊಳ್ಳಲಿದೆ ಈ ರೀತಿ ಮಾತ್ರ ಹೇಳಬೇಡಿ ಗುರುಗಳೇ.
ಆಚಾರ್ಯರು......ನೋಡು ಮಗಳೇ ನಾನು ಕೇವಲ ನಿಮ್ಮಿಬ್ಬರಿಗೂ ವಾಸ್ತವಿಕತೆಯನ್ನು ತಿಳಿಸುತ್ತಿರುವೆ. ಏಕೆಂದರೆ ಅಪಾಯ ಯಾವ ದಿಕ್ಕಿನಿಂದ ಯಾರ ರೂಪದಲ್ಲಿ ಬರಲಿದೆಯೋ ಯಾರು ಬಲ್ಲವರು ? ಅವರು ಮಗುವಿನ ಮೇಲೆ ಆಕ್ರಮಣ ಮಾಡುತ್ತಾರೆಯೋ ಅಥವ ಮಗುವನ್ನು ತಮಗೋಪ್ಪಿಸುವಂತೆ ನಿಮ್ಮನ್ನು ಹೆದರಿಸಲು ಮನೆಯ ಇತರೆ ಸದಸ್ಯರ ಮೇಲೆ ದಾಳಿ ಮಾಡುವರೋ ಹೇಗೆ ತಿಳಿಯುತ್ತದೆ. ಇದ್ದನ್ನು ತಡೆಯಲ್ಲಿಕ್ಕಿರುವ ಮಾರ್ಗ ನಾನು ಮೇಲೆ ಹೇಳಿದರಲ್ಲಿ ನೀವು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು.
ನೀತು ಮಗಳನ್ನು ತಬ್ಬಿಕೊಂಡು.....ನನ್ನದು ಮೂರನೆಯ ಆಯ್ಕೆ ಗುರುಗಳೇ ನನ್ನ ಮಗಳಿಗೆ ಅಪಾಯ ಏದುರಾಗುವ ಮುನ್ನ ಅವಳ ವಿರೋಧಿಗಳನ್ನು ನಿರ್ನಾಮ ಮಾಡುವುದು.
ಆಚಾರ್ಯರು......ಮಗಳೇ ನಾನು ನಿನ್ನಿಂದ ಇದನ್ನೇ ನಿರೀಕ್ಷಿಸುತ್ತಿದ್ದೆ. ಅದರ ಮುಂದಿನ ಹೆಜ್ಜೆಯಾಗಿ ನೀವು ಮುಂದಿನ ವಾರ ಜೈಪುರಕ್ಕೆ ಪ್ರಯಾಣ ಬೆಳಸಬೇಕಿದೆ. ಜೈಪುರದಿಂದ 30 ಕಿಮಿ.. ದೂರದಲ್ಲಿನ xxxx ಹಳ್ಳಿಯಲ್ಲಿ ನೀವು ವಿಕ್ರಂ ಸಿಂಗ್ ಎಂಬಾತನನ್ನು ಬೇಟಿಯಾಗಿ ಅವನಿಗೆ ಯುವರಾಣಿಯ ದರ್ಶನ ಮಾಡಿಸಬೇಕು. ಈಗಾಗಲೇ ಆತ ಅರಮನೆಗೆ ಯುವರಾಣಿ ಪಾದಾರ್ಪಣೆ ಮಾಡಿರುವ ವಿಷಯವನ್ನು ತಿಳಿದುಕೊಂಡಿರುತ್ತಾನೆ. ವಿಕ್ರಂ ಸಿಂಗ್ ಸೂರ್ಯವಂಶ ಸಂಸ್ಥಾನದ ಅತ್ಯಂತ ನಂಬಿಕಸ್ತ ರಕ್ಷಕ ಜೊತೆಗೆ ರಾಣಾಪ್ರತಾಪನ ಅತ್ಯಾಪ್ತನೂ ಹೌದು.
ಈ ಹೋರಾಟದಲ್ಲಿ ಶರ್ತುಗಳನ್ನು ನಾಶ ಮಾಡುವುದಕ್ಕಾಗಿ ವಿಕ್ರಂ ಸಿಂಗ್ ಮತ್ತವನ ಸೈನಿಕ ಪಡೆಯ ಅವಶ್ಯಕತೆ ತುಂಬಾ ಇದೆ. ಒಮ್ಮೆ ಶತ್ರುಗಳೆಲ್ಲರೂ ನಾಶವಾದ ಬಳಿಕ ಅರಮನೆಯ ಸುಧಾಮಣಿ ರೂಮಿನಲ್ಲಿ ಧಿಗ್ಬಂಧನದಲ್ಲಿರುವ ರಾಣಾಪ್ರತಾಪನ ಉಯಿಲನ್ನು ನಾನೇ ನಿಮ್ಮ ವಶಕ್ಕೆ ತೆಗೆದುಕೊಡಬೇಕಿದೆ. ನನಗೆ ಮಗಳಂತಿದ್ದ ಸುಧಾಮಣಿಯ ಸಾವಿಗೆ ಕಾರಣರಾದವರಿನ್ನೂ ಜೀವಂತವಾಗಿಯೇ ಇರುವಾಗ ನಾನು ಅರಮನೆಯೊಳಗೆ ಕಾಲಿಡುವುದಿಲ್ಲ.
ಹರೀಶ....ನಿಮ್ಮ ಆಜ್ಞೆಯಂತೆಯೇ ನಡೆದುಕೊಳ್ಳುತ್ತೇವೆ ಗುರುಗಳೆ.
ಆಚಾರ್ಯರು......ಹರೀಶ ವಿಕ್ರಂ ಸಿಂಗ್ ಬೇಟಿಯಾದ ನಂತರ ನೀವೆಲ್ಲರೂ ಸಕುಟುಂಬ ಸಮೇತರಾಗಿ ಹರಿದ್ವಾರಕ್ಕೆ ಬರಬೇಕಿದೆ. ವಾರಣಾಸಿಯಲ್ಲಿ ಮಗಳ ಜೊತೆ ಪೂಜೆ ಮಾಡಿದಾಗ ದೇವಾನಂದ ನಿಮಗೆ ಕೊಟ್ಟಂತಹ ಮೂರು ಗಂಗಾ ಜಲದ ಕಳಶಗಳನ್ನು ಅಲ್ಲಿಯೇ ನಿಶಾಳಿಂದ ವಿಸರ್ಜನೆ ಮಾಡಿಸಬೇಕು. ನಿನ್ನ ಇಬ್ಬರು ಸ್ನೇಹಿತೆಯರು ಗರ್ಭಿಣಿಯರೆಂದು ಯೋಚಿಸದಿರು ಮಗಳೇ ಅವರಿಗೆ ಈ ಹಣ್ಣನ್ನು ತಿನ್ನಿಸು ಪ್ರಯಾಣದಲ್ಲಿ ಇಬ್ಬರಿಗೂ ಯಾವುದೇ ರೀತಿಯ ಸಂಕಷ್ಟವು ಏದುರಾಗದು. ಹಾಗೆಯೇ ನಿಮ್ಮೆಲ್ಲರಿಗೂ ದೇವಾನಂದನ ಮೂಲಕ ನಾವು ಕಳುಹಿಸಿದ ದ್ರವ್ಯದಿಂದಾಗಿ ನಿಮ್ಮ ಆರೋಗ್ಯ...ಬುದ್ದಿಶಕ್ತಿ ಮತ್ತು ದೈಹಿಕ ಬಲವು ಅತ್ಯಂತ ವಿಸ್ತೃತವಾಗಿದೆ. ಮಗಳೇ ನೀತು ಈಗ ನಾನು ಕೊಡುವ ದ್ರವ್ಯವನ್ನು ಮನೆಯವರೆಲ್ಲರ ಜೊತೆ ನಿನ್ನ ಗೆಳತಿ ಸುಕನ್ಯಾ....ಸವಿತಾ ಮತ್ತವಳ ಇಬ್ಬರು ಮಕ್ಕಳಿಗೂ ಕುಡಿಸಬೇಕಾದ ಜವಾಬ್ದಿರಿ ನಿನ್ನದು. ಆ ಇಬ್ಬರು ಹೆಣ್ಣುಮಕ್ಕಳ ಜೊತೆ ಸವಿತಾಳ ಇಬ್ಬರು ಮಕ್ಕಳು ಸಹ ನಿಮ್ಮ ಕುಟುಂಬದಲ್ಲಿ ಒಬ್ಬರಾಗಿ ತಮ್ಮನ್ನು ನೋಡುತ್ತಾರೆ ಹಾಗಾಗಿ ಅವರಿಗೂ ಸಹ ಯಾವುದೇ ತೊಂದರೆಯೂ ಆಗಬಾರದಲ್ಲವಾ.
ನೀತು ಆಗಲೆಂದು ಆಚಾರ್ಯರು ನೀಡಿದ ದ್ರವ್ಯವನ್ನು ಪಡೆದು ತನ್ನ ಕಣ್ಣಿಗೊತ್ತಿಕೊಂಡರೆ ಅಮ್ಮನ ಮಡಿಲಲ್ಲಿದ್ದ ನಿಶಾ ಅದನ್ನು ಪುಟ್ಟ ಕೈಗಳಿಂದ ತನ್ನತ್ತ ಎಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಳು.
ಆಚಾರ್ಯರು.....ನಡೆಯಿರಿ ಈಗ ಕೆಳಗೆ ಹೋಗೋಣ ಭೋಜನದ ನಂತರ ನಾವು ಪ್ರಯಾಣಿಸಬೇಕಿದೆ ಆದರೆ ನಮ್ಮ ಎಲೆಗೆ ಮೊದಲನೆ ತುತ್ತನ್ನು ನಿನ್ನ ಮಗಳಿಂದಲೇ ಬಡಿಸಬೇಕು.
ನೀತು ಸಂತೋಷದಿಂದ ಆಗಲಿ ಗುರುಗಳೇ ಬನ್ನಿರಿ ಎಂದು ಕೆಳಗಿನ ಮನೆಗೆ ಕರೆತಂದಾಗ ಮನೆಯವರೆಲ್ಲರೂ ದಯಾನಂದ ಸ್ವಾಮೀಜಿ ಮತ್ತು ರಾಮಚಂದ್ರ ಗುರುಗಳ ಪ್ರವಚನ ಕೇಳುತ್ತಿದ್ದರು. ಸುರೇಶನ ಕಡೆ ನೋಡಿದಾಕ್ಷಣ ನಿಶಾ ಅಣ್ಣ ತನ್ನನ್ನು ಗೋಳಾಡಿಸಿದ್ದು ನೆನಪಾಗಿ ಅಮ್ಮನ ಕೆನ್ನೆ ಸವರಿ ಅಣ್ಣನನ್ನು ತೋರಿಸಿ ಚಾಡಿ ಹೇಳತೊಡಗಿದಳು. ನೀತು ಮಗನಿಗೆ ಬೈಯುತ್ತಿದ್ದರೆ ಎಲ್ಲಿಂದಲೋ ಒಂದು ಚಿಕ್ಕ ಕೋಲು ಹಿಡಿದು ತಂದ ನಿಶಾ ಅಮ್ಮನಿಗೆ ಕೊಟ್ಟು ಅಣ್ಣನತ್ತ ಕೈ ತೋರಿಸಿದಳು.
ನೀತು ನಗುತ್ತ......ಚಿನ್ನಿ ಸುರೇಶಣ್ಣನಿಗೆ ಏಟು ಕೊಡಬೇಕ ?
ನಿಶಾ ಹೂಂ ಎಂದು ತಲೆಯಾಡಿಸಿ.....ಮಮ್ಮ ಹೊಲಿ...ಅಣ್ಣ ಹೊಲಿ ಎಂದು ಕೂಗಿದಳು. ಸುರೇಶ ತಂಗಿಯ ಬಳಿ ಬಂದು ಕೊಸರಾಡಿದರು ಅವಳನ್ನೆತ್ತಿಕೊಂಡು.... ಚಿನ್ನಿ ಸಾರಿ ಪುಟ್ಟಿ ನಾನು ನೀನು ಟಾಟಾ ಹೋಗೋಣವಾ ? ಅಷ್ಟೇ ಹಿಂದಿನದನ್ನೆಲ್ಲಾ ಮರೆತ ನಿಶಾ ಅಣ್ಣನ ಕುತ್ತಿಗೆಗೆ ಜೋತು ಬೀಳುತ್ತ......ಅಣ್ಣ ಟಾಟಾ ನಲಿ....ನಲಿ...ಎಂದು ಖುಷಿಯಿಂದ ಕಿರುಚಾಡಿದಳು.
ರಜನಿ....ಈಗ ತಾನೇ ಅಣ್ಣನಿಗೆ ಹೊಡಿ ಅಂತ ಕೋಲು ತಂದುಕೊಟ್ಟೆ ಆಗಲೇ ಅವನ ಜೊತೆ ಟಾಟಾ ಹೋಗಲು ರೆಡಿಯಾದೆಯಾ ?......... ಎಂದಾಗ ಮೂವರು ಗುರುಗಳ ಜೊತೆ ಮನೆಯವರೆಲ್ಲರೂ ನಕ್ಕರು.
ನೀತು ಮಗಳಿಂದಲೇ ಮೂವರು ಗುರುಗಳ ಎಲೆಯಲ್ಲಿ ಸಿಹಿಯನ್ನು ಬಡಿಸಿದ ನಂತರ ಅವರು ಭೋಜನ ಸೇವಿಸಿ ತಾವು ಹೊರಡುತ್ತೇವೆ ನಮ್ಮ ಬೇಟಿ ಹರಿದ್ವಾರದಲ್ಲಿಯೇ ಆಗಲಿದೆ. ಎಲ್ಲರೂ ತಪ್ಪದೆಯೇ ಅಲ್ಲಿಗೆ ಬರಬೇಕು ಜೊತೆಗೆ ವಿಕ್ರಂ ಸಿಂಗ್ ಬೇಟಿಯಾದಾಗ ಆತನನ್ನು ಬರಬೇಕೆಂದು ತಿಳಿಸಿರಿ. ಮನೆಯವರಿಗೆ ಮತ್ತೊಮ್ಮೆ ಆಶೀರ್ವಧಿಸಿ ಮೂವರು ಪೂಜ್ಯರೂ ತೆರಳಿದ ನಂತರ ನೀತು ಮಗಳಿಗೆ ಊಟ ಮಾಡಿಸುತ್ತಿದ್ದರೆ ಹರೀಶ ಆಚಾರ್ಯರ ಜೊತೆ ನಡೆದ ಮಾತುಕತೆಯ ವಿವರಗಳನ್ನು ಮನೆಯವರಿಗೆ ತಿಳಿಸುತ್ತಿದ್ದನು.
Sorry bro, but eneno aagta ide story Li interest barta illa
ReplyDeleteಕತೆ ಬಹಳಷ್ಟು ಕುತೂಹಲ, ಸೆಕ್ಸ್ ಎಲ್ಲ ಇದೆ
ReplyDelete