ಆಶ್ಚರ್ಯದಿಂದ ಘರಬಡಿದವನಂತೆ ನಿಂತಿದ್ದ ವ್ಯಕ್ತಿಯ ಹೆಗಲ ಮೇಲೆ ಕೈಯಿಟ್ಟು ಅವನನ್ನೆಚ್ಚರಿಸಿದ ಶಿವರಾಮಚಂದ್ರರು..... ಯಾರು ಅಂತ ಗೊತ್ತಾಗಲಿಲ್ಲವಾ ಭಾನುಪ್ರತಾಪ್ ? ಈ ಅರಮನೆ ಮತ್ತು ವಿಶಾಲ ಸೂರ್ಯವಂಶಿ ಸಂಸ್ಥಾನದ ಉತ್ತರಾಧಿಕಾರಿಣಿ. ರಾಣಾಪ್ರತಾಪ್ ಹಾಗು ಸುಧಾಮಣಿಯ ಮುದ್ದಿನ ಕುವರಿ ನಿಮ್ಮೆಲ್ಲರ ಈ ಸಂಸ್ಥಾನದ ಯುವರಾಣಿ ನಿಶಾ ಸೂರ್ಯವಂಶಿ. ಆ ವ್ಯಕ್ತಿ ಭಾನುಪ್ರತಾಪ್ ಹಣೆ ಮೇಲೆ ಮೂಡಿದ ಬೆವರಿನ ಹನಿ ಒರೆಸಿಕೊಳ್ಳುತ್ತ ಮುಖದಲ್ಲಿ ಆತಂಕ ಎದ್ದು ಕಾಣುತ್ತಿದ್ದರೂ ಬಲವಂತದಿಂದ ನಗುವ ಪ್ರಯತ್ನ ಮಾಡುತ್ತ ನಿಶಾಳ ಕಡೆ ಹೆಜ್ಜೆ ಇಡುವಷ್ಟರಲ್ಲೇ ಹೊರಗೆ ಜೈಕಾರದ ಘೋಷವನ್ನು ಕೇಳಿ ಅತ್ತ ತಿರುಗಿದನು.
ಅರಮನೆಯ ವಾರಸುದಾರಳೂ ಮುಂದಿನ ಮಹಾರಾಣಿ ಆಗಮಿಸಿರುವ ವಿಷಯ ಅರಮನೆಯಲ್ಲಿ ಕಾಡ್ಗಿಚ್ಚು ಹಬ್ಬಿದಂತೆ ಹಬ್ಬಿದ್ದು ಅಲ್ಲಿನ ಪ್ರತಿಯೊಬ್ಬ ಸೇವಕರೂ ಅವಳೆದುರಿಗೆ ಮೊಣಕಾಲೂರಿ ಜೈಯಘೋಷಗಳನ್ನು ಕೂಗುತ್ತಿದ್ದರು. ಅಮ್ಮನ ತೋಳಿನಲ್ಲಿದ್ದ ನಿಶಾ ಅವರನ್ನೆಲ್ಲಾ ಕಣ್ಣರಿಳಿಸಿ ನೋಡುತ್ತಿದ್ದಂತೆಯೇ ತನ್ನ ಬಲಗೈ ಮೇಲೆತ್ತಿ ಎಲ್ಲರತ್ತಲೂ ಬೀಸಿದಳು. ಅವಳು ಕೈಯಾಡಿಸಿ ಅವರಿಗೆ ಶಾಂತವಾಗಿರಲು ಸೂಚಿಸಿದಂತೆ ಭಾವಿಸಿದ ಜಯಘೋಷ ಕೂಗುತ್ತಿದ್ದವರೆಲ್ಲ ಎಕ್ದಮ್ ಶಾಂತ ಚಿತ್ತರಾಗಿ ತಮ್ಮಮ್ಮ ತಲೆ ತಗ್ಗಿಸಿ ನಿಂತರು. ನೀತು ಮಗಳನ್ನು ಎಲ್ಲರ ಮುಂದೆ ಕರೆದೊಯ್ದು ಅವರಿಗೆ ತಲೆಯೆತ್ತಿ ನಿಮ್ಮ ಭಾವಿ ಮಹಾರಾಣಿ ಕಡೆ ನೋಡುವಂತೆ ನಿವೇಧನೆ ಮಾಡಿದಾಗ ಎಲ್ಲರೂ ಭಯದಿಂದಲೇ ನಿಶಾಳತ್ತ ನೋಡುತ್ತಿದ್ದರು. ನಿಶಾಳ ಮುಖದಲ್ಲಿರುವ ತೇಜಸ್ಸು ಅವಳ ತುಟಿಗಳಲ್ಲಿನ ಮುಗುಳ್ನಗೆ ಎಲ್ಲರನ್ನು ಒಂದು ರೀತಿ ಸಮ್ಮೋಹನಗೊಳಿಸಿದ್ದು ಎರಡೂ ಕೈಯನ್ನು ಮೇಲೆತ್ತಿ ಅವಳಿಗೆ ವಂಧಿಸಿದರು.
ಶಿವರಾಮಚಂದ್ರ......ಈಗ ಎಲ್ಲರೂ ತೆರಳಿ ಪ್ರಯಾಣದಿಂದ ನಿಮ್ಮ ಯುವರಾಣಿ ದಣಿದಿದ್ದಾರೆ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ನೀವು ಕೆಲಸದಲ್ಲಿ ತೊಡಗಿಕೊಳ್ಳಿರಿ. ಈ ದಿನ ಅರಮನೆಗೆ ಯಾರೇ ಬಂದರು ಸರಿ ಯುವರಾಣಿಯವರ ಅಪ್ಪಣೆಯಿಲ್ಲದೆ ಒಳಗೆ ಪ್ರವೇಶಿಸುಲು ಬಿಡಬಾರದು ಇದು ಅವರ ಕಟ್ಟಾಜ್ಞೆ.
ಅಲ್ಲಿದ್ದ ಸಮಸ್ತ ಸೇವಕರು ಮಗದೊಮ್ಮೆ ನಿಶಾಳಿಗೆ ವಂಧಿಸಿ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲು ಹೊರಟಾಗ ಎಲ್ಲರ ಮುಖದಲ್ಲಿಯೂ ಏನೋ ಪಡೆದುಕೊಂಡ ಸಂತೋಷ ಉಮ್ಮಡಿಸುತ್ತಿತ್ತು.
ನೀತು.....ಗುರುಗಳೇ ಇವರ ಪರಿಚಯ ಗೊತ್ತಾಗಲಿಲ್ಲ.
ಶಿವರಾಮಚಂದ್ರ.....ಇವರ ಹೆಸರು ಭಾನುಪ್ರತಾಪ್ ಅಂತ ನಿಶಾಳ ತಂದೆ ರಾಣಿಪ್ರತಾಪನ ಚಿಕ್ಕಪ್ಪ ಇಲ್ಲೇ ಪಕ್ಕದಲ್ಲಿ ವಾಸಿಸುತ್ತಾರೆ.
ಭಾನುಪ್ರತಾಪ್......ಮೊಮ್ಮಗಳೇ ಹೇಗಿದ್ದೀಯಮ್ಮ ? ನಿನ್ನನ್ನು ಎಲ್ಲ ಕಡೆ ನಾವೆಷ್ಟು ಹುಡುಕಿದೆವು ಎಲ್ಲಿಗೆ ಹೊರಟು ಹೋಗಿದ್ದೆಯಮ್ಮ ? ಬಾ ನಾನು ನಿನ್ನ ತಾತ ಬಾ ಮಗು.......
ನಿಶಾ ಅವರ ಹತ್ತಿರ ಹೋಗಲು ಇಚ್ಚಿಸದೆ ಅವರತ್ತ ತನ್ನ ಕೈ ತೋರಿಸಿ ಹತ್ತಿರ ಬಾರದಂತೆ ಅಳ್ಳಾಡಿಸಿದಳು. ಅದರೂ ಭಾನುಪ್ರತಾಪ್ ನಿಶಾ ಹತ್ತಿರ ತೆರಳಿ ಎತ್ತಿಕೊಳ್ಳಲು ಪ್ರಯತ್ನಿಸಿದಾಗ ಅವರನ್ನು ತಡೆದು ಹಿಂದೆ ಸರಿಯಲು ಹೇಳಿದ ಸೇವಕನೊಬ್ಬ.....ಯುವರಾಣಿಯವರಿಗೆ ನಿಮ್ಮ ಬಳಿ ಬರುವ ಇಚ್ಚೆಯಿಲ್ಲ ಅವರಿಗೆ ತೊಂದರೆಯನ್ನು ನೀಡದೆ ವಿಶ್ರಾಂತಿ ತೆಗೆದುಕೊಳ್ಳಲಿ ನೀವು ಹಿಂದೆ ಸರಿಯಿರಿ.
ಭಾನುಪ್ರತಾಪ್ ಕೋಪದಿಂದ........ನಾನ್ಯಾರೆಂದು ಗೊತ್ತಿದೆ ತಾನೇ ನಿನಗೆ ಸುಮೇರ್ ಸಿಂಗ್.....ನಾನು.....
ಸುಮೇರ್ ಸಿಂಗ್....ನೀವು ನಮ್ಮ ಹಿರಿಯ ಮಹಾರಾಜರ ತಮ್ಮ ಎಂಬುದು ಚೆನ್ನಾಗಿ ತಿಳಿದಿದೆ. ಆದರೆ ಅರಮನೆಯಲ್ಲಿ ನಮಗೆ ಆಜ್ಞೆ ನೀಡುವ ಅಧಿಕಾರ ಕೇವಲ ರಾಜ ರಾಣಿ ಮತ್ತವರ ಮಕ್ಕಳಿಗೆ ಮಾತ್ರ ಇರುವುದು. ಮಹಾರಾಜರು ಮತ್ತು ಮಹಾರಾಣಿ ಸ್ವರ್ಗಸ್ಥರಾಗಿದ್ದು ಅವರ ಏಕೈಕ ಕುವರಿ ಹಾಗು ಸೂರ್ಯವಂಶದ ವಾರಸುದಾರರಾದ ಯುವರಾಣಿಗೆ ಯಾರಿಂದಲೂ ತೊಂದರೆಯಾಗದಂತೆ ಕಾಪಾಡುವ ಕರ್ತವ್ಯ ನನ್ನದು. ಅವರಿಚ್ಚೆಯಿಲ್ಲದೆ ನಿಮ್ಮನ್ನು ಸೇರಿಸಿ ಯಾರನ್ನೂ ಅವರ ಹತ್ತಿರಕ್ಕೆ ಸುಳಿಯುವುದಕ್ಕೂ ಬಿಡುವುದಿಲ್ಲ. ನೀವಿನ್ನೂ ನಮ್ಮ ಯುವರಾಣಿಯ ಸಮಕ್ಷಮ ಗೌರವ ಸೂಚಕವಾಗಿ ವಂದಿಸಿಲ್ಲವೆಂಬ ಸಂಗತಿಯನ್ನು ಗಮನಿಸಿರುವೆ.
ಭಾನುಪ್ರತಾಪ್ ಕೋಪ ಅವಮಾನದಿಂದ ಕುದಿಯುತ್ತಿದ್ದರೂ ಏನೂ ಮಾಡಲಾಗದೆ ನಿಶಾಳ ಮುಂದೆ ಮಂಡಿಯೂರಿ....ಯುವರಾಣಿಗೆ ಜಯವಾಗಲಿ ಎಂದೇಳಿ ಅರಮನೆಯಿಂದಾಚೆ ಹೊರಟು ಹೋದನು.
ನೀತು.....ಗುರುಗಳೇ ಅವರು ನಿಶಾಳಿಗೆ ತಾತನೇ ಆಗಬೇಕಲ್ಲವಾ ಬಹುಶಃ ಅವರಿಗೆ ಬೇಸರ ಆಗಿರಬಹುದು.
ಶಿವರಾಮಚಂದ್ರ......ಅವರ ಬಗ್ಗೆ ಯೋಚಿಸದಿರು ವರ್ಷದ ನಂತರ ಮಗಳು ಮನೆಗೆ ಮರಳಿದ್ದಾಳೆ ಅವಳಿಗೆ ತನ್ನ ತಂದೆ ತಾಯಿ ಬಾಳಿದ ಅರಮನೆಯನ್ನು ತೋರಿಸಬಾರದೇನು.
ನೀತು.....ಆದರೆ ಇವರಿಗೆಲ್ಲಾ ನಿಶಾಳೇ ತಮ್ಮ ಯುವರಾಣಿಯೆಂದು ಹೇಗೆ ತಿಳಿಯಿತು ಗುರುಗಳೇ ?
ಶಿವರಾಮಚಂದ್ರರು ಉತ್ತರಿಸುವ ಮುನ್ನವೇ.......
ಸುಮೇರ್ ಸಿಂಗ್.....ನನ್ನ ಹೆಸರು ಸುಮೇರ್ ಸಿಂಗ್ ನೀವು ಯಾರು ಎಂಬುದು ನನಗೆ ತಿಳಿದಿಲ್ಲ ಅದಕ್ಕೆ ಮೊದಲೇ ಕ್ಷಮೆಯಾಚಿಸುವೆ. ಈ ಅರಮನೆಯ ಮತ್ತು ಸೂರ್ಯವಂಶಿಗಳ ರಕ್ಷಣೆಯ ಹೊಣೆ ನನ್ನ ಜವಾಬ್ದಾರಿ ಮತ್ತು ಕರ್ತವ್ಯವೂ ಹೌದು. ನಮ್ಮ ಅನ್ನದಾತೆಯಾದ ಯುವರಾಣಿಯವರು ನಿಮ್ಮನ್ನು ಬಿಟ್ಟು ಬೇರೆಯವರ ಹತ್ತಿರಕ್ಕೂ ಹೋಗದಿರುವುದು ನೀವು ಅವರಿಗೆ ತಾಯಿಯ ಸಮಾನ ಎಂಬುದು ಸೂಚಿಸುತ್ತದೆ. ಹೀಗೆ ಬನ್ನಿ ನಾವು ಯುವರಾಣಿಯವರನ್ನು ಯಾವ ಆಧಾರದಲ್ಲಿ ಗುರುತಿಸಿದೆವೆಂದು ತೋರಿಸುತ್ತೇನೆ.
ನೀತು ಪ್ರಶ್ನಾರ್ಥಕವಾಗಿ ಅವನನ್ನು ನೋಡುತ್ತ ಅವನ ಹಿಂದೆಯೇ ನಡೆದರೆ ಗುರುಗಳ ಜೊತೆ ಹರೀಶ ಮತ್ತು ಮಕ್ಕಳೂ ಹಿಂಬಾಲಿಸುತ್ತ ನಡೆದರು. ಎಲ್ಲರೂ ಅರಮನೆಯ ಪರಾಂಗಣದಿಂದ ಭವ್ಯವಾಗಿದ್ದ ಹಾಲನ್ನು ತಲುಪಿದಾಗ ಎದುರಿನ ಗೋಡೆ ಹಾಕಲಾಗಿದ್ದ ವಿಶಾಲ ಚಿತ್ರಪಟದ ಕಡೆ ಎಲ್ಲರ ಗಮನ ಹರಿಯಿತು.
ಸುಮೇರ್ ಸಿಂಗ್....ಇವರು ನಮ್ಮ ಮಹರಾಜ ರಾಣಾಪ್ರತಾಪ್ ಮತ್ತು ಮಹರಾಣಿ ಸುಧಾಮಣಿ ದೇವಿಯವರು.
ನಿಶಾಳನ್ನು ಹೆತ್ತ ತಂದೆ ತಾಯಿಯರ ಚಿತ್ರಪಟವನ್ನು ನೋಡಿ ಎಲ್ಲರು ಸ್ತಂಭೀಭೂತರಾಗಿದ್ದರೆ ಅವರ ವ್ಯಕ್ತಿತ್ವವೂ ಚಿತ್ರದಲ್ಲಿ ಕಾಣಿಸುತ್ತಿತ್ತು. ಅತ್ಯಂತ ಮನಮೋಹಕ ಸೌಂದರ್ಯ ಒಡತಿಯಾದ ಸುಧಾಮಣಿಗೆ ಸರಿಸಾಟಿಯಲ್ಲದಿದ್ದರೂ ಎಂತಹವರನ್ನಾದರೂ ತನ್ನತ್ತ ಸೆಳೆಯುವ ಆಕರ್ಶಕ ವ್ಯಕ್ತಿತ್ವದ ಮಾಲೀಕನಂತಿದ್ದ ರಾಣಾಪ್ರತಾಪ್. ತಾಯಿಯ ಅಕ್ಷರಶಃ ತದ್ರೂಪಿನಂತಿದ್ದ ನಿಶಾ ಸುಧಾಮಣಿಯವರ ಮಗಳೆಂದು ಗುರುತಿಸುವುದು ಯಾರಿಗೂ ಕಷ್ಟಕರವಾದ ಸಂಗತಿಯೇ ಆಗಿರಲಿಲ್ಲ. ನಿಶಾ ತನ್ನ ಹೆತ್ತ ತಂದೆ ತಾಯಿಯ ಚಿತ್ರ ನೋಡಿದಾಗ ಮಮತೆಯ ಸೆಳೆತವೋ ಏನೋ ಎಂಬಂತೆ ಅವಳ ಕಣ್ಣಿನಿಂದ ಮುತ್ತಿನ ಹನಿಯ ರೀತಿಯ ಕಂಬನಿ ಜಿನುಗುತ್ತಿದ್ದವು.
ನೀತು ಮಗಳ ಕಣ್ಣೀರನ್ನೊರೆಸಿ........ಚಿನ್ನಿ ಅಳಬಾರದು ಮಗಳೇ ನೋಡು ಪಪ್ಪ....ಮಮ್ಮ ನಿನ್ನನ್ನೇ ನೋಡುತ್ತಿದ್ದಾರೆ ಅವರಿಗೆ ಕೈ ಮುಗಿದು ಆಶೀರ್ವಾದ ಪಡೆದುಕೋ... ಎಂದು ಮಗಳನ್ನು ಆಕೆಯ ಹೆತ್ತವರ ಚಿತ್ರಪಟದೆದುರು ನಿಲ್ಲಿಸಿದಳು. ನಿಶಾ ಚಿತ್ರಪಟದತ್ತಲೂ ಅಮ್ಮನತ್ತಲೂ ತಿರುಗಿ ನೋಡಿ ಅಮ್ಮನ ಅನುಕರಣೆ ಮಾಡುತ್ತ ತನ್ನ ಹೆತ್ತ ತಂದೆ ತಾಯಿಯ ಚಿತ್ರಪಟಕ್ಕೆ ಕೈ ಮುಗಿದು ಪುನಃ ಅಮ್ಮನತ್ತ ತೆರಳಿ ತನ್ನನ್ನೆತ್ತಿಕೊಳ್ಳೆಂದು ತನ್ನೆರಡೂ ಕೈಗಳನ್ನು ಎತ್ತಿ ಹಿಡಿದಳು. ಅಲ್ಲಿಗೆ ಬಂದ ಸೇವಕನೊಬ್ಬ ವಂದಿಸಿ..... ಯುವರಾಣಿಗೆ ಶುಭವಾಗಲಿ. ಸೂರ್ಯವಂಶಿ ಕಂಪನಿ ಕಡೆಯಿಂದ ಕೆಲವರು ಯುವರಾಣಿಯವರ ದರ್ಶನಾಭಿಶಾಷೆಯಿಂದ ಅರಮನೆಗೆ ಬಂದಿದ್ದಾರೆ ಅವರಿಗೇನು ಹೇಳುವುದು ಅಪ್ಪಣೆಯಾಗಲಿ.
ಶಿವರಾಮಚಂದ್ರ ಮತ್ತು ಸುಮೇರ್ ಸಿಂಗ್ ಇಬ್ಬರೂ ನೀತುವಿನ ಕಡೆ ನೋಡಿದರೆ ಅವಳಿಗೂ ಎನೂ ತೋಚದೆ ಗಂಡನತ್ತ ನೋಡಿದಳು.
ಹರೀಶ......ಅವರನ್ನು ಬೇಟಿಗೆ ನಿಗಧಿಯಾದ ಸ್ಥಾನದಲ್ಲಿ ಕೂರಿಸಿರು ಯುವರಾಣಿ ಕೆಲ ಹೊತ್ತಿನ ನಂತರ ಬಂದು ಬೇಟಿಯಾಗುತ್ತಾರೆ.
ಸೇವಕ ವಂಧಿಸಿ ತೆರಳಿದಾಗ ನೀತು.....ರೀ ಅವರು ಯಾರೆಂದು ಸಹ ಗೊತ್ತಿಲ್ಲದಿರುವಾಗ ಬೇಟಿಯಾಗುವುದು ಸರಿಯಾ ?
ನೀತು ಗಂಡನೊಡನೆ ಕನ್ನಡದಲ್ಲಿ ಮಾತನಾಡಿದ ಕಾರಣ ಸುಮೇರ್ ಸಿಂಗಿಗೆ ಅರ್ಥವಾಗದಿದ್ದರೂ ಶಿವರಾಮಚಂದ್ರ....ಬಂದಿರುವವರು ಈ ಸಂಸ್ಥಾನದ ಅಧೀನ ಕಂಪನಿಗಳ ನಿಷ್ಠಾವಂತ ಸೇವಕರು ಮಗಳೇ ಅವರೆದುರಿಗೆ ನಿಶಾ ಹೋಗಬೇಕಾದ್ದು ಅತ್ಯವಶ್ಯಕ. ಮಗಳನ್ನು ರೆಡಿ ಮಾಡಿ ಅವರನ್ನು ಬೇಟಿಯಾಗು ನಾವೂ ಸುಮೇರ್ ಜೊತೆ ಅಲ್ಲಿಗೇ ಬರುತ್ತೇವೆ.
ಸುಮೇರ್ ಸಿಂಗ್ ನಾಲ್ವರು ಮಹಿಳಾ ಸೇವಕಿಯರಿಗೆ ಯುವರಾಣಿ ಅವರ ತಾಯಿ ತಂದೆಯ ಕೊಠಡಿಯಲ್ಲೇ ವಿಶ್ರಾಂತಿ ಪಡೆಯುತ್ತಾರೆ ಅವರನ್ನು ಕರೆದೊಯ್ಯುವಂತೇಳಿ ಮಿಕ್ಕವರಿಗೂ ಕೋಣೆ ತೋರಿಸಿ ಎಂದು ಸೂಚಿಸಿ ಗುರುಗಳ ಜೊತೆ ಹೊರನಡೆದನು. ಅರಮನೆಯ ಮಹಿಳಾ ಸೇವಕಿಯರು ನೀತು ಮತ್ತು ನಿಶಾರನ್ನು ಸುಧಾಮಣಿಯ ಕೋಣೆಗೆ ಕರೆತಂದು.....ಇದು ನಮ್ಮ ಪೂರ್ವ ಮಹಾರಾಜ ರಾಣಿಯ ವಯಕ್ತಿಕ ಕೋಣೆ ದಯಮಾಡಿಸಿ ನಿಮಗೆ ಏನೇ ಅವಶ್ಯಕತೆಯಿದ್ದರೆ ನಾವು ಹೊರಗೆ ಕಾದಿರುತ್ತೇವೆ ಆಜ್ಞಾಪಿಸಿ. ಮಕ್ಕಳಿಗೂ ಬೇರೆ ಬೇರೆ ಕೊಠಡಿಗಳನ್ನು ತೋರಿಸಿ ಸೆವಕಿಯರು ಹಿಂದೆ ಸರಿದು ನಿಂತರೆ ನೀತು ಕೋಣೆಯ ಬಾಗಿಲನ್ನು ತಳ್ಳಿ ಗಂಡ ಮಗಳ ಜೊತೆ ಒಳಗೆ ಹೊಕ್ಕಳು.
ಅತ್ಯಂತ ಸುಂದರವಾಗಿ ಅಲಂಕರಿಸಲಾಗಿದ್ದ ಭವ್ಯವಾದ ಕೊಠಡಿ ನೋಡಿ ದಂಪತಿಗಳು ವಿಸ್ಮಿತರಾದರೆ ನಿಶಾ ಅಮ್ಮನ ತೋಳಿನಿಂದ ಕೆಳಗಿಳಿದು ರೂಮಿನ ತುಂಬ ಓಡಾಡಿ ಎಲ್ಲವನ್ನು ನೋಡುತ್ತಿದ್ದಳು.
ನೀತು......ರೀ ನಾವು ಪುಸ್ತಕದಲ್ಲಿ ಮಾತ್ರ ರಾಜರ ಬಗ್ಗೆ ಓದಿದ್ದೆವು ಈಗಲೂ ಜನರ ಮನಸ್ಸಿನಲ್ಲಿ ರಾಜಮನೆತನದ ಬಗ್ಗೆ ಇಷ್ಟು ಗೌರವ ಇರುವುದನ್ನು ಕಂಡು ಆಶ್ಚರ್ಯದ ಜೊತೆಗೆ ಸಂತೋಷವಾಗುತ್ತಿದೆ.
ಹರೀಶ.....ನಂಬಿದ ಜನರಿಗೆ ಒಳ್ಳೆಯದನ್ನೇ ಮಾಡಿದ ಮಹಾರಾಜರ ಮತ್ತವರ ಮನೆತನದ ಬಗ್ಗೆ ಅವರಿಗಿರುವ ಗೌರವವನ್ನು ಮೆಚ್ಚಬೇಕು. ಬೇಗ ಚಿನ್ನಿಯನ್ನು ರೆಡಿ ಮಾಡು ಯಾರು ಬಂದಿರುವರೋ ಹೋಗಿ ಅವರನ್ನು ಬೇಟಿಯಾಗಿ ಬರೋಣ ಇವಳೂ ಅರಮನೆಯಲ್ಲಿ ಸ್ವಲ್ಪ ಆಟವಾಡಲಿ.
ನೀತು ಬರುವಾಗಲೇ ತನ್ನೊಂದಿಗೆ ಮಗಳ ಎರಡು ಬಟ್ಟೆ ತಂದಿದ್ದು ನಿಶಾಳನ್ನು ಫ್ರೆಶ್ ಮಾಡಿಸಿ ಅವಳನ್ನು ರೆಡಿ ಮಾಡಿದ ನಂತರ ನೀತು ಸಹ ರೆಡಿಯಾಗಿ ಗಂಡನೊಟ್ಟಿಗೆ ಬಂದಿರುವಶರನ್ನು ಬೇಟಿಯಾಗಲು ಹೊರಟಳು. ಬಿಳಿಯ ಸುಂದರವಾದ ಫ್ರಾಕ್ ತೊಟ್ಟಿದ್ದ ನಿಶಾ ಅಕ್ಷರಶ ಯುವರಾಣಿಯಂತೆ ಕಂಗೊಳಿಸುತ್ತಿದ್ದು ಅವಳನ್ನು ನೋಡಿದಾಕ್ಷಣ ಬಂದಿದ್ದವರು ಎದ್ದು ನಿಲ್ಲುತ್ತ ತಲೆಬಾಗಿ ವಂದಿಸಿದರು. ನೀತು ಮತ್ತು ಹರೀಶ ತಾವೂ ಪ್ರತಿ ವಂದನೆ ಮಾಡಿ ಎಲ್ಲರನ್ನು ಕುಳಿತುಕೊಳ್ಳಲು ತಿಳಿಸಿ ತಾವೂ ಕುಳಿತಾಗ ನಿಶಾ ಅಮ್ಮನ ಮಡಿಲಿಗೇರಿ ಕುಳಿತಳು. ಅರಮನೆಗೆ ಬಂದಿದ್ದವರಲ್ಲಿ ಹಿರಿಯರಾದವರು ಎದ್ದು ನಿಂತು......
ವ್ಯಕ್ತಿ....ನನ್ನ ಹೆಸರು ರಾವ್ ಅಂತ ಮೇಡಂ. ನಾನು ಸೂರ್ಯವಂಶಿ ಸಂಸ್ಥಾನದ ಅಧೀನದಲ್ಲಿರುವ ಕಂಪನಿಗಳ ಕಾರ್ಯವೈಖರಿಯನ್ನು ನೋಡಿಕೊಳ್ಳುವ ಬೋರ್ಡಿನಲ್ಲಿ ಕಾರ್ಯಾಧ್ಯಕ್ಷನಾಗಿದ್ದು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೀನಿ. ಮಹಾರಾಜ ರಾಣಾಪ್ರತಾಪ್ ನಿಧನರಾದ ಬಳಿಕ ಕಂಪನಿಯ ಎಲ್ಲಾ ಜವಾಬ್ದಿರಿಗಳನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಇನ್ನು ಮುಂದೆ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಯುವರಾಣಿಯವರ ಸೂಚೆನೆ ತಿಳಿಯುವುದಕ್ಕೆ ನಾವಿಲ್ಲಿಗೆ ಬಂದಿದ್ದೇವೆ ನಮಗೇನು ಆಜ್ಞೆಯಿದೆ.
ಅವರು ಮಾತು ಮುಗಿಸಿ ನೀತು ಕಡೆ ನೋಡಿದರೆ ಉಳಿದ ಎಲ್ಲರೂ ಅವಳನ್ನೇ ನೋಡುತ್ತಿದ್ದರು. ಸುಮೇರ್ ಸಿಂಗ್ ನಿಷ್ಟಾವಂತ ರಕ್ಷಕನ ರೀತಿ ನೀತುವಿನ ಹಿಂದೆ ನಿಂತಿದ್ದರೆ ಎದುರು ಕುಳಿತಿದ್ದ ರಾಮಚಂದ್ರ ಗುರುಗಳು ಧೈರ್ಯವಾಗಿ ಮಾತನಾಡುವಂತೆ ನೀತುಳಿಗೆ ಕಣ್ಣಿನಲ್ಲೇ ಸೂಚಿಸಿದರು. ನಿಶಾ ಎಲ್ಲರತ್ತ ಪಿಳಿಪಿಳಿ ದೃಷ್ಟಿ ಹಾಯಿಸಿ ಅಪ್ಪನತ್ತ ಬಾಗಿ ಅವನ ಕಿವಿಯಲ್ಲೇನೋ ಪಿಸುಗುಡುತ್ತಿದ್ದಳು.
ನೀತು......ನಾವೀಗ ನಿಮ್ಮ ಯುವರಾಣಿಗೆ ಅರಮನೆ ಮತ್ತು ಅವಳ ತಾಯ್ನಾಡಿನ ಪರಿಚಯ ಮಾಡಿಸುವ ಸಲುವಾಗಿ ಕರೆತಂದಿದ್ದೀವಿ. ಸಧ್ಯಕ್ಕೆ ಕಂಪನಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆಯೋ ಅದೇ ರೀತಿ ಮುಂದುವರಿಯಲಿ ಮುಂದೇನು ಬದಲಾವಣೆ ಮಾಡಬೇಕೋ ಅದನ್ನು ಯೋಚಿಸುವೆ. ನನ್ನ ಹೆಸರು ನೀತು ಸೂರ್ಯಪ್ರತಾಪರ ಮಾನಸಪುತ್ರಿ ರಾಣಾಪ್ರತಾಪರ ತಂಗಿ. ನನ್ನ ಅಣ್ಣನ ಮಗಳಿಗೆ ತಂದೆ ತಾಯಿಯ ಪ್ರೀತಿಯಿಂದ ವಂಚಿತಳಾಗಬಾರದೆಂದು ನಾನೇ ಇವಳನ್ನು ದತ್ತು ಪಡೆದು ನನ್ನ ರಕ್ಷಣೆ ಮತ್ತು ಮಮತೆಯಲ್ಲಿ ಬೆಳೆಸುತ್ತಿರುವೆ. ಇವಳಿನ್ನೂ ತುಂಬ ಚಿಕ್ಕವಳು ವಯಸ್ಕಳಾಗುವ ತನಕ ಕಂಪನಿಯ ವ್ಯವಹಾರಗಳು ಹೇಗೆ ಯಾವ ರೀತಿ ನಡೆಯಬೇಕೆಂದು ನಮ್ಮೆಲ್ಲರ ಮುಂದಿನ ಬೇಟಿಯಲ್ಲಿ ತಿಳಿಸುತ್ತೇನೆ. ನೀವೆಲ್ಲರೂ ನಿಮ್ಮ ಹೆಸರು... ವಿಳಾಸ...ಫೋನ್ ನಂ..ಮತ್ತು ಕಂಪನಿಯಲ್ಲಿ ಯಾವ ಹುದ್ದೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದೀರಿ ಅಂತ ವಿವರವಾಗಿ ಬರೆದುಕೊಡಿ ನಾನೇ ನಿಮ್ಮನ್ನು ಸಂಪರ್ಕಿಸುತ್ತೇನೆ.
ಅಷ್ಟನ್ನು ಹೇಳಿ ನೀತು ಮೇಲೆದ್ದು ಎಲ್ಲರಿಗೂ ವಂದಿಸಿದಾಗ ಅವರೂ ಎದ್ದು ನಿಲ್ಲುತ್ತ ಬಾಗಿ ನಮಿಸಿದರು. ಅವರಲ್ಲೊಬ್ಬಳ ಮೇಲೆ ದೃಷ್ಟಿ ಹಾಯಿಸಿದ ನೀತು.....ನಿನ್ನ ಹೆಸರೇನು ?
ಆ ಹುಡುಗಿ ಗಾಬರಿಗೊಳ್ಳುತ್ತ.....ಪಾವನ...ಪಾವನ ಅಂತ ಮೇಡಂ.
ನೀತು....ನೀವೆಲ್ಲರೂ ಆಫೀಸಿಗೆ ತೆರಳಿ ಪಾವನ ನೀನೊಬ್ಬಳು ನನ್ನ ಜೊತೆಯಲ್ಲಿರು ಕೆಲಸವಿದೆ.....ಎನ್ನುತ್ತ ಮುನ್ನಡೆದಳು.
ಪಾವನ ಕಂಪನಿಯ ಇತರರ ಕಡೆ ನೋಡಿ ಹೆದರುತ್ತಲೇ ನೀತುವಿನ ಹಿಂದೆ ತಾನೂ ಹೊರಟಳು. ಇಬ್ಬರೂ ಅರಮನೆಯ ಮೂರನೇ ಅಂತಸ್ತಿನ ಬಾಲ್ಕನಿ ತಲುಪಿದಾಗ ನಿಶಾ ಅಮ್ಮನ ತೋಳಿಂದ ಕೆಳಗೆ ಇಳಿದು ಬಾಲ್ಕನಿಯ ಕಂಬಗಳ ಬಳಿಗೋಡಿ ಹೊರಗಡೆ ಇಣುಕುತ್ತ ಏನನ್ನೋ ಕಂಡು ಖುಷಿಯಿಂದ ಕೈ ತೋರಿಸಿ ಮಮ್ಮ.....ಮಮ್ಮ.... ಎಂದು ಕಿರುಚಿಕೊಂಡಳು. ನೀತು ಮಗಳ ಹತ್ತಿರ ತೆರಳಿ ಹೊರಗಡೆ ನೋಡಿದಾಗ ಆರೇಳು ಆನೆಗಳು....ಹತ್ತಾರು ಕುದುರೆಗಳು ಹಾಗು ಕೆಲವು ದೊಡ್ಡ ದೊಡ್ಡ ನಾಯಿಗಳು ಅಲ್ಲಲ್ಲಿ ತಿರುಗಿಡುತ್ತಿದ್ದವು. ನೀತು ಹತ್ತಿರ ಹರೀಶನೂ ಬಂದಾಗ ಅವನ ಹಿಂದೆಯೇ ಸುರೇಶ ಬಂದಿದ್ದು.......ಅಮ್ಮ ನಾವು ಹೊರಗೆ ಸುತ್ತಾಡಬಹುದಾ ?
ಇವರಿದ್ದಲ್ಲಿಗೆ ಆಗಮಿಸಿದ ಶಿವರಾಮಚಂದ್ರರು.....ಎಲ್ಲಿ ಬೇಕಿದ್ದರೂ ಓಡಾಡಬಹುದು ಸುಮೇರ್ ಮಕ್ಕಳಿಗೆ ಅರಮನೆ ಮತ್ತು ಸುತ್ತಲೂ ತೋರಿಸುವ ಏರ್ಪಾಡು ಮಾಡು. ಅಣ್ಣಂದಿರು ಮತ್ತು ಅಕ್ಕಂದಿರು ಹೊರಗೆ ಹೊರಟಿದ್ದನ್ನು ನೋಡುತ್ತಿದ್ದ ನಿಶಾ...ಮಮ್ಮ...ನಾನೂ ಹೋತಿನಿ ಎಂದು ಅಮ್ಮನತ್ತ ನೋಡತೊಡಗಿದಳು. ಹರೀಶ ಮುಂದೆ ಬಂದು ಮಗಳನ್ನೆತ್ತಿಕೊಳ್ಳುತ್ತ ನಾನು ನೀನು ಹೋಗೋಣ ಎಂದು ಹೊರಟರೆ ಗುರುಗಳೂ ನಗುತ್ತ ತೆರಳಿದರು.
ನೀತು.....ಪಾವನ ನೀನೀ ಕಂಪನಿಯಲ್ಲಿ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವೆ ಮತ್ತು ಯಾವ ಸ್ಥಾನಮಾನದಲ್ಲಿ ಹೇಳುತ್ತೀಯ ?
ಪಾವನ......ಮೇಡಂ ಕಂಪನಿಗೆ ಸೇರಿ ಮೂರು ವರ್ಷಗಳಾಗಿದೆ ಈಗ ಜೂನಿಯರ್ ಅಕೌಂಟ್ಸ್ ಮಾನೇಜರ್ ಹುದ್ದೆ ನಿರ್ವಹಿಸುತ್ತಿರುವೆ.
ನೀತು.....ನಿನ್ನ ಫ್ಯಾಮಿಲಿಯಲ್ಲಿ ಯಾರೆಲ್ಲ ಇದ್ದೀರ ?
ಪಾವನ.....ಮೇಡಂ ನಾನೊಬ್ಬಳು ಅನಾಥೆ ಸೂರ್ಯವಂಶಿ ಅವರ ಸಂಸ್ಥಾನದ ಆಶ್ರಮದಲ್ಲಿಯೇ ನಾನು ಬೆಳೆದಿದ್ದು. ಐದು ವರ್ಷಗಳ ಹಿಂದೆ ಸುಧಾಮಣಿ ಅಕ್ಕ ಕ್ಷಮಿಸಿ ಮಹಾರಾಣಿಯವರು ಆಶ್ರಮಕ್ಕೆ ಬೇಟಿ ನೀಡಿದ್ದಾಗ ಅವರ ಪರಿಚಯವಾಗಿ ಆತ್ಮೀಯತೆ ಬೆಳೆಯಿತು. ಅವರು ನನ್ನನ್ನು ತಂಗಿಯಂತೆಯೇ ಟ್ರೀಟ್ ಮಾಡುತ್ತಿದ್ದರ ಜೊತೆಗೆ ತನ್ನನ್ನು ಅಕ್ಕ ಎಂದು ಸಂಭೋದಿಸುವಂತೆ ಆಜ್ಞೆಯೂ ಮಾಡಿದ್ದರು. ನನ್ನ ಪದವಿ ಮುಗಿದ ನಂತರ ಅವರದ್ದೇ ಕಂಪನಿಯಲ್ಲಿ ಉದ್ಯೋಗ ನೀಡಿದ್ದಲ್ಲದೆ ವಾಸ ಮಾಡುವುದಕ್ಕೆ ಕಂಪನಿಯ ಕಡೆಯಿಂದ ಒಂದು ಮನೆಯನ್ನೂ ಕೊಡಿಸಿದರು. ಅವರ ಉಪಕಾರದ ಋಣವನ್ನು ಏಳು ಜನ್ಮದಲ್ಲಿಯೂ ನನ್ನಿಂದ ತೀರಿಸಲು ಸಾಧ್ಯವಿಲ್ಲ ಮೇಡಂ.
ನೀತು ಅವಳ ಭುಜ ತಟ್ಟುತ್ತ.....ನನಗೂ ನೀನು ತಂಗಿಯ ಸಮಾನ ನನ್ನನ್ನೂ ಅಕ್ಕ ಅಂತಲೇ ಕರಿ. ಈಗ ಕಂಪನಿಯ ಕಾರ್ಯಗಳೆಲ್ಲವೂ ಸುಗಮವಾಗಿ ನಡೆಯುತ್ತಿದೆಯಾ ಅಥವ ಯಾವುದಾದರು ತೊಂದರೆ ಇದೆಯಾ ?
ಪಾವನ.....ನನಗೆ ತಿಳಿದಿರುವ ಮಟ್ಟಿಗೆ ಯಾವುದೇ ತೊಂದರೆಗಳಿಲ್ಲ ಇದರೆ ಹೊಸ ಪ್ರಾಜೆಕ್ಟ್ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ ನಮ್ಮ ಕಂಪನಿಯಲ್ಲಿ ಅದನ್ನು ಅಪ್ರೂವ್ ಮಾಡಿ ಕಾಂಟ್ರಾಕ್ಟಿಗೆ ಸಹಿಯನ್ನು ಮಾಡುವ ಅಧಿಕಾರ ಯಾರಿಗೂ ಇಲ್ಲ. ಇದರ ಜೊತೆ ಬ್ಯಾಂಕಿನಿಂದ ಕಂಪನಿಯ ದಿನನಿತ್ಯದ ಖರ್ಚು ವೆಚ್ಚಗಳು ಮತ್ತು ಕೆಲಸದವರಿಗೆ ಸಂಬಳ ನೀಡಲು ಮಾತ್ರ ಹಣ ತೆಗೆಯಬಹುದಾಗಿದೆ ಮಿಕ್ಕಿದ ಯಾವ ಪ್ರಾಜೆಕ್ಟುಗಳಿಗೂ ಅಕೌಂಟಿನಿಂದ ಹಣ ತೆಗೆಯಲಾಗುತ್ತಿಲ್ಲ.
ನೀತು.....ಇದೊಂದು ದೊಡ್ಡ ಸಮಸ್ಯೆ ನೋಡೋಣ ಸಧ್ಯದಲ್ಲಿಯೇ ಇದನ್ನು ಬಗೆಹರಿಸುವತ್ತ ನಾನು ಗಮನ ಹರಿಸುವೆ. ನಿನ್ನ ನಂ.. ನನಗೆ ಕೊಡು ನಿನ್ನ ಹತ್ತಿರ ನನ್ನ ನಂ.. ಇರಲಿ ಆದರೆ ಬೇರ್ಯಾರಿಗೂ ನಂ.. ಕೊಡಬಾರದು. ಯಾವುದೇ ರೀತಿ ಸಮಸ್ಯೆಗಳಿದ್ದರೂ ನನಗೆ ತಿಳಿಸು ನಾನೂ ನಿನ್ನೊಡನೆ ಪ್ರತಿನಿತ್ಯ ಸಂಪರ್ಕದಲ್ಲಿರುತ್ತೀನಿ.
ಪಾವನ.....ಖಂಡಿತವಾಗಿಯೂ ಮೇಡಂ.
ಇಬ್ಬರೂ ಮಾತನಾಡುತ್ತಿರುವಾಗಲೇ ಹೊರಗೆ ನಿಶಾಳ ಕಿರುಚಾಟವು ಜೋರಾಗಿ ಕೇಳಿಸಿ ಗ್ಯಾಲರಿಯಿಂದ ಬಗ್ಗಿ ನೋಡಿದರೆ ಸುರೇಶಣ್ಣ ಮತ್ತು ಸುಮೇರ್ ಸಿಂಗ್ ಜೊತೆ ಆನೆಯ ಮೇಲೆ ಕುಳಿತಿದ್ದ ನಿಶಾ ಅದರ ಸವಾರಿ ಮಾಡುತ್ಠ ಖುಷಿಯಿಂದ ಕಿರುಚಾಡುತ್ತಿದ್ದಳು. ನೀತು ಕೆಳಗೆ ಹೊರಟಾಗ ಪಾವನ ಕೂಡ ಅವಳ ಹಿಂದೆಯೇ ಹೆಜ್ಜೆಹಾಕುತ್ತ ಇಬ್ಬರೂ ನಿಶಾ ಕುಳಿತಿದ್ದ ಆನೆಯ ಬಳಿ ಬಂದರು.
ನೀತು......ಸುಮೇರ್ ಮಗಳು ಜೋಪಾನ ಸ್ವಲ್ಪ ಜಾಸ್ತಿಯೇ ತಂಟೆ ಮಾಡ್ತಾಳೆ...ಸುರೇಶ ಚಿನ್ನಿ ಹುಷಾರು.
ಸುಮೇರ್....ಏನೂ ಚಿಂತಿಸದಿರಿ ಮೇಡಂ ಯುವರಾಣಿಯ ರಕ್ಷಣೆಗೆ ನಾನೇ ಆನೆಯ ಮೇಲೆ ಕುಳಿತಿರುವೆ.
ಅಮ್ಮನನ್ನು ಕಂಡು ನಿಶಾ ಜೋರಾಗಿ ಮಮ್ಮ....ಮಮ್ಮ.....ಎಂದು ಕೈ ಬೀಸುತ್ತ ಸಂತೋಷದಲ್ಲಿದ್ದಳು. ಗಿರೀಶ...ರಶ್ಮಿ...ನಯನ...ದೃಷ್ಟಿ ಈ ನಾಲ್ವರೂ ಮತ್ತೊಂದು ಆನೆಯಲ್ಲಿ ಕುಳಿತಿದ್ದು ಅರಮನೆಯಲ್ಲಿನ ಆವರದಲ್ಲಿ ಸುತ್ತಾಡುತ್ತಿದ್ದರು. ಹರೀಶನೂ ಎರಡೂ ಆನೆಗಳ ಮೇಲೆ ಗಮನವಿಟ್ಟು ಮಕ್ಕಳಿಗೆ ಹುಷಾರಾಗಿ ಹಿಡಿದುಕೊಂಡು ಕುಳಿತಿರೆಂದು ಸೂಚನೆ ನೀಡುತ್ತ ಎಲ್ಲರನ್ನು ಗಮನಿಸಿಕೊಳ್ಳುತ್ತಿದ್ದನು.
ಪಾವನ.....ಮೇಡಂ ನಾನಿನ್ನು ಆಫೀಸಿಗೆ ಹೊರಡಲಾ ?
ನೀತು........ನಿನ್ನನ್ನು ನಾನು ಇಲ್ಲೇ ಇರುವಂತೆ ಹೇಳಿದ್ದನ್ನು ಎಲ್ಲರೂ ನೋಡಿದ್ದಾರಲ್ಲ ನಮ್ಮ ಜೊತೆ ಊಟ ಮಾಡಿದ ನಂತರವೇ ನೀನು ಹೋಗುವುದಕ್ಕೆ ಪರ್ಮಿಷನ್ ಕೊಡುವೆ ಆದರೆ ನೀನು ನನ್ನ ಪುನಃ ಮೇಡಂ ಅಂತಲೇ ಕರೆಯುತ್ತಿದ್ದೀಯಲ್ಲ.
ಪಾವನ.....ಸಾರಿ ಮೇಡಂ....ಸಾರಿ....ಸಾರಿ...ಅಕ್ಕ.....
ಮಕ್ಕಳೆಲ್ಲರೂ ಅರಮನೆಯನ್ನು ಸುತ್ತಾಡಿ ಸಂತೋಷದಿಂದ ಸಮಯ ಕಳೆಯುತ್ತಿದ್ದರೆ ನಿಶಾಳಿಗಂತು ಆನೆ...ಕುದುರೆ....ನಾಯಿಗಳ ಜೊತೆ ಇಡುವುದೇ ಅಮೂಲ್ಯ ಸಂಪತ್ತು ದೊರಕಿದಂತಾಗಿತ್ತು. ಅತ್ಯಂತ ರೋಷಭರಿತ ನಾಯಿಗಳೂ ಸಹ ನಿಶಾಳ ಸುತ್ತ ಬಾಲವನ್ನಳ್ಳಾಡಿಸಿ ಸುತ್ತುವುದು ಅವಳು ಹೇಳಿದಂತೆ ಕೇಳುತ್ತಿರುವುದನ್ನು ನೋಡಿಯೇ ಸುಮೇರ್ ಅಚ್ಚರಿಗೊಂಡಿದ್ದನು. ಮಧ್ಯಾಹದ ಭೋಜನಕ್ಕೆ ತಮ್ಮ ಯುವರಾಣಿ ಅರಮನೆ ಬಂದಿರುವ ಖುಷಿಯಲ್ಲಿ ರಾಜಸ್ಥಾನದಲ್ಲಿನ ವಿಶೇಷ ತಿನಿಸುಗಳನ್ನು ತಯಾರಿಸಲಾಗಿತ್ತು. ಅರಮನೆಯ ವಿಶಾಲ ಡೈನಿಂಗ್ ಟೇಬಲ್ಲಿನಲ್ಲಿ ಎಲ್ಲರೂ ಕುಳಿತಾಗ ಅಮ್ಮನ ಮಡಿಲಿನಲ್ಲಿ ನಿಂತ ನಿಶಾ ತನ್ನ ಕಣ್ಣಿಗೇನು ಇಷ್ಟವಾಗುತ್ತದೋ ಅದನ್ನೇ ತೋರಿಸಿ ಅಮ್ಮನಿಂದ ತಿನ್ನಿಸಿಕೊಂಡು ಊಟ ಮುಗಿಸಿದ ನಂತರ ಕೆಳಗಿಳಿದು ಪುನಃ ಹೊರಗೋಡಲು ರೆಡಿಯಾದಳು.
ನೀತು...ಚಿನ್ನಿ ಆಡಿದ್ದು ಸಾಕು ನಾವೀಗ ಮನೆಗೆ ಹೋಗಬೇಕು ಇಲ್ಲಿಗೆ ಮುಂದಿನ ಸಲ ಬಂದಾಗ ನಿನಗಿಷ್ಟ ಬಂದಷ್ಟು ಆಡುವಂತೆ ಆಯ್ತಾ.
ಅಮ್ಮನ ಮಾತಿನಿಂದ ನಿಶಾ ನಿರಾಶೆಗೊಂಡರೂ ಏನೂ ಹೇಳದೇ ಅಮ್ಮನನ್ನು ಒರಗಿಕೊಂಡು ನಿಂತಳು. ಅರಮೆನೆಯಿಂದ ಕೋಪದಲ್ಲಿ ತೆರಳಿದ್ದ ಭಾನುಪ್ರತಾಪ್ ಹಿಂದೆ ತಾನು ವಾಸಿಸುವ ಮನೆಯೊಳಗೆ ಸೇರಿ ಹಲವಾರು ಫೋನ್ ಮಾಡಿ ಅರಮನೆ ಮತ್ತು ಸೂರ್ಯವಂಶಿ ಸಂಸ್ಥಾನದ ವಾರಸುದಾರಳು ಬಂದಿರುವ ವಿಷಯ ತಿಳಿಸಿ ಅವರಿಗೆ ಮುಂದೇನು ಮಾಡುವುದೆಂಬ ಬಗ್ಗೆ ಕೆಲವು ಸೂಚನೆ ನೀಡಿದನು.
ನೀತು.....ಗುರುಗಳೇ ನಾವಿಲ್ಲಿಗೆ ಬಂದ ಕೆಲಸ ಮುಗಿಯಿತು ಎಂದು ನನಗನ್ನಿಸುತ್ತಿದೆ ಈಗಿಲ್ಲಿ ಜಾಸ್ತಿ ಸಮಯವನ್ನು ನಾವು ಕಳೆಯುವುದು ಅಪಾಯಕಾರಿ ಅಂತ ನನ್ನ ಮನಸ್ಸು ಹೇಳುತ್ತಿದೆ.
ಶಿವರಾಮಚಂದ್ರ......ನಿನ್ನ ಊಹೆ ನಿಜ ಮಗಳೇ ಅದಕ್ಕೆಂದು ನೀವು ಇಲ್ಲಿಂದ ಸುರಕ್ಷಿತವಾಗಿ ಯಾರಿಗೂ ತಿಳಿಯದಂತೆ ಕಳುಹಿಸುವುದಕ್ಕೆ ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದೆ.
ಸುಮೇರ್ ಸಿಂಗ್....ಇನ್ನೇನು ಕೆಲ ಹೊತ್ತಿನಲ್ಲೇ ಹೆಲಿಕಾಪ್ಟರ್ ಬರುತ್ತೆ ಅದರಲ್ಲಿ ನಿಮ್ಮೆಲ್ಲರನ್ನು ನಮ್ಮ ಸಂಸ್ಥಾನದ ವಯಕ್ತಿಕ ವಿಮಾನಗಳ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿಂದ ವಿಶೇಷ ವಿಮಾನದಲ್ಲಿ ಮೊದಲು ದೆಹಲಿಗೆ ಪ್ರಯಾಣ ಬೆಳೆಸುವುದು.
ನೀತು......ನಮ್ಮ ಲಗೇಜ್ ಹೋಟೆಲ್ಲಿನಲ್ಲಿದೆ ಅದನ್ನು ಕೂಡ ನಾವು ತೆಗೆದುಕೊಳ್ಳಬೇಕಿದೆ ಆದರೆ ನಾವು ದೆಹಲಿಗೆ ಹೋಗುತ್ತಿರುವುದರ ಹಿಂದಿರುವ ಕಾರಣವೇನು?
ಸುಮೇರ್ ಸಿಂಗ್....ನೀವು ಉಳಿದುಕೊಂಡಿದ್ದ ಹೋಟೆಲ್ ಕೂಡ ಸಂಸ್ಥಾನದ ಅಧೀನದಲ್ಲಿ ಬರುತ್ತದೆ ಮೇಡಂ ಅಲ್ಲಿಂದ ಲಗೇಜನ್ನು ವಿಮಾನದಲ್ಲಿರಿಸುವ ವ್ಯವಸ್ಥೆ ಮಾಡಲಾಗಿದೆ. ಯುವರಾಣಿಯ ಪಾದಾರ್ಪಣೆ ಅರಮನೆಯಲ್ಲಿ ಆಗಿರುವ ಸಂಗತಿ ಇಷ್ಟರೊಳಗಾಗಲೇ ಸಂಸ್ಥಾನದ ಶತ್ರುಗಳಿಗೂ ತಿಳಿದಿರುತ್ತೆ. ಅದರಿಂದಾಗಿ ನೀವುಗಳೆಲ್ಲ ಯಾವ ಊರಿಗೆ ಪ್ರಯಾಣಿಸುತ್ತಿರುವಿರಿ ಎಂಬುದನ್ನು ಅವರಿಂದ ಮರೆಮಾಚಲು ಈ ವ್ಯವಸ್ಥೆ ಮಾಡಲಾಗಿದೆ. ನಿಮ್ಮೂರಿನ ಮನೆಯ ಹತ್ತಿರವೂ ನಮ್ಮ ಕಾವಲುಗಾರರನ್ನು ನೇಮಿಸುವುದಾಗಿ ನಾನು ಯೋಚಿಸಿದ್ದೆ ಆದರೆ ಗುರುಗಳೇ ಬೇಡವೆಂದರು.
ನೀತು......ಅಲ್ಲೇನೂ ಭಯವಿಲ್ಲ ಆದರೆ ನೀನಿಲ್ಲಿರಲೇಬೇಕಾದ್ದು ತುಂಬ ಅವಶ್ಯಕ. ನಿನಗೆ ಆಗಾಗ ಫೋನ್ ಮಾಡಿ ಇಲ್ಲಿನ ವಿಷಯ ತಿಳಿದುಕೊಳ್ಳುತ್ತೀನಿ ಮತ್ತು ಸಧ್ಯದಲ್ಲಿಯೇ ಹಿಂದಿರುಗಿ ಬರುತ್ತೀವಿ.
ನೀತು ಹೊರಡುವುದಕ್ಕೂ ಮುನ್ನ ಫ್ರೆಶಾಗಲು ತೆರಳಿದರೆ ನಿಶಾ ಸಹ ಅಮ್ಮನ ಹಿಂದೆಯೇ ತಾನೂ ರೂಂ ಸೇರಿಕೊಂಡು ತನಗೆಟುಕಿಸಿದ್ದನ್ನು ತಡಕಾಡುತ್ತ ಬೀರುಗಳ ಬಾಗಿಲನ್ನು ತೆರಯಲು ಪ್ರಯತ್ನಿಸುತ್ತಿದ್ದಳು. ಹೀಗೆಯೇ ನಿಶಾ ಬೀರುವೊಂದರ ಬಾಗಿಲು ತೆರದು ಒಳಗೇನೇನಿದೆ ಎಂದು ನೋಡುತ್ತಿದ್ದಾಗ ಅವರಿಗೆ ಜ್ಯೂಸ್ ತಂದಿದ್ದ ಸೇವಕಿ ಅದನ್ನು ಕಂಡು ಗರಬಡಿದವಳಂತೆ ನಿಂತುಬಿಟ್ಟಳು.
ನೀತು ಫ್ರೆಶಾಗಿ ಹೊರಬಂದು ಸೇವಕಿ ನೋಡುತ್ತಿದ್ದ ದಿಕ್ಕಿನತ್ತ ತಿರುಗಿ ಮಗಳಾಟ ಕಂಡು ನಗುತ್ತ.....ನೀನೇಕೆ ಇಷ್ಟು ಗಾಬರಿಗೊಂಡು ನಿಂತೆ ಇವಳಿಗೆ ಏನಾದರೊಂದು ಕೀಟಲೆ ಮಾಡದಿದ್ದರೆ ಸಮಾಧಾನವಿಲ್ಲ.
ಸೇವಕಿ ಇನ್ನೂ ಆಶ್ಚರ್ಯದಲ್ಲಿದ್ದು.......ಅಮ್ಮಾವ್ರೇ ಇದು ತುಂಬಾನೆ ಅಚ್ಚರಿಗೊಳ್ಳುವ ಸಂಗತಿ. ಏಕೆಂದರೆ ಮಹಾರಾಜರು ದಿವಂಗತರಾದ ನಂತರ ಕೆಲವು ದಿನ ಕಾರ್ಯ ನಿಮಿತ್ತ ಸುಮೇರ್ ಸಿಂಗ್ ಅರಮೆನೆ ಹೊರಗೆ ಹೋಗಿದ್ದರು. ಆಗ ಚಿಕ್ಕ ರಾಜರು (ಭಾನುಪ್ರತಾಪ್) ಇದೇ ಬೀರುವನ್ನು ತೆಗೆಯಲು ಹರಸಾಹಸ ಪಢುತ್ತಿದ್ದರು. ಹೊರಗಿನಿಂದ ಕೆಲವು ನುರಿತ ಬೀಗ ತೆರೆಯುವ ಕಸುಬುದಾರರನ್ನು ಕರೆತಂದಿದ್ದರೂ ಅವರಿಂಧಲೂ ಈ ಬೀರು ತೆಗೆಯಲಾಗದೆ ಸೋತಿದ್ದರು ಆದರಿಂದು ನಮ್ಮ ಯುವರಾಣಿ ಸಲೀಸಾಗಿ ಬೀರು ತೆಗೆದಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು.
ಬೀರುವಿನಲ್ಲಿ ತಡಕಾಡುತ್ತಿದ್ದ ಮಗಳನ್ನೆತ್ತಿ ಮಂಚದಲ್ಲಿ ಕೂರಿಸಿದ ನೀತು ನಗುತ್ತಲೇ ಇನ್ನೇನು ಬೀರು ಬಾಗಿಲನ್ನು ಹಾಕಲಿದ್ದಾಗ ಸೇವಕಿ ಹೇಳಿದ ಮಾತನ್ನು ಕೇಳಿ ಅಚ್ಚರಿಪಡುವ ಸರತಿ ಅವಳದಾಗಿತ್ತು. ಭಾನುಪ್ರತಾಪ್ ಈ ಬೀರುವನ್ನು ತೆಗೆಸುವ ಪ್ರಯತ್ನ ಮಿಡಿದ್ದಾರೆ ಎಂದರೆ ಇದರೊಳಗೆ ಖಂಡಿತ ಏನೋ ಅಮೂಲ್ಯವಾದದ್ದಿರಬೇಕು.
ನೀತು ಸೇವಕಿಯನ್ನು ಹತ್ತಿರ ಕರೆದು......ನಿಮ್ಮ ಯುವರಾಣಿಗಾಗಿ ಏನು ಮಾಡಲು ಸಿದ್ದಳಿರುವೆ ?
ಸೇವಕಿ.....ನನ್ನ ಪ್ರಾಣವನ್ನೂ ಸಂತೋಷದಿಂದ ಸಮರ್ಪಿಸುತ್ತೇನೆ.
ನೀತು.....ನಿನ್ನ ಬಾಯಿಂದ ಅಪ್ಪಿತಪ್ಪಿಯೂ ಯಾರೆದುರಿಗೂ ನಿಮ್ಮ ಯುವರಾಣಿ ಈ ಬೀರು ತೆರೆದ ವಿಷಯವನ್ನು ಹೇಳಬಾರದು ಇದೇ ನೀನು ಅವಳಿಗೆ ಮಾಡುವ ಸಹಾಯ ಅಂತ ತಿಳಿದುಕೋ.
ಸೇವಕಿ.....ಇಲ್ಲ ಅಮ್ಮಾವ್ರೇ ಕನಸಿನಲ್ಲೂ ಇದರ ಬಗ್ಗೆ ಯೋಚಿಸಲ್ಲ.
ನೀತು.....ಸರಿ ನೀನಿನ್ನು ಹೊರಡು.
ಸೇವಕಿಯನ್ನು ಕಳುಹಿಸಿ ಬಾಗಿಲು ಹಾಕಲು ಹೊರಟಾಗ ಹರೀಶನೂ ಒಳಗೆ ಬರುತ್ತ.......ನಾನು ಫ್ರೆಶಾಗಬೇಕಿದೆ ತಾಳು ಬರೀ ನೀವಿಬ್ಬರು ರೆಡಿಯಾದರೆ ಸಾಕ ಅಲ್ವ ಚಿನ್ನಿ ?.....ಎಂದು ಮಗಳ ಹತ್ತಿರ ತೆರಳಿದರೆ ನಿಶಾ ಅಪ್ಪನ ಕತ್ತಿಗೆ ನೇತಾಕಿಕೊಂಡಳು. ನೀತು ಬಾಗಿಲು ಭದ್ರಪಡಿಸಿ ಬೀರುವಿನೊಳಗಿನ ವಸ್ತುಗಳನ್ನು ಪರಿಶೀಲಿಸಲು ಮುಂದಾದಳು. ಬೀರುವಿನಲ್ಲಿ ಸಂಸ್ಥಾನದ ಸಮಸ್ತ ಆಸ್ತಿ ಪತ್ರಗಳಿದ್ದು ಅವುಗಳ ಕೆಳಗೆ ಒಂದು ಸುಂದರವಾದ ಡೈರಿಗೂ ಇತ್ತು. ನೀತು ಡೈರಿಯನ್ನು ತೆರೆದಾಗ ಅದರ ಮೊದಲನೇ ಪುಟದಲ್ಲಿ ಸುಧಾ ಸೂರ್ಯವಂಶಿ ಹೆಸರನ್ನೊದಿ ಅದನ್ನು ತಕ್ಷಣವೇ ವ್ಯಾನಿಟಿ ಬ್ಯಾಗಿನೊಳಗೆ ಇಟ್ಟುಕೊಂಡಳು. ಬೀರು ಬಾಗಿಲನ್ನು ಹಾಕಿದಾಕ್ಷಣವೇ ಅದು ತನ್ನಂತಾನೇ ಲಾಕ್ ಆದ ಶಬ್ದವು ಅವಳಿಗೆ ಸ್ಪಷ್ಟವಾಗಿ ಕೇಳಿಸಿ ಪುನಃ ಬಾಗಿಲು ತೆರೆಯಲು ಎಳೆದರೂ ಸಹ ಅದು ಸ್ವಲ್ಪವೂ ಜಗ್ಗಲಿಲ್ಲ. ನೀತು ಗಂಡ ಮಗಳಿಗೆ ನಾವಿನ್ನು ಹೊರಡೋಣವೆಂದು ರೂಮಿನಿಂದ ಕೆಳಗೆ ಬಂದವಳೇ......
ನೀತು.......ಸುಮೇರ್ ಸಿಂಗ್ ಮಹಾರಾಣಿಯವರ ಕೊಠಡಿಯನ್ನು ಯಾರೂ ಪ್ರವೇಶಿಸಬಾರದು ಅದರ ಸುತ್ತ 24 ಘಂಟೆ ಗನ್ ಹಿಡಿದ ಕಾವಲುಗಾರರು ಕಾಯುತ್ತಿರಬೇಕು ಕಾರಣ ಹೇಳಲಾರೆ ಅದರಿದು ತುಂಬ ಅವಶ್ಯಕವಾದದ್ದು ಎಚ್ಚರ ತಪ್ಪದಿರು.
ಸುಮೇರ್......ನೀವು ಹೇಳಿದಂತೆಯೇ ನೋಡಿಕೊಳ್ಳುವೆ ನೀವಿದರ ಬಗ್ಗೆ ನಿಶ್ಚಿಂತೆಯಿಂದಿರಿ ಯುವರಾಣಿಯವರು ಮತ್ತೊಮ್ಮೆ ತಮ್ಮ ಅರಮನೆಗೆ ಹಿಂದಿರುಗುವ ದಿನಕ್ಕಾಗಿ ಕಾಯುತ್ತಿರುತ್ತೇವೆ.
ನೀತು.....ನಿಶಾಳನ್ನು ಆದಷ್ಟು ಬೇಗ ಕರೆತರುವೆ ಇಡೀ ಸಂಸ್ಥಾನದ ಆಸ್ತಿಗಳ ರಕ್ಷಣೆಯ ಹೊಣೆ ನಿನ್ನ ಮೇಲಿದೆ ಮರೆಯದಿರು.
ಸುಮೇರ್.....ಖಂಡಿತ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.
ಭಾನುಪ್ರತಾಪ್ ತನ್ನ ಮನೆಯ ಕಿಟಕಿಯಿಂದ ನೋಡುತ್ತಿರುವಾಗ ಅರಮನೆಯ ಅಂಗಳದಲ್ಲಿ ವರ್ಷದ ನಂತರ ಇವತ್ತೇ ಬಂದಿಳಿದಿರುವ ಹೆಲಿಕಾಪ್ಟರ್ ಬಗ್ಗೆ ಯೋಚಿಸುತ್ತಿರುವಾಗಲೇ ನೀತು ಮಗಳ ಜೊತೆ ಅದನ್ನೇರಿ ಕುಳಿತಾಗ ತನ್ನ ಪ್ಲಾನ್ ವಿಫಲವಾಗಿದ್ದಕ್ಕೆ ಆಕ್ರೋಶದಿಂದ ಕೈಯಲ್ಲಿದ್ದ ಹೆಂಡದ ಗ್ಲಾಸನ್ನು ಗೋಡೆಗೆ ಬಡಿದನು. ನೀತು ತನ್ನ ಕುಟುಂಬದ ಜೊತೆ ಕುಳಿತಿದ್ದ ಹೆಲಿಕಾಪ್ಟರ್ ಆಗಸಕ್ಕೆ ಚಿಮ್ಮಿದಾಗ ಭಾನುಪ್ರತಾಪ್ ಕೋಪದಲ್ಲಿ......ನಾನೇ ಮುಂದಿನ ರಾಜ ಇದು ನನ್ನೊಬ್ಬನದ್ದೇ ಆಸ್ತಿ ಯಾರನ್ನೂ ಇದರ ಹತ್ತಿರ ಸುಳಿಯುವುದಕ್ಕೂ ನಾನು ಬಿಡುವುದಿಲ್ಲ......ಎಂದು ಕಿರುಚಾಡಿ ಫೋನ್ ಎತ್ತಿಕೊಂಡ.
ನೀತು—ಹರೀಶ ಮಕ್ಕಳು ಉದಯಪುರದಿಂದ ಸಂಸ್ಥಾನದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿ ಅಲ್ಲಿಂದ ಸಾಮಾನ್ಯ ವಿಮಾನದಲ್ಲಿ ಬೆಂಗಳೂರನ್ನು ತಲುಪಿದರು. ದಾರಿಯುದ್ದಕ್ಕೂ ನಿಶಾ ಅಣ್ಣಂದಿರು ಅಕ್ಕಂದಿರು ಜೊತೆ ಕಿಟಕಿಯಲ್ಲಿ ಇಣುಕುತ್ತ ಮಸ್ತಿ ಮಾಡುತ್ತಿದ್ದರೆ ಅದನ್ನು ನೋಡಿ ನೀತು ಹರ್ಷಗೊಳ್ಳುತ್ತಿದ್ದಳು. ಬೆಂಗಳೂರು ತಲುಪಿ ವಿಮಾನ ನಿಲ್ದಾಣದ ಸಮೀಪದ ಹೋಟೆಲ್ಲಿನಲ್ಲಿ ವಾಸ್ತವ್ಯ ಹೂಡಿ ಊರಿನಿಂದ ತಮ್ಮನ್ನು ಕರೆದೊಯ್ಯಲು ಬರುತ್ತಿದ್ದ ಅಶೋಕನ ದಾರಿ ಕಾಯತೊಡಗಿದರು.
ಕತೆಯಂತೂ ಅಧ್ಭುತವಾಗಿ ಸಾಗುತ್ತಿದೆ,
ReplyDelete