" ಚಿನ್ನಿ " ಎಂದು ಜೋರಾಗಿ ಚೀರುತ್ತ ಎಚ್ಚರಗೊಂಡ ನೀತುವಿನ ದೇಹದ ಮೇಲೆ ಬಕಟ್ ನೀತು ಸುರಿದಂತೆ ಬೆವರು ಹರಿಯುತ್ತಿತ್ತು. ನೀತು ಕಿರುಚಿಕೊಂಡ ಶಬ್ದಕ್ಕೆ ಅವಳನ್ನು ತಬ್ಬಿಕೊಂಡು ಮಲಗಿದ್ದ ಆರೀಫ್ ಕೂಡ ಎಚ್ಚರಗೊಂಡು ಗಾಬರಿಯಿಂದ ಏನಾಯಿತೆಂದು ಅವಳತ್ತ ನೋಡಿದರೆ ನೀತು ಏದುರಿನ ಗೋಡೆ ನೋಡುತ್ತ ಚಿನ್ನಿ... ಚಿನ್ನಿ ಎಂದು ಕನವರಿಸುತ್ತ ನಡುಗುತ್ತಿದ್ದಳು. ನೀತುಳನ್ನು ಕೂಗಿದರೂ ಅಳ್ಳಾಡಿಸಿದರೂ ಅವಳು ಎಚ್ಚರಗೊಳ್ಳದಿದ್ದಾಗ ಮುಖಕ್ಕೆ ನಾಲ್ಕು ಬಾರಿ ನೀರನ್ನು ಚಿಮುಕಿಸಿದನು. ಯಾವುದೋ ಸೆಳೆತದಿಂದ ಹೊರಗೆ ಬಂದಂತೆ ಎಚ್ಚರಗೊಂಡ ನೀತು ಸುತ್ತಮುತ್ತ ಮಗಳಿಗಾಗಿ ತಡಕಾಡಿ
ನೀತು.......ನನ್ನ ಮಗಳೆಲ್ಲಿ ?
ಆರೀಫ್ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು......ಏನಾಯ್ತು ನೀತಿ ಯಾಕೆ ಹೀಗಾಡುತ್ತಿದ್ದೀಯಾ ? ನೀನೀಗ ಮನೆಯಲ್ಲಿಲ್ಲ ನಿನ್ನ ಮಗಳು ಮನೆಯಲ್ಲಿ ಮಲಗಿರುತ್ತಾಳೆ. ಯಾಕೆ ಯಾವುದಾದರೂ ಕೆಟ್ಟ ಕನಸು ಬಿತ್ತಾ ?
ನೀತು ಸಂಪೂರ್ಣ ಜ್ಞಾನಕ್ಕೆ ಬಂದಿದ್ದು......ನಡಿ ಆರೂ ಈಗಲೇ ನನ್ನ ಮಗಳನ್ನು ನೋಡಬೇಕು ಅಲ್ಲಿ ಅವಳೊಬ್ಬಳೇ ಇದ್ದಾಳೆ.
ಆರೀಫ್......ಅವಳಪ್ಪ ಎಲ್ಲರೂ ಇದ್ದಾರೆ ನೀತಿ ಈಗ ಟೈಂ ನೋಡು ರಾತ್ರಿ ಹನ್ನೆರಡು ಘಂಟೆ ನಾಳೆ ಬೆಳಿಗ್ಗೆ ಯೇ ಹೋಗೋಣ.
ನೀತು ಕೋಪದಿಂದ......ಈಗ ಅಂದರೆ ಈಗಲೆ ಹೋಗಬೇಕು ಬೇಡ ಬಿಡು ನಿನ್ನ ಕಾರ್ ಕೀ ಕೊಡು ನಾನೇ ಹೋಗ್ತೀನಿ.
ನೀತು ಮನಸ್ಸಿಗೆ ಆಘಾತವಾಗುವಂತ ಕನಸು ಕಂಡಿದ್ದಾಳೆಂದರಿತ ಆರೀಫ್.......ಸರಿ ಆಯ್ತು ಈಗಲೇ ಹೋಗೋಣ ನೀನು ಬೇಗನೇ ರೆಡಿಯಾಗಿ ನಾನಷ್ಟರಲ್ಲಿ ರೆಡಿಯಾಗಿ ಬರ್ತೀನಿ.
ಆರೀಫ್ ತನ್ನ ಕಾರನ್ನು ಗ್ಯಾರೇಜಿನೊಳಗೆ ನಿಲ್ಲಿಸಿ ಹಣದ ಬ್ಯಾಗುಗಳ ತುಂಬಿದ್ದ ಟಾಟಾ ವಿಂಗರ್ ಹೊರತೆಗೆಯುವಷ್ಟರಲ್ಲಿ ನೀತು ಕೂಡ ತನ್ನ ಬ್ಯಾಗನ್ನೆತ್ತಿಕೊಂಡು ಹೊರಬಂದಳು. ಮನೆಯನ್ನು ಲಾಕ್ಮಾಡಿ ಮುಖ್ಯ ರಸ್ತೆಯಿಂದ ಹಣದ ಬ್ಯಾಗುಗಳ ಜೊತೆ ಹೋಗುವುದು ಸ್ವಲ್ಪ ಅಪಾಯ ಚೆಕಿಂಗ್ ನಡೆಯುತ್ತೆಂದು ಬೇರೆ ಮಾರ್ಗದಿಂದ ತಾವಿರುವ ಸಿಟಿಯಿಂದ ಹೊರಗೆ ಹೊರಟನು. ಅರ್ಧ ಘಂಟೆ ನಂತರ ತನ್ನ ಸಿಟಿ ಬಿಟ್ಟು 30 ಕಿಮೀ..ದೂರ ಬಂದಾಗ ಪುನಃ ಮುಖ್ಯ ರಸ್ತೆಗೆ ವ್ಯಾನ್ನನ್ನು ತಿರುಗಿಸಿ ತನ್ನಿಂದ ಸಾಧ್ಯವಾದಷ್ಟು ವೇಗದಲ್ಲಿ ಕಾಮಾಕ್ಷಿಪುರದ ಕಡೆ ಚಲಾಯಿಸುತ್ತಿದ್ದನು.
ನೀತು ಇದ್ಯಾವುದರ ಕಡೆಗೂ ಗಮನ ನೀಡದೆ ಫೋನಿನಲ್ಲಿ ಮುದ್ದಿನ ಮಗಳ ಫೋಟೋ ನೋಡುತ್ತ ಅದನ್ನು ಸವರಿ ಎಷ್ಟು ಬೇಗ ಮಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತೇನೋ ಎಂದು ಯೋಚಿಸುತ್ತ ಕುಳಿತಿದ್ದಳು. ಸುಮಾರು ನಾಲ್ಕುವರೆ ಸಮೀಪದಲ್ಲಿ ವ್ಯಾನ್ ಕಾಮಾಕ್ಷಿಪುರವನ್ನು ಪ್ರವೇಶಿಸಿದಾಗ ಹರೀಶನಿಗೆ ಫೋನ್ ಮಾಡಿದನು. ಮಗಳನ್ನು ಎದೆ ಮೇಲೆ ಮಲಗಿಸಿಕೊಂಡು ಮಲಗಿದ್ದ ಹರೀಶ ಫೋನ್ ಧ್ವನಿಗೆ ಎಚ್ಚರಗೊಂಡು ಅದನ್ನೆತ್ತಿದಾಗ ಬೆಳಿಗ್ಗೆ 4ಕ್ಕೆ ಆರೀಫ್ ಯಾಕೆ ಫೋನ್ ಮಾಡಿದ್ದಾನೆಂಬ ಗಾಬರಿಯಿಂದಲೇ ರಿಸೀವ್ ಮಾಡಿದನು.
ಹರೀಶ.....ಆರೀಫ್ ಏನ್ ಇಷ್ಟು ಬೆಳಿಗ್ಗೆಯೇ ಫೋನ್ ಮಾಡಿರುವೆ ಎಲ್ಲಾ ಆರಾಮ ತಾನೇ ?
ಆರೀಫ್......ಹಾಂ ಸರ್ ಎಲ್ಲ ಆರಾಮನೇ ನಾವು ಕಾಮಾಕ್ಷಿಪುರಕ್ಕೆ ತಲುಪಿದ್ದೀವಿ ಇನ್ನತ್ತು ನಿಮಿಷದಲ್ಲಿ ಮನೆಗೆ ಬರುತ್ತಿದ್ದೀವಿ. ಮನೆಗೆ ಬಂದು ಬೆಲ್ ಮಾಡಿ ಎಲ್ಲರನ್ನು ಏಬ್ಬಿಸುವುದೇಕೆಂದು ನಿಮಗೆ ಕಾಲ್ ಮಾಡಿದೆ.
ಹರೀಶ......ಓ ಹಾಗಾ ನಾನು ಗಾಬರಿಯಾಗಿ ಹೋಗಿದ್ದೆ ಸರಿ ನೀವು ಬನ್ನಿ ನಾನು ಬಾಗಿಲು ತೆಗೆದಿರುತ್ತೇನೆ.
ಹರೀಶ ಫೋನಿಟ್ಟು ಮಗಳನ್ನೆತ್ತಿ ಜೋಪಾನವಾಗಿ ಪಕ್ಕ ಮಲಗಿಸಿದರೆ ಸ್ವಲ್ಪ ಕೊಸರಾಡಿದ ನಿಶಾ ತನ್ನ ಟೆಡ್ಡಿ ತಬ್ಬಿಕೊಂಡು ಮಲಗಿಬಿಟ್ಟಳು. ವ್ಯಾನ್ ಮನೆಯ ಮುಂದೆ ನಿಂತಾಗ ಧಡಧಡನೇ ಓಡಿಬಂದ ನೀತು ಏದುರಿಗೆ ಗಂಡನನ್ನು ನೋಡಿ ಮಗಳೆಲ್ಲೆಂದು ಕೇಳಿ ತಮ್ಮ ರೂಮಿನ ಕಡೆ ಓಡಿದಳು. ರೂಮಿನೊಳಗೆ ಬಂದಾಗ ಟೆಡ್ಡಿ ಹಿಡಿದುಕೊಂಡು ಮಲಗಿದ್ದ ಮಗಳನ್ನು ನೋಡಿ ನೀತುವಿನ ಕಣ್ಣಾಲಿಗಳು ಕಂಬನಿಯ ಹನಿ ಜಿನುಗಿಸಿದರೆ ಮಗಳ ಪಕ್ಕದಲ್ಲಿ ಮಲಗಿ ಅವಳ ತಲೆಯನ್ನು ನೇವರಿಸಿದಳು. ಮಗಳ ಹಣೆ ಕೆನ್ನೆಗೆ ಮುತ್ತಿಟ್ಟು ಅವಳನ್ನೆತ್ತಿ ತನ್ನ ಮೇಲೆ ಮಲಗಿಸಿಕೊಂಡಾಗ ಸ್ವಲ್ಪ ಕೊಸರಾಡುತ್ತ ಕಣ್ತೆರೆದ ನಿಶಾ ಅಮ್ಮನನ್ನು ನೋಡಿ ನಿದ್ರೆ ಮಂಪರಿನಲ್ಲೇ ಮಮ್ಮ....ಎಂದವಳನ್ನು ತಬ್ಬಿಕೊಂಡು ನಿದ್ರೆಗೆ ಜಾರಿದಳು. ಮಗಳನ್ನು ತಟ್ಟುತ್ತ ಕಣ್ಣೀರನ್ನು ಸುರಿಸುತ್ತಿದ್ದ ನೀತುವಿನ ಮನಸ್ಸು ಹಗುರವಾಗಿದ್ದು ಮಗಳಪ್ಪುಗೆಯ ಸನಿಹದಲ್ಲಿ ತಾನೂ ನಿದ್ದೆಗೆ ಶರಣಾದಳು.
ಹರೀಶ......ಆರೀಫ್ ಯಾಕೀ ರಾತ್ರಿಯಲ್ಲೇ ಹೊರಟಿದ್ದು ಬೆಳಿಗ್ಗೆಯ ಹೊತ್ತಿಗೆ ಆರಾಮವಾಗಿ ಬರಬಹುದಿತ್ತಲ್ಲ.
ಆರೀಫ್.....ಸರ್ ಮೊದಲು ಬೆಳಿಗ್ಗೆಯೇ ಹೊರಡಲಿದ್ದೆವು ರಾತ್ರಿಯ ಘಟನೆಯಿಂದ ನೀತು ಈಗಲೇ ಹೊರಡಬೇಕು ಇಲ್ಲದಿದ್ದರೆ ಗಾಡಿ ಕೀ ಕೊಡು ನಾನೊಬ್ಬಳೇ ಹೋಗ್ತೀನಿ ಎಂದುದಕ್ಕೆ ಬರಬೇಕಾಯಿತು.
ಹರೀಶ ಗಾಬರಿಗೊಂಡು......ಯಾಕೆ ಅಂತದ್ದೇನಾಯ್ತು ?
ಆರೀಫ್.....ಏನಾಯ್ತು ಅಂತ ನನಗೂ ಗೊತ್ತಿಲ್ಲ ಸರ್ ನನಗನ್ನಿಸುವ ಪ್ರಕಾರ ಮಲಗಿದ್ದಾಗ ಯಾವುದೋ ಕೆಟ್ಟ ಕನಸು ಬಿದ್ದಿರಬಹುದು ಅದರಿಂದಲೇ ಹೆದರಿ ಬೆವರುತ್ತ ಕಿರುಚಿಕೊಂಡೆದ್ದರು. ನಾನೇ ನೀರು ಚಿಮುಕಿಸಿದಾಗ ಎಚ್ಚೆತ್ತುಕೊಂಡು ಈಗಲೇ ನಡಿ ಊರಿಗೆ ಹೋಗ್ಬೆಕು ನನ್ನ ಮಗಳನ್ನೀಗಲೇ ನೋಡ್ಬೇಕು ಅಂತ ಹಠ ಹಿಡಿದಿದ್ದಕ್ಕೆ ಬಂದೆವು. ಸರ್ ಗೋಲ್ಡ್ ಮಾರಿದ ಹಣ ವ್ಯಾನಿನೊಳಗಿದೆ ಅದನ್ನು ಮನೆಯಲ್ಲಿ ಇಡುವುದಾ ಏನು ?
ಹರೀಶ......ವಾಟ್ ಈ ರಾತ್ರಿ ಹೊತ್ತಲ್ಲಿ ನೀವಿಬ್ಬರು ಹಣ ತರುವಂತ ರಿಸ್ಕ್ ಯಾಕೆ ತೆಗೆದುಕೊಂಡಿದ್ದು ಆರೀಫ್ ? ರಾತ್ರಿ ಚೆಕ್ ಪೋಸ್ಟ್....
ಆರೀಫ್ ಮಧ್ಯದಲ್ಲೇ.....ಚಿಂತೆಯಿಲ್ಲ ಸರ್ ನಾನು ಹಳ್ಳಿಗಳ ಒಳಗಿನ ರಸ್ತೆಯ ಮೂಲಕ ಬಂದೆ ಅಲ್ಲೆಲ್ಲೂ ಚೆಕಿಂಗ್ ಇರಲಿಲ್ಲ.
ಹರೀಶ......ಸಧ್ಯಕ್ಕೆ ಹಣ ವ್ಯಾನಿನೊಳಗಿರಲಿ ಇಲ್ಯಾವುದೇ ತೊಂದರೆ ಇಲ್ಲ ನಡಿ ನಿನಗೂ ಡ್ರೈವಿಂಗ್ ಮಾಡಿ ಸುಸ್ತಾಗಿರುತ್ತೆ ಮಲಗುವಂತೆ.
ಆರೀಫ್.....ಹೌದು ಸರ್ ನಿದ್ದೆ ಅಂತೂ ಬೇಕೇ ಬೇಕು.
ಹರೀಶ....ನಡಿ ನೀನು ಮುಂಚೆ ಉಳಿದುಕೊಂಡಿದ್ದ ರೂಂ ಹಾಗೆಯೇ ಇದೆ ಆರಾಮವಾಗಿ ಮಲಗು ಬೆಳಿಗ್ಗೆ ಬೇಗೇಳುವ ಅಗತ್ಯವಿಲ್ಲ.
ಆರೀಫನನ್ನು ಎರಡನೇ ಮಹಡಿಯ ರೂಮಿಗೆ ಬಿಟ್ಟು ತಮ್ಮ ರೂಂ ಒಳಗೆ ಬಂದ ಹರೀಶ ಅಮ್ಮನನ್ನು ಅಪ್ಪಿಕೊಂಡು ಮಲಗಿದ್ದ ಮಗಳ ಮುಖದಲ್ಲಿನ ಮುಗುಳ್ನಗೆ ನೋಡಿ ಹೆಂಡತಿಯ ಕಣ್ಣಿನಿಂದ ಹರಿದಿದ್ದ ಕಣ್ಣೀರನ್ನೊರೆಸಿ ಇಬ್ಬರ ಹಣೆಗೂ ಮುತ್ತಿಟ್ಟು ಅವರ ಪಕ್ಕ ಮಲಗಿದ. ಮಗಳನ್ನಪ್ಪಿಕೊಂಡಿದ್ದರೂ ಹೆಂಡತಿ ಕಣ್ಣಿಂದ ಅಶ್ರುಧಾರೆ ಹರಿದಿದ್ದು ನೋಡಿದಾಗ ಯಾವುದೋ ಕೆಟ್ಟ ಕನಸೇ ಬಿದ್ದಿರಬೇಕೆಂದು ಅವನಿಗೆ ಧೃಢವಾಗಿ ಹೋಯಿತು.
* *
* *
ಬೆಳಿಗ್ಗೆ ಲಿವಿಂಗ್ ಹಾಲಿನಲ್ಲಿ ಕಾಫಿ ಕುಡಿಯುತ್ತಿದ್ದ ಹರೀಶನ ಹತ್ತಿರ ಬಂದು ಶುಭೋದಯ ತಿಳಿಸಿದ ಹಿರಿಮಗಳು......
ನಿಧಿ.....ಅಪ್ಪ ನಮ್ಮನೆ ಗೇಟಿನ ಮುಂದೆಯೇ ಯಾರೋ ವ್ಯಾನನ್ನು ನಿಲ್ಲಿಸಿ ಬಿಟ್ಟಿದ್ದಾರೆ ರಾತ್ರಿ ಇರಲಿಲ್ಲವಲ್ಲ.
ಹರೀಶ.....ಬಾರಮ್ಮ ಕೂತ್ಕೋ ವ್ಯಾನ್ ಆರೀಫನದ್ದು ಬೆಳಿಗ್ಗೆ ನಾಲ್ಕು ಘಂಟೆಯ ಹೊತ್ತಿಗೆ ನಿಮ್ಮಮ್ಮ ಬಂದಿದ್ದಾಳೆ.
ನಿಧಿ ಖುಷಿಯಿಂದ......ಏನು ಅಮ್ಮ ಬಂದಿದ್ದಾರ ನಾನು ಹೋಗಿ ಮಾತನಾಡಿಸಿಕೊಂಡು ಬರ್ತೀನಿ.
ಸುರೇಶ.....ಅಕ್ಕ ನಾನು ಮೊದಲು.
ಹರೀಶ.....ಬನ್ನಿ ಇಬ್ಬರೂ ಸುಮ್ಮನೆ ಕೂತಿರಿ ನಿಮ್ಮಮ್ಮ ಮಲಗಿದ್ದಾಳೆ ಅವಳಾಗಿಯೇ ಏಳುವವರೆಗೂ ಯಾರೂ ಹೋಗಿ ಏಬ್ಬಿಸಬೇಡಿ.
ನಿಧಿ......ಅಪ್ಪ ಏನಾಯ್ತು ? ನೀವೇನೋ ಚಿಂತೆಯಲ್ಲಿದ್ದೀರ.
ಶೀಲಾ......ಹೌದುರೀ ಏನ್ ವಿಷಯ ಹೇಳಿ.
ಹರೀಶ ನಿಟ್ಟುಸಿರು ಬಿಡುತ್ತ ಆರೀಫ್ ಹೇಳಿದ್ದನ್ನೆ ಎಲ್ಲರಿಗೂ ಹೇಳಿದ. ನೀತುಳಿಗೆ ಅಂತದ್ದೇನು ಕನಸು ಬಿತ್ತು ರಾತ್ರಿಯೇ ಹೊರಡಬೇಕೆಂದು ಹಠ ಮಾಡಿ ಬರುವಂತದ್ದು ಎಂದೇ ಎಲ್ಲರ ತಲೆಯಲ್ಲಿ ಸುತ್ತುತ್ತಿತ್ತು.
ಬೆಳಿಗ್ಗೆ ಒಂಬತ್ತೂವರೆಗೆ ಆರೀಫ್ ರೆಡಿಯಾಗಿ ಬಂದಾಗ ಸುಮ ತಿಂಡಿ ತಂದು ನೀಡಿದಳು. ನಿದ್ದೆಯಿಂದ ಎಚ್ಚರಗೊಂಡು ಕಣ್ಣುಜ್ಜಿಕೊಳ್ಳುತ್ತಿದ್ದ ಮಗಳ ತಲೆ ಸವರಿ ಮುತ್ತಿಟ್ಟು......
ನೀತು.....ನನ್ನ ಚಿನ್ನಿ ಮರಿ ಎಚ್ಚರವಾಯ್ತಾ ಕಂದ.
ನಿಶಾ ಅಮ್ಮನನ್ನು ರಾತ್ರಿ ನಿದ್ರೆ ಮಂಪರಿನಲ್ಲಿ ನೋಡಿದ್ದು ಈಗ ತಾನು ಎಚ್ಚರಗೊಂಡು ನೋಡಿದಾಕ್ಷಣ ಖುಷಿಯಾಗಿ.........ಮಮ್ಮ...ನನ್ನಿ ಮಮ್ಮ ಬಂತು....ಮಮ್ಮ ಬಂತು.
ನೀತು ಮುಗುಳ್ನಗುತ್ತ.......ಹೂಂ ಕಂದ ನಿಮ್ಮಮ್ಮ ಬಂತು ಬಾ ಸ್ನಾನ ಮಾಡಿಕೊಂಡು ತಿಂಡಿ ತಿನ್ನೋಣ.
ಅಮ್ಮನ ಜೊತೆ ಸ್ನಾನ ಮುಗಿಸಿ ರೆಡಿಯಾಗಿ ಅಮ್ಮನ ತೋಳಿನಲ್ಲಿದ್ದ ನಿಶಾ ಮುದ್ದು ಮುದ್ದು ಮಾತುಗಳನ್ನಾಡುತ್ತ ಅಮ್ಮನಿಗೆ ಏನೇನೋ ಹೇಳುತ್ತ ತುಂಬ ಖುಷಿಯಲ್ಲಿದ್ದಳು. ಇಬ್ಬರು ಕೆಳಗೆ ಬಂದಾಗ ಹತ್ತಿರ ನಿಂತಿದ್ದ ದೃಷ್ಟಿ ಮೊದಲಿಗೆ ಅತ್ತೆಯನ್ನು ತಬ್ಬಿಕೊಂಡ ನಂತರ ನಯನ ರಶ್ಮಿ...ಗಿರೀಶ ತಬ್ಬಿಕೊಂಡರು. ಸುರೇಶ ಅಮ್ಮನ ಕೈ ಹಿಡಿದು ತಂಗಿಗೆ ರೇಗಿಸುತ್ತ.......
ಸುರೇಶ....ಏಯ್ ಚಿನ್ನಿ ಮರಿ ಕೆಳಗಿಳಿ ಇದು ನಮ್ಮಮ್ಮ.
ನಿಶಾ ಅಮ್ಮನನ್ನು ತಬ್ಬಿಕೊಂಡು......ಮಮ್ಮ ಅಣ್ಣ ನೋಲು ನಂಗಿ ಅಣ್ಣ ಬೇಲ ಮಮ್ಮ ನಂದು....ಮಮ್ಮ ನಂದು.
ನೀತು ಮಗಳ ಕೆನ್ನೆಗೆ ಮುತ್ತಿಟ್ಟು.....ಮಮ್ಮ ನಿಂದೇ ಕಂದ ಏಯ್ ತರ್ಲೆ ಪಾಪ ಯಾಕೋ ತಂಗಿಗೆ ಗೋಳಾಡಿಸ್ತೀಯಾ.
ನಿಧಿ ಹತ್ತಿರ ಬಂದು ನೀತುಳನ್ನು ತಬ್ಬಿಕೊಂಡು......ಅಮ್ಮ ಹೇಗಿದ್ದೀರ ನೋಡಲು ಆರಾಮವಾಗಿದ್ದರೂ ಏನೋ ಚಿಂತೆ ಕಾಡುತ್ತಿದೆ ನನಗೂ ಹೇಳಬಾರದ.
ನೀತು.....ನಿನಗೆಲ್ಲೋ ಬ್ರಾಂಥು ಕಣೆ ನಾನು ಆರಾಮವಾಗಿದ್ದೀನಿ.
ನಿಧಿ......ಅಮ್ಮ ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟಿರದೆ ಇರಬಹು ಆದರೆ ಅಮ್ಮನ ಮನಸ್ಸಿನ ನೋವು ಗೊತ್ತಾಗುತ್ತಿದೆ ಏನು ಹೇಳಮ್ಮ.
ನೀತು....ನಿನ್ನನ್ನು ನಾನು ಹೆತ್ತಿರದಿದ್ದರೂ ನೀನು ನನಗೆ ಸ್ವಂತ ಮಗಳ ರೀತಿಯಲ್ಲ ಅದಕ್ಕಿಂತಲೂ ಹೆಚ್ಚು ಕಣೆ.
ನಿಶಾ.....ಮಮ್ಮ ನಂಗಿ ಹೊಟ್ಟಿ ಹಸಿತು.
ನೀತು......ನಡಿಯಮ್ಮ ಕಂದ ಮೊದಲು ತಿಂಡಿ ತಿನ್ನೋಣ.
ಅನುಷ......ಅಕ್ಕ ನೀವೂ ತಿಂಡಿ ತಿನ್ನಿರಿ ಚಿನ್ನಿ ಮರಿಗೆ ನಾನು ತಿಂಡಿ ತಿನ್ನಿಸ್ತೀನಿ.
ಅನುಷಾಳೆಷ್ಟೇ ತಿಪ್ಪರಲಾಗ ಹಾಕಿದರೂ ಅಮ್ಮನಿಂದ ಕೆಳಗಿಳಿಯದ ನಿಶಾ ಅಮ್ಮನಿಂದಲೇ ತಿಂಡಿ ತಿನ್ನಿಸಿಕೊಂಡಳು. ಮಗಳಿಗೆ ತಿನ್ನಿಸುತ್ತ ತಾನೂ ತಿಂಡಿ ಮುಗಿಸಿದ ನೀತು ಎಂಗಂಡ ಸೇರಿದಂತೆ ಎಲ್ಲರೂ ತನ್ನ ಉತ್ತರಕ್ಕಾಗಿ ಏದುರು ನೋಡುತ್ತಿರುವುದನ್ನರಿತು ಮಕ್ಕಳಿಗೆ ಹೊರಗೆ ಹೋಗಿ ಆಡಿಕೊಳ್ಳಲು ತಿಳಿಸಿದಳು.
ನೀತು......ಗಿರೀಶ ಚಿನ್ನಿ ಯಾವುದೇ ಕಾರಣಕ್ಕೂ ಗೇಟಿನಿಂದಾಚೆಗೆ ಹೋಗದಂತೆ ನೋಡಿಕೊ.
ದೃಷ್ಟಿ......ಅತ್ತೆ ಅವಳ ಬಗ್ಗೆ ಚಿಂತಿಸದಿರಿ ನಾವೆಲ್ಲ ಇರ್ತೀವಲ್ಲ.
ಮಕ್ಕಳು ಹೊರಗೆ ಹೋದಾಗ ಹರೀಶ ಮಡದಿಯ ಪಕ್ಕದಲ್ಲಿ ಕುಳಿತು ವಿಷಯವೇನೆಂದಾಗ ರಾತ್ರಿಯಿಂದ ತಡೆದುಕೊಂಡಿದ್ದ ಕಣ್ಣೀರಿನ ಹನಿಅವಳ ಕಣ್ಣಿನಿಂದ ಹರಿಯತೊಡಗಿ ಗಂಡನೆದೆಗೆ ಒರಗಿ ಅಳಲು ಪ್ರಾರಂಭಿಸಿದಳು. ಹರೀಶ ಹೆಂಡತಿಯನ್ನು ತಬ್ಬಿಕೊಂಡು ಸಮಧಾನ ಮಾಡುತ್ತಿದ್ದರೆ ನಿಧಿ ಕೂಡ ಅಮ್ಮನನ್ನು ಮತ್ತೊಂದು ಕಡೆಯಿಂದ ತಬ್ಬಿಕೊಂಡು ಕಣ್ಣೀರು ಸುರಿಸುತ್ತಿದ್ದಳು.
ಹರೀಶ ಹೆಂಡತಿಯ ಭುಜ ತಟ್ಟುತ್ತ.....ಲೇ ಸಮಾಧಾನ ಮಾಡಿಕೋ ನೋಡು ನೀನು ಅಳುತ್ತಿರುವುದಕ್ಕೆ ನಿಧಿ ಕೂಡ ಅಳ್ತಿದ್ದಾಳೆ.
ರೇವತಿ ತಾವೂ ಕಂಬನಿ ಮಿಡಿಯುತ್ತ.......ಯಾಕಮ್ಮ ಏನಾಯ್ತು ? ನಿನಗ್ಯಾವ ದುಃಖ ಕಾಡುತ್ತಿದೆಯೋ ಹೇಳಿಕೋ ಅದಕ್ಕೇನಾದರೂ ಸಮಾಧಾನ ಹುಡುಕೋಣ.
ಸ್ವಲ್ಪ ಅತ್ತು ಸಮಾಧಾನಗೊಂಡ ನೀತು ಹಿರಿಮಗಳ ಕಣ್ಣೀರನ್ನೊರೆಸಿ ನೆನ್ನೆ ರಾತ್ರಿ ತನಗೆ ಬಿದ್ದ ಭಯಾನಕ ಕನಸನ್ನು ಎಳೆಎಳೆಯಾಗಿ ಎಲ್ಲರ ಮುಂದೆ ಬಿಚ್ಚಿಟ್ಟಳು. ನೀತು ಹೇಳಿದ್ದನ್ನು ಕೇಳಿ ಯಾರಿಗೂ ಏನೆಂದು ಉತ್ತರಿಸಬೇಕು ಎಂಬುದೇ ತಿಳಿಯದೆ ಒಬ್ಬರನ್ನೊಬ್ಬರು ನೋಡುತ್ತ ಕುಳಿತಿದ್ದರು.
ಹರೀಶ......ಮಗಳ ಜೊತೆ ಮಲಗಿದ್ದಾಗ ಇದಕ್ಕೇನು ಪರಿಹಾರ ಎಂಬ ಬಗ್ಗೆ ಯೋಚಿಸಿರುತ್ತೀಯ ಅದನ್ನೂ ಹೇಳು.
ನೀತು......ನಿಧಿ ರೂಮಿನಿಂದ ನನ್ನ ಫೋನ್ ತೆಗೆದುಕೊಂಡು ಬಾಮ್ಮ
ಮಗಳಿಂದ ಫೋನ್ ಪಡೆದು ಮೊದಲಿಗೆ ವಿಕ್ರಂ ಸಿಂಗ್ ನಂ ಡಯಲ್ ಮಾಡಿ....
ನೀತು.......ವಿಕ್ರಂ ಸಿಂಗ್ ನಾಳೆ ನೀವು ಕಾಮಾಕ್ಷಿಪುರಕ್ಕೆ ಬರಬೇಕು ಆದರೆ ಒಬ್ಬರೇ ಅಲ್ಲ ನಿಮ್ಜೊತೆ ದಿಲೇರ್ ಸಿಂಗನನ್ನು ಕರೆತರಬೇಕು. ಹಾಗೆಯೇ ಸಂಸ್ಥಾನದ ಕಂಪನಿಯಲ್ಲಿ ಜೂನಿಯಲ್ ಮಾನೇಜರ್ ಆಗಿರುವ ಪಾವನ ಎಂಬುವವಳನ್ನೂ ಕರೆದುಕೊಂಡು ಬನ್ನಿ.
ನೀತು......ನೀವು ಸಂಸ್ಥಾನದ ಎರಡು ಹೆಲಿಕಾಪ್ಟರಿನಲ್ಲೇ ಬರಬೇಕು ಎಲ್ಲಿ ಲ್ಯಾಂಡಿಂಗ್ ಎಂಬುದರ ಲೊಕೇಷನ್ ನಾನು ಕಳಿಸುತ್ತೀನಿ ಅದರ ಜೊತೆ ಪಾವನಾಳ ನಂ.. ಕೂಡ ಕಳಿಸುವೆ ಅವಳ ಜೊತೆಗೆ ನಾನು ಮಾತನಾಡಿ ವಿಷಯ ಹೇಳಿರುತ್ತೀನಿ. ನೀವು ನನಗೀಗಲೇ ದಿಲೇರ್ ಸಿಂಗ್ ನಂ.. ಕಳಿಸಿ ಅವರಿಗೂ ನಾನು ಫೋನ್ ಮಾಡುವ ವಿಷಯ ತಿಳಿಸಿರಿ.
ವಿಕ್ರಂ ಸಿಂಗ್......ಆಯ್ತು ಮೇಡಂ.
ಪಾವನಾಳ ನಂ... ಡಯಲ್ ಮಾಡಿ......
ನೀತು......ಪಾವನ ನಾಳೆ ನೀನು ನಮ್ಮೂರಿಗೆ ಬರಬೇಕು ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿರುವೆ ನಿನಗೆ ವಿಕ್ರಂ ಸಿಂಗ್ ಗೊತ್ತಾ.
ಪಾವನ......ಹೂಂ ಅಕ್ಕ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ.
ನೀತು.....ಈಗವರೇ ನಿನಗೆ ಫೋನ್ ಮಾಡ್ತಾರೆ ನಾಳೆ ನೀನು ಅವರ ಜೊತೆಯಲ್ಲಿ ಬಾ ಮಿಕ್ಕಿದ ವಿಷಯ ಇಲ್ಲೇ ಮಾತನಾಡೋಣ.
ಪಾವನ.....ಸರಿ ಅಕ್ಕ.
ಕತೆ ಬಹಳ ಚೆನ್ನಾಗಿ ನಡೆಯುತ್ತಿದೆ, ಮಧ್ಯೆ ನಿಲ್ಲಿಸಬೇಡಿ
ReplyDelete