Total Pageviews

Monday, 23 September 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 207

ಅಕ್ಕ ಹೇಳಿಕೊಟ್ಟ ಆಟಗಳನ್ನೆಲ್ಲಾ ಒಂದು ಘಂಟೆಗೂ ಅಧಿಕ ಹೊತ್ತು ಆಡಿದ ನಿಶಾ ಅಮ್ಮನ ಹತ್ತಿರ ಹೋಗಬೇಕೆಂದಾಗ ನಿಧಿ ತಂಗಿಯನ್ನು ಕೆಳಗೆ ಕರೆತಂದಳು. ಮನೆಯಲ್ಯಾರೂ ಕಾಣಿಸದೆ ಎಲ್ಲಾ ಕಡೆಯೂ ಹುಡುಕಾಡಿದ ನಿಶಾ ಅಜ್ಜಿಯ ಹತ್ತಿರ ಹೋಗಿ......

ನಿಶಾ.....ಅಜ್ಜಿ ನನ್ನಿ ಮಮ್ಮ ಲೆಲ್ಲಿ ?

ನಿಧಿ......ಹೌದಜ್ಜಿ ಅಮ್ಮ..ಅತ್ತೆ...ಆಂಟಿ ಯಾರೂ ಕಾಣುತ್ತಿಲ್ಲ ಶೀಲಾ ಆಂಟಿ ಮಾತ್ರ ರೂಮಿನಲ್ಲಿದ್ದಾರೆ.

ರೇವತಿ.....ಎಲ್ಲರೂ ಅಶೋಕನ ಫ್ಯಾಕ್ಟರಿಯ ಹತ್ತಿರ ಹೋಗಿದ್ದಾರೆ.

ನಿಧಿಯ ಕಾಲಿಗೆ ಜೋತು ಬಿದ್ದ ನಿಶಾ.....ಅಕ್ಕ ನನ್ನಿ ಮಮ್ಮ ಹತ್ತಾ ಹೋಗಣ ಬಾ ನನ್ನಿ ಮಮ್ಮ ಬೇಕು.

ರಾಜೀವ್.....ನಿಧಿ ನನ್ನ ಪುಟಾಣಿಯ ಜೊತೆ ನೀನೂ ಫ್ಯಾಕ್ಟರಿಯ ಹತ್ತಿರ ಹೋಗಿ ಬಾರಮ್ಮ ಅವಳಮ್ಮ ಹತ್ತಿರ ಹೋಗದೆ ಬಿಡಲ್ಲ.

ನಿಧಿ.....ಸರಿ ತಾತ ಅಮ್ಮನನ್ನು ಕೇಳ್ತೀನಿ ಅಕಸ್ಮಾತ್ ಅವರೇ ಮನೆ ಕಡೆ ಬರುತ್ತಿದ್ದರೆ ನಾವ್ಯಾಕೆ ಹೋಗೋದು.

ನೀತುವಿನ ಜೊತೆ ಮಾತನಾಡಿದ ನಿಧಿ ಅವರಿನ್ನೂ ಅಲ್ಲೇ ಇರುವ ಬಗ್ಗೆ ತಿಳಿದು ಅಜ್ಜಿ ತಾತನಿಗೆ ಹೇಳಿ ತಂಗಿಯ ಜೊತೆ ಸ್ವಿಫ್ಟ್ ಕಾರಿನಲ್ಲಿ ಹೊರಟರೆ ರಾಜಮನೆಯ ಆರಕ್ಷಕರಲ್ಲಿ ನಾಲ್ವರು ಜೀಪಿನಲ್ಲಿ ಇವರ ಹಿಂದೆ ಬೆಂಗಾವಲಿಗೆ ಹೊರಟರು. ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಿರುವ ಅಶೋಕನ ಆಫೀಸಿನ ಹಲವು ನೌಕರರು ಫ್ಯಾಕ್ಟರಿಯ ಹಿಂಭಾಗದಲ್ಲಿ ನಿರ್ಮಿಸಲಾದ ವಸತಿ ಸಮುಚ್ಚಯಕ್ಕೆ ಶಿಫ್ಟಾಗಿದ್ದು ಅಲ್ಲಿನ ಗೃಹಪ್ರವೇಶವನ್ನು ಮನೆ ಮಟ್ಟಕ್ಕೆ ಮೇ ತಿಂಗಳ ಕೊನೆಯಲ್ಲಿ ನೆರವೇರಿಸಲಾಗಿತ್ತು. ಅಲ್ಲಿ ವಾಸಿಸುವವರಿಗೆ ಸಕಲ ರೀತಿ ಸವಲತ್ತಿನ ಜೊತೆ ಪಕ್ಕದಲ್ಲಿಯೇ ಶುದ್ದ ಕುಡಿಯುವ ನೀರಿನ ಘಟಕವನ್ನು ಸಳ ಹಾಕಿಕೊಡಲಾಗಿತ್ತು.

ನೀತು......ಇಲ್ಲಿ ನೀವು ವಾಸಿಸುವುದಕ್ಕೆ ಯಾವುದೇ ತೊಂದರೆಯೂ ಆಗ್ತಿಲ್ಲ ತಾನೇ ಏನೇ ಸಮಸ್ಯೆಗಳಿದ್ದರೂ ಸಂಕೋಚವಿಲ್ಲದೆ ಹೇಳಿ.

ಆಫೀಸ್ ಮಾನೇಜರ್.....ಇಲ್ಲ ಮೇಡಂ ಎಲ್ಲ ರೀತಿಯ ಅನುಕೂಲ ಸಹ ಇಲ್ಲಿ ಮಾಡಿಕೊಟ್ಟಿದ್ದೀರ ಯಾವುದೇ ತೊಂದರೆಗಳಿಲ್ಲ.

ಅಶೋಕನ ಆಫೀಸಿನಲ್ಲಿ ಕೆಲಸ ಮಾಡುವವರ ಮಡದಿಯಲ್ಲಿ.....

ಹೆಂಗಸು1.....ನಮ್ಮ ಮಕ್ಕಳು ಇಲ್ಲಿಂದ ಶಾಲೆಗೆ ಹೋಗಿ ಬರುವುದಕ್ಕೆ ನೀವೇ ಬಸ್ಸಿನ ವ್ಯವಸ್ಥೆ ಮಾಡಿಕೊಟ್ಟಿದ್ದೀರ ಅದಕ್ಕಾಗಿ ನಿಮಗೆ ತುಂಬ ಧನ್ಯವಾದಗಳು ಮೇಡಂ.

ರಜನಿ....ಫ್ಯಾಕ್ಟರಿಯಿಂದ ಶಾಲೆಗೆ 6ಕಿಮೀ.. ದೂರವಿದೆ ಪ್ರತಿನಿತ್ಯ ನೀವು ಮಕ್ಕಳನ್ನು ಕರೆದೊಯ್ದು ಬಿಡುವುದು ಕರೆತರುವುದು ಕಷ್ಟದ ಕೆಲಸವೇ. ಇಲ್ಲಿಂದ ಒಟ್ಟು 45 ಮಕ್ಕಳು ಶಾಲೆಗೆ ಹೋಗುತ್ತಿರುವ ಕಾರಣ ನಾವೇ ಒಂದು ಬಸ್ಸಿನ ವ್ಯವಸ್ಥೆ ಮಾಡುವ ತೀರ್ಮಾನಕ್ಕೆ ಬಂದೆವು.

ನೀತು.....ನಿಮ್ಮೆಲ್ಲರನ್ನು xxxನಿಂದ ಕಾಮಾಕ್ಷಿಪುರಕ್ಕೆ ಶಿಫ್ಟ್ ಮಾಡಿಸಿ ಇಲ್ಲಿ ನಿಮಗೆ ತೊಂದರೆಯಾಗದ ರೀತಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಅಲ್ಲವ. ಇದಕ್ಕೆಲ್ಲಾ ನೀವು ನಮಗೆ ಧನ್ಯವಾದವನ್ನು ಹೇಳೊ ಅಗತ್ಯವಿಲ್ಲ ಇದೆಲ್ಲವೂ ನಮ್ಮ ಜವಾಬ್ದಾರಿ.

ಹೆಂಗಸು 3.....ಆದರೂ ಮೇಡಂ ಯಾವ ಫ್ಯಾಕ್ಟರಿಯವರು ತಮ್ಮಲ್ಲಿ ಕೆಲಸ ಮಾಡುವ ನೌಕರರಿಗೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಡುತ್ತಾರೆ ಹೇಳಿ ಇದಕ್ಕಾಗಿ ನಿಮಗೆ ಧನ್ಯವಾದ ಹೇಳಿದರೆ ತಪ್ಪಿಲ್ಲ.

ಇವರೆಲ್ಲರ ಮಾತುಕತೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಸ್ವಿಫ್ಟ್ ಕಾರು ಎಲ್ಲರ ಹತ್ತಿರವೇ ನಿಂತರೆ ಕೆಳಗಿಳಿದ ನಿಧಿ ತಂಗಿಯನ್ನೂ ಇಳಿಸಿದಳು. ಒಮ್ಮೆ ತಮ್ಮ ಹಿಂದೆ ನಿಂತಿದ್ದ ರಕ್ಷಕರನ್ನು ನೋಡಿದ ನಿಶಾ ಅಮ್ಮನ ಬಳಿಗೋಡಿ ಅವಳ ಹೆಗಲಿಗೇರಿದಳು.

ನೀತು.....ಈ ನನ್ನ ಚಿಲ್ಟಾರಿಯ ಪರಿಚಯ ನಿಮಗೆಲ್ಲರಿಗೂ ಆಗಿದೆ ಇವಳು ನಿಧಿ ಅಂತ ನನ್ನ ಹಿರಿಮಗಳು ಬೇರೆ ಊರಿನಲ್ಲಿ ಓದುತ್ತಿದ್ಳು ಈ ವರ್ಷದಿಂದ ಇದೇ ಊರಲ್ಲಿ ಮುಂದುವರಿಸುತ್ತಾಳೆ.

ಅಲ್ಲಿ ನೆರೆದಿದ್ದ ಆಫೀಸ್ ನೌಕರರ ಕುಟುಂಬದ ಸುಮಾರು 30—35 ಜನ ಮಹಿಳೆಯರು ನೀತು ಮತ್ತು ನಿಧಿ ಇಬ್ಬರನ್ನು ತುಂಬ ಅಚ್ಚರಿಯ ದೃಷ್ಟಿಯಲ್ಲಿ ನೋಡುತ್ತಿದ್ದರು.

ಮಹಿಳೆ14.......ಮೇಡಂ ತಪ್ಪು ತಿಳಿಯಬೇಡಿ ಇವಳು ನಿಜವಾಗೂ ನಿಮ್ಮ ಮಗಳೇನ ?

ನೀತು......ಯಾಕೆ ಅನುಮಾನವಾ ?

ಮಹಿಳೆ28.......ಮೇಡಂ ಇವರು ಹೇಳಿದ್ದು ಅನುಮಾನದಿಂದಲ್ಲ ಆದರೆ ನಿಮಗಿಷ್ಟು ದೊಡ್ಡ ಮಗಳಿದ್ದಾಳೆಂದರೆ ನಂಬಲಿಕ್ಕೆ ಆಗ್ತಿಲ್ಲ.

ಮಹಿಳೆ16....ಹೂಂ ಮೇಡಂ ಈ ಮುದ್ದಾದ ಮಗು ನಿಮ್ಮ ಮಗಳು ಎಂದರೆ ತಿಳಿಯುತ್ತೆ ಆದರಿಷ್ಟು ದೊಡ್ಡ ಹುಡುಗಿ......

ಮಹಿಳೆ7.......ನಿಮಗೆ ಅಬ್ಬಬ್ಬಾ ಎಂದರೆ 26—27 ವರ್ಷವೇ ಆಗಿದೆ ಅನಿಸುತ್ತೆ ಆದರೆ 18—19 ವರ್ಷದ ದೊಡ್ಡ ಮಗಳು ಹೇಗೆ ?

ನೀತು ನಗುತ್ತ......ಅಯ್ಯೋ ನನಗೆ 25 ವರ್ಷವಲ್ಲ 38 ತುಂಬಿದೆ ನನ್ನನ್ನೇನು ಚಿಕ್ಕ ಹುಡುಗಿ ಅಂದ್ಕೊಂಡಿದ್ದೀರಾ ?

ರಜನಿ.....ಮತ್ತಿನ್ನೇನು ನೀವೆಲ್ಲರೂ ಸೇರಿ ಈ ಮುದುಕಿಗೆ ತುಂಬಾನೇ ಬಿಲ್ಡಪ್ ಕೊಡ್ತಿದ್ದೀರಲ್ಲ.

ರಜನಿಯ ಮಾತಿಗೆ ಎಲ್ಲರೂ ನಕ್ಕರೆ ನಿಶಾ ಅರಮನೆಯ ರಕ್ಷಕರನ್ನೇ ಧಿಟ್ಟಿಸಿ ನೋಡುತ್ತಿದ್ದಳು.

ನೀತು.....ಏನಾಯ್ತಮ್ಮ ಚಿನ್ನಿ ಅವರನ್ನೇಕೆ ಹಾಗೆ ನೋಡ್ತಿದ್ದೀಯ ?

ನಿಧಿ......ಅಮ್ಮ ಇವಳು ಅವರನ್ನಲ್ಲ ನೋಡ್ತಿರೋದು ಅವರ ಹತ್ತಿರ ಇದೆಯಲ್ಲ ಆ ಕತ್ತಿಗಳನ್ನ ನೋಡ್ತಿದ್ದಾಳೆ ಅದಕ್ಕೇ ಇವಳಿಗೂ ಒಂದು ಪ್ಲಾಸ್ಟಿಕ್ ಕತ್ತಿ ತೆಗೆದುಕೊಡಬೇಕಮ್ಮ.

ನೀತು......ಹೂಂ ಕಣೆ ಮನೆಗೆ ಹೋಗ್ತಾ ತಗೊಳ್ಳೋಣ.

ಹರೀಶ ಫೋನ್ ಮಾಡಿ......

ಹರೀಶ......ಎಲ್ಲಿದ್ದೀಯಮ್ಮ ಪುಟ್ಟಿ ? ನಿಮ್ಮಮ್ಮ ಜೊತೆಗಿದ್ದಾಳಾ ?

ನಿಧಿ......ಹೂಂ ಅಪ್ಪ ನಾವೆಲ್ಲರೂ ಫ್ಯಾಕ್ಟರಿಯ ಹತ್ತಿರ ಬಂದಿದ್ದೀವಿ ಅಮ್ಮ ಜೊತೆಯಲ್ಲಿದ್ದಾರೆ.

ಹರೀಶ......ಒಳ್ಳೆಯದಾಯಿತು. ಈಗಲೇ ನಿಮ್ಮಮ್ಮನ ಜೊತೆ ನೀನು ಯೂನಿವರ್ಸಿಟಿ ಕಾಲೇಜಿನ ಹತ್ತಿರ ಬಾ ನಿಮ್ಮ ಪ್ರಿನ್ಸಿಪಾಲ್ ಫೋನ್ ಮಾಡಿದ್ದರು ನಾನೂ ಶಾಲೆಯಿಂದ ಹೊರಡುತ್ತಿದ್ದೀನಿ.

ನಿಧಿ.....ಸರಿಯಪ್ಪ ಮನೆಗೆ ಹೋಗಿ ಡಿಕ್ಯುಮೆಂಟ್ಸ್ ತೆಗೆದುಕೊಂಡು ನಾನು ಅಮ್ಮ ಬರ್ತೀವಿ.

ಹರೀಶ......ನಾನೇ ಪ್ರಿನ್ಸಿಪಾಲ್ ಹತ್ತಿರ ಹೋಗಿ ಬರೋಣವೆಂದು ನಿನ್ನ ಡಾಕ್ಯುಮೆಂಟ್ಸ್ ಬೆಳಿಗ್ಗೆಯೇ ತೆಗೆದಿಟ್ಟುಕೊಂಡಿದ್ದೆ ಆದರೆ ನಿನ್ನ ಮತ್ತು ನಿಮ್ಮಮ್ಮನನ್ನೂ ಕರೆದುಕೊಂಡು ಬನ್ನಿ ಅಂದರು ನೀವಿಬ್ಬರು ನೇರವಾಗಿ ಹೊರಟು ಬಂದುಬಿಡಿ.

ನಿಧಿ......ಆಯ್ತಪ್ಪ ಈಗಲೇ ಹೊರಡ್ತೀವಿ....ಎಂದು ಫೋನಿಟ್ಟಳು.

ನೀತು......ನಿಮ್ಮಪ್ಪ ಎಲ್ಲಿಗೆ ಕರಿತಿರೋದು ?

ನಿಧಿ......ಅಮ್ಮ ನಾವೀಗಲೇ ಡಿಗ್ರಿ ಕಾಲೇಜಿನ ಹತ್ತಿರ ಹೋಗ್ಬೇಕಂತೆ ಅಪ್ಪನಿಗೆ ಪ್ರಿನ್ಸಿಪಾಲ್ ಫೋನ್ ಮಾಡಿ ನಮ್ಮಿಬ್ಬರನ್ನು ಬರುವುದಕ್ಕೆ ಹೇಳಿದ್ದಾರಂತೆ.

ನೀತು...ನಡಿ ಮನೆಗೆ ನಿನ್ನ ಡಾಕ್ಯುಮೆಂಟ್ಸ್ ತಗೊಂಡು ಹೋಗೋಣ

ನಿಧಿ......ಅದೆಲ್ಲವೂ ಅಪ್ಪನ ಹತ್ತಿರವೇ ಇದೆಯಂತೆ ನಮ್ಮನ್ನಿಲ್ಲಿಂದ ನೇರವಾಗಿ ಯೂನಿವರ್ಸಿಟಿಗೆ ಬನ್ನಿರೆಂದು ಹೇಳಿದರು.

ಸುಮ.....ನೀತು ನೀವಿಬ್ಬರು ಹೊರಡಿ ಮೊದಲು ನಿಧಿ ಕಾಲೇಜಿನ ಅಡ್ಮಿಷನ್ ಕೆಲಸ ಮುಗಿಸಿ.....ಎಂದು ನಿಧಿಯ ಹಣೆಗೆ ಮುತ್ತಿಟ್ಟು ಗುಡ್ಲಕ್ ಹೇಳಿದಳು.

ಅವಳಂತೆಯೇ ಪ್ರೀತಿ— ರಜನಿಯೂ ವಿಷಸ್ ಹೇಳಿದ ನಂತರ..... ಒಯ್ ಚೋಟ್ ಮೆಣಸಿನಕಾಯಿ ನೀನು ಅಮ್ಮನ ಜೊತೆ ಬೇಡ ಬಾ ನಾವು ಮನೆಗೆ ಹೋಗೋಣ.

ನಿಶಾ ಬರಲ್ಲವೆಂದು ತಲೆ ಅಳ್ಳಾಡಿಸಿ ಅಮ್ಮನನ್ನು ತಬ್ಬಿಕೊಂಡಳು.

ನೀತು.....ಇಲ್ಲ ಕಂದ ಅಮ್ಮ ನಿನ್ನ ಬಿಟ್ಟೋಗಲ್ಲ ನಡಿ ನಾವು ಅಕ್ಕನ ಕಾಲೇಜ್ ನೋಡಿಕೊಂಡು ಬರೋಣ.

ಅಮ್ಮ ಮಕ್ಕಳಿಬ್ಬರು ಸ್ವಿಫ್ಟಲ್ಲಿ ಹೊರಟರೆ ರಕ್ಷಕರು ಅವರನ್ನು ತಮ್ಮ ಜೀಪಿನಲ್ಲಿ ಹಿಂಬಾಲಿಸುತ್ತ ಹೊರಟರು.

ಮಹಿಳೆ25.....ಮೇಡಂ ಒಂದು ವಿಷಯ ಕೇಳಬಹುದಾ ನೀವು ತಪ್ಪು ತಿಳಿಯಬಾರದು.

ಪ್ರೀತಿ.....ನಾವೇಕೆ ತಪ್ಪು ತಿಳಿಯುತ್ತೀವಿ ಏನದು ಕೇಳಿ.

ಮಹಿಳೆ25.....ಮೇಡಂ ನೀವೆಲ್ಲರೂ ಇಲ್ಲಿಗೆ ಬಂದಾಗ ನಿಮ್ಮ ಜೊತೆ ಯಾವ ಸೆಕ್ಯೂರಿಟಿಯವರೂ ಇರಲಿಲ್ಲ ಆದರೆ ನೀತು ಮೇಡಂನ ಮಕ್ಕಳಿಬ್ಬರು ಬಂದಾಗ ಅವರಿಗೆ ಸೆಕ್ಯೂರಿಟಿಯವರು ಬಂದಿದ್ದರು.

ಮಹಿಳೆ18....ಹೌದು ಮೇಡಂ ನಾವೆಲ್ಲರೂ ಗಮನಿಸಿದೆವು ಅದಕ್ಕೇ ನಿಮ್ಮನ್ನು ಕೇಳಿದ್ದು.

ಮಹಿಳೆ34.....ಮೇಡಂ ಇವರು ಸಾಮಾನ್ಯ ಸೆಕ್ಯೂರಿಟಿಯವರೆಂದು ಕಾಣಿಸಲಿಲ್ಲ ಯಾವುದೋ ರಾಜಮಹಾರಾಜರ ಅಪ್ತ ರಕ್ಷಕರಂತೆ ಕಾಣಿಸುತ್ತಿದ್ದರು.

ಸುಮ.....ಇದರ ಬಗ್ಗೆ ನಾವು ಜಾಸ್ತಿ ಹೇಳಲಾಗುವುದಿಲ್ಲ ಆದರಿಷ್ಟು ಮಾತ್ರ ಹೇಳಬಲ್ಲೆ ನಮ್ಮ ಮನೆಯ ಪುಟ್ಟ ದೇವತೆ ನಿಶಾ ಸಾಮಾನ್ಯ ಹುಡುಗಿಯಲ್ಲ. ಅದಕ್ಕಾಗಿಯೇ ಅವಳ ಮೇಲೆ ಕೆಲವು ದುಷ್ಟಶಕ್ತಿಗಳ ಕಣ್ಣಿದೆ ಅವಳಿಗೋಸ್ಕರವೇ ನಾವು ಸೆಕ್ಯೂರಿಟಿ ಇಟ್ಟಿರುವುದು.

ಮಹಿಳೆ22.....ಪಾಪ ಮೇಡಂ ಅಷ್ಟು ಮುದ್ದಾದ ಮಗುವಿನ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿದೆ ಅವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ ಎಲ್ಲರೂ ನರಕದಲ್ಲಿ ಕೊಳೆಯುತ್ತಾರೆ.

ಮಹಿಳೆ29.....ನಾವೆಲ್ಲರೂ ಅದನ್ನೇ ಬೇಡಿಕೊಳ್ತೀವಿ ಮೇಡಂ ನಿಶಾ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ.

ರಜನಿ.....ನಿಮ್ಮಂತ ಒಳ್ಳೆ ಮನಸ್ಸಿನವರ ಹಾರೈಕೆಯೇ ನಮ್ಮ ಮನೆ ಮಗುವಿಗೆ ಶ್ರೀರಕ್ಷೆ.

ಪ್ರೀತಿ.....ನಿಮಗೆ ಯಾವುದೇ ರೀತಿ ತೊಂದರೆಗಳಿದ್ದರೂ ನಾವೇನು ತಿಳಿದುಕೊಳ್ತೀವೋ ಅಂತ ಯೋಚಿಸದೆ ನಿಸ್ಸಂಕೋಚವಾಗಿ ತಿಳಿಸಿ ನಾವದನ್ನು ಬಗೆಹರಿಸುತ್ತೀವಿ.

ರಜನಿ.....ಇಲ್ಲಯೇ ಸೆಕ್ಯೂರಿಟಿಯ ಮುಖ್ಯಸ್ಥ ಬಸ್ಯ ಅಂತ ಇರ್ತಾನೆ ಅವನ ಬಳಿ ತಿಳಿಸಿದರೂ ಸಾಕು. ಕಛೇರಿ ಪ್ರಾರಂಭವಾದ ನಂತರ ಎಲ್ಲರೂ ಇಲ್ಲಿಯೆ ಸಿಗುತ್ತಾರೆ.

ಹೆಂಗಸರಿಂದ ಬೀಳ್ಗೊಂಡು ಮೂವರು ಮನೆಯ ಕಡೆಗೆ ಹೊರಟರೆ ಹೆಂಗಸರ ಸಹಜ ಪ್ರವೃತ್ತಿಯಂತೆ ಎಲ್ಲರೂ ಅಲ್ಲಿಯೇ ಸೇರಿಕೊಂಡು ನಿಶಾಳ ವಿಷಯವಾಗಿ ಮಾತನಾಡುತ್ತ ನಿಂತರು.

ಬೆಟ್ಟ ಗುಡ್ಡಗಳು ಮತ್ತು ನೈಸರ್ಜಿಕ ಸೌಂದರ್ಯದಿಂದ ಸುಂದರವಾದ ಸುಮಾರು ಒಂದು ಲಕ್ಷ ಆಸುಪಾಸಿನಷ್ಟು ಜನರು ವಾಸಿಸುತ್ತಿರುವ ಕಾಮಾಕ್ಷಿಪುರ ನಗರಗಳಂತೆ ವಿಶಾಲವಾಗಿರದಿದ್ದರೂ ವ್ಯವಸ್ಥಿತವಾಗಿ ಅತ್ಯಂತ ಸ್ವಚ್ಚವಾದ ಊರಾಗಿತ್ತು ಅದರ ಜೊತೆಗೆ ವಿದ್ಯೆದೇವಿಯಾದ ತಾಯಿ ಸರಸ್ವತಿಯೇ ಸಾಕ್ಷಾತ್ ನೆಲೆಸಿರುವಂತೆ ಕಾಮಾಕ್ಷಿಪುರವು ವಿದ್ಯಾರ್ಜನೆಗೆ ಹೆಸರುವಾಸಿಯಾಗಿತ್ತು ಸರ್ಕಾರದ ಹಲವಾರು ವಿದ್ಯಾ ಕೇಂದ್ರಗಳಿದ್ದು ಒಂದನೇ ತರಗತಿಯಿಂದ ಇಂಜಿನಿಯರಿಂಗ್...... ವೈದ್ಯಕೀಯ....ವಿಜ್ಞಾನ....ಸ್ನಾನಕೋತರ ಪದವಿಯಿಂದ ಮಾಹಿತಿ ತಂತ್ರಜ್ಞಾನದವರೆಗೂ ಎಲ್ಲಾ ರೀತಿಯ ವಿದ್ಯಾರ್ಜನೆ ಮಾಡುವುದಕ್ಕೆ ಕಾಮಾಕ್ಷಿಪುರ ಇಡೀ ರಾಜ್ಯದಲ್ಲಿಯೇ ಹೆಸರುವಾಸಿಯಾಗಿತ್ತು. ಇಲ್ಲಿ ಸರ್ಕಾರೇತರ ಶಿಕ್ಷಣ ಸಂಸ್ಥೆಗಳಿದ್ದರೂ ಅವುಗಳ ಬೇಡಿಕೆ ತುಂಬಾನೇ ವಿರಳವಾಗಿತ್ತು. 250 ಎಕರೆ ಜಾಗದಲ್ಲಿನ ಗಿಡಮರಗಳಿಂದ ಕೂಡಿದ ವಿಶ್ವವಿದ್ಯಾನಿಲಯದ ಆವರಣದೊಳಗೆ ಸ್ವಿಫ್ಟ್ ಕಾರು ಪ್ರವೇಶಿಸಿದ್ದು ಅಲ್ಲಿನ ವಾತಾವರಣ ನೋಡಿದ ನಿಧಿಗೆ ತುಂಬಾನೇ ಇಷ್ಟವಾಯಿತು. ಪಕ್ಕದ ಸೀಟಿನಲ್ಲಿ ಅಮ್ಮನ ತೊಡೆ ಮೇಲೆ ನಿಂತಿದ್ದ ನಿಶಾ ಅದನ್ನೆಲ್ಲಾ ನೋಡುತ್ತ ಅಮ್ಮನಿಗೆ ತನ್ನದೇ ರೀತಿಯ ವ್ಯಾಖ್ಯಾನ ನೀಡುತ್ತಿದ್ದಳು.

ನಿಧಿ......ಅಮ್ಮ ಯೂನಿವರ್ಸಿಟಿ ತುಂಬ ದೊಡ್ಡದಿದೆ ನಾವೀಗ್ಯಾವ ಕಡೆ ಹೋಗಬೇಕು ?

ನೀತು.....ನಿಮ್ಮಪ್ಪನಿಗೆ ಸ್ವಲ್ಪ ಕಜ್ಜಾಯ ಕೊಡಬೇಕು ಕಣೆ ರಜೆಯಲ್ಲಿ ನಿನ್ನನ್ನಿಲ್ಲಿಗೆ ಕರೆದುಕೊಂಡು ಬಂದು ಎಲ್ಲಾ ಕಡೆ ತೋರಿಸಬಾರದಿತ್ತಾ ನನಗೂ ಇಲ್ಲಿ ಸರಿಯಾಗಿ ಗೊತ್ತಿಲ್ಲ ಯಾರನ್ನಾದರೂ ಕೇಳೋಣ.

ಯೂನಿವರ್ಸಿಟಿಯ ಉಪಕುಲಪತಿಗಳ ಕಛೇರಿಯ ಬಗ್ಗೆ ವಿಚಾರಿಸಿ ಅಲ್ಲಿಗೆ ತಲುಪಿ ಕಾರನ್ನು ಪಾರ್ಕಿಂಗ್ ಮಾಡುವಾಗ ಹರೀಶ ಹತ್ತಿರಕ್ಕೆ ಬಂದು ನಿಂತಿದ್ದನು.

ಹರೀಶ.....ಚಿನ್ನಿ ಮರಿ ನೀನೂ ಬಂದಿದ್ದೀಯ ಕಂದ.

ಅಪ್ಪನನ್ನು ನೋಡಿ ಮುಗುಳ್ನಕ್ಕ ನಿಶಾ ಅಮ್ಮನ ಮಡಿಲಿನಿಂದ ಅತ್ತ ಜಿಗಿದು ಅಪ್ಪನ ತೋಳಿಗೆ ಸೇರಿಕೊಂಡು ಕೆನ್ನೆಗೆ ಮುತ್ತಿಟ್ಟಳು.

ನೀತು......ರೀ ರಜೆಯಲ್ಲಿ ನೀವೀ ತರ್ಲೆ ಜೊತೆ ಸೇರಿ ಮನೆಯಲ್ಲೇ ಸುಮ್ಮನೆ ಕಾಲಹರಣ ಮಾಡ್ತಿದ್ರಿ. ನಿಧಿ ಜೊತೆ ಇಲ್ಲಿಗೆ ಬಂದು ಎಲ್ಲೆಲ್ಲಿ ಏನೇನಿದೆ ಯಾವ ಕಡೆ ಹೋಗಬೇಕು ಆಫೀಸ್ ಕಾಲೇಜಿನ ಬಿಲ್ಡಿಂಗ್ ಎಲ್ಲಿದೆ ಅಂತ ತೋರಿಸಿಕೊಡಬಾರದಿತ್ತಾ ? ನಾವಿಲ್ಲಿಗೆ ಬರುವುದಕ್ಕೆ ಬೇರಯವರನ್ನು ಕೇಳಿ ದಾರಿ ತಿಳಿದುಕೊಂಡು ಬರಬೇಕಾಯಿತು.

ಹರೀಶ......ನೀನು ಹೇಳಿದ್ದು ಸರಿ ಕಣೆ ನಾನು ಮೊದಲೇ ಎಲ್ಲವನ್ನೂ ನಿಧಿಗೆ ತೋರಿಸಬೇಕಾಗಿತ್ತು ನೀನೇನು ಚಿಂತಿಸಬೇಡ ಕಂದ ಇದೇ ಶನಿವಾರ ನಾವಿಲ್ಲಿಗೆ ಬರೋಣ ಆಗ ನಿನಗೆಲ್ಲಾ ಕಡೆ ತೋರಿಸ್ತೀನಿ.

ನಿಧಿ......ಸರಿ ಕಣಪ್ಪ ಪ್ರಿನ್ಸಿಪಲ್ ಆಫೀಸ್ ಇಲ್ಲೇ ಇರೋದ ?

ಹರೀಶ......ಹೂಂ ಕಣಮ್ಮ ಇದೇ ಬಿಲ್ಡಿಂಗಿನಲ್ಲಿ ಎಲ್ಲಾ ಕಾಲೇಜುಗಳ ಕಛೇರಿಗಳಿರುವು ನಡೀರಿ ಅವರು ನಮ್ಮನ್ನೇ ಕಾಯುತ್ತಿದ್ದಾರೆ.

ಹರೀಶ ಹೆಂಡತಿ ಮಗಳೊಂದಿಗೆ ಕಛೇರಿಯೊಳಗೆ ಬಂದಾಗ ಅಲ್ಲಿದ್ದ ಸರ್ಕಾರಿ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಹರೀಶನನ್ನು ತುಂಬಾನೇ ಆತ್ಮೀಯವಾಗಿ ಬರಮಾಡಿಕೊಂಡನು. ಹರೀಶ ಅವರಿಗೆ ಹೆಂಡತಿ ಮಕ್ಕಳನ್ನು ಪರಿಚಯಿಸಿ ನಿಧಿಯ ಡಾಕ್ಯುಮೆಂಟ್ಸ್ ನೀಡದನು. ಫೈಲ್ ನೋಡಿದ ನಂತರ.......

ಪ್ರಿನ್ಸಿ.....ಹರೀಶ ಇಲ್ಲಿ ನಿಧಿ ತಂದೆಯ ಹೆಸರಿನ ಜಾಗದಲ್ಲಿ ಯಾರೋ ರಾಣಪ್ರತಾಪ್ ಅಂತಿದೆಯಲ್ಲ.

ಗಂಡನಿಗಿಂತ ಮುಂಚೆ ನೀತು......ಸರ್ ಅವರು ನನ್ನ ಅಣ್ಣ. ನಮ್ಮಣ್ಣ
ಅತ್ತಿಗೆ ಈಗ ಜೀವಂತವಾಗಿಲ್ಲ ಅದಕ್ಕೆ ಅವರ ಮಗಳನ್ನು ನಾವು ನಮ್ಮ ಮಗಳಾಗಿ ಸ್ವೀಕರಿಸಿದ್ದೀವಿ ಆದರೆ ತಂದೆ ತಾಯಿಯ ಹೆಸರು ಬದಲಿಸುವುದು ಸರಿಯಲ್ಲವಲ್ಲ.

ಪ್ರಿನ್ಸಿ......ಒಳ್ಳೇದು ಕಣಮ್ಮ ತುಂಬ ಅತ್ಯುತ್ತಮವಾದ ನಿರ್ಧಾರವೇ ನನಗೆ ಹರೀಶ ತುಂಬ ಹಳೆಯ ಪರಿಚಯ.

ಹರೀಶ.....ಎಷ್ಟೇ ಪರಿಚಯವಿದ್ದರೇನು ಬಂತು ಸರ್ ನೀವು ನಮ್ಮ ಮನೆಯ ಒಂದೂ ಫಂಕ್ಷನ್ನಿಗೂ ಬಂದಿಲ್ಲವಲ್ಲ.

ಪ್ರಿನ್ಸಿ......ಹೌದು ಕಣಯ್ಯ ಅದು ತಪ್ಪೇ ಆದರೇನು ಮಾಡಲಿ ಹೇಳು ನೀನು ಕರೆದಾಗಲೆಲ್ಲ ನಾನು ಬರಲು ಸಿದ್ದನಿದ್ದೆ ಆದರೆ ಕುಲಪತಿಗಳು ಮೀಟಿಂಗು ಅದು ಇದು ಪ್ರೋಗ್ರಾಂ ಹಾಕಿಬಿಟ್ಟರೆ ಅದನ್ನೆಲ್ಲಾ ಬಿಟ್ಟು ಬರುವುದಕ್ಕೂ ಆಗಲ್ಲವಲ್ಲ. ಪ್ರತೀ ಸಲವೂ ನಾನು ನಿನಗೆ ಇದನ್ನೆಲ್ಲ ತಿಳಿಸಿ ಫಂಕ್ಷನ್ನಿಗೂ ಮುಂಚೆಯೇ ಕ್ಷಮೆ ಕೇಳಿದ್ದೀನಿ.

ನೀತು......ಸರ್ ನೀವು ವಿದ್ಯಾದೇಗುಲದ ಪ್ರಮುಖರು ಇಲ್ಲಿನ ಎಲ್ಲ ಕೆಲಸಗಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲಿರುತ್ತದೆ ಅದಕ್ಕಾಗಿ ನೀವು ಬರದಿರಬಹುದು ಅದಕ್ಕೆಲ್ಲಾ ಕ್ಷಮೆ ಕೇಳುವ ಅಗತ್ಯ ಇಲ್ಲ ಸರ್. ಆದರೆ ಇದೇ 15ನೇ ತಾರೀಖಿನಂದು ನಮ್ಮ ಫ್ಯಾಕ್ಟರಿಗಳ ಉದ್ಗಾಟನೆ ಕಾರ್ಯಕ್ರಮವಿದೆ ಅದಕ್ಕೆ ನೀವು ಬಂದರೆ ನಮಗೆಲ್ಲಾ ತುಂಬ ಸಂತೋಷವಾಗುತ್ತೆ.

ಹರೀಶ.....ಹೌದು ಸರ್ ನಾವಿಬ್ಬರೂ ನಿಮ್ಮನೇಗೆ ಬಂದು ಕರಿತೀವಿ ಈ ಸಲವೂ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಂಡರೆ ಮಾತ್ರ ಇನ್ಯಾವುದಕ್ಕೂ ಕರೆಯೊಲ್ಲ.

ಪ್ರಿನ್ಸಿ.....ಛೇ..ಛೇ..ಈ ಬಾರಿ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲವಪ್ಪ ಜೂನ್ 15 ಭಾನುವಾರ ನಾನು ಕುಟುಂಬದೊಂದಿಗೇ ಬರುತ್ತೀನಿ ಸರಿಯಾ. ಈ ಮುದ್ದು ಕಂದನ ಬಗ್ಗೆಯೇ ಅಲ್ಲವ ಹರೀಶ ನೀನು ಹೇಳ್ತಿದ್ದುದು ತುಂಬ ಮುದ್ದಾಗಿದ್ದಾಳೆ ಪುಟ್ಟಿ ನಿನ್ನ ಹೆಸರೇನಮ್ಮ.

ನಿಶಾ ಅಮ್ಮನ ಕಡೆಗೊಮ್ಮೆ ನೋಡಿ......ಚಿನ್ನಿ...ಎಂದಳು.

ಹರೀಶ ನಗುತ್ತ......ಸರ್ ಮನೆಯಲ್ಲಿ ಪ್ರೀತಿಯಿಂದ ಚಿನ್ನಿ ಅಂತಲೇ ಕರೆಯೋದು ಇವಳ ಹೆಸರು ನಿಶಾ ಅಂತ.

ಪ್ರಿನ್ಸಿಪಾಲ್ ತುಂಬ ಸಂತೋಷವೆನ್ನುತ್ತ 1000ರೂ ತೆಗೆದು ನಿಶಾಳ ಕೈಗಿಟ್ಟು ನಿಧಿಗೂ ಬಲವಂತ ಮಾಡಿ ಕೈಯಿಗೆ ಸಾವಿರ ರೂ.. ನೀಡಿ ಆಶೀರ್ವಧಿಸಿದರು.

ನೀತು.......ಸರ್ ನಿಮ್ಮ ಆಶೀರ್ವಾದ ಸಾಕಾಗಿತ್ತು ಹಣವೆಲ್ಲಾ...

ಪ್ರಿನ್ಸಿ ಮಧ್ಯದಲ್ಲೇ......ಮೊದಲ ಸಲ ನಾನು ಹರೀಶನ ಮಕ್ಕಳನ್ನು ಬೇಟಿಯಾಗುತ್ತಿದ್ದೀನಿ ಅದರಲ್ಲೂ ಹೆಣ್ಣುಮಕ್ಕಳನ್ನ ಇವರು ದೇವಿಯ ಸ್ವರೂಪ ಕಣಮ್ಮ ಬರೀ ಕೈಯಲ್ಲಿ ಆಶೀರ್ವಧಿಸುವುದು ತಪ್ಪು ಇವರ ಬದಲಿಗೆ ಹರೀಶನ ಗಂಡು ಮಕ್ಕಳು ಬಂದಿದ್ದರೆ ನಾಲ್ಕೇಟು ಕೊಟ್ಟು ಮಾತನಾಡಿಸುತ್ತಿದ್ದೆ ಹ್ಹ..ಹ್ಹ...ಹ್ಹ....ಎಂದು ನಕ್ಕರೆ ಉಳಿದವರೂ ಮುಗುಳ್ನಕ್ಕರು.

ಹರೀಶ......ಎರಡನೇ ವರ್ಷಕ್ಕೆ ನಿಧಿಯ ಅಡ್ಮಿಷನ್ನಿಗೆ ಯಾವುದೇ ತೊಂದರೆ ಇಲ್ಲ ತಾನೇ ಸರ್ ಯಾಕೆಂದರೆ ಯೂನಿರ್ವಸಿಟಿ ಜೇಂಜ್ ಆಗುತ್ತಲ್ಲ ಅದಕ್ಕೆ ಕೇಳಿದೆ.

ಪ್ರಿನ್ಸಿ.....ನಾನಿಲ್ಲಿರುವುದ್ಯಾಕೆ ಹೇಳು ನೀನು ಮೊದಲು ಹೇಳಿದಾಗಲೆ ಅದಕ್ಕೇನೇನು ವ್ಯವಸ್ಥೆ ಮಾಡಬೇಕಿತ್ತೋ ಎಲ್ಲವನ್ನೂ ಮಾಡಿದ್ದೀನಿ ಏನೂ ತೊಂದರೆಯಿಲ್ಲ. ನಿಧಿ ಸೋಮವಾರ ನೀನು ನೇರವಾಗಿ ನನ್ನ ಬಳಿಗೇ ಬಾರಮ್ಮ ನಿನ್ನ ಐಡಿ...ಲೈಬ್ರೆರಿ ಕಾರ್ಡ್ ಎಲ್ಲವನ್ನು ನಾನಿಲ್ಲೇ ತರಸಿರುತ್ತೇನೆ ನೀನು ಕಲೆಕ್ಟ್ ಮಾಡಿಕೊಳ್ಳುವಂತೆ. ನಿಧಿ ಪ್ರಥಮ ವರ್ಷದ ಬಿಬಿಎ ಏಕ್ಸಾಂನಲ್ಲಿ 96% ಅದೂ ಡಿಗ್ರಿಯಲ್ಲಿ ತುಂಬಾನೇ ಒಳ್ಳೆಯ ಮಾರ್ಕ್ಸ್ ತೆಗೆದಿರುವೆ ಕಣಮ್ಮ ಮುಂದೆಯೂ ಅದೇ ರೀತಿ ಓದಬೇಕು ಗೊತ್ತಾಯ್ತ.

ನಿಧಿ.....ಖಂಡಿತ ಸರ್ ನಾನು ಪ್ರಯತ್ನ ಮಾಡೇ ಮಾಡ್ತೀನಿ.

ಪ್ರಿನ್ಸಿ.....ವೆರಿ ಗುಡ್ ಸೋಮವಾರ ನೇರವಾಗಿ ನನ್ನ ಬೇಟಿಯಾಗು.

ಹರೀಶ......ಒಕೆ ಸರ್ ನಾವಿನ್ನು ಹೊರಡ್ತೀವಿ ಶಾಲೆಗೆ ಹೊಗಬೇಕಿದೆ.

ಪ್ರಿನ್ಸಿ........ನೀನು ಶಾಲೆಯಿಂದ ಪರ್ಮಿಷನ್ ಪಡೆದು ಬಂದಿರುವೆ ಅಲ್ಲವ ಹೇಗಿದ್ದಾನೆ ನಿಮ್ಮ ಮುಖ್ಯೋಪಾಧ್ಯಾಯ ಅವನನ್ನು ಬೇಟಿ ಮಾಡಿ ತುಂಬ ದಿನಗಳಾಯಿತು ಕಣೋ ಹರೀಶ.

ಹರೀಶ......ಅವರಿಗೇನು ಸರ್ ಚೆನ್ನಾಗಿದ್ದಾರೆ ನೀತು ಇವರು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಪರಮಾಪ್ತ ಸ್ನೇಹಿತರು ಅವರೇ ನನಗೆ ಇವರನ್ನು ಪರಿಚಯ ಮಾಡಿಸಿದ್ದು.

ನೀತು......ಸಂತೋಷ ಸರ್ ನಾವು ಫ್ಯಾಕ್ಟರಿ ಓಪನಿಂಗಿಗೆ ಕರೆಯಲು ನಿಮ್ಮ ಮನೆಗೆ ಬರುತ್ತೀವಿ ಸರ್ ಖಂಡಿತ ಫ್ಯಾಮಿಲಿ ಜೊತೆ ನೀವು ಬಂದರೆ ನಮಗೆ ಸಂತೋಷವಾಗುತ್ತೆ.

ಪ್ರಿನ್ಸಿ.....ಖಂಡಿತ ಬಂದೇ ಬರ್ತೀನಿ ಕಣಮ್ಮ ನಮ್ಮ ಮನೆಗೆ ನೀವು ಬರುವಾಗ ಈ ಪುಟ್ಟ ಕಂದಮ್ಮನನ್ನೂ ಕರೆದುಕೊಂಡು ಬನ್ನಿ.

ಹರೀಶ.....ನಾವಿಬ್ಬರು ರೆಡಿಯಾದರೆ ಸಾಕು ನಮಗಿಂತ ಮುಂಚೆಯೆ ಇವಳು ನಿಂತಿರುತ್ತಾಳೆ ಸರ್ ನಾವಿನ್ನು ಬರ್ತೀವಿ.

ಅಲ್ಲಿಂದ ಹೊರಡುವ ಮುನ್ನ ಆಶ್ರಮದಲ್ಲಿ ಆಚಾರ್ಯರಿಗೆ ಪ್ರತಿದಿನ ಗುರುಗಳ ಬಗೆಗಿನ ಶ್ಲೋಕ ಹೇಳಿ ವಂಧಿಸುತ್ತಿದ್ದ ನಿಧಿ ಇಲ್ಲಿ ಕೂಡ ಪ್ರಿನ್ಸಿಪಾಲ್ ಮುಂದೆ ಕೈಮುಗಿದು ಶ್ಲೋಕವನ್ನೇಳಿ ಅವರ ಕಾಲಿಗೆ ವಂಧಿಸಿದಳು. ನಿಧಿಯ ಸದ್ಗುಣದ ನಡತೆಯನ್ನು ಮನಃಪೂರ್ವಕ ಮೆಚ್ಚಿಕೊಂಡು ಹಾರೈಸಿ ಆಶೀರ್ವಧಿಸಿದ ಪ್ರಿನ್ಸಿಪಾಲ್ ಜುಲೈ ಹತ್ತನೇ ತಾರೀಖಿನಿಂದ ತರಗತಿಗಳು ಪ್ರಾರಂಭವಾಗುತ್ತೆ ಎಂದರು.

ನಿಧಿ......ಸರ್ ಬಿಬಿಎ ದ್ವಿತೀಯ ವರ್ಷದ ಸಿಲಬಸ್ ಯಾವುದೆಂದು ನನಗೆ ಎಲ್ಲಿ ಮಾಹಿತಿ ಸಿಗುತ್ತೆ ?

ಪ್ರಿನ್ಸಿ.....ಅದರ ಬಗ್ಗೆ ನೀನೇನೂ ಚಿಂತಿಸಬೇಡ ಸೋಮವಾರ ಇಲ್ಲಿ ಬಂದಾಗ ಎಲ್ಲಾ ವಿಷಯದ ಬಗ್ಗೆ ನಿನಗೆ ಮಾಹಿತಿ ಕೊಡಿಸುತ್ತೀನಿ.

ನಿಧಿ.....ಥಾಂಕ್ಯೂ ಸರ್.

ಕಛೇರಿಯಿಂದ ಹೊರಬಂದು......

ಹರೀಶ......ಬಹಳ ವರ್ಷಗಳ ನಂತರ ನೀನು ಹೇಳಿದ ಶ್ಲೋಕವನ್ನು ಕೇಳಿದೆ ಕಂದ ತುಂಬ ಖುಷಿಯಾಯಿತು.

ನಿಧಿ....ನನ್ನ ಮಗಳೆಂದರೇನು ಸಾಮಾನ್ಯಳಾ ?

ಹರೀಶ....ಸರಿ ನೀವೀಗ ಮನೆಗೆ ಹೊರಡಿ ನಾನು ಶಾಲೆಗೆ ಹೋಗುವೆ

ನಿಶಾ......ಪಪ್ಪ ನಾನಿ ಬತೀನಿ.....

ಹರೀಶ ಮಗಳ ಕೆನ್ನೆಗೆ ಮುತ್ತಿಟ್ಟು......ಕಂದ ನೀನೀಗ ಮನೆಗೋಗು ಸಂಜೆ ನಾನು ನೀನು ಟಾಟಾ ಹೋಗಣ ನಾವಿಬ್ಬರೇ ಅಮ್ಮ ಬೇಡ.

ನೀತು ಮಕ್ಕಳ ಜೊತೆ ಹಿಂದಿರುಗುತ್ತಿದ್ದಾಗ ರಶ್ಮಿ ಕಾಲೇಜು ಬಿಟ್ಟಿದೆ ಅಂತ ಅಕ್ಕನಿಗೆ ಫೋನ್ ಮಾಡಿದರೆ ನಿಧಿ ಕಾರನ್ನು ತಿರುಗಿಸಿದಳು.

1 comment:

  1. ಕತೆ ಚೆನ್ನಾಗಿ ಸಾಗುತ್ತದೆ, ಯಾವುದೇ ಕಾರಣ ನಿಲಿಸಬೇಡಿ

    ReplyDelete