ಒಂದು ಘಂಟೆ ನಂತರ ಮನೆಯೊಳಗೆ ಬಂದ ವಿಕ್ರಂ ಸಿಂಗ್ ತಾನು ಮೊದಲಿಗೆ ನೀತುವಿನೆದುರು ಮಂಡಿಯೂರಿ ಗೌರವ ಸಲ್ಲಿಸಿ ನಿಶಾ ಮತ್ತು ನಿಧಿಯ ಸಮಕ್ಷಮ ಶಿರಬಾಗಿ ನಮಿಸಿದನು. ಪಾವನ ಎಲ್ಲರ ಕಡೆ ನೋಡಿ ವಂಧಿಸಿ ಕೈ ಕಟ್ಟಿಕೊಂಡು ಪಕ್ಕಕ್ಕೆ ಸರಿದಾಗ ಮುಂದಕ್ಕೆ ಬಂದ ಆರುವರೆ ಅಡಿಗಳೆತ್ತರದ ಅಜಾನುಬಾಹು ದಿಲೇರ್ ಸಿಂಗ್ ತನ್ನ ಎಡಗೈಯಲ್ಲಿಡಿದಿದ್ದ ನಾಲ್ಕಡಿ ಖಡ್ಗವನ್ನು ನಿಶಾಳ ಪಾದದ ಬಳಿಯಿಟ್ಟು ಶಿರಬಾಗಿ ವಂಧಿಸಿದ ನಂತರ ನಿಧಿಗೂ ಅದೇ ರೀತಿಯಲ್ಲಿ ನಮಿಸಿದನು. ನೀತುವಿನ ಪಾದದ ಮೇಲೆ ತನ್ನ ತಲೆಯಿಟ್ಟ ದಿಲೇರ್ ಸಿಂಗ್ ಮೇಲೆದ್ದು ಕೈ ಮುಗಿಯುತ್ತ.......
ದಿಲೇರ್....ರಾಜಮಾತೆಗೆ ಈ ಸೇವಕನ ಕೋಟಿ ಕೋಟಿ ನಮನಗಳು ನನ್ನ ವಂದನೆ ಸ್ವೀಕರಿಸಿ.
ನೀತು......ಏನಿದು ದಿಲೇರ್ ಸಿಂಗ್ ಎದ್ದೇಳು ಇವರಿಬ್ಬರೂ ನಿಮ್ಮ ರಾಜಕುಮಾರಿಯರು ಆದರೆ ನಾನು ರಾಜಮಾತೆ ಹೇಗಾಗುತ್ತೀನಿ.
ದಿಲೇರ್......ನೀವು ನಮ್ಮ ರಾಜಕುಮಾರಿಯರಿಗೆ ತಾಯಿ ಅಲ್ಲವಾ ಹಾಗಿರುವಾಗ ನೀವು ನಮಗೆ ರಾಜಮಾತೆಯೇ.
ನೀತು......ನಿಮ್ಮ ಜೊತೆ ವಾದವಿವಾದ ಮಾಡಲಾಗದು ಎಲ್ಲರೂ ಬನ್ನಿ ಒಳಗೆ ಕುಳಿತು ಮಾತನಾಡೋಣ.
ದಿಲೇರ್ ಸಿಂಗ್ ತನ್ನ ಜೊತೆ ಕರೆತಂದಿದ್ದ ಹತ್ತು ಜನ ಅತ್ಯಾಪ್ತರಾದ ರಕ್ಷಕರು ಸಹ ನೀತು ಮತ್ತಿಬ್ಬರು ರಾಜಕುಮಾರಿಯರ ಸಮಕ್ಷಮದಲ್ಲಿ ಶಿರಭಾಗಿದರು.
ನೀತು.....ದಿಲೇರ್ ಸಿಂಗ್ ನಾನು ಏಳು ಜನರಾದರೆ ಸಾಕೆಂದಿದ್ದೆ 10 ಜನರನ್ನು ಕರೆತಂದಿರುವೆಯಲ್ಲ.
ದಿಲೇರ್.......ಹಗಲು ರಾತ್ರಿ ಕಾವಲಿಗೆ ಹತ್ತು ಜನರಿದ್ದರೆ ಸರಿಯೆಂದು ಯೋಚಿಸಿಯೇ ಕರೆ ತಂದಿರುವೆ ಇವರು ಉಳಿದುಕೊಳ್ಳಲು ಅವರೇ ವ್ಯವಸ್ಥೆ ಮಾಡಿಕೊಳ್ತಾರೆ.
ಹರೀಶ......ಅದರ ಅವಶ್ಯಕತೆಯಿಲ್ಲ ದಿಲೇರ್ ನಿಮ್ಮ ಜನರುಗಳಿಗೆ ಉಳಿದುಕೊಳ್ಳಲು ನಮ್ಮ ಏದುರು ಮನೆಯಲ್ಲಿ ವ್ಯವಸ್ಥೆ ಮಾಡಿದ್ದೀವಿ ಪ್ರತಾಪ್ ಇವರನ್ನಲ್ಲಿಗೆ ಕರೆದುಕೊಂಡೋಗಿ ತೋರಿಸು.
ದಿಲೇರ್ ಸಿಂಗ್ ಕಪ್ಪು ಬಣ್ಣದ ಕುರ್ತಾ ಮತ್ತು ಟೈಟಾದ ಪೈಜಾಮ ರೀತಿಯ ಯೋಧನ ವೇಶದಲ್ಲಿದ್ದು ಸೊಂಟಕ್ಕೆ ಬೆಲ್ಟಿನಂತೆ ಉದ್ದನೇ ಬಟ್ಟೆಯನ್ನು ಬಿಗಿಯಾಗಿ ಸುತ್ತಿದ್ದರ ಜೊತೆ ತಲೆಯ ಮೇಲೆ ಪಗಡಿ ಹಾಕಿಕೊಂಡಿದ್ದನು. ಒಟ್ಟಿನಲ್ಲಿ ಆತನ ವೇಷಭೂಶ ಮಹಾರಾಜರ ಆಪ್ತ ರಕ್ಷಕನಂತಿದ್ದು ಅವನನ್ನೇ ನಿಶಾ ಧಿಟ್ಟಿಸಿ ನೋಡುತ್ತ ಅಮ್ಮನನ್ನು ಒರಗಿಕೊಂಡು ನಿಂತಿದ್ದಳು. ಮನೆಯವರೆಲ್ಲರ ಪರಿಚಯ ಮಾಡಿಸಿ ತಿಂಡಿ ಟೀ ಸೇವಿಸಿದ ನಂತರ.......
ನೀತು......ನಾನೀಗ ನೇರವಾಗಿ ವಿಷಯಕ್ಕೆ ಬರ್ತೀನಿ. ಆಚಾರ್ಯರು ನಿನಗೆ ನೀಡಿದ್ದ ಕೆಲಸವೇನಾಯಿತು ದಿಲೇರ್ ಸಿಂಗ್ ?
ದಿಲೇರ್.....ಈ ವಿಷಯವನ್ನು ನಿಮ್ಮೊಬ್ಬರಿಗೇ ಮಾತ್ರ ತಿಳಿಸುವಂತೆ ಆಚಾರ್ಯರು ಹೇಳಿದ್ದರು.
ನೀತು.....ಇಲ್ಲಿರುವವರೆಲ್ಲರೂ ನಮ್ಮವರೇ ದಿಲೇರ್ ನೀನು ಯಾರ ಬಗ್ಗೆಯೂ ಅನುಮಾನ ಪಡಬೇಕಾಗಿಲ್ಲ ನಿಶ್ಚಿಂತೆಯಿಂದ ಹೇಳು.
ದಿಲೇರ್.....ನಿಮ್ಮ ಆದೇಶದಂತೆಯೇ ಆಗಲಿ. ರಾಜಸ್ಥಾನದಲ್ಲಿರುವ xxx ಕಲ್ಲಿನ ಮತ್ತು ಗ್ರಾನೈಟ್ ಕ್ವಾರಿಗಳಲ್ಲಿ ಶೇಖಡ 65ರಷ್ಟು ನಮ್ಮ ಸಂಸ್ಥಾನದ ಅಧೀನದಲ್ಲಿದೆ. ಈಗ ಸಂಸ್ಥಾನದ ಯಜಮಾನರಾದ ಮಹರಾಜ ಅಥವ ಮಹರಾಣಿಯವರಾಗಲಿ ಇಲ್ಲದಿರುವ ಕಾರಣಕ್ಕೆ ಅಲ್ಲಿನ ಕೆಲವು ರಾಣಕಾರಿಣಿಗಳು...ಅಧಿಕಾರಿಗಳು ಮತ್ತು ಹಲವು ಬಿಝನೆಸ್ ಮಾಡುವವರು ಅದನ್ನೆಲ್ಲಾ ತಮ್ಮ ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇವರೆಲ್ಲರನ್ನು ಮುಂದೆ ಬಿಟ್ಟು ತರೆ ಹಿಂದೆ ಆಡುತ್ತಿರುವುದು ರಾಜಸ್ಥಾನದ ಮುಖ್ಯಮಂತ್ರಿ ಮತ್ತು ಕೆಲ ಹಿರಿಯ ಸಚಿವರು. ಆದಷ್ಟು ಬೇಗ ಹಿರಿಯ ರಾಜಕುಮಾರಿ ತಮ್ಮ ಅಧಿಕಾರ ವಹಿಸಿಕೊಳ್ಳದಿದ್ದರೆ ಕಾನೂನಿನ ಅಡಚಣೆಗಳನ್ನು ಸೃಷ್ಟಿಸಿ ಎಲ್ಲಾ ಕ್ವಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತಯಾರಿಯಲ್ಲಿದ್ದಾರೆ ಆಗ ನಾವು ಕಾನೂನಿನ ಪ್ರಕಾರವೇ ಹೋರಾಡ ಬೇಕಾಗುತ್ತೆ ಅದಕ್ಕೆ ಎಷ್ಟು ವರ್ಷಗಳು ಹಿಡಿಯುತ್ತೋ ಯಾರಿಗೆ ಗೊತ್ತು.
ನೀತು......ಇದಾ ಒಳಗಿನ ವಿಷಯ. ದಿಲೇರ್ ಸಿಂಗ್ ನಾನು ನಿನ್ನನ್ನು ಇಲ್ಲಿಗೆ ಕರೆಸಿದ್ದೀನೆಂದರೆ ಅದು ಕಾನೂನಿನ ಚೌಕಟ್ಟಿನಲ್ಲಿ ಮಾಡುವ ಕೆಲಸವಂತೂ ಆಗಿರುವುದಿಲ್ಲ ಅಂತ ನಿನಗೆ ಗೊತ್ತಾಗಿರಬೇಕಲ್ಲವಾ.
ದಿಲೇರ್......ನೆನ್ನೆ ನಿಮ್ಮ ಫೋನ್ ಬಂದಾಗಲೇ ನನಗೆ ಅರ್ಥವಾಗಿ ಹೋಯಿತು ನಿಮ್ಮ ಆದೇಶಕ್ಕಾಗಿ ಕಾಯುತ್ತಿದ್ದೀನಿ.
ನೀತು......ಸಂಸ್ಥಾನದ ವಿರುದ್ದ ಕತ್ತಿ ಮಸೆಯುತ್ತಿರುವ ಎಲ್ಲರ ಬಗ್ಗೆ ವಿವರಗಳು ಅವರು ಯಾರೆಂಬುದರ ಸಂಪೂರ್ಣ ಮಾಹಿತಿಗಳು ನಿನ್ನ ಬಳಿ ಇದೆಯಲ್ಲವಾ ?
ದಿಲೇರ್ ಸಿಂಗ್......ಹೌದು ರಾಜಮಾತೆ ಅದರ ಜೊತೆ ನಮ್ಮವರು ಅವರ ಹಿಂದೆಯೇ ನೆರಳಿನಂತಿದ್ದಾರೆ ರಾಜ್ಯದ ಸಿಎಂ ಮತ್ತು ಇತರೆ ಸಚಿವರುಗಳನ್ನೂ ಸೇರಿಸಿ ಎಲ್ಲಾ ಉದ್ಯಮಿಗಳು ಹಿಂದೆಯೂ ನಮ್ಮ ಜನರಿದ್ದಾರೆ.
ನಿಧಿ......ಅವರಲ್ಯಾರೂ ನಾಳಿನ ಸೂರ್ಯೋದಯ ನೋಡದಿರಲಿ ದಿಲೇರ್ ಸಿಂಗ್.
ನಿಧಿಯ ಮಾತನ್ನು ಕೇಳಿ ಮನೆಯವರೆಲ್ಲರೂ ಶಾಕಾಗಿ ಹೋಗಿದ್ದರೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಮುಖದಲ್ಲಿ ವಿಜಯದ ನಗು ಮೂಡಿತು.
ನೀತು......ನಿಮ್ಮ ರಾಜಕುಮಾರಿ ಖುದ್ದಾಗಿ ಆದೇಶಿಸಿದ್ದಾಳೆ ದಿಲೇರ್ ಆದರೆ ಒಂದು ವಿಷಯ ಸದಾ ನೆನಪಿನಲ್ಲಿರಲಿ ಅವರಲ್ಯಾರೊಬ್ಬರ ಹೆಣವೂ ಸಹ ಸಿಗಬಾರದು ಮತ್ತವರು ಏನಾದರೆಂಬ ಸಣ್ಣ ಸುಳಿವು ಕೂಡ ಪ್ರಪಂಚಕ್ಕೆ ಸಿಗಲೇಬಾರದು. ಮರಳುಗಾಡಿನಲ್ಲಿ ಬೀಸುತ್ತಿದ್ದ ಗಾಳಿಯಲ್ಲವರೆಲ್ಲರೂ ವಿಲೀನರಾಗಿ ಮಾಯವಾಗಿ ಹೋಗಿದ್ದಾರೆ ಎನ್ನುವಂತಿರಬೇಕು.
ದಿಲೇರ್.......ಅವರೆಲ್ಲರ ನೆರಳಿಗೂ ಸಹ ಸುಳಿವು ಸಿಗುವುದಿಲ್ಲ ಆ ರೀತಿ ಕೆಲಸ ಮುಗಿಸುವೆ.
ನೀತು.....ನನ್ನ ಮಗಳು ನಿಮ್ಮ ರಾಜಕುಮಾರಿಗೆ ಸ್ವಲ್ಪ ಆತುರ ಜಾಸ್ತಿ ಈ ಕೆಲಸ ನಾಳೆಯೇ ಮಾಡಬೇಕಾಗಿಲ್ಲ ಸರಿಯಾದ ಸಮಯಕ್ಕಾಗಿ ಕಾದು ಆನಂತರ ಒಂದೇ ಪ್ರಹಾರದಲ್ಲಿ ಎಲ್ಲರನ್ನು ನಾಶ ಮಾಡಬೇಕು. ಜೂನ್ 15ರ ನಂತರ ನಾನು ನಿಮ್ಮಿಬ್ಬರು ರಾಜಕುಮಾರಿಯರನ್ನು ಕರೆದುಕೊಂಡು ಉದಯಪುರಕ್ಕೆ ಬರುತ್ತೇನೆ. ಅಲ್ಲಿಗೆ ಬರುವುದಕ್ಕೂ ಮುನ್ನ ನಾನು ನಿಮಗೆ ತಿಳಿಸುವೆ ಆ ದಿನ ಇಲ್ಲಿಗೆ ಛಾಪರ್ ಕಳಿಸುವ ವ್ಯವಸ್ಥೆ ಮಾಡಿ. ವಿಕ್ರಂ ಸಿಂಗ್ ನಿಮ್ಮ ರಾಜಕುಮಾರಿ ನಿಮಗೇನೋ ಕೊಡಬೇಕೆಂದಿದ್ದಾಳೆ ಮುಂದೆ ಅವಳೇ ಹೇಳುತ್ತಾಳೆ.
ನಿಧಿ......ವಿಕ್ರಂ ಸಿಂಗ್ ಇದೊಂದು ರೀತಿಯ ಹಾರಾಡುವ ಹುಳುವಿನ ರೀತಿಯ ಯಂತ್ರ ಸಧ್ಯಕ್ಕೆ ನನ್ನಿಂದ ಮೂರನ್ನು ಮಾತ್ರ ತಯಾರಿಸಲು ಸಾಧ್ಯವಾಯಿತು. ಇದು ಬ್ಯಾಟರಿ ಚಾಲಿತವಾಗಿ ಕೆಲಸ ಮಾಡುತ್ತದೆ ಇದನ್ನು ಒಂದು ಕಿಮೀ.. ದೂರದಿಂದ ನಿಯಂತ್ರಿಸಬಹುದು ಆದರೆ ಇದನ್ನು ಹಾರಾಡಿಸುವ ಮುನ್ನ ಕಂಪ್ಯೂಟರಿನ ಜೊತೆ ಕನೆಕ್ಟ್ ಮಾಡಿ ನಂತರ ಹಾರಾಟಕ್ಕೆ ಬಿಡಬೇಕು. ಇದರಲ್ಲಿ ಪವರಫುಲ್ ಕ್ಯಾಮೆರಾ ಮತ್ತು ಹೈಸೆನ್ಸಿಟಿವಿಟಿ ಮೈಕ್ರೋಫೋನ್ ಅಳವಡಿಸಲಾಗಿದೆ. ಇದು ಯಾವುದೇ ಜಾಗದಲ್ಲಿ ಹಾರಾಡಿದರೂ ಸುತ್ತಮುತ್ತಲಿನ ಐವತ್ತು ಮೀ ಜಾಗದಲ್ಲಿನ ಪ್ರತಿಯೊಂದು ಶಬ್ದಗಳನ್ನೂ ಗ್ರಹಿಸಿ ಕಂಪ್ಯೂಟರಿಗೆ ರವಾನಿಸುತ್ತದೆ. ಇದರಿಂದ ನೀವು ನಮ್ಮವರೇ ಆಗಿದ್ದರೂ ನಮಗೆ ವಿರೋಧವಾಗಿ ನಿಂತಿರುವವರ ಮೇಲೆ ನಿಗಾ ಇಡುವ ಜೊತೆ ಅವರ ಮುಂದಿನ ಚಟುವಟಿಕೆಗಳನ್ನು ಗಮನಿಸಬಹುದು.
ಮೊದಲಿಗದನ್ನು ಚಂಚಲಾದೇವಿ ಮತ್ತು ಭಾನುಪ್ರತಾಪ್ ಇವರಿಬ್ಬರ ಅರಮನೆಗಳಲ್ಲಿ ಹಾರಾಡುವುದಕ್ಕೆ ಬಿಡಬೇಕಿದೆ ಮತ್ತು ಒಂದು ನಿರ್ಧಿಷ್ಟವಾಗಿರುವ ಜಾಗದಲ್ಲಿ ಇವುಗಳನ್ನು ಸೇರಿಸಿಬಿಟ್ಟರೆ ಆ ಸ್ಥಳದಲ್ಲಿವು ಇನ್ನೆಂದೂ ತೆಗೆಯಲಾಗದಂತೆ ಅಂಟಿಕೊಂಡು ಬಿಡುತ್ತವೆ. ಇದನ್ನು ಯಾವ್ಯಾವ ರೀತಿ ಉಪಯೋಗಿಸಬೇಕೆಂದು ನಾನೀ ಪತ್ರದಲ್ಲಿ ಪೂರ್ತಿ ವಿವರದಿ ಬರೆದಿದ್ದೇನೆ ನಮ್ಮ ಸಂಸ್ಥಾನದಲ್ಲಿ ನುರಿತ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಪರಿಣಿತ ಇಂಜಿನಿಯರುಗಳು ಇರಬೇಕಲ್ಲವಾ.
ವಿಕ್ರಂ ಸಿಂಗ್........ಹೌದು ಯುವರಾಣಿಯವರೇ ನಮ್ಮಲ್ಲಿ ತುಂಬ ಅತ್ಯುನ್ನತ ತರಬೇತಿ ಹೊಂದಿರುವ ತಂತ್ರಜ್ಞರಿದ್ದಾರೆ ಅವರೆಲ್ಲರಿಗೂ ಇದನ್ನು ನೀಡಿದರೆ ಸರಿಯಾಗಿ ನಿರ್ವಹಣೆ ಮಾಡುತ್ತಾರೆ. ನೀವು ಆದೇಶಿಸಿರುವಂತೆ ಇಂದು ಮರಳಿದ ತಕ್ಷಣವೇ ನಾನೀ ಕಾರ್ಯದಲ್ಲಿ ತೊಡಗಿಸಿಕೊಳ್ಳುವೆ.
ನೀತು......ನೀವು ನನ್ನನ್ನು ರಾಜಮಾತೆ ಎಂದು ಗೌರವಿಸಿರುವಿರಿ ಆ ಅಧಿಕಾರದಿಂದಲೇ ನಾನು ನಿಮಗೆ ಆದೇಶಿಸುತ್ತಿದ್ದೀನಿ. ಜೂನ್ 15 ಕ್ಕಿಂತ ಮುಂಚೆ ನಿಮ್ಮ ಬಳಿ ರಾಜಮನೆತನದ ವಿರೋಧಿಗಳ ಪೂರ್ತಿ ಮಾಹಿತಿ ಇರಬೇಕು ಮುಂದೇನು ಮಾಡಬೇಕೆಂದು ನಾನಲ್ಲಿಗೆ ಬಂದ ನಂತರ ಹೇಳುತ್ತೇನೆ. ಆದರೆ ದಿಲೇರ್ ಸಿಂಗ್ ನಾವಲ್ಲಿಗೆ ಬರುವುದಕ್ಕೆ ಮುಂಚೆಯೇ ಈ ರಾಜಕಾರಿಣಿಗಳು ಮತ್ತಿತರ ವಿರೋಧಿಗಳ ಅಂತ್ಯ ಆಗಿರಬೇಕು ಯಾರೊಬ್ಬರ ಸುಳಿವೂ ಸಹ ಸಿಗಬಾರದು.
ದಿಲೇರ್......ನಿಮ್ಮ ಆದೇಶ ಅಕ್ಷರಶಃ ಪಾಲನೆಯಾಗುತ್ತದೆ.
ನೀತು....ˌ.ಪಾವನ ನಿನಗೇನಾದರೂ ತಿಳಿಯಿತಾ ?
ಪಾವನ......ಮೇಡಂ ಸಂಸ್ಥಾನದ ಕಂಪನಿಯ ಬೋರ್ಡ್ ಮೆಂಬರ್ ಎಲ್ಲರೂ ರಾಜಮನೆತನಕ್ಕೆ ಅತ್ಯಂತ ನಿಷ್ಠಾವಂತರು ಅವರಲ್ಯಾರೂ ಸಹ ಯಾವುದೇ ರೀತಿಯ ಅವ್ಯವಹಾರ ಮಾಡುತ್ತಿಲ್ಲ. ಆದರೆ ಅಲ್ಲಿ ಕೆಲಸ ಮಾಡುತ್ತಿರುವ ಆರು ಜನ ಮ್ಯಾನೇಜರ್ ಬಗ್ಗೆ ಹೇಳಲಾಗದು. ಅವರು ಕಂಪನಿಯ ಹೆಸರಿನ ಹಿಂದೆ ತಮ್ಮದೇ ಯಾವುದೋ ಒಂದು ಅನೈತಿಕ ಅಕ್ರಮ ಕೆಲಸದಲ್ಲಿ ತೊಡಗಿದ್ದಾರೆಂದು ನನಗೆ ಧೃಡವಾದ ನಂಬಿಕೆಯಿದೆ. ಆದರೆ ನಾನೊಬ್ಬಳೇ ಆಗಿರುವುದರಿಂದ ನನಗವರ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.
ನೀತು......ವಿಕ್ರಂ ಸಿಂಗ್ ರಾಜಸ್ಥಾನಕ್ಕೆ ಮರಳಿದ ತಕ್ಷಣ ಪಾವನಾಳ ಸಹಾಯಕ್ಕೆಂದು ಅತ್ಯಂತ ಚಾಣಾಕ್ಷರಾದ ಕೆಲವರನ್ನು ನೇಮಿಸು ಅಲ್ಲಿನಆರೂ ಜನ ಮ್ಯಾನೇಜರುಗಳ ಬಗ್ಗೆ ಆದಷ್ಟು ಬೇಗ ಎಲ್ಲಾ ಮಾಹಿತಿ ಸಂಗ್ರಹಿಸಿ ನನಗೆ ತಿಳಿಸಬೇಕು.
ವಿಕ್ರಂ ಸಿಂಗ್......ಖಂಡಿತವಾಗಿಯೂ ರಾಜಮಾತೆ.
ನೀತು.....ಪಾವನ ಕಂಪನಿಯ ಚಲಾವಣೆಗೆ ಸಧ್ಯಕ್ಕೆ 1500 ಕೋಟಿ ಹಣ ಸಾಕೆಂದು ಹೇಳಿದೆ ಅಲ್ಲವಾ.
ಪಾವನ.......ಹೌದು ಮೇಡಂ 1400—1500 ಕೋಟಿಗಳಷ್ಟು ಹಣ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಜೂನ್ 20ರ ಬಳಿಕ ಬೋರ್ಡ್ ನಿರ್ವಹಣೆಯಲ್ಲಿರುವ ಕಂಪನಿ ಅಕೌಂಟಿಗೆ 10—12 ಸಾವಿರಗಳಷ್ಟು ಕೋಟಿ ಪೇಮೆಂಟ್ ಆಗಲಿದೆ. ಇನ್ನೂ ಕೆಲವು ಕಂಪನಿಗಳು ಮತ್ತು ಹೊರದೇಶದ ವ್ಯವಹಾರ ಹಾಗು ಐಷಾರಾಮಿ ಹೋಟೆಲ್ಲುಗಳಿಂದ ಬರುವಂಪ ಹಣೆವೆಲ್ಲವೂ ರಾಜಮನೆತನದ ಅಧೀನದಲ್ಲಿರುವಂತ ಅಕೌಂಟಿಗೆ ಬರುತ್ತದೆ. ಅದರಿಂದ ರಾಜಮನೆತನದ ಅಧಿಕಾರಿವನ್ನು ಹೊಂದಿದವರು ಮಾತ್ರ ಹಣ ತೆಗೆಯುವುದಕ್ಕೆ ಸಾಧ್ಯ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ ಹಣ ತೆಗೆಯಲಾಗದು. ನಮ್ಮ ರಾಜಕುಮಾರಿಯವರು ಅಧಿಕಾರ ವಹಿಸಿಕೊಂಡ ತಕ್ಷಣ ಕಂಪನಿಗೆ ಸಂಬಂಧಿಸಿದ ಎಲ್ಲಾ ಅಕೌಂಟುಗಳೂ ಅವರ ಅಧೀನಕ್ಕೆ ಬರುತ್ತೆ.
ನೀತು........ಅದರ ಬಗ್ಗೆ ನಾನು ಯೋಚಿಸುವೆ ಈಗ ನಿನಗೆ 2700 ಕೋಟಿ ಹಣ ನೀಡುವೆ ಅದನ್ನು ಕಂಪನಿಯ ಅಕೌಂಟಿಗೆ ಹಾಕಿಬಿಡು. ಕಂಪನಿಯ ನಿರ್ವಹಣೆಯ ಕಾರ್ಯಗಳು ಮುಗಿದ ನಂತರ ಹಾಗು ಬರಬೇಕಾಗಿರುವ ಪೇಮೆಂಟ್ಸ್ ಬಂದ ನಂತರ ಕಂಪನಿ ಅಕೌಂಟಿನ ಮೂಲಕವೇ ಈ ಹಣವನ್ನು ನಾನೀಗ ನಿನಗೆ ನೀಡುವ ಅಕೌಂಟಿಗೆ ವರ್ಗಾಯಿಸಿಬಿಡು. ಇದು ನಿಮ್ಮ ಕಿರಿಯ ರಾಜಕುಮಾರಿ ಬ್ಯಾಂಕ್ ಖಾತೆ.
ಹರೀಶ.......ಚಿನ್ನಿ ಇನ್ನೂ ಚಿಕ್ಕವಳಲ್ಲವಾ ನೀತು.
ನೀತು......ಮಕ್ಕಳು ವಯಸ್ಕರಾಗುವ ತನಕ ಅವರ ಹೆಸರಿನಲ್ಲಿರುವ ಅಕೌಂಟನ್ನು ತಂದೆ ಅಥವ ತಾಯಿ ಇಬ್ಬರಲ್ಲಿ ಯಾರಾದ್ರು ನಿರ್ವಹಣೆ ಮಾಡಬುಹುದಲ್ಲ ನನ್ನ ಮಗಳ ಖಾತೆ ನಾನು ನೋಡಿಕೊಳ್ಳುವೆ ಈಗ ಮುಂದಿನ ಮಾತುಕತೆಗಳೆಲ್ಲವೂ ನಾವು ಅರಮನೆಗೆ ಬಂದ ಮೇಲೇ. ಈಗ ನೀವೆಲ್ಲರೂ ನಮ್ಮ ಕುಟುಂಬದವರ ಜೊತೆ ಸೌಹಾರ್ದವಾಗಿ ಮಾತನಾಡಬಹುದು ಇಲ್ಯಾವುದೇ ರೀತಿಯ ರಾಜಾಜ್ಞೆಯೂ ನಿಮಗೆ ಅಡ್ಡಿಯಾಗಿರುವುದಿಲ್ಲ.
ಮನೆಯ ಮಕ್ಕಳೆಲ್ಲರೂ ಹೊರಗೆ ಷಟಲ್ ಕಾಕ್ ಆಡುತ್ತಿದ್ದು ಒಳಗೆ ಬಂದ ಸುರೇಶ.......ಚಿನ್ನಿ ನಿನ್ನ ಫ್ರೆಂಡ್ಸ್ ಬಂದಿದೆ ಅವಕ್ಕೆ ನೀನು ತಿಂಡಿ ಕೊಡಲ್ಲವಾ.
ಅಷ್ಟೊತ್ತೂ ಅಮ್ಮನ ಮಡಿಲಲ್ಲಿ ಗಾಂಭೀರ್ಯವೆತ್ತ ರಾಜಕುಮಾರಿ ರೀತಿ ಕುಳಿತು ಎಲ್ಲರನ್ನು ಗಮನಿಸುತ್ತಿದ್ದ ನಿಶಾ ಅಣ್ಣನ ಮಾತಿಗೆ ಕೆಳಗಿಳಿದು......ಮಮ್ಮ ನನ್ನಿ ಫೆಂಡ್ ಬಂತು ದಾಚಿ ಕೊಡು.
ನೀತು ಮಗಳ ತಲೆ ಸವರಿ......ಅಲ್ಲಿ ಆಂಟಿ ಹತ್ತಿರ ಈಸ್ಕೊ ಕಂದ.
ಕಿಚನ್ನಿನತ್ತ ಹೋಗುತ್ತಿರುವಾಗಲೂ ನಿಶಾಳ ದೃಷ್ಟಿ ಮಾತ್ರ ದಿಲೇರ್ ಸಿಂಗ್ ಪಕ್ಕದಲ್ಲಿದ್ದ ಖಡ್ಗದ ಮೇಲಿದ್ದು ಅನುಷಾಳಿಂದ ದ್ರಾಕ್ಷಿ ಮತ್ತು ಗೋಡಂಬಿ ಪಡೆದು ಮನೆಯಾಚೆ ಓಡಿದಳು.
ರಾಜೀವ್.......ಏನಮ್ಮ ನುತು ಇದೆಲ್ಲ ? ಈ ರೀತಿ ಒಂದು ರಾಜ್ಯದ ಮುಖ್ಯಮಂತ್ರಿ....ಮಂತ್ರಿಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಮಾರಣ ಹೋಮವನ್ನೇ ಮಾಡಿಸಲು ಸಜ್ಜಾಗಿರುವೆಯಲ್ಲ. ಹೀಗೆ ಮಾಡಿದರೆ ಇಡೀ ಸರ್ಕಾರ ಮತ್ತು ಕಾನೂನು ನಮ್ಮ ವಿರುದ್ದ ನಿಲ್ಲುವುದಿಲ್ಲವ ?
ರೇವತಿ......ಹೌದು ಕಣೆ ಈ ರಕ್ತಪಾತವನೆಲ್ಲಾ ಬಿಟ್ಟುಬಿಡು ನೋಡು ಮಕ್ಕಳಿಬ್ಬರೂ ನಮ್ಮ ಜೊತೆ ನೆಮ್ಮದಿಯಾಗಿದ್ದಾರೆ. ನಾವೀಗ ಸುಖ ಶಾಂತಿಯಿಂದ ಇದ್ದೀವಲ್ಲ ಹಿಂದೇನೇ ನಡೆದಿದ್ದರೂ ಅದೆಲ್ಲವನ್ನೂ ಮರೆತು ಬಿಡಮ್ಮ.
ನೀತು......ಅಪ್ಪ ಸಿಎಂ ಅಥವ ಇನ್ನಿತರರನ್ನು ನಾವೇ ಸಾಯಿಸಿದ್ದು ಅಂತ ನಾವೇನಾದರು ಡಂಗೂರ ಸಾರುತ್ತೇವಾ ? ಯಾರಿಗೆ ತಾನೇ ನಮ್ಮ ಮೇಲೆ ಅನುಮಾನ ಬರುವುದಕ್ಕೆ ಸಾಧ್ಯವಿದೆ ಹೇಳಿ ಅಪ್ಪಿತಪ್ಪಿ ಬಂದರೂ ಅದನ್ನೇಗೆ ಏದುರಿಸಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ಅಂತಹ ಪರಿಸ್ಥಿತಿ ನಿರ್ಮಾಣವಾಗುವುದೇ ಇಲ್ಲ. ಈ ದಿಲೇರ್ ಸಿಂಗ್.....ವಿಕ್ರಂ ಸಿಂಗ್ ಇವರಂತೆಯೇ ಸಾವಿರಾರು ಜನ ಕೇವಲ ನಿಶಾ ಮತ್ತು ನಿಧಿಗಾಗಿ ತಮ್ಮ ಪ್ರಾಣ ನೀಡುವುದಕ್ಕೂ ಸಹ ಒಂದು ಕ್ಷಣ ಯೋಚಿಸುವುದಿಲ್ಲ ಇವರ ತ್ಯಾಗ ಬಲಿದಾನಗಳಿಗೆ ಅವಮಾನ ಮಾಡೆಂದು ಹೇಳುತ್ತಿದ್ದೀರಾ ? ಅಮ್ಮ ನಾನೆಲ್ಲವನ್ನು ಮರೆತು ಇಲ್ಲೇ ಮಕ್ಕಳ ಜೊತೆ ನೆಮ್ಮದಿಯಾಗಿರಲು ಸಾಧ್ಯವೆಂದುಕೊಂಡಿದ್ದೀರಾ ಅದು ಸಾಧ್ಯವಾಗದ ಮಾತು ಯಾಕೆ ಗೊತ್ತ. ಸೂರ್ಯವಂಶದ ಸಮಸ್ತ ಆಸ್ತಿಗೂ ನಿಧಿ ಮತ್ತು ನಿಶಾ ಇಬ್ಬರೇ ವಾರಸುದಾರರು ಅಲ್ಲಿ ಅಧಿಕಾರವನ್ನು ಇವರಿಬ್ಬರು ಮಾತ್ರ ಪಡೆಯುವುದಕ್ಕೆ ಅರ್ಹರು ಬೇರೆ ಯಾರೂ ಸಹ ಹಕ್ಕು ಪ್ರತಿಪಾದಿಸದಂತೆ ರಾಜ ರಾಣಪ್ರತಾಪ್ ಅವರು ಬರೆದಿರುವ ವಿಲ್ ಸೂಚಿಸುತ್ತದೆ.
ನಾವು ಕಾನೂನಿನಡಿಯೇ ಇವರಿಬ್ಬರ ಹಕ್ಕು ಕೊಡಿಸುವುದಕ್ಕೆ ಮುಂದಾದರೂ ಅದರಲ್ಲಿ ಹತ್ತು ಅಲ್ಲ ನೂರಾರು ಅಡಚಣೆಗಳನ್ನು ಸೃಷ್ಟಿಸುವವರು ಇರುವ ತನಕವೂ ಸುಲಭವಾಗಿ ಹಕ್ಕು ಪಡೆಯಲು ಸಾಧ್ಯವಿಲ್ಲ. ಇವರಿಬ್ಬರೇ ನಿಜವಾದ ರಾಜಮನೆತನದ ಮಕ್ಕಳೆಂಬುದಕ್ಕೆ ಸಾಕ್ಷಿ ಪುರಾವೆಗಳನ್ನು ಕೇಳುತ್ತಾ ಕೋರ್ಟಿನಲ್ಲಿ ಧಾವೆ ಹೂಡುತ್ತಾರೆ. ನಾವು ಕೋರ್ಟು ಕಛೇರಿಗಳಿಗೆ ಅಲೆಯುತ್ತ ಜೀವನ ಸವೆದು ಹೋಗುತ್ತದೆಯೇ ಹೊರತು ಸಮಸ್ಯೆಗೆ ಪರಿಹಾರವಂತೂ ಸಿಗುವುದಿಲ್ಲ. ಅದಕ್ಕಾಗಿ ಸಮಸ್ಯೆ ಸೃಷ್ಟಿಸುವ ಎಲ್ಲ ಜನರನ್ನು ದಾರಿಯಿಂದ ಸರಿಸಿ ನಂತರವೇ ಇವರಿಬ್ಬರು ತಮ್ಮ ಹಕ್ಕು ಪ್ರತಿಪಾದಿಸುವುದೆಂಬ ತಂತ್ರಕ್ಕೆ ನಾನು ಮುಂದಾಗಿರುವುದು. ರಾಜ ಸಂಸ್ಥಾನದ ದ್ರೋಹಿಗಳಿಗೆ ಅದರ ವಾರಸುದಾರಳು ರಾಜಕುಮಾರಿ ಹಿಂದಿರುಗಿದ್ದಾಳೆಂದು ಗೊತ್ತಾಗಿದೆ ಆದರೆ ಅವಳೆಲ್ಲಿದ್ದಾಳೆ ಎಂಬುದು ಮಾತ್ರ ಅವರಿಗೆ ತಿಳಿದಿಲ್ಲ. ನಾವೆಲ್ಲ ಮರೆತು ಸುಮ್ಮನಿದ್ದರೂ ಅವರು ಸುಮ್ಮನಿರುತ್ತಾರಾ ? ಎಂದಾದರೊಂದು ದಿನ ನನ್ನ ಮಕ್ಕಳ ಸುಳಿವು ಅವರಿಗೆ ಸಿಕ್ಕರೆ ಅವರು ಸುಮ್ಮನೆ ಕೂರುತ್ತಾರಾ ಖಂಡಿತವಾಗಿ ಇಲ್ಲ ಏನಾದರೊಂದು ಷಡ್ಯಂತ್ರ ಮಾಡೇ ಮಾಡುತ್ತಾರೆ.
ನನ್ನ ಮಕ್ಕಳಿಗೆ ತೊಂದರೆ ಏದುರಾಗುವ ಮುಂಚೆಯೇ ಅದನ್ನು ಬೇರು ಸಮೇತವಾಗಿ ಕಿತ್ತು ಬಿಸಾಕಿ ಎಲ್ಲಾ ವಿದ್ರೋಹಿಗಳನ್ನೂ ಭೂಗತ ಮಾಡಿದಾಗಲೇ ಯಾವ ಭಯ ಆತಂಕವಿಲ್ಲದೆ ನನ್ನಿಬ್ಬರೂ ಮಕ್ಕಳು ನೆಮ್ಮದಿಯಾಗಿ ಇರುವಂತಹ ವಾತಾವರಣ ಸೃಷ್ಟಿಸಲು ಸಾಧ್ಯ ಇದು ತಾಯಿಯಾಗಿ ನನ್ನ ಕರ್ತವ್ಯವೂ ಹೌದು ರಾಣಾಪ್ರತಾಪ್ ಮತ್ತು ಸುಧಾಮಣಿಯ ಮಕ್ಕಳು ನನ್ನ ಮಕ್ಕಳಾಗಿರುವುದಕ್ಕೆ ನಾನವರ ಋಣ ಸಂದಾಯ ಮಾಡಲು ದಾರಿಯೂ ಹೌದು. ನನ್ನ ಮುದ್ದು ಕಂದಮ್ಮ ತಾಯಿಯ ಎದೆ ಹಾಲನ್ನು ಸಹ ಕುಡಿಯಲಿಲ್ಲ ಅಪ್ಪ ಯಾರೆಂದು ತಿಳಿದುಕೊಂಡು ಅವನಿಂದ ತನ್ನ ಚಿಕ್ಕ ಚಿಕ್ಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಮುಂಚೆಯೇ ಅವರಿಬ್ಬರನ್ನು ಕಳೆದುಕೊಂಡು ಅನಾಥಳಾಗಿದ್ದಳು. ರಾಜಕುಮಾರಿಯಂತೆ ಮೆರೆಯಬೇಕಾದ ಮಗಳು ಚಿಕ್ಕ ವಯಸ್ಸಿನಲ್ಲಿ ಅನಾಥಾಶ್ರಮದಲ್ಲಿ ಯಾರೂ ಇಲ್ಲದಿರುವವಳ ರೀತಿ ಬದುಕುವಂತೆ ಮಾಡಿದವರನ್ನು ನಾನು ಮರೆತು ಬಿಡಬೇಕಾ ? ಅಮ್ಮ ನೀವು ಇದೆಲ್ಲ ಹೇಳುವುದಕ್ಕೂ ಕಾರಣವಿದೆ ಅದು ನನಗೂ ಗೊತ್ತು ಆದರೆ ಯಾರೇ ಅಡ್ಡಿಪಡಿಸಿದರೂ ಸರಿ ಈ ರಕ್ತರಂಜಿತವಾದ ಭವಿಷ್ಯದ ದಿನಗಳು ನಡೆದೇ ತೀರುತ್ತದೆ. ನೀವೇನೂ ಹೆದರಬೇಡಿ ಅಮ್ಮ ಯಾರಿಗೂ ಸಹ ಏನೂ ಆಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ನಿಮ್ಮ ಮಾತನ್ನು ಕೇಳದಿರುವುದಕ್ಕೆ ದಯವಿಟ್ಟು ಕ್ಷಮಿಸಿಬಿಡಿ.
ರಾಜೀವ್......ನೀನು ಹೇಳಿದ್ದರಲ್ಲಿ ಯಾವುದೂ ತಪ್ಪಿಲ್ಲ ಕಣಮ್ಮಾ ನೀನು ಅದಕ್ಕಾಗಿ ಕ್ಷಮೆ ಕೇಳುವ ಅಗತ್ಯವಿಲ್ಲ. ನಾವು ವರ್ತಮಾನ ಜೀವನದಲ್ಲಿ ಬದುಕುತ್ತ ಇತಿಹಾಸ ಮತ್ತು ಭವಿಷ್ಯದ ಬಗ್ಗೆ ಸ್ವಲ್ಪವೂ ಯೋಚಿಸಿರಲಿಲ್ಲ. ನಾವೆಲ್ಲವನ್ನು ಮರೆತರೂ ವಿರೋಧಿಗಳು ಮಾತ್ರ ಸುಮ್ಮನಿರುವುದಿಲ್ಲ ನೀನು ಮುನ್ನಡೆ ಪುಟ್ಟಿ ನಾನು ನಿನ್ನ ಜೊತೆಗೇ ಇದ್ದೀನಿ.
ರೇವತಿ......ಕ್ಷಮಿಸೇ ಮೊಮ್ಮಕ್ಕಳ ಜೊತೆ ಕಳೆಯುತ್ತಿರುವ ಆನಂದದ ದಿನಗಳನ್ನೇ ನೆನೆದು ಅವರಿಗಿರುವ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ಯೋಚಿಸಲಿಲ್ಲ ನಾವೆಲ್ಲರೂ ನಿನ್ನ ಜೊತೆಗಿದ್ದೀವಿ ಕಣಮ್ಮ.
ನಿಶಾ ಮನೆಯೊಳಗೆ ಓಡೋಡಿ ಬಂದಾಗ ಅವಳ ಹಿಂದೆಯೇ ಪುಟ್ಟ ಕುಕ್ಕಿ ಮರಿಗಳೂ ಕುಣಿದಾಡುತ್ತ ಬಂದವು. ಈಗಲೂ ನಿಶಾಳ ದೃಷ್ಟಿ ದಿಲೇರ್ ಸಿಂಗ್ ಪಕ್ಕದಲ್ಲಿರುವ ಖಡ್ಗದ ಮೇಲೆಯೇ ನೆಟ್ಟಿತ್ತು.
ಹರೀಶ......ಚಿನ್ನಿ ಮರಿ ಬಾರಮ್ಮ ಇಲ್ಲಿ ಏನ್ ನೋಡ್ತಿದ್ದೀಯಾ ?
ಅಪ್ಪನನ್ನು ಸೇರಿಕೊಂಡು ನಿಂತ ನಿಶಾ ದಿಲೇರ್ ಸಿಂಗ್ ಕಡೆ ಬೆರಳು ತೋರಿಸುತ್ತ.......ಪಪ್ಪ ಅದಿ ಬೇಕು ನಂಗಿ ಬೇಕು.....ಎಂದಳು.
ದಿಲೇರ್ ಸಿಂಗ್ ಮುಗುಳ್ನಗುತ್ತ ನಿಶಾಳೆದುರು ಮಂಡಿಯೂರಿ ತನ್ಮ ಖಡ್ಗವನ್ನವಳ ಪಾದದ ಬಳಿಯಿಟ್ಟು ಕೈ ಮುಗಿದನು. ಅವನನ್ನೊಮ್ಮೆ ನೋಡಿದ ನಿಶಾ ಬಗ್ಗೆ ಕತ್ತಿಯನ್ನೆತ್ತಿಕೊಳ್ಳುವ ಪ್ರಯತ್ನ ಮಾಡಿದರೂ ತುಂಬ ಪುಟ್ಟವಳಾದ ಕಾರಣ ಸಾಧ್ಯವಾಗಲಿಲ್ಲ. ನಿಧಿ ತಂಗಿ ಪಾದದ ಬಳಿಯಿಂದ ಖಡ್ಗವನ್ನೆತ್ತಿ ಅದನ್ನು ಹೊರಗೆಳೆದು ಖಡ್ಗದ ಹಿಡಿಯಲ್ಲಿ ತಂಗಿಯ ಕೈಯನ್ನು ಹಿಡಿಸಿದಾಗ ನಿಶಾಳ ಮುಖದಲ್ಲಿ ರಾಜಕುಮಾರಿ ಛಾಯೆಯ ಗಾಂಭೀರ್ಯ ಎದ್ದು ಕಾಣಿಸತೊಡಗಿತು.
ನೀತು ಗರ್ವದಿಂದ ಮಕ್ಕಳಿಬ್ಬರನ್ನು ನೋಡಿ......ಅಮ್ಮ ನೋಡಿ ನನ್ನ ಇಬ್ಬರು ಮಕ್ಕಳ ಮುಖದಲ್ಲಿರುವ ರಾಜಮನೆತನದ ತೇಜಸ್ಸು ಹೇಗೆ ಮೂಡಿಬಂದಿದೆ ಅಂತ. ತಾಯಿ ನಾನೇ ಆಗಿದ್ದರೂ ಅವರ ರಕ್ತದಲ್ಲಿ ರಾಜವಂಶದ ಛಾಯೆ ಇದೆಯಲ್ಲವಾ. ಖಡ್ಗ ರಾಜಪರಂಪರೆಯ ಪ್ರತೀಕವಾದದ್ದು ಅದರಿಂದ ಅವರಿಬ್ಬರನ್ನೂ ವ್ಯತಿರಕ್ತರನಾಗಿಸಲು ಹೇಗೆ ಸಾಧ್ಯವಿದೆ ? ನಿಧಿ ಕತ್ತಿ ಒರಣಿಯೊಳಗೆ ಹಾಕಿಬಿಡಮ್ಮ ಕಂದ ನೀನು ಬಾಯಿಲ್ಲಿ ( ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡು ) ನೀನು ಇನ್ನೂ ತುಂಬ ಪುಟ್ಟವಳು ಕಂದ ಸ್ವಲ್ಪ ದೊಡ್ಡವಳಾಗು ಆಮೇಲೆ ನಿಂಗೆ ಒಂದು ಪುಟಾಣಿ ಕತ್ತಿ ತರಿಸಿಕೊಡ್ತೀನಿ ಆಯ್ತಾ ಈಗ ಬೇಡ.
ಸುಮ.......ನೀತು ಎಲ್ಲರನ್ನೂ ಊಟಕ್ಕೆ ಏಬ್ಬಿಸು ರೆಡಿಯಾಗಿದೆ.
ರಜನಿ......ಮುಂದಿನ ಅಂಗಳದಲ್ಲಿ ಎಲ್ಲರೂ ಕೂರುವುದಕ್ಕೆಂದು ಪ್ರತಾಪ್ ವ್ಯವಸ್ಥೆ ಮಾಡಿದ್ದಾನೆ.
ದಿಲೇರ್.....ನಾವು ನಿಮ್ಮೊಂದಿಗೆ ಊಟಕ್ಕೆ ಕೂರುವುದು.......
ನೀತು.....ದಿಲೇರ್ ಸಿಂಗ್ ರಾಣಿ ಸುಧಾಮಣಿ ನಿಮ್ಮಿಬ್ಬರಿಗೂ ಸಹ ಊಟ ಬಡಿಸುತ್ತಿದ್ದರೆಂಬ ವಿಷಯ ನನಗೆ ಗೊತ್ತಿದೆ. ನೀವಿಬ್ಬರೂ ಅವರಿಗಿಂತ ಒಂದೆರಡು ವರ್ಷ ಚಿಕ್ಕವರಾಗಿದ್ದರೂ ನಿಮ್ಮನ್ನು ಅವರು ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದರೆಂಬ ವಿಷಯವೂ ಗೊತ್ತಿದೆ. ಈಗಲೂ ನಮ್ಮ ಜೊತೆ ಊಟಕ್ಕೆ ಕೂರಲು ಸಂಕೋಚಿಸುವಿರಾ ?
ಊಟ ಮುಗಿದ ನಂತರ ಮನೆಯ ಗಂಡಸರ ಜೊತೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಮುಕ್ತವಾಗಿ ಮಾತನಾಡುತ್ತಿದ್ದರೆ ನೀತು ಸಹ ಪಾವನಾಳಿಗೆ ರೂಮಿನಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದ್ದಳು. ದಿಲೇರ್ ಸಿಂಗ್ ಹೊರಡುವುದಕ್ಕೂ ಮುನ್ನ ತನ್ನ ಹತ್ತು ಜನ ಆಪ್ತರ ಬಳಿ ನಿಂತು ಮನೆಯ ಯಾರೊಬ್ಬರಿಗೂ ತೊಂದರೆಯಾಗದ ರೀತಿ ತಮ್ಮ ನಿಷ್ಠೆಯನ್ನು ಪ್ರದರ್ಶಿಸುವಂತೇಳಿದನು.
ನೀತು.......ನಿಧಿ ನೀನಿಲ್ಲೇ ಇರು ನಾನು ನಿಮ್ಮಪ್ಪ ಹೋಗಿ ಹಣದ ಬ್ಯಾಗುಗಳನ್ನು ಕೊಟ್ಟು ಕಳುಹಿಸಿ ಬರ್ತೀವಿ.
ನಿಶಾ ಅಮ್ಮ ಅಪ್ಪ ಎಲ್ಲಿಗೋ ಹೋಗುತ್ತಾರೆಂದು ಕೇಳಿಸಿಕೊಂಡು ಚಪ್ಪಲಿ ಹಾಕಿಕೊಂಡವಳೇ ನೇರವಾಗಿ ಅಪ್ಪನ ಹೆಗಲಿಗೇರಿಕೊಂಡಳು
ನಿಧಿ.....ಅಮ್ಮ ಅಲ್ನೋಡಿ ನೀವು ಬೇಡ ಅಂತೀರ ಅಂತ ಚಿಲ್ಟಾರಿ ಆಗಲೇ ಅಪ್ಪನ ಬಳಿ ಹೋಗಿದ್ದಾಳೆ.
ರೇವತಿ......ಪಾಪ ಕಣೆ ಅವಳಿಗೆ ಗದರದೆ ಜೊತೆಗೆ ಕರೆದೊಯ್ಯಿ.
ನೀತು......ಈಗ ಬೇಡ ಅನ್ನುವುದಕ್ಕೂ ಸಾಧ್ಯವಿಲ್ಲಮ್ಮ ಅವರಪ್ಪ ಆಗಲೇ ಮಗಳನ್ನು ಕಾರಿನೊಳಗೆ ಕೂರಿಸಿಯಾಗಿದೆ. ಅಮ್ಮ ನಾವು ಹೋಗಿ ಬಂದುಬಿಡ್ತೀವಿ.
ಎಲ್ಲರೂ ಹೊರಡುವುದಕ್ಕೆ ಮನೆ ಗೇಟಿನ ಹತ್ತಿರ ಬಂದಾಗ ಎರಡು ಮಹಿಂದ್ರ ಜೀಪುಗಳು ಮನೆ ಮುಂದೆ ಬಂದು ನಿಂತವು.
ಅಶೋಕ......ರಕ್ಷಕರಿಗೆ ಓಡಾಡುವುದಕ್ಕೆ ಯಾವುದೇ ತೊಂದರೆ ಆಗದಿರಲಿ ಅಂತ ಇದನ್ನು ತರಿಸಿದ್ದೀವಿ.
ದಿಲೇರ್......ನಾನೂ ಇದರ ಬಗ್ಗೆ ಹೇಳಬೇಕೆಂದಿದ್ದೆ ಅಷ್ಟರಲ್ಲಿ ನೀವೇ ವ್ಯವಸ್ಥೆ ಮಾಡಿದ್ದೀರ.
ಹರೀಶ...ನೀತು ಮಗಳ ಜೊತೆ ಪಾವನಾಳನ್ನು ಕರೆದೊಯ್ದರೆ ಅವರ ಹಿಂದೆ ಜಾನಿ ಮತ್ತು ಅಶೋಕನ ಜೊತೆ ವಿಕ್ರಂ ಸಿಂಗ್ ಮತ್ತು ದಿಲೇರ್ ಸಿಂಗ್ ಹೊರಟರು. ಮನೆಯಿಂದ ತೆರಳುವ ಮುನ್ನ ವಿಕ್ರಂ ಮತ್ತು ದಿಲೇರ್ ಸಿಂಗ್ ಇಬ್ಬರೂ ನಿಧಿಯ ಮುಂದೆ ಮಂಡಿಯೂರಿ ಗೌರವ ಸೂಚಿಸುತ್ತಿರುವುದನ್ನು ಮಕ್ಕಳೆಲ್ಲರೂ ಮೊದಲ ಬಾರಿ ತುಂಬಾನೇ ಆಶ್ಚರ್ಯದಿಂದ ನೋಡುತ್ತಿದ್ದರು. ಜಾನಿಯ ತೋಟದಿಂದ ಹಣದ ಬ್ಯಾಗುಗಳನ್ನು ತೆಗೆದುಕೊಂಡು ಫುಡ್ ಯೂನಿಟ್ಟಿಗೆ ಬಂದಾಗ ಅಲ್ಲಿ ನಿಂತಿದ್ದ ಎರಡು ಛಾಪರ್ ನೋಡಿ ಅದರಲ್ಲಿ ಕೂರಿಸುವಂತೆ ನಿಶಾ ಅಮ್ಮನ ಕೆನ್ನೆ ಸವರುತ್ತ ಕೇಳಿದಳು.
ವಿಕ್ರಂ ಸಿಂಗ್.....ಎಲ್ಲವೂ ನಿಮ್ಮದೇ ಯುವರಾಣಿಯವರೇ ಬನ್ನಿರಿ ಒಂದು ಸುತ್ತು ಹಾಕಿಕೊಂಡು ಬರೋಣ.
ನೀತು......ಇಲ್ಲಿ ಬೇಡ ವಿಕ್ರಂ ಸಿಂಗ್ ಈ ಊರಿನಲ್ಲಿ ನನ್ನ ಮಗಳು ಸಾಮಾನ್ಯಳಂತೆ ಇರಲಿ ಹುಟ್ಟೂರಿಗೆ ಬಂದಾಗ ಅವಳಿಗೆ ಚಿಟ್ಟಾಗುವ ತನಕ ರೌಂಡ್ ಸುತ್ತಲಿ ಚಿನ್ನಿ ಈಗ ಬೇಡ ಕಂದ ನಾಳೆ ಹೋಗೋಣ ಆಯ್ತಾ.....ಎಂದು ಮಗಳನ್ನು ಸಮಾಧಾನ ಮಾಡುತ್ತಿದ್ದಳು.
ಹರೀಶ.....ನೀವು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ ಏಕೆಂದರೆ ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳನ್ನು ನಾವೀಗ ಕಣ್ಮರೆ ಮಾಡುತ್ತಿರುವುದು ಹಾಗಾಗಿ ಪ್ರತೀ ಹೆಜ್ಜೆಯನ್ನು ನಾವು ತುಂಬಾನೇ ಎಚ್ಚರಿಕೆಯಿಂದ ಇಡಬೇಕಾಗಿದೆ.
ದಿಲೇರ್ ಸಿಂಗ್....ನೀವೇನೂ ಚಿಂತಿಸಬೇಡಿ ಸರ್ ನಾವು ಮಾಡಿದ್ದು ಅನ್ನುವುದಕ್ಕೆ ಸಣ್ಣದೊಂದು ಸುಳಿವೂ ಸಿಗದಂತೆ ಕೆಲಸ ಮಾಡ್ತೀವಿ. ರಾಜಮಾತೆ ನಾವಿನ್ನು ಹೊರಡುತ್ತೇವೆ.
ನೀತು.......ಜೂನ್ 15ರ ನಂತರ ನಾನು ಫೋನ್ ಮಾಡುವೆ ನೀವು ಇಲ್ಲಿಗೆ ಛಾಪರ್ ಕಳುಹಿಸುವ ವ್ಯವಸ್ಥೆ ಮಾಡಿ.
ವಿಕ್ರಂ ಸಿಂಗ್......ನಾನೇ ಖುದ್ದಾಗಿ ಬರುತ್ತೇನೆ ರಾಜಮಾತೆ.
ನೀತು......ಪಾವನ ಯಾವುದೇ ರೀತಿ ಸಹಾಯ ಬೇಕಿದ್ದರೂ ನನಗೆ ತಿಳಿಸು ಅಥವ ಇವರಿಬ್ಬರನ್ನು ಸಂಪರ್ಕಿಸು ನನಗೆ ಪ್ರತಿದಿನವೂ ಅಲ್ಲಿ ಏನೇನು ನಡೆಯುತ್ತಿದೆ ಎಂಬ ವರದಿ ನೀಡಬೇಕು.
ಮೂವರೂ ಸರಿ ಎಂದೇಳಿ ಹೊರಟರೆ ಎರಡೂ ಹೆಲಿಕಾಪ್ಟರ್ ಗಗನ ಏತರಕ್ಕೇರುತ್ತ ಹಾರುತ್ತಿದ್ದುದನ್ನು ನಿಶಾ ಕಣ್ಬಾಯಿ ತೆರೆದುಕೊಂಡು ನೋಡುತ್ತಿದ್ದಳು. ಜಾನಿಯನ್ನು ಡ್ರಾಪ್ ಮಾಡಿ ಬರಲು ಅಶೋಕ ತೆರಳಿದರೆ ನಿಶಾ ಅಪ್ಪ ಅಮ್ಮನ ಜೊತೆ ಮನೆಗೆ ಹಿಂದಿರುಗಿದಳು. ಆ ದಿನವೆಲ್ಲಾ ಇದೇ ವಿಷಯವಾಗಿ ಚರ್ಚೆಗಳು ನಡೆಯುತ್ತಿದ್ದು ತಮ್ಮ ಹಾಗು ತಂಗಿಯರು ನಿಧಿಯನ್ನು ಸುತ್ತುವರಿದು ರಾಜಮನೆತನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಅಬ್ಬಾ, ಕತೆ ಅದ್ಭುತವಾಗಿ ಮುಂದಯವರೆಯುತ್ತಿದೆ. ಧನ್ಯವಾದಗಳು
ReplyDeleteಕತೆಯಂತೂ ಕುತೂಹಲಕಾರಿ
ReplyDelete