Total Pageviews

Saturday, 21 September 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 204

ವಿಕ್ರಂ ಸಿಂಗ್ ಕಳುಹಿಸಿದ್ದ ದಿಲೇರ್ ಸಿಂಗ್ ನಂ.. ಡಯಲ್ ಮಾಡಿ...

ನೀತು.....ನಮಸ್ತೆ ದಿಲೇರ್ ಸಿಂಗ್ ನಾನು ನೀತು ಅಂತ.

ದಿಲೇರ್ ಸಿಂಗ್......ಧನ್ಯೋಸ್ಮಿ ನೀವು ಕಡೆಗೂ ನನ್ನ ಬಗ್ಗೆ ತಿಳಿದು ಫೋನ್ ಮಾಡಿರುವುದು ನನ್ನ ಸೌಭಾಗ್ಯ ರಾಜಮಾತೆ ನಾವೆಲ್ಲರು ಯುವರಾಣಿಯವರನ್ನು ನೋಡಲು ಕಾತುರದಿಂದ ಕಾಯುತ್ತಿದ್ದೀವಿ.

ನೀತು......ಗೊತ್ತಿದೆ ದಿಲೇರ್ ಸಿಂಗ್ ಅದಕ್ಕಾಗಿಯೇ ನಾನು ನಿಮಗೆ ಫೋನ್ ಮಾಡಿರುವುದು ನಾಳೆ ವಿಕ್ರಂ ಸಿಂಗ್ ಜೊತೆ ನೀವು ನಮ್ಮ ಊರಿಗೆ ಬರಬೇಕು. ಹಾಗೆಯೇ ನಿಮ್ಮ ಯುವರಾಣಿಯ ರಕ್ಷಣೆಗಾಗಿ ನಿಮ್ಮ ಸಹಚರರಲ್ಲಿ ಅತ್ಯಂತ ಸಶಕ್ತರಾದ ಏಳು ಜನರನ್ನು ಕರೆತನ್ನಿರಿ. ನಾನು ಹೇಳುವವರೆಗೂ ಅವರೆಲ್ಲರೂ ಇಲ್ಲೇ ಉಳಿದು ಯುವರಾಣಿ ರಕ್ಷಣೆ ಮಾಡಬೇಕಿದೆ.

ದಿಲೇರ್ ಸಿಂಗ್........ನಿಮ್ಮಾಜ್ಞೆ ಶಿರಸಾವಹಿಸಿ ಪಾಲನೆಯಾಗುತ್ತೆ ನಮ್ಮ ಪ್ರಾಣ ಇರುವವರೆಗೂ ಯುವರಾಣಿ ರಕ್ಷಣೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಿರುತ್ತೇವೆ. ಇನ್ನೇನಾದರೂ ಆದೇಶವಿದ್ದರೆ ತಿಳಿಸಿರಿ.

ನೀತು.....ಸಧ್ಯಕ್ಕೇನೂ ಇಲ್ಲ ನಾಳೆ ಬೇಟಿಯಾದಾಗ ಮುಂದಿನದರ ಬಗ್ಗೆ ಮಾತನಾಡೋಣ.

ದಿಲೇರ್ ಸಿಂಗ್.....ಅಪ್ಪಣೆ ಮೇಡಂ.

ನೀತು ಫೋನಿಟ್ಟು ಗಂಡನಿಗೆ ಆರ್ಕಿಟೆಕ್ಟ್ ರಮೇಶ್ ಮತ್ತು ಜಾನಿ ಇಬ್ಬರನ್ನೂ ಮನೆಗೆ ಕರೆಸುವಂತೇಳಿದಳು.

ರಾಜೀವ್......ಏನು ಮಾಡಬೇಕಂತಿರುವೆ ಮಗಳೇ.

ನೀತು........ಅಪ್ಪ ಏದುರಾಳಿಗಳು ನನ್ನ ಮಗಳ ಮೇಲೆ ದಾಳಿಯನ್ನು ಮಾಡಲು ಯೋಚಿಸುವ ಮುನ್ನವೇ ಅವರೆಲ್ಲರ ನಿರ್ನಾಮ ಮಾಡೊ ಇರಾದೆಯಲ್ಲಿರುವೆ. ಆಗಲೇ ತಾನೇ ನನ್ನ ಮಕ್ಕಳು ಭಯವಿಲ್ಲದಿಯೆ ಸ್ವಚ್ಚಂದವಾದ ವಾತಾವರಣದಲ್ಲಿ ಬೆಳೆಯುವುದು ಸಾಧ್ಯ ನಮಗೂ ಯಾವುದೇ ಆತಂಕವಿರುವುದಿಲ್ಲ.

ರೇವತಿ.......ಇದು ತುಂಬ ದೊಡ್ಡ ಹೋರಾಟ ಕಣಮ್ಮ ಏಕೆಂದರೆ ರಾಜ ಸಂಸ್ಥಾನದ ವಿರೋಧಿಗಳೆಲ್ಲರೂ ಮುಖವಾಡದ ಧರಿಸಿಯೇ ಕಾಣಿಸಿಕೊಳ್ಳುವುದು ಅವರನ್ನು ಕಂಡು ಹಿಡಿಯುವುದು ಕಷ್ಟಸಾಧ್ಯ.

ನೀತು......ನನ್ನ ಮಕ್ಕಳ ಜೊತೆ ನನ್ನಿಡೀ ಕುಟುಂಬ ಯಾವುದೇ ರೀತಿ ಭಯದ ವಾತಾವರಣವಿಲ್ಲದೆ ಬದುಕುವುದಕ್ಕೆ ಏನು ಮಾಡಬೇಕೋ ಅದೆಲ್ಲವನ್ನೂ ಮಾಡುವೆ. ದಸರೆಯ ವಿಜಯದಶಮಿ ಆ ದಿನ ನನ್ನ ಮುದ್ದಿನ ಕಂದನಿಗೆ ಎರಡು ವರ್ಷ ತುಂಬಲಿದೆ. ಅದಕ್ಕಿಂತ ಮುಂಚೆ ಸೂರ್ಯವಂಶಿ ಸಂಸ್ಥಾನದ ಎಲ್ಲಾ ವಿರೋಧಿಗಳನ್ನೂ ಭೂಗತ ಮಾಡಿಸಿಯೇ ತೀರುತ್ತೇನೆ.

ಹರೀಶ.......ನಾನು ನಿನ್ನ ಜೊತೆಗಿರುವೆ ಅಗತ್ಯಬಿದ್ದರೆ ನನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟರೂ ಸರಿ ನನ್ನ ಧರ್ಮ ನಿಭಾಯಿಸುತ್ತೀನಿ.

ಸುಮ......ಹರೀಶ ನಾನೊಂದು ಹೇಳ್ತೀನಿ ಅನ್ಯಥಾ ಭಾವಿಸಬೇಡಿ. ಚಿನ್ನಿ ಬಗ್ಗೆ ನಿಮ್ಮ ಮನಸ್ಸಿನಲ್ಲೆಷ್ಟು ಪ್ರೀತಿಯಿದೆ ಅಂತ ಎಲ್ಲರಿಗೂ ಗೊತ್ತಿದೆ ಆದರೆ ದಾನದಲ್ಲಿ ಶ್ರೇಷ್ಠವಾದುದ್ದು ಅನ್ನದಾನ ವಿದ್ಯಾದಾನ. ನೀವೀ ಎರಡನ್ನೂ ಇಲ್ಲಿಯವರೆಗೂ ನಿಷ್ಠೆಯಿಂದ ಪಾಲಿಸಿಕೊಂಡು ಬಂದಿರುವಿರಿ ಅದನ್ನೇ ಮುಂದುವರಿಸಿರಿ. ನೀತು ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದಕ್ಕೆ ನಾವೆಲ್ಲರೂ ಇದ್ದೀವಿ.

ಪ್ರೀತಿ......ನಾನಂತೂ ಎಲ್ಲರಿಗಿಂತ ಮೊದಲಿರುತ್ತೀನಿ ನೀತು ನನಗೆ ನಾದಿನಿ ಮಾತ್ರವಲ್ಲ ಒಡಹುಟ್ಟಿದ ಟ್ವಿನ್ ಸಿಸ್ಟರ್ ರೀತಿ.

ರಜನಿ......ಹೌದು ಹರೀಶ್ ಸುಮ ಹೇಳಿದ್ದರಲ್ಲಿ ಅರ್ಥವಿದೆ ನೀವು ಕೆಲಸ ಬಿಡುವ ಬಗ್ಗೆ ಯೋಚಿಸಬೇಡಿ ನೀತು ಜೊತೆ ನಾವೆಲ್ಲರೂ ಇದ್ದೆ ಇರುತ್ತೀವಲ್ಲ.

ಅಷ್ಟರಲ್ಲೇ ಆರ್ಕಿಟೆಕ್ಟ್ ರಮೇಶ್ ಬಂದಿದ್ದು......

ನೀತು.......ರಮೇಶ್ ಸರ್ ನಮ್ಮ ಫ್ಯಾಕ್ಟರಿ ಅಥವ ಫುಡ್ ಯುನಿಟ್ ಎರಡರಲ್ಲಿ ಯಾವ ಸ್ಥಳದಲ್ಲಿ ಹೆಲಿಕಾಪ್ಟರ್ ಇಳಿಸುವಷ್ಟು ಜಾಗವಿದೆ.

ರಮೇಶ್ ಆಶ್ಚರ್ಯದಿಂದ.......ಮೇಡಂ ಹೆಲಿಕಾಪ್ಟರ್ ತಗೊಂಡ್ರಾ ?

ಹರೀಶ ಜೋರಾಗಿ ನಗುತ್ತ.......ಇಲ್ಲ ರಮೇಶ್ ನಾಳೆ ನಮಗೆ ತುಂಬ ಬೇಕಾದವರು ರಾಜಸ್ಥಾನದಿಂದ ಬರುತ್ತಿದ್ದಾರೆ ಅವರ ಹೆಲಿಕಾಪ್ಟರ್ ಇಳಿಸುವುದಕ್ಕೆ ಈ ಎರಡರಲ್ಯಾವ ಜಾಗ ಸೂಕ್ತ ಅಂತ ಕೇಳಿದ್ದು.

ರಮೇಶ್......ಓ ಹಾಗಾ ಸರ್. ಜಾಗ ಜಾಸ್ತಿ ಉಳಿದಿರುವುದು ಫುಡ್ ಯೂನಿಟ್ಟಿನಲ್ಲೇಆದರೆ ಹೆಲಿಕಾಪ್ಟರ್ ಇಳಿಸುವುದಕ್ಕೆ ಯಾವೆಲ್ಲಾ ರೀತಿ ವ್ಯವಸ್ಥೆ ಮಾಡಬೇಕು ಅದಕ್ಕೆಷ್ಟು ಜಾಗದ ಅವಶ್ಯಕತೆ ಇರುತ್ತೆ ಎಂಬ ಬಗ್ಗೆ ನನಗೆ ಐಡಿಯಾ ಇಲ್ಲ.

ಅನುಷ......ಸರ್ ನಾನಾಗಲೇ ಎಲ್ಲಾ ಡೀಟೇಲ್ಸ್ ತೆಗೆದಿದ್ದೀನಿ ಇಷ್ಟು ಜಾಗ ಬೇಕಾಗಿದೆ ಜೊತೆಗೆ ಈ ರೀತಿ ವ್ಯವಸ್ಥೆ ಮಾಡಬೇಕು. ಇದರಲ್ಲಿ ಪೂರ್ತಿ ವಿವರಗಳಿಗೆ ಆದರೆ ರಾತ್ರಿಯೊಳಗೆ ಎಲ್ಲವೂ ಮುಗಿಯುತ್ತಾ.

ನೀತು.......ಸರ್ ಬೇರೆ ಎಲ್ಲಾ ಕೆಲಸಗಳನ್ನು ಇವತ್ತು ನಿಲ್ಲಿಸಿಬಿಡಿ ಮೊದಲು ಕಾಪ್ಟರ್ ಇಳಿಯುವ ವ್ಯವಸ್ಥೆ ಮಾಡಿಸಿಬಿಡಿ.

ರಮೇಶ್.....ಸರಿ ಮೇಡಂ ಈಗಲೇ ಎರಡು ಫ್ಯಾಕ್ಟರಿಗಳಲ್ಲಿರುವ ಕೆಲಸಗಾರರನ್ನು ಕರೆಸಿ ಕೆಲಸ ಶುರು ಮಾಡಿಸುವೆ.

ನೀತು.....ನಿಮಗೆ ತೊಂದರೆ ಕೊಡುತ್ತಿದ್ದೀವಿ ಆದರೆ ಇದು ತುಂಬ ಅರ್ಜೆಂಟ್ ನಿಮಗೆ ಸಹಾಯ ಮಾಡಲು ಬಸ್ಯ ಮತ್ತವನ ಹುಡುಗರು ಸಹ ಜೊತೆಗಿರುತ್ತಾರೆ.

ರಮೇಶ.....ಇದರಲ್ಲೇನು ತೊಂದರೆ ಮೇಡಂ ರಾತ್ರಿಯೊಳಗೆ ಎಲ್ಲಾ ವ್ಯವಸ್ಥೆ ಮಾಡಿಸುವೆ.

ರಮೇಶ್ ತೆರಳಿದ ನಂತರ.......

ಆರೀಫ್.......ಸರ್ ನಾನೂ ಊರಿಗೆ ಹೊರಡುವೆ ವ್ಯಾನಿನಲ್ಲಿರುವ ಹಣದ ಬ್ಯಾಗುಗಳನ್ನು ಎಲ್ಲಿಡಬೇಕು ?

ನೀತು......ಊರಿಗೆ ಹೋಗ್ತೀನಿ ಅಂದ್ರೆ ಕಪಾಳಕ್ಕೆ ಬಾರಿಸ್ತೀನಿ.

ಹರೀಶ ದಂಗಾಗಿ......ಲೇ ಯಾರಂದುಕೊಂಡು ರೇಗ್ತಿದ್ದೀಯ ನೀನು ಸರಿಯಾಗಿ ನೋಡು ಇವನು ಆರೀಫ್ ಬೇರಾರೋ ಅಲ್ಲ.

ನೀತು......ಯಾರಾಗಿದ್ದರೆ ನನಗೇನು ಇವನೇನು ಪಾಳೆಗಾರನಾ ? ಶೀಲಾ ಈ ಲೋಫರ್ ಯಾರಂತ ಗೊತ್ತ ? ಇಡಿಯಟ್ ನನ್ನನ್ನೇನು ನೋಡ್ತೀಯಾ ?

ಆರೀಫಿಗೆ ನೀತು ಬೈಯುತ್ತಿರುವುದರಿಂದ ಮನೆಯವರೆಲ್ಲರ ದೃಷ್ಟಿ ಅವನತ್ತ ನೆಟ್ಟಿದ್ದು ಯಾರೋ ಅಪರಾಧಿಯ ರೀತಿ ನೋಡುತ್ತಿದ್ದರು.

ಆರೀಫ್.....ನಾನೇನೂ ಮಾಡಿಲ್ಲ.

ನೀತು......ಶೀಲಾ ನಿನಗೆ ಆಯಿಷಾ ಆಂಟಿ ಹುಸೇನ್ ಅಂಕಲ್ ಈಗ ನೆನಪಿದ್ದಾರಾ ?

ಶೀಲಾ.....ಅವರನ್ನೇಗೆ ಮರೆಯಲು ಸಾಧ್ಯ ಈಗವರ ವಿಷಯವೇಕೆ ಎಲ್ಲಿದ್ದಾರೋ ಏನೋ ನಮ್ಮೂರಿನಿಂದ ತೆರಳಿದ ನಂತರ ಒಮ್ಮೆಯೂ ಬೇಟಿಯಾಗಲೇ ಇಲ್ಲವಲ್ಲ.

ನೀತು.....ಈ ದೊಡ್ಡ ಮನುಷ್ಯ ಅವರಿಬ್ಬರ ಮಗ ಕಣೆ ತಾನ್ಯಾರೆಂದು ನಮಗೇ ಹೇಳಿರಲಿಲ್ಲ. ಇವನ ಮನೆಗೆ ಹೋಗದಿದ್ದಿದ್ದರೆ ನನಗಿವನ ಬಗ್ಗೆ ಗೊತ್ತೆ ಆಗುತ್ತಿರಲಿಲ್ಲ.

ಶೀಲಾ ಖುಷಿಯಿಂದ.......ಅಂದರೆ ಆರೀಫ್....ಆರೂ ಇಡಿಯಟ್ ಚಿಕ್ಕವನಿದ್ದಾಗ ಸದಾ ನಮ್ಮಿಬ್ಬರ ಹಿಂದೆಯೇ ಸುತ್ತುತ್ತಿದೆ ನಾವೇನೇ ಹೇಳಿದ್ರೂ ಕೇಳ್ತಿದ್ದೆ. ಈಗ ದೊಡ್ಡ ಮನುಷ್ಯನಾದೆ ಅಂತ ನಿನ್ನ ಬಗ್ಗೆ ನಮ್ಮಿಂದಲೇ ಮುಚ್ಚಿಡ್ತೀಯಾ.......ಎಂದವನ ತಲೆಗೊಂದು ಮೊಟಕಿ ಅವನನ್ನು ತಬ್ಬಿಕೊಂಡಳು.

ಆರೀಫ್ ಬಗ್ಗೆ ಮನೆಯವರಿಗೆ ಎಲ್ಲಾ ಸಂಗತಿಗಳನ್ನು ತಿಳಿಸಿದಾಗ ರಾಜೀವ್ ಮತ್ತು ರೇವತಿ ಅವನಿಗೆ ನಿಜ ಸಂಗತಿ ಮುಚ್ಚಿಟ್ಟಿದ್ದಕ್ಕಾಗಿ ಬುದ್ದಿವಾದ ಹೇಳುತ್ತಿದ್ದರು.

ಹರೀಶ......ಆರೀಫ್ ನೀನು ನನ್ನ ಹೆಂಡತಿಯ ಬಾಲ್ಯ ಗೆಳೆಯನೆಂಬ ವಿಷಯ ನನ್ನಿಂದ ಮುಚ್ಚಿಟ್ಟಿದ್ದರೆ ಅರ್ಥವಿತ್ತು ಆದರೆ ಅವಳಿಗೂ ಹೇಳದಿರುವುದು ತಪ್ಪಲ್ಲವಾ.

ಶೀಲಾ.....ನಿನಗೆ ನಾವ್ಯಾರೆಂದು ಗೊತ್ತಿತ್ತಾ ?

ಆರೀಫ್.....ಗ್ರಾನೈಟ್ ತೆಗೆದುಕೊಳ್ಳಲು ಬಂದಿದ್ದಾಗ ನನಗೆ ಸ್ವಲ್ಪ ಡೌಟ್ ಬಂತು ಆದರೆ ಯಾವಾಗ ಇಲ್ಲಿಗೆ ಬಂದು ನೀತು ಶೀಲಾ ಇಬ್ಬರು ಬಾಲ್ಯ ಸ್ನೇಹಿತೆಯರೆಂದು ತಿಳಿಯಿತೋ ಆಗ ನನಗೆ ನಿಮ್ಮ ಬಗ್ಗೆ ಕನ್ಫರ್ಮ್ ಆಯ್ತು.

ಶೀಲಾ.....ಆದರೂ ನೀನ್ಯಾರೆಂದು ನಮಗೆ ಹೇಳಲಿಲ್ಲ ನೀತು ನಾವು ಚಿಕ್ಕವರಿದ್ದಾಗ ಇವನಿಗೆ ಕಿವಿ ಹಿಡಿಸಿ ಕೂರಿಸುತ್ತಿದ್ದೆವಲ್ಲ ಈಗ ಹಾಗೇ ಕೂರಿಸಬೇಕೆಂದು ಕಾಣುತ್ತೆ ಆಗಲೇ ಬುದ್ದಿ ಬರೋದು.

ನೀತು.....ಈಗ ದೊಡ್ಡವನಾಗಿದ್ದಾನೆ ಕಣೆ ಕಿವಿ ಹಿಡಿಸಿ ಕೂರಿಸೋದು ಬೇಡ ಫ್ಯಾನಿಗೆ ಉಲ್ಟಾ ನೇತಾಕಿ ಬಿಡೋಣ.

ಒಳಗೆ ತೂಫಾನ್ ಮೇಲಿನಂತೆ ಓಡಿ ಬಂದ ಮಗಳನ್ನು ತಡೆದು.....

ನೀತು.......ಚಿನ್ನಿ ಮನೆಯೊಳಗೆ ಶೂ ಹಾಕಿಕೊಂಡು ಬರ್ತಾರಾ ?

ನಿಶಾ.....ಲಿಲ್ಲ ಮಮ್ಮ.

ನೀತು......ಮತ್ತೆ ನೀನ್ಯಾಕೆ ಹಾಕಿಕೊಂಡು ಬಂದೆ ಹೋಗಿ ಬಿಚ್ಚಿಡು.

ನಿಶಾ ತಕ್ಷಣವೇ ಹೊರಗೋಡಿ ಶೂ ಕಳಚೆಸೆದು ನೇರವಾಗಿ ಕಿಚನ್ನಿನ ಬಾಗಿಲ ಬಳಿ ನಿಂತಿದ್ದ ಪ್ರೀತಿಯನ್ನು ತಬ್ಬಿಕೊಂಡಳು.

ಪ್ರೀತಿ.....ಚಿನ್ನಿ ಮರಿ ಏನ್ ಬೇಕು ಕಂದ.

ನಿಶಾ ಸೆಲ್ಫಿನತ್ತ ಕೈ ತೋರಿಸಿ......ಅತ್ತೆ ಅದು ಕೊಲು ನನ್ನ ಫೆಂಡ್ ಗಿಲಿ ಗುಚ್ಚಿ ಬಂತು.

ಪ್ರೀತಿ ಅವಳನ್ನೆತ್ತಿಕೊಂಡು......ಏನ್ ಬೇಕಮ್ಮ ಬಿಕ್ಕಿ ಬೇಕ ಚಾಕಿ...

ನಿಶಾ ತಲೆಯಳ್ಳಾಡಿಸಿ.......ಬಿಕ್ಕಿ ಬೇಲ ಅದು ಬೇಕು....ದಾಚಿ ದಾಚಿ

ನೀತು.......ಅತ್ತಿಗೆ ಅವಳು ದ್ರಾಕ್ಷಿ ಗೋಡಂಬಿ ಕೇಳ್ತಿದ್ದಾಳೆ ಹೊರಗಡೆ ಗಿಣಿ ಗುಬ್ಬಚ್ಚಿಗಳು ಬಂದಿದೆಯಲ್ಲ ಅವಕ್ಕೆ ತಿನ್ನಿಸಲು.

ಪ್ರೀತಿ ಅತ್ತೆ ನೀಡಿದ ದ್ರಾಕ್ಷಿ ಗೋಡಂಬಿಯನ್ನು ತನ್ನ ನಿಕ್ಕರ್ ಜೇಬಿಗೆ ಪೂರ್ತಿ ತುಂಬಿಸಿಕೊಂಡು ಪುಟ್ಟ ಅಂಗೈನೊಳಗೂ ಹಿಡಿದುಕೊಂಡ ನಿಶಾ ಯಾರ ಕಡೆಯೂ ನೋಡದೆ ಹೊರಗೋಡಿದಳು. ಜಾನಿಯೂ ಮನೆಗೆ ಬಂದಾಗ.......

ನೀತು......ಜಾನಿ ತೋಟದಲ್ಲಿರದೆ ಎಲ್ಲಿಗೆ ಹೋಗಿದ್ದೆ ?

ಜಾನಿ......ನೀತು ಇವತ್ಯಾವುದೇ ಕೆಲಸವಿರಲಿಲ್ಲ ಅದಕ್ಕೆ ಹಾಗೆಯೇ ಸ್ವಲ್ಪ ಟೌನಿಗೆ ಹೋಗಿದ್ದೆ ಆಮೇಲೆ ನಾನು ಇಲ್ಲಿಗೆ ಬರುತ್ತಿದ್ದೆ ಹರೀಶ್ ಫೋನ್ ಮಾಡಿದ ತಕ್ಷಣ ಹೊರಟು ಬಂದೆ ಏನ್ ವಿಷಯ.

ನೀತು......ಅಮ್ಮ ನಾವೆಲ್ಲರೂ ತೋಟಕ್ಕೆ ಹೋಗಿ ಬರ್ತೀವಿ ನಾಳೆ ರಾಜಸ್ಥಾನದಿಂದ ಬರುತ್ತಿರುವವರ ಹೆಲಿಕಾಪ್ಟರ್ ಇಳಿಸುವುದಕ್ಕೆ ಮಾಡುತ್ತಿರುವ ವ್ಯವಸ್ಥೆ ನೋಡಿಕೊಂಡು ಅವರಿಗೆ ಕೊಡುವುದಕ್ಕೆ ಹಣವೆಷ್ಟಿದೆ ಎಂಬುದನ್ನೂ ಚೆಕ್ ಮಾಡಬೇಕಾಗಿದೆ.

ರಾಜೀವ್......ಹಣ ಕೊಡಬೇಕೇನಮ್ಮ ಯಾತಕ್ಕೆ ?

ನೀತು.....ಅಪ್ಪ ಸೂರ್ಯವಂಶದ ಅಧೀನದಲ್ಲಿರುವ ಕಂಪನಿಗಳಿಗೆ ಈಗ್ಯಾರ ನೇತೃತ್ವವೂ ಇಲ್ಲ. ಅದರ ವಾರಸುದಾರರು ತಮ್ಮ ಅಧಿಕಾರ ವಹಿಸಿಕೊಂಡಿಲ್ಲ. ಹಾಗಾಗಿ ಕಂಪನಿಯ ಹಣವಿರುವ ಬ್ಯಾಂಕಿನ ಖಾತೆಗಳಿಂದ ಹಣ ತೆಗೆಯಲಾಗದೆ ಕಂಪನಿ ನಡೆಸುವುದಕ್ಕೆ ಕೆಲವು ಅಡಚಣೆಗಳಾಗುತ್ತಿವೆ ಅಂತ ಪಾವನ ತಿಳಿಸಿದಳು. ಈಗ 10—15 ದಿನದಲ್ಲಿ ಕಂಪನಿಗೆ ಒಂದುವರೆ ಸಾವಿರ ಕೋಟಿಗಳಷ್ಟು ಹಣವೂ ಬೇಕಿದೆ ಆದರೆ ಬರಬೇಕಾಗಿರುವ ಪೇಮೆಂಟ್ ವಿಳಂಬವಾಗಿರುವ ಕಾರಣ ಅದನ್ನು ನಾನೇ ಅರೇಂಜ್ ಮಾಡ್ತೀನೆಂದು ಹೇಳಿದ್ದೀನಿ. ನಾಳೆ ಅವರನ್ನೆಲ್ಲಾ ಕರೆಸುತ್ತಿರುವ ಉದ್ದೇಶಗಳಲ್ಲಿ ಇದುವೇ ಒಂದು.

ನಿಧಿ.....ಅಮ್ಮ ಸಂಸ್ಥಾನದ ಅಧಿಕಾರ ವಹಿಸಿಕೊಳ್ಳಲು ಚಿನ್ನಿ ಇನ್ನೂ ಚಿಕ್ಕವಳಲ್ಲವಾ ? ಈ ಸಲವೇನೋ ಹಣ ನೀಡಬಹುದು ಮುಂದೆ ಕೂಡ ಕಂಪನಿ ನಿರ್ವಹಣೆಗೆ ಹಣದ ಅವಶ್ಯಕತೆ ಏದುರಾದಾಗೇನು ಮಾಡುವುದು.

ನೀತು......ಸೂರ್ಯವಂಶದ ಹಿರಿಮಗಳಾಗಿ ನೀನಿರುವಾಗ ಕಿರಿಯ ಚಿನ್ನಿ ಯಾತಕ್ಕಾಗಿ ಅಧಿಕಾರ ವಹಿಸಿಕೊಳ್ಳಬೇಕು. ಮುಂದೆ ಏನು ಯಾವ ರೀತಿ ಮಾಡಬೇಕೆಂಬ ವಿಷಯ ನನಗೆ ಬಿಡು ನೀನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಈಗ ನಿನ್ನ ತಮ್ಮ ತಂಗಿಯರ ಜೊತೆಗೆ ನಮಿತಾ ಮತ್ತು ನಿಕಿತಾಳನ್ನು ಕರೆದುಕೊಂಡು ಜಾನಿಯ ತೋಟಕ್ಕೆ ಹೊರಡು. ಆರೂ ನಿನ್ನ ವ್ಯಾನನ್ನು ಜಾನಿಯ ಜೀಪಿನ ಹಿಂದೆಯೇ ಕೊಂಡೊಯ್ಯಿ ನಿನ್ನ ಜೊತೆ ಅತ್ತಿಗೆಯರು ರಜನಿ ಮತ್ತು ಅನುಷಾ ಬೇರೆ ಕಾರಿನಲ್ಲಿ ಬರ್ತಾರೆ. ನಾನು ಇವರು ಸ್ವಲ್ಪ ಫುಡ್ ಯೂನಿಟ್ಟಿನ ಹತ್ತಿರ ಹೋಗಿ ಬರ್ತೀವಿ.

ಅನುಷ......ಅಕ್ಕ ನಾವೆಲ್ಲರೂ ತೋಟದಲ್ಲೇನು ಮಾಡಬೇಕೆಂದು ಹೇಳಿಬಿಡಿ.

ನೀತು.....ಈಗಷ್ಟೇ ಹಣದ ವಿಷಯ ಮಾತನಾಡಿದ್ದು ಕೇಳಿಸಲಿಲ್ಲವ ಅನು ? ನೀವೆಲ್ಲರು ಅಲ್ಲಿಟ್ಟಿರುವ ಹಣದ ಜೊತೆ ಆರೂ ವ್ಯಾನಿನಲ್ಲಿ ಇರುವಂತ ಹಣವನ್ನು ಲೆಕ್ಕ ಮಾಡಿಡಿ ಅದೇ ಕೆಲಸ ತಿಳಿಯಿತಾ.

ಅಣ್ಣ ಅಕ್ಕಂದಿರು ರೆಡಿಯಾಗಿ ಹೊರಡುತ್ತಿರುವುದನ್ನು ನೋಡಿ ನಿಶಾ ಅವರ ಮುಂದೆ ನಿಂತು..........ಅಕ್ಕ ನಾನಿ ಬೇಲ....ನಾನಿ ಬತೀನಿ.

ರಶ್ಮಿ ಮೆಲ್ಲಗೆ ಅವಳ ಕೆನ್ನೆ ಗಿಂಡುತ್ತ.....ಚಿನ್ನಿ ನೀನು ನಮ್ಮ ಜೊತೆಗೆ ಬರ್ತೀಯೋ ಮಮ್ಮನ ಜೊತೆ ಬರ್ತೀಯೋ.

ನಿಶಾ.....ನಾನಿ ಮಮ್ಮ ತೊತೆ ಹೋತೀನಿ...ಎಂದೇಳಿ ಮನೆಯೊಳಗೆ ಓಟ ಕಿತ್ತಳು.

ಎಲ್ಲರನ್ನೂ ಕಳುಹಿಸಿ ಮಗಳನ್ನು ರೆಡಿ ಮಾಡಿದ ನೀತು ಅಪ್ಪ ಅಮ್ಮ ಮತ್ತು ಶೀಲಾಳಾಗೆ ತಿಳಿಸಿ ಗಂಡನ ಜೊತೆ ಫುಡ್ ಯೂನಿಟ್ಟಿನ ಕಡೆ ಮಗಳನ್ನು ಕರೆದುಕೊಂಡು ಹೊರಟಳು.
* *
* *
ಫುಡ್ ಯೂನಿಟ್ಟಿನ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಹೆಲಿಕಾಪ್ಟರ್ ಇಳಿಸುವುದಕ್ಕೆ ನಿರ್ಮಾಣ ಮಾಡುತ್ತಿರುವುದನ್ನು ವೀಕ್ಷಿಸಿಕೊಂಡು ಹರೀಶ—ನೀತು ಮಗಳೊಟ್ಟಿಗೆ ತೋಟಕ್ಕೆ ಬಂದರು. ಕಾರಿನಿಂದಿಳಿದ ನಿಶಾಳನ್ನು ತೋಟದ ನಾಯಿಗಳೆಲ್ಲ ಸುತ್ತುವರಿದು ಅವಳಿಂದ ತಲೆ ಸವರಿಸಿಕೊಂಡ ಬಳಿಕವೇ ಒಳಗೆ ಹೋಗುವುದಕ್ಕೆ ಬಿಟ್ಟವು. ಜಾನಿಯ ಮನೆಯೊಳಗೆ ಬಂದ ನಿಶಾ ನೇರವಾಗಿ ಅಣ್ಣನ ಹಿಂದೆ ಅವನ ಕತ್ತಿಗೆ ನೇತಾಕಿಕೊಂಡು.......ಲವ್ವು ಅಣ್ಣ ಎಂದಳು.

ರಜನಿ....ಚೆನ್ನಾಗಿದೆ ಕಣೆ ಚಿಲ್ಟಾರಿ ನಿಂದು ಸುರೇಶನಿಗೆ ಏಟ್ ಕೊಡು ಅಂತ ಅಮ್ಮನಿಗೆ ಕೋಲು ಕೊಡ್ತಿಯ ಆದರೂ ಅಣ್ಣಂಗೆ ಲವ್ ಯು ಅಂತಿಯಾ. ಸುರೇಶಣ್ಣನ ಜೊತೆಗಿರಲು ಇಷ್ಟವ ನಿಂಗೆ ?

ರಜನಿಯ ಮಾತಿಗೆ ಎಲ್ಲರೂ ನಗುತ್ತಿದ್ದರೆ ತಲೆ ಅತ್ತಿತ್ತ ಮೇಲೆ ಕೆಳಗೆ ಆಡಿಸಿದ ನಿಶಾ........ನನ್ನಿ ಅಣ್ಣ ನಂಗಿ ಅಣ್ಣ ಬೇಕು.......ಎನ್ನುತ್ತ ಸುರೇಶನ ಮಡಿಲಲ್ಲಿ ಪವಡಿಸಿಬಿಟ್ಟಳು.

ಸುರೇಶ......ಆಂಟಿ ಚಿನ್ನಿಗೆ ನನ್ನ ಕಂಡರೆ ತುಂಬಾ ಇಷ್ಟ ಅದಕ್ಕೆ ನಂಗೆ ಏಟು ಕೊಡಿಸೋದು ಆದರೆ ನನ್ನನ್ನೇ ತುಂಬ ಇಷ್ಟಪಡೋದು.

ಅಣ್ಣ ಹೇಳಿದ್ದಕ್ಕೆಲ್ಲಾ ಹೂಂ ಎಂದು ತಲೆಯಾಡಿಸುತ್ತ ಏದುರಿಗಿಟ್ಟಿದ್ದ ಬ್ಯಾಗಿನತ್ತ ಕೈ ತೋರಿಸಿದರೆ ಸುರೇಶ ಐನೂರರ ಒಂದು ಬಂಡಲ್ ತೆಗೆದು ತಂಗಿಗೆ ಕೊಟ್ಟು.....

ಸುರೇಶ......ಚಿನ್ನಿ ಏನಿದು ?

ನೋಟಿನ ಬಂಡಲ್ ತಿರುಗಿಸಿ ಉರುಗಿಸಿ ನೋಡಿದ ನಿಶಾ.....ಇದಿ ನಂಗಿ ತೊತ್ತಿಲ್ಲ ಅಣ್ಣ.

ಸುರೇಶ.....ಇದು ಬೇಕ ನಿಂಗೆ ?

ನೋಟಿನ ಬಂಡಲ್ ಬ್ಯಾಗಿನ ಮೇಲಿಟ್ಟ ನಿಶಾ......ನಂಗಿ ಬೇಲ ಅಣ್ಣ ಬಾ ಆಚಿ ಕುಕ್ಕಿ ಟಾಮಿ ಜೊತಿ ಆಟ ಆಡನ.....ಎನ್ನುತ್ತ ಸುರೇಶಣ್ಣನ ಕೈ ಹಿಡಿದೆಳೆದು ಕರೆದೊಯ್ದಳು.

ನಮಿತ......ಆಂಟಿ ನಾನಿಷ್ಟೊಂದು ದುಡ್ಡನ್ನು ಒಟ್ಟಿಗೆ ನೋಡಿಯೇ ಇರಲಿಲ್ಲ ಒಂತರಾ ಶಾಕಾಗಿದೆ.

ಗಿರೀಶ.......ಏಯ್ ನಾನೇನು ದಿನಾ ಏಣಿಸ್ತಾ ಇರ್ತೀನಾ ?

ನಮಿತ.....ನೀನು ಬಿಡಪ್ಪ ಪಿಯುಸಿ ಓದುತ್ತಿರುವಾಗಲೇ ಪೇಂಟಿಗ್ಸ್ ಮಾರಿ ಕೋಟ್ಯಾಧಿಪತಿ ಆಗಿ ಹೋಗಿದ್ದೀಯ.

ಗಿರೀಶ.....ಅಮ್ಮ ಇದೆಲ್ಲ ಯಾರ ದುಡ್ಡು ?

ನೀತು.....ನಮ್ಮ ಹತ್ತಿರವಿದೆ ಎಂದರೆ ಸಧ್ಯಕ್ಕೆ ನಮ್ಮದೇ ಮುಂದೆ ಎಲ್ಲ ವಿಷಯ ನಿನಗೇ ಗೊತ್ತಾಗುತ್ತೆ ಇದರ ಬಗ್ಗೆ ತಿಳಿಯುವುದಕ್ಕೆ ನೀನಿನ್ನು ಚಿಕ್ಕವನು ಅನು ಒಟ್ಟೆಷ್ಟಿದೆ.

ಅನುಷ......ಅಕ್ಕ ಟೋಟಲ್ಲಾಗಿ 2670 ಕೋಟಿಯಿದೆ.

ನೀತು.....ಇದರಲ್ಲಿ ಎಪ್ಪತ್ತು ಕೋಟಿ ಬೇರೆ ತೆಗೆದಿಟ್ಟು ಅದನ್ನು ನಮ್ಮ ಕಾರಿನೊಳಗಿಟ್ಟು ಬಿಡು ಮಿಕ್ಕಿದ್ದೆಲ್ಲವೂ ಇಲ್ಲೇ ಇರಲಿ.

ಜಾನಿ.....ಈ ವಾರದಲ್ಲೇ ನೀಗ್ರೋಗಳನ್ನು ಕರೆಸಬೇಕ ?

ಹರೀಶ....ಯಾವ ನೀಗ್ರೋಗಳು ಜಾನಿ ? ಅವರಿಂದೇನು ಕೆಲಸ ?

ಜಾನಿ ಉತ್ತರಿಸುವ ಬದಲು ನೀತು ಕಡೆ ನೋಡಿದಾಗವಳೇ......ರೀ ಅವರ ವಿಷಯ ನಿಮಗಾಮೇಲೆ ಹೇಳ್ತೀನಿ. ಜಾನಿ ಅವರನ್ನು ಇಲ್ಲಿಗೆ ಬರಲು ಹೇಳಬೇಕಾಗಿಲ್ಲ ಅದಕ್ಕೆಂದೇ ಬೇರೆ ದಾರಿ ಹುಡುಕಿದ್ದೀನಿ.

ಜಾನಿ.....ಯಾವುದು ?

ನೀತು.....ನಾಳೆ ನಿನಗೇ ಗೊತ್ತಾಗುತ್ತೆ.

ಮಧ್ಯಾಹ್ನದವರೆಗೂ ತೋಟದಲ್ಲಿದ್ದು ಎಲ್ಲರೂ ಮನೆಗೆ ಹಿಂದಿರುಗಿ ಬಂದರು.
* *
* *
ಮಾರನೆಯ ಬೆಳಿಗ್ಗೆ...

ಚೆನೈ ಮತ್ತು ಬಾಂಬೆಯಿಂದ ಆಶೋಕ...ರೇವಂತ್...ವಿಕ್ರಂ ಮತ್ತು ರವಿ ನಾಲ್ವರೂ ಮನೆಗೆ ಮುಂಜಾನೆಯೇ ಹಿಂದಿರುಗಿದ್ದರು.

ಆರೀಫ್ ತಿಂಡಿಯಾದ ನಂತರ.....ನೀತಿ ನೆನ್ನೆ ಊರಿಗೆ ಹೋಗಬೇಡ ಅಂದೆ ಇವತ್ತಾದರೂ ನಾನು ಹೋಗಬಹುದಾ ? ಅಲ್ಲಿನ ಗ್ರಾನೈಟ್ ಬಿಝಿನೆಸ್ ಕೂಡ ನೋಡಿಕೊಳ್ಳಬೇಕಲ್ಲ.

ಅಶೋಕ......ನೀನು ಸುಮ್ಮನಿರು ಆರೀಫ್ ಎಲ್ಲಿಗೆ ಹೋಗುವುದು. ಚಿಕ್ಕಂದಿನಲ್ಲಿ ನೀತು ಬಾಯ್ ಫ್ರೆಂಡ್ ಆಗಿದ್ದವನು ನೀನು ಅವಳು ಆಗೆಲ್ಲ ಏನು ಮಾಡ್ತಿದ್ಳು ಗೊಣ್ಣೆ ಸುರಿಸಿಕೊಂಡು ಓಡಾಡ್ತಿದ್ಳಾ ಅಂತ ನಿನ್ನಿಂದ ತುಂಬ ವಿಷಯ ತಿಳಿದುಕೊಳ್ಳಬೇಕಿದೆ ಶೀಲಾ ಅವಳ ಬಗ್ಗೆ ನಮಗೇನೂ ಹೇಳ್ತಿಲ್ಲ ನೀನೇ ಹೇಳಬೇಕು.

ಆರೀಫ್.....ಸರ್ ನಾನು ಬಾಯ್ ಫ್ರೆಂಡಲ್ಲ ಬರೀ ಫ್ರೆಂಡು ಅದುವೇ ನಾವು ಚಿಕ್ಕವರಾಗಿದ್ದಾಗಷ್ಟೆ.

ಅಶೋಕ.....ಅಂದರೆ ಈಗ ನೀನವಳ ಫ್ರೆಂಡ್ ಅಲ್ಲವಾ ?

ಆರೀಫ್........ಛೇ...ಛೇ...ಹಾಗಲ್ಲ ಸರ್ ಈಗಲೂ ನಾನು ನೀತಿ ಫ್ರೆಂಡೇ ಆದರೆ ಬಾಯ್ ಫ್ರೆಂಡಲ್ಲ ಅಂತ ಹೇಳಿದ್ದು.

ಅಶೋಕ..... ಹಾಗೋ ಅಂದರೆ ನೀನು ಬಾಯ್ ಅಲ್ಲ ಅಂತಾಯ್ತು.

ಅವನ ಮಾತಿಗೆ ಮಿಕ್ಕವರು ನಗುತ್ತಿದ್ದರೆ ದಂಗಾಗಿದ್ದ ಆರೀಫ್...ಸರ್ ನೀವು ನನ್ನನ್ನು ರೇಗಿಸ್ತಿದ್ದೀರ ತಾನೇ.

ಅಶೋಕ.....ಮತ್ತಿನ್ನೇನು ಸುಮ್ಮನೆ ಕೂತಿರು ಅಂತ ನೀತು ಹೇಳಿದ ಮೇಲೂ ನೀನು ಊರಿಗೆ ಹೋಗ್ತೀನಿ ಅಂತಿದ್ರೆ ಸುಮ್ಮನಿರಬೇಕ.

ಫೋನಿನಲ್ಲಿ ಮಾತನಾಡುತ್ತಿದ್ದ ನೀತು ಅದನ್ನಿಟ್ಟು......ರೀ ಇನ್ನರ್ಧ ಘಂಟೆಯಲ್ಲಿ ಛಾಪರ್ ಬಂದಿಳಿಯುತ್ತಂತೆ ಆರೂ ವ್ಯಾನಿನಲ್ಲಿ ಏಳು ಜನ ಆರಾಮವಾಗಿ ಬರಬಹುದು.

ರಾಜೀವ್.....ಅವರೆಷ್ಟು ಜನ ಬರ್ತಿರೋದಮ್ಮ ?

ನೀತು......ಅಪ್ಪ ಅವರು ಮೂರು ಜನ ಜೊತೆಗಿಲ್ಲಿ ಸೆಕ್ಯೂರಿಟಿಗಾಗಿ ಏಳು ಜನರನ್ನು ಕರೆದುಕೊಂಡು ಬಾ ಅಂದಿದ್ದೆನಲ್ಲ ಅವನು ಹತ್ತು ಜನರನ್ನು ಕರೆತರುತ್ತಿದ್ದಾನೆ.

ವಿಕ್ರಂ......ಅದಿರಲಿ ಕಣಮ್ಮ ನೀತು ಈಗ ಬರುತ್ತಿರುವ ಹತ್ತು ಜನ ಉಳಿದುಕೊಳ್ಳಲಿಕ್ಕೆ ವ್ಯವಸ್ಥೆ ಮಾಡಬೇಕಲ್ಲ ಅದು ಕೂಡ ಈ ಮನೆ ಹತ್ತಿರದಲ್ಲೇ ಆಗಬೇಕು.

ಅಶೋಕ........ಅದಕ್ಯಾಕೆ ಚಿಂತೆ ಮಾಡೋದು ವಿಕ್ರಂ ನಮ್ಮನೆಯ ಎರಡನೇ ಮಹಡಿಯಲ್ಲಿ ಎರಡೆರಡು ದೊಡ್ಡ ದೊಡ್ಡ ರೂಮುಗಳಿದೆ ಅಲ್ಲಿಯೇ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡೋಣ. ಊಟ ತಿಂಡಿಯೆಲ್ಲವೂ ಇಲ್ಲಿಯೇ ಆಗುತ್ತೆ ಮಲಗಲು ರೆಸ್ಟ್ ಮಾಡುವುದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕಷ್ಟೆ.

ರಜನಿ.....ಅದನ್ನೂ ಮಾಡುವ ಅಗತ್ಯವಿಲ್ಲ ನೆನ್ನೆ ದಿನವೇ ನಾವೆಲ್ಲ ಅರೇಂಜ್ ಮಾಡಿದ್ದಾಗಿದೆ.

ನೀತುಳನ್ನು ತಬ್ಬಿಕೊಂಡ ರೇವಂತ್......ನಮ್ಮನೆಯ ಲೇಡೀಸ್ ಎಲ್ಲ ವಿಷಯದಲ್ಲೂ ನಮಗಿಂತಲೂ ತುಂಬ ಮುಂದಿದ್ದಾರೆ.

ಪ್ರೀತಿ.........ರೀ ಏದುರು ಮನೆಯ ರೂಮುಗಳಿಗೆ ಹೊರಗಿಂದಲೇ ಮೆಟ್ಟಿಲಿದೆ ಯಾರಿಗೂ ಸಮಸ್ಯೆ ಆಗುವುದಿಲ್ಲ ಅದಕ್ಕೆ ಅಲ್ಲಿಯೇ ನೆನ್ನೆ ಎಲ್ಲವನ್ನೂ ಆರೇಂಜ್ ಮಾಡಿದ್ವಿ.

ನೀತು........ರೀ ನೀವು ರೇವಂತ್ ಅಣ್ಣ ಮತ್ತು ಆರೂ ಮೂವರೂ ಒಂದೊಂದು ಕಾರಲ್ಲಿ ಹೋಗಿ ಅವರನ್ನು ಕರೆದುಕೊಂಡು ಬನ್ನಿ.

ನಿಧಿ.....ಅಮ್ಮ ಮಾವ ಇವತ್ತು ಬೆಳಿಗ್ಗೆ ತಾನೇ ಬಂದಿದ್ದಾರೆ ಅವರು ರೆಸ್ಟ್ ಮಾಡುತ್ತಿರಲಿ ಅಪ್ಪನ ಜೊತೆ ನಾನು ಹೋಗ್ತೀನಿ. ಅವರನ್ನು ಬೇಟಿಯಾಗಲು ನಾನೂ ಉತ್ಸುಕಳಾಗಿದ್ದೀನಿ.

ರಾಜೀವ್......ಆಯ್ತು ಪುಟ್ಟಿ ಹೋಗಿ ಬಾರಮ್ಮ.

ನೀತು.....ಬೇಡ ನೀನು ಮನೇಲಿರು.

ರೇವತಿ......ಯಾಕೆ ತಡೆಯುತ್ತೀಯ ನಿಧಿ ನೀನು ರೇವಂತ್ ಜೊತೆಗೆ ಹೋಗಿ ಬಾರಮ್ಮ.

ನೀತು........ಅಮ್ಮ ನಿಮಗಿದೆಲ್ಲವೂ ಗೊತ್ತಾಗಲ್ಲ ಸುಮ್ಮನಿರಿ ನಿಧಿ ನೀನು ಮನೆಯಲ್ಲಿರು ಅಷ್ಟೆ. ಅಮ್ಮ ಸೂರ್ಯವಂಶಿ ಸಂಸ್ಥಾನದಲ್ಲಿ ಆಶ್ರಯದಾತರಾಗಿ ಇರುವವರಿಗೂ ಸಂಸ್ಥಾನದ ಯುವರಾಣಿಯ ನಡುವೆ ಒಂದು ಅಂತರವಿರುತ್ತೆ ಅದ್ಯಾವತ್ತಿಗೂ ಬದಲಾಗಬಾರದು. ನಿಧಿ ಅವರೊಟ್ಟಿಗೆ ಸ್ನೇಹದಿಂದ ನಡೆದುಕೊಂಡರೂ ಸರಿ ಇವಳಲ್ಲಿನ ಯುವರಾಣಿ ರಾಜಪರಂಪರೆಗೆ ವಿರುದ್ದವಾಗಿ ನಡೆದುಕೊಂಡರೆ ಸ್ಂಸ್ಥಾನದ ಘಂತೆಗೆ ಧಕ್ಕೆಯಾಗುತ್ತೆ. ನಿಧಿ ಇನ್ನೊಂದು ಮುಖ್ಯವಾದ ವಿಚಾರ ಅದು ನಿನಗೆ ನೆನಪಿರಬೇಕು.

ನಿಧಿ.....ಏನು ಹೇಳಮ್ಮ.

ನೀತು......ಚಿನ್ನಿ ಇನ್ನೂ ಚಿಕ್ಕವಳು ಅವಳಿಗೆ ಇದೆಲ್ಲದರ ವಿಷಯವು ಅರ್ಥವಾಗುವುದಕ್ಕಿನ್ನೂ ಸಮಯ ಬೇಕಾಗುತ್ತೆ ನೀನು ದೊಡ್ಡವಳು ಅದಕ್ಕೆ ತಿಳಿದುಕೋ. ಈಗ ಬರುವ ವಿಕ್ರಂ ಸಿಂಗ್...ದಿಲೇರ್ ಸಿಂಗ್ ಅವರಿಬ್ಬರ ಜೊತೆ ನೀನು ಮಾತನಾಡುವಾಗ ರಿಕ್ವೆಸ್ಟ್ ಅಥವ ಅವರ ಅನುಮತಿ ಕೇಳುವವಳಂತೆ ಮಾತನಾಡಬೇಡ ಆಜ್ಞೆ ನೀಡುವವಳ ರೀತಿ ಅಧಿಕಾರಯುತವಾಗಿ ವ್ಯವಹರಿಸು ಗೊತ್ತಾಯ್ತಾ.

ನಿಧಿ.......ಸರಿ ಅಮ್ಮ ಅರ್ಥವಾಯಿತು ನೀವು ಹೇಳಿದ ಹಾಗೆಯೇ ನಡೆದುಕೊಳ್ಳುವೆ.

ಜಾನಿ......ಏನಿದು ಸಂಸ್ಥಾನ ಯುವರಾಣಿ ನನಗೊಂದೂ ಅರ್ಥವೇ ಆಗುತ್ತಿಲ್ಲ ಇದೆಲ್ಲ ಏನು ನೀತು ?

ಆರೀಫ್.....ನನಗೂ ತಲೆಬುಡ ತಿಳಿಯಲಿಲ್ಲ.

ನೀತು......ನೀವಿಬ್ರೂ ನನ್ನ ಚಿನ್ನಿ ಮರಿನ ಏನಂತ ಕರಿತೀರ ?

ಜಾನಿ....ನನಗಂತೂ ಅವಳು ಬ್ರಾಬಿ ಡಾಲ್ ಲಿಟಲ್ ಪ್ರಿನ್ಸಸ್.

ಆರೀಫ್.....ನಾನೂ ಲಿಟಲ್ ಪ್ರಿನ್ಸಸ್ ಅಂತಲೇ ಕರೆಯೋದು.

ನೀತು.....ಯಾಕೆ ?

ಜಾನಿ......ಯಾಕೆಂದರೇನರ್ಥ ಅವಳು ನನ್ನ ಲಿಟಲ್ ಪ್ರಿನ್ಸಸ್ಸೇ.

ನೀತು.....ಅವಳು ನಿಜವಾಗಿಯೂ ಲಿಟಲ್ ಪ್ರಿನ್ಸಸ್.

ಆರೀಫ್......ಹೌದು ಯಾರೀಗ ಇಲ್ಲವೆಂದರು.

ನೀತು ಹಣೆ ಚಚ್ಚಿಕೊಳ್ಳುತ್ತ....ನಿಮಗೆ ಸೂರ್ಯವಂಶಿ ಗ್ರೂಪ್ ಆಫ್ ಕಂಪನೀಸ್ ಬಗ್ಗೆ ಗೊತ್ತಿದೆಯಾ ?

ಆರೀಫ್......ಅದರ ಬಗ್ಗೆ ಯಾರಿಗೆ ಗೊತ್ತಿಲ್ಲ ಅದೊಂದು ಅತ್ಯಂತ ಪ್ರತಿಷ್ಠಿತ ಮಲ್ಟಿನ್ಯಾಷೆನಲ್ ಮಲ್ಟಿ ಬಿಲಿಯನ್ ಡಾಲರ್ ಕಂಪನಿ ಅದು ಸೂರ್ಯವಂಶಿ ರಾಜಮನೆತನದ ಅಧೀನದಲ್ಲಿರುವ ಕಂಪನಿ. ಆ ಕಂಪನಿಯ ಅಧೀನದಲ್ಲಿರುವ ಕೆಲವು ಕ್ವಾರಿಗಳಿಂದಲೂ ನಮಗೆ ಗ್ರಾನೈಟ್ ಸಪ್ಲೈ ಆಗುತ್ತೆ. ನಾನೂ ಎರಡು ಬಾರಿ ಉದಯಪುರದಲ್ಲಿ ಅವರ ಆಫೀಸಿಗೆ ಹೋಗಿದ್ದೀನಿ ಆಗಲೇ ಸಂಸ್ಥಾನದ ಅರಮನೆಗೂ ಹೋಗಿದ್ದೆ.

ಅಶೋಕ.......ಅರಮನೆ ಒಳಗೂ ಹೋಗಿದ್ಯಾ ?

ಆರೀಫ್.......ನಮ್ಮನ್ನೆಲ್ಲಾ ಗೇಟಿನ ಹತ್ತಿರವೂ ಬಿಡುವುದಿಲ್ಲ ಸರ್ ದೂರದಿಂದಲೇ ನೋಡಿದೆ ಎಷ್ಟು ವಿಶಾಲವಾಗಿ ಸುಂದರವಾಗಿದೆ ಅಂತೀರಾ.

ನೀತು......ಅದೇ ಸೂರ್ಯವಂಶಿ ರಾಜಮನೆತನದ ಕಿರಿಯ ಮಗಳು ನಮ್ಮ ಚಿನ್ನಿ ಹಿರಿಯವಳು ನಿಧಿ.

ನೀತು ಹೇಳಿದ್ದನ್ನು ಕೇಳಿ ದಂಗಾಗಿ ಹೋದ ಆರೀಫ್ ಎದ್ದು ನಿಲ್ಲುತ್ತ ನಿಧಿ ಮತ್ತೊಮ್ಮೆ ಕುಕ್ಕಿಗಳ ಜೊತೆ ಆಡುತ್ತಿದ್ದ ನಿಶಾಳ ಕಡೆ ನೋಡುತ್ತ ನಿಂತನು.

ನೀತು......ಯಾಕೆ ಶಾಕಾಯ್ತಾ ?

ಆರೀಫ್.....ಶಾಕಾ ? ಪಕ್ಕದಲ್ಲೇ ಬಾಂಬ್ ಬಿದ್ದಂತಾಯಿತು.

ಜಾನಿ......ಇವರಿಬ್ಬರೂ ರಾಜಮನೆತನದವರಾಗಿದ್ದರೆ ಇಲ್ಲಿ ಹೇಗೆ ಅದರ ಬಗ್ಗೆ ಹೇಳು.

ನೀತು.....ಅವರೆಲ್ಲರೂ ಬಂದು ಹೋಗಲಿ ಆಮೇಲೆ ಮಿಕ್ಕ ವಿಷಯ ಹೇಳ್ತೀನಿ. ರೀ ನೀವು ಆರೂ ಅಣ್ಣ ಮೂವರು ಹೋಗಿ ಅವರನ್ನು ಕರೆದುಕೊಂಡು ಬಂದುಬಿಡಿ.

No comments:

Post a Comment