Total Pageviews

Monday, 30 September 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 213

ಫುಡ್ ಯೂನಿಟ್ಟಿನಲ್ಲಿ.....

ಮನೆಯವರೆಲ್ಲ ಊಟ ಮುಗಿಸಿಕೊಂಡು ಹೊರಟಿದ್ದ ಅತಿಥಿಗಳನ್ನು ಬೀಳ್ಕೊಡುತ್ತ ಅವರಿಗೆ ಅತಿಥಿ ಸತ್ಕಾರದ ಮರ್ಯಾದೆ ಮಾಡಿಯೇ ಕಳಿಸಿಕೊಡುತ್ತಿದ್ದರು. ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ಕುಟುಂಬದ ಜೊತೆ ಹರೀಶನ ಶಾಲಾ ಮುಖ್ಯೋಪಾಧ್ಯಾಯರ ಕುಟುಂಬ ಮತ್ತು ಹರೀಶನ ಸಹೋದ್ಯೋಗಿಗಳ ಕುಟುಂಬದವರೆಲ್ಲ ಜೊತೆಯಲ್ಲಿಯೇ ಕುಳಿತಿದ್ದರು.

ನಿಧಿ ಅವರಲ್ಲಿಗೆ ಬಂದು.....ನಮಸ್ತೆ ಸರ್ ನಿಮ್ಮೆಲ್ಲರದ್ದೂ ಊಟ ಆಯಿತಾ ಸರ್.

ಪ್ರಿನ್ಸಿ.....ನಿಧಿ ಈಗ ಫ್ರೀ ಆದೆಯೇನಮ್ಮ ನಾವೆಲ್ಲ ನೋಡುತ್ತಿದ್ದೆವು ನೀನು ತಂಗಿಯ ಜೊತೆ ಅವಳನ್ನು ನೋಡಿಕೊಳ್ಳುತ್ತಿದ್ದೆ. ಎಲ್ಲರದ್ದೂ ಊಟ ಆಯಿತು ಕಣಮ್ಮ ಪ್ರತಿಯೊಂದನ್ನೂ ತುಂಬ ಚೆನ್ನಾಗಿಯೇ ಅರೇಂಜ್ ಮಾಡಿದ್ದೀರ. ಎಷ್ಟೋ ದಿನಗಳ ನಂತರ ನನ್ನ ಫ್ಯಾಮಿಲಿ ಒಂದು ಕೌಟುಂಬಿಕ ವಾತಾವರಣದಲ್ಲಿ ಸಮಯವನ್ನು ಕಳೆಯುವ ಅವಕಾಶ ಸಿಕ್ಕಿತು ಇದಕ್ಕೆ ಹರೀಶನಿಗೆ ಥ್ಯಾಂಕ್ಸ್ ಹೇಳಬೇಕು.

ಮುಖ್ಯೋಪಾಧ್ಯಾಯರು.......ನಿಧಿ ಎಲ್ಲಮ್ಮ ನಿಮ್ಮಪ್ಪ ಅಮ್ಮನೇ ಕಾಣ್ತಿಲ್ಲ ನಾವು ಹೊರಡುವ ಮುಂಚೆ ಹೇಳಿ ಹೋಗುವುದಕ್ಕೆ ಅಂತ ಅವರನ್ನೇ ಹುಡುಕುತ್ತಿದ್ವಿ.

ನಿಧಿ.......ಕ್ಷಮಿಸಿ ಸರ್ ಅಮ್ಮ ಅಪ್ಪ ಇಬ್ಬರೂ ಮನೆಗೆ ಹೋಗಿದ್ದಾರೆ ಅದು ನಿಶಾಳಿಗ್ಯಾಕೋ ಸ್ವಲ್ಪ ಆರೋಗ್ಯ ಸರಿಯಿರಲಿಲ್ಲ ಅದಕ್ಕಾಗಿ ಇಬ್ಬರೂ ಅವಳನ್ನು ಕರೆದುಕೊಂಡು ಹೋಗಿದ್ದಾರೆ ನಿಮಗೆ ಹೇಳದೆ ಹೋಗಿದ್ದಕ್ಕೆ ಅಪ್ಪನ ಪರವಾಗಿ ನಾನು ಕ್ಷಮೆ ಕೇಳ್ತೀನಿ.

ಮುಖ್ಯೋ.....ಛೇ...ಛೇ....ಇಂತ ಚಿಕ್ಕ ವಿಷಯಕ್ಕೆಲ್ಲಾ ನೀನ್ಯಾಕಮ್ಮ ಕ್ಷಮೆ ಕೇಳ್ತೀಯ ಹರೀಶನಿಗೆ ಮಗಳೆಂದರೆ ಎಷ್ಟು ಪ್ರೀತಿಯಿದೆ ಅಂತ ನಮ್ಮೆಲ್ಲರಿಗೂ ಗೊತ್ತಿದೆ ಆದಷ್ಟು ಬೇಗ ಮಗು ಚೇತರಿಸಿಕೊಳ್ಳಲೆಂದು ನಾವೆಲ್ಲರೂ ಹಾರೈಸುತ್ತೀವಿ.

ಪ್ರಿನ್ಸಿ ಮಗಳು.......ಅಕ್ಕ ನನ್ನ ಹೆಸರು ಪ್ರೀತಿ ಅಂತ ನಾನು ರಶ್ಮಿ... ದೃಷ್ಟಿ....ನಮಿತಾ ಮತ್ತು ಗಿರೀಶ ಒಂದೇ ಕ್ಲಾಸಿನಲ್ಲಿ ಓದುವುದು. ನಾನು ನಿಮ್ಮ ಮನೆಗೆ ಬರಬಹುದಾ ?

ನಿಧಿ......ಅಯ್ಯೋ ಪುಟ್ಟಿ ಇದನ್ನೆಲ್ಲಾ ಕೇಳ್ತಾರೇನಮ್ಮ ಯು ಆರ್ ಮೋಸ್ಟ್ ವೆಲ್ಕಂ. ದೃಷ್ಟಿ ಬಾಯಿಲ್ಲಿ.

ದೃಷ್ಟಿ......ಹೇಳಿ ಅಕ್ಕ ಹಲೋ ಪ್ರೀತಿ ಊಟವಾಯಿತಾ ಸಾರಿ ಸರ್ ನಿಮ್ಮೆಲರನ್ನು ನೋಡಿರಲಿಲ್ಲ ಕ್ಷಮಿಸಿ.

ಪ್ರಿನ್ಸಿ ನಗುತ್ತ.......ಅದಕ್ಯಾಕಮ್ಮ ಸಾರಿ ಕೇಳ್ತೀಯಾ ನೀನು ನನ್ನ ಮಗಳ ಕ್ಲಾಸ್ಮೇಟ್ ಸರ್ ಅಂತ ಕರೆಯೋ ಬದಲು ಅಂಕಲ್ ಅಂತ ಕರೆದರೆ ನನಗೆ ಖುಷಿ.

ನಿಧಿ......ಪ್ರೀತಿ ನಿಮ್ಮೆಲ್ಲರ ಕ್ಲಾಸ್ಮೇಟ್ ಇವಳನ್ಯಾಕೆ ನೀವು ಮನೆಗೆ ಕರೆದುಕೊಂಡು ಬಂದಿಲ್ಲ ನಮ್ಮ ಜೊತೆಯಲ್ಲೂ ಅವಳು ಸಮಯ ಕಳೆಯಲಿ ಕರೆದುಕೊಂಡು ಬಾ.

ದೃಷ್ಟಿ.....ಸರಿ ಅಕ್ಕ.

ನಿಧಿ......ಸರ್ ಯಾರೂ ಹೋಗಬೇಡಿ ಈಗಲೇ ನಾನೊಂದು ನಿಮ್ಷ ಬರ್ತೀನಿ.....ಎಂದೇಳಿ ಒಳಗೋಡಿ.......ಸವಿತಾ ಆಂಟಿ ನಿಮ್ಮ ಶಾಲೆ ಸ್ಟಾಫ್ ಹೊರಡುತ್ತಿದ್ದಾರೆ ಅವರಿಗೆ ತಾಂಬೂಲ ಇನ್ನೂ ಕೊಟ್ಟಿಲ್ಲ.

ಸುಕನ್ಯಾ.......ಸವಿ ನೀನು ತಾಂಬೂಲ ರೆಡಿ ಮಾಡು ನಾನೇ ಹೋಗಿ ಎಲ್ಲರನ್ನು ಕರೆ ತರುತ್ತೀನಿ ನಡಿ ನಿಧಿ.

ಹರೀಶನ ಶಾಲಾ ಸಹೋಧ್ಯೋಗಿಗಳನ್ನು ಮನೆಯವರೆಲ್ಲ ತುಂಬಾ ಆತ್ಮೀಯವಾಗಿ ಮಾತನಾಡಿಸಿದ ನಂತರ ಡಿಗ್ರಿ ಕಾಲೇಜಿನ ಪ್ರಿನ್ಸಿ ಅವರನ್ನು ಪರಿಚಯ ಮಾಡಿಕೊಂಡು ನಿಧಿ ಬಗ್ಗೆ ಸ್ವಲ್ಪ ಕಾಳಜಿವಹಿಸಿ ಅವಳು ಈ ವರ್ಷವೇ ಅಪ್ಪ ಅಮ್ಮನ ಹತ್ತಿರ ಹಿಂದಿರುಗಿದ್ದಾಳೆಂದು ವಿನಂತಿಸಿಕೊಂಡರು. ಸಂಜೆ ನಾಲ್ಕರ ಹೊತ್ತಿಗೆ ಆಹ್ವಾನಿತರೆಲ್ಲರೂ ತೆರಳಿದ್ದು ಮನೆಯವರು ಮಾತ್ರ ಉಳಿದಿದ್ದಾಗ ಅಶೋಕನ ಫೋನಿಗೆ ಹರೀಶನ ಕರೆ ಬಂದಿತು.
* *
* *
ಮನೆಯಲ್ಲಿ........

ನೀತುಳಿಗೆ ನೀರು ಕುಡಿಸಿದ ಸುಭಾಷ್......ಚಿಕ್ಕಮ್ಮ ಏನಾಯ್ತು ? ಯಾಕಿಷ್ಟು ಆತಂಕಗೊಂಡಿದ್ದೀರಾ ?

ನೀತು ದುಃಖದಲ್ಲಿ ಮಾತನಾಡಲಾಗದೆ ಕೆಳಗೆ ಬಿದ್ದಿರುವ ಪತ್ರವನ್ನು ಓದುವಂತೆ ಸನ್ನೆ ಮಾಡಿದಳು.

ಹರೀಶ......ನೀತು ಯಾಕಿಷ್ಟು ಧೃತಿಗೆಟ್ಟಿರುವೆ ಧೈರ್ಯವಾಗಿರು ನೀನೆ ಹೀಗೆ ಧೈರ್ಯ ಕಳೆದುಕೊಂಡರೆ ನಮ್ಮ ಗತಿ ಏನಾಗಬೇಡ. ಸುಭಾಷ್ ಅದೇನು ಬರೆದಿದೆಯೋ ಜೋರಾಗಿ ಓದು.

ಸುಭಾಷ್ ಪತ್ರ ಓದುತ್ತ.....

ಶ್ರೀಮತಿ ನೀತು ಶರ್ಮ.....

ನಿಮ್ಮ ಒಟ್ಟು ಕುಟುಂಬದ ಬಗ್ಗೆ ತಿಳಿದು ನಮಗೆ ಸಂತೋಷವಾಯ್ತು ಜೊತೆಗೆ ತುಂಬ ದುಃಖವೂ ಆಗುತ್ತಿದೆ. ಸಂತೋಷ ಏಕೆಂದರೆ ನಿಮ್ಮ ಕುಟುಂಬದಲ್ಲಿ ಎಲ್ಲರೂ ತುಂಬ ಅನ್ಯೋನ್ಯವಾಗಿದ್ದೀರ ನಿಮ್ಮಲ್ಯಾವ ತಕರಾರುಗಳೂ ಇಲ್ಲ ಒಬ್ಬರನ್ನೊಬ್ಬರು ಪ್ರೀತಿ ಅಕ್ಕರೆ ಗೌರವದಿಂದ ನೋಡುತ್ತಿದ್ದೀರ. ದುಃಖ ಆಗುತ್ತಿರುವುದು ಏಕೆಂದರೆ ನಾಳೆ ನಿಮ್ಮೀ ಒಟ್ಟು ಕುಟುಂಬದಲ್ಲಿ ಎಷ್ಟು ಜನರು ಬದುಕಿರುತ್ತಾರೋ ಎಂಬುದನ್ನ ನೆನೆದು ನನಗೆ ತುಂಬ ದುಃಖವಾಗುತ್ತಿದೆ. ಇಷ್ಟು ಸುಖ ಸಂತೋಷದ ಸಂಪದ್ಬರಿತವಾದ ಕುಟುಂಬವಿದ್ದರೂ ನಿನಗ್ಯಾಕೆ ಈ ಅರಮನೆಗಳ ರಾಜಮನೆತನದ ಉಸಾಬರಿ ಬೇಕಿತ್ತೆಂಬುದೇ ಅರ್ಥವಾಗುತ್ತಿಲ್ಲವಲ್ಲ. 

ವಯಸ್ಸಿಗೆ ಬಂದಿರುವ ಮಗಳಿದ್ದಾಳೆ ಜೊತೆಗೆ ವಂಶ ಬೆಳಗುವುದಕ್ಕೆ ಇಬ್ಬರು ಗಂಡು ಮಕ್ಕಳು ಜೊತೆಗೆ ಕುಟುಂಬದ ಇನ್ನೂ ಆರೇಳು ಜನ ಮಕ್ಕಳಿರುವಾಗ ನೀವು ದಂಪತಿಗಳು ಸೂರ್ಯವಂತಿ ಮನೆತನದ ವಾರಸುದಾರಳನ್ನೇಕೆ ದತ್ತು ಪಡೆದಿರುವಿರೋ ಅರ್ಥವಾಗುತ್ತಿಲ್ಲ. ರಾಣಾಪ್ರತಾಪ್—ಸುಧಾಮಣಿ ಮಗಳನ್ನು ದತ್ತು ಪಡೆದು ನೀವು ರಾಜಮನೆತನದ ಆಸ್ತಿ ಕಬಳಿಸುವ ಹುನ್ನಾರವಿದೆಯಾ ? ಆ ರೀತಿ ಯೋಚನೆಗಳಿದ್ದರೆ ಈಗಲೇ ತ್ಯಜಿಸಿಬಿಡು ಅಲ್ಲಿನ ಅಸ್ತಿಗಳನ್ನೆಲ್ಲಾ ಅನುಭವಿಸುವುದಕ್ಕೆ ನಾವಿದ್ದೀವಿ. ನೀನು ಗೃಹಿಣಿ ನಿನ್ನ ಗಂಡ ಒಬ್ಬ ಅಧ್ಯಾಪಕ ಒಟ್ಟು ಕುಟುಂಬವಾದರೂ ನಿಮ್ಮಲ್ಯಾರಿಗೂ ನಮ್ಮನ್ನು ಏದುರಿಸಿ ನಿಲ್ಲುವ ತಾಕತ್ತಿಲ್ಲ. 

ನಮ್ಮ ಹಿಂದೆ ದೊಡ್ಡ ದೊಡ್ಡ ಶಕ್ತಿಗಳ ಬೆಂಬಲವಿದೆ ಅದರ ಜೊತೆ ಹೋರಾಡುವ ಛಾತಿ ಇರುವಂತಹ ನೂರಾರು ಜನರಿದ್ದಾರೆ. ನಾನೊಬ್ಬ ಲಕ್ಷ್ಮಿ ದೇವಿಯ ಆರಾಧಕ ಲಕ್ಷ್ಮಿ ಎಂದರೆ ಹಣ....ಆಸ್ತಿ....ಐಶ್ವರ್ಯದ ಸಂಕೇತ ಅದೆಲ್ಲವೂ ನಮ್ಮ ಬಳಿ ಇದ್ದರೂ ಇನ್ನೂ ಬೇಕೆನಿಸುತ್ತದೆ. ಈ ಶುಕ್ರವಾರದ ತನಕ ನಿನಗೆ ಸಮಯಾವಕಾಶ ನೀಡುತ್ತಿದ್ದೀವಿ ಅಲ್ಲಿವರೆಗೆ ಚೆನ್ನಾಗಿ ಆಲೋಚನೆ ಮಾಡಿ ನಮ್ಮ ಪರವಾದ ನಿರ್ಧಾರಕ್ಕೆ ಬಂದರೆ ನಿನ್ನ ಕುಟುಂಬಕ್ಕೂ ಒಳ್ಳೆಯದು. ಶುಕ್ರವಾರ ಸಂಜೆ 5—6 ಘಂಟೆವರೆಗೆ 99...........67 ನಂಬರಿನ ಫೋನ್ ಚಾಲ್ತಿಯಲ್ಲಿರುತ್ತದೆ ಅದಕ್ಕೆ ಫೋನ್ ಮಾಡಿ ನಿನ್ನ ನಿರ್ಧಾರವನ್ನು ತಿಳಿಸು. 

ಏನಪ್ಪ ಇವರ ಬೇಡಿಕೆ ಎಂದರೆ ನಮ್ಮದು ಒಂದೇ ಒಂದು ಬೇಡಿಕೆ ನೀನು ದತ್ತು ಸ್ವೀಕರಿಸಿರುವ ಸೂರ್ಯವಂಶಿ ಸಂಸ್ಥಾನದ ವಾರಸುದಾರಳನ್ನು ನಮಗೆ ಒಪ್ಪಿಸಿ ಬಿಡು. ನೀನ್ಯಾವ ನಿರ್ಧಾರ ತೆಗೆದುಕೊಂಡರೂ ಒಮ್ಮೆ ನಿನ್ನ ಕುಟುಂಬದ ಬಗ್ಗೆ ಕೂಡ ಯೋಚಿಸು ನಿರ್ಧಾರ ನಮ್ಮ ಪರವಾಗಿದ್ದರೆ ಒಳಿತು. ಹಾಗಾಗದಿದ್ದಲ್ಲಿ ಶನಿವಾರದಿಂದಲೇ ಕಟ್ಟಿಗೆಗಳನ್ನು ಹೊಂದಿಸುವುದಕ್ಕೆ ಪ್ರಾರಂಭಿಸು ಪ್ರತೀ ದಿನವೂ ನಿನ್ನ ಕುಟುಂಬದಲ್ಲೊಬ್ಬರ ಹೆಣ ಬೀಳುವುದಂತೂ ಖಚಿತ. ನಮ್ಮ ಬೇಡಿಕೆಯಾದ ಮಗುವನ್ನು ನಮಗೆ ಒಪ್ಪಿಸುವುದನ್ನು ಬಿಟ್ಟರೆ ನಿನಗೆ ಬೇರಾವುದೇ ದಾರಿಯಿಲ್ಲ. ನಿನ್ನ ಕುಟುಂಬದವರನ್ನು ಕಾಪಾಡಿಕೊಳ್ಳುವುದು ನಿನ್ನ ನಿರ್ಧಾರದ ಮೇಲೆ ಅವಲಂಬಿತವಾಗಿದೆ

ಇಂತಿ ನಿನ್ನ ಹಿತೈಷಿ
????????

ಪತ್ರವನ್ನೋದಿ ಚಿಂತಾಕ್ರಾಂತರಾಗಿದ್ದ ಸುಭಾಷ್ ಮತ್ತು ಹರೀಶರು ಯೋಚಿಸುತ್ತಾ ಕುಳಿತುಬಿಟ್ಟರು. ಎರಡು ನಿಮಿಷದ ಬಳಿಕ ಹರೀಶ ಅಶೋಕನಿಗೆ ಫೋನ್ ಮಾಡಿದ.....

ಅಶೋಕ.......ಹರೀಶ ಚಿನ್ನಿಗೇನಾಯ್ತು ? ಈಗ ಆರೋಗ್ಯವಾಗಿಯೇ ಇದ್ದಾಳಾ ?

ಹರೀಶ.......ಅಶೋಕ ನಾನು ಹೇಳುವುದನ್ನಷ್ಟೇ ಕೇಳಿಸಿಕೋ ಈಗ ನೀವ್ಯಾರೂ ಮನೆಗೆ ಬರುವುದಕ್ಕೆ ಹೊರಡಬೇಡಿ ಸಮಸ್ಯೆಯೊಂದು ಏದುರಾಗಿದೆ. ಚಿನ್ನಿಗೇನೂ ಆಗಿಲ್ಲ ಆರೋಗ್ಯವಾಗಿ ಮಲಗಿದ್ದಾಳೆ.

ಅಶೋಕ ಗಾಬರಿಗೊಳ್ಳುತ್ತ.....ಏನಾಯ್ತು ಹರೀಶ ? ಏನು ಸಮಸ್ಯೆ ನಾನೀಗಲೇ ಮನೆಗೆ ಬರ್ತೀನಿ.

ಹರೀಶ......ಅದನ್ನೇ ಬೇಡ ಅಂದಿದ್ದು ನೀವ್ಯಾರೂ ಈಗ ಮನೆಯ ಕಡೆ ಹೊರಬೇಡಿ ತಾಳು ನೀತು ಮಾತಾಡ್ತಾಳಂತೆ.

ನೀತು......ಅಲ್ಲಿ ಬಂದಿದ್ದ ಅತಿಥಿಗಳೆಲ್ಲರೂ ತೆರಳಿದರಾ ?

ಅಶೋಕ......ಹೂಂ ನಾವೀಗ ಮನೆಯವರಷ್ಟೇ ಇರೋದು ಇಲ್ಲಿನ ವಿಷಯ ಬಿಡು ಹರೀಶ ಏನೋ ಸಮಸ್ಯೆ ಅಂತಿದ್ದ ಏನದು ಹೇಳು.

ಇವರು ಮಾತನಾಡುತ್ತಿದ್ದಾಗ ಮನೆಯವರೆಲ್ಲರೂ ಅಶೋಕನ ಬಳಿ ಬಂದು ನಿಂತು ಕೇಳಿಸಿಕೊಳ್ಳುತ್ತ ಗಾಬರಿಗೊಂಡಿದ್ದರೆ ಆತ ಫೋನಿನ ಸ್ಪೀಕರ್ ಆನ್ ಮಾಡಿದ್ದನು.

ನೀತು.....ಮನೆಗೆ ಬಂದಾಗ ಗೊತ್ತಾಗುತ್ತೆ ನೀವೆಲ್ಲರೂ ಅಲ್ಲೇ ಇರಿ ನಾನೈದು ನಿಮಿಷದಲ್ಲೇ ಫೋನ್ ಮಾಡ್ತೀನೆಂದು...ಫೋನಿಟ್ಟಳು.

ಬಸ್ಯನಿಗೆ ಫೋನ್ ಮಾಡಿ......

ನೀತು.....ಬಸ್ಯ ಫ್ಯಾಕ್ಟರಿ ಹತ್ತಿರ ನಿನ್ನ ಜೊತೆ ಹುಡುಗರೆಷ್ಟಿದ್ದಾರೆ ? ಅಲ್ಲಿನ ಕೆಲಸ ಮುಗಿಯಿತಾ ?

ಬಸ್ಯ.....ಅಕ್ಕ ನಾವಿಲ್ಲಿ ಹದಿನೈದು ಜನರಿದ್ದೀವಿ ಕೊನೆ ಪಂಕ್ತಿ ಊಟ ನಡೆಯುತ್ತಿದೆ.

ನೀತು.....ಅಲ್ಲಿನ ಊಟದ ವಿಷಯ ಗಿರಿ ಮತ್ತವನ ತಂದೆ ಬಸವ ಇಬ್ಬರಿಗೂ ವಹಿಸಿ ಫ್ಯಾಕ್ಟರಿ ಕೆಲಸಗಾರರಿಗೆ ನೀನು ಬರುವ ತನಕ ಅಲ್ಲೇ ಇರುವುದಕ್ಕೇಳು. ಈಗಲೇ ನಿನ್ನ ಹುಡುಗರ ಜೊತೆ ಫುಡ್ ಯೂನಿಟ್ಟಿಗೆ ಹೋಗಿ ಮನೆಯವರನ್ನೆಲ್ಲಾ ಸೇಫಾಗಿ ತಲುಪಿಸುವುದು ನಿನ್ನ ಜವಾಬ್ದಾರಿ ಬೇಗ ಹೊರಡು.

ಮನೆಯ ಹೊರಗಿದ್ದ ನಾಲ್ವರು ರಕ್ಷಕರನ್ನು ಕರೆದ ಹರೀಶ ಅವರನ್ನು ಸುಭಾಷ್ ಜೊತೆ ಕಳುಹಿಸಿ ಫ್ಯಾಮಿಲಿಯರನ್ನು ಸೇಫಾಗಿ ಮನೆಗೆ ಕರೆತರಲು ಹೇಳಿದನು. ಉಳಿದ ಆರು ರಕ್ಷಕರಿಗೆ ಮನೆಯ ಸುತ್ತಲೂ ಜಾಗರೂಕರಾಗಿ ಕಾವಲಿಗಿರುವಂತೆ ಸೂಚಿಸಿ ಮಗಳನ್ನು ಮಡಿಲಲ್ಲಿ ಮಲಗಿಸಿಕೊಂಡು ತಟ್ಟುತ್ತಿದ್ದ ಮಡದಿಯ ಪಕ್ಕ ಬಂದು ಕುಳಿತನು.

ನೀತು......ಪಾಪ ಕಣ್ರಿ ನನ್ನ ಕಂದನನ್ನು ನೆಮ್ಮದಿಯಾಗಿರುವುದಕ್ಕೂ ಈ ಧನ ಪಿಶಾಚಿಗಳು ಬಿಡುತ್ತಿಲ್ಲವಲ್ಲ. ಇವಳು ನನ್ನ ಹೊಟ್ಟೆಯಲ್ಲೇ ಹುಟ್ಟಿದ್ದರೆ ಯಾವುದೇ ತೊಂದರೆಯೂ ಇರುತ್ತಿರಲಿಲ್ಲ.

ಹರೀಶ......ಇವಳು ನಮ್ಮ ಕರುಳಿನ ಕುಡಿ ಕಣೆಅದನ್ಯಾರೂ ಸಹ ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಈ ಪತ್ರ ಬರೆದವನ್ಯಾರೆಂದು ತಿಳಿದರೆ ಸಾಕು ಪಾತಾಳದಲ್ಲಿದ್ದರೂ ಬಿಡುವುದಿಲ್ಲ.

ನೀತು ಆಘಾತದಿಂದ ಸಾಕಷ್ಟು ಚೇತರಿಸಿಕೊಂಡಿದ್ದು.....ರೀ ಹೊರಗೆ ಕಾವಲಿರುವ ಬಸ್ಯನ ಹುಡುಗರಲ್ಲಿ ಸೀನ ಮತ್ತು ಗೋಪಿ ಇಬ್ಬರನ್ನೂ ಕರೆಯಿರಿ ( ಇಬ್ಬರೂ ಬಂದಾಗ ) ಗೋಪಿ ನೀನು ಕಾಲೋನಿ ಗೇಟಿನ ಹತ್ತಿರ ಹೋಗಿ ಹೊರಗೆ ಯಾವುದಾದರೂ ಕಾರು ನಿಂತಿದೆಯಾ ಅಲ್ಲಿ ಇದ್ದರೆ ಅದರಲ್ಲೆಷ್ಟು ಜನರಿದ್ದಾರೆಂದು ತಿಳಿದುಕೊಂಡು ಬಾ ಹೋಗು.
ಸೀನ ನೀವಿಲ್ಲಿದ್ದಾಗ ಮನೆ ಹತ್ತಿರ ಯಾರಾದ್ರೂ ಅನುಮಾನವಾಗಿ ಅಡ್ಡಾಡಿದ್ದನ್ನು ನೋಡಿದ್ಯಾ ?

ಸೀನ....ಅಕ್ಕ ಮನೆಯ ಹತ್ತಿರ ಯಾರೂ ಅನುಮಾನಾಸ್ಪದವಾಗಿ ಬಂದಿಲ್ಲ. ಆದರೆ ಇಬ್ಬರು ಮಧ್ಯಾಹ್ನ ಏದುರುಗಡೆ ರಸ್ತೆಯಲ್ಯಾವ್ದೋ ಮನೆ ಹುಡುಕುತ್ತಿರುವಂತೆ ಓಡಾಡುತ್ತಿದ್ದರು. ನಾವು ಯಾರು ಬೇಕು ಅಂತ ಕೂಗಿದರೂ ಪ್ರತಿಕ್ರಿಯಿಸದೆ ಹೊರಟು ಹೋದರು. ಯಾಕಕ್ಕ ಏನಾದ್ರೂ ಸಮಸ್ಯೆಯಾ ?

ಹರೀಶ.....ಹೌದು ಕಣೋ ಸಮಸ್ಯೆಯೇನೋ ಇದೆ ಆದರೆ ಅದು ನಿಮ್ಮಿಂದ ಬಗೆಹರಿಸಲು ಸಾಧ್ಯವಿಲ್ಲ.

ಸೀನ.....ಸರ್ ಪ್ರಾಣ ನೀಡುವುದಕ್ಕೂ ಹಿಂಜರಿಸುವುದಿಲ್ಲ ಏನೇ ಕೆಲಸವಾಗಬೇಕಿದ್ದರೂ ಆಜ್ಞೆ ಮಾಡಿ ಸಾಕು ನಾವೆಲ್ಲದಕ್ಕೂ ಸಿದ್ದ.

ಅಷ್ಟರಲ್ಲೇ ಕಾಲೋನಿ ಗೇಟಿನ ಹತ್ತಿರ ಹೋಗಿದ್ದ ಗೋಪಿ ಮರಳಿ...

ಗೋಪಿ......ಅಕ್ಕ ಗೇಟಿನ ಎಡಭಾಗದ ರಸ್ತೆಯಲ್ಲೊಂದು ಇನೋವ ನಿಂತಿದೆ ಅದರಲ್ಲಿ ಆರು ಜನರಿದ್ದಾರೆಂದು ವಾಚ್ಮನ್ ಹೇಳಿದ. ಗಾಡಿ ನಂ.. KA xx xxxx

ನೀತು....ಸರಿ ಗೋಪಿ ನೀನು ಕಾಲೋನಿ ಗೇಟಿನ ಹತ್ತಿರವೇ ಇದ್ದು ಅವರ ಚಲನವಲನ ಗಮನಿಸುತ್ತಿರು ಏನೇ ಅನುಮಾನಾಸ್ಪದದಿ ಕಂಡರೂ ತಕ್ಷಣ ಸೀನನಿಗೆ ಫೋನ್ ಮಾಡು. ಸೀನ ನೀನದನ್ನು ಬಂದು ನಮಗೆ ತಿಳಿಸಬೇಕು.

ಇಬ್ಬರು ಆಯ್ತಕ್ಕ ಎಂದೇಳಿ ತಮ್ಮ ಜಾಗಗಳಿಗೆ ತೆರಳಿದಾಗ ಗಿರೀಶ ಮತ್ತು ಸುರೇಶ ಮನೆಯೊಳಗೆ ಬಂದು ಟೀಪಾಯಿಯ ಮೇಲಿಟ್ಟಿದ್ದ ಪತ್ರವನ್ನು ತೆಗೆದುಕೊಂಡ ಗಿರೀಶ ಓದತೊಡಗಿದನು.

ಹರೀಶ.....ನೀವ್ಯಾಕೆ ಮನೆಗೆ ಬಂದ್ರಿ ? ನಿಮ್ಮನ್ನೆಲ್ಲಾ ಅಲ್ಲೇ ಇರಲು ಹೇಳಿದ್ದೆನಲ್ಲಾ.

ಸುರೇಶ.....ನಮಗೇನೂ ಗೊತ್ತಿಲ್ಲವಲ್ಲ ನಾನು ಅಣ್ಣ ಕೆಮಿಕಲ್ಸ್ ಫ್ಯಾಕ್ಟರಿ ಹತ್ತಿರ ಹೋಗಿದ್ವಿ ಅಲ್ಲಿಂದ ನೇರವಾಗಿ ಮನೆಗೆ ಬಂದಿದ್ದು ಫುಡ್ ಯೂನಿಟ್ಟಿನ ಕಡೆ ನಾವು ಹೋಗೇ ಇಲ್ಲ.

ಗಿರೀಶ......ಅಮ್ಮ ಇದ್ಯಾರಮ್ಮ ಚಿನ್ನೀನ ನಮಗೊಪ್ಪಿಸು ಎಂದು ನಿಮ್ಮನ್ನು ಹೆದರಿಸಿ ಪತ್ರ ಬರೆದಿರುವುದು.

ನೀತು.....ಇದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡ್ರೋ ನಾನು ನಿಮ್ಮಪ್ಪ ನೋಡಿಕೊಳ್ತೀವಿ.

ಹರೀಶನ ಫೋನ್ ರಿಂಗಾಗಿ ಅತ್ತಲಿಂದ.......

ಅಶೋಕ...ಹರೀಶ ಮನೆಯಲ್ಲಿನ ಸಮಸ್ಯೆ ಬಗ್ಗೆ ತಿಳಿದು ನಾವೆಷ್ಟೇ ಬೇಡವೆಂದರೂ ನಿಧಿ ಮತ್ತು ಜಾನಿ ಮನೆಗೆ ಬರ್ತಿದ್ದಾರೆ.

ಹರೀಶ.......ಬರಲಿ ಬಿಡು ಸುಭಾಷ್ ಅಲ್ಲಿಗೆ ಹೊರಟಿದ್ದಾನೆ ನೀವು ಅವನ ಜೊತೆಯಲ್ಲೇ ಬಂದುಬಿಡಿ.
* *
* *
ಫುಡ್ ಯೂನಿಟ್ಟಿನಲ್ಲಿ.......

ಅಶೋಕನಿಗೆ ಫೋನ್ ಮಾಡಿ ಹರೀಶ ಮನೆಯಲ್ಲೊಂದು ಸಮಸ್ಯೆ ಏದುರಾಗಿದೆ ಎಂದು ಹೇಳಿದಾಗಿನಿಂದಲೂ ಅಲ್ಲೆಲ್ಲರೂ ಟೆನ್ಷನ್ನಿನಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು. ಅವರ ಭಯವನ್ನು ಹೆಚ್ಚಿಸುವಂತೆ ನಿಧಿ ಮತ್ತು ಜಾನಿ ಯಾರೇ ತಡೆದರೂ ಕೇಳದೆ ಮನೆಯತ್ತ ಹೊರಟರು.

ಆರೀಫ್.....ಅಶೋಕ ಸರ್ ಸಮಸ್ಯೆ ಮನೆಯಲ್ಲಿ ಏದುರಾಗಿದೆ ಇಲ್ಲಿ ನಾವ್ಯಾಕೆ ಸುಮ್ಮನೆ ಕುಳಿತಿದ್ದೀವಿ ಬನ್ನಿ ಮನೆಗೆ ಹೋಗೋಣ.

ಸುಮ.....ಹೌದು ನಾವೆಲ್ಲ ಇಲ್ಲಿ ಕೈಕಟ್ಟಿ ಕುಳಿತಿದ್ದರೆ ಸಮಸ್ಯೆ ಹೇಗೆ ಬಗೆಹರಿಯುತ್ತೆ ನಡೀರಿ ಮನೆಗೆ ಹೋಗೋಣ.

ರಜನಿ.....ಬೇಡ ಸುಮ ನೀತು ಇಲ್ಲೇ ಇರುವುದಕ್ಕೆ ಹೇಳಿದ್ದಾಳೆಂದರೆ ಸಮಸ್ಯೆ ಖಂಡಿತ ದೊಡ್ಡದಾಗಿರುತ್ತೆ ಬಹುಶಃ ಯಾರದ್ದೋ ಜೀವದ ಪ್ರಶ್ನೆಯಾಗಿದ್ದರೂ ಇರಬಹುದು. ಸುಭಾಷ್ ಬರಲಿ ಹೋಗೋಣ.

ಅಷ್ಟರಲ್ಲೇ ಬಸ್ಯ ಮತ್ತವತ 15 ಜನ ಹುಡುಗರು ಬಂದಿದ್ದು.....

ಬಸ್ಯ.....ರವಿ ಸರ್ ಬನ್ನಿ ನಿಮ್ಮೆಲ್ಲರನ್ನು ಸೇಫಾಗಿ ಮನೆಗೆ ತಲುಪಿಸು ಅಂತ ಅಕ್ಕ ಫೋನ್ ಮಾಡಿದ್ರು ಹೋಗೋಣ ನಡೀರಿ.

ರವಿ......ನೀತು ನಿನಗೂ ಫೋನ್ ಮಾಡಿದ್ದಳಾ ?

ಆಗಲೇ ಸುಭಾಷ್ ಕೂಡ ನಾಲ್ವರು ರಕ್ಷಕರೊಂದಿಗೆ ಬಂದಿದ್ದು.....

ರೇವಂತ್......ಸುಭಾಷ್ ಮನೆಯಲ್ಲೇನು ಸಮಸ್ಯೆ ಏದುರಾಗಿದೆ ? ನನ್ನ ತಂಗಿ ಭಾವ ಹೇಗಿದ್ದಾರೆ ? ಅವರಿಗೇನಾದರೂ.....

ಸುಭಾಷ್......ಅಂಕಲ್ ಯಾರಿಗೇನೂ ಆಗಿಲ್ಲ ಸಮಸ್ಯೆ ತುಂಬಾನೇ ಜಟಿಲವಾದದ್ದು ಮನೆಗೋಗಿ ಮಾತಾಡೋಣ ಬನ್ನಿ. ಬಸ್ಯ ಯಾರು

ಬಸ್ಯ ಮುಂದೆ ಬರುತ್ತ.......ಸರ್ ನಾನು.

ಸುಭಾಷ್......ನಿನ್ನ ಜೊತೆಗೆಷ್ಟು ಹುಡುಗರಿದ್ದಾರೆ ? ಗಾಡಿಗಳೆಷ್ಟಿದೆ ?

ಬಸ್ಯ......ಸರ್ ನಾವು ಮೂರು ಗಾಡಿಗಳಲ್ಲಿ 16 ಜನರಿದ್ದೀವಿ.

ಸುಭಾಷ್.....ಸರಿ ನಿನ್ನೆರಡು ಗಾಡಿಗಳು ಹಿಂದೆ ಬರಲಿ ಒಂದು ನನ್ನ ಹಿಂದಿರಲಿ ನಾನೆಲ್ಲರಿಗಿಂತ ಮುಂದಿರುತ್ತೀನಿ ಬನ್ನಿ ಎಲ್ಲ ಹೋಗೋಣ.

ವಿಕ್ರಂ.....ಸುಭಾಷ್ ಏನಾಗ್ತಿದೆ ? ನಾವಿಲ್ಲಾಗೆ ಬರುವಾಗ ಯಾವುದೇ ರೀತಿಯ ಸೆಕ್ಯೂರಿಟಿ ಬೇಕಾಗಿರಲಿಲ್ಲ ಸಂಜೆಯಾಗುವಷ್ಟರಲ್ಲೇನಾಗಿ ಹೋಯಿತು ? ಹೇಳು.

ಸುಭಾಷ್....ಸರ್ ಮನೆಗೆ ಹೋಗೋಣ ಅಲ್ಲೇ ಗೊತ್ತಾಗುತ್ತೆ.
* *
* *
ಮನೆಯಲ್ಲಿ.......

ಅಮ್ಮನ ಮಡಿಲಲ್ಲಿ ಮಲಗಿದ್ದ ನಿಶಾ ನಿದ್ರೆ ಮಂಪರಿನಲ್ಲೇ.....ನನ್ನಿ ಎಲ್ಲೂ ಎತ್ತಿ ಹೋಬೆಲ....ನಾನಿ ಬಲಲ್ಲ...ನಂಗಿ ಮಮ್ಮ ಬೇಕು... ನಾನಿ ಎಲ್ಲಿ ಬಲಲ್ಲ..... ಮಮ್ಮ.... ಮಮ್ಮ...... ಎಂದು ಕನವರಿಸುತ್ತ ಮಲಗಿದ್ದಳು. ಮುದ್ದಿನ ಮಗಳು ನಿದ್ರೆಯಲ್ಲಿ ಕನವರಿಸುತ್ತಿದ್ದ ಮಾತು ಕೇಳಿ ನೀತುವಿನ ಹೃದಯ ಹಿಂಡಿದಂತಾಗಿ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿದ್ದರೆ ಅವಳ ಜೊತೆ ಗಿರೀಶ—ಸುರೇಶ ಮತ್ತು ಹರೀಶನ ಕಣ್ಣಿನಿಂದಲೂ ಕಂಬನಿ ಸುರಿಯುತ್ತಿತ್ತು. ಅದೇ ಸಮಯಕ್ಕೆ ಮನೆಯ ಒಳಬಂದ ನಿಧಿ ಮತ್ತು ಜಾನಿ ಎಲ್ಲರೂ ಅಳುತ್ತಿರುವುದನ್ನು ಕಂಡು...

ನಿಧಿ ಅಪ್ಪನ ಮುಂದೆ ಕುಳಿತು.......ಅಪ್ಪ ಏನಾಯ್ತಪ್ಪ ? ನಿಮ್ಮೆಲ್ಲರ ಕಣ್ಣಲ್ಲಿ ಕಣ್ಣೀರು ಯಾಕಪ್ಪ ?

ಗಿರೀಶ.....ಅಕ್ಕ ಈ ಲೆಟರ್ ಓದಿ ಅಮ್ಮನಿಗ್ಯಾರೋ ಬೆದರಿಕೆ ಪತ್ರ ಬರೆದಿದ್ದಾರೆ......ಎಂದು ಚಿನ್ನಿ ಕನವರಿಸುತ್ತಿದ್ದುದ್ದನ್ನೂ ಹೇಳಿದನು.

ನಿಧಿ ಪತ್ರ ಓದುತ್ತಿದ್ದಂತೆಯೇ ಅವಳ ಕಣ್ಣುಗಳು ರೋಷಾಗ್ನಿಯಲ್ಲಿ ಪ್ರಜ್ವಲಿಸಿ ಕೋಪದಿಂದ ತುಟಿಗಳು ಅದುರುತ್ತಿದ್ದವು.....ಅಪ್ಪ ನೀವು ಚಿಂತೆ ಮಾಡಬೇಡಿ. ವಿರೋಧಿಗಳು ಮನೆವರೆಗೂ ಬಂದು ಯುದ್ದ ಸಾರಿರುವಾಗ ಅದನ್ನೇ ಹಿಂದಿರುಗಿಸೋಣ.

ಅಷ್ಟನ್ನೇಳಿದ ನಿಧಿ ಫೋನ್ ತೆಗೆದು ಒಂದು ನಂ.. ಡಯಲ್ ಮಾಡಿ ಅತ್ತಲಿಂದ ಯಾರೋ ಮಾತನಾಡಿದಾಗ......ನಾನು ರಾಜಕುಮಾರಿ ನಿಧಿ ಸೂರ್ಯವಂಶಿ ತಕ್ಷಣವೇ ರಾಣಾ ಹತ್ತಿರ ಫೋನ್ ಕೊಡು.... ಎಂದು ಹೇಳುವಾಗ ಅವಳ ಧ್ವನಿ ಆಜ್ಞಾಪಿಸುವಂತಿದ್ದು ಹರೀಶನ ಜೊತೆ ನೀತು ಹಾಗು ತಮ್ಮಂದಿರು ಅವಳನ್ನೇ ನೋಡುತ್ತಿದ್ದರು.

ಒಂದು ನಿಮಿಷದ ನಂತರ ಅತ್ತಲಿಂದ ಯಾರೋ ಮಾತನಾಡಿದಾಗ ನಿಧಿ.......ಅಜ್ಞಾತವಾಸ ಮುಗಿಯಿತು ರಾಣಾ ಯುದ್ದಕ್ಕೆ ಸಿದ್ದರಾಗಿ ತಕ್ಷಣವೇ ಅರಮನೆ ತಲುಪಿ ಅಲ್ಲಿಂದ ನಾನಿರುವಲ್ಲಿಗೆ ನಿಮ್ಮನ್ನೆಲ್ಲಾ ವಿಕ್ರಂ ಸಿಂಗ್ ಕರೆ ತರುತ್ತಾರೆ. ಕಿರಿಯ ರಾಜಕುಮಾರಿಗೆ ಆಪಾಯ ಏದುರಾಗಿದೆ ಈ ಕ್ಷಣವೇ ಹೊರಡು.....ಎಂದೇಳಿ ಫೋನಿಟ್ಟಳು.

ನೀತು.......ಯಾರಮ್ಮ ಈ ರಾಣಾ ? ಏನಿದು ನೀನೇನೋ ಯುದ್ದ ಅಂತೆಲ್ಲಾ ಮಾತಾಡ್ತಿದ್ದೀಯಲ್ಲ ?

ನಿಧಿ ಉತ್ತರಿಸುವುದಕ್ಕೂ ಮುಂಚೆ ಮನೆಯವರೆಲ್ಲರೂ ಹಿಂದಿರುಗಿ ಬಂದಿದ್ದು ನೀತು ಮತ್ತು ಹರೀಶನಿಗೆ ವಿಷಯವೇನೆಂದು ಕೇಳಿದರೆ ಅಮ್ಮನ ಮಡಿಲಲ್ಲಿ ಮಲಗಿದ್ದ ನಿಶಾ ಅವರ ಶಬ್ದದಿಂದ ಮೇಲೆದ್ದು ನಿದ್ದೆ ಮಂಪರಿನಲ್ಲಿ ಎಲ್ಲರನ್ನು ನೋಡುತ್ತಿದ್ದಳು. ಹರೀಶ ಉತ್ತರಿಸುವ ಮೊದಲೇ ಗಿರೀಶ ಎಲ್ಲರೆದುರಿಗೆ ಬೆದರಿಕೆ ಪತ್ರವನ್ನು ಜೋರಾಗಿ ಓದಿ ಹೇಳಿದಾಗ ಮನೆಯವರೆಲ್ಲರೂ ಸ್ಟನ್ನಾಗಿ ಹೋದರು.

ನಿಶಾ ಅಮ್ಮನತ್ತ ತಿರುಗಿ ಅವಳ ಕೆನ್ನೆ ಸವರುತ್ತ.......ಮಮ್ಮ ನನ್ನಿ ಎತ್ತಿ ಹೋತಾಲೆ......ನಾನಿ ಹೋಲಲ್ಲ ಮಮ್ಮ......ಎಂದಾಗ ನೀತು ಮಗಳನ್ನು ಗಟ್ಟಿಯಾಗಿ ತಬ್ಬಿಕೊಂಡು.....ಇಲ್ಲ ಕಂದ ನಿನ್ನನ್ಯಾರೂ ಎತ್ತಿಕೊಂಡು ಹೋಗಲು ಅಮ್ಮ ಬಿಡಲ್ಲ ಕಂದ.

ವಿಕ್ರಂ ತಂಗಿ ಹತ್ತಿರ ಬಂದು ಅವಳ ತಲೆ ನೇವರಿಸಿ ನಿಶಾಳ ಹಣೆಗೆ ಮುತ್ತಿಟ್ಟು......ಇಲ್ಲ ಕಂದ ನೀನು ಮಮ್ಮನ ಜೊತೆಯಲ್ಲೇ ಇರ್ತೀಯ ಯಾರೂ ನಿನ್ನ ಎತ್ತಿಕೊಂಡು ಹೋಗಲ್ಲ ಕಣಮ್ಮ. ಪ್ರತಿಯೊಬ್ಬರೂ ನಿಶಾಳಿಗೆ ಸಮಾಧಾನ ಮಾಡುತ್ತ ನೀತುವಿಗೆ ಧೈರ್ಯ ಹೇಳುತ್ತಿದ್ದರೆ ಪ್ರತಾಪ್...ಸುಭಾಷ್...ಅಶೋಕ...ಜಾನಿ...ಆರೀಫ್...ರೋಹನ್ ಕೋಪದಿಂದ ಕುದಿಯುತ್ತಿದ್ದರು.

ಸುಭಾಷ್......ರವಿ ಅಂಕಲ್ ಫುಡ್ ಯೂನಿಟ್ಟಿನ ಹತ್ತಿರ ನೀವು ಸಿಸಿ ಕ್ಯಾಮೆರಾ ಹಾಕಿಸಿಲ್ಲವಾ ?

ರವಿ.....ಗೇಟ್...ಏಂಟ್ರೆನ್ಸ್ ಮತ್ತು ಒಳಗೆ ನಾಲ್ಕು ಕ್ಯಾಮೆರಾಗಳನ್ನು ಹಾಕಿಸಿದ್ದೀವಿ. ಯಾಕೆ ?

ನಿಧಿ....ಅಣ್ಣ ಮೊನ್ನೆ ನಾನು...ಸುರೇಶ ಮತ್ತು ನಯನ ಹೋಗಿ ಎಲ್ಲ ಕಡೆಯೂ 6—7 ಕ್ಯಾಮೆರಾ ಪಿಕ್ಸ್ ಮಾಡಿದ್ವಿ ಆದರೆ ಯಾರ ಹತ್ರವೂ ಹೇಳಿರಲಿಲ್ಲ. ಯಾಕೆ ಅಣ್ಣ ?

ಸುಭಾಷ್......ಈ ಲೆಟರ್ ನಾವು ಫುಡ್ ಯೂನಿಟ್ಟಿನಿಂದ ಮನೆಗೆ ಹೊರಟಾಗ ಕಾರಿನ ಡೋರಿಗೆ ಅಂಟಿಸಲಾಗಿತ್ತು ಅದಕ್ಕೆ ಆ ಜಾಗದ ದೃಶ್ಯ ಸೆರೆ ಹಾಡಿಯುವಂತ ಸಿಸಿ ಕ್ಯಾಮೆರ ಇದ್ದರೆ ಇದನ್ನಲ್ಲಿ ಯಾರು ಅಂಟಿಸಿದ್ದೆಂದು ತಿಳಿಯುತ್ತಲ್ಲ.

ನಿಧಿ.....ನಯನ ನನ್ನ ಲ್ಯಾಪ್ಟಾಪ್ ಮೇಲಿದೆ ತೆಗೆದುಕೊಂಡು ನೀನು ಸುರೇಶ ಅಲ್ಲಿನ ಪೂರ್ತಿ ಫುಟೇಜಸ್ ಚೆಕ್ ಮಾಡಿ ಒಳಗಿನದ್ದೇನು ಬೇಡ ಹೊರಗಿನದ್ದು ಮಾತ್ರ ಮುಖ್ಯವಾಗಿ ಪಾರ್ಕಿಂಗ್ ಹತ್ತಿರದ್ದು.

ಇಬ್ಬರೂ ಎದ್ದು ಮೇಲೆ ಹೋದಾಗ ಒಳಗೆ ಬಂದ ಸೀನ.......ಅಕ್ಕ ಇನೋವಾ ಇನ್ನೂ ಅಲ್ಲೇ ಇದೆಯಂತೆ. ಆದರೆ ಈಗಷ್ಟೇ ಅಲ್ಲಿಗೆ ಇನ್ನೊಂದು ಕಾರು ಬಂದು ಇನಾವಾದವರ ಜೊತೆ ಸ್ವಲ್ಪ ಹೊತ್ತು ಮಾತಾಡಿ ಹೋದರಂತೆ ಆದರೆ ಎರಡೂ ಕಾರಿಂದಲೂ ಯಾರು ಸಹ ಕೆಳಗಿಳಿಯಲಿಲ್ಲ ಅಂತ ಗೋಪಿ ಫೋನ್ ಮಾಡಿದ್ದ. ಆ ಕಾರಿನ ನಂ... ಕೂಡ ನೋಟ್ ಮಾಡಿಕೊಂಡಿದ್ದಾನೆ KA xx xxxx .

ನಿಧಿ......ಅಪ್ಪ ಯಾವ ಕಾರಿನ ಬಗ್ಗೆ ಇವನು ಹೇಳ್ತಿರೋದು ?

ಹರೀಶ....ಖಚಿತವಾಗಿ ಹೇಳಲಾಗುವುದಿಲ್ಲ ಆದರೆ ನಮ್ಮ ಮನೆಯ ಸದಸ್ಯರ ಚಲನವಲನಗಳನ್ನು ಗಮನಿಸಲು ಕಾಲೋನಿಯ ಹೊರಗೆ ಕೆಲವರಿದ್ದಾರೆ ಅಂತ ನಮಗೆ ಅನುಮಾನ ಗ್ಯಾರೆಂಟಿಯಿಲ್ಲ.

ಸುಭಾಷ್.....ಗಿರೀಶ ಮನೇಲಿ ದುರ್ಬೀನು ಇದೆಯಾ ?

ಗಿರೀಶ.....ಅಕ್ಕನ ಹತ್ತಿರ ಇದೆ ಈಗಲೇ ತರ್ತೀನಿ ಅಣ್ಣ.

ನಿಧಿ ದುರ್ಬೀನು ಪಡೆದು.....ನಡೀರಿ ಅಣ್ಣ ಹೋಗೋಣ.

ಸುಭಾಷ್.....ನೀನಿಲ್ಲೇ ಇರು ಪುಟ್ಟಿ ನಾನು ನೋಡ್ಕೊಂಡ್ ಬರ್ತೀನಿ

ನೀತು........ಇವಳನ್ನೂ ಕರ್ಕೊಂಡೋಗು ಸುಭಾಷ್ ನಿನಗಿಂತಲೂ ವೆಲ್ ಟ್ರೈನ್ಡ್ ಆಗಿದ್ದಾಳೆ. ಅಶೋಕ ನೀವೂ.....

ಅಶೋಕ......ನಾನು ಜಾನಿ....ರೇವಂತ್ ಇವರ ಜೊತೆ ಹೋಗ್ತೀವಿ... ಎಂದು ಹೊರಟಾಗ ಅವರೊಂದಿಗೆ ರೋಹನ್ ಕೂಡ ಹೋದನು.

ಸುಭಾಷ್.....ಬಸ್ಯ ನೀನು ನಿನ್ನ ಹುಡುಗರ ಮೂರು ವ್ಯಾನುಗಳನ್ನು ತೆಗೆದುಕೊಂಡು ಕಾಲೋನಿ ಹೊರಗಿನ ರಸ್ತೆಯ ಎರಡೂ ಕಡೆಯೂ ಹೋಗಿ ಸ್ವಲ್ಪ ದೂರದಲ್ಲಿ ನಿಂತಿರಿ ಮುಂದೇನು ಅಂತ ನಾನೇ ನಿನಗೆ ಫೋನ್ ಮಾಡ್ತೀನಿ ಗೊತ್ತಾಯ್ತಾ.

ಬಸ್ಯ.....ಹೂಂ ಸರ್ ಅರ್ಥವಾಯ್ತು ರಸ್ತೆ ಬ್ಲಾಕ್ ಮಾಡಬೇಕು ಆ ಇನೋವಾ ತಪ್ಪಿಸಿಕೊಳ್ಳದಂತೆ.

1 comment:

  1. ಅಬ್ಬಾ, ಏನು ಕುತೂಹಲಕಾರಿ ಕತೆಯಾಗಿದೆ

    ReplyDelete