ಮಾರನೇ ದಿನ ತಿಂಡಿಯಾದ ನಂತರ.......
ಹರೀಶ......ಗಿರೀಶ ನಿನ್ನ ಜೊತೆ ದೃಷ್ಟಿ—ರಶ್ಮಿ ಇಬ್ಬರನ್ನು ಕಾಲೇಜಿಗೆ ಕರೆದುಕೊಂಡು ಹೋಗಿ ಬಾ ಅವರೂ ಅಲ್ಲಿನ ವಾತಾವರಣವನ್ನು ನೋಡಲಿ.
ಗಿರೀಶ......ಸರಿ ಅಪ್ಪ ಆದರೆ ಇಬ್ಬರನ್ನು ಹೇಗೆ ಕರೆದೊಯ್ಯಲಿ.
ರಶ್ಮಿ.....ನಾವಿಬ್ಬರು ಇನ್ನೊಂದು ಗಾಡಿಯಲ್ಲಿ ಬರ್ತೀವಲ್ಲ.
ಗಿರೀಶ.....ನಿನಗಿನ್ನೂ ಸರಿಯಾಗಿ ಗಾಡಿ ಓಡಿಸೋಕೆ ಬರಲ್ಲ ಅದಕ್ಕೆ ಕಾಲೇಜು ಶುರುವಾಗೋದಕ್ಕಿಂತ ಮುಂಚೆ ಕಾಲೋನಿಯೊಳಗಡೆ ನೀವಿಬ್ಬರು ಚೆನ್ನಾಗಿ ಪ್ರಾಕ್ಟೀಸ್ ಮಾಡಿ. ನಿಮ್ಮಿಬ್ಬರಿಗಿಂತ ಮುಂಚೆ ನಮಿತ ಗಾಡಿ ಓಡಿಸೋದಕ್ಕೆ ಕಲಿತಿದ್ದಾಳೆ ಅದುವೇ ನೀವಿಬ್ಬರೂ ಕಲಿಯಲು ಶುರು ಮಾಡಿದ ನಂತರ ಅವರು ಶುರು ಮಾಡಿದ್ದು.
ದೃಷ್ಟಿ......ಏನಿಲ್ಲ ನಾವೂ ಚೆನ್ನಾಗಿ ಓಡಿಸ್ತೀವಿ ಅಲ್ವಾ ಅಕ್ಕ.
ನಿಧಿ.....ಈಗ ಬಿಸಿಲೂ ಜಾಸ್ತಿ ಇರಲ್ಲ ಹೇಗೂ ಮನೆಯಲ್ಲಿ ಎರಡು ಆಕ್ಟಿವಾ ಇದೆಯಲ್ಲ ಈ ವಾರ ಪೂರ್ತಿ ಚೆನ್ನಾಗಿ ಪ್ರಾಕ್ಟೀಸ್ ಮಾಡಿ ಈಗ ಕಾಲೇಜಿಗೆ ನಾನೇ ಬರ್ತೀನಿ ಕಾರಲ್ಲೇ ಹೋಗೋಣ.
ಅಪ್ಪನ ಹೆಗಲಿಗೆ ಜೋತಾಕಿಕೊಂಡಿದ್ದ ನಿಶಾ.....ಪಪ್ಪ ನಾನಿ ಬೇಲ ಪಪ್ಪ ನಾನಿ ಹೋತಿನಿ.
ಹರೀಶ......ಬೇಡ ಕಂದ ನಾನು ನೀನು ಬೇರೆ ಕಡೆ ಮಾಮನ ಜೊತೆ ರೌಂಡ್ ಹೋಗಣ ಆಯ್ತಾ.
ಶೀಲಾ....ರೀ ನೀವೀಗೆಲ್ಲಿಗೆ ಹೋಗೋದು ?
ಹರೀಶ........ಸರ್ಪ್ರೈಸ್ ಬಂದಾಗ ನಿನಗೇ ತಿಳಿಯುತ್ತೆ ನಡಿ ಕಂದ ಅನು ಇವಳಿಗೆ ಬೇರೆ ಬಟ್ಟೆ ಹಾಕಿ ಬಿಡಮ್ಮ.
ಅನುಷ.....ಬಾ ಚಿನ್ನಿ ಮರಿ ಒಳ್ಳೆ ಫ್ರಾಕ್ ಹಾಕಿಕೊಂಡು ನೀನು ಪಪ್ಪ ಜೊತೆ ಟಾಟಾ ಹೋಗುವಂತೆ.
ನಿಧಿಯ ಜೊತೆ ಮೂವರು ಕಾಲೇಜ್ ನೋಡಿಕೊಂಡು ಬರುವುದಕ್ಕೆ ತೆರಳಿದರೆ ರೇವಂತ್ ಜೊತೆಯಲ್ಲಿ ಹರೀಶ ಮಗಳನ್ನೆತ್ತಿಕೊಂಡು ಹೊರಟನು. ಮಹಡಿಯಲ್ಲಿದ್ದ ನೀತು ಕೆಳಗೆ ಬಂದು ಮಗಳು ಎಲ್ಲೂ ಕಾಣಿಸದಿದ್ದಾಗ.....
ನೀತು.....ಎಲ್ಲೇ ನನ್ನ ಚೋಟ್ ಮೆಣಸಿನಕಾಯಿಯ ಸದ್ದೇ ಇಲ್ವಲ್ಲ.
ಶೀಲಾ.....ಅವರಪ್ಪನ ಜೊತೆ ಹೋಗಿದ್ದಾಳೆ.
ನೀತು.....ಎಲ್ಲಿಗೆ ?
ಶೀಲಾ......ನನಗೂ ಹೇಳಲಿಲ್ಲ ಕಣಮ್ಮ ಅದೇನೋ ಗೊತ್ತಿಲ್ಲ ಒಳ್ಳೆ ಸರ್ಪ್ರೈಸ್ ಅಂತ ಹೇಳಿ ಹೋಗಿದ್ದಾರೆ.
ನೀತು......ಅನು ಇವರ ಜೊತೆ ಸೆಕ್ಯೂರಿಟಿಗೆ ಹೋಗಿದ್ದಾರಾ ?
ಅನುಷ......ಹೂಂ ಅಕ್ಕ ರೇವಂತ್ ಅಣ್ಣನ ಹಿಂದೆಯೇ ನಾಲ್ಕು ಜನ ಜೀಪಿನಲ್ಲಿ ಹೋಗಿದ್ದಾರೆ.
ಎರಡು ಘಂಟೆ ನಂತರ........
ಗುಡುಗುಡು ಶಬ್ದ ಮಾಡುತ್ತ ಬುಲೆಟ್ ಕ್ಲಾಸಿಕ್ ಗಾಡಿ ಮನೆಯೊಳಗೆ ಪ್ರವೇಶಿಸಿದರೆ ಅಪ್ಪನ ಮುಂದೆ ಕುಳಿತಿದ್ದ ನಿಶಾ ತುಂಬ ಖುಷಿಯಲ್ಲಿ ಕಿರುಚಾಡುತ್ತ ಅಮ್ಮನನ್ನು ಕೂಗುತ್ತಿದ್ದಳು.
ಸುಮ......ಓ ಅಪ್ಪ ಮಗಳು ಹೊಸ ಗಾಡಿ ತೆಗೆದುಕೊಂಡು ಬರಲು ಹೋಗಿದ್ದಾ ?
ನೀತು......ರೀ ಇದೇನ್ರಿ ಇದು ಚಿಕ್ಕ ಮಕ್ಕಳ ಸೈಕಲ್ಲಿಗೆ ಕಟ್ಟುವ ರೀತಿ ಹಿಂದೆ ಮುಂದೆ ಎರಡೆರಡು ಬೆಲೂನ್ ಕಟ್ಟಿ ಕಳಿಸಿದ್ದಾರೆ.
ರೇವಂತ್.......ಶೋರೂಮಲ್ಲಿ ಹಲವು ಕಡೆ ಬೆಲೂನ್ ಕಟ್ಟಿದ್ದರು ನಿನ್ನ ಚಿಲ್ಟಾರಿ ಬಿಡಬೇಕಲ್ಲ ಅದರಲ್ಲಿ ನಾಲ್ಕನ್ನು ಗಾಡಿಗೆ ಕಟ್ಟುವ ತನಕ ಶೋರೂಮಲ್ಲಿದವರ ಹಿಂದಿಂದೆಯೇ ಓಡಾಡ್ತಾ ಇದ್ದಳು.
ಸುರೇಶ.....ಅಪ್ಪ ಗಾಡಿ ಚೆನ್ನಾಗಿದೆ ಇನ್ಮೇಲೆ ಇದರಲ್ಲಿಯೇ ಸ್ಕೂಲಿಗೆ ಹೋಗೋದು ತಾನೇ.
ನೀತು.....ಒಂದು ಗಾಡಿಯಲ್ಲಿ ನೀನು ಅಪ್ಪ ನಯನ ಮೂವರೂ ಹೋಗಲು ಆಗಲ್ಲ ಕಣೋ ಜೊತೆಗೆ ನಿಮ್ಮ ಬ್ಯಾಗುಗಳು ಇರುತ್ತಲ್ಲ. ಅದಕ್ಕೆ ಇನ್ಮುಂದೆ ಶಾಲೆಗೆ ಕಾರಿನಲ್ಲೇ ಹೋಗಬೇಕು.
ಅನುಷ.......ಭಾವ ಹೇಗೂ ನನ್ನ ಕಾರು ಮನೆಯಲ್ಲೇ ನಿಂತಿರುತ್ತಲ್ಲ ನೀವು ಅದರಲ್ಲೇ ಹೋಗಬಹುದು.
ರೇವಂತ್......ಹೂಂ ಅದೇ ಸರಿ ಹೇಗೂ ಅಶೋಕನ ಜೊತೆ ರವಿ ಹೋಗ್ತಾರೆ ರವಿಯ ಕಾರನ್ನು ಅಣ್ಣ ತೆಗೆದುಕೊಂಡು ಹೋಗ್ತಾನಲ್ಲ ನಾನಂತೂ ನಮ್ಮ ಕಾರು ಬರುವವರೆಗೆ ಬುಲೆಟಿನಲ್ಲೇ ಹೋಗ್ತೀನಿ.
ಪ್ರೀತಿ.......ರೀ ನೀವು ಕಾರ್ ಬುಕ್ ಮಾಡಿದ್ದೀರಾ ? ಯಾವಾಗ ?
ರೇವಂತ್......ನಿಮಗ್ಯಾರಿಗೂ ಹೇಳಿಲ್ಲ ಅಲ್ಲವ ಹತ್ತು ದಿನಗಳಾಗಿದೆ ಎರಡು ಕಾರು ಬುಕ್ ಮಾಡಿದ್ದೀವಿ ಇನ್ನೊಂದು ತಿಂಗಳಿನಲ್ಲಿ ಬರುತ್ತೆ ಅಂತ ಹೇಳಿದ್ದಾರೆ.
ನಿಶಾ......ಮಮ್ಮ ಇದಿ ನನ್ನಿ ಗಾಲಿ ಬಾ ಕೂಚಿ.
ನೀತು.......ಸರಿ ಕಂದ ಇದು ನಿಂದೇ ಗಾಡಿ ಈಗ ಕೆಳಗಿಳಿ.
ನಿಶಾ.....ನಾನಿ ಬಲಲ್ಲ ಮಮ್ಮ ಇಲ್ಲಿ ಕೂಚಿ ಮಾತೀನಿ.
ನೀತು......ಏಟ್ ಬೇಕಾ ?
ನಿಶಾ......ಏತ್ ಅಣ್ಣಗೆ ಕೊಲು ನಂಗಿ ಬೇಲ ನನ್ನಿ ಎತ್ತಿ ಮಮ್ಮ...... ಎನ್ನುತ್ತ ತನ್ನೆರಡು ಕೈಗಳನ್ನು ಅಮ್ಮನತ್ತ ಚಾಚಿದಳು.
ಸುರೇಶ್......ಲೇ ಚೋಟ್ ಮೆಣಸಿನಕಾಯಿ ನಂಗೆ ಏಟ್ ಕೊಡ್ಬೇಕ.
ನಯನ......ವೆರಿಗುಡ್ ಚಿನ್ನಿ ನಿಮ್ಮಣ್ಣಂಗೆ ಏಟು ಕೊಡಬೇಕಾದ್ದೇ.
ಪ್ರೀತಿ......ನೀವಿಬ್ರೂ ಕಿತ್ತಾಟ ಶುರು ಮಾಡಿದ್ರೆ ನಾನೇ ನಿಮ್ಮಿಬ್ಬರಿಗೆ ಕೊಡ್ತೀನಿ ಪುಸ್ತಕಗಳೆಲ್ಲವೂ ಬಂದಿದೆ ತಾನೇ ಹೋಗಿ ಓದಿಕೊಳ್ಳಿ.
ಹರೀಶ....ನಿಧಿ ಕಾಲೇಜಿನಿಂದ ಇನ್ನೂ ಬಂದಿಲ್ಲವಾ ?
ಅನುಷ.....ಅವರಾಗಲೇ ಕಾಲೇಜಿನಿಂದ ಹೊರಟು ಸವಿತಾ ಅಕ್ಕನ ಮನೆಯಲ್ಲಿದ್ದಾರಂತೆ ಅಲ್ಲೇ ಊಟ ಮಾಡಿಕೊಂಡು ಬರ್ತೀವಿ ಅಂತ ಫೋನ್ ಮಾಡಿ ಹೇಳಿದ್ದಾರೆ.
ಸುಮ....ನೀವೂ ಎಲ್ಲ ನಡೀರಿ ಊಟ ಮಾಡೋಣ ರೇವಂತ್ ಈಗ ನೀನು ಫ್ಯಾಕ್ಟರಿ ಕಡೆ ಹೋಗಬೇಕ ?
ರೇವಂತ್.......ಹೂಂ ಅತ್ತಿಗೆ ಬೆಳಗ್ಗಿನಿಂದಲೂ ಶೋರೂಮಿನಲ್ಲಿದ್ದೆ ಈಗೊಂದು ರೌಂಡ್ ಹೋಗಿ ಬರಬೇಕು.
ಹರೀಶ......ನಡಿ ಊಟ ಮಾಡ್ಕೊಂಡು ನಾನೂ ಬರ್ತೀನಿ.
ನಿಶಾ......ಪಪ್ಪ ನಾನಿ ಬತೀನಿ.
ನೀತು......ನಿನಗೆರಡು ಕೊಡ್ತೀನಿ ಸುಮ್ಮನೆ ಊಟ ಮಾಡಿಕೊಂಡು ತಾತನ ಜೊತೆ ಸ್ವಲ್ಪ ತಾಚಿ ಮಾಡುವೆ ನಡಿ.
ಸಂಜೆ ಮನೆಗೆ ಬಂದ ಅಶೋಕ...ರವಿ...ವಿಕ್ರಂ ಮೂವರೂ ಬುಲೆಟ್ ಮೇಲೆ ಒಂದೊಂದು ರೌಂಡ್ ಹೊಡೆದರೆ ನಿಶಾ ಎಲ್ಲರ ಜೊತೆಯಲ್ಲಿ ತಾನೂ ರೌಂಡ್ ಸುತ್ತುತ್ತಿದ್ದಳು. ಸಂಜೆವರೆಗೂ ಸವಿತಾಳ ಮನೆಯಲ್ಲಿ ಇದ್ದ ನಿಧಿ ಮನೆಗೆ ಮರಳಿದಾಗ ಬುಲೆಟ್ ತಂದಿರುವುದನ್ನು ತಿಳಿದು ತಾನೂ ಒಂದು ರೌಂಡ್ ಹೋಗಿ ಬರ್ತೀನೆಂದಳು.
ನಯನ.......ಅಕ್ಕ ನಿಮಗೆ ಬುಲೆಟ್ ಓಡಿಸುವುದಕ್ಕೂ ಬರುತ್ತಾ ?
ನಿಧಿ......ಯಾಕೆ ಅದೇನು ರಾಕೆಟ್ಟಾ ಅದರಲ್ಲೇನು ಮಹ ?
ನಯನ.....ಅಲ್ಲ ಅಕ್ಕ ಬುಲೆಟ್ ತುಂಬ ಭಾರವಾಗಿದೆ ಅದನ್ನಿಡಿದು ಸ್ಟಾಂಡ್ ಹಾಕುವುದಕ್ಕೇ ಸುರೇಶ ಒದ್ದಾಡ್ತಿದ್ದ ನೀವು ಓಡಿಸ್ತೀರ ?
ಸುರೇಶ.....ಏಯ್ ಕೋತಿ ನಾನ್ಯಾವಾಗ ಬುಲೆಟ್ ಸ್ಟಾಂಡ್ ಹಾಕ್ತಿದ್ದೆ ಒದ್ದಾಡ್ತಿದ್ದೆ ಅಂತ ಏನೇನೋ ಹೇಳ್ತಿದ್ದೀಯಲ್ಲ.
ನಯನ.....ನೀನು ಹಾಕಲಿಲ್ಲ ಆದರೆ ನಿನ್ನಿಂದ ಹಾಕಲು ಆಗುವುದಿಲ್ಲ ಅಂತ ಹೇಳಿದ್ದಷ್ಟೆ.
ನೀತು......ನೀವಿಬ್ರೂ ಪುನಃ ಕಿತ್ತಾಡಲು ಶುರು ಮಾಡಿದ್ರಾ.
ಸುರೇಶ.....ಅಮ್ಮ ನಾನೇನೂ ಮಾಡ್ಲಿಲ್ಲ ಕಣಮ್ಮ ಸುಮ್ಮನೆ ನಿಂತಿದ್ದೆ ಈ ಕೋತಿಯೇ ಶುರು ಮಾಡಿದ್ದು.
ನಯನ.....ನೋಡಿ ಅತ್ತೆ ನನ್ನ ಕೋತಿ ಅಂತಾನೆ.
ನೀತು.....ಸುರೇಶ ಹಾಗನ್ನುತ್ತಾರಾ ?
ಸುರೇಶ.....ಅಮ್ಮ ಇವಳೇ ಕಾಲ್ಕೆರೆದು ಜಗಳಕ್ಕೆ ಬಂದರೂ ನೀನು ನಂಗೇ ಬೈಯೋದು ಕಣಮ್ಮ.
ನೀತು....ಅಲ್ನೊಡು ನಿಮ್ಮಿಬ್ಬರ ಜಗಳ ನೋಡುತ್ತ ಖುಷಿಯಾಗಿ ಚಪ್ಪಾಳೆ ತಟ್ಟಿಕೊಂಡು ನನ್ನ ಚಿಲ್ಟಾರ್ ಏಂಜಾಯ್ ಮಾಡ್ತಿದ್ದಾಳೆ. ನೀವಿಬ್ಬರೂ ಈಗ ಹತ್ತನೇ ಕ್ಲಾಸ್ ಪಬ್ಲಿಕ್ ಪರೀಕ್ಷೆ ಬರೆಯುತ್ತೀರಾ ಈಗಲೂ ಚಿಕ್ಕಮಕ್ಕಳ ರೀತಿ ಕಚ್ಚಾಡುವುದು ಸರಿಯಾ ?
ಪ್ರೀತಿ........ನಿನ್ನದೇ ತಪ್ಪು ಕಣೆ ಈ ಕೋತಿನ ತಲೆ ಮೇಲೆ ಕೂರಿಸಿ ಪಾಪ ಎಲ್ಲದಕ್ಕೂ ಸುರೇಶನನ್ನೇ ಬೈಯ್ತೀಯ ಅದಕ್ಕೆ ಇವಳು ಇಷ್ಟು ಹೆಚ್ಚಿಕೊಂಡಿರೋದು ಬಾಲ ಕಟ್ ಮಾಡಿದ್ರೆ ಸರಿ ಹೋಗುತ್ತೆ.
ನಿಧಿ.......ಅತ್ತೆ ನೀವು ವರಿ ಮಾಡ್ಕೊಬೇಡಿ ಇನ್ನೊಂದ್ಸಲ ಕಿತ್ತಾಡಲಿ ನಾನೇ ಇಬ್ರಿಗೂ ಸರಿಯಾಗಿ ಮಾಡ್ತೀನಿ. ಚಿನ್ನಿ ನಡಿ ನಾವೊಂದು ರೌಂಡ್ ಹೋಗಿ ಬರೋಣ.
ನಿಧಿ ತಂಗಿಯನ್ನು ಮುಂದೆ ಕೂರಿಸಿಕೊಂಡು ಬುಲೆಟ್ಟಿನಲ್ಲಿ ಹೊರಟರೆ ತಮ್ಮ ಹಿರಿಮಗಳನ್ನು ನೋಡಿ ನೀತು—ಹರೀಶ ಹೆಮ್ಮೆ ಪಡುತ್ತಿದ್ದರು.
ಮಾರನೇ ದಿನ ಸುಕನ್ಯಾ—ಸವಿತಾರ ಹೆಸರಿನಲ್ಲಿ ಖರೀಧಿಸುತ್ತಿರುವ ಮನೆಯ ಮಾತುಕತೆಯನ್ನು ರವಿಯ ಮುಂದಾಳತ್ವದಲ್ಲಿ ಮುಗಿಸಿ ಜೂನ್ 10ನೇ ತಾರೀಖಿನಂದು ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ರವಿ.....ಸರ್ ಹೇಗೂ ನಾವು ಮನೆ ತೆಗೆದುಕೊಳ್ಳುವುದು ಖಚಿತವೇ ನೀವು ಒಪ್ಪಿಕೊಂಡರೆ ನಾಳೆಯಿಂದ ಮನೆಯೊಳಗಿನ ಕೆಲವು ಕೆಲಸ ಪ್ರಾರಂಭಿಸಬಹುದಾ ?
ಮನೆ ಮಾಲೀಕ......ಖಂಡಿತವಾಗಿ ಶುರು ಮಾಡಿ ಇನ್ನೆರಡು ವಾರವೇ ನಾನು ಮಾಲೀಕನಾಗಿರುವುದು ಆಮೇಲೆ ನಿಮ್ಮದೇ ತಾನೇ.
ವಿವೇಕ್......ಆದರೂ ಸರ್ ನಮ್ಮ ಹೆಸರಿಗೆ ವರ್ಗಾವಣೆ ಆಗುವರೆಗೆ ನಾವೇನೇ ಮಾಡುವುದಕ್ಕೂ ನಿಮ್ಮ ಅನುಮತಿಯ ಅಗತ್ಯವಿರುತ್ತೆ.
ಮನೆ ಮಾಲೀಕ.....ನೀವು ನಿಮ್ಮಿಷ್ಟದಂತೆ ಮನೆಯಲ್ಲೇನು ಚೇಂಜ್ ಮಾಡಬೇಕೆಂದು ಅನಿಸಿದರೂ ಮಾಡಿರಿ ನನ್ನದೇನು ಅಭ್ಯಂತರವಿಲ್ಲ
ರಜನಿ....ಅಂತೂ ಇನ್ನೊಂದು ತಿಂಗಳಿನೊಳಗೇ ನೀವಿಬ್ಬರೂ ನಮ್ಮ ಕಾಲೋನಿಗೇ ಬರುತ್ತಿದ್ದೀರ ತುಂಬ ಸಂತೋಷವಾಗ್ತಿದೆ ಕಣೆ.
ಅಣ್ಣ ಅಕ್ಕಂದಿರ ಜೊತೆ ನಿಶಾ ಹೊರಗೆ ಬಾಲ್ ಆಡುತ್ತಿದ್ದರೆ ಅವಳ ರಕ್ಷಣೆಗೆಂದು ಬಂದಿರುವವರಲ್ಲಿ ನಾಲ್ವರು ಗೇಟಿನ ಹತ್ತಿರವೇ ನಿಂತು ಕಾವಿಲಿಗಿದ್ದರು. ಮನೆಯೊಳಗೋಡಿ ಬಂದ ನಿಶಾ ಅಮ್ಮನನ್ನು ಸೇರಿ ನಿಂತು......ಮಮ್ಮ ನಂಗಿ ಸುಸಿ ಆತು.
ನೀತು ಮಗಳನ್ನೆತ್ತಿ ಮುದ್ದಾಡುತ್ತ......ನನ್ನ ಕಂದನಿಗೆ ಸುಸ್ತಾಗಿದೆಯ ನಡಿ ಚಿನ್ನಿ ನಿಂಗೆ ಜೂಸ್ ಕೊಡ್ತೀನಿ ನಿನ್ನ ಸುಸ್ತೆಲ್ಲ ಮಾಯವಾಗುತ್ತೆ.
ನಿಶಾ ಜೂಸ್ ಹೀರಿದ ನಂತರ ತಕ್ಷಣವೇ ಮನೆಯಾಚೆ ಓಡಿ ಪುನಃ ಅಣ್ಣಂದಿರ ಜೊತೆ ಆಡತೊಡಗಿದಳು.
* *
* *
ಜೂನ್ ಒಂದನೇ ತಾರೀಖು.....
ಇಂದಿನಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗುತ್ತಿದ್ದು ಹರೀಶ... ಸುರೇಶ ಮತ್ತು ನಯನ ಶಾಲೆಗೆ ಹೋಗಲು ರೆಡಿಯಾಗಿದ್ದರೆ ಗಿರೀಶ ಮತ್ತವನ ಭಾವೀ ಪತ್ನಿಯರಾಗುವ ರಶ್ಮಿ—ದೃಷ್ಟಿ ಕಾಲೇಜಿಗೆಂದು ರೆಡಿಯಾಗಿದ್ದರು. ಪ್ರೀತಿ ಅತ್ತೆಯ ಜೊತೆ ಫ್ರೆಶಾಗಿ ಕೆಳಗೆ ಬಂದ ನಿಶಾ ಅಪ್ಪ...ಅಣ್ಣಂದಿರ ಜೊತೆ ಅಕ್ಕಂದಿರು ರೆಡಿಯಾಗಿರುವುದನ್ನು ಕಂಡು ಅಪ್ಪನ ಬಳಿಗೋಡಿ ಮಡಿಲಿಗೇರಿದಳು.
ನಿಶಾ....ಪಪ್ಪ ನಿನಿ ಟಾಟಾ ಹೋತಿ ನಾನಿ ಬತೀನಿ.
ಹರೀಶ ಮಗಳನ್ನು ಮುದ್ದಾಡಿ......ಚಿನ್ನಿ ಮರಿ ನಾನೆಲ್ಲಿಗೂ ಟಾಟಾ ಹೋಗ್ತಿಲ್ಲ ಕಂದ ಸ್ಕೂಲಿಗೆ ಹೋಗೋದು ನೋಡಲ್ಲಿ ಅಕ್ಕ ಅಣ್ಣ ಸ್ಕೂಲಿಗೆ ರೆಡಿಯಾಗಿ ಯೂನಿಫಾರಂ ಹಾಕಿಕೊಂಡಿಲ್ಲವಾ.
ನಿಶಾ ತಲೆ ಕೆರೆದುಕೊಳ್ಳುತ್ತ.....ಪಪ್ಪ ನಾನಿ ಕೂಲ್ ಬೇಲ.
ಹರೀಶ ನಗುತ್ತ.....ನೀನಿನ್ನೂ ತುಂಬ ಪುಟ್ಟವಳು ಕಂದ ಇನ್ನೂ ಸ್ವಲ್ಪ ದೊಡ್ಡವಳಾಗು ಆಮೇಲೆ ನೀನೂ ದಿನ ಸ್ಕೂಲಿಗೆ ಬರುವಂತೆ ಈಗ ನಿನ್ನ ಕುಕ್ಕಿ ಮರಿ ಜೊತೆ ಆಡ್ತಿರು ಪಪ್ಪ ಸಂಜೆ ಬರುತ್ತೆ.
ಶೀಲಾ......ಈ ವರ್ಷವೂ ನೀವು ಕಾಲೋನಿಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡ್ತೀರಾ ?
ನೀತು.....ಅದೆಲ್ಲ ಬೇಡ ಕಣ್ರಿ ಈ ವರ್ಷದಿಂದ ನೀವು ಟ್ಯೂಶನ್ ಮಾಡುವುದಕ್ಕೇನು ಹೋಗಬೇಡಿ ಮನೆ ಮಕ್ಕಳಿಗೆ ಹೇಳಿಕೊಟ್ಟರೆ ಅಷ್ಟೇ ಸಾಕು.
ರವಿ.....ನೀತು ಮಾಡಲಿ ಬಿಡಮ್ಮ ವಿದ್ಯಾದಾನ ಒಳ್ಳೆಯದೇ ಅಲ್ಲವ.
ರಾಜೀವ್..ಹೌದಮ್ಮ ರವಿ ಹೇಳೋದು ಸರಿಯಾಗಿದೆ.
ಹರೀಶ.....ಇಲ್ಲ ಮಾವ ಈ ವರ್ಷದಿಂದ ನಮಗೆ ಟ್ಯೂಶನ್ ಮಾಡೊ
ಅವಕಾಶವಿಲ್ಲ. ಸರ್ಕಾರಿ ಶಾಲೆಯ ಪ್ರಾಧ್ಯಾಪಕರು ಮನೆಯ ಪಾಠ ಮಾಢುವಂತಿಲ್ಲ ಎಂದು ಸರ್ಕಾರದಿಂದ ಆದೇಶದ ಪ್ರತಿ ಬಂದಿದೆ ಅದಕ್ಕೆ ಮಾಡುತ್ತಿಲ್ಲ.
ನೀತು....ಅಬ್ಬ ಒಳ್ಳೆಯದಾಯಿತು ಮುಂದಿನ ಸಲ ಚುನಾವಣೆಯಲ್ಲಿ ನಾನಿದೇ ಪಕ್ಷಕ್ಕೆ ಓಟ್ ಹಾಕ್ತೀನಿ.
ಸುರೇಶ ಖುಷಿಯಾಗಿ.......ಅಂದ್ರೆ ಅಪ್ಪ ಇನ್ಮೇಲೆ ಟ್ಯೂಶನ್ ಇಲ್ಲ ಮನೆಯಲ್ಲೇ ಓದಿಕೊಳ್ಳೋದು ಅನ್ನಿ.
ಹರೀಶ......ಟ್ಯೂಶನ್ ಇಲ್ಲದಿದ್ದರೇನು ನಾನು ನಿಮ್ಮಿಬ್ಬರಿಗೆ ಮಾಥ್ಸ್ ಜೊತೆ ಸೈನ್ಸ್ ಹೇಳಿಕೊಡ್ತೀನಿ ನಿಮ್ಮ ಸವಿತಾ ಮೇಡಂ ಸೋಷಿಯಲ್ ಸೈನ್ಸ್ ಜೊತೆ ಅವರೂ ಕನ್ನಡ ಹೇಳಿಕೊಡ್ತಾರೆ.
ನಯನ.....ಮಾವ ಸುಕನ್ಯಾ ಮೇಡಂ ಯಾವ ಸಬ್ಜೆಕ್ಟ್ ಮಾಡೋದು
ಹರೀಶ......ಸುಕನ್ಯಾ ನಿಮಗೆ ಸಂಸ್ಕೃತ ಅಥವ ಹಿಂದಿ ಮಾಡ್ತಾಳೆ.
ಸುರೇಶ......ಅಪ್ಪ ಹೋದ ವರ್ಷ ಅವರು ಇಂಗ್ಲೀಷ್ ಮಾಡಿದ್ರು.
ಹರೀಶ......ನಿಮ್ಮ ಕ್ಲಾಸಿಗೆ ಈ ಸಲ ಬ್ರಿಜೇಷ್ ಸರ್ ಮಾಡೋದು ನಡೀರಿ ಹೋಗೋಣ ಟೈಮಾಯಿತು.
ಪ್ರೀತಿ ಅತ್ತೆಯ ಜೊತೆ ನಿಂತಿದ್ದ ನಿಶಾ ಅಪ್ಪ..ಅಣ್ಣ..ಅಕ್ಕನಿಗೆ ಟಾಟಾ ಮಾಡಿ ಬೀಳ್ಕೊಡುವಷ್ಟರಲ್ಲಿ ಕಾಲೇಜಿಗೆ ಹೋಗುವ ಮೂವರು ಸಹ ರೆಡಿಯಾಗಿ ಬಂದರು.
ರೇವತಿ.....ನೀವ್ಮೂರು ಜನ ಹೇಗೆ ಹೋಗ್ತೀರಾ
ರಶ್ಮಿ......ಅಜ್ಜಿ ನಮ್ಮನ್ನ ಅಕ್ಕ ಡ್ರಾಪ್ ಮಾಡ್ತಾರೆ.
ಸುಮ.....ಈ ವಾರ ನಿಧಿ ಬಿಡ್ತಾಳೆ ಅತ್ತೆ ಮುಂದಿನ ವಾರದಿಂದ ಇವರೇ ಆಕ್ಟಿವಾದಲ್ಲಿ ಹೋಗಲಿ.
ರಜನಿ.....ಇನ್ನೂ ರಶ್ಮಿ—ದೃಷ್ಟಿಗೆ ಟ್ರಾಫಿಕ್ಕಿನಲ್ಲಿ ಅಷ್ಟಾಗಿ ಸ್ಕೂಟರ್ ಓಡಿಸಿ ಅಭ್ಯಾಸವಿಲ್ಲವಲ್ಲ ಆಮೇಲೆ ಎಲ್ಲಿಗಾದರೂ ಗುದ್ದಿದರೇನು ?
ಸುಮ.....ಎಲ್ಲಿಗಾದರೂ ಗುದ್ದಲಿ ಬೇರೆ ಯಾರಿಗಾದ್ರೂ ಗುದ್ದಿ ಹೆಚ್ಚು ಕಡಿಮೆ ಮಾಡಿಬಿಟ್ಟರೆ ಅಂತ ಯೋಚಿಸಬೇಕು.
ದೃಷ್ಟಿ....ಅಮ್ಮ ನಾನು ರಶ್ಮಿ ನೀಟಾಗೇ ಓಡಿಸ್ತೀವಿ.
ರಶ್ಮಿ......ಹೂಂ ಆಂಟಿ ಕಾಲೋನಿಯೊಳಗೆ ನಾವೆಷ್ಟು ಕರೆಕ್ಟಾಗಿಯೇ ಓಡಿಸ್ತೀವಿ ಗೊತ್ತ ಬೇಕಿದ್ದರೆ ಅಕ್ಕನನ್ನೇ ಕೇಳಿ.
ಗಿರೀಶ.....ಕಾಲೋನಿಯೊಳಗೆ ಯಾವಾಗಲೋ ಒಂದೊಂದು ಗಾಡಿ ಬರುತ್ತೆ ಟೌನಿನಲ್ಲಿ ಹಾಗಲ್ಲ ಗೊತ್ತಿರಲಿ.
ನಿಧಿ......ಸುಮ್ನಿರು ಗಿರೀಶ ಅತ್ತೆ ನೀವೇನೂ ಚಿಂತಿಸುವ ಅಗತ್ಯವಿಲ್ಲ ಇಬ್ಬರೂ ಗಾಡಿ ನೀಟಾಗೇ ಓಡಿಸ್ತಾರೆ ಹೊರಗೆ ಬಿಡದಿದ್ದರೆ ಅವರಿಗೆ ಪ್ರಾಕ್ಟೀಸ್ ಆಗುವುದಾದರೂ ಹೇಗೆ ? ಈ ವಾರವಿಡೀ ಕಾಲೇಜಿನಿಂದ ಬಂದ ಮೇಲೆ ಟೌನಿನೊಳಗೆ ಗಾಡಿ ಓಡಿಸಲಿ ಅಲ್ಲವಾ ತಾತ.
ರಾಜೀವ್.....ಕರೆಕ್ಟಾಗಿ ಹೇಳಿದೆ ಕಣಮ್ಮ ನಾವೇ ಬಿಡದಿದ್ದರೆ ಗಾಡಿ ಓಡಿಸುವ ಪ್ರಾಕ್ಟೀಸ್ ಎಲ್ಲಿಂದ ಆಗುತ್ತೆ.
ನೀತು ಹೊರಬರುತ್ತ.......ಅಮ್ಮ ಮಕ್ಕಳನ್ನು ಡ್ರಾಪ್ ಮಾಡಲು ನಿಧಿ
ಜೊತೆ ನಾನೂ ಹೋಗಿ ಬರ್ತೀನಿ.
ಅಮ್ಮ ರೆಡಿಯಾಗಿರುವುದನ್ನು ನೋಡಿದ ನಿಶಾ ಅವಳ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ ನೀತು.........ಹೂಂ ಕಂದ ನೀನು ಬಾ ನಿನ್ನ ಬಿಟ್ಟು ಹೋಗಲ್ಲ.
ರಜನಿ......ಚಿನ್ನಿ ಅಮ್ಮ ಹೋಗಿ ಬೇಗ ಬರ್ತಾಳೆ ಪುಟ್ಟಿ ನೀನಿನ್ನೂ ಚಾನ ಮಾಡಿಲ್ಲ ಆಮೇಲೆ ತಿಂಡಿ ತಿನ್ಬೇಕು.
ನಿಶಾ ತಲೆ ಅಳ್ಳಾಡಿಸುವುದನ್ನು ನೋಡಿ ರೇವತಿ......ಹೋಗಿ ಬರಲಿ ಬಿಡಮ್ಮ ಎಲ್ಲರೂ ಇಂದಿನಿಂದ ಶಾಲಾ ಕಾಲೇಜಿಗೆ ಹೋಗುತ್ತಾರಲ್ಲ ಪಾಪ ಅವಳಿಗೂ ಬೇಸರವಾಗುತ್ತೆ.
ಮೂವರು ಮಕ್ಕಳನ್ನು ಕಾಲೇಜಿನಲ್ಲಿ ಬಿಟ್ಟು ಹಿಂದಿರುಗುವಾಗ ನಿಧಿ ಅಮ್ಮನಿಗೆ ಡ್ರೈವ್ ಮಾಡಲು ಬಿಟ್ಟು ನಿಶಾಳನ್ನು ಮುದ್ದಾಡುತ್ತಿದ್ದಳು.
ನೀತು......ಏನೀವತ್ತು ಅಕ್ಕ ತಂಗಿ ತುಂಬಾ ಮುದ್ದಾಡ್ತಿದ್ದೀರಲ್ಲ.
ನಿಧಿ.....ಅಮ್ಮಇವಳ ಜೊತೆಯಲ್ಲಿ ಕಳೆಯುವುದಕ್ಕೆ ನನಗೆ ಸಮಯ ಸರಿಯಾಗಿ ಸಿಕ್ಕಿರಲಿಲ್ಲ. ಇವಳೊಬ್ಬಳನ್ನೇ ಮುದ್ದಿಸಿದರೆ ಇನ್ನುಳಿದ ತಮ್ಮ ತಂಗಿಯರು ಅಕ್ಕನಿಗೆ ನಮ್ಮ ಮೇಲೆ ಪ್ರೀತಿಯಿಲ್ಲ ಅಂದ್ದೊಂಡ್ರೆ ಅದು ತಪ್ಪಾಗುತ್ತೆ ಅದಕ್ಕೆ ಅವರ ಜೊತೆಗಿರುತ್ತಿದ್ದೆ. ಈಗೆಲ್ಲರೂ ಶಾಲೆ ಕಾಲೇಜಿಗೆ ಹೋಗುವುದರಿಂದ ನಾನೀ ಚಿಲ್ಟಾರಿ ಜೊತೆಯಲ್ಲಿ ಜಾಸ್ತಿ ಸಮಯ ಕಳೆಯಬಹುದು.
ನಿಧಿ....ನಿಧಿ ಒಂದು ಕುಟುಂಬದಿಂದ ದೂರವಾಗಿ ಆಶ್ರಮದಲ್ಲಿದ್ದರೂ ನಿನಗೆ ಎಲ್ಲರನ್ನೇಗೆ ಪ್ರೀತಿಯಿಂದ ಸಂಭಾಳಿಸಬಹುದೆಂದು ಚೆನ್ನಾಗಿ ತಿಳಿದಿದೆ ಕಂದ. ಚಿನ್ನಿಗೆ ಬುದ್ದಿ ಚುರುಕಾಗಲಿ ಅಂತ ಹಲವಾರು ರೀತಿ ಆಟದ ಸಾಮಾನುಗಳನ್ನು ತಂದಿದ್ದೆವು ಆದರಿನ್ನೂ ಅವನ್ನು ಹೊರಗೆ ತೆಗೆದಿಲ್ಲ ಕಣೆ. ಈಗ ಹೇಗಿದ್ದರೂ ಇವಳೊಬ್ಬಳೇ ತಾನೇ ಇರೋದು ಅದನ್ನೆಲ್ಲಾ ತೆಗೆದು ಒಂದೊಂದಾಗಿ ಚಿನ್ನಿಗೆ ಹೇಳಿಕೊಡು ಈ ಚೋಟ ಶೈತಾನ್ ಈಗಿನಿಂದಲೇ ಚೂಟಿಯಾಗಿರಬೇಕು.
ನಿಧಿ....ಸರಿ ಅಮ್ಮ ಹಾಗೇ ಮಾಡ್ತೀನಿ ಚಿನ್ನಿ ಆಟ ಆಡಣ್ವಾ.
ನಿಶಾ ಖುಷಿಯಿಂದ.....ಅಕ್ಕ ಬಾಲ್ ಆಟ ಆತೀನಿ.
ನಿಧಿ.....ಬಾಲ್ ಬೇಡ ಚಿನ್ನಿ ಮರಿ ಬೇರೆ ಆಟ ಆಡೋಣ.
ಮನೆ ತಲುಪಿ ಸ್ನಾನ ತಿಂಡಿ ಮುಗಿಸಿ ಮಹಡಿಯಲ್ಲಿ ಅಮ್ಮನ ರೂಂ ಸೇರಿಕೊಂಡ ನಿಧಿ ಅಲ್ಲಿರುವ ಹಲವಾರು ರೀತಿ ಜೋಡಿಸುವುದು... ಕೂಡಿಸುವುದು....ಸೇರಿಸುವುವಂತ ಆಟದ ಸಾಮಾನುಗಳನ್ನೆಲ್ಲಾ ತೆಗೆದು ತಂಗಿಗೆ ಹೇಳಿಕೊಡುತ್ತಿದ್ದಳು. ನಿಶಾ ಎಲ್ಲವನ್ನು ಶ್ರದ್ದೆಯಿಂದ ನೋಡಿ ಕಲಿತುಕೊಂಡು ಅಕ್ಕನನ್ನು ಕೇಳುತ್ತ ಅವಳು ಹೇಳಿಕೊಟ್ಟಂತೆ ಜೋಡಿಸುತ್ತ ಆಡತೊಡಗಿದಳು.
ಕೆಳಗೆ ಹೆಂಗಸರು ಮಾತನಾಡುತ್ತಿದ್ದಾಗ ನೀತು ರೆಡಿಯಾಗಿ ಬಂದು...
ರೇವತಿ.....ಇದೇನೇ ಪುನಃ ಎಲ್ಲಿಗೆ ಹೊರಟೆಯಮ್ಮ ?
ನೀತು.....ಅಮ್ಮ ಅಶೋಕರ ಆಫೀಸಿನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಈ ಊರಿಗೆ ಶಿಫ್ಟಾಗಿದ್ದಾರೆ ಹೋಗಿ ಏನಾದರು ತೊಂದರೆ ಇದೆಯಾ ಅಂತ ಕೇಳಿಕೊಂಡು ಬರ್ತೀನಿ.
ಪ್ರೀತಿ.....ನೀತು ಐದು ನಿಮಿಷ ಕಾದಿರು ನಾನು...ಅಕ್ಕ...ರಜನಿ ಸಹ ನಿನ್ನ ಜೊತೆ ಬರ್ತೀವಿ.....ಎಂದೇಳಿ ಮೂವರು ರೆಡಿಯಾಗಲು ತಮ್ಮ ರೂಮಿಗೆ ಹೋದರೆ ನೀತು ಅಪ್ಪ ಅಮ್ಮನ ಜೊತೆ ಮಾತನಾಡುತ್ತ ಕುಳಿತಳು.
Add gif
ReplyDeleteAdd gif in between it will be nice
ReplyDelete