Total Pageviews

Sunday, 23 March 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 311

ಹಿಂದಿನ ರಾತ್ರಿ ಮಕ್ಕಳಿಬ್ಬರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಜನರಾಗಿ ಎಲ್ಲರೊಟ್ಟಿಗೆ ಸಂತೋಷದಿಂದ ಸಮಯ ಕಳೆದಿದ್ದು ಈಗ ದಂಪತಿಗಳಿಬ್ಬರು ಮುಂಜಾನೆ ಬೇಗ ರೆಡಿಯಾಗಿ ಅರಮನೆಯ ಗುಪ್ತ ಸಮಾಲೋಚನೆಗಳು ನಡೆಯುವ ಕೊಠಡಿಗೆ ಬಂದರು. ಅಲ್ಲಿಗೆ ವರ್ಧನ್....ಆಚಾರ್ಯರು....ರಾಣಾ....ವಿಕ್ರಂ ಸಿಂಗ್....ವೀರೇಂದ್ರ ಕೂಡ ಬಂದಿದ್ದು ನೀತು ವಿಷಯ ಪ್ರಸ್ತಾಪಿಸುತ್ತ ಪ್ಯಾರಿಸ್ ನಿವಾಸಿ ವಿಶಾಲ್ ಮತ್ತು ಜರ್ಮನಿ ನಿವಾಸಿಯಾದ ಸುಜೋಯ್ ಬಗ್ಗೆ ತನಗೆ ತಿಳಿದಿದ್ದ ಮಾಹಿತಿಗಳನ್ನು ಹೇಳಿದಳು.

ವಿಕ್ರಂ ಸಿಂಗ್.....ಮಾತೆ ನಮ್ಮ ತಜ್ಞರು ಇಮೇಲ್ ಅಕೌಂಟ್ ಹ್ಯಾಕ್ ಮಾಡಿ ಮಾಹಿತಿ ಕಲೆ ಹಾಕಿದ್ದಾರೆ ಆದರೆ ಇದರಲ್ಲಿ ಉಪಯೋಗಕ್ಕೆ ಬರಬಹುದಾದಂತ ಮಾಹಿತಿಗಳು ಜಾಸ್ತಿಯೇನಿಲ್ಲ. ಅವರಿಬ್ಬರೂ ಫ್ರಾನ್ಸ್ ಮತ್ತು ಜರ್ಮನಿ ದೇಶದಲ್ಲಿರುವ ಸಂಸ್ಥಾನದ ಅಧೀನದಲ್ಲಿಕ್ಕೆ ಬರುವ ಕಂಪನಿಗಳು ಮತ್ತು ಐಷಾರಾಮಿ ಹೋಟೆಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಮಹರಾಜರಾದ ರಾಣಾ ಪ್ರತಾಪರಿಗೆ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು ಆದರೆ ಸ್ನೇಹಿತನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ.

ನೀತು.....ಅವರಿಬ್ಬರ ಪರಿವಾರದ ವಿವರ ಮತ್ತು ಫೋಟೋಗಳೇನು ದೊರೆಯಲಿಲ್ಲವಾ ?

ರಾಣಾ....ವಿಶಾಲ್—ಸುಜೋಯ್ ಇಬ್ಬರ ಫೋಟೋ ಬಿಟ್ಟು ಅವರ ಮನೆ ಸದಸ್ಯರ ಯಾವುದೇ ಮಾಹಿತಿಗಳೂ ಇಮೇಲ್ ಮುಖೇನ ನಮಗೆ ಲಭ್ಯವಾಗಿಲ್ಲ ಮಾತೆ.

ವರ್ಧನ್ ಅವರಿಬ್ಬರ ವಿವರ ಪಡೆದುಕೊಂಡು......ಅಕ್ಕ ಅಲ್ಲಿ ನಮ್ಮ ದೇಶದ ಕೆಲವು ಗುಪ್ತಚರರಿದ್ದಾರೆ ಅವರಿಂದ ಉಳಿದ ಮಾಹಿತಿಯೂ ಕಲೆ ಹಾಕಿಸುತ್ತೇನೆ ಆದರೊಂದು ಕೆಲಸ ನಾವು ನಮ್ಮ ಕಡೆಯಿಂದ ಮಾಡಬೇಕಾಗಿದೆ.

ನೀತು......ಏನ್ ಮಾಡ್ಬೇಕು ವರ್ಧು ? ಇವರಿಬ್ಬರು ಬದುಕಿದ್ದರೆ ನನ್ನ ಮಕ್ಕಳ ಪ್ರಾಣಕ್ಕೆ ಅಪಾಯವಿದ್ದೇ ಇರುತ್ತೆ.

ವರ್ಧನ್......ವೀರೇಂದ್ರ ನಿನ್ನ ಬಳಿ ಕೆಲವು ಉತ್ಕೃಷ್ಟ ಮಟ್ಟದಲ್ಲಿನ ಸಣ್ಣ ಸಣ್ಣ ಜಾಸೂಸಿ ಡಿವೈಸುಗಳಿವೆ ಅಂತ ನೆನ್ನೆ ಬರುವಾಗ ಹೇಳಿದ್ದೆ

ವೀರೇಂದ್ರ......ಹಾಂ ಸರ್ ಎರಡು ಡಿವೈಸುಗಳಿವೆ.

ವರ್ಧನ್......ಇನ್ನೂ ಕೆಲವು ಡಿವೈಸುಗಳನ್ನು ತಯಾರಿಸಲು ನಿನಗೆ ಸಾಧ್ಯವಿದೆಯಾ ?

ವೀರೇಂದ್ರ.......ಸರ್ ಅದಕ್ಕೆ ಬೇಕಾಗುವ ಸಾಮಾಗ್ರಿಗಳು ನನ್ನ ಬಳಿ ಇಲ್ಲ ಅದು ದೊರೆತರೆ ಒಂದು ವಾರದೊಳಗೆ ನಾನು 50ಕ್ಕೂ ಹೆಚ್ಚು ಡಿವೈಸನ್ನು ರೆಡಿ ಮಾಡಿಬಿಡ್ತೀನಿ.

ವರ್ಧನ್.....ನಿನಗೇನೇನು ಬೇಕೆಂದು ಲಿಸ್ಟ್ ಮಾಡಿ ವಿಕ್ರಂ ಸಿಂಗ್ ಕೈಗೆ ಕೊಟ್ಬಿಡು ವೀರೂ ನಿನಗೆಲ್ಲವೂ ದೊರಕುತ್ತದೆ ಆದರೆ ಡಿವೈಸ್ ತಯಾರಿಸುವ ಜವಾಬ್ದಾರಿ ನಿನ್ನದು.

ವೀರೇಂದ್ರ....ಆಗಲಿ ಸರ್.

ವರ್ಧನ್.....ಅಕ್ಕ ನಮ್ಮ ದೇಶದ ಗುಪ್ತಚರರಿಂದ ನಾನು ಕೇವಲ ಮಾಹಿತಿಗಳನ್ನು ಪಡೆದುಕೊಳ್ಳಬಹುದು ಅವರಿಂದ ನಾನ್ಯಾವುದೇ ರೀತಿ ಕಾರ್ಯಾಚರಣೆ ಮಾಡಿಸಲಾಗುವುದಿಲ್ಲ ಏಕೆಂದರೆ ಇದೆರಡು ದೇಶಗಳ ನಡುವೆ ಸಮಸ್ಯೆಗೆ ಕಾರಣವಾಗಬಹುದು ಅದಕ್ಕೆ ಮಾಹಿತಿ ದೊರೆತ ನಂತರವೇನು ಮಾಡಬೇಕೆಂದು ತಿಳಿಸುತ್ತೀನಿ.

ನೀತು......ಆಯ್ತು ವರ್ಧು ಯಾವುದೇ ರೀತಿ ಪ್ಲಾನ್ ಮಾಡಿಕೊಳ್ಳದೆ ನಾವು ಮುಂದುವರಿಯುವುದು ಆತ್ಮಹತ್ಯೆಯಾಗುತ್ತೆ. ವೀರೇಂದ್ರ ನಿನ್ನ ಗೆಳತಿಯ ಪ್ರಾಣಕ್ಕಿನ್ನೂ ಸಂಚಕಾರವಿದೆ ಇದರಲ್ಲಿ ನಿನ್ನ ಪಾತ್ರ ಬಹಳ ಮುಖ್ಯವಾದದ್ದು ಸಹಾಯ ಮಾಡಲೇಬೇಕಪ್ಪ.

ಆಚಾರ್ಯರು........ನೀತು ಇವನು ನಿನಗೂ ಮಗನಂತೆಯೇ ನೀನು ತಾಯಿಯಾದವಳು ಆದೇಶಿಸಬೇಕೆ ಹೊರತು ಆಗ್ರಹಿಸಬಾರದು.

ವೀರೇಂದ್ರ.....ಹೌದು ಆಂಟಿ ನನ್ನಿಂದ ಏನೇನು ಮಾಡಲಿಕ್ಕೆ ಸಾಧ್ಯ ಇದೆಯೋ ಅದೆಲ್ಲವನ್ನೂ ಶಕ್ತಿಮೀರಿ ಮಾಡಿಯೇ ತೀರುವೆ.

ಹರೀಶ.......ಅವರಿಬ್ಬರನ್ನು ನಮ್ಮ ದೇಶಕ್ಕೆ ಕರೆತರುವ ಬಗ್ಗೆ ನಾವು ಏನಾದರೂ ಯೋಚಿಸಬೇಕು ಆಗ ಕಾರ್ಯ ಸುಲಭವಾಗುತ್ತೆ.

ಇದೇ ವಿಷಯವಾಗಿ ಇನ್ನೂ ಇವರೆಲ್ಲರೂ ಚರ್ಚಿಸಿದ ಬಳಿಕ ವರ್ಧನ್ ಎಲ್ಲರಿಂದ ಬೀಳ್ಗೊಂಡು ಮಕ್ಕಳನ್ನು ಭೇಟಿಯಾಗಿ ಮುದ್ದಾಡುತ್ತ ದೆಹಲಿಯತ್ತ ಪ್ರಯಾಣ ಬೆಳೆಸಿದನು. ನೀತುವಿನ ಪ್ರಾಣ ಉಳಿಸಿದ್ದ ಮುನಿವರ್ಯರು ಆಗಮಿಸಿ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪೂನಂಳನ್ನು ಪರೀಕ್ಷಿಸಬೇಕು ಮಗುವನ್ನು ಕರೆತರಲು ಹೇಳಿದರು. ಪೂನಂ ವಿಷಯವಾಗಿ ಮುನಿವರ್ಯರಿಗೆ ನೀತು ಎಲ್ಲಾ ಮಾಹಿತಿ ನೀಡುತ್ತಿದ್ದರೆ ಹರೀಶ ಮಗುವನ್ನು ಕರೆತರುವುದಾಗಿ ಹೊರಬಂದನು.

ಮನೆಯ ಹೆಂಗಸರು ತಿಂಡಿ ಮುಗಿಸಿ ಅತಿಥಿಗಳಾಗಿ ಆಗಮಿಸಿರುವ ಮಹಿಳೆಯರೊಟ್ಟಿಗೆ ಮಾತನಾಡುತ್ತ ಕುಳಿತಿದ್ದು ಅತ್ತಲೇ ಬಂದು.....

ಹರೀಶ........ಅನು..ಅನು...

ಅನುಷ......ಹೇಳಿ ಭಾವ.

ಹರೀಶ....ನಿಶಾ—ಪೂನಂ ಇಬ್ಬರೂ ಎಲ್ಲಮ್ಮ ?

ಅನುಷ.....ಭಾವ ಇಬ್ಬರೂ ಆನೆ ಸವಾರಿ ಮಾಡ್ತಿದ್ದಾರೆ ಗಂಡಸರು ಮತ್ತು ಮಕ್ಕಳೆಲ್ಲರೂ ಜೊತೆಗಿದ್ದಾರೆ ಭಾವ.

ಹರೀಶ......ಇಬ್ಬರನ್ನೂ ಕರೆದುಕೊಂಡು ಬಾರಮ್ಮ (ಅನು ತೆರಳಿದರೆ) ನಂದಿನ ನೀನೂ ಬಾರಮ್ಮ ಮುನಿವರ್ಯರು ಪೂನಂ ಆರೋಗ್ಯ ಪರಿಶೀಲನೆ ಮಾಡಿ ಅವಳಿಗೆ ಚಿಕಿತ್ಸೆ ಕೊಡ್ತಾರಂತೆ.

ಅತಿಥಿ ಗುಂಪಿನ ಹೆಂಗಸರು ಏನು ವಿಷಯವೆಂದು ಕೇಳಿ ತಿಳಿಯುತ್ತ ಮಗು ಆದಷ್ಟು ಬೇಗ ಗುಣಮುಖವಾಗಲೆಂದು ಬೇಡಿಕೊಂಡರು. ಅನುಷ ಹೊರಬಂದಾಗ ಮಕ್ಕಳೆಲ್ಲರೂ ಆನೆಗಳ ಮೇಲೆ ಕುಳಿತು ಸವಾರಿ ಮಾಡುತ್ತಿದ್ದರೆ ನಿಶಾ—ಪೂನಂ ಜೊತೆ ಸುರೇಶ ಮತ್ತು ವೀರ್ ಸಿಂಗ್ ಇಬ್ಬರಿಗೂ ಆನೆ ಸವಾರಿ ಮಾಡಿಸುತ್ತಿದ್ದರು.

ಅನುಷ......ಸುರೇಶ ಇಬ್ಬರನ್ನೂ ಕೆಳಗಿಳಿಸು ಅಕ್ಕ ಕರಿತಿದ್ದಾರೆ.

ನಿಶಾ......ಆಂಟಿ ಇನ್ನಿ ಸೊಪ್ಪ ಕೂಚಿ ಮಾತೀನಿ ಪೀಸ್.

ಅನುಷ......ಅಮ್ಮ ಕರಿತಿದೆ ಕಂದ ಕೆಳಗಿಳಿ ಆಮೇಲೆ ಕೂಚಿ ಮಾಡಿ ನಿನಗಿಷ್ಟ ಬಂದಷ್ಟು ರೌಂಡ್ ಸುತ್ತುವಂತೆ.

ಮೂವರು ಕೆಳಗಿಳಿಯುವಷ್ಟರಲ್ಲಿ ಅಲ್ಲಿದ್ದ ಮನೆಯ ಗಂಡಸರಿಗೆಲ್ಲಾ ವಿಷಯ ತಿಳಿಸಿದ ಅನುಷ ಮಕ್ಕಳಿಬ್ಬರನ್ನು ಕರೆದುಕೊಂಡು ಹರೀಶನ ಬಳಿ ಬಂದರೆ ಅವನು ನಂದಿನ ಜೊತೆಗೆ ಮಕ್ಕಳನ್ನು ಕರೆದೊಯ್ದನು. ಮುನಿವರ್ಯರು ಪೂನಂಳನ್ನು ಶಿಷ್ಯನೊಟ್ಟಿಗೆ ಕೂಲಂಕುಷವಾಗಿ ಪರೀಕ್ಷಿಸಿದ ನಂತರ.......

ಮುನಿವರ್ಯ......ಮಗುವಿನ ಆರೋಗ್ಯ ಬೇರೆಲ್ಲಾ ರೀತಿಯಲ್ಲೂ ಸರಿಯಾಗಿದೆ ಆದರಿವಳ ಹೃದಯ ಮಾತ್ರ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸದ ಕಾರಣ ಇವಳಿಗೆ ಬೇಗ ಆಯಾಸವಾಗುತ್ತಿದೆ ಜೊತೆಗೆ ಹೃದಯ ಆಯಾಸದ ಒತ್ತಡವನ್ನು ತಡೆದುಕೊಳ್ಳುತ್ತಿಲ್ಲ.

ನಂದಿನಿ ಕಣ್ಣೀರಿಡುತ್ತ ಮುನಿವರ್ಯರ ಕಾಲಿಗೆ ಬಿದ್ದರೆ ನೀತು ಆಕೆಗೆ ಸಮಾಧಾನ ಮಾಡುತ್ತ........ಮುನಿಗಳೇ ಇವಳನ್ನು ಗುಣಪಡಿಸಿ ಇವಳೂ ಸಹ ನಮ್ಮನೇ ಮಗಳು ನಿಮ್ಮಲ್ಲಿ ವಿನಂತಿಸಿಕೊಳ್ತೀನಿ.

ಮುನಿವರ್ಯ.......ಗಾಬರಿಯಾಗುವ ಅಗತ್ಯವಿಲ್ಲಮ್ಮ ಮಗುವಿನ ಹೃದಯ ಸಮಸ್ಯೆಯನ್ನು ನಾವು ಗುಣಪಡಿಸುತ್ತೇವೆ. ನನ್ನ ಶಿಷ್ಯನಾದ ಭಾಸ್ಕರ್ ನೀಡಿರುವ ಔಷಧಿಯನ್ನು ಪ್ರತಿನಿತ್ಯವೂ ಮಗುವಿಗೆ ನೀಡಿ ಅದನ್ಯಾವ ಕಾರಣಕ್ಕೂ ತಪ್ಪಿಸಬಾರದು. ಅದರ ಜೊತೆಗೀಗ ನಾವು ಬೇರೊಂದು ಔಷಧಿಯನ್ನು ಕೊಡ್ತಿವಿ ಇದು ಸಾಧ್ಯವಾದಷ್ಟೂ ಬೇಗ ಹೃದಯಕ್ಕೆ ಆಗುತ್ತಿರುವಂತಹ ಆಯಾಸವನ್ನು ಪರಿಹರಿಸುವುದಕ್ಕೆ ಸಹಕಾರಿಯಾಗುತ್ತೆ. ಮಗುವಿಗಿನ್ನೂ ಚಿಕ್ಕ ವಯಸ್ಸಿರುವ ಕಾರಣ ಈಕೆಗೆ ಔಷಧಿ ನೀಡಿದ ನಂತರ ಮುಂದಿನ 24 ಘಂಟೆಗಳ ತನಕವೂ ನಿದ್ದೆಯಲ್ಲಿರ್ತಾಳೆ ಗಾಬರಿಯಾಗಬೇಡಿ. ನಾಳೆ ಮುಂಜಾನೆ ಮಗು ಎಚ್ಚರಗೊಂಡಾಗ ನಾವಿನ್ನೊಮ್ಮೆ ಪರೀಕ್ಷಿಸಾದ ನಂತರವೇ ಇಲ್ಲಿಂದ ತೆರಳುವುದು.

ಹರೀಶ ಕೈಮುಗಿದು......ಮುನಿಗಳೇ ನೀವೇ ನಮಗೆ ಆಸರೆ ನನ್ನ ತಂಗಿ ಮಗುವನ್ನು ಗುಣಪಡಿಸಿ.

ನಿಶಾ......ನನ್ನಿ ಫೆಂಡ್ ಪೂನಿ ಏನಾತು ಮಮ್ಮ ?

ಮುನಿವರ್ಯರು ಮುಗುಳ್ನಗುತ್ತ......ಇವಳು ನಿನ್ನ ಸ್ನೇಹಿತೆಯಾ ಕಂದ ಹಾಗಾದ್ರೆ ವಿಶೇಷ ಕಾಳಜಿವಹಿಸಿ ಉಪಚರಿಸಬೇಕಿದೆ.

ನೀತು.....ನನ್ನ ಮಗಳ ಮೊದಲನೇ ಸ್ನೇಹಿತೆ ಮುನಿಗಳೇ ಜೊತೆಗೆ ನನಗಿವಳು ನಾದಿನಿ ಆಗ್ಬೇಕು.

ಮುನಿವರ್ಯ.....ನಾಲ್ಕು ಗೋಡಂಬಿ...ಒಣದ್ರಾಕ್ಷಿ...ಒಣಖರ್ಜೂರ ಬಾದಾಮಿ....xxxx ಇವುಗಳನ್ನು ಹಾಲಿನಲ್ಲಿ ಚೆನ್ನಾಗಿ ಕುದಿಸಿ ಒಂದು ಲೋಟ ತರಿಸಮ್ಮ.

ನಿಧಿ ಕೂಡ ಅಲ್ಲಿಯೇ ಉಪಸ್ಥಿತಳಿದ್ದು ಅವಳಾಜ್ಞೆಯನುಸಾರವಾಗಿ ಕೆಲವೇ ನಿಮಿಷದಲ್ಲಿ ಹಾಲಿನ ಲೋಟ ಮುನಿವರ್ಯರ ಸಮಕ್ಷಮ ಹಾಜರಾಯಿತು. ಹಾಲಿನ ಜೊತೆ ಮೂರು ರೀತಿಯ ದ್ರವ್ಯ ಮಿಶ್ರಣ ಮಾಡಿದ ಮುನಿವರ್ಯರು ಒಂದೆರಡು ಪುಡಿಗಳನ್ನು ಹಾಕಿ ಅದನ್ನು ನಂದಿನಿ ಕೊಡುತ್ತ ಮಗುವಿಗೆ ಕುಡಿಸುವಂತೇಳಿದರು. ಮುನಿವರ್ಯ ಇದನ್ನೆಲ್ಲಾ ಮಾಡುತ್ತಿದ್ದರೆ ನಿಶಾ ಅವರನ್ನು ಸೇರಿಕೊಂಡೇ ನಿಂತಿದ್ದು ಎಲ್ಲವನ್ನೂ ಕುತೂಹಲ ಹಾಗು ಗೆಳತಿಯ ಮೇಲಿನ ಕಾಳಚಿಯಿಂದ ನೋಡುತ್ತಿದ್ದರೆ ಮುನಿವರ್ಯರು ಮುಗುಳ್ನಗುತ್ತಿದ್ದರು. ಪೂನಂ ಹಾಲನ್ನು ಕುಡಿದ ಕೆಲ ಹೊತ್ತಿನಲ್ಲೇ ನಿದ್ರೆಗೆ ಶರಣಾಗಿ ಮಲಗಿದಾಗ ಮುನಿವರ್ಯ ಅವಳ ನಾಡಿಬಡಿತ ಪರೀಕ್ಷಿಸಿ ನಾಳೆ ಏದ್ದಾಗ ತಾವು ಬಂದು ನೋಡುವುದಾಗೇಳಿ ಅಲ್ಲಿಂದ ಆಚಾರ್ಯರ ಬಳಿ ತೆರಳಿದರು

ನೀತು........ಚಿನ್ನಿ ನಡಿಯಮ್ಮ ಕಂದ ಪೂನಿಗೆ ಹುಷಾರಿಲ್ಲ ಅವಳು ತಾಚಿ ಮಾಡಲಿ ನೀನಿಲ್ಲೇ ಇದ್ದರೆ ಸುಮ್ಮನೆ ಗಲಾಟೆ ಮಾಡ್ತೀಯ.

ನಿಶಾ....ಇಲ್ಲ ಮಮ್ಮ ನಾನಿ ಬಲಲ್ಲ ನಾನಿ ಗಲಾಟಿ ಮಾಡಲ್ಲ ಮಮ್ಮ ಪೂನಿ ಏನಾತು ಮಮ್ಮ ?

ಹರೀಶ......ಪೂನಿಗೆ ಸ್ವಲ್ಪ ಹುಷಾರಿಲ್ಲ ಕಂದ ಅವಳು ನಿದ್ದೆ ಮಾಡಲಿ ನೀನು ಗಲಾಟೆ ಮಾಡದೆ ಸುಮ್ಮನೆ ಕೂತಿರ್ಬೇಕು.

ನಿಶಾ......ಆತು ಪಪ್ಪ ನಾನಿ ಗಲಾಟಿ ಮಾಡಲ್ಲ.

ನೀತು......ರೀ ಅತಿಥಿಗಳ ಜೊತೆ ನೀವೂ ಉದಯಪುರ ವೀಕ್ಷಣೆಗೆ ಹೋಗಿ ಬನ್ನಿ ನಾನಿಲ್ಲೇ ಇರ್ತೀನಿ.

ನಿಧಿ......ಅಮ್ಮ ನಾನೂ ಇರಲಾ ?

ಹರೀಶ.....ಬೇಡ ಕಣಮ್ಮ ನಿಮ್ಮಮ್ಮ ನಂದಿನಿ ಇರ್ತಾರೆ ನಡಿ ನಿನ್ನ ಸ್ನೇಹಿತೆಯರು ಮತ್ತವರ ಕುಟುಂಬ ಬಂದಿರುವಾಗ ನೀನಿಲ್ಲುಳಿದು ಅವರನ್ನು ಕಳಿಸುವುದು ಸರಿಯಲ್ಲ.

ನೀತು......ಹೌದಮ್ಮ ನಿಧಿ ಅತಿಥಿಗಳಾಗಿ ಬಂದಿರುವವರನ್ನು ನಾವು ವಿಚಾರಿಸಿಕೊಳ್ಳಬೇಕಾದದ್ದು ಕರ್ತವ್ಯ ಕಣಮ್ಮ.

ದಂಪತಿಗಳು ಹಿರಿಮಗಳ ಜೊತೆ ಹೊರಬಂದು ಪೂನಂ ಬಗ್ಗೆ ತಿಳಿಸಿದ್ರೆ ಮಗುವಿನ ಆರೋಗ್ಯ ಬೇಗ ಸುಧಾರಿಸಲೆಂದು ಎಲ್ಲರೂ ಹಾರೈಸಿದ್ರು

ಶೀಲಾ.....ನಾನು ಸುಕನ್ಯಾ ಎಲ್ಲಿಗೂ ಹೊಗ್ತಿಲ್ಲ ಕಣಮ್ಮ ಪುಟ್ಟವರನ್ನ ಕರೆದುಕೊಂಡು ಹೋಗಲಿಕ್ಕಾಗಲ್ಲ ಹೊರಗೆ ತುಂಬ ಬಿಸಿಲಿದೆ.

ಸುಕನ್ಯಾ......ಹೌದು ಅಕ್ಕ ಆಮೇಲೆ ಮಗುವಿಗೆ ಹೆಚ್ಚುಕಮ್ಮಿಯಾದ್ರೆ ಸುಮ್ಮನೆ ತೊಂದರೆ.

ನೀತುವಿನ ಜೊತೆ ಶೀಲಾ...ಸುಕನ್ಯಾ ಮತ್ತವರ ಮಕ್ಕಳು ಉಳಿದರೆ ರಜನಿ...ಸುಮ...ಅನುಷ...ಪ್ರೀತಿ...ಸವಿತಾ ಎಲ್ಲಾ ಮಹಿಳೆಯರ ಜೊತೆಗಿರುವುದಕ್ಕಾಗಿ ತೆರಳಿದರು. ವೆಂಕಟ್ ತಾನೂ ಇರುವುದಾಗಿ ಹೇಳಿದರೆ ಇಲ್ಲಿ ಮಾಡುವುದಕ್ಕೇನೂ ಕೆಲಸವಿಲ್ಲ ಪೂನಂ ಸದ್ಯಕ್ಕೀಗ ಮಲಗಿದ್ದಾಳೆಂದೇಳಿ ಹರೀಶ ಅವನನ್ನೂ ಕರೆದೊಯ್ದನು. ಪೂನಂ ಗಾಢವಾದ ನಿದ್ರೆಯಲ್ಲಿದ್ದರೆ ಆಪ್ತಗೆಳತಿಯ ಕೈಯನ್ನಿಡಿದು ಅವಳನ್ನೇ ನೋಡುತ್ತ ಕುಳಿತಿದ್ದ ನಿಶಾ ಕೆಲ ಹೊತ್ತಿನಲ್ಲೇ ಅವಳೊಂದಿಗೆ ತಾನೂ ಸಹ ನಿದ್ರೆಗೆ ಶರಣಾಗಿ ಮಲಗಿಬಿಟ್ಟಳು.

ನಂದಿನಿ......ಅತ್ತಿಗೆ ಹಿಂದಿನ ಜನ್ಮದಲ್ಲಿ ನಾನೇನೋ ಪುಣ್ಯ ಮಾಡಿದ್ದೆ ಅನಿಸುತ್ತೆ ಅದರ ಪ್ರತಿಫಲವಾಗಿ ಈ ಜನ್ಮದಲ್ಲಿ ನಮಗೆ ನಿಮ್ಮೆಲ್ಲರ ಶ್ರೀರಕ್ಷೆಯಲ್ಲಿ ಬದುಕುವ ಅವಕಾಶ ಲಭಿಸಿದೆ.

ನೀತು.....ಹಾಗ್ಯಾಕೆ ಅಂದ್ಕೊಳ್ತೀಯಾ ಆ ರೀತಿಯೇನೂ ತಿಳೀಬೇಡ.

ನಂದಿನಿ.....ಇಲ್ಲಾ ನಿಜವೇ ಹೇಳ್ತಿದ್ದೀನಿ ಇಲ್ಲಾವಿಗಿದ್ದಲ್ಲಿ ಅಲ್ನೋಡಿ ಈ ವಿಶಾಲ ಸಂಸ್ಥಾನದ ಯುವರಾಣಿ ನನ್ನ ಮಗಳನ್ನು ಸ್ನೇಹಿತೆಯ ರೂಪದಲ್ಲಿ ಸ್ವೀಕರಿಸುವುದು ಅವಳ ಸೌಭಾಗ್ಯವಲ್ಲವಾ ಅತ್ತಿಗೆ.

ನೀತು.....ನೀನೇನೇನೋ ಯೋಚಿಸಬೇಡ ಜೊತೆಗೆ ಪೂನಂ ತಲೆಗೆ ಇಲ್ಲದ್ದನ್ನೆಲ್ಲಾ ತುಂಬಿಬಿಡಬೇಡ. ಇವರಿಬ್ಬರ ಮನಸ್ಸು ನಿಶ್ಕಲ್ಮಶ ಕಣೆ ಅದು ಹಾಗೆಯೇ ಇವರ ಸ್ನೇಹ ಪ್ರೀತಿಯೊಂದಿಗೆ ಬೆಳೆಯುತ್ತಿರಬೇಕು. ನೀನು ಈಗಾಗಲೇ ಪೂನಂ ತಲಲಿ ಏನೇನೋ ತುಂಬಿದ್ದೀಯಂತ ಅನಿಸುತ್ತೆ ಅದಕ್ಕೆ ಪಾಪ ಅವಳು ನಮ್ಮನೇಲಿ ಯಾವುದಕ್ಕೂ ಹಕ್ಕೇ ಚಲಾಯಿಸುವುದಿಲ್ಲ ಏನನ್ನೂ ಬೇಕು ಅಂತ ಕೇಳೋದೇ ಇಲ್ಲಲ್ವಾ ಪಾಪ. ನಮ್ಮೆಜಮಾನರು ನಿನ್ನ ಬಾಯ್ಮಾತಿಗೆ ತಂಗಿ ಅಂತ ಸ್ವೀಕಾರ ಮಾಡಿಲ್ಲ ಕಣೆ ಮನಸ್ಸಿನಿಂದ ಸ್ವೀಕರಿಸಿದ್ದಾರೆ ಹಾಗಾಗಿ ಪೂನಂ ಮೇಲೆ ನಮಗೂ ಹಕ್ಕಿದೆಯಲ್ಲವಾ. ಆದರೆ ನೀನವಳಿಗೆ ಅಲ್ಲೇನೂ ಕೇಳ್ಬೇಡ....ಅವರೇನೇ ಹೇಳಿದ್ರೂ ಕೇಳ್ಬೇಕು ಅಂತ ಏನೇನೋ ಆ ಪುಟ್ಟ ಕಂದನ ತಲೆಯಲ್ಲಿ ತುಂಬಿದ್ದೀಯಲ್ಲ ಇದು ಸರಿಯಾ ?

ನಂದಿನಿ.......ಇಲ್ಲ ಅತ್ತಿಗೆ ನಾನೇನೂ ಹೇಳಿಕೊಟ್ಟಿಲ್ಲ ನನಗಿಂತಲೂ ಪೂನಂ ಮೇಲೆ ನಿಮಗೇ ಹಕ್ಕಿರೋದು. ನಾನವಳಿಗೆ ಜನ್ಮ ನೀಡಿದೆ ನಿಜ ಆದರೆ ಅವಳಿಗೆ ಪುನರ್ಜನ್ಮ ನೀಡಿದ್ದು ನೀವೇ ಅಲ್ವಾ. ಆದರೆ ಅತ್ತೆ ನಿಮ್ಮನ್ನು ಯಜಮಾನಿ... ಮೊಮ್ಮಗಳ ಪ್ರಾಣ ಉಳಿಸಿರುವ ದೇವತೆ ಎಂಬ ರೂಪದಲ್ಲಿ ನೋಡ್ತಾರೆ. ಅವರೇ ಪೂನಂ ನಿಮ್ಮನೇಲಿ ಹೇಗಿರಬೇಕೆಂದು ಅವಳಿಗೆ ಹೇಳಿಕೊಡ್ತಾರೆ.

ನೀತು.......ನಿಮ್ಮತ್ತೆ ಮಾವ ಬರಲಿ ನಾನೇ ಮಾತಾಡ್ತೀನಿ ಇಬ್ಬರೂ ಮಲಗಿದ್ದಾರೆ ನಾನು ಪಕ್ಕದ ರೂಮಿನಲ್ಲಿರ್ತೀನಿ ಚಿನ್ನಿ ಏದ್ದರೆ ನನಗೆ ಫೋನ್ ಮಾಡು.

ನೀತು ಅಲ್ಲಿಂದ ಗೆಳತಿಯರ ರೂಮಿಗೆ ಬಂದರೆ ಶೀಲಾ—ಸುಕನ್ಯಾ ತಮ್ಮ ಮಕ್ಕಳನ್ನು ಮಲಗಿಸಿ ಹರಟೆ ಹೊಡೆಯುತ್ತ ಕುಳಿತಿದ್ದು ನೀತು ಸಹ ಕೆಲಹೊತ್ತು ಅವರೊಂದಿಗೆ ಕುಳಿತಳು. ಸಂಸ್ಥಾನದ ಕಂಪನಿಯ ಬೋರ್ಡ್ ಮೆಂಬರ್ಸ್ ಬಂದಾಗ ಅಲ್ಲಿಂದ ತೆರಳಿದ ನೀತು ಅವರ ಜೊತೆಯಲ್ಲಿ ಕಂಪನಿಯ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದಳು.
* *
* *
ಇತ್ತ ಕುಟುಂಬದವರ ಜೊತೆ ಹರೀಶನ ಶಾಲಾ ಸಹೋದ್ಯೋಗಿಗಳ ಕುಟುಂಬಗಳು....ನಿಧಿ ಕಾಲೇಜಿನ ಪ್ರಿನ್ಸಿಪಾಲ್ ಫ್ಯಾಮಿಲಿ...ಅವಳ ಸ್ನೇಹಿತರ ಫ್ಯಾಮಿಲಿ.....ಕಾಲೋನಿಯಿಂದ ಬಂದಿದ್ದ ಕುಟುಂಬಗಳು ಮತ್ತು ಭಟ್ಟರ ಕುಟುಂಬದವರು ಉದಯಪುರದಲ್ಲಿನ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ತೆರಳಿದ್ದರು. 

ಇವರೊಂದಿಗೆ ಜಾನಿ...ಆರೀಫ್ ಹುಸೇನ್...ನಾಗೇಂದ್ರ...ಸುನಿಲ್ ಕೂಡ ಇದ್ದರೆ ವೀರೇಂದ್ರ ರಾಣಾ ಮತ್ತವನ ತಂಡದವರೊಂದಿಗಿದ್ದನು. ವಿಕ್ರಂ ಸಿಂಗ್ ಮೊದಲೇ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದು ಸೂರ್ಯವಂಶಿ ರಾಜಕುಮಾರಿ ಖುದ್ದು ಬಂದಿರುವುದಕ್ಕೆ ಅವಳನ್ನು ಗೌರವದಿಂದ ಎಲ್ಲ ಕಡೆಯೂ ಸ್ವಾಗತಿಸಲಾಗುತ್ತಿದ್ದು ಜೊತೆಗೆ ತಂದೆಯಾಗಿರುವ ಕಾರಣ ಹರೀಶನಿಗೆ ಸಕಲ ಮರ್ಯಾದೆ ದೊರೆಯುತ್ತಿತ್ತು. 

ಹೋದಲ್ಲಿ ಜನರು ಮಗಳಿಗೆ ಗೌರವ ಸಲ್ಲಿಸುತ್ತ ಸ್ವಾಗತಿಸುವುದನ್ನು ನೋಡಿ ಹರೀಶನ ಕಂಗಳಲ್ಲಿ ಕಂಬನಿ ಆನಂದಭಾಷ್ಪದ ರೂಪದಲ್ಲಿ ಜಿನುಗಿದ್ರೆ ರಜನಿ...ಸುಮ ಅವನನ್ನು ಸಂತೈಸುತ್ತಿದ್ದರು. ಕತ್ತಲಾಗುವವರೆಗೂ ಎಲ್ಲರೂ ಉದಯಪುರ ಸುತ್ತಾಡಿಕೊಂಡು ಅರಮನೆಗೆ ಹಿಂದಿರುಗಿ ಬಂದಾಗ ಹೊರಗಿನ ಅಂಗಳದಲ್ಲಿ ರಾಣಿಯ ಉಯ್ಯಾಲೆಯ ಮೇಲೆ ನೀತು ಕುಳಿತಿದ್ದರೆ ನಿಶಾ ಅಮ್ಮನ ಮಡಿಲಲ್ಲಿ ತಲೆಯಿಟ್ಟು ತುಂಬಾ ಸಪ್ಪಗೆ ಮಲಗಿದ್ದಳು.

ಅಶೋಕ.....ಏನಾಯ್ತು ನನ್ನ ಕಂದನಿಗೆ ? ಅಮ್ಮ ಬೈತಾ ಪುಟ್ಟಿ ?

ನೀತು......ನನಗೇನದೇ ಕೆಲಸವಾ ? ಪೂನಂ ಮಲಗಿದ್ದಾಳಲ್ಲ ಅದ್ಕೆ ಇವಳಿಗೆ ಬೇಸರವಾಗಿದೆ.

ನಯನ.....ಬಾರಮ್ಮ ಚಿನ್ನಿ ನಾವು ಆಟ ಆಡೋಣ.

ರಶ್ಮಿ.....ಬಾ ಚಿನ್ನಿ ಮರಿ ನಿನ್ನ ಆನೆ ಮೇಲೆ ಕೂರಿಸ್ತೀನಿ.

ನಿಶಾ....ನಾನಿ ಬರಲ್ಲ ಅಕ್ಕ.......ಎಂದೇಳಿ ಯಾರೇ ಕರೆದರೂ ಸಹ ಹೋಗದೆ ಅಮ್ಮನ ಮಡಿಲಲ್ಲೇ ಸೇರಿಕೊಂಡಳು.

ನೀತು......ಬಿಡಮ್ಮ ಇವತ್ತು ಬೇಸರದಲ್ಲಿದ್ದಾಳೆ ನಾಳೆ ಪೂನಿ ಏದ್ದಾಗ ತಾನೇ ಸರಿಹೋಗಿ ಕುಣಿದಾಡ್ತಾಳೆ. ಎಲ್ಲರೂ ಚೆನ್ನಾಗಿ ಸುತ್ತಾಡಿದ್ರಾ ?

ಸೋನಿ (ಪಕ್ಕದ ಮನೆ ಹುಡುಗಿ).........ಆಂಟಿ ತುಂಬ ಚೆನ್ನಾಗಿತ್ತು ನಿಮಗೆಷ್ಟು ಥಾಂಕ್ಸ್ ಹೇಳಿದರೂ ಸಾಲಲ್ಲ ನಮ್ಮನ್ನೆಲ್ಲಾ ಇಷ್ಟೊಂದು ಒಳ್ಳೆಯ ಟೂರಿಗೆ ಕರೆತಂದಿದ್ದಕ್ಕೆ ಥಾಂಕ್ಯೂ ಆಂಟಿ.

ಮೋನಿ.....ಹೌದು ಆಂಟಿ ತುಂಬ ತುಂಬ ಥಾಂಕ್ಸ್.

ಕೀರ್ತಿ (ಸುನಿಲ್ ಮಗಳು).......ಆಂಟಿ ನಾನೂ ಅಕ್ಕಂದಿರ ಜೊತೆಗೆ ತುಂಬಾನೇ ಏಂಜಾಯ್ ಮಾಡಿದೆ ಥಾಂಕ್ಯೂ ಆಂಟಿ.

ಸುಮ......ಮಕ್ಕಳು ಥಾಂಕ್ಸ್ ಹೇಳಬಾರದು ಕಣಮ್ಮ ನೀವೆಲ್ಲರೂ ಖುಷಿಯಾಗಿದ್ದೀರಲ್ಲ ನಮಗಷ್ಟೇ ಸಾಕು ಹೋಗಿ ಮಲಗಿಕೊಳ್ಳಿರಿ ಲೇಟಾಗಿದೆ. ನೀತು ನಾಳೆ ಪೂನಂ ಹುಷಾರಾಗಿರ್ತಾಳಲ್ಲವಾ ?

ನೀತು.....ಹೂಂ ಅತ್ತಿಗೆ ಮುನಿವರ್ಯರು ಹಾಗೇ ಹೇಳಿದ್ದಾರೆ.

ಎಲ್ಲರೂ ರಾತ್ರಿ ಊಟವನ್ನು ಒಟ್ಟಿಗೆ ಮುಗಿಸಿ ಮಲಗಲು ತೆರಳುವ ಮುಂಚೆ ಪೂನಂ ರೂಮಿಗೋಗಿ ಅವಳನ್ನು ನೋಡಿ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡರು. ನಿಶಾ ಮಾತ್ರ ಅಮ್ಮನನ್ನು ಒಂದು ಕ್ಷಣ ಕೂಡ ಬಿಟ್ಟಿರದೆ ಅವಳನ್ನೇ ಸೇರಿಕೊಂಡು ಮಲಗಿದರೆ ಗೆಳತಿಯರ ಜೊತೆ ನಿಕಿತಾಳನ್ನು ಬಿಟ್ಟು ನಿಧಿ ಕೂಡ ಅಪ್ಪ ಅಮ್ಮನ ಜೊತೆಗೇ ಮಲಗುತ್ತ ತಂಗಿಯನ್ನು ತನ್ನೊಂದಿಗೆ ಸೇರಿಸಿಕೊಂಡಳು.
* *
* *
ಮುಂಜಾನೆ ಪೂನಂ ಬೇಗನೆ ಎಚ್ಚರಗೊಂಡಿದ್ದು ಮುನಿವರ್ಯರು ಅವಳನ್ನು ಪರೀಕ್ಷಿಸಿ ನಾಡಿಬಡಿದ ನೋಡಿ ಸಂತುಷ್ಟರಾದರು.

ಮುನಿವರ್ಯ......ಮಗಳೇ ನೀತು ಮಗುವಿನ ಆರೋಗ್ಯ ಸಾಕಷ್ಟು ಸುಧಾರಿಸಿದೆ ಹೃದಯದ ಬಡಿತವೂ ಸಾಮಾನ್ಯವಾಗಿದೆ ಈಗೇನೂ ಭಯಪಡುವ ಅವಶ್ಯಕತೆಯಿಲ್ಲ. ಭಾಸ್ಕರ್ ಕೊಟ್ಟಿರುವ ಔಷಧಿ ಪ್ರತಿದಿನವೂ ಮರೆಯದೆ ನೀಡುತ್ತಿರಿ ಒಂದು ತಿಂಗಳಿನಲ್ಲಿ ಮಗು ಎಲ್ಲರಂತೆ ಸಾಮಾನ್ಯಳಾಗಿ ಹೋಗ್ತಾಳೆ. ಒಂದು ತಿಂಗಳಿನ ನಂತರ ನಾವೇ ಖುದ್ದಾಗಿ ಬಂದು ಮಗುವನ್ನು ಪರೀಕ್ಷಿಸುತ್ತೇವೆ.

ನಂದಿನ ಅವರ ಕಾಲಿಗೆ ಬಿದ್ದು ಧನ್ಯವಾದ ಸಲ್ಲಿಸಿದರೆ ಮುನಿವರ್ಯ ಅವಳ ತಲೆ ನೆವರಿಸಿ ಮಗುವನ್ನು ಕರೆದೊಯ್ಯುವಂತೆ ಕಳಿಸಿದರು. ಮುನಿವರ್ಯರ ಜೊತೆ ನೀತು..ಸುಮ ಮಾತನಾಡುತ್ತಿದ್ದರೆ ವೆಂಕಟ್ ಸಹ ಅಲ್ಲೇ ಉಪಸ್ಥಿತನಿದ್ದನು. ಅಮ್ಮನಿಂದ ಸ್ನಾನ ಮಾಡಿಸಿಕೊಂಡು ಬಂದ ಪೂನಂ ಅಮ್ಮನ ಬಳಿ ಹೊಟ್ಟೆ ಹಸಿಯುತ್ತಿದೆ ಎಂದಾಗ.....

ಮುನಿವರ್ಯ......ಕಳೆದ 24 ಘಂಟೆಗಳಿಂದಲೂ ಮಗುವಿಗ್ಯಾವುದೇ ಆಹಾರ ನೀಡಿಲ್ಲವಲ್ಲ. ಔಷಧಿಯ ಪ್ರಭಾವ ಈಗಲೂ ಇರುವುದಕ್ಕೆ ಮೊದಲು ಹಾಲು ಮತ್ತು ಹಣ್ಣು ತಿನ್ನಲು ಕೊಡಮ್ಮ ಒಂದು ಘಂಟೆ ನಂತರದಿಂದ ಸಾಮಾನ್ಯವಾದ ಆಹಾರ ಸೇವಿಸಲಿ.

ನೀತು ಅರಮನೆ ಪರಿಚಾರಕಿಯರಿಗೆ ಏನು ತರಬೇಕೆಂದೇಳಿದ ಬಳಿಕ ಆಚಾರ್ಯರು ಮತ್ತು ಮುನಿವರ್ಯರ ಜೊತೆ ಆಯುರ್ವೇದದ ಔಷಧಾಲಯದ ಬಗ್ಗೆ ಚರ್ಚಿಸುವಾಗಲೂ ಸುಮ ಜೊತೆಯಲ್ಲಿದ್ದಳು. ಎಲ್ಲವನ್ನೂ ಚರ್ಚಿಸಿದ ನಂತರ ಗುರುಗಳೆಲ್ಲರೂ ಹೊರಟಾಗ ನೀತು ಸುಮ ಇಬ್ಬರೂ ಅವರನ್ನು ಗೌರವದಿಂದ ರಕ್ಷಕರ ಜೊತೆಯಲ್ಲಿ ಕಳುಹಿಸಿಕೊಟ್ಟರು. 

ಹಾಲು ಹಣ್ಣು ಸೇವಿಸಿ ನಿಶಾಳ ರೂಮಿಗೋಡಿ ಬಂದ ಪೂನಂಳನ್ನೆತ್ತಿಕೊಂಡು ಹರೀಶ—ನಿಧಿ ಮುದ್ದಾಡಿ ಹಾಸಿಗೆಯ ಮೇಲೆ ಬಿಟ್ಟರು. ನಿಶಾಳನ್ನು ಅಳ್ಳಾಡಿಸಿ ಎಚ್ಚರಿಸಿದಾಗ ಕಣ್ಣುಗಳನ್ನು ಉಜ್ಜಿಕೊಳ್ಳುತ್ತ ಇದ್ಯಾರಪ್ಪ ನನ್ನನ್ನು ಏಬ್ಬಿಸಿದವರೆಂದು ನೋಡಿದರೆ ಗೆಳತಿ ಕುಳಿತಿರುವುದನ್ನು ಕಂಡು ಖುಷಿಯಾಗಿ ಹೋದ ನಿಶಾ ತಕ್ಷಣ ಅವಳನ್ನು ಬಿಗಿಯಾಗಿ ತಬ್ಬಿಕೊಂಡಳು. 

ಪ್ರೀತಿ ಒಳಬಂದು ನಿಶಾಳಿಗೆ ಸ್ನಾನ ಮಾಡಿಸಿ ರೆಡಿ ಮಾಡಿದಾಗ ಗೆಳತಿಯ ಕೈಯನ್ನಿಡಿದ ನಿಶಾ ಅರಮನೆಯಂಗಳಕ್ಕೆ ಬಂದು ಅಲ್ಲಿಂದ ಬೇಟೆ ನಾಯಿಗಳಿರುವ ಕಡೆ ತೆರಳಿದರೆ ವೀರ್ ಸಿಂಗ್ ರಕ್ಷಣೆಗೆ ಹಿಂದೆಯೇ ಇದ್ದನು. ಅಷ್ಷಷ್ಟು ದೊಡ್ಡದಾದ ನಾಯಿಗಳನ್ನು ಕಂಡು ಪೂನಂ ಹೆದರಿಕೊಳ್ಳುತ್ತ ನಿಶಾಳ ಕೈಯನ್ನು ಭಧ್ರವಾಗಿ ಹಿಡಿದುಕೊಂಡಿದ್ದರೆ ಮನೆಯವರು ಹಾಗಲ್ಲಿಗೆ ಬಂದಿದ್ದ ಅತಿಥಿಗಳೂ ಹೊರಬಂದು ಇತ್ತಲೇ ನೋಡುತ್ತ ನಾಯಿಗಳ ಹತ್ತಿರ ಹೋಗದಂತೆ ಕೂಗುತ್ತಿದ್ದರು.

ನಿಧಿ.....ಪ್ರಿನ್ಸಿ ಸರ್ ಏನೂ ಮಾಡಲ್ಲ ಅವು ನಮ್ಮ ಮೇಲೆ ಬೇಕಿದ್ದರೆ ಬೊಗಳಬಹುದು ಆದರೆ ನನ್ನ ತಂಗಿ ಹೇಳಿದಂತೆ ಕೇಳುತ್ವೆ ನೋಡಿ.

ನಿಶಾ ಹತ್ತಿರಕ್ಕೆ ತೆರಳಿ ಬೆರಳು ತೋರಿಸಿದಾಕ್ಷಣ ಬೊಗಳುತ್ತಿದ್ದ ಎಲ್ಲ ನಾಯಿಗಳು ಗಪ್ ಚುಪ್ಪಾಗಿ ಕುಳಿತುಬಿಟ್ಟವು.

ನಿಶಾ......ಬಾ ಪೂನಿ ಏನಿ ಮಾಡಲ್ಲ ಇದಿ ನನ್ನಿ ಫೆಂಡ್ ಬಾ ಏಯ್ ಟಾಮಿ ಇದಿ ನನ್ನಿ ಫೆಂಡ್ ಪೂನಿ ಬೌ ಬೌ ಅಂದಿ ಏಟ್ ಕೊತೀನಿ.

ನಿಶಾ ನಾಯಿಗಳ ತಲೆ ನೇವರಿಸಿ ಮಾತನಾಡಿಸುತ್ತಿದ್ದರೆ ಪೂನಂಳ ಭಯವಿನ್ನೂ ಹೋಗಿರದೆ ನಿಶಾಳ ಹಿಂದಿಂದೆಯೇ ನಿಂತಿದ್ದಳು.

ನೀತು......ಚಿನ್ನಿ ಸಾಕು ಬಾರಮ್ಮ ಕಂದ ಪೂನಿ ಹೆದರಿಕೊಳ್ತಿದ್ದಾಳೆ.

ನಿಶಾ......ಆತು ಮಮ್ಮ ಬಾ ಪೂನಿ.

ಮುಖ್ಯೋಪಾಧ್ಯಾಯರ ಮಡದಿ.......ಅಲ್ಲಾ ನೀತು ನೀನದೆಷ್ಟು ಧೈರ್ಯದಿಂದ ಮಗಳೊಬ್ಬಳನ್ನೆ ಇಷ್ಟು ಭಯಂಕರವಾದ ನಾಯಿಗಳ ಹತ್ತಿರಕ್ಕೋಗಲು ಬಿಟ್ಟೆ.

ನೀತು.....ನೀವೇ ನೋಡ್ತಿದ್ರಲ್ಲ ಅವುಗಳಲ್ಲಿ ಯಾವುದಾದರೊಂದು ನಾಯಿ ನಿಶಾಳನ್ನು ನೋಡಿ ಬೊಗಳಿದ್ವಾ ? ಯಾವುದೇ ಪ್ರಾಣಿಗಳೇ ಆಗಿರಲಿ ನನ್ನ ಮಗಳ ಹತ್ತಿರ ಬಂದಾಕ್ಷಣ ಅವಳೇ ನಮ್ಮ ಒಡತಿ ಎಂಬ ರೀತಿ ವರ್ತಿಸಿ ಪ್ರೀತಿಸುತ್ವೆ. ಮೈಸೂರ್ ಝೂನಲ್ಲಿ ಹುಲಿ ಸಿಂಹ ಇವುಗಳೇ ನನ್ನ ಮಗಳು ಬೆರಳು ತೋರಿದಾಗ ಸೈಲೆಂಟಾಗಿ ಇವಳನ್ನೆ ನೋಡುತ್ತ ಕುಳಿತುಬಿಟ್ಟಿದ್ವು ಗೊತ್ತ.

ನಿಶಾ ನೇರವಾಗಿ ಅಕ್ಕನ ಬಳಿಗೋಡಿ ಅವಳಿಗೆ ಕುದುರೆ ತೋರಿಸುತ್ತ ತಮ್ಮಿಬ್ಬರನ್ನು ರೌಂಡ್ ಕರೆದುಕೊಂಡು ಹೋಗುವಂತೆ ಕೇಳಿದಳು.

ದೀಪಾ......ನಿಧಿ ನಿಂಗೆ ಕುದುರೆ ಓಡಿಸೋಕೂ ಬರುತ್ತಾ ?

ಧೀಕ್ಷಾ.....ಲೇ ಕೋತಿ ಅವಳು ಯುವರಾಣಿ ಅಲ್ವೇನೇ ಕುದುರೆಯ ಸವಾರಿ ಮಾಡುವುದು ಅವಳ ರಕ್ತದಲ್ಲೇ ಬಂದಿರುತ್ತೆ.

ನಿಕಿತಾ.......ಅಕ್ಕ ಕುದುರೆ ಓಡಿಸೋದನ್ನು ನೋಡಿದ್ರೆ ನೀವು ಅಕ್ಕನ ಹಿಂದೆ ಯಾವತ್ತೂ ಕೂರಲ್ಲ.

ಕುಸುಮ.....ಯಾಕೆ ?

ನಿಕಿತಾ.....ನೋಡಿ ಗೊತ್ತಾಗುತ್ತೆ.

ರಕ್ಷಕನೊಬ್ಬ ಎರಡು ಬಲಿಷ್ಟವಾಗಿ ಎತ್ತರವಿದ್ದ ಕುದುರೆಗಳನ್ನು ಕರೆ ತಂದಾಗ ಅಕ್ಕನಿಗಿಂತ ಮುಂಚೆ ನಿಶಾ ಅವುಗಳ ಹತ್ತಿರಕ್ಕೋಡಿ ಕೆಳಗೆ ಬಗ್ಗುವಂತೆ ಸನ್ನೆ ಮಾಡುತ್ತ ಕುದುರೆಗಳ ತಲೆ ಕತ್ತು ಸವರಿ ತನ್ನನ್ನು ಅವುಗಳಿಗೆ ಪರಿಚಯಿಸಿಕೊಂಡಳು. ತಂಗಿಯಾಟ ನೋಡಿ ನಿಧಿ ಸಹ ಅದೇ ಅನುಸರಿಸುತ್ತ ಪೂನಂ ಕೈನಿಂದಲೂ ಕುದುರೆಗಳನ್ನು ಸವರಿಸಿ ಸ್ನೇಹ ಮಾಡಿಸಿದಳು. 

ಸುಭಾಷ್ ಹತ್ತಿರ ಬಂದು ತಾನೊಂದು ಕುದುರೆ ಜೊತೆ ಸ್ನೇಹ ಬೆಳಸಿ ಏರಿಕೊಂಡು ಪೂನಂಳನ್ನು ತನ್ನ ಮುಂದೆ ಕೂರಿಸಿಕೊಂಡರೆ ನಿಶಾ ಅಕ್ಕನ ಜೊತೆ ಕುಳಿತು ಅರಮನೆಯ ಸುತ್ತ ರೌಂಡ್ ಹೊಡೆಯತೊಡಗಿದಳು. ಕುದುರೆಗಳು ನಿಧಾನ ಗತಿಯಲ್ಲಿ ಸಾಗುತ್ತಿರುವುದು ನಿಶಾಳಿಗೆ ಇಷ್ಟವಾಗದೆ ಜೋರಾಗಿ..ಜೋರಾಗಿ ಹೋಗುವಂತೆ ಅಕ್ಕನನ್ನು ಪೀಡಿಸತೊಡಗಿದಳು. ಒಂದು ಸುತ್ತು ಸುತ್ತಿ ಬಂದ್ಮೇಲೆ ನಿಧಿ ತಂಗಿಯಾಸೆಯಂತೆ ಕುದುರೆಯನ್ನು ಶರವೇಗದಲ್ಲಿ ಮುಂದಕ್ಕೋಡಿಸಿದರೆ ನಿಶಾ ಖುಷಿಯಿಂದ ಜೋರಾಗಿ ಕಿರುಚುತ್ತಾ ಕೂಗಾಡುತ್ತಿದ್ದಳು.

ಭಟ್ಟರು.....ಮಗು ಹೆದರಿಕೊಳ್ತಿದೆ ಅನಿಸುತ್ತೆ ಕಣಮ್ಮ ನಿಧಾನವಾಗಿ ಹೋಗುವಂತೆ ಹೇಳ್ಬೇಕಿತ್ತು.

ಹರೀಶ......ಹಾಗೇನಿಲ್ಲ ಭಟ್ಟರೆ ಅವಳು ಖುಷಿಯಾಗಿ ಕಿರುಚಾಡ್ತಾ ಇರೋದು ಬಂದಾಗ ನೋಡಿ.

ಅರಮನೆಯನ್ನು ಎರಡು ರೌಂಡ್ ಶರವೇಗದಲ್ಲಿ ಕುದುರೆ ಸವಾರಿ ಮಾಡಿ ಫುಲ್ ಖುಷಿಯಾಗಿದ್ದ ನಿಶಾ ನಿಲ್ಲಿಸುವ ಮುಂಚೆ ಕುದುರೆಯ ಮುಂಗಾಲುಗಳನ್ನು ಮೇಲಕ್ಕೆತ್ತಿದಾಗ ಇನ್ನೂ ಜೋರಾಗಿ ಕಿರುಚಾಡಿ ತನ್ನ ಸಂತೋಷ ತೋರ್ಪಡಿಸುತ್ತಿದ್ದಳುˌ

ನಿಕಿತಾ.....ಹೇಗೆ ಈ ಸ್ಪೀಡಲ್ಲಿ ಅಕ್ಕನ ಹಿಂದೆ ಕುಳಿತು ಒಂದು ರೌಂಡ್ ಹೋಗ್ತೀರಾ ?

ಪ್ರಿಯಾ......ಬೇಡ ಕಣಮ್ಮ ನೋಡ್ತಿದ್ರೆ ಜೀವ ಬಾಯಿಗೆ ಬರ್ತಿದೆ.

ಸುಭಾಷ್.....ಕುದುರೆಯ ಮೇಲೆ ಹಿಡಿತ ಚೆನ್ನಾಗಿದೆ ಕಣಮ್ಮ ನಿಧಿ.

ನಿಧಿ.....ನೀವೂ ಏನ್ ಕಡಿಮೆಯಿಲ್ಲ ಅಣ್ಣ ಕುದುರೆಯ ಜೊತೆಗ್ಯಾವ ರೀತಿ ಸ್ನೇಹ ಬೆಳೆಸಿಕೊಳ್ಳಬೇಕೆಂದು ನಿಮಗೂ ಚೆನ್ನಾಗಿ ಗೊತ್ತಿದೆ ಬನ್ನಿ ಒಂದು ರೇಸ್ ಹೋಗಿಬರೋಣ.

ಸುಮ......ಈಗ ಟೈಮಾಗಿದೆ ನಾವು ಹೊರಡಬೇಕು ಬಂದ ಮೇಲೆ ಅಣ್ಣತಂಗಿ ಎಷ್ಟಾದ್ರೂ ರೇಸ್ ಹಾಕುವಿರಂತೆ ಈಗ ನಡೀರಿ.

ಆ ದಿನವೂ ಉದಯಪುರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುತ್ತ ಸಾಗಿದರೆ ಈ ದಿನ ಪೂನಂ ಇದ್ದುದರಿಂದ ನಿಶಾ ಕೂಡ ತುಂಬಾನೇ ಜೋಶಿನಲ್ಲಿ ಕೈ ಹಿಡಿದು ಸುತ್ತಾಡುತ್ತಿದ್ದಳು. ರಾತ್ರಿ ಅರಮನೆಗೆ ಹಿಂದಿರುಗಿ ಅಲ್ಲಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿ ನಾಲ್ಕು ದಿನಗಳ ಕಾಲ ಜೈಪುರ...ಪುಷ್ಕರ್....ಜೋಧ್ಪುರ ಎಲ್ಲವನ್ನೂ ವೀಕ್ಷಿಸಿಕೊಂಡು ಜೈಸಲ್ಮೇರ್ ಅರಮನೆಗೆ ತಲುಪಿದರು. 

1 comment:

  1. Aramaneyali yaradadru ding dong aguthe antha kaitha eduve..

    ReplyDelete