Total Pageviews

Monday, 10 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 277

ನೀತು ನಿಧಿ ಪಾವನ ಮತ್ತು ವಿಕ್ರಂ ಸಿಂಗ್ ಜೊತೆ ಸಂಸ್ಥಾನದ ಕಂಪನಿ ಮುಖ್ಯ ಕಛೇರಿಗೆ ತೆರಳಿ ಅಲ್ಲಿನ ಬೋರ್ಡ್ ಸದಸ್ಯರ ಜೊತೆಯಲ್ಲಿ ಮಾತುಕತೆ ಮುಗಿಸಿ ಅರಮನೆಗೆ ಹಿಂದಿರುಗಿದಳು. ತಿಂಡಿ ಮುಗಿಸಿದ ನಂತರದಿಂದಲೂ ಅರಮನೆಯ ವಿಶಾಲವಾದ ಮೈದಾನದಲ್ಲಿರುವ ನಾಯಿಗಳು.... ಕುದುರೆಗಳು.... ಆನೆಗಳ ಜೊತೆಆಡುತ್ತ ಅವುಗಳ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ ನಿಶಾ ಅಪ್ಪ....ಆಂಟಿ ಮತ್ತು ರಜನಿ ಮಮ್ಮನಿಗೆ ಕೈಬೀಸುತ್ತ ತನ್ನದೇ ಲೋಕದಲ್ಲಿದ್ದಳು. ನಿಶಾಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ವೀರ್ ಸಿಂಗ್ ಹೆಗಲಿಗೇರಿತ್ತು. ಅಮ್ಮ ಮಗಳಿಬ್ಬರು ಹಿಂದಿರುಗಿದಾಗ.......

ನೀತು.....ಇವಳಗೆ ಪ್ರಾಣಿಗಳಿದ್ದರೆ ನಮ್ಮ ನೆನಪೇ ಆಗಲ್ಲವಾ ಚಿನ್ನಿ ಬಾರಮ್ಮ ಕಂದ ಬಿಸಿಲು ಜಾಸ್ತಿಯಿದೆ ಸಂಜೆ ಆಡುವಂತೆ.

ರಾಣಾ ಜೊತೆ ಕುದುರೆ ಮೇಲೆ ಕುಳಿತಿದ್ದ ನಿಶಾ.....ಮಮ್ಮ ನಾನಿ ಚೊಪ್ಪ ಆಟ ಆತೀನಿ ಮಮ್ಮ ಪೀಚ್....

ನಿಧಿ.....ರಾಣಾ ನೀವು ಕೆಳಗಿಳಿಯಿರಿ ಸ್ವಲ್ಪ ಹೊತ್ತು ತಂಗಿಯ ಜೊತೆ ನಾನು ಕುದುರೆಯ ಸವಾರಿ ಮಾಡುವೆ.

ರಾಣಾ....ಆಜ್ಞೆ ರಾಜಕುಮಾರಿ.

ನಿಧಿ ಮೊದಲಿಗೆ ಕುದುರೆಯ ಮುಖ..ಕತ್ತು ಸವರುತ್ತ ತನ್ನನ್ನು ಅದಕ್ಕೆ ಪರಿಚಯಿಸಿಕೊಳ್ಳುತ್ತ ಅದರೊಂದಿಗೆ ಸ್ನೇಹ ಬೆಳೆಸುತ್ತಿದ್ದರೆ ಕುದುರೆ ಮೇಲೆ ಕುಳಿತಿದ್ದ ನಿಶಾ ಅಕ್ಕ ಮಾಡುವುದನ್ನೆಲ್ಲಾ ಗಮನದಿಂದಲೇ ನೋಡಿಕೊಳ್ಳುತ್ತಿದ್ದಳು. ಹರೀಶ ಹೆಂಡತಿಯ ಪಕ್ಕದಲ್ಲಿ ನಿಂತು ತನ್ನ ಇಬ್ಬರು ಮಕ್ಕಳು ಕುದುರೆ ಸವಾರಿ ಮಾಡುವುದನ್ನು ನೋಡುವುದಕ್ಕೆ ಕಾತುರನಾಗಿದ್ದನು. ಕುದುರೆಯ ಮೇಲೇರಿದ ನಿಧಿ ಮೊದಲು ತನ್ನ ವೇಲಿನಿಂದ ತಂಗಿ ಬೀಳದಿರುವಂತೆ ಸೇರಿಸಿ ಕಟ್ಟಿಕೊಂಡು ಕುದುರೆ ಲಗಾಮನ್ನು ಹಿಡಿದಳು.

ಹರೀಶ.......ಜಾಸ್ತಿ ಸ್ಪೀಡಾಗಿ ಹೋಗಬೇಡ ಕಣಮ್ಮ.

ನಿಧಿ......ನೋಡೋಣ ಅಪ್ಪ ನನ್ನ ತಂಗಿ ಹೆದರಿಕೊಳ್ತಾಳೋ ಅಥವ ಅಮ್ಮನ ರೀತಿ ಧೈರ್ಯವಾಗಿ ಇರ್ತಾಳೋ ಅಂತ.

ಅತ್ಯಂತ ಬಲಿಷ್ಟವಾದ ಕುದುರೆಯ ಮೇಲೆ ಅಕ್ಕತಂಗಿ ಸವಾರರಾಗಿದ್ರೆ ಅವರಿಬ್ಬರ ಕುದುರೆ ಸವಾರಿ ನೋಡಲು ನೀತು... ಹರೀಶ... ಅನುಷ.. ರಜನಿ... ಪಾವನಾ... ರಾಣಾ... ವೀರ್ ಸಿಂಗ್.... ಸುಮೇರ್ ಸಿಂಗ್ ಮತ್ತು ವಿಕ್ರಂ ಸಾಂಗ್ ಕಾಯುತ್ತಿದ್ದರು. ನಿಧಿ ಕೈಯಲ್ಲಿಡಿದ ಲಗಾಮು ಜಗ್ಗಿದಾಗ ಮುಂದಕ್ಕೋಡಲು ಪ್ರಾರಂಭಿಸಿದ ಕುದುರೆ ಕ್ಷಣದಲ್ಲಿಯೇ ಶರವೇಗ ಪಡೆದುಕೊಂಡು ಅರಮನೆಯ ವಿಶಾಲ ಮೈದಾನವನ್ನು ಪ್ರದಕ್ಷಿಣೆ ಮಾಡತೊಡಗಿತು. ತಂಗಿಯನ್ನು ಮುಂದೆ ಕೂರಿಸಿಕೊಂಡು ಅತ್ಯಂತ ವೇಗದಲ್ಲಿ ಕುದುರೆಯ ಸವಾರಿ ಮಾಡುತ್ತಿದ್ದ ನಿಧಿ ಆಗಾಗ ತಂಗಿಯನ್ನೂ ಗಮನಿಸಿಕೊಳ್ಳುತ್ತಿದ್ದಳು. 

ಮೊದಮೊದಲಿಗೆ ತುಂಬ ಹೆದರಿ ಚೀರಿಕೊಳ್ಳುತ್ತಿದ್ದ ನಿಶಾ ಕ್ರಮೇಣ ಅವಳಲ್ಲಿ ಹರಿಯುತ್ತಿರುವ ರಜಪೂತ ರಾಜವಂಶಸ್ಥರ ರಕ್ತದ ಪರಿಣಾಮವೆಂಬರತೆ ಅವಳಲ್ಲಿನ ಭಯ ಮಾಯವಾಗಿ ಸಂತೋಷದಿಂದ ಕಿರುಚಿ ಕೂಗಾಡುತ್ತ ಫುಲ್ ಏಂಜಾಯ್ ಮಾಡುತ್ತಿದ್ದಳು. ಅರಮನೆಯನ್ನು ಎರಡು ಸುತ್ತು ಸುತ್ತಿ ಅಮ್ಮನ ಮುಂದೆ ಕುದುರೆಯನ್ನು ನಿಲ್ಲಿಸಿದಾಗ ಅದು ಜೋರಾಗಿ ಕೆನೆಯುತ್ತ ಮುಂದಿನೆರಡು ಕಾಲುಗಳನ್ನೆತ್ತಿತು. ನೀತು...ಹರೀಶ ಮತ್ತಿತರರು ಅದನ್ನೋಡಿ ಗಾಬರಿಯಾದರೆ ಕುದುರೆ ಬಗ್ಗೆ ತಿಳಿದಿರುವ ರಕ್ಷಕರು ಕುದುರೆ ರಾಜಕುಮಾರಿಯರನ್ನು ತನ್ನ ಒಡತಿಯರನ್ನಾಗಿ ಸ್ವೀಕರಿಸಿದೆ ಎಂಬುದರ ಸೂಚನೆ ಎಂದರು. ನಿಶಾಳಿಗಂತೂ ತುಂಬಾ ಖುಷಿಯಾಗಿದ್ದು ಚಪ್ಪಾಳೆ ತಟ್ಟುತ್ತ ಕುದುರೆಯಿಂದಿಳಿದು ಅಮ್ಮನಿಗೆ ತಾನು ಅಕ್ಕನ ಜೊತೆಯಲ್ಲೇಗೆ ರೌಂಡ್ ಹೊಡೆದೆನೆಂಬುದನ್ನು ತನ್ನ ತೊದಲು ನುಡಿಗಳಲ್ಲಿ ಹೇಳತೊಡಗಿದಳು.

ಹರೀಶ......ನೀನು ಹೋಗುತ್ತಿದ್ದ ವೇಗಕ್ಕೆ ನನಗೆ ಜೀವವೇ ಬಾಯಿಗೆ ಬಂದಂತಾಗಿ ಹೋಗಿತ್ತು ಕಣಮ್ಮ.

ನಿಧಿ ಅಪ್ಪನನ್ನು ತಬ್ಬಿಕೊಂಡು.......ನಾನೂ ಅಪ್ಪನ ಮುಂದೆ ಚಿನ್ನಿ ವಯಸ್ಸಿನಲ್ಲಾದ್ದಾಗ ಕುದುರೆಯ ಸವಾರಿ ಮಾಡ್ತಿದ್ದೆ ಅದಕ್ಕೆ ಚಿನ್ನೀನ ನಾನೇ ಕೂರಿಸಿಕೊಂಡು ರೌಂಡ್ ಹೋಗಿದ್ದು.

ಅನುಷಾಳ ಕುತ್ತಿಗೆಗೆ ನೇತಾಕಿಕೊಂಡ ನಿಶಾ.....ಆಂಟಿ ನನ್ನಿ ಹೊಟ್ಟಿ ಹಸೀತು ಊಟ ಬೇಕು.

ಅನುಷ......ನಡಿಯಮ್ಮ ಕಂದ ಮೊದಲು ಊಟ ಮಾಡಿ ಆಮೇಲೆ ಆಟ ಆಡುವಿಯಂತೆ.

ನಿಶಾ ಫ್ರೆಶಾಗಿ ಬರುವಷ್ಟರಲ್ಲಿ ಎಲ್ಲರೂ ಡೈನಿಂಗ್ ಟೇಬಲ್ಲಿನ ಸುತ್ತ ಕುಳಿತು ಅವಳಿಗಾಗಿ ಕಾಯುತ್ತಿದ್ದರು.

ಹರೀಶ......ರಾಣಾ ನೀವೂ ನಮ್ಜೊತೆ ಊಟಕ್ಕೆ ಕುಳಿತಿಕೊಳ್ಳಿ.

ರಾಣಾ......ಕ್ಷಮಿಸಿ ಸರ್ ಹೊರಗೆ ಅಥವ ನಿಮ್ಮೂರಿನಲ್ಲಾಗಿದ್ದರೆ ನಾವೂ ನಿಮ್ಜೊತೆ ಕುಳಿತುಕೊಳ್ಳುತ್ತಿದ್ದೆವು. ಆದರೆ ಅರಮನೆಯಲ್ಲಿ ಒಂದು ಪರಂಪರೆ ಇರುತ್ತದೆ ಅದನ್ಯಾವ ಕಾರಣಕ್ಕೂ ಮುರಿಯುವ ಹಾಗಿಲ್ಲ ನೀವು ಊಟ ಮಾಡಿ ನಾವೆಲ್ಲ ಹೊರಗೆ ಮಾಡ್ತೀವಿ.

ನಿಶಾ ಚೇರಿನಿಂದ ಡೈನಿಂಗ್ ಟೇಬಲ್ ಮೇಲೇರಿ ಅಪ್ಪನ ಮುಂದೆ ಪಟ್ಟಾಗಿ ಕುಳಿತಾಗ ಇವರಿಗೆ ಊಟ ಬಡಿಸುತ್ತಿದ್ದ 55 ವರ್ಷದ ಅರಮನೆಯ ಪರಿಚಾರಕಿ ಮುಗುಳ್ನಗುತ್ತ... ಹಿರಿಯ ರಾಜಕುಮಾರಿ ಕೂಡ ಇದರ ಮೇಲೇ ಕುಳಿತು ಊಟ ಮಾಡುತ್ತಿದ್ದರು. ಮಹರಾಣಿ ಕೆಳಗಿಳಿ ಅಂದಾಗ ಮಹರಾಜರೇ ಮಗಳಿಗೆ ಉತ್ತೇಜನ ನೀಡುತ್ತಾ ಇವರನ್ನು ಇಲ್ಲಿಯೇ ಕೂರಿಸಿಕೊಂಡು ತಾವೇ ಊಟ ಮಾಡಿಸ್ತಿದ್ದರು. ಇವತ್ತು ಇಲ್ಲಿ ಅದೇ ಪುನಾರಾರ್ವತನೆ ಆಗುತ್ತಿದೆ ಆದರೆ ಹಿರಿಯ ರಾಜಕುಮಾರಿಯವರ ಬದಲಿಗೆ ಕಿರಿಯವರು ಕುಳಿತು ತಂದೆಯಿಂದ ಕೈತುತ್ತು ತಿನ್ನಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಕ್ಷಮಿಸಿ ನಾನು ತುಂಬ ಜಾಸ್ತಿ ಮಾತನಾಡಿ ಬಿಟ್ಟೆ.

ನೀತು ನಗುತ್ತ.......ಇಲ್ಲ ನೀವೇನೂ ಜಾಸ್ತಿ ಮಾತನಾಡಲಿಲ್ಲ ಸಂಜೆ ಉದ್ಯಾನದಲ್ಲಿ ನನ್ನನ್ನು ಬೇಟಿಯಾಗಿ ಜೊತೆಗೆ ನಿಮ್ಮಂತಯೇ ಬಹಳ ವರ್ಷಗಳಿಂದ ಅರಮನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಇರುತ್ತಾರಲ್ಲ ಅವರನ್ನೂ ನಿಮ್ಜೊತೆ ಕರೆದುಕೊಂಡು ಬನ್ನಿ. ಇದೇನೂ ಆಜ್ಞೆಯಲ್ಲ ಸಣ್ಣ ಕೋರಿಕೆಯಷ್ಟೆ.

ಮಹಿಳೆ......ಬಹಳ ಸಂತೋಷ ನೀವು ನಮ್ಮ ರಾಜಕುಮಾರಿಯರಿಗೆ ತಾಯಿಯಾಗಿರುವವರು ನೀವು ಕೋರಿಕೊಳ್ಳುವುದೂ ಸಹ ನಮಗೆ ಆಜ್ಞೆ ಸಮಾನವೇ ಖಂಡಿತ ನಾವೆಲ್ಲರೂ ಅಲ್ಲಿ ಕಾದಿರುತ್ತೀವಿ.

ನಿಶಾ......ಪಪ್ಪ ಚಾಕು ನನ್ನಿ ಹೊಟ್ಟಿ ಫುಲ್ ಆತು.

ಹರೀಶ....ಇನ್ನೊಂದು ಸ್ವಲ್ಪ ತಿನ್ನಮ್ಮ ಕಂದ.

ನಿಶಾ.....ನನ್ನಿ ಬೇಲ ಪಪ್ಪ ನನ್ನಿ ಆಲಲ್ಲ.

ನೀತು....ರೀ ಸಾಕು ಬಿಡಿ ಅವಳಿಗೆ ಹೊಟ್ಟೆ ತುಂಬಿರಬೇಕು ನಾವೆಲ್ಲ ಊಟ ಮಾಡುವ ತನಕ ನೀನು ಸದ್ದು ಮಾಡದೆ ಈ ಐಸ್ ಕ್ರೀಂ ತಿನ್ನು ಆಮೇಲೆ ತಾಚಿ ಮಾಡುವಂತೆ.

ನಿಶಾ.....ಮಮ್ಮ ನಾನಿ ಆನಿ ಹತ್ತ ಹೋತೀನಿ ಮಮ್ಮ ಪೀಚ್ ಮಮ್ಮ

ರಜನಿ.....ಆಯ್ತು ಕಂದ ಊಟ ಮಾಡಿದ್ಮೇಲೆ ನಾನು ನೀನು ಪಪ್ಪ ಹೋಗೋಣ ಈಗ ಐಸ್ ತಿನ್ನು ಈ ಹಣ್ಣುಗಳನ್ನೂ ತಿನ್ಬೇಕು.

ನಿಶಾ......ಆತು ಮಮ್ಮ.

ಎಲ್ಲರೂ ಊಟ ಮುಗಿಸಿದ ನಂತರ ನಿಶಾ ಅಪ್ಪ ಮತ್ತು ರಜನಿಯ ಜೊತೆ ಆನೆಗಳತ್ತ ತೆರಳಿದರೆ ಅವಳ ರಕ್ಷಣೆಗೆ ವೀರ್ ಸಿಂಗ್ ರಾಣಾ ಜೊತೆಯಲ್ಲಿದ್ದನು. ನೀತು ಹಿರಿಮಗಳು...ಅನುಷ ಮತ್ತು ಪಾವನಾಳ ಜೊತೆ ಅರಮನೆಯ ಒಂದು ರೂಮಿನೊಳಗೆ ಪ್ರವೇಶಿಸಿದರೆ ರಾಣಾ ಮತ್ತು ವಿಕ್ರಂ ಸಿಂಗ್ ಬಾಗಿಲನ್ನು ಒಳಗಿನಿಂದ ಭದ್ರಪಡಿಸಿದರೆ ಆಚೆ ಸುಮೇರ್ ಸಿಂಗ್ ಮತ್ತವನ ರಕ್ಷಕರ ಪಡೆ ಕಾವಲಿಗೆ ನಿಂತರು. 15 ಜನ ಪ್ರತಿಷ್ಠಿತ ವಕೀಲರು ವಿಕ್ರಂ ಸಿಂಗ್ ಸೂಚನೆಯ ಮೇರೆಗೆ ಅಲ್ಲಿಗೆ ಬಂದಿದ್ದು ಅವರೆಲ್ಲರೂ ಹಲವಾರು ವರ್ಷಗಳಿಂದ ಮಹಾರಾಜರು ಹಾಗು ಸೂರ್ಯವಂಶಿ ಸಂಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ತಂಡದಲ್ಲಿನ ಹಿರಿಯ ವಕೀಲರು ಎದ್ದು ನಿಲ್ಲುತ್ತ ಮೊದಲಿಗೆ ಗೌರವ ಸಲ್ಲಿಸಿದ ನಂತರ.....

ಪ್ರಮುಖ ವಕೀಲ......ಮೇಡಂ ಕಳೆದ ವಾರ ನೀವು ಫೋನಿನಲ್ಲಿ ಸೂಚಿಸಿದ್ದ ರೀತಿಯಲ್ಲೂ ಮತ್ತದರಲ್ಲಿ ಕೆಲವು ಷರತ್ತುಗಳನ್ನು ಸೇರಿಸಿ ಹಿರಿಯ ರಾಜಕುಮಾರಿ ನಿಧಿ ಸೂರ್ಯವಂಶಿ ಅವರ ಅಧಿಕಾರದಡಿ ಸಂಸ್ಥಾನದ ಸಮಸ್ತ ಅಧಿಕಾರಗಳನ್ನು ತರುವುದಕ್ಕೆ ಬೇಕಾಗಿರುವ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಮಹಾರಾಜರು ನಮ್ಮಿಂದಲೇ ಬರೆಸಿ ರಿಜಿಸ್ಟರ್ ಮಾಡಿಸಿರುವ ಉಯಿಲಿನ ಪ್ರಕಾರ ಹಿರಿಯ ರಾಜಕುಮಾರಿಯವರ ಅಧೀನದಲ್ಲಿ ಸಂಸ್ಥಾನದ ಸಮಸ್ತ ಚಲ ಮತ್ತು ಅಚಲ ಆಸ್ತಿಗಳು ಬರಲಿದೆ. 

ಆದರೆ ಇದಕ್ಕೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳನ್ನೂ ನಿಮಗೆ ತಿಳಿಸಬೇಕಾಗಿದೆ. ಕೆಲವು ಸರ್ಕಾರಿ ದಸ್ತಾವೇಜುಗಳನ್ನು ರಿಜಿಸ್ಟರ್ ಮಾಡಿಸುವಾಗ ನಮ್ಮ ಕಿರಿಯ ರಾಜ ಕುಮಾರಿಯವರ ಬೆರಳು ಮುದ್ರೆ ಹಾಗು ಅವರನ್ಯಾರಾದರು ದತ್ತು ಸ್ವೀಕರಿಸಿದ್ದಲ್ಲಿ ಅಂದರೆ ನಿಮ್ಮ ಹಾಗು ನಿಮ್ಮ ಪತಿಯವರ ಬೆರಳಿನ ಮುದ್ರೆ ಮತ್ತು ಹಸ್ತಾಕ್ಷರಗಳೂ ಆಗಬೇಕಾಗಿದೆ.

ನೀತು......ನೀವೇನು ಹೇಳುತ್ತಿರುವಿರೋ ಅದು ಅರ್ಥವಾಗಿದೆ ಆದ್ರೆ ನಮಗೂ ಸಂಸ್ಥಾನದ ಆಸ್ತಿಗಳಿಗೂ ಯಾವುದೇ ರೀತಿ ಸಂಬಂಧವೇ ಇಲ್ಲದಿರುವಾಗ ನಮ್ಮ ಹಸ್ತಾಕ್ಷರದ ಅಗತ್ಯವೇಕೆಂದು ತಿಳಿಯಲಿಲ್ಲ.

ಪ್ರಮುಖ ವಕೀಲ......ಮೇಡಂ ಅದನ್ನು ನಾವು ಹೇಳುವುದಕ್ಕಿಂತ ಮಹರಾಜರು ಮಹರಾಣಿಯವರು ಮರಣಿಸಿದ ಒಂದು ತಿಂಗಳಿನ ಬಳಿಕ ಅವರ ಗುರುಗಳ ಸಮ್ಮುಖದಲ್ಲಿ ಬರೆಸಿದ್ದ ಉಯಿಲನ್ನು ನೀವೇ ಓದಿದರೆ ನಿಮಗೆಲ್ಲವೂ ತಿಳಿಯುತ್ತದೆ. ಇದೇ ಶುಕ್ರವಾರ 30 ಆಗಸ್ಟ್ ಆ ಒಂದು ದಿನದಲ್ಲಿ ಕಾನೂನಿನ ಎಲ್ಲಾ ಪ್ರಕ್ರಿಯೆಗಳನ್ನೂ ಮುಗಿಸುವುದಕ್ಕೆ ವ್ಯವಸ್ಥೆ ಮಾಡಿದ್ದೀವಿ. ಆಗಸ್ಟ್ 31ನೇ ತಾರೀಖು ಅಂದಿನಿಂದ ಯುವರಾಣಿಯವರು ತಮ್ಮ ಅಧಿಕಾರ ಚಲಾಯಿಸಲು ಹಕ್ಕುದಾರರಾಗಿರುತ್ತಾರೆ ಆದರೆ ಅದರಲ್ಲಿಯೂ ಕೆಲವು ಷರತ್ತುಗಳಿವೆ ಅದನ್ನು ಮಹಾರಾಜರು ಬರೆಸಿರುವ ಉಯಿಲು ಓದಿದ ನಂತರ ನಿಮಗೆಲ್ಲವೂ ಸ್ಪಷ್ಟವಾಗಲಿದೆ.

ಇನ್ನೂ ಒಂದೆರಡು ಘಂಟೆಗಳ ಕಾಲ ಇದೇ ವಿಚಾರವಾಗಿ ಚರ್ಚೆಗಳು ನಡೆಯುತ್ತಿದ್ದು ಹಿರಿಯ ಕಿರಿಯ ಎಂದು ಭೇದ ತೋರಿಸದೆ ಎಲ್ಲಾ ವಕೀಲರ ಅಭಿಪ್ರಾಯಗಳನ್ನು ಕೇಳುತ್ತಿರುವುದಕ್ಕೆ ವಕೀಲರ ತಂಡದ ಸದಸ್ಯರಲ್ಲಿ ಇವರ ಬಗ್ಗೆ ಅಪಾರ ಗೌರವ ಮೂಡಿತ್ತು. ಸೂರ್ಯವಂಶಿ ಸಂಸ್ಥಾನದ ಅತ್ಯಂತ ನಿಷ್ಟಾವಂತರಾದ ರಾಣಾ ಮತ್ತು ವಿಕ್ರಂ ಸಿಂಗ್ ಇಬ್ಬರ ಅಭಿಪ್ರಾಯಗಳನ್ನೂ ಸಹ ನೀತು ಆಗಾಗ ಕೇಳುತ್ತಿದ್ದಳು. ಅಪ್ಪ ಮತ್ತು ರಜನಿಯ ಜೊತೆ ಅರಮನೆ ಹೊರಗಿರುವ ಕುದುರೆ.... ಆನೆ ಮತ್ತು ಕಾವಲಿನ ನಾಯಿಗಳ ಜೊತೆ ತನ್ನದೇ ಪ್ರಪಂಚದಲ್ಲಿದ್ದ ನಿಶಾಳಿಗೆ ಸಕತ್ ಖುಷಿಯಾಗಿತ್ತು.

ಇತ್ತ ಕಾಮಾಕ್ಷಿಪುರದಲ್ಲಿ......

ಶಾಲೆಯಿಂದ ಮನೆಗೆ ಮರಳಿದ ನಾಲ್ವರಲ್ಲಿ ಸವಿತಾ—ಸುಕನ್ಯಾ ಮನೆ ಹೆಂಗಸರ ಜೊತೆ ಮಾತನಾಡುತ್ತ ಕುಳಿತಾಗ.......

ನಯನ.......ಆಂಟಿ ನೀವು ಮಾವನಿಗೆ ವೀಡಿಯೋ ಕಾಲ್ ಮಾಡಿ ಚಿನ್ನಿಯ ಜೊತೆ ಮಾತನಾಡ್ಬೇಕು.

ಶೀಲಾ ಮುಗುಳ್ನಕ್ಕು........ಆಯ್ತಮ್ಮ ರೂಮಿಂದ ನನ್ನ ಫೋನ್ ತಂದುಕೊಡು ಈಗಲೇ ಫೋನ್ ಮಾಡೋಣ.


ನಯನಾಳನ್ನು ಕೂರುವಂತೇಳಿದ ಗಿರೀಶ ತಾನೇ ಅಪ್ಪನಿಗೆ ಕಾಲ್ ಮಾಡುತ್ತ ಫೋನನ್ನು ಟಿವಿಗೆ ಕನೆಕ್ಟ್ ಮಾಡಿದನು. ಮನೆಯಲ್ಲಿದ್ದ ರಾಜೀವ್....ರೇವತಿ..ಸುಮ...ಶೀಲಾ..ಸವಿತಾ...ಸುಕನ್ಯಾ ಮತ್ತು ಮಕ್ಕಳೆಲ್ಲರೂ ಟಿವಿ ಮುಂದೆ ಜಮಾಯಿಸಿ ಅಲ್ಲಿಯೇ ದೃಷ್ಟಿ ನೆಟ್ಟರು. ಹರೀಶ ವೀಡಿಯೋ ಕಾಲ್ ರಿಸೀವ್ ಮಾಡಿ ಮಗಳ ಆಟಗಳನ್ನು ತೋರಿಸುತ್ತಿದ್ದರೆ ನಿಶಾ ಅಪ್ಪನ ಫೋನಿನಲ್ಲಿ ಕಾಣಿಸುತ್ತಿದ್ದವರನ್ನು ನೋಡಿ ಇನ್ನೂ ಖುಷಿಯಾಗಿ ಕಿಲಕಾರಿ ಹಾಕುತ್ತ ಅವರಿಗೆ ತನ್ನ ಹೊಸ ಸ್ನೇಹಾತರಾದ ಆನೆ...ಕುದುರೆ...ನಾಯಿಗಳನ್ನು ತೋರಿಸುತ್ತ ತನ್ನ ಸಂತೋಷವನ್ನು ಹಂಚಿಕೊಂಡಳು. ಹರೀಶ—ರಜನಿ ಕೂಡ ಎಲ್ಲರ ಜೊತೆ ಮಾತನಾಡಿದರೆ.......

ರಾಜೀವ್.....ನೀತು ಎಲ್ಲಪ್ಪ ? ಫೋನ್ ಮಾಡಿದ್ರೆ ರಿಸೀವ್ ಮಾಡ್ತಾ ಇಲ್ವಲ್ಲ ಎಲ್ಲೋಗಿದ್ದಾಳೆ ?

ರಜನಿ.....ಅಂಕಲ್ ಅರಮನೆಗೆ ಸಂಸ್ಥಾನದ ವಕೀಲರ ತಂಡದವರು ಬಂದಿದ್ದಾರೆ ನೀತು...ಅನು...ನಿಧಿ ಅವರ ಜೊತೆ ಚರ್ಚೆಯಲ್ಲಿದ್ದಾರೆ ಅದಕ್ಕೆ ರಿಸೀವ್ ಮಾಡ್ತಿಲ್ಲ ಅನಿಸುತ್ತೆ.

ರೇವತಿ......ಈ ವಾರವೇ ಅಲ್ಲಿನ ಕೆಲಸಗಳನ್ನು ಮುಗಿಸಿಕೊಂಡು ನೀವೆಲ್ಲ ಹಿಂದಿರುಗಿ ಬರ್ತೀರಲ್ಲವಾ ?

ರಜನಿ......ಗೊತ್ತಿಲ್ಲ ಆಂಟಿ ಅದನ್ನೆಲ್ಲಾ ನಿಮ್ಮ ಮಗಳೇ ಹೇಳ್ಬೇಕು.

ಇವರುಗಳು ಮಾತನಾಡುತ್ತಿದ್ದರೆ ನಿಶಾ ಅರಮನೆಯ ಕಾವಲಿಗಿರುವ ಅತ್ಯಂತ ಬಲಿಷ್ಟ ಮತ್ತು ಖತರನಾಕ್ ಬೇಟೆ ನಾಯಿಗಳನ್ನು ತನ್ನ ಅತ್ಯಾಪ್ತ ಗೆಳೆಯರನ್ನಾಗಿ ಮಾಡಿಕೊಂಡಿದ್ದು ಅವುಗಳ ಜೊತೆ ತನ್ನ ಒಡನಾಟವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಳು. ನಿಶಾ ನಾಯಿಗಳ ಜೊತೆ ಆಡುತ್ತಿರುವುದನ್ನು ಅರಮನೆಯ ಪರಾಂಗಣದ ಮೂಲೆಯ ಕಿಟಕಿ ಮೂಲಕ ನೋಡುತ್ತಿದ್ದ " ಆ ಹೆಂಗಸು " ಮನಸ್ಸಿನಲ್ಲೇ ಒಂದು ಯೋಜನೆಯನ್ನು ರೂಪಿಸತೊಡಗಿದಳು.

ಹೆಂಗಸು ಮನದಲ್ಲೇ.......ಓಹೋ ಈ ಕಿರಿಯ ರಾಜಕುಮಾರಿಗೆ ನಾಯಿಗಳೆಂದರೆ ಇಷ್ಟವಾ ಎಲ್ಲವೂ ತಂದೆಯಂತೆಯೇ ಇರಲಿ ಇದೇ ಅರಮನೆಯ ನಿಷ್ಟಾವಂತ ನಾಯಿಗಳಿಂದಲೇ ಯುವರಾಣಿಯನ್ನು ಬೇಟೆಯಾಡಿಸ್ತೀನಿ......ಎಂದು ಯೋಚಿಸುತ್ತ ಅವಳ ತುಟಿಗಳಲ್ಲಿ ಕ್ರೂರ ನಗೆ ಮೂಡಿತ್ತು.
* *
* *

1 comment:

  1. ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಮುಂದೆ ಏನು ಆಗುತ್ತದೆ ಎನ್ನುವ ಕಾತುರ ಆದಷ್ಟು ಬೇಗ ಬೇಗ ಸ್ಟೋರಿ ಅಪ್ಲೋಡ್ ಮಾಡ ರೀ ಕತೆ ತುಂಬಾ ಸ್ವಾರಸ್ಯಕರವಾಗಿದೆ ಆದಷ್ಟು ದಿನಕ್ಕೆ 3, 4, ಸ್ಟೋರಿ ಅಪ್ಲೋಡ್ ಮಾಡ ರೀ ನಾನು ಕೇಳಿ ಕೊಳ್ಳುವುದು ಇಷ್ಟೇ ದಯವಿಟ್ಟು ದಿನೇ ದಿನೇ ಸ್ಟೋರಿ ಅಪ್ಲೋಡ್ ಮಾಡ ರೀ

    ReplyDelete