Total Pageviews

Wednesday, 19 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 285

ಇವರು ಒಳಗೆ ಹೋಗುವುದಕ್ಕೂ ನಿಮಿಷದ ಮುಂಚೆ ಒಳಗಿರುವ ಡಾಕ್ಟರ್ಸ್ ಮತ್ತು ನರ್ಸುಗಳು ಯುವರಾಣಿ ನಿಧಿಯ ಆದೇಶದನ್ವಯ ಹೊರಗೆ ಬಂದಿದ್ದರು. ಮುನಿಗಳು ಮತ್ತವರ 25 ವರ್ಷ ವಯಸ್ಸಿನ ಸ್ಪುರದ್ರೂಪಿ ಶಿಷ್ಯನಾದ ಭಾಸ್ಕರ್ ಜೊತೆಯಲ್ಲಿ ಅಮ್ಮನ ಬಳಿ ಬಂದಿದ್ದ ನಿಶಾ ಅಮ್ಮನನ್ನು ನೋಡುತ್ತಿದ್ದಂತೆಯೇ ಕಣ್ಣೀರು ಸುರಿಸತೊಡಗಿದಳು.

ಮುನಿವರ್ಯ......ಅಳಬೇಡ ಮಗು ನೀನು ಸಾಕ್ಷಾತ್ ಆಧಿಶಕ್ತಿಯ ಆಶೀರ್ವಾದದಿಂದ ಜನಿಸಿದವಳು ಆ ತಾಯಿ ನಿನ್ನನ್ನು ಮತ್ತೊಮ್ಮೆ ತಾಯಿಯ ಪ್ರೀತಿ ಮತ್ತು ಶ್ರೀರಕ್ಷೆ ಇಲ್ಲದಂತೆ ಮಾಡಲಾರಳು....... ಎಂದು ತಮ್ಮ ಶಿಷ್ಯನಿಂದ ಒಂದು ಕಮಂಡಲ ಪಡೆದುಕೊಂಡರು.

ನಿಶಾಳಿಗೆ ಆಕೆ ಕತ್ತಿನಲ್ಲಿ ರಾರಾಜಿಸುತ್ತಿರುವ ಅಪರೂಪದ ರುದ್ರಾಕ್ಷಿ ಮತ್ತು ದೈವತಾ ಲಿಂಗ ಐಕ್ಯವಾಗಿರುವ ॐ ಕಾರದ ಡಾಲರನ್ನು ಆ ಕಮಂಡಲದೊಳಗೆ ಅದ್ದುವಂತೇಳಿದರು. ನಿಶಾ ಅವರು ಹೇಳಿದಂತೆ ಮಾಡಿದಾಗ ಮುನಿವರ್ಯ ಮತ್ತವರ ಶಿಷ್ಯ ಕೆಲವು ಮಂತ್ರಗಳನ್ನು ಪಠಣ ಮಾಡಿದರು. ಮುನಿಗಳ ಶಿಷ್ಯ ನಿಶಾಳನ್ನೆತ್ತಿ ನೀತು ಪಕ್ಕದಲ್ಲಿ ಕೂರಿಸಿದರೆ ಮುನಿಗಳು ಅವಳ ಕೈಯಿಂದಲೇ ನೀತು ಬಾಯೊಳಗೆ ಕಮಂಡಲದಲ್ಲಿರುವ ಔಷಧಿಯನ್ನು ಹಾಕಿಸಿದರು. ಇನ್ನೂ ಕೆಲವು ಮಂತ್ರಗಳ ಪಠಣೆ ಮಾಡಿದ ನಂತರ ನಿಶಾಳಿಂದ ಒಂದು ಚಿಟಿಕೆ ಮಂತ್ರಿಸಿರುವ ಕುಂಕುಮವನ್ನು ನೀತುವಿನ ಹಣೆಗೆ ಹಚ್ಚಿಸಿ ಅಲ್ಲಿಂದ ಮೂವರೂ ಹೊರಗೆ ಬಂದಾಗ ನಿಶಾ ಪುನಃ ಅಪ್ಪನ ಹೆಗಲೇರಿದಳು.

ಮುನಿವರ್ಯ.........ಈ ಮಗು ನೀನು ನಿನ್ನ ಮಡದಿ ಮಾಡಿರುವ ಸತ್ಕಾರ್ಯಗಳ ಫಲಸ್ವರೂಪವಾಗಿ ನಿಮ್ಮ ಮಗಳಾಗಿ ಬಂದಿದ್ದಾಳೆ. ಇಂದು ನಾವು ನಿನ್ನ ಮಡದಿಯ ಪ್ರಾಣವನ್ನು ರಕ್ಷಿಸುವುದಕ್ಕೆ ಸಾಧ್ಯ ಆಗಿದೆಯೆಂದರೆ ಇದಕ್ಕೆ ಪ್ರಮುಖವಾದ ಕಾರಣವೇ ನಿನ್ನೀ ಮಗಳು. ನಿಮ್ಮೆಲ್ಲರಿಗಿಂತಲೂ ಜಾಸ್ತಿ ತನಗೋಸ್ಕರವಾದರೂ ಈ ಮಗು ತನ್ನ ತಾಯಿಯ ಪ್ರಾಣ ರಕ್ಷಿಸಿಕೊಳ್ಳಲು ನಮಗೆ ಸಂದೇಶ ಕಳುಹಿಸಿದಳು. ಆಗ ನಮ್ಮೀ ಶಿಷ್ಯ ದುರ್ಗಮವಾದ ಕಾಡಿನಲ್ಲಿ ತುಂಬ ವಿರಳವಾಗಿ ಸಿಗುವಂತಹ ಗಿಡಮೂಲಿಕೆ ಮತ್ತು ಗೆಡ್ಡೆಗಳನ್ನು ಹುಡುಕಿಕೊಂಡು ಸರಿಯಾದ ಸಮಯಕ್ಕೆ ತಂದಿರುವುದರಿಂದ ಔಷಧಿ ತಯಾರಿಸಲು ನಮಗೆ ಸಾಧ್ಯವಾಯಿತು. 

ನಾಳೆ ಮುಂಜಾನೆ ಹೊತ್ತಿಗೆ ನಿನ್ನ ಮಡದಿ ಮೇಲಿರುವ ಮೃತ್ಯುವಿನ ಛಾಯೆ ಸಂಪೂರ್ಣವಾಗಿ ಸರಿದಿರುತ್ತದೆ. ನೀನು ನಿನ್ನ ಮಡದಿ ಮತ್ತು ನಿನ್ನ ನಾಲ್ವರು ಮಕ್ಕಳು ಮಾತ್ರ ನಮ್ಮ ಕುಟೀರಕ್ಕೆ ಬರಬೇಕು. ಯಾವಾಗ ? ಎಲ್ಲಿಗೆ ? ಬರಬೇಕೆಂಬುದರ ಬಗ್ಗೆ ನಾನು ನಿಮಗೆ ಸಂದೇಶವನ್ನು ಕಳುಹಿಸಿಕೊಡ್ತೀನಿ. ಇನ್ಯಾವ ಭಯವೂ ಇಲ್ಲ ತಾಯಿ ಜಗನ್ಮಾತೆ ಆಧಿಶಕ್ತಿಯ ಆಶೀರ್ವಾದದಿಂದ ಜನಿಸಿರುವ ಈ ಮಗುವನ್ನು ಪ್ರೀತಿಯಿಂದ ಬೆಳೆಸಿರಿ ನಿಮಗೆಲ್ಲವೂ ಒಳ್ಳೆಯದಾಗಲಿ. ಗೋವಿಂದಾಚಾರ್ಯ ನಾವಿಲ್ಲಿಗೆ ಬಂದ ಕಾರ್ಯ ಸಂಪನ್ನವಾಯಿತು ನಾವಿನ್ನು ಹೊರಡುತ್ತೇವೆ ಜೈ ಮಾತಾ.

ಎಲ್ಲರೂ ಮುನಿವರ್ಯರಿಗೆ ನಮಸ್ಕರಿಸಿದರೆ ಅವರು ಬೇರೆ ಯಾರ ಕಡೆಗೂ ನೋಡದೆ ಶಿಷ್ಯನೊಡನೆ ಅಲ್ಲಿಂದ ತೆರಳಿದರು.

**

ಅದೇ ದಿನ ರಾತ್ರಿ ಒಂದು ಹೊತ್ತಿನಲ್ಲಿ ನೀತು ತನ್ನ ಸ್ತುಪ್ತ ಮನಸ್ಸಿನಲ್ಲಿ ಅಲ್ಲಿಂದಿಲ್ಲಿಗೆ ದಿಕ್ಕು ತೋಚದಂತೆ ಅಲೆದಾಡುತ್ತಿದ್ದಾಗ ಅವಳೆದುರಿಗೆ ಎರಡು ಆತ್ಮಗಳು ಪ್ರಕಟಗೊಂಡು ಒಂದು ಆಕಾರ ಪಡೆದುಕೊಳ್ಳಲು ಪ್ರಾರಂಭಿಸಿದವು. ನೀತು ಅವುಗಳತ್ತಲೇ ನೋಡುತ್ತಿದ್ದಾಗ ಒಂದು ಆತ್ಮ ಮಹಾರಾಜ ರಾಣಾಪ್ರತಾಪ್ ಮತ್ತೊಂದು ಮಹಾರಾಣಿಯಾದ ಸುಧಾಮಣಿಯ ರೂಪ ತಾಳಿದವು. ಇಬ್ಬರೂ ನೀತುವಿಗೆ ತಮ್ಮ ಕೈ ಮುಗಿದು ವಂಧಿಸಿದರೆ.......

ನೀತು.......ಏನಿದು ನೀವು ನನ್ನ ಅಣ್ಣ ಅತ್ತಿಗೆಯರು ನೀವು ನನಗೆ ಕೈ ಮುಗಿಯುವುದು ಶ್ರೇಯಸ್ಸಲ್ಲ ನನಗೆಆಶೀರ್ವಧಿಸಬೇಕು.

ಸುಧಾಮಣಿ......ಇದು ನಾವು ನಿನಗೆ ಕೈ ಮುಗಿದಿದ್ದಲ್ಲ ನೀತು ನಿನ್ನಲ್ಲಿ ಇರುವಂತ ತಾಯ್ತತದಿಂದಲೇ ತುಂಬಿರುವ ಪವಿತ್ರವಾದ ಹೃದಯಕ್ಕೆ ನಮಿಸುತ್ತಿದ್ದೀವಿ. ಇಷ್ಟು ದಿನ ಪತ್ರಗಳ ಮೂಲಕವಾದರೂ ನಿನ್ನೀ ಅಣ್ಣ ನಿನ್ನೊಡನೆ ಮಾತನಾಡುತ್ತಿದ್ದರು ಆದರಿಂದು ನಾನು ಮಾತ್ರ ಮಾತನಾಡುವೆ. ನಿಧಿ ನನ್ನ ಹಿರಿಮಗಳು ಅವಳನ್ನು ನಾನು ಹೆರಲಿಲ್ಲ ಆದರವಳು ನನ್ನ ಹೃದಯದ ಒಂದು ಭಾಗವಾಗಿದ್ದಳು ಆದರೆ ನೀನು ನಿಶಾಳನ್ನು ಹೆರದಿದ್ದರೂ ಅವಳು ನಿನ್ನ ಹೃದಯದೊಂದು ಭಾಗವಾಗಿ ಉಳಿಯಲಿಲ್ಲ ನಿನ್ನಿಡೀ ಹೃದಯವೇ ನಿಶಾ ಆಗಿ ಹೋಗಿದ್ದಾಳೆ ಇದೇ ತಾಯ್ತನದಲ್ಲಿ ನನಗೂ ನಿನಗೂ ಇರುವ ವೆತ್ಯಾಸ. 

ನೀತು ಇಷ್ಟು ದಿನ ನಾನು ನಿಶಾಳ ಸ್ತುಪ್ತ ಮನಸ್ಸಿನಲ್ಲಿ ಅವಳ ಜೊತೆಗಿದ್ದು ಅವಳಿಂದ ಕೆಲವು ಕಾರ್ಯಗಳನ್ನು ಮಾಡಿಸುತ್ತಿದ್ದೆ. ನಿನಗೆ ಸಾವಿನ ಗಂಡಾಂತರ ಇರುವುದರ ಬಗ್ಗೆ ನಮಗೆ ತಿಳಿಯಿತು ಅದಕ್ಕಾಗಿ ಮಗಳ ಮನಸ್ಸಿನ ಮೂಲಕ ಋಷಿವರ್ಯರನ್ನು ಸಂಪರ್ಕಿಸಿ ನಿನ್ನನ್ನು ಉಳಿಸುವಂತೆ ಅವರಲ್ಲಿ ನಾನೇ ಬೇಡಿಕೊಂಡಿದ್ದು. .

ಹುಟ್ಟಿದ ದಿನವೇ ತಾಯಿಯ ಮಡಿಲನ್ನು ಕಳೆದುಕೊಂಡ ನನ್ನ ಹಿರಿಯ ಮಗಳಿಗೆ ನಾನು ತಾಯಿ ಸ್ಥಾನದಲ್ಲಿ ಆ ಪ್ರೀತಿಯನ್ನು ನೀಡಿದೆ ಆದರೆ ಅದೇ ನಾನು ಹೆತ್ತಿರುವ ಮಗಳ ವಿಷಯದಲ್ಲೂ ಮರುಕಳಿಸಿತು. ಸ್ವಲ್ಪ ತಡವಾಗಿಯಾದರೂ ಸರಿ ಅವಳು ಸೇರಬೇಕಾದ ತಾಯಿಯ ಮಡಿಲನ್ನೇ ಸೇರಿರುವಳು. 

ಈಗ ನಾನು ನನ್ನ ಪುಟ್ಟ ಕಂದಮ್ಮನ ಮನಸ್ಸಿನಲ್ಲಿದ್ದು ಮಾಡಬೇಕಿದ್ದ ಕಾರ್ಯಗಳೆಲ್ಲವೂ ಸಂಪ್ಪನ್ನಗೊಂಡಿದೆ ಈಗ ನಮ್ಮಿಬ್ಬರಿಗೂ ಮುಕ್ತಿ ದೊರೆಯಿತು. ಇನ್ಮುಂದೆ ನನ್ನಿಬ್ಬರೂ ಮಕ್ಕಳ ಸಂಪೂರ್ಣವಾದ ಜವಾಬ್ದಾರಿಯೂ ನಿನ್ನದೇ ಕಣಮ್ಮ ನೀತು. ಅವರಿಬ್ಬರ ಪ್ರಾಣವನ್ನು ಕಾಪಾಡಲು ಒಂದು ಕ್ಷಣವೂ ಯೋಚಿಸದೆ ಮಕ್ಕಳಿಬ್ಬರ ಮತ್ತವರ ಸಾವಿನ ನಡುವೆ ಮಾತೃತ್ವದ ಮಹಾನ್ ತಡೆಗೋಡೆಯ ರೂಪದಲ್ಲಿ ನೀನು ನಿಂತಿದ್ದೆ. ಈಗ ನಿನ್ನ ಕಂದಮ್ಮ ಆರು ದಿನಗಳಿಂದಲೂ ಈ ತಾಯಿ ಮರಳಿ ತನ್ನನ್ನೆತ್ತಿ ಮುದ್ದಾಡುವುದನ್ನೇ ಕಾಯುತ್ತಿದ್ದು ತಾನು ನಗುವುದನ್ನೇ ಮರೆತು ಹೋಗಿ ಪ್ರತೀಕ್ಷಣವೂ ದುಃಖಿಸುತ್ತಿದ್ದಾಳೆ. 

ಅವಳನ್ನು ಪುನಃ ಮೊದಲಿನ ತುಂಟತನಕ್ಕೆ ಮರಳುವಂತೆ ಮಾಡುವ ಶಕ್ತಿಯಿರುವುದು ನಿನ್ನೊಬ್ಬಳಿಂದ ಮಾತ್ರ ದಯವಿಟ್ಟು ನೀನಿಲ್ಲಿಂದ ಮರಳಿ ಹೋಗಮ್ಮ ನಿನ್ನ ಮಕ್ಕಳು ಅವರ ತಾಯಿಗೋಸ್ಕರವಾಗಿ ಕಾಯುತ್ತಿದ್ದಾರೆ. ಸೂರ್ಯವಂಶಿ ಸಂಸ್ಥಾನ ಮತ್ತು ಮಕ್ಕಳಿಬ್ಬರ ಸಂಪೂರ್ಣ ಜವಾಬ್ದಾರಿಯೂ ನಿನ್ನ ಮೇಲಿದೆ ಅದನ್ನು ನಿನ್ನಿಂದ ಮಾತ್ರ ನಿಭಾಯಿಸಲು ಸಾಧ್ಯವೆಂಬುದೂ ಗೊತ್ತಿದೆ ಹೋಗಮ್ಮ ನೀತು ನಿನ್ನ ಕಿರಿಯ ಮಗ ಮತ್ತು ಪುಟ್ಟ ಕಂದಮ್ಮ ನೀನಿಲ್ಲದಿದ್ದರೆ ಬೇರಾರ ಜೊತೆಗೂ ನಗುನಗುತ್ತ ಬಾಳಲು ಸಾಧ್ಯವಿಲ್ಲ ಕಣಮ್ಮ.

ಮಹಾರಾಜ....ಮಹಾರಾಣಿಯರ ಆತ್ಮಗಳು ಅಂತರ್ಧ್ಯಾನವಾದಾಗ ನೀತುವಿನ ಸ್ತುಪ್ತ ಮನಸ್ಸಿನಲ್ಲಿ ಕವಿದಿದ್ದ ಕಾರ್ಮೋಡಗಳೆಲ್ಲವೂ ಸಹ ಚದುರಿದವು. ಸ್ಪೆಷಲಿಸ್ಟ್ ಡಾಕ್ಟರುಗಳು ನೀತುಳನ್ನು ಪರೀಕ್ಷಿಸಿದಾಗ ಗುಂಡಿನ ಕಾರಣದಿಂದ ಅವಳ ಹೃದಯದಲ್ಲಾಗಿದ್ದ ರಂಧ್ರ ಸ್ವಲ್ಪವೂ ನಾಮಾವಶೇಷವಿಲ್ಲದಂತೆ ಕಾಣೆಯಾಗಿದ್ದು ಬ್ಲೀಡಿಂಗ್ ಸಂಪೂರ್ಣ ನಿಲುಗಡೆಯಾಗುವ ಜೊತೆಗೆ ಹೃದಯವೂ ಸಹ ಸಾಮಾನ್ಯವಾಗೇ ಕಾರ್ಯ ನಿರ್ವಹಿಸುತ್ತಿತ್ತು.

ಸೀನಿಯರ್ ಸ್ಪೆಷಲಿಸ್ಟ್........ಇದೊಂದು ಪವಾಡವೇ ಆರ್ಯುವೇದ ಚಿಕಿತ್ಸೆಯಿಂದ ಇಂತಹ ಚಮತ್ಕಾರಗಳು ನಡೆದಿರುವ ಬಗ್ಗೆ ಪುರಾತನ ಗ್ರಂಥಗಳಲ್ಲಿ ಮಾತ್ರ ಉಲ್ಲೇಖವಿತ್ತು ಆದರಿಂದು ಅದನ್ನು ನಾವೆಲ್ಲ ಸಾಕ್ಷಾತ್ಕಾರವಾಗಿ ನೋಡುವಂತಾಯಿತು. She is perfectly fine now but keep her under observation for next 24 hrs.

ರಾತ್ರಿ ಹತ್ತು ಘಂಟೆ ಹೊತ್ತಿಗೆ ನೀತುಳನ್ನು ಪರೀಕ್ಷಿಸಿ ಸ್ಪೆಷಲಿಸ್ಟುಗಳು ಹೊರಬಂದಾಗ......

ಅಶೋಕ.......ಈಗ ಹೇಗಿದ್ದಾಳೆ ಡಾಕ್ಟರ್ ?

ವರ್ಧನ್.......ಅಕ್ಕನ ಆರೋಗ್ಯದಲ್ಲಿ ಸುಧಾರಣೆ ಆಗಿದೆಯಾ ?

ಸ್ಪೆಷಲಿಸ್ಟ್.........ಸುಧಾರಣೆಯಲ್ಲ ಪವಾಡವೇ ನಡೆದಿದೆ ಮೇಡಂ ಈಗ ಪೂರ್ಣ ಗುಣಮುಖರಾಗಿದ್ದಾರೆ. ಅವರ ಹೃದಯದಲ್ಲಿ ಆಗ್ತಿದ್ದ ಬ್ಲೀಡಿಂಗ್ ನಿಂತಿರುವ ಜೊತೆಗೆ ಬುಲೆಟ್ಟಿನಿಂದಾಗಿದ್ದ ರಂದ್ರವೂ ಸಹ ಕೂಡಿಕೊಂಡಿದ್ದು ಹೃದಯ ಸಾಮಾನ್ಯವಾಗಿಯೆ ಕೆಲಸ ಮಾಡುತ್ತಿದೆ. ಇನ್ಯಾವುದೇ ಅಪಾಯವಿಲ್ಲ ಆದರಿನ್ನೂ ಅವರಿಗೆ ಪ್ರಜ್ಞೆ ಬಂದಿಲ್ಲ ಮಧ್ಯರಾತ್ರಿ ಅಥವ ಬೆಳಿಗ್ಗೆ ಎಷ್ಟೊತ್ತಿಗಾದರೂ ಪ್ರಜ್ಞೆ ಮರುಕಳಿಸುತ್ತೆ. ಆಗ ನಾವೊಮ್ಮೆ ಚೆಕಪ್ ಮಾಡಿ ನಿಮಗೆ ಬೇಟಿಯಾಗಲು ಅವಕಾಶ ನೀಡ್ತೀವಿ.

ನೀತು ಸಾವಿನ ದವಡೆಯಿಂದ ಹಿಂದಿರುಗಿ ಬಂದಳೆಂಬ ಸಿಹಿಸುದ್ದಿ ಕೇಳಿ ಮನೆಯವರ ಮುಖದಲ್ಲಿ ಸಂತೋಷದ ನಗು ಮೂಡಿತು. ಆಸ್ಪತ್ರೆಯಲ್ಲಿ ಕೇವಲ ಗಂಡಸರು ನಿಧಿ...ನಿಕಿತಾ ಮತ್ತು ಗಿರೀಶರಷ್ಟೇ ಉಳಿದುಕೊಂಡಿದ್ರು. ರಾಣಾ ಮತ್ತು ರಕ್ಷಕರು ವೈದ್ಯರಿಗೆ ಕೈ ಮುಗಿದು ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಅರಮನೆಯಲ್ಲಿದ್ದ ಹೆಂಗಸರಿಗೆ ವಿಕ್ರಂ ಫೋನ್ ಮಾಡಿ ವಿಷಯ ತಿಳಿಸಿದಾಗ ಇಷ್ಟು ದಿನಗಳಿಂದಲೂ ಭಯ ಮತ್ತು ಆತಂಕದಲ್ಲಿಯೇ ದಿನ ದೂಡುತ್ತಿದ್ದವರು ನೆಮ್ಮದಿಯ ನಿಟ್ಟುಸಿರು ಬಿಡುತ್ತ ನೀತುವಿನ ಪ್ರಾಣ ರಕ್ಷಿಸಿದ ಮುನಿವರ್ಯರು ಮತ್ತು ದೇವರಿಗೂ ಕೈ ಮುಗಿದರು.
* *
* *
ಮುಂಜಾನೆ ಐದು ಘಂಟೆಗೆಲ್ಲಾ ಅರಮನೆಯಿಂದ ಹೆಂಗಸರು ಮತ್ತು ಮಕ್ಕಳೆಲ್ಲರೂ ಆಸ್ಪತ್ರೆಗೆ ಆಗಮಿಸಿದ್ದು ಎಲ್ಲರ ಮುಖದಲ್ಲೂ ಸಂತಸ ಮನೆಮಾಡಿತ್ತು. ಸ್ಪೆಷಲಿಸ್ಟ್ ನೀತುಳನ್ನು ಪರೀಕ್ಷಿಸಿ ಹೊರಬಂದಾಗ ಅವರಲ್ಲೊಬ್ಬಳು ಮಹಿಳಾ ವೈದ್ಯೆ....ನಿಮ್ಮಲ್ಲಿ ಚಿನ್ನಿ ಯಾರು ?

ಅಪ್ಪನ ತೋಳಿನಲ್ಲಿದ್ದ ನಿಶಾ........ನಾನಿ ಚಿನ್ನಿ..ನಾನಿ ಚಿನ್ನಿ ನಾನಿ ಮಮ್ಮ ಹತ್ತ ಹೋತೀನಿ ನನ್ನಿ ಮಮ್ಮ ಬೇಕು.

ಸ್ಪೆಷಲಿಸ್ಟ್.....ಮೇಡಂ ಸಂಪೂರ್ಣ ಗುಣಮುಖರಾಗಿದ್ದಾರೆ ಅವರಿಗೆ ಪೂರ್ತಿ ಪ್ರಜ್ಞೆಯೂ ಮರುಕಳಿಸಿದೆ. ಮೊದಲಿಗೆ ಅವರು ಚಿನ್ನಿಯನ್ನು ನೋಡಬೇಕೆಂದು ಬಯಸಿದ್ದಾರೆ.

ಅಪ್ಪನ ತೋಳಿನಿಂದ ಕೆಳೆಗಿಳಿದು ಮಹಿಳಾ ವೈದ್ಯೆಯ ಜೊತೆಯಲ್ಲಿ ಐಸಿಯು ಒಳಗೆ ಬಂದಾಗ ಮಂಚದ ಹಿಂಭಾಗವನ್ನು ಮೇಲಕ್ಕೆತ್ತರಿಸಿ ಅದನ್ನೊಗರಗಿ ಕುಳಿತಿದ್ದ ನೀತು ಮಗಳನ್ನು ನೋಡುತ್ತಲೇ ಅವಳ ಕಣ್ಣಿನಿಂದ ಕಣ್ಣೀರು ಸುರಿಯತೊಡಗಿತು. ಅಮ್ಮ ಎದ್ದು ಕುಳಿತು ತನ್ನ ಕಡೆಗೇ ನೋಡುತ್ತಿರುವುದನ್ನು ಕಂಡ ನಿಶಾ ಖುಷಿಯಿಂದ ಮಂಚದ ಬಳಿಗೋಡಿ ಅದನ್ನೇರಲು ಪ್ರಯತ್ನಿಸಿದಾಗ ನರ್ಸ್ ಅವಳನ್ನೆತ್ತಿ ಮೇಲೆ ಕೂರಿಸಿದಳು. ಮಗಳ ಸೊರಗಿ ಬಾಡಿಹೋಗಿದ್ದ ಮುಖವನ್ನು ನೋಡಿ ನೀತುಳಿಗೆ ಹೃದಯ ಹಿಂಡಿದಂತಾಗಿ ಮಗಳನ್ನು ತನ್ನ ಎದೆಗೆ ಅಪ್ಪಿಕೊಂಡಾಗ ನಿಶಾ ಜೋರಾಗಿ ಅಳುವುದಕ್ಕೆ ಶುರುವಾದಳು.

ನೀತು......ಅಳಬೇಡ ಕಂದ ನೋಡು ಅಮ್ಮ ನಿನ್ನ ಜೊತೆಯಲ್ಲೇ ಇದೆ ಅಲ್ವಾ ಅಳಬೇಡ ನನ್ನ ಬಂಗಾರಿ.

ನಿಶಾ.....ಮಮ್ಮ ಎಲ್ಲಿ ಹೊಬೇಲ ಮಮ್ಮ...ಎಲ್ಲಿ ಹೊಬೇಲ ಮಮ್ಮ ಲವ್ ಯು ಮಮ್ಮ....ನಂಗಿ ಭಯ ಆತು ಮಮ್ಮ.

ನೀತು ಮಗಳನ್ನು ತಬ್ಬಿಕೊಂಡು ಅವಳನ್ನು ಸಮಾಧಾನಿಸಿ.....ನಿನ್ನ ಸುರೇಶಣ್ಣ ಎಲ್ಲಿ ಕಂದ ?

ನಿಶಾ......ಅಣ್ಣ ಆಚಿ ಇದಿ ಮಮ್ಮ....ಎಂದು ನರ್ಸ್ ಸಹಾಯದಿಂದ ಕೆಳಗಿಳಿದು ಹೊರಗೋಡಿದಳು.

ಸುರೇಶಣ್ಣನ ಕೈ ಹಿಡಿದ ನಿಶಾ.......ಅಣ್ಣ ಬಾ ಮಮ್ಮ ಕಲೀತು ಬಾ ಎಂದವನನ್ನು ಎಳೆದುಕೊಂಡು ಬಂದು ತಾನು ಮೊದಲು ಮಂಚದ ಮೇಲೇರಿ ಅಮ್ಮನನ್ನು ಸೇರಿಕೊಂಡಳು.

ನೀತು ಮಗನ ಕೆನ್ನೆ ತಡವಿ ತಲೆ ಸವರುತ್ತ.......ನನಗೇನೂ ಆಗಿಲ್ಲ ಕಣಪ್ಪ ನೋಡು ನೀನೆಷ್ಟು ಸೊರಗಿ ಹೋಗಿದ್ದೀಯ ನಿಮ್ಮೆಲ್ಲರನ್ನೂ ಬಿಟ್ಟು ನಾನಿಷ್ಟು ಬೇಗ ಎಲ್ಲಿಗೂ ಹೋಗಲ್ಲ ಕಣಪ್ಪ ಅಳ್ಬೇಡ.

ಸುರೇಶ ಕಣ್ಣೀರು ಒರೆಸಿಕೊಳ್ಳುತ್ತ......ಅಮ್ಮ ನಿನಗೆ ಗುಂಡು ಬಿದ್ದಿದೆ ಅಂತ ತಿಳಿದಾಗ ನನಗೇಗಾಗಿತ್ತು ಅಂತ ಹೇಳಲಾರೆ. ನನ್ನ ವಿಷಯ ಬಿಡು ಚಿನ್ನಿ ಆರು ದಿನದಿಂದ ಸರಿಯಾಗಿ ಊಟ ಮಾಡ್ತಿಲ್ಲ ಬಲವಂತ ಮಾಡಿದರೆ ಸ್ವಲ್ಪವೇ ತಿಂತಾಳೆ. ಬೆಳಿಗ್ಗೆ ಹತ್ತರವರೆಗೂ ಆರಾಮವಾಗಿ ಮಲಗಿರ್ತಿದ್ಳು ಆದರೀಗ ನಾಲ್ಕು ಘಂಟೆಗೇ ಎಚ್ಚರವಾಗಿ ನಿನ್ನನ್ನು ನೆನೆಯುತ್ತ ಮೌನವಾಗಿ ಕಣ್ಣೀರು ಸುರಿಸುತ್ತ ಕೂತಿರುತ್ತಿದ್ದಳು. ಇನ್ನು ಅಕ್ಕ ನಿನಗೆ ಗುಂಡು ಬಿದ್ದಿದ್ದನ್ನು ನೋಡಿ ಪ್ರಜ್ಞೆಯೇ ಕಳೆದುಕೊಂಡು ಮಲಗಿದ್ರಮ್ಮ ಅಣ್ಣನಂತೂ ಯಾರ ಜೊತೆಗೂ ಸರಿಯಾಗಿ ಮಾತೇ ಆಡ್ತಿಲ್ಲ ಮೌನವಾಗಿ ಐಸಿಯು ಬಾಗಿಲನ್ನೇ ನೋಡ್ತಾ ಕೂತಿರ್ತಿದ್ದ. ಅಜ್ಜಿ...ತಾತ...ಅಂಕಲ್...ಆಂಟಿ...ಅತ್ತೆ....ಮಾವ ಎಲ್ಲರದ್ದೂ ಇದೇ ಪರಿಸ್ಥಿತಿ ಕಣಮ್ಮ. ಅಪ್ಪನ ಬಗ್ಗೆ ಹೇಳೋದೇ ಬೇಡ ನಿಶಾಳಂತೂ ಅಪ್ಪನ ತೋಳಿನಿಂದ ಇಳಿಯುತ್ತಿರಲಿಲ್ಲ ಇವಳನ್ನು ಸಮಾಧಾನ ಮಾಡುತ್ತ ಅಪ್ಪ ಒಳಗೊಳಗೇ ನೋವನುಭವಿಸುತ್ತಿದ್ದರು.

ನೀತು ಕಂಬನಿ ಮಿಡಿಯುತ್ತ......ಸುರೇಶ ಹೋಗಿ ಅಕ್ಕ ಅಣ್ಣನನ್ನು ಕಳಿಸಪ್ಪ.

ಸುರೇಶ ಹೊರಡುವ ಮುನ್ನ ಅಮ್ಮನನ್ನು ತಬ್ಬಿಕೊಂಡವಳ ಕೆನ್ನೆಗೆ ಮುತ್ತಿಟ್ಟರೆ ನಿಶಾ ಅಣ್ಣನನ್ನು ತಳ್ಳುತ್ತ........ಮಮ್ಮ ನಂದು ನೀನಿ ಹೋಲು ಅಣ್ಣ.

ಸುರೇಶ ಮುಗುಳ್ನಕ್ಕು....ಆಯ್ತು ಚಿನ್ನಿ ಮರಿ ಮಮ್ಮ ನಿಂದೇ ಆದರೆ ನೀನು ಮಾತ್ರ ಅಳಬಾರದು ಕಂದ.

ನಿಶಾ ತಲೆ ಅಳ್ಳಾಡಿಸಿ.....ನಾನಿ ಅಲಲ್ಲ ಅಣ್ಣ ನನ್ನಿ ಮಮ್ಮ ಬಂತು.

ಸುರೇಶ ಹೊರಗೋದ ಹಿಂದೆಯೇ ನಿಧಿ—ಗಿರೀಶ ಒಳಗೆ ಬಂದಿದ್ದು ಇಬ್ಬರೂ ಅಮ್ಮನ ಕಾಲಿನ ಹತ್ತಿರ ಕುಳಿತು ಅಳತೊಡಗಿದರು. ನೀತು ಇಬ್ಬರನ್ನೂ ಸಮಾಧಾನ ಮಾಡುತ್ತಿದ್ದರೆ ಅಕ್ಕ ಅಣ್ಣ ಅಳುತ್ತಿದ್ದುದನ್ನು ನೋಡಿ ನಿಶಾ ಕೂಡ ಅಮ್ಮನನ್ನಪ್ಪಿ ಅಳಲಾರಂಭಿಸಿದಳು.

ನಿಧಿ.......ಅಮ್ಮ ಅವತ್ತು ನೀವ್ಯಾಕೆ ಅಡ್ಡಕ್ಕೆ ಬಂದ್ರಿ ನಿಮಗೇನಾದ್ರೂ ಆಗಿ ಹೋಗಿದ್ರೆ.........

ನೀತು ಮಗಳನ್ನು ಅರ್ಧಕ್ಕೇ ತಡೆಯುತ್ತ.......ಮಕ್ಕಳ ಮೇಲೆ ದಾಳಿ ಆಗುತ್ತಿದ್ದರೂ ತಾಯಿ ನೋಡಿಕೊಂಡು ಸುಮ್ಮನಿರಬೇಕಿತ್ತಾ ಕಂದ. ಆಗಿದ್ದಾಯಿತು ನಾನೀಗ ಆರೋಗ್ಯವಾಗಿದ್ದೀನಲ್ಲ ಇನ್ಯಾಕಮ್ಮ ನೀನು ಅಳ್ತೀಯ. ಗಿರೀಶ ಅಳಬೇಡ ಕಣಪ್ಪ ನನ್ನ ಮಕ್ಕಳ ಕಣ್ಣಲ್ಲಿ ಕಣ್ಣೀರು ನೋಡ್ತಿದ್ರೆ ಅಮ್ಮನಾದ ನನಗೆ ಸಂಟಕವಾಗುತ್ತೆ. ಇಲ್ನೋಡಿ ನೀವು ಅಳುವುದನ್ನು ನೋಡಿ ನನ್ನ ಕಂದನೂ ಅಳು ಶುರು ಮಾಡಿಬಿಟ್ಟಳು.

ಗಿರೀಶ......ಅಮ್ಮ ಚಿನ್ನಿ ಈಗಲ್ಲ ನೀವಿಲ್ಲಿಗೆ ಸೇರಿದಾಗಿನಿಂದ ಅಳ್ತಾನೆ ಇದ್ದಾಳೆ ನೀನು ಬೇಗ ಹುಷಾರಾಗಿ ಬಿಡಮ್ಮ ನೀನು ಜೊತೆಗಿದ್ದರಷ್ಟೇ ಸಾಕು ಬೇರೇನೂ ಬೇಕಾಗಿಲ್ಲ.

ಕೆಲ ಹೊತ್ತಿನಲ್ಲೇ ನೀತುಳನ್ನುಸೂಪರ್ ಸ್ಪೆಷಲ್ ವಾರ್ಡಿನಲ್ಲಿ ಶಿಷ್ಟ್ ಮಾಡಲಾಗಿ ಎಲ್ಲರೂ ಒಬ್ಬೊಬ್ಬರಾಗಿ ಬರತೊಡಗಿದರು. ರಶ್ಮಿ..ದೃಷ್ಟಿ ನಯನ...ನಿಕಿತಾ...ನಮಿತಾ ಮೊದಲಿಗೆ ಬಂದು ನೀತುಳನ್ನು ತಬ್ಬಿ ಅವಳು ಹುಷಾರಾಗಿರುವುದನ್ನು ನೋಡಿ ಸಂತಸಪಟ್ಟರೂ ಅವರ ಕಣ್ಣುಗಳಿಂದ ಕಂಬನಿ ಹರಿಯುತ್ತಲೇ ಇತ್ತು. ಸುಮ...ಪ್ರೀತಿ...ಸವಿತಾ ಸುಕನ್ಯಾ....ಅನುಷ...ರಜನಿ...ಶೀಲಾ...ಪಾವನಾ ಒಟ್ಟಿಗೇ ಬಂದು ಅವಳ ಜೊತೆ ಕೆಲಕಾಲ ಮಾತನಾಡಿ ತೆರಳಿದ ಬಳಿಕ ಗಂಡಸರೆಲ್ಲರೂ ಒಟ್ಟಿಗೆ ಬಂದು ಮಾತನಾಡಿಸಿದರು.

ವರ್ಧನ್ ಅಕ್ಕನ ಕಾಲ್ಮುಟ್ಟಿ ನಮಸ್ಕರಿಸಿ......ನಿಜಕ್ಕೂ ನೀವು ತುಂಬ ಮಹಾನ್ ವ್ಯಕ್ತಿ ಅಕ್ಕ.

ನೀತು......ಅಂತದ್ದೇನೂ ಇಲ್ಲ ವರ್ಧನ್ ಮಕ್ಕಳ ಪ್ರಾಣ ತಾಯಿಯ ಮುಂದೆ ಸಂಕಟದಲ್ಲಿರುವಾಗ ಪ್ರತಿಯೊಬ್ಬ ತಾಯಿಯೂ ನಾನೇನು ಮಾಡಿದೆನೋ ಅದನ್ನೇ ಮಾಡೋದು ಇದರಲ್ಲಿ ಮಹಾನ್ ಆಗುವ ವಿಷಯವೇನೂ ಇಲ್ಲ.
**

ಕೊನೆಯವನಾಗಿ ಹರೀಶ ಒಳಗೆ ಬಂದಾಗ ಅಮ್ಮನ ಪಕ್ಕದಲ್ಲಿಯೇ ಸೇರಿಕೊಂಡಿದ್ದ ನಿಶಾ ಅಪ್ಪನ ಹೆಗಲಿಗೇರಿ ಅಮ್ಮನತ್ತ ಕೈ ತೋರಿಸಿ ತನಗಾಗುತ್ತಿರುವ ಸಂತೋಷವನ್ನು ಹೇಳುತ್ತಿದ್ದಳು.

ಹರೀಶ.....ಈ ಆರು ದಿನ ನಮ್ಮೆಲ್ಲರ ಜೀವ ಹೋದಂತಾಗಿತ್ತು ನೀತು ಈಗ ಮರಳಿ ಬಂದಂತಾಗಿದೆ.

ನೀತು......ರೀ ಎಲ್ಲವೂ ವಿಧಿ ಲಿಖಿತ ಯಾರೇನೂ ಮಾಡಕ್ಕಾಗಲ್ಲ.

ಹರೀಶ......ಆದರೂ ವಿಧಿಯ ನಿಯಮದ ವಿರುದ್ದ ನನ್ನೀ ಪುಟಾಣಿ ಹೋರಾಡಿ ಅವಳಮ್ಮನನ್ನು ಬದುಕಿಸಿಕೊಂಡು ಕರೆತಂದಿದ್ದಾಳೆ. ಆ ಮುನಿವರ್ಯರು ಇಲ್ಲಿಗೆ ಬಂದು ನಿನ್ನ ಪ್ರಾಣ ಉಳಿಸುವುದಕ್ಕೆ ನನ್ನೀ ಕಂದನೇ ಕಾರಣ......ಎಂದು ಎಲ್ಲಾ ವಿಷಯವನ್ನೂ ಹೇಳಿದನು.

ನೀತು......ನೋಡಿದ್ರಾ ನಾನೀ ಕಂದನನ್ನು ಹೆರದಿದ್ದರೂ ನಮ್ಮಿಬ್ಬರ ಹೃದಯ ಒಂದಕ್ಕೊಂದು ಸೇರಿಕೊಂಡಿದೆ.

ಹರೀಶ.....ನೀನೀಗ ಸಂಪೂರ್ಣ ಆರೋಗ್ಯವಾಗಿದ್ದೀಯ ಸಂಜೆಯ ಹೊತ್ತಿಗೆ ಡಿಸ್ಚಾರ್ಜ್ ಮಾಡ್ತಾರಂತೆ.

ಅಷ್ಟರಲ್ಲಿ ರಾಣಾ...ವಿಕ್ರಂ ಸಿಂಗ್ ಎಲ್ಲರೂ ಒಳಗೆ ಬಂದು ನೀತುವಿನ ಮುಂದೆ ತಲೆತಗ್ಗಿಸಿ ನಿಂತರು.

ನೀತು......ರಾಣಾ ನೀವೆಲ್ಲರೂ ಯಾಕೀಗೆ ತಲೆ ತಗ್ಗಿಸ್ತೀರಾ ನೀವು ಹೀಗೆಲ್ಲ ಮಾಡುವುದು ನಿಮಗೆ ಶೋಭೆ ತರುವುದಿಲ್ಲ.

ವಿಕ್ರಂ ಸಿಂಗ್.....ಮಾತೆ ನಾವೆಲ್ಲರೂ ಅಲ್ಲಿಯೇ ಇದ್ದೂ ಸಹ ನಿಮ್ಮ ಮೇಲಾದ ದಾಳಿಯನ್ನು ತಡೆಯುವಲ್ಲಿ ವಿಫಲರಾಗಿದ್ದಕ್ಕೆ ನಮಗೆ ನಮ್ಮ ಮೇಲೇ ಕೋಪ ಬರುತ್ತಿದೆ.

ಹರೀಶ.......ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ ವಿಕ್ರಂ ನೀವೆಲ್ಲರೂ ಸಂಸ್ಥಾನದ ಅತ್ಯಂತ ನಿಷ್ಟಾವಂತರು ಈ ರೀತಿ ಅಧೀರರಾಗಬಾರದು. ನಿಮ್ಮೆಲ್ಲರ ಧೈರ್ಯ ಸಾಹಸದಿಂದಲೇ ತಾನೇ ನಮ್ಮ ಮಕ್ಕಳಿಬ್ಬರನ್ನು ಬಲಿ ಪಡೆಯಲು ಹೊಂಚು ಹಾಕುತ್ತಿದ್ದರೆಲ್ಲ ಈಗ ಸೆರೆಯಲ್ಲಿರುವುದು

ನೀತು.......ವೀರ್ ಸಿಂಗ್ ಹೇಗಿದ್ದಾನೆ ? ಮೂರನೇ ಗುಂಡು ನನಗೆ ತಾಗುವ ಮುಂಚೆ ಅವನೇ ಅಡ್ಡಲಾಗಿ ಬಂದಿದ್ದು.

ಸುಮೇರ್ ಹಿಂದೆ ನಿಂತಿದ್ದ ವೀರ್ ಸಿಂಗ್ ಮುಂದೆ ಬಂದು......ಮಾತೆ ಈ ರೀತಿಯ ಸಣ್ಣ ಪುಟ್ಟ ಗುಂಡುಗಳಿಂದ ನನಗೇನೂ ಆಗುವುದಿಲ್ಲ. ನೀವು ಪುನಃ ಮೊದಲಿನಂತೆ ಆರೋಗ್ಯವಂತರಾಗಿದ್ದನ್ನು ನೋಡಿಯೆ ನನ್ನ ನೋವೆಲ್ಲವೂ ಮಾಯವಾಯಿತು.

ನೀತು....ಆ ಹೆಂಗಸು ಯಾರು ?

ರಾಣಾ...ಮಾತೆ ಅವಳೇ ಯಶೋಮತಿ ಈಗವಳನ್ನು ರಾಜಕುಮಾರಿ ಆದೇಶದ ಮೇರೆಗೆ ಜೈಸಲ್ಮೇರಿಗೆ ಕಳುಹಿಸಿದ್ದೀವಿ.

ನೀತು.......ರೀ ನಿಧಿ ಏನು ಮಾಡುವುದಕ್ಕೆ.......

ನಿಧಿ ಒಳಬಂದು.......ಅಮ್ಮ ನೀವೀಗ ನನ್ನನ್ನು ತಡೆಯದಿರಿ ಆಗಲೇ ಅಪ್ಪ ಅಮ್ಮನ ಸಾವನ್ನು ನಾನು ಕಷ್ಟಪಟ್ಟು ಜೀರ್ಣಿಸಿಕೊಂಡಿರುವೆ ಅದೂ ಕೇವಲ ನಿಮ್ಮ ಅಪ್ಪನ ಮತ್ತೆಲ್ಲರ ಪ್ರೀತಿಯ ಫಲದಿಂದಾಗಿ. ಈಗ ನಿಮ್ಮ ರಕ್ತ ಹರಿದಿದ್ದನ್ನು ನೋಡಿಯೂ ನಾನು ಸುಮ್ಮನಿರಲಾರೆ ನಮ್ಮ ಬಂಧನದಲ್ಲಿರುವ ಯಾರೊಬ್ಬರೂ ನಾಳಿನ ಸೂರ್ಯನನ್ನು ನೋಡುವುದಿಲ್ಲ.

ನೀತು.......ನಿನ್ನ ಮನಸ್ಸಿನಲ್ಲೆಷ್ಟು ನೋವಿದೆ ಅಂತ ಮೊದಲ ದಿನವೇ ನನಗೆ ಅರ್ಥವಾಗಿತ್ತು ಕಂದ. ನಾನು ನಿನ್ನ ತಡೆಯುವುದಿಲ್ಲ ಆದರೆ ನೀನೊಬ್ಬಳೇ ಅಲ್ಲಿಗೆ ಹೋಗ್ಬೇಡ ಅಷ್ಟೆ.

ಹರೀಶ......ನಾವೆಲ್ಲರೂ ಇವಳ ಜೊತೆ ಹೋಗ್ತಿದ್ದೀವಿ ಕಣೆ ನೀನು ಯಾವುದಕ್ಕೂ ಚಿಂತೆ ಮಾಡ್ಬೇಡ. ವಿಕ್ರಂ ಸಿಂಗ್ ನೀವು ಅರಮನೆಯ ರಕ್ಷಣೆಯಲ್ಲಿರಿ ಮಿಕ್ಕವರು ನಮ್ಮೊಡನೆ ಬರ್ತಾರೆ ರಾಣಾ ನಾವೆಲ್ಲರು ಹೊರಡಲು ವ್ಯವಸ್ಥೆ ಮಾಡ್ಬಿಡು. ನೀನು ನೀನು ನನ್ನೀ ಬಂಗಾರೀನ ವಿಚಾರಿಸಿಕೋ ನೀನಿಲ್ಲಿಗೆ ಸೇರಿದಾಗಿನಿಂದಲೂ ಸರಿಯಾಗಿ ಊಟ ನಿದ್ರೆ ಏನೂ ಮಾಡ್ತಿಲ್ಲ ನನ್ನ ಬಂಗಾರಿ.

ನಿಶಾ.......ಪಪ್ಪ ನಾನಿ ಬೆಡ್ ತಿಂದಿ ಕಾಂಪೇನ್ ಕುದ್ದೆ ಪಪ್ಪ.

ಸಂಜೆಯ ಹೊತ್ತಿಗೆ ನೀತುಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಎಲ್ಲರೊಟ್ಟಿಗೆ ಅರಮನೆಗೆ ಹಿಂದಿರುಗಿ ಬಂದಳು. ನಿಧಿ ನೆಲಮಾಳಿಗೆಗೆ ತೆರಳಿ ಅಲ್ಲಿದ್ದ ಅಪ್ಪನ ಖಡ್ಗವನ್ನೆತ್ತಿಕೊಂಡು ಹೊರಬಂದರೆ ಅವಳ ಜೊತೆ ವರ್ಧನ್ ಮತ್ತು ಪ್ರೀತಿ ಕೂಡ ಹೊರಟು ನಿಂತರು.

ರಾಣಾ...ಸುಮೇರ್...ವೀರ್ ಸಿಂಗ್ ತಮ್ಮ ಯುವರಾಣಿಯ ಜೊತೆ ರೆಡಿಯಾಗಿದ್ದರೆ ನಿಧಿಯ ಜೊತೆಗೆ ಹರೀಶ...ಗಿರೀಶ...ವರ್ಧನ್... ಅಶೋಕ...ರೇವಂತ್....ಸುಭಾಷ್... ಪ್ರತಾಪ್....ನಿಕಿತಾ ಮತ್ತು ಪ್ರೀತಿ ಹೊರಟಿದ್ದರು.

ರಜನಿ.....ನೀನೇನೇ ಇಲ್ಲಿಗೆ ಬರುವಾಗ ಹೇಳಿದ ಮಾತನ್ನು ಸತ್ಯವೇ ಮಾಡುವುದಕ್ಕೆ ತಯಾರಾಗಿ ಹೋಗಿದ್ದೆ ?

ಸುಮ......ನೀನಿಲ್ಲದಿದ್ದರೆ ಚಿನ್ನಿಯನ್ನು ನಮ್ಮಲ್ಯಾರಿಂದಲೂ ಕೂಡ ನೋಡಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ಗೊತ್ತಿಲ್ವಾ.

ಶೀಲಾ....ನಿನಗೇನಾದ್ರೂ ಆಗಿದ್ರೆ ನಾನೂ ನಿನ್ನ ಹಿಂದೆಯೇ ಬರ್ತಿದ್ದೆ.

ನೀತು......ಏನೂ ಆಗಿಲ್ವಲ್ಲ ಈಗ ಸುಮ್ನಿರು.

ಸವಿತಾ......ನಮ್ಮೆಲ್ಲರ ಜೀವನದಲ್ಲೂ ಸುಖ ಸಂತೋಷಗಳನ್ನು ತಂದವಳೂ ನೀನೇ ಈಗ ನಮ್ಮೆಲ್ಲರನ್ನು ಬಿಟ್ಟು ಹೋಗುವುದಕ್ಕೆ ನಿನ್ನ ಮನಸ್ಸೇಗೆ ಬಂದಿತ್ತು.

ಸುಕನ್ಯಾ.......ನನ್ನ ಮಗಳು ಹುಟ್ಟುವುದಕ್ಕೂ ಮುಂಚೆಯೇ ಇವಳಿಗೆ ಅಮ್ಮನ ಮಡಿಲು ಇಲ್ಲದಂತೆ ಮಾಡಲು ತಯಾರಾಗಿದ್ಯಲ್ಲ.

ನೀತು.......ನಾನೆಲ್ಲೂ ಹೋಗಲ್ಲ ನನ್ನೀ ಕಂದ ನನ್ನನ್ನೆಲ್ಲಿಗೂ ಹೀಗೆ ಹೋಗಲು ಬಿಡುವುದಿಲ್ಲ ನಿಮಗೆ ಎಲ್ಲವೂ ಗೊತ್ತಿದೆಯಲ್ಲ ಅಮ್ಮನ ಪ್ರಾಣ ಕಾಪಾಡಲು ನನ್ನೀ ಕಂದ ಏನೆಲ್ಲಾ ಮಾಡಿದ್ದಾಳೆ ಅಂತ.

ರೇವತಿ......ಇವತ್ತು ಮನಸ್ಸಿಗೆ ನೆಮ್ಮದಿಯಾಯ್ತು ಕಣೆ ಊಟ ನಿದ್ದೆ ಸರಿಯಾಗಿ ಮಾಡದೆ ನನ್ನ ಕಂದ ನೋಡು ಎಷ್ಟು ಸೊರಗಿದ್ದಾಳೆ ಅಂತ ಈಗಲೂ ಇವಳ ಮುಖದಲ್ಲಿ ಮೊದಲಿನ ಲವಲವಿಕೆ ಇಲ್ಲ.

ರಾಜೀವ್.....ಹೌದು ಕಣಮ್ಮ ನನ್ನ ಕಂದ ಅನುಭವಿಸಿರುವಷ್ಟು ನೋವನ್ನು ನಾವ್ಯಾರೂ ಅನುಭವಿಸಿಲ್ಲವೆಂದರೂ ತಪ್ಪಿಲ್ಲ.

ರವಿ.....ವಿಕ್ರಂ ಕೂಡ ಪ್ರೀತಿಯ ತಂಗಿಯನ್ನು ಮಾತನಾಡಿಸಿ ಅವಳು ಸಕುಶಲವಾಗಿ ಮರಳಿದ್ದಕ್ಕೆ ಖುಷಿಯಾಗಿದ್ದರು. ನಯನ....ನಮಿತಾ ರಶ್ಮಿ....ದೃಷ್ಟಿ ನಾಲ್ವರನ್ನೂ ತಬ್ಬಿಕೊಂಡು ಸಂತೈಸಿದ ನೀತು ಅವರಿಗೆ ತನ್ನ ಪ್ರೀತಿ ವ್ಯಕ್ತಪಡಿಸುತ್ತಿದ್ದರೆ ನಿಶಾ ಅವರೆಲ್ಲರನ್ನೂ ದೂರ ತಳ್ಳುತ್ತ ತಾನು ಅಮ್ಮನನ್ನು ಸೇರಿಕೊಂಡನು.

ನಯನ.....ಅತ್ತೆ ಚಿನ್ನಿ ಮುಖ ನೋಡಲಾಗ್ತಿರಲಿಲ್ಲ ಸುರೇಶನಂತೂ ಪುಟ್ಟ ಮಗುವಿನಂತೆ ಅಳ್ತಿದ್ದ.

ನೀತು......ನಿನ್ನ ಕಣ್ಣನ್ನು ನೋಡಿದ್ರೇ ಗೊತ್ತಾಗ್ತಿದೆ ನೀವೆಲ್ಲರೂ ಎಷ್ಟು ಅತ್ತಿದ್ದೀರ ಅಂತ ನಾನೀಗ ಆರೋಗ್ಯವಾಗಿದ್ದೀನಿ ಕಣ್ರಮ್ಮ ಈಗಲೂ ಯಾಕೆ ಕಣ್ಣಲ್ಲಿ ನೀರು ಅಳಬಾರದು ನೀವೆಲ್ಲರೂ ನಮ್ಮ ಮನೆಯ ದೇವತೆಗಳು ಸದಾ ನಗುತ್ತಿರಬೇಕು.

ಸವಿತಾ.......ಸುರೇಶನ ಜೊತೆ ನೀನೇನು ಕಡಿಮೆ ಅಳ್ತಿದ್ಯಾ ನಯನ ಯಾವಾಗಲೂ ಇಬ್ಬರೂ ಕಿತ್ತಾಡ್ತಾ ಇರ್ತಿದ್ರಿ ಆದರೆ ನೆನ್ನೆಯವರೆಗೂ ಇಬ್ಬರೂ ಒಬ್ಬರೊಬ್ಬರಿಗೆ ಸಮಾಧಾನ ಮಾಡುತ್ತ ಅಳುತ್ತಲೇ ಇದ್ರಲ್ಲ

ನಯನ.....ಆಂಟಿ ನಾವು ಮಾತ್ರಾನಾ ನೀವುಗಳೇನು ಕಡಿಮೆ ಅಳ್ತಾ ಇದ್ರಾ ಪ್ರತೀಕ್ಷಣವೂ ದೇವರಲ್ಲಿ ಅತ್ತೆಯ ಆರೋಗ್ಯಕ್ಕೆ ಕೈ ಮುಗಿದು ಬೇಡಿಕೊಳ್ತಾನೆ ಇದ್ರಲ್ಲ.

ನೀತು ತನ್ನ ಒಟ್ಟು ಕುಟುಂಬದ ಒಗ್ಗಟ್ಟಿನ ಪ್ರೀತಿಯನ್ನು ನೋಡುತ್ತ ಕಣ್ಣಿಂದ ಕಂಬನಿ ಮಿಡಿಯುತ್ತ........ಇದೆಲ್ಲ ಇರಲಿ ನನ್ನ ಚಿನ್ನಿ ಮರಿ ಅವಳ ತಮ್ಮ ತಂಗಿಗೆಂದು ಎರಡು ಸುಂದರ ಉಯ್ಯಾಲೆಗಳನ್ನು ತೆಗೆದಿಟ್ಟಿದ್ದಾಳೆ ಗೊತ್ತ. ಚಿನ್ನಿ ಹೋಗಿ ಎಲ್ಲರಿಗೂ ತಮ್ಮ ತಾಚಿ ಮಾಡ್ಲಿ ಅಂತ ತೆಗೆದಿಟ್ಯಲ್ಲ ಉಯ್ಯಾಲೆ ತೋರಿಸಮ್ಮ.

ನಿಶಾ ಅಮ್ಮನನ್ನು ಇನ್ನೂ ಬಿಗಿಯಾಗಿ ತಬ್ಬಿಕೊಂಢು.....ನಾನಿ ಎಲ್ಲೂ ಹೋಲಲ್ಲ ಮಮ್ಮ ನಿನ್ನಿ ತೊತೆ ತಾಚಿ ಮಾತೀನಿ

ಆರು ದಿನಗಳ ನಂತರ ಎಲ್ಲರ ಮುಖದಲ್ಲಿಯೂ ನಗೆ ಮೂಡಿತ್ತು.

3 comments:

  1. ಅಬ್ಬಾ ಏನು ಕಥೆ, ಖಂಡಿತ ಕಥೆ ಮುಂದುವರೆಸಿ. ನನ್ನದೊಂದು ಮನವಿ

    ReplyDelete
  2. ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ದಯವಿಟ್ಟು ನಂದು ಒಂದು ವಿನಂತಿ ಆದಷ್ಟು ರಶ್ಮಿ ನಿಕಿತಾ ದೃಷ್ಟಿ ಗಿರೀಶ ನಿಧಿ-ವಿರೇಂದ್ರ-ನಿಕಿತಾ ಅನುಷ ಪ್ರೀತಿ ಸುಮಾ ಇವರ ಬಗ್ಗೆ ಹೆಚ್ಚಾಗಿ ಬರೆಯಿರಿ ಆದಷ್ಟು ಬೇಗ ಬೇಗ ದಿನಕ್ಕೆ 2, 3, 4, 5, ಸ್ಟೋರಿ ಬರೆಯಿರಿ ಮತ್ತು ರಶ್ಮಿ-ಗಿರೀಶ-ದೃಷ್ಟಿ ದಿನ ಸ್ಟೋರಿ ಮಿಸ್ ಮಾಡದೆ ಅಪ್ಲೋಡ್ ಮಾಡ ರೀ ದಯವಿಟ್ಟು ನಂದು ಒಂದು ವಿನಂತಿ ಗೋವಾದಲ್ಲಿನ ಮರಿಯಾ ನೇಹಾ ಮತ್ತು ನಿಹಾಲ್ ಫ್ಯಾಮಿಲಿ ಇವರು ಬಗ್ಗೆನೂ ಸ್ಟೋರಿ ಬರೆಯಿರಿ please my personal humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    ReplyDelete
  3. ನೇಹಾ ಮತ್ತು ನಿಹಾಲ್ ಗೋವಾ ಫ್ಯಾಮಿಲಿ ನಿಧಿ-ವಿರೇಂದ್ರ-ನಿಕಿತಾ ರಶ್ಮಿ-ಗಿರೀಶ-ದೃಷ್ಟಿ ಇವರ ಬಗ್ಗೆನೂ ಹೆಚ್ಚಾಗಿ ಸ್ಟೋರಿ ಬರೆಯಿರಿ ದಯವಿಟ್ಟು

    ReplyDelete